ವಿಶ್ವಕರ್ಮ ಐದು ಕಲಾಕಾರದ ಗುಂಪುಗಳಾದ ಅಕ್ಕಸಾಲಿಗ, ಕಮ್ಮಾರ, ಕಂಚುಗಾರ, ಬಡಗಿ ಮತ್ತು ಶಿಲ್ಪಕಾರರನ್ನು ಹೊಂದಿರುವುದರಿಂದ ಇವರನ್ನು ಪಂಚಾಳರೆಂದು ಕರೆಯಲಾಗುತ್ತಿದೆ. ಇವರು ಅಕ್ಕಾಸಾಲಿಗ, ಆಚಾರಿ, ಸೋನಾರ, ಕಮ್ಮಾರ, ವಿಶ್ವಕರ್ಮ ಬ್ರಾಹ್ಮಣ, ಸುತಾರ ಮತ್ತು ಗೆಜ್ಜಿಗಾರರೆಂಬ ಹಲವು ನಾಮಗಳಿಂದ ಪರಿಚಿತರಾಗಿದ್ದಾರೆ. ಇದು ಹಲವು ಉಪಜಾತಿಗಳ ಸಮುದಾಯವಾಗಿದೆ. ಇವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಕಂಡುಬರುತ್ತಾರೆ. ಕನ್ನಡವನ್ನು ಮಾತನಾಡಿ ಅದೇ ಲಿಪಿಯನ್ನು ಬಳಸುತ್ತಾರೆ. ಮೇಲೆ ತಿಳಿಸಿದ ಪ್ರತಿಯೊಂದು ಗುಂಪು ಸಹ ಪಿತೃ  ನಡವಳಿಯ ಬೆಡಗುಗಳನ್ನು ಹೊಂದಿವೆ. ಇವರಲ್ಲಿ ಶೈವಗ, ಸಂತಾನ, ಅಭುನವ, ಸುಪ್ರನಾಸಿ, ಇತ್ಯಾದಿ ಬೆಡಗು ಕಂಡುಬರುತ್ತವೆ. ತಂದೆಯನಂತರ ಹಿರಿಯ ಮಗನು ಮನೆಯ ಉತ್ತರಾಧಿಕಾರಿಯಾಗುತ್ತಾನೆ. ವಿವಾಹ ನಿಯಮ, ಕುಟುಂಬದ ಮಾದರಿ ಇತ್ಯಾದಿಗಳಲ್ಲಿ ಇವರು ಕೇರಳ ಮತ್ತು ತಮಿಳುನಾಡಿನಲ್ಲಿರುವ ತಮ್ಮ ಸಮುದಾಯದ ಜನರ ಹೋಲಿಕೆ ಇದೆ ಎಂದು ತಿಳಿಯುತ್ತದೆ.

ಇವರ ಪಾರಂಪರಿಕ ವೃತ್ತಿ ಕರಕುಶಲ ಕೆಲಸ ಹಾಗೂ ಕಲಾ ಕೆಲಸ. ಇಂದಿಗೂ ಈ ಕುಟುಂಬಗಳು ಅದನ್ನೇ ಅವಲಂಬಿಸಿವೆ. ಕರಕುಶಲ ಕೆಲಸದೊಂದಿಗೆ ಇವರಲ್ಲಿ ಬೇಸಾಯಗಾರರು, ವ್ಯಾಪಾರಿಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೌಕರರು ಇದ್ದಾರೆ. ಇವರು ಚಿತ್ರ ಬಿಡಿಸುವುದು, ಲೋಹದ ಕೆತ್ತನೆ ಮೇಲೆ ಮತ್ತು ಕಲ್ಲಿನ ಕೆತ್ತನೆ ಮಾಡುವುದರಲ್ಲಿ ಪರಿಣತರು. ತಮ್ಮ ಸಮುದಾಯದ ಅಭ್ಯುದಯಕ್ಕಾಗಿ ದುಡಿಯಲು ಇವರು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಂಘಟನೆಗಳನ್ನು ಹೊಂದಿದ್ದಾರೆ. ಆಧುನಿಕ ಶಿ‌ಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವುದರ ಜೊತೆಗೆ, ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಸರ್ಕಾರ, ಬ್ಯಾಂಕ್, ಸಹಕಾರಿ ಸಂಸ್ಥೆ, ಇತರೆ ಆಧುನಿಕ ಆರ್ಥಿಕ ಸಂಸ್ಥೆಗಳ ಸೌಲಭ್ಯಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ಪಡೆದುಕೊಳ್ಳುತ್ತಿದ್ದಾರೆ. ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಸ್ವಲ್ಪಮಟ್ಟಿಗೆ ಹಿಂದುಳಿದ್ದಿದ್ದಾರೆ.

ನೋಡಿ:

Brouwer, J., 1987. ‘A Matter of liminalities : A Study of Women and Crafts in South India,  Man in India, 67(1), 1-22

Brouwer, J., 1987. ‘Riddles of Raw Materials Aspects of the Classification of Stones and Wood Used by South Indian Artisans’, Man in India,  67(2), 147-159

Brouwer, J. (N.D). The Ritual and Social Position of Viswakarma Artisans of Karnakataka, Ph.D. Thesis, Netherland.

Lerrche, Jens, 1991. Economic Development and Transformation of Traditional Social Relations : A Case Study of Vishwakarma Blackmith and Carpenter Caste of Orissa, India,  Ph:D. Thesis, Institute of Geography, University of Copenhagen.