ಣಬರನ್ನು ಕೃಷ್ಣಗೊಲ್ಲರೆಂದೂ ಕರೆಯುತ್ತಾರೆ. ಇವರು ಬೆಳಗಾವಿ, ಬಿಜಾಪುರ, ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇಂಡೋ-ಆರ್ಯನ್ ಭಾಷಾ ಗುಂಪಿಗೆ ಸೇರಿರುವ  ಮರಾಠಿ ಹಾಗೂ ದ್ರಾವಿಡ ಭಾಷಾ ಗುಂಪಿಗೆ ಸೇರಿದ ಕನ್ನಡವನ್ನು ಕೋಮಿನ ಒಳಗೆ ಹಾಗೂ ಹೊರಗಿನವರೊಂದಿಗೆ ಮಾತನಾಡಲು ಬಳಸುತ್ತಾರೆ. ಈ ಸಮುದಾಯದಲ್ಲಿ ಪುರುಷಪ್ರಧಾನ ಹೊರಬಾಂಧವ್ಯದ ಬೆಡಗುಗಳಿವೆ- ತಂಬಿಟ್ಟ, ರಾವತ, ನಂದ, ಚಂದ, ಆಲೆ ಹಾಗೂ ಹಾಗೂ ದುಲೆ. ತಂದೆಯ ಸಹೋದರಿಯ ಮಗಳ ಜೊತೆ ಅಥವಾ ತಾಯಿಯ ಸಹೋದರನ ಮಗಳ ಜೊತೆ, ಮದುವೆಯಾಗಲು ಅವಕಾಶವಿದೆ. ತಾಳಿ ಕಾಲುಂಗುರುಗಳು ಮದುವೆಯಾದ  ಹೆಂಗಸಿನ ಗುರುತುಗಳು. ಇವರಲ್ಲಿ ಮೊದಲಿದ್ದ ವಧುದಕ್ಷಿಣೆ ಈಗ ವರದಕ್ಷಿಣೆಯಾಗಿ ಬದಲಾಗಿದೆ. ವಿಧುರ, ವಿಧವೆಯರು ಹಾಗೂ ವಿಚ್ಛೇದಿತರು ವಿವಾಹವಾಗಬಹುದು. ಪಿತ್ರಾರ್ಜಿತ ಆಸ್ತಿಯನ್ನು ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಸಮವಾಗಿ ಹಂಚಲಾಗುತ್ತದೆ. ಹೆಂಗಸರು ವ್ಯವಸಾಯದ ವಿಷಯದಲ್ಲಿ ಸಹಾಯ ಮಾಡಿ, ಪಶುಸಂಗೋಪನೆ, ಉರುವಲು ಸಂಗ್ರಹಣೆ, ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಬೀಡಿಕಟ್ಟುವುದರ ಮೂಲಕ ಕುಟುಂಬದ ಆದಾಯಕ್ಕೂ ಸಹಾಯ ಮಾಡುತ್ತಾರೆ. ಹೆರಿಗೆಯ ಮುನ್ನ ನಡೆಯುವ ‘ಬಯಕೆ’ ಕಾರ್ಯಕ್ರಮವನ್ನು ಬಸಿರಿನ ಏಳನೆಯ ತಿಂಗಳಲ್ಲಿ ಮಾಡುತ್ತಾರೆ. ಜನನದ ಸೂತಕ ಹನ್ನೊಂದು ದಿನಗಳವರೆಗೆ ಇದ್ದು ಹನ್ನೆರಡನೇ ದಿನ ಮಗುವಿಗೆ ಹೆಸರಿಡುತ್ತಾರೆ. ಸತ್ತವರನ್ನು ಸುಟ್ಟು, ಪ್ರತಿವರ್ಷವು ಶಾಂತಿ ಮಾಡಿಸುತ್ತಾರೆ.

ಸಾಂಪ್ರದಾಯಿಕವಾಗಿ ಹಣಬರು ಆಕಳು, ಎಮ್ಮೆಯಂತಹ ಪ್ರಾಣಿಗಳನ್ನು ಸಾಕುವ ಒಂದು ಸಮುದಾಯ. ಇವರಲ್ಲಿ ಬಹುಸಂಖ್ಯಾತ ಜನರಿಗೆ ಕೃಷಿ ಭೂಮಿಯಿಲ್ಲ, ಕೆಲವರು ಬೇರೆ ಸಮುದಾಯದ ಭೂ ಒಡೆಯರ ಜೊತೆ ಬೆಳೆಯನ್ನು ಹಂಚಿಕೊಳ್ಳುತ್ತಾರೆ. ಈಗ ಇವರಲ್ಲಿ ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ನೌಕರಿಯ ಜೊತೆಗೆ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ. ಇವರ ಮನೆ ದೇವತೆಗಳು ಅಲ್ಲಮಪ್ರಭು, ಬಸವಣ್ಣ ಹಾಗೂ ರೇಣುಕ. ಜಂಗಮ ಧಾರ್ಮಿಕ ಧಾರ್ಮಿಕ ವಿಧಿಗಳನ್ನು ಪೂರೈಸುತ್ತಾರೆ. ಈ ಕೋಮಿನ ಜನಪದ ಪರಂಪರೆ ಶ್ರೀಮಂತವಾಗಿದೆ. ಇವರಲ್ಲಿ ವ್ಯಾಪಾರಿಗಳು, ಶಿಕ್ಷಕರು, ಉನ್ನತ ವೃತ್ತಿಗಳಲ್ಲಿರುವವರೂ ಇದ್ದಾರೆ. ಹಣಬರು ಆಧುನಿಕ ವಿದ್ಯಾಭ್ಯಾಸದ ವಿಷಯದಲ್ಲಿ ಹಿಂದುಳಿದಿದ್ದಾರೆ. ಆಧುನಿಕ ಸಂಸ್ಥೆಗಳ ಪರಿಣಾಮ ನಿಧಾನವಾಗಿ ಇವರ ಮೇಲೆ  ಉಂಟಾಗುತ್ತಿದೆ.