ರ್ನಾಟಕದಲ್ಲಿ ಇವರನ್ನು ಹೊಲೆಯರು ಎಂದು ಕರೆಯುತ್ತಾರೆ. ಇವರು ಮಹಾರಾಷ್ಟ್ರದಿಂದ ವಲಸೆ ಬಂದು ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಾಗಿ ನೆಲೆಸಿರುವ ಒಂದು ಸಮುದಾಯ. ಬೆಳಗಾವಿ, ಬಿಜಾಪುರ, ಬೀದರ್ ಮತ್ತು ಗುಲಬರ್ಗಾ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರು‌ತ್ತಾರೆ. ಇವರು ಮಾತೃಭಾಷೆ ಮರಾಠಿ, ಕನ್ನಡದಲ್ಲೂ ವ್ಯವಹರಿಸಬಲ್ಲರು. ದೇವನಾಗರಿ ಹಾಗೂ ಕನ್ನಡ ಲಿಪಿಗಳೆರಡನ್ನೂ ಬಳಸುತ್ತಾರೆ. ಕೆಲವರು ಭೂಮಾಲೀಕರಿದ್ದಾರೆ, ಬಹಪಾಲು ಜನರು ಭೂರಹಿತರಾಗಿದ್ದಾರೆ. ಈಗಿನ ವೃತ್ತಿಗಳೆಂದರೆ ವ್ಯವಸಾಯ, ವ್ಯವಸಾಯದ ಕೂಲಿ, ಪಶುಸಂಗೋಪನೆ, ಔದ್ಯೋಗಿಕ ಕೂಲಿ, ಸರ್ಕಾರಿ ಮತ್ತು ಖಾಸಗಿ ಸೇವೆಗಳು. ಇವರಲ್ಲಿ ಹಲವರು ಬೌದ್ಧ ಧರ್ಮವನ್ನು ಒಪ್ಪಿಕೊಂಡಿದ್ದಾರೆ. ಸುತ್ತ ಸುದ್ದಿಯನ್ನು ಹೇಳುವ ಮತ್ತು ಶವ ಹೂಳುವಾಗ ಸಹಾಯಕರಾಗಿ, ಊರಿನಲ್ಲಿ ಪ್ರಾಣಿಗಳು ಸತ್ತಾಗಲೂ ಅವುಗಳನ್ನು ಸಾಗಿಸುವ ಕೆಲಸ ಹಿಂದೆ ಮಾಡುತ್ತಿದ್ದರು. ಈಗ ಅವರು ಇದನ್ನು ಮಾಡುತಿಲ್ಲ.

ಇವರಲ್ಲಿ ಬರುನಿಗಿ, ಐಹೊಳೆ, ರೂಂಬಾಳೆ ಇತ್ಯಾದಿ ಹೊರಬಾಂಧವ್ಯ ಕುಲಗಳಿವೆ, ಇವಲ್ಲದೆ ದೊಂಗ್ರೆ, ಸೂರ್ಯವಂಶೀ ಮೆಶ್ರಾಸಂ, ಕಾಂಬ್ಳೆ, ಗೋಡ್‌ಬೋಲೆ, ವಾಘೇರ್, ರಾಂತೆನೆ, ಸೊನಾರೆ, ಗಜಭಿಯೆ., ವಾಹನ. ಲಾಲ್‌ಜೆವಾರ್, ಬಗ್ಡೆ, ಪಗಾರೆ, ಗಂಡರೇ, ಚವಾನ್, ಬರಮಟೆ, ನಂದೇಶ್ವರ, ಘಾಡ್ಲೆ, ಖಾಂಡಕೇರ್, ಜಾಂಧಾಲೆ, ಭಾದರ್ಗೆ, ಜೋಗಧಾಂಡೆ, ಹನುಮಟ್ಟೆ, ಗಾಯಕವಾಡ, ಸೋನಟಕ್ಕೆ, ಆವಸ್ ರುನ್ಲೆ, ಚಾದಾಂಟೆ ಸರೋಯೆ, ತಲಿವಾರ್, ಮ್ಯಾಲ್, ಲಂಬಾಣಿ, ಚೌಧೆ, ಖಾಂಧಾರೆ, ಖಿಲೋಪ್, ವಾಧಾವೆ, ಹಟಕರ, ಫೋಂಡೆ, ಕಂಬಾಳೆ, ಇಂಗೊಲ್ಲೆ, ದೂಧವಾನೆ, ಪಡ್ಡ್, ಕುಂಬಾಳೆ, ಇಂಗೋಲೆ, ಧಾಲ ಧವನ, ಪಡ್ದ್, ದೇತ್ಯಾ, ವಾಘಮಾರ್ಯ, ನಡಯ, ಮಖಾದ್ಯ, ಓಂಡಕೆರ್, ಮಾಸ್ ಕರ್, ಪರೇಕ, ಉಮ್ರಾ, ಪಡ್ಡಾರ್ಯ, ಜಿನ್ವನ್ಯಾ, ಲೋಕನ್ಡ್ಯಾ, ಭಕ್ತ್ಯಾ, ತೆಲ್ ತುಂಧ್ಯಾ, ತುಂಬೇರ್ಯ, ವಿಂಕರ್ಸ್, ಮೊಹಕರ್, ದಿಂಗಾರ್ಯ, ದುರ್ಗ್ಯಾ, ರಾಮ್ ತಕ್ಯಾ, ಜಂದ್ಯಾ, ಪಿರಾದ್ಯಾ, ಕೊಂಡಗುಲ್ಲ, ದಿರ್ಪ್‌ಯಾ, ಬೋರ್ ಕುಟ್ಯಾ ಇವುಗಳು ಇವರ ಬೆಡಗುಗಳು ಬೆಡಗುಗಳ ಹೆಸರುಗಳು. ಆದರೆ ಈಗ ಇವು ಹೆಚ್ಚು ಕಡಿಮೆ ಮರೆತು ಹೋಗಿವೆ. ಅನೇಕರು ಊರಿನ ಹೆಸರುಗಳನ್ನೇ ಮನೆತನದ ಹೆಸರುಗಳನ್ನಾಗಿ ಬಳಸುತ್ತಾರೆ.  ಮದುವೆಗೆ ತಂದೆಯ ಸಹೋದರಿಯ ಮಗಳು, ತಾಯಿಯ ಸಹೋದರನ ಮಗಳ ಸಂಬಂಧ ಸಾಧ್ಯವಿದೆ. ಏಕಪತಿತ್ವ/ಏಕಪತ್ನಿತ್ವ ಇದು ಮದುವೆಯ ಪದ್ಧತಿ. ವಿವಾಹ ವಿಚ್ಛೇದನಕ್ಕೆ ಅವಕಾಶವಿದೆ. ವಿಧವೆ, ವಿಧುರರ ಮದುವೆಗಳಿಗೆ ಅವಕಾಶವಿದೆ. ವಿಭಕ್ತ ಹಾಗೂ ಅವಿಭಕ್ತ ಕುಟುಂಬಗಳು ಇವರಲ್ಲಿವೆ. ಹಿರಿಯ ಮಗ ತಂದೆ ನಂತರ ಮನೆಯ ವಾರಸುದಾರನಾಗುತ್ತಾನೆ.

ಶವವನ್ನು ಹೂಳುತ್ತಾರೆ. ನೆನಪಿನ ದಿನವೆಂದು ಹತ್ತನೆಯ ಮತ್ತು ನಲವತ್ತನೇ ದಿನಗಳಂದು ‘ತಿಥಿ’ ಮಾಡುತ್ತಾರೆ. ಇವರಲ್ಲಿ ಕೆಲವರು “ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವರು”

ಸಾಂಪ್ರದಾಯಿಕವಾಗಿ ಇವರು ಗ್ರಾಮದ ಸೇವಕರು ಹಾಗೂ ಹೆಣ ಹೊರುವವರಾಗಿದ್ದರು. ಆದರೆ ಈಗ ಇವರು ವ್ಯವಸಾಯದ ಕೂಲಿ, ಚಿಲ್ಲರೆ ವ್ಯಾಪಾರ ಮತ್ತು ಪಶುಸಂಗೋಪನೆ, ಸರ್ಕಾರಿ ಮತ್ತು ಖಾಸಗಿ ಸೇವೆ, ಹಗ್ಗ ತಯಾರಿಸುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇವರಿಗೆ ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಉಪಯೋಗ ಮತ್ತು ಸಂಪರ್ಕ ಇತ್ತೀಚೆಗೆ ಅರ್ಥಸುತ್ತಿದೆ. ಇವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಗಳು ಇನ್ನೂ ಸುಧಾರಣೆಯಾಗಬೇಕಾಗಿದೆ.