ಕರಿರಾಯ ದಿನ ದಿನಕ್ಕೆ ಶುಕ್ಲಪಕ್ಷದ ಚಂದ್ರನೆಂತೆ ಬೆಳೆಯಲಾರಂಭಿಸಿದ. ಬನವಂತಾದೇವಿ ತನ್ನ ಮಗನ ಅಭ್ಯುದಯ ನೋಡಿ ಹಿಗ್ಗಿದಳು. ಪದ್ಧತಿಯಂತೆ ಅವನಿಗೆ ಕ್ಷತ್ರಿಯೋಚಿತ ವಿದ್ಯೆಯನ್ನು ಕಲಿಸಲಾಯಿತು. ಕುದುರೆಸವಾಗಿ, ಬಿಲ್ಲುಬಾಣ ಮತ್ತು ಚಂದ್ರಾಯುಧಗಳ ಪ್ರಯೋಗ ಅವನಿಗೆ ಕರಗತವಾದವು. ಯುದ್ಧ ತಂತ್ರದಲ್ಲಿ ಕರಿರಾಯನನ್ನು ಮೀರಿಸುವವರಿಲ್ಲ. ಅವನು ತನ್ನ ಜೊತೆಗಾರರನ್ನು ಒಂದೇ ಹೊಡೆತಕ್ಕೆ ಉರುಳಿಸಿ ಬಿಡುತ್ತಿದ್ದನು. ಹೀಗೆಯೇ ಕರಿರಾಯ ಪ್ರಾಪ್ತವಯಸ್ಕನಾಗುತ್ತಿದ್ದನು. ಬನವಂತಾದೇವಿ ಅಧಿಕಾರವನ್ನು ಮಗನಿಗೆ ವಹಿಸಿ ತಾನು ನಿಶ್ಚಿಂತೆಯಾಗಿರಬೇಕೆಂದು ಯೋಚಿಸುತ್ತಿದ್ದಳು. ಆಗ ಒಂದು ದಿನ ಅನಿರೀಕ್ಷಿತ ಘಟನೆಯೊಂದು ನಡೆಯಿತು. ಎಂದಿನಂತೆ ಕರಿರಾಯ ತನ್ನ ಜೊತೆಯವರನ್ನು ಸೋಲಿಸುತ್ತಾ ನಡೆದಿದ್ದ. ಆತನ ಕೋಪಿಯಾದ ಸಹಪಾಠಿಯೊಬ್ಬ “ನಾನೇನು ನಿನ್ನ ಹಾಗೆ ಅಪ್ಪ ಸತ್ತ ಮೇಲೆ ಹುಟ್ಟಿದವನಲ್ಲ” ಎಂದುಬಿಟ್ಟ. ಕರಿರಾಯನಿಗೆ ಬಹಳ ಅವಮಾನವಾಯಿತು. ಅವನು ನೇರವಾಗಿ ಅರಮನೆಗೆ ಹೊರಟುಬಿಟ್ಟ.

ಚಿಕ್ಕಂದಿನಿಂದಲೂ ತನ್ನ ತಂದೆಯನ್ನು ತೋರಬೇಕೇಂದು ಕರಿರಾಯ ತಾಯಿ ಬನವಂತೆಯನ್ನು ಪೀಡಿಸುತ್ತಿದ್ದ. ಆಕೆ ತನ್ನ ದುಃಖವನ್ನು ತಡೆದು “ನಿನ್ನ ತಂದೆ ದೂರ ದೇಶಕ್ಕೆ ಯುದ್ಧಕ್ಕೆ ಹೋಗಿದ್ದಾರೆ. ಇನ್ನೇನು ಬಂದುಬಿಡುತ್ತಾರೆ” ಎಂದೇ ಹೇಳಿಕೊಂಡು ಬಂದಿದ್ದಳು. ತನ್ನ ತಂದೆ ಬಂದ ಕೂಡಲೇ ತನ್ನ ಶೌರ್ಯವನ್ನು ತೋರಿಸಬೇಕೆಂಬುದು ಕರಿರಾಯನ ಆಸೆಯಾಗಿತ್ತು. ಆದುದರಿಂದಲೇ ತಾನು ತಂದೆ ಸತ್ತ ಮೇಲೆ ಹುಟ್ಟಿದವನೆಂದು ಸಹಪಾಠಿ ಹೇಳಿದಾಗ ಅವನಿಗೆ ದಿಗ್ಭ್ರಮೆಯಾಯಿತು. ಅರಮನೆಗೆ ಬಂದವನೆ ತಾಯಿಯನ್ನು ಕಂಡು ಸಹಪಾಠಿ ಅಂದ ಮಾತನ್ನು ಆಕೆಗೆ ಹೇಳಿದ. ಆಗ ಬನವಂತಾದೇವಿ ಮಾರಭೂಪಾಲ ಹುಲಿ ಬೇಟೆಗೆ ಹೋಗಿ ಮಡಿದ ಕಥೆಯನ್ನು ಮಗನಿಗೆ ಸವಿಸ್ತಾರವಾಗಿ ಹೇಳಿದಳು.

ತನ್ನ ತಂದೆಯನ್ನು ಕೊಂದ ಹುಲಿಯನ್ನು ಏನೇ ಆದರೂ ಕೊಂದೇ ತೀರಬೇಕೆಂದು ಕರಿರಾಯ ನಿರ್ಧರಿಸಿದ. ಇರುವ ಒಬ್ಬನೇ ಮಗ ಎಲ್ಲಿ ಹುಲಿಬಾಯಿಗೆ ತುತ್ತಾಗುವನೋ, ಅಲ್ಲದೆ ಅವನಿನ್ನೂ ಚಿಕ್ಕವನು ಎಂದು ಯೋಚಿಸಿ ಬನವಂತಾದೇವಿ ಪರಿಪರಿಯಾಗಿ ಬೇಡಿಕೊಂಡಳು. ಆದರೆ ಕರಿರಾಯ ಕೇಳಲಿಲ್ಲ. “ಅಮ್ಮ, ಅಪ್ಪನನ್ನು ಕೊಂದ ಹುಲಿಯನ್ನು ಕೊಲ್ಲದೆ ನಾನು ಅನ್ನ ನೀರು ಮುಟ್ಟುವವನಲ್ಲ. ಇದು ನಿನ್ನಾಣೆ. ಅಪ್ಪನ ಕುದುರೆ, ಅದರ ಜೀನುಗಲು, ಬಿಲ್ಲುಬಾಣ ಎಲ್ಲಿದೆ ತೋರಿಸು” ಎಂದು ಒತ್ತಾಯಿಸಿದ. ಬನವಂತಾದೇವಿ ಬೇರೆ ದಾರಿಯೇ ಉಳಿಯಲಿಲ್ಲ. ದೇವರು ಮಾಡಿದಂತಾಗಲಿ. ಅವನ ಶೌರ್ಯಕ್ಕೆ ನಾನೇಕೆ ಅಡ್ಡಿಯಾಗಬೇಕೆಂದು ಮಾರಭೂಪಾಲನ “ಪಂಚ ಕಲ್ಯಾಣಿ” ಎಂಬ ಐದು ಲಕ್ಷಣಗಳ ಕುದುರೆ ಅದಕ್ಕೆ ಹಾಕುತ್ತಿದ್ದ ಚಿನ್ನದ ಜೀನು, ಬಿಲ್ಲು ಬತ್ತಳಿಕೆಗಳನ್ನು ತೆಗೆಸಿಕೊಟ್ಟಳು. ಕರಿರಾಯ ತಾಯಿಯ ಆಶೀರ್ವಾದ ಪಡೆದು ಚಿತ್ರಕಲ್ಲುದುರ್ಗದತ್ತ ಹೊರಟನು. ಚಿತ್ರಕಲ್ಲುದುರ್ಗ ರಾಜ್ಯದ ಜನರಿಗೆ ಹುಲಿಯ ಅವಾಂತರ ತಾಳದಾಗಿತ್ತು. ರಾತ್ರಿ ಇರಲಿ, ಹಗಲು ಸಹ ಮನೆಯಿಂದ ಹೊರಗೆ ಬರುವಂತಿರಲಿಲ್ಲ. ಹುಲಿ ನಗರದ ಬೀದಿಗಳಿಗೆ ಬರಲಾರಂಭಿಸಿತ್ತು. ರಾಜ ದಾರಿಗಾಣದೆ ಹುಲಿಯನ್ನು ಕೊಂದವರಿಗೆ ಅರ್ಧರಾಜ್ಯ ಕೊಡುವುದರ ಜೊತೆಗೆ ತನ್ನ ಮಗಳು ಲೀಲಾವತಿಯನ್ನೂ ಕೊಟ್ಟು ಮದುವೆ ಮಾಡುವುದಾಗಿ ಡಂಗುರ ಸಾರಿದ್ದನು. ಇತ್ತ ಧಾರಾಪುರದಿಂದ ಹೊರಟ ಕರಿರಾಯ ತಂದೆ ವಿಶ್ರಮಿಸಿದ್ದ ಅರಳಿಮರ ಮತ್ತು ಕಲ್ಯಾಣಿಯನ್ನು ತಲುಪಿದನು. ಅಲ್ಲಿಯೇ ತನ್ನ ಕುದುರೆಯನ್ನು ಬಿಟ್ಟು ಕೈಯಲ್ಲಿ ಚಂದ್ರಾಯುಧ ಹಿಡಿದು ಕಾಡೊಳಗೆ ಹುಲಿಯನ್ನು ಅರಸುತ್ತಾ ಹೋದನು. ಹುಲಿ ಎಂದಿನಂತೆ ಅದೇ ಕಾಡುಸೀಗೆ ಮೆಳೆಯೆ ಅಡಿಯಲ್ಲಿ ಮಲಗಿ ನಿದ್ರಿಸುತ್ತಿತ್ತು. ಅದನ್ನು ಕಂಡ ಕರಿರಾಯ “ನನ್ನ ತಂದೆಯನ್ನೂ, ಅನೇಕ ರಾಜಕುಮಾರರನ್ನೂ ಕೊಂದ ಹುಲಿಯೇ, ನಿನಗೆ ಅಂತ್ಯಕಾಲ ಬಂದಿದೆ, ಏಳು” ಎಂದು ಕಾಕು ಹೊಡೆದನು. ಕಾಕು ಕೇಳಿ ಅರೆನಿದ್ರೆಯಲ್ಲಿ ಎದ್ದ ಹುಲಿ ಘರ್ಜಿಸುತ್ತಾ ಕರಿರಾಯನ ಮೇಲೆ ನೆಗೆಯಿತು. ಅವನು ಕೂಡಲೆ ಚಂದ್ರಾಯುಧದಿಂದ ಹೊಡೆದ. ಹುಲಿ ಸತ್ತು ಭೂಮಿಗೆ ಉರುಳಿತು. ಕುರುಹಿಗಾಗಿ ಬಾಲ, ಉಗುರು ಮತ್ತು ಮುಸುಡಿಯ ತುದಿಯನ್ನು ಕುಯ್ದು ಕೆಂಪು ವಸ್ತ್ರದಲ್ಲಿ ಗಂಟು ಕಟ್ಟಿಕೊಂಡ ಕರಿರಾಯ. ತನ್ನ ಕುದುರೆಯನ್ನು ಹತ್ತಿ ಚಿತ್ರಕಲ್ಲುದುರ್ಗ ಪಟ್ಟಣದೊಳಗೆ ಹೋದ. ತುಂಬಾ ಅಯಾಸಗೊಂಡವನಾದ್ದರಿಂದ ಛತ್ರವೊಂದರಲ್ಲಿ ಮಲಗಿ ನಿದ್ರೆಹೋದ.

ಬೆಳಗಿನ ಝಾವ ಮೂಡ ಕೆಂಪೇರುತ್ತಿದೆ. ಅಷ್ಟು ಹೊತ್ತಿಗೆ ಅಗಸರ ತಿಮ್ಮಯ್ಯ ಬಟ್ಟೆ ಒಗೆಯಲು ತನ್ನ ಕತ್ತೆಗಳ ಮೇಲೆ ಕೊಳೆಬಟ್ಟೆ ಹೇರಿಕೊಂಡು ಹೊಳೆ ಕಡೆಗೆ ಹೊರಟಿದ್ದ. ಅವನಿಗೂ ಎಲ್ಲಿಲ್ಲದ ಭಯ. ಎಲ್ಲಿ ಹುಲಿ ಬಂದು ತನ್ನನ್ನು ತಿಂದುಬಿಟ್ಟೀತೋ ಎಂದು. ಆ ಕಾಡುಸೀಗೆ ಮೆಳೆಯ ಹತ್ತಿರ ಹೋಗುವಾಗಲಂತೂ ಅವನು ಸತ್ತೇಹೋಗುತ್ತಿದ್ದ. “ಏನು ಮಾಡುವುದು? ಈ ತಾಪೇದಾರಿಯೇ ಹೀಗೆ. ಬೇರೆಯವರ ಬಟ್ಟೆಗಳಾಗಿದ್ದರೆ ಒಗೆಯದೆ ಇರಬಹುದಾಗಿತ್ತು. ಅರಮನೆಯ ಬಟ್ಟೆಗಳು. ಅಲ್ಲಿ ರಾಜನ ಕಾಟ ಇಲ್ಲಿ ಹುಲಿಯ ಕಾಟ” ಎಂದು ಗೊಣಗುತ್ತಾ ಹೋಗುತ್ತಿದ್ದ. ಇದ್ದಕ್ಕಿದ್ದ ಹಾಗೆ ಅವನ ಕತ್ತೆಗಳು ಬೆದರಿ ಕಿರುಚುತ್ತಾ ಓಡಲಾರಂಭಿಸಿದವು. ತಿಮ್ಮಯ್ಯನ ಪ್ರಾಣ ಬಾಯಿಗೆ ಬಂತು. ಹುಲಿ ತನ್ನ ಮೇಲೆ ಹಾರಿತು ಎಂದೇ ಭಾವಿಸಿ ಹಾಗೆಯೇ ಮೂರ್ಛೆಹೋದ. ಬೆಳಕಿನ ತಂಪಿಗೆ ಎಚ್ಚರಾಯಿತು. ಎದ್ದು ನೋಡುತ್ತಾನೆ ಹುಲಿ ತನ್ನೆದುರಿಗೇ ಸತ್ತು ಬಿದ್ದಿದೆ. ಕೂಡಲೆ ಅವನಿಗೆ ರಾಜ್ಯ ಮತ್ತು ರಾಜಕುಮಾರಿಯ ನೆನಪಾಯಿತು. ಹುಲಿಯ ರಕ್ತವನ್ನು ತನ್ನ ಕೈಮೈ ಮತ್ತು ಬಟ್ಟೆಗಳಿಗೆ ಸವರಿಕೊಂಡು ಅರಮನೆಯತ್ತ ಓಡಿದ.

ಚಿತ್ರಕಲ್ಲುದುರ್ಗಕ್ಕೆ ಆರುಸುತ್ತಿನ ಕೋಟೆ. ಒಳಗಿನ ಮೂರು ಸುತ್ತು ಕಲ್ಲಿನ ಕೋಟೆ ಹೊರಗಿನ ಮೂರು ಸುತ್ತು ಮುಳ್ಳಿನ ಕೋಟೆ. ಇವುಗಳನ್ನು ಹಾಯ್ದು ಹೋದರೆ ಪೇಟೆ. ಮತ್ತೊಂದು ಕಡೆ ಸೈನ್ಯದ ವಸತಿ. ಇನ್ನೊಂದು ಕಡೆ ಜನರ ವಸತಿ ಇವುಗಳ ಮಧ್ಯಭಾಗದಲ್ಲಿ ಅರಮನೆ. ಅರಮನೆಗೆ ಬಿಚ್ಚುಗತ್ತಿಪಾರ. ಅಗಸರ ತಿಮ್ಮಯ್ಯ ಓಡುತ್ತಾ ಬಂದವನೇ ತಾನು ದುಷ್ಟ ಹುಲಿಯನ್ನು ಕೊಂದು ಬಂದಿರುವುದಾಗಿಯೂ ಈಗಲೇ ರಾಜನನ್ನು ಕಾಣಬೇಕೆಂತಲೂ ಭಟರಿಗೆ ಹೇಳಿದ. ಅವನ ಬಟ್ಟೆಯ ರಕ್ತವನ್ನು ನೋಡಿ ನಿಜವೆಂದು ನಂಬಿದ ಭಟರು ಓಡಿಹೋಗಿ ರಾಜನಿಗೆ ಸುದ್ದಿ ತಿಳಿಸಿದರು. ರಾಜರು ಅಮಿತಾನಂದದಿಂದ ತಿಮ್ಮಯ್ಯನಲ್ಲಿಗೆ ಬಂದನು. ತಿಮ್ಮಯ್ಯನು “ಮಹಾರಾಜಾ, ಕೋಟೆ ಅಚೆಯ ಕಾಡುಸೀಗೆ ಮೆಳೆ ಹತ್ತಿರ ಆ ದುಷ್ಟ ಹುಲಿಯನ್ನು ಕೊಂದು ಹಾಕಿದ್ದೇನೆ. ನಿನ್ನ ಭಟರನ್ನು ಕಳಿಸಿ ಇಲ್ಲಿಗೆ ತರಿಸು” ಎಂದು ಠೀವಿಯಿಂದ ಹೇಳಿದನು. ರಾಜನು ಕೂಡಲೇ ಭಟರನ್ನು ಕಳಿಸಿದನು. ಅವರು ಸತ್ತ ಹುಲಿಯನ್ನು ಹೊತ್ತು ತಂದು ರಾಜನ ಮುಂದೆ ಹಾಕಿದರು. ತಿಮ್ಮಯ್ಯನನ್ನು ಕೂಡಲೇ ರಾಜರು ನಗರದಲ್ಲೆಲ್ಲಾ ಮೆರವಣಿಗೆ ಮಾಡಿ ಗೌರವದಿಂದ ಅರಮನೆಗೆ ಕರೆತರಬೇಕೆಂದು ಆಜ್ಞೆ ಮಾಡಿದನು.

ಬಹಳ ಅಯಾಸಗೊಂಡಿದ್ದ ಕರಿರಾಯ ತಡವಾಗಿ ಎದ್ದು ಛತ್ರದಿಂದ ಹೊರಗೆ ಬಂದು ನೋಡುತ್ತಾನೆ. ಇಡೀ ನಗರವೇ ಶೃಂಗಾರವಾಗಿದೆ. ಜನರು ಸಂಭ್ರಮ ಸಡಗರಗಳಿಂದ ಓಡಾಡುತ್ತಿದ್ದಾರೆ. ದೂರದಲ್ಲಿ ಓಲಗ, ತಮಟೆ, ಕೊಂಬು ಕಹಳೆಗಳ ಸದ್ದು ಕೇಳಿಬರುತ್ತಿದೆ. ಕರಿರಾಯ ದಾರಿಯಲ್ಲಿ ಹೋಗುತ್ತಿದ್ದವನೊಬ್ಬನನ್ನು ತಡೆದು, ಅದೇನೆಂದು ಕೇಳಿದನು. ಅವನು “ಬಹಳ ಕಾಲದಿಂದ ದುಷ್ಟ ಹುಲಿಯೊಂದು ನಮಗೆ ತೊಂದರೆ ಕೊಡುತ್ತಿತ್ತು. ಅದನ್ನು ನಿನ್ನೆಯ ರಾತ್ರಿ ಅರಮನೆಯ ಅಗಸರ ತಿಮ್ಮಯ್ಯ ಕೊಂದುಹಾಕಿದ. ರಾಜ ತನ್ನ ಮಾತಿನಂತೆ ಅವನಿಗೆ ಅರ್ಧ ರಾಜ್ಯವನ್ನೂ ಮಗಳನ್ನೂ ಕೊಡಲು ನಿರ್ಧರಿಸಿದ್ದಾನೆ. ತಿಮ್ಮಯ್ಯನನ್ನು ಅಂಬಾರಿಯಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ” ಎಂದನು. ಕರಿರಾಯ ಕೆಲಸಕೆಟ್ಟಿತು ಎಂದು ಕೊಂಡವನೆ ಕುದುರೆಹತ್ತಿ ಅರಮನೆಯತ್ತ ದೌಡಾಯಿಸಿದ.

ಅಗಸರ ತಿಮ್ಮಯ್ಯ ಹುಲಿಯನ್ನು ಕೊಂದು ತನ್ನನ್ನು ಮದುವೆಯಾಗುತ್ತಾನೆ ಎಂಬ ಸುದ್ದಿ ಕೇಳಿ ರಾಜಕುಮಾರಿ ಲೀಲಾವತಿಗೆ ಬಹಳ ಸಿಟ್ಟು ಬಂದಿತು. ಅವಳು ನೇರವಾಗಿ ತಂದೆ ಇದ್ದಲ್ಲಿಗೆ ಬಂದು “ಇದೆಲ್ಲಾ ನಿಜವೆ ಅಪ್ಪಾಜಿ ನಾನು ಕೇಳಿದ ಸುದ್ದಿ” ಎಂದಳು. ರಾಜನು ನಿಜವೆಂದನು. ಆದರೆ ಲೀಲಾವತಿ “ಅಗಸರ ತಿಮ್ಮಯ್ಯ ಹುಲಿಯನ್ನು ಕೊಂದಿಲ್ಲ. ಇದರಲ್ಲೇನೋ ಮೋಸವಿದೆ” ಎಂದು ವಾದಿಸುತ್ತಿದ್ದಳು. ಆದರೆ ರಾಜ “ನಾನೇನೂ ಮಾಡುವಂತಿಲ್ಲ. ನಾನು ಮಾತು ಕೊಟ್ಟಂತೆ ನಡೆಯಲೇಬೇಕು” ಎಂದನು. ಅಷ್ಟರಲ್ಲಿ ಚಾರನೊಬ್ಬ ಓಡಿ ಬಂದು ರಾಜನಿಗೆ ನಮಸ್ಕರಿಸಿ, ಯುವಕನೊಬ್ಬ ಕುದುರೆಯ ಮೆಲೆ ಬಂದಿರುವುದಾಗಿಯೂ ಹುಲಿ ಕೊಂದವನು ತಾನೆಂದೂ ಕೂಡಲೇ ಕಾಣಬೇಕೆಂದು ಹಠಮಾಡುತ್ತಿರುವುದಾಗಿಯೂ ತಿಳಿಸಿದನು. ರಾಜನು ಕೂಡಲೇ ಅವನನ್ನು ಒಳಗೆ ಕರೆತರುವಂತೆ ಅಪ್ಪಣೆ ಮಾಡಿದನು.

ರಾಜನೆದುರಿಗೆ ಬಂದ ಕರಿರಾಯ ಹುಲಿಯನ್ನು ಕೊಂದವನು ತಾನೆಂದೂ ತಾನು ಧಾರಾಪುರದ ಮಾರಭೂಪಾಲ ಮಗನೆಂದೂ ನಡೆದ ಕಥೆಯನ್ನೆಲ್ಲಾ ವಿವರಿಸಿದನು. ಆದರೂ ರಾಜನು ಅದಕ್ಕೆ ಕುರುಹು ಏನೆಂದು ಕೇಳಿದನು. ಕೂಡಲೆ ಕರಿರಾಯ ತಾನು ಕುಯ್ದುತಂದಿದ್ದ ಬಾಲ, ಉಗುರು ಮತ್ತು ಮೂತಿಯನ್ನು ರಾಜನ ಮುಂದೆ ಸುರಿದನು. ರಾಜನು ಕೂಡಲೆ ಮೆರವಣೆಗೆ ನಿಲ್ಲಿಸಿ ಅಗಸರ ತಿಮ್ಮಯ್ಯನನ್ನು ಅರಮನೆಗೆ ಕರೆದು ತರಲು ಹೇಳಿದನು. ಅಲ್ಲಿಗೆ ಬಂದ ತಿಮ್ಮಯ್ಯ ತಾನು ಹುಲಿಯನ್ನು ಕೊಂದು ತಮಗೆ ತಿಳಿಸಲು ಬಂದಾಗ ಈ ಹುಡುಗ ಬಾಲ, ಉಗುರು ಮತ್ತು ಮೂತಿಯನ್ನು ಕೊಯ್ದು ಕೊಂಡಿದ್ದಾನೆಂದನು. ರಾಜನಿಗೆ ಏನು ಮಾಡಬೇಕೆಂದು ತೋಚದಾಯಿತು. ಆಗ ಅಲ್ಲಿಯೇ ಇದ್ದ ರಾಜಕುಮಾರಿ ಲೀಲಾವತಿ ಇಬ್ಬರಿಗೂ ಒಂದೊಂದು ಉತ್ತಮ ಕುದುರೆಯನ್ನು ಕೊಡಬೇಕೆಂದೂ ಅದರ ಮೇಲೆ ಕುಳಿತು ಯಾರು ಕೋಟೆಯ ಕಂದಕದಿಂದ ಆಚೆಗೆ ನೆಗೆಯುತ್ತಾರೋ ಅವರೇ ಹುಲಿಕೊಂದವರೆಂದೂ, ನೆಗೆಯಲಾರದವರು ಕಂದಕದಲ್ಲಿ ಬಿದ್ದು ಸಾಯುವರೆಂದು ತನ್ನ ತಂದೆಗೆ ಹೇಳಿದಳು. ಅದನ್ನು ಕೇಳಿದ ಕರಿರಾಯ ನಗುಮುಖದಿಂದ ಒಪ್ಪಿದನು. ಆದರೆ ಅಗಸರ ತಿಮ್ಮಯ್ಯ ಹೆದರಿ ತಾನು ಮಾಡಿದುದು ತಪ್ಪಾಯಿತೆಂದು ರಾಜನ ಕಾಲಿಗೆ ಬಿದ್ದನು. ಅವನಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ರಾಜ ಅಧಿಕಾರಿಗಳಿಗೆ ಹೇಳಿದನು. ಆದರೆ ಅವನನ್ನು ಕ್ಷಮಿಸಿಬಿಡಬೇಕೆಂದು ಕರಿರಾಯ ಹೇಳಿದುದರಿಂದ ಅವನಿಗೆ ರಾಜನು ಕ್ಷಮೆ ನೀಡಿ ಕಳುಹಿಸಿಬಿಟ್ಟನು.

ಕರಿರಾಯನನ್ನು ಆನೆಯ ಮೇಲೆ ಮೆರವಣಿಗೆ ಮಾಡಿ ಕರೆತಂದರು. ರಾಜನು ತನ್ನ ಮಾತಿನಂತೆ ಅರ್ಧ ರಾಜ್ಯವನ್ನು ತನಗೆ ಗಂಡುಮಕ್ಕಳಿಲ್ಲದೆ ಲೀಲಾವತಿಯೊಬ್ಬಳೇ ಮಗಳಾದುದರಿಂದ ಮತ್ತರ್ಧ ರಾಜ್ಯವನ್ನೂ, ಲೀಲಾವತಿಯನ್ನೂ ಕೊಡುವುದಾಗಿ ಹೇಳಿದನು. ಕರಿರಾಯ ಲೀಲಾವತಿಯರ ಮದುವೆಯ ಓಲೆಗಳು ದೇಶದೇಶಗಳಿಗೆಲ್ಲಾ ಹೋದವು. ರಾಜನು ಧಾರಾಪುರಕ್ಕೆ ತನ್ನ ಮಂತ್ರಿಯನ್ನು ಕಳಿಸಿ ಬನವಂತಾದೇವಿಯನ್ನು ಸಕಲ ಗೌರವಗಳೊಡನೆ ಕರೆಸಿಕೊಂಡನು. ಕರಿರಾಯ ಲೀಲಾವತಿಯರ ಮದುವೆ ವಿಜೃಂಭಣೆಯಿಂದ ನಡೆಯಿತು. ಚಿತ್ರಕಲ್ಲುದುರ್ಗ ರಾಜ್ಯವನ್ನುತನ್ನ ಪರವಾಗಿ ಮಾವನೆ ನೋಡಿಕೊಳ್ಳಬೇಕೆಂದು ಹೇಳಿ ಲೀಲಾವತಿ, ತಾಯಿ ಬನವನ್ನುತನ್ನ ಪರವಾಗಿ ಮಾವನೆ ನೋಡಿಕೊಳ್ಳಬೇಕೆಂದು ಹೇಳಿ ಲೀಲಾವತಿ, ತಾಯಿ ಬನವಂತಾದೇವಿ ಮತ್ತು ಮಾವಕೊಟ್ಟ ಮಂದಿ ಮಾರ್ಬಲ, ಆನೆ ಕುದುರೆಗಳೊಂದಿಗೆ ಕರಿರಾಯ ಪಯಣ ಹೊರಟು ತನ್ನ ರಾಜಧಾನು ಧಾರಪುರವನ್ನು ಬಂದು ಸೇರಿದನು.

ಕರಿರಾಯ ಚರಿತ್ರೆ ಕನ್ನಡದ ಒಂದು ಅತ್ಯಂತ ಪ್ರಖ್ಯಾತ ಯಕ್ಷಗಾನ ಪ್ರಸಂಗವಾಗಿದೆ. ಕೆಂಪಣ್ಣ ಗೌಡನ ಕಾವ್ಯ ಪೂರ್ವದ ಮಾರಭೂಪಾಲದ ಸಾಹಸದ ಕಥೆಯೂ ಸ್ವಾರಸ್ಯವಾಗಿದೆ. ಬಹುಶಃ ಗಂಗರಾಜಕುಮಾರಿಯ ದುರಂತ ಪ್ರಣಯ ಪ್ರಸಂಗವನ್ನು ಪ್ರಧಾನವಾಗಿ ಪರಿಗಣಿಸಿದುದರಿಂದಾಗಿ ಕೆಂಪಣ್ಣಗೌಡ ಮಾರಭೂಪಾಲ ಬನವಂತೆಯರ ಕಥೆಯನ್ನು ಕೈಬಿಟ್ಟನೆಂದು ಕಾಣುತ್ತದೆ. ಆದರೂ ಇಂದಿಗೂ ಕರಿರಾಯ ಚರಿತ್ರೆ ಒಂದು ಜನಪ್ರಿಯ ಯಕ್ಷಗಾನ ಪ್ರಸಂಗವಾಗಿರುವುದನ್ನು

ಕೆಂಪಣ್ಣಗೌಡನ ನಳಚರಿತ್ರೆ ಸಾಕಷ್ಟು ದೀರ್ಘವೇ ಆದ ಒಂದು ಯಕ್ಷಗಾನ ಕಾವ್ಯವಾಗಿದೆ. ಕವಿ ಪೂರ್ವಾರ್ಧ ಮತ್ತು ಉತ್ತರಾರ್ಧ ಎಂದು ಕಾವ್ಯವನ್ನು ಎರಡು ಭಾಗ ಮಾಡಿಕೊಂಡಿದ್ದಾನೆ. ಆರಂಭದಲ್ಲಿ ಪದ್ಧತಿಯಂತೆ ಇಷ್ಟದೇವತಾ ಪ್ರಾರ್ಥನೆಯನಂತರ ಕಾವ್ಯ ಆರಂಭವಾಗುತ್ತದೆ. ಪಾಂಡವರು ಅರಣ್ಯವಾಸಿಗಳಾಗಿದ್ದಾಗಿನ ಹಿನ್ನೆಲೆಯಲ್ಲಿ ಬೃಹದಶ್ವಮುನಿಯು ಧರ್ಮ ರಾಯನಿಗೆ ಕಥೆ ಹೇಳುವಂತೆ ಕಾವ್ಯಮುಂದುವರಿಯುತ್ತದೆ. ನಳದಮಯಂತಿಯರ ಮದುವೆಯವರೆಗೆ ಪೂರ್ವಾರ್ಧ. ಉತ್ತರಾರ್ಧ ಆರಂಭವಾಗುವ ಕಾಲಕ್ಕೆ ನಳದಮಯಂತಿಯರಿಗೆ ಇಬ್ಬರು ಮಕ್ಕಳಿರುತ್ತಾರೆ.

ಕೆಂಪಣ್ಣಗೌಡನ ನಳ ಚರಿತ್ರೆಯ ಕಥೆ ಹೀಗಿದೆ. ದ್ವಾಪರಾಯುಗದಲ್ಲಿ ಧರ್ಮರಾಯನು ಕೌರವರೊಡನೆ ಜೂಜನ್ನಾಡಿ ಸಕಲ ಸಾಮ್ರಾಜ್ಯವನ್ನು ಸೋತು ತನ್ನ ಸೋದರರೊಂದಿಗೆ ವನವಾಸದಲ್ಲಿರುತ್ತಾನೆ. ಒಂದು ದಿನ ಬೃಹದಶ್ವ ಮುನಿಯು ತನ್ನ ಶಿಷ್ಯರೊಂದಿಗೆ ಪಾಂಡವರಿದ್ದಲ್ಲಿಗೆ ಬರುತ್ತಾನೆ. ಧರ್ಮರಾಯನು ತನ್ನ ಅನುಜರ ಸಹಿತ ಮುನಿಯನ್ನು ಗೌರವದಿಂದ ಸ್ವಾಗತಿಸುತ್ತಾನೆ. ಆಗ ಬೃಹದಶ್ವಮುನಿಯು ಪಾಂಡವರ ಕ್ಷೇಮ ಸಮಾಚಾರಗಳನ್ನು ವಿಚಾರಿಸುತ್ತಾನೆ. ಧರ್ಮರಾಯನು ಕೌರವನೊಂದಿಗೆ ಜೂಜನ್ನಾಡಿ ಸಕಲ ಭಾಗ್ಯವನ್ನು ಕಳೆದುಕೊಂಡು ಅರಣ್ಯವಾಸಿಗಳಾದ ತಮ್ಮ ಸ್ಥಿತಿಯನ್ನು ಹೇಳಿಕೊಂಡು ಸಂಕಟಪಡುತ್ತಾನೆ. ಆಗ ಬೃಹದಶ್ವಮುನಿಯು ಧರ್ಮರಾಯನಿಗೆ ಸಮಾಧಾನ ಹೇಳಿ ಅವನಿಗೆ ಕೃತಯುಗದ ನಳಚಕ್ರವರ್ತಿಯ ಕಥೆಯನ್ನು ಹೇಳುತ್ತಾನೆ.

ನಿಷದ ರಾಜ್ಯದ ಚಕ್ರವರ್ತಿ ಶೂರಸೇನ. ಅವನ ಮಗ ನಳಚಕ್ರವರ್ತಿ. ಪ್ರಾಪ್ತವಯಸ್ಕನಾದ ನಳ ತಂದೆಯಿಂದ ಅಧಿಕಾರ ಪಡೆದು ಏಕಚಕ್ರನಗರಿಯಿಂದ ಆಳುತ್ತಿದ್ದನು. ಅವನು ಅಧಿಕಾರಕ್ಕೆ ಬಂದಂದಿನಿಂದ ದೇಶದಲ್ಲಿ ತಿಂಗಳಿಗೆ ಮೂರು ಸಲ ಮಳೆ ಬೀಳುತ್ತಿತ್ತು. ಜನರು ಅಚಾರವಂತರಾಗಿ ನಡೆದುಕೊಳ್ಳುತ್ತಿದ್ದರು. ಆ ದೇಶದಲ್ಲಿ ಬಡವರೇ ಇರಲಿಲ್ಲ. ಅಲ್ಲಿನ ಸ್ತ್ರೀಯರೆಲ್ಲ ಆದಿಲಕ್ಷ್ಮಿಯರಂತಿದ್ದರು. ಅಲ್ಲಿ ನೂರು ಹೊನ್ನಿಗೆ ಒಂದು ಹಣ ಬಡ್ಡಿ, ರೈತರು ಬಿತ್ತಿ ಬೆಳೆದು ಹತ್ತರಲ್ಲಿ ಒಂದು ಪಾಲನ್ನು ರಾಜನಿಗೆ ಸಲ್ಲಿಸುತ್ತಿದ್ದರು. ಒಂದು ಖಂಡುಗ ಧವಸದ ಬೆಲೆ ಒಂದು ಹಣ. ಹೀಗೆ ನಳಚಕ್ರವರ್ತಿಯ ರಾಜ್ಯ ಐಶ್ವರ್ಯದಿಂದ ತುಂಬಿತ್ತು. ಪ್ರಜೆಗಳೆಲ್ಲ ಸಂತೋಷದಿಂದ ಸುಖವಾಗಿ ಬಾಳುತ್ತಿದ್ದರು.

ಒಂದು ದಿನ ನಳರಾಜನಿಗೆ ವಸಂತಕಾಲದಲ್ಲಿ ವನಾಂತರವನ್ನು ನೋಡಬೇಕೆಂಬ ಅಪೇಕ್ಷೆಯುಂಟಾಯಿತು. ಅವನು ಮಂತ್ರಿಮನ್ನೆಯರು, ಶೃಂಗಾರ ನಾರಿಯರು, ಸಂಗೀತದವರು, ಪಾಠಕರು, ಶಾಸ್ತ್ರಿಕರು, ಪರಿಹಾಸ ಪಂಡಿತರು, ಹೀಗೆ ನಾನಾ ಜನರೊಂದಿಗೆ ಸಂತೋಷದಿಂದ ಶೃಂಗಾರವನಕ್ಕೆ ಬಂದು ಸೇರಿದನು. ಆ ವನದಲ್ಲಿ ಮಡಿವಾಳ, ಕೇತಕಿ, ಮಲ್ಲಿಗೆ, ಬಿಲ್ವಪತ್ರೆ, ಹೊನ್ನೆ, ಸಂಪಿಗೆ, ಪಾರಿಜಾತ ಮುಂತಾದ ಹೂವುಗಳು ಕಂಗೊಳಿಸುತ್ತಿದ್ದವು. ಆಲ ಬೇಲ, ಚಂದನ, ಹಿಪ್ಪೆ, ಹೊಂಗೆಯ ಮರಗಳು ನಲಿಯುತ್ತಿದ್ದವು. ದಾಳಿಂಬೆ, ಕಿತ್ತಲೆ, ಹಲಸು, ತೆಂಗು, ಅಡಿಕೆ, ಫಲಭರಿತವಾಗಿ ಮೆರೆಯುತ್ತಿದ್ದವು. ಗಿಳಿ ಕೋಗಿಲೆ, ನವಿಲು, ಹಂಸ ಮುಂತಾದ ಪಕ್ಷಿಗಳು ಕಲರವಗೆಯ್ಯುತ್ತಿದ್ದವು ಅಂತಹ ಸುಂದರ ವನದಲ್ಲಿ ನಳದ ಸರ್ಪಶಯನನಂತೆ ಪುಷ್ಪಶಯನನಾಗಿ ಆನಂದಿಸುತ್ತಿದ್ದನು.

ನಳರಾಜನು ಆ ಶೃಂಗಾರವನದಲ್ಲಿ ವಸಂತನ ಪೂಜೆಯನ್ನು ಮಾಡಿ ಸಂತೋಷದಿಂದಿರುವ ಸಮಯದಲ್ಲಿ ಆ ವನಕ್ಕೆ ದೇವಲೋಕದ ಹಂಸ ಪಕ್ಷಿಗಳು ಬಂದವು. ಸುವರ್ಣ ಬಣ್ಣದ ಆ ಹಂಸ ಪಕ್ಷಿಗಳನ್ನು ಕಂಡ ನಳರಾಜನು ಇವು ಎಲ್ಲಿಂದ ಬಂದವು ಒಂದನ್ನಾದರೂ ಹಿಡಿಯ ಬೇಕೆಂದು ತನ್ನ ಮಂತ್ರಿಗೆ ಹೇಳಿದನು. ಆಗ ನಳರಾಜ ಮಂತ್ರಿ ಮನ್ನೆಯರೆಲ್ಲ ಆ ಹಂಸಗಳನ್ನು ಅ ಸುತ್ತು ಗಟ್ಟಿದರು. ಅವರನ್ನು ಕಂಡು ಹೆದರಿದ ಪಕ್ಷಿಗಳು ಹಾರಿ ಒಂದು ಮರದ ಮೇಲೆ ಕುಳಿತವು. ಆ ಮರದ ಸುತ್ತ ಎಲ್ಲರೂ ನಿಂತು ಮಂತ್ರಿಯನ್ನು ಮರ ಹತ್ತಿಸಿದರು. ಅದನ್ನು ಕಂಡ ಪಕ್ಷಿಗಳು ಹೆದರಿ ಭೂಮಿಗೆ ಇಳಿದವು ಕಡೆಗೆ ಎಲ್ಲರೂ ಸುತ್ತುವರೆದು ಒಂದು ಪಕ್ಷಿಯನ್ನು ಹಿಡಿದರು. ಅದನ್ನು ನಳರಾಜನ ಕೈಗೆಕೊಟ್ಟರು. ನಳರಾಜನು ಅದನ್ನು ಮುದ್ದಾಡುತ್ತಿದ್ದನು. ಆಗ ಪಕ್ಷಿಯು ಮಾನವರಂತೆ ಮಾತಾಡಿ “ನಾನು ನಿನಗೆ ದಮಯಂತಿಯು ಒಲಿಯುವಂತೆ ಮಾಡುತ್ತೇನೆ. ಮೂರು ಲೋಕದಲ್ಲಿ ಅಂತಹ ಸುಂದರಿ ಇಲ್ಲ. ಈ ಪಕ್ಷಿಯ ಕೈಲೇನಾದೀತೆಂದು ಸಂಶಯ ಪಡಬೇಡ. ನನ್ನನ್ನು ಬಿಟ್ಟುಬಿಡು” ಎಂದು ಕೇಳಿಕೊಂಡಿತು. ಆಗ ನಳರಾಜ “ದಮಯಂತಿ ಯಾರು? ಯಾವ ರಾಜನ ಮಗಳು ಹೇಳು” ಎಂದು ಕೇಳಿದನು. ಆಗ ಹಂಸಪಕ್ಷಿಯು ದಮಯಂತಿಯ ವೃತ್ತಾಂತವನ್ನು ಹೇಳತೊಡಗಿತು.

ವಿದರ್ಭಾಪುರವೆಂಬ ಸಿರಿಯುಳ್ಳಪಟ್ಟಣದ ದೊರೆ ಭೀಮರಾಯ. ಅವನು ಭೂಪಾಲರಿಗೆ ಚಂದ್ರ. ಭೋಗದಲಿ ದೇವೇಂದ್ರ. ಪ್ರೀತಿಯಿಂದ ರಾಜ್ಯವಾಳಿಕೊಂಡಿದ್ದ. ಅವನಿಗೆ ಮಕ್ಕಳಿಲ್ಲದುದೊಂದೇ ಕೊರತೆ. ಇದಕ್ಕಾಗಿ ಜಪ, ತಪ, ಪೂಜೆ ಪುನಸ್ಕಾರಗಳಾದಿಯಾದ ವ್ರತಗಳನೆಲ್ಲ ಮಾಡಿದ. ಆದರೂ ಪ್ರಯೋಜನವಾಗಲಿಲ್ಲ. ಕಡೆಗೆ ಮಂತ್ರಿಗೆ ರಾಜ್ಯಾಡಳಿತವನ್ನು ವಹಿಸಿ ತಾನು ಮತ್ತು ತನ್ನ ರಾಣಿಕಾಡಿಗೆ ಹೋಗಿ ತಪಸ್ಸು ಮಾಡಲು ನಿರ್ಧರಿಸಿದ. ಅದರಂತೆ ಮುಡಿಯನ್ನು ಜಡೆಕಟ್ಟಿ, ನಾರು ಮಡಿಯನ್ನುಟ್ಟು ಶರೀರದ ತುಂಬ ವಿಭೂತಿ ಧರಿಸಿ ತಪಸಿಯಂತೆ ತಾನೂ ತನ್ನ ರಾಣಿಯೂ ಕಾಡಿಗೆ ಹೊರಟರು.

ಅರಣ್ಯವನ್ನು ಸೇರಿದ ಭೀಮರಾಯ ಮತ್ತು ಅವನ ರಾಣಿ ನಾರುಬೇರುಗಳನ್ನು ತಿನ್ನುತ್ತಾ ತಪಸ್ಸನ್ನಾಚರಿಸುತ್ತಿದ್ದರು. ಆಗ ಒಂದು ದಿನ ಆ ಅರಣ್ಯದಲ್ಲಿ ವಾಸ ಮಾಡುತ್ತಿದ್ದ ದಮನಾಖ್ಯನೆಂಬ ಮುನಿಯು ಇವರನ್ನು ಕಂಡು “ನೀವು ಯಾರು? ಯಾವ ಸ್ಥಳದಿಂದ ಬಂದಿರಿ? ಈ ನಾರುಮಡಿಗೆ ಕಾರಣವೇನು? ಎಂದು ಕೇಳಿದನು. ಆಗ ಈ ರಾಜ ದಂಪತಿಗಳು ತಮ್ಮ ರಾಜ್ಯ ಕೋಶಗಳ ವಿವರ ಹೇಳಿ ಮಕ್ಕಳನ್ನು ಪಡೆಯಲು ವನದಲ್ಲಿ ತಪಸ್ಸಾಚರಿಸುತ್ತಿದ್ದೇವೆ ಎಂದು ಹೇಳಿದರು. ಆಗ ಆ ಮುನಿಯು ಬ್ರಹ್ಮನನ್ನು ಕುರಿತು ತಪಸ್ಸು ಮಾಡುವಂತೆ ಉಪದೇಶಿಸಿದನು. ಅದರಂತೆ ಅವರು ಬ್ರಹ್ಮನನ್ನು ಕುರಿತು ಉಗ್ರ ತಪಸ್ಸನ್ನಾಚರಿಸಿದರು” ಅವರ ಭಕ್ತಿಗೆ ಮೆಚ್ಚಿ ಬ್ರಹ್ಮವರವನ್ನು ಕೊಟ್ಟ, ಅದರಂತೆ ಭೀಮರಾಯನಿಗೆ ಇಬ್ಬರು ಮಕ್ಕಳಾದರು. ದಮನಾಖ್ಯಮುನಿಯ ಉಪದೇಶದಿಂದ ಮಕ್ಕಳ ಫಲ ದೊರಕಿದುದರಿಂದ ಅವರಿಗೆ ಬೀಮರಾಯ ದಮ ಮತ್ತು ದಮಯಂತಿ ಎಂದು ಹೆಸರಿಟ್ಟ. ಆ ಧಮಯಂತಿಯನ್ನು ನಾವು ನೋಡಿ ಆಕೆ ನಿನಗೆ ತಕ್ಕವಳೆಂದು ನಿರ್ಧರಿಸಿ ನಿನ್ನಲ್ಲಿಗೆ ಬಂದೆವು” ಎಂದು ಆ ಪಕ್ಷಿ ಹೇಳಿತು. ಆ ಮಾತನ್ನು ನಂಬಿ ನಳನು ಆ ಪಕ್ಷಿಯನ್ನು ಬಿಟ್ಟನು.

ಒಂದು ದಿನ ದಮಯಂತಿಯು ತನ್ನ ಸಖಿಯರೊಂದಿಗೆ ಶೃಂಗಾರವನದಲ್ಲಿ ವಿಹಾರ ಮಾಡುತ್ತಿದ್ದಳು. ಆಗ ಆ ವನಕ್ಕೆ ಹಂಸ ಪಕ್ಷಿಗಳು ಬಂದವು. ಅವುಗಳನ್ನು ಹಿಡಿದು ಮುದ್ದಾಡ ಬೇಕೆಂದು ದಮಯಂತಿ ಯೋಚಿಸಿದಳು. ಆಗ ಸಖಿಯರೆಲ್ಲ ಆ ಪಕ್ಷಿಗಳನ್ನು ಸುತ್ತುವರಿದರು. ಪಕ್ಷಿಗಳು ಹೆದರಿ ಅತ್ತಿತ್ತ ಓಡುತ್ತಿದ್ದವು. ಕಡೆಗೆ ಹೊಂಚಿ ಒಂದು ಪಕ್ಷಿಯನ್ನು ಹಿಡಿದರು. ಅದನ್ನು ತಂದು ದಮಯಂತಿಗೆ ಕೊಟ್ಟರು. ಅವಳು ಅದನ್ನು ಪ್ರೀತಿಯಿಂದ ಮುದ್ದಾಡಿದಳು. ಆಗ ಆ ಪಕ್ಷಿಯು ಅವಳ ಸೌಂದರ್ಯವನ್ನು ನೋಡಿ ನಳರಾಜನ ವಿಚಾರವನ್ನೆಲ್ಲ ಹೇಳಿತು. ಆಗ ದಮಯಂತಿಯು ನಳನನ್ನು ನನ್ನವನನ್ನಾಗಿ ನಾನು ಜೀವಂತ ಇರಲಾರೆ ಎಂದಳು. ಆಗ ಆ ಪಕ್ಷಿಯು “ನೀನು ಯೋಚನೆ ಮಾಡಬೇಡ. ನಾನು ನಳರಾಜನನ್ನು ನಿನ್ನವನನ್ನಾಗಿಸುತ್ತೇನೆ” ಎಂದು ದಮಯಂತಿಗೆ ಅಭಯ ಕೊಟ್ಟು ತನ್ನ ಜೊತೆಯ ಪಕ್ಷಿಗಳೊಡನೆ ಹಾರಿಹೋಯಿತು.

ಹಂಸ ಪಕ್ಷಿಗಳ ಸಂಧಾನದಿಂದ ನಳದಮಯಂತಿಯರಲ್ಲಿ ಅನುರಾಗ ಮೂಡಿ ಅವರಿಬ್ಬರೂ ವಿರಹತಾಪದಿಂದ ಬಳಲುತ್ತಿದ್ದರು. ದಮಯಂತಿಯ ಸ್ಥಿತಿಯನ್ನು ಅರಿತ ಅವಳ ದಾದಿಯರು ಈ ವಿಚಾರವನ್ನು ಭೀಮರಾಯನ ಗಮನಕ್ಕೆ ತಂದು ತಡಮಾಡದೆ ನಳನನ್ನು ಕರೆಸು ಎಂದರು. ಇದರಿಂದ ಚಿಂತಾಕುಲನಾದ ಭೀಮರಾಯ ತನ್ನ ಮಂತ್ರಿ ಮನ್ನೆಯರು ಮತ್ತು ಕುಟುಂಬದವರೊಂದಿಗೆ ಚರ್ಚಿಸಿದರು. ಕಡೆಗೆ ದಮಯಂತಿಯ ಸ್ವಯಂವರದ ಏರ್ಪಾಡಾಯಿತು. ಧರೆಯ ಮೇಲಣ ರಾಜಮಹಾರಾಜರು ಚಕ್ರವರ್ತಿಗಳಿಗೆಲ್ಲ ಚರರು ಆಹ್ವಾನ ತಲುಪಿಸಿದರು. ಸ್ವಯಂವರದ ವಿಚಾರ ನಗರದಲ್ಲಿ ಡಂಗುರ ಹಾಕಿಸಲಾಯಿತು. ಊರಜನರು ದಮಯಂತಿಯ ಸ್ವಯಂವರಕ್ಕಾಗಿ ವಿಧರ್ಭಾನಗರವನ್ನು ತಳಿರು ತೋರಣಗಳಿಂದ ಶೃಂಗರಿಸಿದರು.

ದೊರೆ ಬೀಮರಾಯನ ವರಸುತೆ ದಮಯಂತಿಯ ಹರುಷದ ಮದುವೆಗೆ ನೀವು ಬರಬೇಕೆಂದು ನಳನಿಗೂ ಆಹ್ವಾನ ಕಳಿಸಲಾಗಿತ್ತು. ಆಗ ನಳರಾಜ ಕುಂತಲ, ಬರ್ಬರ, ಪಾಂಡ್ಯ, ಕೊಡಗ, ಕೊಂಕಣ, ಕಾಶ್ಮೀರ, ಕಳಿಂಗ, ಕಾಂಬೋಜ, ಕರಹಾಟ, ಲಾಟ, ಕರ್ನಾಟ, ಸಿಂಧು, ಮತ್ಸ್ಯ, ಮರಾಳ ಗುರ್ಜರ, ಕುಕುರ, ಪಾಂಚಾಳ, ಬಂಗಾಳ, ನೇಪಾಳ ಮುಂತಾದ ದೊರೆಗಳನ್ನು ಕರೆಸಿದ. ಅವರೆಲ್ಲರನ್ನೊಳಗೊಂಡು ಆನೆ, ಕುದುರೆ, ಮಂದಿ ಮಾಬಲ ಸಹಿತವಾಗಿ ಐವತ್ತಾರು ದೇಸಾಧಿಪತಿಗಳೊಂದಿಗೆ ಭೀಮರಾಯನ ಪಟ್ಟಣಕ್ಕೆ ಬಂದ. ಹೀಗೆ ಬಂದ ನಳರಾಜನನ್ನು ಕಂಡು ಇದೇನು ಬಂದುದು ಎಂದು ನಾರದ ಕೇಳಿದಾಗ ನಳರಾಜ ದಮಯಂತಿ ಸ್ವಯಂವರದ ವಿಷಯ ಹೇಳಿದ, ನಾರದ ಆ ಕೂಡಲೇ ದೇವಲೋಕಕ್ಕೆ ಓಡಿದ.

ಕೈಯಲ್ಲಿ ಸ್ವರವೀಣೆ, ಕಟ್ಟಿದ ಜಡೆ ಹಣೆಯಲ್ಲಿ ತ್ರಿಪುಂಡ ಅಂಬುಜಾಕ್ಷಯೆಂದು ಹಾಡುತ್ತ ಬಂದ ನಾರದನನ್ನು ಕಂಡು ಇಂದ್ರ ಏನು ಸಮಾಚಾರಯೆಂದು ಕೇಳಿದ. ಅಷ್ಟದಿಕ್ಪಾಲಕರು, ಕಿನ್ನರ ಕಿಂಪುರುಷರು, ಗರುಡ ಗಂಧರ್ವರು, ಸಾಹಿತ್ಯ ಸಂಗೀತದವರಿಂದ ದೇವೇಂದ್ರನ ಆಸ್ಥಾನ ತುಂಬಿಹೋಗಿತ್ತು. ಆಗ ನಾರದನು ವಿಧರ್ಭಾಪುರಿಯ ಭೀಮರಾಯನ ಮಗಳು ದಮಯಂತಿ ಯ ಸ್ವಯಂವರ ಏರ್ಪಾಡಾಗಿದೆ. ನಾನು ರಂಭೆ ಊರ್ವಶಿ, ತಿಲೋತ್ತಮೆ, ಲಕ್ಷ್ಮಿ, ಸರಸ್ವತಿ, ಪಾರ್ವತಿಯರನ್ನೆಲ್ಲ ಬಲ್ಲೆ. ಆದರೆ ದಮಯಂತಿಯ ರೂಪಿನ ಮುಂದೆ ಇವರೆಲ್ಲ ಏನೇನು ಅಲ್ಲ. ಆಕೆ ನಳಚಕ್ರವರ್ತಿಯನ್ನು ಪ್ರೀತಿಸಿದ್ದಾಳೆಂದು ಸುದ್ದಿಯು ಭೂಲೋಕದ ರಾಜರೆಲ್ಲರೂ ಅಲ್ಲಿ ಸೇರಿದ್ದಾರೆ. ಈ ವಿಚಾರವನ್ನು ನಿನಗೆ ತಿಳಿಸೋಣವೆಂದು ನಾನು ಓಡೋಡಿ ಬಂದೆ ಎಂದನು. ಆಗ ದೇವೇಂದ್ರನು ದಮಯಂತಿಯನ್ನು ಬಯಸಿ ವರುಣ, ಯಮ, ಕುಬೇರರೊಂದಿಗೆ ವಿದರ್ಭಾಪುರಿಗೆ ಹೊರಟನು. ನಳಚಕ್ರವರ್ತಿಗೆ ಎದುರಾಗಿ ಈ ದೇವತೆಗಳೆಲ್ಲರೂ ಬಂದುನಿಂತರು. ಅವರಿಗೆ ನಳನು ದಂಡಪ್ರಣಾಮ ಮಾಡಿ ನೀವೆಲ್ಲ ದೇವತೆಗಳು ಬಂದುದು ನಮ್ಮ ಪುಣ್ಯ ಎಂದನು.

ದಮಯಂತಿಯ ಅರಮನೆಗೆ ಹೋಗಿ ಆಕೆ ನಮ್ಮಲ್ಲಿ ಒಬ್ಬರನ್ನು ಮದುವೆಯಾಗುವಂತೆ ಪ್ರೇರೇಪಿಸು ಎಂದು ದೇವತೆಗಳು ನಳರಾಜನನ್ನು ಕೇಳಿದರು. ಅದಕ್ಕೆ ನಳರಾಜನು ನಾನು ಯಾವಾಗಲೂ ದಮಯಂತಿಯೊಂದಿಗೆ ಮಾತನಾಡಿಲ್ಲವಾದ ಕಾರಣ ಅದು ತನ್ನಿಂದ ಆಗದೆಂದನು. ನಾರದನು ನೀನು ಬಹಳ ಸತ್ಯವಂತನಾದ ದೊರೆಯೆಂದು ಹೊಗಳಿದ್ದ ಅದೀಗ ಸುಳ್ಳಾಯಿತೆಂದು ದೇವೇಂದ್ರ ಹೇಳಿದ. ಆಗ ನಳನು ಮನನೊಂದು ನೀನು ಹೇಗೆ ದಮಯಂತಿಯ ಅಂತಃಪುರಕ್ಕೆ ಹೋಗಲು ಸಾಧ್ಯ. ಕಂಡವರು ಏನೆಂದಾರು ಎಂದನು. ಆಗ ದೇವತೆಗಳು ನೀನು ಯಾರಿಗೂ ಕಾಣದ ಹಾಗೆ ಹೋಗುವ ವರವೀಯುತ್ತವೆ ಎಂದರು. ಹಾಗಾದರೆ ಹೋಗುತ್ತೆನೆಂದ ನಳನಿಗೆ ದೇವತೆಗಳು ಅದೃಶ್ಯ ವರವನ್ನು ಕೊಟ್ಟರು. ಆಗ ನಳನು ಯಾರೂ ಕಾಣದಂತೆ ದಮಯಂತಿಯ ಅರಮನೆಗೆ ಹೋದನು. ಆಕೆ ಈತನನ್ನು ನೋಡಿ ಗಾಬರಿಯಾದಳು. ದಾದಿಯರು ಈತನೆ ನಳಚಕ್ರವರ್ತಿಯಿರಬೇಕು, ಹಂಸೆಯ ವರ್ಣನೆಗೂ ಈತನ ರೂಪುಲಾವಣ್ಯಗಳಿಗೂ ಸಾಮ್ಯವಿದೆ ಎಂದರು. ಆದರೂ ನೀವು ಯಾರು? ಏತಕ್ಕಾಗಿ ಇಲ್ಲಿ ಬಂದಿರಿ? ಎಂದು ಕೇಳಿದರು. ಆಗ ನಳರಾಜ ತನ್ನ ವಿವರವನ್ನು ಹೇಳಿಕೊಂಡು ದೇವತೆಗಳ ರಾಯಬಾರಿಯಾಗಿ ಬಂದಿರುವುದಾಗಿಯೂ ದಮಯಂತಿ ಅವರಲ್ಲೊಬ್ಬರನ್ನು ಮದುವೆಯಾಗಬೇಕೆಂದೂ ಹೇಳಿದನು. ಅದಕ್ಕುತ್ತರವಾಗಿ ದಮಯಂತಿ ತಾನು ನಳನಿಗೆ ಮನ ಸೋತಿರುವುದಾಗಿಯೂ ಅವನಲ್ಲದೆ ಬೇರೆ ಯಾರನ್ನು ಕಣ್ಣೆತ್ತಿಯೂ ನೋಡುವುದಿಲ್ಲವೆಂದಳು. ಆಗ ನಳನು ದೇವತೆಗಳನ್ನು ಮದುವೆಯಾದರೆ ಜಗತ್ತಿಗೇ ಪೂಜ್ಯವಾಗಬಹುದೆಂದನು. ಅದಕ್ಕೆ ದಮಯಂತಿ ದೇವತೆಗಳು ನಮಗೆ ತಂದೆಯ ಸಮಾನರು ಮಗಳನ್ನು ಬಯಸಿದವರುಂಟೆ ಅದು ಸಾಧ್ಯವಿಲ್ಲ ಎಂದು ಖಂಡಿತವಾಗಿ ಹೇಳಿದಳು.

ದಮಯಂತಿಯ ಅಭಿಪ್ರಾಯವನ್ನು ನಳನು ದೇವತೆಗಳಿಗೆ ತಿಳಿಸಿದನು. ಅವರೆಲ್ಲರೂ ನೀನು ನಮ್ಮ ಪರವಾಗಿ ಹೇಳಿದೆಯಲ್ಲ ಅಷ್ಟೇ ಸಾಕು, ನೀನು ದಮಯಂತಿಯನ್ನು ಮದುವೆಯಾಗಿ ಸುಖವಾಗಿರು ಎಂಡು ಹರಸಿ ಸ್ವಯಂವರ ಮಂಟಪಕ್ಕೆ ಬಂದು ಅವರೆಲ್ಲರೂ ನಳನಂತೆಯೇ ವೇಷ ತಳೆದು ಕುಳಿತರು, ದಮಯಂತಿ ಪೂಜೆ ಪುನಸ್ಕಾರಗಳನ್ನು ಮುಗಿಸಿ, ಕೈಯಲ್ಲಿ ಮಾಲೆ ಹಿಡಿದು ತನಗೆ ಬೇಕಾದ ವರನನ್ನು ಆರಿಸಲು ಸ್ವಯಂವರ ಮಂಟಪಕ್ಕೆ ಸಖಿಯರೊಡಗೂಡಿ ಬಂದಳು. ವಸುದೇವ ಭಟ್ಟ ಎಂಬುವನು ಸ್ವಯಂವರಕ್ಕೆ ಬಂದಿದ್ದ ರಾಜ ಕುಮಾರರ ಪರಿಚಯ ಹೇಳುತ್ತಾ ಮುಂದೆ ನಡೆಯುತ್ತಿದ್ದನು. ನಳಚಕ್ರವರ್ತಿಯ ಹತ್ತಿರಕ್ಕೆ ಬಂದಾಗ ಅವನಂತೆಯೆ ಮತ್ತೆ ನಾಲ್ವರಿರುವುದನ್ನು ಭಟ್ಟ ಕಂಡು ಮಾತಾಡದೆ ನಿಂತನು. ಆಗ ದಮಯಂತಿಯು ಇದು ದೇವತೆಗಳ ಮಾಯವೆಂದರಿತು ಅವರನ್ನು ನೀವು ಹೀಗೆ ಮಾಡಬಹುದೆ? ನಾನು ನಿಮಗೆ ಮಗಳಲ್ಲವೆ? ಮಗಳನ್ನು ಮೆಚ್ಚಿದವನಿಗೆ ಕೊಟ್ಟು ಮದುವೆ ಮಾಡುವುದು ನಿಮ್ಮ ಕರ್ತವ್ಯವಲ್ಲವೆ? ನಿಮ್ಮ ಕುವರಿಯನ್ನು ಈ ಇಕ್ಕಟ್ಟಿನಿಂದ ಪಾರುಮಾಡಿ ಎಂದು ಪ್ರಾರ್ಥಿಸಿದಳು. ಅವಳ ಭಕ್ತಿಗೆ ಮೆಚ್ಚಿ ದೇವತೆಗಳು ತಮ್ಮ ನಿಜರೂಪ ತೋರಿಸಿದರು. ದಮಯಂತಿ ನಳನಿಗೆ ಮಾಲೆ ಹಾಕಿದಳು. ಆ ಸಂತೋಷಕ್ಕೆ ದೇವದುಂದುಬಿ ಮೊಳಗಿತು. ಹೂಮಳೆಗೆರೆಯಿತು. ಗಂಧರ್ವರು ಠೀವಿಯಿಂದ ಹಾಡಿದರು. ರಂಬೆ, ಊರ್ವಶಿ, ಮೇನಕೆಯರು ನಾಟ್ಯವಾಡಿದರು. ತುಂಬುರ ನಾರದರು ಸಂತೋಷಪಟ್ಟು ಹಾಡಿದರು. ಅಷ್ಟದಿಕ್ಪಾಲಕರು ಮುನಿಗಳು ಸಂತುಷ್ಟರಾದರು. ತುಂಬುರ ನಾರದರು ಸಂತೋಷಪಟ್ಟು ಹಾಡಿದರು. ಅಷ್ಟದಿಕ್ಪಾಲಕರು ಮುನಿಗಳು ಸಂತುಷ್ಟರಾದರು. ಸ್ವಯಂವರಕ್ಕೆ ಬಂದಿದ್ದ ಇಂದ್ರಾದಿ ದೇವತೆಗಳು ನಳನಿಗೆ ವರಗಳನ್ನಿತ್ತು ಹರಸಿದರು. ನಳದಮಯಂತಿಯರ ಮದುವೆ ಅದ್ದೂರಿಯಾಗಿ ನಡೆಯಿತು. ಸ್ವಯಂವರಕ್ಕೆ ಬಂದಿದ್ದವರೆಲ್ಲ ಅವರವರ ಊರುಗಳಿಗೆ ಹಿಂತಿರುಗಿದರು. ಒಂದು ದಿನ ಶನಿದೇವನು ಅವಸರವಸರವಾಗಿ ಇಂದ್ರನ ಅಸ್ಥಾನಕ್ಕೆ ಬಂದು ನಿನ್ನಿಂದ ನನಗೊಂದು ದಿನ ಶನಿದೇವನು ಅವಸರವಸರವಾಗಿ ಇಂದ್ರನ ಅಸ್ಥಾನಕ್ಕೆ ಬಂದು ನಿನ್ನಿಂದ ನನಗೊಂದು ಉಪಕಾರವಾಗಬೇಕೆಂದನು. ದೇವೇಂದ್ರನು ಅದೇನೆಂದರೆ ಕೇಳಲಾಗಿ ತಾನು ಬಹುಕಾಲದಿಂದಲೂ ವಿದರ್ಭಾನಗರಿರಿಯ ಭೀಮರಾಯನ ಪುತ್ರಿ ದಮಯಂತಿಯನ್ನು ಮದುವೆಯಾಗಬೇಕೆಂದಿದ್ದೆ. ಈಗ ಆಕೆಗೆ ಕಲ್ಯಾಣವಂತೆ ನೀನು ಅವಳಲ್ಲಿಗೆ ಹೋಗಿ ನನ್ನನ್ನು ಅವಳು ಮದುವೆಯಾಗುವಂತೆ ಪ್ರೇರೆಪಿಸಬೇಕೆಂದನು. ಆಗ ದೇವೇಂದ್ರನು ಹುಸಿನಗುತ್ತಾ ಆಕೆಗೆ ನಳನೊಡನೆ ಮದುವೆಯಾದ ಸುದ್ದಿಯನ್ನು ಹೇಳಿ ನಮ್ಮಲ್ಲಿ ಒಬ್ಬರನ್ನು ಮದುವೆಯಾಗುವಂತೆ ನಳನೊಡನೆ ಮದುವೆಯಾದ ಸುದ್ದಿಯನ್ನು ಹೇಳಿ ನಮ್ಮಲ್ಲಿ ಒಬ್ಬರನ್ನು ಮದುವೆಯಾಗುವಂತೆ ಕೇಳಿದೆವು ಆಕೆ ನಮ್ಮನ್ನೆಲ್ಲ ನೀವು ತಂದೆ ಸಮಾನರೆಂದು ನಿರಾಕರಿಸಿದಳು ಎಂದನು.

ಈಗ ಮದುವೆ ಆಗಿ ಹೋಗಿರುವುದರಿಂದ ಯೋಚಿಸಿ ಪ್ರಯೋಜನವಿಲ್ಲವೆಂದು ದೇವೇಂದ್ರ ಶನಿರಾಜನಿಗೆ ಹೇಳಿದನು. ಆಗ ಶನಿರಾಜ ಉಗ್ರಕೋಪವನ್ನು ತಾಳಿ ದಮಯಂತಿಯನ್ನು ಮದುವೆಯಾಗಿ ಆ ನಳ ಚಕ್ರವರ್ತಿ ಹೇಗೆ ಸುಖವಾಗಿರುತ್ತಾನೆ ನೋಡಿಯೇ ಬಿಡುತ್ತೇನೆ ಎಂದನು. ಅದಕ್ಕೆ ದೇವೇಂದ್ರನು ಆತ ಸತ್ಯವಂತನು. ವಿಷ್ಣು ಚಕ್ರ ಅವನಿಗೆ ರಕ್ಷೆಯಾಗಿದೆ, ನೀನೇನೂ ಮಾಡಲಾಗುವುದಿಲ್ಲ ಎಂದು ಬುದ್ದಿ ಹೇಳಿದನು. ಆಗ ಶನಿರಾಜನು ಅವನಿಗೆ ಜೂಝಾಡುವ ಬುದ್ಧಿ ಹುಟ್ಟಿಸಿ ರಾಜ್ಯಕೋಶಗಳನ್ನೆಲ್ಲ ಸೋತು ಅರಣ್ಯದಲ್ಲಿ ಗಡ್ಡೆಗೆಣಸುಗಳನ್ನು ತಿಂದು ಅಲೆಯುವಂತೆ ಮಾಡುತ್ತೇನೆಂದು ಪಣ ತೊಟ್ಟು ಇಂದ್ರನ ಅಸ್ಥಾನದಿಂದ ಹೊರಟು ಹೋದನು.

ನಳರಾಜನು ತನ್ನ ಅತ್ತೆ ಮಾವಂದಿರಿಗೆ ಹೇಳಿತನ್ನ ರಾಜಧಾನಿಗೆ ಹೊರಟನು. ತನ್ನ ರಾಜಧಾನಿಗೆ ಸೇರಿ ಸತಿಯೊಡನೆ ಸುಖವಾಗಿದ್ದನು. ಕಾಲ ಉರುಳಿತು. ದಮಯಂತಿ ಗರ್ಭಿಣಿಯಾದಳು, ಒಂಭತ್ತು ತಿಂಗಳು ತುಂಬಿ ಶುಭಗಳಿಗೆಯಲ್ಲಿ ಮಗನನ್ನು ಆಕೆ ಹಡೆದಳು. ಈ ವಾರ್ತೆಯನ್ನು ಕೇಳಿದ ನಳರಾಜ ಸಂತೋಷಪಟ್ಟು ಸರಿದೊರೆಗಳನ್ನು ಬಂಧುಗಳನ್ನು ಬರಮಾಡಿಕೊಂಡು ಕುಮಾರನಿಗೆ ಇಂದ್ರಸೇನ ಎಂದು ಹೆಸರಿಟ್ಟ. ಧರಣಿಯ ದೊರೆಗಳಿಗೆ ಜನಕೆ, ಪರಿಜನಕೆ ಮೃಷ್ಟಾನ್ನ ಭೋಜನವನ್ನು ಮಾಡಿಸಿದ. ಉಡುಗೊರೆಗಳನ್ನು ಕೊಟ್ತು ಗೌರವಿಸಿದ. ಪುತ್ರನನ್ನು ಚಿನ್ನದ ತೊಟ್ಟಿಲಲ್ಲಿಟ್ಟು ತೂಗಿದರು. ಇದನೆಲ್ಲ ನೋಡಿದ ಶನಿರಾಜ ನಾನು ಇಲ್ಲಿಗೆ ಬಂದು ಇವನ ಸ್ಂಗಡ ತಿರುಗುವಂತಾಯಿತಲ್ಲ ಎಂದು ಚಿಂತಿಸಿದ. ಇಂದ್ರ ನಿನ್ನಿಂದ ನಳನನ್ನು ಹಿಡಿಯಲು ಆಗದು ಎಂದು ಹೇಳಿದ್ದ. ಬಂದಾಗಿನಿಂದಲೂ ಈತನಲ್ಲಿ ಒಂದು ತಪ್ಪೂ ಸಿಗಲಿಲ್ಲ. ಹಿಡಿಯದೆ ಬಿಟ್ಟು ಹೋದರೆ ಸರಿಯವರು ನಗುವುದಿಲ್ಲವೆ? ಹೀಗೆ ಯೋಚಿಸಿದ ಶನಿರಾಜ ಎಷ್ಟು ದಿನವಾದರೂ ಸರಿಯೆ ಕಾಯ್ದು ಇವನನ್ನು ಹಿಡಿದೇ ತೀರುತ್ತೇನೆಂದು ಶಪಥ ಮಾಡಿದ.

ಹೀಗೆ ಶನಿರಾಜನು ಕೋಪಾರೂಢನಾಗಿ ನಳನನ್ನು ಹಿಡಿಯಲು ಕಾಯುತ್ತಿರುವಾಗ ದಮಯಂತಿ ಮತ್ತೆ ಗರ್ಭವತಿಯಾದಳು. ನವಮಾಸ ತುಂಬಿ ಆಕೆ ಕುಮಾರಿಯೊಬ್ಬಳನ್ನು ಪಡೆದಳು. ನಳನು ತನ್ನ ಮಗಳಿಗೆ ಅದ್ದೂರಿಯಿಂದ ಹೆಸರಿಡುವ ಉತ್ಸವ ಮಾಡಿದಂತೆ ಅವಳಿಗೆ ಇಂದ್ರಸೇನೆ ಎಂದು ಹೆಸರಿಟ್ಟರು. ಅಶ್ವಮೇದಾನೇಕ ಯಜ್ಞಗಳು, ದಾನಾದಿಗಳನ್ನು ಮಾಡಿ ನಳದಮಯಂತಿಯರು ಸುಖದಿಂದಿದ್ದರು. ಹೀಗಿರುವಲ್ಲಿ ಒಂದು ದಿನ ನಳ ರಾಜನು ಕೈಕಾಲು ತೊಳೆಯುವಾಗ ಕಾಲಿನ ಹಿಂಭಾಗದಲ್ಲಿ ಮುಳ್ಳು ಮೊನೆಯಷ್ಟು ನೆನೆಯದೆ ಉಳಿಯಿತು. ಅದನ್ನು ಕಂಡ ಶನಿರಾಜನು ಇಂದಿಗೆ ನನ್ನ ಪಂಥ ಗೆದ್ದಿತೆಂದು ಅಣುರೂಪದಿಂದ ಆ ಜಾಗದಿಂದ ಪ್ರವೇಶಿಸಿ ನಳನನ್ನು ಹಿಡಿದನು. ಆದರೂ ಅವನು ಧರ್ಮವನ್ನು ಬಿಡದೆ ರಾಜ್ಯವಾಳುತ್ತಿದ್ದನು.

ಒಂದು ದಿನ ನಳರಾಜರು ಕನಕ ಸಿಂಹಾಸನದಲ್ಲಿ ಕುಳಿತಿರುವಾಗ ಶನಿರಾಜನು ಮಾಯಾ ಶಬರನ ವೇಷದಿಂದ ಅಲ್ಲಿಗೆ ಬಂದನು. ನಳರಾಜನಿಗೆ ಕರಗಳಂ ಮುಗಿದು ತಾನು ಇರುವ ಕಾಡಿನಲ್ಲಿ ಕಡವೆ, ಸಾರಂಗ, ಹಂದಿ, ಹುಲಿ, ಸಿಂಹ ಮುಂತಾದ ಪ್ರಾಣಿಗಳೂ ಹಂಸ, ಲಾವುಗೆ, ಗಂದಭೇರುಂಡ ಮುಂತಾದ ಪಕ್ಷಿಗಳೂ ಲಕ್ಷ ಲಕ್ಷ ಇವೆ. ಅವುಗಳನ್ನು ಎಣಿಸಲಸಾಧ್ಯ ಎಂದು ಹೇಳಿದನು. ಶಬರನ ಮಾತು ಕೇಳಿ ಸಂತೋಷದಿಂದ ನಳರಾಜನು ನಾಳೆ ಬೆಳಿಗ್ಗೆ ಬೇಟೆಯಾಡಲು ಬರುತ್ತೇವೆಂದು ಶಬರನಿಗೆ ಉಡುಗೊರೆಯನ್ನು ಕೂಡಿಸಿ ಕಳಿಸಿದನು. ಆಗ ಶಬರರೂಪದ ಶನಿರಾಜನು ಇನ್ನು ನನ್ನ ಕೆಲಸವಾಯಿತೆಂದು ಮಾಯವಾದನು.