ಮಾನವ ಚಟುವಟಿಕೆಗಳು, ಬಹುಮಟ್ಟಿಗೆ ಪಳೆಯುಳಿಕೆ ಇಂಧನಗಲ ದಹಿಸುವಿಕೆ (ಹಸಿರುಮನೆ ಅನಿಲ ಉತ್ಪಾದಕಗಳು), ತೀವ್ರ ಬೇಸಾಯ ಮತ್ತು ಮರಕಡಿಯುವಿಕೆ (ಇಂಗಾಲದ ಡೈಆಕ್ಸೈಡ್‌ಹೀರಿಕೊಳ್ಳುವ ಭೂಮಿಯ ಸಾಮರ್ಥ್ಯವನ್ನು ಕಡಿಮೆ ಮಾಡುವಂತಹುದು) ಇವು ವಾತಾವರಣದಲ್ಲಿ ಹಸಿರು ಮನೆ ಅನಿಲ ಬಿಡುಗಡೆಗಳನ್ನು ಹೆಚ್ಚಿಸಿ, ಹಸಿರುಮನೆ ಪರಿಣಾಮಗಳನ್ನು ಹೆಚ್ಚಿಸುತ್ತಿವೆ.

ಜಾಗತಿಕ ತಾಪಮಾನ ಹೆಚ್ಚಳವು, ಹಸಿರುಮನೆ ಅನಿಲಗಳ ಬಿಡುಗಡೆಯಿಂದ ಮೇಲ್ಮೈ ತಾಪಮಾನದ ಹೆಚ್ಚಳದೊಂದಿಗೆ ಜೊತೆಗೂಡಿದ್ದು ಕಾಲಕ್ರಮೇಣ ಜಾಗತಿಕ ವಾತಾವರಣದ ತಾಪಮಾನವನ್ನು ಹೆಚ್ಚಿಸುತ್ತಿದೆ. ವಾತಾವರಣದ ಬದಲಾವಣೆಯು ಮೇಲ್ಮೈವಾಯು ಉಷ್ಣತೆ ಹಾಗೂ ಮಳೆ ಪ್ರಮಾಣಗಳನ್ನು ಕಾಲಕ್ರಮೇಣ ಬದಲಾಗುವುದನ್ನು ಸೂಚಿಸುತ್ತದೆ. ಪಳೆಯುಳಿಕೆ ಇಂಧನವನ್ನು ಉರಿಸುವುದರಿಂದ ಹಾಗೂ ಅದರಿಂದಾಗುವ ಭೂಮಿಯ ಮೇಲ್ಮೈನ ತಾಪಮಾನ ಏರುವಿಕೆಯಿಂದ ವಾತಾವರಣದಲ್ಲಿ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್‌ಪ್ರಮಾಣ ಶೀಘ್ರವಾಗಿ ಹೆಚ್ಚಾಗುತ್ತಿರುವುದರಿಂದ ಹವಾಮಾನದಲ್ಲಿ ವಯಪರೀತ್ಯತೆ ಉಂಟಾಗುತ್ತಿದೆ. ಕೃಷಿಯು ಹವಾಗುಣದೊಂದಿಗೆ ತೀವ್ರ ತೆರನಾಗಿ ಪರಸ್ಪರ ಸಂಬಂಧಿತವಾಗಿದೆ. ವಾತಾವರಣದ ಅಂಶಗಳಲ್ಲಿ ಮುಖ್ಯ ಅಂಶವಾದ ಉಷ್ಣಾಂಶ ಅಥವಾ ತಾಪಮಾನವು ಕೃಷಿ ಉತ್ಪಾದನೆಯೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಹಸಿರುಮನೆ ಅನಿಲ ಪರಿಣಾಮಗಳು, ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯ ಮತ್ತು ನೆರೆ, ಬರಗಾಲಗಳಂತಹ ಹವಾಮಾನ ವೈಪರೀತ್ಯ ಪರಿಣಾಮಗಳು ಮತ್ತು ಜಾಗತಿಕ ಆಹಾರ ಉತ್ಪಾದನೆ, ಹವಾಮಾನ ವೈಪರೀತ್ಯದಲ್ಲಿ ಓಜೋನ್‌ಪಾತ್ರ, ನೈಸರ್ಗಿಕ ಸಂಪನ್ಮೂಲಗಳ ಶಿಥಿಲೀಕರಣ ಇತ್ಯಾದಿ ವಿಷಯಗಳ ಸಾಮಾನ್ಯ ಅಂಶಗಳನ್ನು ಕುರಿತು ಮೊದಲನೇ ಮತ್ತು ಎರಡನೇ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ. ಮೂರನೇ ಅಧ್ಯಾಯದಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಹವಾಮಾನ, ಆಹಾರ ಉತ್ಪಾದನೆ, ಬೆಳೆ ಬದಲಾವಣೆ ಮಾಡುವಿಕೆ, ತಾಪಮಾನ ಹೆಚ್ಚಳ ಬಗ್ಗೆ ಮಾಹಿತಿ ನೀಡಲಾಗಿದೆ. ಹವಾಮಾನದಲ್ಲಿ ಉಂಟಾಗುವ ವ್ಯತ್ಯಾಸಗಳಿಗೆ ಅನುಗುಣವಾಗಿ ಕರ್ನಾಟಕದಲ್ಲಿ ಬೆಳೆ ಪದ್ಧತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವಿಕೆ ಬಗ್ಗೆ ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಮಳೆ ಪ್ರಮಾಣದಲ್ಲಿನ ಬದಲಾವಣೆಗಳು ಮತ್ತು ತಾಪಮಾನದಲ್ಲಿ ಇಳಿಮುಖವಾಗುವಿಕೆಗಳಿಂದ ಈಗಾಗಲೇ ಬೆಳೆ ಪದ್ಧತಿಗಳಲ್ಲಿ ಬದಲಾವಣೆಗಳನ್ನು ತರಲಾಗಿದೆ. ಕೃಷಿ ಹವಾಮಾನ ಸಲಹಾ ಸೇವೆಗಳ ಯಶೋಗಾಥೆಗಳನ್ನು ಸಹ ಸೂಚಿಸಲಾಗಿದೆ. ನಾಲ್ಕನೇ ಅಧ್ಯಾಯದಲ್ಲಿ ಬರಗಾಲ ನಿರ್ವಹಣೆ ತಂತ್ರಗಳಲು ಮತ್ತು ಹೊಂದಾಣಿಕೆ ಹಾಗೂ ಹವಾಮಾನ ವೈಪರೀತ್ಯಗಳ ಪರಿವರ್ತನೆಗಳ ಬಗ್ಗೆ ಚರ್ಚಿಸಲಾಗಿದೆ.

ಈ ತಾಂತ್ರಿಕ ಪುಸ್ತಕ ಹೊರತರುವಲ್ಲಿ ಡಾ. ಪಿ.ಜಿ. ಚಂಗಪ್ಪ, ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರ ಮಾರ್ಗದರ್ಶನ ಮತ್ತು ನೆರವಿಗೆ ಲೇಖಕರು ಆಭಾರಿಯಾಗಿದ್ದಾರೆ. ಡಾ. ಜಿ.ಜಿ.ಎಸ್‌.ಎನ್‌. ರಾವ್‌, ಪ್ರಾಯೋಜನೆ ಸಂಯೋಜಕರು, ಕೃಷಿ ಹವಾಮಾನಶಾಸ್ತ್ರ ಕುರಿತ ಎಐಸಿಆರ್ ಪಿ, CRIDA, ಹೈದರಾಬಾದ್‌ಇವರು ನೀಡಿದ ಪ್ರೋತ್ಸಾಹಕ್ಕಾಗಿ ಇವರಿಗೂ ಕೂಡ ಲೇಖಕರು ಆಭಾರಿಯಾಗಿದ್ದಾರೆ.

ಡಾ.ಎಂ.ಬಿ. ರಾಜೇಗೌಡ
ಡಾ.ಎನ್‌.. ಜನಾರ್ದನಗೌಡ
ಡಾ.ಟಿ.ಕೆ. ಪ್ರಭಾಕರ ಶೆಟ್ಟಿ