ಕರ್ನಾಟಕದ ತುಂಬೆಲ್ಲಾ ಜಾನಪದ ಸಂಸ್ಕೃತಿಯು ಹರಡಿರುವುದನ್ನು ಕಾಣಬಹುದು. ಅನುವಂಶಿಕವಾಗಿ ಬರುವ ‘ಜೀನ’ನಂತೆ ನಮ್ಮ ಜಾನಪದ ಸಂಸ್ಕೃತಿಯ ಮೂಲಭೂತ ಅಂಶಗಳು ವಂಶಪಾರಂಪರ್ಯವಾಗಿ ಗುರುವಿನಿಂದ ಶಿಷ್ಯನಿಗೆ ಹರಿದು ಬರುವುದಾಗಿವೆ. ಈ ಸಂಸ್ಕೃತಿಯ ಕುರುಹು ಅಚ್ಚಿನಲ್ಲಿ ಜಾನಪದ ಕಲಾವಿದರ ಕಂಠಗಳಲ್ಲಿದೆ. ಈ ಸಾಹಿತ್ಯ ನಡತೆ, ನಡೆಯಲ್ಲಿ ತುಂಬಿದೆ. ವಿವಿಧ ಭಾಗದ ಗ್ರಾಮೀಣ ಹಾಡುಗಳನ್ನು ಅವಲೋಕಿಸಿದರೆ, ಅದು ಕೋಲಾಟದ ಪದವಿರಲಿ, ಹೆಣ್ಣುಮಕ್ಕಳ ಹಾಡಿರಲಿ, ಲಾವಣಿ ಇರಲಿ ಯಾವುದೇ ಭಾಗದ ಹಾಡಿನ ಮರ್ಮ ಒಂದೇ ಆಗಿದೆ. ಅಶ್ಲೀಲ ಸಾಹಿತ್ಯದ ವಿವಿಧ ಭಾಗಗಳ ಉದಾಹರಣೆಗಳು, ನಿರೂಪಣೆಯೂ ಸಹ ಒಂದೇ ಆಗಿರುವುದು. ಹಿಂದಕ್ಕೆ ಇದರ ಉಗಮದ ಮಟ್ಟ ಒಂದೇ ಸ್ಥಿತಿಯಲ್ಲಿರಬೇಕೆನ್ನುವುದನ್ನು ಸಿದ್ಧಪಡಿಸುತ್ತದೆ. (ಮೇಲ್ನೋಟಕ್ಕೆ ಹಾಡುಗಳಲ್ಲಿ. ಆಚಾರ ವಿಚಾರಗಳಲ್ಲಿ ವೈವಿಧ್ಯತೆಯು ಕಂಡುಬಂದರೂ ಅವುಗಳ ಆಳವಾದ ವಿಶ್ಲೇಷಣೆಯಿಂದ ಅವುಗಳೆಲ್ಲ ಒಂದೇ ಎಂಬುದು ನಿದರ್ಶಿಸಲ್ಪಟ್ಟಿದೆ). ಅಂದರೆ ಅವುಗಳ ಮೂಲಭೂತ ಕ್ರಿಯಾತ್ಮಕ ಯೋಜನೆಗಳು, ಗ್ರಾಮೀಣ ಕಲಾವಿದರ ಭಾವನಾತರಂಗ ಅಶೋತ್ತರಗಳು, ಅವರು ಜೀವನವನ್ನು ಕಾಣುವ ರೀತಿ. ಜೀವನದ ಮೌಲ್ಯಗಳು ಎಲ್ಲಾ ಒಂದೇ ಎಂಬುದು ಸ್ಪಷ್ಟವಾದಂತೆ ಬಾಹ್ಯ ರಚನೆಯ ವೈವಿಧ್ಯವು ವಿಭಿನ್ನ ಪರಿಸರದಿಂದಾಗಿ ರೂಪ ತಳೆಯುತ್ತದೆ. ಪ್ರತಿ ಗ್ರಾಮದಲ್ಲಿಯೂ ಗ್ರಾಮದೇವತೆಗಳಿವೆ. ಇವುಗಳ ಬಗ್ಗೆ ವೇದದಲ್ಲಿಯೂ ಉಲ್ಲೇಖವಿರುವುದರಿಂದ ಅವುಗಳ ಪ್ರಾಚೀನತೆ ಸ್ಪಷ್ಟವಾಗುತ್ತದೆ. ಗ್ರಾಮದೇವತೆಗಳ ಹೆಸರುಗಳು, ದುರ್ಗವ್ವ, ದ್ಯಾಮವ್ವ, ಕೋಣವ್ವ, ಮಣಿಗೇರವ್ವ ಇತ್ಯಾದಿಯಾಗಿ ಗ್ರಾಮದೇವತೆಯ ಕಲ್ಪನೆಯಲ್ಲಿ ಅದಗಿದ ಉದ್ದೇಶ ಒಂದೇ ಆಗಿದೆ. ವೇದದಲ್ಲಿಯ ” ಮಾತೃದೇವತೆ ” (goddess mother) ಮೊಹೆಂಜೋದಾರೋದಲ್ಲಿ ದೊರೆತ ಸ್ತ್ರೀ ವಿಗ್ರಹಗಳೂ ಇದೇ ಅಭಿಪ್ರಾಯವನ್ನು ಸೂಚಿಸುತ್ತವೆ. ಗ್ರಾಮದೇವತೆಗಳನ್ನು ಪೂಜಿಸುವ ರೀತಿ ಅದಕ್ಕೆ ಸಂಬಂಧಿಸುತ್ತವೆ. ಧಾರ್ಮಿಕ ಸಂಪ್ರದಾಯಗಳು ಜನತೆಯ ನಂಬಿಕೆಯ ನಂಬಿಕೆಗೆ ಒಂದೇ ತತ್ವವನ್ನು ಹೊಂದಿದವುಗಳಾಗಿವೆ. ಗ್ರಾಮದೇವತೆಯ ಆರಾಧನಾ ಸಂಪ್ರದಾಯ ಕರ್ನಾಟಕದ ಅತಿ ಪ್ರಾಚೀನ ಸಂಪ್ರದಾಯಗಳಲ್ಲೊಂದು. ಕರ್ನಾಟಕದಲ್ಲಿ ಆರಾಧಿಸಲ್ಪಡುವ ದೇವತೆಗಳಲ್ಲಿ ಎಲ್ಲಮ್ಮ, ಅಂಬಾಭವಾನಿ, ಬಿಂದಿಗಮ್ಮ, ಒಳ್ಗಮ್ಮ, ಸಂತಿ ಚೆಂದಮ್ಮ,, ಬನಶಂಕರಿ, ಚಾಮುಂಡೇಶ್ವರಿ ಮೊದಲಾದ ಪ್ರಸಿದ್ಧವದವುಗಳು. ಈ ದೇವತೆಗಳ ಆರಾಧನೆಯು ಗ್ರಾಮೀಣ ದೇವತೆಗಿಂತ ಹೆಚ್ಚಿನ ಪ್ರಮಾಣದಲ್ಲಿದ್ದು ಸುತ್ತಲಿನ, ದೂರದ ಹಳ್ಳಿಗಳ, ನಗರಗಳ ಭಕ್ತರ ಸಮೂಹವನ್ನು ಹಬ್ಬ ಹರಿದಿನಗಳಲ್ಲಿ ನಾವು ಅಲ್ಲಿ ಕಾಣಬಹುದು. ಜಾನಪದ ಕಥೆಗಳೂ ಸಹ ಕರ್ನಾಟಕದ ಹಿರಿಮೆಯೊಂದಿಗೆ ಸಾಂಸ್ಕೃತಿಕ ಒಗ್ಗಟ್ಟನ್ನು ಸಾರಿ ಹೇಳುತ್ತವೆ. ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿಯ ಪರಶುರಾಮನ ಬಗ್ಗೆ ಇರುವ ದಂತಕತೆಗಳೂ, ವಿಜಾಪುರ ಜಿಲ್ಲೆಯ ಐಹೊಳೆಯಲ್ಲಿ; ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಪ್ರಚಲಿತವಾಗಿರುವ ದಂತಕಥೆಗಳೂ ಎಂತಹ ಏಕತೆಯಿಂದ ಕೂಡಿವೆ. ಎಲ್ಲೆಲ್ಲೂ ಪರಶುರಾಮನು ವಾಸಿಸಿದ್ದ ಕುರುಹುಗಳಿವೆ. ಇವು ಜನತೆಯ ನಂಬಿಕೆಯನ್ನು ಕಟ್ಟಿ ಹಾಕಿವೆ.

ಬೇರೆ ಬೇರೆ ಹಳ್ಳಿಗಳಲ್ಲಿರುವ ದೇವತೆಗಳಿಗೆ ಸಂಬಂಧಿಸಿದ ಪೌರಾಣಿಕ ಕಥೆಗಳೂ ಸಂಸ್ಕೃತಿಯ ಕುರುಹುಗಳು. ಅಲ್ಲಿಯ ದೇವತಾರಾಧನೆಯ ಹೆಸರಷ್ಟೇ ಬದಲಾವಣೆ ; ಭಕ್ತನ ಕಷ್ಟಗಳಾಗಲಿ, ದೈವದ ಸಹಾಯದ ರೀತಿಯಾಗಲೀ ಎಲ್ಲಾ ಒಂದೇ ತರಹ. ವಿವಿಧ ಪ್ರದೇಶಗಳ ಗ್ರಾಮೀಣ ಗೀತೆಗಳ ಅಭ್ಯಾಸದಿಂದ, ಗ್ರಾಮೀಣ ಸಂಸ್ಕೃತಿಯು ಯಾವುದೇ ಒಂದು ಹಳ್ಳಿಯಲ್ಲಿ ‘ಕಾಲು ಮುರಿದು ಬಿದ್ದಿರದೆ’ ವಿಶಾಲವಾದ ನಾಡಿನ ತುಂಬೆಲ್ಲಾ ಸಂಚರಿಸಿದೆ, ಹರಡಿದೆ ಎಂಬುದು ಕಾಣಬಹುದು. (ಎಷ್ಟೋ ಹಾಡುಗಳ ಪದಪುಂಜಗಳು ಧಾರಳವಾಗಿ, ಸರಳವಾಗಿ, ಅನ್ಯೋನ್ಯವಾಗಿ, ಒಂದನ್ನೊಂದು ಹೋಲುತ್ತವೆ.

ನಾಗರಿಕನು ತನ್ನ ಅಂತರಿಕ ಭಾವನೆಯ ಮನಸ್ಸಾಕ್ಷಿ ನಂಬಿಕೆಗಳ ಬೆಳವಣಿಗಾಗಿ ಪ್ರಾಣಿಶಾಸ್ತ್ರ-ಜೀವಶಾಸ್ತ್ರಗಳನ್ನು ಮೊರೆಹೋಗುವುದಿಲ್ಲ. ಆದರೆ ಅಧ್ಯಾತ್ಮಿಕ ಭಾವನೆ, ಪರಿಸರದ ಭಾವನೆ, ಪುರುಷಾರ್ಥಗಳ ಬಗ್ಗೆ ಸಮುದಾಯವು ಹೊಂದಿದ ಅಭಿಪ್ರಾಯಗಳ ಮೊರೆ ಹೊಕ್ಕು ತನ್ನ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತಾನೆ. ಕಲೆ ದಂತಕಥೆಗಳು ಧರ್ಮ ಮತ್ತು ನೀತಿಗಳು ಮಾನವನ ಜೀವನವನ್ನು ನಿರ್ದೇಶಿಸುತ್ತವೆ. ಮತ್ತು ವೈಯಕ್ತಿಕ ಅಭಿಪ್ರಾಯಗಳನ್ನು ಪೂಜಿಸುವುದೂ ಸಮುದಾಯದ ಕಾರ್ಯವಾಗಿದೆ. ಇದರಿಂದ ನಮ್ಮ ಸಂಸ್ಕೃತಿಯು ಮತ್ತು ನಾಗರಿಕತೆಯು ಅವ್ಯಾಹತವಾಗಿ ಸಾಗಿ ಬರಲು ಸಾಧ್ಯವಾಯಿತು. ಅನೇಕ ಸಂಸ್ಕೃತಿಗಳು ಉಚ್ಚ್ರಾಯ ಅವ್ಯಾಹತವಾಗಿ ಸಾಗಿ ಬರಲು ಸಾಧ್ಯವಾಯಿತು. ಅನೇಕ ಸಂಸ್ಕೃತಿಗಳು ಉಚ್ಛ್ರಾಯ ಸ್ಥಿತಿಯನ್ನು ಹೊಂದಿ ನಾಶವಾದರೂ ನಮ್ಮ ಸಂಸ್ಕೃತಿ ಸಜೀವವಾಗಿದೆ. ಕಲೆಯ ಉಗಮವು ಸಮಾಜದ ಪರಿಸರದಲ್ಲಿ ಎಂದು ಸಮಾಜವಿಜ್ಞಾನಿಗಳಲ್ಲಿ ಕೆಲವರು ಅಭಿಪ್ರಾಯ ಪಡುತ್ತಾರೆ. ‘ಕಲೆ ಎಂದರೆ-ಇನ್ನೊಂದರ ಮೇಲೆ, ಅವಲಂಬಿಸಿದ ಸ್ವತಂತ್ರ ಸ್ಥಿತಿಯೊಂದಿದ್ದು ಅರ್ಥಿಕ ಪರಿಸ್ಥಿತಿಯೊಂದಿಗೆ ಬದಲಾವಣೆ ಹೊಂದುವುದು ಎಂದು ವಿದ್ವಾಂಸರು ‘ಕಲೆಯು ಸಮಾಜದ ಅಲೌಕಿಕ ಸಾಂಸ್ಕೃತಿಕ ಘಟಕವೆಂದು ಪರಿಗ್ರಹಿಸುತ್ತಾರೆ. ಇದಕ್ಕಿತಲೂ ಆಳವಾಗಿ ಯೋಚಿಸಿ ಈ ವಿದ್ವಾಂಸರು ಏಕೆ ಬರೆಯಲಿಲ್ಲವೋ ತಿಳಿಯದು. ಸಂಸ್ಕೃತಿಯ ಒಂದು ಅವಿಭಾಜ್ಯ ಘಟಕವೇ ಕಲೆ. ಕಲೆಯು ಸಮಾಜದಲ್ಲಿ ತ್ರಿಮುಖ ರೀತಿಯಿಂದ ಕಾರ್ಯೋನ್ಮುಖವಾಗಿದೆ.

. ರಂಜನೆ :  ಜನ ಸಾಮಾನ್ಯರಿಗೆ ದಿನದ ದುಡಿಮೆಯ ಬೇಸರವನ್ನು ಮನಸ್ಸಿನ ಭಾರವನ್ನು ನೀಗಲು ಈ ರಂಜನೆ ಒಂದು ದಾರಿ. ಕಲೆಯು ಒಂದು ರೀತಿಯ ರಂಜನೆಯನ್ನು, ಮನೋಲ್ಲಾಸವನ್ನು ಕೊಡುತ್ತದೆ. ಗ್ರಾಮೀಣ ಜನರಿಗೆ ಜಾನಪದ ರಂಗ ಭೂಮಿಯು ಉಲ್ಲಾಸವನ್ನು ನೀದುತ್ತದೆ. ಅದರಿಂದಾಗಿ ಅದರಲ್ಲಿ ಅವರು ಬಹಳಷ್ಟು ಅಭಿರುಚಿ ತೋರಿಸುತ್ತಾರೆ ‘ಆಟ’ವನ್ನು ನೋಡಿ ವಾರ ಕಳೆದಿದ್ದರೂ ಅದರಲ್ಲಿಯ ಹಾಸ್ಯವನ್ನೋ, ಹಾಡನ್ನೋ, ಸಂಭಾಷಣೆಯನ್ನೋ ಪುನಃ ಪುನಃ ಜ್ಞಾಪಿಸಿಕೊಂಡು ಸಂತಸಪಡುವರು.

. ದೈವಾರಾಧನೆ :  ಸಂಸ್ಕೃತಿಯ ರೂಪಗಳನ್ನು ಒಂದು ವ್ಯವಸ್ಥಿತ ಪದ್ದತಿ, ರೂಡಿಯನ್ನಾಗಿ ಪರಿವರ್ತಿಸುವುದು ಮಾನವನಿಗೆ ಸಾಧ್ಯವಿದೆ. ಜಾನಪದ ಆಟಗಳಲ್ಲಿ ಸಾಮಾನ್ಯರ ದೈವಿಕ ಭಾವನೆಯನ್ನು ಹುರಿದುಂಬಿಸುವ ಅಥವಾ ಎಚ್ಚರಿಸುವ ಅನೇಕ ಪ್ರಸಂಗಗಳನ್ನು ತುಂಬಿದೆ. ಪ್ರೇಕ್ಷಕರಿಗೆ ಆಟವು ನಡೆದಾಗ ರಂಗಭೂಮಿಯ ಮೇಲಿರುವ ದೇವರನ್ನು ದೈತ್ಯರನ್ನು ಕಾಣುವರೇ ವಿನಾ ತಮ್ಮ ನೆರೆಮನೆಯ ಕಲಾವಿದರನ್ನಲ್ಲ. ಇದರಿಂದಾಗಿ ಜಾನಪದ ಆಟಗಳಲ್ಲಿಯ ದೇವತಾ ಸ್ತುತಿಗಳು, ಹಾಡುಗಳು, ಸಂಭಾಷಣೆಗಳು ಸಮುದಾಯಕ್ಕೆ ಅತಿ ಪ್ರಿಯವಾಗಿ ಕಂಡುಬರುವುವು. ಹೀಗೆ ಧಾರ್ಮಿಕ ಜೀವನದ ಒಲವು, ನೀತಿಮಾರ್ಗದಲ್ಲಿ ಸಾಗುವುದರ ಅವಶ್ಯಕತೆ ಅದರಲ್ಲಿ ಮೂದಿ ಬರುತ್ತದೆ.

. ಉತ್ಪತನ :  ಸಾಮಾನ್ಯನು ತನ್ನ ಆಸೆಯ ಉತ್ಪತನಕ್ಕೆ ಮಾರ್ಗವನ್ನು ಕಂದು ಹಿಡಿಯಲು ಹೆಣಗುತ್ತಾರೆ. ಸುಸಂಸ್ಕೃತ ಜೀವನದಲ್ಲಿ ಇದರ ಮಾರ್ಗಗಳಿವೆ. ಮಾನವನ ದುರ್ಬಲತೆಯನ್ನು ಉನ್ನತ ಗುರಿಯತ್ತಗೊಳಿಸಬೇಕೆ ವಿನಾ ಅದನ್ನು ದೌರ್ಜನ್ಯಕ್ಕೆ ಗುರಿ ಮಾಡುವುದಲ್ಲ. ತನ್ನ ಪ್ರಯೋಜನಕ್ಕಾಗಿ ಇತರರ ದೌರ್ಬಲ್ಯವನ್ನು ಉಪಯೋಗಿಸಿ ಕೊಳ್ಲುವುದಿಲ್ಲ. (ಇಂದಿನ ಸಮಾಜವು ಮುಂದುವರಿದ ಸಮಾಜ ಎಂದು ಹೆಮ್ಮೆ ಪಡುವ ನಾವು ಒಬ್ಬರು ಇನ್ನೊಬ್ಬರ ದುರ್ಬಲತೆಯನ್ನು ಎಂತಹ ರೀತಿಯಲ್ಲಿ ಅಮಾನುಷವಾಗಿ ಹೀರುತ್ತಿರುವುದು ರಾಕ್ಷಸಿ ಪ್ರವೃತಿಯಲ್ಲವೇ?) ವ್ಯಕ್ತಿಯ ದುರ್ಬಲತೆಯನ್ನು ಉತತ್ಪನಗೊಳಿಸುವ ಅನೇಕ ಸಂದರ್ಭಗಳನ್ನು ಜಾನಪದ ರಂಗಭೂಮಿಯು ಜನತೆಗೆ ಒದಗಿಸಿದೆ. (ಒಂದು ನಿಶ್ಚಿತ ಉದಾಹರಣೆಯನ್ನು ಒಂದೆಡೆ ಕೊಡಲಾಗಿದೆ) Martindale:  The literary products of a people by their very natural deal directly with stock of expressed ideas, opinions and sentiments of a people. To these literary products people turn for orientation, for interpretation and guidance from the tangible and contradictions that their social life sets up……..ಎಂದಿದ್ದಾರೆ.

ಅರಿಸ್ಟಾಟಲ್ ಮಹಾಶಯನ ಕಾಲದಿಂದಲೂ ನಾಟಕ ಶಾಸ್ತ್ರಜ್ಞರು ನಾಟಕಗಳೆಂದರೆ ಸಂಸ್ಕೃತಿಯ ಉತ್ಪನ್ನಗಳು. ಅವು ಜನತೆಯ ಭವನೆಗಳನ್ನು ಹೊರದೂಡುವ ಮಾನಸಿಕ ಪ್ರಸನ್ನತೆಯ ಸಾಧನಗಳಾಗಿವೆಯೆಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ನಾಟಕ ಬದ್ಧ ವ್ಯಪ್ತಿಗೆ ಜಾನಪದ ಆಟವೂ ಒಳಗೊಂಡಿದೆ ಎಂದು ಹೇಳಬಹುದು. ಸಮಾಜದಲ್ಲಿ ಕಂಡುಬರುವ ಕುಂದು ಕೊರತೆಗಳು ರಂಗದ ಮೇಲೆ ಬರಲು ಹಾಸ್ಯದ ಹೊರತಾಗಿ ಮನರಂಜನೆ ನೀಡುತ್ತದೆ.

ಕಲಾವಿದ ಮತ್ತು ಪ್ರೇಕ್ಷಕರಿಗೆ ಪ್ರಾಥಮಿಕ ಸಂಬಂಧ ಕಲ್ಪಿಸುವ ಒಂದು ಅವಕಾಶವೇ ಗ್ರಾಮೀಣ ರಂಗಭೂಮಿ, ಅನೇಕ ವೇಳೆ ಕಲಾವಿದ ಸಮಾಜದ ಎಲ್ಲ ಸದಸ್ಯರೊಂದಿಗೆ ಬೆರೆಯದಿರಬಹುದು. ಆಟವು ಒಂದು ಸಂದೇಶವನ್ನು ಬೀರುತ್ತದೆ. ಕಾರಣ ಸಾಮಾಜಿಕ ಕ್ರಿಯೆಯನ್ನು ಇಲ್ಲಿ ನಾವು ಕಾಣಬಹುದು.

ಒಟ್ಟಿನಲ್ಲಿ ಹೇಳುವುದಾದರೆ ಜಾನಪದ ರಂಗಭೂಮಿ, ಅಂದಿನ ಸಮುದಾಯದ ಒಂದು ನಿರ್ದಿಷ್ಟ ಚಟುವಟಿಕೆಯಾಗಿತ್ತು. ಇದು ಅನೇಕ ಶತಮಾನಗಳವರೆಗೆ ಹಳ್ಳಿಯ ಜನತೆಯನ್ನು ರಂಜಿಸಿದೆ. ದೊಡ್ಡಾಟವು ಜರಗುವ ದಿನ ಹಬ್ಬದ ದಿನವಾಗಿತ್ತು. (ಹಬ್ಬದ ದಿನವೇ ಆಟ ನಡೆಯುತ್ತಿದ್ದರೂ, ಆಟವಿಲ್ಲದ ಹಬ್ಬ ಸಪ್ಪೆ ಅಮ್ದಿನ ಜನತೆಯಲ್ಲಿ ಭಾವನೆ ಬೇರೂರಿತ್ತು) ಜನತೆ ಜಾನಪದ ಆಟವನ್ನು ಅಹ್ಲಾದಕ್ಕೊಂದು ಸಾಧನೆಯೆಂದೂ ಧಾರ್ಮಿಕ ಬೆಂಬಲವನ್ನು ಪಡೆದ ಸಮುದಾಯದ ಚಟುವಟಿಕೆಯೆಂದೂ ಭವಿಸಿತ್ತು. ಆದರೂ ಅವರು ಪ್ರೇಕ್ಷಕರಾಗಿ ಮಾತ್ರ ಇರದೆ, ಕಥಾ ಸನ್ನಿವೇಷದೊಂದಿಗೆ ತನ್ಮಯರಾಗಿ ತಮ್ಮ ಅಸ್ತಿತ್ವವನ್ನು ಮರೆಯುತ್ತಿದ್ದಾರೆ.