ಕ್ಕಿಪಿಕ್ಕಿಗಳು ಇವರು ಗುಜರಾತ, ರಾಜಸ್ಥಾನದ ಗಡಿಯಿಂದ ಆಂಧ್ರದ ಮೂಲಕ ಕರ್ನಾಟಕಕ್ಕೆ ಬಂದವರು. ಇವರು ಹೆಚ್ಚಾಗಿ ಬೆಂಗಳೂರು, ಮೈಸೂರು, ಕೋಲಾರ, ಶಿವಮೊಗ್ಗ, ಚಿತ್ರದುರ್ಗ, ಹಾಸನ, ಬಳ್ಳಾರಿ ಜಿಲ್ಲೆಗಳಲ್ಲಿ ವಾಸವಾಗಿದ್ದರೂ, ಇವರನ್ನು ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಾಣಬಹುದು. ಪಿಕ್ಕಿ ಇವರ ಸಾಂಪ್ರದಾಯಿಕ ವೃತ್ತಿಯಾದ ಹಕ್ಕಿ ಹಿಡಿಯುವುದರಿಂದ ಹಕ್ಕಿಪಿಕ್ಕಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಕನ್ನಡದಲ್ಲಿ ‘ಹಕ್ಕಿ’ ಎಂದರೆ ಪಕ್ಷಿ ಎಂದರ್ಥ. ಹಕ್ಕಿಗೆ ‘ಪಿಕ್ಕಿ’ ಎನ್ನುವ ಜೋಡಿಶಬ್ದ ಪ್ರಯೋಗವಾಗಿದೆ. ಇವರು ಮೂಲತಃ ಗುಜರಾತಿನ ಗಡಿಯವರೆಂದೇ ಹೇಳುತ್ತಾರೆ. ಇವರು ಇಂಡೋ-ಆರ್ಯನ್ ಭಾಷೆಯಾದ ವಾಘ್ರಿಯನ್ನು ಮಾತನಾಡುತ್ತಾರೆ. ಹಕ್ಕಿಪಿಕ್ಕಿಯವರಲ್ಲಿ ಮುಖ್ಯವಾಗಿ ಎರಡು ಉಪಜಾತಿಗಳಿವೆ.  ಅವುಗಳು ಮೊಹೊತೊ ಹಾಗೂ ನಾಹ್ನೋ. ಮೊದಲನೆಯದರಲ್ಲಿ ಗುಜರಾತಿ, ಪನವಾರ್, ಕಾಲಿವಾಲ ಹಾಗೂ ಮೇವಾರ ಎಂಬ ನಾಲ್ಕು ಬೆಡಗುಗಳಿವೆ. ಇವುಗಳನ್ನು ಸಾಮಾಜಿಕ ಹಾಗೂ ಧಾರ್ಮಿಕ ಆಚರಣೆಯ ಆಧಾರಗಳ ಮೇಲೆ ವಿಭಾಗಿಸಲಾಗಿದೆ. ತಂದೆಯ ಸಹೋದರಿಯ ಮಗಳ  ಜೊತೆ ಅಥವಾ ತಾಯಿಯ ಸಹೋದರನ ಮಗಳ ಜೊತೆ ಮದುವೆ ಸಾಧ್ಯವಿದೆ. ವಿಧುರ, ವಿಧವೆಯರ ಮರುವಿವಾಹ ಹಾಗೂ ವಿವಾಹ ವಿಚ್ಛೇದನೆಗಳು ನಡೆಯುತ್ತವೆ. ಹಕ್ಕಿಗಳನ್ನು ಹಿಡಿಯುವುದು, ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವದು. ಇವರ ವೃತ್ತಿಯಾಗಿದೆ. ಅಲಂಕಾರಿಕ ಸಾಮಗ್ರಿಗಳನ್ನು ಮಾರುತ್ತಾ ಬಹಳಷ್ಟು ಜನ ಅಲೆಮಾರಿ ಬದುಕನ್ನೇ ಬದುಕುತ್ತಾರೆ. ಇತ್ತೀಚೆಗೆ ಕೆಲವರು ಕೃಷಿ ಕೂಲಿಗಳಾಗಿಯೂ ದುಡಿಯುತ್ತಾರೆ. ಇವರು ಚಾಮುಂಡಿ, ದುರ್ಗಮ್ಮ, ಕಲ್ಲಮ್ಮ ಮತ್ತು ಎಲ್ಲಮ್ಮ ದೇವತೆಗಳನ್ನು ಆರಾಧಿಸುತ್ತಾರೆ. ಆಧುನಿಕ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಕಂಡು ಬರುವುದಿಲ್ಲ. ಕುಟುಂಬ ಯೋಜನೆಯ ಬಗ್ಗೆ ಇವರಿಗೆ ಅಷ್ಟೇನೂ ಕಾಳಜಿಯಿಲ್ಲ. ಇವರನ್ನು ಹಲವಾರು ಅಭಿವೃದ್ಧಿ ಯೋಜನೆಗಳಲ್ಲಿ ಸೇರಿಸಿಕೊಳ್ಳಲಾಗಿದೆ. ಇವರ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಈ ಸಮುದಾಯದ ಪುನರ್‌ವಸತಿ ಕಾರ್ಯವನ್ನು ಸರ್ಕರ ಹಾಗೂ ಖಾಸಗಿ ಸಂಸ್ಥೆಗಳು ಮಾಡುವುದು ಅವಶ್ಯಕ ವಾಗಿದೆ.

ಹಕ್ಕಿಪಿಕ್ಕಿ ಪುರುಷ

ಹಕ್ಕಿಪಿಕ್ಕಿ ಪುರುಷ

ಬನ್ನೇರುಘಟ್ಟದಲ್ಲಿರುವ ಹಕ್ಕಿಪಿಕ್ಕಿ ಗುಡಿಸಲು

ಬನ್ನೇರುಘಟ್ಟದಲ್ಲಿರುವ ಹಕ್ಕಿಪಿಕ್ಕಿ ಗುಡಿಸಲು

ನೋಡಿ:

Mann, R.S., 1998. ‘Tribal Traper and Collector Under New Challenges’, The Eastren Anthropologist 51(2) 15-167

Mann, R.S., 1980. Hakkipikki: Trapers and Sellers, Memoir No.51; Anthropological Survey of India, Calcutta

Mann, R.S., 1970. ‘Social Structure and Organisation in a Tribe of Trappers’, Bulletin  of the Department of Anthropology Vol.19

Mann, R.S.,1973. ‘Gudlu Organisation and Factions among Mann, R.S.,1971. ‘Religion and Society in a Tribe of Trappers’: The Hakki Pikki of Mysore, Journal of the Indian Anthropogical Society 6(2) : 119-130