ನಗಾರ, ಸಾಂಪ್ರದಾಯಿಕ ವೃತ್ತಿಯೆಂದರೆ ಕುರಿ ಸಾಕಾಣಿಕೆ. ಖಂಡೋಬ ಇವರ ಸಮುದಾಯದ ಮೂಲ ಪುರುಷ ಎಂದು  ನಂಬುತ್ತಾರೆ. ಇವರು ಮುಖ್ಯವಾಗಿ ಬೆಳಗಾವಿ, ಬಿಜಾಪುರ, ಗುಲ್ಬರ್ಗಾ ಹಾಗೂ ಬೀದರ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಈ ಸಮುದಾಯ ಹಲವಾರು ಹೊರಬಾಂಧವ್ಯ ಬಳ್ಳಿಗಳನ್ನು ಹೊಂದಿದೆ – ಭೈಸೆ, ಭೂಲೆ, ಚಾರ್ಮುಲೆ, ಗಾಡೇಕರ್, ಫೋದ್ವೆ, ಗವಂದೆ, ಹೋಳ್ಕರ್, ಜಾಧವ, ಕಟೊಡೆ, ಕಾಡೆಕಾರ, ಕೋಲೆಕಾರ, ಮೋರ, ಟಾಂಪ್ಲೆ, ಇತ್ಯಾದಿ. ಇವು ಪುರುಷಪ್ರಧಾನವಾದವುಗಳಾಗುತ್ತವೆ.

ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ, ಬಳ್ಳಿಗಳ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿ ಅನುಸರಿಸುತ್ತಾರೆ. ಸೋದರ ಸಂಬಂಧಿ ವಿವಾಹಗಳಿಗೆ ಇವರಲ್ಲಿ ಅವಕಾಶವಿದೆ. ಏಕಪತ್ನಿತ್ವ/ಏಕಪತಿತ್ವ ಇವರ ವಿವಾಹದ ರೀತಿ. ವರದಕ್ಷಿಣೆ ಹಾಗೂ ವಧುದಕ್ಷಿಣೆ ಎರಡೂ ಆಚರಣೆಯಲ್ಲಿವೆ. ಗಂಡು ಮತ್ತು ಹೆಣ್ಣು ಇಬ್ಬರಿಗೂ ವಿವಾಹ ವಿಚ್ಛೇದನ ಪಡೆಯಲು ಹಕ್ಕಿದೆ. ವಿವಾಹ ವಿಚ್ಛೆದಿತರಿಗೆ, ವಿಧವೆ, ವಿಧುರರಿಗೆ ಮದುವೆಯಾಗಲು ಅವಕಾವಿದೆ. ಆಸ್ತಿಯನ್ನು ಗಂಡು ಮಕ್ಕಳಲ್ಲಿ ಸಮನಾಗಿ ಹಂಚಲಾಗುತ್ತದೆ. ತಂದೆಯ ನಂತರ ಹಿರಿಯಮಗನು ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು ಮನೆಯ ಆದಾಯಕ್ಕೆ ವ್ಯವಸಾಯ ಕೂಲಿಗಳಾಗಿ ದುಡಿದು ಸಹಾಯ ಮಾಡುತ್ತಾರೆ. ನಾಮಕರಣ ಶಾಸ್ತ್ರವನ್ನು ಮಗು ಹುಟ್ಟಿದ ಹನ್ನೆರಡನೇ ದಿನ ಮಾಡುತ್ತಾರೆ. ಮುಂಡನ ಕಾರ್ಯವನ್ನು ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಿಗೂ ಆರು ತಿಂಗಳಿಂದ ಒಂದು ವರ್ಷದ ಒಳಗೆ ಮಾಡಿಸುತ್ತಾರೆ. ಮದುವೆಯ ಆಚರಣೆಗಳಲ್ಲಿ ನಿಶ್ಚಿತಾರ್ಥ, ಅರಿಸಿಣ ಹಚ್ಚುವುದು, ಹಾರ ಬದಲಾವಣೆ, ಮಂಗಳಾಕ್ಷತೆ, ಮಂಗಳ ಸೂತ್ರ ಕಟ್ಟುವುದು, ಇತ್ಯಾದಿಗಳಿವೆ.

ಇತ್ತೀಚೆಗೆ ಇವರಲ್ಲಿ ಕೆಲವರು ಉಳುಮೆ ಮಾಡುತ್ತಿದ್ದಾರೆ. ವಿಠೋಬ, ಮಹಾದೇವ, ಖಂಡೋಬಾ, ಯಲ್ಲಮ್ಮ, ಮಾರುತಿ ಇತ್ಯಾದಿ ದೇವರುಗಳನ್ನು ಪೂಜಿಸಿ ಗಣೇಶ ಚತುರ್ಥಿ, ದೀಪಾವಳಿ ಹಾಗೂ ಇನ್ನಿತರ ಹಬ್ಬಗಳನ್ನು ಆಚರಿಸುತ್ತಾರೆ. ಇವರಲ್ಲಿ ಕೆಲವರು ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸದಲ್ಲಿ ಇದ್ದಾರೆ. ಆಧುನಿಕ ಸಾಮಾಜಿಕ ಸೌಲಭ್ಯಗಳು ಹಾಗೂ ಅಭವೃದ್ಧಿ ಕಾರ್ಯಕ್ರಮ ಇವರಿಗೆ ದೊರಕಬೇಕಾಗಿದೆ. ಈ ಸಮುದಾಯವು ಆಧುನಿಕ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಹಿಂದುಳಿದಿದೆ.

ನೋಡಿ:

Das S.R., K.C. Malhotra, B.N.Mukherjee and S.K.Das., 1973. ‘Genetic Variants of Lactate Dehydrogenase in the Dhangars of Maharashtra’ , Japanese Journal of Human Genetics,  18 : 305

Gadgil, M. and K.C. Malhotra., 1982. ‘Ecology of Pastoral Caste : (Ghavli) Dhangars of Peninsular India’, Human Ecology  10;107-143

Majumdar, P.P and K.C.Malhotra., 1979. ‘Matrimonial Distance, Inbreeding Coefficient and Population Size: Dhangar’, Human Biology

Malhotra K.C. and Madhav Gadgil., 1981. ‘The Ecological Basis of the Geographical Distributin of the Dhangars; A Pastoral Caste Cluster of Maharashtra’, South Asian Anthropologist  49-59.

Malhotra, K.C., 1980. ‘Matrimonial Distances Among The Four Dhangar Castes of Maharashtra’, South Asian Anthropologist,  25-34

Malhotra K.C., 1984. ‘Population Structure Among The Dhangar Caste Cluster of Maharashtra India’, In : The People of South Asia : The Bilogical Anthropology of India, Pakistan and Nepal.  John R.Lokacs (Ed). Plenum Press, New York

Malhotra, K.C. 1979, Inbreeding among Dhangar Castes of Maharashtra, Journal of Bio-Social Science  11 :377-410