ಥದ ದಕ್ಷಿಣಕನ್ನಡ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿ ಕಾಣಸಿಗುವ ಒಂದು ಸಮುದಾಯ. ಇವರ ಮೌಖಿಕ ಪರಂಪರೆ ಪ್ರಕಾರ ಹಿಂದೊಮ್ಮೆ ಇವರು ಲಿಂಗಾಯತರಾಗಿದ್ದವರು. ಆದರೆ  ಮೀನು ತಿನ್ನುತ್ತಾರೆಂಬ ಕಾರಣಕ್ಕಾಗಿ ಇವರನ್ನು ಬಹಿಷ್ಕರಿಸಲಾಗಿತ್ತು. ಮನೆಯಲ್ಲಿ ಕನ್ನಡವನ್ನು ಮಾತನಾಡಿ ಬೇರೆಯವರ ಜೊತೆ ತುಳು ಮಾತನಾಡುತ್ತಾರೆ. ತಾಯಿಯ ಕುಲಾಧಾರಿತ ಹೊರಬಾಂಧವ್ಯದ ವಿವಾಹ ಬೆಡಗುಗಳು ಇವರಲ್ಲಿವೆ – ಹೊಲಸರು, ಬೆಲ್ಲರು, ಹುಲಿ, ಹರಿಣ ಹಾಗೂ ಮೈಯ್ಯರು ಇತ್ಯಾದಿ. ಒಳಬಾಂಧವ್ಯ ವಿವಾಹವು ಸಮುದಾಯ ಹಂತದಲ್ಲಿ ಸಾಧ್ಯವಿದೆ. ಮದುವೆಯು ತಾಯಿಯ ಸಹೋದರನ ಮಗಳ ಜೊತೆ ಅಥವಾ ತಂದೆಯ ಸಹೋದರಿಯ ಮಗಳ ಜೊತೆ ಸಾಧ್ಯವಿದೆ. ಅಳಿಯ ಸಂತಾನದ ಮೂಲಕ ವಾರಸುದಾರಿಕೆ ಮುಂದುವರೆಯುತ್ತದೆ. ಆಸ್ತಿಯನ್ನು ಹೆಣ್ಣುಮಕ್ಕಳಿಗೆ ಸಮನಾಗಿ ಹಂಚಲಾಗುತ್ತದೆ. ಆಸ್ತಿಯನ್ನು ಹೆಣ್ಣುಮಕ್ಕಳಿಗೆ ಸಮನಾಗಿ ಹಂಚಲಾಗುತ್ತದೆ. ಈ ವಾರಸು ದಾರಿಕೆಯ ನಿಯಮಗಳು ಇತ್ತೀಚೆಗೆ ನಿಧಾನವಾಗಿ ಪಿತೃಸಂತಾನದ ಕಡೆಗೆ ತಿರುಗುತ್ತಿವೆ. ಶವವನ್ನು ಹೂಳಿ ಇಲ್ಲವೇ ಸುಟ್ಟು, ಸಾವಿನ ಸೂತಕವನ್ನು ಹತ್ತುದಿನಗಳವರೆಗೆ ಆಚರಿಸುತ್ತಾರೆ.

ಬಥದರು ಸಾಂಪ್ರದಾಯಿಕವಾಗಿ ವ್ಯವಸಾಯದ ಕೂಲಿಗಳು. ಇವರು ಭೂತಾರಾಧನೆ ಮಾಡುತ್ತಾರೆ. ಪಂಜುರ್ಲಿ, ಕಲ್ಲುರ್ತಿ, ಗುಳಿಗ, ಬ್ರಾಹ್ಮೇರು, ಜಮಡಿ, ಅಣ್ಣಪ್ಪ, ಇತ್ಯಾದಿ ಭೂತಗಳನ್ನು ಪೂಜಿಸುತ್ತಾರೆ. ಇವರು ಬಕುಡ ಹಾಗೂ ಮೊಗೇರರ ಜೊತೆ ಸಾಮಾಜಿಕ ಸಂಪರ್ಕವನ್ನು ಹೊಂದಿದ್ದಾರೆ. ಇವರು ಆರ್ಥಿಕವಾಗಿ ಹಾಗೂ ಶೈಕ್ಷಣಕವಾಗಿ ಹಿಂದುಳಿದಿದ್ದಾರೆ.