ದ್ಮಸಾಲಿಗಳು ನೇಯ್ಗೆ ಸಮುದಾಯ. ಇವರು ಬೆಂಗಳೂರು, ಬೆಳಗಾಂ, ಹಾಸನ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಧಾರವಾಡ, ಬಾಗಲಕೋಟೆ ಹಾಗೂ ಮುಂತಾದ ಜಿಲ್ಲೆಗಳಲ್ಲಿ ಹಂಚಿಹೋಗಿದ್ದಾರೆ. ಒಂದು ದಂತ ಕಥೆಯ ಪ್ರಕಾರ ಮಾರ್ಕಂಡೇಯ ಪದ್ಮಸಾಲಿ ಸಮುದಾಯದ ಮೂಲಪುರುಷ ಎಂದು ನಂಬಲಾಗಿದೆ. ಮಾರ್ಕಂಡೇಯನ ವಂಶದ ಹೆಸರಿನಲ್ಲಿ ಸುಮಾರು ನೂರಾವೊಂದು ಋಷಿಗಳ ಗೋತ್ರದ ಹೆಸರುಗಳು ಇವೆ. ಇವುಗಳಲ್ಲಿ ಕೆಲವನ್ನು ಗುರುತಿಸಬಹುದು – ಅಚ್ಯುತಮಹಾಋಷಿ ಗೋತ್ರ, ಅಧೋಕ್ಷ ಜಮಾಋಷಿ ಗೋತ್ರ, ಅತ್ರಿಮಹಾ ಋಷಿ ಗೋತ್ರ, ಅಂಬರೀಷಮಹಾಋಷಿಗೋತ್ರ, ಅನಿರುದ್ಧ ಮಹಾಋಷಿ ಗೋತ್ರ, ಅಗಸ್ತ್ಯ ಮಹಾಋಷಿ ಗೋತ್ರ, ಅಂಗೀರಮಹಾಋಷಿ ಗೋತ್ರ, ಅತ್ರೇಯಮಹಾಋಷಿ ಗೋತ್ರ, ಆದಿತ್ಯಮಹಾಋಷಿ ಗೋತ್ರ, ಈಶ್ವರಮಹಾ ಋಷಿ ಗೋತ್ರ, ಉಪೇಂದ್ರಮಹಾಋಷಿ ಗೋತ್ರ, ಋಷ್ಯಶೃಂಗಮಹಾಋಷಿ ಗೋತ್ರ, ಕೇಶವಮಹಾಋಷಿ ಗೋತ್ರ, ಕಪಿಲಮಹಾಋಷಿ ಗೋತ್ರ, ಕಣ್ವ ಮಹಾಋಷಿ ಗೋತ್ರ, ಕಶ್ಯಪಮಹಾಋಷಿ ಗೋತ್ರ, ಕೌಶಿಕಮಹಾಋಷಿ ಗೋತ್ರ, ಕೌಂಡಿಲ್ಯಮಹಾಋಷಿ ಗೋತ್ರ, ಗೋವಿಂದಮಹಾಋಷಿ ಗೋತ್ರ, ಗಾಲವಮಹಾಋಷಿ ಗೋತ್ರ, ಗಾಂಗೇಯಮಹಾಋಷಿ ಗೋತ್ರ, ಗೌತಮ ಮಹಾಋಷಿ ಗೋತ್ರ, ಗಾರ್ಘೇಯಮಹಾಋಷಿ ಗೋತ್ರ, ಗಣಕಮಹಾಋಷಿ ಗೋತ್ರ, ಜಯಮಹಾಋಷಿ ಗೋತ್ರ, ಜಮದಗ್ನಿಮಹಾ ಋಷಿ ಗೋತ್ರ, ಜಠಿಲಮಹಾಋಷಿ ಗೋತ್ರ, ಜಯವರ್ಧನಮಹಾಋಷಿ ಗೋತ್ರ, ಜನಾರ್ಧನಮಹಾಋಷಿ ಗೋತ್ರ, ತ್ರಿವಿಕ್ರಮಮಹಾಋಷಿ ಗೋತ್ರ, ತ್ರಿಶಂಕಮಹಾಋಷಿ ಗೋತ್ರ, ದಾಮೋದರಯಮಹಾಋಷಿ ಗೋತ್ರ, ಧನಂಜಯಮಹಾಋಷಿ ಗೋತ್ರ, ದುರ್ವಾಸನಮಹಾಋಷಿ ಗೋತ್ರ, ದಕ್ಷ ಮಹಾಋಷಿ ಗೋತ್ರ, ದಕ್ಷಿಣಾಮೂರ್ತಿ ಮಹಾಋಷಿ ಗೋತ್ರ, ದೇವಮಹಾ ಋಷಿ ಗೋತ್ರ, ದತ್ತಾತ್ರೇಯಮಹಾಋಷಿ ಗೋತ್ರ, ನಾರಾಯಣಮಹಾಋಷಿ ಗೋತ್ರ, ನಾರಸಿಂಹಮಹಾಋಷಿ ಗೋತ್ರ, ಪದ್ಮ ನಾಭಮಹಾಋಷಿ ಗೋತ್ರ, ಪ್ರದ್ಯುಮ್ನಮಹಾಋಷಿ ಗೋತ್ರ, ಪೌಂಡ್ರಕಮಹಾಋಷಿ ಗೋತ್ರ, ಪೃಷ್ಠ ಮಹಾಋಷಿ ಗೋತ್ರ, ಪರಾಶರಮಹಾ ಋಷಿ ಗೋತ್ರ, ಪುಲಸ್ತ್ಯ ಮಹಾಋಷಿ ಗೋತ್ರ, ಇನ್ನೂ ಮುಂತಾದ ಗೋತ್ರಗಳು  ಪದ್ಮಸಾಲಿಗಳಲ್ಲಿ ಕಂಡುಬರುತ್ತವೆ.

ಇವರ ಸಾಂಪ್ರದಾಯಿಕ ನೇಯ್ಗೆಯು ಬಹಳ ಜನಪ್ರಿಯವಾಗಿದೆ. ಬಹಳಷ್ಟು ಜನ ಆಧುನಿಕ ವೃತ್ತಿಗಳಲ್ಲಿ ತೊಡಗಿದ್ದಾರೆ. ಕೆಲವರು ಖಾಸಗಿ ಹಾಗೂ ಸರಕಾರಿ ವಲಯಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ ರಾಜ್ಯಮಟ್ಟದ ‘ಕರ್ನಾಟಕ ಪದ್ಮಸಾಲಿ ಸಂಘವು’ ಕೋಮಿನ ಅಭಿವೃದ್ಧಿಗಾಗಿ ಶ್ರಮಿಸುತ್ತದೆ. ಆಧುನಿಕ ಶಿಕ್ಷಣ ಹಾಗೂ ಇತರೆ ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಈ ಸಮುದಾಯದ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.