ಮಗಾರರು ಚರ್ಮಗಾರ ಅಥವಾ ಚಮ್ಮಾರರೆಂದೂ ಕರೆಯಲಾಗುತ್ತದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಂತ ವಿರಳವಾಗಿ ಕಂಡುಬರುತ್ತಾರೆ. ಎಂಥೋವನ್ (೧೯೨೨) ಹೇಳುವಂತೆ ಸಮಗಾರರನ್ನು “ಚಮಗಾರರೆಂದೂ ಕೆನರದಲ್ಲಿ ಸಮಗಾರರೆಂದು ಕರ್ನಾಟಕದ ಇತರೆ ಭಾಗಗಳಲ್ಲಿ ಕರೆಯುತ್ತಿದ್ದರು”. ಚಮ್ಮಾರ, ಶಿವನಭಕ್ತ ಮತ್ತು ಋಷಿ ಹರಾಲಿಯ ತಲೆಮಾರಿನವರೆಂದು ನಂಬಲಾಗಿದೆ. ಇನ್ನೊಂದು ಪರಂಪರೆಯು ಇವರನ್ನು ಮಾರ್ಕಂಡೇಯ ಋಷಿಯ ಸಂತತಿಯನವರೆಂದು ಗುರುತಿಸುತ್ತದೆ ಕುಟುಂಬದಲ್ಲಿ ಮರಾಠ ಮಾತನಾಡುವ ಇವರು ಇತರರೊಡನೆ ಕನ್ನಡ ಮಾತನಾಡುತ್ತಾರೆ. ಇವರನ್ನು ತಮಿಳುನಾಡಿನಲ್ಲಿ ಚಕ್ಕಲಿಯನ್ ಎಂಬುದಾಗಿ, ಆಂಧ್ರಪ್ರದೇಶದಲ್ಲಿ ರಜಕಾರ ಎಂದು ಇವರನ್ನು ಕರೆಯುತ್ತಾರೆ.

ಇವರು ಮುಖ್ಯವಾಗಿ ಚರ್ಮದಿಂದ ಪಾದರಕ್ಷೆ, ಕೈಚೀಲ, ಬೆಲ್ಟ್ ಇತ್ಯಾದಿ ತಯಾರಿಸುತ್ತಾರೆ. ಇವರಲ್ಲಿ ಗುರುತಿಸಬಹುದಾದ ಎರಡು ಗುಂಪುಗಳೆಂದರೆ ಸಮಗಾರ ಮತ್ತು ಲಿಂಗಾಯತ ಸಮಗಾರ. ಆದರೆ ಎರಡು ಗುಂಪುಗಳೆಂದರೆ ಸಮಗಾರ ಮತ್ತು ಲಿಂಗಾಯತ ಸಮಗಾರ. ಆದರೆ ಇವೆರಡೂ ಬೇರೆ ಬೇರೆ ಬೆಡಗುಗಳಾಗಿ ವಿಭಾಗಿಸಲ್ಪಟ್ಟಿವೆ. ಅಹಿರೆವ, ಅತ್ನಿಕರ, ಭಾಮ್ನೆ, ಭೊರಾಟೆ, ಭೋಸ್ಲೆ, ದಾಮ್ಲೆ ಜಾದವ್ ಇತ್ಯಾದಿ. ಇವುಗಳು ವಿವಹಾ ಸಂಬಂಧಗಳನ್ನು ಕ್ರಮಗೊಳಿಸುತ್ತವೆ. ಥರ್ಸ್ಟನ್(೦೯೦೯) ಮರಾಠಿ ಸಮಗಾರರು ಮತ್ತು ಆರ್ಯ ಸಮಗಾರರು ಎಂಬ ಎರಡು ಪಂಗಡಗಳನ್ನು ಗುರುತಿಸಿದ್ದಾರೆ. ಇವುಗಳ ಜೊತೆಗೆ ಕೆಲವು ಪ್ರದೇಶಗಳಲ್ಲಿ ಚಂದ್ರವಂಶ ಮತ್ತು ಸೂರ್ಯವಂಶವೆಂಬ ವಿವಿಧ ಬೆಡಗುಗಳಿವೆ ಎಂದು ತಿಳಿದುಬರುತ್ತದೆ. ಸಮುದಾಯದಲ್ಲಿ ಒಳಬಾಂಧವ್ಯ ವಿವಾಹ ಹಾಗೂ ಬೆಡಗಿನಲ್ಲಿ ಹೊರಬಾಂಧವ್ಯ ವಿವಾಹಗಳು ರೂಢಿಯಲ್ಲಿವೆ. ಸೋದರತ್ತೆ, ಸೋದರಮಾವ ಮತ್ತು ಅಕ್ಕನ ಮಗಳೊಂದಿಗೆ ವಿವಾಹಗಳಿಗೆ ಸಮ್ಮತಿಯಿದೆ. ಮದುವೆ ಕಾರ್ಯಕ್ಕೆ ಬ್ರಾಹ್ಮಣ ಪುರೋಹಿತರನ್ನು ಆಮಂತ್ರಿಸುತ್ತಾರೆ. ಇವರಲ್ಲಿ ವದುದಕ್ಷಿಣೆ ಪದ್ಧತಿಯಿದೆ. ಸ್ವಲ್ಪಮಟ್ಟಿಗೆ ಇವರಲ್ಲಿ ಬಾಲ್ಯವಿವಾಹ ಪದ್ಧತಿ ಕಂಡುಬರುತ್ತದೆ. ಕೆಲವು ಪ್ರದೇಶಗಳಲ್ಲಿ ವಿಧವೆಯರು ವಿವಾಹವಾಗಬಹುದು. ಆದರೆ ಕೆಲವು ಪ್ರದೇಶಗಳಲ್ಲಿ ನಿಷೇಧವಿದೆ.

ಇವರಲ್ಲಿ ಹೆಚ್ಚಿನವರು ಅವಿದ್ಯಾವಂತರು ಮತ್ತು ಆರ್ಥಿಕವಾಗಿ ಹಿಂದುಳಿದವರು. ಇತ್ತೀಚೆಗೆ ಹಲವಾರು ಸರಕಾರಿ ದರಕಾಸ್ತು ಭೂಮಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಇವರಲ್ಲಿ ಒಂದು ಪಂಗಡದವರ ಕುಲದೈವ ಹನುಮಂತ. ಇನ್ನೊಂದು ಪಂಡದವರ ಕುಲ ದೇವರು ಈಶ್ವರ. ಜೊತೆಗೆ ಮಾರಿಯಮ್ಮ, ದುರ್ಗಾಪರಮೇಶ್ವರಿಯನ್ನು ಪೂಜಿಸುತ್ತಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡಗಳಲ್ಲಿ ಇರುವವರು ಗುಳಿಗ, ಪಂಜುರ್ಲಿ, ಇತ್ಯಾದಿ ಭೂತಗಳನ್ನು ನಂಬುತ್ತಾರೆ. ‘ಕೊಲ್ಹಾಪುರಿ ಚಪ್ಪಲಿ’ ಗಳೆಂದು ಜನಪ್ರಿಯವಾದ ಚಪ್ಪಲಿಗಳನ್ನು ಇವರು ಮಾಡುತ್ತಾರೆ. ಕುದುರೆಗಳಿಗೆ ಲಗಾಮು ಹಾಗೂ ಚಾಬುಕನ್ನು (ಚಾವಟಿ) ಮಾಡುವುದರ ಜೊತೆಗೆ ಕರಕುಶಲ ಕರ್ಮಿಗಳು ಹೌದು. ಇವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದಾರೆ.

ನೋಡಿ:

Misra P.K., 1963. ‘A Note on an Organised Effort to Bring a Change in the Caste Status by the Charmakars’, Bulletion of the Department of Anthropology.

Parvatheesam, C.and B.V.Babu., 1996. ‘PTC Taste Sensitivity and Colour Blindness in Rajaka Caste of Andhra Pradesh, Man in India

Parvathamma, C.and B.V.Babu, 1997. ‘Village Endogamy and Marriage Distance among Rajaka Casteof Andhra Pradesh’, Man in India.

Thompson G.R. 1991. ‘The Charans of Gujrat : Caste Identity, Music and Cultural Change’, Ethnomusicology.