ಡಾ.ಬಿ.ಎಸ್‌.ಗದ್ದಗಿಮಠ ಅವರು ರಚಿಸಿದ ಕೃತಿಗಳು ಈ ಕೆಳಗಿನಂತಿವೆ.

೧. ನಾಲ್ಕು ನಾಡಪದಗಳು
(ಜಾನಪದ ಕಾವ್ಯಮಾಲೆಯ ಮೂಲಕ ಪ್ರಕಟವಾಗಿದೆ).
(೧೯೫೨)
೨. ಕಂಬಿಯ ಹಾಡುಗಳು (೧೯೫೫)
೩. ಜನತಾ ಗೀತೆಗಳು (೧೯೫೬)
೪. ಕುಮಾರರಾಮನ ದುಂದುಮೆ ಪದ
(ಜನಪದ ಕಾವ್ಯಮಾಲೆಯ ಪ್ರಕಟಣೆ)
(೧೯೫೬)
೫. ಮಲ್ಲಮಲ್ಲಾಣಿ (ಜನಪದ ಕಾವ್ಯಮಾಲೆಯ ಪ್ರಕಟಣೆ) (೧೯೫೬)
೬. ಲೋಕಗೀತೆಗಳು (ಮೈಸೂರ ರಾಜ್ಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಇಲಾಖೆಯ ಪ್ರಕಟಣೆ). (೧೯೬೦)
೭. ಕನ್ನಡ ಜಾನಪದ ಗೀತೆಗಳು
(ಮಹಾಪ್ರಬಂಧ ಕ.ವಿ.ವಿ. ಪ್ರಕಟಣೆ)
(೨೯೬೩)
೮. ಜಾನಪದ ಗೀತೆಗಳು (೧೯೬೩)
೯. ಗದ್ದಗಿಮಠರ ಬರಹಗಳು (ಮೈ.ವಿ.ವಿ. ಪ್ರಕಟಣೆ)  
‘ಕರ್ನಾಟಕ ಜಾನಪದ ದರ್ಶನ’ ಎಂಬ ಗದ್ದಗಿಮಠ ಅವರು ಇಟ್ಟಿರುವ ಮೂಲ ಹೆಸರನ್ನು ‘ಗದ್ದಗಿಮಠರ ಬರಹಗಳು’ ಎಂದು ಮೈ.ವಿ.ವಿ. ದವರು ಬದಲಾವಣೆ ಮಾಡಿಕೊಂಡಿದ್ದಾರೆ.  
೧೦. ಭಾವಗೀತೆಗಳು ಅಪ್ರಕಟಿತ ಕೃತಿ.
೧೧. ಮಹಾಭಾರತ ಅಪ್ರಕಟಿತ ಕೃತಿ.

ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿರುತ್ತವೆ. ಲೋಕಗೀತೆಗಳು ಇದು ಉತ್ತಮ ಕವನ ಸಂಕಲನವೆಂದು ಪ್ರಶಸ್ತಿ ಪಡೆದಿರುತ್ತದೆ. ಇವರ ಮೇರು ಕೃತಿ “ಕನ್ನಡ ಜಾನಪದ ಗೀತೆಗಳು”, ಇದು ಗದ್ದಗಿಮಠ ಅವರ ಅಮೂಲ್ಯ ಕೃತಿರತ್ನವಾಗಿರುತ್ತದೆ, ಅಲ್ಲದೆ ಅನೇಕ ಕೃತಿಗಳು ಅಪ್ರಕಟಿತವಾಗಿಯೇ ಉಳಿದಿರುತ್ತವೆ. ಅವು ಈ ಕೆಳಗಿನಂತಿವೆ:

೧. ಜಾನಪದ ಸಂಭಾರ ಭಾಗ-೧

೨. ಜಾನಪದ ಸಂಭಾರ ಭಾಗ-೨

೩. ಶಿವಶರಣರ ಹಂತಿಯ ಹಾಡುಗಳು.

೪. ಜಾನಪದ ಮಹಾಭಾರತ.

೫. ಜಾನಪದ ಭಾವಗೀತೆಗಳು.

೬. ಕಲ್ಯಾಣ ಬಸವನ ಹಾಡು.

೭. ಜಾನಪದ ಶಬ್ದಕೋಶ.

೮. ಕಾಯಕ ಗೀತೆಗಳು.

೯. ಜಾನಪದ ರಾಮಾಯಣ.

೧೦. ನಾಣ್ಣುಡಿಗಳ ಕೋಶ. (ಅರ್ಧವಾಗಿದೆ)

ಈ ಮೊದಲಾದ ಅಮೂಲ್ಯ ಕೃತಿರತ್ನಗಳು ಪ್ರಕಟಿಸುವ ಹೊಣೆಗಾರರನ್ನು ಕಾಯುತ್ತಲಿವೆ.