ಯಾನಾದಿ ಎಂಬ ಪದವು ಹ್ಯೊದೆಮ್ ಎಂಬ ಪದದಿಂದ ಉದ್ಭವಿಸಿದೆಯೆಂದು ಹೇಳುತ್ತಾರೆ. ಹ್ಯೊದೆಮ್ ಅಂದರೆ ಸಮುದ್ರವನ್ನು ಹಿಡಿತದಲ್ಲಿಡುವುದು ಎಂದರ್ಥ. ಈ ಅರ್ಥದಲ್ಲಿ ಪ್ರಯೋಗಿಸಿರುವುದಕ್ಕೆ ಕಾರಣ ಮೊದಲ ಬಾರಿಗೆ ಯಾನಾದಿಗರು ಶ್ರೀ ಹರಿಕೋಟೆ ದ್ವೀಪದಿಂದ ಹೊರಗಡೆ ಪ್ರಪಂಚಕ್ಕೆ ಬಂದಿರುವುದೆಂದು ಕೆಲವರ ಅಭಿಪ್ರಾಯ. ತೆಲುಗಿನಲ್ಲಿ ಯಾನಾದಿ ಅಂದರೆ ಸಮುದ್ರದ ದಂಡೆ ಎಂದರ್ಥ ಬರುತ್ತದೆ. ಮತ್ತೊಂದು ಅಭಿಪ್ರಾಯವೇನೆಂದರೆ ಈ ಸಮುದಾಯದವರು ತುಂಬಾ ಪುರಾತನ ಕಾಲದಿಂದಿರುವುದರಿಂದ ಅನಾದಿ ಎಂಬ ಪದವು ಯಾನಾದಿ ಆಗಿರಬಹುದು. ತೆಲುಗಿನಲ್ಲಿ ಅನಾದಿ ಎಂದರೆ ತುಂಬಾ ವರ್ಷಗಳಿಂದ ಎಂದು ಅರ್ಥ. ಇದನ್ನು ಆಂಧ್ರಪ್ರದೇಶದ ಆದಿಮ ಜಾತುಲು ಎಂಬ ಪುಸ್ತಕದಲ್ಲಿ ಹೇಳಲಾಗಿದೆ. ತೆಲುಗಿನಲ್ಲಿ ಕೆಲವು ಕಡೆ ಎಲ್ಲಾ ಉಪಕರಣಗಳನ್ನು ಯಾನಮು ಅಂದರೆ ಹಾರೆಯನ್ನು ಉಪಯೋಗಿಸುತ್ತಿರುವುದರಿಂದ ಇವರು ಯಾನಾದಿಗಳಾಗಿದ್ದಾರೆ. ಇವರು ಯಾವಾಗಲೂ ತಮ್ಮ ಭುಜದ ಮೇಲೆ ಹಾರೆಯನ್ನು ಹೊತ್ತುಕೊಂಡಿರುವುದರಿಂದ ಯಾನಾದಿಗರೆಂದು ಜನರು ಕರೆಯುವುದಕ್ಕೆ ಪ್ರಾರಂಭಿಸಿರಬಹುದು. ತೆಲುಗಿನ ನಿಂಘಟಿನ ಪ್ರಕಾರ ಯಾನಮು ಅಂದರೆ ಪ್ರಯಾಣ ಮಾಡುವುದು. ಅದಿ ಅಂದರೆ ಮೊದಲಿನಿಂದ ಎಂದರ್ಥ ಬರುತ್ತದೆ.

ಕರ್ನಾಟಕದಲ್ಲಿ ಯಾನಾದಿಗರು ಮೂಲತಃ ಆಂಧ್ರದವರು. ಇವರು ಸುಮಾರು ನೂರು ವರ್ಷಗಳ ಹಿಂದೆ ಇಲ್ಲಿಗೆ ವಲಸೆ ಬಂದಿರಬಹುದು. ಯಾನಾದಿಗರು ಕರ್ನಾಟಕದಲ್ಲಿ ಕೋಲಾರ, ಬೆಂಗಳೂರು ಗ್ರಾಮಾಂತರ, ಚಾಮರಾಜ ನಗರ, ಮಂಡ್ಯ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚದುರಿದಂತೆ ಕಂಡುಬರುತ್ತಾರೆ. ಯಾನಾದಿಗಳಲ್ಲಿ ಮುಂಚಿಯಾನಾದಿ, ಚಲಯನಾದಿ, ಅಡವಿಯಾನಾದಿ ಎಂಬ ಉಪ ಪಂಗಡಗಳಿವೆ. ಯಾನಾದಿಗರು ಇರುಳರು ಮತ್ತು ಚೆಂಚು ಸಮುದಾಯದವರು ಒಂದೇ ಎಂಬ ಅನುಮಾನವನ್ನು ಥರ್ಸ್ಟನ್ (೧೯೦೯) ವ್ಯಕ್ತಪಡಿಸಿದ್ದಾರೆ. ಇವರಲ್ಲಿ ಮನೆದೇವರ ಹೆಸರಿನಲ್ಲಿ ಬೆಡಗುಗಳಿವೆ.

ಮುಖ್ಯವಾದ ಇವರ ಸಾಂಪ್ರದಾಯಿಕ ಕಸುಬು ಬೇಟೆ ಮತ್ತು ಕಾಡಿನ ಉಪ ಉತ್ಪನ್ನಗಳ ಶೇಖರಣೆ. ಬೇಟೆ ಇಲ್ಲದಿದ್ದಾಗ ಇವರು ಕೂಲಿ ಮಾಡುತ್ತಾರೆ. ಇವರಲ್ಲಿ ಹೆಚ್ಚಿನವರಿಗೆ ಸ್ಥಿರ ಚರ ಆಸ್ತಿಗಳಿರುವುದಿಲ್ಲ. ತಲತಲಾಂತರಗಳಿಂದ ಇವರು ಕಾಡನ್ನೆ ನಂಬಿಕೊಂಡು ಬಂದಿದ್ದಾರೆ ಹಾಗೂ ಕಾಡಿನ ಮೂಲಗಳಿಂದ ಜೀವನ ನಡೆಸುತ್ತಿದ್ದಾರೆ. ಸಮಕಾಲೀನ ಸಂದರ್ಭದಲ್ಲಿ ಯಾನಾದಿಗರ ಸಾಮಾಜಿಕ, ಆರ್ಥಿಕ ಸ್ಥಾನ ಅತ್ಯಂತ ಶೋಚನೀಯವಾಗಿದೆ. ಇವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನಕ್ಷರಸ್ಥರು. ಇದಕ್ಕೆ ಪ್ರಮುಖ ಕಾರಣ ಯಾನಾದಿಗರು ಗ್ರಾಮಗಳಿಂದ ದೂರವಾಗಿ ಅವರದೇ ಆದ ಒಂದು ಅರವಟ್ಟಿಗೆಯಲ್ಲಿ ವಾಸಿಸುತ್ತಾ, ಸಮಾಜದ ಮುಖ್ಯವಾಹಿನಿ ಜೊತೆ ಯಾವ ರೀತಿಯ ಸಂಪರ್ಕವೂ ಇಟ್ಟುಕೊಳ್ಳದೆ ಇರುವರು. ಯಾನಾದಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದಾರೆ.

ನೋಡಿ :

ನಾರಾಯಣ ಟಿ., ೧೯೯೩. ಯಾನಾದಿಗರ ಸಂಸ್ಕೃತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ; ಬೆಂಳೂರು

Agarwal B.C., P.C.G. Reddy, N.S.Rao, 1984. ‘Determinants of Cultural Adaptation in the Process of Change’, A Case of Yanadi’, Man in India.

Babu. K.S. and M.K.Bhasin, 1990. ‘Mortality Differentials among Two Occupationally Different Communities: Yadava and Kamma of Andhra Pradesh’ Journal of Human Ecology.

Bhaskar S., 1978. ‘An Analysis of the Socio-Economic Organisation of The Yanadis of Rayalseema’, Bulletin of The Cultural Research Institute, Hyderabad.

Esware Reddy R., 1975. ‘Cultural Mobility and Social Change Among the Yanadis of Andhra Pradesh, An analysis of Marriage and Sex’ Vanyajanti.

Gurumurthy, G., 1986. ‘Culture and Fertility Among Yanadis: A Tribal Communit in South India’ The Eastern Anthropologist.

Khaja N.Md. and P. Veerraju., 1992. ‘An Anthropometric Profile of Yanadi’, Man in India.

Reddy. A.P., T.Ramachandriah, B.N. Mukherjee and S.K. Das., 1981. ‘Trasferrn Variants in an Andhra Tribe’ Yanadi’ Indian Journal of Physical Anthropology and Human Genetics.

Reddy, P.C., Gurivi and Binod C. Agarwal., 1981. ‘Psychological Barriers for Change : A case Study of Yanadi of Sriharikota Island’  Man in India.

Reddy, P.C.1948.;The Religion of the Yanadis’, The Eastern Anthropologist.

Raghaviah, V.1944. ‘The Enadi’, Man in India.

Reddy, P. Sudhakara, 1981. The Displaced Yanadi of Sriharikota Island : A Study in Socio – Cultural Continity and Change, Ph.D. Thesis, Tirupathi University.

Reddy, A., 1984. ‘Ehnographic Note about the Yanadi Tribe of Andhra’ Man in India.

Sudhakar Rao N., 1982. Rangam of the Yanadi of Sriharikota, The Eastern Anthropologist.

Thomsen, G.N., 1943. ‘A Yanadi Song’, Man in India.

Vasulu, T.S., 1989. ‘The Genetic Structure of Tribal Population, Breeding Isolation among the Yanadi,’ International Journal of Anthropology.