ರೆಡ್ಡಿ, ಕಾಪು, ಕಾಪುಲುಗಳು ಕೋಲಾರ, ಬಳ್ಳಾರಿ, ರಾಯಚೂರು, ಗುಲ್ಬರ್ಗಾ ಮತ್ತು ಬೀದರ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಬೆಂಗಳೂರು ಜಿಲ್ಲೆಯ ದಕ್ಷಿಣ ಭಾಗಗಳಲ್ಲಿ ತುಮಕೂರು ಮತ್ತು ಕೋಲಾರಗಳಲ್ಲಿ ಬಹಳ ಹಿಂದಿನಿಂದಲೂ ಇದ್ದಾರೆ. ಇವರ ಮಾತೃಭಾಷೆ ತೆಲುಗಿನೊಂದಿಗೆ ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಈವರಲ್ಲಿ ಮುಖ್ಯವಾಗಿ ಸುನಾಪುಲು, ಪಸುಪಾಲು ಮತ್ತು ಪಗಡದ ಪಾಲುಗಳೆಂಬ  ಬೆಡಗುಗಳು ಇವೆ. ಇವರ ಮೌಖಿಕ ಪರಂಪರೆಯು, ಇವರ ಪೂರ್ವಜರು ಸುಮಾರು ನೂರೈವತ್ತು ವರ್ಷಗಳ ಹಿಂದೆ ಗುಂಟೂರಿನಿಂದ ಮೂರು ಜನ ಸಹೋದರರು ವಲಸೆ ಬಂದರು. ಒಂದು ಕಾಲದಲ್ಲಿ ಇವರು ನೇಗಿಲಮನೆ, ಬಿಲ್ಲೆಮನೆ, ಉರಗ ನೆಟ್ಟಿಮನೆ, ನಡವಿಲಮನೆ ಇತ್ಯಾದಿ ಬೆಡಗುಗಳನ್ನು ಹೊಂದಿದ್ದರಾದರೂ, ಈಗ ಅವು ಅಸ್ತಿತ್ವದಲ್ಲಿಲ್ಲ. ಸೋದರ-ಸಂಬಂಧಿಗಳಲ್ಲಿ ವಿವಾಹಕ್ಕೆ ಅನುಮತಿ ಇದೆ. ವಿಧುರ, ವಿಧವೆಯರ ವಿವಾಹಕ್ಕೆ ಅವಕಾಶವಿದೆ. ಆಸ್ತಿಯನ್ನು ಗಂಡು ಮಕ್ಕಳಿಗೆ ಸಮನಾಗಿ ಹಂಚಲಾಗುತ್ತದೆ. ಹಿರಿಯ ಮಗನು ತಂದೆಯ ನಂತರ ಕುಟುಂಬದ ಉತ್ತರಾಧಿಕಾರಿಯಾಗುತ್ತಾನೆ.

ಇವರ ಪ್ರಮುಖ ಸಾಂಪ್ರದಾಯಿಕ ವೃತ್ತಿ ವ್ಯವಸಾಯ, ಕೆಲವರು ಅನೇಕ ರೀತಿಯ ವ್ಯಾಪಾರ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿ,ಇತ್ಯಾದಿ ವೃತ್ತಿಗಳಲ್ಲಿ ನಿರತರಾಗಿದ್ದಾರೆ. ವೆಂಕಟರಮಣ, ಭಾಮಸೇಂದ್ರ, ಮಲ್ಲಯ್ಯ ಇವರ ಪ್ರಮುಖ ದೈವಗಳಾಗಿವೆ. ಈ ಸಮುದಾಯವು ರಾಷ್ಟ್ರ ಹಾಗೂ ಪ್ರಾದೇಶಿಕ ಮಟ್ಟದ ರಾಜಕೀಯ ನಾಯಕರನ್ನು ಹೊಂದಿದೆ. ಆಧುನಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವ ಮೂಲಕ ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಇವರು ಬಳಸಿಕೊಂಡಿದ್ದಾರೆ.

ನೋಡಿ:

Parthasarathy Jakka., 1973. The Kapu or Reddy – A Dominant Agricultural caste of Andhra Pradesh,  Dissertation, (unpublished) Revishankar University.

Rami Reddy V., and K.Rajasekhara Reddy, 1982. ‘A Bio-social Study of Pedakanti Reddis Population in India’,  American Ethnologist.

Reddy, B.K.C., 1984. Morpho – Genetic Variation among the Reddys of Southern Andhra Pradesh, India, Ph.D.Thesis.

Tribal Cultural Research and Training Institute (nd). A Genetic Study of Konda Reddy, Konda Kapur and Konda Dora,  Tribal Welfare Department, Govt. of Adhra Pradesh, Hyderabad.

Tribal Cultural Research and Training Institute (nd) Genetic Study of Kondakapus, Plains Kapus and Konda Dora,  Tribal Welfare Department’, Government of Andhra Pradesh, Hyderabad

Venkatramana, P., K.Sree Rama Krishna and P.Chengal Reddy 1995. ‘An Assessment of Health Status of Nadal Reddis of Andhra Pradesh’,  South Asian Anthropologist.