ಜೈನ ಧರ್ಮವು ಬೌದ್ಧ ಧರ್ಮಕ್ಕಿಂತಲೂ ಪ್ರಬಲವಾದ ಸ್ಥಾನವನ್ನು ಕರ್ನಾಟಕದಲ್ಲಿ ಪಡೆದಿದೆ. ಜೈನಧರ್ಮದ ಮೊದಲ ತೀರ್ಥಂಕರ ವೃಷಭ ದೇವನ ನಂತರ ಬಂದ ಇಪ್ಪತ್ತಮೂರು ತೀರ್ಥಂಕರುಗಳು ತಮ್ಮ ತಮ್ಮ ಕಾಲದಲ್ಲಿ ಜೈನ ಧರ್ಮದ ಉಪದೇಶವನ್ನು ಮಾಡಿದರು. ಇಪ್ಪತ್ತ ಮೂರನೇ ತೀರ್ಥಂಕರನಾದ ಪಾರ್ಶನಾಥರು ತನ್ನ ಕಾಲದಲ್ಲಿ  ಜೈನಧರ್ಮವನ್ನು ಸುಸಂಘಟಿಸುತ್ತಾರೆ. ಈತನ ನಂತರದ ತೀರ್ಥಂಕರ ಮಹಾವೀರ. ಈ ಎಲ್ಲ ತೀರ್ಥಂಕರರು ಜೈನ ಧರ್ಮದ ಸುಧಾರಕರೆಂದು ಅಭಿಪ್ರಾಯಪಡಬಹುದು. ವೃಷಭದೇವನಿಂದ ಮಹಾವೀರನವರೆಗೆ ಬರುವ ಎಲ್ಲ ತೀರ್ಥಂಕರರ ಹೆಸರಿನಲ್ಲಿ ಬಸದಿಗಳು ಇವೆ. ಇವುಗಳಲ್ಲಿ ಮುಖ್ಯವಾದವುಗಳು ಬಾದಾಮಿ, ಐಹೊಳೆ, ಮೂಡಬಿದರೆ, ಕಾರ್ಕಳ, ಶ್ರವಣಬೆಳಗೊಳ ಮುಂತಾದ ಸ್ಥಳಗಳಲ್ಲಿ ಇವೆ. ಬಸದಿಗಳ ಜೊತೆಗೆ ಗೊಮ್ಮಟೇಶ್ವರ ಮೂರ್ತಿಗಳಿವೆ. ಇವುಗಳನ್ನೆಲ್ಲ ಗಮನಿಸಿದರೆ ಜೈನಧರ್ಮವು ಪುರಾತನ ಕರ್ನಾಟಕದಲ್ಲಿ ಅತ್ಯಂತ ಪ್ರಬಲವಾಗಿತ್ತು ಎಂಬುದು ಸ್ಪಷ್ಟ. ಜೈನಧರ್ಮದಲ್ಲಿ ಮುಖ್ಯವಾಗಿ ದಿಗಂಬರ, ಶ್ವೇತಾಂಬರ ಮತ್ತು ಯಾಪನೀಯ ಎಂಬ ಮೂರು ಪಂಗಡಗಳಿವೆ. ದಿಗಂಬರ ಮತ್ತು ಯಾಪನೀಯ ಪಂಗಡಗಳು ಪುರಾತನ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕರ್ನಾಟಕಕ್ಕೆ ಉತ್ತರ ಭಾರತದಿಂದ ವ್ಯಾಪಾರಕ್ಕಾಗಿ ಬಂದು ನೆಲೆಸಿರುವ ಮಾರವಾಡಿಗಳು, ಶ್ವೇತಾಂಬರರು. ಈ ಮೂರು ಪಂಗಡಗಳಲ್ಲದೆ ಧಾರವಾಡ, ಬೆಳಗಾವಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಜೈನ ಧರ್ಮವನ್ನು ಪಾಲಿಸುವ ಭೂಹಿಡುವಳಿಯನ್ನು ಹೊಂದಿ ಕೃಷಿಮಾಡುತ್ತಿರುವ ಕುಟುಂಬಗಳನ್ನು ಅಧ್ಯಯನದಲ್ಲಿ ಗುರುತಿಸಲಾಗಿದೆ. ಈಗ ಕರ್ನಾಟಕದ ಪ್ರಮುಖ ನಗರಗಳು, ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಕೆಲವು ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟ ಜನರು ಜೈನಧರ್ಮವನ್ನು ಪಾಲಿಸುವವರು ಇದ್ದಾರೆ ಎಂಬುದು ವಾಸ್ತವ.

ಜೈನರ ಎರಡು ಪಂಗಡಗಳಾದ ದಿಗಂಬರ ಹಾಗೂ ಶ್ವೇತಾಂಬರರು ಕರ್ನಾಟಕದಲ್ಲಿ ಇದ್ದಾರೆ. ದಿಗಂಬರಲ್ಲಿ ಚತುರ್ಥ, ಪಂಚಮ್, ಬೊಗಾರ ಹಾಗೂ ಪುರೋಹಿತ್ ಎನ್ನುವ ಉಪಪಂಗಡಗಳಿವೆ. ಜೈನ ಸಮುದಾಯವು ಕರ್ನಾಟಕದಲ್ಲಿ ಎರಡು ರೀತಿಯಲ್ಲಿ ಕಂಡುಬರುತ್ತದೆ. ಒಂದು ಉತ್ತರ ಭಾರತ ಭಾಗದಿಂದ ವಲಸೆ ಬಂದ ವ್ಯಾಪಾರಿ ಸಮುದಾಯವಾದ ಮಾರವಾಡಿ ಅಥವಾ ಮೇವಾಡಿ. ಇನ್ನೊಂದು ಕನ್ನಡ ಮಾತನಾಡುವ ಸ್ಥಳಿಯ ಗುಂಪು. ಇವರನ್ನು ಮುಖ್ಯವಾಗಿ ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಗುರುತಿಸಬಹುದು. ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟರು, ಬಲ್ಲಾಳರಲ್ಲಿ ಕೆಲವರು ಜೈನ ಧರ್ಮ ಸ್ವೀಕರಿಸಿದರು. ಕನ್ನಡ ಮಾತನಾಡುವ ಜೈನ ಗುಂಪಿನಲ್ಲಿ ಹೆಚ್ಚಿನವರ ಕಸಬು ಕೃಷಿ. ಜೈನರು ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಹಂಚಿಹೋಗಿದ್ದಾರೆ. ಇವರು ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಮದುವೆಯು ತಂದೆಯ ಸಹೋದರಿಯ ಮಗಳ ಜೊತೆ ನಡೆಯುತ್ತದೆ. ಏಕಪತ್ನಿತ್ವ/ಏಕಪತಿತ್ವ ಮದುವೆಯ ರೀತಿ. ಇವರಲ್ಲಿ ‘ವಿಭಕ್ತ ಹಾಗೂ ಅವಿಭಕ್ತ ಕುಟುಂಬಗಳನ್ನು ಕಾಣಬಹುದು. ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು ಮನೆಯ ಕಾರ್ಯಗಳನ್ನು ಮಾಡುತ್ತಾರೆ. ಕೆಲವು ಉದ್ಯೋಗಸ್ಥ ಮಹಿಳೆಯರು ತಮ್ಮ ಕುಟುಂಬದ ಆದಾಯಕ್ಕೆ ನೆರವಾಗುತ್ತಾರೆ. ‘ಸೀಮಂತ’ವನ್ನು ಗರ್ಭಿಣಿಯಾದ ಏಳನೇ ತಿಂಗಳಲ್ಲಿ ಮಾಡುತ್ತಾರೆ. ಜನನದ ಸೂತಕವನ್ನು ಹತ್ತು ದಿನಗಳವರೆಗೆ ಆಚರಿಸಿ ನಾಮಕರಣವನ್ನು ಹನ್ನೆರಡನೇ ದಿನ ಅಥವಾ ಹದಿನಾರನೇ ದಿನದಂದು ಮಾಡುತ್ತಾನೆ. ‘ಚೌಲ’ ಎನ್ನುವ ಮುಂಡನ ಕಾರ್ಯವನ್ನು ಗಂಡುಮಕ್ಕಳಿಗೆ ಮೂರು ವರ್ಷದವರಿದ್ದಾಗ ಮಾಡಿಸುತ್ತಾರೆ. ಒಂದು ವರ್ಷದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಕಿವಿ ಚುಚ್ಚಿಸಿ ನಂತರ ಅನ್ನ ಪ್ರಾಶನ ಮಾಡಿಸುತ್ತಾರೆ. ಹೆಣ್ಣುಮಕ್ಕಳಿಗೆ ಋತುಮತಿ ಕಾರ್ಯ ಮಾಡುತ್ತಾರೆ. ಸೂತಕವು ಐದು ದಿನಗಳವರೆಗೆ ನಡೆಯುತ್ತದೆ. ಶವವನ್ನು ಸುಡುತ್ತಾರೆ, ಸುಟ್ಟ ದೇಹದ ಆಸ್ತಿಗಳನ್ನು ನೀರಿನಲ್ಲಿ ಹಾಕುತ್ತಾರೆ. ಸಾವಿನ ಸೂತಕ ಹತ್ತು ದಿನಗಳವರೆಗೆ  ಇದ್ದು, ಪ್ರತಿ ವರ್ಷವೂ ಹಿರಿಯರ ಪೂಜೆ ಮಾಡುತ್ತಾರೆ.

ಜೈನರಲ್ಲಿ ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರರಾಗಿದ್ದಾರೆ. ದೊಡ್ಡ ಹಾಗೂ ಸಣ್ಣ ಪ್ರಮಾಣದ ವ್ಯಾಪಾರವನ್ನು ಮಾಡುತ್ತಾರೆ. “ದಕ್ಷಿಣ ಭಾರತ ಜೈನ ಮಹಾಸಭಾ” ಎನ್ನುವ ಸಂಘಟನೆಯಿದೆ. ಇವರು ಪದ್ಮಾವತಿ, ಜ್ವಾಲಾಮಾಲಿನಿ ಹಾಗೂ ಇಪ್ಪತ್ತನಾಲ್ಕು ತೀರ್ಥಂಕರರನ್ನು ಪೂಜಿಸುತ್ತಾರೆ. ಇವರ ಹಬ್ಬಗಳಲ್ಲಿ ಮುಖ್ಯವಾದವು ಮಹಾವೀರ ಜಯಂತಿ, ಮಹಾವೀರ ನಿರ್ವಾಣೋತ್ಸವ, ವಿಜಯದಶಮಿ, ದಿಪಾವಳಿ, ಶ್ರುತ ಪಂಚಮಿ, ಇತ್ಯಾದಿ. ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಉಪಯೋಗವನ್ನು ಈ ಸಮುದಾಯವು ಪಡೆದುಕೊಂಡಿದೆ.

 

ಜೈನ್ : ಅಗರವಾಲ

ಅಗರವಾಲರನ್ನು ಕರ್ನಾಟಕದಲ್ಲಿ ಬನಿಯ ಮತ್ತು ವೈಶ್ಯ ಎಂದು ಕರೆಯಲಾಗುತ್ತದೆ. ಇವರಲ್ಲಿ ಬೀಸ ಅಗರವಾಲ, ಖಾಡೆಮಿ ಅಗರವಾಲ, ಬಾರಹಸಾಯಿನಿ ಅಗರವಾಲ, ಚೌಸಾಯಿನಿ ಅಗರವಾಲ ಮತ್ತು ರಾಜಾಸಾಯಿನಿ ಅಗರವಾಲ ಎನ್ನುವ ಉಪಪಂಗಡಗಳಿವೆ. ಕರ್ನಾಟಕದ ಬಹುತೇಕ ಎಲ್ಲ ನಗರ ಪ್ರದೇಶ ಹಾಗೂ ಮುಖ್ಯ ಪಟ್ಟಣಗಳಲ್ಲಿ ಇವರು ನೆಲೆಸಿದ್ದಾರೆ. ಇವರ ಮೌಖಿಕ ಐತಿಹಾಸ ಪರಂಪರೆಯು ಇವರು ಉತ್ತರಪ್ರದೇಶ ಹಾಗೂ ಹರಿಯಾಣದಿಂದ ವಲಸೆ ಬಂದು ಇಲ್ಲಿ ನೆಲೆಸಿರುವುದರ ಬಗ್ಗೆ ಹೇಳುತ್ತದೆ. ಹಿಂದಿ ಇವರ ಮಾತೃಭಾಷೆ. ಕನ್ನಡ, ತಮಿಳು, ತೆಲುಗಿನಲ್ಲಿಯೂ ಇವರು ಮಾತನಾಡಿ, ದೇವನಾಗರಿ ಲಿಪಿಯನ್ನು ಬಳಸುತ್ತಾರೆ.

ಅಗರವಾಲರಲ್ಲಿ ಹೊರಬಾಂಧವ್ಯದ ಕುಲಗಳಿವೆ. ಅವುಗಳಲ್ಲಿ, ಮುಖ್ಯವಾದವು ಗೊಯಲ್, ಮಿಟ್ಟಲ್, ಸಿಂಘಾಲ್, ಜಿಂದಾಲ್, ಬಿಂದಾಲ್, ಗಾರ್ಗ, ತಾಯಲ್, ಗಂಗಲ್ ಇತ್ಯಾದಿ. ಇವರು ತಮ್ಮ ಕುಲದ ಹೆಸರನ್ನೇ ತಮ್ಮ ಹೆಸರಿಗೂ ಸೇರಿಸಿಕೊಂಡು, ಮನೆತನದ ಹೆಸರಾಗಿ ಬಳಸುತ್ತಾರೆ.

ಇತ್ತೀಚಿನವರೆಗೂ ಇವರು ಬನಿಯ ಕುಲದ ಉಪಕುಲಗಳ ಜೊತೆಗೆ  ಮದುವೆಯಾಗುತ್ತಿದ್ದರು. ಸ್ವಕುಲ ಅಥವಾ ರಕ್ತ ಸಂಬಂಧದಲ್ಲಿನ ಮದುವೆಗಳು ಇವರಲ್ಲಿ ನಿಷೇಧಿತ. ಏಕಪತಿ/ಪತ್ನಿತ್ವ ಮಾತ್ರ ಮದುವೆಯ ರೀತಿಯಾಗಿವೆ. ವಿಧುರರ ಮರು ವಿವಾಹಕ್ಕೆ ಅನುಮತಿಯಿದೆ, ಆದರೆ ವಿಧವೆಯರಿಗಿಲ್ಲ. ಇವರಲ್ಲಿ ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದರೂ, ಕೆಲವು ವಿಭಕ್ತ ಕುಟುಂಬಗಳು ಇವೆ. ಪಿತೃಪ್ರಧಾನ ಕುಟುಂಬ ಪದ್ಧತಿ ಇವರಲ್ಲಿ ಕಂಡುಬರುತ್ತದೆ. ಒಂದು ಉತ್ತರ ಭಾರತ ಭಾಗದಿಂದ ವಲಸೆ ಬಂದ ವ್ಯಾಪಾರಿ ಸಮುದಾಯವಾದ ಮಾರವಾಡಿ ಅಥವಾ ಮೇವಾಡಿ. ಇನ್ನೊಂದು ಕನ್ನಡ ಮಾತನಾಡುವ ಸ್ಥಳಿಯ ಗುಂಪು. ಇವರನ್ನು ಮುಖ್ಯವಾಗಿ ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಗುರುತಿಸಬಹುದು. ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟರು, ಬಲ್ಲಾಳರಲ್ಲಿ ಕೆಲವರು ಜೈನ ಧರ್ಮ ಸ್ವೀಕರಿಸಿದರು. ಕನ್ನಡ ಮಾತನಾಡುವ ಜೈನ ಗುಂಪಿನಲ್ಲಿ ಹೆಚ್ಚಿನವರ ಕಸಬು ಕೃಷಿ. ಜೈನರು ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಹಂಚಿಹೋಗಿದ್ದಾರೆ. ಇವರು ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಮದುವೆಯು ತಂದೆಯ ಸಹೋದರಿಯ ಮಗಳ ಜೊತೆ ನಡೆಯುತ್ತದೆ. ಏಕಪತ್ನಿತ್ವ/ಏಕಪತಿತ್ವ ಮದುವೆಯ ರೀತಿ. ಇವರಲ್ಲಿ ‘ವಿಭಕ್ತ ಹಾಗೂ ಅವಿಭಕ್ತ ಕುಟುಂಬಗಳನ್ನು ಕಾಣಬಹುದು. ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು ಮನೆಯ ಕಾರ್ಯಗಳನ್ನು ಮಾಡುತ್ತಾರೆ. ಕೆಲವು ಉದ್ಯೋಗಸ್ಥ ಮಹಿಳೆಯರು ತಮ್ಮ ಕುಟುಂಬದ ಆದಾಯಕ್ಕೆ  ನೆರವಾಗುತ್ತಾರೆ. ‘ಸೀಮಂತ’ವನ್ನು ಗರ್ಭಿಣಿಯಾದ ಏಳನೇ ತಿಂಗಳಲ್ಲಿ ಮಾಡುತ್ತಾರೆ. ಜನನದ ಸೂತಕವನ್ನು ಹತ್ತು ದಿನಗಳವರೆಗೆ ಆಚರಿಸಿ ನಾಮಕರಣವನ್ನು ಹನ್ನೆರಡನೇ ದಿನ ಅಥವಾ ಹದಿನಾರನೇ ದಿನದಂದು ಮಾಡುತ್ತಾರೆ. ‘ಚೌಲ’ ಎನ್ನುವ ಮುಂಡನ ಕಾರ್ಯವನ್ನು ಗಂಡುಮಕ್ಕಳಿಗೆ ಮೂರು ವರ್ಷದವರಿದ್ದಾಗ  ಮಾಡಿಸುತ್ತಾರೆ. ಒಂದು ವರ್ಷದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಕಿವಿ ಚುಚ್ಚಿಸಿ ನಂತರ ಅನ್ನಪ್ರಾಶನ ಮಾಡಿಸುತ್ತಾರೆ. ಹೆಣ್ಣುಮಕ್ಕಳಿಗೆ ಋತುಮತಿ ಕಾರ್ಯ ಮಾಡುತ್ತಾರೆ. ಸೂತಕವು ಐದು ದಿನಗಳವರೆಗೆ ನಡೆಯುತ್ತದೆ. ಶವವನ್ನು ಸುಡುತ್ತಾರೆ, ಸುಟ್ಟ ದೇಹದ ಆಸ್ತಿಗಳನ್ನು ನೀರಿನಲ್ಲಿ ಹಾಕುತ್ತಾರೆ. ಸಾವಿನ ಸೂತಕ ಹತ್ತು ದಿನಗಳವರೆಗೆ ಇದ್ದು, ಪ್ರತಿ ವರ್ಷವೂ ಹಿರಿಯರ ಪೂಜೆ ಮಾಡುತ್ತಾರೆ.

ಜೈನರಲ್ಲಿ ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರರಾಗಿದ್ದಾರೆ. ದೊಡ್ಡ ಹಾಗೂ ಸಣ್ಣ ಪ್ರಮಾಣದ ವ್ಯಾಪಾರವನ್ನು ಮಾಡುತ್ತಾರೆ. “ದಕ್ಷಿಣ ಭಾರತ ಜೈನ ಮಹಾಸಭಾ” ಎನ್ನುವ ಸಂಘಟನೆಯಿದೆ. ಇವರು ಪದ್ಮಾವತಿ, ಜ್ವಾಲಾಮಾಲಿನಿ ಹಾಗೂ ಇಪ್ಪತ್ತನಾಲ್ಕು ತೀರ್ಥಂಕರರನ್ನು ಪೂಜಿಸುತ್ತಾರೆ. ಇವರ ಹಬ್ಬಗಳಲ್ಲಿ ಮುಖ್ಯವಾದವು ಮಹಾವೀರ ಜಯಂತಿ, ಮ ಹಾವೀರ ನಿರ್ವಾಣೋತ್ಸವ, ವಿಜಯದಶಮಿ, ದಿಪಾವಳಿ, ಶ್ರುತ ಪಂಚಮಿ, ಇತ್ಯಾದಿ. ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಉಪಯೋಗವನ್ನು ಈ ಸಮುದಾಯವು ಪಡೆದುಕೊಂಡಿದೆ.

 

ಜೈನ್ : ಅಗರವಾಲ

ಅಗರವಾಲನ್ನು ಕರ್ನಾಟಕದಲ್ಲಿ ಬನಿಯ ಮತ್ತು ವೈಶ್ಯ ಎಂದು ಕರೆಯಲಾಗುತ್ತದೆ. ಇವರಲ್ಲಿ ಬೀಸ ಅಗರವಾಲ, ಖಾಡೆಮಿ ಅಗರವಾಲ, ಬಾರಹಸಾಯಿನಿ ಅಗರವಾಲ, ಚೌಸಾಯಿನಿ ಅಗರವಾಲ ಮತ್ತು ರಾಜಾಸಾಯಿನಿ ಅಗರವಾಲ ಎನ್ನುವ ಉಪಪಂಗಡಗಳಿವೆ. ಕರ್ನಾಟಕದ ಬಹುತೇಕ ಎಲ್ಲ ನಗರ ಪ್ರದೇಶ ಹಾಗೂ ಮುಖ್ಯ ಪಟ್ಟಣಗಳಲ್ಲಿ ಇವರು ನೆಲೆಸಿದ್ದಾರೆ. ಇವರ ಮೌಖಿಕ ಐತಿಹಾಸ ಪರಂಪರೆಯು ಇವರು ಉತ್ತರ ಪ್ರದೇಶ ಹಾಗೂ ಹರಿಯಾಣದಿಂದ ವಲಸೆ ಬಂದು ಇಲ್ಲಿ ನೆಲೆಸಿರುವುದರ ಬಗ್ಗೆ ಹೇಳುತ್ತದೆ. ಹಿಂದಿ ಇವರ ಮಾತೃಭಾಷೆ. ಕನ್ನಡ, ತೆಲುಗಿನಲ್ಲಿಯೂ ಇವರು ಮಾತನಾಡಿ, ದೇವನಾಗರಿ ಲಿಪಿಯನ್ನು ಬಳಸುತ್ತಾರೆ.

ಅಗರವಾಲರಲ್ಲಿ ಹೊರಬಾಂಧವ್ಯದ ಕುಲಗಳಿವೆ. ಅವುಗಳಲ್ಲಿ  ಮುಖ್ಯವಾದವು ಗೊಯಲ್, ಮಿಟ್ಟಲ್, ಸಿಂಘಾಲ್, ಜಿಂದಾಲ್, ಬಿಂದಾಲ್, ಗಾರ್ಗ, ತಾಯಲ್, ಗಂಗಲ್ ಇತ್ಯಾದಿ. ಇವರು ತಮ್ಮ ಕುಲದ ಹೆಸರನ್ನೇ ತಮ್ಮ ಹೆಸರಿಗೂ ಸೇರಿಸಿಕೊಂಡು, ಮನೆತನದ ಹೆಸರಾಗಿ ಬಳಸುತ್ತಾರೆ.

ಇತ್ತೀಚಿನವರೆಗೂ ಇವರು ಬನಿಯ ಕುಲದ ಉಪಕುಲಗಳ ಜೊತೆಗೆ ಮದುವೆಯಾಗುತ್ತಿದ್ದರು. ಸ್ವಕುಲ ಅಥವಾ ರಕ್ತ ಸಂಬಂಧದಲ್ಲಿನ ಮದುವೆಗಳು ಇವರಲ್ಲಿ ನಿಷೇಧಿತ. ಏಕಪತಿ/ಪತ್ನಿತ್ವ ಮಾತ್ರ ಮದುವೆಯ ರೀತಿಯಾಗಿವೆ. ವಿಧುರರ ಮರು ವಿವಾಹಕ್ಕೆ ಅನುಮತಿಯಿದೆ, ಆದರೆ ವಿಧವೆಯರಿಗಿಲ್ಲ. ಇವರಲ್ಲಿ ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದರೂ, ಕೆಲವು ವಿಭಕ್ತ ಕುಟುಂಬಗಳು ಇವೆ. ಪಿತೃಪ್ರಧಾನ ಕುಟುಂಬ ಪದ್ಧತಿ ಇವರಲ್ಲಿ ಕಂಡುಬರುತ್ತದೆ. ಗಂಡು ಸಂತಾನಗಳಿಗೆ ಪ್ರಾಮುಖ್ಯತೆ ಇದೆ. ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಮದುವೆಯ ಕಾರ್ಯ ಕಲಾಪಗಳನ್ನು ಬ್ರಾಹ್ಮಣ ಪುರೋಹಿತರ ಹಿರಿತನದಲ್ಲಿ ಮಾಡಲಾಗುತ್ತದೆ. ಮೆರವಣಿಗೆ, ಹಾರಗಳನ್ನು ಬದಲಾಯಿಸಿಕೊಳ್ಳುವುದು, ಕನ್ಯಾದಾನ ಇವು ಮದುವೆಗೆ ಸಂಬಂಧಿಸಿದ ಮುಖ್ಯ ಕಾರ್ಯಗಳು. ಶವ ಸುಟ್ಟು ಸಾವಿನ ಸೂತಕವನ್ನು ಹದಿಮೂರು ದಿನ ಆಚರಿಸುತ್ತಾರೆ.

ಸಾಂಪ್ರದಾಯಿಕವಾಗಿ ಇವರು ವ್ಯಾಪಾರಿಗಳು. ಇವರ ಈಗಿನ ವ್ಯಾಪಾರಗಳೆಂದರೆ, ಜವಳಿ, ಸಿಹಿತಿಂಡಿ, ಹೋಟೆಲ್‌ಗಳನ್ನು ನಡೆಸುವುದು ಕಿರಾಣಿ ವ್ಯಾಪಾರ ಇತ್ಯಾದಿ. ಇದಲ್ಲದೆ ಕೆಲವರು ಸರ್ಕಾರಿ ಸೇವೆಯಲ್ಲಿಯೂ ಇದ್ದಾರೆ. ಈ ಸಮುದಾಯದ ಸಂಘವಾದ ‘ಅಗರವಾಲ ಮಹಾಸಭಾ’ ಇವರ ಅಭಿವೃದ್ಧಿಗಾಗಿ ಕೆಲಸಮಾಡುತ್ತದೆ.

 

ಜೈನ್ : ಬೋಗಾರ

ಬೋಗಾರರನ್ನು ಕಸಾರ್, ಕನಸಾಯಿ, ಕಂಚೋರಿ, ಕಂಚೇರ, ಕಂಚುಗಾರ ಹಾಗೂ ಬಳೆಗಾರ ಎಂದೆಲ್ಲಾ ಕರೆಯಲಾಗುತ್ತದೆ. ಬೋಗಾರ ಎನ್ನುವ ಈ ಜಾತಿಯ ಪದ ‘ಬೋಗಣಿ’ – ಎಂದರೆ ಪಾತ್ರೆ ಎನ್ನುವ ಪದದಿಂದ ಬಂದಿದೆ. ಎಂಥೋವನ್ ಪ್ರಕಾರ (೧೯೨೦) ಬೋಗಾರರನ್ನು ಜೈನರ ಉಪಪಂಗಡ ಎಂದು ಗುರುತಿಸಲಾಗಿದೆ. ಇವರ ಸಾಂಪ್ರದಾಯಕ ವೃತ್ತಿಯು ಬಳೆಗಳನ್ನು ಮಾರುವುದು, ತಾಮ್ರ ಹಾಗೂ ಹಿತ್ತಾಳೆಯ ಪಾತ್ರೆಗಳನ್ನು ತಯಾರಿಸುವುದಾಗಿತ್ತು. ಇವರು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿದ್ದಾರೆ. ಬೋಗಾರರು ಕರ್ನಾಟಕದಲ್ಲಿ ಹಾಸನ, ಮೈಸೂರು, ಬಿಜಾಪುರ, ಧಾರವಾಡ ಹಾಗೂ ಬೆಳಗಾಂ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರು ಮರಾಠಿ ಮತ್ತು ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ಹಾಗೂ ಗೋತ್ರಗಳಲ್ಲಿ ಹೊರಬಾಂಧವ್ಯದ ವಿವಾಹ ಪದ್ಧತಿ ಕಂಡುಬರುತ್ತದೆ. ಏಕಪತ್ನಿತ್ವ/ಏಕಪತಿತ್ವ ವಿವಾಹದ ರೀತಿ-ನೀತಿಗಳು. ವಧುದಕ್ಷಿಣೆ (ತೆರ) ಹಾಗೂ ವರದಕ್ಷಿಣೆಗಳನ್ನು ವಸ್ತು ರೂಪದಲ್ಲಿ ಕೊಡುತ್ತಾರೆ. ವಿವಾಹ ವಿಚ್ಛೇದನವು ಸಮಾಜದ ಒಪ್ಪಿಗೆಯ ಮೇರೆಗೆ ಸಾಧ್ಯವಿದೆ. ಗಂಡಸರಿಗೆ ಮಾತ್ರವೇ ವಿವಾಹ ವಿಚ್ಛೇದನದ ಅವಕಾಶವಿದೆ. ವಿಧುರ ಹಾಗೂ ವಿಚ್ಛೇದಿತ ಗಂಡಸು ಮರು ಮದುವೆಯಾಗಲು ಅವಕಾಶವಿದೆ ಗಂಡು ಸಂತಾನಕ್ಕೆ ಹೆಚ್ಚು ಪ್ರಾಧಾನ್ಯತೆಯಿದ್ದು, ಹಿರಿಯಮಗನು ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು, ಮನೆಗೆಲಸ ಮಾಡುವುದರ ಜೊತೆ, ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಜನನ ಸೂತಕವು ಹದಿನಾಲ್ಕು ದಿನಗಳವರೆಗೆ ಇರುತ್ತದೆ. ನಂತರ ‘ಪುಣ್ಯವಚನ’ ವೆಂಬ ಕಾರ್ಯವನ್ನು ಹದಿನಾಲ್ಕನೇ ದಿನ ಮಾಡುತ್ತಾರೆ. ಮುಂಡನ ಕಾರ್ಯವನ್ನು ಗಂಡು ಮಕ್ಕಳಿಗಷ್ಟೇ ಮಾಡಿಸು‌ತ್ತಾರೆ. ಅನ್ನಪ್ರಾಶನ ಕಾರ್ಯವನ್ನು ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಿಗೂ ಮಾಡಿಸುತ್ತಾರೆ. ಜನಿವಾರವನ್ನು ಧರಿಸುವ ಕಾರ್ಯ ಗಂಡು ಮಕ್ಕಳಿಗೆ ಇರುತ್ತದೆ. ಮದುವೆಯ ಆಚರಣೆಗಳು ವಧುವಿನ ಸ್ವಗೃಹದಲ್ಲಿ ನಡೆಯುತ್ತದೆ. ವಧು ವರರು ಅಗ್ನಿಕುಂಡದ ಸುತ್ತ ‘ಸಪ್ತಪದಿ’ ತುಳಿಯುತಾರೆ. ಸತ್ತವರನ್ನು ಸುಡುತ್ತಾರೆ. ಸೂತಕವು ಹನ್ನೆರಡು ದಿನಗಳವರೆಗೆ ಇದ್ದು, ದಿನಕರ್ಮ ಎಂಬ ಧಾರ್ಮಿಕ ಕಾರ್ಯವನ್ನು ಹದಿಮೂರನೆ ದಿನದಂದು ಮಾಡುತ್ತಾರೆ.

ಇವರ ಸಾಂಪ್ರದಾಯಿಕ ಹಾಗೂ ಈಗಿನ ವೃತ್ತಿಗಳೆಂದರೆ – ಬಳೆ, ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳನ್ನು ಮಾರುವುದು. ಇವರು ಕೃಷಿ ಭೂಮಿಇಲ್ಲದವರು. ಇವರಲ್ಲಿ ಕೆಲವರು ಸರ್ಕಾರಿ ವೃತ್ತಿಗಳಲ್ಲಿದ್ದಾರೆ. ಇವರು ಜೈನ ತೀರ್ಥಂಕರರನ್ನು ಪೂಜಿಸಿವರು. ತಮ್ಮ ಧಾರ್ಮಿಕ ವ್ಯಕ್ತಿಯನ್ನು ‘ಗುರು’ ಎನ್ನುತ್ತಾರೆ, ಸಾಮಾನ್ಯವಾಗಿ ಅವರು ಇದೇ ಜಾತಿಯವರಾಗಿಸುತ್ತಾರೆ. ದೀಪಾವಳಿ ಇವರು ಆಚರಿಸುವ ಅತಿ ಮುಖ್ಯ ಹಬ್ಬ. ಅಂದು ಲಕ್ಷೀ ದೇವತೆಯನ್ನು ಪೂಜಿಸುತ್ತಾರೆ. ಹೋಳಿ ಹಬ್ಬವನ್ನೂ ಆಚರಿಸುತ್ತಾರೆ. ಈ ಜಾತಿಯಲ್ಲಿ ವ್ಯಾಪಾರಿಗಳು, ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ವೃತ್ತಿಯಲ್ಲಿರುವವರು ಇದ್ದಾರೆ. ಆಧುನಿಕ ವೈದ್ಯಕೀಯ ಪದ್ಧತಿ, ವಿದ್ಯಾಭ್ಯಾಸ, ಅಭಿವೃದ್ಧಿ ಯೋಜನೆಗಳು ಹಾಗೂ ಇತರೆ ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಇವರಿಗೆ ಒಲವಿದೆ.

ನೋಡಿ:

Buhler, Johnn Georg., 1903. On The Indian Sects of The Jains : Luzac, London

Cort J.E., 1991. ‘The Svetambar Murtipujak Jain Mendicant’: French Summary, Man 26 pp 651-671.

Emeneau, Murray, Barnson., 1947. ‘Studies in the Folk – Tales of India, III, Jain literature and Kota Foll Tales’, Journal of the American Sociology.

Gandhi,L.P., 1984.Patterns of Genetic Variations among The Jains Ph.D. Thesis, University of Poona, Poona.

Jain, R., 1987. ‘Jain-Oswal of Calcutta as An Ethnic Group ‘A Socio-Historical Perspectiven’, Man in India 67 pp 38-403.

Kalghatgi. T.G., 1990. ‘Jainism in South India’, In; South Indian Studies,  Nayak, H.M. and B.R.Gopal (ed), : Geetha Book House, Mysore pp.50-517

Misra, Rajalakshmi., 1972. ‘The Jains In An Urban Setting : The Ascetics and The Laity Among The Jains of Mysore city’ Bulletin of the Department of Anthropology Vol. 21.

Ramachandra Chettiar, C.M., 1934-1935. ‘Jainism in Kongu Nadu’, The Quarterly Journal of the Mithic Society 25, nos.1,2,3 : 87-94

Sharma, Sasi Krishna., 1987. Family Structure and Socialization Process Among The Jains in Madras City Ph.D. Thesis: University of Madras, Madras