ಗುರುವೆ ನಿಮ್ಮ ಕರುಣದಿಂದೆ ಅರುವನು ತೋರಿಸಿದೆ
ಪರಮನಿರುವ ನೆಲೆಯನು ತೋರಿ
ಪರಿಭವ ದುಃಖವ ಅರಿಸಿದೆ ಮಂದಮತಿಯನು

ಬಿಡಿಸಿ ಗೋವಿಂದನ ತೊರಿಸಿದೆ
ಇಂದಿರ ರಮಣನ ಸುಂದರ ಪಾದಕೆ
ವಂದನೆ ಮಾಡಿಸಿದೆ ಕಪಿಯನು ಕಟ್ಟಿಸಿ
ಜಪವನು ಮಾಡಿಸಿ ಸುಖವನು ತೋರಿಸಿದೆ

ಅಪರಿಮಿತಾರಾಮ ತಾರಕ ಮಂತ್ರದಿಂದ
ಜಪವನೆ ಮಾಡಿಸಿದೆ ಮನನವ ಮಾಡಿಸಿದೆ
ನಾಟಿ ಮನಸಿಗೆ ತ್ರಿಕೂಟದ ಮಧ್ಯದಿ ಪೇಟೆಯ
ತೋರಿಸಿದೆ ನಾಟಿಯಿಲ್ಲದಿಹ ಅಮೃತ ಕೊಳದೊಳು
ಊಟವ ಮಾಡಿಸಿದೆ ಮನನವ ಮಾಡಿಸಿ
ಜನನವ ತಪ್ಪಿಸಿ ಘನಸುಖ ತೋರಿಸಿದೆ

ಈತನು ವಿನೋಳಿಹ ಚಿನುಮಯವನು ತೋರಿ
ಮನವನೆ ನಿಲ್ಲಿಸಿದೆ ಯೋಗಗಳೆಂಟನು ಮೀರಿದ
ಮಹಶಿವ ಯೋಗವ ತೋರಿಸಿದೆ
ನಾಗಾಶಯನ ಗುರು ಶಂಭುಲಿಂಗನೆ
ಭವಸಾಗರ ಧಾಟಿಸಿದೆ || ಗುರುವೆ ||