ಮಿತಿಮೀರಿದ ಪ್ರಮಾಣದಲ್ಲಿ ಏರುತ್ತಿರುವ ಜಾಗತಿಕ ತಾಪಮಾನವನ್ನು ತಡೆಗಟ್ಟುವ ಕುರಿತಾಗಿ ವಿಶ್ವದಾದ್ಯಂತ ಇಂದು ತೀವ್ರವಾದ ಚರ್ಚೆ ನಡೆಯುತ್ತಿದ್ದು ವಿಶ್ವ ಶೃಂಗ ಸಭೆಯಲ್ಲಿ ಇನ್ನೂ ಹಲವು ಮಲುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿದೆ. ಹಾಗೆಯೇ ಪ್ರತಿಯೊಬ್ಬರೂ ಕೂಡ ತಮ್ಮ ಬದುಕಿನ ಪರಿಸರ ಸಂರಕ್ಷಣೆಯನ್ನು ಹೊಣೆಗಾರಿಕೆಯಾಗಿ ಕೈಗೊಂಡಾಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ನಾವು ಬದುಕುಳಿಯುವಂತಹ ಪರಿಸರವನ್ನು ಉಳಿಸಿಕೊಡಲು ಸಾಧ್ಯ. ಈ ದಿಸೆಯಲ್ಲಿ ಪ್ರಸ್ತುತ ಕಿರುಕೃತಿಯಲ್ಲಿ ಜಾಗತಿಕ ತಾಪಮಾನದ ಏರಿಕೆ ದೃಷ್ಟಿಯಲ್ಲಿ ಭಾರತದಲ್ಲಿ ಮತ್ತು ನಿರ್ದಿಷ್ಟವಾಗಿ ಕರ್ನಾಟಕದ ಪ್ರದೇಶಗಳಿಗೆ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಪರಿಸರ ಕಾಳಜಿಯ ವಿವಿಧ ಮಜಲುಗಳನ್ನು ಪರಿಚಯಿಸಲಾಗಿದೆ.

ಪ್ರಸ್ತುತ ಅನುವಾದ ಕೃತಿಯ ಭಾಷಾಂತರ ಪರಿಶೀಲನಾ ಕಾರ್ಯವನ್ನು ಕೃತಿಯ ಮೂಲ ಲೇಖಕರಲ್ಲಿಲ ಒಬ್ಬರಾದ ಡಾ. ಎಂ.ಬಿ. ರಾಜೇಗೌಡರವರು ನಿರ್ವಹಿಸಿದ್ದಾರೆ. ಈ ತಾಂತ್ರಿಕ ಕೃತಿಯ ಕನ್ನಡ ಆವೃತ್ತಿಯನ್ನು ಪ್ರಕಟಿಸಲು ಮಾನ್ಯ ಕುಲಪತಿಗಳಾದ ಡಾ. ಪಿ.ಜಿ. ಚಂಗಪ್ಪ ಹಾಗೂ ವಿಸ್ತರಣಾ ನಿರ್ದೇಶಕರಾದ ಡಾ. ಆರ್.ಎಸ್‌. ಕುಲಕರ್ಣಿಯವರು ನೀಡಿದ ಪ್ರೋತ್ಸಾಹ ಮತ್ತು ಬೆಂಬಲಗಳಿಗಾಗಿ ಅವರಿಗೆ ಆದರದ ಕೃತಜ್ಞತೆಗಳು ಸಲ್ಲುತ್ತವೆ.

ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯ ಕೃಷಿಯ ಮೇಲೆ ಬೀರುವ ಪರಿಣಾಮಗಳು ಪುಸ್ತಕವು ಎಲ್ಲ ಕೃಷಿ ವಿದ್ಯಾರ್ಥಿಗಳು, ಬೋಧಕರು,  ಸಂಶೋಧಕರು, ರೈತರು ಮತ್ತು ಪರಿಸರ ಕಾಳಜಿಯ ಆಸಕ್ತರಿಗೆಲ್ಲ ಉಪಯುಕ್ತವಾಗುವುದೆಂದು ಉದ್ದೇಶಿಸಲಾಗಿದೆ.

ಡಾ. ಉಷಾಕಿರಣ್‌
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಹಾಗೂ
ಕನ್ನಡ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ
ಕನ್ನಡ ಅಧ್ಯಯನ ವಿಭಾಗ
ವಿಸ್ತರಣ ನಿರ್ದೇಶನಾಲಯ
ಕೃಷಿ ವಿಶ್ವವಿದ್ಯಾನಿಲಯ
ಬೆಂಗಳೂರು – ೫೬೦೦೨೪.