‘ಸೋಲಿಗ’ರಿಗೆ ಸೋಲಿಗ ಎಂಬ ಹೆಸರು ಹೇಗೆ ಬಂದಿತು ಎಂದು ಹೇಳುವುದು ತುಂಬಾ ಕಷ್ಟದ ಕೆಲಸ. ಈ ಪದಕ್ಕೆ ಸೋಲಿಗರಲ್ಲಿ ಕೆಲವು ಕಾರ್ಯಕಾರಣ ಸಂಬಂಧವುಳ್ಳ ಐತಿಹ್ಯಗಳೂ ತಮ್ಮದೇ ಆದ ವ್ಯಾಖ್ಯಾನಗಳನ್ನು ಮಾಡುತ್ತದೆ. ವಿದ್ವಾಂಸರೊಬ್ಬರ ಪ್ರಕಾರ, ಸೋಲಿಗ ಶಬ್ದವು ಸ್ವಾಮಿಗ ಹಾಗೂ ಸೋಯಿಗ ಪದಗಳ ಅಪಬ್ರಂಶವಾಗಿದೆ.

ಸೋಲಿಗರು ಹೆಚ್ಚಾಗಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಅರಣ್ಯ ಪ್ರದೇಶಗಳ ಅಂಚಿನಲ್ಲಿ ಕಂಡುಬರುತ್ತಾರೆ. ಸೋಲಿಗರಲ್ಲಿ ಐದು ಕುಲದವರು ಹಾಗೂ ಏಳು ಕುಲದವರು ಎಂಬ ಎರಡು ಗುಂಪು ಇವೆ. ಐದು ಕುಲದವರಲ್ಲಿ ಆಲುರು, ಬೆಲ್ಲರ, ಸೂರ್ಯ, ತೆನೇರು, ಜೇನು ಎಂಬ ಬೆಡಗುಗಳಿವೆ. ಬೆಡಗು ಪದ್ಧತಿಯು ಇವರಲ್ಲಿ ವಿವಾಹ ಸಂಬಂಧವನ್ನು ಬೆಳೆಸುವ ಸಂದರ್ಭದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಒಂದು ಬಳ್ಳಿಯಿಂದ ಇನ್ನೊಂದು ಬಳ್ಳಿಗೆ ಹೆಣ್ಣನ್ನು ತಂದುಕೊಳ್ಳುವುದು ಸರ್ವೇಸಾಮಾನ್ಯ. ಆದರೆ ಒಂದೆ ಬಳ್ಳಿಯೊಳೆ ಸಂಬಂಧ ಬೆಳೆಸುವುದು ನಿಷಿದ್ಧವಾದುದು. ಸೋಲಿಗರ ಏಳು ಕುಲದವರಲ್ಲಿ ಉರಾಲಿ, ಕಾಡು, ಮಲೆ, ಊರುಬತ್ತಿ, ಬರುಡೆ, ದೇವರಸೋಲಿ, ಮತ್ತು ಪೂಜಾರಿಗಳು ಎಂಬ ಬೆಡಗುಗಳಿವೆ. ವಿವಿಧ ಬಗೆಯ ವಿವಾಹ ಪದ್ಧತಿಗಳನ್ನು ನಾವು ಗುರುತಿಸಬಹುದು. ಅಪಹರಣ ವಿವಾಹ, ಸೇವಾವಿವಾಹ, ಅಕ್ರಮಪ್ರವೇಶ  ವಿವಾಹ, ಬಹುಪತ್ನಿತ್ವವಿವಾಹ, ಮೈದುನವಿವಾಹ, ಏಕಸಂಗಾತಿ ವಿವಾಹ ಹಾಗೂ ವಿಧವಾ ವಿವಾಹ ಪದ್ಧತಿಗಳು ಹೆಚ್ಚು ಬಳಕೆಯಲ್ಲಿವೆ. ಅಪಹರಣ ವಿವಾಹ ಸೋಲಿಗರಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವುದನ್ನು ಗುರುತಿಸಬಹುದು. ಇವರ ಆರ್ಥಿಕ ಚಟುವಟಿಕೆಯು ಕೆಲವು ಮಟ್ಟಿಗೆ ಬದಲಾವಣೆಯನ್ನು ಹೊಂದಿದೆ. ಮಹಿಳೆಯರು ಗೆಡ್ಡೆ ಗೆಣಸು ಸಂಗ್ರಹಿಸುವುದರೊಂದಿಗೆ, ಕುಟುಂಬದ ಆದಾಯಕ್ಕೆ ತಮ್ಮದೆ ಕೊಡುಗೆಯನ್ನು ಸಲ್ಲಿಸುತ್ತಾರೆ. ಸೋಲಿಗರ ಪಾರಂಪರಿಕ ವೃತ್ತಿ ಸಾಗುವಳಿ ವ್ಯವಸಾಯ ಮತ್ತು ಚಿಕ್ಕಪುಟ್ಟ ಅರಣ್ಯೋತ್ಪಾದನೆಗಳ ಸಂಗ್ರಹಣೆ. ಈಗ ಇವರು ಕಾಡು ಮತ್ತು ಹೊಲಗಳಲ್ಲಿ ಶ್ರಮಿಕರಾಗಿ ದುಡಿಯುತ್ತಿದ್ದಾರೆ. ಇತ್ತೀಚೆಗೆ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಸ್ವಾಮಿ ವಿವೇಕಾನಂದ ಗಿರಿಜಾಕಲ್ಯಾಣ ಕೇಂದ್ರ ಹಾಗೂ ಇತರೆ ಸ್ವಯಂ ಸೇವಾ ಸಂಘಟನೆಗಳು ಇವರಲ್ಲಿ ಶೈಕ್ಷಣಿಕ, ಆರ್ಥಿಕ, ವೈದ್ಯಕೀಯ ಸುಧಾರಣೆಯನ್ನು ತರಲು ಹಲವಾರು ಯೋಜನೆಗಳ ಮೂಲಕ ಪ್ರಯತ್ನಿಸುತ್ತಿವೆ. ಹೀಗಾಗಿ ಇವರಲ್ಲಿ ಬಹಳ ನಿಧಾನವಾಗಿ ಸಾಮಾಜಿಕ ಬದಲಾವಣೆ ಕಂಡುಬರುತ್ತಿದೆ. ಆದರೂ ಇವರೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ್ದಿದ್ದಾರೆ.

ನೋಡಿ:

Balakrishna, K.V., 1953. ‘Bettad Soligaru’ (in Kannada) Janapragathi Kannada Weekly Bangalore, (Six articles)

Bhat, H.K. 1995. ‘Soliga In : Encyclopaedic Profile of Indian Tribes. Sachidanada and R.R.Prasad (Ed.) : Discovery Publishing House. New Delhi, pp.93-943.

Gopal H., 1965. ‘Problems of Soligas’, Social Welfare XII No.8, pp.2-22

Iyengar, Krishna, D. 1944. ‘Soligaru’,  Prabhuddha Karnataka Vol.28 No.2, Musore University,Mysore

Koppad, K.B., 1961. Soligaru  Delhi : Office of the Registar General’, Ministry of Home Affairs, Government of India Morab, S.G., 1982. ‘Shifting Cultivation among the Hill Soliga

In : Economics of the Tribes Transformation,  K.S Singh, (ed.): Concept Publishing Company, New Delhi

Morab, S.G., 1977. The Soliga of Biligiri Ranagana Hills

Memoir No. 45,  :Anthropological Survey of India, Calcutta.

Morab, S.G. 1981. ‘The Soliga : A Study in Ecology Society ad Religion of a Hill, in South India’ In : Nature-man Spirit Complexes in Tribal India,  R.S. Mann (ed.) : Concept Publication Company, New Delhi.

Reddy, P.H., P.J. Bhattacharjee, M.K. Venugopal Rao, 1983.

Tribes in Karnataka- ‘A Study of Socio-economic and Demographic Characterstics of soligas  Population Centre, Banglore.

Rivers, William 1903. ‘Obeserations on the Vision of the Uralis and Sholags’, Bulletin of the Madras Government Museum 5:-18

Saketh Rajan, S., 1984. ‘Commercialization of Forest and its Impact on the Soliga Tribe on Biligiri Rangana Hills’,

Journal of Indian Anthropological Society Vol. 19, No.3

Siddegowda and R.Subbakrishna, 1982. Soliga Nudi-I’ Mysore Central Institute of Indian Languages

Subbayya, K.M., 1965. ‘Customs and Life of Soligas in Chamarajnagar’, My Forest April 1965, pp.4-46.

Thruston, E. 1903. ‘Sholagas and Irulas’, Bulletin of the Madras Government Museum  4:202-213