ದೂರ

ತಾಲೂಕಿನಿಂದ : ೪ ಕಿ.ಮೀ.
ಜಿಲ್ಲೆಯಿಂದ: ೭೯ ಕಿ.ಮೀ.

ಜಮಖಂಡಿ

ಜಮಖಂಡಿ ಅರಮನೆಯನ್ನು ೧೮೫೩ ರಲ್ಲಿ ಅಧಿಕಾರಕ್ಕೆ ಬಂದ ರಾಮಚಂದ್ರರಾವ್‌ ಅಪ್ಪಾಸಾಹೇಬ ಪಟವರ್ಧನನು ಕಟ್ಟಿಸಿದನು.

ಈ ಕಟ್ಟಡವನ್ನು ಉತ್ತಮ ವಾಸ್ತುಶಿಲ್ಪದ ಪ್ರತೀಕವಾಗಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಸುಮಾರು ೨೦೦ ಎಕರೆ ವಿಶಾಲವಾದ ಎತ್ತರವಾದ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ಅರಮನೆಯು ಇಂಡೋಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿತವಾಗಿದ್ದು, ಮುಂಭಾಗದ ಮೂಲೆಯಲ್ಲಿ ಎತ್ತರವಾದ ಮಿನಾರ ಆಕಾರದ ಗೋಪುರವಿದ್ದು, ಮಧ್ಯದಲ್ಲಿ ಗಡಿಯಾರ ಸಹಿತ ಗೋಪುರವನ್ನು ರಚಿಸಲಾಗಿದೆ. ಎರಡು ಅಂತಸ್ತಿನ ಈ ಕಟ್ಟಡವು ಕೆಳಗೆ ವಿಶಾಲವಾದ  ಮೊಗಸಾಲೆ ಪಡಸಾಲೆ ಹಾಗೂ ವರಾಂಡಗಳನ್ನು ಹೊಂದಿದ್ದು ಗಾರೆಯಿಂದ ಆಕರ್ಷಕವಾಗಿ ನಿರ್ಮಿಸಲಾಗಿದೆ. ನೆಲಕ್ಕೆ ವಿದೇಶದಿಂದ ತರಿಸಲಾದ ಹೊಳಪು ಬಿಲ್ಲೆಗಳಿಂದ ಅಲಂಕಾರ ಮಾಡಲಾಗಿದೆ. ಮಧ್ಯದ ಬೃಹತ್ ಕಟ್ಟಡದ ಮಧ್ಯದಲ್ಲಿರುವ ನೀರಿನ ಕೊಳ ತೆರೆದ ತೊಟ್ಟಿಯ ಆಕಾರದಲ್ಲಿದೆ. ಮೇಲ್ಭಾಗದ ಕೊಠಡಿಗಳು ರಾಜನ ವ್ಯಕ್ತಿಯಂತೆ ಜೀವನಕ್ಕೆ ಸಂಬಂಧಿಸಿದ್ದು ಗೋಡೆಗಳಿಗೆ ಬಣ್ಣದ ಚಿತ್ತಾರದ ಹೂಬಳ್ಳಿಗಳ ಅಲಂಕಾರವಿದೆ. ಈ ಅರಮನೆಯು ಖಾಸಗಿ ಆಸ್ತಿಯಾಗಿದ್ದು ಸಂರಕ್ಷಣೆಯಿಲ್ಲದೇ ಸೊರಗುತ್ತಿದೆ.

 

ಸಮೀರವಾಡಿ ಸಕ್ಕರೆ ಕಾರ್ಖಾನೆ ಮುಧೋಳ

ದೂರ:
ತಾಲೂಕಿನಿಂದ: ೨೮ ಕಿ.ಮೀ.
ಜಿಲ್ಲೆಯಿಂದ: ೮೮ ಕಿ.ಮೀ.

 ಸಮೀರವಾಡಿ ಸಕ್ಕರೆಯ ಗ್ರಾಮವಾಗಿದೆ. ಸಮೀರ ಎಂಬುದು ವಾಚಕನಾಮ, ವಾಡಿ ಎಂದರೆ ಪ್ರದೇಶ ಎಂಬರ್ಥ. ಅದರ ಬಳಿ ಸೋಮಯ್ಯ ಎಂಬ ಖ್ಯಾತ ಉದ್ಯಮಿ ಸ್ಥಾಪಿಸಿದ ಗೋದಾವರಿ ಸಕ್ಕರೆ ಕಾರ್ಖಾನೆ ಪ್ರದೇಶಕ್ಕೆ ಸಮೀರವಾಡಿ ಎಂದು ನಾಮಕರಣ ಮಾಡಲಾಗಿದ್ದು, ಕೂಡ ಅರ್ಥಪೂರ್ಣವಾಗಿದೆ. ದೇಶದ ಬಹುದೊಡ್ಡ ಸಕ್ಕರೆ ಕಾರಖಾನೆಗಳಲ್ಲಿ ಇದು ಒಂದಾಗಿದೆ. ಮುಧೋಳದಲ್ಲಿ ೩ ಸಕ್ಕರೆ ಕಾರಖಾನೆಗಳು ೧ ಸಿಮೆಂಟ್ ಕಾರಖಾನೆ ಇದ್ದು, ಕೃಷಿ ಅಭಿವೃದ್ಧಿಯನ್ನು ಹಾಗೂ ಡೋಲೋಮೈಟಿಕ್ ಎಂಬ ಸುಣ್ಣದ ಕಲ್ಲು ಸಿಗುವುದರಿಂದ ಸಿಮೆಂಟ್ ಉದ್ಯಮಕ್ಕೆ ಬೇಕಾಗುವ ಸಂಪನ್ಮೂಲ ಕುರಿತು ತಿಳಿಸುತ್ತದೆ. ಒಟ್ಟಾರೆಯಾಗಿ ಸಕ್ಕರೆ ನಾಡು, ಸುಣ್ಣದ ಬೀಡು ಎಂದು ಹೇಳಬಹುದಾಗಿದೆ.

ಗೋದಾವರಿ ಶುಗರ್‌ ಮಿಲ್ಸ್‌ ಲಿಮಿಟೆಡ್‌ನ ಸಕ್ಕರೆ ಕಾರ್ಖಾನೆಗೆ ಸಮೀರವಾಡಿ ಸಕ್ಕರೆ ಕಾರ್ಖಾನೆ ಎಂದೂ ಹೆಸರಿದೆ. ಈ ಕಾರ್ಖಾನೆ ಸಮೀರವಾಡಿಯ ಸಮೀಪ ಇರುವುದರಿಂದಲೂ ಹೀಗೆ ಕರೆಯುತ್ತಾರೆ. ೧೯೭೨ ರಲ್ಲಿ ಸ್ಥಾಪನೆಯಾದ ಈ ಕಾರ್ಖಾನೆಗೆ ಬಾಗಲಕೋಟೆ, ಬಿಜಾಪೂರ ಹಾಗೂ ಬೆಳಗಾವಿ ಜಿಲ್ಲೆಯ ರೈತರು ಕಬ್ಬು ಸರಬರಾಜು ಮಾಡುತ್ತಾರೆ. ೧೯೯೬-೯೭ ರ ಅಂಕಿ ಅಂಶಗಳ ಪ್ರಕಾರ ಈ ಕಾರ್ಖಾನೆ ೧.೩೭ ಲಕ್ಷ ಮೆಟ್ರಿಕ್ ಟನ್‌ ಸಕ್ಕರೆ ಉತ್ಪಾದಿಸಿತ್ತು, ಗೋದಾವರಿ ಶುಗರ್‌ ಮಿಲ್ಸ್‌ನ ಉತ್ಪಾದನಾ ಸಾಮರ್ಥ್ಯ ೬೦೦೦ ಟಿ.ಸಿ.ಡಿ. ಆಗಿದೆ. ೧೯೯೭ ರಲ್ಲಿಯೇ ಈ ಕಾರ್ಖಾನೆ ೯೨೨ ಜನ ಉದ್ಯೋಗ ನೀಡಿದ್ದು ಈಗ ಇದು ಹೆಚ್ಚಾಗಿರುವ ಸಾಧ್ಯತೆ ಇದೆ.

 

ಸೌರಗ್ರಾಮ ತಮದಡ್ಡಿ

ದೂರ:
ತಾಲೂಕಿನಿಂದ: ೩೫ ಕಿ.ಮೀ.
ಜಿಲ್ಲೆಯಿಂದ: ೧೧೦ ಕಿ.ಮೀ.

 ಜಮಖಂಡಿ ತಾಲೂಕಿನ ಮುಳುಗಡೆ ಗ್ರಾಮವೆಂದೇ ಬಿಂಬಿತವಾಗಿರುವ ಇಲ್ಲಿಗೆ ಸಮೀಪದ ಕೃಷ್ಣೆಯ ತಟದಲ್ಲಿರುವ ತಮದಡ್ಡಿ ಇದೀಗ ಸೌರಗ್ರಾಮವಾಗಿ ಹೊರಹೊಮ್ಮಿದೆ. ಇದರ ಹಿಂದಿನ ಶಕ್ತಿಯಾಗಿ ಸ್ಥಳೀಯ ಸಿಂಡಿಕೇಟ್ ಬ್ಯಾಂಕ್ ಪಟ್ಟ ಶ್ರಮ ಕಾರಣವೆನ್ನಬಹುದು. ತಮದಡ್ಡಿ ಗ್ರಾಮದಲ್ಲಿ ಖಾಲಾ ವಿದ್ಯಾರ್ಥಿ/ನಿಯರು ಸೋಲಾರದೀಪಗಳ ಬೆಳಕಿನಲ್ಲಿ ಅಭ್ಯಾಸ ಕೈಗೊಂಡ ತುಂಬ ಸಂತಸ, ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಈ ಗ್ರಾಮದ ಮಹಿಳೆಯರು ಸೋಲಾರ್ ದೀಪಗಳ ಮಹತ್ವ ಅರಿತು ಇನ್ನಿತರರಿಗೆ ತಮ್ಮ ಬಂಧುಗಳಿಗೆ ಅಳವಡಿಸಿಕೊಳ್ಳಲು ತಿಳಿ ಹೇಳುತ್ತಿದ್ದಾರೆ.

 

***** ಶುಭ ಪ್ರವಾಸ ನಿಮ್ಮದಾಗಲಿ  *****