ಂಬದ ಎಂಬ ಪದ ‘ಪಂಬ’ ಎಂಬುದರಿಂದ ಬಂದಿದೆ. ತುಳುವಿನಲ್ಲಿ ಪಂಬ ಎಂದರೆ ‘ಡಂಗೂರ’ ಎಂದು. ಇವರು ಪಂಬಾದೇವಿಯೆಂಬ ‘ಸ್ತ್ರೀ’ ತಮ್ಮ ಪೂರ್ವಜಳೆಂದು ಹೇಳಿಕೊಳ್ಳುತ್ತಾರೆ. ಬೈಲ ಪಂಬದ ಹಾಗೂ ಬಡೈ ಪಂಬದರೆಂಬ ಎರಡು ಪ್ರಾಂತೀಯ ಉಪಪಂಡಗಳನ್ನು ಇವರಲ್ಲಿ ಇವೆ. ಇವರು ನಲ್ಕೆಗಳನ್ನು ಹೋಲುವ ಭೂತ ನೃತ್ಯ ಮಾಡುವ ಹಾಗೂ ಭೂತ ಕಟ್ಟುವ ಕರ್ನಾಟಕ ಒಂದು ಸಣ್ಣ ವರ್ಗ ಎಂದು ಥರ್ಸ್ಟನ್ (೧೯೦೯) ವಿವರಿಸುತ್ತಾರೆ. ದಕ್ಷಿಣಕನ್ನಡ ಜಿಲ್ಲೆ ಮತ್ತು ನೆರೆ ರಾಜ್ಯಗಳಾದ ಕೇರಳ  ಹಾಗೂ ತಮಿಳುನಾಡುಗಳಲ್ಲಿಯೂ ಸಹ ಪಂಬದರು ಕಂಡುಬರುತ್ತಾರೆ. ಭೂತ ನೇಮ ಕಟ್ಟುವ ಪಾತ್ರಕ್ಕೆ ಕಲಾತ್ಮಕವಾಗಿ ಬಣ್ಣ ಬಳಿಯುವುದರಲ್ಲಿ, ಹಾಳೆಯಿಂದ ತಯಾರಿಸಿದ ಅಲಂಕಾರಯುತವಾದ ಅರ್ಧಚಂದ್ರಾಕಾರದ ಒಂದು ಆಕೃತಿಯನ್ನು ತಯಾರಿಸುವುದರಲ್ಲಿ ಈ ಸಮುದಾಯದ ಜನರು ನಿಪುಣರು.

ಇವರಲ್ಲಿ ಹೆಚ್ಚಿನವರು ಕೂಲಿ ಕೆಲಸ ಹಾಗೂ ದರಕಾಸ್ತು ಭೂಮಿಯಲ್ಲಿ ಕೃಷಿಕರಾಗಿ ಜೀವನ ಮಾಡು‌ತ್ತಿದ್ದಾರೆ. ಪಂಬದರಲ್ಲಿ ಎರಡು ವಿಧ ಒಂದು ಬೈಲ ಪಂಬದರು, ಎರಡನೆಯವರು ಬಡೈ ಪಂಬದರು. ಪರೆಯನ್ ಎಂದು ಕರೆಯುವ ಇದೇ ವೃತ್ತಿಯ ಸಮುದಾಯವರಿಗೂ, ಪಂಬದರಿಗೂ ಮತ್ತು ನಲ್ಕೆಯವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ತುಳು ಇವರ ಸಾಹಿತ್ಯ ಭಾಷೆಯಾದರೂ ಕನ್ನಡ ಮಾತನಾಡುತ್ತಾರೆ. ಬಂಗೇರಣ್ಣಯ, ಪರ್ಗೆದಾಣ್ಣಯ ಮತ್ತು ಬಾಲಿದಣ್ಣಯಗಳೆಂಬ ಮಾತೃ ನಡವಳಿಕೆಯ ಹೊರಬಾಂಧವ್ಯದ ಬೆಡಗುಗಳನ್ನು ಈ ಸಮುದಾಯವು ಹೊಂದಿದೆ. ಸೋದರ ಸಂಬಂದಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಇವರ ಸ್ತ್ರೀಯರು ಸಾಂಪ್ರದಾಯಿಕ, ಧಾಮಿರ್ಕ ಹಾಗೂ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಭೂತ ಆಹ್ವಾನಿಸುವುದು, ಕಾಲಜ್ಞಾನ, ಮಂತ್ರವಿದೆ. ದೆವ್ವ ಬಿಡಿಸುವುದು, ಭೂತಕೋಲ ಇವರ ಸಾಂಪ್ರದಾಯಿಕ ವೃತ್ತಿಗಳಾಗಿವೆ. ವ್ಯವಸಾಯದಲ್ಲಿ ಶ್ರಮಗೂಲಿ ಹಾಗೂ ಬೀಡಿಸುತ್ತುವ ಕೆಲಸಗಳನ್ನು ಜೀವನೋಪಾಯಕ್ಕೆ ಇತ್ತೀಚೆಗೆ ಮಾಡುತ್ತಿದ್ದಾರೆ. ಇವರು ಪಂಜುರ್ಲಿ, ಕಲ್ಲುರ್ಟಿ, ಬ್ರಹ್ಮೇರು, ಗುಳಿಗ, ಬೊಬ್ಬರ್ಯರ, ಇತ್ಯಾದಿ ಭೂತಗಳನ್ನು ಪೂಜಿಸುತ್ತಾರೆ. ಪಾರಂಪರಿಕವಾಗಿ ಗ್ರಾಮಗಳಲ್ಲಿನ ಭೂತಕೋಲಗಳನ್ನಾಡುವ ಇವರು ಕಾಲಜ್ಞಾನ ಹಾಗೂ ದೆವ್ವ ಬಿಡಿಸುವ ಮಂತ್ರ ಶಕ್ತಿಯೊಂದಿಗೆ ಎಲ್ಲಾ ಕೋಮಿನವರು ಸಂಪರ್ಕ ಹೊಂದಿದ್ದಾರೆ. ಇವರ ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಗಳು ಸುಧಾರಿಸಬೇಕಾಗಿದೆ.