ರಾಠ ಎಂಬ ಪದವು ಅನೇಕ ಮರಾಠಿ ಅಬ್ರಾಹ್ಮಣ ಜಾತಿಗಳನ್ನು ಸೂಚಿಸುತ್ತದೆ. ಇವರು ಸೈನಿಕರಾಗಿಯೋ ಅಥವಾ ಮರಾಠಿ ದಾಳಿಕೋರ ದಂಡಿನ ಹಿಂಬಾಲಕರಾಗಿಯೋ ದಕ್ಷಿಣಕ್ಕೆ ಬಂದರು” (ಥರ್ಸ್ಟನ್: ೧೯೦೯). ದಕ್ಷಿಣ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಇವರನ್ನು ಪರಿಶಿಷ್ಟ ಪಂಗಡವೆಂದೂ, ಕೊಡಗಿನಲ್ಲಿ ಮರಾಠರೆಂದೂ ಗುರುತಿಸಿದ್ದಾರೆ. ಇವರು ಮರಾಠಿ ಭಾಷೆ ಮಾತನಾಡುವುದರಿಂದ ಮರಾಠಿಯರು ಎಂದು ಕರೆಯಲಾಯಿತು. ತಮ್ಮಲ್ಲಿ ಮರಾಠಿಯನ್ನು ಮಾತನಾಡುವ ಇವರು ತುಳು ಹಾಗೂ ಕನ್ನಡವನ್ನು ಮಾತನಾಡಬಲ್ಲರು. ಈ ಸಮುದಾಯವು ರಾಜ್ಯದ ಎಲ್ಲೆಡೆಗಳಲ್ಲೂ ಹಂಚಿ ಹೋಗಿರುವುದು ಕಾಣಬಹುದು. ಇವರಲ್ಲಿ ಸೋದರ ಮಾವ ಮತ್ತು ಸೋದರತ್ತೆಯ ಮಗಳೊಂದಿಗೆ ವಿವಾಹಕ್ಕೆ ಸಮ್ಮತಿ ಇದೆ. ಮೊದಲಿಗೆ ಇವರಲ್ಲಿ ಬಾಲ್ಯವಿವಾಹ ಅಸ್ತಿತ್ವದಲ್ಲಿದ್ದರೂ ಈಗ ಕಾಣಬರುವುದಿಲ್ಲ. ಇವರಲ್ಲಿ ಅವಿಭಕ್ತ ಕುಟುಂಬಗಳು ಹೆಚ್ಚು ಇದೆ. ಎಲ್ಲಾ ಗಂಡು ಮಕ್ಕಳಿಗೂ ಆಸ್ತಿಯಲ್ಲಿ ಹಕ್ಕಿರುತ್ತದೆ. ಹಿರಿಯ ಮಗನು ತಂದೆಯ ನಂತರ ಕುಟುಂಬದ ಉತ್ತರಾಧಿಕಾರವನ್ನು ಪಡೆಯುವನು. ಈ ಸಮುದಾಯದಲ್ಲಿ ಜಮೀನು ಇದ್ದವರೂ ಹಾಗೂ ಇಲ್ಲದವರೂ ಇದ್ದಾರೆ. ಪ್ರಸ್ತುತ ಇವರು ಉಳುಮೆ ವ್ಯಾಪಾರ, ಕೈಗಾರಿಕಾ ಕೆಲಸ, ಬೀಡಿಸುತ್ತುವುದು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ, ಸ್ವಯಂ-ಉದ್ಯೋಗಗಳಲ್ಲಿದ್ದಾರೆ. ಇವರು ‘ಆರ್ಯ ಕ್ಷತ್ರಿಯ ಮರಾಠ’ವೆಂಬ ತಮ್ಮ ಸಮುದಾಯದ ಸಂಘವನ್ನು ಹೊಂದಿದ್ದಾರೆ. ಇದು ಇವರ ಸಮುದಾಯದ ಅಭಿವೃದ್ಧಿಗಾಗಿ ಕೆಲಸಮಾಡುತ್ತಿದೆ. ಇವರಲ್ಲಿ ಶೈಕ್ಷಣಿಕ ಮಟ್ಟ ಸ್ವಲ್ಪ ಸುಧಾರಿಸಿದೆ. ಇವರು ಆಧುನಿಕ ಸಾಮಾಜಿಕ ಸಂಪರ್ಕ ಹಾಗೂ ಅವುಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ನೋಡಿ:

ಕಮಲಾಕ್ಷ. ಪಿ., ೧೯೯೪. ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ಮತ್ತು ಗಿರಿಜನ ಸಾಮಾಜಿಕ ಇತಿಹಾಸ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

Yeats, M.W.N., 1931. ‘Marati of South Canara’ In: Census of India,  1931, Vol. XIV : Madras : Part I, Madras.