ನಾಗರಥರು, ಅಯೋಧ್ಯಾ ಮೂಲದವರೆಂದೇ ಹೇಳಿಕೊಳ್ಳುತ್ತಾರೆ. ನಾಮಧಾರಿ ಮತ್ತು ಲಿಂಗಧಾರಿಗಳು ಎಂಬ ಉಪಜಾತಿಗಳನ್ನು ಈ ಸಮುದಾಯವು ಹೊಂದಿದೆ ನಂಜುಂಡಯ್ಯ ಮತ್ತು ಐಯ್ಯರ್, (೧೯೩೧). ಇವರು ಬೆಂಗಳೂರು, ತುಮಕೂರು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಕನ್ನಡದಲ್ಲಿ ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ.

ನಾಗರಥರಲ್ಲಿ ಬೆಹಿ, ಶೆಟ್ಟಿ, ಬೇಟಪ್ಪ, ಯಮಳನಾಡು ಮತ್ತು ದೇವನಹಳ್ಳಿಗಳೆಂಬ ಐದು ಉಪಜಾತಿಗಳಾಗಿ ಇವರು ವಿಭಾಗಿಸಲ್ಪಟ್ಟಿದ್ದಾರೆ. ಮೊದಲ ಮೂರು ಉಪಜಾತಿಗಳೂ ನಾಮಧಾರಿ ಗುಂಪಿಗೆ ಸೇರಿದರೆ, ನಂತರದ ಎರಡು ಲಿಂಗಧಾರಿ ಗುಂಪಿಗೆ ಸೇರುತ್ತವೆ. ಇವರು ಚಂದ್ರಮೌಳೇಶ್ವರ, ಚೋಳನದಾಸಕ, ಮೌಂಡವ್ಯ, ವರುವ ಇತ್ಯಾದಿ ಹೊರಬಾಂಧವ್ಯ ವಿವಾಹ ಬೆಡಗುಗಳನ್ನು ಹೊಂದಿದ್ದಾರೆ. ಸೋದರ ಸಂಬಂಧಿ ವಿವಾಹಕ್ಕೆ ಅನುಮತಿಯಿದೆ. ಹಿರಿಯ ಮಗನಿಗೆ ತಂದೆಯ ನಂತರ ಉತ್ತರಾಧಿಕಾರ ಬರುತ್ತದೆ. ಆಭರಣ ವ್ಯಾಪಾರ ಇವರ ಪಾರಂಪರಿಕ ಉದ್ಯೋಗ. ಖಾಸಗಿ ವಲಯಗಳಲ್ಲಿ ನಾಗರಥರು ಯಶಸ್ವಿ ಬ್ಯಾಂಕರ್‌ಗಳಾಗಿದ್ದಾರೆ. ಇವರು ಆಧುನಿಕ ಶಿಕ್ಷಣ ಹಾಗೂ ಹಲವು ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪಡೆದುಕೊಂಡಿದ್ದಾರೆ.

ನೋಡಿ:

ChandraShekhar S., 1980. Nagarathars of South India, Macmillan & Co., New Delhi.

ChandraShekhar, S. 1976. The Nagarathars : The Land, The People & Their Marriage & Population Registration System’, Population Review Vol.20 ;1-2

Sharma Sheshadri A., 1970. Nattukkottai Nagrathara Varalaru Vanadhi Publishing House, Madras

Annamalai, S.A., 1965. Social History of Vallanattu Nagaratha, prapanja Jothi Press Pudukottai