ರಿಣಶಿಕಾರಿಗಳನ್ನು ಚಿಗರಿಬೇಟೆಗಾರರು, ಹರಿಣಿಶಿಕಾರ, ನೀರಶಿಕಾರ, ಬಾಗ್ರಿ, ಬಾವರಿ, ಪಾಸಾಚಾರಿ ಹಾಗೂ ವಾಗ್ರಿ ಎಂದು ಕರೆಯುತ್ತಾರೆ. ಇವರು ಭಾರತದ ಉತ್ತರ-ಪಶ್ಚಿಮದಿಂದ ವಲಸೆ ಬಂದು ಹುಬ್ಬಳ್ಳಿ, ಬೆಳಗಾವಿ, ಬಿಜಾಪುರ, ಧಾರವಾಡ, ಉತ್ತರ ಕನ್ನಡ ಮುಂತಾದ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಇವರು ಬೇಟೆಯಾಡುವ ಸಮುದಾಯವೆಂದು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ರಜಪೂತರಲ್ಲಿ ತಮ್ಮ ಮೂಲವನ್ನು ಹುಡುಕುತ್ತಾರೆ. ‘ಖಾಂಜ’ ಎಂಬವನನ್ನು ಮೂಲ ಪುರುಷ ಎಂದು ನಂಬಿಕೊಂಡಿದ್ದಾರೆ. ಇವನ ಮಕ್ಕಳು ಬೇರೆ ಬೇರೆ ಸಮಾಜಗಳಿಗೆ ಸೇರಿದ ಹೆಂಗಸರನ್ನು ಮದುವೆಯಾದರು. ಇವರುಗಳಿಗೆ ಹುಟ್ಟಿದ ಮಕ್ಕಳೇ ಹರಿಣಶಿಕಾರಿಯವರು ಎಂದು ಹೇಳಲಾಗುತ್ತದೆ. ಇವರಲ್ಲಿ ಹಲವು ಉಪಜಾತಿಗಳಿವೆ. ಇವರು ಇಂಡೋ-ಆರ್ಯನ್ ಭಾಷೆಯಾದ ಗುಜರಾತಿನ ಒಂದು ಉಪಭಾಷೆಯನ್ನು ಮನೆಯಲ್ಲಿ ಬಳಸುತ್ತಾರೆ. ಕನ್ನಡದಲ್ಲೂ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಪುರುಷಕೇಂದ್ರಿತ ಹೊರಬಾಂಧವ್ಯ ಬಳ್ಳಿಗಳು ಇವರಲ್ಲಿವೆ. ಅವುಗಳಲ್ಲಿ ಏಳನ್ನು ಗುರುತಿಸಲಾಗಿದೆ : ಹರಕತ್ಯಾ, ಪಿಂಪಲಜ್ಜು, ಕೊಡಿಯಾರ, ಸೌಂದ್ಯ, ಕೊರಬ್ಯಾ, ಇಖೋತ್ಯಾ ಹಾಗೂ ಕಟ್ಟೀಮನಿ. ಸಮುದಾಯದಲ್ಲಿ ಒಳಬಾಂಧವ್ಯ ವಿವಾಹ ಪದ್ಧತಿ ಹಾಗೂ ಬಳ್ಳಿ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಇವರ ವಿವಾಹ  ಪದ್ಧತಿಗಳು. ಸೋದರಿ ಸಂಬಂಧಿ ಸಂಬಂಧಿ ಹಾಗೂ ಗಂಡ ಸತ್ತರೆ ಗಂಡನ ತಮ್ಮನ ಜೊತೆ ಮದುವೆಯಾಗುವ ಪದ್ಧತಿಯಿದೆ. ಮನೆಯ ವಾರಸುದಾರಿಕೆ ತಂದೆಯ ನಂತರ ಹಿರಿಯ ಗಂಡುಮಗನಿಗೆ ಹೋಗುತ್ತದೆ. ಮನೆಯ ಮೊದಲ ಮಗಳಿಗೆ ಮಾತ್ರ ಋತುಮತಿಯಾದಾಗ ‘ನದಿಯಾನಿ’ ಕಾರ್ಯವನ್ನು ಮಾಡುತ್ತಾರೆ. ಮದುವೆಯಲ್ಲಿ ಮದುವೆಯೂಟವನ್ನು ಗಂಡಿನ ಕಡೆಯವರು ಮಾಡಿಸುತ್ತಾರೆ. ಶವವನ್ನು ಸುಟ್ಟು, ಸೂತಕವು ಇಪ್ಪತ್ತು ದಿನಗಳ ತನಕ ಆಚರಿಸುತ್ತಾರೆ.

ಬೇಟೆಯಾಡುವುದು, ಆಹಾರ ಸಂಗ್ರಹಿಸುವುದು ಹಾಗೂ ಬಟ್ಟಿಸರಾಯಿ ತಯಾರಿಸುವುದು ಇವರ ಸಾಂಪ್ರದಾಯಿಕ ಕೆಲಸಗಳು. ಇತ್ತೀಚೆಗೆ ಇವರು ಕೃಷಿ ಕೂಲಿ ಕೆಲಸದಲ್ಲಿ ತೊಡಗಿದ್ದಾರೆ. ಚಿಲ್ಲರೆ ವ್ಯಾಪಾರ, ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಗಳಲ್ಲಿ ಇದ್ದಾರೆ. ಇವರಲ್ಲಿ ಜಾತಿ ಪಂಚಾಯಿತಿ ಮುಖ್ಯಸ್ಥರು ಜಾತಿಯ ಜಗಳಗಳನ್ನು ಬಗೆಹರಿಸುತ್ತಾನೆ, ಇವರು ಮುಖ್ಯವಾಗಿದೆ. ಲಕ್ಷ್ಮೀ ದೇವತೆಯನ್ನು ಆರಾಧಿಸುತ್ತಾರೆ. ಇವರಲ್ಲಿ ಆಧುನಿಕ ವಿದ್ಯಾಭ್ಯಾಸಕ್ಕೆ ಸ್ವಲ್ಪಮಟ್ಟಿನ ಆಸಕ್ತಿಯಿದೆ. ಆಧುನಿಕ ವೈದ್ಯಕೀಯ, ಆಧುನಿಕ ಸಂಸ್ಥೆಗಳ ಪ್ರಯೋಜನ ಪಡೆಯುವಲ್ಲಿ ಇವರು ಹಿಂದುಳಿದ್ದಿದ್ದಾರೆ.