ಡಿಯರನ್ನು, ಪಡಿಯಾ ಹಾಗೂ ಪಡಿಯಾರ್ ಎಂದೂ ಹೆಸರಿಸಲಾಗುತ್ತದೆ. ತಮ್ಮನ್ನು, ಗೋಮಂತಕ ಸಾರಸ್ವತರೆಂದು ಗುರುತಿಸಿಕೊಳ್ಳುವ ಇವರು, ವಂಗದೇಶದಿಂದ ವಲಸೆ ಬಂದವರೆಂದು ಹೇಳಿಕೊಳ್ಳುತ್ತಾರೆ. ಇಂಡೋ ಆರ್ಯನ್ ಭಾಷೆಯಾದ ಕೊಂಕಣಿಯನ್ನು, ಕನ್ನಡವನ್ನು ಮಾತನಾಡುವ ಇವರು ಬಳಸುವ ಲಿಪಿ ಕನ್ನಡ. ಸೋದರ ಸಂಬಂಧಿ ವಿವಾಹಗಳಿಗೆ ಇವರಲ್ಲಿ ಅವಕಾಶವಿದೆ. ಏಕವಿವಾಹ ಪದ್ಧತಿ ರೂಢಿಯಲ್ಲಿದೆ. ವಿಧವೆ, ವಿಧುರ ವಿಚ್ಛೇದಿತರುಗಳಿಗೆ ವಿವಾಹಕ್ಕೆ ಅವಕಾಶವಿದೆ. ಹಿರಿಯ ಮಗನು ತಂದೆ ನಂತರ ಕುಟುಂಬದ ಉತ್ತರಾಧಿಕಾರದ ಹಕ್ಕನ್ನು ಪಡೆಯುತ್ತಾನೆ.

ಈ ಸಮುದಾಯದ ಜನರು ಪರಂಪರಾಗತವಾಗಿ ದೇಗುಲಗಳಲ್ಲಿ ಸೇವೆ ಸಲ್ಲಿಸಿದವರು. ಇತ್ತೀಚೆಗೆ ಪಡಿಯರು ತಮ್ಮ ಸಾಂಪ್ರದಾಯಿಕ ವೃತ್ತಿಯನ್ನು ಬಿಟ್ಟಿದ್ದಾರೆ.  ಕೆಲವು ಕುಟುಂಬಗಳು ತಮ್ಮದೆ ಭೂಮಿಯನ್ನು ಹೊಂದಿ ವ್ಯವಸಾಯದಲ್ಲಿ ತೊಡಗಿದ್ದಾರೆ. ಕೆಲವರು ಅನೇಕ ಸ್ವಯಂ-ಉದ್ಯೋಗಗಳಲ್ಲಿ ನಿರತರಾಗಿದ್ದಾರೆ. ತಮ್ಮ ಸಮುದಾಯದ ಅಭಿವೃದ್ಧಿಗೆ ‘ಪಡಿಯರ ಸಮಾಜ ಸೇವಾ ಸಂಘ’ ಎಂಬ ಸಂಘಟನೆಯನ್ನು ಹೊಂದಿದ್ದಾರೆ. ಆಧುನಿಕ ಶಿಕ್ಷಣ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಆಸಕ್ತಿಯಿದೆ. ಇವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ್ದಾರೆ.