ಸ್ವಕುಳ ಸಾಳಿಗರು ಕರ್ನಾಟಕದಲ್ಲಿರುವ ನೇಯ್ಗೆ ಕೋಮಿನ ಉಪಪಂಗಡಗಳಲ್ಲಿ ಒಂದಾಗಿದ್ದಾರೆ. ಇವರು ಕಾಶಿಯಿಂದ ಕರ್ನಾಟಕ್ಕೆ ವಲಸೆ ಬಂದವರೆಂದು ಹೇಳಿಕೊಳ್ಳುತ್ತಾರೆ. ಇವರು ಬೆಳಗವಿ, ಧಾರವಾಡ, ಗದಗ, ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರು ಮರಾಠಿ ಮತ್ತು ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿ ಬಳಸುತ್ತಾರೆ. ಇವರಲ್ಲಿ ಒಳಬಾಂಧವ್ಯ ವಿವಾಹಗಳಿರುವ ಉಪಪಂಡಗಳಿವೆ. ಅವುಗಳೆಂದರೆ ಅರ್ಚಕರು ಅಥವಾ ಅಹೇರ, ಸಂತಾನ, ಶುದ್ಧ, ಗುರ್ಜಾರ, ಚಿಕ್ಲೆ, ಪದ್ಮ, ಪಟ್ಟ ಇತ್ಯಾದಿ. ಈ ಪಂಡಗಳನ್ನು ಪ್ರಾಂತ ಹಾಗೂ ಭಾಷ ಆಧಾರದ ಮೇಲೆ ಮಾಡಲಾಗಿದೆ.

ಇವರು ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹವನ್ನು ಮತ್ತು ಕುಲದ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿಯನ್ನು ಅನುಸರಿಸುತ್ತಾರೆ. ಸೋದರ ಮಾವ ಮತ್ತು ಅಕ್ಕನ ಮಗಳ ಜೊತೆ ವಿವಾಹಗಳು ಇವರಲ್ಲಿ ಅಸ್ತಿತ್ವದಲ್ಲಿವೆ. ವಿದುರ, ವಿಧವೆಯರು, ವಿಚ್ಛೇದಿತರು ವಿವಾಹವಾಗಬಹುದು. ಪುರುಷ ಉತ್ತರಾಧಿಕಾರದ ನಿಯಮವನ್ನು ಇವರು ಅನುಸರಿಸುತ್ತಾರೆ. ಸ್ತ್ರೀಯರು ಆರ್ಥಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಗಂಡಸರಿಗೆ ಸಮಾನವಾಗಿ ಭಾಗವಹಿಸುತ್ತಾರೆ. ವಿವಾಹ ಸಂದರ್ಭದಲ್ಲಿ ವರನ ಕಡೆಯವರ ಸಾರಿಗೆ ವೆಚ್ಚದ ಅರ್ಧದಷ್ಟನ್ನು ವಧುವಿನ ಕಡೆಯವರು ಭರಿಸುವ ಪದ್ಧತಿಗೆ ಹಾಸಲು-ಮಸಲು ಎನ್ನುತ್ತಾರೆ.

ಹತ್ತಿ ಮತ್ತು ರೇಷ್ಮೆಯನ್ನು ನೇಯುವುದು ಮತ್ತು ಬಟ್ಟೆ  ವ್ಯಾಪಾರ ಇವರ ಪಾರಂಪರಿಕ ವೃತ್ತಿಗಳಾಗಿವೆ. ಇಂದಿನ ದಿನಗಳಲ್ಲಿ ಆಧುನಿಕ ಶಿಕ್ಷಣ, ವೃತ್ತಿ ಕೌಶಲ್ಯಗಳಿಂದ, ಇವರಲ್ಲಿ ಹಲವರು ಉನ್ನತ ಹುದ್ದೆಗಳಲ್ಲಿ, ಸ್ವಯಂ-ಗ್ರಾಮೀಣ ಪ್ರದೇಶದಲ್ಲಿ ಕೆಲವು ಕುಟುಂಬಗಳಿವೆ ಕೃಷಿ ಭೂಮಿ ಇದೆ. ಇದರಿಂದ ವ್ಯವಸಾಯವನ್ನು ಮಾಡುತ್ತಾರೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಆಸಕ್ತಿ ಇದೆ. ನೂಲುವ ಉದ್ಯಮದ ಆಧುನೀಕರಣವು ಈ ಸಮುದಾಯದ ಸಾಮಾಜಿಕ, ಆರ್ಥಿಕ ಜೀವನದ ಹಲವಾರು ಬದಲಾವಣೆಗೆ ಕಾರಣವಾಗಿದೆ. ಇವರ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಪರಿಸ್ಥಿತಿಯು ಕೆಳಮಟ್ಟದಲ್ಲಿದೆ.