(ಕ್ರಿ. ಶ. ೧೮೮೦-೧೯೪೬) (ಟೆಲಿವಿಷನ್)

“ಮೂರ್ಖರ ಪೆಟ್ಟಿಗೆ ” ಎಂದು ಕರೆಯಲ್ಪಡುವ ಟೆಲಿವಿಷನ್ (ದೂರದರ್ಶನ ಸೆಟ್ಟು) ಇಂದು ನಮ್ಮ ಬದುಕಿನಲ್ಲಿ ಬಹು ಮಹತ್ವದ ಪಾತ್ರ ವಹಿಸುತ್ತಿದೆ. ಪ್ರತಿಯೊಂದು ಮನೆಯನ್ನೂ “ಕಿರು ಥಿಯೇಟರ್ ” ಆಗಿ ಮಾಡುತ್ತಿದೆ ಈ ಸೆಟ್ಟು. ಜಗತ್ತಿನಲ್ಲಿ ಸಂಭವಿಸುವ ಘಟನೆಗಳನ್ನೂ ತೋರಿಸುತ್ತಿದೆ ಇದು. ಇಂಥ ಅದ್ಭುತ ಯಂತ್ರವನ್ನು ಕಂಡು ಹಿಡಿದ ವಿಜ್ಞಾನಿ, ಜಾನ್ ಲೋಗಿ ಬೇಯರ್ಡ್.

ಜಾನ್ ಲೋಗಿ ಬೇಯರ್ಡ್ ಸ್ಕಾಟ್ಲೆಂಡಿನ ಒಬ್ಬ ಎಂಜಿನೀಯರ್ ಆಗಿದ್ದರು. ಆತ ಜನಿಸಿದ್ದು ೧೮೮೮ರಲ್ಲಿ. ಅವರು ಲಂಡನಿನಲ್ಲಿ ಕಾರ್ಯ ಮಾಡುತ್ತಿದ್ದರು.

ಇವರಿಗೆ ಮುಂಚೆ ದೂರದರ್ಶನ ಚಿತ್ರಗಳನ್ನು ಕಿರುಪರದೆಯ ಮೇಲೆ ಪಡೆಯಲು ಫ್ರಾನ್ಸಿನಲ್ಲಿ ವಾಸವಾಗಿದ್ದ ಇಟಲಿಯ ಪಾದ್ರಿ ಅಬ್ಬೆ ಕ್ಯಾಸೆಲಿ, ಆಂಗ್ಲ ವಿಜ್ಞಾನಿ ಷೆಲ್ಫರ್ಡ್ ಬಿಡ್ ವೆಲ್ , ಸ್ಕಾಟ್ಲೆಂಡಿನ ಆಯಲನ್ ಕ್ಯಾಂಪ್ ಬೆಲ್ ಸ್ಟಿಂಟನ್, ರಶಿಯದ ಬರೀಸ್ ರೋಸಿಂಗ್ ಮೊದಲಾದವರು ಪ್ರಯತ್ನ ಮಾಡಿದ್ದರು. ಆದರೆ ಜಾನ್ ಲೋಗಿ ಬೇಯರ್ಡ್‌ ಅವರೇ ಮೊತ್ತಮೊದಲನೆಯ ನಿಜವಾದ ಟೆಲಿವಿಷನ್ ಅನ್ನು (ದೂರದರ್ಶನ) ೧೯೨೬ರಲ್ಲಿ ಪ್ರದರ್ಶಿಸಿದರು. ಅವರು ತನ್ನ ಆ ಉಪಕರಣವನ್ನು “ನಿಸ್ತಂತು ದರ್ಶನ” (ಸೀಯಿಂಗ್ ಬೈ ವೈಯರ್ ಲೆಸ್) ಎಂದು ಕರೆದಿದ್ದರು. ದೂರದರ್ಶನ ಚಿತ್ರವನ್ನು ಮೊತ್ತ ಮೊದಲು ಬಿತ್ತರಿಸಿದ್ದು ಅದರಲ್ಲೇ.

ಎರಡೇ ವರ್ಷಗಳಲ್ಲಿ, ೧೯೨೮ರಲ್ಲಿ, ಆತ ವರ್ಣ ಟೆಲಿವಿಷನ್ ಅನ್ನೂ ತಯಾರು ಮಾಡಿದರು. ೧೯೨೯ರಲ್ಲಿ ಬಿಬಿಸಿ ಟ್ರಾನ್ಸ್ ಮೀಟರ್ ಅನ್ನು ಬಳಸಿ ಕೊಂಡು ಪ್ರತಿದಿನ ಕಪ್ಪು-ಬಿಳುಪು ದೂರದರ್ಶನ ಬಿತ್ತರಣೆಯ ಕಾರ್ಯದಲ್ಲಿ ತೊಡಗಿದರು.

ಆದರೆ ಆತ ತನ್ನ ದೂರದರ್ಶನ ವ್ಯವಸ್ಥೆಯಲ್ಲಿ ಇಲೆಕ್ಟ್ರಾನಿಕ್ ಪದ್ಧತಿಗೆ ಬದಲು ಮೆಕ್ಯಾನಿಕಲ್ ಪದ್ಧತಿಗೇ ಆದ್ಯತೆ ನೀಡಿದ್ದರು.

ಜಾನ್ ಲೋಗಿ ಬೇಯರ್ಡ್ ೧೯೪೬ರಲ್ಲಿ ನಿಧನ ಹೊಂದಿದರು.