ವೀಳ್ಯಗಾರ ಕ್ಷತ್ರಿಯರು ಯುದ್ಧ ಪ್ರಾರಂಭವಾಗುವ ಸಮಯದಲ್ಲಿ ರಾಜರಿಗೆ ವೀಳ್ಯದೆಲೆ ಹಂಚುತ್ತಿದ್ದರಿಂದ ಇವರನ್ನು ವೀಳ್ಯಗಾರ ಕ್ಷತ್ರಿಯರು ಎಂದು ಕರೆದಿರಬಹುದು. ಇವರು ‘ರಾವ್’ ಮತ್ತು ‘ಅಯ್ಯ’ ಎಂಬ ಮನೆತನದ ಹೆಸರುಗಳನ್ನು ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರೀಕೃತವಾಗಿರುವ ಇವರು ಕನ್ನಡ ಮತ್ತು ತುಳುವನ್ನು ಮಾತನಾಡುತ್ತಾರೆ. ಇವರು ಕಶ್ಯಪ, ಭಾರದ್ವಾಜ, ವಿಶ್ವಾಮಿತ್ರ, ವಸಿಷ್ಠ, ಕಣ್ವ ಮತ್ತು ಕೌಂಡಿನ್ಯ್‌ಎಂಬ ಋಷಿಗಳ ಹೆಸರಿನ ಆರು ಹೊರಬಾಂಧವ್ಯ ಗೋತ್ರಗಳು ಇವರಲ್ಲಿವೆ. ಸೋದರತ್ತೆ ಮತ್ತು ಸೋದರ ಮಾವನ ಮಗಳೊಂದಿಗೆ ವಿವಾಹಕ್ಕೆ ಸಮ್ಮತಿ ಇದೆ. ಸ್ತ್ರೀಯರಿಗೆ ಸಾಮಾಜಿಕ, ಸಾಂಪ್ರದಾಯಿಕ, ಧಾರ್ಮಿಕ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಸಮಾನವಾದ ಪಾತ್ರ ವಹಿಸುತ್ತಾರೆ ಕೆಲವರು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೌಕರರಾಗಿದ್ದಾರೆ. ಇವಲರಲ್ಲಿ ಸ್ತ್ರೀಯರು ಮತ್ತು ಮಕ್ಕಳು ಬೀಡಿಸುತ್ತಿವುದು ಇತ್ತೀಚಿನ ಪ್ರಮುಖ ವೃತ್ತಯಾಗಿದೆ. ಮೊಕ್ತೇಶ್ವರನೆಂದು ಕರೆಯಲ್ಪಡುವ ನಾಯಕನು ಕೋಮಿನ ಆಂತರಿಕ ಜಗಳಗಳನ್ನು ನೋಡಿಕೊಳ್ಳುತ್ತಾನೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಇವರು ಹಿಂದುಳಿದ್ದಿದ್ದಾರೆ.

ನೋಡಿ:

Anand, Shanta, 1985. Kshatriyas in Ancient India : A Socio – Economic and Religious Study, Atma Rama Delhi.

Derne, Steve, 1990. ‘The Kshatriya View of Castes : A Discussion of Raheja’s The Poison in the Gift’, Contribution to Indian Sociology,  24: 259-63.

Varma, Kumar Cheda Singh, 1904. Kshatriyas and Would be Kshatriyas A Consideration of the Claims of Certain Hindu Castes of Rand with the Rajputs the Descendants of the Ancient Kshatriyas,  Pioner Press, Allahabad.