ಕದರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರು ಗುಜರಾತ ಹಾಗೂ ಮಹಾರಾಷ್ಟ್ರದಿಂದ ಬಂದವರು ಎಂದು ಹೇಳಿಕೊಳ್ಳುತ್ತಾರೆ. ಇವರ ಪಂಗಡದ ಹೆಸರಿನ ಮೂಲ ಹಿಂದೂಸ್ಥಾನಿ ಪದವಾದ ‘ಬಕ’ದಿಂದ ಬಂದಿರಬಹುದು. ಅದರ ಅರ್ಥ ‘ಹಂಚಿಕೊಳ್ಳುವುದು’ ಎಂದು. ಇವರನ್ನು ಹೀಗೆ ಕರೆಯಲು ಕಾರಣವೆಂದರೆ, ಇವರು ಶ್ರಮದ ಸಂಭಾವನೆಯ ಪ್ರತಿಫಲವನ್ನು ಸಮವಾಗಿ ಹಂಚಿಕೊಳ್ಳುತ್ತಾರೆ. ಎಂಥೋವನ್ ಇವರಲ್ಲಿ ಹಲವಾರು ಪಂಡಗಳನ್ನು ಗುರುತಿಸಿದ್ದಾರೆ. ಕೊಂಕಣಿ, ಜೈನ್, ಕುಂಬಿ, ಶೇರಾಂಗಿ, ವಕ್ಕಲ, ಬಂಟ, ಮರಾಠ ಇತ್ಯಾದಿ. ಇವರಲ್ಲಿ ಸಂಬಂಧಿ ವಿವಾಹಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ವರದಕ್ಷಿಣೆ ಹಾಗೂ ವಧುದಕ್ಷಿಣೆಗಳೆರಡನ್ನೂ ಇವರಲ್ಲಿ ಕಂಡು ಬರುತ್ತವೆ. ಮದುವೆಯು ವಧುವಿನ ಮನೆಯಲ್ಲಿ ನಡೆಯುತ್ತದೆ. ಮದುವೆಯ ಕೆಲವೊಂದು ಆಚರಣೆಗಳೆಂದರೆ -ವರನ ಕಡೆಯವರನ್ನು ಬರಮಾಡಿಕೊಳ್ಳುವುದು, ಹಾರ ಬದಲಾವಣೆ, ತಾಳಿ ಕಟ್ಟುವುದು, ಧಾರೆಯೆರೆಯುವುದು, ಇತ್ಯಾದಿಗಳಿವೆ. ವಿವಾಹ ವಿಚ್ಛೇದನವನ್ನು ಕಾನೂನು ಬದ್ಧವಾಗಿ ಮಾತ್ರ ಪಡೆಯಬಹುದು. ವಿಧುರ, ವಿಧವೆ ಹಾಗೂ ವಿಚ್ಛೇದಿತರು ವಿವಾಹವಾಬಹುದು. ಆಸ್ತಿಯಲ್ಲಿ ಎಲ್ಲ ಗಂಡು ಮಕ್ಕಳಿಗೂ ಸಮಪಾಲಿದೆ. ಆದರೆ ಮನೆಯ ಒಡೆತನ ತಂದೆಯ ನಂತರ ಹಿರಿಯ ಮಗನಿಗೆ ಹೋಗುತ್ತದೆ. ಹೆಂಗಸರು ಗೋಡಂಬಿಯ ತೋಟಗಳಲ್ಲಿ ಕೂಲಿಗಳಾಗಿ ದುಡಿಯುವ ಮೂಲಕ ಮನೆಯ ಆದಾಯಕ್ಕೆ ಸಹಾಯ ಮಾಡುತ್ತಾರೆ.

ದಿನಗೂಲಿ, ಮೀನು ಹಿಡಿಯುವುದು, ಬಟ್ಟೆ ಹೆಣೆಯುವುದು ಇವರ ಸಾಂಪ್ರದಾಯಿಕ ಕಸಬುಗಳಾಗಿವೆ. ಇವರಲ್ಲಿ ಕೆಲವರು ಸಣ್ಣ ಪ್ರಮಾಣದ ವ್ಯಾಪಾರಗಳಲ್ಲಿ, ಸರಕಾರಿ ಸೇವೆಗಳಲ್ಲಿ ಇದ್ದಾರೆ. ಸಾಂಪ್ರದಾಯಿಕ ಜಾತಿ ಪಂಚಾಯತಿಗೆ ಒಬ್ಬ ಯಜಮಾನನಿರುತ್ತಾನೆ. ಇದಕ್ಕೆ ಕೋಲ್ಕಾರ, ಬುದ್ಧಿವಂತ ಮತ್ತ ಕೊಂಡಕಾರ ಇರುತ್ತಾರೆ. ಇವರು ಗುರುಮಠ ಅಥವಾ ತಾಳಗುಪ್ಪ ವೀರಶೈವ ಮಠಕ್ಕೆ ನಡೆದುಕೊಳ್ಳುತ್ತಾರೆ. ತುಳಸಿ ಗಿಡ ಇವರಿಗೆ ಶ್ರೇಷ್ಠವಾದುದು. ನಾದರ, ಶೆಟ್ಟಿ ಹಾಗು ಬಂಟರ ಪಂಗಡಗಳಲ್ಲಿ ಯಾರಾದರು ಸತ್ತಾಗ ಅವರನ್ನು ಸುಡಲು ಬಕದರು ಕಟ್ಟಿಗೆಗಳನ್ನು ಕೊಡುವುದು ಸಾಂಪ್ರದಾಯಿಕ ಪದ್ಧತಿ. ಮುರುಡೇಶ್ವರ ದೇವಸ್ಥಾನದ ಉತ್ಸವದಲ್ಲಿ ಇವರು ಭಾಗವಹಿಸಿ ಉಚಿತವಾಗಿ ಸೇವೆಯನ್ನು ಮಾಡುತ್ತಾರೆ. ಇವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.

ನೋಡಿ:

Naidu, J,M, and B.V.Babu., 1992. ‘Anthropometric Profile of Five Andhra Populations; In Memoriam of M.S.A.Rao,  (Edi) : Mari D.Zamora Vol : 13.

Rao, T.V. and G.Golla Reddy., : 1973. ‘A Population Genetic of Bagatha and Valmiki Tribes of Visakhapatnam District, (A.P.)’, Japanese, Journal of Human Genetics  18: 2: 22-278.

Samuel, I.M., 1981. A Study of Physical Growth and Development of Valmiki and Bagatha Boys of Visakhaptanam District Andhra University, Ph.D.Thesis.

Venkateshwara Rao T. and G.Golla Reddy., 1973. ‘A Population Genetic Survey of Bagathas and Valmiki Tribes Andra Pradesh’, India, American Journal of Human Genetics  18(2)