ಲ್ಲೇರರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆ‌ಚ್ಚಾಗಿ ಹಂಚಿಹೋಗಿದ್ದಾರೆ. ಇವರು  ತಿರುಪತಿಯಿಂದ ವಲಸೆ ಬಂದಿರಬಹುದೆಂದು ನಂಬಲಾಗಿದೆ. ಎಂಥೋವನ್ (೧೯೨೨). ಇವರು ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಹೆಂಗಸರು ವ್ಯವಸಾಯದ ಜೊತೆಗೆ ಪಶುಸಂಗೋಪನೆ, ಉರುವಲು ಸಂಗ್ರಹಣೆ, ಮುಂತಾದ ಕಾರ್ಯಮಾಡುತ್ತಾರೆ. ಮನೆಯ ಸಾಮಗ್ರಿಗಳನ್ನು ಸಂಗ್ರಹಿಸುವಲ್ಲಿ ಹೆಂಗಸರ ಪಾತ್ರವೇ ಪ್ರಮುಖ. ಹೆಂಗಸರು ಸಾಮಾಜಿಕ ಕಾರ್ಯಕ್ರಮಗಳಲ್ಲಿ, ಧಾರ್ಮಿಕ ಆಚರಣೆಗಳಲ್ಲಿ, ಹಬ್ಬಗಳಲ್ಲಿ, ತುಂಬ ಮುಖ್ಯ ಪಾತ್ರ ವಹಿಸುತ್ತಾರೆ.

ಸಂಗೀತ ನುಡಿಸುವುದು, ಬೇಟೆಯಾಡುವುದು, ಇವರ ಸಾಂಪ್ರದಾಯಿಕ ಕಸಬು. ಇವರು ಸಂಗೀತಗಾರರಾಗಿ, ವ್ಯವಸಾಯದ ಕೂಲಿಗಳಾಗಿ ದುಡಿಯುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಬುಟ್ಟಿ ಹೆಣೆಯುತ್ತಾರೆ ಹಾಗೂ ಕಾಡಿನಿಂದ ಜೇನು ಸಂಗ್ರಹಿಸುತ್ತಾರೆ. ಪರಂಪರಾಗತವಾಗಿ ಸಮುದಾಯದ ಒಡೆಯನನ್ನು ‘ಯಜಮಾನ’ ಕೊಲ್ಕಾರ ಅಥವಾ ಬುದ್ಧಿವಂತರೆಂದು ಕರೆಯುತ್ತಾರೆ. ಪ್ರತಿ  ಹುಣ್ಣಿಮೆಯ ದಿನ ಎಲ್ಲರೂ ಸೇರಿ ತಮ್ಮ ಕೋಮಿನ ಜಗಳಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಇವರಿಗೆ ಶ್ರೀಮಂತ ಜಾನಪದ ಹಿನ್ನಲೆಯಿದೆ. ಕುಟುಂಬ ಯೋಜನೆಯನ್ನು ಒಪ್ಪಿಕೊಳ್ಳುವತ್ತ ಒಲವು ತೋರಿದ್ದಾರೆ. ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಪ್ರಯೋಜನವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಇವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.