ನಾಡೋರ ಎಂದರೆ ‘ನಾಡಿನಜನ’ ಅಥವಾ ‘ದೇಶಿಯರು’ ಎಂಬ ಅರ್ಥ ಇದೆ. ತೋರ್ಕೆ ನಾಡೋರ ಮತ್ತು ಉಪ್ಪು ನಾಡೋರ ಎಂಬ ಎರಡು ಒಳಬಾಂಧವ್ಯ ಉಪಪಂಗಡಗಳಿವೆ. ಇವರು ನಾಯಕ ಎಂಬ ವಿಶೇಷಣಯನ್ನು ಇಟ್ಟಿಕೊಂಡಿದ್ದಾರೆ. ಉಪ್ಪು ನಾಡೋರರಿಗಿಂತ ತೋರ್ಕೆ ನಾಡೊರರು ಉತ್ತಮವೆಂಬ ಭಾವನೆ ಇದೆ. ಇವರು ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬರುತ್ತಾರೆ. ಎಂಥೋವನ್ ಹೇಳುವಂತೆ, ಇವರು ನಾಲ್ಕು ಶತಮಾನಗಳ ಹಿಂದೆ ಮಾಪಿಳ್ಳರ ಉಪಟಳದಿಂದ ತಪ್ಪಿಸಿಕೊಳ್ಳಲು, ‘ಕೋಚ್ಚಿ’ ಇಂದ ವಲಸೆ ಬಂದ ಸಂತತಿಯವರು ಎಂದು  ಹೇಳಿಕೊಳ್ಳುತ್ತಾರೆ. ಕನ್ನಡವನ್ನು ಮಾತಾಡಿ ಅದನ್ನು ಲಿಪಿಯಾಗಿ ಬಳಸುತ್ತಾರೆ.

ನಾಡೋರರಲ್ಲಿ – ಅಜ್ಜಿನ, ಆನೆ, ಚೆಂದಿ, ಗಂಗಾ, ಹೊಳೆ, ಹೊನ್ನಾ, ನಾಗ, ಸಾಲ್ಯಾನ್, ಶೆಟ್ಟಿ, ಶೀಗೆ, ಶಿವ, ಇತ್ಯಾದಿ ಮಾತೃ ನಡವಳಿಯ ಹೊರಬಾಂಧವ್ಯ ವಿವಾಹದ ಬೆಡಗುಗಳು ಇವೆ. ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ಹಾಗೂ ಕುಲಗಳಲ್ಲಿ ಹೊರಬಾಂಧವ್ಯ ವಿವಾಹ ಇವರ ವಿವಾಹದ ನಿಯಮಗಳಾಗಿವೆ. ಸೋದರ ಸಂಬಂಧಿ ವಿವಾಹಗಳಿಗೆ ಅನುಮತಿ ಇದೆ. ಇವರಲ್ಲಿ ಏಕಪತ್ನಿತ್ವ  ಏಕಪತಿತ್ವ ವಿವಾಹ ಪದ್ಧತಿ ರೂಢಿಯಲ್ಲಿದೆ. ವಿಧವೆ, ವಿದುರ, ವಿಚ್ಛೇದಿತ, ವಿವಾಹವು ತೋರ್ಕೆ ನಾಡೋರರಲ್ಲಿ ಅವಕಾಶವಿದೆ. ಅದರೆ ಉಪ್ಪು ನಾಡೋರರಲ್ಲಿ ವಿಧವೆಯು ವಿವಾಹಕ್ಕೆ ಅವಕಾಶವಿಲ್ಲ. ಆರ್ಥಿಕ ಚಟುವಟಿಕೆಯಲ್ಲಿ ಇವರ ಮಹಿಳೆಯರು ಭಾಗವಹಿಸುತ್ತಾರೆ. ಉಪ್ಪು ನಾಡೋರರು ಪಾರಂಪರಿಕ ಉದ್ಯೋಗ ಉಪ್ಪು ಮಾಡುವುದಾಗಿತ್ತು. ಆದರೆ ಈಗ ವ್ಯವಸಾಯ ಮತ್ತು ತೋಟಗಾರಿಕೆ ಉದ್ಯೊಗಗಳಾಗಿವೆ. ಇವರಲ್ಲಿ ಜಾತಿ ಪಂಚಾಯತಿ ಇದೆ. ಬ್ರಾಹ್ಮಣ ಪೂಜಾರಿಯು ಇವರ ಧಾರ್ಮಿಕ ವಿಧಿಗಳನ್ನು ಪೂರೈಸುತ್ತಾರೆ. ಜಾನಪದ ಕಲೆ, ನಾಟಕ ಹಾಗೂ ಯಕ್ಷಗಾನವು ಈ ಸಮುದಾಯದ ಹವ್ಯಾಸವಾಗಿದೆ. ಆಧುನಿಕ ಸೌಲಭ್ಯಗಳ ಪ್ರಯೋಜನವನ್ನು ಪಡೆಯಲು ಯತ್ನಿಸುತ್ತಿದ್ದಾರೆ.

ನೋಡಿ:

ನಾಯಕ್, ಶಾಂತರಾಮ, ೧೯೮೬. ನಾಡೋರರು, ವೈಜಯಂತಿ, ಮೈಸೂರು, ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ.

Hardgrave, Robert, L.Jr., 1966. ‘Varietires of Political Behavious Among The Nadars of Tamil Nadu’ Asian Survey Vol.6.

Nagendran, T., 1996. ‘The Struggle and Sucess of Nadars of Tamil Nadu’, Man in India  76(3)22-237.