ಸಾಮಾಜಿಕಾಚರಣೆ : ಕ್ರಿಸ್ತ ಜಯಂತಿಯನ್ನು ಸಾಮಾಜಿಕವಾಗಿ ವಿಶ್ವದಾದ್ಯಂತ ಆಚರಿಸುತ್ತಾರೆ. ಕ್ರಿಸ್ಮಸ್ – ಗೋದಲಿ (Crib) ಕ್ರಿಸ್ಮಸ್ ವೃಕ್ಷ (Christmas tree) ಕ್ರಿಸ್ಮಸ್ ನಕ್ಷತ್ರ, ಕ್ರಿಸ್ಮಸ್ ಹಾಡುಗಳು (Carrols, ಇಗರ್ಜಿಯ ಗಂಟಾಸಾದ ಇವುಗಳೆಲ್ಲವೂ ಕ್ರಿಸ್ಮಸ್ ಹಬ್ಬದ ವಾತಾವರಣವನ್ನು ಮನೆಮಠಗಳಲ್ಲಿ ಹಳ್ಳಿಪಟ್ಟಣಗಳಲ್ಲಿ ಹಬ್ಬಿಸುತ್ತವೆ; ಕ್ರಿಸ್ಮಸ್ ಕಾಲವನ್ನು ಹುಟ್ಟಿಸುತ್ತವೆ.

ಕ್ರಿಸ್ತ ಜಯಂತಿಯೆಂಬುದು ಸಾಮಾಜಿಕ ಹಬ್ಬ. ಮನೆಗೆ ಬಂದವರಿಗೆಲ್ಲ ಅತಿಥಿ ಸತ್ಕಾರ, ಸಿಹಿ ಹಂಚೋಣ ಇದ್ದೇ ಇರುತ್ತದೆ. ಈ ಸತ್ಕಾರ ಆಯಾಯ ಪ್ರದೇಶದ ಸಂಸ್ಕೃತಿಯನ್ನವಲಂಬಿಸಿ ಭಿನ್ನತೆಯನ್ನು ಪಡೆಯುತ್ತದೆ.

ಮಕ್ಕಳಿಗೆ ತಿಂಡಿ ಹಾಗೂ ಬಹುಮಾನ ಹಂಚಲು ಸಾಂತಾಕ್ಲಾಸ್ (Santa Claus St. Nicholas / Nick) ಎಂಬ ಪ್ರತ್ಯೇಕ ಹಗರಣವೇ ಇದೆ. ಫ್ರಾನ್ಸಿನಲ್ಲಿ ಈತನನ್ನು ಕ್ರಿಸ್ಮಸಪ್ಪ  (Christmas Father / Pere Noel ಎಂದು ಕರೆಯುವುದೂ ಉಂಟು. ಇಟಲಿಯಲ್ಲಿ ಸಂತ ಬೆಫಾನ (St. Befana) ಹಗರಣವೇ ಪ್ರಸಿದ್ಧ.

ಈ ಸಂದರ್ಭದಲ್ಲಿ ಕ್ರೈಸ್ತರು ತಂತಮ್ಮಲ್ಲಿಯ ಎಲ್ಲ ವಿರೋಧ. ಮುನಿಸು, ಮತ್ಸರಗಳನ್ನು ಮರೆತು ಪರಸ್ಪರ ಭೇಟಿಯಾಗಿ ಶುಭ ಜಯಂತಿ (Feliz Natale/ Happy Christmas) ಯ ಸಂತಸವನ್ನು ಹಂಚಿಕೊಳ್ಳುತ್ತಾರೆ: ಸಿಹಿಯನ್ನು ಹಂಚುತ್ತಾರೆ. ದೂರವಿದ್ದವರಿಗೆ ಕ್ರಿಸ್ಮಸ್ ಸಂದೇಶವನ್ನು ಹೊತ್ತ ವಿಶೇಷ ಕಾರ್ಡುಗಳನ್ನು ಕಳುಹಿಸುತ್ತಾರೆ.

ಕ್ರಿಸ್ಮಸ್ ಕಾರ್ಡು : ಕ್ರಿಸ್ಮಸ್ ಕಾರ್ಡು ಕಳುಹಿಸುವ ಪದ್ಧತಿ ಮೊದಲು ಪ್ರಾರಂಭಗೊಂಡದ್ದು ಇಂಗ್ಲೆಂಡಿನಲ್ಲಿ, ರೂಯಲ್ ಅಕಾಡೆಮಿಯ ಕಲಾಕಾರನಾದ ಜೊನ್ ಲ್ಕಟ್ ಹೊರ್ಸ್ಲಿ, ಸರ‍್ ಹೆನ್ರಿ ಕೋಲ್ ಎಂಬಾತನಿಗೆ ೧೮೪೩ರಲ್ಲಿ ಪ್ರಪ್ರಥಮ ಕ್ರಿಸ್ಮಸ್ ಕಾರ್ಡು ಚಿತ್ರಿಸಿ ಕಳುಹಿಸಿದನಂತೆ. ಈಗ ಕ್ರಿಸ್ಮಸ್ ಕಾರ್ಡುಗಳನ್ನು ಕಳುಹಿಸುವುದು ಜನಸಾಮಾನ್ಯವಾಗಿದೆಯಲ್ಲದೆ ಅದರ ಪ್ರಭಾವ ದೀಪಾವಳಿ, ನಂತರ ಸಂಕ್ರಾಂತಿ ಯುಗಾದಿ ಮೊದಲಾದ ಭಾರತೀಯ ಹಬ್ಬಗಳ ಸಂದರ್ಭಗಳಲ್ಲಿಯೂ ನಾವು ಕಾಣಬಹುದು.

ಕ್ರಿಸ್ಮಸ್ ಗೋದಲಿ : ಯೇಸುಕ್ರಿಸ್ತ ಹುಟ್ಟಿದ ಬೆತ್ಲೆಹೇಮಿನ ಗೋದಲಿ (Manger) ಯ ಮಾದರಿ ಹಗರಣದ ರೂಪದಲ್ಲಿ ಆಸಿಸಿಯ ಸಂತ ಫ್ಯಾನ್ಸಿಸ್ ಹಾಗೂ ಆತನ ಮಠವಾಸಿಗಳ ಮೂಲಕ ಕ್ರಿ.ಶ. ೧೨೨೬ರಲ್ಲಿ ಪ್ರಸಿದ್ಧಿಗೆ ಬಂತು. ಈ ಹಗರಣದಲ್ಲಿ ಯೋಸೆಫ್, ಮರಿಯಮ್ಮ, ಬಾಲಕ-ಯೇಸು ಇವರ ಜೊತೆಯಲ್ಲಿ ಮೂವರು ಅನ್ಯ ಪಂಡಿತರು (Pagan Wisemen) ಹಾಗೂ ಮೂಕ ಪ್ರಾಣಿಗಳ ಪ್ರತಿನಿಧಿಗಳಾಗಿ ನಂದಿ ಮತ್ತು ಕತ್ತೆ ಪಾತ್ರವಹಿಸುತ್ತಿದ್ದವು. ಕಾಲ ಕಳೆದಂತೆ ಈ ಹಗರಣ ಗೊಂಬೆಗಳ ಮೂಲಕ ಕ್ರಿಸ್ಮಸ್ ಗೋದಲಿ ರೂಪದಲ್ಲಿ ಮನೆಮನೆಗಳಲ್ಲಿ, ಬೀದಿರಸ್ತೆಗಳ ಬದಿಯಲ್ಲಿ ಕಾಣತೊಡಗಿತು.

ಬೆತ್ಲೆಹೇಮಿನ ಗೋದಲಿ ನಮ್ಮ ಪ್ರಜ್ಞಾಪಾತಳಿಯ ಸಂಕೇತ. ಅಲ್ಲಿಯ ಕೇಂದ್ರ, ಕ್ರಿಸ್ತ. ಆತ ನಮ್ಮಲ್ಲಿ ಅರಳಿದಂತೆ ಅಹಂ ಪ್ರಜ್ಞೆ ಅಳಿದು ಹೋಗಿ ಕ್ರಿಸ್ತಾಸ್ಮಿ (Not-I-but-Christ) ಅಮೂರ್ತ ಕ್ರಿಸ್ತನ / ಶಬ್ದ ಬ್ರಹ್ಮನ ಪ್ರೇಮ ಪ್ರೀತಿಗಳಿಗೆ ಪ್ರತ್ಯೇಕ (Lima, 478) ನಾಗಿ ಕಂಗೊಳಿಸುತ್ತಾನೆ. (Jn. 1.14 f. no.) ಕ್ರೈಸ್ತ ಜಾನಪದ ಮಟ್ಟಿಗೆ ಆತ ಅದ್ವಿತೀಯ ಸಂಕೇತ (Only begotten Son Jn 1.18.f)

ಕ್ರಿಸ್ಮಸ್ರ ನಕ್ಷತ್ರ : ಕ್ರಿಸ್ಮಸ್ ಗೋದಲಿಯ ಮೇಲೆ ನಕ್ಷತ್ರ ಸದಾ ಹೊಳೆಯುತ್ತದೆ. ಯೇಸು ಹುಟ್ಟುವಾಗ ವಿದ್ಯುದ್ವೀಪಗಳಾಗಲಿ ಪೆಟ್ರೋಮೆಕ್ಸ್ ಗಳಾಗಲಿ ಇದ್ದಿಲ್ಲ. ಅದು ಹಣತೆಯ ಕಾಲ. ವರ್ಷದ ಬಹುಕಾಲ ಮನೆಯಿಂದ ಹೊರಗೆ ಕುರಿಗಳನ್ನು ಮೇಯಿಸುತ್ತಿದ್ದ ಕುರುಬರಿಗೆ ರಾತ್ರಿವಿಡೀ ಆಗಸದ ನಕ್ಷತ್ರಗಳೇ ಹಣತೆಗಳು.

ಇಂತಹ ಕತ್ತಲಯುಗದಲ್ಲಿ ನಡುರಾತ್ರಿಯ ಕಗ್ಗತ್ತಲಲ್ಲಿ ಜನ್ಮತಾಳಿದ ಯೇಸು ದೀನದಲಿತರಿಗೆ ದಿವ್ಯ ಬೆಳಕಾದ. ಬೆಳಕಿದ್ದಲ್ಲಿ ಕತ್ತಲು ಕವಿಯಬಲ್ಲುದೆ? (Jn.7, 33 1.8, 21 14, 30; 12.31, 32:1, Jn 2, 3, 14; 4, 4; 5, 18) ಕ್ರಿಸ್ಮಸ್ ನಕ್ಷತ್ರ ದಿವ್ಯ ಬೆಳಕಾದ ಕ್ರಿಸ್ತನ ಸಂಕೇತವಾಗಿದೆ. ಕತ್ತಲು ಬೆಳಕುಗಳ ನಿತ್ಯ ಹೋರಾಟದಲ್ಲಿ ಅಂತಿಮ ಜಯ ಬೆಳಕಿಗೆಂಬುದು ಜನಪದ ಆಶಯ. ನಾವು ಅಹಂಭಾವದಿಂದ ದಾರಿ ತಪ್ಪಿಸಿಕೊಂಡಾಗ ಈ ದಿವ್ಯ ನಕ್ಷತ್ರದತ್ತ ದೃಷ್ಟಿಯನ್ನಿಟ್ಟರೆ ನಮ್ಮ ಬದುಕಿಗೆ ಒಂದು ನಿರ್ದಿಷ್ಟ ದಿಕ್ಕು, ಗುರಿ ಹಾಗೂ ಅರ್ಥ ಸಿಗಬಲ್ಲುದು. ಈ ಬೆಳಕನ್ನು ಗಮನಿಸುವುದು ಅಥವಾ ನಿರ್ಲಕ್ಷಿಸುವುದು ನಮ್ಮ ಸ್ವಾತಂತ್ರ‍್ಯಕ್ಕೆ ಬಿಟ್ಟ ವಿಷಯ.

ದಿವ್ಯ ಬೆಳಕಿನ ಆಶಯವನ್ನು ಅಭಿವ್ಯಕ್ತಪಡಿಸಲು ಕಂದೀಲುಗಳನ್ನು ಕಿಟಕಿ ಬಾಗಿಲುಗಳ ಮುಂದೆ ಬೆಳಗಿಸುವುದೂ ಉಂಟು. ಭಾರತದಲ್ಲಿ ಹಣತೆಗಳನ್ನು ಹಚ್ಚುವುದೂ ಉಂಟು. ಸ್ವೀಡನಿನಲ್ಲಿ ಸಂತ ಲೂಸಿಯ ವೇಷ ಹಾಕಿ ಹಸಿರುಬಳ್ಳಿಗಳ ಕಿರೀಟವನ್ನು ಧರಿಸಿ ಅದಕ್ಕೆ ಮೇಣಬತ್ತಿಗಳನ್ನು ಸಿಲುಕಿಸಿ ಡಿಸೆಂಬರ‍್ ೧೩ರ ಮುಂಜಾವಿನಲ್ಲಿ ಮನೆಯನ್ನೆಲ್ಲ ಸುತ್ತಾಡಿ ಬೆಳಕಿನ ಅರ್ಥವನ್ನು ಕ್ರಿಸ್ಮಸ್ ಹಬ್ಬಕ್ಕೆ ಮುಂಚಿತವಾಗಿಯೇ ಎಲ್ಲರ ಗಮನಕ್ಕೆ ತರುವ ಸಂಪ್ರದಾಯವಿದೆ.

ಕ್ರಿಸ್ಮಸ್ ವೃಕ್ಷ : ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಅನೇಕ ದೇಶಗಳಲ್ಲಿ ಶರದೃತು (Autumn) ವಿನ ಕಾಲ. ಶೀತ ವಲಯಗಳಲ್ಲಂತೂ ಎಲ್ಲೆಲ್ಲೂ ದಟ್ಟವಾದ ಹಿಮ ಇದರಿಂದಾಗಿ ಭೂಮಿಯೆಲ್ಲಾ ಬಂಜರು, ಅಹಂಭಾವಿ  ಮಾನವನ ಅರ್ಥಹೀನವಾದ ಪ್ರೀತಿಪ್ರೇಮ ವಾತ್ಸಲ್ಯಗಳನ್ನರಿಯದ ಬರಡು ಜೀವನವನ್ನು ಈ ಋತು ಸಂಕೇತಿಸುತ್ತದೆ.

ಆಧ್ಯಾತ್ಮಿಕ ಬರಡು ಜೀವನವನ್ನು ಹಸನಾಗಿ ಮಾಡಲು ಕ್ರಿಸ್ತ ಅವತರಿಸಿದ್ದಾನೆ (Jn 1, 10)  ಹಸಿರು ವೃಕ್ಷ ಇಂತಹ ಕ್ರಿಸ್ತನಿಗೆ ಸಂಕೇತವಾಗಿದೆ. ಕ್ರಿಸ್ಮಸ್ ವೃಕ್ಷದ ಮೂಲವನ್ನು ನಾವು ಜರ್ಮನಿಯಲ್ಲಿ ಕಾಣುತ್ತೇವೆ. ಇದರ ಸ್ಪಷ್ಟ ಉಲ್ಲೇಖ ಕ್ರಿ.ಶ. ೧೬೪೬ರಲ್ಲಿ ಜರ್ಮನಿಯ ಸ್ಟ್ರಾಸ್ಟರಿ (Strasbury) ಯಲ್ಲಿ ಪ್ರಕಟವಾದ ಪುಸ್ತಿಕೆ (Pamphlet) ಯೊಂದರಲ್ಲಿ (ಪು-೧೦) ಕಾಣುತ್ತೇವೆ.

ಒಂದು ಗಿಡವನ್ನಾಗಲಿ, ಕೊಂಬೆಯನ್ನಾಗಲಿ ತಂದು ಅದನ್ನು ಒಂದು ಪಾತ್ರೆಯಲ್ಲಿ ನೆಟ್ಟು, ಹಣ್ಣು ಹಾಗೂ ಅಲಂಕಾರಗಳಿಂದ ಸಿಂಗರಿಸಿ, ಈ ರೀತಿಯಾಗಿ ಅದಕ್ಕೆ ಹೊಸ ಜೀವ ಕೊಟ್ಟು, ದೀಪಗಳ ಮೂಲಕ ಬೆಳಗಿಸುತ್ತಾರೆ. ಹೀಗೆ ಕ್ರಿಸ್ಮಸ್ ವೃಕ್ಷ ಹೊಸ ಜೀವನ ಹಾಗೂ ದಿವ್ಯ ಬೆಳಕಾದ ಕ್ರಿಸ್ತನ ಸಂಕೇತವಾಗಿ ಕಂಗೊಳಿಸುತ್ತದೆ.

ಕ್ರಿಸ್ಮಸ್ ಹಾಡು : ಹಬ್ಬದ ಸಂತಸವನ್ನು ಅಭಿವ್ಯಕ್ತಗೊಳಿಸಲು, ಕ್ರಿಸ್ಮಸ್ ಸಂದೇಶವನ್ನು ಸಾರಲು ಕ್ರೈಸ್ತರು ಅದರಲ್ಲೂ ಯುವಕರು ತಂಡತಂಡವಾಗಿ ಮನೆ ಮನೆಗಳಿಗೆ ಹೋಗಿ ಹಾಡುತ್ತಾರೆ. ಸಾರ್ವಜನಿಕ ಸಮಾರಂಭಗಳನ್ನು ಏರ್ಪಡಿಸುತ್ತಾರೆ. ಈ ಹಾಡುಗಳಲ್ಲಿ ಶಾಂತಿ (Peace / Pax) ಸ್ಥಾಯೀಭಾವವಾಗಿರುತ್ತದೆ. ಈ ಹಾಡುಗಳ ಮೂಲಕ ಶಾಂತಿದೂತನಾದ ಕ್ರಿಸ್ತನನ್ನು ಜಗತ್ತಿಗೆ ಅವರು ಪರಿಚಯಿಸುತ್ತಾರೆ.

ಸಮಾರೋಪ :

ಮಾನವನ ಆತ್ಮ ಸಾಕ್ಷಾತ್ಕಾರ ಆತನ ಬದುಕಿನ ಪಾರಾಮಾರ್ಥವಾಗಿರುತ್ತದೆ. ಮಾನವತೆಯ ದೈವೀಕರಣವೇ ಮಾನವನ ಬದುಕಿನ ಮೌಲ್ಯ ಹಾಗೂ ಗುರಿ. ಅದನ್ನು ಇಲ್ಲಿ ಮತ್ತು ಈಗ (Here and now) ಸಾಧಿಸಬೇಕೆಂಬುದೇ ಜನಪದರ ಆಶಯ. ಮಾನವತೆಯ ದೈವೀಕರಣ, ಪ್ರಜ್ಞಾ – ಪಾತಳಿಗಳ ಸಾಮರಸ್ಯ, ಈ ಹಿಂದೆಯೇ ಐತಿಹಾಸಿಕ ಯೇಸುವಿನಲ್ಲಿ ನಡೆದಿದೆ ಎನ್ನುವುದೇ ಕ್ರಿಸ್ತ – ಪುರಾಣ. ಯೇಸುಕ್ರಿಸ್ತನೇ ನರ-ಹರಿ, ದೇವ-ಮಾನವ ಎಂಬ ಈ ಕ್ರಿಸ್ತ ಪುರಾಣವನ್ನು ಧಾರ್ಮಿಕ ವಿಧಿಗಳ ಮೂಲಕ ಹರಿದಿನ (Holy day) ವಾಗಿಯೂ ಸಾಮಾಜಿಕವಾಗಿ ಹಬ್ಬದ (Holiday) ಮೂಲಕವೂ ಕ್ರೈಸ್ತ ಜನಪದರು (Christian Folk) ಆಚರಿಸುತ್ತಾರೆ. ಈ ದ್ವಿ ಪಾತಳಿಯ ಕ್ರಿಸ್ತ ಜಯಂತಿಯ ಆಚರಣೆಯನ್ನು ಕ್ರೈಸ್ತ ಸಮುದಾಯ ಕ್ರಿ.ಶ. ೪ನೆಯ ಶತಮಾನದಿಂದಲೂ (Kung 355) ಪ್ರಪಂಚದಲ್ಲೆಲ್ಲಾ ಸಾಮೂಹಿಕವಾಗಿ ಆಚರಿಸುತ್ತಾ ಬಂದಿದೆ.

ಉದ್ಧರಿಸಿದ ಬೈಬಲ್ ಗ್ರಂಥಗಳ ಆಕಾರಾದಿ ಸಂಕೇತಸೂಚಿ
Col :  ಕೊಲೆಸ್ಸೆಯವರಿಗೆ
Gn : ಉತ್ಪತ್ತಿಗ್ರಂಥ/ ಆದಿಕಾಂಡ
Jn : ಯೋಹಾನ
Lk : ಲೂಕ
Mt : ಮತ್ತಾಯ
Ph : ಫಿಲಿಪ್ಪಯವರಿಗೆ
Pr : ಜ್ಞಾನೋಕ್ತಿಗಳು

ಇತರ ಸಂಕೇತಸೂಚಿ :
JB : Jerusalem Bible (ಆಂಗ್ಲ ಬೈಬಲ್ ಸಂಕೇತಸೂಚಿಗಳು  JB ಯನ್ನು ಉದ್ಧರಿಸುತ್ತವೆ.
NC : A new Catechism The Catholic Faith for Adults
Nt : New Testament

ಅಡಿ ಟಿಪ್ಪಣಿಗಳು :

೧. ಶಕ್ತಿಯ ವಿವಿಧ ಮುಖಗಳ ಪರಿಚಯಕ್ಕೋಸ್ಕರ ನೋಡಿ : William Madtha, Sakti, The Feminine Aspect of God in Indian Tradition, Journal of Dharma, Vol V., No.2, April-June 1980, pp. 175-189.

೨. ಯಾವುದಕ್ಕೆ ವಾಚ್ಯಾರ್ಥದೊಂದಿಗೆ ಬೇರೊಂದು ವ್ಯಂಗ್ಯಾರ್ಥವಿದೆಯೋ ಅದನ್ನೇ ಇಲ್ಲಿ ಸಂಕೇತವೆಂದು ಪರಿಗಣಿಸಲಾಗಿದೆ. (Recoeur 12-13)  ಸಂಕೇತದ ವೈಲಕ್ಷಣ ಹಾಗೂ ಕ್ರಿಯೆಗಳನ್ನು ಕುರಿತು ನೋಡಿ : (Cirlot xxxvi) ಮಾನವ ಅಭಿವ್ಯಕ್ತಿಗಳು ಹೆಚ್ಚಾಗಿ ಸಾಂಕೇತಿಕವೇ ಸರಿ. ಈ ಅರ್ಥದಲ್ಲಿ ಆತ ಸಾಂಕೇತಿಕ ಪ್ರಾಣಿ (Animal Symbolicum) ಎಂದರೆ ತಪ್ಪಾಗಲಾರದು (Levi – Strauss 1958.. Ortigues 1962., Cassirer 1967:26).

3. ಪುರಾಣ (Symbolum sub specie aeternitaris) ದ ವಿವಿಧ ವ್ಯಾಖ್ಯೆಗಳನ್ನು ಕುರಿತು ನೋಡಿ : Madtha, 1979:80 f n 3-4. ಬದುಕಿನ ಮೂಲಾರ್ಥ (Ulltimate meaning) ವನ್ನು ಅಭಿವ್ಯಕ್ತಗೊಳಿಸುವ ಕಥಾನಕ (Numinous Story) ವೇ ಪುರಾಣ : ಪುರಾಣದ ಭಾಷ್ಯ (God Talk) ವೇ ಬ್ರಹ್ಮವಿದ್ಯೆ (Theology) ಎಂದು ಸಾಮಾನ್ಯವಾಗಿ ವಿವರಿಸಬಹುದು. ಬ್ರಹ್ಮವಿದ್ಯೆಯ ಅಧ್ಯಯನ ಅಧ್ಯಾಪನ ಮಾಡುವಾತ ಬ್ರಹ್ಮವಾದಿ (Theologian) ಯಾದರೆ ಬ್ರಹ್ಮವಿದ್ಯೆಯ ಸಾಕ್ಷಾತ್ಕಾರವನ್ನು ಪಡೆದವನು ಮಾತ್ರ ಬ್ರಹ್ಮಜ್ಞಾನಿ, ಬ್ರಹ್ಮವಾದಿಗೂ ಬ್ರಹ್ಮಜ್ಞಾನಿಗೂ ಅಜಗಜಾಂತರದ ವ್ಯತ್ಯಾಸ.

೪. ವಿಶ್ವಕ್ರಿಸ್ತ (Cosmic Christ / En Christan) ನ ಕಲ್ಪನೆ ಗ್ರೀಕರಕ್ಷ ಕೊಡುಗೆ (Panikkar 1979:19). ಇದು ಭಾರತೀಯ ಪರಂಪರೆಯ ಈಶ / ಈಶ್ವರ (ಬೃಹದರಣ್ಯಕ ಉಪನಿಷತ್ತು ೪.೪.೧೫: ಶ್ವೇತಾಶ್ವತರ ಉಪನಿಷತ್ತು ೪.೬ ಮತ್ತು ೭ ಅಂತೆಯೇ ಪುರುಷ  / ಪುರುಷೋತ್ತಮ (Cosmic Person) ಕ್ಕೆ (ಶ್ವೇ. ಉ. ೩.೬.೭,೮-೧೪) ಸಂವಾದಿ. ಪುರುಷೋತ್ತಮ ಮತ್ತು ಪರಬ್ರಹ್ಮ ಒಂದೇ ಸತ್ತಿನ ವ್ಯಕ್ತ ಹಾಗೂ ಅವ್ಯಕ್ತ ಸ್ವರೂಪಗಳಾದುದರಿಂದ ಅವರ ಅಭಿನ್ನರು (Jn. 1.1, (Ekkam the one) ಆದರೂ ಜನಪದಗಳಿಗನುಗುಣವಾಗಿ ಈ ಏಕವನ್ನು ಅಭಿವ್ಯಕ್ತಗೊಳಿಸುವ ಸಂಕೇತಗಳು ಅನೇಕವಾಗಿವೆ.

ಮೆಸೆಪೊಟೆಮಿಯ ಪರ್ಷಿಯಾ, ಅಕ್ಕಾದಿಯ, ಸುಮೇರಿಯ, ಆಸ್ಸೀರಿಯ, ಬಾಬಿಲೋನಿಯ, ಫಿನೀಷಿಯ, ಈಜಿಪ್ತ, ಪಾಲೆಸ್ತೀನ, ಸಿರಿಯವೇ ಮೊದಲಾದ ಪೌರ್ವಾತ್ಯ ಸಂಸ್ಕೃತಿಗಳ ಅವಲೋಕನ (World View) ಗಳೂ ಯಹೂದಿ ಮತ್ತು ಕ್ರೈಸ್ತ ಧಾರ್ಮಿಕ ನಂಬಿಕೆಗಳೂ  ಎರಕಗೊಂಡು ಉದ್ಭವಿಸಿದ ಸಾಮೂದಾಯಿಕ ಪ್ರಜ್ಞೆಯ ಅಭಿವ್ಯಕ್ತಿ ವಿಶೇಷದ ದರ್ಶನ ಬೈಬಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿರುವುದರಿಂದ ಬೈಬಲ್ ಮೌಲ್ಯಗಳಿಗೂ ಪೌರ್ವಾತ್ಯ ಸಂಸ್ಕೃತಿಯೇ Sitzim Liben.

೫. ಅಂತರ್ಪಾತಳಿಯನ್ನು ಭಾರತೀಯ ಸಂಪ್ರದಾಯದಲ್ಲಿ ಬ್ರಹ್ಮ (ನ್) / (ಆತ್ಮ/ನ್) ಎಂದು ಕರೆದರೆ ಕ್ರೈಸ್ತ ಸಂಪ್ರದಾಯದಲ್ಲಿ ದೇವರು / ಪವಿತ್ರಾತ್ಮ (God/Holy Spirit) ಎಂದು ಕರೆಯುತ್ತಾರೆ. ಕಾರಣ, ಅನುಭಾವವೆಂದರೆ ಮೂಲತಃ ದೇವ ಪ್ರಜ್ಞೆ (ಸ್ಥಲ – ಪ್ರಜ್ಞೆ) (God experience)

6. ಶಾರ್ದೆಯವರ ವಿಚಾರಗಳು ಬೆಳಕನ್ನು ಕಾಣದಂತೆ ಕ್ರೈಸ್ತ ಧರ್ಮ ಸಭೆ (Church Organization) ವಿಶ್ವ ಪ್ರಯತ್ನ ಮಾಡಿತಲ್ಲದೆ ಅವರನ್ನು ಸ್ವದೇಶದಿಂದ ಗಡಿಪಾರು ಮಾಡಿತು. ೧೯೨೬ರಿಂದ ೧೯೪೦ರ ವರೆಗೆ ಅವರು ಚೀನಾದಲ್ಲಿಯೇ ಉಳಿದುಕೊಂಡಾಗ ಅಲ್ಲಿ ಪೀಕಿಂಗ್ ಮ್ಯಾನ್ (Peking man) ಎಂಬ ಮಾನವ ವಿಕಾಸದ (Evolution) ಕೊಂಡಿ (Missing Link) ಯನ್ನು ಕಂಡು ಹಿಡಿದರು. ೧೯೫೫ರಲ್ಲಿ ಅಮೆರಿಕೆಯಲ್ಲಿ ನಿಧನ ಹೊಂದಿದರು.

ಶಾರ್ದೆಯವರ ಮರಣ ನಂತರವೇ ಆತ ಫ್ರಾನ್ಸಿನಲ್ಲಿ ಹಾಗೂ ಇತರೆಡೆಗಳಲ್ಲಿ ಚರ್ಚಿಸಿ ಕೋಲಾಹಲ ಎಬ್ಬಿಸಿದ ವಿಚಾರಧಾರೆ ಹಲವಾರು ಪುಸ್ತಕಗಳಲ್ಲಿ ಪ್ರಕಟಗೊಂಡಿತು. ಫ್ರಾನ್ಸಿನ ಮ್ಯಾಡಮ್ ರಿಚ್ಚರ್ಡ್ (ಅರವಿಂದಾಶ್ರಮದ ಮಾತೆ ೧೮೭೮-೧೯೭೩) ಶಾರ್ದೆಯವರ ಸಮಕಾಲೀನರಾಗಿ ೧೯೧೪ರ ತನಕ ಫ್ರಾನ್ಸಿನಲ್ಲಿಯೇ ಇದ್ದವರು. ಅರವಿಂದರ (೧೮೭೨-೧೯೫೦) ದ ಲೈಫ್ ಡಿವೈನ ಗ್ರಂಥಕ್ಕೂ ಶಾರ್ದೆಯವರ ’ದ ಡಿವೈನ ಮಿಲ್ಕು’ ಹಾಗೂ ದ ಫಿನೋಮೆನನ್ ಆಫ್ ಮ್ಯಾನ್’ ಗ್ರಂಥಗಳಲ್ಲಿ ಉಕ್ತವಾದ ವಿಚಾರಗಳಿಗೂ ನಿಕಟ ಸಂಬಂಧವಿದೆ. ಹೆನ್ರಿ ಬೆರ‍್ ರ್ಗ್ಲೊಂ (೧೮೫೯-೧೯೪೧) ಅವರ ದ ಕ್ರಿಯೆಟಿವ್ ಎವೂಲ್ಯುಶನ್’ ಗ್ರಂಥ, ಇವರಿಬ್ಬರಗೂ ಪ್ರೇರಣೆ ಆಗದಿರುವ ಸಂಭವವಿಲ್ಲ. ಈ ಮೂವರ ಕೃತಿಗಳನ್ನೋದಿ ಅಂತರ‍್ ಪ್ರಮಾಣಗಳನ್ನು ಗುರುತಿಸಿ ವಿಚಾರಧಾರೆ ಹೇಗೆ ಈ ಕೃತಿಗಳಲ್ಲಿ ಬೆಳೆದಿದೆ ಹಾಗೂ ಯಾರು ಯಾರಿಗೆ  ಎಷ್ಟರ ಮಟ್ಟಿಗೆ ಋಣಿಯಾಗಿರಬಹುದೆಂಬುದನ್ನು ಕಂಡು ಹಿಡಿಯಲೇಬೇಕಾದ ವಿಚಾರ.

ದಿವಾಕರರವರು ಈ ಮೂವರ ಕೃತಿಗಳಲ್ಲಿರುವ ಸಾಮ್ಯತೆಯನ್ನು ಗ್ರಹಿಸಿಕೊಂಡಂತೆ ಕಾಣುತ್ತದೆ (ನೋಡಿ : ಆರ್.ಆರ‍್. ದಿವಾಕರ, ಶ್ರೀ ಅರವಿಂದರ ದರ್ಶನ ಮತ್ತು ಅದರ ವ್ಯಾಪಕತೆ, ಅರವಿಂದ ದರ್ಶನ, ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯ – ೧೯೭೫)

೭. Jn. 3, 34, 5.36, 43: 6.29: 8.42: 10.36 11.42: 17.25 : ನಾನೂ ನನ್ನ ತಂದೆಯೂ ಒಂದೇ (೧೦.೩೦).

೮.Pr. 8.22; Jn 1.1.-5; 8.24; Abhisitananda 1976; 26, 28, 31.34, 57, 58 77-83,89.

೧೦. ಈ ಭಾಷಾಂತರ ನನ್ನದು.

೧೧. ಕೃಷ್ಣ ಜಾನಪದದಲ್ಲಿ ಯೇಸು, ಕ್ರಿಸ್ತನಿಗೆ ಸಂಕೇತವಾದಂತೆ ಕ್ರೈಸ್ತೇತರ ಜಾನಪದಗಳಲ್ಲಿ ರಾಮ, ಕೃಷ್ಣ, ಬುದ್ಧ ಮೊದಲಾದವರು ಸಂಕೇತಗಳಾಗಿರುವುದು (Cobb, Jr. 1975)  ಜಾನಪದದ ಖಾಸಗಿತನಕ್ಕೆ ಉತ್ತಮ ಉದಾಹರಣೆ. ಇದೇ ಕಾರಣಕ್ಕಾಗಿ ಕ್ರಿಸ್ತ ಪುರಾಣ ಕ್ರೈಸ್ತೇತರರಿಗೆ ಅರ್ಥಪೂರ್ಣವಾಗಬೇಕಾಗಿಲ್ಲ. (Gilkey 1969:427) ಸಂಕೇತಗಳನ್ನು ಕುರಿತಾಗಿ ನೊಡಿ : Burkle 1979, 460 : Gilkey 1969:305-415; Panikkar 1980: 177-183.

ಸಂತ ಜೆರಮ್ (adv. Jovinianam 1.42) ಬುದ್ಧ ಜಯಂತಿಯನ್ನು ಕುರಿತು ಬರೆದುದನ್ನು ಗಮನಿಸಿದರೆ ಅದು ಕ್ರಿಸ್ತ ಪುರಾಣಕ್ಕೆ ಸಂವಾದಿಯಾಗಿ ನಿಲ್ಲತಕ್ಕ ಭಾರತೀಯ ಪುರಾಣವೆಂಬುದು ಖಚಿತವಾಗುತ್ತದೆ. (ನೋಡಿ. Watts, 130 f.n.l).

ಕೃಷ್ಣ, ಬುದ್ಧ, ಯೇಸು, ರಾಮಕೃಷ್ಣ ಇವರು ಅವತಾರಿ ಪುರುಷರೆಂಬ ನಂಬಿಕೆ ಭಾರತೀಯ ಜಾನಪದದಲ್ಲಿದೆ. ಪಾಶ್ಯಾತ್ಯಾವಲೋಕದಲ್ಲಿ ಇತಿಹಾಸ ರೇಕಾತ್ಮಕ (Linear) ಆಗಿರುವುದರಿಂದ ಹಲವಾರು ಅವತಾರಗಳು ಅರ್ಥಹೀನವೆಂಬ ಅವರ ವಾದವನ್ನು ಕ್ರೈಸ್ತ ಪಂಡಿತರು ಒಪ್ಪಿಕೊಂಡು ದೇವರ ನರಾವತಾರ ಕೇವಲ ಯೇಸುವಿನಲ್ಲಿ ಆಗಿದೆಂದು ಹೇಳಿ ಯೇಸುವಿನ ಏಕೈಕತೆ (Uniqueness) ಯನ್ನು ಸಾರಿದ್ದಾರೆ. ಪೌರ್ವಾತ್ಯಾವಲೋಕನದಲ್ಲಿ ಇತಿಹಾಸ ಚಕ್ರಾತ್ಮಕ (Cyclic) (Panikkar – 11974:164:) (Schayer, 1938) ಕಾರಣ ಹಲವಾರು ಅವತಾರಗಳು ಅಸಂಬದ್ಧವಾಗಿ ತೋರುವುದಿಲ್ಲ. ಅಲ್ಲಿಯವರೆಗೆ ಹಿಂದಿಂದುಗಳಿಗಿಂತ ಮುಂದು (Future) ಪ್ರಧಾನವಾದರೆ ಇಲ್ಲಿಯವರೆಗೆ ಇಂದು (Hodie) ಈ ಹೊತ್ತು (Nunc /Now) ಪ್ರಧಾನವಾಗಿರುತ್ತದೆ.

೧೨. ಮಾನವತೆ (Human nature) ಯೆಂಬುದು ಮಾನವ ಕುಲದ ಪ್ರತಿಯೊಬ್ಬ ಸದಸ್ಯನಿಗೂ ಸಮಾನವಾಗಿರುವ ಅಂಶವಾದುದರಿಂದ ಕ್ರಿಸ್ತಾವತಾರ ಐತಿಹಾಸಿಕ ಯೇಸುವಿಗೆ ಸೀಮಿತವಾದುದಲ್ಲ : God in Jesus represents God in every man.

ಮಾನವತೆಯ ಆತ್ಮ ಸಾಕ್ಷಾತ್ಕಾರವನ್ನು ಅವರೋಹಣವಾಗಿ ಅವಲೋಕಿಸಿ (in descending outlook) ಅವತಾರ (incarnation / En-Sarkosis  ಎಂದು ಕರೆದರೆ (Rahner, 1975:690-699) ಆರೋಹಣವಾಗಿ (in ascending outlook)  ಅದನ್ನೇ ದೈವೀಕರಣ (Divinization) ಎಂದು ಕರೆಯುತ್ತಾರೆ. (Watts, 133 f.n. 3 ): (The Desceni of God is the ascent of man ) (Cf. St. Leo, Sermo Vlt de Nativitate Domini, ii; LXXIII, iv; Kng, 439).

13. Cf St. Augustine, Serme 190. 1; PL 38, 1007, 1009, St. Leo, Sermo 22.6; 27.4: PL 54, 198 218 & 219: Ferm 164, 164 & 232: Pike 100, 132.

ಈ ಆಚರಣೆಯ ಕುರಿತಾದ ಹಲವಾರು ಪ್ರಮೇಯಗಳನ್ನು ಕುರಿತು ನೋಡಿ : Puthannangadi, 451-452.

ಯೇಸುವಿನ ಜನ್ಮದಿನ ಇತಿಹಾಸದಲ್ಲಿ ದಾಖಲಾಗಿಲ್ಲ. ಆತ ಹುಟ್ಟಿದ ದಿನ ವಸ್ತು ನಿಷ್ಟವಾಗಿ ಇನ್ನೂ ಯಾರೂ ಅರಿಯರೆಂಬುದು ನಗ್ನ ಸತ್ಯ; ಕುಳ್ಳದೆನಿಸ್ (Dionysius Exiguus) ಎಂಬ ಕ್ರಿ.ಶ. ೬ನೆಯ ಶತಮಾನದ ಕ್ರೈಸ್ತ ಮಠವಾಸಿ (Monk) ಬೈಬಲನ್ನು (Lk. 3. 23)  ಆಧರಿಸಿ ಯೇಸುವಿನ ಜನ್ಮದಿನವನ್ನು ನಿರ್ಧರಿಸಿದರು. ಆದರೆ ಲೆಕ್ಕ ಸ್ವಲ್ಪ ತಪ್ಪಿ ಹೋದುದರಿಂದ ಯೇಸುವಿನ ಜನನ ಕ್ರಿ. ಪೂ. ೪ ರಿಂದ ೭ ರ ವರೆಗೆ ಹಿಂದೂಡಬೇಕಾಗುತ್ತದೆಂದು ತಜ್ಞರ ಅಭಿಪ್ರಾಯ NC, 83:; JB, Lk 2a & 3a.

14. ಚೇಸಾರ‍್ ಔಗುಸ್ತಸ್ (Caesar Augustus) ಕ್ರಿ.ಪೂ. ೩೦ ರಿಂದ ಕ್ರಿ. ೧೪ರ ವರೆಗೆ ರೋಮಿನ ಚಕ್ರಾಧಿಪತಿಯಾಗಿದ್ದ. ಇಸ್ರೇಲರು ಈ ಚಕ್ರವರ್ತಿಯ ದಾಸ್ಯತನದಲ್ಲಿದ್ದರು.