ನಾಯ್ರಿಗಳು, ಕರ್ನಾಟಕದಲ್ಲಿ ಅಷ್ಟಾಗಿ ಪರಿಚಿತರಲ್ಲದಿದ್ದರೂ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಿರಳವಾಗಿ ಕಂಡುಬರುತ್ತಾರೆ. ಇವರು ತಮ್ಮನ್ನು ವರಂಬಳ್ಳಿ ಬ್ರಾಹ್ಮಣರು ತಮ್ಮ ಜಮೀನಿನಲ್ಲಿ ಕೂಲಿ ಕೆಲಸಕ್ಕೆಂದು ಕೇರಳದಿಂದ ತುಂಬಾ ಹಿಂದೆ ಕರೆದು ಕೊಂಡುಬಂದರೆಂದು, ಇವರು ಮೌಖಿಕ ಪರಂಪರೆಯಲ್ಲಿ ಹೇಳುತ್ತಾರೆ. ಇನ್ನೊಂದು ಅಭಿಪ್ರಾಯದಲ್ಲಿ ಇವರು ಸ್ಥಳಿಯ ಬುಡಕಟ್ಟಿನ ಮೂಲದವರು. ನಾಯ್ರಿಗಳು ಕನ್ನಡ ಭಾಷೆಯನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ.

ಇವರಲ್ಲಿ- ಕಾವಚು, ತೋಲಾರ್, ಹೆಗ್ಗಡೆ, ಸಲೇರಾಗಳಂಥ ಇತ್ಯಾದಿ ಪಿತೃನಡವಳಿಯ ಹೊರಬಾಂಧವ್ಯ ವಿವಾಹ ಬೆಡಗುಗಳಿವೆ. ಸಮುದಾಯದಲ್ಲಿ ಒಳಬಾಂಧವ್ಯ ವಿವಾಹವು, ಬೆಡಗುಗಳಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿಗಳು ರೂಢಿ ಇದೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವಿಧುರ, ವಿಧವೆ, ವಿಚ್ಛೇದಿತರ ವಿವಾಹಕ್ಕೆ ಅವಕಾಶವಿದೆ. ಇವರ ಸಾಂಪ್ರದಾಯಿಕ ಉದ್ಯೋಗ ಬೇಟೆ ಮತ್ತು ಆಹಾರ ಸಂಗ್ರಹಣೆ. ಈಗಿನ ಉದ್ಯೋಗಗಳು ವ್ಯವಸಾಯ, ಚಿಕ್ಕಪುಟ್ಟ ವ್ಯಾಪಾರಗಳು, ದಿನಕೂಲಿ, ಇತ್ಯಾದಿ. ಸಮುದಾಯದ ಒಳಗಿನ ವಿವಾದಗಳನ್ನು ಬಗೆಹರಿಸಲು ‘ಗುರಿಕಾರ’ನ ನೇತೃತ್ವದಲ್ಲಿ ಜಾತಿಯ ಪಂಚಾಯತಿಯನ್ನು ಹೊಂದಿದ್ದಾರೆ. ಈ ಜನರು ವಿಶೇಷವಾದ ಜಾನಪದ ಗೀತೆಗಳನ್ನು ಹಾಡುತ್ತಾರೆ. ಇವರು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ.