ದಾರ್ಥಿಗಳು ಪಾರಂಪರಿಕವಾಗಿ ದೇಗುಲಗಳ ಸೇವಕರಾದವರು ಇವರ ಮೌಕಿಕ ಸಂಪ್ರದಾಯದ ಪ್ರಕಾರ ಇವರು ಬಹಳ ಹಿಂದೆ ಕೇರಳದಿಂದ ಕರ್ನಾಟಕಕ್ಕೆ ವಲಸೆ ಬಂದವರು. ಇವರ ಹೆಸರು ‘ಪದ’ ಅಂದರೆ ‘ಶಬ್ದ’ ಮತ್ತು ‘ಅರ್ಥ’ ಅಂದರೆ ತಿಳಿದುಕೊಂಡು ಅರ್ಥವನ್ನು ಕೊಡುವವನು’ ಎಂಬುದರಿಂದ ಬಂದಿದೆ. ಇವರು ತಮ್ಮ ಪಾರಂಪರಿಕ ಉದ್ಯೋಗವಾದ ತಬಲ ಬಾರಿಸುವ ಕೌಶಲ್ಯದಿಂದ ಬ್ರಾಹ್ಮಣರು ಉಚ್ಛರಿಸುವ ಮಂತ್ರಗಳ ಅರ್ಥವನ್ನು ಸ್ಪಷ್ಟಮಾಡುವರೆಂದು ನಂಬಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಮುದಾಯದ ಜನರು ಹೆಚ್ಚಾಗಿ ಕಂಡುಬರುತ್ತಾರೆ. ತುಳು ಇವರ ಮಾತೃಭಾಷೆಯಾದರೂ, ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಈ ಸಮುದಾಯ ವಸಿಷ್ಠ, ವಿಶ್ವಾಮಿತ್ರ ಇತ್ಯಾದಿ ಗೋತ್ರಗಳನ್ನು ವಿವಾಹ ಸಂಬಂಧವ್ನನು ಸಕ್ರಮಗೊಳಿಸಲು ಹೊಂದಿದ್ದಾರೆ. ಸಮುದಾಯ ಮಟ್ಟದಲ್ಲಿ ಒಳಬಾಂಧವ್ಯ ಹಾಗೂ ಗೊತ್ರಗಳ ಮಟ್ಟದಲ್ಲಿ ಹೊರಬಾಂಧವ್ಯ ಇವರ ವಿವಾಹ ಪದ್ಧತಿ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವಿಧವೆ, ವಿಧುರ ಮತ್ತು ವಿಚ್ಛೇದಿತರ ವಿವಾಹಕ್ಕೆ ಸಮ್ಮತಿ ಇದೆ. ಕುಟುಂಬದ ಉತ್ತರಾಧಿಕಾರವು ತಂದೆಯ ನಂತರ ಹಿರಿಯಮಗನಿಗೆ ದೊರೆಯುತ್ತದೆ.

ಇವರ ಸಾಂಪ್ರದಾಯಿಕ ಉದ್ಯೋಗ ತಬಲಾ ಬಾರಿಸುವುದು ಹಾಗೂ ದೇಗುಲಗಳಲ್ಲಿ ಸೇವೆಯನ್ನು ಮಾಡುವುದಾಗಿತ್ತು. ಇತ್ತೀಚೆಗೆ ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ, ಸ್ವಯಂ ಉದ್ಯೋಗ, ವ್ಯಾಪಾರ ಇತ್ಯಾದಿ ವೃತ್ತಿಗಳನ್ನು ಅವಲಂಬಿಸಿದ್ದಾರೆ. ಇವರ ಎಲ್ಲಾ ಧಾರ್ಮಿಕ ವಿಧಿಗಳನ್ನು ಬ್ರಾಹ್ಮಣ ಪುರೋಹಿತರು ಜರುಗಿಸುತ್ತಾನೆ. ಆಧುನಿಕ ಶಿಕ್ಷಣ ಹಾಗೂ ಅಭವೃದ್ಧಿಯ ಕಾರ್ಯಕ್ರಮಗಳ ಬಗ್ಗೆ ಇವರಿಗೆ ಆಕಸ್ತಿ ಇದೆ. ಇವುಗಳನ್ನು ಉಪಯೋಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.