ಕೇಂದ್ರ ಅಬಕಾರಿ ಮತ್ತು ಸೀಮಾ¸ಸುಂಕ ಮಂಡಳಿ ನವ ದೆಹಲಿ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಮುನ್ನುಡಿ

ಸಂವಿಧಾನದ 101ನೇ ತಿದ್ದುಪಡಿ ಕಾಯ್ದೆಯು 2006ರ ಸೆಪ್ಟಂಬರ್ 8ರಿಂದ ಜಾರಿಗೊಂಡಿದ್ದು ಮತ್ತು ಜಿ.ಎಸ್.ಟಿ.ಪರಿಷತ್ತು ಸೆಪ್ಟಂಬರ್ 15ರಂದು ಅಧಿಸೂಚಿಸಿದ್ದು ಜಿ.ಎಸ್.ಟಿ.ಯನ್ನು ಜಾರಿಗೊಳಿಸಲು ಮಾರ್ಗವು ಮುಕ್ತವಿದೆ. ಪರೋಕ್ಷ ತೆರಿಗೆಗಳಲ್ಲಿ ಬೃಹತ್ಸುಧಾರಣೆಯನ್ನು ತರಲಿರುವ ಜಿ.ಎಸ್.ಟಿ.ಯನ್ನು 2017ರ ಏಪ್ರಿಲ್ 1ರಿಂದ ಜಾರಿಗೊಳಿಸಲು ಸರ್ಕಾರವು ಉತ್ಸುಕವಾಗಿದೆ. ಒಂದು ಬೃಹತ್ಸವಾಲೆಂದರೆ ಕೇಂದ್ರ ಮತ್ತು ರಾಜ್ಯಗಳ ಪರೋಕ್ಷ ತೆರಿಗೆ ಅಧಿಕಾರಿಗಳಿಗೆ ಮತ್ತು ವಾಣಿಜ್ಯ ಸಮುದಾಯಕ್ಕೆ ಜಿ.ಎಸ್.ಟಿ.ಯ ತತ್ವಸಿದ್ಧಾಂತಗಳು, ಅನುಕರಣೀಯ ಕ್ರಮಗಳು ಮತ್ತು ವೈಧಾನಿಕತಕೆಯ ಬಗ್ಗೆ ತರಬೇತಿ ನೀಡಿ ಅಣಿಗೊಳಿಸುವುದಾಗಿದೆ.
ಸೀಮಾ ಸುಂಕ, ಕೇಂದ್ರ ಅಬಕಾರಿ ಮತ್ತು ಮಾದಕ ವಸ್ತು ರಾಷ್ಟ್ರೀಯ ಅಕಾಡೆಮಿ (NACEN), ಅಂದರೆ ಪರೋಕ್ಷ ತೆರಿಗೆ ಮಂಡಳಿಯ ಪರೋಕ್ಷ ತೆರಿಗೆ ವಿಚಾರವಾಗಿ ಸಾಮರ್ಥ್ಯ ಸೃಜಿಸಲು ಇರುವ ಪರಮೋಚ್ಛ ತರಬೇತಿ ಸಂಸ್ಥೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಜಿ.ಎಸ್.ಟಿ. ತರಬೇತಿ ನೀಡುವ ಆಜ್ಞಾನುವರ್ತಿಯಾಗಿದೆ. ಜಿ.ಎಸ್.ಟಿ.ಜಾರಿಗೊಂಡಾಗ ಅದನ್ನು ಸಮರ್ಥವಾಗಿ ಜಾರಿಗೊಳಿಸಲೋಸುಗ ಕೇಂದ್ರ ಮತ್ತು ರಾಜ್ಯಗಳ ಸುಮಾರು 60 ಸಾವಿರ ಪರೋಕ್ಷ ತೆರಿಗೆ ಅಧಿಕಾರಿಗಳಿಗೆ ತರಬೇತಿ ನೀಡಿ ಸಮರ್ಥರನ್ನಾಗಿಸುವ ಬೃಹತ್ ಕೈಂಕರ್ಯವು ಎನ್ಏಸಿಈಎನ್ (ನೇಸನ್) ದಾಗಿದೆ. ಈಗಾಗಲೇ ನೇಸನ್ ರಾಷ್ಟ್ರಾದ್ಯಂತ ಕಾರ್ಯ ಕ್ಷೇತ್ರಾಧಿಕಾರಿಗಳಿಗೆ ತರಬೇತಿ ನೀಡಲು ಅನುವಾಗುವಂತೆ ಸುಮಾರು 2000 ತರಬೇತುದಾರರ ತಂಡವನ್ನು ಅಣಿಗೊಳಿಸಿದೆ. ಲಭ್ಯವಿರುವ ಕಾಲಮಿತಿಯನ್ನು ಪರಿಗಣಿಸಿ, ಕೋಣೆ ತರಬೇತಿಯಲ್ಲದೆ ಸುಧಾರಿತ ಮಾಹಿತಿ ತಂತ್ರಜ್ಞಾನ ಸಲಕರಣೆಗಳಾದಂತಹ ವಿಧ್ಯುನ್ಮಾನ ಕಲಿಕೆ ಅಲ್ಲದೆ ಛಾಯಾಕೋಣೆಯಂತಹ ಅನುಕೂಲಗಳನ್ನು ನೇಸನ್ ಕಂಡುಕೊಂಡಿದ್ದು ಅಧಿಕ ವ್ಯಾಪ್ತಿಗೆ ಪಸರಿಸುತ್ತಿದೆ.
ಈ ಸಾಮರ್ಥ ಸಂವರ್ಧನೆಯ ಭಾಗವಾಗಿ ನೇಸನ್ ಸಂಸ್ಥೆಯು ಪದೇ ಪದೇ ಕೇಳಲಾದ ಪ್ರಶ್ನೆಗಳ ಕ್ರೋಢಿತ ಕೈಪಿಡಿಯನ್ನು ತರಬೇತಿಯ ಸಂದರ್ಭದಲ್ಲಿ ಮತ್ತು ಪರಸ್ಪರ ಸಂವಾದದಲ್ಲಿ ಲಭಿಸಿದ ಮಾಹಿತಿಯನ್ನು ಅನುಸರಿಸಿ ಅಣಿಗೊಳಿಸಿದೆ. ಇದು ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾದರಿ ಜಿ.ಎಸ್.ಟಿ.ಕಾಯ್ದೆಯನ್ನು ಅರ್ಥಮಾಡಿಕೊಳ್ಳಲು ಸಹಕರಿಸುತ್ತದೆ. ಈ ಪೂನ:ರಪಿ ಪ್ರಶ್ನೋತ್ತರ ಮಾಲೆಯನ್ನು ಕೇಂದ್ರ ಮತ್ರು ರಾಜ್ಯ ಅಧಿಕಾರಿಗಳ ತಂಡವು ಸಿದ್ಧಪಡಿಸಿ ಪರ್ಯಾವಲೋಕಿಸಿದೆ. ಈ ಹೊತ್ತಿಗೆಯನ್ನು ಸಿದ್ಧಪಡಿಸುವಲ್ಲಿ ಶ್ರಮಿಸಿರುವ ಎಲ್ಲ ಅಧಿಕಾರಿಗಳಿಗೆ ಮತ್ತು ಓಂಅಇಓನ ಪ್ರಯತ್ನಗಳಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಪೂನ:ರಪಿ ಪ್ರಶ್ನೋತ್ತರ ಮಾಲೆಯು 24 ಅಧ್ಯಾಯಗಳ ಸುಮಾರು ಐನೂರು ಪ್ರಶ್ನೆಗಳನ್ನು ಹೊಂದಿದ್ದು ಜಿ.ಎಸ್.ಟಿ.ಯ ಜ್ಞಾನ ಭಂಡಾರವನ್ನು ತೆರಿಗೆ ಅಧಿಕಾರಿಗಳು, ವಾಣಿಜ್ಯ ಸಮುದಾಯ ಮತ್ತು ಸಾರ್ವಜನಿಕರು ಸೂರೆಗೊಳ್ಳುವಂತಹವುದಾಗಿರುವುದೆಂದು ನಾನು ನಂಬುತ್ತೇನೆ. ಸಾರ್ವಜನಿಕ ವಲಯಕ್ಕೆ ಬಿಡುಗಡೆ ಮಾಡಲಾದ ಮಾದರಿ ಜಿ.ಎಸ್.ಟಿ.ಕಾಯ್ದೆಯಾಧರಿತ ಮೊದಲ ಆವೃತ್ತಿಯಿದು. ಸಂಬಂಧಿಸಿದ ಕಾಯ್ದೆಗಳು ಮತ್ತು ನಿಯಮಗಳು ರೂಪಗೊಂಡಾದ ಮೇಲೆ NACEN ಸಂಸ್ಥೆಯು ಪೂನ:ರಪಿ ಪ್ರಶ್ನೋತ್ತರ ಮಾಲೆಯ ಉತ್ತೇದಿತ ಆವೃತ್ತಿಯನ್ನು ಹೊರತರುತ್ತದೆ.

ನಜೀಬ್ ಷಾ

ಅಧ್ಯಕ್ಷರು, ಸಿಬಿಈಸಿ


ಪರಿವಿಡಿ

 

 1. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸ್ಥೂಲ ಪರಿಚಯ 1
 2. ತೆರಿಗೆ ವಿಧಿಸುವುದು ಮತ್ತು ತೆರಿಗೆ ವಿನಾಯಿತಿ 9
 3. ನೊಂದಣೀ 12
 4. ಪೂರೈಕೆಯ ಅರ್ಥ ಮತ್ತು ವ್ಯಾಪ್ತಿ 21
 5. ಪೂರೈಕೆ ಸಮಯ 24
 6. ಜಿಎಸ್ಟಿ ಯಡಿಯಲ್ಲಿ ಮೌಲ್ಯಮಾಪನ 27
 7. ಜಿಎಸ್ಟಿ ಯಲ್ಲಿ ತೆರಿಗೆ ಪಾವತಿಗಳು 30
 8. ವಿದ್ಯುನ್ಮಾನ ವಾಣಿಜ್ಯೋದ್ಯಮ 35
 9. ಬಿಡಿಗೆಲಸ 39
 10. ಹೂಡುವಳಿ ತೆರಿಗೆಜಮೆ(ಐಟ್ಕಿಸಿ) 41
 11. ಜಿಎಸ್ಟಿ ಅಡಿಯಲ್ಲಿ ಹೂಡುವಳಿ ಸೇವೆಗಳ ಹಂಚಿಕೆದಾರರ ಪರಿಕಲ್ಪನೆ 47
 12. ರಿಟರ್ನ್ಸ್‌ (ವಿವರಣೆಗಳು) ಸಲ್ಲಿಸುವ ಪ್ರಕ್ರಿಯೆ ಮತ್ತು ಹೂಡುವಳಿ ತೆರಿಗೆ ಜಮೆ ಹೊಂದಾಣಿಕೆ 50
 13. ಮೌಲ್ಯಮಾಪನ ಮತ್ತು ಲೆಕ್ಕತಪಾಸಣೆ 55
 14. ಮರುಪಾವತಿ (ರೀಫಂಡ್) 60
 15. ಬೇಡಿಕೆ ಮತ್ತು ವಸೂಲಿ 63
 16. ಜಿಎಸ್ಟಿಯಲ್ಲಿ ಮೇಲ್ಮನವಿ, ಪೂನರಾವಲೋಕನ ಮತ್ತು ಪೂನರ್‌ವಿಮರ್ಶೆ 67
 17. ಮುಂಗಡ ಆದೇಶ 71
 18. ಇತ್ಯರ್ಥ ಆಯೋಗ 74
 19. ತನಿಖೆ, ಶೋಧ, ವಶ ಮತ್ತು ಬಂಧನ 78
 20. ಅಪರಾಧ ಮತ್ತು ದಂಡ, ಅಭಿಯೋಜನೆ ಮತ್ತು ರಾಜಿ ಪ್ರಕ್ರಿಯೆ 87
 21. ಐಜಿತಎಸ್ಟಿ ಅಧಿನಿಯಮದ ಅವಲೋಕನ 95
 22. ಸರಕು ಮತ್ತು ಸೇವಾ ಪೂರೈಕೆಯ ಸ್ಥಳ 98
 23. ಜಿಎಸ್ಟಿ ಪೋರ್ಟಲ್‌ ಮೂಲಕ ಫ್ರಂಟ್ ಎಂಡ್‌ ಬಿಸಿನೆಸ್‌ ಪ್ರಕ್ರಿಯೆ 103
 24. ಬದಲಾವಣೆ ವ್ಯವಸ್ಥೆಗಳು 112

ಶ್ರೀ ಸಮೀರ್‌ ಬಜಾಜ್‌ ಹೆಚ್ಚುವರಿ ನಿರ್ದೇಶಕ NACEN, ಮುಂಬೈ ಇವರ ಮೇಲ್ವಿಚಾರಣೆಯಲ್ಲಿ ಶ್ರೀ ದೀಪಕ್‌ಮಾತಾ, ಸಹಾಯಕ ನಿರ್ದೇಶಕರು, NACEN ,ಮುಂಬೈ ಮತ್ತು ಸಂಜೀವ್‌ ನಾಯರ್‌ ಎಕ್ಸಾಮಿನರ್ CESTAT ಮುಂಬೈ ಸಿದ್ಧಪಡಿಸಲಾಗಿದೆ.

ವಿಮರ್ಶೆ :
ಶ್ರೀಪಿ.ಕೆ.ಮೊಹಂತಿ, ಸಲಹೆಗಾರ, ಸಿಬಿಇಸಿ (ಅಧ್ಯಾಯ1); ಶ್ರೀ ವಿಶಾಲ್‌ ಪ್ರತಾಪ್‌ ಸಿಂಗ್, ಡಿಸಿ (ಜಿಎಸ್ಟಿ), ಜಿಎಸ್ಟಿ ನೀತಿ ವಿಂಗ್, ಸಿಬಿಇಸಿ (ಅಧ್ಯಾಯ 2), ಡಾ ಪಿ.ಡಿ. ಸಿಂಗ್ ವಘೇಲಾ, ಸಿಸಿಟಿ ಗುಜರಾತ್ (ಅಧ್ಯಾಯ 3 ಮತ್ತು 7.); ಶ್ರೀ ಡಿ.ಪಿ.ನಾಗೇಂದ್ರಕುಮಾರ್, ಪ್ರಿನ್ಸಿಪಾಲ್. ADG, DGCEI, ಬೆಂಗಳೂರು (ಅಧ್ಯಾಯ.4ರಿಂದ6) ; ಶ್ರೀ ಉಪೇಂದ್ರಗುಪ್ತಾ ಕಮಿಷನರ್, ಜಿಎಸ್ಟಿ, ಸಿಬಿಇಸಿ (ಅಧ್ಯಾಯ.8 ರಿಂದ11); ಶ್ರೀ ರಿತ್ವಿಕ್‌ಪಾಂಡೆ, ಸಿಸಿಟಿ, ಕರ್ನಾಟಕ (ಅಧ್ಯಾಯ.12); ಶ್ರೀ ಅರುಣ್ ಕುಮಾರ್‌ಮಿಶ್ರಾ, ಜಂಟಿಕಾರ್ಯದರ್ಶಿ CTD ಬಿಹಾರ (ಅಧ್ಯಾಯ13.); ಶ್ರೀ ಖಾಲಿದ್ಅನ್ವರ್,ಹಿರಿಯ ಜೆಸಿಟಿ ಡಬ್ಲ್ಯೂಬಿ (ಅಧ್ಯಾಯ14&24); ಶ್ರೀ ಅಜಯ್‌ ಜೈನ್‌, ಪ್ರಿನ್ಸಿಪಾಲ್. ಕಸ್ಟಮ್ಸ್‌ಆಯುಕ್ತರು, ಅಹಮದಾಬಾದ್ (ಅಧ್ಯಾಯ15.); ಶ್ರೀ ಬಿ.ಬಿ.ಅಗರ್ವಾಲ್, ಪ್ರೆಸ್.ಕಮಿಷನರ್, ಹೈದರಾಬಾದ್ (ಅಧ್ಯಾಯದ16.) ; ಶ್ರೀ ಶಶಾಂಕ್‌ ಪ್ರಿಯಾ ಎ.ಡಿ.ಜಿ.ಡಿ.ಜಿಜಿಎಸ್ಟಿ, ಸಿಬಿಇಸಿ (ಅಧ್ಯಾಯ 17 ರಿಂದ 20.); ಶ್ರೀ ಜಿ.ಡಿ. ಲೊಹಾನಿ, ಸಿಸಿಇ, ಫರಿದಾಬಾದ್ (ಅಧ್ಯಾಯ 21 ಮತ್ತು 22.); ಮತ್ತು ಶ್ರೀ ಪ್ರಕಾಶ್ ಕುಮಾರ್, ಸಿಇಒ, GSTN (ಅಧ್ಯಾಯ. 23).

FAQ ಮೇಲಿನ ಪ್ರತಿಕ್ರಿಯೆಗಳನ್ನು ಮತ್ತು ಸಲಹೆಗಳನ್ನು ದಯವಿಟ್ಟು dg.nacen-cbec@nic.in ಗೆ ಕಳುಹಿಸಬಹುದು.

ಹಕ್ಕುತ್ಯಾಗ :
ಜಿಎಸ್ಟಿಯ ಆಗಿಂದ್ದಾಗೆ ಕೇಳಲ್ಪಡುವ ಪ್ರಶ್ನೆಗಳನ್ನು NACEN ಸಂಗ್ರಹ ಮಾಡಿದೆ. ಹಾಗೂ ಇದು ಸಾರ್ವಜನಿಕರಿಗಾಗಿ 2016ರ ಜೂನ್‌ನಲ್ಲಿ ಬಿಡುಗಡೆಯಾಗಿದ್ದರಿಂದ ತರಬೇತುದಾರರು ಮಾದರಿ ಜಿಎಸ್ಟಿನಿಯಮಗಳ ಆಧಾರವಾಗಿದೆ. ಈ FAQ ತರಬೇತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ. ಈ ಕಿರು ಪುಸ್ತಕದಲ್ಲಿರುವ ಮಾಹಿತಿಯನ್ನು ಸಾಮಾನ್ಯ ಅವಲೋಕನ ಮತ್ತು ಕಾನೂನು ಸಲಹೆ ಅಥವಾ ಅಭಿಪ್ರಾಯವಾಗಿ ನೀಡಲು ಮಾತ್ರ ಉದ್ದೇಶಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ, ಮಾದರಿ ಜಿಎಸ್ಟಿ ಕಾನೂನನ್ನು ನೋಡಲು ಕೋರಲಾಗಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸ್ಥೂಲ ಪರಿಚಯ

1. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸ್ಥೂಲ ಪರಿಚಯ

ಪ್ರಶ್ನೆ1: ಸರಕು ಮತ್ತುಸೇವಾ ತೆರಿಗೆ (ಜಿಎಸ್ಟಿ) ಎಂದರೇನು?

ಉತ್ತರ: ಜಿಎಸ್ಟಿ ಎಂದರೆ ಸರಕು ಮತ್ತು ಸೇವೆಗಳ ಬಳಕೆಯ ಮೇಲೆ ಗುರಿ-ಆಧಾರಿತ ತೆರಿಗೆ ವ್ಯವಸ್ಥೆ. ಸರಕಿನ ತಯಾರಿಕೆ ಹಂತದಿಂದ ಪ್ರಾರಂಭಿಸಿ ಅಂತಿಮ ಬಳಕೆಯ ಎಲ್ಲಾಹಂತಗಳಲ್ಲಿ ಈ ತೆರಿಗೆಯನ್ನು ವಿಧಿಸಲಾಗುವುದು. ಹಿಂದಿನ ಹಂತದಲ್ಲಿ ನೀಡಿದ ತೆರಿಗೆಯನ್ನು ಮುಂದಿನ ಹಂತದಲ್ಲಿ ಮನ್ನಾ ಮಾಡಲಾಗುವುದು. ಸಂಕ್ಷಿಪ್ತವಾಗಿ ಹೇಳುವುದಾದಲ್ಲಿ, ಸರಕಿನ ಮೌಲ್ಯವರ್ಧನೆ ಮೇಲೆ ಮಾತ್ರ ತೆರಿಗೆ ವಿಧಿಸಲಾಗುವುದು ಮತ್ತು ಅಂತಿಮ ಬಳಕೆದಾರ ತೆರಿಗೆಯ ಹೊರೆಯನ್ನು ಸಹಿಸಬೇಕಾಗುತ್ತದೆ.

ಪ್ರಶ್ನೆ2: ಗುರಿ ಆಧಾರಿತ ತೆರಿಗೆಯ ಪರಿಕಲ್ಪನೆ ಏನು?

ಉತ್ತರ: ಈ ಪರಿಕಲ್ಪನೆಯ ಅಡಿಯಲ್ಲಿ,ತೆರಿಗೆಯು ಸರಕಿನ ಬಳಕೆಯಾಗುವ ಸ್ಥಳದ ಮೇಲೆ ಅಧಿಕಾರವ್ಯಾಪ್ತಿ ಇರುವ ತೆರಿಗೆ ಪ್ರಾಧಿಕಾರಕ್ಕೆ ಸಂಚಿತವಾಗುತ್ತದೆ. ಈ ಸ್ಥಳವನ್ನು ಸರಕನ್ನು ಪೂರೈಸುವ ಸ್ಥಳವೆಂದೂ ಪರಿಗಣಿಸಲಾಗುತ್ತದೆ.

ಪ್ರಶ್ನೆ3: ಪ್ರಸ್ತುತ ಚಾಲ್ತಿಯಲ್ಲಿರುವ ಯಾವಯಾವ ತೆರಿಗೆಳನ್ನು ಜಿಎಸ್ಟಿಯಲ್ಲಿ ಅಂತರ್ಗತಗೊಳಿಸಲಾಗುತ್ತದೆ?

ಉತ್ತರ: ಈ ಕೆಳಕಂಡ ತೆರಿಗೆಗಳ ಬದಲಾಗಿ ಜಿಎಸ್ಟಿಯನ್ನು ವಿಧಿಸಲಾಗುತ್ತದೆ:

 • ಕೇಂದ್ರಸರ್ಕಾರ ವಿಧಿಸುವ ಮತ್ತು ಸಂಗ್ರಹಿಸುವ ತೆರಿಗೆಗಳು:
 • ಕೇಂದ್ರೀಯ ಅಬಕಾರಿ ಸುಂಕ;
 • ಅಬಕಾರಿಸುಂಕ (ಔಷಧೀಯ ಮತ್ತು ಟಾಬ್ಲೆಟ್‌ ತಯಾರಿಕೆಗಳ ಮೇಲೆ)
 • ಹೆಚ್ಚುವರಿ ಅಬಕಾರಿ ಸುಂಕ(ವಿಶೇಷಮಹತ್ವವುಳ್ಳ ಸರಕುಗಳ ಮೇಲೆ)
 • ಹೆಚ್ಚುವರಿ ಅಬಕಾರಿ ಸುಂಕ (ಜವಳಿ ಮತ್ತು ಜವಳಿ ಉತ್ಪನ್ನಗಳು)
 • ಹೆಚ್ಚುವರಿ ಸೀಮಾಶುಲ್ಕ (ಸಾಮಾನ್ಯವಾಗಿ ಸಿವಿಡಿ ಎಂದು ಕರೆಯಲ್ಪಡುತ್ತವೆ)
 • ವಿಶೇಷ ಹೆಚ್ಚುವರಿ ಸೀಮಾಶುಲ್ಕ (ಎಸ್ಎಡಿ) (ಋ) ಸೇವಾತೆರಿಗೆ

(ಎ) ಸರಕು ಮತ್ತು ಸೇವಗಳ ಪೂರೈಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸರ್ಚಾಜ್‌ ಮತ್ತು ಸೆಸ್‌ಗಳು

 • ರಾಜ್ಯಗಳು ವಿಧಿಸುವ ಈ ಕೆಳಕಂಡ ತೆರಿಗೆಗಳು ಕೂಡ ಜಿಎಸ್ಟಿಯಲ್ಲಿ ಅಂತರ್ಗತವಾಗುತ್ತವೆ:
 • ರಾಜ್ಯದ ಮೌಲ್ಯವರ್ಧನೆ ತೆರಿಗೆ(ವ್ಯಾಟ್)
 • ಕೇಂದ್ರ ಮಾರಾಟ ತೆರಿಗೆ
 • ಐಷಾರಾಮಿ ತೆರಿಗೆ
 • ಪ್ರವೇಶ ತೆರಿಗೆ (ಎಲ್ಲಾವಿಧ)
 • ಮನರಂಜನೆ ಮತ್ತು ವಿನೋದಚಟುವಟಿಕೆಗಳ ಮೇಲಿನ ತೆರಿಗೆ (ಸ್ಥಳೀಯಸಂಸ್ಥೆಗಳು ವಿಧಿಸುವ ಕರವನ್ನು ಹೊರತುಪಡಿಸಿ)
 • ಜಾಹೀರಾತು ತೆರಿಗೆ

(ಋ) ಖರೀದಿ ತೆರಿಗೆ

 • ಲಾಟರಿ, ಬೆಟ್ಟಿಂಗ್‌ ಮತ್ತು ಜೂಜಾಟಾದ ಮೇಲಿನ ತೆರಿಗೆ
 • ಸರಕು ಮತ್ತು ಸೇವಗಳ ಪೂರೈಕೆಗೆ ಸಂಬಂಧಿಸಿದಂತೆ ರಾಜ್ಯಸರ್ಕಾರದ ಸರ್ಚಾಜ್‌ ಮತ್ತು ಸೆಸ್‌ಗಳು ಜಿಎಸ್ಟಿ ಪರಿಷತ್‌ ಜಿಎಸ್ಟಿಯಲ್ಲಿ ಅಂತರ್ಗತವಾಗುವ ರಾಜ್ಯ, ಕೇಂದ್ರ ಮತ್ತು ಸ್ಥಳೀಯ ಸಂಸ್ಥೆಗಳ ತೆರಿಗೆಳನ್ನು ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಶಿಫಾರಸು ಮಾಡುತ್ತದೆ.

ಪ್ರಶ್ನೆ 4 : ಈ ಮೇಲ್ಕಂಡ ತೆರಿಗೆಳನ್ನು ಜಿಎಸ್ಟಿಯಲ್ಲಿ ಅಂತರ್ಗತ ಮಾಡಲು ಪಾಲಿಸಿದ ಮಾನದಂಡ ಏನು?

ಉತ್ತರ: ರಾಜ್ಯ, ಕೇಂದ್ರ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ವಿಧಿಸುವ ಹಲವಾರು ಕರಗಳನ್ನು ಜಿಎಸ್ಟಿಯಲ್ಲಿ ಅಂತರ್ಗತಗೊಳಿಸುವ ಸಲುವಾಗಿ ಕೂಲಂಕಷವಾಗಿ ಅಧ್ಯಯನ ಮಾಡಲಾಯಿತು. ಈ ಕೆಳಕಂಡ ಮಾನದಂಡಗಳನ್ನು ಗಮನದಲ್ಲಿರಿಸಿಕೊಂಡು ಅವುಗಳನ್ನು ಅಂತರ್ಗತಗೊಳಿಸಲು ತೀರ್ಮಾನಿಸಲಾಯಿತು.

 • ಅಂತರ್ಗತವಾಗುವ ತೆರಿಗೆ ಅಥವಾ ಕರಗಳು ಪ್ರಮುಖವಾಗಿ ಸರಕು ಮತ್ತು ಸೇವೆಗಳ ಮೇಲೆ ಪರೋಕ್ಷ ತೆರಿಗೆಯ ರೂಪದ್ದಾಗಿರಬೇಕು.
 • ಅಂತರ್ಗತವಾಗುವ ತೆರಿಗೆ ಅಥವಾ ಕರವು ಸರಕನ್ನು ಆಮದು/ತಯಾರಿಕೆ ಅಥವಾ ಸೇವೆಗಳ ಒದಗಿಸುವಿಕೆಯಿಂದ ಪ್ರಾರಂಭವಾಗಿ ಮತ್ತೊಂದೆಡೆಯಲ್ಲಿ ಸರಕು ಅಥವಾ ಸೇವೆಗಳ ಬಳಕೆಯಿಂದ ಕೊನೆಗೊಳ್ಳುವ ವ್ಯವಹಾರದ ಸರಪಳಿಯ ಭಾಗವಾಗಿರತಕ್ಕದ್ದು,
 • ಹಾಗೆ ಅಂತರ್ಗತವಾದ ತೆರಿಗೆಯಿಂದ ರಾಜ್ಯವೊಂದರಲ್ಲಿ ಮತ್ತು ಅಂತರಾಜ್ಯಮಟ್ಟದಲ್ಲಿ ತೆರಿಗೆ ಮನ್ನಾ ಮಾಡುವ ಪ್ರಕ್ರಿಯೆ ಮುಂದುವರಿಯತಕ್ಕದ್ದು. ಸರಕು ಮತ್ತು ಸೇವೆಗಳಿಗೆ ನೇರವಾಗಿ ಸಂಬಂಧಪಡದ ತೆರಿಗೆ, ಕರ ಮತ್ತು ಶುಲ್ಕಗಳನ್ನು ಅಂತರ್ಗತ ಮಾಡತಕ್ಕದ್ದಲ್ಲ.
 • ರಾಜ್ಯಗಳು ಮತ್ತು ಕೇಂದ್ರದ ನಡುವೆ ಆದಾಯ ಹಂಚಿಕೆ ನಿಷ್ಪಕ್ಷಪಾತವಾಗಿರುವಂತೆ ಪ್ರಯತ್ನ ಮಾಡತಕ್ಕದ್ದು.

ಪ್ರಶ್ನೆ 5 : ಜಿಎಸ್ಟಿ ವ್ಯವಸ್ಥೆಯಿಂದ ಹೊರಗಿಡುವ ಸರಕು-ಪದಾರ್ಥಗಳು ಯಾವುವು?

ಉತ್ತರ: ಮನುಷ್ಯರ ಬಳಕೆಗಾಗಿ ಉಪಯೋಗಿಸುವ ಮದ್ಯ, ಪೆಟ್ರೋಲಿಯಂ ಉತ್ಪನ್ನಗಳು–ಉದಾ: ಕಚ್ಚಾತೈಲ, ಮೋಟಾರ್ ಸ್ಪಿರಿಟ್ (ಪೆಟ್ರೋಲ್), ಹೈಸ್ಪೀಡ್ ಡೀಸಲ್, ನ್ಯಾಚುರಲ್ ಗ್ಯಾಸ್, ವಿಮಾನಗಳಿಗೆ ಬಳಸುವ ಇಂಧನ ಮತ್ತು ವಿದ್ಯುಚ್ಛಕ್ತಿ.

ಪ್ರಶ್ನೆ 6 : ಜಿಎಸ್ಟಿ ವ್ಯವಸ್ಥೆ ಜಾರಿಗೆ ಬಂದ ನಂತರ ಈ ಮೇಲ್ಕಂಡ ಸರಕು-ಪದಾರ್ಥಗಳ ಮೇಲೆ ಯಾವ ತೆರಿಗೆ ವಿಧಿಸಲಾಗುವುದು?

ಉತ್ತರ: ಮೇಲ್ಕಂಡ ಸರಕು-ಪದಾರ್ಥಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಚಾಲ್ತಿಯಲ್ಲಿರುವ ತೆರಿಗೆ ವ್ಯವಸ್ಥೆ (ವ್ಯಾಟ್ಮತ್ತು ಕೇಂದ್ರ ಅಬಕಾರಿ) ಮುಂದುವರೆಯುವುದು.

ಪ್ರಶ್ನೆ 6 ಎ : ತಂಬಾಕು ಮತ್ತು ತಂಬಾಕಿನ ಉತ್ಪನ್ನಗಳ ಮೇಲೆ ಜಿಎಸ್ಟಿ ವ್ಯವಸ್ಥೆಯಡಿ ಯಾವ ರೀತಿಯ ತೆರಿಗೆ ವಿಧಿಸಲಾಗುವುದು?

ಉತ್ತರ: ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಜಿಎಸ್ಟಿ ವ್ಯವಸ್ಥೆಯಡಿಯಲ್ಲಿಯೇ ತೆರಿಗೆ ವಿಧಿಸಲಾಗುವುದು. ಈ ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಕೇಂದ್ರ ಅಬಕಾರಿ ಶುಲ್ಕವನ್ನು ವಿಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.

ಪ್ರಶ್ನೆ 7 : ಯಾವ ರೀತಿಯ ಜಿಎಸ್ಟಿ ವ್ಯವಸ್ಥೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ?

ಉತ್ತರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರೆಡೂ ಒಂದೇ ಬಾರಿಗೆ ತೆರಿಗೆ ವಿಧಿಸುವ ದ್ವಿ-ಜಿಎಸ್ಟಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಕೇಂದ್ರ ಸರ್ಕಾರವು ರಾಜ್ಯಗಳ ನಡುವೆ ಪೂರೈಕೆಯಾಗುವ ಸರಕು/ ಸೇವೆಗಳ ಮೇಲೆ ವಿಧಿಸುವ ಜಿಎಸ್ಟಿಯನ್ನು ಕೇಂದ್ರ ಜಿಎಸ್ಟಿ (ಸಿಜಿಎಸ್ಟಿ) ಎಂದು ಕರೆಯಲಾಗುವುದು. ರಾಜ್ಯಗಳು ವಿಧಿಸುವ ಜಿಎಸ್ಟಿಯನ್ನು ರಾಜ್ಯ ಜಿಎಸ್ಟಿ (ಎಸ್ಜಿಎಸ್ಟಿ) ಎಂದು ಕರೆಯಲಾಗುವುದು. ಅದರಂತೆ ಸಂಯುಕ್ತ ಜಿಎಸ್ಟಿ (ಇಂಟಿಗ್ರೇಟೆಡ್ಜಿಎಸ್ಟಿ–ಐಜಿಎಸ್ಟಿ) ಯನ್ನು ಕೇಂದ್ರ ಸರ್ಕಾರವು ಅಂತರಾಜ್ಯ ಸರಕು ಮತ್ತು ಸೇವೆಗಳ ಮೇಲೆ ವಿಧಿಸುತ್ತದೆ.

ಪ್ರಶ್ನೆ 8 : ದ್ವಿ-ಜಿಎಸ್ಟಿ ವ್ಯವಸ್ಥೆ ಅವಶ್ಯಕತೆ ಏನು?

ಉತ್ತರ: ಭಾರತವು ಸಂಯುಕ್ತ ಗಣರಾಜ್ಯವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆಯನ್ನು ವಿಧಿಸಲು ಮತ್ತು ಸಂಗ್ರಹಿಸಲು ಸೂಕ್ತ ಶಾಸನಗಳ ಮೂಲಕ ಅಧಿಕಾರವನ್ನು ಹೊಂದಿವೆ. ಸಂವಿಧಾನವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಅಧಿಕಾರವನ್ನು ವಿಭಜಿಸಿದ್ದು, ಎರಡೂ ಸರ್ಕಾರಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವ ಸಲುವಾಗಿ ಸಂಪನ್ಮೂಲಗಳನ್ನು ಸಂಗ್ರಹಿಸುವ ಅವಶ್ಯಕತೆಯಿದೆ. ಆದುದರಿಂದ ದ್ವಿ-ಜಿಎಸ್ಟಿ ವ್ಯವಸ್ಥೆಯು ಸಾಂವಿಧಾನಿಕ ಅವಶ್ಯಕತೆಯಾದ ಆರ್ಥಿಕ ಪ್ರಾಂತೀಯತೆಯ ತತ್ವಕ್ಕೆ ಅನುಗುಣವಾಗಿದೆ.

ಪ್ರಶ್ನೆ 9 : ಜಿಎಸ್ಟಿಯನ್ನು ವಿಧಿಸುವ ಮತ್ತು ನಿರ್ವಹಿಸುವ ಪ್ರಾಧಿಕಾರಯಾವುದು?

ಉತ್ತರ: ಕೇಂದ್ರ ಸರ್ಕಾರವು ಸಿಜಿಎಸ್ಟಿ ಮತ್ತು ಐಜಿಎಸ್ಟಿಯನ್ನು ವಿಧಿಸಿ, ಸಂಗ್ರಹಿಸುತ್ತದೆ. ಆಯಾ ರಾಜ್ಯ ಸರ್ಕಾರಗಳು ಎಸ್ಜಿಎಸ್ಟಿಯನ್ನು ವಿಧಿಸಿ, ವ್ಯವಸ್ಥೆಯನ್ನು ನಿರ್ವಹಿಸುತ್ತವೆ.

ಪ್ರಶ್ನೆ10:ಜಿಎಸ್ಟಿಗೆ ಸಂಬಂಧಿಸಿದಂತೆ ಭಾರತದ ಸಂವಿಧಾನವನ್ನು ಇತ್ತೀಚೆಗೆ ಯಾವ ಕಾರಣಕ್ಕಾಗಿ ತಿದ್ದುಪಡಿ ಮಾಡಲಾಯಿತು?

ಉತ್ತರ: ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಧಿಕಾರ ವ್ಯಾಪ್ತಿಯನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ವಿಂಗಡಿಸಲಾಗಿದೆ. ಸರಕುಗಳ ತಯಾರಿಕೆಯ ಮೇಲೆ (ಮಾನವ ಬಳಕೆಗಾಗಿ ಮದ್ಯ, ಅಫೀಮು, ಮಾದಕ ವಸ್ತುಗಳನ್ನು ಹೊರತುಪಡಿಸಿ) ಕರವನ್ನು ವಿಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ರಾಜ್ಯ ಸರ್ಕಾರಗಳು ಸರಕುಗಳ ಮಾರಾಟದ ಮೇಲೆ ತೆರಿಗೆಯನ್ನು ವಿಧಿಸುವ ಅಧಿಕಾರವನ್ನು ಹೊಂದಿವೆ. ಸರಕುಗಳು ರಾಜ್ಯಗಳ ನಡುವೆ ಮಾರಾಟವಾದ ಪಕ್ಷದಲ್ಲಿ, ಕೇಂದ್ರ ಸರ್ಕಾರವು ತೆರಿಗೆಯನ್ನು (ಕೇಂದ್ರ ಮಾರಾಟ ತೆರಿಗೆ) ವಿಧಿಸುತ್ತದೆ. ಆದರೆ, ರಾಜ್ಯ ಸರ್ಕಾರಗಳು ಈ ತೆರಿಗೆಯನ್ನು ಸಂಗ್ರಹಿಸಿ ತಾವೇ ಉಳಿಸಿಕೊಳ್ಳುತ್ತವೆ. ಸೇವೆಗಳಿಗೆ ಸಂಬಂಧಿಸಿದಂತೆ ತೆರಿಗೆಯನ್ನು ವಿಧಿಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ.
ಜಿಎಸ್ಟಿ ವ್ಯವಸ್ಥೆಯಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಏಕಕಾಲಕ್ಕೆ ತೆರಿಗೆಯನ್ನು ವಿಧಿಸಿ ಸಂಗ್ರಹಿಸುವ ಅಧಿಕಾರವನ್ನು ನೀಡಲು ಸಂವಿಧಾನವನ್ನು ಸೂಕ್ತವಾಗಿ ತಿದ್ದುಪಡಿ ಮಾಡುವ ಅವಶ್ಯಕತೆ ಎದುರಾಯಿತು. ಈ ಉದ್ದೇಶಕ್ಕಾಗಿ ಸಂವಿಧಾನ (ನೂರಾಒಂದನೇತಿದ್ದುಪಡಿ) ಕಾಯಿದೆ, 2016 ರ ಮೂಲಕ ಭಾರತದ ಸಂವಿಧಾನವನ್ನು ಇತ್ತೀಚೆಗೆ ತಿದ್ದುಪಡಿ ಮಾಡಲಾಯಿತು. ಸಂವಿಧಾನದ 246ಎ ಅನುಚ್ಛೇದ ಜಿಎಸ್ಟಿಯನ್ನು ವಿಧಿಸಲು ಮತ್ತು ಸಂಗ್ರಹಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಧಿಕಾರವನ್ನು ನೀಡುತ್ತದೆ.

ಪ್ರಶ್ನೆ 11 : ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ಯಾವುದೇ ನಿರ್ದಿಷ್ಟ ವ್ಯವಹಾರಕ್ಕೆ ಕೇಂದ್ರ ಜಿಎಸ್ಟಿ (ಸಿಜಿಎಸ್ಟಿ) ಮತ್ತು ರಾಜ್ಯ ಜಿಎಸ್ಟಿ (ಎಸ್ಜಿಎಸ್ಟಿ) ಅಡಿಯಲ್ಲಿ ಯಾವ ರೀತಿ ಒಂದೇ ಬಾರಿಗೆ ತೆರಿಗೆ ವಿಧಿಸಲಾಗುತ್ತದೆ?

ಉತ್ತರ: ಸರಕು ಹಾಗೂ ಸೇವೆಗಳಿಗೆ ಸಂಬಂಧಿಸಿದ ಪ್ರತಿ ವ್ಯವಹಾರದ ಮೇಲೆ ಕೇಂದ್ರ ಮತ್ತು ರಾಜ್ಯ ಜಿಎಸ್ಟಿಯನ್ನು ಏಕಕಾಲಕ್ಕೆ ವಿಧಿಸಲಾಗುವುದು. ಆದರೆ, ಜಿಎಸ್ಟಿ ಪರಿಧಿಯಿಂದ ಹೊರಗಿರುವ ಸರಕು ಮತ್ತು ಸೇವೆಗಳು ಹಾಗೂ ನಿರ್ದಿಷ್ಟಪಡಿಸಿದ ಮೌಲ್ಯದ ಗರಿಷ್ಟ ಮಿತಿಯೊಳಗಿರುವ ವ್ಯವಹಾರಗಳ ಮೇಲೆ ಜಿಎಸ್ಟಿ ವಿಧಿಸಲಾಗುವುದಿಲ್ಲ. ಈ ಎರಡೂ ತೆರಿಗೆಗಳನ್ನು ಒಂದೇ ಬೆಲೆಯ ಮೇಲೆ ವಿಧಿಸಲಾಗುವುದು. ಪ್ರಸ್ತುತ ರಾಜ್ಯಗಳು ಮೌಲ್ಯವರ್ಧಿತ ತೆರಿಗೆ ಸರಕುಗಳ ಬೆಲೆ ಹಾಗೂ ಸೆನ್‌ವ್ಯಾಟ್‌ ಸೇರಿದ ಮೊತ್ತದ ಮೇಲೆ ತೆರಿಗೆಯನ್ನು ವಿಧಿಸುತ್ತಿವೆ. ಸಿಜಿಎಸ್ಟಿ ವಿಧಿಸಲು ಸರಕು ಮತ್ತು ಸೇವೆಗಳನ್ನು ಒದಗಿಸುವ ಮತ್ತು ಪಡೆಯುವ ಸ್ಥಳಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ, ಪೂರೈಕೆದಾರ ಮತ್ತು ಸ್ವೀಕರಿಸುವವರು ಒಂದೇ ರಾಜ್ಯದಲ್ಲಿದ್ದಾಗ ಮಾತ್ರ ಎಸ್‌ಜಿಎಸ್‌‌ಟಿ ವಿಧಿಸಲಾಗುತ್ತದೆ.

ಉದಾಹರಣೆ-1:ಸಿಜಿಎಸ್ಟಿ ಮತ್ತು ಎಸ್‌ಜಿಎಸ್‌ಟಿ ದರ 10% ಇದೆ ಎಂದು ಭಾವಿಸೋಣ. ಉತ್ತರ ಪ್ರದೇಶದಲ್ಲಿನ ಸ್ಟೀಲ್ ವ್ಯಾಪಾರಿಯೊಬ್ಬ ಸ್ಟೀಲ್ ಬಾರ್ ಮತ್ತು ರಾಡ್‌ಗಳನ್ನು ಅದೇ ರಾಜ್ಯದ ನಿರ್ಮಾಣ ಕಂಪೆನಿಗೆ 100 ರೂಪಾಯಿಗಳಿಗೆ ಮಾರುತ್ತಾನೆ. ಈ ಸಂದರ್ಭದಲ್ಲಿ, ಸರಕಿನ ಬೆಲೆ ಹೊರತುಪಡಿಸಿ, ಸದರಿ ವ್ಯಾಪಾರಿಯು 10 ರೂಪಾಯಿಗಳನ್ನು ಸಿಜಿಎಸ್ಟಿ ಆಗಿಯೂ ಮತ್ತೊಂದು 10 ರೂಪಾಯಿಗಳನ್ನು ಎಸ್‌ಜಿಎಸ್‌ಟಿ ಆಗಿಯೂ ವಿಧಿಸಿ, ಸಂಗ್ರಹಿಸುತ್ತಾನೆ. ಸಿಜಿಎಸ್ಟಿ ತೆರಿಗೆಯನ್ನು ಕೇಂದ್ರ ಸರ್ಕಾರದ ಖಾತೆಗೂ ಎಸ್‌ಜಿಎಸ್‌ಟಿ ಕರವನ್ನು ಆಯಾ ರಾಜ್ಯ ಸರ್ಕಾರದ ಖಾತೆಗೂ ಜಮಾ ಮಾಡುತ್ತಾನೆ. ಆದರೆ, ವಾಸ್ತವವಾಗಿ ಆತ 20 ರೂಪಾಯಿಗಳನ್ನು (ರೂ. 10+ರೂ. 10)ನ್ನು ತೆರಬೇಕಿಲ್ಲ. ಏಕೆಂದರೆ, ಆತ ತಾನು ಸರಕನ್ನು ಖರೀದಿಸುವಾಗತೆತ್ತ ಸಿಜಿಎಸ್ಟಿ ಮತು ್ತಎಸ್ಜಿಎಸ್ಟಿ ತೆರಿಗೆಯನ್ನು ಈ ಮೊತ್ತದಲ್ಲಿ ಕಳೆಯುತ್ತಾನೆ. ಆದರೆ, ಹೀಗೆ ಮಾಡುವಾಗ ತಾನು ಖರೀದಿ ಮಾಡುವಾಗ ತೆತ್ತ ಸಿಜಿಎಸ್ಟಿ ಮತ್ತು ಎಸ್‌ಜಿಎಸ್‌ಟಿ ಮೊತ್ತವನ್ನು ಮಾತ್ರ ಸರಕನ್ನು ಮಾರಾಟ ಮಾಡಿದ ನಂತರ ತೆರಬೇಕಾಗಿರುವ ಸಿಜಿಎಸ್ಟಿ ಮತ್ತು ಎಸ್‌ಜಿಎಸ್‌ಟಿ ಯಲ್ಲಿ ಕಳೆಯಬಹುದು. ಸಿಜಿಎಸ್ಟಿ ಖಾತೆಗೆ ತೆತ್ತ ಹಣವನ್ನು ಎಸ್‌ಜಿಎಸ್‌ಟಿ ಗಾಗಲೀ ಅಥವಾ ಎಸ್‌ಜಿಎಸ್‌ಟಿ ಎಂದು ಪಾವತಿಸಿದ ಹಣವನ್ನು ಸಿಜಿಎಸ್ಟಿ ಮೊತ್ತ ಎಂದು ಪರಿಭಾವಿಸಿ, ತೆರಿಗೆಯನ್ನು ಕಳೆಯುವ ಹಾಗಿಲ್ಲ.

ಉದಾಹರಣೆ-2:ಸಿಜಿಎಸ್ಟಿ ಮತು ಎಸ್‌ಜಿಎಸ್‌ಟಿ ದರ 10% ಇದೆ ಎಂದು ಭಾವಿಸೋಣ. ಮುಂಬೈನಲ್ಲಿರುವ ಜಾಹೀರಾತು ಸಂಸ್ಥೆಯೊಂದು ಮಹಾರಾಷ್ಟ್ರದಲ್ಲಿರುವ ಸೋಪೂ ತಯಾರಿಕಾ ಕಂಪೆನಿಗೆ 100 ರೂಪಾಯಿಗಳ ಸೇವೆಯನ್ನು ಒದಗಿಸುತ್ತದೆ. ಸದರಿ ಜಾಹೀರಾತು ಕಂಪೆನಿಯು ತನ್ನ ಸೇವಾ ಶುಲ್ಕದ ಜೊತೆಗೆ 10 ರೂಪಾಯಿಗಳನ್ನು ಎಸ್‌ಜಿಎಸ್‌ಟಿ ಮತ್ತು 10 ರೂಪಾಯಿಗಳನ್ನು ಸಿಜಿಎಸ್ಟಿ ಯಾಗಿಯೂ ವಿಧಿಸುತ್ತದೆ. ಸಿಜಿಎಸ್ಟಿ ಮೊತ್ತವನ್ನು ಕೇಂದ್ರ ಸರ್ಕಾರದ ಖಾತೆಗೂ, ಎಸ್‌ಜಿಎಸ್‌ಟಿ ಮೊತ್ತವನ್ನು ಸಂಬಂಧಿಸಿದ ರಾಜ್ಯ ಸರ್ಕಾರದ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ, ಸಂಸ್ಥೆಯು 20 ರೂಪಾಯಿಗಳನ್ನು (ರೂ.10+ರೂ.10) ತೆರಿಗೆಯಾಗಿ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ, ಈಗಾಗಲೇ ತನ್ನ ಖರೀದಿಯ ಮೇಲೆ (ಸ್ಟೇಷನರಿ, ಕಛೇರಿ ಸಲಕರಣೆ, ಕಲಾವಿದರ ಸೇವೆಗೆ ತೆತ್ತ ಮೊತ್ತ ಇತ್ಯಾದಿ) ಗಳ ಮೇಲೆ ಪಾವತಿಸಿರುವ ಎಸ್‌ಜಿಎಸ್‌ಟಿ ಮತ್ತು ಸಿಜಿಎಸ್ಟಿ ತೆರಿಗೆಯನ್ನು, ಸಂಸ್ಥೆಯು ತಾನು ತೆರಬೇಕಾಗಿರುವ ತೆರಿಗೆ ಕಡೆಗೆ ಜಮಾ ಮಾಡಬಹುದು. ಆದರೆ, ಹೀಗೆ ಮಾಡುವಾಗ ತಾನು ಖರೀದಿ ಮಾಡುವಾಗ ತೆತ್ತ ಸಿಜಿಎಸ್ಟಿ ಮತ್ತು ಎಸ್‌ಜಿಎಸ್‌ಟಿ ಮೊತ್ತವನ್ನು ಮಾತ್ರ ಸರಕನ್ನು ಮಾರಾಟ ಮಾಡಿದ ನಂತರ ತೆರಬೇಕಾಗಿರುವ ಸಿಜಿಎಸ್ಟಿ ಮತ್ತು ಎಸ್‌ಜಿಎಸ್‌ಟಿ ಯಲ್ಲಿ ಕಳೆಯಬಹುದು. ಸಿಜಿಎಸ್ಟಿ ಖಾತೆಗೆ ತೆತ್ತ ಹಣವನ್ನು ಎಸ್‌ಜಿಎಸ್‌ಟಿ ಗಾಗಲೀ ಅಥವಾ ಎಸ್‌ಜಿಎಸ್‌ಟಿ ಎಂದು ಪಾವತಿಸಿದ ಹಣವನ್ನು ಸಿಜಿಎಸ್ಟಿ ಮೊತ್ತ ಎಂದು ಪರಿಭಾವಿಸಿ, ತೆರಿಗೆಯನ್ನು ಕಳೆಯುವ ಹಾಗಿಲ್ಲ.

ಪ್ರಶ್ನೆ 12: ಜಿಎಸ್ಟಿ ವ್ಯವಸ್ಥೆಯಿಂದ ದೇಶಕ್ಕೆ ಆಗುವ ಅನುಕೂಲಗಳೇನು?

ಉತ್ತರ: ಜಿಎಸ್ಟಿಯನ್ನು ಜಾರಿಗೊಳಿಸುವುದು ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಯ ಸುಧಾರಣೆಯಲ್ಲಿ ಅತ್ಯಂತ ಮಹತ್ವದ ಹೆಜ್ಜೆ. ವಿವಿಧ ರೀತಿಯ ರಾಜ್ಯ ಮತ್ತು ಕೇಂದ್ರೀಯ ತೆರಿಗೆಗಳನ್ನು ಒಂದೇ ತೆರಿಗೆಯಡಿ ಒಗ್ಗೂಡಿಸಿ, ಈ ಹಿಂದೆ ಪಾವತಿಸಿದ ತೆರಿಗೆಯ ಮೊತ್ತವನ್ನು ಜಮಾ ಎಂದು ಪರಿಗಣಿಸಿವುದರ ಮೂಲಕ, ತೆರಿಗೆಗಳ ಸರಣಿ ಪರಿಣಾಮವನ್ನು ತಡೆಗಟ್ಟಿ, ಸಾಮಾನ್ಯ ರಾಷ್ಟ್ರೀಯ ಮಾರುಕಟ್ಟೆಯನ್ನು ಸೃಷ್ಟಿಸಲು ಜಿಎಸ್ಟಿ ಅವಕಾಶವನ್ನೀಯುತ್ತದೆ. ಬಳಕೆದಾರರದೃಷ್ಟಿಯಿಂದ ಹೇಳುವುದಾದದಲ್ಲಿ, ಸರಕುಗಳ ಮೇಲೆ ಶೇ 25ರಿಂದ 30ರವರೆಗೆ ತೆರಿಗೆ ಕಡಿಮೆಯಾಗುತ್ತದೆ. ಮೇಲಾಗಿ ಜಿಎಸ್ಟಿ ಜಾರಿಗೊಳಿಸುವುದರಿಂದ ನಮ್ಮ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಅಧ್ಯಯನಗಳ ಪ್ರಕಾರ ಇದು ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯನ್ನು ಉದ್ಧೀಪನಗೊಳಿಸುತ್ತದೆ. ತೆರಿಗೆ ತಳಹದಿಯ ವಿಸ್ತಾರ, ಹೆಚ್ಚಿದ ವ್ಯವಹಾರ ಮತ್ತು ತೆರಿಗೆ ಪಾವತಿಯಲ್ಲಿ ಹೆಚ್ಚಿನ ಪಾಲನೆಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತೆರಿಗೆ ಆದಾಯ ಹೆಚ್ಚಾಗುವ ಸಾಧ್ಯತೆಯೂ ಇದೆ. ಕೊನೆಯದಾಗಿ ತನ್ನ ಪಾರದರ್ಶತೆಯಿಂದಾಗಿ ಈ ವ್ಯವಸ್ಥೆಯನ್ನು ಅತಿ ಸುಲಭವಾಗಿ ಜಾರಿಗೆ ತರಬಹುದಾಗಿದೆ.

ಪ್ರಶ್ನೆ 13. ಐಜಿಎಸ್ಟಿ ಎಂದರೇನು?

ಉತ್ತರ: ಜಿಎಸ್ಟಿ ವ್ಯವಸ್ಥೆಯಡಿ, ಕೇಂದ್ರ ಸರ್ಕಾರವು ಇಂಟಿಗ್ರೇಟೆಡ್ ಜಿಎಸ್ಟಿ (ಐಜಿಎಸ್ಟಿ) ತೆರಿಗೆಯನ್ನು ರಾಜ್ಯಗಳ ನಡುವಣ ಸರಕು ಮತ್ತು ಸೇವೆಗಳ ಪೂರೈಕೆ ಮೇಲೆ ವಿಧಿಸಿ, ಸಂಗ್ರಹಿಸುತ್ತದೆ. ಸಂವಿಧಾನದ 269ಎ ಪರಿಚ್ಛೇದದ ಅನ್ವಯ ರಾಜ್ಯಗಳ ನಡುವಣ ವ್ಯಾಪಾರದ ಮೇಲೆ ಕೇಂದ್ರ ಸರ್ಕಾರವು ಜಿಎಸ್ಟಿಯನ್ನು ವಿಧಿಸಿ ಸಂಗ್ರಹಿಸಬಹುದಾಗಿದ್ದು, ಹೀಗೆ ಸಂಗ್ರಹಿಸಿದ ತೆರಿಗೆ ಮೊತ್ತವನ್ನು ಸರಕು ಮತ್ತು ಸೇವಾ ಪರಿಷತ್‌ಯ ಶಿಫಾರಸಿನ ಮೇಲೆ ಸಂಸತ್ತು ಜಾರಿಗೆ ತರುವ ಕಾನೂನಿನ ಅನ್ವಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತವೆ.

ಪ್ರಶ್ನೆ 14 : ಜಿಎಸ್ಟಿ ದರಗಳನ್ನು ಯಾರು ತೀರ್ಮಾನಿಸುತ್ತಾರೆ?

ಉತ್ತರ: ಸಿಜಿಎಸ್ಟಿ ಮತ್ತು ಎಸ್‌ಜಿಎಸ್‌ಟಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ತೀರ್ಮಾನಿಸುವ ದರದಲ್ಲಿ ವಿಧಿಸಲಾಗುವುದು. ಜಿಎಸ್ಟಿ ಪರಿಷತ್‌ ಶಿಫಾರಿಸ್ಸಿನ ಆಧಾರದ ಮೇಲೆ ತೆರಿಗೆ ದರಗಳನ್ನು ಅಧಿಸೂಚಿಸಲಾಗುವುದು.

ಪ್ರಶ್ನೆ 15 : ಜಿಎಸ್ಟಿ ಪರಿಷತ್‌ನ ಪಾತ್ರವೇನು?

ಉತ್ತರ: ಜಿಎಸ್ಟಿ ಪರಿಷತ್‌ನಲ್ಲಿ ಕೇಂದ್ರ ಹಣಕಾಸು ಸಚಿವರು (ಪರಿಷತ್ಯಅಧ್ಯಕ್ಷರು), ರಾಜ್ಯ ಸಚಿವರು (ಆದಾಯ), ಮತ್ತು ರಾಜ್ಯಗಳ ಹಣಕಾಸು/ತೆರಿಗೆ ಸಚಿವರು ಸದಸ್ಯರಾಗಿದ್ದು, ಈ ಕೆಳಕಂಡ ವಿಷಯಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಶಿಫಾರಸ್ಸು ಮಾಡುತ್ತಾರೆ:

 • ಜಿಎಸ್ಟಿಯಲ್ಲಿ ಅಂತರ್ಗತವಾಗಬಹುದಾದಂತಹ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ವಿಧಿಸುವ ತೆರಿಗೆ, ಕರಗಳು ಮತ್ತು ಉಪಕರಗಳು ಜಿಎಸ್ಟಿ ವ್ಯಾಪ್ತಿಗೆ ತರಬಹುದಾದ/ಹೊರತುಪಡಿಸಬಹುದಾದ ಸರಕು ಮತ್ತು ಸೇವೆಗಳು.
 • ಪೆಟ್ರೋಲಿಯಂ, ಕಚ್ಚಾ ತೈಲ, ಹೈಸ್ಪೀಡ್ ಡೀಸೆಲ್, ಮೋಟಾರ್ ಸ್ಪಿರಿಟ್ (ಸಾಮಾನ್ಯವಾಗಿ ಪೆಟ್ರೋಲ್ ಎಂದು ಕರೆಯಲ್ಪಡುತ್ತದೆ), ನ್ಯಾಚುರಲ್ ಗ್ಯಾಸ್ ಮತ್ತು ವಿಮಾನ ಇಂಧನದ ಮೇಲೆ ಜಿಎಸ್ಟಿಯನ್ನು ವಿಧಿಸುವ ಜಾರಿ ದಿನಾಂಕ.
 • ಮಾದರಿ ಕಾನೂನುಗಳು, ಐಜಿಎಸ್ಟಿಯನ್ನು ವಿಧಿಸುವ ಮತ್ತು ಸಂಗ್ರಹಿಸು ವಿಧಿ-ವಿಧಾನಗಳು ಮತ್ತು ಪೂರೈಕೆ ಸ್ಥಳಗಳಿಗೆ ಅನ್ವಯಿಸುವ ತತ್ವಗಳು.
 • ಜಿ.ಎಸ್.ಟಿ.ವಿನಾಯ್ತಿ ನೀಡುವ ಸಲುವಾಗಿ ಸರಕು ಮತ್ತು ಸೇವೆಗಳ ವಹಿವಾಟಿನ ಗರಿಷ್ಠ ಮಟ್ಟದ ಬಗ್ಗೆ.
 • ಜಿ.ಎಸ್.ಟಿ.ಕನಿಷ್ಠ-ಗರಿಷ್ಠಪಟ್ಟಿ ಸಹಿತದರಗಳು;
 • ನೈಸರ್ಗಿಕ ಪ್ರಕೋಪಗಳು ಇಲ್ಲವೇ ದುರಂತಗಳ ಸಂದರ್ಭದಲ್ಲಿ ಹೆಚ್ಚುವರಿ ಸಂಪನ್ಮೂಲಗಳಿಗಾಗಿ ನಿರ್ದಿಷ್ಟ ಅವಧಿಗಾಗಿ ವಿಶೇಷದರ ಅಥವಾ ದರಗಳು ಪೂರ್ವಾಂಚಲ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಸಲುವಾಗಿ ವಿಶೇಷ ಉಪಬಂಧಗಳು; ಮತ್ತು
 • ಜಿ.ಎಸ್.ಟಿಗೆ ಸಂಬಂಧಪಟ್ಟಂತೆ ಇನ್ನಾವುದೇ ವಿಚಾರದ ಬಗ್ಗೆ ಪರಿಷತ್ತು ತೀರ್ಮಾನಿಸಿದಂತೆ.

ಪ್ರಶ್ನೆ 16 : ಜಿ.ಎಸ್.ಟಿ ಪರಿಷತ್ತಿನ ಮಾರ್ಗದರ್ಶಿ ತತ್ವಗಳೇನು?

ಉತ್ತರ: ರಾಜ್ಯಗಳು, ಕೇಂದ್ರ ಮತ್ತು ರಾಜ್ಯಗಳ ನಡುವಿನ ಜಿ.ಎಸ್.ಟಿ.ಗೆ ಸಂಬಂಧಿಸಿದ ಬೇರೆಬೇರೆ ಅಂಶಗಳ ಬಗ್ಗೆ ಜಿ.ಎಸ್.ಟಿ ಪರಿಷತ್ತು ಸಮನ್ವಯ ಸಾಧಿಸುವುದಾಗಿದೆ. 2016ರ ಸಂವಿಧಾನದ 101ನೆಯ ತಿದ್ದುಪಡಿ ಕಾಯಿದೆಯ ಅನುಸಾರ ಜಿ.ಎಸ್.ಟಿ. ಪರಿಷತ್ತು ತನ್ನ ಕಾರ್ಯ ಅನುಷ್ಠಾನದಲ್ಲಿ ಜಿ.ಎಸ್.ಟಿ.ಯ ಸಮನ್ವಯ ಸಂರಚನೆಯ ತತ್ವದ ಅವಶ್ಯಕತೆಯಿಂದ ನಿರ್ದೇಶಿಸಲ್ಪಡುತ್ತದೆ ಮತ್ತು ಸರಕು ಮತ್ತು ಸೇವೆಗಳಿಗೆ ಸಮನ್ವಯಿತ ರಾಷ್ಟ್ರೀಯ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸುವುದಾಗಿದೆ.

ಪ್ರಶ್ನೆ 17 : ಜಿ.ಎಸ್.ಟಿ. ಪರಿಷತ್ತು ಹೇಗೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ?

ಉತ್ತರ: 2016ರ ಸಂವಿಧಾನದ ನೂರಒಂದನೇಯ ತಿದ್ದುಪಡಿಯ ಅನುಸಾರ ಜಿ.ಎಸ್.ಟಿ.ಪರಿಷತ್ತಿನ ಪ್ರತಿಯೊಂದು ತೀರ್ಮಾನವು ಹಾಜರಿದ್ದು ಮತ ಚಲಾಯಿಸುವ ಸದಸ್ಯರುಗಳ 3/4 ರಷ್ಟು ಸಂತುಲಿತ ಮತಗಳಿಂದ ಆಗತಕ್ಕದ್ದು. ಕೇಂದ್ರ ಸರ್ಕಾರದ ಮತವು ಚಲಾಯಿಸಲಾದ ಮತಗಳಲ್ಲಿ 1/3ನೆ ಒಂದರಷ್ಟು ಸಂತುಲತೆಯನ್ನು ಹೊಂದಿದ್ದು ಮತ್ತು ರಾಜ್ಯಗಳು ಚಲಾಯಿತ ಮತಗಳಲ್ಲಿ 2/3ರಷ್ಟು ಸಂತುಲತೆಯನ್ನು ಆ ಸಭೆಯಲ್ಲಿ ಹೊಂದಿರುತ್ತದೆ. ಜಿ.ಎಸ್.ಟಿ.ಪರಿಷತ್ತಿನ ಒಟ್ಟು ಸದಸ್ಯ ಬಲದ ಅರ್ಧದಷ್ಟು ಇದ್ದಲ್ಲಿ ಅದನ್ನು ಸಭೆಯ ಕೋರಂ ಎಂದು ಪರಿಗಣಿಸಲಾಗುವುದು.

ಪ್ರಶ್ನೆ 18: ಉದ್ದೇಶಿತ ಜಿ.ಎಸ್.ಟಿ. ವ್ಯವಸ್ಥೆಯಲ್ಲಿ ಯಾರು ಜಿ.ಎಸ್.ಟಿ.ಯನ್ನು ಪಾವತಿಸಲು ಬದ್ಧರಾಗಿರುತ್ತಾರೆ?

ಉತ್ತರ:ಜಿ.ಎಸ್.ಟಿ. ವ್ಯವಸ್ಥೆಯಲ್ಲಿ, ಸರಕು ಮತ್ತು/ಅಥವಾ ಸೇವೆಗಳನ್ನು ಪೂರೈಸುವಾತನು ತೆರಿಗೆಗೊಳಪಡುವ ವ್ಯಕ್ತಿಯಾಗಿದ್ದು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ತೆರಿಗೆಗೊಳಪಡುವ ವ್ಯಕ್ತಿಯು ಆರಂಭಿಕ ವಿನಾಯ್ತಿ ಮೊತ್ತವಾದ 10 ಲಕ್ಷ ರೂಪಾಯಿಗಳು (ಪೂರ್ವಾಂಚಲ ರಾಜ್ಯಗಳಿಗೆ 5ಲಕ್ಷ ರೂಪಾಯಿಗಳು) ಮೀರಿದಲ್ಲಿ ತೆರಿಗೆಯನ್ನು ಪಾವತಿಸಲು ಬದ್ಧರಾಗಿರುತ್ತಾರೆ. ಆದರೆ ಇದು, ಗೊತ್ತುಪಡಿಸಿದ ಕೆಲ ನಿರ್ದಿಷ್ಟ ಪ್ರಕರಣಗಳಲ್ಲಿ ಆರಂಭಿಕ ಮಿತಿಯನ್ನು ಮೀರದಿದ್ದರೂ ಸಹ ಜಿ.ಎಸ್.ಟಿ. ತೆರಿಗೆಯನ್ನು ಪಾವತಿಸಲು ಬದ್ಧರಾಗಿರುತ್ತಾರೆ. ಸರಕು ಮತ್ತು/ಅಥವಾ ಸೇವೆಗಳನ್ನು ರಾಜ್ಯದೊಳಗೆ ಪೂರೈಕೆಯಾದಾಗ ಕೇಂದ್ರ ಜಿ.ಎಸ್.ಟಿ./ ರಾಜ್ಯ ಜಿ.ಎಸ್.ಟಿಯನ್ನು ಪಾವತಿಸಬೇಕಾಗುತ್ತದೆ ಮತ್ತು ಸರಕು ಮತ್ತು/ಅಥವಾ ಸೇವೆಗಳು ಅಂತರ ರಾಜ್ಯ ಪೂರೈಕೆಯವುಗಳಾಗಿದ್ದರೆ ಇಂಟಗ್ರೇಟಡ್ ಜಿ.ಎಸ್.ಟಿ.ಯನ್ನು ಪಾವತಿಸಬೇಕಾಗುತ್ತದೆ. ಸಂಬಂಧಿಸಿದ ಕಾಯಿದೆಗಳ ಅನುಬಂಧಗಳಲ್ಲಿ ಗೊತ್ತುಪಡಿಸಿರುವ ದರಗಳಲ್ಲಿ ಕೇಂದ್ರ ಜಿ.ಎಸ್.ಟಿ./ರಾಜ್ಯ ಜಿ.ಎಸ್.ಟಿ.ಮತ್ತು ಇಂಟಗ್ರೇಟಡ್‌ ಜಿ.ಎಸ್.ಟಿ.ಗಳನ್ನು ಪಾವತಿಸಬೇಕಾಗುತ್ತದೆ.

ಪ್ರಶ್ನೆ 19:ಜಿ.ಎಸ್.ಟಿ. ವ್ಯವಸ್ಥೆಯಲ್ಲಿ ಸಣ್ಣ ತೆರಿಗೆದಾರರಿಗೆ ಲಭ್ಯವಿರುವ ಅನುಕೂಲಗಳೇನು?

ಉತ್ತರ: ಹಣಕಾಸು ವರ್ಷವೊಂದರಲ್ಲಿ 10ಲಕ್ಷ ರೂಪಾಯಿಗಳವರೆಗಿನ ಕ್ರೋಢಿತ ವಹಿವಾಟಿನ ಮೇಲೆ ತೆರಿಗೆದಾತರಿಗೆ ತೆರಿಗೆ ವಿನಾಯಿತಿ ಇರುತ್ತದೆ. (ಕ್ರೋಢಿತ ವಹಿವಾಟು ತೆರಿಗೆ ಪಾವತಿಸಿದ ಪೂರೈಕೆಯ ಮೌಲ್ಯ ಮತ್ತು ತೆರಿಗೆ ಒಳಪಡದ ಪೂರೈಕೆಗಳ ಮೌಲ್ಯ, ವಿನಾಯಿತಿ ಪೂರೈಕೆ ಮತ್ತು ಸರಕು ಮತ್ತು/ಅಥವಾ ಸೇವೆಗಳ ರಫ್ತು ಮೌಲ್ಯವನ್ನು ಒಳಗೊಂಡಿದ್ದು ಜಿ.ಎಸ್.ಟಿ. ತೆರಿಗೆಯನ್ನು ಒಳಗೊಂಡಿರುವುದಿಲ್ಲ) ಕ್ರೋಢಿತ ವಹಿವಾಟನ್ನು ಅಖಿಲ ಭಾರತ ಮಟ್ಟದಲ್ಲಿ ಪಗಣಿಸಲಾಗುವುದು. ಪೂರ್ವಾಂಚಲ ರಾಜ್ಯಗಳು ಮತ್ತು ಸಿಕ್ಕಿಂಗಾಗಿ 5ಲಕ್ಷಗಳವರೆಗಿನ ಆರಂಭಿಕ ವಿನಾಯಿತಿ ಇರುತ್ತದೆ. ಆರಂಭಿಕ ವಿನಾಯಿತಿಗೆ ಅರ್ಹರಿರುವ ಎಲ್ಲಾ ತೆರಿಗೆದಾರರು ತಮ್ಮ ಇಚ್ಛಾನುಸಾರ ಆರಂಭಿಕ ವಿನಾಯಿತಿಯನ್ನು ಪಡೆದುಕೊಳ್ಳುವುದನ್ನು ಬಿಟ್ಟು ಹೂಡುವಳಿ ತೆರಿಗೆ ಜಮೆ ಸೌಲತ್ತನ್ನು ಪಡೆದುಕೊಂಡು ತೆರಿಗೆಯನ್ನು ಪಾವತಿಸಬಹುದಾಗಿದೆ. ಅಂತರ ರಾಜ್ಯ ಪೂರೈಕೆ ಮಾಡುವ ತೆರಿಗೆದಾರರು ಅಥವಾ ತದ್ವಿರುದ್ಧ ನೆಲೆಗಟ್ಟಿನಲ್ಲಿ ತೆರಿಗೆ ಪಾವತಿಸಬೇಕಾದವರು ಆರಂಭಿಕ ತೆರಿಗೆ ವಿನಾಯಿತಿಗೆ ಅರ್ಹರಿವುದಿಲ್ಲ.

ಪ್ರಶ್ನೆ 20: ಜಿ.ಎಸ್.ಟಿ. ವ್ಯವಸ್ಥೆಯಲ್ಲಿ ಸರಕು ಮತ್ತು ಸೇವೆಗಳನ್ನು ಹೇಗೆ ವರ್ಗೀಕರಿಸಲಾಗುತ್ತದೆ?

ಉತ್ತರ: ಸುಸಂಗತ ನಾಮಕರಣ ವ್ಯವಸ್ಥೆ ಅನುಸಾರ ಜಿ.ಎಸ್.ಟಿ. ವ್ವವಸ್ಥೆಯಲ್ಲಿ ಸರಕುಗಳನ್ನು ವರ್ಗೀಕರಿಸಲಾಗುವುದು. 1.5 ಕೋಟಿಯ ಮೇಲಿರುವ ಹಾಗೂ 5 ಕೋಟಿಗಿಂತಲೂ ಕಡಿಮೆ ಇರುವ ವಹಿವಾಟುವುಳ್ಳ ತೆರಿಗೆ ದಾತರಿಗೆ 2 ಅಂಕೆಯ ಸಂಹಿಯತೆ ಮತ್ತು ವಹಿವಾಟು 5ಕೋಟಿ ಮತ್ತು ಮಿಕ್ಕಿರುವ ತೆರಿಗೆದಾತರಿಗೆ 4ಅಂಕೆಯ ಸಂಹಿತೆಯನ್ನು ಬಳಸಲಾಗುವುದು. 1.5ಕೋಟಿಗಿಂತಲೂ ಕಡಿಮೆ ಇರುವ ತೆರಿಗೆದಾತರು ತಮ್ಮ ಇನ್ವಾಯಿಸ್‌ಗಳಲ್ಲಿ ಸುಸಂಗತ ನಾಮಕರಣದ ಸಂಹಿತೆ ಅಂದರೆ H.S.N. ಕೋಡನ್ನು ನಮೂದಿಸಬೇಕಾಗಿಲ್ಲ. ಸೇವೆಗಳನ್ನು ಸೇವಾ ಲೆಕ್ಕ ಸಂಹಿತೆ ಅಂದರೆ S.A.C .ಪ್ರಕಾರ ವರ್ಗೀಕರಿಸಲಾಗುವುದು.

ಪ್ರಶ್ನೆ 21: ಜಿ. ಎಸ್. ಟಿ. ಯನ್ನು ಅಮದಿನ ಮೇಲೆ ಹೇಗೆ ವಿಧಿಸಲಾಗುವುದು?

ಉತ್ತರ: ಸರಕು ಮತ್ತು ಸೇವೆಗಳ ಅಮದನ್ನು ಅಂತರರಾಜ್ಯ ಪೂರೈಕೆಯೆಂದು ಪರಿಗಣಿಸಲಾಗುವುದು ಮತ್ತು ದೇಶದೊಳಕ್ಕೆ ಅಮದಾಗುವ ಸರಕು ಮತ್ತು ಸೇವೆಗಳಿಗೆ ಅಂತರರಾಜ್ಯ ಜಿ.ಎಸ್.ಟಿ.ಯನ್ನು ವಿಧಿಸಲಾಗುವುದು. ತೆರಿಗೆ ಭಾರವು ಪೂರೈಕೆಯ ಸ್ಥಳ ಸಿದ್ದಾಂತವನ್ನು ಅನುಸರಿಸಿರುತ್ತದೆ ಮತ್ತು ಅಮದಾದ ವಸ್ತುಗಳು ಮತ್ತು ಸೇವೆಗಳನ್ನು ಬಳಸುವ ಸ್ಥಳದ ರಾಜ್ಯಕ್ಕೆ ರಾಜ್ಯ ಜಿ.ಎಸ್.ಟಿ.ಯಾಗಿ ಸಂಪ್ರಾಪ್ತವಾಗುವುದು. ಅಮದಾದ ಸರಕು ಮತ್ತು ಸೇವೆಗಳ ಮೇಲೆ ಪಾವತಿಸಲಾದ ಜಿ.ಎಸ್.ಟಿ.ಯು ಪೂರ್ಣ ಪ್ರಮಾಣದಲ್ಲಿ ವಟಾವಣೆಗೆ ಲಭ್ಯವಿರುತ್ತದೆ.

ಪ್ರಶ್ನೆ22 : ಜಿ.ಎಸ್.ಟಿ.ಯಲ್ಲಿ ರಫ್ತನ್ನು ಹೇಗೆ ಪರಿಭಾವಿಸಲಾಗುವುದು?

ಉತ್ತರ: ರಫ್ತನ್ನು ಶೂನ್ಯ ದರದ ಫುರೈಕೆಯೆಂದು ಪರಿಭಾವಿಸಲಾಗುವುದು. ಸರಕು ಮತ್ತು ಸೇವೆಗಳ ಮೇಲೆ ತೆರಿಗೆ ಇರುವುದಿಲ್ಲವಾದಗ್ಯೂ ರಫ್ತುದಾರನು ಹೂಡಿಕೆ ತೆರಿಗೆ ಜಮೆಯನ್ನು ಪಡೆದುಕೊಳ್ಳಬಹುದು ಮತ್ತು ಅದನ್ನು ಮರು ಪಾವತಿಯಾಗಿ ಪಡೆದುಕೊಳ್ಳಬಹುದು.

ಪ್ರಶ್ನೆ 23 : ಜಿ.ಎಸ್.ಟಿ.ಯಲ್ಲಿ ಸಂಯೋಜಿತ ಯೋಜನೆಯ ವ್ಯಾಪ್ತಿ ಏನು?

ಉತ್ತರ: ಹಣಕಾಸು ವರ್ಷವೊಂದರಲ್ಲಿ ಒಟ್ಟಾರೆ 50 ಲಕ್ಷ ರೂಪಾಯಿಗಳವರೆಗಿನ ವಹಿವಾಟಿರುವ ಸಣ್ಣ ತೆರಿಗೆದಾರರು ಸಂಯೋಜಿತ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಯೋಜನೆಯನುಸಾರ ತೆರಿಗೆದಾತನು ಹೂಡಿಕೆ ತೆರಿಗೆ ಜಮೆ ಸೌಲತ್ತನ್ನು ಪಡೆದುಕೊಳ್ಳದೆ ತನ್ನ ವಹಿವಾಟಿನ ಮೇಲೆ ಶೇಕಡವಾರು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಕೇಂದ್ರ ಜಿ.ಎಸ್.ಟಿ ಮತ್ತು ರಾಜ್ಯ ಜಿ.ಎಸ್.ಟಿ.ಯಸ್ಥಲ ದರವು ಶೇಕಡ1ಕ್ಕಿಂತ ಕಡಿಮೆಯಿರಬಾರದು. ಸಂಯೋಜಿತ ಯೋಜನೆಗೆ ಇಚ್ಛಿಸುವ ತೆರಿಗೆದಾತನು ತನ್ನ ಗ್ರಾಹಕರಿಂದ ಯಾವುದೇ ತೆರಿಗೆಯನ್ನು ಸಂಗ್ರಹಿಸುವಂತಿಲ್ಲ. ಅಂತರ ರಾಜ್ಯ ಪೂರೈಕೆ ಇಲ್ಲವೆ ತದ್ವಿರುದ್ಧ ಆಧಾರಿತ ತೆರಿಗೆ ಪಾವತಿಸಬೇಕಾದ ತೆರಿಗೆದಾತನು ಈ ಸಂಯೋಜಿತ ಯೋಜನೆಗೆ ಅರ್ಹನಿರುವುದಿಲ್ಲ.

ಪ್ರಶ್ನೆ 24: ಸಂಯೋಜಿತ ಯೋಜನೆಯು ಇಚ್ಛಿತವೇ ಆಥವಾ ಕಡ್ಡಾಯವೇ?

ಉತ್ತರ: ಇಚ್ಛಿತ.

ಪ್ರಶ್ನೆ 25: ಜಿ.ಎಸ್.ಟಿ.ಎನ್ ಎಂದರೇನು ಮತ್ತು ಜಿ.ಎಸ್.ಟಿ. ವ್ಯವಸ್ಥೆಯಲ್ಲಿ ಅದರ ಪಾತ್ರವೇನು?

ಉತ್ತರ: ಜಿ.ಎಸ್.ಟಿ.ಎನ್ ಎಂಬುದು ಸರಕು ಮತ್ತು ಸೇವಾ ತೆರಿಗೆಯ ಸಂಪರ್ಕ ಜಾಲವು. ಜಿ.ಎಸ್.ಟಿ.ಯ ಅವಶ್ಯಕತೆಗಳನ್ನು ಈಡೇರಿಸುವ ಸಲುವಾಗಿಜಿ. ಎಸ್.ಟಿ.ಎನ್ ಒಂದು ವಿಶೇಷ ಉದ್ದೇಶವಾಹಕವು. ಜಿ.ಎಸ್.ಟಿ.ಎನ್ ಸಂಪರ್ಕವು ಜಿ.ಎಸ್.ಟಿ.ಯನ್ನು ಜಾರಿಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ತೆರಿಗೆದಾತರು ಮತ್ತು ಇತರೆ ಆಸ್ತೆಯುಳ್ಳವರ ಪಾಲುಗೊಳ್ಳುವಿಕೆ ಆಧಾರದ ಮೇಲೆ ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯ ಸೇವೆಗಳನ್ನು ಒದಗಿಸುತ್ತವೆ. ಜಿ.ಎಸ್.ಟಿ.ಎನ್‌ ಕಾರ್ಯಗಳು ಇವುಗಳಾಗಿರುತ್ತವೆ;

 1. ನೊಂದಣಿ ಸೌಲತ್ತು;
 2. ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳಿಗೆ ವರದಿಗಳ ಸಲ್ಲಿಕೆ;
 3. ಅಂತರರಾಜ್ಯ ಜಿ.ಎಸ್.ಟಿ.ಯನ್ನು ಗಣಿಸುವುದು ಮತ್ತು ಚುಕ್ತಗೊಳಿಸುವುದು;
 4. ತೆರಿಗೆ ಪಾವತಿಗಳ ವಿವರವನ್ನು ಬ್ಯಾಂಕ್‌ ಸಂಪರ್ಕಜಾಲದೊಂದಿಗೆ ಹೊಂದಿಸುವುದು;
 5. ತೆರಿಗೆದಾತನ ವರದಿಯ ಮಾಹಿತಿಯನ್ನು ಆಧರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬಗೆಬಗೆಯ ನಿರ್ವಹಣಾನುಕೂಲಿ ವರದಿಗಳನ್ನು ನೀಡುವುದು;
 6. ತೆರಿಗೆದಾತರ ವಿವರಗಳ ವಿಶ್ಲೇಷಣೆಯನ್ನು ಒದಗಿಸುವುದು; ಮತ್ತು
 7. ಹೂಡಿಕೆ ತೆರಿಗೆ ಜಮೆಯ ಹೊಂದಾಣಿಕೆ, ಹಿಂದಿರುಗಿಸುವಿಕೆ ಮತ್ತು ಮರಳಿ ಪಡೆಯುವ ಅನುಕೂಲವನ್ನು ಒದಗಿಸುವುದು.

ಜಿ.ಎಸ್.ಟಿ. ಪೋರ್ಟಲ್ ಮತ್ತು ನೊಂದಾವಣಿ, ಪಾವತಿ, ವರದಿ ಮತ್ತು ನಿರ್ವಹಣಾ ನುಕೂಲಿ ವರದಿಗಳಿಗೆ ಅನ್ವಯವಾಗುವಂತೆ ಉಭಯ ಸಾಮಾನ್ಯ ರೀತಿಯ ರಚನೆಯನ್ನು ಜಿ.ಎಸ್.ಟಿ.ಎನ್. ಅಭಿವೃದ್ಧಿಪಡಿಸುತ್ತಿದೆ. ಅಲ್ಲದೆ ಜಿ.ಎಸ್.ಟಿ. ಪೋರ್ಟಲ್ ಜೊತೆಗೆ ತೆರಿಗೆ ಆಡಳಿತಕ್ಕಾಗಿ ಹಾಲಿ ಲಭ್ಯವಿರುವ ಮಾಹಿತಿ ತಂತ್ರ ಜ್ಞಾನ ವ್ಯವಸ್ಥೆಯನ್ನು ಜಿ.ಎಸ್.ಟಿ.ಎನ್. ಸಮನ್ವಯಗೊಳಿಸುತ್ತಿದೆಯಲ್ಲದೆ ತೆರಿಗೆದಾತರಿಗೂ ವ್ಯವಹರಿಸಲು ಅನುಕೂಲವಾಗುವ ಮಖಾಮುಖಿಯನ್ನು ಅಭಿವೃದ್ಧಿಪಡಿಸುತ್ತದೆ. ಇಷ್ಟೇ ಅಲ್ಲದೆ ಕರ ನಿರ್ಧರಣೆ, ಲೆಕ್ಕಪರಿಶೋಧನೆ, ಮರುಪಾವತಿ, ಮೇಲ್ಮನವಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಮಾದರಿ 2ರ ರಾಜ್ಯಗಳು) ಹಿನ್ನೆಲೆ ಕಾರ್ಯ ನಿರ್ವಾಹಿಗಳನ್ನು ಜಿ.ಎಸ್.ಟಿ.ಎನ್. ಅಭಿವೃದ್ಧಿಪಡಿಸುತ್ತಿದೆ. ಕೇಂದ್ರ ಪರೋಕ್ಷ ತೆರಿಗೆ ಪರಿಷತ್ ಅಂದರೆ ಸಿ.ಬಿ.ಇ.ಸಿ. ಮತ್ತು ಮಾದರಿ 1ರ ರಾಜ್ಯಗಳು (15 ರಾಜ್ಯಗಳು) ತಮ್ಮದೇ ಆದ ಜಿ.ಎಸ್.ಟಿ. ಹಿನ್ನೆಲೆ ಕಾರ್ಯ ನಿರ್ವಾಹಿಗಳನ್ನು ಅಭಿವೃದ್ಧಿಪಡಿಸುತ್ತಿವೆ. ಜಿ.ಎಸ್.ಟಿ. ಮುನ್ನೆಲೆ ಕಾರ್ಯ ನಿರ್ವಾಹಿಗಳನ್ನು ಹಿನ್ನೆಲೆ ಕಾರ್ಯನಿರ್ವಾಹಿಗಳ ಜೊತೆಗೆ ಸಮನ್ವಯತೆಯನ್ನು ಪೂರ್ಣಗೊಳಿಸಿ ಮುಂಚಿತವಾಗಿಯೇ ಪರೀಕ್ಷಿಸಿ ಸ್ಥಿತ್ಯಂತರ ಬದಲವಾಣೆಯನ್ನು ಸುಗಮಗೊಳಿಸಬೇಕಾಗಿದೆ.

ಪ್ರಶ್ನೆ 26 : ಜಿ.ಎಸ್.ಟಿ. ವ್ಯವಸ್ಥೆಯಡಿಯಲ್ಲಿ ತಕರಾರುಗಳನ್ನು ಹೇಗೆ ಬಗೆಹರಿಸಲಾಗುತ್ತದೆ?

ಉತ್ತರ: 2016ರ ಸಂವಿಧಾನದ ನೂರ ಒಂದನೆಯ ತಿದ್ದುಪಡಿ ಕಾಯಿದೆಯು ಪ್ರಕಾರ ಯಾವುದೇ ತಕರಾರುಗಳ ನ್ಯಾಯ ನಿರ್ಣಯ ಮಾಡಲು ಜಿ.ಎಸ್.ಟಿ. ಪರಿಷತ್ತು ಒಂದು ವ್ಯವಸ್ಥೆಯನ್ನು ಸ್ಥಾಪಿಸಬೇಕಿದೆ. ಸೇವಾ ಮತ್ತು ತೆರಿಗೆಗಳ ಪರಿಷತ್ತು ಉದ್ಭವಿಸುವ ಯಾವುದೇ ತಕರಾರುಗಳನ್ನು ಬಗೆಹರಿಸಲು

(ಅ)ಭಾರತ ಸರ್ಕಾರ ಮತ್ತು ಒಂದು ಅಥವಾ ಒಂದಕ್ಕಿಂತ ಹೆಚ್ಚು ರಾಜ್ಯಗಳ ಮದ್ಯೆ; ಅಥವಾ

(ಬ)ಭಾರತ ಸರ್ಕಾರ ಮತ್ತು ಯಾವುದೇ ರಾಜ್ಯ ಅಥವಾ ರಾಜ್ಯಗಳು ಒಂದು ಕಡೆಗಿದ್ದು/ಪಕ್ಷವಾಗಿದ್ದು, ಇನ್ನೊಂದು ಪಕ್ಷದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ರಾಜ್ಯಗಳು ಇದ್ದಲ್ಲಿ; ಅಥವಾ

(ಕ)ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ರಾಜ್ಯಗಳ ನಡುವಿನಲ್ಲಿ ಜಿ.ಎಸ್.ಟಿ. ಪರಿಷತ್ತಿನ ಶಿಫಾರಸ್ಸುಗಳು ಅಥವಾ ಶಿಫಾರಸ್ಸುಗಳ ಅನುಷ್ಠಾನದಿಂದ ತಕರಾರುಗಳು ಉದ್ಧವಿಸಿದ್ದಲ್ಲಿ ಮೇಲಿನವು ಅನ್ವಯಿಸುತ್ತವೆ.

ಪ್ರಶ್ನೆ 27: ಜಿ.ಎಸ್.ಟಿ.ಯನ್ನು ಜಾರಿಗೊಳಿಸಲು ಅವಶ್ಯವಿರುವ ಇತರೆ ಶಾಸನೀಯಗಳಾವುವು?

ಉತ್ತರ: ಜಿ.ಎಸ್.ಟಿಯನ್ನು ವಿಧಿಸಲು ಸೂಕ್ತ ಶಾಸನಗಳನ್ನು (ಕೇಂದ್ರ ಜಿ.ಎಸ್.ಟಿ. ಕರಡು, ಇಂಟಿಗ್ರೇಟಡ್ಕರಡುಮತ್ತು ರಾಜ್ಯಜಿ.ಎಸ್.ಟಿಕರಡುಗಳು) ಸಂವಿಧಾನದತ್ತ ಅಧಿಕಾರಗಳನ್ನು ಬಳಸಿಕೊಂಡು ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳು ಮಾಡಬೇಕಾಗಿದೆ. ಸಾಂವಿಧಾನಿಕ ಬದಲಾವಣೆಗೆ ಅವಶ್ಯವಿರುವ 2/3ರ ಬಹುಮತದಂತಲ್ಲದೆ ಜಿ.ಎಸ್.ಟಿ. ಕರಡುಗಳಿಗೆ ಒಪ್ಪಿಗೆ ದೊರೆಯಲು ಸರಳ ಬಹುಮತವು ಸಾಕಷ್ಟೆ. ಸುಸ್ಪಷ್ಟವಾಗಿ, ಸಂಸತ್ತು ಮತ್ತು ಸಂಬಂಧಿತ ರಾಜ್ಯ ಶಾಸನ ಸಭೆಗಳು ಜಿ.ಎಸ್.ಟಿ. ಶಾಸನಗಳನ್ನು ಮಾಡಿಯಾದ ಮೇಲಷ್ಟೇ ತೆರಿಗೆ ವಿಧಿಸುವುದು ಆರಂಭಗೊಳ್ಳುತ್ತದೆ.

*****

ತೆರಿಗೆ ವಿಧಿಸುವುದು ಮತ್ತು ತೆರಿಗೆ ವಿನಾಯಿತಿ

2.ತೆರಿಗೆ ವಿಧಿಸುವುದು ಮತ್ತು ತೆರಿಗೆ ವಿನಾಯಿತಿ

ಪ್ರಶ್ನೆ 1: ಜಿ.ಎಸ್.ಟಿ. ವಿಧಿಸುವ ಅಧಿಕಾರವು ಎಲ್ಲಿಂದ ಪ್ರಾಪ್ತವಾಗಿದೆ?

ಉತ್ತರ: ಸಂವಿಧಾನದ 246(ಎ)ವಿಧಿಯನುಸಾರ, 2016 ರ ಸಂವಿಧಾನದ 101ನೆಯ ತಿದ್ದುಪಡಿ ಕಾಯ್ದೆಯು ಉಭಯ ಸಂಸತ್ತು ಮತ್ತು ರಾಜ್ಯ ಶಾಸನ ಸಭೆಗಳಿಗೆ ಜಿ.ಎಸ್.ಟಿ. ಸಂಬಂಧ ಶಾಸನಾಧಿಕಾರವನ್ನು ನಿಯುಕ್ತಿಗೊಳಿಸಿದೆ. ಆದಾಗ್ಯೂ 246(ಎ) ವಿಧಿಯ2ನೇ ಉಪವಿಧಿಯು 269(ಎ)ವಿಧಿಯೊಳಗೂಡಿ ಅಂತರರಾಜ್ಯ ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಶಾಸನ ಮಾಡುವ ಪ್ರತ್ಯೇಕ ಅಧಿಕಾರವನ್ನು ಸಂಸತ್ತಿಗೆ ನೀಡಿದೆ.

ಪ್ರಶ್ನೆ 2:ಜಿ.ಎಸ್.ಟಿ.ಯ ತೆರಿಗೆ ಘಟನೆ/ಸನ್ನಿವೇಶ ಯಾವುದು?

ಉತ್ತರ: ಸರಕು ಮತ್ತು/ಅಥವಾ ಸೇವೆಗಳ ಪೂರೈಕೆಯು. ರಾಜ್ಯದೊಳಗಿನ ಪೂರೈಕೆಗಳ ಮೇಲೆ ಕೇಂದ್ರ ಜಿ.ಎಸ್.ಟಿ ಮತ್ತು ರಾಜ್ಯ ಜಿ.ಎಸ್.ಟಿ.ಯನ್ನು ವಿಧಿಸಲಾಗುವುದು. ಅಂತೆಯೇ ಅಂತರ ರಾಜ್ಯಗಳ ಪೂರೈಕೆಗಳಲ್ಲಿ ಇಂಟಿಗ್ರೇಟಡ್ ಜಿ.ಎಸ್.ಟಿ. ಯನ್ನು ವಿಧಿಸಲಾಗುವುದು. ಕೇಂದ್ರ ಜಿ.ಎಸ್.ಟಿ. ಮತ್ತು ರಾಜ್ಯ ಜಿ.ಎಸ್.ಟಿ. ಕಾಯ್ದೆಗಳ ಭಾಗ 7(1) ಮತ್ತು ಇಂಟಿಗ್ರೇಟಡ್ ಜಿ.ಎಸ್.ಟಿ.ಕಾಯ್ದೆಯ ಭಾಗ4(1)ಕರವಿಧಿಸುವ ಅಧಿಕಾರವನ್ನು ನೀಡುತ್ತದೆ.

ಪ್ರಶ್ನೆ 3: ತದ್ವಿರುದ್ಧ ತೆರಿಗೆ ವಿಧಾನವು ಕೇವಲ ಸೇವೆಗಳಿಗೆ ಮಾತ್ರ ಅನ್ವಯಿಸುವುದೇ?

ಉತ್ತರ: ಇಲ್ಲ, ತದ್ವಿರುದ್ಧ ತೆರಿಗೆ ವಿಧಾನವು ಸರಕು ಮತ್ತು ಸೇವೆಗಳು ಉಭಯಕ್ಕೂ ಅನ್ವಯಿಸುತ್ತದೆ.

ಪ್ರಶ್ನೆ 4: ನೊಂದಾಯಿತರಿಲ್ಲದ ವ್ಯಾಪಾರಿಗಳಿಂದ ಸರಕನ್ನು ಖರೀದಿಸಿದಲ್ಲಿ ಆಗುವ ಪರಿಣಾಮಗಳೇನು?

ಉತ್ತರ: ಸರಕನ್ನು ಪಡೆದುಕೊಳ್ಳುವವನು ಹೂಡಿಕೆ ತೆರಿಗೆ ಜಮೆಯನ್ನು ಪಡೆಯಲು ಆಗುವುದಿಲ್ಲ. ಅಲ್ಲದೆ ಸಂಯೋಜಿತ ಯೋಜನೆಯನುಸಾರ ನೊಂದಾಯಿತರಿರುವವರು ಇಂತಹ ಸಂದರ್ಭಗಳಲ್ಲಿ ತದ್ವಿರುದ್ಧ ತೆರಿಗೆ ತತ್ವದಂತೆ ತೆರಿಗೆ ಪಾವತಿಸಬೇಕಾಗುತ್ತದೆ.

ಪ್ರಶ್ನೆ 5 : ಪರಸ್ಪರ ಸರಕು ವಿನಿಮಯ ಸಂದರ್ಭದಲ್ಲಿ, ಅಂದರೆ ಬಂಗಾರದ ಗಡಿಯಾರವನ್ನು ಉಪಹಾರ ಗೃಹ ಸೇವೆಗಾಗಿ ಪಡೆದಲ್ಲಿ ಅಂತಹ ವ್ಯವಹಾರವು ಎರಡು ಬೇರೆಬೇರೆಯ ಪೂರೈಕೆಯೆನ್ನಿಸಿ ತೆರಿಗೆಗೊಳಪಡುವ ವೋಅಥವಾ ಮುಖ್ಯ ಪೂರೈಕೆದಾರರು ಮಾತ್ರ ತೆರಿಗೆ ಬಾಧ್ಯನಾಗಿರುತ್ತಾನೋ?

ಉತ್ತರ: ಇಲ್ಲ. ಮೇಲಿನ ವ್ಯವಹಾರಿಕ ಪ್ರಕರಣದಲ್ಲಿ ಗ್ರಾಹಕನು ನೀಡುವ/ಪೂರೈಸುವ ಗಡಿಯಾರವು ಉಪಹಾರ ಗೃಹಕ್ಕೆ ವ್ಯವಹಾರ ಸಂಬಂಧಿ ನೀಡಿದ ಪೂರೈಕೆ ಎನ್ನಿಸದು. ಇದು ಉಪಹಾರ ಗೃಹವು ಆತನಿಗೆ ನೀಡಿದ ಪೂರೈಕೆಗೆ ಸಂಭಾವನೆಯೆನಿಸುತ್ತದೆ. ಉಪಹಾರ ಗೃಹಕ್ಕೆ ಈ ಪೂರೈಕೆಯು ತೆರಿಗೆ ಬದ್ಧತೆಯನ್ನು ತಂದಿರಿಸುತ್ತದೆ.

ಪ್ರಶ್ನೆ 6: ಜಿ.ಎಸ್.ಟಿ. ಅನ್ವಯ ಸಂಭಾವನೆಯಿಲ್ಲದೆ ಮಾಡಿದ ಪೂರೈಕೆ ಸಹ ಪೂರೈಕೆ ಎನಿಸುತ್ತದೆಯೇ?

ಉತ್ತರ: ಹೌದು. ಮಾದರಿ ಜಿ.ಎಸ್.ಟಿ. ಕಾಯ್ದೆಯ ಅನುಬಂಧ 1 ರಲ್ಲಿ ಗೊತ್ತು ಪಡಿಸಿರುವ ಪ್ರಕರಣಗಳು ಮಾತ್ರ.

ಪ್ರಶ್ನೆ 7: ಸರಕು ಮತ್ತು/ಅಥವಾ ಸೇವೆಗಳ ವ್ಯವಹಾರವನ್ನು ಪೂರೈಕೆ ಎಂದು ಯಾರು ಅಧಿಸೂಚಿಸಬಲ್ಲರು?

ಉತ್ತರ: ಜಿ.ಎಸ್.ಟಿಪರಿಷತ್ತಿನ ಶಿಫಾರಸ್ಸು ಅನುಸಾರ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಸರಕು ಮತ್ತು/ಅಥವಾ ಸೇವೆಗಳ ವ್ಯವಹಾರವನ್ನು ಪೂರೈಕೆ ಎಂದು ಅಧಿಸೂಚಿಸಬಲ್ಲರು.

ಪ್ರಶ್ನೆ 8: ತೆರಿಗೆ ದಾತನೊಬ್ಬನು ತನ್ನ ಮೂರು ರೀತಿಯ ವ್ಯವಹಾರಗಳ ಪೈಕಿ ಒಂದಕ್ಕೆ ಸಂಯೋಜಿತ ಯೋಜನೆಗೆ ಇಚ್ಛಿಸಲು ಅರ್ಹರಿರುತ್ತಾರೆಯೇ?

ಉತ್ತರ: ಇಲ್ಲ. ಸಂಯೋಜಿತ ಯೋಜನೆಯು ಒಂದೇ ಪ್ಯಾನ್ಸ್‌ ಸಂಖ್ಯೆ ಹೊಂದಿರುವವರ ಪ್ರತ್ಯೇಕ ವ್ಯವಹಾರಗಳಿದ್ದರೂ ಸಹ ಒಟ್ಟಿಗೆ ಎಲ್ಲಾ ವ್ಯವಹಾರಗಳಿಗೂ ಏಕರೂಪಿಯಾಗಿ ಅನ್ವಯಿಸುವಂತಹದ್ದು.

ಪ್ರಶ್ನೆ 9: ತೆರಿಗೆದಾತನು ಅಂತರರಾಜ್ಯ ಪೂರೈಕೆ ಮಾಡಿದಲ್ಲಿ ಸಂಯೋಜಿತಯೋಜನೆಯು ಲಭ್ಯವಿರುವುದೇ?

ಉತ್ತರ: ಇಲ್ಲ. ಸಂಯೋಜಿತ ಯೋಜನೆಯು ತೆರಿಗೆ ದಾತನು ಅಂತರ ರಾಜ್ಯ ಪೂರೈಕೆ ಮಾಡದಿರುವ ಷರತ್ತಿಗೊಳಪಟ್ಟು ಅನ್ವಯಿಸುತ್ತದೆ.

ಪ್ರಶ್ನೆ 10: ಸಂಯೋಜಿತ ಯೋಜನೆಯ ತೆರಿಗೆ ದಾತನುಹೂಡಿಕೆ ತೆರಿಗೆ ಜಮೆ ಪಡೆಯಬಹುದೆ?

ಉತ್ತರ: ಇಲ್ಲ. ಸಂಯೋಜಿತ ಯೋಜನೆಯನುಸಾರ ತೆರಿಗೆದಾತನು ಹೂಡಿಕೆ ತೆರಿಗೆ ಜಮೆಗೆ ಅರ್ಹನಲ್ಲ.

ಪ್ರಶ್ನೆ 11: ಸಂಯೋಜಿತ ಯೋಜನೆಯ ತೆರಿಗೆ ದಾತನಿಂದ ಖರೀದಿಸುವ ಗ್ರಾಹಕನು ಹೂಡಿಕೆ ತೆರಿಗೆ ಜಮೆ ಪಡೆಯಬಹುದೆ?

ಉತ್ತರ: ಇಲ್ಲ. ಸಂಯೋಜಿತ ಯೋಜನೆಯ ತೆರಿಗೆದಾತನಿಂದ ಖರೀದಿಸುವ ಗ್ರಾಹಕನು ಹೂಡಿಕೆತೆರಿಗೆ ಜಮೆ ಪಡೆಯಲಾಗುವುದಿಲ್ಲ. ಏಕೆಂದರೆ ಸಂಯೋಜಿತ ಯೋಜನೆಯ ಪೂರೈಕೆದಾರರು ತೆರಿಗೆ ಇನ್ವಾಯಿಸ್‌ನ್ನು ನೀಡಲಾಗುವುದಿಲ್ಲ.

ಪ್ರಶ್ನೆ 12: ಸಂಯೋಜಿತ ಯೋಜನೆಯ ತೆರಿಗೆಯನ್ನು ಗ್ರಾಹಕನಿಂದ ಸಂಗ್ರಹಿಸಬಹುದೇ?

ಉತ್ತರ:ಇಲ್ಲ. ಸಂಯೋಜಿತ ಯೋಜನೆಯ ಅನುಸಾರ ತೆರಿಗೆ ದಾತನು ತೆರಿಗೆ ಸಂಗ್ರಹಿಸುವುದನ್ನು ನಿರ್ಬಂಧಿಸಲಾಗಿದೆ. ಅಂದರೆ ಸಂಯೋಜಿತ ಯೋಜನೆಯ ಪೂರೈಕೆದಾರರು ಇನ್ವಾಯಿಸ್‌ನ್ನು ನೀಡಲಾಗದು.

ಪ್ರಶ್ನೆ 13: ಸಂಯೋಜಿತ ಯೋಜನೆಯ ತೆರಿಗೆ ಪಾವತಿಗೆ ಇಚ್ಛಿಸಲು ಇರುವ ಮಿತಿಯೇನು?

ಉತ್ತರ: ಹಣಕಾಸು ವರ್ಷವೊಂದರಲ್ಲಿ ಒಟ್ಟು ವಹಿವಾಟುಗಳಿಂದ ಒಟ್ಟು ವಹಿವಾಟುಗಳ ಮೊತ್ತವು 50 ಲಕ್ಷ ಮೀರದಿದ್ದಲ್ಲಿ ಸಂಯೋಜಿತ ಯೋಜನೆ ಲಭ್ಯವಿರುತ್ತದೆ.

ಪ್ರಶ್ನೆ 14: ಸಂಯೋಜಿತ ಯೋಜನೆಯ ಅರ್ಹತೆಯನ್ನು ನಿರ್ಧರಿಸಲುಒಟ್ಟು ವಹಿವಾಟನ್ನು ಗಣಿಸುವುದು ಹೇಗೆ?

ಉತ್ತರ: ಒಟ್ಟು ವಹಿವಾಟನ್ನು ಗಣಿಸುವ ವಿಧಾನವನ್ನು ಭಾಗ 2(6)ರಲ್ಲಿ ನೀಡಲಾಗಿದೆ. ಅದರನುಸಾರ ಒಟ್ಟು ವಹಿವಾಟು ಎಂದರೆ ಎಲ್ಲಾ ಪೂರೈಕೆಗಳ ಮೌಲ್ಯ (ತೆರಿಗೆ ರಹಿತ ಮತ್ತು ತೆರಿಗೆವಿಹಿತ ಪೂರೈಕೆಗಳು+ವಿನಾಯಿತಿ ಪೂರೈಕೆಗಳು+ರಫ್ತು) ಮತ್ತು ಇದು ಹೊರತುಪಡಿಸುವ ತೆರಿಗೆಗಳೆಂದರೆ ಕೇಂದ್ರ ಜಿ.ಎಸ್.ಟಿ. ಕಾಯ್ದೆ, ರಾಜ್ಯ ಜಿ.ಎಸ್.ಟಿ. ಕಾಯ್ದೆ ಮತ್ತು ಇಂಟಗ್ರೇಟಡ್ ಜಿ.ಎಸ್.ಟಿ ಕಾಯ್ದೆ, ಒಳ ಪೂರೈಕೆಗಳ ಮೌಲ್ಯ+ ಒಂದೇ ಪ್ಯಾನ್ನ ಪ್ರಕಾರ ತದ್ವಿರುದ್ಧ ತೆರಿಗೆ ನೀಡಲಾಗುವ ಪೂರೈಕಗಳ ಮೌಲ್ಯ.

ಪ್ರಶ್ನೆ 15: ತೆರಿಗೆದಾತನು ಷರತ್ತನ್ನು ಉಲ್ಲಂಘಿಸಿದಲ್ಲಿ ಎದುರಿಸಬೇಕಾದ ದಂಡನೀಯ ಪರಿಣಾಮಗಳೇನು ಮತ್ತು ಸಂಯೋಜಿತ ಯೋಜನೆಯನುಸಾರ ತೆರಿಗೆ ಪಾವತಿಸಲು ಅರ್ಹನಿಲ್ಲದಿದ್ದಲ್ಲಿ?

ಉತ್ತರ: ಸಂಯೋಜಿತ ಯೋಜನೆಗೆ ಅರ್ಹನಿಲ್ಲದ ತೆರಿಗೆ ದಾತನು ತೆರಿಗೆ, ಬಡ್ಡಿಯನ್ನು ಪಾವತಿಸಲು ಬದ್ಧನಾಗುವುದರ ಜೊತೆಗೆ ತೆರಿಗೆ ಮೊತ್ತಕ್ಕೆ ಸಮನಾದ ದಂಡವನ್ನು ತೆರಬೇಕಾಗುತ್ತದೆ. (ಒ.ಉ.ಐ.ಭಾಗ8 (3).)

ಪ್ರಶ್ನೆ 16 : ಸಂಯೋಜಿತ ಯೋಜನೆಗೆ ಗೊತ್ತು ಪಡಿಸಿರುವ ಕನಿಷ್ಠ ತೆರಿಗೆ ದರ ಏನು?

ಉತ್ತರ: 1%

ಪ್ರಶ್ನೆ 17 :ಸರಕು ಮತ್ತು/ಅಥವಾ ಸೇವೆಗಳನ್ನು ಬೇಷರತ್ತಾಗಿ ವಿನಾಯಿತಿ ಇದ್ದಲ್ಲಿ ತೆರಿಗೆ ದಾತನು ತೆರಿಗೆಯನ್ನು ಪಾವತಿಸಬಲ್ಲನೆ?

ಉತ್ತರ: ಇಲ್ಲ. ಅಂತಹ ಸರಕು ಅಥವಾ ಸೇವೆಗಳನ್ನು ನೀಡುವ ತೆರಿಗೆದಾತನು ಅಂತಹ ಸರಕು ಮತ್ತು ಸೇವೆಗಳ ಮೇಲೆ ತೆರಿಗೆಯನ್ನು ಸಂಗ್ರಹಿಸಕೂಡದು.

ಪ್ರಶ್ನೆ 18 : ತೆರಿಗೆ/ಸುಂಕ ಮಾಫಿ ಎಂದರೇನು?

ಉತ್ತರ: ಅಂದರೆ ಯಾವುದೇ ನೈಸರ್ಗಿಕ ಕಾರಣಗಳಿಗಾಗಿ ಸರಕುಗಳು ಇಲ್ಲವಾದಲ್ಲಿ ಅಥವಾ ನಾಶವಾದಲ್ಲಿ ತೆರಿಗೆದಾತನನ್ನು ಅಂತಹ ಸರಕಿನ ತೆರಿಗೆ ಬದ್ಧತೆಯಿಂದ ಬಿಡುಗಡೆಗೊಳಿಸುವುದಾಗಿದೆ. ಮಾಫಿಯು ಕಾನೂನು ಮತ್ತು ನಿಯಮಗಳಲ್ಲಿ ರೂಪಿಸಿರುವ ಷರತ್ತಿಗೊಳಪಟ್ಟಿರುತ್ತದೆ.

ಪ್ರಶ್ನೆ 19: ಜಿ.ಎಸ್.ಟಿ. ಕಾಯ್ದೆಯನುಸಾರ ಮಾಫಿ ನೀಡಲಾಗುವುದೇ?

ಉತ್ತರ: ಹೌದು. ಮಾದರಿ ಜಿ.ಎಸ್.ಟಿ ಕಾಯ್ದೆಯು ಸರಕು ಪೂರೈಕೆಯ ಮೇಲಿನ ತೆರಿಗೆಯನ್ನು ಮಾಫಿ ಮಾಡಲು ಭಾಗ11 ಅನುವು ಮಾಡಿಕೊಡುತ್ತದೆ.

ಪ್ರಶ್ನೆ 20: ಪೂರೈಸುವುದಕ್ಕಿಂತ ಮುನ್ನ ಕಳೆದು ಹೋದ ಅಥವಾ ನಾಶವಾದ ಸರಕಿಗೆ ಮಾಫಿ ನೀಡಲಾಗುವುದೇ?

ಉತ್ತರ: ಕಾನೂನು ರೀತ್ಯಾ ತೆರಿಗೆ ಪಾವತಿಸಬೇಕಾಗಿದ್ದಲ್ಲಿ ಅಂದರೆ, ತೆರಿಗೆ ಸಂಭಾವ್ಯ ಘಟಿಸಿದ್ದಲ್ಲಿ ತೆರಿಗೆ ಮಾಫಿ ಅನ್ವಯಿಸುತ್ತದೆ. ಜೆ.ಎಸ್.ಟಿ.ಕಾಯ್ದೆಯ ಪ್ರಕಾರ ಸರಕು ಪೂರೈಕೆಯಾದಲ್ಲಿ ತೆರಿಗೆ ವಿಧಿಸಲಾಗುವುದು. ಎಲ್ಲಿ ಸರಕು ಪೂರೈಕೆಗೆ ಮುನ್ನ ಕಳೆದಿರುವುದೋ ಇಲ್ಲವೇ ನಾಶವಾಗಿರುವುದೋ ಅಲ್ಲಿ ಸಂಭಾವ್ಯ ತೆರಿಗೆ ಘಟನೆ ಘಟಿಸಿಲ್ಲದ ಕಾರಣ ತೆರಿಗೆ ಮಾಫಿಯ ಪ್ರಶ್ನೆ ಉದ್ಭವಿಸದು.

ಪ್ರಶ್ನೆ 21: ಯಾವುದೇ ಕಾರಣಗಳಿಗಾಗಿ ಕಳೆದು ಹೋದ ಅಥವಾ ನಾಶವಾದ ಸರಕಿಗೆ ತೆರಿಗೆ ಮಾಫಿ ನೀಡಲಾಗುವುದೇ?.

ಉತ್ತರ: ಇಲ್ಲ.ಉದ್ದೇಶಿತ ಭಾಗ 11 ರ ಭಾಷೆಯ ಸಾದಾ ಓದಿನನುಸಾರ ನೈಸರ್ಗಿಕ ಕಾರಣಗಳಿಂದಾಗಿ ಕಡಿಮೆ ಎಂದು ಕಂಡುಬಂದ ಪೂರೈತ ಸರಕಿನ ಪ್ರಮಾಣದ ಮೇಲೆ ಮಾಫಿ ನೀಡಲಾಗುವುದು.

ಪ್ರಶ್ನೆ22: ಮಾದರಿ ಜಿ.ಎಸ್.ಟಿ.ಕಾಯ್ದೆಯು ಸಮರ್ಥ ಸರ್ಕಾರವು ಪೂರೈಕೆಯ ಮೇಲೆ ಜಿ.ಎಸ್.ಟಿ. ವಿಧಿಸದಿರಲು ಅಧಿಕಾರವನ್ನು ನೀಡಿದೆಯೇ?

ಉತ್ತರ: ಹೌದು. ಮಾದರಿ ಜಿ.ಎಸ್.ಟಿ.ಕಾಯ್ದೆಯ ಭಾಗ10ರನುಸಾರ ಕೇಂದ್ರ ಇಲ್ಲವೇ ರಾಜ್ಯ ಸರ್ಕಾರವು ಜಿ.ಎಸ್.ಟಿ.ಯ ಪರಿಷತ್ತಿನ ಶಿಫಾರಿಸ್ಸಿನಂತೆ ಪೂರೈಕೆಯ ಮೇಲಿನ ಜಿ.ಎಸ್.ಟಿ.ಯನ್ನು ಸಾಮಾನ್ಯವಾಗಿ ಇಲ್ಲವೇ ಷರತ್ತಿಗೊಳಪಟ್ಟು ವಿನಾಯಿತಿಸಬಹುದು.

*****

ನೋಂದಣಿ

3. ನೋಂದಣಿ

ಪ್ರಶ್ನೆ 1: ಜಿಎಸ್ಟಿ ಯಡಿಯಲ್ಲಿ ನೋಂದಾಯಿಸಿಕೊಳ್ಳುವುದರಿಂದ ಸಿಗುವ ಸೌಕರ್ಯಗಳೇನು?

ಉತ್ತರ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಯಡಿಯಲ್ಲಿ ನೋಂದಾಯಿಸಿಕೊಳ್ಳುವುದರಿಂದ ವಹಿವಾಟಿಗೆ ಈ ಕೆಳಗಿನ
ಸೌಕರ್ಯಗಳು ಲಭಿಸುತ್ತವೆ:

 • ಸರಕು ಅಥವಾ ಸೇವೆಯ ಪೂರೈಕೆದಾರನನ್ನು ಕಾನೂನುಬದ್ಧವಾಗಿ ಗುರುತಿಸಲಾಗುತ್ತದೆ.
 • ಒಳ ಬರುವ ಸರಕುಗಳು ಅಥವಾ ಸೇವೆಗಳ ಮೇಲೆ ಪಾವತಿ ಮಾಡಿದ ತೆರಿಗೆಯನ್ನು ನಿಷ್ಕೃಷ್ಟವಾಗಿ ಲೆಕ್ಕವಿನ್ನಿಟ್ಟು ಅದನ್ನು ಸರಕು ಅಥವಾ ಸೇವಾ ಪೂರೈಕೆ ಅಥವಾ ಎರಡೂ ವಹಿವಾಟಿಗೆ ಜಿಎಸ್ಟಿ ಪಾವತಿ ಮಾಡುವ ಸಮಯದಲ್ಲಿ ಉಪಯೋಗಿಸಿಕೊಳ್ಳಬಹುದು.
 • ಕಾನೂನುಬದ್ಧವಾಗಿ ತನ್ನ ಕೊಳ್ಳುಗನಿಂದ ತೆರಿಗೆಯನ್ನು ವಸೂಲಿ ಮಾಡಿಕೊಳ್ಳುವುದಕ್ಕೆ ಮತ್ತು ಜಮೆಯಾದ ತೆರಿಗೆಗಳನ್ನು ತನ್ನಿಂದ ಸರಕುಗಳನ್ನು ಕೊಂಡವರಿಗೆ ಅಥವಾ ಸೇವೆಯನ್ನು ಪಡೆದವರಿಗೆ ವರ್ಗಾಯಿಸುವುದಕ್ಕೆ ಅನುಮತಿ ನೀಡಲಾಗಿದೆ.

ಪ್ರಶ್ನೆ 2: ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಜಿಎಸ್ಟಿಯಡಿಯಲ್ಲಿ ನೋಂದಾಯಿಸಿಕೊಳ್ಳದೆ ಹೂಡುವಳೆ ಜಮೆ (ITC) ಮತ್ತು ತೆರಿಗೆಯನ್ನು ವಸೂಲಿ ಮಾಡಬಹುದೇ?

ಉತ್ತರ:ಇಲ್ಲ. ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಜಿಎಸ್ಟಿಯಡಿಯಲ್ಲಿ ನೋಂದಾಯಿಸಿಕೊಳ್ಳದೆ ತೆರಿಗೆಯನ್ನು ವಸೂಲಿ ಮಾಡಿಕೊಳ್ಳಲು ಆಗುವುದಿಲ್ಲ ಹಾಗೂ ಹೂಡುವಳಿ ಜಮೆಯನ್ನು ಪಡೆಯಲೂ ಆಗುವುದಿಲ್ಲ.

ಪ್ರಶ್ನೆ 3: ನೋಂದಣಿಯ ಜಾರಿಗೆ ಬರುವ ದಿನಾಂಕ ಯಾವುದು?

ಉತ್ತರ: ಒಬ್ಯ ವ್ಯಕ್ತಿ ಅಥವಾ ಸಂಸ್ಥೆ ನೋಂದಾಯಿಸಿಕೊಳ್ಳಬೇಕಾದ ಬಾಧ್ಯತೆಯ ದಿನಾಂಕದಿಂದ ಮೂವತ್ತು ದಿನಗಳೊಳಗೆ ತನ್ನ ನೋಂದಣಿಯ ಅರ್ಜಿಯನ್ನು ಸಲ್ಲಿಸಿದ್ದಲ್ಲಿ, ನೋಂದಣಿಯ ಜಾರೀ ದಿನಾಂಕ ಅವನು ನೋಂದಾಯಿಸಿಕೊಳ್ಳಬೇಕಾದ ಬಾಧ್ಯತೆಯ ದಿನಾಂಕವಾಗಿರುತ್ತದೆ. ಅರ್ಜಿದಾರ ನೋಂದಣಿಯ ಅರ್ಜಿಯನ್ನು ತಾನು ನೋಂದಾಯಿಸಿಕೊಳ್ಳಲು ಬಾಧ್ಯನಾದ 30 ದಿನಗಳನಂತರ ಸಲ್ಲಿಸಿದ್ದಲ್ಲಿ, ನೋಂದಣಿಯ ಜಾರೀ ದಿನಾಂಕ ಅವನಿಗೆ ನೋಂದಣಿಯನ್ನು ಕೊಟ್ಟ ದಿನಾಂಕವಾಗಿರುತ್ತದೆ. ತಾನಾಗಿ ತಾನೇ ನೋಂದಾಯಿಸಿ ಕೊಂಡ ಪಕ್ಷದಲ್ಲಿ, ಅಂದರೆ ಇನ್ನೂ ತೆರಿಗೆ ವಿನಾಯತಿಯ ಮಿತಿಯೊಳಗೇ ತಾನೇ ಸ್ವತಃ ನೋಂದಾಯಿಸಿಕೊಂಡಲ್ಲಿ, ನೋಂದಣಿಯ ಜಾರೀ ದಿನಾಂಕ ನೋಂದಣಿಯ ನಿರ್ದೇಶನದ ದಿನಾಂಕವಾಗಿರುತ್ತದೆ.

ಪ್ರಶ್ನೆ 4: ಮಾದರಿ ಜಿಎಸ್ಟಿ ಕಾಯ್ದೆಯಡಿಯಲ್ಲಿ ಯಾರು ಯಾರು ನೋಂದಾಯಿಸಿಕೊಳ್ಳಬೇಕಾದ ಬಾಧ್ಯತೆ ಇದೆ?

ಉತ್ತರ:ಯಾವುದೇ ಪೂರೈಕೆದಾರ ಭಾರತದ ಯಾವುದೇ ಸ್ಥಳದಲ್ಲಿ ಯಾವುದೇ ತರಹದ ವಹಿವಾಟನ್ನು ನಡೆಸುತ್ತಿದ್ದಾನೆಯೋ ಮತ್ತು ಒಂದು ವರ್ಷದಲ್ಲಿ ಅವನ ವಹಿವಾಟಿನ ಒಟ್ಟಾರೆ ಮೊತ್ತ ಅನುಪಾತಿಸಿದ ಮಿತಿಯನ್ನು ಮೀರಿದೆಯೋ ಅವನು ನೋಂದಾಯಿಸಿಕೊಳ್ಳಲು ಬಾಧ್ಯನಾಗುತ್ತಾನೆ. ಆದರೂ; MGLನ ಅನುಬಂಧ III ರಲ್ಲಿ ತಿಳಿಸಿರುವ ಕೆಲವು ವರ್ಗದ ಜನಗಳು ಈ ಮಿತಿಯ ಪರಿಗಣನೆಗೆ ಬರುವುದಿಲ್ಲ ಹಾಗೂ ಈ ಮಿತಿಯನ್ನು ಪರಿಗಣಿಸದೆ ಅವರಿಗೆ ನೋಂದಾಯಿಸಿಕೊಳ್ಳಬೇಕಾದ ಬಾಧ್ಯತೆ ಇದೆ. ಒಬ್ಬ ರೈತಾಪಿ ಜನ ತೆರಿಗೆದಾರ ವ್ಯಕ್ತಿ ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಅವನಿಗೆ ನೋಂದಾಯಿಸಿಕೊಳ್ಳಬೇಕಾದ ಬಾಧ್ಯತೆ ಇಲ್ಲ. (ಭಾಗ9(1)ರ ಅನುಸಾರ).

ಪ್ರಶ್ನೆ 5: ವಹಿವಾಟಿನ ಒಟ್ಟಾರೆ ಮೊತ್ತ ಎಂದರೆ ಏನು?

ಉತ್ತರ: MGLನ ಭಾಗ2 (6)ರ ಅನ್ವಯ ವಹಿವಾಟಿನ ಒಟ್ಟಾರೆ ಮೊತ್ತದಲ್ಲಿ:
(ಎ) ಎಲ್ಲ ತೆರಿಗೆ ಪಾವತಿಸಬೇಕಾದ ಮತ್ತು ತೆರಿಗೆ ಪಾವತಿಸಬೇಕಾಗಿಲ್ಲದ ಪೂರೈಕೆಗಳು; (ಬಿ) ವಿನಯಾತಿ ಪಡೆದ ಪೂರೈಕೆಗಳು ಮತ್ತು (ಸಿ) ಒಂದೇ PAN (ಪ್ಯಾನ್–ಕಾಯಂ ಖಾತಾ ಸಂಖ್ಯೆ) ಹೊಂದಿರುವ ವ್ಯಕ್ತಿ ಮಾಡುವ ಸರಕುಗಳಮತ್ತು/ಅಥವಾ ಸೇವೆಗಳ ನಿರ್ಯಾತ ರಫ್ತು)ಗಳ ಒಟ್ಟಾರೆ ಮೊತ್ತ ಒಳಗೊಂಡಿದೆ. ಮೇಲಿನ ಎಲ್ಲವನ್ನೂ ಅವನ ಭಾರತದಾದ್ಯಂತದ ವಹಿವಾಟಿನ ಮೊತ್ತವನ್ನು ಪರಿಗಣಿಸಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ ಮತ್ತು ಇದರಲ್ಲಿ ಜಿಎಸ್ಟಿ ಕಾಯ್ದೆ, ಎಸ್ಜಿಎಸ್ಟಿ ಕಾಯ್ದೆ ಮತ್ತು ಐಜಿಎಸ್ಟಿ ಕಾಯ್ದೆಗಳ ಮೇಲೆ ಪಾವತಿಸಿದ ತೆರಿಗೆ ಸೇರಿರುವುದಿಲ್ಲ. ವಹಿವಾಟಿನ ಒಟ್ಟಾರೆ ಮೊತ್ತದಲ್ಲಿ ಹಿಂದಿರುಗಿಸುವ ಬೆಲೆಯ ಆಧಾರದ ಮೇಲೆ ತೆರಿಗೆ ವಿಧಿಸಿದ ಪೂರೈಕೆಗಳ ಮೊತ್ತ ಮತ್ತು ಒಳ ಪೂರೈಕೆಗಳ ಮೊತ್ತ ಸೇರಿರುವುದಿಲ್ಲ.

ಪ್ರಶ್ನೆ 6: ನೋಂದಣಿ ಕಡ್ಡಾಯವಾಗಿರುವ ಸಂದರ್ಭಗಳು ಯಾವುವು?

ಉತ್ತರ: MGL ನ ಅನುಬಂಧ III ಪ್ಯಾರಾ 5ರ ಅನ್ವಯ ಪೂರೈಕೆಯ ಒಟ್ಟಾರೆ ಮೊಬಲಿಗಿನ ಮಿತಿಯನ್ನು ಪರಿಗಣಿಸದೇ ಈ ಕೆಳಗಿನ ವರ್ಗದ ವ್ಯಕ್ತಿಗಳು/ಸಂಸ್ಥೆಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ:

 1. ಯಾವುದೇ ತರಹದ ಅಂತರ-ರಾಜ್ಯ ಪೂರೈಕೆ ಮಾಡುವಂತಹ ವ್ಯಕ್ತಿಗಳು/ಸಂಸ್ಥೆಗಳು;
 2. ಅನಿಯತ ತೆರಿಗೆದಾರ ವ್ಯಕ್ತಿಗಳು/ಸಂಸ್ಥೆಗಳು;
 3. ಹಿಂದಿರುಗಿಸುವ ಆಧಾರದಡಿಯಲ್ಲಿ ತೆರಿಗೆ ಪಾವತಿಸಬೇಕಾದ ವ್ಯಕ್ತಿಗಳು/ಸಂಸ್ಥೆಗಳು;
 4. ಅನಿವಾಸಿ ತೆರಿಗೆ ಪಾವತಿಸಬೇಕಾದ ವ್ಯಕ್ತಿಗಳು/ಸಂಸ್ಥೆಗಳು;
 5. ಭಾಗ 37ರಅನ್ವಯ ತೆರಿಗೆ ವಸೂಲಿ ಮಾಡಬೇಕಾದ ವ್ಯಕ್ತಿಗಳು/ಸಂಸ್ಥೆಗಳು;
 6. ಇನ್ನೊಬ್ಬ ನೋಂದಾಯಿತ ತೆರಿಗೆದಾರನ ಪರವಾಗಿ ಒಬ್ಬ ಮಧ್ಯವರ್ತಿ ಅಥವಾ ಬೇರೆ ರೀತಿಯಾಗಿ ಸರಕುಗಳ/ಸೇವೆಗಳ ಪೂರೈಕೆ ಮಾಡುವ ವ್ಯಕ್ತಿಗಳು/ಸಂಸ್ಥೆಗಳು;
 7. ಒಳ ಸೇವೆಯ ಹಂಚಿಕೆದಾರ;
 8. ವಿ-ವಾಣಿಜ್ಯ ನಿರ್ವಾಹಕನ ಮುಖಾಂತರ ಛಾಪಿನ ಸೇವಾ ಸೌಲಭ್ಯಗಳನ್ನು ಹೊರತುಪಡಿಸಿ ಸರಕುಗಳ ಮತ್ತು / ಅಥವಾ ಸೇವೆಯನ್ನು ಪೂರೈಕೆ ಮಾಡುವ ವ್ಯಕ್ತಿಗಳು/ಸಂಸ್ಥೆಗಳು;
 9. ಪ್ರತಿಯೊಬ್ಬ ವಿ-ವಾಣಿಜ್ಯ ನಿರ್ವಾಹಕ;
 10. ತನ್ನ ಛಾಪಿನ ಹೆಸರಿನಲ್ಲಿ ಅಥವಾ ತನ್ನ ವ್ಯವಹಾರದ ಹೆಸರಿನಲ್ಲಿ ಸೇವೆಗಳನ್ನು ಪೂರೈಕೆ ಮಾಡುವ ಸಮುಚ್ಚಯ ನಿರ್ವಾಹಕರು ಮತ್ತು
 11. ಸಮಿತಿಯ ಶಿಫಾರಿಸನ ಮೇಲೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಆಗಿಂದಾಗ್ಗೆ ಅಧಿಸೂಚನೆ ಮಾಡುವ ಯಾವುದಾದರೂ ಇತರೆ ವ್ಯಕ್ತಿ/ಸಂಸ್ಥೆ ಅಥವಾ ವರ್ಗದ ವ್ಯಕ್ತಿಗಳು/ಸಂಸ್ಥೆಗಳು.

ಪ್ರಶ್ನೆ 7: ಮಾದರಿ ಜಿಎಸ್ಟಿ ಕಾಯ್ದೆಯಡಿ ನೋಂದಾಯಿಸಿಕೊಳ್ಳುವುದಕ್ಕೆ ಸಮಯದ ಮಿತಿ ಏನು?

ಉತ್ತರ: ಯಾವುದೇ ವ್ಯಕ್ತಿ/ಸಂಸ್ಥೆ, ಅನುಶಾಸನ ವಿಧಿಸಿದ ರೀತಿಯಲ್ಲಿ ಮತ್ತು ನಿಯಮಗಳಿಗನುಸಾರವಾಗಿ ತಾನು ನೋಂದಾಯಿಸಿಕೊಳ್ಳಲು ಬಾಧ್ಯನಾಗುವ ದಿನಾಂಕದಿಂದ ಮೂವತ್ತು ದಿನಗಳೊಳಗೆ ನೋಂದಣಿ ಮಾಡಿಕೊಳ್ಳಬೇಕು.

ಪ್ರಶ್ನೆ 8 : ಒಬ್ಬ ವ್ಯಕ್ತಿ/ಸಂಸ್ಥೆ ವಿವಿಧ ರಾಜ್ಯಗಳಲ್ಲಿ ವಹಿವಾಟು ನಡೆಸುತ್ತಿದ್ದಲ್ಲಿ, ಅದೇ PAN ಸಂಖ್ಯೆಯೊಂದಿಗೆ, ಒಂದೇ ನೋಂದಣಿಯೊಂದಿಗೆ ವಹಿವಾಟು ನಿರ್ವಹಿಸಬಹುದೇ?

ಉತ್ತರ: ಇಲ್ಲ. ಪ್ರತಿಯೊಬ್ಬ ವ್ಯಕ್ತಿ/ಸಂಸ್ಥೆ ನೋಂದಾಯಿಸಿಕೊಳ್ಳಲು ಬಾಧ್ಯನಾಗುತ್ತಾನೋ ಅವನು ಯಾವ ಯಾವ ರಾಜ್ಯದಲ್ಲಿ ವಹಿವಾಟು ನಡೆಸುತ್ತಿದ್ದಾನೋ ಅಂತಹ ಪ್ರತಿಯೊಂದು ರಾಜ್ಯದಲ್ಲೂ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಮಾದರಿ ಜಿಎಸ್ಟಿ ಕಾಯ್ದೆಯ ಭಾಗ 19 ಉಪ-ಭಾಗ (1)ರ ಅನ್ವಯ ಜಿಎಸ್ಟಿ ಪಾವತಿಸಬೇಕಾಗುತ್ತದೆ.

ಪ್ರಶ್ನೆ 9 : ಒಂದು ರಾಜ್ಯದಲ್ಲಿ ಹಲವು ವಹಿವಾಟಿನ ಶ್ರೇಣಿ ವ್ಯವಸ್ಥೆಯನ್ನು (different business ver cal) ಹೊಂದಿರುವ ವ್ಯಕ್ತಿ/ಸಂಸ್ಥೆ ಬೇರೆ ಬೇರೆ ನೋಂದಣಿಗಳನ್ನು ಪಡೆಯಬಹುದೇ?

ಉತ್ತರ: ಹೌದು. ಭಾಗ 19 ಉಪ-ಭಾಗ (2) ರಅನ್ವಯ ಒಂದು ರಾಜ್ಯದಲ್ಲಿ ಹಲವು ವಹಿವಾಟಿನ ಶ್ರೇಣಿ ಹೊಂದಿರುವ ವ್ಯಕ್ತಿ/ಸಂಸ್ಥೆ ಅನುಶಾಸನ ವಿಧಿಸಿದ ರೀತಿಯಲ್ಲಿ ಮತ್ತು ನಿಯಮಗಳಿಗನುಸಾರವಾಗಿ ತನ್ನ ಪ್ರತಿಯೊಂದು ವಹಿವಾಟನ ಶ್ರೇಣಿ ವ್ಯವಸ್ಥೆಗೆ ಪ್ರತ್ಯೇಕ ನೋಂದಣಿ ಮಾಡಿಕೊಳ್ಳಬಹುದು.

ಪ್ರಶ್ನೆ10 : ಒಬ್ಬವ್ಯಕ್ತಿ/ಸಂಸ್ಥೆ ಜಿಎಸ್ಟಿ ಪಾವತಿಸಬೇಕಾಗಿಲ್ಲದಿದ್ದರೂ ಕೂಡ ಸ್ವತಃ ನೋಂದಾಯಿಸಿಕೊಳ್ಳುವುದಕ್ಕೆ ಯಾವುದಾದರೂ ವ್ಯವಸ್ಥೆ ಇದೆಯೇ?

ಉತ್ತರ: ಹೌದು ಇದೆ. ಭಾಗ 19 ಉಪ-ಭಾಗ (3)ರ ಅನ್ವಯ, ಒಬ್ಬ ವ್ಯಕ್ತಿ/ಸಂಸ್ಥೆ ಅನುಬಂಧ IIIರ ಅನ್ವಯ ನೋಂದಾಯಿಸಿಕೊಳ್ಳುವು ಬಾಧ್ಯತೆ ಇಲ್ಲದಿದ್ದರೂ ಕೂಡ, ತಾನೇ ಸ್ವತಃ ನೋಂದಾಯಿಸಿಕೊಳ್ಳಬಹುದು ಮತ್ತು ತೆರಿಗೆದಾರನಿಕೆ ಅನ್ವಯವಾಗುವ ಈ ಕಾಯ್ದೆಯ ಎಲ್ಲ ಅನುಬಂಧಗಳು ಆವ್ಯಕ್ತಿ/ಸಂಸ್ಥೆಗೂ ಕೂಡ ಅನ್ವಯಿಸುತ್ತದೆ.

ಪ್ರಶ್ನೆ 11: ನೋಂದಾಯಿಸಿಕೊಳ್ಳುವುದಕ್ಕೆ ಕಾಯಂ ಖಾತಾ ಸಂಖ್ಯೆ (PAN) ಕಡ್ಡಾಯವೇ?

ಉತ್ತರ: ಹೌದು ಇದೆ. ಮಾದರಿ ಜಿಎಸ್ಟಿ ಕಾಯ್ದೆ ಭಾಗ 19ರಅನ್ವಯ ನೋಂದಣಿಯನ್ನು ಪಡೆಯಬೇಕಾದರೆ ಪ್ರತಿಯೊಬ್ಬ ವ್ಯಕ್ತಿ/ಸಂಸ್ಥೆ ಆದಾಯ ತೆರಿಗೆ ಕಾಯ್ದೆ, 1961 (1961ರ 43) ಅಡಿಯಲ್ಲಿ ನೀಡಿದ ಕಾಯಂ ಖಾತಾ ಸಂಖ್ಯೆ ಹೊಂದಿರಬೇಕು. ಆದರೂ, MGL ಭಾಗ 19 (4 A) ಅನ್ವಯ, ಒಬ್ಬ ಅನಿವಾಸಿ ತೆರಿಗೆದಾರನಿಗೆ PAN ಕಡ್ಡಾಯವಲ್ಲ. ಅವನಿಗೆ ಅನುಶಾಸನ ಮಾಡುವ ಬೇರೆ ಯಾವುದೇ ದಾಖಲೆಯ ಪ್ರಮಾಣದ ಮೇಲೆ ನೋಂದಣಿ ಕೊಡಬಹುದು.

ಪ್ರಶ್ನೆ 12 : ಈ ವಿಭಾಗ ಉಚಿತ ಅಧಿಕಾರಿಯ ಮುಖಾಂತರ, ಈ ಕಾಯ್ದೆಯಡಿಯಲ್ಲಿ ಒಬ್ಬ ವ್ಯಕ್ತಿ/ಸಂಸ್ಥೆಗೆ ಸ್ವತಃ ನೋಂದಣಿ ನೀಡುವುದಕ್ಕೆ ಮುಂದುವರಿಯಬಹುದೇ?

ಉತ್ತರ: ಹೌದು ಸಾಧ್ಯ. ಭಾಗ 19 ಉಪ-ಭಾಗ (5)ರಅನ್ವಯ, ಒಬ್ಬ ವ್ಯಕ್ತಿ/ಸಂಸ್ಥೆ ನೋಂದಾಯಿಸಿಕೊಳ್ಳಬೇಕಾದ ಬಾಧ್ಯತೆ ಇದ್ದರೂ ನೋಂದಾಯಿಸಿಕೊಳ್ಳದೇ ಇದ್ದಲ್ಲಿ, ಉಚಿತ ಅಧಿಕಾರಿ ಯಾವುದೇ ಕಾನೂನು ರೀತ್ಯಾ ಕ್ರಮ ಅಥವಾ ಒಉಐನಡಿಯಲ್ಲಿ ತೆಗೆದುಕೊಳ್ಳಬಹುದಾದ ಕ್ರಮ, ಅಥವಾ ಚಾಲ್ತಿಯಲ್ಲಿರುವ ಇನ್ನು ಯಾವುದೇ ಕಾಯ್ದೆಯಡಿಯಲ್ಲಿ ತೆಗೆದುಕೊಳ್ಳಬಹುದಾದ ಕ್ರಮದನುಸಾರ ಯಾವುದೇ ಪೂರ್ವಾಗ್ರಹವಿಲ್ಲದೆ ಅಂತಹ ವ್ಯಕ್ತಿ/ಸಂಸ್ಥೆಯನ್ನು ಅನುಶಾಸನ ಮಾಡಿದ ರೀತಿಯಲ್ಲಿ ನೋಂದಾಯಿಸಲು ಮುಂದುವರಿಯಬಹುದು.

ಪ್ರಶ್ನೆ 13: ಉಚಿತ ಅಧಿಕಾರಿ ನೋಂದಣಿ ಅರ್ಜಿಯನ್ನು ತಿರಸ್ಕರಿಸಬಹುದೇ?

ಉತ್ತರ: ಹೌದು MGL ಉಪ-ಭಾಗ 7ರ ಅನ್ವಯ ಉಚಿತ ಅಧಿಕಾರಿ ನೋಂದಣಿ ಅರ್ಜಿಯನ್ನು ಪೂರ್ಣ ಪರಿಶೀಲನೆ ಮಾಡಿದ ನಂತರ ಅರ್ಜಿಯನ್ನು ತಿರಸ್ಕರಿಸಬಹುದು. ಆದರೂ, ಭಾಗ 19 ಉಪ-ಭಾಗ 8ರಲ್ಲಿ, ಉಚಿತ ಅಧಿಕಾರಿ ಉಚಿತ ಕಾರಣವನ್ನು ನೀಡುವಂತೆ; ಆದೇಶ ನೀಡದೆ ಮತ್ತು ವ್ಯಕ್ತಿಗೆ ಕಾರಣ ನೀಡುವುದಕ್ಕೆ ಉಚಿತ ಅವಕಾಶವನ್ನು ಕೊಡದೇ ನೋಂದಣಿ ಅರ್ಜಿಯನ್ನು ಅಥವಾ UID ಸಂಖ್ಯೆಯನ್ನು (ವಿಶೇಷ ಗುರುತಿನ ಸಂಖ್ಯೆ) ತಿರಸ್ಕರಿಸುವ ಹಾಗಿಲ್ಲ.

ಪ್ರಶ್ನೆ 14: ಒಬ್ಬ ವ್ಯಕ್ತಿ/ಸಂಸ್ಥೆಗೆ ನೀಡಿದ ನೋಂದಣಿ ಶಾಶ್ವತವೇ?

ಉತ್ತರ: ಹೌದು. ಒಂದು ಬಾರಿ ನೀಡಿದ ನೋಂದಣಿ ದೃಢೀಕರಣ ಪತ್ರವನ್ನು ಹಿಂದಿರುಗಿಸದಿದ್ದಲ್ಲಿ, ರದ್ದುಪಡಿಸದೇ ಇದ್ದಲ್ಲಿ, ಅಮಾನತ್ತಿನಲ್ಲಿಡದೇ ಇದ್ದಲ್ಲಿ ಅಥವಾ ಹಿಂತೆಗೆದುಕೊಳ್ಳದೇ ಇದ್ದಲ್ಲಿ ಅದು ಶಾಶ್ವತ.

ಪ್ರಶ್ನೆ 15: ಸಂಯುಕ್ತ ರಾಷ್ಟ್ರಗಳ ಸಂಸ್ಥೆಗಳು ಒಉಐನಡಿಯಲ್ಲಿ ನೋಂದಾಯಿಸಿಕೊಳ್ಳವುದು ಆವಶ್ಯಕವೇ?

ಉತ್ತರ:ಎಲ್ಲ ಸಂಯುಕ್ತ ರಾಷ್ಟ್ರಗಳ ಸಂಸ್ಥೆಗಳು ದೂತವಾಸ ಅಥವಾ ವಿದೇಶಗಳ ದೂತವಾಸಗಳು ಮತ್ತು ಘೋಷಣೆ ಮಾಡಿರುವ ಇತರ ವರ್ಗದ ವ್ಯಕ್ತಿಗಳು ಜಿಎಸ್ಟಿ ಜಾಲತಾಣದ ಮುಖಾಂತರ ಒಂದು ವಿಶೇಷ ಗುರುತಿನಸಂಖ್ಯೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ತಿಳಿಸಿದ ವಿಶೇಷ ಗುರುತಿನ ರೂಪೂರೇಷೆ ಎಲ್ಲ ರಾಜ್ಯಗಳಲ್ಲೂ ಒಂದೇ ತೆರನಾಗಿರುತ್ತದೆ ಮತ್ತು ಜಿಎಸ್ಟಿ IN ರೂಪೂರೇಷೆಯೊಂದಿಗೆ ಅನುರೂಪತೆ ಹೊಂದಿರುತ್ತದೆ ಮತ್ತು ಇದು ಕೇಂದ್ರ ಮತ್ತು ರಾಜ್ಯಗಳಿಗೆ ಒಂದೇ ಆಗಿರುತ್ತದೆ. ಈ ವಿಶೇಷ ಗುರುತಿನ ಸಂಖ್ಯೆ ಅವರು ಪಾವತಿಸಿದ ತೆರಿಗೆಯನ್ನು ಹಿಂದಕ್ಕೆ ಪಡೆಯುವುದಕ್ಕೆ ಮತ್ತು ಜಿಎಸ್ಟಿ ನಿಯಮಗಳು ಅನುಶಾಸನ ಮಾಡುವಂತಹ ಇನ್ನು ಯಾವುದೇ ಉದ್ದೇಶಕ್ಕಾಗಿ ಬೇಕಾಗುತ್ತದೆ.

ಪ್ರಶ್ನೆ 16: ಸಂಯುಕ್ತ ರಾಷ್ಟ್ರಗಳ ಸಂಸ್ಥೆಗಳಿಗೆ ಪೂರೈಕೆ ಮಾಡುವ ವ್ಯಕ್ತಿ/ಸಂಸ್ಥೆಯ ಜವಾಬ್ದಾರಿಗಳೇನು?

ಉತ್ತರ: ತೆರಿಗೆ ಪಾವತಿ ಮಾಡುವ ಪೂರೈಕೆಗಾರ ಈ ಸಂಸ್ಥೆಗಳಿಗೆ ಮಾಡುವ ಪೂರೈಕೆಯ ಖರೀದಿ ಪಟ್ಟಿಯಲ್ಲಿ (invoice) ಆ ಸಂಸ್ಥೆಯ ವಿಶೇಷ ಗುರುತಿನ ಸಂಖ್ಯೆಯನ್ನು ನಮೂದಿಸತ್ತಾನೆಂದು ಮತ್ತು ಆ ತರಹದ ಪೂರೈಕೆಗಳನ್ನು ಇನ್ನೊಬ್ಬ ನೋಂದಾಯಿತ ವ್ಯಕ್ತಿ/ಸಂಸ್ಥೆಗೆ ಪೂರೈಕೆ ಮಾಡಿದಂತೆಯೇ ( (B2B) ಪರಿಗಣಸಿ, ಅದರ ಖರೀದಿ ಪಟ್ಟಿಯನ್ನು ಪೂರೈಕೆದಾರ ಜಾಲಕ್ಕೆ ರವಾನಿಸುತ್ತಾನೆಂದು (upload) ನಿರೀಕ್ಷಿಸಲಾಗಿದೆ.

ಪ್ರಶ್ನೆ 17: ಸರ್ಕಾರೀ ಸಂಸ್ಥೆ ನೋಂದಾಯಿಸಿಕೊಳ್ಳುವುದು ಆವಶ್ಯಕವೇ?

ಉತ್ತರ: ಜಿಎಸ್ಟಿ ಸರಕುಗಳನ್ನು ಹೊರ ಪೂರೈಕೆ ಮಾಡದ ಆದರೆ ಅಂತರ-ರಾಜ್ಯ ಖರೀದಿಗಳನ್ನು ಮಾಡುವ ಸರ್ಕಾರೀ ಪ್ರಾಧಿಕಾರಗಳಿಗೆ/ಸಾರ್ವಜನಿಕ ಕ್ಷೇತ್ರದ ಉದ್ಯಮಗಳಿಗೆ ಸಂಬಂಧಪಟ್ಟ ರಾಜ್ಯ ತೆರಿಗೆ ಅಧಿಕಾರಿಗಳು ಒಂದು ವಿಶೇಷ ಗುರುತಿನ ಸಂಖ್ಯೆಯನ್ನು ಕೊಡುತ್ತಾರೆ (ಮತ್ತು ಹೀಗೆ ಅವುಗಳಿಗೆ ಜಿಎಸ್ಟಿ ಯಡಿಯಲ್ಲಿ ನೋಂದಾಯಿಸಕೊಳ್ಳುವ ಬಾಧ್ಯತೆ ಇರುವುದಿಲ್ಲ).

ಪ್ರಶ್ನೆ 18: ಅನಿಯತ ತೆರಿಗೆದಾರ ಎಂದರೆ ಯಾರು?

ಉತ್ತರ: MGL ನಾ2 (21) ನಲ್ಲಿ ಅನಿಯತ ತೆರಿಗೆದಾರ ಎಂದರೆ ಯಾರು ಎನ್ನುವದನ್ನು ವಿವರಸಲಾಗಿದೆ. ಹಾಗೆಂದರೆ, ಒಂದು ನಿಶ್ಚಿತ ವಹಿವಾಟಿನ ಪ್ರದೇಶವಿಲ್ಲದ ಒಬ್ಬ ವ್ಯಕ್ತಿ ಮತ್ತು ಯಾವಾಗಲೋ ಒಮ್ಮೊಮ್ಮೆ ವಹಿವಾಟನ್ನು ಮಾಡುವಂತಹ ವ್ಯಕ್ತಿ/ಸಂಸ್ಥೆ.

ಪ್ರಶ್ನೆ 19: ಅನಿವಾಸಿ ತೆರಿಗೆದಾರ ಎಂದರೆ ಯಾರು?

ಉತ್ತರ: MGL ನ2 (69)ರ ಅನ್ವಯ ತೆರಿಗೆ ಪಾವತಿಸುವ ಭಾರತದಿಂದ ಹೊರಗಿರುವ ಒಬ್ವ ವ್ಯಕ್ತಿ/ಸಂಸ್ಥೆ ಭಾರತಕ್ಕೆ ಬಂದು ಈ ದೇಶದಲ್ಲಿ ಯಾವಾಗಲೋ ಒಮ್ಮೊಮ್ಮೆ ವಹಿವಾಟನ್ನು ಮಾಡುವಂತಹವನು ಮತ್ತು ಭಾರತದಲ್ಲಿ ಒಂದು ನಿಶ್ಚಿತ ವಹಿವಾಟಿನ ಪ್ರದೇಶವಿಲ್ಲದವನು.

ಪ್ರಶ್ನೆ 20 : ಅನಿಯತ ತೆರಿಗೆದಾರ ಮತ್ತು ಅನಿವಾಸಿ ತೆರಿಗೆದಾರನಿಗೆ ನೀಡಿದ ನೋಂದಣಿ ಪ್ರಮಾಣಪತ್ರದ ಸಿಂಧುತ್ವದ ಅವಧಿ ಏನು?

ಉತ್ತರ: “ಅನಿಯತ ತೆರಿಗೆದಾರ” ಅಥವಾ “ಅನಿವಾಸ ತೆರಿಗೆದಾರ”ನಿಗೆ ನೀಡಿದ ನೋಂದಣಿ ಪ್ರಮಾಣ ಪತ್ರ, ನೋಂದಣಿ ಪ್ರಮಾಣಪತ್ರ ಜಾರಿಗೆ ಬಂದ ದಿನಾಂಕದಿಂದ 90 ದಿನಗಳವರೆಗೆ ಸಿಂಧುವಾಗಿರುತ್ತದೆ. ಆದಾಗ್ಯೂ, ಉಚಿತ ಅಧಿಕಾರಿ; ಮೇಲೆ ತಿಳಿಸಿದ ತೆರಿಗೆದಾರನ ಕೋರಿಕೆಯ ಮೇರೆಗೆ, ಸಿಂಧುತ್ವದ ಅವಧಿಯನ್ನು 90 ದಿನಗಳಿಗಿಂತ ಆದರೆ ಮುಂದಿನ ಸಿಂಧುತ್ವದ ಅವಧಿ 90 ದಿನಗಳಿಗೆ ಮೀರದಂತೆ ಹೆಚ್ಚಿಸಬಹುದು.

ಪ್ರಶ್ನೆ 21 : ವಿಶೇಷ ವಿಭಾಗದಲ್ಲಿ ನೋಂದಣಿ ಪಡೆಯಲಾಶಿಸುವ ಒಬ್ಬ ಅನಿಯತ ತೆರಿಗೆದಾರ ಮತ್ತ ಅನಿವಾಸಿ ತೆರಿಗೆದಾರ ಯಾವುದಾದರೂ ಮುಂಗಡ ತೆರಿಗೆಯನ್ನು ಪಾವತಿಸಬೇಕಾಗುತ್ತದೆಯೇ?

ಉತ್ತರ: ಹೌದು. ಒಬ್ಬ ಸಾಮಾನ್ಯ ತೆರಿಗೆದಾರ ನೋಂದಣಿ ಪಡೆಯುವುದಕ್ಕೆ ಮುನ್ನ ಯಾವುದೇ ಮಂಗಡ ಹಣದ ಪಾವತಿ ಮಾಡಬೇಕಾಗದೇ ಇದ್ದರೂ, ಒಬ್ಬ ಅನಿಯತ ತೆರಿಗೆದಾರ ಅಥವಾ ಒಬ್ಬ ಅನಿವಾಸಿ ತೆರಿಗೆದಾರ ತನ್ನ ನೋಂದಾಣಿ ಅರ್ಜಿಯನ್ನು ಸಲ್ಲಿಸುವ ಮುನ್ನ ಭಾಗ 19 ಉಪ-ಭಾಗ (1) ರ ಅನ್ವಯ ತನಗೆ ಯಾವ ಅವಧಿಯವರೆಗೆ ನೋಂದಣಿ ಬೇಕಾಗಿದೆಯೋ ಅಲ್ಲಿಯವರೆಗೆ ಪಾವತಿಸಬೇಕಾದ ತೆರಿಗೆಯ ಮೊತ್ತದ ಬಾಧ್ಯತೆಯನ್ನು ಅಂದಾಜು ಮಾಡಿ ಆ ಅಂದಾಜು ಮೊತ್ತಕ್ಕೆ ಸಮನಾದ ಮುಂಗಡ ತೆರಿಗೆಯನ್ನು ಪಾವತಿ ಮಾಡಬೇಕು.ಮೊದಲ 90 ದಿನಗಳ ಅವಧಿಯನ್ನು ಮೀರಿ ನೋಂದಣಿಯನ್ನು ವಿಸ್ತರಿಸಬೇಕಾದಲ್ಲಿ, ಆ ಹೆಚ್ಚುವರಿ ಅವಧಿಗೆ, ಅಂದರೆ 90 ದಿನಗಳಿಗಿಂತಲೂ ಮುಂದೆ ವಿಸ್ತರಿಸುವಂತೆ ಬೇಡಿಕೆ ನೀಡುವ ಅವಧಿಗೆ ತಗಲುಹ ಹೆಚ್ಚುವರಿ ತೆರಿಗೆ ಮೊತ್ತ ಎಷ್ಟಾಗಬಹುದು ಎಂದು ಅಂದಾಜು ಮಾಡಿ, ಆಮೊತ್ತಕ್ಕೆ ಸಮನಾದ ಹಣವನ್ನು ಪೂನಃ ಮುಂಗಡವಾಗಿ ಪಾವತಿ ಮಾಡಬೇಕು.

ಪ್ರಶ್ನೆ 22 : ನೋಂದಣಿ ಪ್ರಮಾಣ ಪತ್ರದಲ್ಲಿ ತಿದ್ದುಪಡಿಗಳನ್ನು ಮಾಡಬಹುದೇ?

ಉತ್ತರ: ಭಾಗ 20ರ ಅನ್ವಯ, ಉಚಿತ ಅಧಿಕಾರಿ, ನೋಂದಾಯಿತನು ಸಲ್ಲಿಸಿದ ಮಾಹಿತಿಯ ಆಧಾರದ ಮೇಲೆ ಅಥವಾ ತಾನೇ ಖುದ್ದಾಗಿ ಖಚಿತಪಡಿಸಿಕೊಂಡ ಆಧಾರದ ಮೇಲೆ, ಒಂದು ನಿರ್ದಿಷ್ಟ ಮಾರ್ಗದಲ್ಲಿ ಮತ್ತು ಅನುಶಾಸನ ಮಾಡಿದ ಒಂದು ನಿರ್ದಿಷ್ಟ ಅವಧಿಯೊಳಗೆ ನೋಂದಣಿಯ ವಿವರಗಳ ತಿದ್ದುಪಡಿಯನ್ನು ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು.ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ ಏನೆಂದರೆ, ಕೆಲವು ಮುಖ್ಯ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಗಳಿಗೆ ಮಾತ್ರ ತಿದ್ದುಪಡಿ ಮಾಡುವುದಕ್ಕೆ ಉಚಿತ ಅಧಿಕಾರಿಯ ಅನುಮತಿ ಬೇಕಾಗುತ್ತದೆ ಮತ್ತು ಇನ್ನು ಇತರ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ನೋಂದಾಯಿತನೇ ಸ್ವತಃ ಮಾಡಿಕೊಳ್ಳಬಹುದು.

ಪ್ರಶ್ನೆ 23: ನೋಂದಣಿ ಪ್ರಮಾಣ ಪತ್ರಗಳನ್ನು ರದ್ದುಪಡಿಸುವುದು ಅನುಜ್ಞಾರ್ಹವೇ?

ಉತ್ತರ: ಹೌದು. MGL 21ರಲ್ಲಿನ ತಿಳಿಸಿರುವಂತಹ ಸಂದರ್ಭಗಳಲ್ಲಿ, ಉಚಿತ ಅಧಿಕಾರಿ ಈ ಕಾಯ್ದೆಯಡಿ ನೀಡಿದಂತ ಯಾವುದೇ ಪ್ರಮಾಣ ಪತ್ರವನ್ನು ರದ್ದುಪಡಿಸಬಹುದು. ಅನುಶಾಸನ ಮಾಡುವ ಒಂದು ನಿಗದಿತ ರೀತಿಯಲ್ಲಿಮತ್ತು ಒಂದು ನಿಗದಿತ ಅವಧಿಯಲ್ಲಿ, ಉಚಿತ ಆಧಿಕಾರಿ ತನ್ನ ಸ್ವಂತಗೊತ್ತುವಳಿಯ ಮೇಲೆ ಅಥವಾ ನೋಂದಾಯಿತ ತೆರಿಗೆದಾರ ಅಥವಾ ತೆರಿಗೆದಾರ ಮೃತನಾಗಿದ್ದಲ್ಲಿ ಅವನ ಕಾನೂನುಬದ್ಧವಾರಸುದಾರರು ಅನುಶಾಸನ ಮಾಡಿದ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಿದಾಗ, ಉಚಿತ ಅಧಿಕಾರಿ ನೋಂದಣಿಯನ್ನು ರದ್ದುಪಡಿಸಬಹುದು.

ಪ್ರಶ್ನೆ24: ಸಿಜಿಎಸ್ಟಿ ಕಾಯ್ದೆ ಅಡಿಯಲ್ಲಿ ನೋಂದಣಿ ರದ್ದಾದಲ್ಲಿ, ಅದು ಎಜಿಎಸ್‌ಟಿ ಕಾಯ್ದೆ ಅಡಿಯಲ್ಲಿ ಕೂಡ ರದ್ದಾದಂತೆಯೆ?

ಉತ್ತರ: ಹೌದು. ಒಂದು ಕಾಯ್ದೆ (ಸಿಜಿಎಸ್ಟಿ ಕಾಯ್ದೆ ಎಂದು ಇಟ್ಟುಕೊಳ್ಳಿ) ಅಡಿಯಲ್ಲಿ ನೋಂದಣಿರದ್ದಾದಲ್ಲಿಅದನ್ನು ಇನ್ನೊಂದು ಕಾಯ್ದೆ ಅಡಿಯಲ್ಲೂ ಕೂಡ (ಅಂದರೆಎಸ್ಜಿಎಸ್ಟಿಕಾಯ್ದೆ)ರದ್ದಾದಂತೆ ಪರಿಗಣಿಸಲಾಗುತ್ತದೆ (ಭಾಗ21(6)).

ಪ್ರಶ್ನೆ 25: ಒಬ್ಬ ಉಚಿತ ಅಧಿಕಾರಿ ತಾನೇ ಸ್ವತಃ ನೋಂದಣಿಯನ್ನು ರದ್ದು ಪಡಿಸಬಹುದೇ?

ಉತ್ತರ: ಹೌದು. MGL ಭಾಗ 21(2)ರಲ್ಲಿ ನಿರ್ದಿಷ್ಟಪಡಿಸಿರುವ ಸಂಧರ್ಭಗಳಲ್ಲಿ ಉಚಿತ ಅಧಿಕಾರಿತಾನೆಸ್ವತಃ ನೋಂದಣಿ ರದ್ದುಮಾಡಬಹುದು. ಅಂತಹ ಸಂಧರ್ಭಗಳಲ್ಲಿ ತೆರಿಗೆ ಉದ್ದೇಶಕ್ಕಾಗಿ ತನ್ನ ಆದಾಯವನ್ನು ಆರು ತಿಂಗಳವರೆಗೆ ನಿರಂತರವಾಗಿ ಸಲ್ಲಿಸದೇ ಇರುವುದು (ಒಬ್ಬ ಸಾಮಾನ್ಯ ತೆರಿಗೆದಾರನಿಗೆ) ಅಥವಾ ಮೂರು ತಿಂಗಳು (ಒಬ್ಬ ಸಂಘಟಿತ ತೆರಿಗೆದಾರನಿಗೆ– compounding taxpayer) ಮತ್ತು ನೋಂದಣಿ ದಿನಾಂಕದಿಂದ ಆರು ತಿಂಗಳವರೆಗೆ ವಹಿವಾಟನ್ನು ಆರಂಭಿಸದೇ ಇರುವುದು ಒಳಗೊಂಡಿವೆ. ಆದಾಗ್ಯೂ, ನೋಂದಣಿಯನ್ನು ರದ್ದು ಮಾಡುವುದಕ್ಕೆ ಮುನ್ನ ಉಚಿತ ಅಧಿಕಾರಿ ನಿಯತ ನ್ಯಾಯ ವ್ಯವಸ್ಥೆಯ ವಿಧಿಗಳನ್ನು ಪಾಲಿಸಬೇಕು (ಭಾಗ 21(4)).

ಪ್ರಶ್ನೆ 26 : ಒಂದು ವೇಳೆ ಉದ್ದೇಶ ಪೂರ್ವಕವಾಗಿ ತಪ್ಪು-ಮಾಹಿತಿಯನ್ನು ನೀಡಿ, ವಂಚನೆ ಮಾಡಿ ಅಥವಾ ಸತ್ಯಾಂಶಗಳನ್ನು ಮರೆಮಾಚಿ ನೋಂದಣಿ ಪಡೆದಿದ್ದರೆ ಆಗ ಏನಾಗುತ್ತದೆ?

ಉತ್ತರ: ಇಂತಹ ವಿಷಯಗಳಲ್ಲಿ, ಭಾಗ 21(3)ರಅನ್ವಯ ಉಚಿತ ಅಧಿಕಾರಿ ಪೂರ್ವಾನ್ವಯ ದಿನಾಂಕದಿಂದ ಜಾರಿಗೆ ಬರುವ ಹಾಗೆ ನೋಂದಣಿಯನ್ನು ರದ್ದು ಪಡಿಸಬಹುದು.

ಪ್ರಶ್ನೆ 27 : MGL ಅಡಿಯ ಸೇವೆಗಳಿಗೆ ಕೇಂದ್ರೀಕೃತವಾಗಿ ನೋಂದಣಿ ಪಡೆಯುವುದಕ್ಕಿ ಯಾವುದಾದರೂ ಆಯ್ಕೆ ಇದೆಯೇ?

ಉತ್ತರ: ಇಲ್ಲ.

ಪ್ರಶ್ನೆ 28 : ಒಬ್ಬವ್ಯಕ್ತಿ/ಸಂಸ್ಥೆ ಒಂದು ರಾಜ್ಯದಲ್ಲಿ ಹಲವು ವಹಿವಾಟಿನ ಶ್ರೇಣಿ ವ್ಯವಸ್ಥೆಯನ್ನು (different business ver cal) ಹೊಂದಿದ್ದಲ್ಲಿ ಅಂತಹ ಪ್ರತಿಯೊಂದು ಶ್ರೇಣಿ ವ್ಯವಸ್ಥೆಗೂ ಪ್ರತ್ಯೇಕ ನೋಂದಣಿ ಪಡೆಯಬೇಕೇ?

ಉತ್ತರ: ಇಲ್ಲ. ಆದರೂ, MGL ಭಾಗ19 (2)ರ ಅನ್ವಯ ರಿಗೆದಾರ ಆತರಹದ ಪ್ರತ್ಯೇಕ ವಹಿವಾಟಿನ ಶ್ರೇಣಿ ವ್ಯವಸ್ಥೆಗಳಿಗೆ ಸ್ವತಂತ್ರವಾಗಿ ಪ್ರತ್ಯೇಕ ನೋಂದಣಿ ಮಾಡಿಸಿಕೊಳ್ಳುವುದಕ್ಕೆ ಆಯ್ಕೆಯಿದೆ.

ಪ್ರಶ್ನೆ 29: ಐಎಸ್ಡಿ ಎಂದರೆ ಯಾರು?

ಉತ್ತರ: ಐಎಸ್ಡಿ ಎಂದರೆ ಪ್ರಾರಂಭದ ಸೇವೆಯ ವಿತರಕ (Input Service Provider) ಎಂದು.ಇದನ್ನು MGL ಭಾಗ 2(56)ರಲ್ಲಿ ವಿವರಸಿಲಾಗಿದೆ. ಮೂಲಭೂತವಾಗಿ ಇದು ಪ್ರಾರಂಭದ ಸೇವೆಗಳನ್ನು ಪಡೆಯುವುದಕ್ಕಾಗಿ ಸಂಬಂಧ ಪಟ್ಟ ತೆರಿಗೆಗೊಳಪಡುವ ಖರೀದಿ ಪಟ್ಟಿಗಳನ್ನು (invoices) ಸ್ವೀಕರಿಸುವುದಕ್ಕೆ ಮತ್ತು ಪೂರೈಕೆದಾರರ ವಿಭಾಗಗಳಿಗೆ ಸೂಕ್ತಪ್ರಮಾಣದಲ್ಲಿ ಜಮೆ ನೀಡುವುದಕ್ಕಾಗಿ ಇರುವ ಒಂದು ಕಛೇರಿ.

ಪ್ರಶ್ನೆ 30 : ತೆರಿಗೆದಾರನ ಚಾಲ್ತಿಯಲ್ಲಿರುವ ನೋಂದಣಿಯನ್ನು ಹೊರತುಪಡಿಸಿ ಐಎಸ್‌ಡಿ ಯನ್ನು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬೇಕೇ?

ಉತ್ತರ: ಹೌದು. ಐಎಸ್‌ಡಿ ನೋಂದಣಿ ತೆರಿಗೆದಾರನ ಒಂದು ಕಛೇರಿಗಾಗಿ ಮಾಡಿಸಲ್ಪಟ್ಟಿರುತ್ತದೆ ಮತ್ತು ಇದು ಸಾಮಾನ್ಯ ನೋಂದಣಿಗಿಂತ ಬೇರೆಯಾಗಿರುತ್ತದೆ.

ಪ್ರಶ್ನೆ 31 : ಒಬ್ಬ ತೆರಿಗೆದಾರ ಹಲವು ಐಎಸ್ಡಿ ಗಳನ್ನು ಹೊಂದಿರಬಹುದೇ?

ಉತ್ತರ: ಹೌದು. ತೆರಿಗೆದಾರನ ಬೇರೆ ಬೇರೆ ಕಛೇರಿಗಳು ಐಎಸ್‌ಡಿನೋಂದಣಿಗೆ ಅರ್ಜಿ ಸಲ್ಲಿಸಬಹುದು.

ಪ್ರಶ್ನೆ 32 : ವಹಿವಾಟಿನ ವರ್ಗಾವಣೆಗೆ ಸಂಬಂಧಿಸಿದಂತೆ ಹೊಣೆಗಾರಿಕೆಗೆಳೇನು (ಅಂದರೆ ನೋಂದಣಿಗೆ ಸಂಬಂಧಿಸಿದ ಹಾಗೆ)?

ಉತ್ತರ: ವರ್ಗಾಯಿಸಲ್ಪಟ್ಟವನು ಅಥವಾ ಉತ್ತರಾಧಿಕಾರಿ ವರ್ಗಾವಣೆಯ ಹಕ್ಕುದಾರಿಕೆಯು ಜಾರಿಗೆ ಬರುವ ದಿನಾಂಕದಿಂದ ನೋಂದಾಯಿಸಿಕೊಳ್ಳಬೇಕು ಮತ್ತು ಅವನು ಆ ದಿನಾಂಕದಿಂದ ಒಂದು ಹೊಸ ನೋಂದಣಿಯನ್ನು ಪಡೆಯಬೇಕು ((MGL ಅನುಬಂಧ III).

ಪ್ರಶ್ನೆ 33: ಸ್ಥಾಯೀ ಕೇಂದ್ರೀಯ ಅಬಕಾರಿ/ಸೇವಾ ತೆರಿಗೆ/ VAT ಕಾಯ್ದೆಗಳಡಿಯಲ್ಲಿ ಈಗಾಗಲೆ ನೋಂದಾಯಿಸಿಕೊಂಡಿರುವಂತಹ ಎಲ್ಲ ತೆರಿಗೆದಾರರು/ವಿತರಕರು ಮತ್ತೆ ಪೂನಃ ನೋಂದಾಯಿಸಿಕೊಳ್ಳಬೇಕಾಗುತ್ತದೆಯೇ?

ಉತ್ತರ: ಇಲ್ಲ. ಜಿಎಸ್ಟಿಎನ್ ಅಂತಹ ಎಲ್ಲ ತೆರಿಗೆದಾರರನ್ನು/ವಿತರಕರನ್ನು ಜಿಎಸ್‌ಟಿಎನ್ ಜಾಲತಾಣಕ್ಕೆ ಸ್ಥಳಾಂತರಿಸುತ್ತದೆ ಮತ್ತು ಜಿಎಸ್‌ಟಿಎನ್ ಸಂಖ್ಯೆ ಮತ್ತು ಕೀಲಿಪದವನ್ನು ನೀಡುತ್ತದೆ. ಅವರು ಒಂದು ನಿಗದಿ ಪಡಿಸಿದ ಸಮಯದೊಳಗೆ ನೋಂದಣಿಗೆಬೇಕಾದ ಎಲ್ಲ ಅವಶ್ಯಕ ದಾಖಲೆಗಳು ಮತ್ತು ವಿಷಯಗಳನ್ನು ಸಲ್ಲಿಸುವುಂತೆ ಹೇಳಲಾಗುತ್ತದೆ. ಹೀಗೆ ಮಾಡುವುದಕ್ಕೆ ತಪ್ಪಿದಲ್ಲಿ, ಅವರ ನೋಂದಣಿಯನ್ನು ರದ್ದು ಪಡಿಸಲಾಗುತ್ತದೆ. ಕೇಂದ್ರೀಯ ನೋಂದಣಿ ಹೊಂದಿರುವ ಸೇವಾ ತೆರಿಗೆ ತೆರಿಗೆದಾರರು ಯಾವಯಾವ ರಾಜ್ಯದಲ್ಲಿ ಅವರ ವಹಿವಾಟು ಇದೆಯೋ ಆಯಾ ರಾಜ್ಯದಲ್ಲಿ ಮತ್ತೆ ಹೊಸದಾಗಿ ನೋಂದಣಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಪ್ರಶ್ನೆ 34: ಬಿಡಿ ಕೆಲಸಗಾರ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕೇ?

ಉತ್ತರ: ಇಲ್ಲ. MGL 43 A ಆ ತರಹದ ಯಾವುದೇ ಅನುಬಂಧಯನ್ನು ಅನುಶಾಸಿವುದಿಲ್ಲ.

ಪ್ರಶ್ನೆ 35: ಒಬ್ಬ ಬಿಡಿ ಕೆಲಸಗಾರ ತನ್ನ ವಹಿವಾಟಿನ ಸ್ಥಳದಿಂದ ಸರಕಗಳನ್ನು ಪೂರೈಕೆ ಮಾಡುವುದಕ್ಕೆ ಅನುಮತಿ ನೀಡಲಾಗುತ್ತದೆಯೇ?

ಉತ್ತರ: ಹೌದು. ಆದರೆ, ಬಿಡಿ ಕೆಲಸಗಾರ ನೊಂದಾಯಿಸಿಕೊಂಡಿದ್ದರೆ ಅಥವಾ ಮುಖ್ಯ ವಹಿವಾಟುಗಾರ ಆ ವಹಿವಾಟಿನ ಸ್ಥಳವನ್ನು ತನ್ನ ಹೆಚ್ಚುವರಿ ವಹಿವಾಟಿನ ಸ್ಥಳ ಎಂದು ಘೋಷಿಸಿರುವ ಸಂದರ್ಭಗಳಲ್ಲಿ ಮಾತ್ರ.

ಪ್ರಶ್ನೆ 36: ನೋಂದಣಿಯ ಸಮಯದಲ್ಲಿ, ತೆರಿಗೆದಾರ ತನ್ನ ಎಲ್ಲ ವಹಿವಾಟಿನ ಸ್ಥಳಗಳನ್ನು ಘೋಷಿಸಬೇಕೇ?

ಉತ್ತರ: ಹೌದು. ಮುಖ್ಯವಹಿವಾಟಿನ ಸ್ಥಳ ಮತ್ತು ಹೆಚ್ಚುವರಿ ವಹಿವಾಟಿನ ಸ್ಥಳ ಎನ್ನುವುದನ್ನು MGL ಭಾಗ 2(78) ಮತ್ತು 2(75)ರಲ್ಲಿ ಪ್ರತ್ಯೇಕವಾಗಿ ವಿವರಿಸಲಾಗಿದೆ. ತೆರಿಗೆದಾರ ತನ್ನ ನೋಂದಣಿ ಅರ್ಜಿಯಲ್ಲಿ ತನ್ನ ಮುಖ್ಯ ವಹಿವಾಟಿನ ಸ್ಥಳ ಮತ್ತು ತನ್ನ ಇತರ ಹೆಚ್ಚುವರಿ ವಹಿವಾಟಿನ ಸ್ಥಳಗಳ ವಿವರವನ್ನು ಘೋಷಿಸಬೇಕು.

ಪ್ರಶ್ನೆ 37: ಮಾಹಿತಿ ತಂತ್ರಜ್ಞಾನದ ಸೌಲಭ್ಯಗಳಿಲ್ಲದಿರುವ ಸಣ್ಣ-ಪೂಟ್ಟ ವಿತರಕರು ಅಥವಾ ವಿತರಕರುಗಳಿಗೆ ಅವರ ವಹಿವಾಟನ್ನು ಸುಗಮಗೊಳಿಸುವ ಯಾವುದಾದರೂ ವ್ಯವಸ್ಥೆಯಿದೆಯೇ?

ಉತ್ತರ: ಮಾಹಿತಿ ತಂತ್ರಜ್ಞಾನದ ಅಭಿರುಚಿಯಿಲ್ಲದಿರುವಂತಹ ತೆರಿಗೆದಾರರ ಅವಶ್ಯಕತೆಗಳಿಗೆ ಸ್ಪಂದಿಸುವುದಕ್ಕೆ ಈ ಕೆಳಗಿನ ಸೌಕರ್ಯಗಳನ್ನು ನೀಡಲಾಗುವುದು: ತೆರಿಗೆಯ ಆದಾಯದ ವಿವರಗಳನ್ನು ಸಿದ್ಧಪಡಿಸುವವನು (ಟಿಆರ್ಪಿ):ತೆರಿಗೆ ಪಾವತಿಸುವಂತಹ ವ್ಯಕ್ತಿ ತನ್ನ ನೋಂದಣಿ ಅರ್ಜಿ/ಆದಾಯದ ವಿವರಗಳನ್ನು ತಾನೇ ಸ್ವತಃ ಸಿದ್ಧಪಡಿಸಬಹುದು ಅಥವಾ ಸಹಾಯಕ್ಕಾಗಿ ಟಿಆರ್‌ಪಿಯನ್ನು ಸಂಪರ್ಕಿಸಬಹುದು. ಟಿಆರ್‌ಪಿ, ತೆರಿಗೆದಾರ ನೀಡಿದ ಮಾಹಿತಿಯ ಆಧಾರದ ಮೇಲೆ, ಮೇಲೆ ತಿಳಿಸಿದ ನೋಂದಣಿ ಅರ್ಜಿ/ಆದಾಯದ ವಿವರಗಳನ್ನು ವಿಧಿವತ್ತಾದ ರೀತಿಯಲ್ಲಿ ಸಿದ್ಧಪಡಿಸುವನು. ಹೀಗೆ ಟಿಆರ್ಪಿ ಸಿದ್ಧಪಡಿಸಿದ ಅರ್ಜಿ/ದಸ್ತಾವೇಜಿನ ಮೇಲೆ ಇರುವ ಮಾಹಿತಿಯ ಕಾನೂನು ರೀತ್ಯಾ ಜವಾಬ್ದಾರಿ ತೆರಿಗೆದಾರನ ಮೇಲೆ ಇರುತ್ತದೆಯೋ ಹೊರತು ಯಾವುದೇ ದೋಷಯುಕ್ತ ಮಾಹಿತಿ ಅಥವಾ ಯಾವುದೇ ದೋಷಗಳಿಗೆ ಟಿಆರ್ಪಿ ಬಾಧ್ಯನಾಗಿರುವುದಿಲ್ಲ. ಸೌಕರ್ಯ ಕೇಂದ್ರ (ಎಫ್ಸಿ): ರುಜುಹಾಕುವುದಕ್ಕೆ ಅಧಿಕಾರಹೊಂದಿರುವ ವ್ಯಕ್ತಿ ರುಜುಹಾಕಿರುವ ಮತ್ತು ತೆರಿಗೆದಾರ ಕೊಟ್ಟಂತಹ ದಸ್ತಾವೇಜು ಮತ್ತು ದಾಖಲೆ ಪತ್ರಗಳ (ಸಂಕ್ಷಿಪ್ತಹಾಳೆಯೂಸೇರಿ)ಅಂಕಿಪರಿವರ್ತನೆ(digi za on) ಮತ್ತು/ಅಥವಾ ಜಾಲಕ್ಕೆ ರವಾನಿಸುವುದಕ್ಕೆ ಜವಾಬ್ದಾರಿ ಹೊಂದಿರುತ್ತದೆ. ಎಫ್ಸಿ ನೀಡಿದ ಗುರುತು ಮತ್ತು ಕೀಲಿಪದಗಳನ್ನು ಉಪಯೋಗಿಸಿಕೊಂಡು ದತ್ತಾಂಶವನ್ನು ಎಲ್ಲರಿಗೂ ಅನ್ವಯವಾಗುವ ಜಾಲತಾಣಕ್ಕೆ ರವಾನಿಸಿದ ಮೇಲೆ, ಎಫ್ಸಿ, ಸ್ವೀಕೃತಿಯ ಒಂದು ಮುದ್ರಿತ ಪ್ರತಿಯನ್ನು ತೆಗೆದುಕೊಂಡು ಸಹಿಹಾಕಿ ತೆರಿಗೆದಾರನ ವೈಯುಕ್ತಿಕ ದಾಖಲೆಗಾಗಿ ಅವನಿಗೆ ನೀಡಲಾಗುತ್ತದೆ. ಎಫ್ಸಿ ರುಜುಹಾಕುವುದಕ್ಕೆ ಅಧಿಕಾರ ಹೊಂದಿರುವ ವ್ಯಕ್ತಿ ಸಹಿ ಹಾಕಿಕೊಟ್ಟಿರುವ ಸಂಕ್ಷಿಪ್ತ ಹಾಳೆಯನ್ನು ಸ್ಕ್ಯಾನ್‌ ಮಾಡಿ ಜಾಲಕ್ಕೆ ರವಾನಿಸಬೇಕು.

ಪ್ರಶ್ನೆ 38: ಜಿಎಸ್ಟಿ ನೋಂದಣಿಯಲ್ಲಿ ಡಿಜಿಟಲ್ ಸಹಿಗೆ ಯಾವುದಾದರೂ ಸೌಕರ್ಯವಿದೆಯೇ?

ಉತ್ತರ: ತೆರಿಗೆದಾರರು ಸಲ್ಲಿಸಿದ ಅರ್ಜಿಗಳನ್ನು ಸಿಂಧುವಾದ ಡಿಜಿಟಲ್ ಸಹಿಯನ್ನು ಉಪಯೋಗಿಸಿಕೊಂಡು ಸಹಿ ಮಾಡಿ ಸಲ್ಲಿಸುವುದಕ್ಕೆ ಆಯ್ಕೆಯಿದೆ (ಅರ್ಜಿದಾರ ಡಿಜಿಟಲ್ ಸಹಿಯನ್ನು ಇನ್ನು ಯಾವುದೇ ಪ್ರಚಲಿತ ಕಾನೂನಿನ ಅಡಿಯಲ್ಲಿ ಪಡೆದುಕೊಳ್ಳಬೇಕಾದಲ್ಲಿ, ಆಗ ಅವನು ತನ್ನ ಈ ಡಿಜಿಟಲ್‌ ಸಹಿಯನ್ನು ಉಪಯೋಗಿಸಿಕೊಂಡು ನೋಂದಣಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ). ಯಾರಲ್ಲಿ ಡಿಜಿಟಲ್‌ ಸಹಿ ಇಲ್ಲವೋ, ಜಿಎಸ್ಟಿ ನಿಯಮದಡಿಯಲ್ಲಿ ನೋಂದಣಿಗೆ ಬದಲಿ ಸೌಕರ್ಯವನ್ನು ಕಲ್ಪಿಸಲಾಗುತ್ತದೆ.

ಪ್ರಶ್ನೆ 39: ಆನ್ ಲೈನ್ ಅರ್ಜಿಯ ಮೇಲೆ ನಿರ್ಧಾರ ತೆಗೆದುಕೊಳ್ಳುವುದಕ್ಕಿರುವ ಸಮಯದ ಮಿತಿ ಏನು?

ಉತ್ತರ:ಸಲ್ಲಿಸಿರುವ ಮಾಹಿತಿ ಮತ್ತು ಜಾಲಕ್ಕೆ ವರ್ಗಾಯಿಸಿದ ದಾಖಲೆಗಳು ಸರಿಯಾಗಿದೆ ಎಂದು ಕಂಡುಬಂದಲ್ಲಿ, ರಾಜ್ಯ ಮತ್ತು ಕೇಂದ್ರದ ಅಧಿಕಾರಿಗಳು ಅರ್ಜಿಯನ್ನು ಅನುಮೋದಿಸಿ, ಅನುಮೋದನೆಯನ್ನು ಎಲ್ಲರಿಗೂ ಅನ್ವಯವಾಗುವ ಜಾಲತಾಣಕ್ಕೆ ಕಾರ್ಯನಡೆಯುವ ಮೂರುದಿನಗಳೊಳಗೆ ತಿಳಿಸಬೇಕು. ನಂತರ ಈ ಜಾಲತಾಣ ಯಾಂತ್ರಿಕವಾಗಿ ನೋಂದಣಿ ಪ್ರಮಾಣ ಪತ್ರವನ್ನು ಸಿದ್ಧಪಡಿಸುತ್ತದೆ. ಕಾರ್ಯ ನಡೆಯುವ ಮೂರು ದಿನಗಳೊಳಗಾಗಿ, ಅರ್ಜಿದಾರನಿಗೆ ಎರಡೂ ಅಧಿಕಾರಿಗಳು ಯಾವುದೇ ನ್ಯೂನತೆ ತಿಳಿಸದೇ ಇದ್ದಲ್ಲಿ, ನೋಂದಣಿಯನ್ನು ಕೊಡಲಾಗಿದೆ ಎಂದು ಪರಿಗಣಿಸಲಾಗುತ್ತದೆ (ಒಉಐನ ಭಾಗ 9 (9)) ಮತ್ತು ಜಾಲತಾಣ ಯಾಂತ್ರಿಕವಾಗಿ ನೋಂದಣಿ ಪ್ರಮಾಣ ಪತ್ರವನ್ನು ಸಿದ್ಧಪಡಿಸುತ್ತದೆ.

ಪ್ರಶ್ನೆ 40: ಆನ್‌ಲೈನ್‌ ಅರ್ಜಿಯ ಬಗ್ಗೆ ಯಾವುದಾದರೂ ಅಕ್ಷೇಪಣೆ ಎತ್ತಿದಲ್ಲಿ ಅರ್ಜಿದಾರನಿಗೆ ಉತ್ತರಿಸಲು ಇರುವ ಸಮಯಾವಾಕಾಶವೇನು?

ಉತ್ತರ:ಅರ್ಜಿಯ ಪರಿಶೀಲನೆಯ ಸಮಯದಲ್ಲಿ, ಯಾರಾದರೂ ಒಬ್ಬ ತೆರಿಗೆಯ ಅಧಿಕಾರಿ ಯಾವುದಾದರೂ ಅಕ್ಷೇಪಣೆ ಎತ್ತಿದಲ್ಲಿ ಅಥವಾ ಯಾವುದಾದರೂ ದೋಷವನ್ನು ಕಂಡುಹಿಡಿದಲ್ಲಿ, ಮೂರು ಸಾಮಾನ್ಯ ಕೆಲಸ ಮಾಡುವ ದಿನಗಳೊಳಗೆ ಅರ್ಜಿದಾರನಿಗೆ ಮತ್ತು ಇನ್ನೊಂದು ಅಧಿಕಾರಿಗೆ ಅದನ್ನು ಎಲ್ಲರಿಗೂ ಅನ್ವಯವಾಗುವ ಜಿಎಸ್ಟಿ ಜಾಲತಾಣದ ಮೂಲಕ ತಿಳಿಸಬೇಕು. ಸಂಬಂಧ ಪಟ್ಟ ತೆರಿಗೆಯ ಅಧಿಕಾರಿ ವಿಧಿಸಿರುವ ಸಮಯದೊಳಗಾಗಿ ಅರ್ಜಿದಾರ ಆ ಆಕ್ಷೇಪಣೆಗೆ ಉತ್ತರಿಸಬೇಕು/ತಪ್ಪನ್ನು ಸರಿಪಡಿಸಬೇಕು (ಸಾಮಾನ್ಯವಾಗಿ ಈ ಸಮಯ ಏಳು ದಿನಗಳಾಗಿರುತ್ತದೆ). ಹೆಚ್ಚುವರಿ ದಾಖಲೆ ಅಥವಾ ಸ್ಪಷ್ಟೀಕರಣ ಲಭಿಸಿದ ಮೇಲೆ, ಸಂಬಂಧಪಟ್ಟ ತೆರಿಗೆಯ ಅಧಿಕಾರಿ ಮುಂದಿನ ಏಳು ದಿನಗಳೊಳಗಾಗಿ ಉತ್ತರಿಸಬೇಕು.

ಪ್ರಶ್ನೆ 41: ನೋಂದಣಿಯ ನಿರಾಕರಣೆಯ ಪ್ರಕ್ರಿಯೆ ಏನು?

ಉತ್ತರ: ನೋಂದಣಿಯನ್ನು ನಿರಾಕರಿಸಿದಲ್ಲಿ, ಒಂದು ತಿಳಿಸುವ ಲಿಖಿತ ನಿರ್ದೇಶನದ ಮೂಲಕ ಅರ್ಜಿದಾರನಿಗೆ ಕಾರಣಗಳನ್ನು ತಿಳಿಸಲಾಗುತ್ತದೆ. ಅರ್ಜಿದಾರ ಅಧಿಕಾರಿಯ ನಿರ್ಣಯದ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೆ ಹಕ್ಕು ಪಡೆದಿರುತ್ತಾನೆ. MGL ಭಾಗ 19 ಉಪ-ಭಾಗ (10) ರ ಅನ್ವಯ, ಒಬ್ಬ ಅಧಿಕಾರಿ ಏನಾದರೂ ನೋಂದಣಿ ಅರ್ಜಿಯನ್ನು ನಿರಾಕರಿಸಿದ್ದಲ್ಲಿ (ಅಂದರೆ ಸಿಜಿಎಸ್ಟಿ ಕಾಯ್ದೆ/ಎಸ್‌ಜಿಎಸ್‌ಟಿ ಕಾಯ್ದೆಯಡಿಯಲ್ಲಿ), ಇನ್ನೊಬ್ಬ ತೆರಿಗಾ ಅಧಿಕಾರಿಕೂಡು ಅದನ್ನು ನಿರಾಕರಿಸಿ ಸದ್ದಾನೆ ಎಂದು ಪರಿಗಣಿಸಲಾಗುತ್ತದೆ (ಅಂದರೆ ಸಿಜಿಎಸ್ಟಿ ಕಾಯ್ದೆ/ ಎಸ್‌ಜಿಎಸ್‌ಟಿ ಕಾಯ್ದೆಯಡಿಯಲ್ಲಿ).

ಪ್ರಶ್ನೆ 42: ಅರ್ಜಿಯನ್ನು ವಿಲೇವಾರಿ ಮಾಡಿರುವ ಬಗ್ಗೆ ಯಾವುದಾದರೂ ಸಂದೇಶವಿರುತ್ತದೆಯೇ?

ಉತ್ತರ: ಎಲ್ಲರಿಗೂ ಅನ್ವಯಿಸುವ ಜಿಎಸ್ಟಿ ಜಾಲತಾಣದ ಮೂಲಕ ಮಿಂಚಂಚೆಯ (e-mail) ಮೂಲಕ ಅಥವಾ ಸಂಕ್ಷಿಪ್ತ ಸಂದೇಶ ವ್ಯವಸ್ಥೆಯ (SMS) ಮೂಲಕ ಅರ್ಜಿದಾರನಿಗೆ ನೋಂದಣಿ ಕೊಟ್ಟಿರುವ ಅಥವಾ ನಿರಾಕರಣೆಯ ವಿಷಯನ್ನು ತಿಳಿಸಲಾಗುತ್ತದೆ. ಈ ಹಂತದಲ್ಲಿ ಅರ್ಜಿದಾರನಿಗೆ ಆಡಳಿತ ವ್ಯಾಪ್ತಿಯ ವಿವರಗಳನ್ನು ತಿಳಿಸಲಾಗುತ್ತದೆ.

ಪ್ರಶ್ನೆ 43: ಜಿಎಸ್ಟಿ ಎನ್ ಜಾಲತಾಣದಿಂದ ನೋಂದಣಿ ಪ್ರಮಾಣ ಪತ್ರವನ್ನು ನಕಲಿಳಿಸಬಹುದೇ?

ಉತ್ತರ: ನೋಂದಣಿಯನ್ನು ಕೊಟ್ಟಿದ್ದಲ್ಲಿ, ಎಲ್ಲರಿಗೂಅನ್ವಯಿಸುವ ಜಿಎಸ್ಟಿ ಜಾಲತಾಣದಿಂದ ನೋಂದಣಿ ಪ್ರಮಾಣ ಪತ್ರವನ್ನು ನಕಲಿಳಿಸಬಹುದು.

 

*****

ಪೂರೈಕೆಯ ಅರ್ಥ ಮತ್ತು ವ್ಯಾಪ್ತಿ

 

4. ಪೂರೈಕೆಯ ಅರ್ಥ ಮತ್ತು ವ್ಯಾಪ್ತಿ

ಪ್ರಶ್ನೆ 1: ಜಿಎಸ್ಟಿ ಅಡಿಯಲ್ಲಿ ತೆರಿಗೆಯ ಸಂಭವನೀಯತೆ/ಸಂದರ್ಭ ಯಾವಾಗ?

ಉತ್ತರ: ಜಿಎಸ್ಟಿ ಅಡಿಯಲ್ಲಿ ತೆರಿಗೆಯ ಸಂಭವನೀಯತೆ/ಸಂದರ್ಭ ಪೂರೈಕೆಯ ಕ್ರಮದಲ್ಲಿ ಅಥವಾ ವಹಿವಾಟನ್ನು ಮುಂದವರಿಸುವುದಕ್ಕೆ ಹಣಕ್ಕಾಗಿ ಮಾಡಲಾದ ವಸ್ತುಗಳ ಮತ್ತು/ಸೇವೆಗಳ ಪೂರೈಕೆ. ಪ್ರಸ್ತುತ ಪರೋಕ್ಷ ತೆರಿಗೆ ಪಾವತಿಯ ಕಾಯ್ದೆಯಡಿಯಲ್ಲಿ ಬರುವ ತೆರಿಗೆಯ ಸಂಧರ್ಭಗಳಾದ ಉತ್ಪಾದನೆ, ಮಾರಾಟ, ಅಥವಾ ಸೇವಾ ಪೂರೈಕೆಗಳು ‘ಪೂರೈಕೆ’ ಎಂದು ಕರೆಯಲಾಗುವ ತೆರಿಗೆಯ ಸಂದರ್ಭದಲ್ಲಿ ಅಂತರ್ಗತವಾಗಿವೆ (ವಿಲೀನವಾಗಿವೆ).

ಪ್ರಶ್ನೆ 2: ‘ಪೂರೈಕೆ’ ಪದದ ಅರ್ಥವೇನು?

ಉತ್ತರ:’ಪೂರೈಕೆ’ ಪದದ ಅರ್ಥ ಬಹಳ ವ್ಯಾಪಕವಾಗಿದೆ ಮತ್ತು ಎಲ್ಲಾ ರೀತಿಯ ವಸ್ತುಗಳು ಮತ್ತು/ಆತವಾ ಸೇವಾ ಪೂರೈಕೆಯಂತಹ ಮಾರಾಟ, ವರ್ಗಾವಣೆ, ವಿನಿಮಯ-ಮಾರಾಟ, ಕೊಟ್ಟುತೆಗೆದುಕೊಳ್ಳುವುದು, ಪರವಾನೆ, ಬಾಡಿಗೆ, ಗುತ್ತಿಗೆ ಅಥವಾ ಫೈಸಲಾತಿಗಳನ್ನು ಪೂರೈಕೆಯ ಕ್ರಮದಲ್ಲಿ ಅಥವಾ ವಹಿವಾಟಿನ ಮುಂದುವರಿಕೆಗೆ ಒಬ್ಬ ವ್ಯಕ್ತಿ ಒಂದು ಮೊತ್ತಕ್ಕಾಗಿ ಮಾಡುವುದನ್ನು ಅಥವಾ ಸಮ್ಮತಿಸುವುದನ್ನು ಒಳಗೊಂಡಿದೆ. ಇದರಲ್ಲಿ ಸೇವೆಯ ಭಾವಾರ್ಥ ಕೂಡ ಸೇರಿದೆ. ಮಾದರಿ ಜಿಎಸ್ಟಿ ಕಾಯಿದೆ ಹಣಕ್ಕಾಗಿ ಮಾಡದ ಕೆಲವು ವಹಿವಾಟುಗಳನ್ನು ಕೂಡ ಪೂರೈಕೆಯ ವ್ಯಾಪ್ತಿಯಲ್ಲಿ ಸೇರಿಸಲು ನಿದರ್ಶಿಸುತ್ತದೆ.

ಪ್ರಶ್ನೆ 3: ತೆರಿಗೆ ಪಾವತಿಸಬೇಕಾದ ಪೂರೈಕೆ ಯಾವುದು?

ಉತ್ತರ:’ತೆರಿಗೆ ಪಾವತಿಸಬೇಕಾದ ಪೂರೈಕೆ’ ಎಂದರೆ ಜಿಎಸ್ಟಿ ಕಾಯ್ದೆಯಡಿಯಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸಲಾಗುವ ವಸ್ತುಗಳ ಪೂರೈಕೆ ಮತ್ತು/ಅಥವಾ ಸೇವಾ ಸೌಲಭ್ಯಗಳ ಪೂರೈಕೆ.

ಪ್ರಶ್ನೆ 4 : MGL ಅಡಿಯಲ್ಲಿ ಬರುವ ಪೂರೈಕೆಯ ಕಡ್ಡಾಯ ಅಂಶಗಳು ಯಾವುವು?

ಉತ್ತರ: ‘ಪೂರೈಕೆ’ಯನ್ನು ಸಂಯೋಜಿಸಲು ಈ ಕೆಳಗಿನ ಅಂಶಗಳನ್ನು ಪಾಲಿಸಬೇಕಾಗುತ್ತದೆ:

 1. ವಸ್ತುಗಳು ಮತ್ತು/ಅಥವಾ ಸೇವೆಗಳ ಪೂರೈಕೆ;
 2. ಒಂದು ಮೊತ್ತಕ್ಕಾಗಿ ಪೂರೈಕೆ;
 3. ಪೂರೈಕೆಯನ್ನು ಪೂರೈಕೆಯಕ್ರಮದಲ್ಲಿ ಅಥವಾ ವಹಿವಾಟನ್ನು ಮುಂದುವರಿಸುವುದಕ್ಕಾಗಿ ಮಾಡುವುದು;
 4. ಪೂರೈಕೆಯನ್ನು ತೆರಿಗೆಯನ್ನು ಪಾವತಿಸಬೇಕಾದ ಪ್ರದೇಶದಲ್ಲಿ ಮಾಡಿರುವುದು;
 5. ಪೂರೈಕೆತೆರಿಗೆ ಪಾವತಿಸಬೇಕಾದ ಪೂರೈಕೆ;
 6. ಪೂರೈಕೆಯನ್ನು ತೆರಿಗೆದಾರ ಮಾಡಿರುವುದು.

ಪ್ರಶ್ನೆ 5 : ಜಿಎಸ್ಟಿಯಡಿಯಲ್ಲಿ ಮೇಲೆ ತಿಳಿಸಿದ ಒಂದು ಅಥವಾ ಹಲವು ಅಂಶಗಳನ್ನು ಪಾಲಿಸದೇ ಇದ್ದಾಗ್ಯೂ ಅದನ್ನು ಪೂರೈಕೆ ಎಂದು ಪರಿಗಣಿಸಲಾಗುತ್ತದೆಯೇ?

ಉತ್ತರ:ಹೌದು. ಕೆಲವು ಸಂಧರ್ಭಗಳಲ್ಲಿ ಅಂದರೆ ಯಾವುದೇ ಮೌಲ್ಯವನ್ನು ಆಶಿಸದೇ ಸೇವಾ ಸೌಲಭ್ಯವನ್ನು ಒದಗಿಸುವುದು (ಭಾಗ3 (1)(b) )ಅಥವಾ ಸರಬರಾಜುಗಳನ್ನು ಮಾಡಿದಾಗ, MGL ಅನುಬಂಧ-Iರ ಅಡಿಯಲ್ಲಿ ಉಲ್ಲೇಖಿಸಿದ ಹಾಗೆ, ಮೇಲೆ ಪ್ರಶ್ನೆ 4 ರಲ್ಲಿ ಹೆಸರಿಸಿದ ಒಂದು ಅಥವಾ ಹಲವು ಅನುಬಂಧಗಳನ್ನು ಪಾಲಿಸದೇ ಇದ್ದಾಗ್ಯೂ, ಜಿಎಸ್ಟಿ ಕಾಯ್ದೆಯಡಿಯಲ್ಲಿ ಅದನ್ನು ಪೂರೈಕೆ ಎಂದು ಪರಿಗಣಿಸಲಾಗುತ್ತದೆ.

ಪ್ರಶ್ನೆ 6: ಭಾಗ 3ರಲ್ಲಿ ಸರಕುಗಳ ಆಮದು ಇಲ್ಲದಿರುವುದು ಎದ್ದು ಕಾಣುತ್ತಿದೆ; ಏಕೆ?

ಉತ್ತರ: ಸರಕುಗಳ ಆಮದನ್ನು ಸೀಮಾ ಸುಂಕ(ಆಯಾತ-ನಿರ್ಯಾತ)ಕಾಯ್ದೆ,1962ರಅಡಿಯಲ್ಲಿ ಪ್ರತ್ಯೇಕವಾಗಿ ನಿರ್ವಹಿಸಲಾಗಿದೆ. ಅದರಲ್ಲಿ ಮೂಲ ಸೀಮಾಸುಂಕದ ಜೊತೆಗೆ ಐಜಿಎಸ್ಟಿಯನ್ನು ಹೆಚ್ಚುವರಿ ಸುಂಕವನ್ನಾಗಿ ವಿಧಿಸಲಾಗುತ್ತದೆ.

ಪ್ರಶ್ನೆ 7: ಸ್ವಯಂ-ಪೂರೈಕೆಯ ಮೇಲೆ ಜಿಎಸ್ಟಿಯಡಿಯಲ್ಲಿ ತೆರಿಗೆಯನ್ನು ಧಿಸಲಾಗುತ್ತದೆಯೇ?

ಉತ್ತರ: ಅನುಬಂಧ 1(5)ರ ಪ್ರಕಾರ ತೆರಿಗೆದಾರ ಪ್ರತಿ ರಾಜ್ಯಕ್ಕೆ ಸಂಬಂಧಿಸಿದಂತೆ ನೊಂದಾಯಿಸಿಕೊಳ್ಳಬೇಕಾಗಿರುವುದರಿಂದ, ಅಂತರರಾಜ್ಯ ಸ್ವಯಂ-ಪೂರೈಕೆಯ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಅಂತಹ ವಹಿವಾಟುಗಳನ್ನು ಯಾವುದೇ ಹಣವನ್ನು ಪಡೆಯದೇ ಇದ್ದರೂ ತೆರಿಗೆ ಪಾವತಿಸಬೇಕೆಂದು ಹೇಳಲಾಗಿದೆ. ಆದರೂ, ರಾಜ್ಯದ ಒಳಗೆ ನಡೆಯುವ ಸ್ವಯಂ-ಪೂರೈಕೆಗೆ ತೆರಿಗೆ ವಿಧಿಸಲಾಗುವುದಿಲ್ಲ.

ಪ್ರಶ್ನೆ 8: ಒಂದು ವಹಿವಾಟಿನಲ್ಲಿ ಹಕ್ಕಿನ ವರ್ಗಾವಣೆ ಮತ್ತು/ಅಥವಾ ಸ್ವಾಮ್ಯದ ವರ್ಗಾವಣೆ ಸರಕಿನ ಪೂರೈಕೆಯೆಂದು ಪರಿಗಣಿಸಲು ಆವಶ್ಯಕವೇ?

ಉತ್ತರ: ಒಂದು ವಹಿವಾಟನ್ನು ಸರಕಿನ ಪೂರೈಕೆಯೆಂದು ಪರಿಗಣಿಸಲು ಹಕ್ಕಿನ ವರ್ಗಾವಣೆ ಮತ್ತು ಸ್ವಾಮ್ಯ ಎರಡನ್ನೂ ವರ್ಗಾಯಿಸಬೇಕು. ಒಂದು ವೇಳೆ ಹಕ್ಕನ್ನು ವರ್ಗಾಯಿಸದೇ ಇದ್ದಲ್ಲಿ, ಆ ವಹಿವಾಟನ್ನು ಅನುಬಂಧ II(1) ಅನ್ವಯ ಸೇವಾ ಪೂರೈಕೆ ಎಂದು ಪರಿಗಣಿಸಲಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ, ಅಂದರೆ ಒಪ್ಪಿಗೆಯಾದ ನಂತರದ ಮಾರಾಟದ ಪರಿಗಣನೆ ಅಥವಾ ಕಂತು ಮಾರಾಟಗಳ ವಿಷಯಗಳಂತಹುವುಗಳಲ್ಲಿ ಸ್ವಾಮ್ಯವನ್ನು ಒಡನೆ ವರ್ಗಾಯಿಸಬಹುದು ಮತ್ತು ಹಕ್ಕನ್ನು ಮುಂದಿನ ದಿನಗಳಲ್ಲಿ ವರ್ಗಾಯಿಸಬಹುದು.ಆತರಹದವಹಿವಾಟುಗಳನ್ನೂ ವಸ್ತುಗಳ ಪೂರೈಕೆ ಎಂದು ಪರಿಗಣಿಸಲಾಗುತ್ತದೆ.

ಪ್ರಶ್ನೆ 9 : “ಪೂರೈಕೆಯ ಕ್ರಮದಲ್ಲಿ ಅಥವಾ ವಹಿವಾಟನ್ನು ಮುಂದವರಿಸುವುದಕ್ಕಾಗಿ ಮಾಡಿದ ಪೂರೈಕೆ” ಎಂದರೆ ನೀವು ಏನು ಅರ್ಥೈಸುತ್ತೀರಿ?

ಉತ್ತರ: MGLಅಡಿಯಲ್ಲಿ ಒಂದು ಚಟುವಟಿಕೆ ಪೂರೈಕೆಯ ಕ್ರಮದಲ್ಲಿ ಅಥವಾ ವಹಿವಾಟನ್ನು ಮುಂದವರಿಸುವುದಕ್ಕೆ ಎನ್ನುವುದಕ್ಕೆ ಯಾವುದೇ ನಿರ್ದಿಷ್ಟವಾದ ಅರ್ಥ ಅಥವಾ ಪ್ರಯೋಗ ಮಾಡಲಾಗಿಲ್ಲ. ಆದರೂ, ಈ ಕೆಳಗಿನವಹಿವಾಟಿನ ಪ್ರಯೋಗವನ್ನು ಒಂದು ಪೂರೈಕೆ ಪೂರೈಕೆಯ ಕ್ರಮದಲ್ಲಿ ಅಥವಾ ವಹಿವಾಟನ್ನು ಮುಂದವರಿಸುವುದಕ್ಕಾಗಿ ಮಾಡಲಾಗಿದೆಯೇ ಎಂದು ನಿರ್ಣಯಿಸುವುದಕ್ಕೆ ಸಾಮಾನ್ಯವಾಗಿ ಪ್ರಯೋಗಿಸಲಾಗುತ್ತದೆ:

 1. ಈ ವಹಿವಾಟು ತೀವ್ರಾಸಕ್ತಿಯಿಂದ ಅನುಸರಿಸಿದ ಒಂದು ಗಂಭೀರ ವ್ಯವಹಾರವೇ?
 2. ಈ ವಹಿವಾಟನ್ನು ಸಕಾರಣವಾಗಿ ಅಥವಾ ಅಂಗೀಕೃತ ಕ್ರಮಬದ್ಧತೆಯಿಂದ ಅನುಸರಿಸಲಾಗಿದೆಯೇ?
 3. ಈ ವಹಿವಾಟನ್ನು ಸರಿಯಾದ ಮತ್ತು ಅಂಗೀಕರಿಸಲ್ಪಟ್ಟ ವಹಿವಾಟಿನ ನಿಯಮಗಳಿಂದ ಕೂಡಿದ ಒಂದು ನಿಗದಿತ ಮಾರ್ಗದಲ್ಲಿ ನಡೆಸಲಾಗಿದೆಯೇ?
 4. ಈ ವಹಿವಾಟು ಹಣಕ್ಕಾಗಿ/ಲಾಭದ ಉದ್ದೇಶದಿಂದ ಒಂದು ತೆರಿಗೆ ಪಾವತಿಸಬೇಕಾದ ಪೂರೈಕೆಯೆಂದು ಪ್ರಬಲವಾಗಿ ಉದ್ದೇಶಿಸಿದವಹಿವಾಟೇ?

ಈ ಪ್ರಯೋಗಗಳು, ಕೆಲವು ಪೂರೈಕೆಗಳು, ಹಣ ಪಡೆಯುವುದಕ್ಕಾಗಿ ಮಾಡಿದವೇ ಆದರೂ, ಜಿಎಸ್ಟಿಗೆ ಒಳಪಡದಂತೆ ನೋಡಿಕೊಳ್ಳುತ್ತವೆ.

ಪ್ರಶ್ನೆ 10 : ಒಬ್ಬ ವ್ಯಕ್ತಿ ತನ್ನ ಸ್ವಂತ ಉಪಯೋಗಕ್ಕಾಗಿ ಒಂದು ಕಾರನ್ನು ಕೊಳ್ಳುತ್ತಾನೆ ಮತ್ತು ಒಂದು ವರ್ಷ ಕಳಿದ ಬಳಿಕ ಒಬ್ಬ ಕಾರು ವಹಿವಾಟು ನಡೆಸುವವನಿಗೆ ಮಾರುತ್ತಾನೆ. ಈ ವಹಿವಾಟು ಜಿಎಸ್ಟಿ ಅಡಿಯಲ್ಲಿ ಪೂರೈಕೆ ಎಂದು ಕರೆಯಲ್ಪಡುತ್ತದೆಯೇ? ನಿಮ್ಮ ಉತ್ತರಕ್ಕೆ ಕಾರಣಗಳನ್ನು ನೀಡಿ:

ಉತ್ತರ: ಇಲ್ಲ, ಆವ್ಯಕ್ತಿ ಪೂರೈಕೆಯ ಕ್ರಮದಲ್ಲಿ ಅಥವಾ ವಹಿವಾಟನ್ನು ಮುಂದುವರಿಸುವುದಕ್ಕಾಗಿ ಈ ಪೂರೈಕೆ ಮಾಡಿಲ್ಲ. ಅಲ್ಲದೇ, ಆ ಕಾರು ವ್ಯಾಪಾರಕ್ಕೆ ಸಂಬಂಧಪಡೆದ ಉಪಯೋಗಕ್ಕಾಗಿ ತೆಗೆದುಕೊಂಡಿದ್ದರಿಂದ ಅದನ್ನು ತೆಗೆದುಕೊಳ್ಳುವಾಗ ಯಾವುದೇ ಪ್ರವೇಶ ತೆರಿಗೆಯ ಜಮೆಗೆ ಅರ್ಹವಾಗಿರಲಿಲ್ಲ.

ಪ್ರಶ್ನೆ 11: ಹವಾ ನಿಯಂತ್ರಕ (air-condi oner) ಗಳ ಒಬ್ಬ ವ್ಯಾಪಾರಿ ತನ್ನ ವಹಿವಾಟಿನ ದಾಸ್ತಾನಿನಿಂದ ಒಂದು ಹವಾ ನಿಯಂತ್ರಕವನ್ನು ತನ್ನ ಸ್ವಂತ ಉಪಯೋಗಕ್ಕಾಗಿ ತನ್ನ ಮನೆಗೆ ವರ್ಗಾಯಿಸುತ್ತಾನೆ. ಈ ವಹಿವಾಟು ಪೂರೈಕೆ ಎಂದು ಪರಿಗಣಿಸಲ್ಪಡುತ್ತದೆಯೇ?

ಉತ್ತರ: ಹೌದು. ಅನುಬಂಧ-ಈ (1)ರಅನ್ವಯ ವಹಿವಾಟಿನ ಸೊತ್ತುಗಳನ್ನು ಯಾವುದೇ ಹಣಪಡೆಯದೇ ಒಂದು ಖಾಸಗಿ ಅಥವಾ ವ್ಯಾಪಾರಕ್ಕೆ ಸಂಬಂಧಪಡೆದ ಉಪಯೋಗಕ್ಕೆ ಹಾಕಿದಲ್ಲಿ ಅದನ್ನು ಪೂರೈಕೆ ಎಂದು ಪರಿಗಣಿಸಲಾಗುತ್ತದೆ.

ಪ್ರಶ್ನೆ 12 : ಒಂದು ಕ್ಲಬ್ ಅಥವಾ ಸಂಘ ಅಥವಾ ಸಂಸ್ಥೆ ಅಥವಾ ಅಂತಹ ಯಾವುದಾದರೂ ಸಂಸ್ಥೆ ತನ್ನ ಸದಸ್ಯರಿಗಾಗಿ ನೀಡುವ ಸೇವೆ ಅಥವಾ ವಸ್ತುಗಳುನ್ನು ಪೂರೈಕೆ ಎಂದು ಪರಿಗಣಿಸಲಾಗುತ್ತದೆಯೇ ಅಥವಾ ಇಲ್ಲವೇ?

ಉತ್ತರ: ಹೌದು. ಒಂದು ಕ್ಲಬ್ ಅಥವಾ ಸಂಘ ಅಥವಾ ಸಂಸ್ಥೆ ಅಥವಾ ಅಂತಹ ಯಾವುದಾದರೂ ಸಂಸ್ಥೆ ತನ್ನ ಸದಸ್ಯರಿಗಾಗಿ ಕೊಡುವ ಸೌಲಭ್ಯಗಳನ್ನು ಪೂರೈಕೆ ಎಂದು ಪರಿಗಣಿಸಲಾಗುತ್ತದೆ. ಇದನ್ನು MGL ನ ಭಾಗ 2(17)ರಲ್ಲಿ ‘ವಹಿವಾಟಿ’ನ ಅರ್ಥದಲ್ಲಿ ಸೇರಿಸಲಾಗಿದೆ.

ಪ್ರಶ್ನೆ 13: ಅಂತರ-ರಾಜ್ಯ ಪೂರೈಕೆಗಳು ಮತ್ತು ರಾಜ್ಯದ ಒಳಗಡೆಯ ಪೂರೈಕೆಗಳು ಯಾವುವು?

ಉತ್ತರ: ಐಜಿಎಸ್ಟಿ ಕಾಯ್ದೆಯ ಭಾಗ 3 ಮತ್ತು 3Aಯಲ್ಲಿ ಅಂತರ-ರಾಜ್ಯ ಮತ್ತು ರಾಜ್ಯದ ಒಳಗಡೆಯ ಪೂರೈಕೆಗಳನ್ನು ನಿರ್ದಿಷ್ಟವಾಗಿ ಅನುಕ್ರಮವಾಗಿ ವಿವರಿಸಲಾಗಿದೆ. ಸ್ಥೂಲವಾಗಿ, ಪೂರೈಕೆದಾರನ ಪೂರೈಕಾ ಸ್ಥಳ ಮತ್ತು ಪೂರೈಕೆ ಮಾಡುವ ಸ್ಥಳ ಒಂದೇ ರಾಜ್ಯದಲ್ಲಿದ್ದರೆ ಅದನ್ನು ರಾಜ್ಯದ ಒಳಗಡೆ ಎಂದೂ ಮತ್ತು ಅದು ಬೇರೆಬೇರೆ ರಾಜ್ಯಗಳಲ್ಲಿದ್ದರೆ ಅದನ್ನು ಅಂತರರಾಜ್ಯ ಪೂರೈಕೆ ಎಂದೂ ಪರಿಗಣಿಸಲಾಗುತ್ತದೆ.

ಪ್ರಶ್ನೆ 14: ವಸ್ತುಗಳನ್ನು ಉಪಯೋಗಿಸುವುದಕ್ಕಾಗಿ ಮಾಡಿದ ಅಧಿಕಾರದ ವರ್ಗಾವಣೆಯನ್ನು ವಸ್ತುಗಳ ಪೂರೈಕೆ ಅಥವಾ ಸೇವಾ ಪೂರೈಕೆ ಎಂದು ಪರಿಗಣಿಸಲಾಗುತ್ತದೆಯೇ? ಏಕೆ?

ಉತ್ತರ:ವಸ್ತುಗಳನ್ನು ಉಪಯೋಗಿಸುವುದಕ್ಕಾಗಿ ಮಾಡಿದ ಅಧಿಕಾರದ ವರ್ಗಾವಣೆಯನ್ನು ಸೇವಾ ಪೂರೈಕೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅಂತಹ ಪೂರೈಕೆಗಳಲ್ಲಿ ಸ್ವಾಮ್ಯದ ಹಕ್ಕನ್ನು ವರ್ಗಾವಣೆ ಮಾಡಿರುವುದಿಲ್ಲ. ಅಂತಹ ವಹಿವಾಟುಗಳನ್ನು MGLನ ಅನುಬಂಧ-IIರಲ್ಲಿ ನಿರ್ದಿಷ್ಟವಾಗಿ ಸೇವಾ ಪೂರೈಕೆ ಎಂದು ಪರಿಗಣಿಸಲಾಗಿದೆ.

ಪ್ರಶ್ನೆ 15: ನಿರ್ದಿಷ್ಟಾವಧಿಯ ಕೆಲಸಗಳು ಮತ್ತು ಆಹಾರ ಪೂರೈಕೆಯ ಸೇವೆಗಳನ್ನು ವಸ್ತುಗಳ ಪೂರೈಕೆ ಅಥವಾ ಸೇವಾ ಪೂರೈಕೆಗಳೆಂದು ಪರಿಗಣಿಸಲಾಗುತ್ತದೆಯೇ? ಏಕೆ?

ಉತ್ತರ: MGL ಅನುಬಂಧ-IIರಲ್ಲಿ ನಿರ್ದಿಷ್ಟವಾಗಿ ತಿಳಿಸಿರುವ ಹಾಗೆ ನಿರ್ದಿಷ್ಟಾವಧಿಯ ಕೆಲಸಗಳು ಮತ್ತು ಆಹಾರ ಪೂರೈಕೆಯ ಸೇವೆಗಳನ್ನು ಸೇವಾ ಪೂರೈಕೆಗಳೆಂದು ಪರಿಗಣಿಸಲಾಗುತ್ತದೆ.

ಪ್ರಶ್ನೆ 16 : ಕಂತುಗಳಲ್ಲಿ ಪಾವತಿಸಬಹುದಾದ ವಹಿವಾಟಿನಲ್ಲಿ ಪೂರೈಕೆ ಮಾಡಿದ ವಸ್ತುಗಳ ಪೂರೈಕೆಯನ್ನು ವಸ್ತುಗಳ ಪೂರೈಕೆ ಅಥವಾ ಸೇವಾ ಪೂರೈಕೆಗಳೆಂದು ಪರಿಗಣಿಸಲಾಗುತ್ತದೆಯೇ? ಏಕೆ?

ಉತ್ತರ: ಕಂತುಗಳಲ್ಲಿ ಪಾವತಿಸಬಹುದಾದ ವಹಿವಾಟಿನಲ್ಲಿ ಮಾಡಿದ ಪೂರೈಕೆಗಳನ್ನು ವಸ್ತುಗಳ ಪೂರೈಕೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಸ್ವಾಮ್ಯದ ಹಕ್ಕಿನ ವರ್ಗಾವಣೆ ಇದರಲ್ಲಿ ಸೇರಿದೆ, ಅದು ಮುಂದಿನ ದಿನಗಳಲ್ಲಿ ಆದರೂ ಕೂಡ.

****

ಪೂರೈಕೆ ಸಮಯ

 

5.ಪೂರೈಕೆ ಸಮಯ

ಪ್ರಶ್ನೆ 1 : “ಪೂರೈಕೆಸಮಯ”ಎಂದರೆ ಏನು?

ಉತ್ತರ: ಜಿಎಸ್ಟಿ ಯನ್ನು ಯಾವಾಗ ಪಾವತಿಸಬೇಕು ಎಂಬ ಹೊಣೆಗಾರಿಕೆಯನ್ನು ಪೂರೈಕೆ ಸಮಯವು ನಿರ್ಧರಿಸುತ್ತದೆ. ಅದು ಯಾವುದಾದರೂ ಪೂರೈಕೆಯನ್ನು ಮಾಡಲಾಗಿದೆಯೇಎಂಬುದನ್ನೂಕೂಡಸೂಚಿಸುತ್ತದೆ.ಎಮ್ಜಿಎಲ್, ಸರಕು ಮತ್ತು ಸೇವೆಗಳ ಪೂರೈಕೆಗೆ ಪ್ರತ್ಯೇಕ ಪೂರೈಕೆ ಸಮಯವನ್ನು ಒದಗಿಸುತ್ತದೆ.

ಪ್ರಶ್ನೆ 2: ಸರಕು ಪೂರೈಕೆಗೆ ಸಂಬಂಧಿಸಿದಂತೆ ಜಿಎಸ್ಟಿಯನ್ನು ಯಾವಾಗೆ ಪಾವತಿಸಬೇಕಾಗುತ್ತದೆ?

ಉತ್ತರ: ಈಕೆಳಕಂಡವುಗಳಲ್ಲಿ ಅತಿ ಮುಂಚಿತವಾದವು”ಪೂರೈಕೆ ಸಮಯ”ವಾಗತಕ್ಕದ್ದು,

 1. ಸರಕುಗಳನ್ನು ಹೊರಗೆಸಾಗಿಸುವ ಅಗತ್ಯವಿದ್ದರೆ, ಹಾಗೆ ಸಾಗಿಸಿರುವಂತಹ ದಿನಾಂಕ; ಅಥವಾ
 2. ಸಾಗಿಸುವ ಅಗತ್ಯವಿಲ್ಲದಿದ್ದರೆ, ಸರಕುಗಳು ದೊರಕಿದ ದಿನಾಂಕ; ಅಥವಾ
 3. ಮೇಲಿನ ಎರಡೂ ಸಂದರ್ಭಗಳು ಅನ್ವಯವಾಗದಿದ್ದರೆ, ಸರಕುಗಳ ಸಂಬಂಧವಾಗಿ ಪೂರೈಕೆದಾರರು ಇನ್ವಾಯಿಸ್ ಜಾರಿ ಮಾಡುವ ದಿನಾಂಕ; ಅಥವಾ
 4. ಸರಕುಗಳನ್ನು ಪಡೆಯುವವರು ತಮ್ಮ ಲೆಕ್ಕ ಪೂಸ್ತಕಗಳಲ್ಲಿ ತೋರಿಸಿರುವ ದಿನಾಂಕ.

ಪ್ರಶ್ನೆ 3: ಸತತವಾಗಿ ಪೂರೈಕೆಯಾಗುವ ಸರಕುಗಳ ಸಂಬಂಧದಲ್ಲಿ “ಪೂರೈಕೆಸಮಯ”ಯಾವುದು?

ಉತ್ತರ: ಸತತವಾಗಿ ಪೂರೈಕೆಯಾಗುವ ಸರಕುಗಳ ಸಂಬಂಧದಲ್ಲಿ “ಪೂರೈಕೆಸಮಯ”ಎಂದರೆ

 1. ಅನುಕ್ರಮ ರೀತ್ಯಾ ಲೆಕ್ಕವಿವರಣೆಗಳನ್ನು ಅಥವಾ ಪಾವತಿಗಳನ್ನು ಒಳಗೊಂಡಿದ್ದರೆ ಅಂತಹ ಲೆಕ್ಕ ವಿವರಣೆಗಳಿಗೆ ಅಥವಾ ಪಾವತಿಗಳಿಗೆ ಸಂಬಂಧಿಸಿದಂತೆ ಸಮಯದ ಸಮಾಪ್ತಿ ದಿನಾಂಕ.
 2. ಅನುಕ್ರಮ ರೀತ್ಯಾ ಲೆಕ್ಕ ವಿವರಣೆಗಳನ್ನು ಅಥವಾ ಪಾವತಿಗಳನ್ನು ಒಳಗೊಂಡಿಲ್ಲದಿದ್ದರೆ, ಇನ್ವಾಯಿಸ್‌ ಜಾರಿಯಾದ ದಿನಾಂಕ ಅಥವಾ ಪಾವತಿಯನ್ನು ಪಡೆವ ದಿನಾಂಕ, ಯಾವುದು ಮುಂಚಿತವಾಗಿದೆಯೋ ಅದನ್ನು ಪರಿಗಣಿಸಲಾಗುವುದು.

ಪ್ರಶ್ನೆ 4: ಅನುಮೋದನೆಯ ಆಧಾರದ ಮೇಲೆ ಕಳುಹಿಸಿರುವ ಸರಕುಗಳಿಗೆ ಸಂಬಂಧಿಸಿದಂತೆ “ಪೂರೈಕೆಸಮಯ”ಯಾವುದು?

ಉತ್ತರ: ಅನುಮೋದನೆಯ ಆಧಾರದ ಮೇಲೆ ಕಳುಹಿಸಿರುವ ಸರಕುಗಳಿಗೆ ಸಂಬಂಧಿಸಿದಂತೆ ಸರಕುಗಳು ಪೂರೈಕೆಯಾಗ ಬಹುದೆಂದು ತಿಳಿದಿರುವ ಸಮಯ ಅಥವಾ ಪೂರೈಕೆ ದಿನಾಂಕದಿಂದ ಹಿಡಿದು ಆರು ತಿಂಗಳು ಯಾವುದು ಮುಂಚಿತವಾಗಿದೆಯೋ ಅದನ್ನು “ಪೂರೈಕೆ ಸಮಯ ” ಎಂದು ಪರಿಗಣಿಸಲಾಗುವುದು.

ಪ್ರಶ್ನೆ 5 : ಎಮ್‌ಜಿಎಲ್‌ ಭಾಗ12ರ ಉಪ-ಭಾಗ 2,3,5 ಅಥವಾ 6 ಅಥವಾ ಭಾಗ 13ರ ಅನ್ವಯ ”ಪೂರೈಕೆಸಮಯ” ವನ್ನು ನಿರ್ಧರಿಸಲಾಗದ ಸಂದರ್ಭದಲ್ಲಿ, “ಪೂರೈಕೆ ಸಮಯ” ವನ್ನು ಹೇಗೆ ನಿರ್ಧರಿಸಲಾಗುವುದು ?

ಉತ್ತರ: ಭಾಗ 12(7) ಹಾಗೂ 13(7)ರಲ್ಲಿರುವ ಅನ್ಯ ಉಲ್ಲೇಖಗಳಲ್ಲಿ ಹೇಳಿರುವಂತೆ, ಆವಧಿಕ ವಿವರಣೆಗಳನ್ನು ಸಲ್ಲಿಸಬೇಕಾದರೆ, ಅಂತಹ ಆವಧಿಕ ವಿವರಣೆಗಳನ್ನು ಸಲ್ಲಿಸಬೇಕಾದ ಕೊನೆಯ ದಿನಾಂಕವನ್ನು “ಪೂರೈಕೆ ಸಮಯ”ಎಂದು ಪರಿಗಣಿಸಲಾಗುವುದು. ಬೇರೆ ಪ್ರಕರಣಗಳಲ್ಲಿ, ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ, ಐಜಿಎಸ್ಟಿಯು ಪಾವತಿಯಾಗುವ ದಿನಾಂಕವನನ್ನು “ಪೂರೈಕೆ ಸಮಯ” ಎಂದು ಪರಿಗಣಿಸಲಾಗುವುದು.

ಪ್ರಶ್ನೆ 6: ಸೇವೆಗಳ ಪೂರೈಕೆಗೆ ಸಂಬಂಧಿಸಿದಂತೆ ಜಿಎಸ್ಟಿಯನ್ನು ಯಾವಾಗ ಪಾವತಿಸಬೇಕಾಗುತ್ತದೆ?

ಉತ್ತರ: ಸೇವೆಗಳಿಗೆ ಸಂಬಂಧಿಸಿದಂತೆ, ಸೇವೆಗಳನ್ನು ಪೂರೈಸಲು ನಿಗದಿತ ಅವಧಿಯೊಳಗೆ ಇನ್ವಾಯಿಸ್‌ ಜಾರಿಯಾಗಿದೆಯೇ ಅಥವಾ ನಂತರದಲ್ಲಿ ಜಾರಿಯಾಗಿದೆಯೇ ಎಂಬುದರ ಮೇಲೆ “ಪೂರೈಕೆ ಸಮಯವು” ನಿರ್ದಾರವಾಗುತ್ತದೆ.

ಪ್ರಶ್ನೆ 7: ನಿಗದಿತ ಅವಧಿಯೊಳಗೆ ಇನ್ವಾಯಿಸ್‌ ಜಾರಿಯಾಗದೆಯೇ ಇರುವ ಸಂದರ್ಭದಲ್ಲಿ “ಪೂರೈಕೆ ಸಮಯ”ವು ಯಾವುದು?

ಉತ್ತರ: ಅಂತಹ ಪ್ರಕರಣಗಳಲ್ಲಿ ಈ ಕೆಳಕಂಡವುಗಳಲ್ಲಿ ಮುಂಚಿತವಾದುದು “ಪೂರೈಕೆ ಸಮಯ”ವಾಗುವುದು.

ಎ) ಸೇವೆಗಳನ್ನು ಒದಗಿಸುವ ಕಾರ್ಯವು ಮುಗಿಯುವ ದಿನಾಂಕ; ಅಥವಾ

ಬಿ) ಪಾವತಿಯನ್ನು ಪಡೆಯುವ ದಿನಾಂಕ.

ಪ್ರಶ್ನೆ 8: ನಿಗದಿತಅವಧಿಯೊಳಗೆಇನ್ವಾಯಿಸ್ಜಾರಿಯಾಗಿದ್ದಸಂದರ್ಭದಲ್ಲಿ ಪೂರೈಕೆ ಸಮಯ”ವು ಯಾವುದು?

ಉತ್ತರ: ಅಂತಹಪ್ರಕರಣಗಳಲ್ಲಿಈಕೆಳಕಂಡವುಗಳಲ್ಲಿಮುಂಚಿತವಾದುದು “ಪೂರೈಕೆಸಮಯ”ವಾಗುವುದು.

(ಎ) ಇನ್ವಾಯಿಸ್ ಅನ್ನು ಜಾರಿಗೊಳಿಸುವ ದಿನಾಂಕ; ಅಥವಾ (ಬಿ) ಪಾವತಿಯನ್ನು ಪಡೆಯುವ ದಿನಾಂಕ.

ಪ್ರಶ್ನೆ 9 : “ಪಾವತಿಯನ್ನು ಪಡೆಯುವ ದಿನಾಂಕ” ಎಂದರೇನು?

ಉತ್ತರ: ಪೂರೈಕೆದಾರರ ಲೆಕ್ಕಪುಸ್ತಕದಲ್ಲಿ ಪಾವತಿಯನ್ನು ನಮೂದಿಸಿರುವ ಅತಿ ಮುಂಚಿನ ದಿನಾಂಕ ಅಥವಾ ಅವರ ಬ್ಯಾಂಕ್ ಖಾತೆಗೆ ಹಣಸಂದಾಯವಾದ ದಿನಾಂಕ,” ಪಾವತಿಯನ್ನು ಪಡೆಯುವ ದಿನಾಂಕ”.

ಪ್ರಶ್ನೆ 10 : ಇನ್ವಾಯಿಸ್ ಜಾರಿಯಾಗದಿದ್ದಲ್ಲಿ, ಪಾವತಿಸಿರುವ ದಿನಾಂಕ ಅಥವಾ ಸೇವೆಗಳನ್ನು ಪೂರೈಸಿರುವ ದಿನಾಂಕವೂ ಪತ್ತೆ ಮಾಡಲಾಗದಿದ್ದರೆ, “ಪೂರೈಕೆ ಸಮಯ”ವು ಯಾವುದು?

ಉತ್ತರ : ಸೇವೆಗಳನ್ನು ಪಡೆದಿರುವವರು ತಮ್ಮ ಲೆಕ್ಕ ಪುಸ್ತಕದಲ್ಲಿ ಸೇವಾ ಪಾವತಿಯನ್ನು ನಮೂದಿಸಿರುವ ದಿನಾಂಕವು “ಪೂರೈಕೆ ಸಮಯ”ವಾಗುತ್ತದೆ.

ಪ್ರಶ್ನೆ 11 : ಮೊದಲೇ ಅರೆ ಪಾವತಿಯನ್ನು ಮಾಡಿರುವ ಸಂದರ್ಭದಲ್ಲಿ ಅಥವಾ ಅಂತಹ ಅರೆ ಪಾವತಿಗೆ ಇನ್ವಾಯಿಸ್ ಜಾರಿಯಾಗಿರುವ ಸಂದರ್ಭದಲ್ಲಿ , “ಪೂರೈಕೆ ಸಮಯ”ವು ಇಡೀ ಪೂರೈಕೆಯನ್ನು ಒಳಗೊಂಡಿರುತ್ತದೆಯೇ ?

ಉತ್ತರ: ಇಲ್ಲ. ಇನ್ವಾಯಿಸ್‌ಗೆ ಅನುಗುಣವಾಗಿ ಅಥವಾ ಅರೆಪಾವತಿಗೆ ಅನುಗುಣವಾಗಿ, ಪೂರೈಕೆ ಮಾಡಲಾಗಿದೆ ಎಂದು ಭಾವಿಸಲಾಗುವುದು.

ಪ್ರಶ್ನೆ 12: ಶುಲ್ಕದ ವ್ಯತಿರಿಕ್ತ ಕ್ರಮದಡಿ (ಸೇವೆಯನ್ನು ಪಡೆಯುವವರು ತೆರಿಗೆಯನ್ನು ಪಾವತಿಸಬೇಕಾದ ಸಂದರ್ಭದಲ್ಲಿ) ಪಾವತಿಸಬೇಕಾದ ತೆರಿಗೆಯ ಸಂದರ್ಭದಲ್ಲಿ “ಪೂರೈಕೆ ಸಮಯ” ಯಾವುದು ?

ಉತ್ತರ: ಈ ಕೆಳಕಂಡವುಗಳಲ್ಲಿ ಅತಿಮುಂಚಿತವಾದುದು “ಪೂರೈಕೆಸಮಯ”ವಾಗುತ್ತದೆ.

ಎ) ಸೇವೆಗಳನ್ನು ಪಡೆದ ದಿನಾಂಕ

ಬಿ) ಪಾವತಿಯನ್ನು ಮಾಡಿರುವ ದಿನಾಂಕ

ಸಿ) ಇನ್ವಾಯಿಸ್ಅನ್ನು ಪಡೆದಿರುವ ದಿನಾಂಕ

ಡಿ) ಪೂರೈಕೆದಾರರ ಲೆಕ್ಕಪೂಸ್ತಕದಲ್ಲಿ ಖರ್ಚನ್ನು ನಮೂದಿಸಿರುವ ದಿನಾಂಕ.

ಪ್ರಶ್ನೆ 13: ಸೇವೆಗಳ ಸತತ ಪೂರೈಕೆಯ ಸಂದರ್ಭದಲ್ಲಿ “ಪೂರೈಕೆ ಸಮಯ”ವು ಯಾವುದು?

ಉತ್ತರ: ಒಪ್ಪಂದದಿಂದ ಪತ್ತೆ ಹಚ್ಚಬಹುದಾದರೆ, ಹಣವನ್ನು ಪಾವತಿಸಬೇಕಾದ ಕೊನೆಯ ದಿನಾಂಕ. ಪತ್ತೆ ಹಚ್ಚಲಾಗದ ಸಂದರ್ಭದಲ್ಲಿ ಪಾವತಿಯನ್ನು ಪಡೆಯುವ ಅತಿ ಮುಂಚಿತವಾದ ದಿನಾಂಕ ಅಥವಾ ಇನ್ವಾಯಿಸ್‌ ಜಾರಿಗೊಳಿಸುವ ದಿನಾಂಕ ಅಥವಾ ಪಾವತಿಯು ಸೇವೆಯನ್ನು ಪೂರೈಸುವುದಕ್ಕೆ ಸಂಬಂಧಿಸಿದಂತೆ ಇದ್ದರೆ ಕೆಲಸದ ಪೂರೈಕೆಯ ದಿನಾಂಕ.

ಪ್ರಶ್ನೆ 14: ದಿನಾಂಕ 1.6.2017 ರಿಂದ ಅನ್ವಯಿಸುವಂತೆ ತೆರಿಗೆ ದರವನ್ನು 18% ಇಂದ 20% ಗೆ ಹೆಚ್ಚಿಸಲಾಗುವುದು ಎಂದು ಭಾವಿಸಿದರೆ, ಏಪ್ರಿಲ್ 2017ಕ್ಕೆ ಮುಂಚಿತವಾಗಿ ಇನ್ವಾಯಿಸ್ಜಾರಿಯಾಗಿದ್ದು, ಸೇವೆಗಳನ್ನು ಒದಗಿಸಲಾಗಿದ್ದರೆ ಮತ್ತು ಪಾವತಿಯು ಜೂನ್ 2017 ರಲ್ಲಿ ಬದಲಾವಣೆಯ ನಂತರ ಪಡೆಯಲಾಗಿದ್ದರೆ ಯಾವ ತೆರಿಗೆ ದರವು ಅನ್ವಯವಾಗುತ್ತದೆ?

ಉತ್ತರ: 1.6.2017ಕ್ಕಿಂತ ಮುಂಚಿತವಾಗಿ ಸೇವೆಗಳನ್ನು ಒದಗಿಸಿರುವುದರಿಂದ, 18%ನ ಹಳೆಯದರವೇ ಅನ್ವಯಿಸುತ್ತದೆ.

*****

ಜಿಎಸ್ಟಿ ಯಡಿಯಲ್ಲಿ ಮೌಲ್ಯ ಮಾಪನ

6. ಜಿಎಸ್‌ಟಿಯಡಿಯಲ್ಲಿ ಮೌಲ್ಯಮಾಪನ

ಪ್ರಶ್ನೆ 1 : ಜಿಎಸ್‌ಟಿ ಹೆರಲು ತೆರಿಗೆಯೋಗ್ಯ ಪೂರೈಕೆಯ ಪ್ರಮಾಣವನ್ನು ಹೇಗೆ ನಿರ್ಧರಿಸಬೇಕು?

ಉತ್ತರ: ವ್ಯಾಪಾರಿಗಳ ನಡುವೆ ಯಾವ ಸಂಬಂಧವೂ ಇಲ್ಲದಿದ್ದರೆ ಮತ್ತು ಮೌಲ್ಯ ಒಂದೇ ನಿರ್ಧಾರಣೆಯ ಮಾಪಕವಾದರೆ, ಸರಕು ಮತ್ತು ಸೇವೆಗಳ ಪೂರೈಕೆಗೆ ಸಂಬಂಧಿಸಿದಂತೆ ತೆರಿಗೆ ಯೋಗ್ಯ ಪೂರೈಕೆಯ ಪ್ರಮಾಣವು ಸಾಮಾನ್ಯವಾಗಿ ವ್ಯವಹಾರ ಮೌಲ್ಯ ಅಂದರೆ ಪಾವತಿಸಿರುವ ಅಥವಾ ಪಾವತಿಸಬೇಕಾದ ಮೌಲ್ಯವಾಗಿರುತ್ತದೆ. ಎಮ್ಜಿಎಲ್ ವ್ಯವಹಾರದ ಮೌಲ್ಯದ ಪರಿಧಿಯೊಳಗೆ ಸೇರಿರುವಂತಹ ಮತ್ತು ಹೊರತು ಪಡಿಸುವಂತಹ ವಿಭಿನ್ನ ವ್ಯವಹಾರಗಳನ್ನು ವಿವರಿಸುತ್ತದೆ.

ಪ್ರಶ್ನೆ 2 : ವ್ಯವಹಾರದ ಮೌಲ್ಯ ಎಂದರೇನು?

ಉತ್ತರ: ವ್ಯಾಪಾರಿಗಳ ನಡುವೆ ಯಾವ ಸಂಬಂಧವೂ ಇಲ್ಲದಿದ್ದರೆ ಮತ್ತು ಮೌಲ್ಯ ಒಂದೇ ನಿರ್ಧಾರಣೆಯ ಮಾಪಕವಾದರೆ, ಸರಕು ಮತ್ತು ಸೇವೆಗಳ ಪೂರೈಕೆಗೆ ಸಂಬಂಧಿಸಿದಂತೆ, ಸಾಮಾನ್ಯವಾಗಿ ವ್ಯವಹಾರ ಮೌಲ್ಯ ಅಂದರೆ ಪಾವತಿಸಿರುವ ಅಥವಾ ಪಾವತಿಸಬೇಕಾದ ಮೌಲ್ಯ ವಾಗಿರುತ್ತದೆ. ಪೂರೈಕೆ ಪಡೆದವರ ಮೇಲೆ ಹೆರಿರುವಂತಹ, ಆದರೆ ಅಸಲಿನಲ್ಲಿ ಪೂರೈಕೆದಾರರು ಪಾವತಿಸಬೇಕಾದಂತಹ ಮೊತ್ತ.

ಪ್ರಶ್ನೆ 3:ಜಿಎಸ್‌ಟಿ ಎಸ್‌ಜಿಎಸ್‌ಟಿ ಮತ್ತು ಐಜಿಎಸ್‌ಟಿ ಹಾಗೂ ಸರಕುಗಳು ಮತ್ತು ಸೇವೆಗಳಿಗೆ ಅನ್ವಯಿಸುವಂತೆ ಬೇರೆಬೇರೆ ಮೌಲ್ಯಮಾಪನ ಉಪಬಂಧಗಳಿವೆಯೇ?

ಉತ್ತರ: ಇಲ್ಲ. ಎಲ್ಲಾ ಮೂರೂ ತೆರಿಗೆಗಳಿಗೆ ಹಾಗೂ ಸರಕು ಮತ್ತು ಸೇವೆಗಳಿಗೂ ಸೇರಿದಂತೆ ಭಾಗ15 ಸಾಮಾನ್ಯವಾದುದು.

ಪ್ರಶ್ನೆ 4 : ಪೂರೈಕೆಯಮೌಲ್ಯಮಾಪನವನ್ನು ನಿರ್ಧರಿಸಲು ಒಪ್ಪಂದದ ಮೌಲ್ಯ ಒಂದೇ ಸಾಲದೆ?

ಉತ್ತರ:ಒಪ್ಪಂದದಮೌಲ್ಯವನ್ನುನಿರ್ಧಿಷ್ಟವಾಗಿ “ವ್ಯವಹಾರಮೌಲ್ಯ”ಎಂದು ಕರೆಯಲಾಗುವುದು. ಆದಾಗ್ಯೂ, ವ್ಯವಹಾರದ ಮೌಲ್ಯವನ್ನು ಸರಿಯಾಗಿ ನಿರ್ಧರಿಸಲು, ಮೌಲ್ಯದ ಮೇಲೆ ಪರಿಣಾಮ ಬೀರಬಹುದಾದಂತಹ ಆದಾಗ್ಯೂ, ಲೆಕ್ಕ ಮಾಡಲಾಗದಂತಹ ಅಂಶಗಳು, ಅಂದರೆ ವ್ಯವಹಾರವು ಸಂಬಂಧದಲ್ಲಿ ನಡೆದರೆ, ಸರಕುಗಳು/ಸೇವೆಗಳು ಪೂರೈಕೆಯಾದಂತೆ ತೋರುವಿಕೆ ಮುಂತಾದವನ್ನು ಮೌಲ್ಯಮಾಪನವನ್ನು ನಿರ್ಧರಿಸಲು ಹೊರತುಪಡಿಸಬೇಕಾಗುದ್ದತೆ.

ಪ್ರಶ್ನೆ 5 : ಎಲ್ಲಾ ಪ್ರಕರಣಗಳಲ್ಲೂ ಮೌಲ್ಯ ನಿಯಮಗಳ ಸಂದರ್ಭದ ಅಗತ್ಯವಿದೆಯೇ?

ಉತ್ತರ : ಇಲ್ಲ. ಭಾಗ 15(4) ರಡಿ ಸೂಚಿಸಿರುವ, ವ್ಯವಹಾರಗಳು ಸಂಬಂಧಗಳನ್ನು ಒಳಗೊಂಡಿದ್ದರೆ ಅಥವಾ ಹಣವು ಪಾವತಿ ಪ್ರಮಾಣವಾಗದಿದ್ದರೆ, ಅಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರ ಮೌಲ್ಯ ನಿಯಮಗಳ ಅಗತ್ಯವಿದೆ.

ಪ್ರಶ್ನೆ 6 : ಭಾಗ 15 (4) ರಡಿಯಲ್ಲಿ, ವ್ಯವಹಾರಗಳ ಮೌಲ್ಯದ ಮೇಲೆ ಪರಿಣಾಮ ಬೀರುವಂತಹ ಅಂಶಗಳು ಅಡಗಿದ್ದಲ್ಲಿ ಏನು ಮಾಡಬೇಕು ?

ಉತ್ತರ: ತೆರಿಗೆ ಪಾವತಿಯ ಮೊತ್ತವನ್ನು ನಿರ್ಧರಿಸಲು, ಅನುಕೂಲವಾಗುವಂತೆ, ಕೆಲವು ಮಾರ್ಪಾಟುಗಳ ಸೂಚಿಯನ್ನು ಭಾಗ 15(2) ರಲ್ಲಿ ಒದಗಿಸಲಾಗಿದೆ.

ಪ್ರಶ್ನೆ 7: ಭಾಗ15 (1) ರಡಿಯಲ್ಲಿ ಘೋಷಿತವಾದ ವ್ಯವಹಾರ ಮೌಲ್ಯವನ್ನು ಸ್ವೀಕರಿಸಬಹುದೇ?

ಉತ್ತರ : ಹೌದು. ಭಾಗ 15(2) ರಡಿಯಲ್ಲಿ ಒಳಗೊಂಡಿರುವ ಎಲ್ಲ ಅಂಶಗಳನ್ನು ಪರೀಕ್ಷಿಸಿದ ಬಳಿಕ ಸ್ವೀಕರಿಸಬಹುದು. ಹಾಗೂ, ಸರಕು ಮತ್ತು ಸೇವೆಗಳ ಪೂರೈಕೆದಾರರು ಮತ್ತು ಪೂರೈಕೆ ಪಡೆದವರ ನಡುವಿನ ಸಂಬಂಧವು ವ್ಯವಹಾರದ ಮೇಲೆ ಪರಿಣಾಮ ಬೀರದಿದ್ದರೆ, ವ್ಯವಹಾರ ಮೌಲ್ಯವನ್ನು ಯಥಾವತ್ತಾಗಿ ಸ್ವೀಕರಿಸಬಹುದು. (ಮಸೂದೆ ಜಿಎಸ್ಟಿ ಮೌಲ್ಯಮಾಪನ ನಿಯಮಾವಳಿಯ ನಿಯಮ3(4).)

ಪ್ರಶ್ನೆ 8 : ವ್ಯವಹಾರ ಮೌಲ್ಯದಲ್ಲಿ ಪೂರೈಕೆಯಾದ ನಂತರದ ರಿಯಾಯತಿಗಳನ್ನು ಮತ್ತು ಪೂರಸ್ಕಾರಗಳನ್ನು ಸೇರಿಸಬೇಕೆ?

ಉತ್ತರ: ಹೌದು. ಪೂರೈಕೆಯಾದ ನಂತರದ ರಿಯಾಯತಿಗಳನ್ನು ಒಪ್ಪಂದದ ಮೇರೆಗೆ ಪೂರೈಕೆಯಾಗುವ ಮೊದಲೇ ಘೋಷಿಸಿಲ್ಲದಿದ್ದರೆ ಮತ್ತು ಸಂಬಂಧಿತ ಇನ್ವಾಯಿಸ್‌ನೊದಿಗೆ ಲಗತ್ತಿಸದಿದ್ದರೆ ಅವುಗಳ ಮೌಲ್ಯವನ್ನು ವ್ಯವಹಾರ ಮೌಲ್ಯದಲ್ಲಿ ಸೇರಿಸಬೇಕು.

ಪ್ರಶ್ನೆ 9 : ಪೂರೈಕೆಯ ಸಮಯದಲ್ಲಿ ಅಥವಾ ಮುಂಚಿತವಾಗಿ ಘೋಷಿತವಾಗಿರುವ ರಿಯಾಯಿತಿಗಳನ್ನು ವ್ಯವಹಾರ ಮೌಲ್ಯದಲ್ಲಿ ಸೇರಿಸಬೇಕೆ?

ಉತ್ತರ: ಇಲ್ಲ. ವ್ಯವಹಾರದಲ್ಲಿ, ಸಾಮಾನ್ಯವಾಗಿ ಅಂತಹ ರಿಯಾಯಿತಿಗಳನ್ನು ಕೊಡುತ್ತಿದ್ದರೆ ಮತ್ತು ಅವನ್ನು ಇನ್ವಾಯಿಸ್‌ನಲ್ಲಿ ಸರಿಯಾಗೇ ಅಂಕಿತ ಮಾಡಿದ್ದರೆ, ವ್ಯವಹಾರ ಮೌಲ್ಯದಲ್ಲಿ ಸೇರಿಸಬೇಕಾಗಿಲ್ಲ.

ಪ್ರಶ್ನೆ 10. ಮೌಲ್ಯ ಮಾಪನ ನಿಯಮಗಳು ಯಾವಾಗ ಅನ್ವಯಿಸುತ್ತವೆ?

ಉತ್ತರ : ಕೆಳಕಂಡ ಸಂದರ್ಭಗಳಲ್ಲಿ

 1. ಹಣದ ರೂಪದಲ್ಲಿ ಪ್ರತಿಫಲ ಇಲ್ಲದಿರುವಾಗ;
 2. ವ್ಯಾಹಾರದಲ್ಲಿ ಸಂಬಂಧವು (ನೆಂಟಸ್ತಿಕೆ) ಅಡಗಿದ್ದರೆ ಅಥವಾ ನಿರ್ಧಿಷ್ಟ ವರ್ಗದ ಪೂರೈಕೆದಾರರಿಂದ ಪೂರೈಕೆ ಒದಗಿದ್ದರೆ;
 3. ಘೋಷಿಸಿರುವ ವ್ಯವಹಾರ ಮೌಲ್ಯವು ನಂಬಲು ಅರ್ಹವಾಗಿಲ್ಲದಿದ್ದರೆ; ಮೌಲ್ಯ ಮಾಪನ ನಿಯಮಗಳು ಅನ್ವಯಿಸುತ್ತವೆ.

ಪ್ರಶ್ನೆ 11: ಘೋಷಿತ ವ್ಯವಹಾರ ಮೌಲ್ಯವನ್ನು ಸಂಶಯಿಸಲು ಕಾರಣಗಳೇನು?

ಉತ್ತರ: ಜಿಎಸ್‌ಟಿ ಮೌಲ್ಯಮಾಪನ ನಿಯಮಾವಳಿಯ ನಿಯಮ7 (ಬಿ)ಯಲ್ಲಿ ಕಾರಣಗಳನ್ನು ಸೂಚಿಸಲಾಗಿದೆ. ಪೂರೈಕೆಗಳು ಗಮನಾರ್ಹವಾಗಿ ಹೆಚ್ಚು ಮೌಲ್ಯದ್ದಾಗಿದ್ದರೆ; ವ್ಯವಹಾರದಲ್ಲಿನ ಪೂರೈಕೆಗಳ ಮಾರುಕಟ್ಟೆ ದರವು ಅತಿ ಹೆಚ್ಚು ಅಥವ ಕಡಿಮೆ ಇದ್ದರೆ; ಮತ್ತು ವಿವರಣೆಗಳು, ಪರಿಮಾಣ, ಗುಣವತ್ತ, ತಯಾರಾದ ವರ್ಷ ಇತ್ಯಾದಿಗಳ ಸುಳ್ಳು ಘೋಷಣೆಯ ಸಂದರ್ಭದಲ್ಲಿ; ಆದಿಕಾರಣಗಳ ಉದಾಹರಣೆಗಳನ್ನು ಸೂಚಿಯು ಒಳಗೊಂಡಿರುವುದೇ ವಿನಹ ಎಲ್ಲಾ ಕಾರಣಗಳನ್ನು ಸೂಚಿಸಲಾಗಿಲ್ಲ.

ಪ್ರಶ್ನೆ 12 : ಜಿಎಸ್ಟಿ ಮೌಲ್ಯ ಮಾಪನ ನಿಯಮಗಳ ಮಸೂದೆಯಲ್ಲಿರುವಂತೆ ಮೌಲ್ಯವನ್ನು ನಿರ್ಧರಿಸಲು ಯಾವ ವಿಧಾನಗಳಿವೆ?

ಉತ್ತರ: ಜಿಎಸ್‌ಟಿ ಮೌಲ್ಯಮಾಪನ ನಿಯಮಗಳ ಮಸೂದೆಯಲ್ಲಿರುವಂತೆ ವ್ಯವಹಾರ ಮೌಲ್ಯವನ್ನು ನಿರ್ಧರಿಸಲು ಮೂರು ವಿಧಾನಗಳಿವೆ. ತುಲನಾತ್ಮಕ ವಿಧಾನ, ಲೆಕ್ಕವಿಧಾನ ಮತ್ತು ಅವಶೇಷ ವಿಧಾನ. ಈ ಮೂರು ವಿಧಾನಗಳನ್ನು ಕ್ರಮವಾಗಿ ಪಾಲಿಸ ತಕ್ಕದ್ದು. ಇದಲ್ಲದೆ, ಕೇವಲ ಏಜೆಂಟ್‌ ಕೆಲಸವನ್ನೇ ಮಾಡುವವರಿಗಾಗಿ ಹಾಗೂ ಹಣಬದಲಿ ಮಾಡುವವರಿಗಾಗಿ ಕೆಲವು ನಿರ್ಧಿಷ್ಟ ಮೌಲ್ಯ ಮಾಪನ ವಿಧಾನಗಳನ್ನು ಸಹ ಸೂಚಿಸಲಾಗಿದೆ. ವಿಮೆ ಮಾಡಿಸುವವರು, ಏರ್ ಟ್ರಾವೆಲ್ ಏಜೆಂಟ್‌‌ಗಳು ಲಾಟರೀ ಮಾರುವ ಮತ್ತು ವಿತರಕರಿಗೆಂದು, ಭವಿಷದಲ್ಲಿ ನಿರ್ಧಿಷ್ಟ ನಿಯಮಗಳನ್ನು ಅಧಿಸೂಚಿಸಬಹುದು.

ಪ್ರಶ್ನೆ 13. ಭಾಗ 15(2) ರ ಅನ್ವಯ ವ್ಯವಹಾರ ಮೌಲ್ಯದಲ್ಲಿ ಸೇರಿಸಬಹುದಾದ ಬೇರೆ ಪರಿಮಾಣಗಳು ಯಾವುವು?

ಉತ್ತರ : ಭಾಗ 15(2) ರ ಅನ್ವಯ ಈ ಕೆಳಕಂಡಂತೆ:

 1. ಸರಕು/ಸೇವಾ ಪೂರೈಕೆ ಪಡದವರಿಂದ ಪೂರೈಕೆದಾರರಿಗೆ ಪಾವತಿಸಲಾದ ಯಾವುದೇ ಮೊತ್ತ;
 2. ಪೂರೈಕೆ ಪಡೆದವರಿಗೆ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಪೂರೈಸಿರುವ ಸರಕು ಅಥವಾ ಸೇವೆಗಳ ರಿಯಾಯಿತಿ ಮೊತ್ತ;
 3. ಪೂರೈಕೆ ಷರತ್ತಿನ ಅನ್ವಯ ಪೂರೈಕೆ ಪಡೆದವರು ಸಂದಾಯ ಮಾಡುವ ಯಾವುದೇ ರಾಯಲ್ಟೀ ಅಥವಾ ಲೈಸೆನ್ಸ್‌ ಶುಲ್ಕ ;
 4. ಎಸ್‌ಜಿಎಸ್‌ಟಿ/ಸಿಜಿಎಸ್‌ಟಿ ಅಥವಾ ಐಜಿಎಸ್ಟಿ ಕಾನೂನನ್ನು ಹೊರತುಪಡಿಸಿ ಹೇರಲಾಗಿರುವ ಯಾವುದೇ ತೆರಿಗೆ;
 5. ಪೂರೈಕೆಯ ಮುನ್ನ ಪೂರೈಕೆದಾರರ ಮೇಲೆ ಬಿದ್ದಿರುವ ಖರ್ಚು ಯಾವುದನ್ನೂ ಆನಂತರದಲ್ಲಿ ಪ್ರತ್ಯೇಕವಾಗಿ ಹೊರಿಸಲಾಗುವ ಖರ್ಚು.
 6. ಪೂರೈಕೆಯ ಮೇಲೆ ಪೂರೈಕೆದಾರರಿಗೆ ದೊರೆತಿರುವ ಸಬ್ಸಿಡೀ;
 7. ಪೂರೈಕೆದಾರರಿಂದ ಪ್ರತ್ಯೇಕವಾಗಿ ತೆಗೆದುಕೊಂಡಿರುವ ಪ್ರತಿಪೂರಕ ಮೊತ್ತ;
 8. ಪೂರೈಕೆಯ ಮೊದಲೇ ಘೋಷಿಸದ, ಪೂರೈಕೆಯ ನಂತರದಲ್ಲಿ ನೀಡಿರುವ ರಿಯಾಯಿತಿ; (ವ್ಯಾಪಾರದಲ್ಲಿ ಸಾಮಾನ್ಯವಾಗಿ ನೀಡುವ ಮತ್ತು ಇನ್ವಾಯಿಸ್‌ನಲ್ಲಿ ಖಚಿತವಾಗಿ ಸೂಚಿಸಿರುವಂತಹ ರಿಯಾಯಿತಿಗಳನ್ನು ಹೊರತು ಪಡಿಸಿ) ವ್ಯವಹಾರ ಮೌಲ್ಯದಲ್ಲಿ ಸೇರಿಸಬಹುದಾದ ಬೇರೆ ಪರಿಮಾಣಗಳು.

****

ಜಿಎಸ್‌ಟಿ ಯಲ್ಲಿ ತೆರಿಗೆ ಪಾವತಿಗಳು

7. ಜಿಎಸ್‌ಟಿಯಲ್ಲಿ ತೆರಿಗೆ ಪಾವತಿಗಳು.

ಪ್ರಶ್ನೆ 1: ಜಿಎಸ್‌ಟಿ ಪದ್ಧತಿಯಲ್ಲಿ ಯಾವ ಯಾವ ಪಾವತಿಗಳನ್ನು ಮಾಡಬೇಕು?

ಉತ್ತರ: ಜಿಎಸ್‌ಟಿ ಪದ್ಧತಿಯಲ್ಲಿ, ರಾಜ್ಯದೊಳಗಿನ ಪೂರೈಕೆಗಳಿಗೆ ಅನ್ವಯಿಸುವಂತೆ, ಕೇಂದ್ರ ಜಿಎಸ್‌ಟಿ (ಕೇಂದ್ರ ಸರ್ಕಾರದ ಖಾತೆಗೆ ಸಂದಾಯವಾಗುವ ಸಿಜಿಎಸ್ಟಿ) ಮತ್ತು ರಾಜ್ಯ ಜಿಎಸ್ಟಿ (ರಾಜ್ಯ ಸರ್ಕಾರದ ಖಾತೆಗೆ ಸಂದಾಯವಾಗುವ ಎಸ್‌ಜಿಎಸ್‌ಟಿ) ಪಾವತಿಸಬೇಕು. ಅಂತರ-ರಾಜ್ಯ ಪೂರೈಕೆಗಳಿಗೆ ಅನ್ವಯಿಸುವಂತೆ, ಸಂಘಟಿತ ಜಿಎಸ್‌ಟಿ (ಸಿಜಿಎಸ್‌ಟಿ ಹಾಗೂ ಐಜಿರಎಸ್ಟಿ ಅಂಶಗಳು ಒಳಗೊಂಡಿರುವಂತೆ) ಪಾವತಿಸಬೇಕಾಗುತ್ತದೆ. ಅದಲ್ಲದೆ, ಕೆಲವು ವರ್ಗದ ನೋಂದಾಯಿತ ವ್ಯಕ್ತಿಗಳು ಮೂಲದಲ್ಲಿ ಕಳೆದಿರುವಂತಹ ಮತ್ತು ಮೂಲದಲ್ಲಿ ಸಂಗ್ರಹಿಸಿರುವ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಅಲ್ಲದೆ, ಅಗತ್ಯವಿದ್ದಲ್ಲಿ ಬಡ್ಡಿ, ದಂಡ, ಶುಲ್ಕ ಮತ್ತು ಇನ್ನಿತರ ಪಾವತಿಗಳನ್ನು ಮಾಡಬೇಕಾಗಬಹುದು.

ಪ್ರಶ್ನೆ 2: ಜಿಎಸ್‌ಟಿ ಯನ್ನು ಯಾರು ಪಾವತಿಸಬೇಕು ?

ಉತ್ತರ: ಸಾಮಾನ್ಯವಾಗಿ ಸರಕು ಅಥವಾ ಸೇವೆಗಳ ಪೂರೈಕೆದಾರರು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಆಮದು ಮತ್ತು ಇನ್ನಿತರ ಅಧಿಸೂಚಿತ ಪೂರೈಕೆಗಳಲ್ಲಿ, ವ್ಯತಿರಿಕ್ತ ತೆರಿಗೆ ಕ್ರಮದಲ್ಲಿ ಸರಕು/ಸೇವೆಗಳನ್ನು ಪಡೆಯುವವರು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಅನ್ಯ ವ್ಯಕ್ತಿಗಳು ತೆರಿಗೆ ಪಾವತಿಸಬೇಕಾಗುತ್ತದೆ. (ಉದಾಹರಣೆಗೆ ಟಿಸಿಎಸ್‌ಗೆ ಜವಾಬ್ಧಾರರಾದ ಈ-ಕಾಮರ್ಸ್‌ ಪ್ರಚಾಲಕರು ಅಥವಾ ಟಿಡಿಎಸ್‌ಗೆ ಜವಾಬ್ಧಾರರಾದ ಸರ್ಕಾರಿ ವಿಭಾಗ)

ಪ್ರಶ್ನೆ 3: ತೆರಿಗೆದಾರರಿಂದ ಯಾವಾಗ ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ?

ಉತ್ತರ: ಸರಕುಗಳಿಗೆ ಸಂಬಂಧವಾಗಿ ಭಾಗ12ರ ಅನ್ವಯ ಹಾಗೂ ಸೇವೆಗಳಿಗೆ ಸಂಬಂಧಿಸಿದಂತೆ ಭಾಗ13ರ ಅನ್ವಯ ಪೂರೈಕೆ ಸಮಯದಲ್ಲಿ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ ಪಾವತಿಯನ್ನು ಪಡೆಯುವ ಅಥವಾ ನ್ವಾಯಿಸ್ ರಿಯಾಗುವ ಅಥವಾ ಪೂರೈಕೆ ಸಮಾಪ್ತಿಯಾಗುವ ಸಮಯವನ್ನು ಈ ಮೂರರಲ್ಲಿ ಯಾವುದು ಅತಿ ಮುಂಚಿತವೊ ಅದನ್ನು ಪರಿಗಣಿಸಲಾಗುವುದು. ವಿಭಿನ್ನ ಪರಿಸ್ಥಿತಿಗಳನ್ನೊಳಗೊಂಡ ಹಲವಾರು ತೆರಿಗೆ ಸಂದರ್ಭಗಳನ್ನು ಮೇಲಿನ ಭಾಗಗಳಲ್ಲಿ ವಿವರಿಸಲಾಗಿದೆ.

ಪ್ರಶ್ನೆ 4. ಜಿಎಸ್ಟಿ ಪಾವತಿ ಪ್ರಕ್ರಿಯೆಯ ಮುಖ್ಯ ಲಕ್ಷಣಗಳು ಯಾವುವು?

ಉತ್ತರ : ಪ್ರಸ್ತಾವಿತ ಜಿಎಸ್‌ಟಿ ಪದ್ದತಿಯ ಪಾವತಿ ಪ್ರಕ್ರಿಯೆಯ ಮುಖ್ಯ ಲಕ್ಷಣಗಳು : ಜಿಎಸ್‌ಟಿಎನ್ ಸಾಮಾನ್ಯ ಪೋರ್ಟಲ್ ಮುಖೇಣ ಮಾನವ ಹಸ್ತಕ್ಷೇಪರಹಿತ ಎಲಕ್ಟ್ರಾನಿಕ್ ಪದ್ದತಿಯಲ್ಲಿ ತಯಾರಾದ ಎಲ್ಲಾ ರೀತಿಯ ಪಾವತಿಗಳ ಚಲಾನ್‌ ಪ್ರಪತ್ರಗಳು;

 • ತೆರಿಗೆದಾರರಿಗೆ ಅನುಕೂಲವಾಗುವಂತೆ ಯಾವಾಗ, ಯೆಲ್ಲಿಯಾದರೂ, ಯಾವ ಪ್ರಕಾರದಲ್ಲಿಯಾದರೂ ಪಾವತಿಸಬಹುದಾದ ತೆರಿಗೆ ಪದ್ದತಿ ;
 • ಆನ್-ಲೈನ್‌ನಲ್ಲಿ ಪಾವಟಿಸುವ ಸೌಲಭ್ಯ
 • ಎಲೆಕ್ಟ್ರಾನಿಕ್‌ ಪ್ರಪತ್ರಗಳಲ್ಲಿ ತರ್ಕಬದ್ಧಿತ ತೆರಿಗೆ ಸಂಗ್ರಹಣೆ
 • ಸರ್ಕಾರದ ಖಾತೆಗೆ ಶೀಘ್ರ ತೆರಿಗೆ ಪಾವತಿಕ್ರಮ;
 • ಕಾಗದ ರಹಿತ ವ್ಯವಹಾರಗಳು
 • ಶೀಘ್ರ ಲೆಕ್ಕ ಮಾಹಿತಿ ಮತ್ತು ರೆಪೋರ್ಟಿಂಗ್
 • ಎಲೆಕ್ಟ್ರೋನಿಕ್‌ ಪದ್ದತಿಯಲ್ಲಿ ಎಲ್ಲಾ ಪಾವತಿಗಳ ಹೊಂದಾಣಿಕೆ;
 • ಬ್ಯಾಂಕುಗಳಿಗೆ ಸರಳೀಕರಿಸಿದ ಪದ್ಧತಿಗಳು;
 • ಡಿಜಿಟಲ್‌ ಚಲಾನ್‌ಗಳ ಶೇಖರಣೆ.

ಪ್ರಶ್ನೆ 5. ಪಾವತಿಯನ್ನು ಹೇಗೆ ಮಾಡಬಹುದು?

ಉತ್ತರ : ಈ ಕೆಳಕಂಡ ರೀತಿಗಳಲ್ಲಿ ಪಾವತಿಯನ್ನು ಮಾಡಬಹುದು

 1. ಸಾಮಾನ್ಯ ಪೋರ್ಟಲ್‌ನಲ್ಲಿ ಇರುವ ತೆರಿಗೆದಾರರ ಕ್ರೆಡಿಟ್‌ ಲೆಡ್ಜ್‌ರ್‌ನಲ್ಲಿ ಡೆಬಿಟ್‌ ಮುಖಾಂತರ? ತೆರಿಗೆಯನ್ನು ಮಾತ್ರ ಪಾವತಿಸಬಹುದು, ಬಡ್ಡಿ, ದಂಡ ಮತ್ತು ಶುಲ್ಕಗಳನ್ನು ಈ ಮುಖಾಂತರ ಪಾವತಿಸಲಾಗುವುದಿಲ್ಲ.ಸರಕುಗಳ ಮೇಲೆ ಪಡೆದ ಐಟಿಸಿ (ಐಟಿಸಿ) ಸೌಕರ್ಯವನ್ನು ಮುಂದಿನ ನಿರ್ಮಿತ ಸರಕುಗಳಿಗೆ ಅನ್ವಯಿಸುವಂತೆ ಪಾವತಿಸಬೇಕಾದ ತೆರಿಗೆಯಲ್ಲಿ ಉಪಯೋಗಿಸಬಹುದು, ಆದರೆ ಸಿಜಿಎಸ್ಟಿಯಲ್ಲಿ ದೊರೆತ ಐಟಿಸಿ ಯನ್ನು ಎಸ್‌ಜಿಎಸ್‌ಟಿ ಪಾವತಿಗಾಗಿ ಮತ್ತು ಅದೇ ರೀತಿ ಎಸ್‌ಜಿಎಸ್‌ಟಿಯಲ್ಲಿ ಲಭ್ಯವಾದ ಐಟಿಸಿಯನ್ನು ಸಿಜಿಎಸ್‌ಟಿ ಪಾವತಿಗಾಗಿ ಉಪಯೋಗಿಸುವ ಸೌಲಭ್ಯ ಇಲ್ಲ. ಐಜಿಎಎಸ್‌ಟಿಯ ಐಟಿಸಿ(ಐಟಿಸಿ) ಲಾಭವನ್ನು ಐಜಿಎಸ್‌ಟಿ, ಸಿಜಿಎಸ್ಟಿ, ಎಸ್‌ಜಿಎಸ್‌ಟಿಯ ಪಾವತಿ ಕ್ರಮವಾಗಿ ಉಪಯೋಗಿಸಿಕೊಳ್ಳಬಹುದು.ಸಾಮಾನ್ಯ ಪೋರ್ಟಲ್ನಲ್ಲಿರುವ ತೆರಿಗೆದಾರರ ಕ್ರೆಡಿಟ್‌ ಲೆಡ್ಜರ್‌ನಲ್ಲಿ ನಗದು ಡೆಬಿಟ್‌ ಮುಖಾಂತರ, ನಗದು ಲೆ ಲೆಡ್ಜರ್‌ನಲ್ಲಿ ವಿಭಿನ್ನ ವಿಧಾನಗಳಲ್ಲಿ ಮುಂಗಡ ಭರಿಸಬಹುದು, ಈ-ಪಾವತಿ (ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ಕಾರ್ಡ್ಮೂಲಕ), ಪ್ರಚಲನ ಕಾಲ ಸಮಗ್ರ ಪಾವತಿ(ಆರ್ಟಿಜಿಎಸ್)/ರಾಷ್ಟ್ರೀಯ ಎಲೆಕ್ಟ್ರೋನಿಕ್ ನಗದು ವರ್ಗಾವಣೆ (ಎನ್ಈಎಫ್ಟಿ) ; ಜಿಎಸ್‌ಟಿ ಮುಂಗಡ ಸ್ವೀಕರಿಸುವ ಪ್ರಾಧಿಕೃತ ಬ್ಯಾಂಕುಗಳ ಶಾಖೆಗಳ ಕೌಂಟರ್ ನಲ್ಲಿ ಪಾವತಿ ಮಾಡಬಹುದು.

ಪ್ರಶ್ನೆ 6. ಪೂರೈಕೆದಾರರಿಂದ ತೆರಿಗೆ ಪಾವತಿ ಯಾವಾಗ ಮಾಡಬೇಕು?

ಉತ್ತರ: ಸಾಮಾನ್ಯ ಪೂರೈಕೆದಾರರು ಮಾಸಿಕವಾಗಿ, ಮುಂಬರುವ ತಿಂಗಳಿನ 20ನೇ ತಾರೀಕಿನೊಳಗೆ, ತೆರಿಗೆಯನ್ನು ಪಾವತಿಸಬೇಕು. ನಗದು ಲೆಡ್ಜರ್‌ನಲ್ಲಿ ಮೊದಲು ನಗದು ಪಾವತಿಯಾಗುತ್ತದೆ, ನಂತರ ಪೂರೈಕೆದಾರರು ಲೆಡ್ಜರಿನ ಡೆಬಿಟ್ಅನ್ನು ಮಾಸಿಕ ವಿವರಣೆಯಲ್ಲಿ ಕಳೆದು, ತಮ್ಮ ವಿವರಣೆಯಲ್ಲಿ ಸಂದರ್ಭಿತ ಡೆಬಿಟ್‌ನ ಮೂದನೆಯನ್ನು ತೋರಿಸತಕ್ಕದ್ದು. ಮಾರ್ಚ್ ತಿಂಗಳಿನ ಪಾವತಿಯನ್ನು ಏಪ್ರಿಲ್ ತಿಂಗಳ 20 ರೊಳಗೆ ಮಾಡತಕ್ಕದ್ದು. ಅನುಬಂಧ ಯೋಜನೆಯಡಿಯ ತೆರಿಗೆದಾರರು ತ್ರಿಮಾಸಿಕ ರೂಪದಲ್ಲಿ ತೆರಿಗೆಯನ್ನು ಪಾವತಿಸಬೇಕು. ರಾತ್ರಿ 12 ಗಂಟೆಯಿಂದ ಹಿಡಿದು ಮುಂದಿನ ರಾತ್ರಿ 8.00 ಗಂಟೆಯವರೆಗೂ ಪಾವತಿಗಳನ್ನು ಮಾಡಬಹುದು.

ಪ್ರಶ್ನೆ 7: ತೆರಿಗೆ ಪಾವತಿಸುವ ಸಮಯವನ್ನು ಮುಂದೂಡಬಹುದೇ ಅಥವಾ ಮಾಸಿಕ ಕಂತುಗಳಲ್ಲಿ ಪಾವತಿಸಬಹುದೇ ?

ಉತ್ತರ: ಇಲ್ಲ, ಸ್ವನಿಗದಿತ ಪಾವತಿ ಪ್ರಕರಣಗಳಿಗೆ ಅಂತಹ ಅನುಮತಿ ಇಲ್ಲ. ಬೇರೆ ಪ್ರಕರಣಗಳಲ್ಲಿ ಕಾಲಾವಧಿಯ ವಿಸ್ತರಣವನ್ನು ಅಥವಾ ಕಂತುಗಳಲ್ಲಿ ಪಾವತಿಗಳನ್ನು ಸೌಕರ್ಯವನ್ನು ಸಕ್ಷಮ ಅಧಿಕಾರಿಗಳು ಕಲ್ಪಿಸಿಕೊಡಬಹುದು. (ಎಮ್‌ಜಿಎಲ್‌ನ ಭಾಗ55).

ಪ್ರಶ್ನೆ 8: ತೆರಿಗೆದಾರರು ತೆರಿಗೆ ವಿವರಣೆಗಳನ್ನು ಮಾತ್ರ ಸಲ್ಲಿಸಿ ತೆರಿಗೆಯನ್ನು ಪಾವತಿ ಮಾಡದಿದ್ದರೆ ಏನಾಗುತ್ತದೆ?

ಉತ್ತರ: ಅಂತಹ ಪ್ರಕರಣಗಳಲ್ಲಿ ಸಲ್ಲಿಸಿರುವ ವಿವರಣೆಯನ್ನು ಮಾನ್ಯವಾದುದೆಂದು ಪರಿಗಣಿಸಲಾಗುವುದಿಲ್ಲ. ತೆರಿಗೆ ವಿವರಣೆಯಲ್ಲಿ ಸೂಚಿಸಿರುವಂತೆ, ಪೂರ್ಣ ಪ್ರಮಾಣದ ತೆರಿಗೆಯನ್ನು ಪಾವತಿಸದಿದ್ದರೆ ಎಮ್‌ಜಿಎಲ್‌ನ ಭಾಗ 27(3) ರಡಿಯಲ್ಲಿ ಒಳಗೊಂಡಂತೆ, ಅಂತಹ ವಿವರಣೆಯನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ. ಅಂತಹ ವಿವರಣೆಯು, ಸೇವೆ /ಸರಕು ಪಡೆಯುವವರಿಗೆ ಐಟಿ,ಸಿ ಸೌಲಭ್ಯ ಪಡೆಯಲು ಮಾತ್ರ ಉಪಯೋಗವಾಗುತ್ತದೆ. ಅಂದರೆ ಪೂರೈಕೆದಾರರು ತಮ್ಮಸ್ವ-ನಿರ್ಧಾರಿತ ತೆರಿಗೆಯನ್ನು ಪೂರ್ಣಾವಾಗಿ ಪಾವತಿಸಿ, ವಿವರಣೆಗಳನ್ನು ಸಲ್ಲಿಸಿದಲ್ಲಿ ಮತ್ತು ಸರಕು/ಸೇವೆಗಳನ್ನು ಪಡೆಯುವವರು ಕೂಡ ತಮ್ಮತೆರಿಗೆ ವಿವರಣೆಗಳನ್ನು ಸಲ್ಲಿಸಿದಲ್ಲಿ ಮಾತ್ರವೇ ಸೇವೆ ಪಡೆಯುವವರ ಐಟಿಸಿಯನ್ನು ಮಾನ್ಯ ಮಾಡಲಾಗುವುದು. ಭಾಗ 28 ರ ಅನ್ವಯ, ತೆರಿಗೆದಾರರು, ಮಾನ್ಯ ವಿವರಣೆಯನ್ನು ಸಲ್ಲಿಸದಿದ್ದರೆ, ತಮ್ಮ ಸ್ವ ನಿರ್ಧಾರಿತ ತೆರಿಗೆ ಬಾದ್ಯತೆಯನ್ನು ನಿಭಾಯಿಸುವ ವರೆಗೂ ಐಟಿಸಿ (ಐಟಿಸಿ)ಯ ಲಾಭವನ್ನು ಪಡೆಯಲಾಗುವುದಿಲ್ಲ.

ಪ್ರಶ್ನೆ 9: “ತೆರಿಗೆ ಬಾಕಿ ಜಮೆ ದಿನಾಂಕ” ಎಂದು, ಚೆಕ್ಕು ಸಲ್ಲಿಸುವ ದಿನಾಂಕ ಅಥವಾ ಪಾವತಿ ದಿನಾಂಕ ಅಥವಾ ಸರ್ಕಾರದ ಖಾತೆಗೆ ಮೊತ್ತ ಜಮೆಯಾಗುವ ದಿನಾಂಕ, ಯಾವ ದಿನಾಂಕವನ್ನು ಪರಿಗಣಿಸಲಾಗುವುದು?

ಉತ್ತರ: ಸರ್ಕಾರದ ಖಾತೆಗೆ ಮೊತ್ತ ಜಮೆಯಾಗುವ ದಿನಾಂಕವನ್ನು “ತೆರಿಗೆ ಬಾಕಿ ಜಮೆ ದಿನಾಂಕ” ಎಂದು ಪರಿಗಣಿಸಲಾಗುವುದು.

ಪ್ರಶ್ನೆ 10: ಈ-ಲೆಡ್ಜರ್ ಎಂದರೇನು?

ಉತ್ತರ:ಪ್ರತಿಯೊಬ್ಬ ನೋಂದಾಯಿತ ತೆರಿಗೆದಾರರಿಗೆ ಅನ್ವಯಿಸುವಂತೆ ನಗದು ಅಥವಾ ಐಟಿಸಿ (ಐಟಿಸಿ) ವಿವರಣೆಗಳನ್ನೊಳಗೊಂಡ ಸೂಚಿಯನ್ನು ಈ-ಲೆಡ್ಜರ್ ಅಥವಾ ಎಲೆಕ್ಟ್ರೋನಿಕ್ ಲೆಡ್ಜರ್ ಎನ್ನುವರು. ಪ್ರತಿಯೊಬ್ಬ ತೆರಿಗೆದಾರರಿಗೂ ಅನ್ವಯಿಸುವಂತೆ ಎಲಕ್ಟ್ರಾನಿಕ್‌ ತೆರಿಗೆ ಬಾಧ್ಯತೆ ರಿಜಿಸ್ಟ್‌ರ್‌ ಕೂಡ ಇರುತ್ತದೆ. ತೆರಿಗೆದಾರರು ಸಾಮಾನ್ಯ ಪೋರ್ಟಲ್‌ನಲ್ಲಿ ನೋಂದಾಯಿತರಾದ ಕೂಡಲೇ (ಜಿಎಸ್ಟಿಎನ್) 2 ಈ-ಲೆಡ್ಜರ್‌ಗಳು (ನಗದು ಮತ್ತು ಐಟಿಸಿ) ಮತ್ತು ಎಲಕ್ಟ್ರಾನಿಕ್‌ತೆರಿಗೆ ಬಾಧ್ಯತೆರಿಜಿಸ್ಟ್‌ರ್‌ಗಳು ತೆರೆಯುತ್ತವೆ ಮತ್ತು ತೆರಿಗೆದಾರರ ಡ್ಯಾಷ್‌ಬೋರ್ಡ್‌ನ ಮೇಲೆ ಎಲ್ಲಾ ಸಮಯದಲ್ಲೂ ಪ್ರದರ್ಶಿತಗೊಳ್ಳುತ್ತವೆ.

ಪ್ರಶ್ನೆ 11: ಎಲಕ್ಟ್ರಾನಿಕ್ ತೆರಿಗೆ ಬಾಧ್ಯತೆ ರಿಜಿಸ್ಟರ್ ಎಂದರೇನು?

ಉತ್ತರ : ಎಲಕ್ಟ್ರಾನಿಕ್‌ ತೆರಿಗೆ ಬಾಧ್ಯತೆ ರಿಜಿಸ್ಟರ್, ತೆರಿಗೆದಾರರಿಂದ ಯಾವುದೇ ನಿರ್ಧಿಷ್ಟ ತಿಂಗಳಿನಲ್ಲಿ ಸಂದಾಯ ಮಾಡಬೇಕಾದ ಪೂರ್ಣ ತೆರಿಗೆ ವಿವರಗಳನ್ನು ತೋರಿಸುತ್ತದೆ.

ಪ್ರಶ್ನೆ 12: ನಗದು ಲೆಡ್ಜರ್ ಎಂದರೇನು?

ಉತ್ತರ: ತೆರಿಗೆದಾರರಿಂದ ಜಮೆ ಮಾಡಲಾದ ಎಲ್ಲಾ ನಗದು ವಿವರಣೆಗಳನ್ನು ಮತ್ತು ತೆರಿಗೆದಾರರ ವತಿಯಿಂದ ಮಾಡಲಾದ ಟಿಡಿಎಸ್/ಟಿಸಿಎಸ್ ವಿವರಣೆಗಳನ್ನು ಪ್ರದರ್ಶಿಸುತ್ತದೆ. ಪ್ರಚಲಿತ ಸಮಯದ ಆಧಾರ ಮೇಲೆ ಈ ಮಾಹಿತಿ ದೊರಕುತ್ತದೆ. ಜಿಎಸ್‌ಟಿಗೆ ಸಂಬಂಧಿಸಿದಂತೆ ಯಾವ ಪಾವತಿಯನ್ನು ಬೇಕಾದರೂ ಈ ಲೆಡ್ಜರ್‌ ಮುಖಾಂತರ ಮಾಡಬಹುದು.

ಪ್ರಶ್ನೆ 13. ಐಟಿಸಿ ಲೆಡ್ಜರ್ ಎಂದರೇನು?

ಉತ್ತರ : ಮಾಸಿಕ ವಿವರಣೆಗಳಲ್ಲಿ ಸ್ವನಿರ್ಧಾರಣೆ ಸಲ್ಲಿಸಿರುವಂತೆ, ಸರಕು ತೆರಿಗೆ ಐಟಿಸಿಯನ್ನು ಐಟಿಸಿ ಲೆಡ್ಜರ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಈ ಲೆಡ್ಜರ್‌ನಲ್ಲಿ ಇರುವ ಐಟಿಸಿಯನ್ನು ಕೇವಲ ತೆರಿಗೆ ಪಾವಟಿಗೆ ಮಾತ್ರ ಉಪಯೋಗಿಸಬಹುದು, ಬಡ್ಡಿ, ದಂಡ, ಶುಲ್ಕಮುಂತಾದ ಮೊತ್ತಗಳ ಪಾವತಿಗೆ ಉಪಯೋಗಿಸಲು ಸಾಧ್ಯವಿಲ್ಲ.

ಪ್ರಶ್ನೆ 14. ಜಿಎಸ್‌ಟಿಎನ್ ಮತ್ತು ಪ್ರಾಧಿಕೃತ ಬ್ಯಾಂಕುಗಳ ನಡುವಿನ ಸಂಬಂಧವೇನು?

ಉತ್ತರ : ಜಿಎಸ್‌ಟಿಎನ್ ಮತ್ತು ಬ್ಯಾಂಕಿನ ಸಿಬಿಎಸ್ ಕೋರ್ ಬ್ಯಾಂಕಿಂಗ್ ಸೊಲ್ಯೂಷನ್‌ಗಳ ಮಧ್ಯೆ ಪ್ರಚಲಿತ ಸಮಯದ ದ್ವಿಮಾರ್ಗ ಸಂಬಂಧವು ನಿರ್ಮಿತವಾಗಿರುತ್ತದೆ, ಪಾವತಿಗಳನ್ನು ಪಡೆಯಲು ಮತ್ತು ಪರೀಕ್ಷಿಸುವ ಸಲುವಾಗಿ, ಎಲೆಕ್ಟ್ರೋನಿಕ್ ಸ್ಟ್ರಿಂಗ್ ಮೂಲಕ ಸಿಪಿಐಎನ್ ಅನ್ನು ಬ್ಯಾಂಕುಗಳಿಗೆ ಅಳವಡಿಸಲಾಗಿರುತ್ತದೆ ಮತ್ತು ತೆರಿಗೆ ಸಂದಾಯ ಸಲ್ಲಿಕೆಯನ್ನು ಖಚಿತಪಡಿಸುತ್ತ, ಬ್ಯಾಂಕಿನ ಮುಖಾಂತರ ಸ್ವಯಂ ಸೃಷ್ಟಿಯಾದ ಚಲಾನ್ ಗುರುತು ಸಂಖ್ಯೆಯನ್ನು (ಸಿಐಎನ್)ಸಾಮಾನ್ಯ ಪೋರ್ಟಲ್ ಗೆ ಆಗಿಂದಾಗ್ಯೆ ಕಳಿಸಲಾಗುವುದು. ತೆರಿಗೆದಾರು, ಬ್ಯಾಂಕಿನ ಸಿಬ್ಬಂಧಿ ಅಥವಾ ಟೆಲ್ಲರ್ ಯಾರೊಬ್ಬರ ಮಾನವ ಹಸ್ತಕ್ಷೇಪವೂ ಈ ಪ್ರಕ್ರಿಯೆಯಲ್ಲಿ ಇರುವುದಿಲ್ಲ.

ಪ್ರಶ್ನೆ 15. ತೆರಿಗೆದಾರರೊಬ್ಬರು ಬಹುಬಾರಿಯಲ್ಲಿ ಚಲಾನ್ ಅನ್ನು ರಚಿಸಬಹುದೇ?

ಉತ್ತರ: ಹೌದು. ಜಿಎಸ್‌ಟಿಎನ್ ಪೋರ್ಟಲ್ಗೆ ಲಾಗ್ಇನ್ ಆದ ನಂತರ ತೆರಿಗೆದಾರರು ಅಥವಾ ಅವರಿಂದ ಪ್ರಾಧಿಕೃತ ವ್ಯಕ್ತಿಯಿಂದ ಪಾವತಿ ವಿವರಣೆಗಳನ್ನು ಸಲ್ಲಿಸಬೇಕಾಗುತ್ತದೆ. ಚಲಾನನ್ನು ಮಧ್ಯದಲ್ಲಿಯೇ ಮುಂದಿನ ಉಪಯೋಗಕ್ಕಾಗಿ ಕಾಪಾಡಿಕೊಳ್ಳಬಹುದು. ಆದಾಗ್ಯೂ, ಚಲಾನ್ ಅನ್ನು ಒಮ್ಮೆ ಪೂರ್ತಿಯಾಗಿ ಸಮಾಪ್ತಿ ಮಾಡಿದರೆ, ಮತ್ತು ಸಿಪಿಐಎನ್ ಸೃಷ್ಟಿಯಾದರೆ ತೆರಿಗೆದಾರರಿಂದ ಯಾವ ವಿಧದಲ್ಲಿಯೂ ಮಾರ್ಪಾಟು ಮಾಡಲು ಸಾಧ್ಯವಾಗುವುದಿಲ್ಲ.

ಪ್ರಶ್ನೆ 16. ಆನ್ ಲೈನ್ ನಲ್ಲಿ ನಿರ್ಮಿತವಾದ ಚಲ್ಲಾನ್ ನನ್ನು ಮಾರ್ಪಾಟು ಪಡಿಸಬಹುದೇ?

ಉತ್ತರ: ಇಲ್ಲ. ಜಿಎಸ್‌ಟಿಎನ್ಪೋರ್ಟಲ್‌ಗೆ ಲಾಗ್ಇನ್ ಆದ ನಂತರ ಚಲಾನ್‌ಪಾವತಿ ವಿವರಣೆಗಳನ್ನು ತೆರಿಗೆದಾರರು ಅಥವಾ ಅವರ ಪ್ರಾಧಿಕೃತ ವ್ಯಕ್ತಿಯಿಂದ ಕೊಡಬೇಕಾಗುತ್ತದೆ. ಈ ಮಧ್ಯೆ ಅದನ್ನು ಕಾಪಾಡಿಕೊಳ್ಳಬಹುದು. ಆದರೆ ಒಮ್ಮೆ ಸಿಪಿಐಎನ್ ಸೃಜಿತವಾದರೆ ಮತ್ತೆ ಮಾರ್ಪಾಟು ಮಾಡಲಾಗದು.

ಪ್ರಶ್ನೆ 17. ಚಲಾನ್‌ಗೆ ಸಂಬಂಧಿಸಿದಂತೆ ಮಾನ್ಯತೆ ಅವಧಿಯೂ ಇದೆಯೇ?

ಉತ್ತರ : ಹೌದು. ಚಲಾನ್ ಸೃಷ್ಟಿಯಾದ 15 ದಿನಗಳ ವರೆಗೂ ಮಾನ್ಯವಾಗಿರುತ್ತದೆ, ನಂತರದಲ್ಲಿ ಸಿಸ್ಟಮ್‌ನಿಂದ ಹೊರ ಹಾಕಲ್ಪಡುತ್ತದೆ. ಆದಾಗ್ಯೂ, ತೆರಿಗೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಇನ್ನೊಂದು ಚಲಾನ್ ಸೃಷ್ಟಿಸಿಕೊಳ್ಳಬಹುದು.

ಪ್ರಶ್ನೆ 18. ಸಿಪಿಐಎನ್ ಎಂದರೇನು?

ಉತ್ತರ: ಚಲಾನ್‌ ಸೃಷ್ಟಿಯ ಕಾಲದಲ್ಲಿ ಕೊಡಲಾಗುವ ಸಿಪಿಐಎನ್ ಎಂದರೆ ಕಾಮನ್‌ ಪೋರ್ಟಲ್ ಐಡೆಂಟಿಫಿಕೇಷನ್‌ ಸಂಖ್ಯೆ ಸಿಪಿಐಎನ್. ಚಲಾನ್ ಅನ್ನು ಪತ್ತೆ ಹಚ್ಚಲು ಇರುವ ವಿಶೇಷ 14ಡಿಜಿಟ್‌ ಸಂಖ್ಯೆ. ಮೇಲೆ ಹೇಳಿರುವಂತೆ ಚಲಾನ್‌ ಸೃಷ್ಟಿಯಾದ 15ದಿನಗಳವರೆಗೂ ಸಿಪಿಐಎನ್‌ ಮಾನ್ಯವಾಗಿರುತ್ತದೆ.

ಪ್ರಶ್ನೆ 19. ಸಿಐಎನ್ ಎಂದರೇನು? ಅದರ ಮಹತ್ವವೇನು?

ಉತ್ತರ:ಸಿಐಎನ್ಎಂದರೆಚಲಾನ್ಪತ್ತೆಹಚ್ಚುವಸಂಖ್ಯೆ. ಅದು ಸಿಪಿಐಎನ್ 14ಡಿಜಿಟ್‌ ಮತ್ತು ಬ್ಯಾಂಕ್‌ ಕೋಡ್ 3 ಡಿಜಿಟ್ ಒಳಗೊಂಡ 17 ಡಿಜಿಟ್ ಸಂಖ್ಯೆ. ಪ್ರಾಧಿಕೃತ ಬ್ಯಾಂಕುಗಳು ಅಥವಾ ಭಾರತೀಯ ರಿಜರ್ವ್ ಬ್ಯಾಂಕ್ (ಆರ್ಬಿಐ)ಮೂಲಕ ನಿಜ ರೂಪದಲ್ಲಿ ಪಾವತಿಯನ್ನು ಪಡೆದು, ಸಂಬಂಧಿತ ಸರ್ಕಾರದ ಖಾತೆಗೆ ವರ್ಗಾವಣೆ ಮಾಡಿದಾಗ ಸಿಐಎನ್ ಸಂಖ್ಯೆಯೂ ಸೃಷ್ಟಿಯಾಗುತ್ತದೆ. ಸಂಬಂಧಿತ ಸರ್ಕಾರದ ಖಾತೆಗೆ ಹಣ ಸಂದಾಯವಾಗಿರುವುದನ್ನು ಸೂಚಿಸುತ್ತದೆ. ತೆರಿಗೆದಾರರಿಗೆ ಮತ್ತು ಜಿಎಎಸ್‌ಟಿಎನ್‌ಕೆ ಪ್ರಾಧಿಕೃತ ಬ್ಯಾಂಕ್‌ ಮೂಲಕ ಸಿಐಎನ್‌ ಮಾಹಿತಿ ನೀಡಲಾಗುವುದು.

ಪ್ರಶ್ನೆ 20 : ತೆರಿಗೆದಾರರು ಮುಂಚಿನ ತಿಂಗಳುಗಳಿಗೂ ಸಂಬಂಧಿಸಿದಂತೆ ತೆರಿಗೆ ಬಾಧ್ಯತೆಯನ್ನು ಹೊಂದಿದ್ದರೆ, ಯಾವ ಕ್ರಮದಲ್ಲಿ ತೆರಿಗೆಯನ್ನು ಪಾವತಿಸಬೇಕು?

ಉತ್ತರ: ಪ್ರಸ್ತುತ ವಿವರಣಾ ಅವಧಿಯನ್ನು ಮೀರಿದ ತೆರಿಗೆ ಬಾಧ್ಯತೆಯೂ ಇದ್ದರೆ, ತೆರಿಗೆಯನ್ನು ಯಾವ ಕ್ರಮದಲ್ಲಿ ಪಾವತಿಸಬೇಕು ಎಂಬುದನ್ನು ಭಾಗ 35(8) ರಲ್ಲಿವಿವರಿಸಲಾಗಿದೆ. ಅಂತಹ ಸಂದರ್ಭಗಳಲ್ಲಿ, ಮುಂಚಿನ ಅವಧಿಗೆ ಅನ್ವಯಿಸುವಂತೆ ಮೊದಲು, ಸ್ವನಿರ್ಧಾರಿತ ತೆರಿಗೆ ಮತ್ತು ಬಡ್ಡಿಯನ್ನು, ನಂತರ ಪ್ರಸ್ತುತ ಅವಧಿಗೆ ಸ್ವನಿರ್ಧಾರಿತ ತೆರಿಗೆ ಮತ್ತು ಬಡ್ಡಿಯನ್ನು ಮತ್ತು ತದನಂತರ, ಭಾಗ51 ರಡಿಯಲ್ಲಿ ಖಚಿತಪಡಿಸಲಾದ ಬೇಡಿಕೆಯ ಮೊತ್ತವನ್ನೂ ಸೇರಿದಂತೆ; ಪಾವತಿಸಬೇಕಾದ ಬೇರೆ ಯಾವುದೇ ಮೊತ್ತವನ್ನು, ಪಾವತಿಸಬೇಕಾಗುತ್ತದೆ. ಈ ಕ್ರಮವನ್ನು ಅನಿವಾರ್ಯವಾಗಿ ಪಾಲಿಸಬೇಕು.

ಪ್ರಶ್ನೆ 21: ಈ-ಎಫ್‌ಪಿಬಿ ಎಂದರೇನು?

ಉತ್ತರ : ಈ ಎಫ್‌ಪಿಬಿ ಎಂದರೆ ಎಲೆಕ್ಟ್ರೋನಿಕ್ ಫೋಕಲ್ ಪಾಯಿಂಟ್ ಬ್ರ‍್ಯಾಂಚ್‌. ಜಿಎಸ್‌ಟಿ ಪಾವತಿಗಳನ್ನು ವಸೂಲು ಮಾಡಲು ಪ್ರಾಧಿಕೃತವಾದ ಬ್ಯಾಂಕುಗಳನ್ನು ಗುರುತಿಸಲಾಗಿವೆ. ಪ್ಯಾನ್ ಇಂಡಿಯ ವ್ಯವಹಾರಗಳಿಗೆಂದು ಪ್ರತಿಯೊಂದು ಪ್ರಾಧಿಕೃತ ಬ್ಯಾಂಕು ತನ್ನ ಒಂದು ಶಾಖೆಯನ್ನು ಈ-ಎಫ್ಪಿಬಿ ಆಗಿ ನಾಮಾಂಕಿಸುತ್ತದೆ. ಎಲ್ಲಾ ಸರ್ಕಾರಗಳಿಗೂ ಅನ್ವಯವಾಗುವಂತೆ ಪ್ರತಿಯೊಂದು ಪ್ರಮುಖ ಶೀರ್ಷೆಯಡಿಯೂ ಈ- ಎಫ್‌ಪಿಬಿ ಖಾತೆಗಳನ್ನು ತೆರೆಯಬೇಕಾಗುತ್ತದೆ. ಒಟ್ಟು 38 ಖಾತೆಗಳನ್ನು (ಸಿಜಿಎಸ್ಟಿ, ಐಜಿಎಸ್ಟಿಗೆ ಅನ್ವಯಿಸುವಂತೆ ಪ್ರತ್ಯೇಕ ಒಂದು ಮತ್ತು ಎಸ್‌ಜಿಎಸ್‌ಟಿಗೆ ಅನ್ವಯಿಸುವಂತೆ ಪ್ರತ್ಯೇಕ ಒಂದು ಖಾತೆಯನ್ನು ಪ್ರತ್ಯೇಕ ರಾಜ್ಯಗಳಿಗೂ ಮತ್ತು ಸಂಘ ಕ್ಷೇತ್ರ ಸರ್ಕಾರಗಳಿಗೂ ಅನ್ವಯಿಸುವಂತೆ) ತೆರೆಯಬೇಕು. ಜಿಎಸ್ಟಿ ಸಂಬಂಧವಾಗಿ, ಈ- ಎಫ್‌ಪಿಬಿಗೆ ಸಂದಾಯವಾದ ಯಾವುದೇ ಮೊತ್ತವನ್ನು ಈ- ಎಫ್‌ಪಿಬಿ ಮೂಲಕ ಚಾಲಿತ ಸರಿಯಾದ ಖಾತೆಗೆ ವರ್ಗಾವಣೆ ಮಾಡಲಾಗುವುದು. ಎನ್ಈಎಫ್‌ಟಿ / ಆರ್‌ಟಿಜಿಎಸ್ ವ್ಯವಹಾರಗಳಿಗೆ ಆರ್‌ಬಿಐ, ಈ- ಎಫ್‌ಪಿಬಿ ಆಗಿ ವರ್ತಿಸುತ್ತದೆ.

ಪ್ರಶ್ನೆ 22: ಟಿಡಿಎಸ್ ಎಂದರೇನು?

ಉತ್ತರ: ಟಿಡಿಎಸ್ ಎಂದರೆ ಮೂಲದಲ್ಲಿಯೇ ತೆರಿಗೆ ಕಡಿತ. ಭಾಗ37ರ ಉಪಬಂಧವು, ಪೂರೈಕೆದಾರರಿಗೆ 10ಲಕ್ಷಕ್ಕಿಂತಲೂ ಮಿಗಿಲಾದ ಒಪ್ಪಂದದ ಹಣ ಸಂದಾಯ ಮಾಡುವಂತಹ ಸೌಕರ್ಯವು ಸರ್ಕಾರ ಮತ್ತು ಸರ್ಕಾರದ ಉಪಕ್ರಮಗಳು ಹಾಗೂ ಅಧಿಸೂಚಿಸಿರುವ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಅಂತಹ ಸಂದಾಯಗಳನ್ನು ಮಾಡುವಾಗ ಸಂದಾಯ ಮಾಡಬೇಕಾದ ಸಂಬಂಧಿತ ಸರ್ಕಾರ/ಪ್ರಾಧಿಕಾರವು ಪೂರ್ಣಮೊತ್ತದಲ್ಲಿ ಶೇಕಡಾ1% ಮೊತ್ತವನ್ನು ಕಳೆದು ಸರಿಯಾದ ಜಿಎಸ್‌ಟಿ ಖಾತೆಗೆ ಜಮೆ ಮಾಡತಕ್ಕದ್ದು.

ಪ್ರಶ್ನೆ 23. ಪೂರೈಕೆದಾರರು ತಮ್ಮ ತೆರಿಗೆ ವಿವರಣೆಗಳನ್ನು ಸಲ್ಲಿಸುವಾಗ ಈ ಟಿಡಿಎಸ್ ಹೇಗೆ ನಿಭಾಯಿಸುವರು?

ಉತ್ತರ : ಸಂಬಂಧಿತ ಪೂರೈಕೆದಾರರ ಎಲೆಕ್ಟ್ರೋನಿಕ್ ಲೆಡ್ಜರ್ನಲ್ಲಿ ಯಾವುದೇ ಟಿಡಿಎಸ್ ಮೊತ್ತವು ಪ್ರದರ್ಶಿತವಾಗಿರುತ್ತದೆ. ಅವರು ಈ ಮೊತ್ತವನ್ನು ತಮ್ಮ ತೆರಿಗೆ, ಬಡ್ಡಿ, ಶುಲ್ಕ ಮತ್ತು ಇನ್ನಿತರ ಯಾವುದೇ ಮೊತ್ತದ ಪಾವತಿಗೆ ಇದನ್ನು ಉಪಯೋಗಿಸಿಕೊಳ್ಳಬಹುದು.

ಪ್ರಶ್ನೆ 24. ಟಿಡಿಎಸ್ ಕಳೆದಿರುವವರು ಅಂತಹ ಟಿಡಿಎಸ್ ಅನ್ನು ಹೇಗೆ ನಿಭಾಯಿಸುವರು?

ಉತ್ತರ : ಈ ಕೆಳಕಂಡಂತೆ ಟಿಡಿಎಸ್ ಅನ್ನು ಉಪಯೋಗಿಸಿಕೊಳ್ಳಬಹುದು :

 1. ಅಂತಹ ತೆರಿಗೆ ಕಳೆತ ಮಾಡಿರುವವರು ಖಂಡಿತವಾಗಿಯೂ ಎಮ್‌ಜಿಎಲ್‌ನ ಪರಿಶಿಷ್ಟIIIರ ಜೊತೆ ಪಠಿಸಲ್ಪಡುವ ಭಾಗ 19 ರಡಿಯಲ್ಲಿ ನೋಂದಾಯಿತರಾಗಬೇಕು. ಜಿಎಸ್‌ಟಿಆರ್ 7 ರಲ್ಲಿ ನಮೂದನೆಯಾಗಿರುವಂತೆ ಟಿಡಿಎಸ್ ವಸೂಲು ಮಾಡಿದ ತಿಂಗಳಿನ ಮುಂದಿನ ತಿಂಗಳ 10ನೇ ದಿನಾಂಕದೊಳಗೆ ಆ ಟಿಡಿಎಸ್‌ ಮೊತ್ತವನ್ನು ಪಾವತಿಸಬೇಕು.
 2. ಪೂರೈಕೆದಾರರ ನಗದು ಲೆಡ್ಜರ್‌ನಲ್ಲಿ ಅಂತಹ ಟಿಡಿಎಸ್‌ ಜಮೆ ಮೊತ್ತವು ಪ್ರದರ್ಶಿಸವಾಗಿರುತ್ತೆ.
 3. ಪೂರೈಕೆದಾರರಿಗೆ ಟಿಡಿಎಸ್ ಮೊತ್ತದ ಕಳೆತದ 5 ದಿನದೊಳಗಾಗಿ ಟಿಡಿಎಸ್ ಪ್ರಮಾಣ ಪತ್ರವನ್ನು ಜಾರಿಗೊಳಿಸಬೇಕಾಗುತ್ತದೆ, ಇಲ್ಲವೇ ದಿನಕ್ಕೆ ರೂ.100/-ಶುಲ್ಕದಂತೆ ಗರಿಷ್ಠ ಮೊತ್ತರೂ5000/-ವನ್ನು ಪೂರೈಕೆದಾರರಿಗೆ ಪಾವತಿಸಬೇಕಾಗುತ್ತದೆ.

ಪ್ರಶ್ನೆ 25. ಮೂಲದಲ್ಲಿ ವಸೂಲು ಮಾಡಿದ ತೆರಿಗೆ (ಟಿಸಿಎಸ್) ಎಂದರೇನು?

ಉತ್ತರ : ಎಮ್‌ಜಿಎಲ್ ನ ಭಾಗ 43ಸಿ ಯಲ್ಲಿ ಒಳಗೊಂಡಂತೆ ಕೇವಲ ಈ-ಕಾಮರ್ಸ್ ಆಪರೇಟರ್ ಗಳಿಗೆ ಮಾತ್ರ ಈ ಉಪಬಂಧವೂ ಅನ್ವಯವಾಗುತ್ತದೆ. ಪ್ರತಿಯೊಬ್ಬ ಈ-ಕಾಮರ್ಸ್ ಆಪರೇಟರ್‌ ಕೂಡ ಪೂರೈಕೆದಾರರಿಗೆ ಸಂದಾಯ ಮಾಡುವ ವಾಸ್ತವಿಕಪಾವತಿಯಲ್ಲಿ ಶೇಕಡಾ ಒಂದಿಷ್ಟು ಮೊತ್ತವನ್ನು ಕಳೆಯಬೇಕಾಗಿರುತ್ತದೆ (ಜಿಎಸ್‌ಟಿ ಕೌನ್ಸಿಲ್‌ ಮುಖಾಂತರ ನಂತರದಲ್ಲಿ ಅಧಿಸೂಚಿಸಲಾಗುವುದು). ಈ-ಕಾಮರ್ಸ್ ಆಪರೇಟರ್‌ ಮೂಲಕ ಹಿಡಿದಿರುವಂತಹ ಮೊತ್ತವನ್ನು ಸಂಬಂಧಿತ ಜಿಎಸ್‌ಟಿ ಖಾತೆಗೆ ಮುಂದಿನ ತಿಂಗಳ 10ನೇತಾರೀಕಿನ ಒಳಗೆ ವರ್ಗಾಯಿಸಬೇಕಾಗುತ್ತದೆ. ಪೂರೈಕೆದಾರರ ಎಲೆಕ್ಟ್ರೋನಿಕ್ ನಗದು ಲೆಡ್ಜರ್ ನಲ್ಲಿ ಹಾಗೆ ಜಮೆಯಾದ ಟಿಸಿಎಸ್ ಮೊತ್ತವು ಪ್ರದರ್ಶಿಸಲ್ಪಡುವುದು.

ಪ್ರಶ್ನೆ 26 : ಜಿಎಸ್‌ಟಿ ಎನ್ನಲ್ಲಿಜಿಎಸ್ಟಿಯನ್ನುಪಾವತಿಸಲುಕ್ರೆಡಿಟ್ಕಾರ್ಡ್ನ್ನುಮುಂಚಿತವಾಗಿನೋಂದಾಯಿಸಿಕೊಳ್ಳಬೇಕೆ?

ಉತ್ತರ:ಹೌದು.ತೆರಿಗೆದಾರರು ತೆರಿಗೆ ಪಾವತಿಗೆ ಉಪಯೋಗ ಮಾಡುವ ತಮ್ಮ ಕ್ರೆಡಿಟ್‌ ಕಾರ್ಡ್ ಅನ್ನು ಮುಂಚಿತವಾಗಿಯೇ ಸಾಮಾನ್ಯ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು, ಕ್ರೆಡಿಟ್ ಕಾರ್ಡ್ ಸೇವೆಯನ್ನು ಪೂರೈಸುವ ಪೂರೈಕೆದಾರರಿಂದ ಕ್ರೆಡಿಟ್ ಕಾರ್ಡ್ಗಳನ್ನು ಪರೀಕ್ಷಿಸುವ ಸಲುವಾಗಿ ಜಿಎಸ್ಟಿಎನ್ ಬ್ಯಾಂಕುಗಳಲ್ಲಿ ಪ್ರತ್ಯೇಕ ವ್ಯವಸ್ಥೆಗಳನ್ನು ನಿರ್ಮಿಸಲು ಜಿಎಸ್‌ಟಿಎನ್ ಯೋಜಿಸಬಹುದು. ಕ್ರೆಡಿಟ್ ಕಾರ್ಡ್ಗಳ ಮೂಲಕ ಯಾವುದೇ ಮೊತ್ತದ ಪರಿಮಿತಿ ಇಲ್ಲದೆಯೇ ವ್ಯವಹಾರವನ್ನು ಸುಲಭವಾಗಿ ಮಾಡಬಹುದು.

******

ವಿದ್ಯುನ್ಮಾನ ವಾಣಿಜ್ಯೋದ್ಯಮ (ವಿ-ವಾಣಿಜ್ಯ)

8. ವಿದ್ಯುನ್ಮಾನ ವಾಣಿಜ್ಯೋದ್ಯಮ (ವಿ-ವಾಣಿಜ್ಯ)

ಪ್ರಶ್ನೆ 1: ವಿದ್ಯುನ್ಮಾನ ವಾಣಿಜ್ಯೋದ್ಯಮ ಎಂದರೇನು?

ಉತ್ತರ: ಮಾದರಿ ಸರಕು ಮತ್ತು ಸೇವಾತೆರಿಗೆ ಕಾಯಿದೆ ((MGL)ಯ ಭಾಗ 43 43B(d) ಅನ್ವಯ ವಿ-ವಾಣಿಜ್ಯ ಎಂದರೆ ವಸ್ತುಗಳ ಮತ್ತು/ಅಥವಾ ಸೇವೆಗಳ ಸರಬರಾಜು ಅಥವಾ ಸಂದಾಯ, ಅಥವಾ ಒಂದು ವಿದ್ಯುನ್ಮಾನಮಾಹಿತಿ ಸಂಪರ್ಕಜಾಲ (network)ನ ಮುಖಾಂತರ ಅಂತರ್ಜಾಲವನ್ನು ಅವಲಂಬಿಸಿರುವ ಯಾವುದಾದರೂ ಒಂದು ತಂತ್ರಾಂಶವನ್ನು ಪಯೋಗಿಸಿಕೊಂಡು ಹಣಅಥವಾ ದತ್ತಾಂಶದರವಾನೆ, ಮೂಲತಃ ಅಂತರ್ಜಾಲವನ್ನು ಉಪಯೋಗಿಸಿಕೊಂಡು; ಅದೇ ತರಹ ಆದರೆ ಮಿಂಚಂಚೆ, ತತ್ಕ್ಷಣ ಸಂದೇಶರವಾನೆ, ಖರೀದಿಸಿದ ಸರಕುಗಳ ಬಂಡಿ, ವೆಬ್‌ ಸೇವೆಗಳು, ಸಾರ್ವತ್ರಿಕ ವಿವರಣೆ ಅನಾವರಣೆ ಮತ್ತು ಸಮೀಕರಣೆ (UDDI), ಕಡತವರ್ಗಾವಣೆಯಪ್ರೋಟೋಕಾಲ್(FTP) ಮತ್ತು ವಿದ್ಯುನ್ಮಾನ ದತ್ತಾಂಶ ವಿನಿಮಯಗಳಿಗೆ ಮಾತ್ರ ಸೀಮಿತವಾಗದೆ ಹಾಗೂ ಮೀನ್ಕಾಣ್ಕೆ (online)ಯ ಮುಖಾಂತರ ಹಣ ಪಾವತಿ ಆಗಿದೆಯೋ ಇಲ್ಲವೋ ಮತ್ತು ಅಂತಿಮವಾಗಿ ವಸ್ತುಗಳು/ಸೇವೆಗಳು ನಿರ್ವಹಣಾಕಾರನಿಂದ ತಲುಪಿದೆಯೋ ಇಲ್ಲವೋ ಎಲ್ಲವೂ ಒಳಗೊಂಡು.

ಪ್ರಶ್ನೆ 2: ವಿ-ವಾಣಿಜ್ಯ ನಿರ್ವಹಣಾಕಾರನೆಂದರೆ ಯಾರು?

ಉತ್ತರ: ಪ್ರತಿಯೊಬ್ಬ ವ್ಯಕ್ತಿ ಯಾರು ವಸ್ತುಗಳ ವಿಲೇವಾರಿ ಮತ್ತು/ಅಥವಾ ಸೇವಾ ಸೌಕರ್ಯಗಳ ಸರಬರಾಜನ್ನು ಸುಗಮಗೊಳಿಸುವ ಒಂದು ವಿದ್ಯುನ್ಮಾನ ವ್ಯವಸ್ಥೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ, ಸ್ವಾಯತ್ತೆಯನ್ನುಹೊಂದಿದ, ನಿರ್ವಹಣೆ ನಡೆಸುವ ಅಥವಾ ನಿಯಂತ್ರಿಸುವಂತಹವನು ಎಂದು ಒಉಐನ ಭಾಗ 43B (e) ವಿವರಿಸುತ್ತದೆ. ಅಲ್ಲದೇ ವಿ-ವ್ಯವಸ್ಥೆಯ ಮುಖಾಂತರ ಆ ತರಹದ ವಸ್ತುಗಳು ಮತ್ತು ಸೇವೆಗಳಿಗೆ ಸಂಭವನೀಯವಾಗಿ ಮಾಹಿತಿ ಅಥವಾ ಇತರ ಯಾವುದೇಸೇವೆಗಳನ್ನುನಿರ್ವಹಣೆಮಾಡುವವನ್ನುಕೂಡವಿ-ವಾಣಿಜ್ಯನಿರ್ವಹಣಾಕಾರನೆಂದುಪರಿಗಣಿಸುತ್ತದೆ.ಆದರೆ, ತನ್ನ ಸ್ವಂತ ಉಪಯೋಗಕ್ಕಾಗಿ ವಸ್ತುಗಳು/ಸೇವೆಗಳನ್ನು ವಿ-ವ್ಯವಸ್ಥೆಯ ಮುಖಾಂತರ ನಿರ್ವಹಿಸುವವನನ್ನು ವಿ-ವಾಣಿಜ್ಯ ನಿರ್ವಹಣಾಕಾರನೆಂದು ಪರಿಗಣಿಸುವುದಿಲ್ಲ. ಉದಾಹರಣೆಗೆ, ಅಮೇಜಾನ್ ಮತ್ತು ಫ್ಲಿಪ್ಕಾರ್ಟ್‌ಗಳು ವಿ-ವಾಣಿಜ್ಯ ನಿರ್ವಹಣಾಕಾರರು. ಏಕೆಂದರೆ ಅವರು ಅವರ ವ್ಯವಸ್ಥೆಯ ಮುಖಾಂತರ ವಾಸ್ತವಿಕವಾಗಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ (ಮಾರುಕಟ್ಟೆಯ ಸ್ಥಳ ಮಾದರಿ ಅಥವಾ ಪೂರ್ತಿ ಈಡೇರುವಿಕೆ ಮಾದರಿ ಎಂದು ಪ್ರಚಲಿತವಾಗಿದೆ). ಆದಾಗ್ಯೂ, ಟೈಟಾನ್‌ನ ಸ್ವಂತ ಜಾಲತಾಣದ ಮುಖಾಂತರ ಗಡಿಯಾರ/ಕೈಗಡಿಯಾರ ಮತ್ತು ಆಭರಣಗಳನ್ನು ಮಾರಾಟ ಮಾಡುತ್ತದೆ. ಆದರೆ ಇದನ್ನು ಈ ಅನುಬಂಧಯ ಅನ್ವಯದಲ್ಲಿ ವಿ-ವಾಣಿಜ್ಯ ನಿರ್ವಹಣಾಕಾರ ಎಂದುಪರಿಗಣಿಸುವುದಿಲ್ಲ. ಹಾಗೆಯೇ, ಅಮೇಜಾನ್ ಮತ್ತು ಫ್ಲಿಪ್ಕಾರ್ಟ್‌ಗಳನ್ನೂ ಕೂಡ ಅವರ ಸ್ವಂತ ಉಪಯೋಗಕ್ಕಾಗಿ ಮಾಡುವ ಪೂರೈಕೆಗಳಿಗೆ ಅವರನ್ನು ವಿ-ವಾಣಿಜ್ಯ ನಿರ್ವಹಣಾಕಾರ ಎಂದು ಪರಿಗಣಿಸಲಾಗುವುದಿಲ್ಲ (ಸರಕು ಸಂಗ್ರಹಣಾ ಮಾದರಿ).

ಪ್ರಶ್ನೆ 3: ವಿ-ವಾಣಿಜ್ಯ ನಿರ್ವಹಣಾಕಾರ ನೊಂದಾಯಿಕೊಳ್ಳಬೇಕಾದದ್ದು ಕಡ್ಡಾಯವೇ?

ಉತ್ತರ: ಹೌದು. MGL ಭಾಗ 19 r/w ಅನುಸೂಚನೆ-III ಆ ತರಹದ ಮಾರಾಟಗಾರರಿಗೆ ಪ್ರಾರಂಭ ವಿನಾಯಿತಿ ಇಲ್ಲವೆಂದು ಹೇಳುತ್ತದೆ ಮತ್ತು ಅವರು ಪೂರೈಕೆ ಮಾಡಿದ ಮೊಬಲಗನ್ನು ಪರಿಗಣಿಸದೆ ನೊಂದಾಯಿಸಿಕೊಳ್ಳಲೇಬೇಕೆಂದು ಹೇಳುತ್ತದೆ.

ಪ್ರಶ್ನೆ 4 : ವಿ- ವಾಣಿಜ್ಯೋದ್ಯಮದ ಮೂಲಕ ಸರಕು ಮತ್ತು ಸೇವೆಗಳನ್ನು ನಿರ್ವಹಿಸುವ ವಿ-ವಾಣಿಜ್ಯ ನಿರ್ವಹಣಾಕಾರ ಪ್ರಾರಂಭದ ವಿನಾಯಿತಿಗೆ ಅರ್ಹನೇ?

ಉತ್ತರ: ಒಉಐ ಭಾಗ 19 r/w ಅನುಸೂಚನೆ-III ಅಂತಹ ಮಾರಾಟಗಾರರಿಗೆ ಪ್ರಾರಂಭ ವಿನಾಯಿತಿ ಇಲ್ಲವೆಂದು ಸ್ಪಷ್ಟಪಡಿಸುತ್ತದೆ ಮತ್ತು ಮತ್ತು ಅವರು ಪೂರೈಕೆ ಮಾಡಿದ ಮೊಬಲಗನ್ನು ಪರಿಗಣಿಸದೆ ನೊಂದಾಯಿಸಿಕೊಳ್ಳಲೇಬೇಕೆಂದು ಹೇಳುತ್ತದೆ.

ಪ್ರಶ್ನೆ5: ಸಮುಚ್ಚಯ ನಿರ್ವಾಹಕ ಎಂದರೆ ಯಾರು?

ಉತ್ತರ: ಸಮುಚ್ಚಯ ನಿರ್ವಾಹಕ ಎಂದರೆ ಯಾರು ಸ್ವಾಯತ್ತೆಯನ್ನು ಹೊಂದಿ ಮತ್ತು ಒಂದು ವಿದ್ಯುನ್ಮಾನ ವ್ಯವಸ್ಥೆಯನ್ನು ನಿರ್ವಹಿಸುತ್ತಾನೋ ಮತ್ತು ಸಂಭಾವ್ಯ ಗ್ರಾಹಕ ತಿಳಿಸಲ್ಪಟ್ಟ ಸಮುಚ್ಚಯದ ಛಾಪಿರುವ ಹೆಸರು ಅಥವಾ ವೃತ್ತಿಯ ಹೆಸರಿನಲ್ಲಿರುವ ಸೇವೆಪಡೆಯುವುದಕ್ಕಾಗಿ ಸೇವೆ ನೀಡುವ ವ್ಯಕ್ತಿಗಳನ್ನು ವಿದ್ಯುನ್ಮಾನ ವ್ಯವಸ್ಥೆಯ ಮೂಲಕ ಸಂಪರ್ಕಿಸಿ ಸೇವೆಯನ್ನು ಪಡೆದುಕೊಳ್ಳುವಂತೆ ಮಾಡುತ್ತಾನೋ ಅವನನ್ನು ಸಮುಚ್ಚಯ ನಿರ್ವಾಹಕ ಎಂದು MGLನ ಭಾಗ 43B (a) ವಿವರಿಸುತ್ತದೆ. ಉದಾಹರಣೆಗೆ ಓಲಾ ಕ್ಯಾಬ್ಸ್‌ ಒಂದು ಸಮುಚ್ಚಯ ನಿರ್ವಾಹಕ ಸಂಸ್ಥೆ ಆಗಬಹುದು.

ಪ್ರಶ್ನೆ 6 : ಒಬ್ಬಸಮುಚ್ಚಯನಿರ್ವಾಹಕಜಿಎಸ್ಟಿಅಡಿಯಲ್ಲಿನೊಂದಾಯಿಸಿಕೊಳ್ಳಬೇಕಾಗಿದೆಯೇ?

ಉತ್ತರ: ಹೌದು. MGL ಭಾಗ 19 r/w ಅನುಸೂಚನೆ-III ಸಮುಚ್ಚಯ ನಿರ್ವಾಹಕರಿಗೆ ಪ್ರಾರಂಭ ವಿನಾಯಿತಿ ಇಲ್ಲವೆಂದು ಸ್ಪಷ್ಟಪಡಿಸುತ್ತದೆ ಮತ್ತು ಮತ್ತು ಅವರು ಪೂರೈಕೆ ಮಾಡಿದ ಮೊಬಲಗನ್ನು ಪರಿಗಣಿಸದೆ ನೊಂದಾಯಿಸಿಕೊಳ್ಳಲೇಬೇಕೆಂದು ಹೇಳುತ್ತದೆ.

ಪ್ರಶ್ನೆ 7: ಮೂಲದಲ್ಲಿತೆರಿಗೆವಸೂಲಿಎಂದರೇನು?

ಉತ್ತರ: MGL ಭಾಗ 43C (1)ರ ಅನ್ವಯ, ವಿ-ವಾಣಿಜ್ಯ ನಿರ್ವಹಣಾಕಾರ ತನ್ನ ಮುಖಾಂತರ ಮಾಡಿದ ವಸ್ತುಗಳ ಮಾರಾಟ ಮತ್ತು/ಅಥವಾ ನೀಡಿದ ಸೇವೆಗೆ, ವಾಸ್ತವವಾಗಿ ವಸ್ತುಮಾರಾಟ ಮಾಡುವ ಅಥವಾ ಸೇವೆಯನ್ನು ನೀಡುವ ಮಾರಾಟಗಾರನಿಗೆ ಪಾವತಿಸಬೇಕಾದ ಮೊತ್ತದಿಂದ ತೆರಿಗೆಯ ಮೊತ್ತವನ್ನು ವಸೂಲಿ (ಕಡಿತ) ಮಾಡಬೇಕೆಂದು ಹೇಳುತ್ತದೆ. ಈ ರೀತಿಯಾಗಿ ವಸೂಲಿ ಮಾಡಿದ ಮೊತ್ತವನ್ನು ಮೂಲದಲ್ಲಿ ವಸೂಲಿ ಮಾಡಿದ ತೆರಿಗೆ (TCS) ಎಂದು ಕರೆಯಲಾಗುತ್ತದೆ.

ಪ್ರಶ್ನೆ 8: ಯಾವಸಮಯ/ಕಾಲಾವಕಾಶದಲ್ಲಿ ವಿ-ವಾಣಿಜ್ಯ ನಿರ್ವಹಣಾಕಾರ ಆತರಹದ ಕಡಿತಗಳನ್ನು ಮಾಡಬಹುದು?

ಉತ್ತರ: ಆತರಹದ ವಸೂಲಿ/ಕಡಿತಗಳ ಸಮಯಗಳನ್ನು ಕೆಳಗೆ ನೀಡಿರುವ ಎರಡು ಸನ್ನಿವೇಶಗಳಿಗಿಂತ ಮೊದಲು ಮಾಡಬೇಕಾಗುತ್ತದೆ:

 • ವಾಸ್ತವವಾಗಿ ವಸ್ತುಗಳನ್ನು ಮತ್ತು/ಅಥವಾ ಸೇವೆಗಳನ್ನು ನಿರ್ವಹಿಸಿದ ಸೇವಾದರನ ಖಾತೆಗೆ ಮೊತ್ತವನ್ನು ಜಮೆ ಮಾಡುವ ಸಮಯದಲ್ಲಿ;
 • ಆತರಹದ ಸೇವಾದಾರನಿಗೆ ನಗದು ಅಥವಾ ಇನ್ಯಾವುದೇ ರೂಪದಲ್ಲಿ ಮೊತ್ತವನ್ನು ಸಂದಾಯ ಮಾಡಬೇಕಾದ ಸಮಯದಲ್ಲಿ.

ಪ್ರಶ್ನೆ 9: ಯಾವ ಸಮಯದೊಳಗೆವಿ-ವಾಣಿಜ್ಯನಿರ್ವಹಣಾಕಾರ ಆ ತರಹದ MGL ಅನ್ನು ಸರ್ಕಾರಿಖಾತೆಗೆ ಜಮೆ ಮಾಡಬೇಕು? ವಿ-ವಾಣಿಜ್ಯ ನಿರ್ವಹಣಾಕಾರ ಈ ಉದ್ದೇಶಕ್ಕಾಗಿ ಯಾವುದಾದರೂ ತೆರಿಗೆ ವಿವರಗಳನ್ನು ಸಲ್ಲಿಸಬೇಕೆ?

ಉತ್ತುರ: MGL ಭಾಗ 43 C (3)ರ ಅನ್ವಯ, ವಿ-ವಾಣಿಜ್ಯ ನಿರ್ವಹಣಾಕಾರ ವಸೂಲಿ ಮಾಡಿದ ಮೊತ್ತವನ್ನು ವಸೂಲಿ ಮಾಡಿದ ನಿರ್ದಿಷ್ಟ ತಿಂಗಳು ಮುಗಿದ 10 ದಿನಗಳೊಳಗೆ ಸಂಬಂಧಪಟ್ಟ ಸರ್ಕಾರದ ಖಾತೆಗೆ ಜಮಾ ಮಾಡಬೇಕು. ಅಷ್ಟೇ ಅಲ್ಲದೆ MGL ಭಾಗ43 C (4)ರಅನ್ವಯ,ವಿ-ವಾಣಿಜ್ಯ ನಿರ್ವಹಣಾಕಾರ ವಿದ್ಯುನ್ಮಾನದ ಮೂಲಕ ಜಾಲತಾಣದ ಮೂಲಕ ಹೊರಗೆ ಮಾರಾಟ ಮಾಡಿದ ವಿವರಗಳನ್ನು ದಾಖಲು ಮಾಡಬೇಕು, ಅಂದರೆ ಆ ನಿರ್ದಿಷ್ಟ ತಿಂಗಳಿಗೆ ಸಂಬಂಧಪಟ್ಟ ಮಾರಾಟದ ಮಾಹಿತಿಗನುಸಾರವಾಗಿ ಆ ನಿರ್ದಿಷ್ಟ ತಿಂಗಳು ಕಳೆದ 10 ದಿನಗಳೊಳಗಾಗಿ. ಈ ವಿವರಗಳ ಮಾಹಿತಿಯಲ್ಲಿ ವಾಸ್ತವವಾಗಿ ಸರಬರಾಜು ಮಾಡಿದ ಸರಬರಾಜುಗಾರರ ಹೆಸರುಗಳು, ಅವರಿಗೆ ಸಂಬಂಧಪಟ್ಟ ಮಾರಾಟ/ಸೇವೆ ಮತ್ತು ಅವರ ಪರವಾಗಿ ವಸೂಲಿ ಮಾಡಿದ ಮೊತ್ತವನ್ನು ನಮೂಧಿಸಬೇಕು. ಈ ಮಾಹಿತಿಗೆ ಸಂಬಂಧಪಟ್ಟ ಹಾಗೆ ರೂಪು ಮತ್ತು ವಿಧಾನಗಳನ್ನು ಜಿಎಸ್ಟಿ ಯಲ್ಲಿ ನಿಗದಿ ಮಾಡಲಾಗುತ್ತದೆ.

ಪ್ರಶ್ನೆ 10. ವಾಸ್ತವಿಕ ಪೂರೈಕೆದಾರರು ಟಿಸಿಎಸ್ ಜಮೆಯ ಲಾಭವನ್ನು ಹೇಗೆ ಪಡೆಯಬಹುದು?

ಉತ್ತರ : ಆಪರೇಟರ್‌ ಮುಲಕ ಸರ್ಕಾರಿ ಖಾತೆಗೆ ಜಮೆ ಮಾಡಿದ ಟಿಸಿಎಸ್‌ನ ಮೊತ್ತವು ವಾಸ್ತವಿಕ ನೋಂದಾಯಿತ ಪೂರೈಕೆದಾರರ ನಗದು ಲೆಡ್ಜ್‌ರ್‌ನಲ್ಲಿ ಗುರುತಾಗಿರುತ್ತದೆ. ವಾಸ್ತವಿಕ ಪೂರೈಕೆದಾರರಿಂದ ಪೂರೈಕೆಯಾದ ಸರಕು/ಸೇವೆಗಳ ತೆರಿಗೆ ಬಾಧ್ಯತೆಯ ಸಮಯದಲ್ಲಿ ಇದನ್ನು ಬಳಸಬಹುದು.

ಪ್ರಶ್ನೆ 11: ವಿ-ವಾಣಿಜ್ಯ ನಿರ್ವಹಣಾಕಾರ ಮಾಹಿತಿಯನ್ನು ಸರಕಾರಕ್ಕೆ ನೀಡಬೇಕೆ?

ಉತ್ತರ: ಹೌದು. MGL ಭಾಗ 43 C(10)ರ ಅನ್ವಯ, ಜಂಟಿ ಆಯುಕ್ತರಿಗಿಂತ ಕಡಿಮೆ ದರ್ಜೆಯಲ್ಲಿಲ್ಲದಿರುವ ಅಧಿಕಾರಿ ವಿ- ವಾಣಿಜ್ಯ ನಿರ್ವಹಣಾಕಾರ ಈ ಕೆಳಗೆ ಸಂಬಂಧ ಪಟ್ಟ ವಿವರಗಳನ್ನು ನೀಡಬೇಕೆಂದು ಕೇಳಬಹುದು:

(ಅ) ಯಾವುದೇ ಸಮಯದಲ್ಲಿ ವಿ-ವಾಣಿಜ್ಯನಿರ್ವಹಣಾಕಾರ ವಸ್ತುಗಳನ್ನು ಮಾರಾಟ ಮಾಡಿದ/ಸೇವೆಯನ್ನು ಸಲ್ಲಿಸಿದ ವಿವರಗಳು;

(ಅ) ವಾಸ್ತವವಾಗಿ ಸರಬರಾಜು ಮಾಡುವವನ ಸುಪರ್ದಿಯಲ್ಲಿ, ಹೆಚ್ಚುವರಿ ಉಗ್ರಾಣ ಎಂದು ವಿ-ವಾಣಿಜ್ಯ ನಿರ್ವಹಣಾಕಾರ ಘೋಷಿಸಿರುವ ಮತ್ತು ಅವನಿಗೆ ಸೇರಿದ ಯಾವುದೇ ಗೋದಾಮು ಅಥವಾ ಮಳಿಗೆಯಲ್ಲಿ ಸಂಗ್ರಹಿಸಿರುವ ದಾಸ್ತಾನಿನವಿವರಗಳು. ವಿ-ವಾಣಿಜ್ಯ ನಿರ್ವಹಣಾಕಾರನಿಗೆ ಅಂತಹ ಮಾಹಿತಿಯನ್ನು ನೀಡಿ ಎಂದು ಸೂಚನಾ ಪತ್ರವನ್ನು ಜಾರಿ ಮಾಡಿದ 5 ದಿನಗಳೊಳಗಾಗಿ ಮೇಲೆ ತಿಳಿಸಿದ ವಿವರಗಳನ್ನು ನೀಡಬೇಕು. ಈ ವಿವರಣೆಯನ್ನು ನೀಡಲು ತಪ್ಪಿದಲ್ಲಿ, ದಂಡ ಪಾವತಿಸಬೇಕಾಗುತ್ತದೆ ಮತ್ತು ದಂಡವನ್ನು ರೂ.25,000ದ ವರೆಗೂ ವಿಸ್ತರಿಸಬಹುದು.

ಪ್ರಶ್ನೆ 12 : ವಿ-ವಾಣಿಜ್ಯ ನಿರ್ವಹಣಾಕಾರ ಯಾವುದಾದರೂ ಮಾಹಿತಿಯ ವಿವರಗಳನ್ನು ನೀಡಬೇಕೇ? ಆ ಮಾಹಿತಿಯ ವಿವರಗಳಲ್ಲಿ ಯಾವ ಯಾವ ವಿವರಗಳನ್ನು ನೀಡಬೇಕು?

ಉತ್ತರ: ಹೌದು, MGL ಭಾಗ 43 C(4)ರ ಅನ್ವಯ, ಪ್ರತಿಯೊಬ್ಬ ವಿ-ವಾಣಿಜ್ಯ ನಿರ್ವಹಣಾಕಾರ ಒಂದು ಮಾಹಿತಿ ವಿವರದ ಪಟ್ಟಿಯನ್ನು ವಿದ್ಯುನ್ಮಾನದ ಮೂಲಕ ನೀಡಬೇಕು. ಅದರಲ್ಲಿ ನಿರ್ದಿಷ್ಟ ತಿಂಗಳಿನಲ್ಲಿ ತಾನು ಮಾರಾಟ ಮಾಡಿದ ವಸ್ತುಗಳು ಮತ್ತು/ಅಥವಾ ಸಲ್ಲಿಸಿದ ಸೇವೆಗೆ ಮೂಲದಲ್ಲಿ ವಸೂಲಿ ಮಾಡಿದ ತೆರಿಗೆಯ ಮೊತ್ತವನ್ನು ನಮೂದಿಸಿ ನಿರ್ದಿಷ್ಟ ತಿಂಗಳು ಕಳೆದು 10 ದಿನಗಳೊಳಗಾಗಿ ಸಲ್ಲಿಸಬೇಕು. ಮಾಹಿತಿ ವಿವರದ ಪಟ್ಟಿಯಲ್ಲಿ, ಇತರ ವಿಷಯಗಳ ನಡುವೆ, ಎಲ್ಲ ವಸ್ತುಗಳ ಮಾರಾಟ ಮತ್ತು/ಅಥವಾ ಸಲ್ಲಿಸಿದ ಸೇವೆಗೆ ಪ್ರತಿಯೊಬ್ಬ ಸರಬರಾಜುದಾರನ ಪರವಾಗಿ ವಿ-ವಾಣಿಜ್ಯ ನಿರ್ವಹಣಾಕಾರ ಪಡೆದುಕೊಂಡ ಹಣದ ಮೊತ್ತ ಮತ್ತು ನಿರ್ದಿಷ್ಟ ತಿಂಗಳಿನಲ್ಲಿ ಮಾಡಿದ ಮಾರಾಟ/ಸೇವೆಯ ವಿವರಗಳು ದಾಖಾಲಾಗಿರಬೇಕು.

ಪ್ರಶ್ನೆ 13 : ವಿ-ವಾಣಿಜ್ಯದ ವ್ಯವಸ್ಥೆಯಲ್ಲಿ ಸರಿಸಮಾನತೆಯ ಪರಿಕಲ್ಪನೆ ಏನು ಮತ್ತು ಇದು ಹೇಗೆ ಕಾರ್ಯಸಿದ್ಧಿಯಾಗುತ್ತದೆ?

ಉತ್ತರ: MGL ಭಾಗ 43C (6)ರ ಅನ್ವಯ, ಒಂದು ನಿರ್ದಿಷ್ಟ ತಿಂಗಳಿನಲ್ಲಿ ಪ್ರತಿಯೊಬ್ಬ ವಿ-ವಾಣಿಜ್ಯ ನಿರ್ವಹಣಾಕಾರ ಮಾಡಿದ ಮಾರಾಟಗಳು ಮತ್ತು ವಸೂಲಿ ಮಾಡಿದ ಮೊತ್ತ ಮತ್ತು ಆತನು ತನ್ನ ಮಾಹಿತಿ ವಿವರಣಾ ಪಟ್ಟಿಯಲ್ಲಿ ನಮೂದಿಸಿದ ವಿವರಗಳನ್ನು, ವಾಸ್ತವ ಸರಬರಾಜುಗಾರ ಭಾಗ 27ರಲ್ಲಿ ಸಲ್ಲಿಸಿದ ನಿರ್ದಿಷ್ಟ ತಿಂಗಳಲ್ಲಿ ಹೊರಸಾಗಿಸಿದ ಮಾರಾಟ ವಸ್ತುಗಳ ಮೇಲೆ ವಸೂಲಿ ಮಾಡಿದ ತೆರಿಗೆಯ ಸಪ್ರಮಾಣ ವಿವರಗಳೊಂದಿಗೆ ತುಲನೆ ಮಾಡಲಾಗುತ್ತದೆ. ಒಂದು ವೇಳೆ ವಿ-ವಾಣಿಜ್ಯ ನಿರ್ವಹಣಾಕಾರ ಸಲ್ಲಿಸಿದ ವಿವರಗಳು ಮತ್ತು ವಾಸ್ತವ ಸರಬರಾಜುಗಾರ ಸಲ್ಲಿಸಿದ ವಿವರಗಳು ತಾಳೆ ಹೊಂದದಿದ್ದಲ್ಲಿ ಇಬ್ಬರಿಗೂ ಕೂಡ ವಿವರಗಳಲ್ಲಿ ಕಂಡು ಬಂದ ವ್ಯತ್ಯಾಸಗಳನ್ನು ತಿಳಿಸಲಾಗುತ್ತದೆ.

ಪ್ರಶ್ನೆ 14: ಒಂದು ವೇಳೆ ವಿವರಗಳು ಹೊಂದಾಣಿಕೆ ಆಗದೆ ಹಾಗೆಯೇ ಉಳಿದುಬಿಟ್ಟರೆ ಏನಾಗುತ್ತದೆ?

ಉತ್ತರ: MGL ಭಾಗ 43C (6)ರ ಅನ್ವಯ, ಒಂದು ಮಾರಾಟಕ್ಕೆ ಸಂಬಂಧಿಸಿದ ಹಾಗೆ ಸಂದಾಯವಾದ ಹಣದ ಮೊತ್ತದಲ್ಲಿ ಕಂಡುಬಂದ ವ್ಯತ್ಯಾಸವನ್ನು ವಾಸ್ತವ ಮಾರಾಟಗಾರನಿಗೆ ತಿಳಿಸಿ, ಅದೋಷವನ್ನು ನಿರ್ದಿಷ್ಟ ತಿಂಗಳಿನ ಸಪ್ರಮಾಣ ವಿವರದಲ್ಲಿ ಆ ನಿರ್ದಿಷ್ಟ ತಿಂಗಳಿಗೆ ಸಂಬಂಧಪಟ್ಟ ಮಾರಾಟದ ದೋಷಪೂರಿತ ವಿವರವನ್ನು ಸರಿಪಡಿಸದೇ ಇದ್ದಲ್ಲಿ, ಅದನ್ನುದೋಷ ಕಂಡುಬಂದ ನಿರ್ದಿಷ್ಟ ತಿಂಗಳಿನ ನಂತರದ ಮುಂದಿನ ತಿಂಗಳಿನ ಹೊರ ಮಾರಾಟದ ತೆರಿಗೆ ಪಾವತಿಗೆ ಸೇರಿಸಲಾಗುತ್ತದೆ. ಯಾವ ಸಂಬಂಧ ಪಟ್ಟವಾಸ್ತವ ಮಾರಾಟಗಾರನ ಸಪ್ರಮಾಣ ವಿವರದಲ್ಲಿ ಈ ವ್ಯತ್ಯಾಸ ಕಂಡುಬಂದಿದೆಯೋ ಮತ್ತು ಅದನ್ನು ಹೊರಮಾರಾಟದ ತೆರಿಗೆ ಪಾವತಿಗೆ ಸೇರಿಸಲಾಗಿದೆಯೋ ಆತಆಮಾರಾಟಕ್ಕೆ ಸಂಬಂಧಪಟ್ಟ ತೆರಿಗೆಯ ಜೊತೆ ಭಾಗ36ರ ಉಪ-ಭಾಗ(1)ರಲ್ಲಿನ ಮೂದಿಸಿರುವ ಬಡ್ಡಿದರದಂತೆ ಅಂತಹತೆರಿಗೆ ಪಾವತಿಸದೇ ಇದ್ದ ದಿನದಿಂದ ವಾಸ್ತವವಾಗಿ ಪಾವತಿಸುವ ದಿನಾಂಕದವರೆಗಿನ ಬಡ್ಡಿಯ ಸಮೇತ ಪಾವತಿಸಬೇಕಾಗುತ್ತದೆ.

*****

ಬಿಡಿಗೆಲಸ

9. ಬಿಡಿಗೆಲಸ

ಪ್ರಶ್ನೆ 1: ಬಿಡಿಗೆಲಸ ಎಂದರೇನು?

ಉತ್ತರ: ಮಾದರಿ ಸರಕು ಮತ್ತು ಸೇವಾ ತೆರಿಗೆ ಕಾಯಿದೆ (MGL))ಯ ಭಾಗ2 (62); “ಬಿಡಿಗೆಲಸ”ಎಂದರೆ ಒಬ್ಬ ವ್ಯಕ್ತಿ ತನ್ನ ಸ್ವಾಮ್ಯವಲ್ಲದ ಮತ್ತೊಬ್ಬನೊಂದಾಯಿತ ತೆರಿಗೆಗಾರನ ಸ್ವಾಮ್ಯದ ವಸ್ತುವನ್ನು ಯಾವುದಾದರೂ ಸಂಸ್ಕರಣೆಗೆ ಅಥವಾ ಪ್ರಕ್ರಿಯೆಯ ಕೆಲಸದ ಜವಾಬ್ದಾರಿ ತೆಗೆದುಕೊಳ್ಳುವುದು ಎಂದು ಹೇಳುತ್ತದೆ ಮತ್ತು “ಬಿಡಿ-ಕೆಲಸಗಾರ” ಎನ್ನುವ ಪದಗುಚ್ಛವನ್ನು ಅದೇ ರೀತಿ ಅರ್ಥೈಸಬೇಕು. ಈ ಅ ರ್ಥಪ್ರಕಟಣಾ ಪತ್ರಸಂಖ್ಯೆ.214/86ಮತ್ತು CE ದಿನಾಂಕ 23ನೇ ಮಾರ್ಚ್,1986ರಲ್ಲಿ ತಿದ್ದುಪಡಿಯಲ್ಲಿ ಕೊಟ್ಟಿರುವುದಕ್ಕಿಂತ ಹೆಚ್ಚುವ್ಯಾಪಕವಾಗಿದೆ; ಇದರಲ್ಲಿ ಬಿಡಿಗೆಲಸವನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂದರೆ ಬಿಡಿಗೆಲಸದ ಪ್ರಕ್ರಿಯೆ ಕೂಡ ಒಂದು ಉತ್ಪಾದನಾ ಪ್ರಕ್ರಿಯೆಯೇ ಎನ್ನುವುದನ್ನು ಖಚಿತಪಡಿಸಲಾಗಿದೆ. ಹೀಗೆ, ಬಿಡಿಗೆಲಸದ ಅರ್ಥವೇ ಉದ್ದೇಶಿತ ಸರಕು ಮತ್ತು ಸೇವಾತೆರಿಗೆ ಕಾಯಿದೆಯ (ಜಿಎಸ್ಟಿ) ಚಾಲ್ತಿಯ ಸಮಯದಲ್ಲಿ ಬಿಡಿಗೆಲಸಕ್ಕೆ ಸಂಬಂಧಪಟ್ಟ ತೆರಿಗೆಯ ಮೂಲ ಯೋಜನೆಯಲ್ಲಿನ ಬದಲಾವಣೆಯನ್ನು ಅಭಿವ್ಯಕ್ತಿಸುತ್ತದೆ.

ಪ್ರಶ್ನೆ 2: ತೆರಿಗೆ ಪಾವತಿ ಮಾಡುವ ವ್ಯಕ್ತಿ ಒಬ್ಬ ಬಿಡಿ-ಕೆಲಸಗಾರನಿಗೆ ಕಳುಹಿಸಿದ ವಸ್ತುಗಳನ್ನು ಸರಬರಾಜುಎಂದುಪರಿಗಣಿಸಿ ಜಿಎಸ್ಟಿ ಪಾವತಿಸಬೇಕಾಗುತ್ತದೆಯ? ಏಕೆ?

ಉತ್ತರ: ಇಲ್ಲ. ಇದನ್ನು ಸರಬರಾಜು ಎಂದು ಪರಿಗಣಿಸಲಾಗುವುದಿಲ್ಲ. MGLನ ತಪಸೀಲು ಪರಿಚ್ಛೇದ 5ರ ಅನುಬಂಧಗನುಸಾರ ನೊಂದಾಯಿತ ತೆರಿಗೆದಾರ (ಮೂಲ) ಬಿಡಿಗೆಲಸಗಾರನಿಗೆ ಸರಬರಾಜು ಮಾಡಿದಂತಹ ವಸ್ತುಗಳನ್ನು ಭಾಗ 43 A ಅನ್ವಯ ಸರಬರಾಜು ಎಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ನೊಂದಾಯಿತ ತೆರಿಗೆದಾರ ಬಿಡಿಗೆಲಸಗಾರನಿಗೆ ಸರಬರಾಜು ಮಾಡಿದ ವಸ್ತುಗಳ ಮೇಲೆ ಜಿಎಸ್‌ಟಿ ಅನ್ವಯಿಸುವುದಿಲ್ಲ ಎಂದು ನಿರ್ಣಯಿಸಬಹುದು.

ಪ್ರಶ್ನೆ 3: ಒಬ್ಬ ನೊಂದಾಯಿತ ತೆರಿಗೆದಾರ (ಮೂಲ) ತನ್ನ ಬಿಡಿಗೆಲಸಗಾರನಿಗೆ ತೆರಿಗೆ ಪಾವತಿಸದೇ ಕಳಿಸಬಹುದೆ?

ಉತ್ತರ: ಕಳಿಸಬಹುದು. MGLನ ಭಾಗ43 A ಒಬ್ಬ ನೊಂದಾಯಿತ ತೆರಿಗೆದಾರ (ಮೂಲ) ತೆರಿಗೆ ಅನ್ವಯಿಸುವ ವಸ್ತುಗಳನ್ನು ಬಿಡಿಗೆಲಸಕ್ಕಾಗಿ ಬಿಡಿಗೆಲಸಗಾರನಿಗೆ ತೆರಿಗೆಪಾವತಿಸದೇ ಕಳುಹಿಸುವುದಕ್ಕೆ ಅವಕಾಶ ನೀಡುತ್ತದೆ. ಕೆಲವು ಗೊತ್ತುಪಾಡುಗಳಿಗೊಳಪಟ್ಟು ಅವನು ಒಬ್ಬ ಬಿಡಿಗೆಲಸಗಾರನಿಂದ ಮತ್ತೊಬ್ಬ ಬಿಡಿಗೆಲಸಗಾರನಿಗೂ ಸಹಕಳುಹಿಸಬಹುದು. ಇಲ್ಲಿ ಗಮನಿಸಬೇಕಾದ ಆಂಶಭಾಗ 43Aಯ ಅನುಬಂಧಗಳು ಬಿಡಿಗೆಲಸಕ್ಕೆ ಕಳುಹಿಸಬೇಕೆಂದಿರುವ ತೆರಿಗೆಯಿಲ್ಲದ ಅಥವಾ ತೆರಿಗೆಮುಕ್ತ ವಸ್ತುಗಳಿಗೆ ಅನ್ವಯಿಸುವುದಿಲ್ಲ.

ಪ್ರಶ್ನೆ 4: ಬಿಡಿಗೆಲಸಗಾರ ನೊಂದಾಯಿಸಿಕೊಳ್ಳಬೇಕೇ?

ಉತ್ತರ : ಹೌದು. ಬಿಡಿಗೆಲಸಗಾರ ಸೇವೆಯನ್ನು ಒದಗಿಸುತ್ತಿರುವುದರಿಂದ, ಅವನ ವಹಿವಾಟಿನ ಒಟ್ಟು ಮೊತ್ತ ಅಧಿಕೃತ ಮೊತ್ತವನ್ನು ಮೀರಿದಲ್ಲಿ, ಅವನು ನೊಂದಾಯಿಸಕೊಳ್ಳಬೇಕಾಗುತ್ತದೆ.

ಪ್ರಶ್ನೆ 5: ಬಿಡಿಗೆಲಸಗಾರನ ಕಟ್ಟಡ/ಸ್ಥಳದಿಂದ ಮೂಲ ಸರಬರಾಜುಗಾರ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ಸರಬರಾಜು ಮಾಡಿದಲ್ಲಿ ಅದನ್ನು ಬಿಡಿಗೆಲಸಗಾರನ ಮೂಲ ವಹಿವಾಟಿನ ಮೊತ್ತಕ್ಕೆ ಸೇರಿಸಲಾಗುತ್ತದೆಯೇ?

ಉತ್ತರ:ಇಲ್ಲ. ಇದನ್ನು ಮೂಲ ಸರಬರಾಜುಗಾರನ ವಹಿವಾಟನ ಮೊತ್ತಕ್ಕೆ ಸೇರಿಸಲಾಗುತ್ತದೆ.

ಪ್ರಶ್ನೆ 6: ಮೂಲಸರಬರಾಜುಗಾರ ತನ್ನ ಕಟ್ಟಡ/ಸ್ಥಳಕ್ಕೆ ಪೂನಃ ತಂದುಕೊಳ್ಳದೇ ಬಿಡಿಗೆಲಸಗಾರನ ಕಟ್ಟಡ/ಸ್ಥಳದಿಂದ ವಸ್ತುಗಳನ್ನು ನೇರವಾಗಿ ಸರಬರಾಜುಮಾಡಬಹುದೇ?

ಉತ್ತರ: ಮಾಡಬಹುದು; ಆದರೆ ಇದಕ್ಕೆ ಒಂದು ಉಪವಿಧಿಯಿದೆ (rider). ಮೂಲ ಸರಬರಾಜುಗಾರ ಬಿಡಿಗೆಲಸಗಾರನ ಕಟ್ಟಡ/ಸ್ಥಳವನ್ನು ತನಗೆ ಸೇರಿದ ಇನ್ನೊಂದು ವಹಿವಾಟಿನ ಸ್ಥಳ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿರಬೇಕು ಅಥವಾ ಎಲ್ಲಿ ಬಿಡಿಗೆಲಸಗಾರ ನೊಂದಾಯಿಸಿಕೊಂಡಿದ್ದಾನೋ ಅಲ್ಲಿ ಅಥವಾ ಎಲ್ಲಿ ವಸ್ತುಗಳನ್ನು ಘೋಷಿಸಲಾಗಿದೆಯೋ ಅಲ್ಲಿ.

ಪ್ರಶ್ನೆ 7: ಯಾವ ಸಂಧರ್ಭಗಳಲ್ಲಿ ಮೂಲ ಸರಬರಾಜುಗಾರ ವಸ್ತುಗಳನ್ನು ಬಿಡಿಗೆಲಸಗಾರನ ಕಟ್ಟಡ/ಸ್ಥಳದಿಂದ ನೇರವಾಗಿ ಸರಬರಾಜು ಮಾಡಬಹುದು?

ಉತ್ತರ: ಎರಡು ಸಂಧರ್ಭಗಳಲ್ಲಿ ಬಿಡಿಗೆಲಸಗಾರನ ಕಟ್ಟಡ/ಸ್ಥಳವನ್ನು ತನ್ನ ಇನ್ನೊಂದು ವಹಿವಾಟಿನ ಸ್ಥಳ ಎಂದು ಘೋಷಿಸದೆಯೇ ಮೂಲ ಸರಬರಾಜುಗಾರ ನೇರವಾಗಿ ಬಿಡಿಗೆಲಸಗಾರನ ಕಟ್ಟಡ/ಸ್ಥಳದಿಂದ ಸರಬರಾಜುಮಾಡಬಹುದು ಅಂದರೆ, ಬಿಡಿಗೆಲಸಗಾರ ನೊಂದಾಯಿತ ತೆರಿಗೆದಾರನಾಗಿರಬೇಕು ಅಥವಾ ಮೂಲ ಸರಬರಾಜುಗಾರ ಈ ತರಹದ ವಸ್ತುಗಳನ್ನು, ಅಂದರೆ ಈ ಸಂಬಂಧದಲ್ಲಿ ಘೋಷಿಸಲಾದ ಅಥವಾ ಘೋಷಿಸಲ್ಪಡುವ ವಸ್ತುಗಳು, ಸರಬರಾಜು ಮಾಡುವುದರಲ್ಲಿ ನಿರತನಾಗಿರಬೇಕು.

ಪ್ರಶ್ನೆ 8 : ಬಿಡಿಗೆಲಸಗಾರನಿಗೆ ಕಳುಹಿಸಿದ ಒಳಪೂರೈಕೆ/ಮೂಲವಸ್ತುಗಳಿಗೆ ಸಂಬಂಧಪಟ್ಟಂತೆ ಸಂಬಂಧಪಟ್ಟ ಹೂಡುವಳಿ ತೆರಿಗಾ ಜಮೆಯನ್ನು ಪಡೆದುಕೊಳ್ಳುವ ಅನುಬಂಧಗಳು ಯಾವುವು?

ಉತ್ತರ: MGLನಲ್ಲಿ, ಬಿಡಿಗೆಲಸಗಾರನಿಗೆ ಕಳುಹಿಸಿದ ಒಳ ಪೂರೈಕೆ/ಮೂಲ ವಸ್ತುಗಳಿಗೆ ಸಂಬಂಧಪಟ್ಟಂತೆಸಂಬಂಧಪಟ್ಟ ಹೂಡುವಳಿ ತೆರಿಗಾ ಜಮೆಯನ್ನು ಪಡೆದುಕೊಳ್ಳುವುದನ್ನು ಸ್ಪಷ್ಟವಾಗಿ ಭಾಗ 16 Aನಲ್ಲಿ ವ್ಯವಹರಿಸಲಾಗಿದೆ. ಇದು ಒಳ ಪೂರೈಕೆ/ಮೂಲ ವಸ್ತುಗಳಿಗೆ ಪಾವತಿಸಿದ ತೆರಿಗೆಗಳ ಜಮೆಯನ್ನು ಈ ಕೆಳಗಿನ ವಿಧಾನದಲ್ಲಿ ಪಡೆಯಬಹುದು: ಬಿಡಿಕೆಲಸಕ್ಕಾಗಿ ಕಳುಹಿಸಿದ ಒಳಪೂರೈಕೆಯ ವಸ್ತುಗಳನ್ನು ಕೆಲಸ ಪೂರ್ಣಗೊಂಡನಂತರ ಕಳುಹಿಸಿದ ದಿನಾಂಕದಿಂದ 180ದಿನಗಳ ಒಳಗಾಗಿ ಮತ್ತೆ ಹಿಂದಕ್ಕೆ ಪಡೆದಲ್ಲಿ ಮೂಲ ಸರಬರಾಜುಗಾರ ಹೂಡುವಳಿ ತೆರಿಗೆ ಜಮೆಯನ್ನು ಪಡೆಯಬಹುದು. ಒಂದು ವೇಳೆ ಒಳ ಪೂರೈಕೆ ವಸ್ತುಗಳನ್ನು ಬಿಡಿಗೆಲಸಗಾರನಿಗೆ ನೇರವಾಗಿ ಸರಬರಾಜು ಮಾಡಿದ್ದಲ್ಲಿ, ವಸ್ತುಗಳು ಬಿಡಿಗೆಲಸಗಾರನಿಗೆ ಸೇರಿದ ದಿನಾಂಕದಿಂದ 180 ದಿನಗಳನ್ನು ಎಣಿಸಲಾಗುತ್ತದೆ. ಒಂದು ವೇಳೆ ನಿರ್ಧಾರಿತ 180 ದಿನಗಳಲ್ಲಿ ವಸ್ತುಗಳನ್ನು ಹಿಂದಕ್ಕೆ ಪಡೆಯದೇ ಇದ್ದಲ್ಲಿ, ಬಡ್ಡಿ ಸೇರಿಸಿಪಡೆದುಕೊಂಡ ಹೂಡುವಳಿತೆರಿಗೆ ಜಮೆಯ ಮೊತ್ತವನ್ನು ಮರುಪಾವತಿಸಬೇಕಾಗುತ್ತದೆ. ಮತ್ತೆ ಒಳಪೂರೈಕೆ ವಸ್ತುಗಳು ಹಿಂದಕ್ಕೆ ಬಂದ ನಂತರ ಮತ್ತೆ ಜಮೆಯನ್ನು ಪಡೆದುಕೊಳ್ಳಬಹುದು.

ಪ್ರಶ್ನೆ 9: ಬಿಡಿಗೆಲಸದ ಅನುಬಂಧಗಳು ಎಲ್ಲ ರೀತಿಯ ವಸ್ತುಗಳಿಗೂ ಅನ್ವಯಿಸುತ್ತದೆಯೇ?

ಉತ್ತರ: ಇಲ್ಲ. ಯಾವಾಗ ನೊಂದಾಯಿತ ತೆರಿಗೆದಾರ, ತೆರಿಗೆ ಅನ್ವಯಿಸುವ ವಸ್ತುಗಳನ್ನು ಕಳುಹಿಸುವುದಕ್ಕೆ ಬಯಸುತ್ತಾನೋ ಆಗ ಮಾತ್ರ ಬಿಡಿಗೆಲಸಕ್ಕೆ ಸಂಬಂಧಪಟ್ಟ ಅನುಬಂಧಗೆಳು ಅನ್ವಯಿಸುತ್ತದೆ. ಇತರ ಶಬ್ದಗಳಲ್ಲಿ ಹೇಳುವುದಾದರೆ, ತೆರಿಗೆಮುಕ್ತ ಅಥವಾ ತೆರಿಗೆಬೀಳದ ವಸ್ತುಗಳಿಗೆ ಅಥವಾ ಸರಬರಾಜು ಮಾಡುವವನು ನೊಂದಾಯಿತತೆರಿಗೆಗಾರನಾಗಿರದೆ ಬೇರೆ ವ್ಯಕ್ತಿಯಾಗಿದ್ದಲ್ಲಿ ಈ ಅನುಬಂಧಗಳು ಅನ್ವಯಿಸುವುದಿಲ್ಲ.

******

ಹೂಡುವಳಿ ತೆರಿಗೆ ಜಮೆ (ಐಟಿಸಿ)

 

10.ಹೂಡು ವಳಿತೆರಿಗೆ ಜಮೆ (ಐಟಿಸಿ)

ಪ್ರಶ್ನೆ 1: ಹೂಡುವಳಿ ತೆರಿಗೆ ಎಂದರೇನು?

ಉತ್ತರ: ಹೂಡುವಳಿ ತೆರಿಗೆಯನ್ನು ಮಾದರಿ ತೆರಿಗೆ ಅಧಿನಿಯಮ (ಕಾಯ್ದೆ)ದ ಭಾಗ2(57)ಮತ್ತು ಸಂಯುಕ್ತ ಜಿಎಸ್‌ಟಿ ಅಧಿನಿಯಮದ ಭಾಗ2(1)(ಡಿ) ಅಡಿಯಲ್ಲಿ ತೆರಿಗೆ ಬಾಧ್ಯ ವ್ಯಕ್ತಿಯು ಹೂಡುವಳಿಗಳ ಮೇಲೆ ಪಾವಟಿಸುವ ತೆರಿಗೆಯನ್ನು ಹೂಡುವಳಿ ತೆರಿಗೆಯೆಂದು ಪರಿಗಣಿಸಲಾಗುವುದು. ಅದರಂತೆ ತೆರಿಗೆ ಬಾಧ್ಯ ವ್ಯಕ್ತಿಯು ತನ್ನ ವ್ಯಾಪಾರ ವಹಿವಾಟಿನಲ್ಲಿ ಸರಕುಗಳು ಮತ್ತು ಸೇವೆಗಳನ್ನು ಬಳಸುವಾಗ ಸಿಜಿಎಸ್‌ಟಿ ಅಧಿನಿಯಮದ ಪ್ರಕಾರ ವ್ಯಕ್ತಿಯು ಪಾವತಿಸುವ ಐಜಿಎಸ್‌ಟಿ ಮತ್ತು ಸಿಜಿಎಸ್‌ಟಿ ಹಾಗೂ ಎಸ್‌ಜಿಎಸ್‌ಟಿ ಅಧಿನಿಯಮದ ಪ್ರಕಾರ ವ್ಯಕ್ತಿಯು ಪಾವತಿಸುವ ಐಜಿಎಸ್‌‌ಟಿ ಮತ್ತು ಎಸ್‌ಜಿಎಸ್‌‌ಟಿ ತೆರಿಗೆಯನ್ನು ಹಾಗೂ ಭಾಗ 7ರ ಉಪಭಾಗ (3) ರಡಿಯಲ್ಲಿ ಪಾವತಿಸಬೇಕಾದ ತೆರಿಗೆಯನ್ನು ಹೂಡುವಳಿ ತೆರಿಗೆ ಎಂದು ಪರಿಗಣಿಸಲಾಗುವುದು.ಐಜಿಎಸ್‌ಟಿ ಅಧಿನಿಯಮದಡಿಯಲ್ಲಿ ಹೂಡುವಳಿ ತೆರಿಗೆಯನ್ನು ಯಾವುದೇ ಸರಕುಗಳ ಮತ್ತು/ಅಥವಾ ಸೇವೆಗಳ ಮೇಲೆ ಅನ್ವಯವಾಗುವ ಐಜಿಎಸ್‌ಟಿ, ಸಿಜಿಎಸ್‌ಟಿ ಅಥವಾ ಎಸ್‌ಜಿಎಸ್‌ಟಿ ಎಂಬ ಪರಿಭಾಷೆಯನ್ನು ನೀಡಲಾಗಿದೆ.

ಪ್ರಶ್ನೆ 2: ಸಿಜಿಎಎಸ್‌‌ಟಿ, ಎಸ್‌ಜಿಎಸ್‌‌ಟಿ ಮತ್ತು ಐಜಿಎಸ್‌‌ಟಿ ಕಾಯ್ದೆಗಳ ಅನುಸಾರ ಹೂಡುವಳಿ ತೆರಿಗೆಯನ್ನು ಬೇರೆಬೇರೆಯಾಗಿ ಅರ್ಥೈಸಲಾಗಿದೆ.ಇದರ ಪರಿಣಾಮವೇನು?

ಉತ್ತರ : ಸಿಜಿಎಸ್‌‌ಟಿ ಅಧಿನಿಯಮದ ಪ್ರಕಾರ ಐಜಿಎಸ್ಟಿ ಮತ್ತು ಸಿಜಿಎಸ್‌‌ಟಿ, ಹಾಗೂ ಎಸ್‌ಜಿಎಸ್‌‌ಟಿ ಅಧಿನಿಯಮದ ಪ್ರಕಾರ ಐಜಿಎಸ್‌‌ಟಿ ಮತ್ತು ಎಸ್‌ಜಿಎಸ್‌‌ಟಿ ತೆರಿಗೆ ಯನ್ನು ಹಾಗೂ ಐಜಿಎಸ್‌‌ಟಿ ಅಧಿನಿಯಮದ ಪ್ರಕಾರ ಐಜಿಎಸ್‌‌ಟಿ ಸಿಜಿಎಸ್‌‌ಟಿ ಮತ್ತು ಎಸ್‌ಜಿಎಸ್‌‌ಟಿ ಮೂರೂ ತೆರಿಗೆಗಳನ್ನು ಬಳಸಬಹುದು. ಸಿಜಿಎಸ್‌‌ಟಿ ಕಾಯ್ದೆಯಡಿ ಐಜಿಎಸ್‌‌ಟಿ ಮತ್ತು ಸಿಜಿಎಸ್‌‌ಟಿ ತೆರಿಗೆಗಳನ್ನು ಮಾತ್ರ ಮತ್ತು ಎಸ್ಜಿಎಸ್ಟಿ ಕಾಯ್ದೆಯಡಿ ಎಸ್‌ಜಿಎಸ್‌‌ಟಿ ಪಾರೈಸುವಾಗ ಐಜಿಎಸ್‌‌ಟಿ ಮತ್ತು ಎಸ್‌ಜಿಎಸ್‌‌ಟಿ ಜಮೆಗಳನ್ನು ಮಾತ್ರ ಬಳಸಬಹುದು. ಯಾವುದೇ ಕಾರಣಕ್ಕೂ ಸಿಜಿಎಸ್‌‌ಟಿ ಮತ್ತು ಎಸ್‌ಜಿಎಸ್‌‌ಟಿ ತೆರಿಗೆ ಜಮೆಗಳನ್ನು ಅದಲು ಬದಲು ಮಾಡಲಾಗುವುದಿಲ್ಲ.

ಪ್ರಶ್ನೆ 3: ವ್ಯತಿರಿಕ್ತಶುಲ್ಕ ರೀತಿಯಲ್ಲಿ ಪಾವತಿಸುವ ಯಾವುದೇ ತೆರಿಗೆಯನ್ನು ಹೂಡುವಳಿ ತೆರಿಗೆ ಎನ್ನಬಹುದೇ ?

ಉತ್ತರ : ಹೌದು. ಭಾಗ 7(3) ರ ವ್ಯತಿರಿಕ್ತ (ಹಿಮ್ಮುಖ) ತೆರಿಗೆ ರೀತಿಯಲ್ಲಿ ಪಾವತಿಸುವ ತೆರಿಗೆಯನ್ನು ಹೂಡುವಳಿತೆರಿಗೆ ಎಂದುಪರಿಗಣಿಸಲ್ಪಡುತ್ತದೆ. ವ್ಯಾಪಾರ ವಹಿವಾಟಿನಲ್ಲಿ ಬಳಸುವಸರಕ್ಕಿಗೆಸಂಬಂಧಿಸಿದಂತೆ ಇರುವ ಜಮೆಯನ್ನು ಮಾತ್ರ ಬಳಸಬಹುದು.

ಪ್ರಶ್ನೆ 4: ಸರಕುಗಳು, ಸೇವೆಗಳು ಮತ್ತು ಬಂಡವಾಳ ಸರಕುಗಳ ಮೇಲೆ ಕೊಡುವ ಸಿಜಿಎಸ್ಟಿ, ಐಜಿಎಎಸ್‌‌ಟಿ, ಎಸ್‌ಜಿಎಸ್‌‌ಟಿ ತೆರಿಗೆಗಳು ಹೂಡುವಳಿ ತೆರಿಗೆಯಲ್ಲಿ ಒಳಗೊಂಡಿರುತ್ತವೆಯೇ?

ಉತ್ತರ:ಹೌದು. ಎಮ್‌ಜಿಎಲ್‌ನ ಭಾಗ 2(54), 2(55) ಮತ್ತು 2(20)ರ ಪ್ರಕಾರ ಈ ತೆರಿಗೆಗಳು ಹೂಡುವಳಿ ತೆರಿಗೆಗಳಲ್ಲಿ ಒಳಗೊಂಡಿರುತ್ತವೆ. ಬಂಡವಾಳ ಸರಕುಗಳ ಮೇಲೆ ಪಾವತಿಸುವ ತೆರಿಗೆ ಜಮೆಯನ್ನು ಅಂತಹ ಸರಕು ಸ್ವೀಕರಿಸುವಾಗಲೇ ಸಂಪೂರ್ಣವಾಗಿ ಪಡೆಯುವ ಅನುಮತಿ ಇದೆ.

ಪ್ರಶ್ನೆ 5 :ಒಬ್ಬವ್ಯಕ್ತಿಯು ನೋಂದಣಿಗೆ ಬಾಧ್ಯನಾಗಿದ್ದು ಮೂವತ್ತು ದಿನಗಳಲ್ಲಿನೋಂದಣಿಗೆ ಅರ್ಜಿ ಸಲ್ಲಿಸಿರುವಾಗ, ತೆರಿಗೆ ಜಮೆಗೆ ಅರ್ಹನಾಗಿರುತ್ತಾನೆಯೇ?

ಉತ್ತರ:ತೆರಿಗೆ ಪಾವತಿಯ ಬಾಧ್ಯತೆಗೆ ಒಳಗಾದ ದಿನದ ಹಿಂದಿನದಿನದವರೆಗೂ ಇರುವ ಹೂಡುವಳಿಗಳ ಮೇಲೆ ಪಾವತಿಸಲಾದ ತೆರಿಗೆ ಜಮೆಗೆ ಅರ್ಹನಾಗಿರುತ್ತಾನೆ. ಅಂತಹನೋಂದಣಿಗೆ ಬಾಧ್ಯನಾಗಿರುವ ವ್ಯಕ್ತಿಯು ಮೂವತ್ತು ದಿನಗಳಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಿರುವಾಗ, ಮೊದಲಿನ ಹೂಡುವಳಿಗೆ ಸಂಬಂಧಿಸಿದಂತೆ ತೆರಿಗೆ ಜಮೆಗೆ ಅರ್ಹನಾಗಿರುವುದಿಲ್ಲ.

ಪ್ರಶ್ನೆ 6 : ಆಗಸ್ಟ್‌ 1,2017ರಂದು ತೆರಿಗೆ ಪಾವತಿಸಲು ಬಾಧ್ಯರಾಗಿರುವ ವ್ಯಕ್ತಿಯೊಬ್ಬರು ಆಗಸ್ಟ್‌ 15,2017ರಂದು ನೋಂದಣಿಯನ್ನು ಪಡೆಯುತ್ತಾರೆ. ಅಂತಹ ವ್ಯಕ್ತಿಯು ಯಾವ ದಿನದಿಂದ ಹೂಡುವಳಿಗಳ ದಾಸ್ತಾನುಗಳ ಮೇಲೀನ ಹೂಡುವಳಿ ತೆರಿಗೆ ಜಮೆಗೆ ಅರ್ಹರಾಗಿರುತ್ತಾರೆ?

ಉತ್ತರ : ಜೂಲೈ 31, 2017.

ಪ್ರಶ್ನೆ 7 : ಒಬ್ಬ ವ್ಯಕ್ತಿಯು ಸ್ವಯಂ ಪ್ರೇರಿತನಾಗಿ ನೋಂದಾಯಿಸಿಕೊಂಡರೆ ಅಂತಹ ವ್ಯಕ್ತಿಯ ದಾಸ್ತಾನಿನಲ್ಲಿ ಇರುವ ಹೂಡುವಳಿಗಳ ಮೇಲಿನ ತೆರಿಗೆ ಜಮೆಗೆ ಅರ್ಹನಾಗಿರುತ್ತಾನೆಯೇ ?

ಉತ್ತರ: ಎಮ್‌ಜಿಎಲ್‌ ಭಾಗ 16(2ಎ) ಪ್ರಕಾರ ಒಬ್ಬ ವ್ಯಕ್ತಿಯು ಸ್ವಯಂ ಪ್ರೇರಿತನಾಗಿ ನೋಂದಾಯಿಸಿಕೊಂಡರೆ, ಅಂತಹವರು ನೋಂದಾಯಿಸಿಕೊಂಡ ಹಿಂದಿನ ದಿನದವರೆಗಿನ ದಾಸ್ತಾನದಲ್ಲಿರುವ ಸರಕು, ಅರ್ಧ ನಿರ್ಮಿತ ಸರಕು ಮತ್ತು ಪೂರ್ಣ ನಿರ್ಮಿತ ಸರಕಿನ ಮೇಲೆ ಐಟಿಸಿ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಪ್ರಶ್ನೆ 8: ಸರಕು ಮತ್ತು ಸೇವೆಗಳನ್ನು ತೆರಿಗೆ ಬಾಧ್ಯ ವ್ಯಕ್ತಿಯು ತೆರಿಗೆ ಮತ್ತು ತೆರಿಗೇತರ ಪೂರೈಕೆಗಳಲ್ಲಿ ಬಳಸಿದರೆ, ತೆರಿಗೆ ಜಮೆಗೆ ಅಂತಹವರು ಅರ್ಹವಾಗುತ್ತಾರೆಯೇ?

ಉತ್ತರ:ಎಮ್‌ಜಿಎಲ್‌ ಭಾಗ 16(6) ಅನ್ವಯ ತೆರಿಗೆಗೆ ಒಳಗಾಗುವ ಪೂರೈಕೆಗಳಲ್ಲಿ ಬಳಸುವ ಹೂಡಿಕೆಗಳ ಮೇಲಿನ ತೆರಿಗೆ ಜಮೆ ಮೊಬಲಗನ್ನು ಎಮ್‌ಜಿಎಲ್ ಕಾಯ್ದೆಯ ಭಾಗ 16(7) ಮತ್ತು ಜಿಎಸ್ಟಿ, ಐಟಿಸಿ ನಿಯಮಗಳ ಪ್ರಕಾರ ಲೆಕ್ಕಾಚಾರ ಮಾಡಬೇಕಾಗುತ್ತದೆ. ಬಂಡವಾಳ ಸರಕುಗಳ ಮೇಲಿನ ಜಮೆಯನ್ನು ಕೂಡ ಇದೆ ಅನುಪಾತದಲ್ಲಿ ತೆಗೆದುಕೊಳ್ಳಲು ಅನುಮತಿಸಲಾಗಿದೆ.

ಪ್ರಶ್ನೆ 9 :ಸರಕು ಮತ್ತು ಸೇವೆಗಳನ್ನು ತೆರಿಗೆ ಬಾಧ್ಯ ವ್ಯಕ್ತಿಯು ವ್ಯಾವಹಾರ ಮತ್ತು ವ್ಯವಹಾರೇತರ ಪೂರೈಕೆಗಳಲ್ಲಿ ಬಳಸಿದರೆ ಅಂತಹವರು ತೆರಿಗೆ ಜಮೆಗೆ ಅರ್ಹರಾಗುತ್ತಾರೆಯೇ?

ಉತ್ತರ: ಎಮ್‌ಜಿಎಲ್ಅಧಿನಿಯಮದ ಭಾಗ16(5) ರಡಿಯಲ್ಲಿ ವ್ಯವಹಾರಕ್ಕೆ ಬಳಸುವ ಸರಕು ಮತ್ತು ಸೇವೆಗಳ ಮೇಲಿನ ಹೂಡುವಳಿ ತೆರಿಗೆ ಜಮೆಯನ್ನು ಬಳಸಿಕೊಳ್ಳಬಹುದು. ತೆರಿಗೆ ಜಮೆಗೆ ಅರ್ಹವಾದ ಮೊಬಲಗನ್ನು ಎಮ್ಜಿಎಲ್ ಭಾಗ 16(7) ಮತ್ತು ಜಿಎಸ್‌ಟಿ, ಐಟಿಸಿ ನಿಯಮಗಳ ಪ್ರಕಾರ ಲೆಕ್ಕಾಚಾರ ಮಾಡಬೇಕಾಗುತ್ತದೆ. ಬಂಡವಾಳ ಸರಕುಗಳ ಮೇಲಿನ ಜಮೆಯನ್ನು ಕೂಡ ಇದೆ ಅನುಪಾತದಲ್ಲಿ ತೆಗೆದುಕೊಳ್ಳಲು ಅನುಮತಿಸಲಾಗಿದೆ.

ಪ್ರಶ್ನೆ 10 : ನೋಂದಾಯಿತ ತೆರಿಗೆ ಬಾಧ್ಯ ವ್ಯಕ್ತಿಯ ಸಂಘಟನೆಯಲ್ಲಿ ಬದಲಾವಣೆಯಾದ ಸಂದರ್ಭದಲ್ಲಿ ಹೂಡುವಳಿ ತೆರಿಗೆ ಜಮೆಯ ಅರ್ಹತೆ ಏನಾಗುತ್ತದೆ?

ಉತ್ತರ: ಎಮ್‌ಜಿಎಲ್‌ ಭಾಗ16 (8)ರ ಪ್ರಕಾರ ವ್ಯವಹಾರವನ್ನು ವರ್ಗಾವಣೆ ಮಾಡುವ ವ್ಯಕ್ತಿಯು, ಹೂಡುವಳಿ ತೆರಿಗೆ ಜಮೆಯನ್ನು ಕೂಡ ವರ್ಗಾಯಿಸಲು ಅನುಮತಿಸಲಾಗಿದೆ. ಅಂತಹ ವ್ಯವಹಾರ ವರ್ಗಾವಣೆಯ ಸಂದರ್ಭಕ್ಕೆ ಅನ್ವಯಿಸು ನಿರ್ಧಿಷ್ಟ ಶರತ್ತುಗಳನ್ನು ಒಳಗೊಂಡಿರುತ್ತವೆ.

ಪ್ರಶ್ನೆ 11 : ನೋಂದಣಿ ತೆರಿಗೆ ಬಾಧ್ಯ ವ್ಯಕ್ತಿಯ ಪೂರೈಕೆ ಯಾಗುವ ಸರಕು ಮತ್ತು ಸೇವೆಗಳಿಗೆ ತೆರಿಗೆಯ ಸಂಪೂರ್ಣ ವಿನಾಯತಿ ಲಭಿಸಿದಸಂದರ್ಭದಲ್ಲಿ ಹೂಡುವಳಿ ತೆರಿಗೆ ಜಮೆಯ ಅರ್ಹತೆ ಏನಿರುತ್ತದೆ ?

ಉತ್ತರ: ಎಮ್‌ಜಿಎಲ್‌16(12)ರ ಅನ್ವಯ,ನೋಂದಾಯಿತ ತೆರಿಗೆ ಬಾಧ್ಯ ವ್ಯಕ್ತಿಯು ತೆರಿಗೆ ವಿನಾಯಿತಿ ಪಡೆದ ಹಿಂದಿನ ದಿನದ ದಾಸ್ತಾನಿಗೆ ಸಂಬಂಧಿಸಿದಂತೆ ಹೂಡುವಳಿಗಳು, ಅರ್ಧನಿರ್ಮಿತ ಮತ್ತು ಪೂರ್ಣನಿರ್ಮಿತ ಹೂಡುವಳಿಗಳ ಮೌಲ್ಯಕ್ಕೆ ಸಮಾನ ಮೊತ್ತವನ್ನು ಪಾವತಿಸಿ ತೆರಿಗೆ ಜಮೆಯನ್ನು ಪಾಲಿಸಬೇಕಾಗುತ್ತದೆ. ಎಲೆಕ್ಟ್ರೋನಿಕ್‌ ಕ್ರೆಡಿಟ್‌ ಲೆಡ್ಜರ್‌ ಪುಸ್ತಕದಲ್ಲಿ ಇರುವ ಬಾಕಿ ಜಮೆಯು ರದ್ದಾಗುತ್ತದೆ. ಎಮ್ಜಿಎಲ್ ನ ಭಾಗ 16(13) ರ ಅನ್ವಯ ಜಿಎಎಪಿ ಯ ಪ್ರಕಾರ ,ಪಾವತಿಸಬೇಕಾದ ಮೊತ್ತವನ್ನು ಲೆಕ್ಕಮಾಡಬೇಕು.

ಪ್ರಶ್ನೆ 12:ಭಾಗ7ರಲ್ಲಿ ಒಳಗೊಂಡಂತೆ ತೆರಿಗೆ ಪಾವತಿಸುವ ವ್ಯಕ್ತಿಯು ಭಾಗ 8ರಡಿಯಲ್ಲಿ ರಾಜಿಯೋಜನೆ (ಕೊಂಪೌಂಡಿಂಗ್‌ ಸ್ಕೀಮ್) ಅನ್ನು ಆಯ್ದುಕೊಂಡರೆ, ತೆರಿಗೆ ಜಮೆಯು ಏನಾಗುತ್ತದೆ?

ಉತ್ತರ: ಎಮ್‌ಜಿಎಲ್‌ನ ಭಾಗ16 (12)ರ ಪ್ರಕಾರ, ನೋಂದಾಯಿತ ತೆರಿಗೆ ಬಾಧ್ಯವ್ಯಕ್ತಿಯು ಭಾಗ7ರ ಬದಲು ಭಾಗ 8 ರಡಯಲ್ಲಿ ಕೊಂಪೌಂಡಿಂಗ್‌ ಸ್ಕೀಮ್ ಅಡಿಯಲ್ಲಿ ತೆರಿಗೆಯನ್ನು ಪಾವತಿಸುವ ಆಯ್ಕೆ ಮಾಡಿಕೊಂಡರೆ, ಅದರ ಹಿಂದಿನ ದಿನದ ದಾಸ್ತಾನಿನಲ್ಲಿರುವ ಎಲ್ಲ ಹೂಡುವಳಿಗಳು, ಅರ್ಧನಿರ್ಮಿತ ಹಾಗೂ ಪೂರ್ಣನಿರ್ಮಿತ ಸರಕುಗಳ ಮೌಲ್ಯಕ್ಕೆ ಸಮನಾದ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಎಲೆಕ್ಟ್ರೋನಿಕ್ ಕ್ರೆಡಿಟ್ ಲೆಡ್ಜರ್ ಪೂಸ್ತಕದಲ್ಲಿ ಇರುವ ಬಾಕಿ ಜಮೆಯುರದ್ದಾಗುತ್ತದೆ. ಎಮ್‌ಜಿಎಲ್‌ಭಾಗ16 (13)ರ ಅನ್ವಯಜಿಎಎಪಿಯ ಪ್ರಕಾರ ಪಾವತಿಸಬೇಕಾದ ಮೊತ್ತವನ್ನು ಲೆಕ್ಕ ಮಾಡಬೇಕು.

ಪ್ರಶ್ನೆ 13: ಕೊಂಪೌಂಡಿಂಗ್ ಸ್ಕೀಮ್ ನಲ್ಲಿ ಇರುವ ವ್ಯಾಪಾರಿಯೊಬ್ಬರು ತಮ್ಮ ಪರಿಮಿತಿಯನ್ನು ಮೀರಿದಾಗ ಸಾಮಾನ್ಯ ತೆರಿಗೆದಾರರಂತೆ ತೆರಿಗೆ ಪಾವತಿಸಬೇಕಾಗುತ್ತದೆ. ಅಂತಹವರು ಐಟಿಸಿ ಸೌಲಭ್ಯ ಪಡೆಯಬಹುದೇ, ಯಾವ ತಾರೀಕಿನಿಂದ?

ಉತ್ತರ: ಎಮ್‌ಜಿಎಲ್‌ನ ಭಾಗ16(3)ಅ ಅನ್ವಯ, ಭಾಗ7ರಡಿಯಲ್ಲಿ ತೆರಿಗೆ ಪಾವತಿ ಬಾಧ್ಯತೆಗೆ ಬರುವ, ಹಿಂದಿನ ದಿನದ ದಾಸ್ತಾನಿನಲ್ಲಿರುವ ಎಲ್ಲ ಹೂಡುವಳಿಗಳು, ಅರ್ಧನಿರ್ಮಿತ ಹಾಗೂ ಪೂರ್ಣನಿರ್ಮಿತ ಸರಕುಗಳ ಮೇಲೆ ಐಟಿಸಿ ಸೌಲಭ್ಯ ಪಡೆಯಬಹುದು.

ಪ್ರಶ್ನೆ 14. ಶ್ರೀಯುತ “ಬಿ” ನೋಂದಾಯಿತ ತೆರಿಗೆ ಬಾಧ್ಯ ವ್ಯಕ್ತಿಯು ಕೊಂಪೋಸಿಷನ್ ದರದಲ್ಲಿ ಜೂನ್ 30, 2017 ರ ವರೆಗೆ ತೆರಿಗೆಪಾವತಿಸಿರುತ್ತಾರೆ.ಆದಾಗ್ಯೂಜೂಲೈ31,2017ರಿಂದಸಾಮಾನ್ಯತೆರಿಗೆದಾರರೂಪದಲ್ಲಿತೆರಿಗೆಪಾವತಿಸಲು ಬಾಧ್ಯರಾಗುತ್ತಾರೆ. ಅವರು ತೆರಿಗೆ ಜಮೆಗೆ ಪಾತ್ರರಾಗಿರುತ್ತಾರೆಯೇ?

ಉತ್ತರ: ಶ್ರೀಯುತ “ಬಿ” ದಿನಾಂಕ ಜೂಲೈ 30, 2017ರಂದು ತಮ್ಮ ದಾಸ್ತಾನಿನಲ್ಲಿರುವ ಎಲ್ಲ ಹೂಡುವಳಿಗಳು, ಅರ್ಧನಿರ್ಮಿತ ಹಾಗೂ ಪೂರ್ಣನಿರ್ಮಿತ ಸರಕುಗಳ ಮೇಲೆ ಐಟಿಸಿ ಪಡೆಯಲು ಅರ್ಹರಾಗಿರುತ್ತಾರೆ.

ಪ್ರಶ್ನೆ 15. ಶ್ರೀಯುತ “ಎ” ಸ್ವೆ ಇಚ್ಛೆಯಿಂದ ನೋಂದಾವಣೆಗೆ ದಿನಾಂಕ ಜೂನ್ 5, 2017 ರಂದು ಅರ್ಜಿ ಸಲ್ಲಿಸಿರುತ್ತಾರೆ ಮತ್ತು ದಿನಾಂಕ್ ಜೂನ್ 22, 2017ರಂದುನೋಂದಾಯಿಸಿಕೊಳ್ಳುತ್ತಾರೆ. ಶ್ರೀ “ಎ” ಯಾವ ದಿನಾಂಕ ದಿಂದತೆರಿಗೆಜಮೆಗೆ ಅರ್ಹರಾಗಿರುತ್ತಾರೆ?

ಉತ್ತರ: ದಿನಾಂಕ ಜೂನ್21ಕ್ಕೆ ಅನ್ವಯವಾಗುವಂತೆ, ದಾಸ್ತಾನದಲ್ಲಿರುವ ಸರಕು, ಅರ್ಧನಿರ್ಮಿತ ಸರಕು ಮತ್ತು ಪೂರ್ಣ ನಿರ್ಮಿತ ಸರಕಿನ ಮೇಲೆ ಐಟಿಸಿ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಪ್ರಶ್ನೆ15.ಮಾದರಿ ತೆರಿಗೆ ಕಾಯ್ದೆ ಭಾಗ16(2),16(2ಎ)ಮತ್ತು 16(3)ರಅನ್ವಯ ತೆರಿಗೆ ಬಾಧ್ಯ ವ್ಯಕ್ತಿಯು ಯಾವಾಗ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಜಮೆಯನ್ನು ತೆಗೆದುಕೊಳ್ಳಲು ಆಗುವುದಿಲ್ಲ?

ಉತ್ತರ : ಎಮ್‌ಜಿಎಲ್ನ ಭಾಗ 16(4) ರ ಅನ್ವಯ, ಸರಕು ಮತ್ತು ಸೇವೆಗಳ ಪೂರೈಕೆ ಮಾಡುವಾಗ ಕೊಟ್ಟ ತೆರಿಗೆ ಇನ್ವಾಯಿಸ್ ನ ದಿನಾಂಕದಿಂದ ಒಂದು ವರ್ಷ ಪೂರ್ಣಗೊಂಡ ಬಳಿಕ ಐಟಿಸಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ.

ಪ್ರಶ್ನೆ 16. ಯಾವುದೇ ಸರಕುಗಳ ಅಥವಾ ಸೇವೆಗಳಿಗೆ ಸಂಬಂಧಿಸಿದಂತೆ ಉಪಭಾಗ (2), (2ಎ) ಅಥವಾ ಉಪ ಭಾಗ (3) ರಡಿಯಲ್ಲಿ ಹೂಡುವಳಿ ತೆರಿಗೆ ಜಮೆಗೆ ಅರ್ಹರಾಗಿರುವುದಿಲ್ಲ?

ಉತ್ತರ: ಎಮ್‌ಜಿಎಲ್ನ ಭಾಗ 16(4) ರ ಪ್ರಕಾರ, ಅಂತಹ ಪೂರೈಕೆಗಳನ್ನು ಮಾಡಿದ ಒಂದು ವರ್ಷದ ನಂತರ ಐಟಿಸಿ ಲಾಭವನ್ನು ಪಡೆಯಲಾಗುವುದಿಲ್ಲ.

ಪ್ರಶ್ನೆ 17: ಮಜೂರಿ ಕೆಲಸ ಕೊಟ್ಟು ಹೂಡಿಕೆಗಳ ಮೇಲೆ ಅದರ ಯಜಮಾನನು ತೆರಿಗೆ ಜಮೆಗೆ ಅರ್ಹರಾಗುತ್ತಾರೆಯೇ?

ಉತ್ತರ : ಭಾಗ 16ಎ (2) ಪ್ರಕಾರ ಮಾಲೀಕರು ಮಜೂರಿ ಕೆಲಸಕ್ಕೆ ಕಳುಹಿಸಿದ ಹೂಡುವಳಿಗಳ ಮೇಲಿನ ತೆರಿಗೆ ಜಮೆಗೆ ಅರ್ಹರಾಗಿರುತ್ತಾರೆ.

ಪ್ರಶ್ನೆ 18: ಮಜೂರಿ ಕೆಲಸಗಾರರಿಗೆ ಕಳುಹಿಸಿದ ಹೂಡಿಕೆಗಳನ್ನು ಎಷ್ಟು ದಿನದೊಳಗೆ ಹಿಂಪಡೆಯಬೇಕು?

ಉತ್ತರ : 180 ದಿನಗಳು .

ಪ್ರಶ್ನೆ 19: ಮಜೂರಿ ಕೆಲಸಕ್ಕೆ ಕಳುಹಿಸಿದ ಹೂಡುವಳಿಗಳು, 180 ದಿನಗಳಲ್ಲಿ ಮರಳಿ ದೊರಕದಿದ್ದಲ್ಲಿ, ಮಾಲೀಕರು ಅವುಗಳ ಮೇಲಿನ ತೆರಿಗೆ ಜಮೆಯನ್ನು ಪಾವತಿಸಬೇಕಾಗುತ್ತದೆಯೇ?

ಉತ್ತರ : ಹೌದು. ಮಜೂರಿ ಕೆಲಸಕ್ಕೆ ಕಳುಹಿಸಿದ 180 ದಿನಗಳಲ್ಲಿ, ಹೂಡುವಳಿಗಳು ಮರಳಿ ದೊರಕದಿದ್ದಲ್ಲಿ, ಮಾಲೀಕರು ಅವುಗಳ ಮೇಲಿನ ತೆರಿಗೆ ಜಮೆಯನ್ನು ಬಡ್ಡಿ ಸಮೇತ ಪಾವತಿಸಬೇಕಾಗುತ್ತದೆ. ಆದಾಗ್ಯೂ, ಹೂಡುವಳಿಗಳನ್ನು ಹಿಂಪಡೆದ ನಂತರ ತೆರಿಗೆ ಜಮೆಯನ್ನು ಪೂನಃ ಪಡೆಯಬಹುದು.

ಪ್ರಶ್ನೆ 20. ಈ ಕೆಳಗಿನ ಯಾವ ಪೂರೈಕೆಗಳು ತೆರಿಗೆ ಜಮೆಯ ಲಾಭವನ್ನು ಪಡೆಯಲು ಪರಿಗಣಿಸಲ್ಪಡುತ್ತವೆ

 1. ಸೊನ್ನೆ ದರದ ಪೂರೈಕೆಗಳು
 2. ವಿನಾಯತಿಯನ್ನೊಳಗೊಂಡ ಪೂರೈಕೆಗಳು
 3. ಮೇಲಿನವು ಎರಡೂ? ಉತ್ತರ: ಸೊನ್ನೆದರದ ಪೂರೈಕೆಗಳು.

ಪ್ರಶ್ನೆ 21 : ಎಷ್ಟು ದಿನದೊಳಗೆ ಮಜೂರಿ ಕೆಲಸಕ್ಕೆ ಕಳುಹಿಸಿದ ಬಂಡವಾಳ ಸರಕುಗಳನ್ನು ಮರಳಿ ಪಡೆಯಬೇಕು ?

ಉತ್ತರ : ಎರಡು ವರ್ಷ

ಪ್ರಶ್ನೆ 22: ಮಜೂರಿ ಕೆಲಸಕ್ಕೆ ಕಳುಹಿಸಿದ ಬಂಡವಾಳ ಸರಕುಗಳು ಎರಡು ವರ್ಷದೊಳಗೆ ಮರಳಿ ಬಾರದಿದ್ದರೆ, ಮಾಲೀಕರ ಬಾಧ್ಯತೆಗಳೇನು?

ಉತ್ತರ: ಮಾಲೀಕರು, ಮಜೂರಿ ಕೆಲಸಕ್ಕೆ ಕಳುಹಿಸಿದ ಬಂಡವಾಳ ಸರಕುಗಳ ಮೇಲಿನ ತೆರಿಗೆ ಜಮೆಯನ್ನು ಬಡ್ಡಿ ಸಮೇತ ಪಾವತಿಸಬೇಕಾಗುತ್ತದೆ. ಆದಾಗ್ಯೂ, ಅವುಗಳನ್ನು ಹಿಂಪಡೆದ ನಂತರ ತೆರಿಗೆ ಜಮೆಯನ್ನು ಪೂನಃ ಪಡೆಯಬಹುದು.

ಪ್ರಶ್ನೆ 23. ತೆರಿಗೆ ಬಾಧ್ಯ ವ್ಯಕ್ತಿಯೊಬ್ಬರು ಮಾಹಿತಿ ತಂತ್ರಜ್ಞಾನ ವ್ಯಾಪಾರದಲ್ಲಿ ತೊಡಗಿದ್ದಾರೆ. ಅವರು ತಮ್ಮ ಕಾರ್ಯಕಾರಿ ನಿರ್ದೇಶಕರ ಉಪಯೋಗಕ್ಕಾಗಿ ಮೋಟಾರ್ ವಾಹನವನ್ನು ಖರೀಧಿಸುತ್ತಾರೆ. ಅಂತಹ ಮೋಟಾರ್ ವಾಹನದ ಖರೀದಿಯ ಮೇಲೆ ಪಾವತಿಸಿರುವ ಜಿಎಸ್‌ಟಿಗೆ ಸಂಬಂಧಿಸಿದಂತೆ ಐಟಿಸಿ ಲಾಭವನ್ನು ಪಡೆಯಬಹುದೇ ?

ಉತ್ತರ : ಇಲ್ಲ. ಎಮ್‌ಜಿಎಲ್ನ ಭಾಗ 16(9) (ಎ)ರ ಅನ್ವಯ, ತೆರಿಗೆ ಬಾಧ್ಯ ವ್ಯಕ್ತಿಯು ಪ್ರಯಾಣಿಕರನ್ನು ಅಥವಾ ಸರಕುಗಳನ್ನು ಸಾಗಿಸುವ ಅಥವಾ ಮೋಟಾರ್ ವಾಹನಗಳ ಮೇಲೆ ಪಾವತಿಸಿದ ಹೂಡುವಳಿ ತೆರಿಗೆ ಜಮೆಗೆ ಅರ್ಹರಾಗಿರುತ್ತಾರೆ.

ಪ್ರಶ್ನೆ 24 : ನೋಂದಾಯಿತ ತೆರಿಗೆ ಬಾಧ್ಯವ್ಯಕ್ತಿಯು ಬಂಡವಾಳ ಸರಕುಗಳ ಮೇಲೆ ಪಾವತಿಸಿದ ತೆರಿಗೆಗಳ ಮೇಲೆ ಸವಕಳಿಯನ್ನು, ನೇರ ತೆರಿಗೆ ಕಾಯ್ದೆ 1961 ಅನ್ವಯ ವಿನಾಯಿತಿಯನ್ನು ಪಡೆದಾಗ ಅಂತಹ ಸಂದರ್ಭದಲ್ಲಿ ಐಟಿಸಿ ಅನುಮತಿ ಇರುವುದೇ?

ಉತ್ತರ: ಎಮ್‌ಜಿಎಲ್‌ ಭಾಗ 16(10)ರ ಅನ್ವಯ ಅಂತಹ ತೆರಿಗೆಯ ಹೂಡುವಳಿ ತೆರಿಗೆ ಜಮೆಯನ್ನು ಅನುಮತಿಸಲಾಗಿಲ್ಲ.

ಪ್ರಶ್ನೆ 25. ತೆರಿಗೆ ಜಮೆಯನ್ನು ಐಟಿಸಿ ಪಡೆಯಲು ಯಾವ ಅನುಬಂಧಗಳನ್ನು ಪಾಲಿಸಬೇಕು?

ಉತ್ತರ : ಎಮ್‌ಜಿಎಲ್ ತೆರಿಗೆ ಭಾಗ 16(11) ರ ಅನ್ವಯ ಈ ಕೆಳಗಿನ ಅನುಬಂಧಗಳನ್ನು ವಿಧಿಸಲಾಗಿದೆ.

 • ನೋಂದಾಯಿತ ತೆರಿಗೆ ಬಾಧ್ಯವ್ಯಕ್ತಿಯು ತೆರಿಗೆ ಪಾವತಿಸಿದ ಇನ್ವಾಯಿಸ್ಅನ್ನು ಹೊಂದಿರಬೇಕು.
 • ಸರಕು ಮತ್ತು ಸೇವೆಗಳನ್ನು ಪಡೆದಿರಬೇಕು.
 • ಅಂತಹ ಸರಕು ಅಥವಾ ಸೇವೆಗಳ ಮೇಲೆ ತೆರಿಗೆಯನ್ನು ನಗದು ಅಥವಾ ತೆರಿಗೆ ಜಮೆಯಿಂದ ಪಾವತಿಸಿರಬೇಕು.
 • ತೆರಿಗೆ ಬಾಧ್ಯವ್ಯಕ್ತಿಯ ತೆರಿಗೆ ವಿವರಣೆಗಳನ್ನು ಭಾಗ27ರ ಅನ್ವಯ ಸಲ್ಲಿಸಿರಬೇಕು.

ಪ್ರಶ್ನೆ 26 : ಇನ್ವಾಯಿಸ್‌ನಲ್ಲಿ ಇರುವ ಸರಕುಗಳನ್ನು ಕಂತುಗಳಲ್ಲಿ ಅಥವಾ ರಾಶಿಗಳಲ್ಲಿ ಪೂರೈಸಿದಾಗ, ನೋಂದಾಯಿತ ತೆರಿಗೆ ಬಾಧ್ಯ ವ್ಯಕ್ತಿಯು ಐಟಿಸಿಗೆ ಹೇಗೆ ಪಡೆಯುತ್ತಾರೆ?

ಉತ್ತರ: ಎಎಮ್‌ಜಿಎಲ್‌ನ ಭಾಗ 16(11)ರ ಪರಂತುಕದ ಪ್ರಕಾರ ಕೊನೆಯ ರಾಶಿ ಅಥವಾ ಕಂತಿನ ಸರಕುಗಳನ್ನು ಪಡೆದಾಗ ತೆರಿಗೆ ಜಮೆಯನ್ನು ಪಡೆಯಬಹುದು.

ಪ್ರಶ್ನೆ 27 : ಸರಕುಗಳನ್ನು ತೆರಿಗೆ ಬಾಧ್ಯತೆ ಇರದ ವ್ಯಕ್ತಿಗೆ ಪೂರೈಸಿದಾಗ (ಇವರಿಗೆಬಿಲ್,ಇಲ್ಲಿಗೆಸಾಗಣೆ) ಐಟಿಸಿ ಲಾಭವನ್ನು ಯಾರು ಪಡೆಯುತ್ತಾರೆ?

ಉತ್ತರ: ಎಮ್‌ಜಿಎಲ್‌ನ ಭಾಗ16(11)ರಲ್ಲಿರುವ ವಿವರಣೆಯಂತೆ, ಸರಕುಗಳನ್ನು ಪಡೆಯುವ ಉದ್ದೇಶದಿಂದ, ಅನ್ಯತೆರಿಗೆ ಬಾಧ್ಯ ವ್ಯಕ್ತಿಯ ನಿರ್ದೇಶನದ ಮೇಲೆ, ಸರಕುಗಳನ್ನು ಅವರು ಹೇಳಿರುವಂತಹ ವ್ಯಕ್ತಿಗೆ ಕಳುಹಿಸಿದ ನಂತರ ಸರಕುಗಳನ್ನ ಆ ತೆರಿಗೆಬಾಧ್ಯ ವ್ಯಕ್ತಿಯು ಪಡೆದಿರುವರೆಂದು ಪರಿಗಣಿಸಲಾಗುವುದು. ಆದ್ದರಿಂದ ಅಂತಹ ಅನ್ಯತೆರಿಗೆ ಬಾಧ್ಯವ್ಯಕ್ತಿಯು ಐಟಿಸಿ ಸೌಲಭ್ಯವನ್ನು ಪಡೆಯಬಹುದು.

ಪ್ರಶ್ನೆ 28: ಐಟಿಸಿ ಪಡೆಯಲು ಸಮಯ ಪರಿಮಿತಿ ಏನು?

ಉತ್ತರ: ಎಮ್‌ಜಿಎಲ್‌ನ ಭಾಗ 16(15)ರ ಅನ್ವಯ ಇನ್ವಾಯಿಸ್‌ಗೆ ಸಂಬಂಧಿಸಿದಂತೆ, ಆ ಹಣಕಾಸು ವರ್ಷ ಮುಗಿದ ತರುವಾಯ ಬರುವ ಸೆಪ್ಟೆಂಬರ್‌ ತಿಂಗಳ ಅಥವಾ ವಾರ್ಷಿಕ ವಿವರಣೆಯಲ್ಲಿ ಸಲ್ಲಿಸುವ ದಿನ, ಇವುಗಳಲ್ಲಿ ಯಾವುದು ಮುಂಚಿನದೋ, ಆ ದಿನವನ್ನು ಮೀರಿ ಐಟಿರಸಿ ಸೌಲಭ್ಯ ಪಡೆಯಲಾಗುವುದಿಲ್ಲ. ಇದಕ್ಕೆ ಕಾರಣಮಾರನೇ ವರ್ಷದ ಸೆಪ್ಟೆಂಬರ್‌ನಂತರ ವಿವರಣೆಗಳನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ವಾರ್ಷಿಕ ವಿವರಣೆಗಳನ್ನು ಸೆಪ್ಟೆಂಬರ್ ಒಳಗೆ ಸಲ್ಲಿಸಿದ್ದರೆ ಅದರ ನಂತರ ಯಾವುದೇ ತಿದ್ದುಪಡಿಗೆ ಅವಕಾಶ ಇರುವುದಿಲ್ಲ.

ಪ್ರಶ್ನೆ 29: ಐಟಿ ಸಿ ಅನುಮತಿ ಇಲ್ಲದಂತಹ ಋಣಾತ್ಮಕ ಪಟ್ಟಿ ಇದೆಯೇ?

ಉತ್ತರ: ಭಾಗ 46(9) ರಡಿಯಲ್ಲಿ ಋಣಾತ್ಮಕ ಪಟ್ಟಿಯನ್ನು ಸೂಚಿಸಲಾಗಿದೆ. ಈ ಕೆಳಕಂಡ ಸರಕು ಮತ್ತು ಸೇವೆಗಳ ಮೇಲೆ ತೆರಿಗೆ ಜಮೆಯನ್ನು ಪಡೆಯುವಂತಿಲ್ಲ.

ಎ) ಮೋಟಾರ್‌ ವಾಹನಗಳು, ವ್ಯಾಹಾರದ ಅಂಗವಾಗಿ ಪೂರೈಸಿದಾಗ ಅಥವಾ ಈ ಕೆಳಕಂಡ ತೆರಿಗೆ ಬಾಧ್ಯ ಸೇವೆಗಳಪೂರೈಕೆಗೆ ಒದಗಿಸುವ ಸಂದರ್ಭಗಳು

 • ಪ್ರಯಾಣೀಕರ ಸಾಗಣೆ
 • ಸರಕು ಸಾಗಣೆ
 • ಮೋಟಾರುವಾಹನ ಚಲನ ತರಬೇತಿ ಇವನ್ನು ಹೊರತು ಪಡಿಸಿ:

ಬಿ)ನೌಕರರ ವಯಕ್ತಿಕ ಬಳಕೆಗೆ ಅಥವಾ ಉಪಯೋಗಕ್ಕೆ ಬಳಸುವ ತಿಂಡಿ, ಪಾನೀಯಗಳು, ಔಟ್‌ಡೋರ್‌ ಕಾಟರಿಂಗ್,ಸೌಂದರ್ಯ ಚಿಕಿತ್ಸೆಗಳು, ಆರೋಗ್ಯ ಸೇವೆಗಳು, ಸೌಂದರ್ಯ ವರ್ಧಕಗಳು, ಕ್ಲಬ್ ಸದಸ್ಯತ್ವ, ಪ್ಲಾಸ್ಟಿಕ್ ಸರ್ಜೆರಿ, ಆರೋಗ್ಯ ಮತ್ತು ದೇಹದಾರ್ಡ್ಯ ಕೇಂದ್ರಗಳು, ಜೀವ ಬೀಮೆ, ಆರೋಗ್ಯ ಬೀಮೆ ಮತ್ತು ರಜೆ ಅಥವಾ ಎಚ್ಟಿಸಿ ಯಾತ್ರಾ ಸೌಲಭ್ಯಗಳು, ಮುಂತಾದವುಗಳಿಗೆ ಸಂಬಂಧಿಸಿದಂತೆ ಒದಗಿಸಲಾಗುವ ಸರಕುಗಳು ಮತ್ತು ಅಥವಾ ಸೇವೆಗಳು;

ಸಿ)ಕಾರ್ಖಾನೆ ಮತ್ತು ಯಂತ್ರೋಪಕರಣಗಳನ್ನು ಹೊರತುಪಡಿಸಿ, ಸ್ಥಿರಾಸ್ತಿಯ ನಿರ್ಮಾಣಕ್ಕೆ ಪರಿಣಮಿಸುವ ಕಾಮಗಾರಿ ಒಪ್ಪಂದದ ನಿರ್ವಹಣೆಗಾಗಿ ಅರ್ಜಿತ ಸರಕುಗಳು;

ಡಿ)ಕಾರ್ಖಾನೆ ಮತ್ತು ಯಂತ್ರೋಪಕರಣಗಳನ್ನು ಹೊರತು ಪಡಿಸಿ, ಸ್ಥಿರಾಸ್ತಿಯ ನಿರ್ಮಾಣದಲ್ಲಿ ಉಪಯೋಗಿಸಲ್ಪಡುವ, ಅನ್ಯ ವ್ಯಕ್ತಿಗಳಿಗೆ ವರ್ಗಾವಣೆ ಮಾಡಲಾಗದಂತಹ ಆಸ್ತಿ ಗೆ ಸಂಬಧಿಸಿದಂತೆ (ಸರಕುಗಳ ಅಥವಾ ಇನ್ನಾವುದೇ ರೂಪದಲ್ಲಿ) ಅರ್ಜಿತ ಸರಕುಗಳು;

ಇ)ಭಾಗ 8ರಅನ್ವಯ ಸರಕು ಮತ್ತು ಅಥವಾ ಸೇವೆಗಳ ಮೇಲೆ ತೆರಿಗೆ ಪಾಟಿ ಮಾಡಲಾಗಿರುವ ಸಂದರ್ಭ; ಮತ್ತು ಎಫ್) ವ್ಯಕ್ತಿಕ ಅಥವಾ ನೀಜಿ ಸ್ವಂತ ಬಳಕೆಗೆ ಅವುಗಳನ್ನು ಬಳಸಲಾದ ಮಟ್ಟಿಗೆ ಸರಕುಗಳು ಅಥವಾ ಸೇವೆಗಳು.

ಪ್ರಶ್ನೆ 30: ಎಮ್‌ಜಿಎಲ್‌ನ ಭಾಗ 29 ರಡಿಯಲ್ಲಿ ಒಳಗೊಂಡಂತೆ, ಖರೀದಿದಾರರು ಸಲ್ಲಿಸುವ ಹೂಡುವಳಿಯವಿವರಣೆಗಳೊಂದಿಗೆ ಪೂರೈಕೆದಾರರು ಸಲ್ಲಿಸುವ ಹುಟ್ಟುವಳಿ ವಿವರಣೆಗಳು ಸಾರಿಸಮವಾಗಿದ್ದರೆ, ಐಟಿಸಿ ಖರೀದಿದಾರರಿಗೆ ದೊರಕುವುದೇ, ಸಮಾನಾತೆ ಇಲ್ಲದ ಸಂದರ್ಭದಲ್ಲಿಏನಾಗುತ್ತದೆ?

ಉತ್ತರ: ಅಂತಹ ಸಂದರ್ಭದಲ್ಲಿ, ಪೂರೈಕೆದಾರರು, 2ತಿಂಗಳಲ್ಲಿ ವಿವರಣೆಗಳನ್ನು ಸರಿಪಡಿಸಬೇಕು ಇಲ್ಲವಾದರೆ, ಖರೀದಿದಾರರಿಂದ ತೆರಿಗೆ ಜಮೆ ಮೊತ್ತವನ್ನು ಹಿಂಪಡಿಯಬೇಕಾಗುತ್ತದೆ.

ಪ್ರಶ್ನೆ 31 : ತೆರಿಗೆ ಬಾಧ್ಯ ವ್ಯಕ್ತಿಯು ಐಟಿಸಿ ಪಡೆದುಕೊಂಡ ಬಂಡವಾಳ ಸರಕನ್ನು ಪೂರೈಸಿದಾಗ, ತೆರಿಗೆಯ ಪರಿಣಾಮವೇನು

ಉತ್ತರ:ಭಾಗ 16(15) ಆ ಅನ್ವಯ, ನೋಂದಾಯಿತ ತೆರಿಗೆ ಬಾಧ್ಯ ವ್ಯಕ್ತಿಯು ಕಡಿತಗೊಳಿಸಿದ ತೆರಿಗೆ ಜಮೆಗೆ ಸಮಾನ ಅಥವಾ ಮಾರಾಟ ಬೆಲೆಯ ಮೇಲೆ ಅನ್ವಯವಾಗುವ ಮೊತ್ತ, ಇವುಗಳಲ್ಲಿ ಹೆಚ್ಚುಇರುವ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಪ್ರಶ್ನೆ 32: ತಪ್ಪಾಗಿ ಪಡೆದ ಐಟಿಸಿ ಜಮೆ ಯನ್ನು ವಸೂಲಿ ಮಾಡಲು ವಿಧಾನಗಳೇನು?

ಉತ್ತರ: ಎಮ್‌ಜಿಎಲ್‌ನ ಭಾಗ16(16)ರ ಅನ್ವಯ ತಪ್ಪಾಗಿ ಪಡೆದ ಜಮೆಯನ್ನು ನೋಂದಾಯಿತ ತೆರಿಗೆ ಬಾಧ್ಯವ್ಯಕ್ತಿಯಿಂದ ಭಾಗ 51 ರಡಿಯಲ್ಲಿ ವಸೂಲು ಮಾಡಲಾಗುವುದು.

*****

ಜಿಎಎಸ್‌ಟಿ ಅಡಿಯಲ್ಲಿ ಹೂಡುವಳಿ ಸೇವೆಗಳ ಹಂಚಿಕೆದಾರರ ಪರಿಕಲ್ಪನೆ

11. ಜಿಎಸ್‌ಟಿ ಅಡಿಯಲ್ಲಿ ಹೂಡುವಳಿ ಸೇವೆಗಳ ಹಂಚಿಕೆದಾರರ ಪರಿಕಲ್ಪನೆ

ಪ್ರಶ್ನೆ 1: ಹೂಡುವಳಿ ಸೇವೆಗಳ ಹಂಚಿಕೆದಾರರು ಎಂದರೇನು?

ಉತ್ತರ:ಎಂಜಿಎಲ್ (ಮಾದರಿ ಸರಕು ಮತ್ತು ಸೇವೆಗಳ ಕಾನೂನು)ನ ವಿಭಾಗ (ಸೆಕ್ಷನ್)2(56)ರ ಪ್ರಕಾರ, ವಿಭಾಗ (ಸೆಕ್ಷನ್)23ರ ಅನ್ವಯ ಸರಕು ಪಟ್ಟಿಗಳನ್ನು (ಇನ್ವಾಯಿಸ್) ಪಡೆಯುವ,ಅಥವಾ ಹೇಳಿರುವ ಸರಕುಗಳ ಮತ್ತು/ಅಥವಾ ಸೇವೆಗಳ ಮೇಲೆ ಪಾವತಿಸಲಾದ ತೆರಿಗೆಗಳು, ಅಂದರೆ ಸಿಜಿಎಸ್‌ಟಿ (ರಾಜ್ಯ ಅಧಿನಿಯಮದಡಿ ಎಸ್‌ಜಿಎಸ್‌ಟಿ) ಮತ್ತು ಅಥವಾ ಐಜಿಎಸ್‌ಟಿ ಜಮೆಯ ವಿತರಣೆಯ ಉದ್ದೇಶದಿಂದ ನಿರ್ಧಿಷ್ಟವಾದ ಯಾವುದೇ ಅಂತಹ ಸರಕುಗಳು ಮತ್ತು ಅಥವಾ ಸೇವೆಗಳ ಪೂರೈಕೆದಾರರ ಕಛೇರಿಗೆ (ಪೂರೈಕೆದಾರರು ಮತ್ತು ಕಚೇರಿಯ ಪ್ಯಾನ್‌ ಸಂಖ್ಯೆ ಒಂದೇ ಆಗಿರಬೇಕು) ಐಎಸ್‌ಡಿ ಹೂಡುವಳಿ ಸೇವೆಗಳ ಹಂಚಿಕೆದಾರರು ಎಂದು ಹೇಳಲಾಗುವುದು. ಜಮೆಯ ಹಂಚಿಕೆಯ ದೃಷ್ಟಿ ಇಂದ ಐಎಸ್‌ಡಿಯನ್ನು ಸೇವೆಗಳ ಪೂರೈಕೆದಾರರೆಂದು ಭಾವಿಸಲಾಗುತ್ತದೆ.

ಪ್ರಶ್ನೆ 2: ಐಎಸ್‌ಡಿಗೆ ನೋಂದಾಯಿಸಿಕೊಳ್ಳಲು ಏನೇನು ಅವಶ್ಯಕತೆಗಳಿವೆ?

ಉತ್ತರ:ಐಎಸ್‌ಡಿ ಒಬ್ಬರು ಸೇವೆಗಳ ಪೂರೈಕೆದಾರರೆಂದು ಪರಿಗಣಿಸಿ ನೋಂದಾಯಿಸಿಕೊಳ್ಳಬೇಕು. (ಅನುಭಂದ IIIರ ಪ್ಯಾರ 5(vii) ಸಹಿತ ಪಠಿಸಲ್ಪಡುವ ಭಾಗ19). ಐಎಸ್‌ಡಿಗಳ ನೋಂದಾಯಿತಿಗೆ ಕನಿಷ್ಠ ಪರಿಮಿತಿ ನಿರ್ಧರಿಸಲಾಗಿಲ್ಲ. ಈಗ ಪ್ರಚಲಿತ ಸೇವಾ ತೆರಿಗೆಗಳ ಪದ್ದತಿಯಲ್ಲಿ ನೋಂದಾಯಿತ ಐಎಸ್‌ಡಿಯನ್ನು ಜಿಎಸ್‌ಡಿ ಪದ್ದತಿಗೆ ವರ್ಗಾಯಿಸಲಾಗುವುದಿಲ್ಲ. ಈಗ ಇರುವ ಎಲ್ಲಾ ಐಎಸ್‌ಡಿಗಳು ಹೊಸ ಪದ್ದತಿಯಲ್ಲಿ ಐಎಸ್‌ಡಿ ಆಗಿ ಕೆಲಸ ಮಾಡಬೇಕಾದರೆ, ಮತ್ತೆ ಹೊಸದಾಗಿ ನೋಂದಾಯಿಸಿಕೊಳ್ಳಬೇಕು.

ಪ್ರಶ್ನೆ3 : ಜಮೆ ಹಂಚಿಕೆಗೆ ಯಾವ ಶರತ್ತುಗಳು ಅನ್ವಯವಾಗುತ್ತವೆ?

ಉತ್ತರ : ಜಮೆ ಹಂಚಿಕೆಗೆ ಕೆಳಕಂಡ ಶರತ್ತುಗಳು ಅನ್ವಯವಾಗುತ್ತವೆ.

 • ತೆರಿಗೆ ಇನ್ವಾಯಿಸ್ ಅಥವಾ ನಿರ್ಧಿಷ್ಟವಾದ ಇನ್ನಾವುದೇ ಕಾಗದ ಪಾತ್ರಗಳ ಮೂಲಕ ಜಮೆಯನ್ನು ಹಂಚಿಕೆ ಮಾಡತಕ್ಕದ್ದು ;
 • ಲಭ್ಯವಿರುವ ಜಮೆ ಮೊತ್ತಕಿಂತ ಹಂಚಿಕೆಯಾದ ಜಮೆ ಮೊತ್ತವು ಹೆಚ್ಚಾಗಿರಬಾರದು;
 • ಸೇವೆಗಳನ್ನು ಪೂರೈಕೆ ಮಾಡಬಹುದಾದ ಅಂತಹ ಪೂರೈಕೆದಾರರಿಗೆ ಮಾತ್ರ ಜಮೆಯನ್ನು ಹಂಚಬೇಕು;
 • ಒಬ್ಬರಿಗಿಂತ ಹೆಚ್ಚು ಪೂರೈಕೆದಾರರಿಗೆ ಸಲ್ಲುವ ಜಮೆಯನ್ನು ಪ್ರತಿಯೊಬ್ಬ ಪೂರೈಕೆದಾರರ ಹಿಂದಿನ ವರ್ಷದ ವಹಿವಾಟಿಗೆ ಅನುಗುಣವಾಗಿ ಅನುಪಾತದ ಮೇಲೆ ಹಂಚಿಕೆ ಮಾಡಬೇಕು.

ಪ್ರಶ್ನೆ 4: ಐಎಸ್‌ಡಿಗಳು ತೆರಿಗೆ ವಿವರಣೆಗಳನ್ನು ಸಲ್ಲಿಸಬೇಕೆ?

ಉತ್ತರ: ಹೌದು. ಎಮ್‌ಜಿಎಲ್‌ನ ಭಾಗ27 (6)ರ ಪ್ರಕಾರ, ಜಿಎಸ್‌ಟಿಆರ್- 6 ಪ್ರಪತ್ರದಲ್ಲಿ ಮಾಸಿಕ ವಿವರಣೆಯನ್ನು, ಪ್ರತಿ ತಿಂಗಳ ನಂತರದ ತಿಂಗಳಿನ 13ನೇ ತಾರೀಕಿನೊಳಗೆ ಸಲ್ಲಿಸಬೇಕು.

ಪ್ರಶ್ನೆ 5 : ಯಾವುದಾದರೂ ಕಂಪನಿ ವಿಭಿನ್ನ ಐಎಸ್‌ಡಿಗಳನ್ನು ಹೊಂದಿರಬಹುದೇ?

ಉತ್ತರ:ಹೌದು. ಬೇರೆಬೇರೆ ಕಛೇರಿಗಳು ಉದಾಹರಣೆಗೆ ಮಾರಾಟ ವಿಭಾಗ, ರಕ್ಷಣಾ ವಿಭಾಗ ಹೀಗೆ ಬೇರೆಬೇರೆ ಐಎಸ್‌ಡಿ ಗಳನ್ನು ಹೊಂದಿರಬಹುದು.

ಪ್ರಶ್ನೆ 6 : ಐಎಸ್‌ಡಿಗಳ ಮೂಲಕ ತಪ್ಪಾಗಿ ಅಥವಾ ಹೆಚ್ಚಾಗಿ ಹಂಚಲಾದ ಜಮೆಯನ್ನು ವಾಪಸ್ಸು ಪಡೆಯುವ ಉಪಬಂಧಗಳು ಯಾವುವು?

ಉತ್ತರ : ಮಾದರಿ ಜಿಎಸ್‌ಡಿ ಕಾನೂನಿನ ಭಾಗ 18(1) ಮತ್ತು 18(2) ರಡಿಯಲ್ಲಿ ತಪ್ಪಾಗಿ ಅಥವಾ ಹೆಚ್ಚಾಗಿ ಹಂಚಲಾದ ಜಮೆಯನ್ನು ವಾಪಸ್ಸು ಪಡೆಯುವ ಸಲುವಾಗಿ ಎಮ್ಜಿಎಲ್ ನ ಭಾಗ 51 ರಡಿಯಲ್ಲಿ ಐಎಸ್‌ಡಿ ಯ ವಿರುದ್ಧ ಅಥವಾ ಜಮೆಯನ್ನು ಪಡೆದಿರುವವರ ವಿರುದ್ಧ ಕ್ರಮವನ್ನು ಪ್ರಾರಭಿಸುವ ವ್ಯವಸ್ಥೆ ಮಾಡಲಾಗಿದೆ.

ಪ್ರಶ್ನೆ 7 : ಐಎಸ್‌ಡಿ ಮೂಲಕ, ಸಿಜಿಎಸ್‌ಟಿ ಮತ್ತು ಐಜಿಎಸ್‌ಟಿ ಜಮೆಯನ್ನು ಬೇರೆಬೇರೆ ರಾಜ್ಯಗಳಲ್ಲಿ ಇರುವ ಘಟಕಗಳಿಗೆ ಐಜಿಎಸ್‌ಟಿ ಜಮೆಯ ರೂಪದಲ್ಲಿ ಹಂಚಿಕೆ ಮಾಡಬಹುದೇ?

ಉತ್ತರ:ಹೌದು. ಐಎಸ್‌ಡಿ ಮೂಲಕ, ಸಿಜಿಎಸ್‌ಟಿ ಜಮೆಯನ್ನು ಮತ್ತು ಐಜಿಎಸ್‌ಟಿ ಜಮೆಯನ್ನು ಬೇರೆಬೇರೆ ರಾಜ್ಯಗಳಲ್ಲಿ ಇರುವ ಘಟಕಗಳಿಗೆ ಐಜಿಎಸ್‌ಟಿ ಜಮೆಯರೂಪದಲ್ಲಿ ಹಂಚಿಕೆಮಾಡಬಹುದು.ಭಾಗ17(1)).

ಪ್ರಶ್ನೆ 8: ಐಜಿಎಸ್‌ಡಿ ಮೂಲಕ, ಎಸ್‌ಜಿಎಸ್‌ಟಿ ಜಮೆಯನ್ನು ಬೇರೆಬೇರೆ ರಾಜ್ಯಗಳಲ್ಲಿ ಇರುವ ಘಟಕಗಳಿಗೆ ಐಜಿಎಸ್‌ಟಿ ಜಮೆಯ ರೂಪದಲ್ಲಿ ಹಂಚಿಕೆ ಮಾಡಬಹುದೇ?

ಉತ್ತರ : ಹೌದು. ಐಎಸ್‌ಡಿ ಮೂಲಕ, ಎಸ್‌ಜಿಎಸ್‌ಟಿ ಜಮೆಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಇರುವ ಘಟಕಗಳಿಗೆ ಐಜಿಎಸ್‌ಟಿ ಜಮೆಯ ರೂಪದಲ್ಲಿ ಹಂಚಿಕೆ ಮಾಡಬಹುದು . ಭಾಗ 17(2)).

ಪ್ರಶ್ನೆ 9 : ಐಎಸ್‌ಡಿ ಮೂಲಕ, ಸಿಜಿಎಸ್‌ಟಿ ಮತ್ತು ಐಜಿಎಎಸ್‌ಟಿ ಜಮೆಯನ್ನು ಸಿಜಿಎಸ್ಟಿ ಜಮೆಯ ರೂಪದಲ್ಲಿ ಹಂಚಿಕೆ ಮಾಡಬಹುದೇ?

ಉತ್ತರ: ಹೌದು. ಐಎಸ್‌ಡಿ ಮೂಲಕ, ಸಿಜಿಎಸ್‌ಟಿ ಮತ್ತು ಐಜಿಎಸ್‌ಟಿ ಜಮೆಯನ್ನು ಒಂದೇ ರಾಜ್ಯದಲ್ಲಿ ಇರುವ ಘಟಕಗಳಿಗೆ ಸಿಜಿಎಸ್‌ಟಿ ಜಮೆಯ ರೂಪದಲ್ಲಿ ಹಂಚಿಕೆ ಮಾಡಬಹುದು .

ಪ್ರಶ್ನೆ 10 : ಎಸ್‌ಜಿಎಸ್‌ಟಿ ಮತ್ತು ಐಜಿಎಸ್‌ಟಿ ಜಮೆಯನ್ನು ಎಸ್‌ಜಿಎಸ್‌ಟಿ ಜಮೆಯ ರೂಪದಲ್ಲಿ ಹಂಚಿಕೆ ಮಾಡಬಹುದೇ?

ಉತ್ತರ : ಹೌದು. ಐಎಸ್‌ಡಿ ಮೂಲಕ, ಎಸ್‌ಜಿಎಸ್‌ಟಿ ಮತ್ತು ಐಜಿಎಸ್ಟಿ ಜಮೆಯನ್ನು ಒಂದೇ ರಾಜ್ಯದಲ್ಲಿ ಇರುವ ಘಟಕಗಳಿಗೆ ಐಜಿಎಸ್‌ಟಿ ಜಮೆಯ ರೂಪದಲ್ಲಿ ಹಂಚಿಕೆ ಮಾಡಬಹುದು.

ಪ್ರಶ್ನೆ 11 : ಐಎಸ್‌ಟಿ ಒಬ್ಬರ ಮೂಲಕ ಜಮೆಯನ್ನು ಹಂಚಿಕೆ ಮಾಡಲು ಬೇಕಾದಕಾಗದಪತ್ರಗಳು ಯಾವುವು?

ಉತ್ತರ : ಜಮೆಯನ್ನು ಹಂಚಿಕೆ ಮಾಡಲು ಬೇಕಾದ ಕಾಗದ ಪತ್ರಗಳನ್ನು ಇನ್ನೂ ನಿರ್ಧಿಷ್ಟ ಪಡಿಸಬೇಕಾಗಿದೆ.ಜಮೆಯನ್ನು ನಿರ್ಧಿಷ್ಟ ಕಾಗದ ಪತ್ರಗಳು ಮೂಲಕವೇ ಹಂಚಿಕೆ ಮಾಡಬೇಕು ಎಂದು ಅಧಿನಿಯಮದಲ್ಲಿ ಹೇಳಲಾಗಿದೆ.

ಪ್ರಶ್ನೆ 12: ಐಎಸ್‌ಡಿ ಒಬ್ಬರ ಎಲ್ಲಾ ಘಟಕಗಳ ನಡುವೆ ಸಾಮಾನ ರೂಪದಲ್ಲಿ ಹೇಗೆ ಹಂಚಿಕೆ ಮಾಡಬೇಕು ?

ಉತ್ತರ: ಎಲ್ಲಾ ಘಟಕಗಳ ಸಮಗ್ರ ವಹಿವಾಟಿನಲ್ಲಿ, ಪ್ರತಿಯೊಂದು ಘಟಕದ ವಹಿವಾಟನ್ನು ಆಧರಿಸಿ ಅನುಪಾತಿಕ ರೂಪದಲ್ಲಿ ಐಎಸ್‌ಡಿಗಳ ಮೂಲಕ ಎಲ್ಲಾ ಘಟಕಗಳಿಂದ ಬಳಸಲ್ಪಟ್ಟ ಸಾಮಾನ್ಯ ಜಮೆಯನ್ನು ಹಂಚಿಕೆ ಮಾಡಬಹುದು.

ಪ್ರಶ್ನೆ 13 : ಈ ಕೆಳಕಂಡವುಗಳಲ್ಲಿ ಐಎಸ್‌ಡಿಯು ಸಿಜಿಎಸ್‌ಟಿ ಮತ್ತು ಐಜಿಎಸ್‌ಟಿ ಜಮೆಯನ್ನು ರಾಜ್ಯದ ಹೊರಗಿರುವ ಪೂರೈಕೆದಾರರಿಗೆ ಯಾವ ರೂಪದಲ್ಲಿ ಹಂಚಿಕೆ ಮಾಡ ಬಹುದು?

 • ಐಜಿಎಸ್‌ಟಿ
 • ಸಿಜಿಎಸ್‌ಟಿ
 • ಎಸ್‌ಜಿ ಎಎಸ್‌ಟಿ ಉತ್ತರ : ಐಜಿಎಸ್‌ಟಿ.

ಪ್ರಶ್ನೆ 14: ಈ ಕೆಳಕಂಡವುಗಳಲ್ಲಿ ಐಎಸ್‌ಡಿಯು ಸಿಜಿಎಸ್‌ಟಿ ಜಮೆಯನ್ನು ರಾಜ್ಯದ ಒಳಗಿರುವ ಪೂರೈಕೆದಾರರಿಗೆ ಯಾವ ರೂಪದಲ್ಲಿ ಹಂಚಿಕೆ ಮಾಡ ಬಹುದು?

 • ಐಜಿಎಸ್‌ಟಿ
 • ಸಿಜಿಎಸ್‌ಟಿ
 • ಎಸ್‌ಜಿಎಸ್‌ಟಿ
 • ಮೇಲಿನ ಯಾವುದಾದರೂ ರೂಪದಲ್ಲಿ ಉತ್ತರ: ಸಿಜಿಎಸ್‌‌ಟಿ.

ಪ್ರಶ್ನೆ 15: ಹೂಡುವಳಿ ಸೇವೆಗಳ ಮೇಲೆ ಒಬ್ಬರಿಗಿಂತ ಹೆಚ್ಚುಪೂರೈಕೆದಾರರಿಂದ ಬಳಸಲ್ಪಟ್ಟ ತೆರಿಗೆ ಪಾವತಿ ಜಮೆಯನ್ನು:

 • ಸಂಬಂಧಿಸಿದ ರಾಜ್ಯದಲ್ಲಿ ಹೂಡುವಳಿ ಸೇವೆಗಳನ್ನು ಬಳಸಿದ ಪೂರೈಕೆದಾರರ ನಡುವೆ ಅಂತಹ ವಹಿವಾಟಿನ ಅನುಪಾತದ ಮೇಲೆ ಹಂಚಿಕೆ;
 • ಎಲ್ಲಾ ಪೂರೈಕೆದಾರರ ನಡುವೆ ಸಮಾನವಾಗಿ ಹಂಚಿಕೆ;
 • ಒಬ್ಬರೇ ಪೂರೈಕೆದಾರರಿಗೆ ಹಂಚಿಕೆ;
 • ಹಂಚಿಕೆ ಮಾಡಲಾಗುವುದಿಲ್ಲ.

ಉತ್ತರ : ಸಂಬಂಧಿಸಿದ ರಾಜ್ಯದಲ್ಲಿ ಹೂಡುವಳಿ ಸೇವೆಗಳನ್ನು ಬಳಸಿದ ಪೂರೈಕೆದಾರರ ನಡುವೆ ಅಂತಹ ವಹಿವಾಟಿನ ಅನುಪಾತದ ಮೇಲೆ ಹಂಚಿಕೆ .

ಪ್ರಶ್ನೆ 16: ಹಂಚಿಕೆ ಮಾಡಲಾದ ಹೆಚ್ಚಿನ ಜಮೆಯನ್ನು ಇಲಾಖೆಯಿಂದ ಹಿಂದಕ್ಕೆ ಪಡೆಯಬಹುದೇ?

ಉತ್ತರ: ಹೌದು. ಐಎಸ್‌ಡಿ ಒಬ್ಬರಿಂದ ಹಂಚಿಕೆ ಮಾಡಲಾದ ಹೆಚ್ಚಿನ ಜಮೆಯನ್ನು ಬಡ್ಡಿ ಸಹಿತ ಇಲಾಖೆಯಿಂದ ಹಿಂದಕ್ಕೆ ಪಡೆಯಬಹುದು.

ಪ್ರಶ್ನೆ 17: ಅಧಿನಿಯಮದ ಉಪಬಂಧಗಳ ಉಲ್ಲಂಘನೆ ಮಾಡಿ ಜಮೆಯನ್ನು ಹಂಚಿಕೆ ಮಾಡಿದರೆ ಪರಿಣಾಮಗಳೇನು?

ಉತ್ತರ : ಅಧಿನಿಯಮದ ಉಪಬಂಧಗಳ ಉಲ್ಲಂಘನೆ ಮಾಡಿ, ಹಂಚಿಕೆ ಮಾಡಲಾದ ಘಟಕಗಳಿಂದ ಹೆಚ್ಚಿನ ಜಮೆಯನ್ನು ಬಡ್ಡಿ ಸಹಿತ ಇಲಾಖೆಯಿಂದ ಹಿಂದಕ್ಕೆ ಪಡೆಯಬಹುದು.

****

ರಿಟರ್ನ್ಸ್‌ (ವಿವರಗಳು) ಸಲ್ಲಿಸುವ ಪ್ರಕ್ರಿಯೆ ಮತ್ತು

ಹೂಡುವಳಿ ತೆರಿಗೆ ಜಮೆ ಹೊಂದಾಣಿಕೆ


12. ರಿಟರ್ನ್ಸ್‌ ಸಲ್ಲಿಸುವಪ್ರಕ್ರಿಯೆಮತ್ತುಹೂಡುವಳಿತೆರಿಗೆಜಮೆಹೊಂದಾಣಿಕೆ

ಪ್ರಶ್ನೆ1: ರಿಟರ್ನ್ಸ್‌ ಸಲ್ಲಿಸುವ ಉದ್ದೇಶವೇನು?

ಉತ್ತರ: ಎ) ತೆರಿಗೆ ನಿರ್ವಹಣೆ ನೋಡಿಕೊಳ್ಳುವ ಆಡಳಿತಕ್ಕೆ ಮಾಹಿತಿಯನ್ನು ವರ್ಗಾಯಿಸುವ ವಿಧಾನ.

ಬಿ)ತೆರಿಗೆ ನಿರ್ವಹಣೆ ಆಡಳಿತಕ್ಕೆ ತೆರಿಗೆ ಪಾವತಿಯಾಗಿರುವುದನ್ನು ಪರಿಶೀಲಿನೆಗೆ ಅನುಕೂಲ.

ಸಿ)ನಿಗದಿತ ಅವಧಿಗೆ ತೆರಿಗೆದಾರ ಪಾವತಿಸಿರುವ ತೆರಿಗೆ ಪ್ರಮಾಣ ನಿಗದಿಪಡಿಸಲು ಹಾಗೂ ತೆರಿಗೆದಾರನ ಮೇಲಿರುವ ತೆರಿಗೆ ಬಾದ್ಯತೆಯನ್ನು ನಿರ್ಧರಿಸುವುದಕ್ಕೆ ಸಹಕಾರಿ

ಡಿ)ಸೂಕ್ತ ನೀತಿ ರೂಪಿಸಲು ಬೇಕಾದ ನಿಜ ಸಂಗತಿ ಮತ್ತು ಅಂಕಿ ಅಂಶಗಳನ್ನು ನೀಡಲು ಸಹಕಾರಿ.

ಇ) ಲೆಕ್ಕ ತಪಾಸಣೆಯ ನಿರ್ವಹಣೆಗೆ ಮತ್ತು ತೆರಿಗೆ ವಂಚನೆ ರೀತಿನೀತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯಕ.

ಪ್ರಶ್ನೆ2: ಜಿಎಸ್‌ಟಿಯಲ್ಲಿ ಯಾರು ರಿಟರ್ನ್ಸ್‌ ಸಲ್ಲಿಸಬೇಕು?

ಉತ್ತರ: ತೆರಿಗೆಯ ಕನಿಷ್ಠ ಮಿತಿಯನ್ನು ಮೀರಿದ ಪ್ರತಿಯೊಬ್ಬ ನೋಂದಾಯಿತ ತೆರಿಗೆದಾರರು ವಿವರಣೆಯನ್ನು ಸಲ್ಲಿಸಬೇಕು. ಒಟ್ಟು ವಹಿವಾಟು ಒಂಬತ್ತು ಲಕ್ಷ ಮೊಬಲಗುವನ್ನು ಮೀರಿದರೆ ಪೂರೈಕೆದಾರರು ನೋಂದಾಯಿಸಿಕೊಳ್ಳಬೇಕು. ವಾರ್ಷಿಕ 10 ಲಕ್ಷ ರೂ.ಗಳ ಮಿತಿ ಮೀರಿ ವಹಿವಾಟು ನಡೆಸಿದರೆ ಮಾತ್ರ ತೆರಿಗೆದಾರನಾಗುತ್ತಾನೆ. ಆಗ ಅವನು ರಿಟನ್ರ್ಸ್‌ ಸಲ್ಲಿಸಬೇಕು. ಇದಲ್ಲದೆ ಮತ್ತೆ ಕೆಲವರು ಬೇರೆ ಕಾರಣಗಳಿಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಅವರೂ ರಿಟರ್ನ್ಸ್‌ ಸಲ್ಲಿಸಬೇಕಾಗುತ್ತದೆ. ಉದಾಹರಣೆಗೆ ಅಂತರರಾಜ್ಯ ಪೂರೈಕೆದಾರರು, ಟಿಡಿಎಸ್‌ ಹಿಡಿದುಕೊಳ್ಳುವವರು, ಇ-ಕಾಮರ್ಸ್ ಬಳಕೆದಾರರು, ಇ-ಕಾಮರ್ಸ್‌ ಬಳಕೆದಾರರ ಮೂಲಕ ತಮ್ಮ ವಸ್ತುಗಳನ್ನು ಪೂರೈಕೆ ಮಾಡುವವರು ಮತ್ತು ಇತರೆ ವರ್ಗದವರು. (ಉಲ್ಲೇಖ: ನೋಂದಣಿ ಅಧ್ಯಾಯದಲ್ಲಿ ಷೆಡ್ಯೂಲ್-3, ಪ್ರಶ್ನೆ 6)

ಪ್ರಶ್ನೆ 3: ರಿಟರ್ನ್ಸ್‌ನಲ್ಲಿ ಯಾವ ರೀತಿಯ ಹೊರಗಿನ ಪೂರೈಕೆಗೆ ಸಂಬಂಧಿಸಿದಂತೆ ವಿವರಗಳನ್ನು ಸಲ್ಲಿಸಬೇಕು?

ಉತ್ತರ: ಆಯಾ ತಿಂಗಳಲ್ಲಿ ಸಾಮಾನ್ಯ ತೆರಿಗೆದಾರ ಜಿಎಸ್‌ಟಿಆರ್-1ರಲ್ಲಿ ಹೊರಗಿನ ಪೂರೈಕೆಗೆ ಸಂಬಂಧಿಸಿದಂತೆ ರಿಟರ್ನ್ಸ್‌ ಸಲ್ಲಿಸಬೇಕು. ಇದರಲ್ಲಿ ಹೊರಗಿನ ನೋಂದಾಯಿತ ಅಥವ ನೋಂದಾಯಿತರಲ್ಲದವರಿಗೆ (ಗ್ರಾಹಕರು) ಪೂರೈಕೆ ಮಾಡಿದ ವಸ್ತುಗಳಿಗೆ ಸಂಬಂಧಸಿದಂತೆ ಕ್ರೆಡಿಟ್/ಡಿಬಿಟ್‌ನ ಟಿಪ್ಪಣಿಗಳು, ಶೂನ್ಯತೆರಿಗೆ ಇದ್ದಲ್ಲಿ, ತೆರಿಗೆ ವಿನಾಯಿತಿ ಪಡೆದಿದ್ದಲ್ಲಿ, ಜಿಎಸ್‌ಟಿ ವ್ಯಾಪ್ತಿಗೆ ಬಾರದ ಪೂರೈಕೆದಾರರು, ರಫ್ತುದಾರರು ಮತ್ತು ಭವಿಷ್ಯದಲ್ಲಿ ಪೂರೈಕೆ ಮಾಡುವುದಕ್ಕೆ ಸಂಬಂಧಸಿದಂತೆ ಪಡೆದ ಮುಂಗಡಗಳ ವಿವರ ನೀಡಬೇಕು.

ಪ್ರಶ್ನೆ 4: ಜಿಎಸ್‌‌ಟಿಆರ್-1ರಲ್ಲಿಇನ್ವಾಯ್ಸ್‌ಗಳ ಛಾಯಾ ಪ್ರತಿಗಳನ್ನು (ಸ್ಕ್ಯಾನ್‌) ಕಳುಹಿಸಬೇಕೆ?

ಉತ್ತರ: ಇಲ್ಲ.ಇನ್ವಾಯ್ಸ್‌ನಲ್ಲಿ ಕೇವಲ ನಿರ್ದಿಷ್ಟ ಮಾಹಿತಿಗಳನ್ನು ಕಂಪ್ಯೂಟರ್‌ ಮೂಲಕ ರವಾನಿಸಬೇಕಾಗುತ್ತದೆ.

ಪ್ರಶ್ನೆ 5: ಎಲ್ಲ ಇನ್ವಾಯ್ಸ್‌ಗಳನ್ನು ಕಂಪ್ಯೂಟರ್‌ ಮೂಲಕ ಅಪ್‌ಲೋಡ್‌ ಮಾಡಬೇಕೆ?

ಉತ್ತರ: ಇಲ್ಲ.ಆದರೆ ಕೆಲವು ಸಂದರ್ಭಗಳಲ್ಲಿ ವ್ಯಾಪಾರಿಯಿಂದ ವ್ಯಾಪಾರಿಗೆ, ವ್ಯಾಪಾರಿಯಿಂದ ಗ್ರಾಹಕನಿಗೆ ಹಾಗೂ ಅಂತಾರಾಜ್ಯ ಅಥವ ರಾಜ್ಯದೊಳಗೆ ವ್ಯವಹಾರ ನಡೆದಿದ್ದಲ್ಲಿ ಇನ್ವಾಯ್ಸ್‌ಬೇಕು.

ಉದಾಹರಣೆಗೆ: ವ್ಯಾಪಾರಿಯಿಂದ ವ್ಯಾಪಾರಿಗೆ ವ್ಯವಹಾರ ನಡೆದಿದ್ದರೆ ಎಲ್ಲಾ ಇನ್ವಾಯ್ಸ್‌ಗಳು ಬೇಕು. ವ್ಯಾಪಾರ ರಾಜ್ಯದೊಳಗೆ ಅಥವ ಅಂತಾರಾಜ್ಯವಿರಬಹುದು ಇನ್ವಾಯ್ಸ್‌ಬೇಕು. ಏಕೆಂದರೆ, ಐಟಿಸಿಯನ್ನು ಸ್ವೀಕೃತಿದಾರರಿಂದ ಪಡೆಯುವುದರಿಂದ ಇನ್ವಾಯ್ಸ್‌ ಮೂಲಕ ತಾಳೆ ಹಾಕಬೇಕು. ವ್ಯಾಪಾರಿಯಿಂದ ಗ್ರಾಹಕನಿಗೆ ವ್ಯವಹಾರ ನಡೆದಿದ್ದರೆ, ಸಾಮಾನ್ಯವಾಗಿ ಗ್ರಾಹಕ ಐಟಿಸಿ ತೆಗೆದುಕೊಳ್ಳದೆ ಇರುವುದರಿಂದ ಇನ್ವಾಯ್ಸ್‌ಗಳನ್ನು ಕಳುಹಿಸುವ ಅಗತ್ಯ ಬರುವುದಿಲ್ಲ. ಆದರೆ ವ್ಯಾಪಾರ ಯಾವ ಸ್ಥಳದಲ್ಲಿ ನಡೆದಿದೆಯೋ ಅಲ್ಲಿಯೇ ತೆರಿಗೆ ನಿರ್ಧಾರವಾಗಬೇಕು ಎಂಬ ನಿಯಮದಂತೆ ಅಂತಾ ರಾಜ್ಯವಾದಲ್ಲಿ 2.5ಲಕ್ಷರೂ. ಮೀರಿದ ವ್ಯಾಪಾರಿಯಿಂದ ವ್ಯಾಪಾರಿಗೆ ನಡೆದ ಪೂರೈಕೆಯ ಇನ್ವಾಯ್ಸ್‌ಗಳನ್ನು ಅಪ್ಲೋಡ್‌‌ ಮಾಡಬೇಕು. ಒಂದು ವೇಳೆ ರಾಜ್ಯದೊಳಗೆ 2.5ಲಕ್ಷ ರೂ. ಒಳಗೆ ಹಾಗೂ ರಾಜ್ಯದೊಳಗೆ ನಡೆದ ಎಲ್ಲ ಪೂರೈಕಗಳ ಇನ್ವಾಯ್ಸ್‌ಗಳನ್ನು ರಾಜ್ಯವಾರು ಸಂಕ್ಷಿಪ್ತ ವರದಿ ಸಲ್ಲಿಸಿದರೆ ಸಾಕು.

ಪ್ರಶ್ನೆ 6: ಇನ್ವಾಯ್ಸ್‌ನಲ್ಲಿ ಪ್ರತಿಯೊಂದಕ್ಕೂ ಸಂಬಂಧಿಸಿದಂತೆ ವಿವರ ಸಲ್ಲಿಸಲೇಬೇಕೆ?

ಉತ್ತರ: ಇಲ್ಲ. ವಿವರವನ್ನು ಎಲ್ಲ ಸಂದರ್ಭಗಳಲ್ಲೂ ಸಲ್ಲಿಸಬೇಕಿಲ್ಲ. ಅದರೆ ಸರಕುಗಳನ್ನು ಸರಬರಾಜು ಮಾಡಿದ್ದಲ್ಲಿ ಎಚ್ಎಸ್ಎನ್ ಸಂಖ್ಯೆ ಮತ್ತು ಸೇವೆಗಳನ್ನು ನೀಡಿದ್ದಲ್ಲಿ ಲೆಕ್ಕದ ಸಂಖ್ಯೆ ನೀಡಬೇಕು. ಪ್ರತಿ ತೆರಿಗೆದಾರ ಸಲ್ಲಿಸಬೇಕಾದ ಅಂಕಿ ಸಂಖ್ಯೆಗಳು ಆತ ಕಳೆದ ವರ್ಷ ನಡೆಸಿದ ವಹಿವಾಟನ್ನು ಅವಲಂಬಿಸಿರುತ್ತದೆ.

ಪ್ರಶ್ನೆ 7 : ಪ್ರತಿಯೊಂದು ವ್ಯವಹಾರದ ಮೊತ್ತವನ್ನು ಪ್ರತ್ಯೇಕವಾಗಿ ನಮೂದಿಸಬೇಕೆ? ಒಂದು ವೇಳೆ ಪರಿಗಣನೆಗೆ ಬಾರದಿರುವುದು ಇದ್ದಲ್ಲಿ?

ಉತ್ತರ: ಹೌದು. ವ್ಯವಹಾರದ ಮೊತ್ತವಲ್ಲದೆ ತೆರಿಗೆ ಮೊತ್ತವನ್ನೂ ನಮೂದಿಸಬೇಕು. ಕೆಲವು ಪ್ರಕರಣಗಳಲ್ಲಿ ಇದುಬೇರೆ ಬೇರೆಯಾಗಿರುತ್ತದೆ. ಒಂದುವೇಳೆ ಪರಿಗಣನೆಗೆ ಬಾರದಿರುವುದು ಇದ್ದಲ್ಲಿ, ಷೆಡ್ಯೂಲ್-1 ರಂತೆ ಸರಬರಾಜು ಇದ್ದಲ್ಲಿ ತೆರಿಗೆ ಮೌಲ್ಯವನ್ನು ನಮೂದಿಸಬೇಕು.

ಪ್ರಶ್ನೆ 8: ಒಂದು ವೇಳೆ ಸರಬರಾಜುದಾರ ಮಾಹಿತಿ ನೀಡುವುದನ್ನು ಕೈಗೊಳ್ಳದೆ ಇದ್ದಲ್ಲಿ ಸ್ವೀಕೃತಿದಾರ ತನ್ನ ಜಿಎಸ್‌ಟಿಆರ್-2ನಲ್ಲಿ ಅದನ್ನು ನಮೂದಿಸಬಹುದೇ?

ಉತ್ತರ: ಹೌದು. ಸ್ವೀಕೃತಿದಾರ ತನ್ನ ಸರಬರಾಜುದಾರ ಇನ್ವಾಯ್ಸ್‌ಗಳನ್ನು ನಮೂದಿಸದೇ ಇದ್ದಲ್ಲಿ ತಾನೇ ಅದನ್ನು ಕಂಪ್ಯೂಟರ್‌ ಮೂಲಕ ಒದಗಿಸಬಹುದು. ಅ ಇನ್ವಾಯ್ಸ್‌ಗಳಿಗೆ ತಾತಾಲ್ಕಿಕವಾಗಿ ಕ್ರೆಡಿಟ್‌ ನೀಡಲಾಗುವುದು.ಆದರೆ ನಂತರ ಸರಬರಾಜುದಾರನ ಮಾಹಿತಿಯೊಂದಿಗೆ ತಾಳೆ ಹಾಕಿ ನೋಡಲಾಗುವುದು. ಒಂದು ವೇಳೆ ಸರಬರಾಜುದಾರ ಇನ್ವಾಯ್ಸ್‌ ನಮೂದಿಸಿಲ್ಲ ಎಂದರೆ ಇಬ್ಬರಿಗೂ ಸೂಚನೆ ನೀಡಲಾಗುವುದು. ಒಂದು ವೇಳೆ ಲೆಕ್ಕ ಸರಿಯಾಗಿ ತಾಳೆಯಾಗುವಂತೆ ಮಾಡಿದ್ದಲ್ಲಿ ತಾತ್ಕಾಲಿಕವಾಗಿ ನೀಡಿದ ಕ್ರೆಡಿಟನ್ನು ಕಾಯಂಗೊಳಿಸಲಾಗುವುದು. ಒಂದು ವೇಳೆ ಸೂಚನೆಗೆ ಇಬ್ಬರೂ ಸ್ಪಂದಿಸಲಿಲ್ಲ ಎಂದರೆ ತಾತ್ಕಾಲಿಕವಾಗಿ ನೀಡಿದ್ದ ಕ್ರೆಡಿಟನ್ನು ಹಿಂದಕ್ಕೆ ಪಡೆಯಲಾಗುವುದು.

ಪ್ರಶ್ನೆ 9 : ತೆರಿಗೆದಾರ ಜಿಎಸ್‌ಟಿಆರ್-2 ರಲ್ಲಿ ಏನಾದರೂ ನಮೂದಿಸಬೇಕೆ. ಅಥವ ಜಿಎಸ್‌ಟಿಆರ್-1 ರಲ್ಲಿ ನಮೂದಿಸಿದ್ದು ತಂತಾನೇ ಜಿಎಸ್‌ಟಿಆರ್-2 ನಲ್ಲಿ ನಮೂದಾಗುತ್ತದೆಯೇ?

ಉತ್ತರ: ಜಿಎಸ್‌ಟಿಆರ್-2 ನಲ್ಲಿ ಬಹುತೇಕ ವಿಷಯಗಳು ತಂತಾನೇ ನಮೂದಾಗುತ್ತದೆ. ಕೆಲವು ಸಂಗತಿಗಳನ್ನು ತೆರಿಗೆದಾರನೇ ಭರ್ತಿ ಮಾಡಬೇಕು. ಉದಾಹರಣೆಗೆ ಆಮದು ಮಾಡಿಕೊಂಡ ವಿವರಗಳು, ನೋಂದಾಯಿಸದೇಇರುವ ಅಥವ ರಿಯಾಯಿತಿ (ಕಾಂಪೋಸಿಷನ್) ಪಡೆದ ಸರಬರಾಜುದಾರನಿಂದ ಖರೀದಿಮಾಡಿದ್ದು,ವಿನಾಯಿತಿ/ಜಿಎಸ್ಟಿವ್ಯಾಪ್ತಿಗೆ ಬಾರದವರು/ ಜಿಎಸ್ಟಿ ಇಲ್ಲದ ಸರಬರಾಜುದಾರರು.

ಪ್ರಶ್ನೆ 10: ಒಂದು ವೇಳೆ ಇನ್ವಾಯ್ಸ್‌ಗಳು ತಾಳೆ ಹಾಕಿದಾಗ ಸರಿಯಾಗಿಲ್ಲ ಎಂದು ಕಂಡು ಬಂದಲ್ಲಿ, ಐಟಿಸಿ ಕೊಟ್ಟದ್ದನ್ನು ನಿರಾಕರಿಸಿದ್ದಲ್ಲಿ, ಸರಬರಾಜುದಾರರ ಮೇಲೆ ಏನುಕ್ರಮ ಕೈಗೊಳ್ಳಲಾಗುವುದು?

ಉತ್ತರ: ಜಿಎಸ್‌ಟಿಆರ್-2 ಇನ್ವಾಯ್ಸ್‌ಗಳು ಜಿಎಸ್‌ಟಿಆರ್ -1 ಇನ್ವಾಯ್ಸ್‌ಗಳಿಗೆ ಹೊಂದಾಣಿಕೆ ಆಗದೇ ಹೋದಲ್ಲಿ ಐಟಿಸಿಯನ್ನು ಹಿಂದಕ್ಕೆ ಪಡೆಯಲಾಗುವುದು. ಇಬ್ಬರಿಗೂ ತಿಳಿಸಿದ ಮೇಲೂ ಹೊಂದಾಣಿಕೆ ಸರಿಪಡಿಸದೇ ಹೋದಲ್ಲಿ ಕ್ರಮಕೈಗೊಳ್ಳುವುದು ಅನಿವಾರ್ಯ. ಹೊಂದಾಣಿಕೆ ಆಗದೇ ಇರುವುದಕ್ಕೆ ಎರಡು ಕಾರಣಗಳಿರಬಹುದು. ಮೊದಲನೆಯದು ಸ್ವೀಕರಿಸಿದ ವ್ಯಕ್ತಿಯಿಂದ ತಪ್ಪುಗಳಾಗಿದ್ದರೆ, ಆಗ ಕ್ರಮ ಕೈಗೊಳ್ಳುವ ಅಗತ್ಯ ಇರುವುದಿಲ್ಲ. ಎರಡನೆಯದಾಗಿ ಸರಬರಾಜುದಾರ ಮಾರಾಟ ಮಾಡಿ ಇನ್ವಾಯ್ಸ್‌ ಸಲ್ಲಿಸಿ ಕಂಪ್ಯುಟರ್ ಮೂಲಕ ಅಪ್ಲೋಡ್ ಮಾಡದೆ ಇದ್ದಲ್ಲಿ ತೆರಿಗೆ ಪಾವತಿಮಾಡಿಲ್ಲ ಎಂದರ್ಥ. ಆಗ ಸರಬರಾಜುದಾರನ ವಿರುದ್ಧ ತೆರಿಗೆ ವಸೂಲಿಗೆ ಕ್ರಮಜರುಗಿಸುವುದು ಅನಿವಾರ್. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇನ್ವಾ ಯ್ಸ್‌ಹೊಂದಾಣಿಕೆ ಆಗಲಿಲ್ಲ ಎಂದರೆ ಸಬರಾಜುದಾರ ತೆರಿಗೆ ಪಾವತಿ ಮಾಡಿಲ್ಲ ಎಂದು ಸೂಕ್ತಕ್ರಮ ಜರುಗಿಸುವುದು ಅನಿವಾರ್ಯ.

ಪ್ರಶ್ನೆ 11: ಒಂದು ವೇಳೆ ಸರಬರಾಜುದಾರ ಹೂಡುವಳಿ ತೆರಿಗೆ (ಇನ್‌ಪುಟ್‌ ತೆರಿಗೆ) ಪಾವತಿ ಮಾಡದೆ ಅದು ರದ್ದಾಗಿದ್ದು, ನಂತರ ತನ್ನ ತಪ್ಪನ್ನು ತಿಳಿದುಕೊಂಡು ತಡವಾಗಿ ಕಂಪ್ಯೂಟರ್ ಮೂಲಕ ಮಾಹಿತಿ ಒದಗಿಸಿದರೆಆಗ ಕಾನೂನು ರೀತ್ಯ ಅದರ ಪರಿಸ್ಥಿತಿ ಏನು?

ಉತ್ತರ: ಯಾವುದೇ ಹಂತದಲ್ಲೂ ಮುಂದಿನ ಆರ್ಥಿಕ ವರ್ಷದಲ್ಲಿ ಸೆಪ್ಟೆಂಬರ್ ಮುನ್ನ ಸರಬರಾಜುದಾರ ಹೂಡುವಳಿ ತೆರಿಗೆಗೆ ಸಂಬಂಧಿಸಿದಂತೆ ಇನ್ವಾಯ್ಸ್‌ ಸಲ್ಲಿಸಿ ವಿಳಂಬಕ್ಕೆ ಬಡ್ಡಿಸಲ್ಲಿಸಿ ಜಿಎಸ್‌ಟಿಆರ್-3ರಂತೆ ಆ ತಿಂಗಳ ಇನ್ವಾಯ್ಸ್‌ ನೊಂದಿಗೆ ಸಲ್ಲಿಸಬಹುದು. ಇದನ್ನು ಸ್ವೀಕರಿಸುವ ವ್ಯಕ್ತಿ ಇತರೆ ಇನ್ವಾಯ್ಸ್‌ಗಳೊಂದಿಗೆ ಇದನ್ನೂ ಸಲ್ಲಿಸಿದಾಗ ಕೂಡಲೇ ಆತನಿಗೆ ಐಟಿಸಿ ಲಭಿಸುತ್ತದೆ. ಸರಬರಾಜುದಾರ ಸಲ್ಲಿಸಿದ್ದ ಬಡ್ಡಿಯೂ ಜಿಎಸ್‌ಟಿಎನ್‌ ರೀತ್ಯ ಸ್ವೀಕರಿಸುವ ವ್ಯಕ್ತಿಗೆ ಲಭಿಸುತ್ತದೆ.

ಪ್ರಶ್ನೆ 12: ಜಿಎಸ್ಟಿಆರ್-2 ವಿಶೇಷತೆ ಏನು?

ಉತ್ತರ: ಜಿಎಸ್‌ಟಿಆರ್-2 ವಿಶೇಷತೆ ಜಿಎಸ್‌ಟಿಆರ್-1 ರಲ್ಲಿ ಸರಬರಾಜುದಾರ ಸಲ್ಲಿಸಿದ ಎಲ್ಲ ವಿವರಗಳು ಸ್ವೀಕೃತಿದಾರನ ಖಾತೆಯಲ್ಲಿ ನಮೂದಾಗುತ್ತದೆ.

ಪ್ರಶ್ನೆ 13: ಐಟಿಸಿ ನಿರಾಕರಿಸಿದ್ದನ್ನು ನಂತರ ಪಡೆಯಬಹುದೇ?

ಉತ್ತರ: ಒಂದು ವೇಳೆ ಸರಬರಾಜುದಾರ ಇನ್ವಾಯ್ಸ್‌ ಸಲ್ಲಿಕೆಯನ್ನು ವಿಳಂಬ ಮಾಡಿ ಮುಂದಿನ ವರ್ಷದ ಸೆಪ್ಟೆಂಬರ್ ಒಳಗೆ ಅಪ್ಲೋಡ್‌ ಮಾಡಿದ್ದರೆ ಅದಕ್ಕೆ ಹಿಡಿದಿಟ್ಟಿದ್ದ ಕ್ರೆಡಿಟ್‌ ಮತ್ತೆ ನೀಡಲಾಗುವುದು. ಅದರೊಂದಿಗೆ ಆಅವಧಿಗೆ ವಿಧಿಸಿದ್ದ ಬಡ್ಡಿಯನ್ನೂ ಹಿಂತಿರುಗಿಸಲಾಗುವುದು.

ಪ್ರಶ್ನೆ 14: ರಿಯಾಯಿತಿ ಪಡೆದ ಕಂಪೋಸಿಷನ್ ತೆರಿಗೆದಾರರೂ ಜಿಎಸ್‌ಟಿಆರ್-1 ಮತ್ತು ಜಿಎಸ್‌‌ಟಿಆರ್-2 ಸಲ್ಲಿಸಬೇಕೇ?

ಉತ್ತರ: ಇಲ್ಲ. ಕಂಪೋಸಿಷನ್‌ ತೆರಿಗೆದಾರರು ಒಳಪೂರೈಕೆ ಮತ್ತು ಹೊರಪೂರೈಕೆಗಳ ವಿವರಸಲ್ಲಿಸಬೇಕಾದ ಅಗತ್ಯವಿಲ್ಲ. ಅವರು ಮೂರು ತಿಂಗಳಿಗೊಮ್ಮೆ ಮೊದಲ ತಿಂಗಳ ಮೊದಲ ದಿನ ಜಿಎಸ್‌ಟಿಆರ್-6ಸಲ್ಲಿಸಬೇಕು. ಅವರಿಗೆ ಹೂಡುವಳಿ ತೆರಿಗೆ ಕ್ರೆಡಿಟ್‌ ನೀಡುವ ಪ್ರಶ್ನೆಯೇ ಇಲ್ಲದಿರುವುದರಿಂದ ಅವರಿಗೆ ಜಿಎಸ್‌ಟಿಆರ್-2 ಅಪ್ರಸ್ತುತ. ಅವರು ಪೂರೈಕೆದಾರರಿಗೆ ವರ್ಗಾಯಿಸುವ ಯಾವುದೇ ತೆರಿಗೆ ಇಲ್ಲದ ಕಾರಣ ಜಿಎಸ್‌ಟಿಆರ್-1 ಸಲ್ಲಿಸಬೇಕಿಲ್ಲ. ಅವರು ತಮ್ಮ ವರದಿಯಲ್ಲಿ ಹೊರ ಪೂರೈಕೆಯ ವಿವರಗಳೊಂದಿಗೆ ತೆರಿಗೆಯ ವಿವರವನ್ನು ಸಲ್ಲಿಸಬೇಕು. ಅವರು ಅದರೊಂದಿಗೆ ತಾವು ಖರೀದಿಸಿದ ವಿವರಗಳನ್ನು ತ್ರೈಮಾಸಿಕ ರಿಟರ್ನ್‌ನಲ್ಲಿ ನೀಡಬೇಕು. ಅದರಲ್ಲಿ ಬಹುತೇಕ ಸಂಗತಿಗಳು ತಂತಾನೇ ದಾಖಲೆಗೆ ಹೋಗುತ್ತದೆ.

ಪ್ರಶ್ನೆ 15: ಹೂಡುವಳಿ ಸೇವಾ ವಿತರಕರು (ಐಎಸ್ಡಿ)ತಮ್ಮ ರಿಟರ್ನ್‌ನೊಂದಿಗೆ ಒಳ ಪೂರೈಕೆ ಮತ್ತು ಹೊರ ಪೂರೈಕೆ ವಿವರಗಳನ್ನು ಸಲ್ಲಿಸಬೇಕೇ?

ಉತ್ತರ:ಇಲ್ಲ. ಐಎಸ್‌ಡಿಯವರು ತಮ್ಮ ರಿಟರ್ನ್‌ನಲ್ಲೇ ಜಿಎಸ್‌ಟಿಆರ್‌ರಂತೆ ಸೇವೆಯನ್ನು ನೀಡುವವರ ಮೂಲಕ ತಮಗೆ ಲಭಿಸಿದ ಕ್ರೆಡಿಟ್ ಹಾಗೂ ಕ್ರೆಡಿಟ್ ತಮ್ಮ ಅಧೀನದಲ್ಲಿರುವವರಿಗೆ ನೀಡಿರುವ ವಿವರಗಳನ್ನು ಸಲ್ಲಿಸಿರುತ್ತಾರೆ. ಅದರಲ್ಲೇ ಎಲ್ಲ ವಿವರ ಇರುವುದರಿಂದ ಪ್ರತ್ಯೇಕವಾಗಿ ಒಳ ಪೂರೈಕೆ ಮತ್ತು ಹೊರ ಪೂರೈಕೆ ವಿವರಗಳನ್ನು ಸಲ್ಲಿಸಬೇಕಿಲ್ಲ.

ಪ್ರಶ್ನೆ 16: ಮೂಲದಲ್ಲೇ ತೆರಿಗೆ ಕಟಾವು ಆಗಿದ್ದರೆ ಅದಕ್ಕೆ ತೆರಿಗೆದಾರ ಕ್ರೆಡಿಟ್ ಪಡೆಯುವುದು ಹೇಗೆ? ಆತ ತೆರಿಗೆ ಕಟಾವು ಮಾಡಿದವರಿಂದ ಟಿಡಿಎಸ್ ಸರ್ಟಿಫಿಕೇಟ್ ಪಡೆದು ಅದನ್ನು ಸಲ್ಲಿಸಬೇಕೆ?

ಉತ್ತರ:ಜಿಎಸ್‌ಟಿ ನಿಯಮದಲ್ಲಿ ತೆರಿಗೆಕಟಾವು ಮಾಡಿದ ವ್ಯಕ್ತಿ ಪ್ರತಿ ತಿಂಗಳೂ 10ರೊಳಗೆ ತಾನು ತೆರಿಗೆ ಕಟಾವು ಮಾಡಿದ ವಿವರಗಳನ್ನು ಜಿಎಸ್‌ಟಿಆರ್-7ಅರ್ಜಿ ಸಲ್ಲಿಸುತ್ತಾನೆ. ಈ ವಿವರಗಳು ತಂತಾನೇ ಜಿಎಸ್‌ಟಿಆರ್-2ರಲ್ಲಿ ನಮೂದಿತವಾಗುತ್ತದೆ. ತೆರಿಗೆ ಪಾವತಿಸುವ ವ್ಯಕ್ತಿ ಜಿಎಸ್‌ಟಿಆರ್-2ರಲ್ಲಿ ತನ್ನ ವ್ಯವಹಾರದ ವಿವರಸಲ್ಲಿಸಬೇಕು. ಅದು ಮತ್ತು ಜಿಎಸ್‌ಟಿಆರ್-7ರಲ್ಲಿ ಸಲ್ಲಿಸಿದ ವಿವರಗಳು ಏಕರೂವಾಗಿದ್ದರೆ ತೆರಿಗೆದಾರನಿಗೆ ಕ್ರಡಿಟ್‌ ಲಭಿಸುತ್ತದೆ. ಇದಕ್ಕಾಗಿ ಆತ ಯಾವುದೇಸರ್ಟಿಫಿಕೇಟ್‌ ಸಲ್ಲಿಸಬೇಕಿಲ್ಲ. ಯಾವುದೇ ಸರ್ಟಿಫಿಕೇಟ್ ಇಲಾಖೆಯ ಎಲ್ಲರಿಗೂ ಲಭ್ಯವಿರುವ ಪೋರ್ಟಲ್‌ನಲ್ಲಿ ಲಭ್ಯವಿರುತ್ತದೆ. ಅದನ್ನು ದಾಖಲೆಯಾಗಿಟ್ಟುಕೊಳ್ಳಬಹುದು ಅಷ್ಟೆ.

ಪ್ರಶ್ನೆ 17: ವಾರ್ಷಿಕ ರಿಟರ್ನ್ ಯಾರು ಯಾರು ಸಲ್ಲಿಸಬೇಕು?

ಉತ್ತರ: ಕಂಪೋಸಿನ್‌ ಯೋಜನೆಯಲ್ಲಿರುವವರು ಮತ್ತು ಆಗಾಗ್ಗೆ ತೆರಿಗೆ ನೀಡುವವರು ಹೊರತುಪಡಿಸಿ ಜಿಎಸ್‌ಟಿಆರ್-1 ರಿಂದ ಜಿಎಸ್‌ಟಿಆರ್-3ರವರೆಗೆ ವಿವರ ಸಲ್ಲಿಸುವ ಎಲ್ಲರೂ ವಾರ್ಷಿಕ ರಿಟರ್ನ್ಸ್‌ನಲ್ಲಿ ಸಲೇಬೇಕು. ಅಗಾಗ್ಗೆ ತೆರಿಗೆ ಪಾವತಿ ಮಾಡುವವರು, ಅನಿವಾಸಿ ತೆರಿಗೆದಾರರು, ಐಎಸ್‌‌ಡಿ, ಮೂಲದಲ್ಲೇ ತೆರಿಗೆಯನ್ನು ಕಟಾವುಗೊಳಿಸಲು ಅಧಿಕೃತವಾಗಿ ಅನುಮತಿ ಪಡೆದವರು ವಾರ್ಷಿಕ ರಿಟರ್ನ್ ಸಲ್ಲಿಸಬೇಕಿಲ್ಲ.

ಪ್ರಶ್ನೆ 18: ವಾರ್ಷಿಕ ರಿಟರ್ನ್ ಮತ್ತು ಅಂತಿಮ ರಿಟರ್ನ್ ಎರಡೂ ಒಂದೇ?

ಉತ್ತರ: ಎರಡೂ ಒಂದೇ ಅಲ್ಲ. ವಾರ್ಷಿಕ ರಿಟರ್ನ್ ಎಲ್ಲ ತೆರಿಗೆದಾರರು ಸಲ್ಲಿಸುತ್ತಾರೆ. ಅವರು ಸಾಮಾನ್ಯ ತೆರಿಗೆದಾರರಾಗಿರಬಹುದು ಅಥವ ರಾಜಿಮಾಡಿಕೊಂಡ ತೆರಿಗೆದಾರರಾಗಿರಬಹುದು. ಅಂತಿಮ ರಿಟರ್ನ್‌ ಸಲ್ಲಿಸುವವರು ತಮ್ಮ ನೋಂದಣೆ ರದ್ದುಗೊಳಿಸುವಂತೆ ಕೋರಿದವರು ಸಲ್ಲಿಸುವುದು. ತಮ್ಮ ನೋಂದಣೆ ರದ್ದಾಗ ಮೂರು ತಿಂಗಳಲ್ಲಿ ಅಥವ ನೋಂದಣೆ ರದ್ದಾದ ದಿನದಂದು ಸಲ್ಲಿಸುವ ರಿಟರ್ನ್.

ಪ್ರಶ್ನೆ 19: ಒಮ್ಮೆ ಸಲ್ಲಿಸಿದ ರಿಟರ್ನ್‌ನಲ್ಲಿ ಏನಾದರೂ ಕೆಲವು ಬದಲಾವಣೆ ಮಾಡಬೇಕೆಂದರೆ ಹೇಗೆ?

ಉತ್ತರ: ಜಿಎಸ್ಟಿ ವ್ಯಕ್ತಿ ಆಧರಿತ ತೆರಿಗೆ ಪಾವತಿ ವ್ಯವಸ್ಥೆಯಾದ್ದರಿಂದ ಬದಲಾವಣೆ ಮಾಡುವ ಸಂದರ್ಭ ಬರುವುದಿಲ್ಲ. ಒಂದು ವೇಳೆ ಇನ್ವಾಯ್ಸ್‌/ ಕ್ರೆಡಿಟ್ ನೋಟ್ಸ್‌ ಸೆಟ್ ಬದಲಾಯಿಸಬೇಕಾಗಿ ಬಂದಲ್ಲಿ ಈಗಾಗಲೇ ಸಲ್ಲಿಸಿರುವ ರಿಟರ್ನ್‌ನಲ್ಲಿ ಬದಲಾವಣೆ ಮಾಡುವುದಕ್ಕೆ ಬದಲಾಗಿ ಈಗಾಗಲೇ ಸಲ್ಲಿಸಿರುವ ಇನ್ವಾಯ್ಸ್‌/ಕ್ರೆಡಿಟ್ ನೋಟ್ಸ್‌ಗಳಲ್ಲಿ ಏನಾದರೂ ತಿದ್ದುಪಡಿಗಳನ್ನು ಮತ್ತೆ ಸಲ್ಲಿಸಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಸಲ್ಲಿಸುವ ಜಿಎಸ್ಟಿಆರ್-1 ಮತ್ತು 2 ರಲ್ಲಿಹಿಂದೆ ಸಲ್ಲಿಸಿದ್ದ ವಿವರಗಳ ಬದಲಾವಣೆಗಳನ್ನು ಸಲ್ಲಿಸಲು ಪ್ರತ್ಯೇಕ ಅವಕಾಶ ಮಾಡಲಾಗಿದೆ.

ಪ್ರಶ್ನೆ 20: ತೆರಿಗೆದಾರರು ಯಾವ ರೀತಿ ರಿಟರ್ನ್ಸ್‌ಸಲ್ಲಿಸಬೇಕು?

ಉತ್ತರ: ತೆರಿಗೆದಾರರು ತಮ್ಮ ರಿಟರ್ನ್ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಹಲವು ವಿಧಾನಗಳಿವೆ. ಮೊದಲನೆಯದಾಗಿ ಇದಕ್ಕಾಗಿ ಎಲ್ಲರಿಗೂ ಲಭ್ಯವಾಗುವಂತೆ ಸಾರ್ವಜನಿಕ ಪೋರ್ಟಲ್ ಇದೆ. ಇದರಲ್ಲಿ ನೇರವಾಗಿ ರಿಟರ್ನ್ ಮತ್ತು ದಾಖಲೆಗಳನ್ನು ಸಲ್ಲಿಸಬೇಕು. ದಾಖಲೆಗಳು ತುಂಬಾ ಇದ್ದು, ಸಲ್ಲಿಕೆಗೆ ಹೆಚ್ಚು ಸಮಯಬೇಕು ಎಂದಾದಲ್ಲಿ, ಇದಕ್ಕಾಗಿ ಎಲ್ಲ ಅರ್ಜಿಗಳನ್ನು ಕಂಪ್ಯೂಟರ್ ಮೂಲಕ ಡೌನ್ಲೋಡ್ ಮಾಡಿಕೊಂಡು ಅವುಗಳನ್ನು ನಿಧಾನವಾಗಿ ಭರ್ತಿ ಮಾಡಿ ಆಮೇಲೆ ಸಾರ್ವಜನಿಕ ಪೋರ್ಟಲ್‌‌ಗೆ ಹಾಕಬಹುದು. ಇದಕ್ಕಾಗಿ ತೆರಿಗೆದಾರ ಸ್ನೇಹಿಯಾದ ಜಿಎಸ್‌ಟಿ ಸುವಿಧಾ ಪ್ರೊವೆಂಡರ್ (ಜಿಎಸ್ಪಿ)ಸಿದ್ಧಪಡಿಸಲಾಗಿದೆ. ಇದನ್ನು ಸಾರ್ವಜನಿಕ ಪೋರ್ಟಲ್‌‌ನೊಂದಿಗೆ ಸಂಯೋಜಿಸಲಾಗಿದೆ.

ಪ್ರಶ್ನೆ 21: ಒಬ್ಬ ಎಚ್ಚೆತ್ತ ತೆರಿಗೆದಾರ ಯಾವುದೇ ಕುಂದುಕೊರತೆ ಇಲ್ಲದಂತೆ ಸುಲಭವಾಗಿ ಜಿಎಸ್ಟಿ ಪಾವತಿ ಮಾಡಲು ಯಾವ ಯಾವ ಕ್ರಮಗಳನ್ನು ಅನುಸರಿಸಬೇಕು?

ಉತ್ತರ: ಮೊದಲನೆಯದಾಗಿ ಪ್ರತಿ ತಿಂಗಳು 10 ರೊಳಗೆ ತೆರಿಗೆದಾರ ಜಿಎಸ್‌ಟಿಆರ್-1 ರಲ್ಲಿ ಎಲ್ಲ ವಿವರಗಳನ್ನು ಲಗತ್ತಿಸಿ ಸಲ್ಲಿಸಬೇಕು. ಇದು ಎಷ್ಟು ದಾಖಲೆಗಳಿವೆ ಎಂಬುದನ್ನು ಅವಲಂಬಿಸಿರುತ್ತದೆ. ವ್ಯಾಪಾರಿಯಿಂದ ವ್ಯಾಪಾರಿಗೆ (ಬಿಟುಬಿ) ಇನ್ವಾಯ್ಸ್‌ ಕಡಿಮೆ ಸಂಖ್ಯೆಯಲ್ಲಿ ಇದ್ದಲ್ಲಿ ಒಂದೇ ಬಾರಿ ಎಲ್ಲವನ್ನೂ ಕಂಪ್ಯೂಟರ್‌ಗೆ ಹಾಕಬಹುದು. ಈ ಇನ್ವಾಯ್ಸ್‌ (ಡೆಬಿಟ್/ಕ್ರೆಡಿಟ್ಟಿಪ್ಪಣಿ) ಅಧಿಕ ಸಂಖ್ಯೆಯಲ್ಲಿ ಇದ್ದರೆ, ಕಾಲಕಾಲಕ್ಕೆ ಅವುಗಳನ್ನು ಅಪ್ಲೋಡ್‌ ಮಾವುದು ಒಳ್ಳೆಯದು. ಜಿಎಸ್‌‌ಟಿಎನ್‌ ಸಹಕಾರಿಯಾಗಿದೆ. ಇನ್ವಾಯ್ಸ್‌ ಸಿದ್ಧಗೊಂಡ ಕೂಡಲೇ ಆಗಿಂದಾಗ್ಗೆ ಕಂಪ್ಯುಟರ್‌‌ನಲ್ಲಿ ನಮೂದಿಸಬಹುದು. ಇದನ್ನು ಪ್ರತಿದಿನ ಮಾಡಬಹುದು. ಅಗ ಕೊನೆದಿನದ ಧಾವಂತ ಇರುವುದಿಲ್ಲ. ಅಪ್ಲೋಡ್‌ ಮಾಡುವುದಕ್ಕೆ ಮುನ್ನ ಎಲ್ಲವನ್ನೂ ಪರಿಶೀಲಿಸಿ ಬದಲಾವಣೆಗಳನ್ನು ಮಾಡಿ ಆಮೇಲೆ ಪೋರ್ಟಲ್‌ಗೆ ಹಾಕಬಹುದು. ರಿಟರ್ನ್‌ ಸಲ್ಲಿಸಲು ಕೊನೆಯ ದಿನ ಇದ್ದಾಗ ಎಲ್ಲವನ್ನೂ ಸಲ್ಲಿಸಲು ಕುಳಿತಾಗ ತೊಂದರೆಗಳನ್ನು ಎದುರಿಸಬೇಕಾಗುವುದು ಸಹಜ. ಎರಡನೆಯದಾಗಿ ವಿವಿಧ ವಸ್ತುಗಳ ಒಳಪೂರೈಕೆಗಳಿಗೆ ಸಂಬಂಧಿಸಿದಂತೆ ಇನ್ವಾಯ್ಸ್‌ಗಳನ್ನು ಕಂಪ್ಯೂಟರ್‌ನಲ್ಲಿ ಅಪ್ಲೋಡ್‌ ಮಾಡಿದರೆ ಅದನ್ನು ಸರಬರಾಜು ಮಾಡಿದವರಿಗೆ ಅನುಕೂಲವಾಗುತ್ತದೆ. ಇದರಿಂದ ಹೂಡುವಳಿ ತೆರಿಗೆಯ ಕ್ರೆಡಿಟ್‌‌ ಯಾವುದೇ ರೀತಿಯಲ್ಲೂ ತೊಂದರೆ ಇಲ್ಲದೆ ಪಡೆಯಬಹುದು. ಸ್ವೀಕೃತಿದಾರರಿಗೂ ಈ ರೀತಿ ಸಕಾಲಕ್ಕೆ ಇನ್ವಾಯ್ಸ್‌ ಕಳುಹಿಸುವಂತೆ ಅವರ ಸರಬರಾಜುದಾರರಿಗೂ ತಿಳಿಸುವಂತೆ ಹೇಳಬೇಕು. ಕಂಪ್ಯೂಟರ್ ವ್ಯವಸ್ಥೆಯಲ್ಲಿ ತಮ್ಮ ಸರಬರಾಜುದಾರರು ಇನ್ವಾಯ್ಸ್‌ಗಳನ್ನು ಅಪ್ಲೋಡ್‌ ಮಾಡಿದ್ದಾರೊ ಇಲ್ಲವೊ ಎಂಬುದನ್ನು ಸ್ವೀಕೃತಿದಾರರು ತಿಳಿದುಕೊಳ್ಳಬಹುದು. ಜಿಎಸ್‌‌ಟಿಎನ್ ವ್ಯವಸ್ಥೆ ಒಬ್ಬ ತೆರಿಗೆದಾರನ ತೆರಿಗೆ ಪಾವತಿಯ ಜಾತಕವನ್ನೇ ನೀಡುತ್ತದೆ. ಅದಕ್ಕೂ ಸರಬರಾಜುದಾರ ಕಾಲಕಾಲಕ್ಕೆ ಇನ್ವಾಯ್ಸ್‌ದಾಖಲೆಗಳನ್ನು ಸಕಾಲಕ್ಕೆ ಅಪ್ಲೋಡ್‌ ಮಾತ್ತಿದ್ದಾರೆಯೇ ಇಲ್ಲವೆ ಎಂಬುದನ್ನು ತಿಳಿದುಕೊಳ್ಳಬಹುದು. ಒಂದು ವೇಳೆ ಯಾವುದೇ ಇನ್ವಾಯ್ಸ್‌ಗೆ ಸಂಬಂಧಿಸಿದಂತೆ ತೆರಿಗೆ ಪಾವತಿಯಾಗಿಲ್ಲ ಎಂದರೆ ಸರಬರಾಜುದಾರ ನೀಡಿದ ಇನ್ವಾಯ್ಸ್‌ರದ್ದಾಗಿರುವುದು ತಿಳಿಯುತ್ತದೆ. ಜಿಎಸ್‌‌ಟಿಗೆ ಸಂಬಂಧಿಸಿದ ಸಾರ್ವಜನಿಕ ಪೋರ್ಟಲ್‌‌ನಲ್ಲಿ ಪ್ಯಾನ್ ಇಂಡಿಯಾ ಮಾಹಿತಿ ಇರುವುದರಿಂದ ತೆರಿಗೆದಾರರಿಗೆ ಎಲ್ಲ ಮಹತ್ವಪೂರ್ಣ ಸೇವೆ ಲಭಿಸುತ್ತದೆ. ಪ್ರತಿದಿನ ಇನ್ವಾಯ್ಸ್‌ಗಳನ್ನುಕಂಪ್ಯೂಟರ್‌ಗೆ ಹಾಕಲು ಅನುಕೂಲವಾಗುವಂತೆ ವಿಧಾನವನ್ನು ಆದಷ್ಟು ಸರಳಗೊಳಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಇಡೀ ವ್ಯವಸ್ಥೆಯನ್ನು ಉತ್ತಮಪಡಿಸುವ ಗುರಿ ಹೊಂದಲಾಗಿದೆ. ಜಿಎಸ್‌ಟಿಯಲ್ಲಿ ತೆರಿಗೆದಾರರು ಯಾವುದೇ ರೀತಿಯಲ್ಲೂ ಕಷ್ಟವಿಲ್ಲದೆ ತೆರಿಗೆಪಾವತಿ ಮಾಡಲು ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ಉತ್ತಮಪಡಿಸಲಾಗುವುದು.

ಪ್ರಶ್ನೆ22: ತೆರಿಗೆದಾರ ಸ್ವಯಂ ರಿಟರ್ನ್ ಸಲ್ಲಿಸಬೇಕೆಂದು ಕಡ್ಡಾಯ ಮಾಡಲಾಗಿದೆಯೇ?

ಉತ್ತರ: ಇಲ್ಲ. ಯಾವುದೇ ನೋಂದಾಯಿತ ತೆರಿಗೆದಾರ ತನ್ನ ರಿಟರ್ನ್‌ಗಳನ್ನು ಕೇಂದ್ರ ಅಥವ ರಾಜ್ಯ ಸರ್ಕಾರಗಳ ತೆರಿಗೆ ಇಲಾಖೆಯಿಂದ ಅಧಿಕೃತವಾಗಿ ಮನ್ನಣೆ ಪಡೆದ ತೆರಿಗೆ ದಾಖಲೆ ಸಿದ್ದಪಡಿಸುವ ವ್ಯಕ್ತಿ ಮೂಲಕ ರಿಟರ್ನ್ ಸಲ್ಲಿಸಬಹುದು.

ಪ್ರಶ್ನೆ23:ನಿಗದಿತ ಸಮಯಕ್ಕೆ ಸರಿಯಾಗಿ ರಿಟರ್ನ್ ಸಲ್ಲಿಸಲಿಲ್ಲ ಎಂದರೆ ಏನಾಗುತ್ತದೆ?

ಉತ್ತರ: ನೋಂದಾಯಿತ ತೆರಿಗೆದಾರ ನಿಗದಿತ ದಿನಾಂಕದೊಳಗೆ ರಿಟರ್ನ್‌ ಸಲ್ಲಿಸಲಿಲ್ಲ ಎಂದರೆ ನಿಗದಿತ ದಿನದಿಂದ ಪ್ರತಿದಿನ ವಿಳಂಬಕ್ಕೆ 100 ರೂ.ಗಳಂತೆ ಗರಿಷ್ಟ 5 ಸಾವಿರ ರೂ. ದಂಡ ಸಲ್ಲಿಸಬೇಕು.

******

ಮೌಲ್ಯಮಾಪನ ಮತ್ತು ಲೆಕ್ಕ ತಪಾಸಣೆ

13. ಮೌಲ್ಯಮಾಪನ ಮತ್ತುಲೆಕ್ಕತಪಾಸಣೆ

ಪ್ರಶ್ನೆ1: ಕಾಯ್ದೆಗೆ ಅನುಗುಣವಾಗಿ ಯಾವ ವ್ಯಕ್ತಿಗೆ ತೆರಿಗೆ ಲೆಕ್ಕಹಾಕಿ ನಿಗದಿಪಡಿಸಲು ಅಧಿಕಾರ ನೀಡಲಾಗಿದೆ?

ಉತ್ತರ: ಕಾಯ್ದೆ ಅನ್ವಯ ನೋಂದಾಯಿಸಿಕೊಂಡ ಪ್ರತಿಯೊಬ್ಬ ತೆರಿಗೆದಾರನೂ ಪ್ರತಿ ತೆರಿಗೆ ಅವಧಿಗೆ ತಾನು ಸಲ್ಲಿಸಬೇಕಾದ ತೆರಿಗೆ ಪ್ರಮಾಣವನ್ನು ತಾನೇ ನಿರ್ಧರಿಸುತ್ತಾನೆ. ಕಾಯ್ದೆಯ ಭಾಗ27ರಂತೆ ರಿಟರ್ನ್‌ ಸಲ್ಲಿಸುತ್ತಾನೆ.

ಪ್ರಶ್ನೆ 2: ಸರಕು ಪಡೆದ ವ್ಯಕ್ತಿ ಅದನ್ನು ಹಿಂತಿರುಗಿಸಿದರೆ ತೆರಿಗೆಯಲ್ಲಿ ಏನಾದರೂ ಹಿಂದಕ್ಕೆ ಪಡೆಯಲು ಎಂಜಿಎಲ್‌‌ನಲ್ಲಿ ಅವಕಾಶವಿದೆಯೇ?

ಉತ್ತರ:ಹೌದು. ಎಂಜಿಎಲ್‌ನಲ್ಲಿ ಭಾಗ44ರಲ್ಲಿ ನೀಡಿರುವ ವಿವರಣೆಯಲ್ಲಿ ಇದನ್ನು ಹೇಳಲಾಗಿದೆ. ಒಂದು ವೇಳೆ ಸರಕು ತೆಗೆದುಕೊಂಡ ವ್ಯಕ್ತಿ ಇನ್ವಾಯ್ಸ್‌ನಲ್ಲಿ ನಮೂದಿಸಿದ ದಿನದಿಂದ 6ತಿಂಗಳ ಒಳಗೆ ಸರಬರಾಜುದಾರರಿಗೆ ಹಿಂತಿರುಗಿಸಿದರೆ, ಹೂಡುವಳಿ ತೆರಿಗೆ ಕ್ರೆಡಿಟ್ ನಮೂದಿಸಿದ್ದನ್ನು ಒಳಪೂರೈಕೆ ಸರಕಾಗಿ ಪರಿಗಣಿಸಿ ತೆರಿಗೆಯನ್ನು ಹಿಂದಕ್ಕೆ ಪಡೆಯಬಹುದು. ಒಂದು ವೇಳೆ ಇನ್ವಾಯ್ಸ್‌ ಸಲ್ಲಿಸಿ 6ತಿಂಗಳು ಕಳೆದುಹೋಗಿದ್ದರೆ ಸರಕು ಹಿಂದಿರುಗಿಸಿದ ದಿನ ಇರುವ ಒಳ ಪೂರೈಕೆ ತೆರಿಗೆ ಅನ್ವಯವಾಗುತ್ತದೆ.

ಪ್ರಶ್ನೆ3: ಎ ಎಂಬ ವ್ಯಕ್ತಿ ಬಿ ಎಂಬ ವ್ಯಕ್ತಿಗೆ ಏಪ್ರಿಲ್ 2017ರಂದು ಸರಕುಗಳನ್ನು ಸರಬರಾಜು ಮಾಡಿದ್ದ .ಬಿ ಎಂದ ವ್ಯಕ್ತಿ ಎ ಎಂಬ ವ್ಯಕ್ತಿಗೆಜೂನ್ 2017ರಂದು ಹಿಂತಿರುಗಿಸುತ್ತಾನೆ. ಎ ಸರಕು ನೀಡಿದ್ದಾಗ ಸರಕುಗಳ ಮೇಲೆ ಶೇಕಡ 18ರಷ್ಟು ತೆರಿಗೆ ಇರುತ್ತದೆ.ಮೇ 2017 ರಲ್ಲಿ ತೆರಿಗೆ ದರವನ್ನು ಶೇಕಡ 18.5ಕ್ಕೆ ಬದಲಿಸಲಾಗುತ್ತದೆ. ಹಾಗಾದರೆ ಸರಕು ಹಿಂತಿರುಗಿಸಿದ್ದಕ್ಕೆ ಬಿ ವ್ಯಕ್ತಿ ಎ ಗೆ ಎಷ್ಟು ಒಳಪೂರೈಕೆಗೆ ತೆರಿಗೆನೀಡಬೇಕಾಗುತ್ತದೆ?

ಉತ್ತರ: ಶೇಕಡ 18%.

ಪ್ರಶ್ನೆ 4: ತೆರಿಗೆದಾರ ಯಾವಾಗ ತಾತ್ಕಾಲಿಕ ಆಧಾರದ ಮೇಲೆ ತೆರಿಗೆ ಪಾವತಿ ಮಾಡಬಹುದು?

ಉತ್ತರ: ತೆರಿಗೆದಾರ ತೆರಿಗೆ ಪ್ರಮಾಣವನ್ನು ಸ್ವಯಂ ನಿರ್ಧರಿಸುವುದರಿಂದ ಅವನೇ ತಾತ್ಕಾಲಿಕ ಆಧಾರದ ತೆರಿಗೆಪಾವತಿ ಮಾಡಲು ಅರ್ಜಿಯನ್ನು ಸಲ್ಲಿಸಬೇಕು. ಅದಕ್ಕೆ ಅಧಿಕಾರ ಪಡೆದ ಸೂಕ್ತ ಅಧಿಕಾರಿ ಅನುಮತಿ ನೀಡಬೇಕು. ಅಂದರೆ ಯಾವುದೇ ಅಧಿಕಾರಿಯು ಸ್ವಯಂ ನಿರ್ಧಾರ ಕೈಗೊಂಡು ತಾತ್ಕಾಲಿಕವಾಗಿ ತೆರಿಗೆ ಪಾವತಿಸಲು ಅನುಮತಿ ನೀಡಲು ಬರುವುದಿಲ್ಲ. ಎಂಜಿಎಲ್‌‌ಕಾಯ್ದೆ 44ಎ ಅನ್ವಯ ಇದಕ್ಕೆ ಅವಕಾಶವಿದೆ. ಆದರೆ ಸಂಬಂಧಪಟ್ಟ ಅಧಿಕಾರಿ ಸ್ಪಷ್ಟ ಆದೇಶ ನೀಡಬೇಕು. ಇದಕ್ಕೆ ತೆರಿಗೆದಾರ ಲಿಖಿತದಲ್ಲಿ ಅರ್ಜಿ ಸಲ್ಲಿಸಬೇಕು. ತಾತ್ಕಾಲಿಕವಾಗಿ ತೆರಿಗೆ ಸಲ್ಲಿಸಲು ಅವಕಾಶ ಮಾಡಿಕೊಡಲು ಕಾರಣ ನೀಡಬೇಕು. ತೆರಿಗೆದಾರ ಎರಡು ಕಾರಣಗಳಲ್ಲಿ ಮಾತ್ರ ತೆರಿಗೆ ಪ್ರಮಾಣ ನಿರ್ಧರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಬಹುದು.

ಎ)ಪೂರೈಕೆ ಮಾಡುವ ಸರಕು ಅಥವ ಸೇವೆಯ ಮೌಲ್ಯ ನಿರ್ಧರಿಸಲು ಸಾಧ್ಯವಾಗಿಲ್ಲ ಎಂದಾಗ.

ಬಿ) ಆತ ಸರಬರಾಜು ಮಾಡಿದ ಸರಕು ಅಥವ ಸೇವೆಗೆ ತೆರಿಗೆದರ ನಿಗದಿಪಡಿಸಲು ಆಗಿಲ್ಲ ಎಂದಾಗ. ಇಂಥ ಸಂದರ್ಭಗಳಲ್ಲಿ ತೆರಿಗೆದಾರ ಅರ್ಹ ಅಧಿಕಾರಿ ಕೇಳಿದ ರೀತಿಯಲ್ಲಿ ಶ್ಯೂರಿಟಿ ಅಥವ ಸೆಕ್ಯೂರಿಟಿಯೊಂದಿಗೆ ಛಾಪಾ ಕಾಗದದಲ್ಲಿ ಬರೆದುಕೊಡಬೇಕು.

ಪ್ರಶ್ನೆ 5: ತೆರಿಗೆ ಪ್ರಮಾಣ ನಿಗದಿಪಡಿಸಲು ಕೊನೆಯ ಸಮಯ ಯಾವುದು?

ಉತ್ತರ: ತಾತ್ಕಾಲಿಕ ತೆರಿಗೆ ಪಾವತಿಸಲು ಅನುಮತಿಯ ಆದೇಶ ನೀಡಿದ ಅಧಿಕಾರಿಯೇ 6 ತಿಂಗಳೊಳಗೆ ಅಂತಿಮ ತೆರಿಗೆ ಪ್ರಮಾಣ ನಿಗದಿಯ ಆದೇಶವನ್ನು ಹೊರಡಿಸಬೇಕು. ಆದರೂ ಸಾಕಷ್ಟು ಕಾರಣಗಳಿದ್ದು, ಲಿಖಿತದಲ್ಲಿ ಅದನ್ನು ದಾಖಲಿಸಲು ಸಾಧ್ಯ ಎಂದಾದರೆ 6 ತಿಂಗಳ ಅವಧಿಯನ್ನು ವಿಸ್ತರಿಸಬಹುದು. ಆದರೆ ಅದನ್ನು, ಎ) ಜಂಟಿ/ಹೆಚ್ಚುವರಿ ಆಯುಕ್ತರು ಮತ್ತೆ 6 ತಿಂಗಳಿಗೆ ವಿಸ್ತರಿಸಬಹುದು. ಬಿ) ಆಯುಕ್ತರು ಮತ್ತೆ ಹೆಚ್ಚುವರಿ ಅವಧಿಗೆ ವಿಸ್ತರಿಸಬಹುದು. ಇದಕ್ಕೆ ಕಾಲಮಿತಿ ಇಲ್ಲ. ಆಯುಕ್ತರು ಸೂಕ್ತ ಎಂದು ಭಾವಿಸಿದಷ್ಟು ಸಮಯನೀಡಬಹುದು.

ಪ್ರಶ್ನೆ 6: ತಾತ್ಕಾಲಿಕ ತೆರಿಗೆ ಪ್ರಮಾಣಕ್ಕಿಂತ ಅಂತಿಮ ತೆರಿಗೆ ನಿಗದಿಪಡಿಸಿದ್ದು ಅಧಿಕವಾಗಿದ್ದಲ್ಲಿ ತೆರಿಗೆದಾರ ಅದಕ್ಕೆ ಬಡ್ಡಿಯನ್ನು ತೆರಬೇಕಾಗುತ್ತದೆಯೇ?

ಉತ್ತರ: ಹೌದು. ತೆರಿಗೆ ಮೂಲಭೂತವಾಗಿ ಯಾವ ದಿನದಂದು ಪಾವತಿ ಮಾಡಬೇಕಿತ್ತೊ ಅಂದಿನಿಂದ ತೆರಿಗೆ ಪಾವತಿ ಮಾಡಿದ ದಿನದವರೆಗೆ ಬಡ್ಡಿಯನ್ನು ಪಾವತಿಸಬೇಕು.

ಪ್ರಶ್ನೆ 7 : ಎಂಜಿಎಲ್‌ ಕಾಯ್ದೆ ಭಾಗ 45ರಂತೆ ರಿಟರ್ನ್ಸ್‌ ಸಲ್ಲಿಸಿದ್ದರಲ್ಲಿ ದೋಷ ಕಂಡುಬಂದು ಅದಕ್ಕೆ ಸೂಕ್ತ ಸ್ಪಷ್ಟೀಕರಣ ನೀಡದೇ ಹೋದಲ್ಲಿ ಸಂಬಂಧಪಟ್ಟ ಅಧಿಕಾರಿ ಏನು ಕ್ರಮ ಕೈಗೊಳ್ಳಬಹುದು?

ಉತ್ತರ: ಒಂದು ವೇಳೆ ರಿಟರ್ನ್‌ನಲ್ಲಿರುವ ಲೋಪದೋಷ ಇರುವುದನ್ನು ಪತ್ತೆಹಚ್ಚಿ ತೆರಿಗೆದಾರನಿಗೆ ತಿಳಿಸಿದ ಕೂಡಲೇ 30 ದಿನಗಳೊಳಗೆ (ಈ ಅವಧಿಯನ್ನು ಅಧಿಕಾರಿ ವಿಸ್ತರಿಸಬಹುದು) ದೋಷಗಳನ್ನು ಸರಿಪಡಿಸಬಹುದು. ಒಂದು ವೇಳೆ ಲೋಪಗಳನ್ನು ಸರಿಪಡಿಸಲಿಲ್ಲ ಎಂದರೆ ಕಾರ್ಯಸಾಧು ಅವಧಿ ಮುಕ್ತಾಯಗೊಂಡಿತು ಎಂದರೆ ಸಂಬಂಧಪಟ್ಟ ಅಧಿಕಾರಿ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬಹುದು.

(ಎ) ಕಾಯ್ದೆಯ ಭಾಗ 49ರಂತೆ ಆಡಿಟ್‌‌ ನಡೆಸಲು ಕ್ರಮ ಕೈಗೊಳ್ಳಬಹುದು.

(ಬಿ) ಕಾಯ್ದೆಯ ಭಾಗ 50 ರಂತೆ ಚಾರ್ಟೆಡ್ ಅಕೌಂಟೆಂಟ್ ಅಥವ ಕಾಸ್ಟ್‌ ಅಕೌಂಟೆಂಟ್ ಅವರನ್ನು ನೇಮಿಸಿ ಅವರ ಮೂಲಕ ವಿಶೇಷ ಆಡಿಟ್‌ ಮಾಡಿಸಲು ಆಯುಕ್ತ ಆದೇಶ ನೀಡಬಹುದು ಅಥವ, (ಸಿ)ಕಾಯ್ದೆಯ ಭಾಗ 60 ರಂತೆ ತನಿಖೆ, ಶೋಧ ಮತ್ತು ಜಪ್ತಿಯ ಕ್ರಮಗಳನ್ನು ಕೈಗೊಳ್ಳಬಹುದು ಅಥವ,(ಡಿ) ಕಾಯ್ದೆಯ ಭಾಗ 51 ರಂತೆ ತೆರಿಗೆ ನಿರ್ಧರಿಸಲು ಕ್ರಮಗಳನ್ನು ಆರಂಭಿಸಬಹುದು.

ಪ್ರಶ್ನೆ 8 : ಕಾಯ್ದೆಯ ಭಾಗ 46 ರಂತೆ ತೆರಿಗೆ ಪ್ರಮಾಣ ನಿಗದಿಯಾಗುವುದಕ್ಕೆ ಮುನ್ನವೇ ತೆರಿಗೆದಾರನಿಗೆ ಅರ್ಹ ಅಧಿಕಾರಿ ನೋಟಿಸ್ ನೀಡಬೇಕಾಗುತ್ತದೆಯೇ?

ಉತ್ತರ: ಇದು ಉತ್ತಮ ತೀರ್ಮಾನಕ್ಕೆ ವಿಷಯವಾದ್ದರಿಂದ ತೆರಿಗೆದಾರನಿಗೆ ನೋಟಿಸ್ ನೀಡುವ ಅಗತ್ಯ ಬರುವುದಿಲ್ಲ.

ಪ್ರಶ್ನೆ 9: ತೆರಿಗೆದಾರ ಕಾಯ್ದೆಯ ಭಾಗ 27 ಅಥವ 31ರಂತೆ ರಿಟರ್ನ್‌ ಸಲ್ಲಿಸಬೇಕೆಂದು ನಿಯಮವಿದ್ದರೂ ಅದನ್ನು ಪಾಲಿಸದೇ ಹೋದಲ್ಲಿ ತೆರಿಗೆ ಅಧಿಕಾರಿ ಕಾನೂನು ರೀತ್ಯ ಏನು ಕ್ರಮ ಕೈಗೊಳ್ಳಬಹುದು?

ಉತ್ತರ: ಸಂಬಂಧಪಟ್ಟ ಅಧಿಕಾರಿ ಎಂಜಿಎಲ್‌ ಕಾಯ್ದೆಯ ಭಾಗ32 ರಂತೆ15 ದಿನಗಳಿಗೆ ಕಡಿಮೆ ಇಲ್ಲದಂತೆ ಕಾಲಾವಕಾಶ ನೀಡಿ ತೆರಿಗೆ ಬಾಕಿ ಉಳಿಸಿದಕೊಂಡಿರುವ ತೆರಿಗೆದಾರನಿಗೆ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಕಾಯ್ದೆಯ ಭಾಗ 46ರಂತೆ ನೋಟಿಸ್ ನೀಡಬೇಕು. ಒಂದು ವೇಳೆ ಈ ನೋಟಿಸ್‌ಗೆ ತೆರಿಗೆದಾರ ಸ್ಪಂದಿಸದೇ ಹೋದಲ್ಲಿ ಸಂಬಂಧಪಟ್ಟ ಅಧಿಕಾರಿ ತೆರಿಗೆ ಪ್ರಮಾಣವನ್ನು ನಿರ್ಧರಿಸಲು ಪ್ರಕ್ರಿಯೆ ಆರಂಭಿಸಬೇಕು. ಲಭ್ಯವಿರುವ ಎಲ್ಲ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಲು ಅಧಿಕಾರಿಗೆ ಎಂಜಿಎಲ್ ಕಾಯ್ದೆ ಭಾಗ 46 ರಂತೆ ಅಧಿಕಾರ ನೀಡಲಾಗಿದೆ.

ಪ್ರಶ್ನೆ 10 : ಭಾಗ 46 ರಂತೆ ಸೂಕ್ತ ಅಧಿಕಾರಿ ತೆರಿಗೆ ನಿರ್ಧರಿಸಿ ನೀಡಿದ ಅತ್ಯುತ್ತಮ ತೀರ್ಪನ್ನು ಯಾವ ಸಂದರ್ಭದಲ್ಲಿ ಹಿಂದಕ್ಕೆ ಪಡೆಯಬಹುದು?

ಉತ್ತರ: ತೆರಿಗೆದಾರ ಸೂಕ್ತ ಅಧಿಕಾರಿ ತೆರಿಗೆ ನಿರ್ಧರಿಸಿ ನೀಡಿದ್ದ ಅತ್ಯುತ್ತಮ ತೀರ್ಪನ್ನು ಪಡೆದ 30ದಿನಗಳಲ್ಲಿ ತೆರಿಗೆ ಪಾವತಿ ಮಾಡದ ಅವಧಿಗೆ ತೆರಿಗೆ ಸಲ್ಲಿಸಿ ಕಾನೂನುಬದ್ಧವಾಗಿ ರಿಟರ್ನ್‌ ನೀಡಿದರೆ ಸೂಕ್ತ ಅಧಿಕಾರಿ ಎಂಜಿಎಲ್‌ ಕಾಯ್ದೆಯ ಭಾಗ 46 ರೀತ್ಯ ನೀಡಿದ್ದ ಆದೇಶ ತಂತಾನೇ ಹಿಂದಕ್ಕೆ ಸರಿಯುತ್ತದೆ. (ಅಂದರೆ ತೆರಿಗೆದಾರ ತಾನೇ ತೆರಿಗೆ ಮೌಲ್ಯಮಾಪನ ಮಾಡಿ ರಿಟರ್ನ್‌ ಸಲ್ಲಿಸಬೇಕು.)

ಪ್ರಶ್ನೆ 11: ಭಾಗ 46 ಮತ್ತು 47 ರಲ್ಲಿ ಆದೇಶ ನೀಡಲು ಕಾಲಮಿತಿ ಏನು?

ಉತ್ತರ: ವಾರ್ಷಿಕ ರಿಟರ್ನ್‌ ಸಲ್ಲಿಸಲು ಇರುವ ಕೊನೆಯ ದಿನದಿಂದ 3-4ವರ್ಷದೊಳಗೆ ಭಾಗ46 ಮತ್ತು 47ರಂತೆ ತೆರಿಗೆ ಮೌಲ್ಯಮಾಪನ ಆದೇಶ ಹೊರಡಿಸಬಹುದು.

ಪ್ರಶ್ನೆ 12: ನೋಂದಣೆ ಪಡೆಯಲು ವಿಫಲವಾಗಿರುವ ತೆರಿಗೆ ಪಾವತಿ ಮಾಡಬೇಕಾಗಿದ್ದ ವ್ಯಕ್ತಿಯ ಮೇಲೆ ಕಾನೂನು ರೀತ್ಯ ಯಾವ ಕ್ರಮ ಕೈಗೊಳ್ಳಬಹುದು?

ಉತ್ತರ: ತೆರಿಗೆ ಸಲ್ಲಿಸದೇ ಇರುವ ವರ್ಷಕ್ಕೆ ಸಂಬಂಧಿಸಿದಂತೆ ವಾರ್ಷಿಕ ರಿಟರ್ನ್ ಸಲ್ಲಿಸಬೇಕಾಗಿದ್ದ ಕೊನೆಯ ದಿನದಿಂದ 5 ವರ್ಷದೊಳಗೆ ಎಂಜಿಎಲ್‌‌ ಕಾಯ್ದೆ ಭಾಗ47ರಂತೆ ಸೂಕ್ತ ಅಧಿಕಾರಿ ತೆರಿಗೆ ಸಲ್ಲಿಸದ ಅವಧಿಗೆ ತೆರಿಗೆ ನಿರ್ಧರಿಸಿ ಅತ್ಯುತ್ತಮ ಆದೇಶ ಹೊರಡಿಸಬಹುದು.

ಪ್ರಶ್ನೆ 13: ತೆರಿಗೆ ಅಧಿಕಾರಿ ಯಾವ ಸಂದರ್ಭದಲ್ಲಿ ಒಟ್ಟಾರೆ ತೆರಿಗೆ ಮೌಲ್ಯಮಾಪನ ಕೈಗೊಳ್ಳಬಹುದು?

ಉತ್ತರ: ಸರ್ಕಾರಕ್ಕೆ ಬರಬೇಕಾದ ಆದಾಯದ ದೃಷ್ಟಿಯಿಂದ ಎಂಜಿಎಲ್‌‌ ಕಾಯ್ದೆ ಭಾಗ48ರಂತೆ ಒಟ್ಟಾರೆ ತೆರಿಗೆ ನಿದಿಗಪಡಿಸುವ ಕೆಲಸವನ್ನು ಕೈಗೊಳ್ಳಬಹುದು.

ಎ)ತೆರಿಗೆ ಕಾಯ್ದೆಯ ಅನ್ವಯ ಯಾವುದೇ ವ್ಯಕ್ತಿ ತೆರಿಗೆ ಪಾವತಿಸಲೇಬೇಕು ಎಂದು ಮನವರಿಕೆಯಾದಲ್ಲಿ ಸೂಕ್ತ ಅಧಿಕಾರಿ ಒಟ್ಟಾರೆ ತೆರಿಗೆಯನ್ನು ನಿರ್ಧರಿಸಬಹುದು ಮತ್ತು ಬಿ) ತೆರಿಗೆ ನಿರ್ಧರಿಸುವ ಆದೇಶ ಹೊರಡಿಸುವುದು ವಿಳಂಬವಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಧಕ್ಕೆ ಒದಗುತ್ತದೆ ಎಂದಾದಲ್ಲಿ ಸೂಕ್ತ ಅಧಿಕಾರಿ ಒಟ್ಟಾರೆ ತೆರಿಗೆ ನಿರ್ಧರಿಸಬಹುದು. ಈ ಆದೇಶವನ್ನು ಹೊರಡಿಸುವ ಮುನ್ನ ಹೆಚ್ಚುವರಿ ಅಯುಕ್ತರು/ಜಂಟಿ ಆಯುಕ್ತರಿಂದ ಪೂರ್ವಾನುಮತಿ ಪಡೆಯಬೇಕು.

ಪ್ರಶ್ನೆ 14 : ಒಟ್ಟಾರೆ ತೆರಿಗೆ ಮೌಲ್ಯಮಾಪನ ಮಾಡಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬಹುದು ಎಂಬುದನ್ನು ಹೊರತುಪಡಿಸಿದರೆ ಮತ್ತೇನಾದರೂ ಪರಿಹಾರವಿದೆಯೇ?

ಉತ್ತರ: ಒಟ್ಟಾರೆ ತೆರಿಗೆ ವಿಧಿಸಿದ ಆದೇಶವನ್ನು ಪ್ರಶ್ನಿಸಿ ತೆರಿಗೆದಾರ ತನ್ನ ವ್ಯಾಪ್ತಿಯಲ್ಲಿರುವ ಹೆಚ್ಚುವರಿ/ಜಂಟಿ ಆಯುಕ್ತರಿಗೆ ಆದೇಶ ಪಡೆದ 30 ದಿನಗಳೊಳಗೆ ಅರ್ಜಿಸಲ್ಲಿಸಬೇಕು. ಸಂಬಂಧಪಟ್ಟ ಅಧಿಕಾರಿ ಒಟ್ಟಾರೆ ತೆರಿಗೆ ಆದೇಶದಲ್ಲಿ ದೋಷ ಕಂಡು ಬಂದಲ್ಲಿ ಅದನ್ನು ಹಿಂದಕ್ಕೆ ಪಡೆದು ಅಧೀನ ಅಧಿಕಾರಿಗೆ ಎಂಜಿಎಲ್‌‌ ಕಾಯ್ದೆ ಭಾಗ51ರಂತೆ ಮತ್ತೊಮ್ಮೆ ತೆರಿಗೆ ಪ್ರಮಾಣವನ್ನು ನಿರ್ಧರಿಸುವಂತೆ ಕೇಳಬಹುದು. ಹೆಚ್ಚುವರಿ/ಜಂಟಿ ಆಯುಕ್ತರೇ ತೆರಿಗೆ ಮೌಲ್ಯಮಾಪನವನ್ನು (ಭಾಗ 48ಎಂಜಿಎಲ್‌ ಕಾಯ್ದೆ) ಕೈಗೊಳ್ಳಬಹುದು.

ಪ್ರಶ್ನೆ 15: ತೆರಿಗೆದಾರನಿಗೆ ಒಟ್ಟಾರೆ ತೆರಿಗೆ ಮೌಲ್ಯಮಾಪನದ ಆದೇಶ ನೀಡಲೇಬೇಕೆಂಬ ನಿಯಮವೇನಾದರೂ ಇದೆಯೇ?

ಉತ್ತರ: ಇಲ್ಲ. ಕೆಲವು ಸಂದರ್ಭಗಳಲ್ಲಿ ಸರಕುಗಳು ಸಾಗಾಣಿಕೆಯ ಹಂತದಲ್ಲಿರುತ್ತದೆ ಅಥವ ದಾಸ್ತಾನು ಮಳಿಗೆಯಲ್ಲಿರುತ್ತದೆ. ತೆರಿಗೆ ನೀಡಬೇಕಾದ ವ್ಯಕ್ತಿ ಯಾರು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಕಷ್ಟ ಎಂದಾದಲ್ಲಿ ಅ ಸರಕು ಯಾರ ಬಳಿ ಇರುತ್ತದೋ ಅವರನ್ನೇ ತೆರಿಗೆದಾರ ಎಂದು ಭಾವಿಸಿ ತೆರಿಗೆ ಪ್ರಮಾಣ ನಿಗದಿಪಡಿಸಲಾಗುವುದು. (ಎಂಜಿಎಲ್ ಕಾಯ್ದೆಭಾಗ 48)

ಪ್ರಶ್ನೆ 16: ತೆರಿಗೆದಾರರ ಲೆಕ್ಕವನ್ನು ಯಾರು ಆಡಿಟ್ ಮಾಡಬಹುದು?

ಉತ್ತರ: ಆಯುಕ್ತರಿಂದ ವಿಶೇಷ ಆದೇಶ ಅಥವ ಸಾಮಾನ್ಯ ಆದೇಶದ ಮೂಲಕ ಎಂಜಿಎಲ್ ಕಾಯ್ದೆಯ ಭಾಗ 49ರಂತೆ ಸಿಜಿಎಸ್‌ಟಿ ಅಥವ ಎಸ್‌‌ಜಿಎಸ್‌ಟಿಯಿಂದ ಅಧಿಕೃತಗೊಂಡ ಅಧಿಕಾರಿಗಳು ತೆರಿಗೆದಾರರ ಲೆಕ್ಕದ ಅಡಿಟ್‌‌ ಕೈಗೊಳ್ಳಬಹುದು. ಆಡಿಟ್ ಎಷ್ಟು ಬಾರಿ ಮತ್ತು ಯಾವ ರೀತಿ ಕೈಗೊಳ್ಳಬೇಕು ಎಂಬುದನ್ನು ನಂತರ ನಿರ್ಧರಿಸಲಾಗುವುದು.

ಪ್ರಶ್ನೆ 17: ಆಡಿಟ್ ಕೈಗೊಳ್ಳುವ ಮುನ್ನ ಏನಾದರೂ ಪೂರ್ವಾನುಮತಿ ಬೇಕೆ?

ಉತ್ತರ: ಹೌದು ಬೇಕು. ತೆರಿಗೆದಾರನಿಗೆ ಕನಿಷ್ಟ 15 ದಿನಗಳಿಗೆ ಮುನ್ನ ಆಡಿಟ್ ಕೈಗೊಳ್ಳುವುದನ್ನು ತಿಳಿಸಬೇಕು.

ಪ್ರಶ್ನೆ 18: ಆಡಿಟ್ ಮಾಡುವುದನ್ನು ಯಾವಾಗ ಪೂರ್ಣಗೊಳಿಸಬೇಕು?

ಉತ್ತರ: ಆಡಿಟ್ ಆರಂಭಿಸಿದದಿನದಿಂದ 3ತಿಂಗಳಲ್ಲಿ ಪೂರ್ಣಗೊಳಿಸಬೇಕು. ಆಡಿಟ್‌ ಪೂರ್ಣಗೊಂಡಿಲ್ಲ ಎಂದರೆ ಅಯುಕ್ತರ ಅನುಮಿತಿ ಪಡೆದ ಅತಿಹೆಚ್ಚು 6 ತಿಂಗಳವರೆಗೆ ವಿಸ್ತರಿಸಬಹುದು.

ಪ್ರಶ್ನೆ 19: ಆಡಿಟ್ ಆರಂಭ ಎಂದರೆ ಏನು?

ಉತ್ತರ: ಆಡಿಟ್ ಆರಂಭ ಬಹಳ ಮುಖ್ಯ, ಅಂದಿನಿಂದ ನಿಗಿದಿತ ಅವಧಿಯೊಳಗೆ ಆಡಿಟ್‌ ಪೂರ್ಣಗೊಳಿಸಬೇಕಿರುವುದರಿಂದ ಆಡಿಟ್ ಅರಂಭಿಸಿದ ದಿನ ನಮೂದಿಸಬೇಕು. ಏಕೆಂದರೆ, ಎ) ಆಡಿಟ್ ಅಧಿಕಾರಿಗಳು ದಾಖಲೆ/ಲೆಕ್ಕಪತ್ರಗಳನ್ನು ಸಲ್ಲಿಸುವಂತೆ ಕೇಳಿದ ದಿನ ನಮೂದಿಸಬೇಕು ಅಥವ ಬಿ) ಆಡಿಟ್ ಅಧಿಕಾರಿಗಳು ತೆರಿಗೆದಾರನ ಕಚೇರಿಯಲ್ಲಿ ಲೆಕ್ಕತಪಾಸಣೆ ಆರಂಭಿಸಿದ ದಿನ,

ಪ್ರಶ್ನೆ 20: ಆಡಿಟ್ ನಡೆಸುವುದಾಗಿ ನೋಟಿಸ್ ಬಂದಲ್ಲಿ ತೆರಿಗೆದಾರ ಮಾಡಬೇಕಾದ ಕರ್ತವ್ಯಗಳೇನು?

ಉತ್ತರ: ತೆರಿಗೆದಾರ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲೇಬೇಕು,

ಎ) ಅಧಿಕಾರಿಗಳು ಪರಿಶೀಲನೆಗೆ ಕೇಳಿದ ಎಲ್ಲ ದಾಖಲೆಗಳು/ಲೆಕ್ಕ ಪತ್ರಗಳನ್ನು ಒದಗಿಸಬೇಕು.

ಬಿ) ಆದರೆ ಅವರು ಕೇಳಿದ ದಾಖಲೆ/ಲೆಕ್ಕಪತ್ರಗಳು ಆಡಿಟ್‌‌ ಕೈಗೊಳ್ಳಲುಬೇಕಾಗಿರಬೇಕು.

ಸಿ) ಅಡಿಟ್‌‌ ಕೆಲಸ ಪೂರ್ಣಗೊಳ್ಳಲು ಸಕಾಲಿಕ ನೆರವು ನೀಡಬೇಕು.

ಪ್ರಶ್ನೆ 21: ಆಡಿಟ್ ಪೂರ್ಣಗೊಂಡ ಕೂಡಲೇ ಸೂಕ್ತ ಅಧಿಕಾರಿ ಮಾಡಬೇಕಾದ ಕೆಲಸವೇನು?

ಉತ್ತರ: ಸೂಕ್ತ ಅಧಿಕಾರಿ ಆಡಿಟ್ ಪೂರ್ಣಗೊಂಡ ಕೂಡಲೇ ತೆರಿಗೆದಾರನಿಗೆ ಆಡಿಟ್ ವರದಿಯಫಲಶೃತಿ, ತೀರ್ಮಾನುಗಳು, ತೆರಿಗೆದಾರನ ಕರ್ತವ್ಯ ಮತ್ತು ಹಕ್ಕುಗಳನ್ನು ತಿಳಿಸಬೇಕು

ಪ್ರಶ್ನೆ 22: ಯಾವ ಸಂದರ್ಭದಲ್ಲಿ ವಿಶೇಷ ಆಡಿಟ್ ಕೈಗೊಳ್ಳಬಹುದು?

ಉತ್ತರ: ಎಂಜಿಎಲ್‌‌ ಕಾಯ್ದೆ ಭಾಗ50ರಂತೆ ತನಿಖೆ, ಪರಿಶೀಲನೆ ನಡೆಸಿದಾಗ, ಅಥವ ತನಿಖೆ ಸಂಕೀರ್ಣವಾಗಿದ್ದರೆ, ಸರ್ಕಾರಕ್ಕೆ ಬರಬೇಕಾದ ಆದಾಯ ಹೆಚ್ಚಾಗಿದ್ದಲ್ಲಿ ಸೀಮಿತ ಸಂದರ್ಭಗಳಲ್ಲಿ ವಿಶೇಷ ಆಡಿಟ್ಗೆ ಆದೇಶ ನೀಡಬಹುದು.

ಪ್ರಶ್ನೆ 23: ಯಾರು ವಿಶೇಷ ಆಡಿಟ್‌‌ಗೆ ನೋಟಿಸ್ ನೀಡಬಹುದು?

ಉತ್ತರ: ಸಹಾಯಕ / ಉಪ ಅಯುಕ್ತರು ನೋಟಿಸ್ ನೀಡಬಹುದು. ಆದರೆ ಇದಕ್ಕೆ ಆಯುಕ್ತರ ಪೂರ್ವಾನುಮತಿ ಪಡೆಯಬೇಕು.

ಪ್ರಶ್ನೆ 24: ಯಾರು ವಿಶೇಷ ಆಡಿಟ್‌‌ ಮಾಡುತ್ತಾರೆ?

ಉತ್ತರ: ಅಯುಕ್ತರು ನೇಮಿಸಿದ ಚಾರ್ಟರ್ಡ್ಅಕೌಂಟೆಂಟ್ ಅಥವ ಕಾಸ್ಟ್‌ಅಕೌಂಟೆಂಟ್‌ ವಿಶೇಷ ಆಡಿಟ್‌‌ ಕೈಗೊಳ್ಳಬಹುದು.

ಪ್ರಶ್ನೆ 25 : ಇದರ ವರದಿ ಸಲ್ಲಿಸಲು ಕಾಲಮಿತಿ ಏನು?

ಉತ್ತರ: ವರದಿಯನ್ನು 90ದಿನಗಳಲ್ಲಿ ನೀಡಬೇಕು. ಇಲ್ಲವೆ ಮತ್ತೆ 90 ದಿನಗಳಲ್ಲಿ ವರದಿ ನೀಡಲೇಬೇಕು.

ಪ್ರಶ್ನೆ 26 : ವಿಶೇಷ ಆಡಿಟ್‌ಗೆ ತಗಲುವ ವೆಚ್ಚವನ್ನು ಯಾರು ಭರಿಸುವರು?

ಉತ್ತರ: ವಿಶೇಷ ಆಡಿಟ್‌‌ ಕೈಗೊಂಡ ಆಡಿಟರ್‌ ಅವರ ಶುಲ್ಕ ಮತ್ತು ಕಡತ ಪರಿಶೀಲನೆಗೆ ತಗಲುವ ವೆಚ್ಚವನ್ನು ಅಯುಕ್ತರೇ ಭರಿಸುವರು.

ಪ್ರಶ್ನೆ 27: ವಿಶೇಷ ಆಡಿಟ್ ವರದಿ ಬಂದ ಮೇಲೆ ತೆರಿಗೆ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ?

ಉತ್ತರ: ಎಂಜಿಎಲ್‌ ಕಾಯ್ದೆ ಭಾಗ51ರಂತೆ ವಿಶೇಷ ಆಡಿಟ್‌ ವರದಿಯನ್ನು ಪರಿಗಣಿಸಿ ತೆರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವರು.

*****

ಮರುಪಾವತಿ (ರೀಫಂಡ್)

14.ಮರುಪಾವತಿ (ರೀಫಂಡ್)

ಪ್ರಶ್ನೆ 1 : ಮರುಪಾವತಿ ಎಂದರೆ ಏನು?

ಉತ್ತರ: ಎಂಜಿಎಲ್‌‌ ಕಾಯ್ದೆ ಭಾಗ 38 ರಲ್ಲಿ ಮರುಪಾವತಿ ಬಗ್ಗೆ ಚರ್ಚಿಸಲಾಗಿದೆ. ‘ಮರುಪಾವತಿ’ ಎನ್ನುವುದರಲ್ಲಿ ಸರಕು ಮತ್ತು ಸೇವೆಯಲ್ಲಿ ವಿದೇಶಗಳಿಗೆ ರಫ್ತು ಮಾಡಿರುವುದು ಅಥವ ಒಳಪೂರೈಕೆ ಸರಕು ಅಥವ ಸೇವೆಯನ್ನು ಹೊರದೇಶಗಳಿಗೆ ಕಳುಹಿಸಲು ಬಳಸಿರುವುದು ಅಥವ ವಿದೇಶಗಳಿಗೆ ರಫ್ತು ಮಾಡುವ ವಸ್ತುಗಳು ಎಂದು ಪರಿಗಣಿತವಾದ ಸರಕು ಮತ್ತು ಸೇವೆಗಳಿಗೆ ವಿಧಿಸಿದ ತೆರಿಗೆ ಅಥವ ಬಳಕೆಯಾಗದ ಒಳಪೂರೈಕೆ ತೆರಿಗೆ ಕ್ರೆಡಿಟ್‌‌ಗಳನ್ನು ಕಾಯ್ದೆಯ ಭಾಗ38(2) ರೀತ್ಯ ತೆರಿಗೆ ಮರುಪಾವತಿ

ಪ್ರಶ್ನೆ 2: ಬಳಕೆಯಾಗದ ಒಳಪೂರೈಕೆ ತೆರಿಗೆ ಕ್ರೆಡಿಟ್ ಮರುಪಾವತಿ ಮಾಡಬಹುದೇ?

ಉತ್ತರ: ಹೌದು. ಆದರೆ ಭಾಗ38ಉಪ ಖಂಡ2ರಲ್ಲಿ ಹೇಳಿರುವಂತೆ ಕೆಳಕಂಡ ಪ್ರಕರಣಗಳಲ್ಲಿ ಮಾತ್ರ ತೆರಿಗೆ ಹಿಂತಿರುಗಿಸಲಾಗುವುದು.

 • ರಫ್ತಾಗುವ ಸರಕುಗಳ ಮೇಲೆ ಯಾವುದಕ್ಕೆ ರಫ್ತುಸುಂಕ ಇಲ್ಲವೊ ಅವುಗಳು.
 • ಸೇವೆಗಳನ್ನು ರಫ್ತು ಮಾಡಿದರೆ.
 • ಒಳಪೂರೈಕೆಯಲ್ಲಿ ಕ್ರೋಢೀಕೃತ ಕ್ರೆಡಿಟ್‌‌ ತೆರಿಗೆ ಹೊರಪೂರೈಕೆ ಮೇಲಿರುವ ತೆರಿಗೆ ಅಧಿಕವಾಗಿದ್ದಲ್ಲಿ.

ಪ್ರಶ್ನೆ 3: ವಿದೇಶಕ್ಕೆ ರಫ್ತು ಮಾಡಿದ ಸರಕುಗಳು ರಫ್ತು ಸುಂಕಕ್ಕೆ ಒಳಗಾಗಿದ್ದರೂ ಬಳಕೆಯಾಗದ ಐಟಿಸಿಗೆ ರೀಫಂಡ್ ಕೊಡಬಹುದೇ?

ಉತ್ತರ:ಇಲ್ಲ. (ಎಂಜಿಎಲ್ ಕಾಯ್ದೆ ಭಾಗ 38(2) ಎರಡನೇ ಉಲ್ಲೇಖ.

ಪ್ರಶ್ನೆ 4: ಜಿಎಸ್‌ಟಿ ಜಾರಿಗೆ ಬಂದ ಮೇಲೆ ಐಟಿಸಿ ಸರಕುಗಳ ದಾಸ್ತಾನು ಹಣಕಾಸು ವರ್ಷದಲ್ಲಿ ಹಾಗೆ ಉಳಿದಿದ್ದರೆ ಅದಕ್ಕೆ ರೀಫಂಡ್‌‌ ದೊರೆಯುತ್ತದೆಯೇ?

ಉತ್ತರ:ಇಲ್ಲ. ಆದರೆ ಅದನ್ನು ಮುಂದಿನ ವರ್ಷದ ವಹಿವಾಟಿಗೆ ವರ್ಗಾಯಿಸಲಾಗುವುದು.

ಪ್ರಶ್ನೆ 5: ಒಂದು ವೇಳೆ ತೆರಿಗೆದಾರ ಕಣ್ತಪ್ಪಿನಿಂದ ಐಜಿಎಸ್‌ಟಿ/ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ತೆರಿಗೆಯನ್ನು ಅಂತಾರಾಜ್ಯ ಮತ್ತು ರಾಜ್ಯದೊಳಗೆ ವ್ಯಾಪಾರ ಎಂದು ಭಾವಿಸಿ ಪಾವತಿ ಮಾಡಿದ್ದು, ನಂತರ ಅದನ್ನು ಸ್ಪಷ್ಟಪಡಿಸಿದರೆ, ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಯನ್ನು ಐಜಿಎಸ್‌ಟಿಗೆ ಸರಿಹೊಂದಿಸಬಹುದೇ ಅದೇ ರೀತಿ ಇದರಿಂದ ಅದಕ್ಕೆ ಮಾಡಬಹುದೇ?

ಉತ್ತರ: ಇಲ್ಲ. ಮೊದಲು ಸೂಕ್ತ ತರಿಗೆ ಪಾವತಿಮಾಡಿ ಕಣ್ತಪ್ಪಿನಿಂದ ಪಾವತಿ ಮಾಡಿದ ಹಣವನ್ನು ಹಿಂತಿರುಗಿಸುವಂತೆ (ರೀಫಂಡ್)ಕೇಳಬಹುದು.

ಪ್ರಶ್ನೆ 6: ವಿಶ್ವಸಂಸ್ಥೆ ಮತ್ತು ರಾಯಭಾರಿ ಕಚೇರಿಗಳು ಖರೀದಿಸಿದ ವಸ್ತುಗಳಿಗೆ ತೆರಿಗೆ ಇದೆಯೇ ಅಥವ ಇಲ್ಲವೆ?

ಉತ್ತರ: ತೆರಿಗೆ ಇದೆ.ನಂತರದ ದಿನಗಳಲ್ಲಿ ಅದನ್ನು ರೀಫಂಡ್ ನೀಡುವಂತೆ ಕೇಳಬಹುದು. (ವಿಶ್ವಸಂಸ್ಥೆಯ ಕಚೇರಿಗಳು ಮತ್ತು ವಿವಿಧ ದೇಶಗಳ ರಾಯಭಾರಿ ಮತ್ತು ದೂತಾವಾಸದವರು ಯಾವುದೇ ವಸ್ತುಗಳ ಖರೀದಿಗೆ ಮುನ್ನ ವಿಶಿಷ್ಟ ಗುರುತಿನ ಚೀಟಿಯನ್ನು ಪಡೆಯಬೇಕು. ಎಲ್ಲೇ ಸರಕುಖರೀದಿ ಮಾಡಲು ವ್ಯಾಪಾರಿ ಸಲ್ಲಿಸುವ ಹೊರ ವಹಿವಾಟಿಗೆ ಈ ಗುರುತಿನ ಚೀಟಿಯ ನಂಬರ್ದಾಖಲಾಗಿರಬೇಕು. ಆಗ ನೀಡಿದ ತೆರಿಗೆಯನ್ನು ಹಿಂದಕ್ಕೆ ಪಡೆಯಬಹುದು. ಇದಕ್ಕೆ ಸಂಬಂಧಿಸಿದಂತೆ ಜಿಎಸ್‌‌ಟಿ ಭಾಗ 19 (6)ರಂತೆ ಪ್ರತ್ಯೇಕ ಪ್ರಕಟಣೆ ಹೊರಡಿಸಲಾಗುವುದು.)

ಪ್ರಶ್ನೆ 7 : ರೀಫಂಡ್ ಪಡೆಯಲು ಕಾಲಮಿತಿ ಏನಾದರೂ ಇದೆಯೇ?

ಉತ್ತರ: ವ್ಯಕ್ತಿ ಎರಡು ವರ್ಷಗಳಲ್ಲಿ ರೀಫಂಡ್‌ಗೆ ಅರ್ಜಿ ಸಲ್ಲಿಸಬೇಕು. ಇದರ ಬಗ್ಗೆ ಎಂಜಿಎಲ್ ಕಾಯ್ದೆ ಭಾಗ 38 ರಲ್ಲಿ ವಿವರಣೆ ನೀಡಲಾಗಿದೆ.

ಪ್ರಶ್ನೆ 8: ಅನ್ಯಾಯಿಕ ಬೆಲೆ ಹೆಚ್ಚಿಸುವಿಕೆ ತತ್ವದ ಮೇಲೂ ಮರುಪಾವತಿಗೂ ಅನ್ವಯಿಸುವುದೇ?

ಉತ್ತರ: ಹೌದು. ಆದರೆ ಭಾಗ 38ಉಪಖಂಡ 2ರಲ್ಲಿ ಹೇಳಿರುವಂತೆ ಕೆಳಕಂಡ ಪ್ರಕರಣಗಳಲ್ಲಿ ಮಾತ್ರ ತೆರಿಗೆ ಹಿಂತಿರುಗಿಸಲಾಗುವುದು. (ಪ್ರಶ್ನೆ 2 ಸಹ ನೋಡಿ)

ಪ್ರಶ್ನೆ 9 : ಒಂದು ವೇಳೆ ತೆರಿಗೆ ಗ್ರಾಹಕರ ಹಂತ ತಲುಪಿಯಾಗಿದ್ದರೆ, ರೀಫಂಡ್ ಮಂಜೂರಾಗುತ್ತದೆಯೇ?

ಉತ್ತರ: ಮಂಜೂರಾಗುತ್ತದೆ. ಆದರೆ ಎಷ್ಟು ಹಣ ರೀಫಂಡ್‌ ಮಾಡಬೇಕೆಂದು ನಿರ್ಧಾರವಾಗುತ್ತದೊ ಅದು ಗ್ರಾಹಕರ ಕಲ್ಯಾಣ ನಿಧಿಗೆ ಜಮಾ ಆಗುತ್ತದೆ.

ಪ್ರಶ್ನೆ 10: ರೀಫಂಡ್ ಮಂಜೂರು ಮಾಡಲು ಕಾಲಮಿತಿ ಏನಾದರೂ ಇದೆಯೇ?

ಉತ್ತರ:ಇದೆ. 90 ದಿನಗಳಲ್ಲಿ ಹಣ ಹಿಂತಿರುಗಿಸಬೇಕು. ಕೆಲವು ಸಂದರ್ಭಗಳಲ್ಲಿ ಒಟ್ಟಾರೆ ಕೇಳಿದ ಹಣದಲ್ಲಿ ಶೇಕಡ 80ರಷ್ಟು ರೀಫಂಡ್‌ ಮಾಡಬೇಕಾಗುತ್ತದೆ. ಇದು ಕೆಲವು ವರ್ಗಗಳ ರಫ್ತಿಗೆ ಅನ್ವಯವಾಗುತ್ತದೆ. ಕಾಯ್ದೆ ಭಾಗ 38 ಉಪಖಂಡ 4ಎ ರಂತೆ ಇದನ್ನು ನೀಡಬೇಕು. ಮೂರು ತಿಂಗಳಲ್ಲಿ ಇದನ್ನು ಕೊಡಲಿಲ್ಲ ಎಂದರೆ ಇಲಾಖೆಯಿಂದ ಬಡ್ಡಿ ನೀಡಬೇಕಾಗುತ್ತದೆ.

ಪ್ರಶ್ನೆ 11 : ರೀಫಂಡ್ ನೀಡಿದ್ದನ್ನು ಇಲಾಖೆ ತಡೆಹಿಡಿಯಲು ಬರುತ್ತದೆಯೇ?

ಉತ್ತರ: ಹೌದು. ಕೆಳಕಂಡ ಸಂದರ್ಭಗಳಲ್ಲಿ ರೀಫಂಡ್‌‌ ಹಿಡಿದಿಡಬಹುದು.

 • ಒಂದು ವೇಳೆ ನೋಂದಾಯಿತ ವ್ಯಾಪಾರಿ ರಿಟರ್ನ್‌ಗಳನ್ನು ಸಲ್ಲಿಸದೇ ಹೋದಲ್ಲಿ, ಅದನ್ನು ಸಲ್ಲಿಸುವವರೆಗೆ ಹಿಡಿದಿಡಬಹುದು.
 • ಒಂದು ವೇಳೆ ನೋಂದಾಯಿತ ತೆರಿಗೆದಾರ ಯಾವುದೇ ತೆರಿಗೆ, ಬಡ್ಡಿ, ದಂಡಯನ್ನು ಪಾವತಿ ಮಾಡದೇ ಇದ್ದಲ್ಲಿ, ಅದಕ್ಕೆ ಯಾವುದೇ ಮೇಲ್ಮನವಿ ಪ್ರಾಧಿಕಾರ/ನ್ಯಾಯಾಧಿಕರಣ/ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ ಎಂದಾದರೆ ಬಾಕಿಯನ್ನು ಪಾವತಿಸಬೇಕು. (ಸೂಕ್ತ ಅಧಿಕಾರಿ ರೀಫಂಡ್‌ ಹಣದಲ್ಲಿ ತೆರಿಗೆದಾರ ಹಿಂದೆ ನೀಡಬೇಕಿದ್ದ ಬಾಕಿಯನ್ನು ಮುರಿದುಕೊಂಡು ಉಳಿದ ಹಣ ನೀಡಬಹುದು)
 • ಆಯುಕ್ತ/ಪರಿಷತ್‌ ರೀಫಂಡನ್ನು ತಡೆಹಿಡಿಯಬಹುದು. ಒಂದು ವೇಳೆ ರೀಫಂಡ್‌ ನೀಡಿದ್ದರ ಬಗ್ಗೆ ಮೇಲ್ಮನವಿ ಸಲ್ಲಿಸಿದ್ದರೆ, ರೀಫಂಡ್‌ ನೀಡುವುದು ಸರ್ಕಾರದ ಆದಾಯಕ್ಕೆ ನಷ್ಟ ಒದಗುತ್ತದೆ ಎಂದು ಭಾವಿಸಿದ್ದಲ್ಲಿ ಅದನ್ನು ತಡೆಹಿಡಿಯಬಹುದು. (ಎಂಜಿಎಲ್ ಕಾಯ್ದೆ ಭಾಗ 38(9) ನೋಡಿ)

ಪ್ರಶ್ನೆ 12 : ಭಾಗ38(9)ರಂತೆ ರೀಫಂಡ್‌ ತಡೆಹಿಡಿದಿರುವುದಕ್ಕೆ 11 (ಸಿ)ನಲ್ಲಿ ಚರ್ಚಿಸಿದಂತೆ ತೆರಿಗೆದಾರನಿಗೆ ಬಡ್ಡಿ ಲಭಿಸುತ್ತದೆಯೇ?

ಉತ್ತರ: ಒಂದು ವೇಳೆ ರೀಫಂಡ್‌ಗೆ ಸಂಬಂಧಿಸಿದಂತೆ ಮೇಲ್ಮನವಿ ಅಥವ ಪ್ರಕ್ರಿಯೆ ಮುಂದುವರಿದಲ್ಲಿ ತೆರಿಗೆ ಹಣವನ್ನು ಹಿಂತಿರುಗಿಸಬೇಕಾದಾದಲ್ಲಿ ತೆರಿಗೆದಾರ ಅದಕ್ಕೆ ಬಡ್ಡಿ ಪಡೆಯಲು ಅರ್ಹನಾಗುತ್ತಾನೆ.

ಪ್ರಶ್ನೆ 13 : ರೀಫಂಡ್‌ಗೆ ಕನಿಷ್ಟ ಹಣ ಇಷ್ಟು ಇರಬೇಕೆಂದು ನಿಯಮ ಏನಾದರೂ ಇದೆಯೇ?

ಉತ್ತರ: ಇಲ್ಲ. ರೀಫಂಡ್ ಹಣ 1000 ರೂಗಳಿಗಿಂತ ಕಡಿಮೆ ಇದ್ದರೂ ನೀಡಬೇಕು. (ಎಂಜಿಎಲ್ ಭಾಗ 38(11)

ಪ್ರಶ್ನೆ 14: ಹಳೆಯ ಕಾಯ್ದೆ ಅನ್ವಯ ರೀಫಂಡ್ ಬರಬೇಕಾದಲ್ಲಿ ಅದನ್ನು ಯಾವ ರೀತಿಪಾವತಿ ಮಾಡುವುದು?

ಉತ್ತರ: ರೀಫಂಡ್ ಇದ್ದಲ್ಲಿ ಅದನ್ನು ಹಳೆಯ ಕಾಯ್ದೆಯಂತೆ ಪಾವತಿ ಮಾಡಲಾಗುವುದು. ಸಿಜಿಎಸ್‌‌ಟಿ ಆಗಿದ್ದಲ್ಲಿ ನಗದು ರೂಪದಲ್ಲಿ ಅಥವ ಎಸ್‌ಜಿಎಸ್‌ಟಿ ಆಗಿದ್ದಲ್ಲಿ ಹಳೆಯ ಕಾಯ್ದೆಯಂತೆ ನೀಡಲಾಗುವುದು. ಐಟಿಸಿ (ಎಂಜಿಎಲ್ ಕಾಯ್ದೆ ಭಾಗ 156,157 ಮತ್ತು 158) ರಂತೆ ರೀಫಂಡ್ ಲಭ್ಯವಿರುವುದಿಲ್ಲ.

ಪ್ರಶ್ನೆ 15: ದಾಖಲೆಗಳ ಪರಿಶೀಲನೆಗೆ ಮುನ್ನ ರೀಫಂಡ್ ಪಾವತಿ ಮಾಡಬಹುದೇ?

ಉತ್ತರ: ಕೆಲವು ನಿಗದಿತ ವರ್ಗಗಳ ವ್ಯಾಪಾರಿಗಳಿಗೆ ರಫ್ತಿಗೆ ಸಂಬಂಧಿಸಿದಂತೆ ಶೇಕಡ 80 ರಷ್ಟು ಹಣವನ್ನು ದಾಖಲೆಗಳ ಪರಿಶೀಲನೆಗೆ ಮುನ್ನ ರೀಫಂಡ್‌‌ ಮಾಡಬಹುದು. ಅದಕ್ಕೆ ಕೆಲವು ಷರತ್ತುಗಳು ಮತ್ತು ನಿರ್ಬಂಧಗಳು ಅನ್ವಯಿಸುತ್ತದೆ-ಭಾಗ 38(4ಎ)

ಪ್ರಶ್ನೆ 16 : ಒಂದು ವೇಳೆ ರಫ್ತಿನಲ್ಲಿ ರೀಫಂಡ್ ಇದ್ದಲ್ಲಿ ಅದನ್ನು ಮಂಜೂರು ಮಾಡಲು ಬಿಆರ್ಸಿ ಅಗತ್ಯವೇ?

ಉತ್ತರ: ರಫ್ತುದಾರರಿಗೆ ರಫ್ತಿನಿಂದ ಬರುವ ಆದಾಯವನ್ನು ಲೆಕ್ಕಹಾಕಿ ತೆರಿಗೆ ಸಲ್ಲಿಸಲು ಒಂದು ವರ್ಷ ಕಾಲಾವಕಾಶ ಇದೆ. ಹೀಗಾಗಿ ರೀಫಂಡ್ ಅರ್ಜಿ ಸಲ್ಲಿಸುವ ವೇಳೆಗೆ ಬಿಆರ್‌ಸಿ ಲಭ್ಯವಿರುವುದಿಲ್ಲ. ಒಂದು ವೇಳೆ ರಫ್ತಿನಿಂದ ಬರುವ ಆದಾಯ ಮುಂಗಡವಾಗಿ ಲಭಿಸಿದರೆ ಬಿಆರ್‌ಸಿ ಸಿಗಬಹುದು. ಹೀಗಾಗಿ ರೀಫಂಡ್‌ಗೆ ಬಿಆರ್‌ಸಿ ವಿವರ ಸಲ್ಲಿಸುವುದು ಮುಖ್ಯವಾಗುತ್ತದೆ. ಇದಕ್ಕೆ ಕಾಲಾವಧಿ ಗರಿಷ್ಟ ಎಂದರೆ ಒಂದು ವರ್ಷ ಅಥವ ಆರ್‌ಬಿಐ ವಿಸ್ತರಿಸಬಹುದು. ಡಿಜಿಎಪ್‌ಟಿಯ ಇ-ಬಿ ಆರ್ಸಿಯನ್ನು ಮಾದರಿ ಜಿಎಸ್‌ಟಿಯಲ್ಲಿ ಅಂತರ್ಗತಗೊಳಿಸಲಾಗಿದೆ. ಅದರೆ ಸೇವೆಯ ರಫ್ತಿಗೆ ಬಿಆರ್‌ಸಿ ಸಲ್ಲಿಸುವುದು ರೀಫಂಡ್ ಮಂಜೂರಾತಿಗೆ ಮುನ್ನನಡೆಯಬೇಕು.

ಪ್ರಶ್ನೆ 17 : ರಫ್ತಿಗೆ ಅಥವ ರಫ್ತಾಗಿದೆ ಎಂದು ಭಾವಿಸುವ ವಸ್ತುಗಳಿಗೆ ಅನುಚಿತ ಗಳಿಕೆ ತತ್ವ ಅನ್ವಯವಾಗುತ್ತದೆಯೇ?

ಉತ್ತರ: ಅನುಚಿತ ಗಳಿಕೆ ತತ್ವ ರಫ್ತಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಅದನ್ನು ಸ್ವೀಕರಿಸುವ ವ್ಯಕ್ತಿ ನಮ್ಮ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಅದರೆ ರಫ್ತಾಗಿದೆ ಎಂದು ಭಾವಿಸುವ ವಸ್ತುಗಳಿಗೆ ಇದು ಅನ್ವಯವಾಗುತ್ತದೆ.

ಪ್ರಶ್ನೆ 18 : ಯಾವುದೇ ವ್ಯಕ್ತಿ ತನ್ನ ಪ್ರಕರಣದಲ್ಲಿ ಅನುಚಿತ ಗಳಿಕೆ ತತ್ವ ಅನ್ವಯಿಸುವುದಿಲ್ಲ ಎಂದು ಸಾಬೀತುಪಡಿಸುವುದು ಹೇಗೆ?

ಉತ್ತರ: ಯಾವುದೇ ವ್ಯಕ್ತಿ ತಾನು ಪಾವತಿ ಮಾಡಿರುವ ತೆರಿಗೆ ಮತ್ತು ಬಡ್ಡಿಯನ್ನು ಬೇರೆ ಗ್ರಾಹಕರಿಗೆ ವರ್ಗಾಯಿಸಿಲ್ಲ ಎಂಬುದನ್ನು ದಾಖಲೆಗಳು ಮತ್ತು ಸಾಕ್ಷಿಗಳ ಮೂಲಕ ಸಾಬೀತುಪಡಿಸಿ ಅರ್ಜಿಸಲ್ಲಿಸಬೇಕು. ಭಾಗ38(3)(ಬಿ) ತೆರಿಗೆದಾರನಿಗೆ ಪರಿಹಾರ ನೀಡಲು ಅದೇ ನಿಯಮದಲ್ಲಿ ತಿಳಿಸಲಾಗಿದೆ. ಒಂದು 5ಲಕ್ಷ ರೂ.ಗಳಿಗಿಂತ ಕಡಿಮೆ ಕೇಳಿದ್ದರೆ ಅದಕ್ಕೆ ಸ್ವಯಂ ಹೇಳಿಕೆ ನೀಡಿದರೆ ಸಾಕು.

ಪ್ರಶ್ನೆ 19 : ಈಗಿರುವ ವ್ಯಾಟ್/ಸಿಎಸ್‌ಟಿ ನಿಯಮಯದಲ್ಲಿ ಮರ್ಚೆಂಟ್ ಎಕ್ಸ್‌ಪೋರ್ಟರ್ರ‍್ಸ್‌‌ ಡಿಕ್ಲರೇಷನ್ ಅರ್ಜಿ ನೀಡಿ ತೆರಿಗೆ ಪಾವತಿ ಮಾಡದೆ ಸರಕುಗಳನ್ನು ಖರೀದಿ ಮಾಡುತ್ತಾರೆ. ಈಗ ನಿಯಮ ಜಿಎಸ್ಟಿಯಲ್ಲೂ ಇದೆಯೇ?

ಉತ್ತರ: ಇಲ್ಲ ಜಿಎಸ್‌‌ಟಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಪ್ರತಿಯೊಂದು ಸರಕನ್ನು ಖರೀದಿ ಮಾಡಿ ಐಟಿಸಿ ಎಲ್ಲವನ್ನೂ ಸೇರಿಸಿ ರೀಪಂಡ್‌‌ ಪಡೆಯಬಹುದು. ಭಾಗ 38(2)

ಪ್ರಶ್ನೆ 20: ಈಗ ಕೇಂದ್ರದ ಕಾನೂನಿನಲ್ಲಿ ರಫ್ತುದಾರರು ಸುಂಕ ಪಾವತಿ ಮಾಡಿ ಐಟಿಸಿ ಪಡೆದು ಸುಂಕ ಪಾವತಿಯೊಂದಿಗೆ (ಐಟಿಸಿ ಬಳಸಿಕೊಂಡು) ಸರಕುಗಳನ್ನು ರಫ್ತು ಮಾಡಿ ನಂತರ ರೀಫಂಡ್ ಪಡೆಯುತ್ತಾರೆ. ಇದು ಜಿಎಸ್‌‌ಟಿ ವ್ಯವಸ್ಥೆ ಮುಂದುವರಿಯುತ್ತದೆಯೇ?

ಉತ್ತರ: ಜಿಎಸ್‌ಟಿಯಲ್ಲಿ ರಫ್ತಿಗೆ ಶೂನ್ಯ ತೆರಿಗೆ. ಹೀಗಾಗಿ ರಫ್ತಿಗೆ ತೆರಿಗೆ ಕಷ್ಟ ಇರುವುದಿಲ್ಲ. ಆದರೆ ರಫ್ತಿಗೆ ಸಂಬಂಧಿಸಿದ ಇನ್ಪುಟ್‌ಗಳಿಗೆ ಜಿಎಸ್‌ಟಿಯಲ್ಲಿ ತೆರಿಗೆ ನೀಡಬೇಕು. ಇವುಗಳನ್ನು ಸೇರಿಸಿ ಒಟ್ಟಿಗೆ ಅಥವ ಸಂಪೂರ್ಣವಾಗಿ ಸಿದ್ಧಗೊಂಡ ರಫ್ತು ಸರಕುಗಳ ಮೇಲೆ ರೀಫಂಡ್‌‌ ಪಡೆಯಬಹುದು.

******

ಬೇಡಿಕೆ ಮತ್ತು ವಸೂಲಿ

15. ಬೇಡಿಕೆ ಮತ್ತು ವಸೂಲಿ

ಪ್ರಶ್ನೆ1: ಒಂದು ವೇಳೆ ಯಾರಾದರೂ ಕಡಿಮೆ ತೆರಿಗೆ ಕಟ್ಟಿದ್ದರೆ, ಅಥವ ತೆರಿಗೆಯನ್ನೇ ಪಾವತಿ ಮಾಡದೇ ಇದ್ದಲ್ಲಿ, ದೋಷಪೂರಿತವಾಗಿ ರೀಫಂಡ್ ನೀಡಿದ್ದಲ್ಲಿ ಅಥವ ಇನ್‌ಪುಟ್ ತೆರಿಗೆ ಕ್ರೆಡಿಟ್ ತಪ್ಪಾಗಿ ಬಳಕೆ ಮಾಡಿಕೊಂಡಿದ್ದರೆ ಅವುಗಳನ್ನು ವಸೂಲು ಮಾಡಲು ಯಾವ ನಿಯಮಗಳು ಅನ್ವಯವಾಗುತ್ತವೆ?

ಉತ್ತರ: ವಂಚನೆ/ಮುಚ್ಚಿಡುವುದು/ತಪ್ಪು ಹೇಳಿಕೆ ನೀಡುವುದು ಇಲ್ಲದೆ ಇದ್ದಲ್ಲಿ ಭಾಗ 51 ಎ ಮತ್ತುವಂಚನೆ/ಮುಚ್ಚಿಡುವುದು/ತಪ್ಪು ಹೇಳಿಕೆ ನೀಡುವ ಅಂಶಗಳು ಕಂಡು ಬಂದಲ್ಲಿ ಭಾಗ 51 ಬಿ ಅನ್ವಯವಾಗುತ್ತದೆ.

ಪ್ರಶ್ನೆ2: ಭಾಗ 51ಎ ರಂತೆ ನೋಟಿಸ್‌ ನೀಡುವ ಮೊದಲೇ ವ್ಯಕ್ತಿ ಇಲಾಖೆ ತಿಳಿಸಿದ ತೆರಿಗೆಯನ್ನು ಬಡ್ಡಿ ಸಮೇತ ಪಾವತಿ ಮಾಡಬಹುದೇ?

ಉತ್ತರ: ಪಾವತಿ ಮಾಡಬಹುದು. ಆಗ ಸೂಕ್ತ ಅಧಿಕಾರಿ ನೋಟಿಸ್‌ ಕೊಡುವ ಅಗತ್ಯ ಬರುವುದಿಲ್ಲ.

ಪ್ರಶ್ನೆ3: ಭಾಗ 51ಎ ರಂತೆ ನೋಟಿಸ್ ನೀಡಿದ ಮೇಲೆ ನೋಟಿಸ್‌ಪಡೆದ ವ್ಯಕ್ತಿ ಹಣ ಪಾವತಿ ಮಾಡಿದರೆ ಅದಕ್ಕೆ ಸಂಬಂಧಿಸಿದ ಪ್ರಕರಣವನ್ನು ಮುಂದುವರಿಸಬೇಕೆ ಬೇಡವೆ?

ಉತ್ತರ: ಭಾಗ 51ಎ ಉಪಖಂಡ 1ರಂತೆ ಯಾವುದೇ ವ್ಯಕ್ತಿಗೆ ನೋಟಿಸ್‌ ನೀಡಿದ್ದು, ಅದನ್ನು ಸ್ವೀಕರಿಸಿದ 30 ದಿನಗಳೊಳಗೆ ಬಡ್ಡಿ ಸಮೇತ ಎಲ್ಲ ಹಣವನ್ನು ಪಾವತಿ ಮಾಡಿದರೆ ದಂಡ ವಿಧಿಸದೆ ಪ್ರಕರಣವನ್ನು ಮುಕ್ತಾಯಗೊಳಿಸಲಾಗುವುದು.

ಪ್ರಶ್ನೆ4: ಭಾಗ 51ಎ/ಬಿ ನಲ್ಲಿ ಸಮಜಾಯಿಷಿ ಕೇಳಿ ನೋಟಿಸ್‌ ನೀಡಲು ಯಾವುದು ಸೂಕ್ತ ದಿನಾಂಕ?

ಉತ್ತರ: ವಾರ್ಷಿಕ ರಿಟರ್ನ್‌ ಸಲ್ಲಿಸಿದ ದಿನವೇ ಪ್ರಮುಖ, ಯಾವ ದಿನ ನಿಜವಾಗಿ ರಿಟರ್ನ್‌ ಸಲ್ಲಿಸಲಾಗಿದೆ ಅಥವಾ ಯಾವ ದಿನ ರಿಟರ್ನ್ ಸಲ್ಲಿಸಿಲ್ಲ, ಅಥವ ವಾರ್ಷಿಕ ರಿಟರ್ನ್ ಸಲ್ಲಿಸಲು ಕೊನೆಯ ದಿನವಾಗಿತ್ತು.

ಪ್ರಶ್ನೆ5: ಭಾಗ 53ಎ/ಬಿ ರಂತೆ ಸಮಜಾಯಷಿ ಕೇಳಿ ನೋಟಿಸ್‌ ನೀಡಲು ಅಥವ ವಿಚಾರಣೆ ನಡೆಸಲು ಏನಾದರೂ ಕಾಲಮಿತಿ ಇದೆಯೇ?

ಉತ್ತರ: ಸಮಜಾಯಿಷಿ ಕೇಳಿ ನೋಟಿಸ್ ನೀಡಲು ಕಾಲಮಿತಿ ಇಲ್ಲ. ಆದರೆ ಸಮಜಾಯಿಸಿ ಕೇಳಿ ನೋಟಿಸ್‌ನೀಡುವುದು ಹಾಗೂ ವಿಚಾರಣೆ ನಡೆಸುವುದು ಸೇರಿದಂತೆ ಪ್ರತಿ ಪ್ರಕರಣಕ್ಕೆ ಸಂಬಂಧಿಸಿದ ದಿನದಿಂದ ಎಲ್ಲವೂ 3 ವರ್ಷಗಳಲ್ಲಿ (ಭಾಗ 51ಎ ಪ್ರಕರಣಗಳು) 5 ವರ್ಷಗಳಲ್ಲಿ (ಭಾಗ 51 ಬಿ ಪ್ರಕರಣಗಳು) ಪೂರ್ಣಗೊಳ್ಳಬೇಕು.

ಪ್ರಶ್ನೆ6: ಭಾಗ 51 ಬಿ ಯಂತೆ ನೋಟಿಸ್ ನೀಡುವ ಮೊದಲೇ ತೆರಿಗೆದಾರ ನಿಗದಿಯಾದ ತೆರಿಗೆ ಮತ್ತು ಬಡ್ಡಿಯನ್ನು ಪಾವತಿ ಮಾಡಿದರೆ ಆತನಿಗೆ ನೋಟಿಸ್ ನೀಡಬೇಕೆ ಬೇಡವೆ?

ಉತ್ತರ: ಹೌದು. ಉಪಖಂಡ 1ರಂತೆ ನೋಟಿಸ್‌ ನೀಡುವ ಮುನ್ನ, ಉಪಖಂಡ 2ರಂತೆ ಪ್ರಕಟಣೆ ನೀಡುವ ಮುನ್ನಸಂಬಂಧಪಟ್ಟ ವ್ಯಕ್ತಿಗೆ ತೆರಿಗೆ ಮತ್ತು ಬಡ್ಡಿಯನ್ನು ಹಾಗೂ ಶೇಕಡ 15ರಷ್ಟು ದಂಡವನ್ನು ಪಾವತಿಸಲು ಅವಕಾಶವಿದೆ. ನಿಗದಿತ ಮೊತ್ತವನ್ನು ವ್ಯಕ್ತಿ ತಾನೇ ಲೆಕ್ಕ ಹಾಕಬಹುದು ಅಥವಾ ಸೂಕ್ತ ಅಧಿಕಾರಿ ನೀಡಿದ ಮಾಹಿತಿಯಂತೆ ಪಾವತಿ ಮಾಡಿದರೆ ಆ ತೆರಿಗೆಗೆ ಸಂಬಂಧಿಸಿದಂತೆ ನೋಟಿಸ್‌ ನೀಡುವಂತಿಲ್ಲ.

ಪ್ರಶ್ನೆ7: ಭಾಗ 51ಬಿ ರೀತ್ಯ ನೋಟಿಸ್‌ ನೀಡಿದ್ದು ವ್ಯಕ್ತಿ ತೆರಿಗೆ ಪಾವತಿ ಮಾಡಿದರೆ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿಸಬೇಕೆ?

ಉತ್ತರ: ಇಲ್ಲ. ತೆರಿಗೆ/ಬಡ್ಡಿ ಮತ್ತು ದಂಡ ಕಟ್ಟಿದ್ದರೆ ವಿಚಾರಣೆ ಇಲ್ಲ. ಉಪಖಂಡ 1ರಂತೆ ನೋಟಿಸ್‌ ಪಡೆದ ವ್ಯಕ್ತಿ ತೆರಿಗೆ, ಬಡ್ಡಿ ಹಾಗೂ ಶೇಕಡ 25ರಷ್ಟು ದಂಡವನ್ನು 30ದಿನಗಳಲ್ಲಿ ಕಟ್ಟಿದರೆ ನೋಟಿಸ್‌ ಮತ್ತಿತರ ಪ್ರಕ್ರಿಯೆ ತಂತಾನೇ ಮುಕ್ತಾಯಗೊಳ್ಳುತ್ತದೆ.

ಪ್ರಶ್ನೆ8: ಒಂದು ವೇಳೆ ನೋಟಿಸ್ ನೀಡಿ ವಿಚಾರಣೆ ನಡೆಸಿ ತೆರಿಗೆ ಪ್ರಮಾಣ ನಿಗದಿಪಡಿಸಿ ದಂಡ ವಿಧಿಸಿದ ಮೇಲೆ ತೆರಿಗೆದಾರ ಕಡಿಮೆ ದಂಡ ಕಟ್ಟಲು ಅವಕಾಶವಿದೆಯೇ?

ಉತ್ತರ: ಹೌದು. ತೆರಿಗೆದಾರ ಆದೇಶ ಪಡೆದ 30ದಿನಗಳೊಳಗೆ ತೆರಿಗೆ/ಬಡ್ಡಿ ಮತ್ತು ಶೇಕಡ 50ರಷ್ಟು ದಂಡವನ್ನು ಕಟ್ಟಬೇಕು. ಭಾಗ 51 ಬಿ ಉಪಖಂಡ (6) ರಂತೆ ಆದೇಶ ಪಡೆದ ವ್ಯಕ್ತಿ ತೆರಿಗೆ/ಬಡ್ಡಿ ಮತ್ತು ಶೇಕಡ 50 ದಂಡವನ್ನು 30 ದಿನಗಳಲ್ಲಿ ಪಾವತಿಸಬೇಕು. ಆಗ ಆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಚಾರಣೆಯು ತಂತಾನೇ ಮುಕ್ತಾಯಗೊಳ್ಳುತ್ತದೆ.

ಪ್ರಶ್ನೆ9: ಭಾಗ 51ಎ ಮತ್ತುಬಿ ರೀತ್ಯ ವಿಚಾರಣೆ ನಡೆದು 3ವರ್ಷ (51ಎ) 5ವರ್ಷ (51ಬಿ)ಗಳಾಗಿದ್ದರೂ ಆದೇಶ ಹೊರಡಿಸಿಲ್ಲ ಎಂದರೆ ಏನಾಗುತ್ತದೆ?

ಉತ್ತರ: ಮಾದರಿ ಜಿಎಸ್‌ಟಿ ಕಾನೂನಿನಂತೆ ಭಾಗ51 ಎ ಮತ್ತು ಬಿ ರೀತ್ಯ ವಿಚಾರಣೆ ನಡೆದು 3 ವರ್ಷ(51ಎ) 5ವರ್ಷ(51ಬಿ) ಗಳಾಗಿದ್ದರೂ ಅದೇಶ ಹೊರಡಿಸಿಲ್ಲ ಎಂದರೆ ಅದನ್ನು ಆದೇಶ ನೀಡಿದಂತೆ ಎಂದು ಭಾವಿಸಲಾಗುವುದು.

ಪ್ರಶ್ನೆ10: ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯಿಂದ ತೆರಿಗೆಯನ್ನು ಪಡೆದು ಸರ್ಕಾರದ ಬೊಕ್ಕಸಕ್ಕೆ ಸಲ್ಲಿಸದೆ ಇದ್ದಲ್ಲಿ ಏನಾಗುತ್ತದೆ?

ಉತ್ತರ: ಎಂಜಿಎಲ್ ಕಾಯ್ದೆ ಭಾಗ 52 ರಂತೆ ಯಾವುದೇ ವ್ಯಕ್ತಿ ಸರ್ಕಾರದ ಪರವಾಗಿ ತೆರಿಗೆಯನ್ನು ಬೇರೆ ವ್ಯಕ್ತಿಯಿಂದ ಸಂಗ್ರಹಿಸಿದ್ದರೆ ಅದನ್ನು ಕೇಂದ್ರ ಅಥವ ರಾಜ್ಯ ಸರ್ಕಾರದ ಖಾತೆ ಜಮಾ ಮಾಡಬೇಕು. ವ್ಯಕ್ತಿ ಏನನ್ನೇ ಸರಬರಾಜು ಮಾಡಿರಲಿ ಇಲ್ಲದಿರಲಿ ತೆರಿಗೆ ಹಣವನ್ನು ಸರ್ಕಾರಕ್ಕೆ ನೀಡಬೇಕು.

ಪ್ರಶ್ನೆ11: ಭಾಗ 52 ರಂತೆ ಯಾವುದೇ ವ್ಯಕ್ತಿ ತೆರಿಗೆ ಸಂಗ್ರಹಿಸಿ ಅದನ್ನು ಸರ್ಕಾರಕ್ಕೆ ಪಾವತಿ ಮಾಡದೇ ಹೋದಲ್ಲಿ ಅವರ ಮೇಲೆ ಏನು ಕ್ರಮಕೈಗೊಳ್ಳಬಹುದು?

ಉತ್ತರ: ನೋಟಿಸ್‌ ಕೊಡಬೇಕು. ಸಹಜ ನಿಯಮ ಪಾಲಿಸಿ, ಆದೇಶ ಹೊರಡಿಸಬೇಕು. ನೋಟಿಸ್‌ ಕೊಟ್ಟ ಒಂದು ವರ್ಷದೊಳಗೆ ಆದೇಶ ಹೊರಡಿಸಬೇಕು. ಆದರೆ ಸಮಜಾಯಿಷಿ ಕೇಳಿ ನೀಡುವ ನೋಟಿಸ್‌ಗೆ ಕಾಲಮಿತಿ ಇಲ್ಲ. ಇಂಥ ಪ್ರಕರಣಗಳಲ್ಲಿ 10 ವರ್ಷಗಳ ನಂತರವೂ ತೆರಿಗೆಯನ್ನು ವಸೂಲು ಮಾಡಬಹುದು.

ಪ್ರಶ್ನೆ12: ಭಾಗ 52- ತೆರಿಗೆ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿ ಮಾಡದೇ ಇರುವ ಪ್ರಕರಣದಲ್ಲಿ ನೋಟಿಸ್ ನೀಡಲು ಕಾಲಮಿತಿ ಇದೆಯೇ?

ಉತ್ತರ: ಇಲ್ಲ. ಕಾಲಮಿತಿ ಇಲ್ಲ. ನೋಟಿಸ್‌ ನೀಡಲು ಕಾಲ ಮಿತಿ ಇಲ್ಲ. ಇಂಥ ಪ್ರಕರಣಗಳು ಯಾವಾಗ ಪತ್ತೆಯಾಗುತ್ತದೊ ಆಗ ನೋಟಿಸ್‌ ನೀಡಬಹುದು. ನೋಟಿಸ್ ನೀಡಿದ ದಿನದಿಂದ ಒಂದು ವರ್ಷದೊಳಗೆ ಆದೇಶ ಹೊರಡಿಸಬೇಕು.

ಪ್ರಶ್ನೆ13: ಸೂಕ್ತ ಅಧಿಕಾರಿ ಯಾವ ಯಾವ ರೀತಿಯಲ್ಲಿ ತೆರಿಗೆಯನ್ನು ವಸೂಲು ಮಾಡಬಹುದು?

ಉತ್ತರ: ಸೂಕ್ತ ಅಧಿಕಾರಿಗೆ ಕೆಳಕಂಡ ರೀತಿಯಲ್ಲಿ ತೆರಿಗೆ ವಸೂಲು ಮಾಡಲು ಅವಕಾಶಗಳಿವೆ:

ಎ)ತೆರಿಗೆ ಹಿಡಿದಿಟ್ಟುಕೊಂಡಿದ್ದ ವ್ಯಕ್ತಿಗೆ ಬರಬೇಕಿದ್ದ ಹಣದಿಂದ ಸರ್ಕಾರಕ್ಕೆ ಬರಬೇಕಿದ್ದ ಹಣವನ್ನು ಸೂಕ್ತ ಅಧಿಕಾರಿ ಹಿಡಿದಿಟ್ಟುಕೊಳ್ಳಬಹುದು. ಇಲ್ಲವೆ ಬೇರೆ ನಿರ್ದಿಷ್ಟ ಅಧಿಕಾರಿಯನ್ನು ಹಣವನ್ನು ಹಿಡಿದಿಟ್ಟುಕೊಳ್ಳುವಂತೆ ಹೇಳಬಹುದು.

ಬಿ)ತೆರಿಗೆ ಹಿಡಿದಿಟ್ಟುಕೊಂಡಿದ್ದ ವ್ಯಕ್ತಿಗೆ ಸೇರಿದ ಸರಕುಗಳನ್ನು ವಶಪಡಿಸಿಕೊಳ್ಳುವ ಹಾಗೂ ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ಬರಬೇಕಾದ ಹಣವನ್ನು ವಸೂಲು ಮಾಡಬಹುದು ಇಲ್ಲವೆ ಆ ವ್ಯಕ್ತಿಗೆ ಸೇರಿದ ಹಣವನ್ನು ಬೇರೆ ನಿರ್ದಿಷ್ಟ ಅಧಿಕಾರಿ ಹಿಡಿದಿಟ್ಟುಕೊಳ್ಳುವಂತೆ ಹೇಳಬಹುದು.

ಸಿ)ಸೂಕ್ತ ಅಧಿಕಾರಿ ಅಗತ್ಯವೆನಿಸಿದರೆ ಲಿಖಿತದಲ್ಲಿ ನೋಟಿಸ್ ನೀಡಬಹುದು. ಬೇರೆ ಯಾವುದೇ ವ್ಯಕ್ತಿಯಿಂದ ಹಣ ಬರಬೇಕಿದೆ ಎಂದರೆ ಅವರನ್ನೂ ಸಂಪರ್ಕಿಸಬಹುದು. ಅಥವ ಯಾವ ಬಳಿ ಹಣ ಇದೆ ಎಂದು ತಿಳಿದರೆ ಅಥವ ಅವರ ಬಳಿಗೆ ಮುಂದಿನ ದಿನಗಳಲ್ಲಿ ಹಣ ಹೋಗುತ್ತದೆ ಎಂದು ಗೊತ್ತಾಗುತ್ತದೊ ಅವರಿಂದ ಹಣ ಕೇಂದ್ರ ಮತ್ತು ರಾಜ್ಯದ ಬೊಕ್ಕಸಕ್ಕೆ ಜಮಾ ಆಗುವಂತೆ ಮಾಡಬಹುದು.

ಡಿ)ಅಧಿಕಾರದತ್ತ ಹಿರಿಯ ಅಧಿಕಾರಿಯಿಂದ ಕ್ರಮ ಕೈಗೊಳ್ಳಲು ಅನುಮತಿ ಪಡೆದ ಸೂಕ್ತ ಅಧಿಕಾರಿ ತೆರಿಗೆ ಬಾಕಿ ಉಳಿಸಿಕೊಂಡ ವ್ಯಕ್ತಿಯ ಚರ ಮತ್ತು ಸ್ಥಿರಾಸ್ತಿಯನ್ನು ವಶಕ್ಕೆ ತೆಗೆದುಕೊಂಡು ತೆರಿಗೆ ಪಾವತಿಸುವಂತೆ ಹೇಳಬಹುದು. 30 ದಿನಗಳೊಳಗೆ ಬಾಕಿ ಪಾವತಿಸದೇ ಹೋದಲ್ಲಿ ವಶಪಡಿಸಿಕೊಂಡ ಆಸ್ತಿಯನ್ನು ಮಾರಾಟ ಮಾಡಲು ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ. ಒಂದು ವೇಳೆ ಮಾರಾಟ ಮಾಡಬೇಕಾಗಿ ಬಂದಲ್ಲಿ ಮಾರಾಟದಿಂದ ಹೆಚ್ಚಿನ ಹಣ ಬಂದು ಸರ್ಕಾರಕ್ಕೆ ಬರಬೇಕಾದ ಹಣವನ್ನು ಜಮಾ ಮಾಡಿಕೊಂಡು ಉಳಿದ ಹಣವನ್ನು ತೆರಿಗೆದಾರನಿಗೆ ಹಿಂತಿರುಗಿಸಬೇಕು.

ಇ)ಸೂಕ್ತ ಅಧಿಕಾರಿ ಬಾಕಿ ತೆರಿಗೆ ವಸೂಲಿಗೆ ಕಂದಾಯ ವಸೂಲಿ ರೂಪದಲ್ಲಿ ಪಡೆಯಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ತನ್ನ ಸಹಿ ಇರುವ ಸರ್ಟಿಫಿಕೇಟ್‌ ಕಳುಹಿಸಿ ಕೊಟ್ಟು ಸರ್ಕಾರಕ್ಕೆ ಬರಬೇಕಾದ ಹಣವನ್ನು ತಿಳಿಸಬೇಕು. ಆಗ ಜಿಲ್ಲಾಧಿಕಾರಿಗಳು ಬಾಕಿ ಕಂದಾಯ ಉಳಿಸಿಕೊಂಡಿರುವ ವ್ಯಕ್ತಿಯ ಆಸ್ತಿ, ವ್ಯಾಪಾರ ಯಾವುದೇ ರೂಪದ ಆದಾಯವಿದ್ದರೂ ಕಂದಾಯ ವಸೂಲಿ ರೀತಿಯಲ್ಲಿ ಸಂಗ್ರಹಿಸಿ ಕೊಡುವರು.

ಪ್ರಶ್ನೆ14: ಕಂತಿನ ರೂಪದಲ್ಲಿ ಬಾಕಿ ತೆರಿಗೆಯನ್ನು ಪಾವತಿ ಮಾಡಲು ಸೂಕ್ತ ಅಧಿಕಾರಿ ಅವಕಾಶ ನೀಡಬಹುದೇ?

ಉತ್ತರ: ಹೌದು. ಸ್ವಯಂ ನಿರ್ಧರಿಸುವ ತೆರಿಗೆ ಹೊರತುಪಡಿಸಿ. ಉಳಿದ ಬಾಕಿ ತೆರಿಗೆಗಳಿಗೆ ಆಯುಕ್ತರು/ಮುಖ್ಯ ಆಯುಕ್ತರು ಅವಧಿ ವಿಸ್ತರಿಸಬಹುದು ಅಥವ ಬಾಕಿ ಪಾವತಿಗೆ ಅವಕಾಶ ನೀಡಬಹುದು. ಸ್ವಯಂ ನಿರ್ಧರಿಸಿದ ತೆರಿಗೆಯಲ್ಲದ ಇತರ ಬಾಕಿ ತೆರಿಗೆಯನ್ನು ಭಾಗ 36 ರಂತೆ ಬಡ್ಡಿ ಸಮೇತ ಒಟ್ಟು ಹಣವನ್ನು 24 ಕಂತುಗಳಲ್ಲಿ ಪಾವತಿ ಮಾಡಬಹುದು. ಇದಕ್ಕೆ ಸೂಕ್ತ ನಿರ್ಬಂಧ ಹಾಗೂ ಷರತ್ತುಗಳು ವಿಧಿಸಲಾಗುವುದು. ಒಂದು ವೇಳೆ ಒಂದು ಕಂತಿನಲ್ಲಿ ನಿಗದಿತ ದಿನದೊಳಗೆ ಪಾವತಿಯಾಗಲಿಲ್ಲ ಎಂದರೆ ಕಂತುಗಳಲ್ಲಿ ಬಾಕಿ ಪಾವತಿಸುವ ಅವಕಾಶ ಇರುವುದಿಲ್ಲ. ಉಳಿಕೆ ಕಂತುಗಳ ಒಟ್ಟು ಹಣವನ್ನು ಒಂದೇ ಬಾರಿ ಅದೇ ದಿನ ಪಾವತಿ ಮಾಡಬೇಕು. ಯಾವುದೇ ನೋಟಿಸ್ ಕೊಡದೆ ಉಳಿಕೆ ಹಣವನ್ನು ವಸೂಲು ಮಾಡಲಾಗುವುದು.

ಪ್ರಶ್ನೆ15: ಬೇಡಿಕೆಯನ್ನು ದೃಢಪಡಿಸಿದ ಮೇಲೆ ಮೇಲ್ಮನವಿ/ಪುನರ್‌ವಿಮರ್ಶೆ ವೇಳೆಯಲ್ಲಿ ಅದನ್ನು ಹೆಚ್ಚಿಸಿದ ಪ್ರಕರಣದಲ್ಲಿ ಏನಾಗುತ್ತೆ?

ಉತ್ತರ: ಬೇಡಿಕೆ ಹೆಚ್ಚಿಸಿದ ಪ್ರಮಾಣಕ್ಕೆ ಮಾತ್ರ ನೋಟಿಸ್ ನೀಡಬೇಕಾಗುತ್ತದೆ. ಮೊದಲೇ ದೃಢಪಡಿಸಿದ ಹಣದ ವಸೂಲು ಪ್ರಕ್ರಿಯೆ ಎಲ್ಲಿ ನಿಂತಿತ್ತೋ ಅಲ್ಲಿಂದ ಮುಂದುವರಿಯುತ್ತದೆ.

ಪ್ರಶ್ನೆ16: ಒಂದು ವೇಳೆ ಒಬ್ಬ ವ್ಯಕ್ತಿ ತೆರಿಗೆ ಪಾವತಿ ಮಾಡಬೇಕಾಗಿರುತ್ತದೆ. ಆದರೆ ಆತ ತನ್ನ ವ್ಯವಹಾರನ್ನೆಲ್ಲಾ ಬೇರೆಯವರಿಗೆ ಒಪ್ಪಿಸುತ್ತಾನೆ. ಆಗ ಬಾಕಿ ತೆರಿಗೆ ಯಾರು ನೀಡಬೇಕು?

ಉತ್ತರ: ಒಂದು ವೇಳೆ ಯಾವುದೇ ವ್ಯಕ್ತಿ ತೆರಿಗೆ ಬಾಕಿ ಉಳಿಸಿಕೊಂಡ ತನ್ನ ವ್ಯವಹಾರವನ್ನು ಬೇರೆಯವರಿಗೆ ಮಾರಾಟ, ಕೊಡುಗೆ, ಗುತ್ತಿಗೆ, ಹಾಗೆ ಬಿಟ್ಟುಕೊಡುವುದು, ಲೈಸನ್ಸ್‌ ನೀಡುವುದು, ಬಾಡಿಗೆಗೆ ನೀಡುವುದೂ ಸೇರಿದಂತೆ ಯಾವುದೇ ರೀತಿಯಲ್ಲಿ ವರ್ಗಾಯಿಸಿದರೂ ಕೊಟ್ಟ ವ್ಯಕ್ತಿ ಹಾಗೂ ಪಡೆದ ವ್ಯಕ್ತಿಯು ಜಂಟಿಯಾಗಿ ಮತ್ತು ವ್ಯಕ್ತಿಯಾಗಿಯೂ ಬಾಧಕರು. ಆಸ್ತಿ ವರ್ಗಾವಣೆಯಾದ ದಿನದವರೆಗೆ ತೆರಿಗೆ ಬಾಕಿ ಉಳಿಸಿಕೊಂಡ ತೆರಿಗೆದಾರ ಬಡ್ಡಿ, ದಂಡ ಎಲ್ಲವೂ ಸೇರಿಸಿಕೊಂಡು ಪಾವತಿ ಮಾಡಬೇಕು. ಬಾಕಿ ತೆರಿಗೆಯನ್ನು ಆಸ್ತಿ ವರ್ಗಾವಣೆ ಮುನ್ನ ಅಥವ ನಂತರವೂ ತೀರ್ಮಾನಿಸಬಹುದು.

ಪ್ರಶ್ನೆ 17: ಬಾಕಿ ತೆರಿಗೆ ಉಳಿಸಿಕೊಂಡ ಕಂಪನಿ ದಿವಾಳಿಯಾದರೆ ತೆರಿಗೆ ಪಾವತಿಯನ್ನು ಯಾರು ಮಾಡಬೇಕು?

ಉತ್ತರ: ಕಂಪನಿ ದಿವಾಳಿಯಾಗುವ ದಿನಾಂಕದವರೆಗೆ ಯಾರು ಯಾರು ನಿರ್ದೇಶನ ಪರಿಷತ್‌ಯಲ್ಲಿದ್ದರೋ ಅವರೆಲ್ಲರೂ ವಯುಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಬಾದ್ಯಸ್ಥರು. ನಿರ್ದೇಶಕರಾದವರು ತಮ್ಮ ಕರ್ತವ್ಯದಲ್ಲಿ ಯಾವುದೇ ಲೋಪವೆಸಗಿಲ್ಲ. ಕಂಪನಿ ತೆರಿಗೆ ಬಾಕಿ ಉಳಿಸಿಕೊಳ್ಳಲು ತಾವು ನೇರ ಹೊಣೆಯಲ್ಲ ಎಂಬುದನ್ನು ಆಯುಕ್ತರಿಗೆ ಮನವರಿಕೆ ಮಾಡಿಕೊಡಬೇಕು.

ಪ್ರಶ್ನೆ 18: ಬಾಕಿ ತೆರಿಗೆ ಉಳಿಸಿಕೊಂಡ ಪಾಲುದಾರಿಕೆಯ ಕಂಪನಿಯಲ್ಲಿ ಪಾಲುದಾರರ ಹೊಣೆಗಾರಿಕೆ ಏನು?

ಉತ್ತರ: ಪಾಲುದಾರಿಕೆ ಕಂಪನಿಯಲ್ಲಿ ಎಲ್ಲಾ ಪಾಲುದಾರರು ಸಾಮೂಹಿಕವಾಗಿ ಹಾಗೂ ವಯುಕ್ತಿಕವಾಗಿ ಬಾಕಿ ತೆರಿಗೆ/ಬಡ್ಡಿ ಹಾಗೂ ದಂಡ ಪಾವತಿಗೆ ಹೊಣೆಗಾರರು. ಯಾವುದೇ ಪಾಲುದಾರ ನಿವೃತ್ತಿ ಹೊಂದುವ ಹಾಗಿದ್ದರೆ ಕಂಪನಿ ಅಥವ ಸಂಸ್ಥೆ ಆಯುಕ್ತರಿಗೆ ಪಾಲುದಾರನ ನಿವೃತ್ತಿಯ ದಿನವನ್ನು ಮೊದಲ ತಿಳಿಸಬೇಕು. ಪಾಲುದಾರ ಯಾವ ದಿನ ನಿವೃತ್ತಿ ಹೊಂದುತ್ತಾನೋ ಆ ದಿನದವರೆಗೆ ಆತನ ಬಾಕಿ ತೆರಿಗೆ/ಬಡ್ಡಿ ಮತ್ತು ದಂಡಕ್ಕೆ ಹೊಣೆಗಾರನಾಗಿರುತ್ತಾನೆ. ನಿವೃತ್ತಿ ಹೊಂದಿದ ದಿನದಿಂದ ಒಂದು ತಿಂಗಳೊಳಗೆ ಆಯುಕ್ತರಿಗೆ ನಿವೃತ್ತಿಯನ್ನು ತಿಳಿಸಬೇಕು. ಇಲ್ಲದಿದ್ದಲ್ಲಿ ಅಯುಕ್ತರಿಗೆ ಮಾಹಿತಿ ತಿಳಿಸುವ ದಿನದವರೆಗೆ ಪಾಲುದಾರ ಬಾಕಿ ತೆರಿಗೆ/ಬಡ್ಡಿ ಮತ್ತು ದಂಡಕ್ಕೆ ಹೊಣೆಗಾರ.

ಪ್ರಶ್ನೆ 19: ಒಂದು ವೇಳೆ ಒಬ್ಬ ವ್ಯಕ್ತಿಯ ತೆರಿಗೆ ಬಾಕಿ ಉಳಿದಕೊಂಡಿದ್ದು ಆತನ ವ್ಯವಹಾರವನ್ನೆಲ್ಲ ಬೇರೆ ಗಾರ್ಡಿಯನ್/ಟ್ರಸ್ಟಿ/ ಅಪ್ರಾಪ್ತನ ಏಜೆಂಟ್ ನೋಡಿಕೊಳ್ಳುತ್ತಿದ್ದಲ್ಲಿ ಬಾಕಿ ತೆರಿಗೆಯನ್ನು ಯಾರು ಪಾವತಿ ಮಾಡಬೇಕು?

ಉತ್ತರ: ವ್ಯವಹಾರವನ್ನೆಲ್ಲ ಗಾರ್ಡಿಯನ್/ಟ್ರಸ್ಟಿ/ ಅಪ್ರಾಪ್ತ ಅಥವ ಕೈಲಾಗದ ವ್ಯಕ್ತಿಯ ಪರವಾಗಿ ಏಜಂಟ್ ಇದ್ದಲ್ಲಿ ಅವರೇ ಬಾಕಿ ತೆರಿಗೆ/ಬಡ್ಡಿ ಮತ್ತು ದಂಡವನ್ನು ಭರಿಸಬೇಕು.

ಪ್ರಶ್ನೆ20: ಒಂದು ವೇಳೆ ಬಾಕಿ ತೆರಿಗೆ ಪಾವತಿಸಬೇಕಾದ ವ್ಯಕ್ತಿಯ ಎಸ್ಟೇಟ್ ನ್ಯಾಯಾಲಯದ ನಿಯಂತ್ರಣದಲ್ಲಿ ವಾರ್ಡ್ ಕೈಯಲ್ಲಿದ್ದರೆ ಏನಾಗುತ್ತದೆ?

ಉತ್ತರ: ತೆರಿಗೆ ಬಾಕಿ ಉಳಿಸಿಕೊಂಡ ವ್ಯಕ್ತಿಯ ಎಸ್ಟೇಟ್ ನ್ಯಾಯಾಲಯದ ನಿಯಂತ್ರಣಕ್ಕೆ ಒಳಪಟ್ಟು ವಾರ್ಡ್/ಆಡಳಿತಗಾರ ಸಾಮಾನ್ಯ/ಅಧಿಕೃತ ಟ್ರಸ್ಟಿ/ರಿಸೀವರ್‌ ಅಥವ ಮ್ಯಾನೇಜರ್‌ ನ್ಯಾಯಾಲಯದ ಆದೇಶದಂತೆ ನೇಮಕಗೊಂಡಿದ್ದರೆ ಅವರೇ ಬಾಕಿ ತೆರಿಗೆ/ಬಡ್ಡಿ ಮತ್ತು ದಂಡವನ್ನು ಪಾವತಿಸಬೇಕು.

*****

ಜಿಎಸ್‌ಟಿಯಲ್ಲಿ ಮೇಲ್ಮನವಿ
ಪುನರಾವಲೋಕನ ಮತ್ತು ಪುನರ್ವಿಮರ್ಶೆ

16. ಜಿಎಸ್‌ಟಿಯಲ್ಲಿ ಮೇಲ್ಮನವಿ, ಪುನರಾವಲೋಕನ ಮತ್ತು ಪುನರ್ವಿಮರ್ಶೆ

ಪ್ರಶ್ನೆ1: ಯಾವುದೇ ವ್ಯಕ್ತಿ ತನಗೆ ನೀಡಿದ ಆದೇಶ ಅಥವ ತೀರ್ಪಿನಿಂದ ನೊಂದಿದ್ದರೆ ಆತನಿಗೆ ಮೇಲ್ಮನವಿ ಸಲ್ಲಿಸಲು ಹಕ್ಕಿದೆಯೇ?

ಉತ್ತರ: ಇದೆ. ತೀರ್ಪು ನೀಡುವ ಅಧಿಕಾರ ಹೊಂದಿರುವ ಯಾವುದೇ ಅಧಿಕಾರಿ ಹೊರಡಿಸಿದ ಆದೇಶ ಮತ್ತು ನೀಡಿದ ತೀರ್ಮಾನಕ್ಕೆ ಮೇಲ್ಮನವಿ ಸಲ್ಲಿಸಲು ಅಧಿಕಾರವಿದೆ. ಆದರೆ ಭಾಗ 93 ರಲ್ಲಿ ಬರುವ ಕೆಲವು ತೀರ್ಮಾನಗಳಿಗೆ ಮೇಲ್ಮನವಿ ಸಲ್ಲಿಸಲು ಬರುವುದಿಲ್ಲ.

ಪ್ರಶ್ನೆ2: ಸಿಜಿಎಸ್‌ಟಿ ಆಯುಕ್ತರು ಯಾವುದೇ ಆದೇಶ ಸಮರ್ಪಕವಾಗಿಲ್ಲ, ಕಾನೂನಿಗೆ ಅನುಗುಣವಾಗಿಲ್ಲ ಎಂದು ಅದನ್ನು ಬದಲಿಸಲು ಬರುತ್ತದೆಯೇ?

ಉತ್ತರ: ಇಲ್ಲ. ಸಿಜಿಎಸ್‌ಟಿ ಆಯುಕ್ತರು ಆದೇಶ ಬದಲಿಸಲು ಬರುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿಯಲ್ಲಿ ಪ್ರತ್ಯೇಕ ಭಾಗಗಳಿವೆ. ಸಿಜಿಎಸ್‌ಟಿಯಲ್ಲಿ ಭಾಗ 79(2)ರಂತೆ ಆಯುಕ್ತರಿಗೆ (ತೀರ್ಪು ನೀಡುವ ಅಧಿಕಾರ ಹೊಂದಿದ ಅಧಿಕಾರಿಯ) ಆದೇಶದಲ್ಲಿ ತಪ್ಪುಗಳು ಅಥವ ಕಾನೂನು ಪ್ರಕಾರ ಇಲ್ಲ ಎಂದು ಕಂಡುಬಂದಲ್ಲಿ ಅದಕ್ಕೆ ತಿದ್ದುಪಡಿಗಳನ್ನು ಕೆಳಕಿನ ಜಿಎಸ್‌ಟಿ ಅಧಿಕಾರಿಗೆ ಸೂಚಿಸಬಹುದು. ಅವರು ಅವುಗಳನ್ನು ಮೊದಲ ಮೇಲ್ಮನವಿ ಪ್ರಾಧಿಕಾರ (ಎಫ್ಎಎ) ಅರ್ಜಿ ಮೂಲಕ ಸಲ್ಲಿಸಬಹುದು. ಅದನ್ನೇ ಮೇಲ್ಮನವಿ ಎಂದು ಪರಿಗಣಿಸಲಾಗುವುದು.

ಪ್ರಶ್ನೆ3: ಮೊದಲ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ಕಾಲಮಿತಿ ಏನು?

ಉತ್ತರ: ಆದೇಶ ಅಥವ ತೀರ್ಮಾನ ತಲುಪಿದ ದಿನದಿಂದ 3 ತಿಂಗಳಲ್ಲಿ ಮೇಲ್ಮನವಿ ಸಲ್ಲಿಸಬೇಕು.

ಪ್ರಶ್ನೆ4: ಇಲಾಖೆ ಮಟ್ಟದಲ್ಲಿ ಸಿಜಿಎಸ್‌ಟಿ ಆಯುಕ್ತರು ನೀಡಿದ ಆದೇಶಕ್ಕೆ ಮೇಲ್ಮನವಿ/ ಅರ್ಜಿ ಸಲ್ಲಿಸಲು ಇದೇ ಕಾಲ ಮಿತಿ ಅನ್ವಯವಾಗುತ್ತದೆಯೇ?

ಉತ್ತರ: ಹೌದು. ಇಲಾಖೆ ಮಟ್ಟದಲ್ಲಿ ಸಲ್ಲಿಸುವ ಎಲ್ಲ ಅರ್ಜಿಗಳಿಗೂ ಇದೇ ಕಾಲಮಿತಿ ಅನ್ವಯವಾಗುತ್ತದೆ.

ಪ್ರಶ್ನೆ5: ಮೇಲ್ಮನವಿ ಸಲ್ಲಿಸುವುದು ವಿಳಂಬವಾದರೆ ಅದನ್ನು ಮನ್ನಾ ಮಾಡಲು ಮೊದಲ ಮೇಲ್ಮನವಿ ಪ್ರಾಧಿಕಾರಕ್ಕೆ ಅಧಿಕಾರವಿದೆಯೇ?

ಉತ್ತರ: ಇದೆ. ಮೂರು ಗಡುವು ಮುಕ್ತಾಯಗೊಂಡಿದ್ದರೆ ಮತ್ತೆ ಒಂದು ತಿಂಗಳ ಕಾಲ ವಿಸ್ತರಿಸುವ (3-1) ಅಧಿಕಾರವಿದೆ. ಅದರೆ ಅದಕ್ಕೆ ಸಾಕಷ್ಟು ಕಾರಣಗಳು ಇರಬೇಕೆಂಬುದನ್ನು ಭಾಗ 79 (4) ರಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರಶ್ನೆ6: ಮೇಲ್ಮನವಿಯಲ್ಲಿರದ ಹೆಚ್ಚುವರಿ ಮಾಹಿತಿಯನ್ನು ಸೇರ್ಪಡೆ ಮಾಡಲು ಮೊದಲ ಮೇಲ್ಮನವಿ ಪ್ರಾಧಿಕಾರಕ್ಕೆ ಅಧಿಕಾರವಿದೆಯೇ?

ಉತ್ತರ: ಇದೆ. ಹೆಚ್ಚುವರಿ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಬಿಟ್ಟಿಲ್ಲ ಹಾಗೂ ಅವುಗಳು ಸೇರ್ಪಡೆ ಮಾಡುವುದು ತಪ್ಪೇನಲ್ಲ ಎಂದೆನಿಸಿದರೆ ಅಧಿಕಾರಿ ಅವಕಾಶ ನೀಡಬಹುದು.

ಪ್ರಶ್ನೆ7: ಮೊದಲ ಮೇಲ್ಮನವಿ ಪ್ರಾಧಿಕಾರ ನೀಡಿದ ಆದೇಶವನ್ನು ಮೊದಲು ಯಾರಿಗೆ ತಿಳಿಸಬೇಕು?

ಉತ್ತರ: ಮೊದಲ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿ ಆದೇಶವನ್ನು ಮೊದಲು ಮೇಲ್ಮನವಿ ಸಲ್ಲಿಸಿದವರಿಗೆ ನೀಡಬೇಕು. ಅಮೇಲೆ ತೀರ್ಪು ನೀಡುವ ಅಧಿಕಾರವಿರುವ ಅಧಿಕಾರಿಗೆ ಹಾಗೂ ಸಂಬಂಧಪಟ್ಟ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ಆಯುಕ್ತರಿಗೆ ಆದೇಶದ ಪ್ರತಿಗಳನ್ನು ನೀಡಬೇಕು.

ಪ್ರಶ್ನೆ 8: ಮೇಲ್ಮನವಿಯೊಂದಿಗೆ ಸಲ್ಲಿಸಬೇಕಾದ ಮುಂಗಡ ಠೇವಣಿ ಕಡ್ಡಾಯವಾಗಿ ಸಲ್ಲಿಸಬೇಕಾಗಿರುವುದು ಎಷ್ಟು?

ಉತ್ತರ: ವಿವಾದದಲ್ಲಿರುವ ಮೊತ್ತದ ಶೇಕಡ 10 (ಆದರೆ ಎಸ್‌ಜಿಎಸ್‌ಟಿಯಲ್ಲಿ ಹೆಚ್ಚುವರಿ ಉಲ್ಲೇಖಗಳಿದ್ದು ಅದಕ್ಕೆ ಮಾದರಿ ಕಾನೂನ ಮತ್ತು ಪ್ರಶ್ನೆ 12 ಮತ್ತು 13 ನೋಡಬಹುದು)

ಪ್ರಶ್ನೆ9: ವಿವಾದದಲ್ಲಿರುವ ಹಣ ಎಂದರೆ ಏನು?

ಉತ್ತರ: ಎಂಜಿಎಲ್ ಕಾಯ್ದೆ 79(6) ರಲ್ಲಿ ಹೇಳಿರುವಂತೆ ವಿವಾದಿತ ಹಣ ಎಂದರೆ, ಭಾಗ 46 ಅಥವ 47 ಅಥವ 48 ಅಥವ 51 ಹೇಳಿರುವಂತೆ ಹಣ ನಿಗದಿಪಡಿಸಿರುವುದು. 2ಜಿಎಸ್‌ಟಿ ಕ್ರೆಡಿಟ್‌ ನಿಯಮ 201ರಲ್ಲಿ ಹೇಳಿರುವಂತೆ ಹಣ ನೀಡಬೇಕಿರುವುದು, 3 ಶುಲ್ಕ ಅಥವ ದಂಡ ವಿಧಿಸಿದ ಹಣ.

ಪ್ರಶ್ನೆ10: ಮೂಲ ಅಧಿಕಾರಿ ನಿಗದಿಪಡಿಸಿದ ತೆರಿಗೆ/ದಂಡ/ಶುಲ್ಕಗಳನ್ನು ಹೆಚ್ಚಿಸಿ ಎಫ್ಎಎ ಆದೇಶ ಹೊರಡಿಸಬಹುದೇ. ರೀಫಂಡ್/ಐಟಿಸಿಯನ್ನು ಕಡಿಮೆ ಮಾಡಬಹುದೇ?

ಉತ್ತರ: ಎಫ್ಎಎ ಅಧಿಕಾರಿ ಸರಕು ವಶಕ್ಕೆ ಬದಲಾಗಿ ಶುಲ್ಕ/ದಂಡ ಹೆಚ್ಚಿಸಬಹುದು ಅಥವ ರೀಫಂಡ್ ಮತ್ತು ಇನ್ಪುಟ್ ತೆರಿಗೆ ಕ್ರೆಡಿಟ್‌ ಕಡಿಮೆ ಮಾಡಬಹುದು. ಆದರೆ ಅದಕ್ಕೆ ಮುನ್ನ ಮೇಲ್ಮನವಿ ಸಲ್ಲಿಸಿದ ವ್ಯಕ್ತಿಗೆ ಸಾಕಷ್ಟು ಕಾಲಾವಕಾಶ ನೀಡಬೇಕು. ಏಕೆಂದರೆ ಆತನಿಗೆ ಈ ವಿಷಯ ಸಂಬಂಧಿಸಿರುವುದು. (ಭಾಗ 79 (10) ಮೊದಲ ಉಲ್ಲೇಖ) ತೆರಿಗೆ ಹೆಚ್ಚಿಸುವ ಅಥವ ಐಟಿಸಿ ತಪ್ಪು ಬಳಕೆಯಾಗಿರುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾದಲ್ಲಿ ಎಫ್ಎಎ ಈ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿ ಸಲ್ಲಿಸಿದ ವ್ಯಕ್ತಿಗೆ ಸಮಜಾಷಿಸಿ ಕೇಳಿ ನೋಟಿಸ್ ನೀಡಬೇಕು. ಆದೇಶವನ್ನು ಕಾಲಮಿತಿಯಲ್ಲಿ ನೀಡಬೇಕು. ಇದಕ್ಕೆ ಭಾಗ 51 ( ಭಾಗ 79(10) ಎರಡನೇ ಉಲ್ಲೇಖ)

ಪ್ರಶ್ನೆ11: (ಎಸ್‌ಜಿಎಸ್ಇ ಕಾನೂನಿಗೆ ಮಾತ್ರ ಅನ್ವಯ) ಎಸ್‌ಜಿಎಸ್‌ಟಿಯಲ್ಲಿ ಮೊದಲ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಮುನ್ನ ಮುಂಗಡ ಠೇವಣಿ ಇಡಬೇಕೆಂಬುದಕ್ಕೆ ಸಂಬಂಧಿಸಿದ ನಿಯಮಗಳು ಯಾವುವು?

ಉತ್ತರ: ವಿವಾದಿತ ಹಣದ ಶೇಕಡ 10 ರಷ್ಟನ್ನು ಠೇವಣಿಯಾಗಿ ಮೊದಲು ನೀಡಬೇಕು. ಇದು ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ಎರಡಕ್ಕೂ ಅನ್ವಯ. ಆದರೆ ಎಸ್‌ಜಿಎಸ್‌ಟಿಯಲ್ಲಿ ಇದರೊಂದಿಗೆ ಹೆಚ್ಚುವರಿಯಾಗಿ ಶೇಕಡ 10ರಷ್ಟು ಹಣವನ್ನು ಮುಂಗಡ ಠೇವಣಿ ನೀಡಬೇಕು. ಇದಲ್ಲದೆ ಪ್ರಶ್ನಿಸಿದ ಆದೇಶದಲ್ಲಿ ತಾನು ಒಪ್ಪಿಕೊಂಡ ತೆರಿಗೆ, ಬಡ್ಡಿಶುಲ್ಕ, ದಂಡವನ್ನೂ ಪಾವತಿಸಬೇಕು. ಅಲ್ಲದೆ ಒಂದು ವೇಳೆ ಆ ಪ್ರಕರಣ ಬಹಳ ಗಂಭೀರವಾದುದು ಎಂದು ಎಸ್‌ಜಿಎಸ್‌ಟಿ ಆಯುಕ್ತರು ಪರಿಗಣಿಸಿದರೆ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಮುಂಗಡ ಠೇವಣಿಗೆ ಮೊದಲ ಮೇಲ್ಮನವಿ ಪ್ರಾಧಿಕಾರದ ಮುಂದೆ ಅರ್ಜಿಸಲ್ಲಿಸಬಹುದು. ಅದರೆ ಮುಂಗಡ ಠೇವಣಿ ಶೇಕಡ 50ಕ್ಕಿಂತ ಹೆಚ್ಚು ಆಗುವಂತಿಲ್ಲ.

ಪ್ರಶ್ನೆ12: (ಎಸ್‌ಜಿಎಸ್ಇ ಕಾನೂನಿಗೆ ಮಾತ್ರ ಅನ್ವಯ) ‘ಗಂಭೀರ ಪ್ರಕರಣ’ ಎಂದರೆ ಏನು?

ಉತ್ತರ: ಗಂಭೀರ ಪ್ರಕರಣ ಎಂದರೆ ವಿವಾದಿತ ತೆರಿಗೆ ಮೊತ್ತ 25 ಕೋಟಿ ರೂ. ಮೀರಿರಬೇಕು. ಅಲ್ಲದೆ ಇಲಾಖೆಗೆ ತೆರಿಗೆದಾರನ ವಿರುದ್ಧ ಕ್ರಮಕೈಗೊಳ್ಳಲು ಇದು ಉತ್ತಮ ಪ್ರಕರಣ ಎಂಬುದನ್ನು ಎಸ್‌ಜಿಎಸ್‌ಟಿ ಆಯುಕ್ತರು ಲಿಖಿತದಲ್ಲಿ ತಿಳಿಸಬೇಕು.

ಪ್ರಶ್ನೆ13: ಎಸ್‌ಜಿಎಸ್‌ಟಿ ಆಯುಕ್ತರು ತಮ್ಮ ಕೈಕೆಳಗಿನ ಅಧಿಕಾರಿಗಳು ನೀಡಿದ ಆದೇಶವನ್ನು ಬದಲಿಸಬಹುದೇ?

ಉತ್ತರ: ಹೌದು. ಎಸ್‌ಜಿಎಸ್‌ಟಿ ಕಾಯ್ದೆ 80(1)ರಂತೆ ಆಯುಕ್ತರು ತಮ್ಮ ಕೈಕೆಳಗೆ ಕೆಲಸ ಮಾಡುವ ಅಧಿಕಾರಿಗಳು ನೀಡಿದ ಎಲ್ಲ ಆದೇಶವನ್ನು ಪರಿಶೀಲಿಸಿ ಬದಲಿಸಬಹುದು. ಅದರಲ್ಲಿ ಲೋಪದೋಷಗಳಿದ್ದಲ್ಲಿ ಸರ್ಕಾರದ ಬೊಕ್ಕಸಕ್ಕೆ ಧಕ್ಕೆ ಒದಗುತ್ತದೆ ಎಂದಾದಲ್ಲಿ, ನೋಟಿಸ್‌ ಪಡೆದ ವ್ಯಕ್ತಿಗೆ ಮತ್ತೊಂದು ಅವಕಾಶ ನೀಡಿ ಆತನ ಅಭಿಪ್ರಾಯ ಪಡೆದು ಬದಲಿಸಬಹುದು.

ಪ್ರಶ್ನೆ14 ಎಸ್‌ಜಿಎಸ್‌ಟಿ ಆಯುಕ್ತರು ಯಾವುದೇ ಪ್ರಕರಣದಲ್ಲಿ ತಮ್ಮ ಕೈಕೆಳಗಿನ ಅಧಿಕಾರಿಗಳು ನೀಡಿದ ಆದೇಶದ ಬದಲಾವಣೆಗೆ ಮುನ್ನ ತಡೆನೀಡಬಹುದೇ?

ಉತ್ತರ: ಹೌದು.

ಪ್ರಶ್ನೆ 15: ಅಯುಕ್ತರು ಎಸ್‌ಜಿಎಸ್‌ಟಿ ತಮ್ಮ ಕೈಕೆಳಗಿನ ಅಧಿಕಾರಿಗಳ ಆದೇಶವನ್ನು ಬದಲಿಸುವ ಅಧಿಕಾರವನ್ನು ಹೊಂದಿದ್ದರೂ ಅವರಿಗೆ ಏನಾದರೂನಿರ್ಬಂಧಗಳಿವೆಯೇ?

ಉತ್ತರ: ಇದೆ. ಆಯುಕ್ತರು ಈ ಕೆಳಕಂಡ ಆದೇಶಗಳನ್ನು ಬದಲಿಸಲು ಬರುವುದಿಲ್ಲ

ಎ) ಒಂದು ವೇಳೆ ಆದೇಶವು ಮೇಲ್ಮನವಿಗೆ ಭಾಗ 79 ಅಥವ 82 ಅಥವ 88 ಕ್ಕೆ ಒಳಪಟ್ಟಿದ್ದರೆ

ಬಿ)ಆದೇಶ ನೀಡಿ 3 ವರ್ಷ ಕಳೆದುಹೋಗಿದ್ದರೆ ಬದಲಿಸಲು ಬರುವುದಿಲ್ಲ. ಇದಲ್ಲದೆ ಇತರೆ ನಿರ್ಬಂಧಗಳಿಗೆ ತಿಳಿದುಕೊಳ್ಳಲು ಎಂಡಿಎಲ್‌ ಕಾಯ್ದೆ ಭಾಗ 80 ನೋಡಬೇಕು.

ಪ್ರಶ್ನೆ 16: ಯಾವಾಗ ನ್ಯಾಯಾಧಿಕರಣ ಮೇಲ್ಮನವಿಯನ್ನು ಸ್ವೀಕರಿಸಲು ನಿರಾಕರಿಸಬಹುದು?

ಉತ್ತರ: ಮೇಲ್ಮನವಿಯಲ್ಲಿ ಕೆಳಕಂಡ ವಿಷಯಗಳಿದ್ದಲ್ಲಿ,

 • ತೆರಿಗೆ ಮೊತ್ತ
 • ಇನ್‌ಪುಟ್‌ ತೆರಿಗೆ ಕ್ರೆಡಿಟ್
 • ತೆರಿಗೆಯಲ್ಲಿ ವ್ಯತ್ಯಾಸ
 • ಇನ್‌ಪುಟ್‌ ತೆರಿಗೆಯಲ್ಲಿ ವ್ಯತ್ಯಾಸ
 • ದಂಡದ ಮೊತ್ತ
 • ಶುಲ್ಕದ ಮೊತ್ತ
 • ದಂಡ ಮೊತ್ತದ ಆದೇಶ

1 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಮೇಲ್ಮನವಿಯನ್ನು ನ್ಯಾಯಾಧಿಕರಣ ಮೇಲ್ಮನವಿ ಸ್ವೀಕರಿಸಲು ನಿರಾಕರಿಸಬಹುದು. (ಎಂಜಿಎಲ್ ಕಾಯ್ದೆ ಭಾಗ 82(2))

ಪ್ರಶ್ನೆ 17: ನ್ಯಾಯಾಧಿಕರಣದ ಮುಂದೆ ಮನವಿ ಸಲ್ಲಿಸಲು ಕಾಲಮಿತಿ ಏನು?

ಉತ್ತರ: ಮೇಲ್ಮನವಿ ಸಲ್ಲಿಸಿದ ಮೇಲೆ ಬಂದ ಆದೇಶದ ದಿನಾಂಕದಿಂದ 3 ತಿಂಗಳಲ್ಲಿ ನ್ಯಾಯಾಧಿಕರಣಕ್ಕೆ ಮನವಿ ಸಲ್ಲಿಸಬಹುದು.

ಪ್ರಶ್ನೆ18: ಮನವಿ ಸಲ್ಲಿಸುವುದು 3 ತಿಂಗಳ ಗಡುವು ಮೀರಿದರೆ ನ್ಯಾಯಾಧಿಕರಣ ವಿಳಂಬವನ್ನು ಮನ್ನಾ ಮಾಡಬಹುದೇ? ಮಾಡಿದರೆ ಎಷ್ಟು ದಿನಗಳಿಗೆ ಗಡುವು ವಿಸ್ತರಿಸಬಹುದು?

ಉತ್ತರ: ನ್ಯಾಯಾಧಿಕರಣ 3 ತಿಂಗಳ ಗಡುವು ಮೀರಿದ ಮೇಲೂ ಮನವಿ ಮಾಡುವುದಕ್ಕಾದ ವಿಳಂಬವನ್ನು ಮನ್ನಾ ಮಾಡಬಹುದು. ಅದಕ್ಕೆ ಮಿತಿ ಇಲ್ಲ. ಆದರೆ ಮನವಿ ಸಲ್ಲಿಸುವ ವ್ಯಕ್ತಿ ವಿಳಂಬಕ್ಕೆ ಸಕಾರಣಗಳನ್ನು ನೀಡಬೇಕು.

ಪ್ರಶ್ನೆ19: ನ್ಯಾಯಾಧಿಕರಣದ ಮುಂದೆ ಆಕ್ಷೇಪಗಳಿಗೆ ಪ್ರತ್ಯುತ್ತರ (ಮೆಮೊರಾಂಡಂ ಆಪ್ ಕ್ರಾಸ್ ಅಬ್‌ಜಕ್ಷನ್) ನೀಡಲು ಎಷ್ಟು ಕಾಲಾವಕಾಶವಿದೆ?

ಉತ್ತರ: ಮನವಿ ಸ್ವೀಕಾರವಾದ 45 ದಿನಗಳಲ್ಲಿ ಆಕ್ಷೇಪಗಳಿಗೆ ಪ್ರತ್ಯುತ್ತರ ನೀಡಬೇಕು.

ಪ್ರಶ್ನೆ20: ನ್ಯಾಯಾಧಿಕರಣದ ಮುಂದೆ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿಯ ಮನವಿ ಸಲ್ಲಿಸುವುದರಲ್ಲಿ ಇರುವ ವ್ಯತ್ಯಾಸವೇನು?

ಉತ್ತರ: 1) ಎಸ್‌ಜಿಎಸ್ ಕಾಯ್ದೆ ಭಾಗ 82ರ ಅಡಿಯಲ್ಲಿ ಯಾವುದೇ ವ್ಯಕ್ತಿ ಮೊದಲ ಮೇಲ್ಮನವಿ ಪ್ರಾಧಿಕಾರದ ಆದೇಶದಿಂದ ನೊಂದಿದ್ದರೆ ನ್ಯಾಯಾಧಿಕರಣಕ್ಕೆ ಮನವಿ ಸಲ್ಲಿಸುವುದಕ್ಕೂ ಸಿಜಿಎಸ್‌ಟಿ ಕಾಯ್ದೆ ಭಾಗ 82ರ ಅಡಿಯಲ್ಲಿ ಮನವಿ ಸಲ್ಲಿಸುವುದಕ್ಕೂ ವ್ಯತ್ಯಾಸವೇನೂ ಇಲ್ಲ.ಎರಡೂ ಸಮಾನ.
2)ಇದಲ್ಲದೆ ಆಯುಕ್ತರ ಪುನರ್‌ವಿಮರ್ಶಿತ ಆದೇಶವನ್ನೂ ನ್ಯಾಯಾಧಿಕರಣದಲ್ಲಿ ಪ್ರಶ್ನಿಸಬಹುದು.
3) ಸಿಜಿಎಸ್‌ಟಿಯಲ್ಲಿ ಇಲಾಖೆಯು ಮೊದಲ ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಅರ್ಜಿಸಲ್ಲಿಸಲು ಅವಕಾಶವಿದೆ. ಆದರೆ ಈ ಅವಕಾಶ ಎಸ್‌ಜಿಎಸ್‌ಟಿಯಲ್ಲಿ ಇಲ್ಲ. ರಾಜ್ಯಗಳಲ್ಲಿ ಸಾಮಾನ್ಯವಾಗಿ ಮೊದಲ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿ ಆಯುಕ್ತರಿಗೆ ‘ಅಧೀನ’ ಅಧಿಕಾರಿಯೇ ಆಗಿರುತ್ತಾರೆ.
4)ಇದಲ್ಲದೆ ಎಸ್‌ಜಿಎಸ್‌ಟಿಯಲ್ಲಿ ಆದೇಶವನ್ನು ಪ್ರಶ್ನಿಸಿದ ವ್ಯಕ್ತಿ ತಾನು ಒಪ್ಪಿಕೊಂಡ ತೆರಿಗೆ, ಬಡ್ಡಿ, ದಂಡ ಮತ್ತು ಶುಲ್ಕವನ್ನು ಮುಂಗಡವಾಗಿ ಠೇವಣಿ ಇಡಬೇಕು.

ಪ್ರಶ್ನೆ 21: ಮುಂಗಡವಾಗಿ ಠೇವಣಿ ಮಾಡಿದ ಹಣಕ್ಕೆ ಬಡ್ಡಿ ದೊರೆಯುತ್ತದೆಯೇ?

ಉತ್ತರ: ಹೌದು. ಮೊದಲ ಮೇಲ್ಮನವಿ ಪ್ರಾಧಿಕಾರ ಮತ್ತು ನ್ಯಾಯಾಧಿಕರಣದ ಆದೇಶಕ್ಕೆ ಅನುಗುಣವಾಗಿ ಅರ್ಜಿದಾರನಿಗೆ ಮುಂಗಡ ಠೇವಣಿ ಹಿಂತಿರುಗಿಸಬೇಕಾಗಿ ಬಂದಲ್ಲಿ ಆತ ಠೇವಣಿ ಮಾಡಿದ ದಿನದಿಂದ ರೀಫಂಡ್‌ ಕೊಡುವ ದಿನದವರೆಗೆ ಭಾಗ 3 ರಂತೆ ಬಡ್ಡಿ ದೊರೆಯುತ್ತದೆ. ಅರ್ಜಿದಾರ ಭಾಗ 79 ಉಪಖಂಡ (6)/(4) ಅಥವ ಭಾಗ 82ರಂತೆ ಉಪಖಂಡ (10)/(7) ರಂತೆ ಮುಂಗಡ ಠೇವಣಿ ಮಾಡಿರುತ್ತಾನೆ.

ಪ್ರಶ್ನೆ22: ನ್ಯಾಯಾಧಿಕರಣದ ಆದೇಶವನ್ನು ಎಲ್ಲಿ ಪ್ರಶ್ನಿಸಬಹುದು?

ಉತ್ತರ: ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು. ಹೈಕೋರ್ಟ್ ಕೂಡ ಅರ್ಜಿಯಲ್ಲಿ ಕಾನೂನು ಕುರಿತು ಏನಾದರೂ ಪ್ರಶ್ನೆಗಳಿವೆಯೇ ಎಂಬುದನ್ನು ನೋಡುತ್ತದೆ (ಭಾಗ 87(1)) ನ್ಯಾಯಾಧಿಕರಣದ ನೀಡಿದ ತೀರ್ಪಿನಲ್ಲಿ ಎರಡು ರಾಜ್ಯಗಳು, ಕೇಂದ್ರ ಸರ್ಕಾರಗಳು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದರೆ, ವಹಿವಾಟುಗಳು ರಾಜ್ಯದೊಳಗೆ, ಅಂತಾರಾಜ್ಯ ನಡುವೆ ಇರುವಾಗ ಸರಬರಾಜು ಸ್ಥಳದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿದ್ದಾಗ ಹೈಕೋರ್ಟ್‌ನಲ್ಲಿ ಇತ್ಯರ್ಥವಾಗದೆ ಸುಪ್ರೀಂಕೋರ್ಟ್ ವ್ಯಾಪ್ತಿಗೆ ಒಳಪಡುತ್ತದೆ.

ಪ್ರಶ್ನೆ23: ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಲು ಏನಾದರೂ ಕಾಲಮಿತಿ ಇದೆಯೇ?

ಉತ್ತರ: ನ್ಯಾಯಾಧಿಕರಣ ತೀರ್ಪು ನೀಡಿದ ದಿನದಿಂದ 180 ದಿನಗಳು ಕಾಲಾವಕಾಶ ಇರುತ್ತದೆ. ಆದರೂ ಅರ್ಜಿ ಸಲ್ಲಿಕೆಯ ವಿಳಂಬಕ್ಕೆ ಸಕಾರಣಗಳಿದ್ದರೆ ಹೈಕೋರ್ಟ್ ಮನ್ನಾ ಮಾಡಬಹುದು.

******

ಮುಂಗಡ ಆದೇಶ

17. ಮುಂಗಡ ಆದೇಶ

ಪ್ರಶ್ನೆ1: ಮುಂಗಡ ಆದೇಶ ಎಂದರೆ ಏನರ್ಥ?

ಉತ್ತರ: ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆ ಭಾಗ 94ರಂತೆ ಅರ್ಜಿದಾರರು ಭಾಗ 97ರಲ್ಲಿ ಉಲ್ಲೇಖಿಸಿರುವ ಹಾಗೆ ಅಧಿಕಾರಿಗಳಿಂದ ಲಿಖಿತದಲ್ಲಿ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಮುಂಗಡವಾಗಿ ಆದೇಶ ಪಡೆಯಬಹುದು.

ಪ್ರಶ್ನೆ2: ಮುಂಗಡ ಆದೇಶವನ್ನು ಯಾವ ಯಾವ ವಿಷಯದಲ್ಲಿ ಪಡೆಯಬಹುದು ಎಂದು ಭಾಗ 97ರಲ್ಲಿ ಉಲ್ಲೇಖಿಸಲಾಗಿದೆ?

ಉತ್ತರ: ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಮುಂಗಡ ಆ ದೇಶ ಪಡೆಯಬಹುದು.

ಎ) ಕಾಯ್ದೆಯಲ್ಲಿ ಬರುವ ಯಾವುದೇ ಸರಕು ಮತ್ತು ಸೇವೆಗಳ ವರ್ಗೀಕರಣ.

ಬಿ) ತೆರಿಗೆ ದರದ ಮೇಲೆ ಯಾವುದೇ ಸೂಚನೆಗಳು ಪರಿಣಾಮ ಬೀರುವ ಹಾಗಿದ್ದರೆ ಅದರ ಬಗ್ಗೆ ಮಾಹಿತಿ.

ಸಿ) ಕಾಯ್ದೆಯಂತೆ ಸರಕು ಮತ್ತು ಸೇವೆಗಳ ಮೌಲ್ಯ ನಿರ್ಧರಿಸುವುದಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ನೀತಿ.

ಡಿ) ಇನ್‌ಪುಟ್‌ ತೆರಿಗೆ ಕ್ರೆಡಿಟ್‌ ಪಾವತಿಅಥವ ತೆರಿಗೆ ಪಾವತಿಯಾಗಿದೆ ಎಂದು ಭಾವಿಸುವ ಬಗ್ಗೆ ಮಾಹಿತಿ.

ಇ) ಕಾಯ್ದೆಯಂತೆ ಯಾವುದೇ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ವಿವರ.

ಎಫ್) ಅರ್ಜಿದಾರ ಕಾಯ್ದೆಯಂತೆ ನೋಂದಣಿ ಮಾಡಿಕೊಳ್ಳಬೇಕೆ ಬೇಡವೆ ಎಂಬುದರ ಬಗ್ಗೆ ವಿವರ.

 1. ಅರ್ಜಿದಾರ ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳು ತೆರಿಗೆ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ತಿಳಿಯುವುದು.

ಪ್ರಶ್ನೆ3: ಮುಂಗಡ ಆದೇಶ ವ್ಯವಸ್ಥೆಯ ಮೂಲ ಉದ್ದೇಶವೇನು?

ಉತ್ತರ: ಮುಂಗಡ ಆದೇಶ ವ್ಯವಸ್ಥೆಯ ಮೂಲ ಉದ್ದೇಶ ಸ್ಥೂಲವಾಗಿ ಕೆಳಕಂಡಂತೆ ಇದೆ:

 • ಅರ್ಜಿದಾರ ಯಾವುದೇ ವ್ಯಾಪಾರ ಅಥವ ವ್ಯವಾಹರ ಕೈಗೊಳ್ಳುವ ಮುನ್ನ ತೆರಿಗೆ ಸ್ವರೂಪ ಮತ್ತು ವ್ಯಾಪ್ತಿಯನ್ನು ತಿಳಿದುಕೊಳ್ಳಲು ಇದು ಸಹಕಾರಿ.
 • ವಿದೇಶಿ ನೇರಬಂಡವಾಳ ಹೂಡಿಕೆಯನ್ನು ಇದು ಆಕರ್ಷಿಸುತ್ತದೆ
 • ತಗಾದೆ ಹೂಡುವುದನ್ನು ಕಡಿಮೆಮಾಡುತ್ತದೆ.
 • ಕಡಿಮೆ ವೆಚ್ಚದಲ್ಲಿ ಪಾರದರ್ಶಕವಾಗಿ ತ್ವರಿತಗತಿಯಲ್ಲಿ ಅದೇಶ ನೀಡಲು ಸಹಕಾರಿ.

ಪ್ರಶ್ನೆ4: ಜಿಎಸ್‌ಟಿ ಕಾಯ್ದೆಯಂತೆ ಮುಂಗಡ ಆದೇಶ ಪ್ರಾಧಿಕಾರದ ರಚನೆ ಹೇಗಿರುತ್ತದೆ?

ಉತ್ತರ: ಪ್ರಾಧಿಕಾರದಲ್ಲಿ ಸಿಜಿಎಸ್‌ಟಿಮತ್ತು ಎಸ್‌ಜಿಎಸ್‌ಟಿ ಪ್ರತಿನಿಧಿಸುವ ತಲಾ ಒಬ್ಬರು ಸದಸ್ಯರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನೇಮಕ ಮಾಡುತ್ತದೆ. ಅವರ ಅರ್ಹತೆ, ನೇಮಕ ಮತ್ತು ಇತರ ನೇಮಕ ನಿಯಮಗಳ ಬಗ್ಗೆ ಜಿಎಸ್‌ಟಿ ನಿಯಮಗಳು (ಭಾಗ95)ವಿವರ ನೀಡುತ್ತವೆ.

ಪ್ರಶ್ನೆ5: ಮುಂಗಡ ಆದೇಶ ಪ್ರಾಧಿಕಾರಕ್ಕೆ ಮೇಲ್ಮನವಿ ಪ್ರಾಧಿಕಾರವೂ ಇರುತ್ತದೆ.

ಉತ್ತರ: ಇದು ಎಎಆರ್ ನೀಡಿದ ಆದೇಶಗಳ ಮೇಲಿನ ಮನವಿಯನ್ನು ಪರಿಶೀಲಿಸುತ್ತದೆ. ಇದರಲ್ಲೂ ಇಬ್ಬರು ಸದಸ್ಯರು ಒಬ್ಬರು ಸಿಜಿಎಸ್‌ಟಿಯ ಮುಖ್ಯ ಆಯುಕ್ತರನ್ನು ಕೇಂದ್ರೀಯ ಅಬ್ಕಾರಿ ಮತ್ತು ಸೀಮಾ ಸುಂಕ ಪರಿಷತ್ (ಸಿಬಿಇಸಿ)ನೇಮಕ ಮಾಡುತ್ತದೆ ಮತ್ತು ಮತ್ತೊಬ್ಬರು ಅರ್ಜಿದಾರನಿರುವ ಸ್ಥಳದ ವ್ಯಾಪ್ತಿಗೆ ಬರುವ ಎಸ್‌ಜಿಎಸ್‌ಟಿ ಯ ಆಯುಕ್ತರು.

ಪ್ರಶ್ನೆ6: ಜಿಎಸ್‌ಟಿಯಲ್ಲಿ ಎಷ್ಟು ಎಎಆರ್‌ ಮತ್ತು ಎಎಎಆರ್‌ ರಚನೆಯಾಗುತ್ತದೆ?

ಉತ್ತರ: ಪ್ರತಿ ರಾಜ್ಯಕ್ಕೆ ಒಂದು ಎಎಆರ್‌ ಮತ್ತು ಎಎಎಆರ್‌ ಇರುತ್ತದೆ (ಭಾಗ 95 ಮತ್ತು 96)

ಪ್ರಶ್ನೆ7: ಮುಂಗಡ ಆದೇಶ ಯಾರಿಗೆ ಅನ್ವಯವಾಗುತ್ತದೆ?

ಉತ್ತರ: ಎಎಆರ್ ಮತ್ತು ಎಎಎಆರ್ ಹೊರಡಿಸಿದ ಮುಂಗಡ ಆದೇಶ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಮಾತ್ರ ಹಾಗೂ ಆತನ ವ್ಯಾಪ್ತಿಯಲ್ಲಿ ಬರುವ ಅಧಿಕಾರಿಗೆ ಮಾತ್ರ ಅನ್ವಯವಾಗುತ್ತದೆ. ಅದೇ ರೀತಿ ಬೇರೆ ವ್ಯಕ್ತಿಗಳೂ ಇರಬಹುದು. ಅವರಿಗೆ ಇದು ಅನ್ವಯಿಸುವುದಿಲ್ಲ. ಇದು ವ್ಯಕ್ತಿಗತ ಆದೇಶ.

ಪ್ರಶ್ನೆ8: ಮುಂಗಡ ಆದೇಶಕ್ಕೆ ಕಾಲ ಮಿತಿ ಏನಾದರೂ ಇದೆಯೇ?

ಉತ್ತರ: ಮುಂಗಡ ಆದೇಶಕ್ಕೆ ಕಾಲಮಿತಿ ಏನೂ ವಿಧಿಸಿಲ್ಲ. ಆದರೆ ಭಾಗ 102ರಂತೆ ಈ ಆದೇಶವು ಸನ್ನಿವೇಶ ಬದಲಾಗುವವರೆಗೆ ಜಾರಿಯಲ್ಲಿರುತ್ತದೆ.

ಪ್ರಶ್ನೆ9: ಮುಂಗಡ ಆದೇಶವನ್ನೂ ನಿಷ್ಕ್ರಿಯಗೊಳಿಸಬಹುದೇ?

ಉತ್ತರ: ಒಂದು ವೇಳೆ ಎಎಆರ್ ಮತ್ತು ಎಎಎಆರ್ ಮುಂಗಡ ಆದೇಶವನ್ನು ಅರ್ಜಿದಾರ ಮೋಸಮಾಡಿ ತೆಗೆದುಕೊಂಡಿದ್ದಾನೆ ಅಥವ ಸತ್ಯಾಂಶವನ್ನು ಮುಚ್ಚಿಟ್ಟು ಆದೇಶ ಪಡೆದಿದ್ದಾನೆ ಎಂದು ಗೊತ್ತಾದಲ್ಲಿ ಆದೇಶವನ್ನು ನಿಷ್ಕ್ರಿಯಗೊಳಿಸಬಹುದು. ಆಗ ಅರ್ಜಿದಾರ ಕಾಯ್ದೆಯ ಎಲ್ಲ ಭಾಗಗಳ ರೀತ್ಯ ಪ್ರಕರಣವನ್ನು ಎದುರಿಸಬೇಕು. ಆಗ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ನಿಯಮಗಳನ್ನು ಎದುರಿಸಲೇಬೇಕು. ಮುಂಗಡ ಆದೇಶ ಇಲ್ಲದಾಗ ಯಾವ ಪರಿಸ್ಥಿತಿ ಇತ್ತೋ ಅದೇ ಪರಿಸ್ಥಿತಿಗೆ ಇಡೀ ಹಗರಣ ವರ್ಗಾವಣೆಗೊಳ್ಳುತ್ತದೆ. (ಆದರೆ ಮುಂಗಡ ಆದೇಶ ನೀಡಿದ ದಿನದಿಂದ ಅದನ್ನು ಹಿಂದಕ್ಕೆ ಪಡೆದ ದಿನದವರೆಗೆ ಸೇರ್ಪಡೆ ಮಾಡುವುದಿಲ್ಲ.) ಅರ್ಜಿದಾರನ ಅಭಿಪ್ರಾಯ ಪಡೆಯದೆ ಮುಂಗಡ ಆದೇಶವನ್ನು ಹಿಂದಕ್ಕೆ ಪಡೆಯಲು ಬರುವುದಿಲ್ಲ.

ಪ್ರಶ್ನೆ10: ಮುಂಗಡ ಆದೇಶ ಪಡೆಯಲು ಏನು ಕ್ರಮ ಅನುಸರಿಸಬೇಕು?

ಉತ್ತರ: ಮುಂಗಡ ಆದೇಶಕ್ಕೆ ಸಂಬಂಧಿಸಿದಂತೆ ಭಾಗ 97 ಮತ್ತು 98 ಎಲ್ಲವನ್ನೂ ತಿಳಿಸುತ್ತದೆ. ಭಾಗ 97 ರಂತೆ ಅರ್ಜಿದಾರ ಮುಂಗಡ ಆದೇಶ ಕೋರಿ ನಿಗದಿತ ಅರ್ಜಿಯನ್ನು ಕ್ರಮಬದ್ಧವಾಗಿ ಎಎಆರ್‌ಗೆ ಸಲ್ಲಿಸಬೇಕು. ಯಾವ ರೀತಿ ಅರ್ಜಿ ಸಲ್ಲಿಸಬೇಕೆಂಬುದನ್ನು ಜಿಎಸ್‌ಟಿ ಮಾದರಿ ನಿಯಮಗಳಲ್ಲಿ ನೀಡಲಾಗಿದೆ. ಭಾಗ 98 ರಲ್ಲಿ ಮುಂಗಡ ಆದೇಶ ಪಡೆಯುವ ರೀತಿಯನ್ನು ವಿವರಿಸಲಾಗಿದೆ. ಎಎಆರ್ ಅರ್ಜಿದಾರನ ಅರ್ಜಿಯನ್ನು ಸಂಬಂಧಪಟ್ಟ ವ್ಯಾಪ್ತಿಗೆ ಬರುವ ಅಧಿಕಾರಿಗೆ ಕಳುಹಿಸಿಕೊಟ್ಟು, ಅವರಿಂದ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ತರಿಸಿಕೊಂಡು ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮುಂಗಡ ಆದೇಶ ನೀಡಬಹುದು ಇಲ್ಲವೆ ಅರ್ಜಿಯನ್ನು ತಿರಸ್ಕರಿಸಬಹುದು.

ಪ್ರಶ್ನೆ11: ಯಾವ ಸಂದರ್ಭದಲ್ಲಿ ಮುಂಗಡ ಆದೇಶಕ್ಕೆ ಸಲ್ಲಿಸಿದ ಅರ್ಜಿಯನ್ನು ಕಡ್ಡಾಯವಾಗಿ ತಿರಸ್ಕರಿಸಬಹುದು?

ಉತ್ತರ: ಕೆಲವು ಸಂದರ್ಭಗಳಲ್ಲಿ ಮುಂಗಡ ಆದೇಶಕ್ಕೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸುವುದು ಗ್ಯಾರಂಟಿ. ಇದಕ್ಕೆ ವಿವರಗಳನ್ನು ಭಾಗ 98(2) ರಂತೆ ಕೆಳಗೆ ಕೊಡಲಾಗಿದೆ:

ಎ) ಅರ್ಜಿದಾರ ಈಗಿನ ಅರ್ಜಿಯಲ್ಲಿ ಎತ್ತಿದ ಪ್ರಶ್ನೆಗಳನ್ನು ಬೇರೆ ಯಾವುದೇ ಮೊದಲ ಮೇಲ್ಮನವಿ ಪ್ರಾಧಿಕಾರ ಅಥವ ಮೇಲ್ಮನವಿ ನ್ಯಾಯಾಧಿಕರಣ ಅಥವ ಯಾವುದಾದರೂ ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದ್ದು ಅದು ವಿಚಾರಣೆ ಹಂತದಲ್ಲಿದ್ದರೆ ಈಗಿನ ಅರ್ಜಿ ತಿರಸ್ಕಾರಕ್ಕೆ ಒಳಗಾಗುತ್ತದೆ.

ಬಿ) ಒಂದು ವೇಳೆ ಅರ್ಜಿದಾರ ತನ್ನ ಅರ್ಜಿಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗಳು ಈಗಾಗಲೇ ಮೊದಲ ಮೇಲ್ಮನವಿ ಪ್ರಾಧಿಕಾರ ಅಥವ ಮೇಲ್ಮನವಿ ನ್ಯಾಯಾಧಿಕರಣ ಅಥವ ಯಾವುದಾದರೂ ನ್ಯಾಯಾಲಯದಲ್ಲಿ ತೀರ್ಮಾನವಾಗಿದ್ದಲ್ಲಿ ಅದನ್ನು ಪರಿಗಣಿಸುವುದಿಲ್ಲ.

ಸಿ) ಒಂದು ವೇಳೆ ಅರ್ಜಿದಾರ ತನ್ನ ಅರ್ಜಿಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗಳು ಇದೇ ವ್ಯಕ್ತಿ ಸಲ್ಲಿಸಿದ್ದ ಮತ್ತೊಂದು ಅರ್ಜಿಯಲ್ಲಿ ಪ್ರಸ್ತಾಪಿತವಾಗಿದ್ದು ಅದು ವಿಚಾರಣೆಯಲ್ಲಿದ್ದು ಕಾಯ್ದೆಯ ನಿಯಮಗಳಂತೆ ನಡೆಯುತ್ತಿದ್ದರೆ ಈ ಅರ್ಜಿಯನ್ನು ಒಪ್ಪುವುದಿಲ್ಲ.

ಡಿ) ಅರ್ಜಿದಾರ ತನ್ನ ಅರ್ಜಿಯಲ್ಲಿ ಹೇಳಿದ ವಿಷಯಗಳನ್ನು ಈಗಾಗಲೇ ತೆರಿಗೆ ನಿರ್ಧರಣೆ ಆಧಿಕಾರಿ ಅಥವ ತೀರ್ಪು ನೀಡುವ ಅಧಿಕಾರ ಹೊಂದಿದ ಅಧಿಕಾರಿ ತೀರ್ಮಾನ ಕೊಟ್ಟಿದ್ದರೆ ಆಗ ಅರ್ಜಿಯನ್ನು ತಿರಸ್ಕರಿಸಬಹುದು. ಒಂದು ವೇಳೆ ಆರ್ಜಿಯನ್ನು ತಿರಸ್ಕರಿಸುವ ಹಾಗಿದ್ದರೆ ಅದಕ್ಕೆ ಎಲ್ಲ ಕಾರಣಗಳನ್ನು ಕೊಟ್ಟು ತಿರಸ್ಕರಿಸಬೇಕು.

ಪ್ರಶ್ನೆ12: ಒಂದು ವೇಳೆ ಅರ್ಜಿ ಪುರಸ್ಕೃತಗೊಂಡರೆ ಎಎಆರ್ ಯಾವ ಕ್ರಮಗಳನ್ನು ಅನುಸರಿಸಬೇಕು?

ಉತ್ತರ: ಎಎಆರ್‌ ಅರ್ಜಿ ಸ್ವೀಕರಿಸಿದ ದಿನದಿಂದ 90 ದಿನಗಳಲ್ಲಿ ತನ್ನ ತೀರ್ಪನ್ನು ಪ್ರಕಟಿಸಬೇಕು. ತೀರ್ಪು ನೀಡುವ ಮುನ್ನ ಅರ್ಜಿ ಮತ್ತು ಅದಕ್ಕೆ ಸಂಬಂಧಿಸಿದಂತೆ ಅರ್ಜಿದಾರ ನೀಡಿದ ಎಲ್ಲ ಸಾಮಗ್ರಿಗಳನ್ನು ಪರಿಶೀಲಿಸಬೇಕು. ಅಲ್ಲದೆ ಇಲಾಖೆಯ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಪಡೆದುಕೊಳ್ಳಬೇಕು. ತೀರ್ಪು ಪ್ರಕಟಿಸುವ ಮುನ್ನ ಎಎಆರ್ ಅರ್ಜಿದಾರನ ಅಭಿಪ್ರಾಯವನ್ನು ಪಡೆಯಲೇಬೇಕು. ಅಥವ ಆತನಿಂದ ನೇಮಕಗೊಂಡ ಪ್ರತಿನಿಧಿಯ ಮತ್ತು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿಯ ಸಂಬಂಧಪಟ್ಟ ಅಧಿಕಾರಿಯ ಅಭಿಪ್ರಾಯವನ್ನು ಕೇಳಲೇಬೇಕು.

ಪ್ರಶ್ನೆ13: ಒಂದು ವೇಳೆ ಎಎಆರ್ ಸದಸ್ಯರಲ್ಲಿ ವಿಭಿನ್ನ ಅಭಿಪ್ರಾಯ ಮೂಡಿದಲ್ಲಿ ಏನಾಗುತ್ತೆ?

ಉತ್ತರ: ಎಎಆರ್ ನಲ್ಲಿರುವ ಇಬ್ಬರು ಸದಸ್ಯರಲ್ಲಿ ಕೆಲವು ವಿಷಯಗಳಿಗೆ ಸಂಬಂಧಸಿದಂತೆ ಬೇರೆ ಅಭಿಪ್ರಾಯಗಳು ಮೂಡಿದಲ್ಲಿ ಅವುಗಳನ್ನು ಎಎಎಆರ್‌ಗೆ ಕಳುಹಿಸಿಕೊಡಲಾಗುವುದು. ಅಲ್ಲಿಯ ಸದಸ್ಯರಲ್ಲೂ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಒಮ್ಮತ ಮೂಡಲಿಲ್ಲ ಎಂದರೆ ಮುಂಗಡ ಆದೇಶ ನೀಡುವುದಿಲ್ಲ.

ಪ್ರಶ್ನೆ14: ಎಎಆರ್ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಇರುವ ಅವಕಾಶಗಳೇನು?

ಉತ್ತರ: ಮೇಲ್ಮನವಿ ಸಲ್ಲಿಸುವುದಕ್ಕೆ ಅನುಸರಿಸಬೇಕಾದ ಕ್ರಮಗಳನ್ನು ಜಿಎಸ್‌ಟಿ ಕಾಯ್ದೆ ಭಾಗ 99 ಮತ್ತು 100 ರಲ್ಲಿ ವಿವರಿಸಲಾಗಿದೆ. ಒಂದು ವೇಳೆ ಅರ್ಜಿದಾರನಿಗೆ ಎಎಆರ್ ಆದೇಶದಿಂದ ತೃಪ್ತಿ ಸಿಗಲಿಲ್ಲ ಎಂದರೆ ಎಎಎಆರ್‌ಗೆ ಮೇಲ್ಮನವಿ ಸಲ್ಲಿಸಬಹುದು. ಅದೇ ರೀತಿ ಅರ್ಜಿದಾರನ ವ್ಯಾಪ್ತಿಯಲ್ಲಿ ಬರುವ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿ ಕೂಡ ಮೇಲ್ಮನವಿ ಸಲ್ಲಿಸಬಹುದು. ಸಂಬಂಧಪಟ್ಟ ಅಧಿಕಾರಿ ಎಂದರೆ ಸಿಜಿಎಸ್‌ಟಿ / ಎಸ್‌ಜಿಎಸ್‌ಟಿ ಇಲಾಖೆ ಅರ್ಜಿಯನ್ನು ಪರಿಶೀಲಿಸಲು ಹೇಳಿದ ಅಧಿಕಾರಿ ಎಂದರ್ಥ. ಸಾಮಾನ್ಯವಾಗಿ ಈ ಅಧಿಕಾರಿ ಅರ್ಜಿದಾರನ ವ್ಯಾಪ್ತಿಯಲ್ಲಿರುವ ಅಧಿಕಾರಿಯೇ ಆಗಿರುತ್ತಾರೆ. ಯಾವುದೇ ಮೇಲ್ಮನವಿಯಾದರೂ ಮುಂಗಡ ಆದೇಶ ಬಂದ 60 ದಿನಗಳೊಳಗೆ ಸಲ್ಲಿಸಬೇಕು. ಮೇಲ್ಮನವಿಯನ್ನು ನಿಗದಿತ ಅರ್ಜಿಯಲ್ಲಿರಬೇಕು. ಇದನ್ನು ನಿಗದಿತ ರೀತಿಯಲ್ಲಿ ಪರಿಶೀಲಿಸಬೇಕು. ಇದಕ್ಕೆ ಜಿಎಸ್‌ಟಿ ಕಾಯ್ದೆಯಲ್ಲಿ ಸೂಚನೆ ನೀಡಲಾಗಿದೆ.ಮೇಲ್ಮನವಿ ಪಡೆದ ಮೇಲ್ಮನವಿ ಪ್ರಾಧಿಕಾರ 90 ದಿನಗಳಲ್ಲಿ ಇತ್ಯರ್ಥಪಡಿಸಬೇಕು. ಅದಕ್ಕೆ ಮೊದಲು ಮೇಲ್ಮನವಿಗೆ ಸಂಬಂಧಿಸಿದವರನ್ನು ಕರೆದು ಅವರ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು. ಒಂದು ವೇಳೆ ಎಎಎಆರ್‌ ಸದಸ್ಯರಲ್ಲಿ ಒಮ್ಮತ ಮೂಡಲಿಲ್ಲ ಎಂದರೆ ಮುಂಗಡ ಆದೇಶಕ್ಕೆ ಅನುಮೋದನೆ ಇಲ್ಲ ಎಂದು ಭಾವಿಸಲಾಗುವುದು.

ಪ್ರಶ್ನೆ15: ತಮ್ಮ ಆದೇಶದಲ್ಲಿ ಏನಾದರೂ ಲೋಪ ಇದೆ ಎಂದು ಕಂಡು ಬಂದರೆ ಎಎಆರ್ ಮತ್ತು ಎಎಎಆರ್‌ಅವುಗಳನ್ನು ಸರಿಪಡಿಸಬಹುದೇ?

ಉತ್ತರ: ಹೌದು. ಕಾಯ್ದೆಯ ಭಾಗ 101 ರಂತೆ ಎಎಆರ್ ಮತ್ತು ಎಎಎಆರ್ ತಮ್ಮ ಆದೇಶದಲ್ಲಿ ತಪ್ಪು ಕಂಡು ಬಂದಲ್ಲಿ ಆದೇಶ ನೀಡಿದ ದಿನದಿಂದ 6 ತಿಂಗಳೊಳಗೆ ಸರಿಪಡಿಸಬಹುದು. ಲೋಪ ಎಎಆರ್, ಎಎಎಆರ್ ಸದಸ್ಯರೇ ಕಂಡುಕೊಂಡಿರಬಹುದು. ಅಥವ ಅರ್ಜಿದಾರ ಅವರ ಗಮನಕ್ಕೆ ತಂದಿರಬಹುದು. ಅಲ್ಲದೆ ಸಂಬಂಧಪಟ್ಟ ವ್ಯಾಪ್ತಿಗೆ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿ ಗುರುತಿಸಿ ಹೇಳಬಹುದು. ಮೊದಲಿನ ಆದೇಶವನ್ನು ಸರಿಪಡಿಸುವುದರಿಂದ ತೆರಿಗೆ ಪ್ರಮಾಣದಲ್ಲಿ ಹೆಚ್ಚಳ ಅಥವ ಕಡಿಮೆಯಾಗುವ ಹಾಗಿದ್ದಲ್ಲಿ ಅರ್ಜಿದಾರನ ಅಭಿಪ್ರಾಯವನ್ನು ಪಡೆಯುವುದು ಕಡ್ಡಾಯ. ಆಮೇಲೆ ಲೋಪ ಸರಿಪಡಿಸಿ ಆದೇಶ ಹೊರಡಿಸಬಹುದು.

*****

ಇತ್ಯರ್ಥ ಆಯೋಗ

18. ಇತ್ಯರ್ಥಆಯೋಗ

ಪ್ರಶ್ನೆ 1: ಇತ್ಯರ್ಥ ಆಯೋಗದ ಮೂಲ ಉದ್ದೇಶಗಳೇನು?

ಉತ್ತರ: ಇತ್ಯರ್ಥ ಆಯೋಗದ ಮೂಲ ಉದ್ದೇಶಗಳು:

 • ತೆರಿಗೆದಾರರು ವಿವಾದಗಳಿಂದ ಮುಕ್ತರಾಗಲು ಪರ್ಯಾಯ ಮಾರ್ಗವನ್ನು ತೋರಿಸಿ ಕೊಡುವುದು.
 • ಹಣ ಮತ್ತು ಸಮಯ ಹಾಳುಮಾಡುವ ತಗಾದೆಗಳಿಂದ ಹೊರಬಂದು ಜಿಎಸ್‌ಟಿ ತೆರಿಗೆ ಪಾವತಿವೇಗ ಹೆಚ್ಚಿಸುವುದು.
 • ತೆರಿಗೆದಾರರು ತೆರಿಗೆ ತಪ್ಪಿಸಿ ಪರದಾಡುವುದರಿಂದ ಹೊರಬಂದು ಸ್ವಚ್ಛ ಬದುಕು ನಡೆಸುವುದಕ್ಕೆ ಅವಕಾಶ ಮಾಡಿಕೊಡುವುದು.
 • ತೆರಿಗೆದಾರರು ತಮ್ಮ ತೆರಿಗೆ ಋಣವನ್ನು ಸಂಪುರ್ಣವಾಗಿ ಬಿಚ್ಚಿಟ್ಟು ಎಲ್ಲ ವಿವಾದಗಳಿಂದ ಹೊರಬರಲು ವೇದಿಕೆ ನಿರ್ಮಿಸಿಕೊಡುವುದು.
 • ಉದ್ಯಮಿಗಳು ತಮ್ಮ ಉದ್ಯಮವನ್ನು ನಿರಾತಂಕವಾಗಿ ನಡೆಸಿಕೊಂಡು ಹೋಗಲು ಎಲ್ಲ ವಿವಾದಗಳನ್ನು ಪರಿಹರಿಸಿಕೊಳ್ಳುವುದು ಮುಖ್ಯ. ಇದಕ್ಕೆ ಈ ಆಯೋಗ ಉತ್ತೇಜನ ನೀಡುತ್ತದೆ.

ಪ್ರಶ್ನೆ2: ಎಂಜಿಎಲ್‌ನಲ್ಲಿ ಅಂತಾರಾಜ್ಯ ಮತ್ತು ರಾಜ್ಯದೊಳಗಿನ ವಿವಾದಗಳನ್ನು ಬಗೆಹರಿಸಿಕೊಳ್ಳಲು ಅವಕಾಶವಿದೆಯೇ?

ಉತ್ತರ: ಜಿಎಸ್‌ಟಿ ಮಾದರಿಯಲ್ಲಿ ಇತ್ಯರ್ಥ ಆಯೋಗ ರಚನೆಗೆ ಅವಕಾಶ ಇರುವುದು ಐಜಿಎಸ್‌ಟಿಯಲ್ಲಿ ಮಾತ್ರ (ಭಾಗ11 ರಿಂದ 26) ಇದರಲ್ಲಿ ರಾಜ್ಯದೊಳಗಿನ ತೆರಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ಬರುವುದಿಲ್ಲ. ಆದರೆ ರಾಜ್ಯಗಳು ಬೇಕಿದ್ದರೆ ಇತ್ಯರ್ಥ ಆಯೋಗವನ್ನು ರಚಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದಂತೆ ಐಸಿಎಸ್‌ಟಿ ಕಾಯ್ದೆಯಲ್ಲಿ ಆಯೋಗ ರಚನೆಗೆ ಬೇಕಾದ ಚೌಕಟ್ಟು ಲಭ್ಯವಿದೆ. ಐಸಿಎಸ್‌ಟಿಯಲ್ಲಿ ಲಭ್ಯವಿರುವ ಭಾಗಗಳನ್ನೇ ಸಿಜಿಎಸ್‌ಟಿಯಲ್ಲೂ ಅಳವಡಿಸಿಕೊಳ್ಳಬಹುದು.

ಪ್ರಶ್ನೆ3: ಎಂಜಿಎಲ್‌ನಲ್ಲಿ ಇತ್ಯರ್ಥಪಡಿಸುವ ಪ್ರಕರಣ ಎಂದರೆ ಏನು?

ಉತ್ತರ: ಐಸಿಎಸ್‌ಟಿ ಕಾಯ್ದೆ ಭಾಗ 11 ರಂತೆ ಪ್ರಕರಣ ಎಂದರೆ ತೆರಿಗೆ ವಿಧಿಸುವುದು, ತೆರಿಗೆ ನಿರ್ಧಾರ, ತೆರಿಗೆ ಸಂಗ್ರಹ. ಐಜಿಎಸ್‌ಟಿ ಅಧಿಕಾರಿ ಮುಂದೆ ಅಥವ ಮೊದಲ ಮೇಲ್ಮನವಿ ಪ್ರಾಧಿಕಾರದ ಮುಂದೆ ಇರುವುದು. ತೀರ್ಪ ನೀಡುವ ಅಧಿಕಾರಿಯ ಮುಂದೆ ಇರುವುದಕ್ಕೆ ಆದೇಶ ನೀಡಿದ್ದು ಮೇಲ್ಮನವಿ ಸಲ್ಲಿಸಲು ಇರುವ ಕಾಲಮಿತಿ ಇನ್ನೂ ಮುಕ್ತಾಯಗೊಳ್ಳದೆ ಇರುವುದಕ್ಕೂ ಪ್ರಕರಣ ಎಂದು ಕರೆಯುವರು. ಒಂದು ವೇಳೆ ಅವಧಿ ಮುಕ್ತಾಯಗೊಂಡ ಮೇಲೆ ಮೇಲ್ಮನವಿ ಸಲ್ಲಿಸಿದ್ದು ಅಥವ ಹಿರಿಯ ಜುಡಿಷಿಯಲ್ ಪ್ರಾಧಿಕಾರದಿಂದ ಕಿರಿಯ ಅಧಿಕಾರಿಗೆ ವರ್ಗಾವಣೆಗೊಂಡಿದ್ದಲ್ಲಿ ಅದನ್ನು ಮುಂದುವರಿದ ಪ್ರಕ್ರಿಯೆ ಎಂದು ಪರಿಗಣಿಸುವುದಿಲ್ಲ. ಹೀಗಾಗಿ ಅಂಥ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಪ್ರಕರಣ ಅಲ್ಲ ಎಂದು ವ್ಯಾಖ್ಯಾನದಲ್ಲಿ ಹೇಳಲಾಗಿದೆ.

ಪ್ರಶ್ನೆ4: ಇತ್ಯರ್ಥಪಡಿಸುವ ಹಾಗೂ ವಿಚಾರಣೆ ನಡೆಸುವ ಆಯೋಗದಲ್ಲಿ ಎಷ್ಟು ಸದಸ್ಯರು ಇರುತ್ತಾರೆ?

ಉತ್ತರ: ಪ್ರತಿ ರಾಜ್ಯ ಆಯೋಗದಲ್ಲಿ ಒಬ್ಬರು ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರು ಇರುತ್ತಾರೆ. ಅಧ್ಯಕ್ಷರು ಹಾಲಿ ಅಥವ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಮತ್ತು ಸಿಜಿಎಸ್‌ಟಿಯಿಂದ ಬಂದ ಇಬ್ಬರು ಅಧಿಕಾರಿಗಳು ತಾಂತ್ರಿಕ ಸದಸ್ಯರಾಗಿರುತ್ತಾರೆ.

ಪ್ರಶ್ನೆ5: ಪ್ರಕರಣವನ್ನು ಇತ್ಯರ್ಥಪಡಿಸಲು ಕುಳಿತಾಗ ಒಂದು ವೇಳೆ ಆಯೋಗದ ಸದಸ್ಯರಲ್ಲಿ ವಿಭಿನ್ನ ಆಭಿಪ್ರಾಯ ಮೂಡಿದರೆ ಏನಾಗುತ್ತದೆ?

ಉತ್ತರ: ಐಜಿಎಸ್‌ಟಿ ಕಾಯ್ದೆ ಭಾಗ 14 ರಂತೆ ಇತ್ಯರ್ಥ ಆಯೋಗದ ಮುಂದಿರುವ ಪ್ರಕರಣಗಳನ್ನು ಬಹುಮತದಮೇಲೆ ತೀರ್ಮಾನಿಸಲಾಗುವುದು. ಒಟ್ಟು ಮೂವರು ಸದಸ್ಯರಲ್ಲಿ ವಿಭಿನ್ನ ಅಭಿಪ್ರಾಯಗಳಿದ್ದರೂ ಇಬ್ಬರು ಸದಸ್ಯರು ಒಪ್ಪಿದರೆ ಅದಕ್ಕೆ ಅನುಮೋದನೆ ಸಿಗುತ್ತದೆ. ಒಂದು ವೇಳೆ ಒಬ್ಬ ಸದಸ್ಯರು ಅನಾರೋಗ್ಯ ಅಥವ ಬೇರೆ ಕಾರಣಗಳಿಂದ ಸಭೆಗೆ ಬರಲು ಆಗಲಿಲ್ಲ ಎಂದರೆ ಇಬ್ಬರೇ ಕುಳಿತು ತೀರ್ಮಾನಕೈ ಗೊಳ್ಳಬಹುದು. ಒಂದು ವೇಳೆ ಅವರಲ್ಲಿ ವಿಭಿನ್ನ ಅಭಿಪ್ರಾಯ ಮೂಡಿದ್ದಲ್ಲಿ ಮೂರನೇ ವ್ಯಕ್ತಿಗೆ ವಿಷಯವನ್ನು ರವಾನಿಸಲಾಗುವುದು. ಅವರ ತೀರ್ಮಾನ ಮೇಲೆ ಕ್ರಮ ಕೈಗೊಳ್ಳಲಾಗುವುದು. ಬಹುಮತದ ತೀರ್ಮಾನದ ಮೇಲೆ ಎಲ್ಲವೂ ನಡೆಯುತ್ತದೆ.

ಪ್ರಶ್ನೆ6: ಪ್ರಕರಣ ಇತ್ಯರ್ಥಪಡಿಸುವಂತೆ ಯಾರು ಅರ್ಜಿ ಸಲ್ಲಿಸಬಹುದು?

ಉತ್ತರ: ಐಜಿಎಸ್‌ಟಿ ಕಾಯ್ದೆ ಭಾಗ 15ರಂತೆ ಯಾವುದೇ ತೆರಿಗೆದಾರ ಇತ್ಯರ್ಥ ಆಯೋಗಕ್ಕೆ ಅರ್ಜಿಸಲ್ಲಿಸಬಹುದು. ಆದರೆ ಆತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಲ್ಲ ಹಲವು ಸಮಜಾಯಿಸಿ ಕೇಳಿದ ನೋಟಿಸ್‌ಗಳಿರಬಹುದು. ಪ್ರಕರಣವು ತೀರ್ಪು ನೀಡುವ ಅಧಿಕಾರ ಹೊಂದಿದ ಅಧಿಕಾರಿ ಅಥವ ಮೊದಲ ಮೇಲ್ಮನವಿ ಪ್ರಾಧಿಕಾರದ ಮುಂದಿರಬಹುದು.

ಪ್ರಶ್ನೆ7: ಇತ್ಯರ್ಥ ಪಡಿಸುವಂತೆ ಕೋರುವ ಅರ್ಜಿಯಲ್ಲಿ ಏನಿರಬೇಕು?

ಉತ್ತರ: ಇತ್ಯರ್ಥ ಪಡಿಸುವಂತೆ ಕೋರುವ ಅರ್ಜಿಯಲ್ಲಿ ಸಂಪುರ್ಣವಾಗಿ ಮತ್ತು ನಿಜಾಂಶವನ್ನು ಕೆಳಕಂಡಂತೆ ನೀಡಿರಬೇಕು:

 • ಐಜಿಎಸ್‌ಟಿ ಅಧಿಕಾರಿಯ ಮುಂದೆ ಸರಿಯಾಗಿ ಮಂಡಿಸದೆ ಇದ್ದ ತೆರಿಗೆ ಪ್ರಮಾಣವನ್ನು ತಿಳಿಸಬೇಕು.
 • ತೆರಿಗೆ ಪ್ರಮಾಣವನ್ನು ನಿಗದಿಪಡಿಸಿದ ರೀತಿಯನ್ನು ವಿವರಿಸಬೇಕು.
 • ಹೆಚ್ಚುವರಿ ತೆರಿಗೆ ಪಾವತಿಸಲು ಸಿದ್ಧವಾಗಿರುವ ಬಗ್ಗೆ ವಿವರ ನೀಡಬೇಕು
 • ಇತರೆ ವಿವರಗಳೆಂದರೆ ಸರಿಯಾಗಿ ವರ್ಗೀಕರಣ ಮಾಡದೆ ಇರುವುದು, ವಿನಾಯಿತಿ ಪ್ರಕಟಣೆಗಳನ್ನು ಉಲ್ಲೇಖಿಸಿ ಕಡಿಮೆ ತೆರಿಗೆ ಪಾವತಿ ಮಾಡಿರುವುದನ್ನು ತಿಳಿಸಬೇಕು.

ಪ್ರಶ್ನೆ8: ಇತ್ಯರ್ಥಪಡಿಸುವಂತೆ ಅರ್ಜಿ ಸಲ್ಲಿಸುವ ಮುನ್ನ ಯಾವ ಯಾವ ಷರತ್ತುಗಳನ್ನು ಪೂರೈಸಬೇಕು?

ಉತ್ತರ: ಐಜಿಎಸ್‌ಟಿ ಕಾಯ್ದೆ ಭಾಗ 15 ರಂತೆ ಕೆಳಕಂಡ ಷರತ್ತುಗಳನ್ನು ಪೂರೈಸಿದರೆ ಅರ್ಜಿಯನ್ನು ಇತ್ಯರ್ಥಕ್ಕೆ ಅಂಗೀಕರಿಸಬಹುದು:

ಎ) ಐಜಿಎಸ್‌ಟಿ ಕಾಯ್ದೆಯಂತೆ ಅರ್ಜಿದಾರ ರಿಟರ್ನ್‌ಗಳನ್ನು ಸಲ್ಲಿಸಬೇಕು. ಇಲ್ಲವೆ ಇತ್ಯರ್ಥ ಅಯೋಗ ರಿಟರ್ನ್‌ಗಳನ್ನು ಸಲ್ಲಿಸದೇ ಇರುವುದಕ್ಕೆ ಕಾರಣಗಳನ್ನು ದಾಖಲಿಸಿ ಮನ್ನಾ ಮಾಡಿರುವುದಾಗಿ ಬರೆಯಬೇಕು. ಈ ರೀತಿ ಬರೆಯಲು ಆಯೋಗಕ್ಕೆ ಅರ್ಜಿದಾರ ಹೇಳುತ್ತಿರುವುದು ಸಕಾರಣವಾಗಿದೆ ಎಂದೆನಿಸಬೇಕು.

ಬಿ) ಅರ್ಜಿದಾರ ತೆರಿಗೆ ಪಾವತಿಸುವಂತೆ ಶೋಕಾಸ್ ನೋಟಿಸ್ ಅಥವ ಆದೇಶ ಐಜಿಎಸ್‌ಟಿಯಿಂದ ಬಂದಿರಬೇಕು ಹಾಗೂ ಅದು ಮೊದಲ ಮೇಲ್ಮನವಿ ಪ್ರಾಧಿಕಾರದ ಮುಂದೆ ವಿಚಾರಣೆಯಲ್ಲಿರಬೇಕು.

ಸಿ) ಅರ್ಜಿದಾರ ಒಪ್ಪಿಕೊಂಡ ಹೆಚ್ಚುವರಿ ತೆರಿಗೆ 5ಲಕ್ಷ ರೂ. ಮೀರಿರಬೇಕು.

ಡಿ) ಅರ್ಜಿದಾರ ಸಿಜಿಎಸ್‌ಟಿ ಕಾಯ್ದೆ ಭಾಗ 36ರಂತೆ ಹೆಚ್ಚುವರಿ ತೆರಿಗೆಯನ್ನು ಬಡ್ಡಿ ಸಮೇತ ಪಾವತಿ ಮಾಡಿರಬೇಕು.

ಪ್ರಶ್ನೆ9: ಯಾವ ಯಾವ ಸಂದರ್ಭಗಳಲ್ಲಿ ಅರ್ಜಿದಾರನ ಇತ್ಯರ್ಥ ಅರ್ಜಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ?

ಉತ್ತರ: ಐಜಿಎಸ್‌ಟಿ ಕಾಯ್ದೆ ಭಾಗ 15ರಲ್ಲಿ ಯಾವ ಯಾವ ಸಂದರ್ಭಗಳಲ್ಲಿ ಇತ್ಯರ್ಥ ಆಯೋಗ ಅರ್ಜಿದಾರನ ಕೋರಿಕೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದು ಕಂಡಂತೆ ಇದೆ:

 • ಒಂದು ವೇಳೆ ಪ್ರಕರಣವು ಮೇಲ್ಮನವಿ ನ್ಯಾಯಾಧಿಕರಣದ ಮುಂದಿದ್ದರೆ ಅಥವ ಯಾವುದೇ ನ್ಯಾಯಾಲಯದ ಮುಂದಿದ್ದರೆ ಅರ್ಜಿಯನ್ನು ಒಪ್ಪಿಕೊಳ್ಳುವುದಿಲ್ಲ.
 • ಒಂದು ವೇಳೆ ಅರ್ಜಿ ಸಲ್ಲಿಸಿರುವುದು ತೆರಿಗೆ ದರ ನಿಗದಿಪಡಿಸಿರುವ ಬಗ್ಗೆ ಅಥವ ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ತೆರಿಗೆಯನ್ನು ಪ್ರಶ್ನಿಸುವಂತಿದ್ದರೆ.
 • ಒಂದು ನಿಗದಿತ ಶುಲ್ಕ ಪಾವತಿಸಿಲ್ಲ ಎಂದರೆ.

ಪ್ರಶ್ನೆ10: ಅರ್ಜಿದಾರ ಇತ್ಯರ್ಥ ಆಯೋಗಕ್ಕೆ ಒಮ್ಮೆ ಸಲ್ಲಿಸಿದ ಅರ್ಜಿಯನ್ನು ಹಿಂದಕ್ಕೆ ಪಡೆಯಬಹುದೇ?

ಉತ್ತರ: ಇಲ್ಲ. ಒಮ್ಮೆ ಅರ್ಜಿ ಸಲ್ಲಿಸಿದ ಮೇಲೆ ಅದನ್ನು ಹಿಂದಕ್ಕೆ ಪಡೆಯಲು ಅವಕಾಶವಿಲ್ಲ.

ಪ್ರಶ್ನೆ11 : ಇತ್ಯರ್ಥ ಆಯೋಗ ಯಾವ ರೀತಿಯ ಆದೇಶಗಳನ್ನು ನೀಡಬಹುದು?

ಉತ್ತರ: ಇತ್ಯರ್ಥ ಆಯೋಗ ಆದೇಶ ನೀಡುವಾಗ ಕೆಳಕಂಡ ವಿಷಯಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು:

 • ಆದೇಶದಲ್ಲಿ ತೆರಿಗೆ ಮೊತ್ತ, ಅದಕ್ಕೆಬಡ್ಡಿ, ಶುಲ್ಕ ಮತ್ತು ದಂಡ ಎಲ್ಲವನ್ನೂ ನಮೂದಿಸಬೇಕು. ಹಣವನ್ನು ಮೂರು ತಿಂಗಳಲ್ಲಿ ಪಾವತಿ ಮಾಡಬೇಕು ಅಥವ ವಿಸ್ತರಿಸಿದ 3 ತಿಂಗಳಲ್ಲಿ ಬಡ್ಡಿ ಸಮೇತ ಎಲ್ಲ ಹಣವನ್ನು ಕೇಂದ್ರ ಸರ್ಕಾರಕ್ಕೆ ಸಿಜಿಎಸ್‌ಟಿ ಕಾಯ್ದೆ ಭಾಗ 54ರಂತೆ ಪಾವತಿ ಮಾಡಬೇಕು) (ಭಾಗ16)
 • ಬಾಕಿ ಇರುವ ಹಣವನ್ನು ಯಾವ ರೀತಿ ಪಾವತಿ ಮಾಡಬೇಕು ಎಂಬುದನ್ನು ತಿಳಿಸಬೇಕು. (ಭಾಗ16)
 • ಅರ್ಜಿ ಸಲ್ಲಿಸುವ ಸಮಯದಲ್ಲಿ ಅರ್ಜಿದಾರನ ಮೇಲೆ ಬೇರೆ ಯಾವುದೇ ದೂರು ಇಲ್ಲ ಎಂದಾದಲ್ಲಿ ಆಯೋಗವು ಬೇರೆ ಪ್ರಕರಣ ದಾಖಲಿಸದಂತೆ ವಿನಾಯಿತಿ ನೀಡಬಹುದು. ಅಲ್ಲದೆ ಆಯೋಗವು ಅರ್ಜಿದಾರ ಸಂಪುರ್ಣವಾಗಿ ನಿಜಾಂಶವನ್ನು ಬಹಿರಂಗಪಡಿಸಿದ್ದಾನೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು.
 • ಐಜಿಎಸ್‌ಟಿ ಕಾಯ್ದೆ ಭಾಗ 20 ರಂತೆ ಅರ್ಜಿದಾರನಿಗೆ ಮತ್ತೆ ದಂಡವನ್ನು ಪುರ್ಣವಾಗಿ ಅಥವ ಭಾಗಶಃ ವಿಧಿಸದಂತೆ ವಿನಾಯಿತಿ ನೀಡುವುದು.
 • ವಿಚಾರಣೆ ಆರಂಭಿಸುವ ಮುನ್ನ ಅರ್ಜಿದಾರನ ಆಸ್ತಿಯ ಜಪ್ತಿಗೆ ತಾತ್ಕಾಲಿಕ ಆದೇಶ ಹೊರಡಿಸಲಾಗುವುದು. ಅರ್ಜಿದಾರ ಸರ್ಕಾರಕ್ಕೆ ಸಲ್ಲಿಸಬೇಕಿದ್ದ ಎಲ್ಲ ಬಾಕಿಯನ್ನು ಪಾವತಿ ಮಾಡಿದ ಕೂಡಲೇ ಈ ಜಪ್ತಿ ಆದೇಶ ತಂತಾನೇ ಕೊನೆಗೊಳ್ಳುತ್ತದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇತ್ಯರ್ಥ ಆಯೋಗಕ್ಕೆ ಸಲ್ಲಿಸಲಾಗುವುದು. (ಭಾಗ17)
     
6 ಒಂದು ವೇಳೆ ಆಯೋಗದೊಂದಿಗೆ ಅರ್ಜಿದಾರ ಸರಿಯಾಗಿ ಸಹಕರಿಸಲಿಲ್ಲ ಎಂದರೆ ಆಯೋಗವು

ಪ್ರಕರಣವನ್ನು ತೀರ್ಪು ನೀಡುವ ಅಧಿಕಾರ ಇರುವ ಅಧಿಕಾರಿಗೆ ಅಥವ ಮೊದಲ ಮೇಲ್ಮನವಿ ಪ್ರಾಧಿಕಾರಕ್ಕೆ ಮತ್ತೆ ಕಳುಹಿಸಬಹುದು. ಆಗ ಅಧಿಕಾರಿ ಅಯೋಗದ ಮುಂದೆ ಅರ್ಜಿದಾರ ಸಲ್ಲಿಸಿದ ಎಲ್ಲ ದಾಖಲೆಗಳು ಹಾಗೂ ಆಯೋಗ ನಡೆಸಿದ ತನಿಖೆಯ ಫಲಿತಾಂಶವನ್ನೂ ಬಳಸಿಕೊಳ್ಳಬಹುದು. (ಭಾಗ 21)

7 ಅಯೋಗವು ಯಾವುದೇ ಮುಕ್ತಾಯಗೊಂಡ ಪ್ರಕರಣವನ್ನು ಮತ್ತೆ ವಿಚಾರಣೆಗೆ ಎತ್ತಿಕೊಂಡು ಸೂಕ್ತ ಎನಿಸಿದ ಆದೇಶವನ್ನು ಹೊರಡಿಸಬಹುದು ಆದರೆ, ಆಯೋಗಕ್ಕೆ ಅರ್ಜಿಸಲ್ಲಿಸಿದ ದಿನದಿಂದ 5 ವರ್ಷದೊಳಗೆ ಅರ್ಜಿದಾರನ ಒಪ್ಪಿಗೆ ಪಡೆದು ಈ ಕೆಲಸ ಮಾಡಬಹುದು.
ಪ್ರಶ್ನೆ 12 : ಯಾವ ಸಂದರ್ಭದಲ್ಲಿ ಇತ್ಯರ್ಥ ಆಯೋಗ ತನ್ನ ಆದೇಶವನ್ನು ಹಿಂದಕ್ಕೆ ಪಡೆದುಕೊಳ್ಳಬಹುದು?
ಉತ್ತರ: 1 ಒಂದು ವೇಳೆ ಅರ್ಜಿದಾರ ಸರಿಯಾದ ದಾಖಲೆಗಳನ್ನು ಒದಗಿಸದೆ ಆಯೋಗಕ್ಕೆ ಮೋಸಮಾಡಿ ಆದೇಶ

ಪಡೆದಿರುವುದು ಬೆಳಕಿಗೆ ಬಂದಲ್ಲಿ ಯಾವ ಹಂತದಲ್ಲಿ ನಕಲಿ ದಾಖಲೆಗಳು ನೀಡಲಾಯಿತು ಎಂಬುದು

ಬಯಲಾಗುತ್ತದೊ ಅಲ್ಲಿಂದ ಮತ್ತೆ ವಿಚಾರಣೆ ಆರಂಭಿಸಲಾಗುವುದು. ಮೂಲ ದಾಖಲೆಗಳು ಲಭಿಸಿದ 2 ವರ್ಷಗಳಲ್ಲಿ ಬದಲಾದ ಆದೇಶ ನೀಡಬೇಕು.

  2 ಅರ್ಜಿದಾರನ ಮೇಲೆ ಬೇರೆ ಪ್ರಕರಣ ದಾಖಲಿಸದಂತೆ ವಿನಾಯಿತಿ ಆದೇಶ ನೀಡಿದ ಮೇಲೆ ಆಯೋಗಕ್ಕೆ ಅರ್ಜಿದಾರ ನೀಡಿರುವ ದಾಖಲೆಗಳು ನಕಲಿ ಎಂದಾಗಲಿ ಅಥವ ನಿಜಾಂಶವನ್ನು ಮುಚ್ಚಿಡಲಾಗಿದೆ ಎಂಬುದು ತಿಳಿದರೆ ಅಥವ ನಿಗದಿತ ಶುಲ್ಕ ಪಾವತಿ ಮಾಡಿಲ್ಲ ಎಂದಾದಲ್ಲಿ ವಿನಾಯಿತಿ ರದ್ದಾಗುತ್ತದೆ.

 

ಪ್ರಶ್ನೆ 13: ಇತ್ಯರ್ಥ ಆಯೋಗವನ್ನು ಯಾರು ಬಳಸಿಕೊಳ್ಳುವಂತಿಲ್ಲ?

ಉತ್ತರ: ಕೆಳಕಂಡ ವ್ಯಕ್ತಿಗಳು ಆಯೋಗವನ್ನು ಬಳಸಿಕೊಳ್ಳುವಂತಿಲ್ಲ.

 • ಯಾವುದೇ ವ್ಯಕ್ತಿ ಎರಡಕ್ಕಿಂತ ಹೆಚ್ಚು ಬಾರಿ ಆಯೋಗದ ಸೇವೆಯನ್ನು ಬಳಸಿಕೊಳ್ಳುತ್ತಿಲ್ಲ.(ಭಾಗ23)
 • ಯಾವುದೇ ವ್ಯಕ್ತಿ ಐಜಿಎಸ್‌ಟಿ ಕಾಯ್ದೆಯಂತೆ ಆಯೋಗದಿಂದ ಶಿಕ್ಷೆಗೆ ಗುರಿಯಾಗಿದ್ದರೆ ಅಥವ
 • ಅಸಹಕಾರ ತೋರಿದ್ದರಿಂದ ಆಯೋಗ ಪ್ರಕರಣವನ್ನು ಸಂಬಂಧಪಟ್ಟ ತೀರ್ಪು ನೀಡುವ ಅಧಿಕಾರ ಇರುವ ಅಧಿಕಾರಿಗೆ ಹಿಂತಿರುಗಿಸಿದ್ದರೆ ಆ ರ್ಜಿದಾರ ಮತ್ತೆ ಅರ್ಜಿ ಸಲ್ಲಿಸುವ ಹಾಗಿಲ್ಲ.

ಪ್ರಶ್ನೆ14: ಇತ್ಯರ್ಥ ಆಯೋಗದ ಅಧಿಕಾರ ವ್ಯಾಪ್ತಿ ಏನು?

ಉತ್ತರ: ಆಯೋಗಕ್ಕೆ ಇರುವ ಅಧಿಕಾರವನ್ನು ಐಜಿಎಸ್‌ಟಿ ಭಾಗ 25 ಮತ್ತು 26ರಲ್ಲಿ ವಿವರಿಸಲಾಗಿದೆ. 1908ರ ನಾಗರಿಕ ನೀತಿ ಸಂಹಿತೆಯಲ್ಲಿ ಸಿವಿಲ್‌ ನ್ಯಾಯಾಲಯಕ್ಕೆ ನೀಡಿರುವ ಅಧಿಕಾರವನ್ನು ಈ ಆಯೋಗಕ್ಕೂ ನೀಡಲಾಗಿದೆ. ಪತ್ತೆಹಚ್ಚುವುದು, ತನಿಖೆ ನಡೆಸುವುದು, ಯಾವುದೇ ವ್ಯಕ್ತಿಯನ್ನು ಹಾಜರಾಗುವಂತೆ ತಾಕೀತು ಮಾಡುವುದು, ಪ್ರಮಾಣಮಾಡಿ ಹೇಳಿಕೆ ನೀಡುವಂತೆ ಮಾಡುವುದು, ಆತನನ್ನು ಪಾಟಿ ಸವಾಲಿಗೆ ಒಡ್ಡುವುದು, ದಾಖಲೆಗಳು ಮತ್ತು ಕಾಗದಪತ್ರಗಳನ್ನು ಒಪ್ಪಿಸುವಂತೆ ಆದೇಶಿಸುವ ಅಧಿಕಾರವಿದೆ. ಆಯೋಗವನ್ನು ಸ್ವಾಯತ್ತ ಸಿವಿಲ್ ನ್ಯಾಯಾಲಯ ಎಂದು ಪರಿಗಣಿಸಲಾಗುವುದು. ನಾಗರಿಕ ನೀತಿ ಸಂಹಿತೆ 1973 ರಂತೆ ಇದನ್ನು ನ್ಯಾಯಾಲಯ ಎಂದು ಕರೆಯಲಾಗಿದೆ. ಇಲ್ಲಿ ನಡೆಯುವ ವಿಚಾರಣೆಯನ್ನು ನ್ಯಾಯಾಲಯದ ವಿಚಾರಣೆ ಎಂದು ಮನ್ನಣೆ ನೀಡಲಾಗಿದೆ. ಭಾರತ ದಂಡ ಸಂಹಿತೆ ಭಾಗ 196 ರಂತೆ ಈ ಆಯೋಗಕ್ಕೆ ಅಧಿಕಾರ ನೀಡಲಾಗಿದೆ. ಆಯೋಗ ತನ್ನ ಕಾರ್ಯಕಲಾಪವನ್ನು ತಾನೇ ನಿಯಂತ್ರಿಸಿಕೊಳ್ಳುವ ಅಧಿಕಾರ ಹೊಂದಿದೆ. ಐಪಿಸಿ ಭಾಗ 193ರಂತೆ ಈ ಆಯೋಗದ ಮುಂದೆ ಸುಳ್ಳು ಸಾಕ್ಷ್ಯ ನೀಡಿದರೆ ಅಥವ ಭಾಗ 228ರಂತೆ ಕಲಾಪಕ್ಕೆ ಅಡ್ಡಿ ಪಡಿಸಿದಲ್ಲಿ ದಂಡ ವಿಧಿಸಲು ಅಧಿಕಾರವಿದೆ. ಆಯೋಗ ಈ ಅಧಿಕಾರವನ್ನು ಯಾವಾಗ ಬೇಕಾದರೂ ಬಳಸಬಹುದು. ಆಯೋಗವು ತಾನು ನೀಡಿದ ಆದೇಶವನ್ನು ಮೂರು ತಿಂಗಳಲ್ಲಿ ಬದಲಿಸುವ ಅಧಿಕಾರ ಹೊಂದಿದೆ. ತಾನು ನೀಡಿದ ಆದೇಶದಲ್ಲಿ ಲೋಪ ಕಂಡುಬಂದಿದೆ ಎಂದಾದರೆ ಸ್ವಯಂ ಸರಿಪಡಿಸುವ ಕೆಲಸ ಕೈಗೊಳ್ಳಬಹುದು. ಆಯೋಗದ ಆದೇಶದಲ್ಲಿರುವ ಲೋಪವನ್ನು ಅರ್ಜಿದಾರ ಅಥವ ಸಂಬಂಧಪಟ್ಟ ಐಇಎಸ್‌ಟಿ ಅಧಿಕಾರಿ ಆಯೋಗದ ಗಮನಕ್ಕೆ ತರಬಹುದು. ಒಂದು ವೇಳೆ ಮೊದಲಿನ ಆದೇಶ ಬದಲಿಸಿದ್ದರಿಂದ ತೆರಿಗೆ ಪ್ರಮಾಣ ಅಥವ ಕಡಿಮೆಯಾಗುವ ಹಾಗಿದ್ದಲ್ಲಿ ಅರ್ಜಿದಾರನನ್ನು ಕರೆಸಿ ಆತನ ಅಭಿಪ್ರಾಯವನ್ನು ಪಡೆಯಲೇಬೇಕು.

*****

ತನಿಖೆ, ಶೋಧ, ವಶ ಮತ್ತು ಬಂಧನ

19.ತನಿಖೆ, ಶೋಧ, ವಶ ಮತ್ತು ಬಂಧನ

ಪ್ರಶ್ನೆ1: ‘ಶೋಧ’ ಎಂದರೆ ಏನು?

ಉತ್ತರ: ಕಾನೂನು ನಿಘಂಟು ಮತ್ತು ಹಲವು ನ್ಯಾಯಾಲಯಗಳಲ್ಲಿ ನೀಡಿರುವ ತೀರ್ಪುಗಳ ಪ್ರಕಾರ ಶೋಧ ಎಂಬ ಪದವನ್ನು ಸರಳ ಭಾಷೆಯಲ್ಲಿ ಹೇಳುವುದಾದರೆ ಸರ್ಕಾರಿ ಯಂತ್ರ ಯಾವುದಾದರೊಂದು ಸ್ಥಳ, ಪ್ರದೇಶ, ವಸ್ತು, ವ್ಯಕ್ತಿಯನ್ನು ಪರಿಶೀಲಿಸಿ ಯಾವುದಾದರೊಂದು ಅಪರಾಧಕ್ಕೆ ಸಂಬಂಧಿಸಿದಂತೆ ಏನಾದರೂ ಮುಚ್ಚಿಡುವ ಕೆಲಸ ನಡೆದಿದ್ದಲ್ಲಿ ಶೋಧ ನಡೆಸಲಾಗುವುದು. ಯಾವುದೇ ವ್ಯಕ್ತಿ, ವಾಹನ,ಪ್ರದೇಶವನ್ನು ಶೋಧಕ್ಕೆ ಒಳಪಡಿಸುವ ಕೆಲಸವನ್ನು ಕಾನೂನು ಪ್ರಕಾರ ಅಧಿಕಾರ ಹೊಂದಿದವರೇ ಮಾಡಬೇಕು.

ಪ್ರಶ್ನೆ2: ‘ತನಿಖೆ’ ಎನ್ನುವುದರ ಅರ್ಥವೇನು?

ಉತ್ತರ: ಎಂಜಿಎಲ್ ಕಾಯ್ದೆಯಲ್ಲಿ ಈ ಪದವನ್ನು ಬಳಸಲಾಗಿದೆ. ಶೋಧ ಎಂಬ ಪದಕ್ಕಿಂತ ಇದು ಮೃದುವಾದ ಕ್ರಿಯೆ. ಇದರಲ್ಲೂ ಯಾವುದೇ ವ್ಯಕ್ತಿಯ ಅಥವ ಸಂಸ್ಥೆಗೆ ಸೇರಿದ ಪ್ರದೇಶ, ಸರಕು ಸಾಗಿಸುವ ಪ್ರದೇಶಕ್ಕೆ ಹೋಗಿ ತನಿಖೆನಡೆಸುವುದು. ಗೋದಾಮು, ದಾಸ್ತಾನು ಮಳಿಗೆ ಸೇರಿದಂತೆ ಯಾವುದೇ ಪ್ರದೇಶಕ್ಕೆ ಭೇಟಿ ನೀಡಿ ತನಿಖೆ ನಡೆಸಬಹುದು.

ಪ್ರಶ್ನೆ3: ಯಾವ ಸಂದರ್ಭದಲ್ಲಿ ಯಾರು ತನಿಖೆಗೆ ಆದೇಶ ನೀಡಬಹುದು?

ಉತ್ತರ: ಎಂಜಿಎಲ್ ಕಾಯ್ದೆ ಭಾಗ 60 ರಂತೆ ಜಂಟಿ ಆಯುಕ್ತರು ಅಥವ ಅವರ ಹಿರಿಯ ಅಧಿಕಾರಿಗಳು ಯಾವುದೇ ವ್ಯಕ್ತಿಯ ಪ್ರದೇಶಕ್ಕೆ ಭೇಟಿ ನೀಡಿ ತನಿಖೆ ನಡೆಸುವಂತೆ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿಗಳಿಗೆ ಲಿಖಿತ ಆದೇಶ ನೀಡಬಹುದು. ಅವರು ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುವರು,

 • ತೆರಿಗೆ ತಪ್ಪಿಸಲು ಯಾವುದೇ ಸರಬರಾಜನ್ನು ಮುಚ್ಚಿಡಲಾಗಿದೆಯೇ.
 • ಮುಚ್ಚಿಟ್ಟ ಸರಕುಗಳು ಏನಾದರೂ ಇದೆಯೇ
 • ಹೆಚ್ಚುವರಿ ಇನ್‌ಪುಟ್‌ ತೆರಿಗೆ ಕ್ರೆಡಿಟ್‌ ಪಡೆಯಲಾಗಿದೆಯೇ
 • ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯಂತೆ ತೆರಿಗೆಯ ವಂಚನೆ ನಡೆದಿದೆಯೇ
 • ಸಾಗಣೆಯಲ್ಲಿದ್ದು ತೆರಿಗೆ ವಂಚಿಸುವ ಸಂಭವ ಇರುವ ಸರಕು ಎಲ್ಲಿಯಾದರೂ ದಾಸ್ತಾನು

ಮಾಡಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸಿ ಸಾರಿಗೆ ವಾಹನ ಹೊಂದಿದವರು ಅಥವ ದಾಸ್ತಾನು ಮಳಿಗೆ ಮಾಲೀಕರ ಪ್ರದೇಶದಲ್ಲಿ ತನಿಖೆ ನಡೆಸುವುದು.

ಪ್ರಶ್ನೆ4: ಕಾಯ್ದೆಗೆ ಅನುಗುಣವಾಗಿ ಸೂಕ್ತ ಅಧಿಕಾರಿ ಯಾವುದೇ ವ್ಯಕ್ತಿಯ ಆಸ್ತಿ/ಪ್ರದೇಶವನ್ನು ಈ ನಿಯಮಗಳಿಗೆ ಅನುಗುಣವಾಗಿ ತನಿಖೆ ನಡೆಸಲು ಆದೇಶಿಸಬಹುದೇ?

ಉತ್ತರ: ಇಲ್ಲ. ಸಿಜಿಎಸ್‌ಟಿ/ ಎಸ್‌ಜಿಎಸ್‌ಟಿ ಅಧಿಕಾರಿಗಳು ಮಾತ್ರ ಕೆಳಕಂಡ ಪ್ರದೇಶಗಳಲ್ಲಿ ತನಿಖೆ ನಡೆಸಬಹುದು.

 • ತೆರಿಗೆದಾರ ವ್ಯವಹಾರ ನಡೆಸುವ ಯಾವುದೇ ಸ್ಥಳ.
 • ನೋಂದಾಯಿತ ತೆರಿಗೆದಾರ ಅಲ್ಲದಿದ್ದರೂ ಸರಕು ಸಾಗಿರುವ ಕೆಲಸ ಕೈಗೊಂಡಿದ್ದರೆ ಆತ ವ್ಯವಹಾರ ನಡೆಸುವ ಸ್ಥಳ.
 • ಗೋದಾಮು ಅಥವ ದಾಸ್ತಾನು ಮಳಿಗೆ ಅಥವ ವ್ಯಾಪಾರ ನಡೆಸುವ ಸ್ಥಳದಲ್ಲಿ ತನಿಖೆ ನಡೆಸಬಹುದು.

ಪ್ರಶ್ನೆ5: ಎಂಜಿಎಲ್‌ ಕಾಯ್ದೆಯಂತೆ ಯಾರು ಶೋಧ ಮತ್ತು ವಶಕ್ಕೆ ಆದೇಶಿಸಬಹುದು?

ಉತ್ತರ: ಜಂಟಿ ಆಯುಕ್ತರು ಹಾಗೂ ಅವರ ಮೇಲ್ಪಟ್ಟ ಅಧಿಕಾರಿಗಳು ಶೋಧಕ್ಕೆ ಮತ್ತು ವಶಕ್ಕೆ ಲಿಖಿತ ಆದೇಶ ನೀಡಬೇಕು. ಆದರೆ ಅದಕ್ಕೆ ಮುನ್ನ ಹಿರಿಯ ಅಧಿಕಾರಿ ತೆರಿಗೆ ಸಂಬಂಧಿಸಿದಂತೆ ದಾಖಲೆ, ಕಡತಗಳು ಮತ್ತು ಇತರ ಸಂಬಂಧಪಟ್ಟ ಕಾಗದಪತ್ರಗಳನ್ನು ಒಂದು ಸ್ಥಳದಲ್ಲಿ ಮುಚ್ಚಿಡಲಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಂಡು ಶೋಧ ಮತ್ತು ವಶಪಡಿಸಿಕೊಳ್ಳಲು ಆದೇಶಿಸಬಹುದು.

ಪ್ರಶ್ನೆ6: ‘ನಂಬುವುದಕ್ಕೆ ಕಾರಣಗಳು’ ಎಂದರೆ ಏನರ್ಥ?

ಉತ್ತರ: ನಂಬುವುದಕ್ಕೆ ಕಾರಣಗಳು ಎಂದರೆ ಕೆಲವು ವಿಷಯಗಳು ಗೊತ್ತಿರುತ್ತದೆ. ಆದರೆ ಎಲ್ಲವೂ ನೇರವಾಗಿ ತಿಳಿದಿರುವುದಿಲ್ಲ. ಇದು ಹೀಗಿರಬಹುದು ಎಂದು ಹೇಳುವ ಹಾಗೆ ಇರುತ್ತದೆ. ಭಾರತ ದಂಡ ಸಂಹಿತೆಯ ಭಾಗ26 ರಂತೆ ನಂಬುವುದಕ್ಕೆ ಕಾರಣಗಳು ಎಂದಾಗ ಅದು ವ್ಯಕ್ತಿಗತ ಅಲ್ಲ. ಬುದ್ಧಿವಂತಿಕೆಯ ಲೆಕ್ಕಾಚಾರದ ಮೇಲೆ ಹೀಗಿರಬಹುದು ಎಂದು ತೀರ್ಮಾನಕ್ಕೆ ಬರಲು ಅವಕಾಶವಿದೆ. ಪ್ರಾಮಾಣಿಕ ಮತ್ತು ವಿವೇಕ ಹೊಂದಿದ ವ್ಯಕ್ತಿ ಸಂಬಂಧಪಟ್ಟ ಮಾಹಿತಿ ಪಡೆದು ಹಾಗೂ ಸಂದರ್ಭವನ್ನು ಅವಲೋಕಿಸಿ ಕೆಲವು ವಿಷಯಗಳನ್ನು ನಂಬುವುದಕ್ಕೆ ಆಧಾರ ಹೊಂದಿರುತ್ತಾನೆ.

ಪ್ರಶ್ನೆ7:ಸೂಕ್ತಅಧಿಕಾರಿತನಿಖೆ ಅಥವಾ ಶೋಧಕ್ಕೆ ಹಾಗೂ ವಶಪಡಿಸಿಕೊಳ್ಳಲು ಆದೇಶ ನೀಡುವ ಮುನ್ನ ನಂಬುವುದಕ್ಕೆ ಕಾರಣಗಳನ್ನು ಲಿಖಿತದಲ್ಲಿ ದಾಖಲಿಸುವುದು ಕಡ್ಡಾಯವೇ?

ಉತ್ತರ: ಹಾಗೇನಿಲ್ಲ. ಅಧಿಕಾರಿ ಬರವಣೆಗೆಯಲ್ಲಿ ಇದನ್ನು ಇಡಬೇಕೆಂಬ ನಿಯಮ ಇಲ್ಲ. ಆದರೆ ತಾನು ನಿರ್ಧಾರಕ್ಕೆ ಬರಲು ನಂಬಿದ ಕಾರಣಗಳೇನು ಎಂಬುದನ್ನು ತಾನೇ ಮನವರಿಕೆ ಮಾಡಿಕೊಂಡು ಶೋಧ ಯಾವ ಕಾರಣಕ್ಕೆ ಬೇಕು ಎಂಬುದನ್ನು ವಿವರಿಸಬೇಕಾಗುತ್ತದೆ. ಪ್ರತಿಪ್ರಕರಣದಲ್ಲೂ ಕಾರಣವನ್ನು ದಾಖಲಿಸಬೇಕಿಲ್ಲ. ಆದರೆ ಶೋಧಕ್ಕೆ ಆದೇಶಿಸುವ ಮುನ್ನ ಮಾಹಿತಿ/ ದಾಖಲೆಯ ಸ್ವರೂಪವನ್ನು ಪೂರ್ವಭಾವಿಯಾಗಿ ದಾಖಲಿಸಿ ನಂತರ ಶೋಧ ಮತ್ತು ವಶಕ್ಕೆ ವಾರಂಟ್‌ ಹೊರಡಿಸುವುದು ಸೂಕ್ತ.

ಪ್ರಶ್ನೆ8: ಸರ್ಚ್‌ವಾರೆಂಟ್‌ಎಂದರೇನು? ಅದರಲ್ಲಿ ಏನು ವಿಷಯ ಇರುತ್ತದೆ?

ಉತ್ತರ: ಶೋಧ ನಡೆಸುವುದಕ್ಕೆ ಲಿಖಿತದಲ್ಲಿ ನೀಡುವ ಆದೇಶವೇ ಸರ್ಚ್ ವಾರಂಟ್. ಇದನ್ನು ಜಂಟಿ ಆಯುಕ್ತರು ಅಥವ ಅವರ ಹಿರಿಯ ಅಧಿಕಾರಿಗಳು ಹೊರಡಿಸಬಹುದು. ಸರ್ಚ್ ವಾರಂಟ್ ನಲ್ಲಿ ನಂಬುವುದಕ್ಕೆ ಕಾರಣಗಳೇನು ಎಂಬುದನ್ನು ಸೂಚಿಸುವಂತಿರಬೇಕು. ಅದರಲ್ಲಿ ಕೆಳಕಂಡ ಅಂಶಗಳಿರಬೇಕು.

 • ಕಾಯ್ದೆಯಂತೆ ಉಲ್ಲಂಘನೆಯಾಗಿರುವುದು
 • ಶೋಧ ಮಾಡಬೇಕಾದ ಸ್ಥಳ
 • ಶೋಧ ಕೈಗೊಳ್ಳಬೇಕಾದ ಅಧಿಕಾರಿ ಮತ್ತು ಅವರ ಹುದ್ದೆ.
 • ಶೋಧಕ್ಕೆ ಆದೇಶ ಹೊರಡಿಸಿದ ಅಧಿಕಾರಿಯ ಹೆಸರು ಮತ್ತು ಹುದ್ದೆ ಹಾಗೂ ವೃತ್ತಾಕಾರದ ಸೀಲು
 • ನೋಟಿಸ್‌ ಹೊರಡಿಸಿದ ದಿನಾಂಕ ಮತ್ತು ಸ್ಥಳ
 • ಸರ್ಚ್‌ವಾರೆಂಟ್‌ ಕ್ರಮಸಂಖ್ಯೆ
 • ವಾರಂಟ್‌ ನಿಗದಿಯಾದ ದಿನಗಳು ಅಂದರೆ ಒಂದು ಅಥವ ಎರಡು ದಿನಗಳು.

ಪ್ರಶ್ನೆ9: ಎಂಜಿಎಲ್‌ ಕಾಯ್ದೆಯಲ್ಲಿ ಯಾವಾಗ ಸರಕುಗಳನ್ನು ವಶಪಡಿಸಿಕೊಳ್ಳಬಹುದು?

ಉತ್ತರ: ಜಿಎಸ್‌ಟಿ ಮಾದರಿ ಕಾನೂನಿನ ಭಾಗ 70ರಂತೆ ಯಾವುದೇ ವ್ಯಕ್ತಿ ಕೆಳಕಂಡ ಕೆಲಸಗಳನ್ನು ಮಾಡಿದರೆ ಸರಕುಗಳನ್ನು ವಶಪಡಿಸಿಕೊಳ್ಳಬಹುದು.

 • ತೆರಿಗೆ ವಂಚನೆ ಮಾಡುವ ಕಾಯ್ದೆಗೆ ವಿರುದ್ಧವಾಗಿ ಸರಕುಗಳನ್ನು ರವಾನಿಸುವ ಕೆಲಸ ಮಾಡಿದರೆ,
 • ಯಾವ ಸರಕುಗಳಿಗೆ ತೆರಿಗೆಯ ಲೆಕ್ಕ ತೋರಿಸದೆ ಇದ್ದಲ್ಲಿ.
 • ನೋಂದಣೆಗೆ ಅರ್ಜಿಯನ್ನೂ ಸಲ್ಲಿಸದೆ ಯಾವುದೇ ಸರಕನ್ನು ಸಾಗಿಸಿ ತೆರಿಗೆಯನ್ನು ಪಾವತಿಸಿಲ್ಲ ಎಂದರೆ,
 • ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿದಾಗ.

ಪ್ರಶ್ನೆ 10: ಕಾನೂನುಬದ್ಧವಾಗಿ ಶೋಧ ಕೈಗೊಳ್ಳುವ ಅಧಿಕಾರಿ ಯಾವ ಅಧಿಕಾರವನ್ನು ಚಲಾಯಿಸಬಹುದು?

ಉತ್ತರ: ಶೋಧಕೈಗೊಳ್ಳುವ ಅಧಿಕಾರಿ ಯಾವುದೇ ಸರಕುಗಳಿಗಾಗಿ ಶೋಧ ನಡೆಸಿ ವಶಪಡಿಸಿಕೊಳ್ಳಬಹುದು. (ಯಾವುದಕ್ಕೆ ತೆರಿಗೆ ಪಾವತಿ ಮಾಡಿಲ್ಲವೊ) ಅಲ್ಲದೆ ಎಂಜಿಎಲ್ ಕಾಯ್ದೆಯಂತೆ ವಿಚಾರಣೆಗೆ ದಾಖಲೆ, ಕಾಗದಪತ್ರಗಳನ್ನು ವಶಪಡಿಸಿಕೊಳ್ಳಬಹುದು. ಶೋಧ ನಡೆಸುವ ಕಾಲದಲ್ಲಿ ಯಾವುದಾದರೂ ಕೋಣೆಗೆ ಬೀಗ ಹಾಕಿಟ್ಟಿದ್ದು, ಒಳಗೆ ಪ್ರವೇಶಿಸಲು ಅಡ್ಡಿ ಮಾಡಿದ್ದಲ್ಲಿ ಬೀಗ ಒಡೆದು ಒಳಗೆ ಹೋಗುವ ಅಧಿಕಾರ ಇರುತ್ತದೆ. ಅದೇ ರೀತಿ ಶೋಧದ ಕಾಲದಲ್ಲಿ ಯಾವುದೇ ಅಲ್ಮೇರಾ ಸೇರಿದಂತೆ ಎಲ್ಲವನ್ನೂ ಒಡೆದು ನೋಡಬಹುದು. ಮುಚ್ಚಿಟ್ಟಿರುವುದು ಕಂಡು ಬಂದಲ್ಲಿ ಕಾಗದಪತ್ರ, ದಾಖಲೆಗಳು ಸೇರಿದಂತೆ ಎಲ್ಲವನ್ನೂ ವಶಪಡಿಸಿಕೊಳ್ಳಬಹುದು. ಒಂದು ವೇಳೆ ಆವರಣ ಪ್ರವೇಶಕ್ಕೆ ಅಡ್ಡಿ ಮಾಡಿದ್ದಲ್ಲಿ ಇಡೀ ಆವರಣವನ್ನು ಸೀಲ್ ಮಾಡಬಹುದು.

ಪ್ರಶ್ನೆ 11: ಶೋಧ ನಡೆಸಲು ಇರುವ ವಿಧಾನ ಏನು?

ಉತ್ತರ: ಸಿಆರ್‌ಪಿಸಿ ಭಾಗ 100ರಲ್ಲಿ ಹೇಳಿರುವಂತೆ ಶೋಧ ನಡೆಸಬೇಕೆಂದು ಎಂಜಿಎಲ್‌ ಭಾಗ60(8)ರಲ್ಲಿ ಹೇಳಲಾಗಿದೆ.

ಪ್ರಶ್ನೆ 12: ಶೋಧ ಕಾರ್ಯಕೈಗೊಂಡಾಗ ಮೂಲಭೂತವಾಗಿ ಯಾವುದನ್ನು ಗಮನಿಸಬೇಕು?

ಉತ್ತರ: ಕೆಳಕಂಡ ನೀತಿಯನ್ನು ಶೋಧಕಾಲದಲ್ಲಿ ಅನುಸರಿಸಬೇಕು:

 • ಸೂಕ್ತಅಧಿಕಾರಿಬರವಣಿಗೆಯಲ್ಲಿಸರ್ಚ್‌ವಾರಂಟ್‌ ನೀಡದೆ ಶೋಧ ಕಾರ್ಯ ಕೈಗೊಳ್ಳಬಾರದು.
 • ಮನೆಗಳಲ್ಲಿ ಶೋಧ ಕಾರ್ಯ ನಡೆಯುವಾಗ ಒಬ್ಬರು ಮಹಿಳಾ ಅಧಿಕಾರಿ ತಂಡದಲ್ಲಿರಬೇಕು.
 • ಆವರಣದಲ್ಲಿರುವ ವ್ಯಕ್ತಿಗೆ ಶೋಧ ಕಾರ್ಯ ಆರಂಭಿಸುವ ಮುನ್ನ ಅಧಿಕಾರಿಗಳು ತಮ್ಮ ಗುರುತಿನ ಚೀಟಿಯನ್ನು ತೋರಿಸಬೇಕು.
 • ಶೋಧ ಆರಂಭಿಸುವ ಮುನ್ನ ಸರ್ಚ್‌ವಾರೆಂಟ್‌ ತೋರಿಸಿ ಅದಕ್ಕೆ ಆವರಣದ ಮುಖ್ಯಸ್ಥರಿಂದ ವಾರಂಟ್ ನೋಡಿರುವುದಾಗಿ ಬರೆಸಿಕೊಂಡು ಅವರ ಸಹಿ ಪಡೆಯಬೇಕು. ಅದರೊಂದಿಗೆ ಇಬ್ಬರು ಸಾಕ್ಷಿದಾರರ ಸಹಿ ಬೇಕು.
 • ಶೋಧ ನಡೆಸುವಾಗ ಅದೇ ಪ್ರದೇಶದ ಇಬ್ಬರು ಸ್ವತಂತ್ರ ಸಾಕ್ಷ್ಯದಾರರನ್ನು ಮುಂದಿಟ್ಟುಕೊಂಡು ಕೆಲಸ ಮುಂದುವರಿಸಬೇಕು.ಅವರಿಗೆ ಶೋಧದ ಉದ್ದೇಶ ವಿವರಿಸಬೇಕು. ಒಂದು ವೇಳೆ ಯಾರೂ ಇಲ್ಲ ಅಥವ ಸಾಕ್ಷಿಗಳು ಒಪ್ಪಲಿಲ್ಲ ಎಂದರೆ ಬೇರೆ ಪ್ರದೇಶದವರೂ ಆಗಬಹುದು.
 • ಶೋಧ ಆರಂಭಿಸುವ ಮುನ್ನ ಸಾಕ್ಷಿದಾರರು ಮತ್ತು ಅಧಿಕಾರಿಗಳ ತಂಡ ಆವರಣದ ಮುಖ್ಯಸ್ಥರ ಮುಂದೆ ಹಾಜರಾಗಿ ತಮ್ಮ ಶೋಧಕ್ಕೆ ಒಡ್ಡಿಕೊಳ್ಳಬೇಕು. ಅವರ ಬಳಿ ಏನೂ ಇಲ್ಲ ಎಂಬುದನ್ನು ಆವರಣದ ಮುಖ್ಯಸ್ಥ ಖಾತ್ರಿ ಮಾಡಿಕೊಂಡು ಶೋಧಕಾರ್ಯಕ್ಕೆ ಅವಕಾಶ ನೀಡಬಹುದು. ಅದೇ ರೀತಿ ಶೋಧ ಕಾರ್ಯ ಮುಕ್ತಾಯಗೊಂಡ ಮೇಲೆ ಅಧಿಕಾರಿಗಳು ಮತ್ತು ಸಾಕ್ಷಿದಾರರು ಆವರಣದ ಮುಖ್ಯಸ್ಥರ ಮುಂದೆ ಹಾಜರಾಗಿ ತಮ್ಮನ್ನು ಪರಿಶೀಲಿಸುವಂತೆ ಹೇಳಬೇಕು.
 • ಶೋಧಕಾರ್ಯ ನಡೆಯುತ್ತಿರುವಾಗಲೇ ಪಂಚನಾಮೆ/ಮಹಜರ್‌ ಬರೆಯಬೇಕು. ವಶಪಡಿಸಿಕೊಂಡ ಎಲ್ಲ ದಾಖಲೆಗಳು, ಕಾಗದಪತ್ರಗಳು, ಸರಕುಗಳು ಸೇರಿದಂತೆ ಎಲ್ಲವುಗಳ ವಿವರವನ್ನು ಅದರಲ್ಲಿ ಬರೆಯಬೇಕು. ವಶಕ್ಕೆ ತೆಗೆದುಕೊಂಡ ಎಲ್ಲ ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಿ ಪಂಚನಾಮೆಗೆ ಲಗತ್ತಿಸಬೇಕು. ಇವುಗಳಿಗೆ ಶೋಧ ನಡೆಸಿದ ಅಧಿಕಾರಿಗಳು, ಸಾಕ್ಷಿದಾರರು ಮತ್ತು ಆವರಣದ ಮುಖ್ಯಸ್ಥರು ಸಹಿ ಮಾಡಬೇಕು. ಶೋಧ ನಡೆಸಲು ಅಧಿಕಾರ ಪಡೆದವರೇ ಈ ಕೆಲಸ ಕೈಗೊಳ್ಳಬೇಕು.
 • ಶೋಧ ಕಾರ್ಯ ಮುಕ್ತಾಯಗೊಂಡ ಮೇಲೆ ಅದನ್ನು ನೀಡಿದ ಅಧಿಕಾರಿ ವಾರಂಟ್‌ ಮೂಲಪ್ರತಿಯನ್ನು ವರದಿಯೊಂದಿಗೆ ಹಿಂತಿರುಗಿಸಬೇಕು.
 • ಸರ್ಜ್ ವಾರಂಟ್ ನೀಡಿದ ಆಧಿಕಾರಿ ಇವುಗಳ ಕಡತವನ್ನು ನೋಡಿಕೊಳ್ಳಬೇಕು. ಪ್ರತಿಯೊಂದು ಸರ್ಚ್ ವಾರಂಟ್‌ ನೀಡಿದ್ದು, ಬಳಕೆ ಮಾಡಿದ್ದು, ಅವುಗಳು ಬಳಕೆಯಾದ ಮೇಲೆ ಹಿಂದಕ್ಕೆ ಬಂದಿದ್ದು ಎಲ್ಲ ವಿವರ ಕಡತದಲ್ಲಿರಬೇಕು.
 • ಪಂಚನಾಮೆ/ ಮಹಜರ್ ಹಾಗೂ ವಶಪಡಿಸಿಕೊಂಡ ವಸ್ತುಗಳು ಮತ್ತು ಕಾಗದಪತ್ರ, ದಾಖಲೆಗಳ ವಿವರ ಇರುವ ಪಟ್ಟಿಯ ಪ್ರತಿಯನ್ನು ಆವರಣದ ಮುಖ್ಯಸ್ಥರಿಗೆ ಶೋಧ ನಡೆಸಿರುವುದಕ್ಕೆ ದಾಖಲೆಯಾಗಿ ನೀಡಬೇಕು.

ಪ್ರಶ್ನೆ13: ಬೇರೆ ಯಾವುದೇ ಸಂದರ್ಭಗಳಲ್ಲಿ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿಗಳು ವ್ಯಾಪಾರದ ಸ್ಥಳಕ್ಕೆ ಬರಬಹುದೇ?

ಉತ್ತರ: ಬರಬಹುದು. ಎಂಜಿಎಲ್‌ ಕಾಯ್ದೆ ಭಾಗ 64ರಂತೆ ವ್ಯಾಪಾರದ ಸ್ಥಳಕ್ಕೆ ಬರಬಹುದು. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿಗಳು ಅಥವ ಕಾಸ್ಟ್‌ ಅಕೌಂಟೆಂಟ್ ಅಥವ ಚಾರ್ಟೆಡ್ ಅಕೌಂಟೆಂಟ್‌ಲೆಕ್ಕ ತಪಾಸಣೆಗೆ ಬರಬಹುದು. ಭಾಗ 50ರಂತೆ ವಾರೆಂಟ್ ಇಲ್ಲದೆ ಲೆಕ್ಕತಪಾಸಣೆ, ಪರಿಶೀಲನೆ, ಲೆಕ್ಕ ತಾಳೆ ಹಾಕಲು ಬರಬಹುದು. ಇದನ್ನು ಸರ್ಕಾರಕ್ಕೆ ಬರಬೇಕಾದ ಆದಾಯವನ್ನು ರಕ್ಷಿಸುವುದಕ್ಕಾಗಿ ಕೈಗೊಳ್ಳಬೇಕಾಗುತ್ತದೆ. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಹೆಚ್ಚುವರಿ/ ಜಂಟಿ ಆಯುಕ್ತರು ಲಿಖಿತದಲ್ಲಿ ಆಡಿಟ್‌ ಮತ್ತು ಲೆಕ್ಕಪತ್ರ ಪರಿಶೀಲನೆಗೆ ಅರ್ಜಿದಾರ ನೋಂದಾಯಿಸದೇ ಇರುವ ಸ್ಥಳಕ್ಕೂ ಹೋಗುವಂತೆ ಆದೇಶ ನೀಡಬಹುದು.

ಪ್ರಶ್ನೆ14: ಯಾವಾಗ ಸರ್ಚ್‌ ಕಾನೂನು ಬಾಹಿರ ಎಂದಾಗುತ್ತದೆ? ಆ ಸರ್ಚ್‌ನಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳನ್ನು ವಿಚಾರಣೆ ಕಾಲದಲ್ಲಿ ಬಳಸಿಕೊಳ್ಳಬಹುದೇ?

ಉತ್ತರ: ಅರ್ಹ ಅಧಿಕಾರಿ ಸರ್ಚ್ ವಾರಂಟ್ ನೀಡದೆ ಇರುವಾಗ ಶೋಧ ನಡೆದರೆ ಅದು ಕಾನೂನುಬಾಹಿರ. ಅದರೆ ಆ ಸಮಯದಲ್ಲಿ ಸಂಗ್ರಹಿಸಿದ ಮತ್ತು ವಶಪಡಿಸಿಕೊಂಡ ಕಾಗದಪತ್ರಗಳು ಮತ್ತು ದಾಖಲೆಗಳನ್ನು ವಿಚಾರಣೆ ಕಾಲದಲ್ಲಿ ಬಳಸಿಕೊಳ್ಳಬಹುದು. ಅಕ್ರಮಶೋಧ ಎಂಬ ಕಾರಣಕ್ಕೆ ಆರೋಪಿತ ವ್ಯಕ್ತಿ ಯಾವುದೇ ಲಾಭ ಪಡೆಯಲು ಬರುವುದಿಲ್ಲ.

ಪ್ರಶ್ನೆ 15: ‘ವಶಪಡಿಸಿಕೊಳ್ಳುವುದು’ ಎಂದರೇನು?

ಉತ್ತರ: ವಶಪಡಿಸಿಕೊಳ್ಳುವುದು ಎಂಬುದನ್ನು ಜಿಎಸ್‌ಟಿಯಲ್ಲಿ ವ್ಯಾಖ್ಯಾನಿಸಿಲ್ಲ. ಕಾನೂನು ನಿಘಂಟುವಿನಲ್ಲಿ ಕಾನೂನುಬದ್ಧವಾಗಿ ಒಬ್ಬ ಅಧಿಕಾರಿ ಯಾವುದೇ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳುವುದು ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಯಾವುದೇ ಆಸ್ತಿ, ವಸ್ತುವನ್ನು ಅದನ್ನು ಹೊಂದಿದವರ ಇಚ್ಛೆಗೆ ವಿರುದ್ಧವಾಗಿ ಸ್ವಾಧೀನಕ್ಕೆ ತೆಗೆದುಕೊಳ್ಳುವುದು.

ಪ್ರಶ್ನೆ 16: ಎಂಜಿಎಲ್ ಕಾಯ್ದೆಯಂತೆ ಸರಕು ಮತ್ತು ವಾಹನಗಳನ್ನು ಹಿಡಿದಿಟ್ಟುಕೊಳ್ಳಲು ಅಧಿಕಾರ ಇದೆಯೇ?

ಉತ್ತರ: ಹೌದು. ಕಾಯ್ದೆಯಂತೆ ತೆರಿಗೆ ಪಾವತಿಸದೇ ಇದ್ದ ಸರಕು ಮತ್ತು ಅದನ್ನು ಸಾಗಿಸಲು ಸಿದ್ಧವಾಗಿದ್ದ ವಾಹನವನ್ನು ಮಾಲು ಸಮೇತ ಅಧಿಕಾರಿ ಹಿಡಿದಿಟ್ಟುಕೊಳ್ಳಬಹುದು. ಅದೇ ರೀತಿ ತೆರಿಗೆ ನೀಡದೆ ದಾಸ್ತಾನು ಮಾಡಿದ್ದ ಸರಕನ್ನು ವಶಪಡಿಸಿಕೊಳ್ಳಬಹುದು. ಆದರೆ ಒಮ್ಮೆ ಅದಕ್ಕೆ ಸಂಬಂಧಿಸಿದ ತೆರಿಗೆ ಮತ್ತಿತರ ಶುಲ್ಕವನ್ನು ಪಾವತಿಸಿದರೆ ಸರಕು ಮತ್ತು ವಾಹನವನ್ನು ಬಿಡುಗಡೆಮಾಡಬೇಕು.

ಪ್ರಶ್ನೆ 17: ಕಾನೂನು ರೀತ್ಯ ಮುಟ್ಟುಗೋಲು ಮತ್ತು ಹಿಡಿದಿಟ್ಟುಕೊಳ್ಳುವಿಕೆ – ಇವುಗಳ ನಡುವಣ ವ್ಯತ್ಯಾಸವೇನು?

ಉತ್ತರ: ಹಿಡಿದಿಟ್ಟುಕೊಳ್ಳುವಿಕೆ ಎಂದರೆ ಕಾನೂನು ಬದ್ಧವಾಗಿ ಆದೇಶ/ನೋಟಿಸ್‌ ಮೂಲಕ ವಸ್ತುವನ್ನು ಇಟ್ಟುಕೊಂಡು ಆ ಸಮಯದಲ್ಲಿ ಅದರ ಮಾಲೀಕರಿಗೆ ನೀಡದೇ ಇರುವುದು. ಮುಟ್ಟುಗೋಲು ಎಂದರೆ ಇಡೀ ವಸ್ತುವನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವುದು. ಹಿಡಿದಿಟ್ಟುಕೊಳ್ಳುವ ಆದೇಶವನ್ನು ಯಾವುದೇ ವಸ್ತು ತೆರಿಗೆ ಪಾವತಿಯಿಂದ ದೂರ ಉಳಿದಿದ್ದು ವಶಕ್ಕೆ ತೆಗೆದುಕೊಳ್ಳಬೇಕಾಗುವಾಗ ನೀಡುವುದು ಸೂಕ್ತ. ತನಿಖೆ ಮತ್ತು ಪರಿಶೀಲನೆ ನಡೆಸಿದ ಮೇಲೆ ಯಾವುದನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೆ ಸಾಕಷ್ಟು ಕಾರಣಗಳಿವೆಯೋ ಎಂದಾಗ ಮುಟ್ಟುಗೋಲು ಹಾಕಿಕೊಳ್ಳಬಹುದು.

ಪ್ರಶ್ನೆ 18: ಎಂಜಿಎಲ್‌ನಲ್ಲಿ ಶೋಧ ಮತ್ತು ವಶಕ್ಕೆ ಇರುವ ರಕ್ಷಣೆಗಳೇನು?

ಉತ್ತರ: ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ 60 ಭಾಗನಂತೆ ಶೋಧ ಮತ್ತು ವಶಕ್ಕೆ ಸಂಬಂಧಿಸಿದಂತೆ ಕೆಲವು ರಕ್ಷಣೆಗಳನ್ನು ಒದಗಿಸಲಾಗಿದೆ. ಅವುಗಳು ಈ ರೀತಿ ಇವೆ:

 • ವಶಪಡಿಸಿಕೊಂಡ ಸರಕು ಮತ್ತು ದಾಖಲೆಗಳನ್ನು ಪರಿಶೀಲನೆಯ ನಂತರ ಇಟ್ಟುಕೊಳ್ಳಬಾರದು.
 • ವಶಪಡಿಸಿಕೊಳ್ಳುವ ಮುನ್ನ ಅವುಗಳ ನಕಲು ಪ್ರತಿಯನ್ನು ತೆರಿಗೆದಾರರು ಪಡೆದುಕೊಳ್ಳಬಹುದು.
 • ವಶಪಡಿಸಿಕೊಂಡ ಸರಕುಗಳಿಗೆ 60 ದಿನಗಳಲ್ಲಿ ನೋಟಿಸ್ ಕೊಡದೆ ಇದ್ದಲ್ಲಿ ಹಿಂತಿರುಗಿಸಬೇಕು. ಈ 60 ದಿನಗಳನ್ನು ಸಕಾರಣವಿದ್ದಲ್ಲಿ 6 ತಿಂಗಳವರೆಗೆ ವಿಸ್ತರಿಸಬಹುದು.
 • ಸರಕು ವಶಪಡಿಸಿಕೊಳ್ಳುವ ಅಧಿಕಾರಿ ಎಲ್ಲ ವಸ್ತುಗಳ ಪಟ್ಟಿಯನ್ನು ತಯಾರಿಸಬೇಕು.
 • ಹಾಳಾಗುವಂತಿರುವ ಹಾಗೂ ಅಪಾಯಕಾರಿ ವಸ್ತುಗಳಾದರೆ ವಶಪಡಿಸಿಕೊಂಡ ಮೇಲೆ ಅವುಗಳನ್ನು ವಿಲೇವಾರಿ ಮಾಡಿಬಿಡಬೇಕು.
 • ಸಿಆರ್‌ಪಿಸಿ ಕಾಯ್ದೆ ಶೋಧ ಮತ್ತು ವಶಕ್ಕೆ ಅನ್ವಯವಾಗುತ್ತದೆ. ಆದರೆ ಭಾಗ 165 ಉಪಖಂಡ 5ರಲ್ಲಿ ಪ್ರಮುಖ ಬದಲಾವಣೆ ಇದೆ. ಪೊಲೀಸರು ವಶಪಡಿಸಿಕೊಂಡ ವಸ್ತು ಮತ್ತು ದಾಖಲೆಗಳ ವಿವರವನ್ನು ಸಮೀಪದ ಮ್ಯಾಜಿಸ್ಟ್ರೇಟ್ ಅವರಿಗೆ ತಲುಪಿಸುತ್ತಾರೆ. ಆದರೆ ಇಲ್ಲಿ ಎಲ್ಲ ವಿವರಗಳನ್ನು ಛಾಯಾಪ್ರತಿಗಳೊಂದಿಗೆ ಪ್ರಧಾನ ಆಯುಕ್ತರು/ ಆಯುಕ್ತರು ಸಿಜಿಎಸ್‌ಟಿ/ ಎಸ್‌ಜಿಎಸ್‌ಟಿ ಅವರಿಗೆ ಅಧಿಕಾರಿ ನೀಡಬೇಕು.

ಪ್ರಶ್ನೆ 19: ತೆರಿಗೆ ಪಾವತಿ ಮಾಡಿದ ಸರಕುಗಳನ್ನು ಸಾಗಿಸುವಾಗ ಯಾವುದಾದರೂ ವಿಶೇಷ ದಾಖಲೆಯನ್ನು ತೆಗೆದುಕೊಂಡು ಹೋಗಬೇಕೆ?

ಉತ್ತರ: ಎಂಜಿಎಲ್‌ ಕಾಯ್ದೆ ಭಾಗ 61ರಂತೆ 50ಸಾವಿರ ರೂಗಳಿಗಿಂತ ಹೆಚ್ಚು ಮೌಲ್ಯದ ವಸ್ತುಗಳನ್ನು ಸಾಗಿಸುವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು.

ಪ್ರಶ್ನೆ 20: ‘ಬಂಧನ’ ಎಂದರೇನು?

ಉತ್ತರ: ಬಂಧನ ಎಂಬುದಕ್ಕೆ ಜಿಎಸ್‌ಟಿ ಕಾಯ್ದೆಯಲ್ಲಿ ಉಲ್ಲೇಖವಿಲ್ಲ. ನ್ಯಾಯಾಲಯ ತೀರ್ಪುಗಳಲ್ಲಿ ಈ ಪದ ಬಳಸಲಾಗಿದೆ. ಇದರ ಪ್ರಕಾರ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವುದು. ಯಾವುದೇ ವ್ಯಕ್ತಿಯನ್ನು ಬಂಧಿಸುವುದು ಎಂದರೆ ಆತನ ಮುಕ್ತ ಓಡಾಟಕ್ಕೆ ನಿರ್ಬಂಧ ವಿಧಿಸುವುದು ಎಂದರ್ಥ.

ಪ್ರಶ್ನೆ21: ಎಂಜಿಎಲ್ ಕಾಯ್ದೆಯಂತೆ ಸೂಕ್ತ ಅಧಿಕಾರಿ ಬಂಧನಕ್ಕೆ ಯಾವಾಗ ಆದೇಶ ನೀಡಬಹುದು?

ಉತ್ತರ: ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಆಯುಕ್ತರು ಯಾವುದೇ ಅಧಿಕಾರಿಗೆ ಸಂಬಂಧಪಟ್ಟ ವ್ಯಕ್ತಿಯನ್ನು ಬಂಧಿಸಲು ಆದೇಶಿಸಬಹುದು. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆ ಭಾಗ73(1)(1),73(1)(2),73(2)ಯಲ್ಲಿ ಬಂಧನಕ್ಕೆ ಅವಕಾಶ ನೀಡಲಾಗಿದೆ. ಬಂಧನ ಮಾಡಬೇಕಾದರೆ ತೆರಿಗೆ ವಂಚನೆ ಮೊತ್ತ 50ಲಕ್ಷರೂ. ಮೀರಬೇಕು. ಅಲ್ಲದೆ ವ್ಯಕ್ತಿಗೆ ಕಾಯ್ದೆಯ ಭಾಗ 73ರಂತೆ ಹಿಂದೆಯೇ ಶಿಕ್ಷೆಯಾಗಿದ್ದರೆ ಬಂಧಿಸಬಹುದು.

ಪ್ರಶ್ನೆ 22: ಬಂಧನಕ್ಕೆ ಒಳಗಾದ ವ್ಯಕ್ತಿಗೆ ಎಂಜಿಎಲ್ ಕಾಯ್ದೆಯಲ್ಲಿ ರಕ್ಷಣೆ ಏನಿದೆ?

ಉತ್ತರ: ಬಂಧನಕ್ಕೆ ಒಳಗಾದ ವ್ಯಕ್ತಿಗೆ ಕಾಯ್ದೆಯ ಭಾಗ62ರಲ್ಲಿ ಕೆಲವು ರಕ್ಷಣೆಗಳನ್ನು ಒದಗಿಸಲಾಗಿದೆ.ಅವುಗಳುಹೀಗಿವೆ.

 • ಗುರುತರ ಆರೋಪಗಳ ಮೇಲೆ ಬಂಧಿಸಿದಲ್ಲಿ 24 ಗಂಟೆಗಳಲ್ಲಿ ಆತನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು.
 • ಒಂದು ವೇಳೆ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾದ ಅಪರಾಧವಾಗಿದ್ದರೆ, ಆರೋಪಿಯನ್ನು ಬಂಧಿಸಿ ಉಪ/ಸಹಾಯಕ ಆಯುಕ್ತರು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಮುಂದೆ ಹಾಜರುಪಡಿಸಬೇಕು. ಅವರು ಆರೋಪಿಯ್ನನ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು. ಸಿಆರ್‌ಪಿಸಿ 436 ಭಾಗನಂತೆ ಪೊಲೀಸ್ ಠಾಣೆ ಅಧಿಕಾರಿಗೆ ಇರುವ ಅಧಿಕಾರವನ್ನು ಉಪ/ಸಹಾಯಕ ಆಯುಕ್ತರಿಗೂ ನೀಡಲಾಗಿದೆ.
 • ಎಲ್ಲ ಬಂಧನಗಳು ಸಿಆರ್‌ಪಿಸಿ 1973 ಕಾಯ್ದೆಗೆ ಅನುಗುಣವಾಗಿರಲೇಬೇಕು.

ಪ್ರಶ್ನೆ 23: ಬಂಧನದ ಕಾಲದಲ್ಲಿ ಏನೇನು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು?

ಉತ್ತರ: ಸಿಆರ್‌ಪಿಸಿ 1973(2) ರಂತೆ ಬಂಧನಕ್ಕೆ ಅನುಸರಿಸಬೇಕಾದ ಕ್ರಮಗಳನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿಗಳು ಯಾರು ಯಾರು ಹೊರಗೆ ಕೆಲಸ ಮಾಡುತ್ತಾರೋ ಅವರೆಲ್ಲರೂ ಸಿಆರ್‌ಪಿಸಿಯನ್ನು ಚೆನ್ನಾಗಿ ಓದಿಕೊಂಡಿರಬೇಕು. ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಸಿಆರ್‌ಪಿಸಿ ಭಾಗ 57 ರಂತೆ ಯಾವುದೇ ವ್ಯಕ್ತಿಯನ್ನು ತನಿಖೆಗಾಗಿ ಬಂಧಿಸಿದರೂ 24 ಗಂಟೆಗಳಿಗಿಂತ ಹೆಚ್ಚು ಕಾಲ ಇಟ್ಟುಕೊಳ್ಳುವಂತಿಲ್ಲ. ಅವನನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲು ಬೇಕಾಗುವ ಪ್ರಯಾಣದ ಸಮಯ ಹೊರತುಪಡಿಸಿ 24 ಗಂಟೆ ಮೀರುವಂತಿಲ್ಲ. ಸಿಆರ್‌ಪಿಸಿ ಕಾಯ್ದೆ ಭಾಗ 56 ರಂತೆ ಆರೋಪಿಯನ್ನು ಬಂಧಿಸಿದ ಅಧಿಕಾರಿ ವಾರಂಟ್ ಇಲ್ಲದೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು. ಡಿ.ಕೆ.ಬಸು ಹಾಗೂ ಪಶ್ಚಿಮಬಂಗಾಳದ ನಡುವೆ ನಡೆದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಬಹಳ ಗಮನಾರ್ಹ ತೀರ್ಪನ್ನು ನೀಡಿದೆ. ಅದರಲ್ಲಿ ಸರ್ವೋಚ್ಚ ನ್ಯಾಯಾಲಯ ಬಂಧನಕ್ಕೆ ಸಂಬಂಧಿಸಿದಂತೆ ಕೆಲವು ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಇದು ಪೊಲೀಸ್ ಅಧಿಕಾರಿಗಳಿಗೆ ಅನ್ವಯಿಸಿದರೂ ಬಂಧನದ ಅಧಿಕಾರ ಹೊಂದಿರುವ ಇತರ ಇಲಾಖೆಗಳ ಅಧಿಕಾರಿಗಳೂ ಓದಿ ತಿಳಿದುಕೊಳ್ಳುವುದು ಅಗತ್ಯ. ಅದು ಹೀಗಿದೆ:

 1. ಬಂಧಿಸಲು ಹೋಗುವವರು ತಮ್ಮ ಹೆಸರು ಮತ್ತು ಹುದ್ದೆ ತಿಳಿಯುವಂತೆ ಸಮವಸ್ತ್ರದ ಮೇಲೆ ಹಾಕಿಕೊಂಡಿರಬೇಕು. ಬಂಧಿಸಿದ ವ್ಯಕ್ತಿಯ ವಿಚಾರಣೆ ನಡೆಸುವ ಅಧಿಕಾರಿಗಳ ಹೆಸರು ರಿಜಿಸ್ಟರ್‌ನಲ್ಲಿ ನಮೂದಿತವಾಗಿರಬೇಕು.
 2. ಬಂಧಿಸುವ ಮುನ್ನ ಮೆಮೊ ಸಿದ್ಧಪಡಿಸಬೇಕು. ಅದಕ್ಕೆ ಬಂಧಿತ ವ್ಯಕ್ತಿಯ ಕುಟುಂಬದವರೊಬ್ಬರು ಅಥವಾ ಬಡಾವಣೆಯ ಗೌರವಾನ್ವಿತ ವ್ಯಕ್ತಿಯ ಸಹಿ ಇರಬೇಕು.
 3. ಅದಕ್ಕೆ ಬಂಧಿತ ವ್ಯಕ್ತಿ ಕೂಡ ಸಹಿ ಮಾಡಬೇಕು. ಅಲ್ಲದೆ ಅದರಲ್ಲಿ ಬಂಧನ ದಿನಾಂಕ ಮತ್ತು ಸಮಯ ನಮೂದಾಗಿರಲೇಬೇಕು.
 4. ಯಾವುದೇ ವ್ಯಕ್ತಿಯನ್ನು ಬಂಧಿಸಿ ಕಸ್ಟಡಿಯಲ್ಲಿಡುವ ಮುನ್ನ ಆತನ ಸ್ನೇಹಿತ ಅಥವ ನಂಟ ಅಥವ ಹಿತೈಷಿಗೆ ತಿಳಿಸಬೇಕು. ಮಾಹಿತಿಯನ್ನು ಆದಷ್ಟು ತ್ವರಿತವಾಗಿ ತಿಳಿಸಬೇಕು. ಮೆಮೊಗೆ ಸಹಿ ಮಾಡಿದ ಸಾಕ್ಷಿ ವ್ಯಕ್ತಿಯ ಸಮೀಪವರ್ತಿಯಾಗಿದ್ದರೆ ಇನ್ನೂ ಅನುಕೂಲ.
 5. ಬಂಧನವಾದ 10-12ಗಂಟೆಯೊಳಗೆ ಆತನ ಬಂಧನ ಯಾವ ಸ್ಥಳದಲ್ಲಾಯಿತು, ಯಾವ ಸಮಯ ಎಂಬುದನ್ನು ಆತನ ಸ್ನೇಹಿತರು, ನಿಕಟವರ್ತಿಗಳಿಗೆ ತಿಳಿಸಬೇಕು. ಒಂದು ವೇಳೆ ಬೇರೆ ಜಿಲ್ಲೆಯಾದರೆ ಕಾನೂನು ನೆರವು ಪರಿಷತ್ ಅಥವ ಸಮೀಪದ ಪೊಲೀಸ್‌ ರಾಣೆಯ ಮೂಲಕ ಅವರ ಮನೆಯವರಿಗೆ ವಿಷಯ ಮುಟ್ಟಿಸಬೇಕು.
 6. ಬಂಧಿತ ವ್ಯಕ್ತಿ ಯಾರ ಬಳಿ ಇದ್ದಾನೆ. ಬಂಧಿತ ವ್ಯಕ್ತಿಯ ಸ್ನೇಹಿತ ಹಾಗೂ ಆತನ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳ ಹೆಸರನ್ನು ಡೈರಿಯಲ್ಲಿ ನಮೂದಿಸಬೇಕು.
 7. ಬಂಧಿತ ವ್ಯಕ್ತಿ ಇಚ್ಛೆಪಟ್ಟ ಸ್ಥಳದಲ್ಲಿ ವಿಚಾರಣೆ ನಡೆಸಬೇಕು. ಒಂದು ವೇಳೆ ಗಾಯಗಳಾಗಿದ್ದರೆ
 8. ಅದನ್ನೂ ತನಿಖಾ ಮೆಮೊದಲ್ಲಿ ದಾಖಲಿಸಬೇಕು. ಈ ಮೆಮೊಗೆ ಬಂಧಿತ ವ್ಯಕ್ತಿ ಹಾಗೂ ಬಂಧಿಸಿದ ಅಧಿಕಾರಿ ಇಬ್ಬರೂ ಸಹಿಮಾಡಬೇಕು.
 9. ಬಂಧಿತ ವ್ಯಕ್ತಿ ಕಸ್ಟಡಿಯಲ್ಲಿರುವವರೆಗೆ ಪ್ರತಿ 48 ಗಂಟೆಗಳಿಗೊಮ್ಮೆ ನುರಿತ ವೈದ್ಯರು ಪರೀಕ್ಷೆ ಮಾಡಬೇಕು. ಅಥವ ಆರೋಗ್ಯ ಇಲಾಖೆ ನಿರ್ದೇಶಕರು ನೇಮಕ ಮಾಡಿದ ವೈದ್ಯರ ತಂಡ ಅವನನ್ನು ಪರೀಕ್ಷಿಸಬೇಕು. ಎಲ್ಲ ಜಿಲ್ಲೆ, ತಾಲೂಕು ಮಟ್ಟದಲ್ಲಿ ವೈದ್ಯರ ತಂಡ ರಚನೆಯಾಗಿರಬೇಕು.
 10. ಬಂಧನದ ಮೆಮೊ, ವಶಪಡಿಸಿಕೊಂಡ ದಾಖಲೆಗಳು ಸೇರಿದಂತೆ ಎಲ್ಲದರ ಪ್ರತಿಗಳನ್ನು ಆಯುಕ್ತರಿಗೆ ಸಲ್ಲಿಸಬೇಕು.
 11. ವಿಚಾರಣೆಗೆ ಮುನ್ನ ಬಂಧಿತ ವ್ಯಕ್ತಿ ತನ್ನ ವಕೀಲರೊಂದಿಗೆ ಮಾತುಕತೆ ನಡೆಸಬಹುದು .ಆದರೆ ವಿಚಾರಣೆ ನಡೆಸುವಾಗ ಎಲ್ಲಾ ಕಾಲದಲ್ಲಿ ವಕೀಲರು ಇರುವಂತಿಲ್ಲ.
 12. ಬಂಧನದ ಬಗ್ಗೆ ಜಿಲ್ಲೆ ಮತ್ತು ರಾಜ್ಯದ ಕೇಂದ್ರ ಸ್ಥಾನಕ್ಕೆ ತಿಳಿಸಬೇಕು. ಬಂಧನವಾಗಿ 12 ಗಂಟೆಯೊಳಗೆ ಮಾಹಿತಿ ತಲುಪಿರಬೇಕು.

ಪ್ರಶ್ನೆ24: ಸಿಬಿಇಸಿಯಲ್ಲಿ ಬಂಧನಕ್ಕೆ ಅನುಸರಿಸುವ ಮಾರ್ಗದರ್ಶಿ ಸೂತ್ರಗಳು ಯಾವುವು?

ಉತ್ತರ: ಬಂಧನಕ್ಕೆ ನಿರ್ಧರಿಸುವ ಮುನ್ನ ಪ್ರತಿ ಪ್ರಕರಣವನ್ನೂ ಪ್ರತ್ಯೇಕವಾಗಿ ಅಧ್ಯಯನ ಮಾಡಬೇಕು. ಮೊದಲು ಪ್ರಕರಣದ ಸ್ವರೂಪ, ಅಪರಾಧ ಗುರುತರವೇ ಅಲ್ಲವೆ, ತೆರಿಗೆ ವಂಚನೆ ಪ್ರಮಾಣ ಎಷ್ಟು, ತೆರಿಗೆ ಕ್ರೆಡಿಟ್‌ ಪಡೆದಿರುವ ಸ್ವರೂಪ, ಸಾಕ್ಷ್ಯಗಳು ಪ್ರಬಲವಾಗಿದೆಯೇ, ಸಾಕ್ಷ್ಯಗಳನ್ನು ನಾಶಪಡಿಸುವ ಸಂಭವ ಇದೆಯೇ, ಅಥವ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದೇ, ತನಿಖೆಗೆ ಸಹಕರಿಸುತ್ತಾರೆಯೇ ಎಂಬುದನ್ನು ಪರಿಶೀಲಿಸಬೇಕು. ಬಂಧನದ ಅಧಿಕಾರವನ್ನು ಚಲಾಯಿಸುವಾಗ ಎಚ್ಚರಿಕೆ ವಹಿಸಬೇಕು ಹಾಗೂ ಕೆಳಕಂಡ ವಿಷಯಗಳನ್ನು ಗಮನಿಸಬೇಕು:

 1. ಅಪರಾಧದ ತನಿಖೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು
 2. ಆ ರೀತಿಯ ವ್ಯಕ್ತಿ ನಾಪತ್ತೆಯಾಗದಂತೆ ನೋಡಿಕೊಳ್ಳಬೇಕು
 3. ಸಂಘಟಿತ ಕಳ್ಳಸಾಗಣೆ ಅಥವ ಸೀಮಾ ಸುಂಕವನ್ನು ನೀಡದೆ ವಂಚಿಸುವ ಹಾಗೂ ಅದನ್ನು ಮುಚ್ಚಿಡುವ ಕೆಲಸ ನಡೆದಿದೆಯೇ ಎಂಬುದನ್ನು ನೋಡಿಕೊಳ್ಳಬೇಕು.
 4. ಪ್ರಕರಣದ ಹಿನ್ನೆಲೆಯಲ್ಲಿ ಕಾಣದ ಕೈಗಳಿವೆಯೇ. ತೆರೆಮರೆಯಲ್ಲಿ/ಬೇನಾಮಿ ರಫ್ತು ಮತ್ತು ಆಮದು ವ್ಯವಹಾರವನ್ನು ನಾಮಕಾವಸ್ತೆ ಹೆಸರಿನಲ್ಲಿ/ಬದುಕೇ ಇಲ್ಲದವರ ಹೆಸರಿನಲ್ಲಿ ನಡೆಸುವವರು ಇದ್ದಾರೆಯೇ ಎಂಬುದನ್ನು/ಐಇಎಸ್‌ಸಿ ಇದೆಯೇ ಗಮನಿಸಬೇಕು.
 5. ತೆರಿಗೆ ವಂಚಿಸಿರುವುದು ಬಹಿರಂಗಗೊಂಡ ಮೇಲೆ ಇದರ ಹಿಂದೆ ಕ್ರಿಮಿನಲ್ ಮನಸ್ಸು ಯಾವುದಾದರೂ ಕೆಲಸ ಮಾಡಿದೆಯೇ ಎಂಬುದನ್ನು ನೋಡಬೇಕು
 6. ಸಾಕ್ಷ್ಯಗಳನ್ನು ನಾಶಪಡಿಸುವುದನ್ನು ತಪ್ಪಿಸಬೇಕು
 7. ಸಾಕ್ಷಿದಾರರ ಮೇಲೆ ಒತ್ತಡ ಹೇರದಂತೆ ನೋಡಿಕೊಳ್ಳಬೇಕು ಮತ್ತು
 8. ಭಾರಿ ಪ್ರಮಾಣದಲ್ಲಿ ಸುಂಕ ಮತ್ತು ಸೇವಾ ತೆರಿಗೆಯನ್ನು 1ಕೋಟಿರೂ. ವರೆಗೆ ವಂಚಿಸಿದ್ದಾರೆಯೇ ಎಂಬುದನ್ನು ನೋಡಬೇಕು.

ಪ್ರಶ್ನೆ25: ಗುರುತರ ಅಪರಾಧ ಎಂದರೆ ಯಾವುದು?

ಉತ್ತರ: ಸಾಮಾನ್ಯವಾಗಿ ಗುರುತರ ಅಪರಾಧ ಎಂದರೆ ಗಂಭೀರ ಸ್ವರೂಪದ್ದಾಗಿರುತ್ತದೆ. ಇದನ್ನು ಅಧಿಕಾರಿಗಳೇ ತನಿಖೆ ನಡೆಸಬೇಕು. ವಾರಂಟ್ ಇಲ್ಲದೆ ತನಿಖೆ ನಡೆಸಬಹುದು. ಬಂಧಿಸಲೂಬಹುದು.

ಪ್ರಶ್ನೆ 26: ಗುರುತರವಲ್ಲದ ಅಪರಾಧ ಎಂದರೆ ಯಾವುದು?

ಉತ್ತರ: ಗಂಭೀರ ಸ್ವರೂಪವಲ್ಲದ ಅಪರಾಧಗಳಲ್ಲಿ ಅಧಿಕಾರಿಗೆ ಬಂಧಿಸುವ ಅಧಿಕಾರ ಇರುವುದಿಲ್ಲ. ವಾರಂಟ್ ಇಲ್ಲದೆ ಬಂಧಿಸಲು ಬರುವುದಿಲ್ಲ. ನ್ಯಾಯಾಲಯದ ಆದೇಶವಿಲ್ಲದೆ ತನಿಖೆ ಕೈಗೊಳ್ಳಲು ಬರುವುದಿಲ್ಲ.

ಪ್ರಶ್ನೆ 27: ಎಂಜಿಎಲ್ ಕಾಯ್ದೆಯಲ್ಲಿ ಯಾವುದು ಗಂಭೀರ ಸ್ವರೂಪದ್ದು ಹಾಗೂ ಗುರುತರವಲ್ಲದ ಅಪರಾಧ?

ಉತ್ತರ: ಎಂಜಿಎಲ್ ಕಾಯ್ದೆ ಭಾಗ 73 ರಂತೆ ಸರಕು ಮತ್ತು ಸೇವಾ ತೆರಿಗೆಯಲ್ಲಿ ವಂಚಿತ ಮೊತ್ತ 2.5 ಕೋಟಿ ರೂ. ಮೀರಿದ್ದಲ್ಲಿ ಅದು ಗುರುತರ ಅಪರಾಧ ಹಾಗೂ ಜಾಮೀನುರಹಿತ. ಇತರೆ ಅಪರಾಧಗಳು ಅಂಥ ಗಂಭೀರ ಸ್ವರೂಪದ್ದಲ್ಲ ಹಾಗೂ ಜಾಮೀನು ಪಡೆಯುವಂತಹದು.

ಪ್ರಶ್ನೆ 28: ಯಾವಾಗ ಸೂಕ್ತ ಅಧಿಕಾರಿ ಎಂಜಿಎಲ್ ಕಾಯ್ದೆಯಂತೆ ಸಮನ್ಸ್‌ ಜಾರಿ ಮಾಡಬಹುದು?

ಉತ್ತರ: ಎಂಜಿಎಲ್ ಕಾಯ್ದೆ ಭಾಗ 63 ರಂತೆ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಸೂಕ್ತ ಅಧಿಕಾರಿ ಸಮನ್ಸ್‌ ಜಾರಿ ಮಾಡಿ ಯಾವುದೇ ವ್ಯಕ್ತಿಯನ್ನು ಸಾಕ್ಷ್ಯ ನೀಡಲು ಅಥವ ದಾಖಲೆಗಳನ್ನು ಹಾಜರುಪಡಿಸಲು ಅಥವ ತನಿಖೆಗೆ ಸಂಬಂಧಿಸಿದಂತೆ ಬೇರೆ ಯಾವುದೇ ವಿಚಾರಕ್ಕೆ ಸೇರಿದ ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ವಿವರ ನೀಡುವಂತೆ ಕೇಳಬಹುದು. ಒಂದು ವೇಳೆ ಸಮನ್ಸ್‌ ಪಡೆದ ವ್ಯಕ್ತಿ ಬಳಿ ಕೆಲವು ಪ್ರಮುಖ ದಾಖಲೆಗಳು, ಕಾಗದಪತ್ರಗಳಿದ್ದರೆ ಅವುಗಳನ್ನು ಹಾಜರುಪಡಿಸುವಂತೆ ಕೇಳಬಹುದು.

ಪ್ರಶ್ನೆ 29: ಸಮನ್ಸ್‌ ಪಡೆದ ವ್ಯಕ್ತಿಯ ಜವಾಬ್ದಾರಿ ಏನು?

ಉತ್ತರ: ಸಮನ್ಸ್‌ ಪಡೆದ ವ್ಯಕ್ತಿ ಕಾನೂನುಬದ್ಧವಾಗಿ ಸಮನ್ಸ್‌ ನೀಡಿದ ಸೂಕ್ತ ಅಧಿಕಾರಿಯ ಮುಂದೆ ಖುದ್ದಾಗಿ ಅಥವ ಅಧಿಕೃತ ಪ್ರತಿನಿಧಿಯ ಮೂಲಕ ಹಾಜರಾಗಿ ಸತ್ಯಾಂಶವನ್ನು ನೀಡಬೇಕು. ಅಧಿಕಾರಿ ತನಿಖೆ ನಡೆಸುತ್ತಿರುವ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಾಗೂ ದಾಖಲೆಗಳನ್ನು ಒದಗಿಸಬೇಕು.

ಪ್ರಶ್ನೆ 30: ಒಂದು ವೇಳೆಹಾಜರಾಗದೇ ಇದ್ದಲ್ಲಿ ಏನಾಗುತ್ತೆ?

ಉತ್ತರ: ಸೂಕ್ತ ಅಧಿಕಾರಿ ಸಮನ್ಸ್‌ ಜಾರಿ ಮಾಡಿ ತನಿಖೆ ಆರಂಭಿಸಿದಾಗ ಅದು ನ್ಯಾಯಾಂಗದ ಕಲಾಪವಾಗಿ ಪರಿಗಣಿತವಾಗುತ್ತದೆ. ಯಾವುದೇ ಸಕಾರಣವಿಲ್ಲದೆ ತನಿಖೆಗೆ ಹಾಜರಾಗದೆ ತಪ್ಪಿಸಿಕೊಂಡು ಸಮನ್ಸ್‌ ಪಡೆದುಕೊಳ್ಳದೆ ಇದ್ದಲ್ಲಿ ಐಪಿಸಿ ಭಾಗ 174ರಂತೆ ಕ್ರಮಕೈಗೊಳ್ಳಬಹುದು. ಐಪಿಸಿ ಭಾಗ 172ರಂತೆ ಪ್ರಕರಣ ದಾಖಲಿಸಬಹುದು. ಒಂದು ವೇಳೆ ಸಮನ್ಸ್‌ ಪಡೆದ ವ್ಯಕ್ತಿ ನಿರ್ದಿಷ್ಟ ದಾಖಲೆ, ಎಲೆಕ್ಟ್ರಾನಿಕ್ ರೆಕಾರ್ಡ್ ಕೊಡದೇ ಇದ್ದಲ್ಲಿ ಐಪಿಸಿ ಭಾಗ 175 ರಂತೆ ಮೊಕದ್ದಮೆ ಎದುರಿಸಬೇಕಾಗುತ್ತದೆ. ಒಂದು ವೇಳೆ ಹಾಜರಾಗಿ ಸುಳ್ಳು ಸಾಕ್ಷ್ಯ ನೀಡಿದರೆ ಐಪಿಸಿ ಭಾಗ 193 ರಂತೆ ಕ್ರಮ ಕೈಗೊಳ್ಳಬಹುದು. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿಯ ಮುಂದೆ ಹಾಜರಾಗದೆ ಇರುವುದಕ್ಕೆ ಆ ವ್ಯಕ್ತಿಗೆ ಎಂಜಿಎಲ್ ಕಾಯ್ದೆ ಭಾಗ 66(3)(ಡಿ) ನಂತೆ 25 ಸಾವಿರ ರೂವರೆಗೆ ದಂಡ ವಿಧಿಸಬಹುದು.

ಪ್ರಶ್ನೆ31: ಸಮನ್ಸ್‌ ಜಾರಿ ಮಾಡಲು ಇರುವ ಮಾರ್ಗದರ್ಶಿ ಸೂತ್ರಗಳೇನು?

ಉತ್ತರ: ಹಣಕಾಸು ಸಚಿವಾಲಯದ ತೆರಿಗೆ ಇಲಾಖೆಗೆ ಸೇರಿದ ಕೇಂದ್ರೀಯ ಅಬಕಾರಿ ಮತ್ತು ಸೀಮಾ ಸುಂಕ ಪರಿಷತ್ (ಸಿಬಿಇಸಿ) ಕಾಲಕಾಲಕ್ಕೆ ಸೂಕ್ತ ಆದೇಶಗಳನ್ನು ನೀಡಿದ್ದು ಸಮನ್ಸ್‌ ನೀಡುವ ಅಧಿಕಾರವನ್ನು ದುರುಪಯೋಗ ಆಗಬಾರದು ಎಂದು ತಿಳಿಸಿದೆ.

ಪ್ರಮುಖ ಮಾರ್ಗದರ್ಶಿ ಸೂತ್ರಗಳು ಕೆಳಕಂಡಂತೆ ಇವೆ:

 1. ತೆರಿಗೆ ಸಂಗ್ರಹ ಕಾರ್ಯದಲ್ಲಿ ಸಮನ್ಸ್‌ ಬಳಕೆ ಕೊನೆಯ ಅಸ್ತ್ರ. ಒಂದು ವೇಳೆ ತೆರಿಗೆ ಪಾವತಿಸಬೇಕಾದವರು ಸಹಕಾರ ನೀಡಲಿಲ್ಲ ಇದನ್ನು ಬಳಸಬೇಕು. ಆದರೆ ಇದನ್ನು ಯಾವುದೇ ಕಂಪನಿಯ ಹಿರಿಯ ಅಧಿಕಾರಿಗಳ ಮೇಲೆ ಪ್ರಯೋಗಿಸಬಾರದು.
 2. ಸಮನ್ಸ್‌ ಕೊಡುವಾಗ ಅದನ್ನು ಬರೆದಿರುವ ಭಾಷೆ ಒರಟು ಹಾಗೂ ಕಾನೂನು ರೀತ್ಯ ಅನಗತ್ಯ ನೋವು ಕೊಡುವಂತೆ ಇರಬಾರದು. ಅದನ್ನು ಸ್ವೀಕರಿಸುವ ವ್ಯಕ್ತಿಯ ಮನಸ್ಸಿಗೆ ನೋವಾಗಬಾರದು.
 3. ಸಮನ್ಸ್‌ ನೀಡುವ ಮುನ್ನ ಸಹಾಯಕ ಕಮಿಷನರ್ ಅವರಿಂದ ಮೇಲ್ಮಟ್ಟದ ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆಯಬೇಕು.ಇದಕ್ಕೆ ಕಾರಣಗಳನ್ನು ದಾಖಲಿಸಬೇಕು. ಸೂಪರಿಂಟೆಂಡೆಂಟ್‌ ಸಮನ್ಸ್‌ಜಾರಿ ಮಾಡುವ ಮುನ್ನ ಈ ಕ್ರಮಗಳನ್ನು ಕೈಗೊಂಡಿರಬೇಕು.
 4. ಕೆಲಸದ ವೇಳೆಯಲ್ಲಿ ಪೂರ್ವಾನುಮತಿಯನ್ನು ಲಿಖಿತದಲ್ಲಿ ಪಡೆಯಲು ಆಗದಿದ್ದರೂ ದೂರವಾಣಿ ಮೂಲಕ ಅಥವ ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಪರವಾನಗಿ ಪಡೆದು ಕೆಲಸ ಮುಕ್ತಾಯಗೊಂಡ ಮೇಲೆ ಎಲ್ಲವನ್ನೂ ಬರವಣಿಗೆಯಲ್ಲಿರಿಸಿ ಸಂಬಂಧಪಟ್ಟ ಅಧಿಕಾರಿಗೆ ಕಳುಹಿಸಿಕೊಡಬೇಕು.
 5. ಎಲ್ಲ ಪ್ರಕರಣಗಳಲ್ಲಿ ಸಮನ್ಸ್‌ ನೀಡುವ ಮುನ್ನ ಪ್ರತಿ ಪ್ರಕರಣಕ್ಕೆ ಸಂಬಂಧಿಸಿದ ಕಡತದಲ್ಲಿ ಸಮನ್ಸ್‌ಜಾರಿ ಮಾಡಲು ಇರುವ ಅನಿವಾರ್ಯತೆಯನ್ನು ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗೆ ಕಳುಹಿಸಿಕೊಡಬೇಕು. ಅವರು ಸಮನ್ಸ್‌ ಜಾರಿ ಮಾಡಲು ಅನುಮತಿ ನೀಡುತ್ತಾರೆ.
 6. ಮೊದಲ ಬಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಉದ್ದಿಮೆ ಅಥವ ಬೃಹತ್‌ ಕಂಪನಿಗಳ ಸಿಇಒ, ಸಿಎಫ್ಒ, ಜನರಲ್‌ ಮ್ಯಾನೇಜರ್‌ಗಳಿಗೆ ಸಾಮಾನ್ಯವಾಗಿ ಸಮನ್ಸ್‌ ಜಾರಿ ಮಾಡುವುದಿಲ್ಲ. ಏಕೆಂದರೆ, ಆ ಪ್ರಕರಣದಲ್ಲಿ ಅವರು ನೇರವಾಗಿ ಭಾಗಿಯಾಗಿದ್ದಾರೆ ಎಂದು ತನಿಖೆಯಿಂದ ಸ್ಪಷ್ಟಗೊಂಡಾಗ ಮಾತ್ರ ಅವರನ್ನು ಕರೆಯಬೇಕು. ತೆರಿಗೆ ವಂಚನೆ ಪ್ರಕರಣದಲ್ಲಿ ಅವರೂ ನಿರ್ಧಾರಗಳನ್ನು ತೆಗದುಕೊಳ್ಳುವುದರಲ್ಲಿ ಭಾಗಿಯಾಗಿದ್ದರು, ಅದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂಬುದು ಸ್ಪಷ್ಟವಾಗಬೇಕು.

ಪ್ರಶ್ನೆ 32: ಸಮನ್ಸ್‌ ಜಾರಿ ಮಾಡುವ ಮುನ್ನ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು?

ಉತ್ತರ: ಯಾವುದೇ ವ್ಯಕ್ತಿಗೆ ಸಮನ್ಸ್‌ ನೀಡಿ ಕರೆಸುವ ಮುನ್ನ ಸಾಮಾನ್ಯವಾಗಿ ಅನುಸರಿಸುವ ಮುನ್ನೆಚ್ಚರಿಕೆ ಕ್ರಮಗಳು ಕೆಳಕಂಡಂತೆ ಇವೆ:

 1. ಸಮನ್ಸ್‌ ಜಾರಿ ಮಾಡುವ ಮುನ್ನ ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಎಂಬುದನ್ನು ನೋಡಬೇಕು. ತನಿಖೆ ನಡೆಯುವಾಗ ಆ ವ್ಯಕ್ತಿ ಹಾಜರಾಗುವುದು ಅಗತ್ಯ ಎಂದೆನಿಸಿದಾಗ ಮಾತ್ರ ಸಮನ್ಸ್‌ ನೀಡಬೇಕು.
 2. ಸಾಧಾರಣವಾಗಿ ಸಮನ್ಸ್‌ಗಳನ್ನು ಮತ್ತೆಮತ್ತೆ ನೀಡುವುದಿಲ್ಲ. ವಾಸ್ತವವಾಗಿ ನೋಡುವ ಹಾಗಿದ್ದರೆ ಒಬ್ಬ ವ್ಯಕ್ತಿಯ ಹೇಳಿಕೆಗಳನ್ನು ಮತ್ತು ದಾಖಲೆಗಳನ್ನು ಒಂದೆ ಬಾರಿ ಪಡೆದುಕೊಳ್ಳಬೇಕು. ಅತಿ ಕಡಿಮೆ ಸಮನ್ಸ್‌ ಮೂಲಕ ಕೆಲಸ ಪೂರ್ಣಗೊಳಿಸಬೇಕು.
 3. ಯಾವುದೇ ಕಾರಣಕ್ಕೂ ಸಮನ್ಸ್‌ನಲ್ಲಿ ಸೂಚಿಸಿರುವ ಸಮಯಕ್ಕೆ ಸರಿಯಾಗಿ ಸಮನ್ಸ್‌ ಪಡೆದು ಬಂದ ವ್ಯಕ್ತಿಯ ಹೇಳಿಕೆ ದಾಖಲಿಸಿ ಅಥವ ಕಾಗದ ಪತ್ರಗಳನ್ನು ಪಡೆದು ಕಳುಹಿಸಿ ಕೊಡಬೇಕು. ಅನಗತ್ಯವಾಗಿ ಕಾಯುವಂತೆ ಮಾಡಬಾರದು. ಒಂದು ವೇಳೆ ಅದನ್ನೆ ಕಾರ್ಯತಂತ್ರವಾಗಿ ಬಳಸುವ ಹಾಗಿದ್ದರೆ ಅದು ಬೇರೆ ವಿಚಾರ.
 4. ವ್ಯಕ್ತಿಗಳ ಹೇಳಿಕೆಯನ್ನು ಕಚೇರಿಯ ವೇಳೆಯಲ್ಲೇ ದಾಖಲಿಸುವುದು ಒಳ್ಳೆಯದು. ಕೆಲವು ಸಂದರ್ಭಗಳಲ್ಲಿ ಪ್ರಕರಣಕ್ಕೆ ಅನುಗುಣವಾಗಿ ಹೇಳಿಕೆ ದಾಖಲಿಸುವ ಸ್ಥಳ ಮತ್ತು ಸಮಯ ಬದಲಾಗಬಹುದು ಅಷ್ಟೆ.

ಪ್ರಶ್ನೆ 33: ಸಿಜಿಎಸ್‌ಟಿ/ ಎಸ್‌ಜಿಎಸ್‌ಟಿ ಅಧಿಕಾರಿಗಳಿಗೆ ಯಾವ ಇಲಾಖೆಗಳ ನೆರವು ಬೇಕಾಗುತ್ತದೆ?

ಉತ್ತರ: ಎಂಜಿಎಲ್ ಕಾಯ್ದೆ ಭಾಗ 65 ರಂತೆ ಕೆಳಕಂಡ ಇಲಾಖೆಗಳ ಅಧಿಕಾರಿಗಳ ನೆರವು ಪಡೆಯಲಾಗುವುದು. ಅವರು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿಗಳಿಗೆ ಸಹಕಾರ ನೀಡಬೇಕೆಂದು ಸೂಚಿಸಲಾಗಿದೆ.

 1. ಪೊಲೀಸ್
 2. ಸೀಮಾಸುಂಕ
 3. ಜಿಎಸ್‌ಟಿ ಸಂಗ್ರಹದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು
 4. ಕಂದಾಯ ಇಲಾಖೆಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಅಧಿಕಾರಿಗಳು
 5. ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು
 6. ಕೇಂದ್ರ/ರಾಜ್ಯ ಸರ್ಕಾರಗಳು ಸೂಚಿಸುವ ಇತರೆ ಇಲಾಖೆಗಳ ಅಧಿಕಾರಿಗಳು.

******

ಅಪರಾಧ ಮತ್ತು ದಂಡ, ಅಭಿಯೋಜನೆ ಮತ್ತು ರಾಜಿ ಪ್ರಕ್ರಿಯೆ

20. ಅಪರಾಧ ಮತ್ತು ದಂಡ, ಅಭಿಯೋಜನೆ ಮತ್ತು ರಾಜಿ ಪ್ರಕ್ರಿಯೆ

ಪ್ರಶ್ನೆ1. ಮಾದರಿ ಜಿಎಸ್‌ಟಿ ಕಾನೂನಿನ ಪ್ರಕಾರ ನಿಗದಿತ ಅಪರಾಧಗಳು ಯಾವುವು?

ಉತ್ತರ: ಮಾದರಿ ಜಿಎಸ್‌ಟಿ ಕಾನೂನಿನಲ್ಲಿ, ಅಪರಾಧ ಮತ್ತು ದಂಡಗಳನ್ನು ಅಧ್ಯಾಯ XVI ಕೆಳಗೆ ಕ್ರೋಡೀಕರಿಸಲಾಗಿದೆ. ತೆರಿಗೆ ಪಾವತಿಸಬೇಕಾದ ವ್ಯಕ್ತಿಯೊಬ್ಬರು ಅರ್ಹವಿಲ್ಲದಿದ್ದರೂ ರಾಜಿ ಪ್ರಕ್ರಿಯೆಯ ಲಾಭವನ್ನು ಪಡೆದಿರುವ ಸಂದರ್ಭಕ್ಕೆ ಅನುಗುಣವಾಗಿ, ಅಧಿನಿಯಮದ ಭಾಗ 8ರ ಅಡಿಯಲ್ಲಿ ನಿಗದಿತವಾಗಿರುವ ದಂಡಗಳನ್ನು ಹೊರತುಪಡಿಸಿ ಭಾಗ 66ರ ಅಡಿಯಲ್ಲಿ 21 ಅಪರಾಧಗಳನ್ನು ಸೂಚಿಸಲಾಗಿದೆ. ಆ ಅಪರಾಧಗಳು ಕೆಳಕಂಡಂತೆ ಇವೆ.

 1. ಸರಕುಪಟ್ಟಿ ಇಲ್ಲದೆ ಅಥವಾ ತಪ್ಪು ಸರಕು ಪಟ್ಟಿಯೊಂದಿಗೆ ಸರಕು ಪೂರೈಕೆ.
 2. ಪೂರೈಕೆ ಮಾಡದೆ ಸರಕು ಪಟ್ಟಿಯ ಜಾರಿ.
 3. ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಯಲ್ಲಿ ವಸೂಲಾದ ತೆರಿಗೆಯನ್ನು ಸಂದಾಯ ಮಾಡದಿರುವುದು.
 4. ಎಂಜಿಎಲ್ ನಿಯಮದ ಉಲ್ಲಂಘನೆ ಸಹಿತ ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಯಲ್ಲಿ ವಸೂಲಾದ ತೆರಿಗೆಯನ್ನು ಸಂದಾಯ ಮಾಡದಿರುವುದು.
 5. ಭಾಗ 37ರ ಅನ್ವಯ ಮೂಲದಲ್ಲಿಯೇ ತೆರಿಗೆಯನ್ನು ಕಳೆಯದಿರುವುದು ಅಥವಾ ತೆರಿಗೆಯನ್ನು ಕಡಿಮೆ ಕಳೆಯುವುದು ಅಥವಾ ಮೂಲದಲ್ಲಿ ಕಳೆದ ತೆರಿಗೆಯನ್ನು ಸಂದಾಯ ಮಾಡದಿರುವುದು.
 6. ಭಾಗ 43ಸಿ ಅನ್ವಯ ಮೂಲದಲ್ಲಿಯೇ ತೆರಿಗೆಯನ್ನು ವಸೂಲು ಮಾಡದಿರುವುದು ಅಥವಾ ಕಡಿಮೆ ತೆರಿಗೆಯನ್ನು ವಸೂಲು ಮಾಡುವುದು ಅಥವಾ ಮೂಲದಲ್ಲಿ ವಸೂಲಾದ ತೆರಿಗೆಯನ್ನು ಪಾವತಿಸದಿರುವುದು.
 7. ಸರಕು ಮತ್ತು ಸೇವೆಗಳನ್ನು ವಾಸ್ತವಿಕವಾಗಿ ಪಡೆಯದೆ ತೆರಿಗೆ ಐಟಿಸಿಯ (ಐಟಿಸಿ) ಲಾಭವನ್ನು ಅನುಭವಿಸುವುದು.
 8. ಮೋಸದಿಂದ ಮರುಪಾವತಿ ಪಡೆಯುವುದು.
 9. ಭಾಗ 17ರ ಉಲ್ಲಂಘಿಸಿ ಸೇವಾ ವಿತರಕರಿಂದ ತೆರಿಗೆ ಐಟಿಕಸಿಯ (ಐಟಿಸಿ)ಲಾಭವನ್ನು ಅನುಭವಿಸುವುದು.
 10. ತೆರಿಗೆ ಸಂದಾಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ತಪ್ಪು ಮಾಹಿತಿ ನೀಡುವುದು, ಲೆಕ್ಕಪತ್ರಗಳನ್ನು ತಪ್ಪಾಗಿ ನೀಡುವುದು, ನಕಲಿ ಲೆಕ್ಕಪತ್ರಗಳನ್ನು ಅಥವಾ ದಾಖಲೆಗಳನ್ನು ನೀಡುವುದು.
 11. ತೆರಿಗೆ ಸಂದಾಯದ ಹೊಣೆಗಾರಿಕೆ ಇದ್ದರೂ ನೋಂದಣಿಯಾಗದಿರುವುದು.
 12. ನೋಂದಣಿ ದಾಖಲೆಯಲ್ಲಿ ಕಡ್ಡಾಯವಾಗಿ ತುಂಬ ಬೇಕಾದ ವಿವರಣೆಯನ್ನು ತಪ್ಪಾಗಿ ನೀಡುವುದು.
 13. ಅಧಿಕಾರಿಗಳನ್ನು ತಮ್ಮ ಕರ್ತವ್ಯ ನಿರ್ವಹಣೆಯಿಂದ ತಪ್ಪಿಸುವುದು ಅಥವಾ ಅಡ್ಡಿಪಡಿಸುವುದು.
 14. ನಿಗದಿತ ದಾಖಲೆಗಳಿಲ್ಲದೆ ಸರಕುಗಳನ್ನು ರವಾನಿಸುವುದು.
 15. ತೆರಿಗೆ ಸಂದಾಯವನ್ನು ತಪ್ಪಿಸಿಕೊಳ್ಳಲು ವಹಿವಾಟನ್ನು ಅಡಗಿಸಿಡುವುದು.
 16. ಅಧಿ ನಿಯಮದಲ್ಲಿ ನಿರ್ದೇಶಿಸಿರುವಂತೆ ಲೆಕ್ಕಪತ್ರಗಳನ್ನು ಅಥವಾ ದಾಖಲೆಗಳನ್ನು ಇಡದಿರುವುದು ಅಥವಾ ಅಧಿನಿಯಮದಲ್ಲಿ ನಿಗಧಿಪಡಿಸಿರುವ ಅವಧಿಯವರೆಗೂ ಲೆಕ್ಕ ಪತ್ರಗಳನ್ನು ಅಥವಾ ದಾಖಲೆಗಳನ್ನು ಕಾಪಾಡಿಕೊಳ್ಳದಿರುವುದು.
 17. ಅಧಿನಿಯಮ/ನಿಯಮದ ಪ್ರಕಾರ ಅಧಿಕಾರಿಯೊಬ್ಬರಿಗೆ ಬೇಕಾಗುವ ಮಾಹಿತಿ/ದಾಖಲೆಗಳನ್ನು ನೀಡಲು ವಿಫಲವಾಗುವುದು ಅಥವಾ ಯಾವುದೇ ಪ್ರಕ್ರಿಯೆಯಲ್ಲಿ ತಪ್ಪು ಮಾಹಿತಿ/ದಾಖಲೆಗಳನ್ನು ನೀಡುವುದು.
 18. ಸರಕಾರವು ವಶಪಡಿಸಿಕೊಳ್ಳಬಹುದಾದ ವಸ್ತುಗಳ ಪೂರೈಕೆ/ರವಾನೆ/ಸಂಗ್ರಹಣೆ.
 19. ಬೇರೆ ವ್ಯಕ್ತಿಯ ಜಿಎಸ್‌ಟಿ ಐಎನ್ ಉಪಯೋಗಿಸಿಕೊಂಡು ಸರಕು ಪಟ್ಟಿ ಅಥವಾ ದಾಖಲೆಗಳನ್ನು ಜಾರಿಗೊಳಿಸುವುದು.
 20. ವಸ್ತು ಸಾಕ್ಷಿಯನ್ನು ನಾಶ ಮಾಡುವುದು ಅಥವಾ ತಿದ್ದುಪಡಿಗೊಳಿಸುವುದು.
 21. ಅಧಿನಿಯಮದ ಅನ್ವಯ ತಡೆಹಿಡಿಯಲಾದ/ಜಪ್ತಿಮಾಡಲಾದ ವಸ್ತುಗಳನ್ನು ನಾಶ ಮಾಡುವುದು/ತಿದ್ದುಪಡಿ ಮಾಡುವುದು.

ಪ್ರಶ್ನೆ2. ‘ದಂಡ’ ಎಂದರೇನು?

ಉತ್ತರ: ಎಂ.ಜಿ.ಎಲ್ ರ ಅನ್ವಯ ದಂಡ ಶಬ್ಧದ ಪರಿಭಾಷೆಯನ್ನು ನೀಡಲಾಗಿಲ್ಲ. ಆದರೆ ನ್ಯಾಯವಿವೇಚನೆಯ ತತ್ವಗಳ ಹಾಗೂ ನ್ಯಾಯಿಕ ಹೇಳಿಕೆಗಳ ಪ್ರಕಾರ ದಂಡ ಸ್ವರೂಪಗಳನ್ನು ಕೆಳಕಂಡಂತೆ ಅರ್ಥೈಸಬಹುದು.

 • ನಿಗಧಿತ ಅಪರಾಧವನ್ನು ಎಸಗಿರುವುದಕ್ಕಾಗಿ ತಾತ್ಕಾಲಿಕ ಶಿಕ್ಷೆ ಅಥವಾ ಕಾನೂನಿನ ಅನ್ವಯ ದಂಡಸ್ವರೂಪದಲ್ಲಿ ವಿಧಿಸಿ ವಸೂಲು ಮಾಡಬಹುದಾದ ಹಣ.
 • ಪಕ್ಷದಾರರ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದ ಕಾರಣ ಕಾನೂನಿನ ಅಥವಾ ಅನುಬಂಧಯ ಪ್ರಕಾರ ವಿಧಿಸಬಹುದಾದ ಶಿಕ್ಷೆ.

ಪ್ರಶ್ನೆ3. ದಂಡವನ್ನು ವಿಧಿಸುವಾಗ ಆಚರಿಸಬೇಕಾದ ಸಾಮಾನ್ಯ ನಿಯಮಗಳೇನು?

ಉತ್ತರ: ನ್ಯಾಯಿಕತತ್ವಗಳು, ನ್ಯಾಯಬದ್ಧ ಹೇಳಿಕೆಗಳು ಹಾಗೂ ಅಂತರ ರಾಷ್ಟ್ರೀಯ ವ್ಯಾಪಾರ ಮತ್ತು ಕರಾರುಗಳನ್ನು ಆಧರಿಸಿ ನಿರ್ಧಿಷ್ಟ ಅನುಶಾಸನಿಕ ಪದ್ದತಿಗೆ ಅನುಗುಣವಾಗಿಯೇ ದಂಡವನ್ನು ವಿಧಿಸಬೇಕಾಗುತ್ತದೆ. ಅಂತಹ ಸಾಮಾನ್ಯ ನಿಯಮವನ್ನು ಅಧಿನಿಯಮದ ಭಾಗ 68ರ ಅನ್ವಯ ನಮೂದಿಸಲಾಗಿದೆ.

 • ಯಾವ ವ್ಯಕ್ತಿಯ ವಿರುದ್ಧವೂ ಷೋಕಾಸ್ ನೋಟೀಸು ಜಾರಿಗೊಳಿಸದೆ ಮತ್ತು ಆತನ ವಿರುದ್ಧ ಇರುವ ಆರೋಪಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಅವಕಾಶವನ್ನು ನೀಡದೆ, ಪ್ರಕರಣವನ್ನು ನ್ಯಾಯಸಮ್ಮತವಾಗಿ ವಿಚಾರಿಸದೆ ಯಾವ ದಂಡವನ್ನೂ ವಿಧಿಸ ತಕ್ಕದ್ದಲ್ಲ,
 • ಪ್ರಕರಣದ ಸಂಪೂರ್ಣ ವಾಸ್ತವಿಕತೆ ಹಾಗೂ ಪರಿಸ್ಥಿತಿಗಳನ್ನು ಆಧರಿಸಿ ದಂಡವನ್ನು ವಿಧಿಸತಕ್ಕದ್ದು,
 • ಕಾನೂನು ಉಪಬಂಧಗಳ ಅಥವಾ ನಿಯಮಗಳ ಉಲ್ಲಂಘನೆಯ ತೀವ್ರತೆ ಮತ್ತು ಮಟ್ಟವನ್ನು ಗಮನದಲ್ಲಿಟ್ಟುಕೊಂಡು ದಂಡವನ್ನು ವಿಧಿಸ ತಕ್ಕದ್ದು,
 • ಉಲ್ಲಂಘನೆಯ ಪ್ರಕಾರವನ್ನು, ದಂಡ ವಿಧಿಸುವ ಆದೇಶದಲ್ಲಿ, ಸ್ಪಷ್ಟವಾಗಿ ಉಲ್ಲೇಖಿಸತಕ್ಕದ್ದು.
 • ಯಾವ ಕಾನೂನಿನ ಉಪಬಂಧಗಳ ಅನ್ವಯ ದಂಡವನ್ನು ವಿಧಿಸಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸತಕ್ಕದ್ದು. ಭಾಗ 68 ರಲ್ಲಿ ಮುಂದೆ ಉಲ್ಲೇಖಿಸಿರುವಂತೆ , ಬೃಹತ್ ಮೊತ್ತದ ದಂಡವನ್ನು ಕೆಳಕಂಡ ಸಂದರ್ಭಗಳಲ್ಲಿ ವಿಧಿಸಬಾರದು :
 • ಯಾವುದೇ ಸಣ್ಣ ಉಲ್ಲಂಘನೆ (ಯಾವುದೇ ಪ್ರಕರಣದಲ್ಲಿ , ರೂ.5000/- ಕ್ಕೂ ಕಡಿಮೆ ಮೊತ್ತದ ತೆರಿಗೆಯನ್ನು ಒಳಗೊಂಡಂತೆ ಉಪಬಂಧಗಳ ಉಲ್ಲಂಘನೆಯನ್ನು ಸಣ್ಣ ಉಲ್ಲಂಘನೆ ಎಂದು ಅರ್ಥೈಸಲಾಗಿದೆ), ಅಥವಾ
 • ಕಾನೂನಿನ ಪ್ರಕ್ರಿಯಾತ್ಮಕ ಕುಂದುಕೊರತೆ ಅಥವಾ
 • ಉದ್ದೇಶ್ಯ ಪೂರ್ವಕವಿಲ್ಲದೆ ಅಥವಾ ತಪ್ಪು ತಿಳುವಳಿಕೆಯಿಂದ ದಾಖಲೆಗಳನ್ನು ಲಗತ್ತಿಸದ ಸಂದರ್ಭದಲ್ಲಿ (ಕಾನೂನಿನಲ್ಲಿ ವಿವರಿಸಿರುವಂತೆ ದಾಖಲೆಯಲ್ಲಿ ಮೇಲ್ನೋಟಕ್ಕೆ ಕಂಡುಬರುವ ದೋಷ) ಅಥವಾ ಸುಲಭವಾಗಿ ಸರಿಪಡಿಸಬಹುದಾದ ತ ಪ್ಪು ಎಸಗಿರುವ ಸಂದರ್ಭ ಹಾಗೂ ಎಂ.ಜಿ.ಎಲ್‌ನಲ್ಲಿ ದಂಡದ ಮೊತ್ತ ಅಥವಾ ಶೇಕಡಾವಾರು ಮೊತ್ತ ನಿಗದಿತವಾಗಿದ್ದರೆ, ಅದೇ ಮೊತ್ತ ಅನ್ವಯವಾಗುತ್ತದೆ.

ಪ್ರಶ್ನೆ4. ಎಂ.ಜಿ.ಎಲ್‌ನಲ್ಲಿ ಒದಗಿಸಿರುವ ದಂಡದ ಪ್ರಮಾಣ ಎಷ್ಟು?

ಉತ್ತರ: ಯಾವುದೇ ತೆರಿಗೆಯನ್ನು ಪಾವತಿಸಬೇಕಾದ ವ್ಯಕ್ತಿಯೊಬ್ಬರು ಭಾಗ 66ರ ಅನ್ವಯ ಅಪರಾಧವನ್ನು ಎಸಗಿದ್ದಲ್ಲಿ, ಭಾಗ 66(1) ರಲ್ಲಿ ಒದಗಿಸಿರುವಂತೆ ಕೆಳಕಂಡ ಮೊತ್ತಕ್ಕಿಂತ ಹೆಚ್ಚಿನ ದಂಡವನ್ನು ವಿಧಿಸಬಹುದಾಗಿದೆ.

 • ತಪ್ಪಿಸಿರುವ ತೆರಿಗೆ ಮೊತ್ತ, ವಂಚನೆಯಿಂದ ಪಡೆದ ಮರುಪಾವತಿ, ಪಡೆದಿರುವ ಉದ್ದರಿ, ಕಳೆಯದಿರುವ ಅಥವಾ ಕಡಿಮೆ ಕಳೆದಿರುವ ತೆರಿಗೆ ಮೊತ್ತ ಅಥವಾ ಪಡೆದಿರುವ ಅಥವಾ ಕಡಿಮೆ ಪಡೆದಿರುವ ಮೊತ್ತ ಅಥವಾ
 • ರೂ.10,000/-ಮೊಬಲಗು ಇಷ್ಟೇ ಅಲ್ಲದೆ, ಯಾವುದೇ ನೊಂದಣೀಕೃತ ತೆರಿಗೆದಾರರು ಪದೇಪದೇ ಕಡಿಮೆ ತೆರಿಗೆ ಸಂದಾಯ ಮಾಡಿದ್ದಲ್ಲಿ ಭಾಗ 66(2)ರಲ್ಲಿ ಒದಗಿಸಿರುವಂತೆ ಕೆಳಕಂಡವುಗಳಿಗಿಂತ ಹೆಚ್ಚಿನ ದಂಡವನ್ನು ವಿಧಿಸ ತಕ್ಕದ್ದು:
 • ಕಡಿಮೆ ಸಂದಾಯವಾದ ತೆರಿಗೆಯ ಶೇಕಡಾ 10ರಷ್ಟು ಅಥವಾ ರೂ.10,000/-

ಪ್ರಶ್ನೆ 5. ದಂಡವನ್ನು ವಿಧಿಸುವ ಸಲುವಾಗಿ ‘ಪುನರಾವರ್ತಿತ ಕಡಿಮೆ ಸಂದಾಯ’ ಎಂದು ಯಾವುದನ್ನು ಪರಿಗಣಿಸಲಾಗುವುದು?

ಉತ್ತರ: ಆರು ಸತತ ತೆರಿಗೆ ಅವಧಿಯಲ್ಲಿ, ಮೂರು ವಿವರಣೆಗಳಿಗೆ ಅನುಗುಣವಾಗಿ, ಮೂರು ಬಾರಿ ಕಡಿಮೆ ತೆರಿಗೆ ಸಂದಾಯ ಮಾಡಿದ್ದಲ್ಲಿ, ಅಂತಹುದನ್ನು, ಭಾಗ 66(2) ರ ಅನ್ವಯ ದಂಡವನ್ನು ವಿಧಿಸುವ ಸಲುವಾಗಿ ‘ಪುನರಾವರ್ತಿತ ಕಡಿಮೆಸಂದಾಯ’ ಎಂದು ಪರಿಗಣಿಸಲಾಗುವುದು.

ಪ್ರಶ್ನೆ6. ತೆರಿಗೆದಾರನ್ನು ಹೊರತು ಪಡಿಸಿ ಅನ್ಯ ವ್ಯಕ್ತಿಗಳಿಗೆ ಯಾವುದಾದರೂ ದಂಡವನ್ನು ನಿಗದಿಪಡಿಸಲಾಗಿದೆಯೇ?

ಉತ್ತರ: ಹೌದು. ಭಾಗ 66(3)ರಲ್ಲಿ ಒದಗಿಸಿರುವಂತೆ, ಕೆಳಕಂಡ ಸಂದರ್ಭಗಳಲ್ಲಿ:

 • 21 ಅಪರಾಧಗಳಲ್ಲಿ ಯಾವುದರಲ್ಲಾದರೂ ನೆರವಾಗಿದ್ದರೆ,
 • ಸರ್ಕಾರದಿಂದ ವಶಪಡಿಸಿಕೊಳ್ಳಬಹುದಾದ ಸರಕುಗಳ ವಹಿವಾಟಿನಲ್ಲಿ (ಪಡೆಯುವುದು, ಪೂರೈಸುವುದು, ಕಾಪಾಡುವುದು,ಅಥವಾ ರವಾನಿಸುವುದು)ತೊಡಗಿದ್ದರೆ,
 • ಅಧಿನಿಯಮದ ಉಲ್ಲಂಘನೆಯಲ್ಲಿ ಸೇವೆಗಳನ್ನು ಪೂರೈಸುವ ಕಾರ್ಯದಲ್ಲಿ ತೊಡಗಿದರೆ ಅಥವಾ ಪಡೆದರೆ,
 • ಸಮ್ಮನ್ಸ್‌ ಜಾರಿಗೊಳಿಸಿರುವ ಅಧಿಕಾರಿಯ ಸಮ್ಮುಖದಲ್ಲಿ ಹಾಜರಾಗದಿದ್ದರೆ,
 • ಸರಕುಪಟ್ಟಿ ಇಲ್ಲದೆ ಯಾವುದೇ ಸರಕು ಪೂರೈಸಿದರೆ, ಅಥವಾ ಕಾನೂನಿನ ಅನ್ವಯ ಜಾರಿಗೊಳಿಸಿರುವಪಕ್ಷದಲ್ಲಿ ಸರಕುಪಟ್ಟಿಯ ಪ್ರಕಾರ ಲೆಕ್ಕ ಇಡುವುದಕ್ಕೆ ಅಸಮರ್ಥರಾಗಿದ್ದರೆ ಅಂತಹ ವ್ಯಕ್ತಿಗಳಿಗೆ ರೂ.25,000/-ರದವರೆವಿಗೂ ದಂಡವನ್ನು ವಿಧಿಸಬಹುದು.

ಪ್ರಶ್ನೆ7. ಎಂ.ಜಿ.ಎಲ್‌ ನಅನ್ವಯ ಪ್ರತ್ಯೇಕವಾಗಿ ದಂಡವು ನಿಗದಿಯಾಗದಿರುವಂತಹ ಉಲ್ಲಂಘನೆಗೆ ಯಾವ ದಂಡವನ್ನು ವಿಧಿಸಬಹುದು ?

ಉತ್ತರ: ಎಂ.ಜಿ.ಎಲ್ ನ ಭಾಗ 67ರಲ್ಲಿ ಒಳಗೊಂಡಿರುವಂತೆ, ಈ ಅಧಿನಿಯಮದ ಅನ್ವಯ ಯಾವುದೇ ನಿಯಮವನ್ನು ಅಥವಾ ಉಪಬಂಧವನ್ನು ಉಲ್ಲಂಘಿಸಿದಲ್ಲಿ ಪ್ರತ್ಯೇಕವಾಗಿ ದಂಡವು ನಿಗದಿಯಾಗದಿದ್ದರೂ, ಅಂತಹ ವ್ಯಕ್ತಿಗೆ ಮೊಬಲಗು ರೂ.25,000/- ದ ವರೆವಿಗೂ ದಂಡವನ್ನು ವಿಧಿಸಬಹುದು.

ಪ್ರಶ್ನೆ8. ಸರಿಯಾದ ದಾಖಲೆಗಳಿಲ್ಲದೆ ಅಥವಾ ಸರಿಯಾದ ಲೆಕ್ಕಪತ್ರಗಳಿಲ್ಲದೇ ಸರಕುಗಳನ್ನು ರವಾನೆ ಅಥವಾ ಸಾಗಿಸುವ ಯತ್ನ ಮಾಡಿದ್ದಲ್ಲಿ ಯಾವ ಕ್ರಮ ತೆಗೆದು ಕೊಳ್ಳಬಹುದು ?
ಉತ್ತರ: ಅಧಿನಿಯಮದಲ್ಲಿ ನಮೂದಿಸಿರುವಂತೆ ದಾಖಲೆಗಳಿಲ್ಲದೆ ಸರಕುಗಳನ್ನು ಸಾಗಿಸಲು ಅಥವಾ ಅಂತಹ ರವಾನೆಯಲ್ಲಿರುವ ಸರಕುಗಳನ್ನು ಶೇಖರಣೆ ಮಾಡಿದ್ದಲ್ಲಿ ಅಥವಾ ಸರಿಯಾದ ಲೆಕ್ಕಪತ್ರಗಳು ಮತ್ತು ದಾಖಲಾತಿ ಇಲ್ಲದೆ ಸರಕುಗಳ ಪೂರೈಕೆ ಅಥವಾ ಶೇಖರಣೆ ಮಾಡಿದ್ದಲ್ಲಿ, ಅಂತಹ ಸರಕುಗಳನ್ನು ವಾಹನದ ಸಮೇತ ಜಪ್ತಿ ಮಾಡ ತಕ್ಕದ್ದು. ಅಂತಹ ಸರಕಿಗೆ ತಗಲುವ ತೆರಿಗೆ, ಬಡ್ಡಿ ಮತ್ತು ದಂಡವು ಸಂದಾಯವಾದ ನಂತರ ಅಥವಾ ಅದಕ್ಕೆ ಅನುಗುಣವಾದ ಮೊತ್ತದ ಸಮಾನ ಮೊತ್ತವನ್ನು ಪಾವತಿಸಿದ ನಂತರ ಸರಕನ್ನು ಮುಕ್ತಗೊಳಿಸಲಾಗುವುದು.

ಪ್ರಶ್ನೆ9.‘ನಿಬಂಧನ ಯೋಜನೆ ‘ಗೆ ಅನ್ವಯವಾಗದಿರುವ ಸಂದರ್ಭದಲ್ಲೂ ಈ ವಿಕಲ್ಪವನ್ನು ಆರಿಸಿಕೊಂಡಿರುವ ವ್ಯಕ್ತಿ ಒಬ್ಬರಿಗೆ ಯಾವ ದಂಡವನ್ನು ವಿಧಿಸಲಾಗುವುದು?

ಉತ್ತರ: ಭಾಗ 8(3) ರಲ್ಲಿ ಒಳಗೊಂಡಂತೆ, ವ್ಯಕ್ತಿಯೊಬ್ಬರು ‘ನಿಬಂಧನ ಯೋಜನೆ’ ಯ ವಿಕಲ್ಪವನ್ನು ಆರಿಸಿಕೊಂಡಿದ್ದರೆ ಮತ್ತು ಅವರು ರಾಜಿ ಪ್ರಕ್ರಿಯೆಗೆ ಅರ್ಹರಾಗಿಲ್ಲದಿದ್ದರೆ, ಅಧಿನಿಯಮದಡಿ ಇರುವ ಉಪಬಂಧಗಳ ಅನ್ವಯ ಪಾವತಿಸಬೇಕಾದ ತೆರಿಗೆಗೆ ಸಮನಾದ ದಂಡ ಮೊತ್ತವನ್ನು ಪಾವತಿಸಲು ಬಾಧ್ಯರು, ಸಾಮಾನ್ಯ ತೆರಿಗೆದಾರರ ರೀತ್ಯಾ ತೆರಿಗೆ ಜೊತೆಗೆ ಈ ದಂಡವನ್ನು ಪಾವತಿಸತಕ್ಕದ್ದು.

ಪ್ರಶ್ನೆ 10. ‘ಅಧಿಹರಣ’ ಎಂದರೇನು ?

ಉತ್ತರ: ಅಧಿನಿಯಮದ ಅನ್ವಯ ‘ಅಧಿಹರಣ’ ಶಬ್ಧದ ಪರಿಭಾಷೆಯನ್ನು ನೀಡಲಾಗಿಲ್ಲ. ಈ ಪರಿಕಲ್ಪನೆಯನ್ನು ರೋಮನ್ನರ ಕಾನೂನಿನಿಂದ ಅಳವಡಿಸಿಕೊಳ್ಳಲಾಗಿದೆ, ಸಾಮ್ರಾಟನ ಹಿಡಿತಕ್ಕೆ ತೆಗೆದುಕೊಂಡು ಅಥವಾ ಜಪ್ತಿಯ ನಂತರ ಸಾಮ್ರಾಜ್ಯದ ಖಜಾನೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆಯನ್ನು ಅರ್ಥೈಸುತ್ತದೆ. ಐಯ್ಯರ್ ಅವರ ಕಾನೂನು ನಿಘಂಟಿನಲ್ಲಿ ‘ಅಧಿಹರಣ’ಶಬ್ಧಕ್ಕೆ “ದಂಡ ಮುಖೇಣ ಸಾರ್ವಜನಿಕ ಖಜಾನೆಗೆ ವಿನಿಯೋಗಿಸು (ಸ್ವಂತ ಸ್ವತ್ತು); ಸರ್ಕಾರದಿಂದ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಳ್ಳುವುದು” ಎಂಬ ಪರಿಭಾಷೆಯನ್ನು ನೀಡಲಾಗಿದೆ.

ಪ್ರಶ್ನೆ 11. ಎಂ.ಜಿ.ಎಲ್ ಅನ್ವಯ ಯಾವ ಸಂದರ್ಭಗಳಲ್ಲಿ ಸರಕನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ?

ಉತ್ತರ: ವ್ಯಕ್ತಿಯೊಬ್ಬರು-

 • ಈ ಅಧಿನಿಯಮದ ಯಾವುದಾದರೂ ಉಪಬಂಧದ ಉಲ್ಲಂಘನೆಯಲ್ಲಿ ಸರಕನ್ನು ಸರಬರಾಜು ಮಾಡಿದರೆ ಮತ್ತು ಅಂತಹ ಉಲ್ಲಂಘನೆಯಿಂದ ಈ ಅಧಿನಿಯಮದ ಅನ್ವಯ ಸಂದಾಯವಾಗಬೇಕಾದ ತೆರಿಗೆಯನ್ನು ತಪ್ಪಿಸಿದರೆ, ಅಥವಾ
 • ಈ ಅಧಿನಿಯಮದ ಅನ್ವಯ ಅಗತ್ಯಕ್ರಮದಲ್ಲಿ ಯಾವುದೇ ಸರಕಿನ ಲೆಕ್ಕ ಇಡದಿದ್ದರೆ,ಅಥವಾ
 • ನೋಂದಣಿಗೆ ಅರ್ಜಿಸಲ್ಲಿಸದೆ ಅಧಿನಿಯಮದ ಅನ್ವಯ ತೆರಿಗೆ ಯೋಗ್ಯ ಸರಕನ್ನು ಪೂರೈಸಿದರೆ ಅಥವಾ
 • ತೆರಿಗೆ ಪಾವತಿಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಧಿನಿಯಮದ ಉಪಬಂಧಗಳನ್ನು / ನಿಯಮಗಳನ್ನು ಉಲ್ಲಂಘಿಸಿದರೆ, ಎಂ.ಜಿ.ಎಲ್‌ನ ಭಾಗ 70ರ ಅನ್ವಯ ಸರಕನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು.

ಪ್ರಶ್ನೆ 12. ಸಮರ್ಪಕ ಅಧಿಕಾರಿಯಿಂದ ಮುಟ್ಟುಗೋಲು ಹಾಕಿಕೊಳ್ಳಲಾದ ಸರಕನ್ನು ಏನು ಮಾಡಲಾಗುತ್ತದೆ ?

ಉತ್ತರ: ಸರಕುಗಳನ್ನು ಮುಟ್ಟುಗೋಲು ಹಾಕಿಕೊಂಡ ನಂತರ ಅವುಗಳನ್ನು ಸರ್ಕಾರದ ವಶಕ್ಕೆ ಒಳಪಡಿಸಲಾಗುತ್ತದೆ ಮತ್ತು ಇದರ ಪರವಾಗಿ ಸಮರ್ಪಕ ಅಧಿಕಾರಿಯ ವಿನಂತಿಯ ಮೇರೆಗೆ ಸಂಬಂಧಿತ ಪೋಲೀಸು ಅಧಿಕಾರಿಗಳು, ಈ ಸರಕುಗಳನ್ನು ವಶಪಡಿಸಿಕೊಳ್ಳಲು ಸಹಕರಿಸುತ್ತಾರೆ.

ಪ್ರಶ್ನೆ13. ಮುಟ್ಟುಗೋಲು ಹಾಕಿಕೊಂಡ ಬಳಿಕ , ಸರಕನ್ನು ಹಿಂಪಡೆಯಲು ಸರಕುದಾರನಿಗೆ ವಿಕಲ್ಪವನ್ನು ನೀಡುವ ಅವಶ್ಯಕತೆ ಇದೆಯೇ?

ಉತ್ತರ: ಹೌದು.ಭಾಗ 70(6)ರಅನ್ವಯ, ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯ ಸರಕುಗಳ ಮಾಲೀಕ ಅಥವಾ ಅಂತಹ ಸರಕುಗಳು ಯಾರ ಅಧೀನದಲ್ಲಿದ್ದವೋ ಆ ವ್ಯಕ್ತಿಗೆ ಮುಟ್ಟುಗೊಲಿನ ಬದಲಾಗಿ ಜುಲ್ಮಾನೆ (ವಶಪಡಿಸಿಕೊಂಡಿರುವ ಸರಕಿನ ಮಾರುಕಟ್ಟೆ ದರವನ್ನು ಮೀರದ ಮೊತ್ತ) ಕಟ್ಟುವ ವಿಕಲ್ಪವನ್ನು ನೀಡತಕ್ಕದ್ದು. ಅಂತಹ ಸರಕಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ತೆರಿಗೆ ಮತ್ತು ಅನ್ಯ ಶುಲ್ಕಗಳ ಸಹಿತ ಈ ಜುಲ್ಮಾನೆಯನ್ನು ಪಾವತಿಸ ತಕ್ಕದ್ದು.

ಪ್ರಶ್ನೆ 14. ನಿಗದಿತ ದಾಖಲೆಗಳಿಲ್ಲದೆ ಸರಕನ್ನು ರವನಿಸುತ್ತಿರುವ ವಾಹನವನ್ನು ವಶ ಪಡಿಸಿಕೊಳ್ಳಬಹುದೇ?

ಉತ್ತರ: ಹೌದು. ಭಾಗ 71ರಲ್ಲಿ ಒಳಗೊಂಡಂತೆ, ಅಧಿನಿಯಮದ ಅನ್ವಯ ಘೋಷಿಸಿರದ ಅಥವಾ ನಿಗದಿತ ದಾಖಲೆಗಳಿಲ್ಲದೆ ಸರಕನ್ನು ರವಾನಿಸುತ್ತಿರುವ ವಾಹನವನ್ನು ವಶಪಡಿಸಿಕೊಳ್ಳತಕ್ಕದ್ದು. ಆದಾಗ್ಯೂ ವಾಹನದ ಮಾಲೀಕರು, ತಮ್ಮ ಅಥವಾ ತಮ್ಮ ಏಜೆಂಟರ ಸಮ್ಮತಿ ಹಾಗೂ ಅರಿವಿಲ್ಲದೆಯೇ, ನಿಗದಿತ ದಾಖಲೆಗಳ ಕೊರತೆಯಲ್ಲಿ ಸರಕನ್ನು ರವಾನಿಸಲು ಆ ವಾಹನವನ್ನು ಉಪಯೋಗಿಸಲಾಗಿರುವುದನ್ನು ಸಾಬೀತುಪಡಿಸಿದರೆ, ಮೇಲೆ ಹೇಳಿದಂತೆ ವಾಹನವನ್ನು ವಶಪಡಿಸಿಕೊಳ್ಳಲಾಗುವುದಿಲ್ಲ. ವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಸರಕು ಅಥವಾ ಪ್ರಯಾಣಿಕರನ್ನು ಕರೆದೊಯ್ಯುವುದಕ್ಕೆ ಉಪಯೋಗಿಸಿದ್ದರೆ, ಅಧಿಹರಣದ ಬದಲಿಗೆ ಸರಕಿನ ಮೇಲೆ ಕಟ್ಟಬೇಕಾದ ತೆರಿಗೆಯ ಸಮಾನ ಮೊತ್ತದ ಜುಲ್ಮಾನೆಯನ್ನು ಸಂದಾಯಿಸುವ ವಿಕಲ್ಪವನ್ನು ಮಾಲೀಕರಿಗೆ ನೀಡಬಹುದು. ಭಾಗ 72 ರಲ್ಲಿ ಒಳಗೊಂಡಂತೆ, ಅಧಿನಿಯಮದಲ್ಲಿ ಅಗತ್ಯ ದಾಖಲೆ /ಘೋಷಣೆಗಳಿಲ್ಲದೆ ಸರಕು ಸಾಗಿಸುವ ಅಪರಾಧಕ್ಕೆ ಸೂಚಿಸಿರುವ ಬೇರೆ ಯಾವುದೇ ದಂಡ /ಕ್ರಮದ ಪೂರ್ವಗ್ರಹವಿಲ್ಲದೆ ಭಾಗ 70 ಅಥವಾ 71 ರ ಅನ್ವಯ ಅಧಿಹರಣ ಅಥವಾ ದಂಡವನ್ನು ವಿಧಿಸ ತಕ್ಕದ್ದು.

ಪ್ರಶ್ನೆ 15. ಅಭಿಯೋಜನೆ ಎಂದರೇನು?

ಉತ್ತರ: ಕಾನೂನು ಕಾರ್ಯವಾಹಿಯನ್ನು ಪ್ರಾರಂಭಿಸುವ ಅಥವಾ ನೆಡೆಸುವ ಕ್ರಿಯೆಯೇ ಅಭಿಯೋಜನೆ, ದೋಷಿಯ ವಿರುದ್ದ ಔಪಚಾರಿಕ ಆರೋಪಗಳನ್ನು ಪ್ರದರ್ಶಿಸುವ ಪ್ರಕ್ರಿಯೆ. ದಂಡ ಪ್ರಕ್ರಿಯಾ ಸಂಹಿತೆಯ ಭಾಗ 198ರ ಅನ್ವಯ ಒಬ್ಬ ವ್ಯಕ್ತಿಯ ವಿರುದ್ದ ವಿಧಿ ಪ್ರಕ್ರಿಯೆಯನ್ನು ಪ್ರಾರಂಭಿಸಿನೆಡೆಸುವುದಕ್ಕೆ “ಅಭಿಯೋಜನೆ” ಎಂಬ ಪರಿ ಭಾಷೆಯನ್ನು ನೀಡಲಾಗಿದೆ.

ಪ್ರಶ್ನೆ 16. ಎಂ ಜಿ ಎಲ್ ನ ಅನ್ವಯ ಅಭಿಯೋಜನೆಗೆ ಒಳಪಡುವ ಅಪರಾಧಗಳು ಯಾವುವು ?

ಉತ್ತರ: ಎಂ.ಜಿ.ಎಲ್‌ನ ಭಾಗ 73ರಲ್ಲಿ, ಅಧಿ ನಿಯಮದಡಿ ವಿಧಿಪ್ರಕ್ರಿಯೆಯನ್ನು ಪ್ರಾರಂಭಿಸುವ ಮತ್ತು ಅಭಿಯೋಜನೆಗೆ ಒಳಪಡುವ ಪ್ರಮುಖ ಅಪರಾಧಗಳನ್ನು ಕ್ರೋಡೀಕರಿಸಲಾಗಿದೆ. ಕೆಳಕಂಡಂತೆ 12 ಅಂತಹ ಪ್ರಮುಖ ಅಪರಾಧಗಳಿವೆ.

 • ಸರಕುಪಟ್ಟಿ ಇಲ್ಲದೆ ಅಥವಾ ತಪ್ಪು/ನಕಲಿ ಸರಕುಪಟ್ಟಿಯೊಂದಿಗೆ ಸರಕು ಪೂರೈಕೆ.
 • ಪೂರೈಕೆ ಮಾಡದೆ ಸರಕುಪಟ್ಟಿಯಜಾರಿ.
 • ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಯಲ್ಲಿ ವಸೂಲಾದ ತೆರಿಗೆಯನ್ನು ಸಂದಾಯ ಮಾಡದಿರುವುದು.
 • ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಅಧಿನಿಯಮದ ಉಲ್ಲಂಘನೆ ಮಾಡಿ ವಸೂಲಾದ ತೆರಿಗೆಯನ್ನು ಸಂದಾಯ ಮಾಡದಿರುವುದು.
 • ಸರಕು ಮತ್ತು/ಅಥವಾ ಸೇವೆಗಳನ್ನು ವಾಸ್ತವಿಕವಾಗಿ ಪಡೆಯದೆ ತೆರಿಗೆ ಐಟಿಯಸಿಯ ಲಾಭವನ್ನು ಪಡೆಯುವುದು / ಅನುಭವಿಸುವುದು.
 • ಮೋಸದಿಂದ ಮರುಪಾವತಿ ಪಡೆಯುವುದು.
 • ತೆರಿಗೆ ಸಂದಾಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ತಪ್ಪು ಮಾಹಿತಿ ನೀಡುವುದು, ಲೆಕ್ಕಪತ್ರಗಳನ್ನು ತಪ್ಪಾಗಿ ನೀಡುವುದು, ನಕಲಿ ಲೆಕ್ಕಪತ್ರಗಳನ್ನು ಅಥವಾ ದಾಖಲೆಗಳನ್ನು ನೀಡುವುದು .
 • ಅಧಿಕಾರಿಗಳನ್ನು ತಮ್ಮ ಕರ್ತವ್ಯ ನಿರ್ವಹಣೆಯಿಂದ ತಪ್ಪಿಸುವುದು ಅಥವಾ ಅಡ್ಡಿಪಡಿಸುವುದು.
 • ಸರಕಾರವು ವಶಪಡಿಸಿಕೊಳ್ಳಬಹುದಾದ ವಸ್ತುಗಳನ್ನು ಪಡೆಯುವುದು/ಪೂರೈಸುವುದು/ರವಾನಿಸುವುದು / ಸಂಗ್ರಹಿಸುವುದು.
 • ಅಧಿನಿಯಮದ ಉಲ್ಲಂಘನೆಯಲ್ಲಿ ಸೇವೆಗಳನ್ನು ಒದಗಿಸುವುದು/ಪಡೆಯುವುದು.
 • ಅಧಿನಿಯಮ/ನಿಯಮದ ಪ್ರಕಾರ ಒದಗಿಸಬೇಕಾಗುವ ಮಾಹಿತಿಯನ್ನು / ನೀಡಲು ವಿಫಲವಾಗುವುದು ಅಥವಾ ತಪ್ಪು ಮಾಹಿತಿಯನ್ನು ನೀಡುವುದು.
 • ಮೇಲೆಹೇಳಿರುವ 11 ಅಪರಾಧಗಳಲ್ಲಿ ಯಾವುದನ್ನಾದರೂ ಎಸಗುವ ಪ್ರಯತ್ನ ಅಥವಾ ಅಂತಹ ಕಾರ್ಯಕ್ಕೆ ನೆರವು.

ಪ್ರಶ್ನೆ 17. ಯಾವುದೇ ಸಾಬೀತಾದ ಅಪರಾಧಕ್ಕೆ ಎಂ ಜಿ ಎಲ್ ನ ಅನ್ವಯ ಶಿಕ್ಷೆ ಏನು ?

ಉತ್ತರ: ಭಾಗ 73(1)ರಲ್ಲಿ ಕೆಳಕಂಡ ಶಿಕ್ಷೆಗಳನ್ನು ನೀಡಬಹುದು. ಅಪರಾಧದಲ್ಲಿ ಒಳಗೊಂಡಂತೆ ಶಿಕ್ಷೆ(ಕಾರಾವಾಸದಅವಧಿ) ತಪ್ಪಿಸಿರುವ ತೆರಿಗೆ ರೂ.250 ಲಕ್ಷಕ್ಕೂ ಮಿಗಿಲಾದ ಮೊತ್ತ 5 ವರ್ಷಗಳು ಮತ್ತು ಜುಲ್ಮಾನೆ ತಪ್ಪಿಸಿರುವ ತೆರಿಗೆ ರೂ.50 ಲಕ್ಷಕ್ಕೂ ಮಿಗಿಲಾದ, 3 ವರ್ಷಗಳು ಮತ್ತು ಜುಲ್ಮಾನೆ ರೂ.250 ಲಕ್ಷಕ್ಕೂ ಕಡಿಮೆಮೊತ್ತ ತಪ್ಪಿಸಿರುವ ತೆರಿಗೆ ರೂ.25 ಲಕ್ಷಕ್ಕೂ ಮಿಗಿಲಾದ, 1 ವರ್ಷ ಮತ್ತು ಜುಲ್ಮಾನೆ ರೂ.50 ಲಕ್ಷಕ್ಕೂ ಕಡಿಮೆಮೊತ್ತ ಭಾಗ 73(2) ರಲ್ಲಿ ಒಳಗೊಂಡಂತೆ ಎರಡನೇ ಬಾರಿಯ ಅಥವಾ ನಂತರದಲ್ಲಿ ಮತ್ತೆ ಅಪರಾಧ ಎಸಗಿರುವುದು ಸಾಬೀತಾದರೆ ದಂಡದ ಸಹಿತ 5 ವರ್ಷಗಳವರೆವಿಗೂ ಕಾರಾಗ್ರಹ ಶಿಕ್ಷೆ ಆಗಬಹುದು. ಆದಾಗ್ಯೂ, ಈ ಭಾಗದಲ್ಲಿರುವಂತೆ ಯಾವುದೇ ಅಪರಾಧಕ್ಕೂ ಕನಿಷ್ಟ ಆರು ತಿಂಗಳ ಕಾರಾವಾಸ ಶಿಕ್ಷೆ ಆಗಬಹುದು.

ಪ್ರಶ್ನೆ 18. ಎಂ.ಜಿ ಎಲ್ ನ ಅನ್ವಯ ವಿಚಾರಣೀಯ ಹಾಗೂ ವಿಚಾರಣೆ ರಹಿತ ಅಪರಾಧಗಳು ಯಾವುವು?

ಉತ್ತರ: ಎಂ.ಜಿ.ಎಲ್‌ನ ಭಾಗ 73(3) ಮತ್ತು 73(4)ರ ಅನ್ವಯ ತಪ್ಪಿಸಿರುವ ತೆರಿಗೆ ರೂ.250 ಲಕ್ಷಕ್ಕೂ ಕಡಿಮೆ ಮೊತ್ತವನ್ನು ಒಳಗೊಂಡ ಅಪರಾಧಗಳು ವಿಚಾರಣೆ ರಹಿತ ಅಪರಾಧಗಳು ಮತ್ತು ಜಾಮೀನು ನೀಡಬಹುದಾದವುಗಳು. ತಪ್ಪಿಸಿರುವ ತೆರಿಗೆ ರೂ.250 ಲಕ್ಷಕ್ಕೂ ಮಿಗಿಲಾದ ಮೊತ್ತವನ್ನು ಒಳಗೊಂಡ ಅಪರಾಧಗಳು ವಿಚಾರಣೀಯ ಅಪರಾಧಗಳು ಮತ್ತು ಜಾಮೀನು ನೀಡಲಾಗದವುಗಳು .

ಪ್ರಶ್ನೆ 19. ಅಭಿಯೋಜನೆಯನ್ನು ಪ್ರಾರಂಭಿಸಲು ಸಕ್ಷಮ ಅಧಿಕಾರಿಯ ಪೂರ್ವ ಅನುಮತಿ ಅವಶ್ಯಕವೇ ?

ಉತ್ತರ : ಹೌದು. ಸಕ್ಷಮ ಅಧಿಕಾರಿಯ ಪೂರ್ವ ಅನುಮತಿ ಇಲ್ಲದೆಯೇ ಯಾವುದೇ ಅಪರಾದಕ್ಕೂ ಯಾರೊಬ್ಬರನ್ನೂ ಅಭಿಯೋಜನೆಗೆ ಗುರಿಪಡಿಸತಕ್ಕದ್ದಲ್ಲ.

ಪ್ರಶ್ನೆ 20. ಎಂ ಜಿ ಎಲ್ ನ ಅನ್ವಯ ಅಭಿಯೋಜನೆಗೆ ಗುರಿ ಪಡಿಸಲು ಅಪರಾಧಿಕ ಮನಃಸ್ಥಿತಿ ಯ ಅವಶ್ಯಕತೆ ಇದೆಯೇ ?

ಉತ್ತರ: ಹೌದು. ಆದಾಗ್ಯೂ, ಭಾಗ 75ರ ಅನ್ವಯ ಅಪರಾಧವನ್ನು ಎಸಗಲು ಅಪರಾಧಿಕ ಮನಃಸ್ಥಿತಿಯೇ ಕಾರಣವೆಂದು, ಅಂತಹ ಮನಃಸ್ಥಿತಿ ಇರುವುದಾಗಿ ಭಾವಿಸಲಾಗಿದೆ.

ಪ್ರಶ್ನೆ 21. ಅಪರಾಧ ಎಸಗುವ ಮನಃಸ್ಥಿತಿ ಎಂದರೇನು?

ಉತ್ತರ: ಯಾವುದೇ ಕೃತ್ಯವನ್ನು ಮಾಡುವಾಗ

 • ಆ ಕೃತ್ಯವು ಉದ್ದೇಶ್ಯ ಪೂರ್ವಕವಾಗಿದ್ದರೆ
 • ಆ ಕೃತ್ಯದ ಪರಿಣಾಮಗಳನ್ನು ಅರಿತು ನಿಯಂತ್ರಿಸಬಹುದಾದರೆ
 • ಅಂತಹ ಕೃತ್ಯವನ್ನು ಎಸಗುವ ವ್ಯಕ್ತಿಯು ಒತ್ತಡಕ್ಕೆ ಒಳಗಾಗದೆ ಇದ್ದರೆ ಮತ್ತು ಅಂತಹ ಕೃತ್ಯಕ್ಕೆ ಆಗುವ ಅಡ್ಡಿಯನ್ನು ಮೀರಿದರೆ
 • ತಾನು ಮಾಡುತ್ತಿರುವ ಕೃತ್ಯವು ಕಾನೂನು ಬಾಹಿರ ಎಂದು ಆ ವ್ಯಕ್ತಿಯು ನಂಬಿದ್ದರೆ ಅಥವಾ ನಂಬಲು ಕಾರಣಗಳಿದ್ದರೆ ಅಂತಹ ಮನಃಸ್ಥಿತಿಯನ್ನು ಅಪರಾಧ ಮನಃಸ್ಥಿತಿ ಎನ್ನಬಹುದು.

ಪ್ರಶ್ನೆ22. ಎಂಜಿಎಲ್ ನ ಅನ್ವಯ ಯಾವುದಾದರೂ ಅಪರಾಧದ ಕಾರಣ ಯಾವುದಾದರು ಕಂಪನಿಯವಿರುದ್ದ ಅಭಿಯೋಜನೆಯನ್ನು ಮಾಡಬಹುದೇ?

ಉತ್ತರ: ಹೌದು. ಎಂ.ಜಿ.ಎಲ್‌ನ ಭಾಗ 77ರಲ್ಲಿ ಒಳಗೊಂಡಂತೆ ಯಾವುದೇ ಕಂಪನಿಯಿಂದ ಆದ ಅಪರಾಧಕ್ಕೆ, ಅಪರಾಧ ನೆಡೆದ ಅವಧಿಯದಲ್ಲಿ, ಆ ಕಂಪನಿಯ ವಹಿವಾಟಿಗೆ ಕಾರಣ ಕರ್ತರಾದ ಅಥವಾ ಜವಾಬ್ದಾರಿಯುತ ಪ್ರತಿಯೊಬ್ಬ ವ್ಯಕ್ತಿಯನ್ನು ಕಂಪನಿಯ ಸಮೇತ ಅಭಿಯೋಜಿಸಿ ದಂಡನೆಗೆ ಒಳಪಡಿಸಬಹುದು. ಕಂಪನಿಯಿಂದ ಆದ ಯಾವುದೇ ಅಪರಾಧವು

 • ಕಂಪನಿಯ ಅಧಿಕಾರಿಯೊಬ್ಬರ ಒಪ್ಪಿಗೆ/ಸಹಕಾರದಿಂದ ಅಥವಾ
 • ಉದಾಸೀನದಿಂದ ಆಗಿದ್ದರೆ ಅಂತಹ ವ್ಯಕ್ತಿಯನ್ನು ಆ ಅಪರಾಧದ ದೋಷಿಯೆಂದು ಪರಿಗಣಿಸಿ, ಅಭಿಯೋಜನೆಗೆ ಮತ್ತು ದಂಡನೆಗೆ ಗುರಿಪಡಿಸಬಹುದು.

ಪ್ರಶ್ನೆ 23. ಅಪರಾಧಗಳ ರಾಜಿ ಪ್ರಕ್ರಿಯೆ ಎಂದರೇನು?

ಉತ್ತರ: ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆಯ ಭಾಗ 320ರಲ್ಲಿ, ಪರ್ಯಾಲೋಚನೆ ಅಥವಾ ಖಾಸಗಿ ಉದ್ದೇಶ್ಯದ ಮೇರೆಗೆ ಅಭಿಯೋಜನೆಯನ್ನು ತಡೆಯುವು ಕಾರ್ಯಕ್ಕೆ “ರಾಜಿ ಪ್ರಕ್ರಿಯೆ” ಎಂಬ ಪರಿಭಾಷೆ ನೀಡಲಾಗಿದೆ.

ಪ್ರಶ್ನೆ 24. ಎಂ ಜಿ ಎಲ್ ನ ಅನ್ವಯ ಅಪರಾಧಗಳಿಗೆ ರಾಜಿ ಮಾಡಿಕೊಳ್ಳಬಹುದೇ?

ಉತ್ತರ: ಹೌದು. ಎಂಜಿಎಲ್‌ನ ಭಾಗ 78ರಲ್ಲಿರುವಂತೆ, ಕೆಳಕಂಡ ಅಪರಾಧಗಳ ವಿನಹ ಬೇರೆ ಯಾವುದೇ ಅಪರಾಧವನ್ನು ನಿಗದಿತ ಪರ್ಯಾಯ ಮೊತ್ತ ಪಾವತಿಸಿ ರಾಜಿ ಮಾಡಿಕೊಳ್ಳಬಹುದು, ಅಭಿಯೋಜನೆಯನ್ನು ಪ್ರಾರಂಭಿಸುವ ಮುನ್ನ ಅಥವಾ ನಂತರದಲ್ಲಿ ಅಂತಹ ರಾಜಿಯನ್ನು ಮಾಡಿಕೊಳ್ಳಬಹುದು.

 • 12 ಪ್ರಮುಖ ಅಪರಾಧಗಳಲ್ಲಿ ಸಂಖ್ಯೆ 1 ರಿಂದ 7 ರವರೆಗೆ ಹೇಳಿರುವ ಅಪರಾಧಗಳು, ಹಾಗೂ ಯಾವುದಾದರೂ ಅಪರಾಧದ ಸಂಬಂಧವಾಗಿ ಮೊದಲೇ ರಾಜಿ ಮಾಡಿಕೊಂಡಿದ್ದರೆ;
 • 12 ಪ್ರಮುಖ ಅಪರಾಧಗಳಲ್ಲಿ ಸಂಖ್ಯೆ 1 ರಿಂದ 7 ರ ವರೆಗೆ ಹೇಳಿರುವ ಅಪರಾಧಗಳಿಗೆ ಸಹಕರಿಸಿದರೆ/ ಅಪರಾಧದ ಆರೋಪ ಹೊತ್ತ ವ್ಯಕ್ತಿಯು ಯಾವುದಾದರೋ ಅಪರಾಧದ ಸಂಬಂಧವಾಗಿ ಮೊದಲೇ ರಾಜಿ ಮಾಡಿಕೊಂಡಿದ್ದರೆ ;
 • ಎಸ್‌ಜಿಎಸ್‌ಟಿ ಅಧಿನಿಯಮ ಅಥವಾ ಐಜಿಎಸ್‌ ಅಧಿನಿಯಮ ದಡಿ ರೂ.1ಕೋಟಿ ಗೂ ಮಿಗಿಲಾದ ಮೊತ್ತದ ಸರಕು ಸರಬರಾಜಿನ ಸಂಬಂಧದಲ್ಲಿ ಅಪರಾಧದ ಆರೋಪ ಹೊತ್ತ ವ್ಯಕ್ತಿಯು ಯಾವುದಾದರೂ ಅಪರಾಧದ (ಮೇಲೆ ಹೇಳಿರುವ ಅಪರಾಧಗಳನ್ನು ಹೊರತು ಪಡಿಸಿ) ಸಂಬಂಧವಾಗಿ ಮೊದಲೇ ರಾಜಿ ಮಾಡಿಕೊಂಡಿದ್ದರೆ ;
 • ಸಿಜಿಎಸ್‌ಟಿ/ಎಸ್‌ಜಿಎಸ್‌ಟಿಯನ್ನು ಹೊರತು ಎನ್‌ಡಿಪಿಎಸ್ಏ (NDPSA) ಅಥವಾ ಎಫ್ಎಫ್ಈಎಮ್ಏ (FEMA) ಅಥವಾ ಬೇರೆ ಯಾವುದಾದರೋ ಅಧಿನಿಯಮದ ಅನ್ವಯವೂ ಅಪರಾಧವಾಗಿರುವ, ಯಾವುದೇ ಅಪರಾಧ;
 • ಈ ವತಿಯಿಂದ ನಿಗದಿಯಾಗಿರುವ ಬೇರೆ ಯಾವುದೇ ವರ್ಗದ ಅಪರಾಧಗಳು ಅಥವಾ ವ್ಯಕ್ತಿಗಳು. ತೆರಿಗೆ, ಬಡ್ಡಿ ಮತ್ತು ದಂಡವು ಸಂದಾಯವಾದ ನಂತರವೇ ರಾಜಿಗೆ ಅನುಮತಿ ನೀಡಲಾಗುವುದು ಹಾಗೂ ರಾಜಿಯಿಂದಾಗಿ ಬೇರೆ ಕಾನೂನು ರೀತ್ಯಾ ಮೊದಲೇ ನೆಡೆಯುತ್ತಿರುವ ಕ್ರಮದ ಮೇಲೆ ಯಾವುದೇ ಪರಿಣಾಮ ಇರುವುದಿಲ್ಲ.

ಪ್ರಶ್ನೆ 25. ಅಪರಾಧಗಳ ರಾಜಿ ಸಂಬಂಧವಾಗಿ ಯಾವುದಾದರೂ ನಗದು ಪರಿಮಿತಿ ನಿಗದಿಯಾಗಿದೆಯೇ?

ಉತ್ತರ: ಹೌದು. ರಾಜಿ ಪ್ರಕ್ರಿಯೆಯ ಕನಿಷ್ಠ ಮೊತ್ತವು ಈ ಕೆಳಕಂಡ ಮೊತ್ತಕ್ಕಿಂತ ಹೆಚ್ಚಿರಬೇಕು

 • ಒಳಗೊಂಡಿರುವ ತೆರಿಗೆಯ ಶೇಕಡಾ 50% ಅಥವಾ
 • ಮೊಬಲಗು ರೂ.10,000/-ರಾಜಿ ಪ್ರಕ್ರಿಯೆಯ ಗರಿಷ್ಠ ಮೊತ್ತವು ಈ ಕೆಳಕಂಡಂತೆ
 • ಒಳಗೊಂಡಿರುವ ತೆರಿಗೆಯ ಶೇಕಡಾ150%ಅಥವಾ ಮೊಬಲಗು ರೂ.30,000/-

ಪ್ರಶ್ನೆ 26. ಎಂ ಜಿ ಎಲ್ ನ ಅನ್ವಯ ಅಪರಾಧಗಳ ರಾಜಿಯಿಂದಾಗುವ ಪರಿಣಾಮಗಳೇನು ?

ಉತ್ತರ: ಭಾಗ 77 ರ ಉಪಭಾಗ (3) ರಲ್ಲಿ ಒಳಗೊಂಡಂತೆ ರಾಜಿ ಪ್ರಕ್ರಿಯೆಯ ಮೊತ್ತವನ್ನು ಪಾವತಿಸಿದ ಬಳಿಕ ಈ ಅಧಿನಿಯಮದಡಿ ಮುಂದಿನ ಕ್ರಮವನ್ನು ಜಾರಿಗೊಳಿಸಬಾರದು ಮತ್ತು ಈಗಾಗಲೇ ಪ್ರಾರಂಭವಾಗಿರುವ ಕ್ರಿಮಿನಲ್‌ ಕ್ರಮವನ್ನು ನಿಲ್ಲಿಸತಕ್ಕದ್ದು.

*****

ಐಜಿಯಎಸ್‌ಟಿ ಅಧಿನಿಯಮದ ಅವಲೋಕನ

21. ಐಜಿಯಎಸ್‌ಟಿ ಅಧಿನಿಯಮದ ಅವಲೋಕನ

ಪ್ರಶ್ನೆ1. ಐಜಿಎಸ್‌ಟಿ ಎಂದರೇನು?

ಉತ್ತರ: “ಸಮಗ್ರ ಸರಕು ಮತ್ತು ಸೇವಾ ತೆರಿಗೆ” (ಐಜಿಎಸ್‌ಟಿ) ಎಂದರೆ ಐಜಿಎಸ್‌ಟಿ ಅಧಿನಿಯಮದ ಅನ್ವಯ ಅಂತರ ರಾಜ್ಯ ವ್ಯಾಪಾರ ಅಥವಾ ವಾಣಿಜ್ಯದ ಕ್ರಮದಲ್ಲಿ ಸರಬರಾಜಾಗುವ ಸರಕು ಮತ್ತು / ಅಥವಾ ಸೇವೆಗಳಿಗೆ ತಗಲುವ ತೆರಿಗೆ.

ಪ್ರಶ್ನೆ2. ಅಂತರರಾಜ್ಯ ಸರಬರಾಜುಗಳು ಯಾವುವು?

ಉತ್ತರ: ಅಂತರ್ರಾಜ್ಯ ವ್ಯಾಪಾರ ಅಥವಾ ವಾಣಿಜ್ಯದ ಕ್ರಮದಲ್ಲಿ ಸರಬರಾಜಾಗುವ ಸರಕು ಮತ್ತು/ಅಥವಾ ಸೇವೆಗಳು ಅಂದರೆ ಸರಕು ಅಥವಾ ಸೇವೆಯನ್ನು ಒದಗಿಸುವವರ ಹಾಗೂ ಅವುಗಳನ್ನು ಪಡೆಯುವವರ ಜಾಗಗಳು ಬೇರೆ ಬೇರೆ ರಾಜ್ಯಗಳಲ್ಲಿ ಇರುತ್ತವೆ. (ಐಜಿಎಸ್‌ಟಿ ಅಧಿನಿಯಮದ ಭಾಗ 3(1) ಮತ್ತು 3(2).).

ಪ್ರಶ್ನೆ3. ಜಿಎಸ್‌ಟಿ ಅನ್ವಯ ಅಂತರ್ರಾಜ್ಯಗಳಲ್ಲಿ ಪೂರೈಕೆಯಾಗುವ ಸರಕು ಮತ್ತು ಸೇವೆಗಳಿಗೆ ತೆರಿಗೆಯನ್ನು ಹೇಗೆ ವಿಧಿಸಲಾಗುವುದು?

ಉತ್ತರ: ಅಂತರ್ರಾಜ್ಯ ಸರಬರಾಜುಗಳಿಗೆ ಕೇಂದ್ರ ಸರ್ಕಾರದಿಂದ ಐಜಿಎಸ್‌ಟಿ ಯನ್ನು ವಿಧಿಸಲಾಗುವುದು ಮತ್ತು ವಸೂಲು ಮಾಡಲಾಗುವುದು. ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿಯ ಸಮಗ್ರ ಕ್ರೋಡೀಕರಣವೇ ಐಜಿಎಸ್‌ಟಿ, ಇದನ್ನು ತೆರಿಗೆ ವಿಧಿಸಬಹುದಾದ ಎಲ್ಲಾ ಅಂತರ್ರಾಜ್ಯ ಸರಕುಗಳು ಮತ್ತು ಸೇವೆಗಳ ಮೇಲೆ ವಿಧಿಸಲಾಗುವುದು. ಅಂತರ್ರಾಜ್ಯ ಮಾರಾಟಗಾರರು ತಾವು ಖರೀದಿಸಿದ ವಸ್ತುಗಳಿಗೆ ತಗಲುವ ಐಜಿಎಸ್‌ಟಿ, ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿಯ ಸಮಗ್ರ ಐಟಿಸಿ ಲಾಭವನ್ನು ಪಡೆದ ನಂತರ, ಹೆಚ್ಚಳ ಮೌಲ್ಯಕ್ಕೆ ಐಜಿತಎಸ್‌ಟಿ ಯನ್ನು ಸಂದಾಯಿಸ ಬೇಕಾಗುತ್ತದೆ. ಯಾವ ರಾಜ್ಯದಿಂದ ಸರಕು/ಸೇವೆ ರಫ್ತಾಗುತ್ತಿದೆಯೋ ಆ ರಾಜ್ಯವು ಐಜಿಲಎಸ್‌ಟಿ ಪಾವತಿಯನ್ನು ಒಳಗೊಂಡ ಎಸ್‌ಜಿಎಸ್‌ ಟಿಐಟಿಗಸಿಯ ಲಾಭಾಂಶವನ್ನು ಕೇಂದ್ರಸರ್ಕಾರಕ್ಕೆ ವರ್ಗಾಯಿಸುತ್ತದೆ. ಸರಕು/ಸೇವೆಯನ್ನು ಪಡೆಯುವ ವ್ಯಕ್ತಿಯು ತನ್ನ ರಾಜ್ಯದಲ್ಲೇ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಐಜಿ ಎಸ್‌ಟಿಐಟಿಸಿ ಯ ಲಾಭವನ್ನು ಪಡೆಯುತ್ತಾರೆ. ಕೇಂದ್ರವು ಎಸ್‌ಜಿಎಸ್‌ಟಿಯಲ್ಲಿ ಒಳಗೊಂಡ ಐಜಿಕೆಎಸ್‌ಟಿಐಟಿಸಿಯ ಲಾಭಾಂಶವನ್ನು ಸರಕು/ಸೇವೆ ಪಡೆಯುತ್ತಿರುವ ರಾಜ್ಯಕ್ಕೆ ವರ್ಗಾಯಿಸುತ್ತದೆ. ಕೇಂದ್ರ ಏಜೆಸ್ಸಿಗೆ ಈ ಸಂಬಂಧ ಮಾಹಿತಿಯನ್ನು ಒದಗಿಸಲಾಗುತ್ತದೆ, ಕೇಂದ್ರ ಏಜೆನ್ಸಿಯು ಕ್ಲಿಯರಿಂಗ್ ಹೌಸ್ ಮೆಕಾನಿಸಂ ಆಗಿ ಕಾರ್ಯ ನಿರ್ವಹಿಸುತ್ತದೆ, ಕೋರಿಕೆಗಳನ್ನು ಪರಿಶೀಲಿಸಿ ಸಂಬಂಧಿತ ಸರ್ಕಾರಗಳಿಗೆ ನಗದು ವರ್ಗಾವಣೆ ಸೂಚನೆ ನೀಡುತ್ತದೆ.

ಪ್ರಶ್ನೆ 4. ಐಜಿಎಸ್‌ಟಿ ಕಾನೂನು ಮಸೂದೆಯ ಪ್ರಮುಖ ಲಕ್ಷಣಗಳೇನು ?

ಉತ್ತರ: ಐಜಿ/ಎಸ್‌ಟಿ ಕಾನೂನು ಮಸೂದೆಯಲ್ಲಿ 33 ಭಾಗಗಳನ್ನು ಒಳಗೊಂಡ 11 ಅಧ್ಯಾಯಗಳು ಇವೆ. ಈ ಮಧ್ಯೆ, ಮಸೂದೆಯು, ಸರಕುಗಳ ಸರಬರಾಜು ಸ್ಥಳವನ್ನು ನಿರ್ಧರಿಸುತ್ತದೆ. ಸರಬರಾಜು ಪ್ರಕ್ರಿಯೆಯು ಸರಕುಗಳ ಸಾಗಣೆಯನ್ನು ಒಳಗೊಂಡಿದ್ದರೆ, ಸರಕುಪಡೆಯುವವರಿಗೆ ಅಂತಿಮವಾಗಿ ತಲುಪುವ ಸ್ಥಳವು, “ಪೂರೈಕೆಸ್ಥಳ”ವಾಗಿರುತ್ತದೆ. ಸರಬರಾಜು ಪ್ರಕ್ರಿಯೆಯಲ್ಲಿ, ಸರಕುಗಳ ಸಾಗಣೆ ಇಲ್ಲದಿದ್ದರೆ ಸರಕನ್ನು ಪಡೆಯುವವರಿಗೆ ಸರಕು ತಲುಪುವ ಸ್ಥಳವೇ “ಪೂರೈಕೆ ಸ್ಥಳ” ವಾಗಿರುತ್ತದೆ. ಜೋಡಣೆ ಮತ್ತು ಪರಿಸ್ತಾಪನೆಗೊಳ್ಳುವಂತಹ ಸರಕುಗಳ ವಿಷಯದಲ್ಲಿ, ಅಂತಹ ಜೋಡಣೆ ಮತ್ತು ಪರಿಸ್ತಾಪನೆಯಾಗುವ ಸ್ಥಳವೇ “ಪೂರೈಕೆಸ್ಥಳ”ವಾಗಿರುತ್ತದೆ. ಅಂತಿಮವಾಗಿ, ಯಾವುದಾದರೋ ವಾಹನಕ್ಕೆ ತುಂಬುವಂತಹ ಸರಕುಗಳಿಗೆ ಸಂಬಂಧಿಸಿದಂತೆ, ಸರಕನ್ನು ವಾಹನಕ್ಕೆ ತುಂಬಿಸುವಂತಹಸ್ಥಳವು “ಪೂರೈಕೆ ಸ್ಥಳ” ವಾಗಿರುತ್ತದೆ.

ಪ್ರಶ್ನೆ 5. ಐಜಿಣಎಸ್‌ಟಿ ಮಾದರಿಯ ಅನುಕೂಲಗಳೇನು ?

ಉತ್ತರ: ಐಜಿಎಸ್‌ಟಿ ಮಾದರಿಯ ಮುಖ್ಯ ಅನುಕೂಲಗಳು:

ಎ.ಅಂತರ್ರಾಜ್ಯ ವ್ಯವಹಾರಗಳಲ್ಲಿ ಅವ್ಯಾಹತ ಐ.ಟಿ.ಸಿ ಸರಪಳಿಯ ಪಾಲನೆ ;

ಬಿ. ಅಂತರ್ರಾಜ್ಯ ಮಾರಾಟಗಾರರಿಗೆ ಅಥವಾ ಖರೀದಿದಾರರಿಗೆ ಮುಂಗಡ ತೆರಿಗೆ ಪಾವತಿ ಅಥವಾ ಹೆಚ್ಚು ನಗದು ತಡೆ ಇರುವುದಿಲ್ಲ.

ಸಿ.ತೆರಿಗೆಯನ್ನು ಸಂದಾಯ ಮಾಡುವಾಗಲೇ ಐ.ಟಿ.ಸಿ ಲಾಭವನ್ನು ಪಡೆಯುವ ಕಾರಣ ಸರಕನ್ನು ಹೊರಗೆ ಕಳುಹಿಸುವ ರಾಜ್ಯಕ್ಕೆ ಅನುಗುಣವಾಗಿ ಯಾವುದೇ ಮರುಪಾವತಿ ಕೋರಿಕೆಗಳಿರುವುದಿಲ್ಲ.

ಡಿ. ಸ್ವ-ಮೇಲ್ವಿಚಾರಕ ಮಾದರಿ ತೆರಿಗೆ ಪದ್ದತಿಯನ್ನು ಸರಳವಾಗಿರಿಸುತ್ತಾ ತೆರಿಗೆ ತಟಸ್ಥತೆಯನ್ನು ಕಾಪಾಡುತ್ತದೆ

ಇ.ಸರಳ ಲೆಕ್ಕಪತ್ರಗಳ ಕಾರಣ ತೆರಿಗೆದಾರರಿಗೆ ಹೆಚ್ಚಿನ ಪಾಲನೆ ಕ್ರಮವನ್ನು ಹೊರಿಸುವುದಿಲ್ಲ .ಎಫ್. ಹೆಚ್ಚಿನ ಪಾಲನೆಗೆ ಮತ್ತು ಹೆಚ್ಚು ವಸೂಲಾತಿ ಕ್ಷಮತೆಗೆ ಅನುವಾಗುತ್ತದೆ. ಈ ಮಾದರಿಯಲ್ಲಿ ಒಂದು ವ್ಯಾಪಾರದಿಂದ ಇನ್ನೊಂದು ವ್ಯಾಪಾರದ ನಡುವೆ ಹಾಗೂ ವ್ಯಾಪಾರಿಯಿಂದ ಗ್ರಾಹಕರ ನಡುವಿನ ವ್ಯವಹಾರವನ್ನು ನಿರ್ವಹಿಸುತ್ತದೆ.

ಪ್ರಶ್ನೆ 6. ಜಿಎಸ್‌ಟಿ ಯ ಅನ್ವಯ ಆಮದು / ರಪ್ತು ವಸ್ತುಗಳ ತೆರಿಗೆಯನ್ನು ಹೇಗೆ ನಿಭಾಯಿಸಲಾಗುವುದು ?

ಉತ್ತರ:ಜಿಎಸ್‌ಟಿಯ (ಜಿಎಸ್‌ಟಿ)ನ್ನು ಪಾವತಿಸುವ ಸಲುವಾಗಿ ಎಲ್ಲ ಆಮದು/ರಫ್ತು ವಸ್ತುಗಳನ್ನು ಅಂತರ್ರಾಜ್ಯ ಸರಕು ಸರಬರಾಜಿನಂತೆಯೇ ಪರಿಗಣಿಸಲಾಗುವುದು. ತೆರಿಗೆ ಹೊರಿಸುವಿಕೆಯಲ್ಲಿ ಸರಬರಾಜು ನಡಾವಳಿಯನ್ನೇ ಅನುಸರಿಸಲಾಗುತ್ತದೆ, ಎಸ್‌ಜಿಎಸ್‌ಟಿ ಸಂದರ್ಭದಲ್ಲಿ ತೆರಿಗೆಯನ್ನು, ಆಮದುಗೊಂಡ ಸರಕು ಮತ್ತು ಸೇವೆಗಳನ್ನು ಪಡೆಯುವ ರಾಜ್ಯದ ಮೇಲೆ ಹೊರಿಸಲ್ಪಡುತ್ತದೆ. ಆಮದುಗೊಂಡ ಸರಕು ಮತ್ತು ಸೇವೆಗಳ ಮೇಲೆ ಸಂದಾಯವಾದ ಐಜಿಎಸ್‌ಟಿಯಲ್ಲಿ, ಐಟಿಸಿ ರೂಪದಲ್ಲಿ ಪೂರ್ಣಪ್ರಮಾಣದ ಪರಿಹಾರ ದೊರಕುತ್ತದೆ. (ಐಜಿಎಸ್‌ಟಿ ಅಧಿನಿಯಮದ ಭಾಗ2(ಸಿ)).

ಪ್ರಶ್ನೆ7. ಐಜಿಎಸ್‌ಟಿ ಅಧಿನಿಯಮವು ಕೆಲವೇ ಪರಿಭಾಷೆಯನ್ನು ಒಳಗೊಂಡು ಸರಳವಾಗಿದೆ ಮತ್ತು ಬಹುಪಾಲು ಇತ್ಯರ್ಥ ಆಯುಕ್ತರಿಗೆ ಸಲ್ಲುತ್ತದೆ. ಸಿಜಿಎಸ್‌ಟಿ ಹಾಗೂ ಎಸ್‌ಜಿಎಸ್‌ಟಿ ಅಧಿನಿಯಮವು ಐಜಿಎಸ್‌ಟಿ ಅಧಿನಿಯಮಕ್ಕೆ ಅನ್ವಯಿಸುತ್ತದೆಯೇ?

ಉತ್ತರ: ಹೌದು. ಐಜಿಎಸ್‌ಟಿ ಅಧಿನಿಯಮದ ಭಾಗ 27 ರಲ್ಲಿ ಒಳಗೊಂಡಂತೆ, ಸಿಜಿಎಸ್‌ಟಿ ಅಧಿನಿಯಮದಡಿ ತೆರಿಗೆ ವಸೂಲಿಗೆ ಅನ್ವಯಗೊಳ್ಳುವ ವಿಭಿನ್ನ ಉಪಬಂಧಗಳು ಐಜಿಎಎಸ್‌ಟಿ ಅಧಿನಿಯಮಕ್ಕೂ ಅನ್ವಯಗೊಳ್ಳುತ್ತವೆ.

ಪ್ರಶ್ನೆ 8. ಐಜಿಎಸ್‌ಟಿ ಯನ್ನು ಹೇಗೆ ಪಾವತಿಸಲಾಗುವುದು?

ಉತ್ತರ: ಐಜಿ/ಎಸ್‌ಟಿಯನ್ನು ಐಟಿಸಿಯ ಮುಖಾಂತರ ಅಥವಾ ನಗದು ರೂಪದಲ್ಲಿ ಸಂದಾಯ ಮಾಡಬಹುದು. ಆದಾಗ್ಯೂ, ಐಜಿಎಸ್‌ಟಿ ಯನ್ನು ಐಟಿಸಿ ಯ ಮುಖಾಂತರ ಪಾವತಿಸಬೇಕಾದರೆ ಕೆಳಕಂಡ ಶ್ರೇಣಿ ವ್ಯವಸ್ಥೆಯನ್ನು ಅನುಸರಿಸಬೇಕು.

 • ಐಜಿಎಸ್‌ಟಿಯಲ್ಲಿ ದೊರಕುವ ಮೊದಲ ಐಟಿಸಿಯನ್ನು ಐಜಿಎಸ್‌ಟಿ ಪಾವತಿಗೆ ಉಪಯೋಗಿಸಬೇಕು.
 • ಐಜಿಎಸ್‌ಟಿಯ ಐಟಿಸಿಯ ಪೂರೈಕೆಯ ನಂತರ ಸಿಜಿಎಸ್‌ಟಿಯಡಿ ದೊರಕುವ ಐಟಿಸಿಯನ್ನು ಐಜಿಎಸ್‌ಟಿಯ ಪಾವತಿಗೆ ಉಪಯೋಗಿಸಬೇಕು.
 • ಐಜಿಎಸ್‌ಟಿ ಯಲ್ಲಿ ದೊರಕುವ ಐಟಿರಸಿ ಹಾಗೂ ಸಿಜಿಎಸ್‌ಟಿ ಯಲ್ಲಿ ದೊರಕುವ ಐಟಿಬಸಿ ಯ ಪೂರೈಕೆಯ ನಂತರವೇ, ಎಸ್‌ಜಿಎಸ್‌ಟಿಯಲ್ಲಿ ದೊರಕುವ ಐಟಿಸಿಯನ್ನು ಐಜಿಎಸ್‌ಟಿ ಪಾವತಿಸಲು ಅನುಮತಿ ನೀಡಲಾಗುವುದು. ಉಳಿದ ಐಜಿಎಸ್‌ಟಿ ಹೊಣೆಯನ್ನು ನಗದು ಮುಖಾಂತರ ಪಾವತಿಸತಕ್ಕದ್ದು. ಐಜಿಎಸ್‌ಟಿಯನ್ನು ಐಟಿಸಿಯ ಮೇಲೆ ಪಾವತಿಸಲು, ಜಿಎಸ್‌ಟಿ ವ್ಯವಸ್ಥೆಯು ಈ ಮೇಲ್ಕಂಡ ಶ್ರೇಣಿಯನ್ನು ಅನುಸರಿಸುವುದನ್ನು ಖಚಿತಪಡಿಸುತ್ತದೆ.

ಪ್ರಶ್ನೆ9. ಸರಕನ್ನು ರಫ್ತು ಮಾಡುವ ರಾಜ್ಯ ಮತ್ತು ಆಮದು ಮಾಡಿಕೊಳ್ಳುವ ರಾಜ್ಯ ಮತ್ತು ಕೇಂದ್ರದ ನಡುವೆ ಇತ್ಯರ್ಥ ಹೇಗೆ ಮಾಡಲಾಗುವುದು?

ಉತ್ತರ: ಎರಡು ವಿಧದಲ್ಲಿ ರಾಜ್ಯಗಳು ಹಾಗೂ ಕೇಂದ್ರದ ನಡುವೆ ಲೆಕ್ಕದ ಇತ್ಯರ್ಥ ಆಗುವುದು, ಅವು ಈ ಕೆಳಕಂಡಂತೆ:

 • ಕೇಂದ್ರ ಮತ್ತು ರಫ್ತು ಮಾಡುವ ರಾಜ್ಯ: ರಫ್ತು ಮಾಡುವ ರಾಜ್ಯವು ತನ್ನ ಮಾರಾಟಗಾರನಿಂದ ಉಪಯೋಗಿಸಲ್ಪಟ್ಟ, ಎಸ್‌ಜಿಎಸ್‌ಟಿಯಲ್ಲಿ ದೊರಕುವ ಐಟಿಉಸಿಗೆ ಸಮನಾದ ಮೊತ್ತವನ್ನು ಕೇಂದ್ರಕ್ಕೆ ಪಾವತಿಸುತ್ತದೆ.
 • ಕೇಂದ್ರ ಮತ್ತು ಆಮದು ಮಾಡಿಕೊಳ್ಳುವ ರಾಜ್ಯ: ಕೇಂದ್ರವು, ಅಂತರ್ರಾಜ್ಯ ಸರಬರಾಜುಗಳ ಮೇಲೆ ತಗಲುವ ಎಸ್‌ಜಿಎಸ್‌ಟಿಯನ್ನು ಡೀಲರ್‌ ಮುಖೇನ ಉಪಯೋಗಿಸಲ್ಪಟ್ಟ ಐಜಿಎಸ್‌ಟಿಯ ಐಟಿಸಿಗೆ ಸಮನಾದ ಮೊತ್ತವನ್ನು ಪಾವತಿಸುತ್ತದೆ.
 • ಇತ್ಯರ್ಥ ಅವಧಿಯಲ್ಲಿ ಎಲ್ಲಾ ಡೀಲರ್‌ಗಳಿಂದ ಪಡೆದ ವಿವರಣೆಗಳನ್ನು ಆಧರಿಸಿ ಪ್ರತಿಯೊಂದು ರಾಜ್ಯಕ್ಕೂ

ಸಮಗ್ರವಾಗಿ ಲೆಕ್ಕ ಇತ್ಯರ್ಥ ಮಾಡಲಾಗುವುದು. ಇದೆ ಪ್ರಕಾರದ ಲೆಕ್ಕದ ಇತ್ಯರ್ಥವು ಸಿಜಿಎಸ್‌ಟಿ ಮತ್ತು ಐಜಿಎಸ್‌ಟಿ ಖಾತೆಗಳಿಗೂ ಅನ್ವಯವಾಗುತ್ತದೆ.

ಸರಕು ಮತ್ತು ಸೇವಾ ಪೂರೈಕೆಯ ಸ್ಥಳ

22.ಸರಕು ಮತ್ತು ಸೇವಾ ಪೂರೈಕೆಯ ಸ್ಥಳ:

ಪ್ರಶ್ನೆ 1. ಜಿಎಸ್‌ಟಿ ಯ ಅನ್ವಯ ಸರಕು ಮತ್ತು ಸೇವಾ ಪೂರೈಕೆ ಸ್ಥಳ ವನ್ನು ನಿಗದಿ ಪಡಿಸುವ ಅವಶ್ಯಕತೆ ಏನು?

ಉತ್ತರ: ಸರಕು ತಲುಪುವ ಅಥವಾ ಯಥಾ ಸಂಬಂಧ ಬಳಕೆಯಾಗುವ ಸ್ಥಳದಲ್ಲಿ ತೆರಿಗೆ ವಿಧಿಸಬೇಕು ಎಂಬುದು ಜಿಎಸ್‌ಟಿಯ ಮೂಲತತ್ವ. ಆದ್ದರಿಂದ ತೆರಿಗೆ ಕ್ಷೇತ್ರಾಧಿಕಾರ ಅಥವಾ ತೆರಿಗೆ ಎಲ್ಲಿಗೆ ಸಲ್ಲಬೇಕು ಎಂಬುದನ್ನು ಪೂರೈಕೆ ಸ್ಥಳಕ್ಕೆ ಸಂಬಂಧಿಸಿದ ಉಪಬಂಧವು ನಿರ್ಧರಿಸುತ್ತದೆ. ಯಾವುದೇ ವ್ಯಾಪಾರವು ರಾಜ್ಯದೊಳಗೆ ಅಥವಾ ಅಂತರ್ರಾಜ್ಯದ್ದೋ ಎಂಬುದನ್ನು ಗುರುತಿಸಲಾದ ಸರಬರಾಜು ಸ್ಥಳದಿಂದ ತಿಳಿಯುತ್ತದೆ. ಅಂದರೆ, ಯಾವುದೇ ರಾಜ್ಯದಲ್ಲಿ ಪೂರೈಕೆ ಕೇವಲ ಎಸ್‌ಜಿಎಸ್‌ಟಿ ಮತ್ತು ಸಿಜಿಎಸ್‌ಟಿ ಗೆ ಒಳಪಡುವುದೇ ಅಥವಾ ಅಂತರ್ರಾಜ್ಯ ಪೂರೈಕೆಯ ಸಂದರ್ಭದಲ್ಲಿ, ಐಜಿಎಸ್‌ಟಿಗೆ ಒಳಪಡುವುದೇ ಎಂದು ನಿರ್ಧರಿಸಲು ಸರಕು ಸರಬರಾಜು ಸ್ಥಳದ ಗುರುತು ಅವಶ್ಯಕ.

ಪ್ರಶ್ನೆ 2. ಪೂರೈಕೆ ಸ್ಥಳಸಂಬಂಧಿತ ಉಪಬಂಧವು ಸರಕು ಮತ್ತು ಸೇವೆಗಳಿಗೆ ಅನ್ವಯಿಸುವಂತೆ ಹೇಗೆ ವಿಭಿನ್ನವಾಗುತ್ತವೆ?

ಉತ್ತರ: ಸರಕುಗಳು ಭೌತಿಕವಾದ್ದರಿಂದ ಅವುಗಳು ಬಳಕೆಯಾಗುವ ಸ್ಥಳವನ್ನು ನಿರ್ಧರಿಸುವವಿ ಷಯವಾಗಿ ಹೆಚ್ಚು ಸಮಸ್ಯೆ ಬರುವುದಿಲ್ಲ. ಆದರೆ ಸೇವೆಗಳು ಭೌತಿಕವಾಗಿರದ ಕಾರಣ, ಅವುಗಳು ಪೂರೈಕೆಯಾಗುವ ಸ್ಥಳವನ್ನು ನಿರ್ಧರಿಸಲು ಈ ಕೆಳಕಂಡಂತೆ ಸಮಸ್ಯೆ ಉಂಟಾಗಬಹುದು ;

 1. ಸೇವಾ ಪೂರೈಕೆಯ ರೀತಿಯನ್ನು ಸುಲಭದಲ್ಲಿ ಮಾರ್ಪಾಟು ಮಾಡಬಹುದು. ಉದಾಹರಣೆಗೆ, ಟೆಲಿಕಾಂ ಸೇವೆಗೆ ಸಂಬಂಧಿಸಿದಂತೆ ಪೋಸ್ಟ್‌ಪೈಡ್(ಸೇವೆಯ ನಂತರದಲ್ಲಿ ಪಾವತಿ) ಕ್ರಮವನ್ನು ಸುಲಭದಲ್ಲಿ ಪ್ರೀಪೈಡ್(ಸೇವೆಯ ಪೂರೈಕೆಯ ಮೊದಲೇ ಪಾವತಿಸುವ) ವ್ಯವಸ್ಥೆಗೆ ಬದಲಾಯಿಸಬಹುದು, ಬಿಲ್‌ ತಯಾರಿಸುವ ವಿಳಾಸವನ್ನು ಬದಲಾಯಿಸಬಹುದು, ಬಿಲ್ ಸಲ್ಲಿಸುವ ವಿಳಾಸವನ್ನು ಬದಲಾಯಿಸ ಬಹುದು, ಸಾಫ್ಟ್‌ ವೇರ್ ದುರಸ್ತಿಅಥವಾ ರಕ್ಷಣಾ ಕ್ರಮವನ್ನು ಆನ್‌ ಸೈಟ್‌ ಇಂದ ಆನ್‌ಲೈನ್‌ಗೆ ಪರಿವರ್ತಿಸಬಹುದು, ಈ ಹಿಂದೆ ಬ್ಯಾಂಕಿಂಗ್‌ ಸೇವೆಗಳನ್ನು ಪಡೆಯಲು ಗ್ರಾಹಕರು ಬ್ಯಾಂಕ್‌ಗೆ ಹೋಗಬೇಕಿತ್ತು, ಈಗ ಗ್ರಾಹಕರು ಯಾವ ಪ್ರದೇಶದಿಂದಾದರೂ ಈ ಸೇವೆಯನ್ನು ಪಡೆಯಬಹುದು;
 2. ಸೇವಾ ಪೂರೈಕೆದಾರರು, ಸೇವೆಗಳನ್ನು ಪಡೆಯುವವರು,ಮತ್ತು ಪೂರೈಸಲ್ಪಟ್ಟ ಸೇವೆಗಳ ವಿವರಣೆಯನ್ನು ಪತ್ತೆಹಚ್ಚುವುದು ಸಾಧ್ಯವಾಗದಿರಬಹುದು ಅಥವಾ ವಿವರಣೆಗಳನ್ನು ಸುಲಭದಲ್ಲಿ ಅಡಗಿಸಬಹುದು, ಏಕೆಂದರೆ ಯಾವ ಭೌತಿಕ ವಸ್ತುವೂ ಸ್ಥಾನಾಂತರಿಸುವುದಿಲ್ಲ ಮತ್ತು ಯಾವ ಸುಳಿವೂ ಇರುವುದಿಲ್ಲ.
 3. ಸೇವೆಗಳನ್ನು ಪೂರೈಸುವುದಕ್ಕೆ ಸೇವಾ ಪೂರೈಕೆದಾರರ ನಿಶ್ಚಿತ ವಿಳಾಸದ ಅಗತ್ಯವಿಲ್ಲ ಮತ್ತು ಸೇವೆಯನ್ನು ಪಡೆಯುವವರು ಸಹ ಪ್ರಯಾಣದಲ್ಲಿಯೂ ಸೇವೆಯನ್ನು ಪಡೆಯಬಹುದು. ಬಿಲ್ಲಿಂಗ್ ಮಾಡುವ ಸ್ಥಳವು ರಾತ್ರೋರಾತ್ರಿ ಬದಲಾಗಬಹುದು.
 4. ಕೆಲವೊಮ್ಮೆ ಒಂದೇ ಸೇವಾ ಪ್ರಕಾರವು ಹಲವು ಸ್ಥಳಗಳಿಗೆ ಪೂರೈಕೆಯಾಗಬಹುದು, ಉದಾಹರಣೆಗೆ ರೈಲ್ವೇ ಕಂಬಿಗಳು, ಒಂದು ರಾಜ್ಯದಲ್ಲಿ ಪ್ರಾರಂಭವಾಗಿ ಇನ್ನೊಂದು ರಾಜ್ಯದವರೆಗೂ ವಿಸ್ತರಿಸುವ ರಾಷ್ಟ್ರೀಯ ಹೆದ್ದಾರಿಗಳು ಅಥವಾ ನದಿಯ ಮೇಲೆ ನಿರ್ಮಿತವಾದ ಸೇತುವೆಗಳು. ಇದೇ ರೀತಿ, ಒಂದೇ ನಡವಳಿಯ ಮುಖಾಂತರ ಒಂದು ಚಲನಚಿತ್ರದ ವಿತರಣೆ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದ ಕಾಪೀರೈಟನ್ನು ಬಿಡುಗಡೆಮಾಡಬಹುದು, ಒಂದೇ ವಿಜ್ಞಾಪನೆಯು ಅಥವಾ ಕಾರ್ಯಕ್ರಮವು ದೇಶಾದ್ಯಂತ ಪ್ರಸಾರವಾಗುತ್ತದೆ. ಏರ್‌‌ಲೈನ್‌ ಒಂದು, ವಿಭಿನ್ನ ಕಾಲಿಕ ಟಿಕೆಟುಗಳನ್ನು, ದೇಶದ ಯಾವುದೇ ಎರಡು ಪ್ರದೇಶಗಳಿಗೆ ಪ್ರಯಾಣಿಸಬಹುದಾದ ಬಹುಶಃ 10 ಟಿಕೆಟುಗಳನ್ನುಳ್ಳ ಪುಸ್ತಕ ಒಂದನ್ನು ಜಾರಿಗೊಳಿಸಬಹುದು. ದೆಹಲಿ ಮೆಟ್ರೋ ಜಾರಿಗೊಳಿಸುವ ಕಾರ್ಡನ್ನು ದೆಹಲಿ, ನೋಯಿಡ ಅಥವಾ ಫರೀದಾಬಾ‌ದ್‌ನಲ್ಲಿ ಇರುವ ವ್ಯಕ್ತಿಯು ಉಪಯೋಗಿಸಬಹುದು, ಆದರೆ ರಸೀದಿ ಪಾವತಿಯ ಸಮಯದಲ್ಲಿ ಯಾವ ಸ್ಥಳ ಅಥವಾ ಪ್ರಯಾಣ ಎಂದು ದೆಹಲಿ ಮೆಟ್ರೋಗೆ ಖಚಿತಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೊಸ ಸೇವೆಗಳು ಸತತವಾಗಿ ರೂಪಗೊಳ್ಳುತ್ತಿರುವ ಕಾರಣ ಹೊಸ ಸವಾಲುಗಳು ಉದ್ಭವಿಸುತ್ತವೆ.
 5. ಬಹುಶಃ 15-20 ವರ್ಷಗಳ ಹಿಂದೆ ಯಾರೂ ಡಿಟಿಎಚ್,ಆನ್‌ಲೈನ್‌ ಮಾಹಿತಿ,ಆನ್‌ಲೈನ್‌ ಬುಕಿಂಗ್, ಆನ್‌ಲೈನ್‌ ಟಿಕೆಟ್‌ ಕಾದಿರಿಸುವಿಕೆ, ಇಂಟರ್ನೆಟ್, ಮೊಬೈಲ್‌ ಟೆಲಿಕಮ್ಯುನಿಕೇಷನ್ ಇತ್ಯಾದಿ ಪರಿಕಲ್ಪನೆಗಳನ್ನು ಮಾಡಿರಲಾರರು.

ಪ್ರಶ್ನೆ3. ವ್ಯವಹಾರ ಒಂದರಲ್ಲಿ ಸರಬರಾಜು (ಪೂರೈಕೆ) ಸ್ಥಳವನ್ನು ನಿರ್ಧರಿಸಲು ಯಾವ ಮಾನಕ ಅಥವಾ ಬದಲಿಗಳನ್ನು ಅನುಸರಿಸಬಹುದು?

ಉತ್ತರ: ಸೇವೆಗಳ ಪೂರೈಕೆಗಳಲ್ಲಿ ಅಡಗಿರುವ ಹಲವು ವಿಷಯಗಳನ್ನು ಆಧರಿಸಿ ಪೂರೈಕೆಯ ಸ್ಥಳವನ್ನು ನಿರ್ಧರಿಸಬಹುದು. ಸೇವೆ ಪೂರೈಕೆಯ ಸ್ಥಳವನ್ನು ನಿರ್ಧರಿಸಲು ಹೆಚ್ಚು ಮಾಹಿತಿಯನ್ನು ನೀಡುವ ಯಾವುದೇ ಮಾನಕ ಅಥವಾ ಬದಲಿಗಳನ್ನು ಆರಿಸಿಕೊಳ್ಳಬಹುದು.ಅವುಗಳನ್ನು ಕೆಳಕಂಡಂತೆ ಚರ್ಚಿಸಲಾಗಿದೆ:

ಎ) ಸೇವಾ ಪೂರೈಕೆದಾರರ ಪ್ರದೇಶ

ಬಿ) ಸೇವೆ ಪಡೆಯುವವರ ಪ್ರದೇಶ

ಸಿ) ಸೇವೆಯು ಪೂರೈಕೆಗೊಳ್ಳುವ / ಕಾರ್ಯಗತಗೊಳ್ಳುವ ಸ್ಥಳ

ಡಿ) ಸೇವೆಯು ಬಳಕೆಯಾಗುವ ಸ್ಥಳ

ಇ) ವಾಸ್ತವಿಕ ರೂಪದಲ್ಲಿ ಯಾವ ಜಾಗಕ್ಕೆ ಅಥವಾ ವ್ಯಕ್ತಿಗೆ ಸೇವೆಯು ಸಲ್ಲುತ್ತದೆ,

ಪ್ರಶ್ನೆ4. ಪೂರೈಕೆಯ ಸ್ಥಳದ ಸಂಬಂಧದಲ್ಲಿ, ಬಿ ಟು ಬಿ (ನೊಂದಣೀಕೃತ ವ್ಯಕ್ತಿಗಳಿಗೆ ಪೂರೈಕೆ) ಮತ್ತು ಬಿ ಟು ಸಿ (ನೋಂದಾಯಿಸಿ ಕೊಳ್ಳದ ವ್ಯಕ್ತಿಗಳಿಗೆ ಪೂರೈಕೆ) ವ್ಯವಹಾರಗಳಿಗೆ ಅನುಗುಣವಾಗಿ ಪ್ರತ್ಯೇಕ ನಿಯಮಗಳ ಅವಶ್ಯಕತೆ ಏನು?

ಉತ್ತರ: ಬಿ ಟು ಬಿ ವ್ಯವಹಾರಗಳಲ್ಲಿ, ಸರಕು / ಸೇವೆಗಳನ್ನು ಪಡೆಯುವವರು ಪಾವತಿಸಿದ ತೆರಿಗೆಯನ್ನು ಉದ್ದರಿಯಾಗಿ ಪಡೆದು ಭವಿಷ್ಯದಲ್ಲಿ ತಮ್ಮ ತೆರಿಗೆ ಪಾವತಿಗಳಿಗೆ ವಜಾ ಮಾಡಿಕೊಳ್ಳುವ ಸೌಲಭ್ಯವು ಇರುತ್ತದೆ, ಹಾಗೂ ಅಂತಹ ವ್ಯವಹಾರಗಳು ದಾಖಲೆಗಳಲ್ಲಿ ಮಾತ್ರ ಮೂಡಿಬರುತ್ತವೆ. ಬಿ ಟು ಬಿ ವ್ಯವಹಾರಗಳಲ್ಲಿ ಸಂದಾಯವಾದ ಜಿಎಸ್‌ಟಿ, ವಾಸ್ತವದಲ್ಲಿ ಸರ್ಕಾರಕ್ಕೆ ಹೊರೆಯಾಗಿ ಮತ್ತು ಸರಕು / ಸೇವೆ ಪಡೆಯುವವರಿಗೆ ಸೌಲಭ್ಯವಾಗಿ ಪರಿಣಮಿಸುತ್ತವೆ, ಆದರೆ ಬಿ ಟು ಬಿ ವ್ಯವಹಾರಗಳಲ್ಲಿ ಸೇವೆ ಪಡೆಯುವವರು ಐಟಿಸಿಯ ಲಾಭವನ್ನು ಮುಂದೆ ಪಡೆಯುವುದರಿಂದ ತಮ್ಮ ಪ್ರದೇಶವು ಎಲ್ಲ ಸಂದರ್ಭಗಳಿಗೂ ಅನ್ವಯವಾಗುತ್ತವೆ. ಹಾಗೂ ಸಾಮಾನ್ಯವಾಗಿ ಸೇವೆಯನ್ನು ಪಡೆಯುವವರು ಅವನ್ನು ಇನ್ನೊಬ್ಬ ಗ್ರಾಹಕರಿಗೆ ವರ್ಗಾಯಿಸುತ್ತಾರೆ. ಒಂದು ಬಿಟುಬಿ ವ್ಯವಹಾರವು ಬಿಟುಸಿ ವ್ಯವಹಾರಕ್ಕೆ ಪರಿವರ್ತಿತವಾದಾಗ ಮಾತ್ರ ಪೂರೈಕೆಗಳು ಬಳಕೆಯಾಗುತ್ತವೆ. ಬಿಟುಸಿ ವ್ಯವಹಾರಗಳಲ್ಲಿ, ಪೂರೈಸಲಾದ ಸರಕು/ಸೇವೆಗಳು ಅಂತಿಮವಾಗಿ ಬಳಕೆಯಾಗುತ್ತವೆ ಮತ್ತು ಸರ್ಕಾರಕ್ಕೆ ನಿಜ ರೂಪದಲ್ಲಿ ತೆರಿಗೆ ಸಂದಾಯವಾಗುತ್ತದೆ .

ಪ್ರಶ್ನೆ5. ಸರಕುಗಳನ್ನು ಹೊರ ತೆಗೆಯುವ ಸಂದರ್ಭಕ್ಕೆ ಅನುಗುಣವಾಗಿ “ಪೂರೈಕೆ ಸ್ಥಳ” ಎಂದು ಯಾವುದನ್ನು ಪರಿಗಣಿಸಬಹುದು?

ಉತ್ತರ : ಸರಕುಗಳನ್ನು ಪಡೆಯುವವರಿಗೆ, ಸರಕುಗಳು ಅಂತಿಮವಾಗಿ ಯಾವ ಪ್ರದೇಶದಲ್ಲಿ ಸೇರುತ್ತವೆಯೋ ಅದನ್ನು “ಪೂರೈಕೆ ಸ್ಥಳ ” ಎಂದು ಪರಿಗಣಿಸತಕ್ಕದ್ದು. (ಐಜಿಎಸ್‌ಟಿ ಅಧಿನಿಯಮದ ಭಾಗ 5(2)).

ಪ್ರಶ್ನೆ6. ಅನ್ಯವ್ಯಕ್ತಿಯ ನಿರ್ದೇಶನದ ಮೇರೆಗೆ, ಸರಕು ಪೂರೈಸುವವರು ಯಾರಾದರೋ ವ್ಯಕ್ತಿಗೆ ಸರಕನ್ನು ಸರಬರಾಜು ಮಾಡಿದ್ದಲ್ಲಿ, “ಪೂರೈಕೆ ಸ್ಥಳ ” ಯಾವುದು?

ಉತ್ತರ: ಅನ್ಯ (ಮೂರನೇ) ವ್ಯಕ್ತಿಯನ್ನು ಸರಕು ಪಡೆಯುವವರೆಂದು ಪರಿಗಣಿಸಿ, ಅಂತಹ ವ್ಯಕ್ತಿಯ ವ್ಯಾಪಾರದ ಮೂಲಸ್ಥಳವನ್ನು “ಪೂರೈಕೆ ಸ್ಥಳ” ಎಂದು ಪರಿಗಣಿಸಲಾಗುತ್ತದೆ .(ಐಜಿಎಸ್‌ಟಿ ಅಧಿನಿಯಮದ ಭಾಗ 5(2ಎ)).

ಪ್ರಶ್ನೆ7. ಸರಕು ಅಥವಾ ಸೇವೆಗಳನ್ನು ಯಾವುದಾದರೂ ವಾಹನಕ್ಕೆ, ಅಂದರೆ ಹಡಗು, ವಿಮಾನ, ರೈಲು ಅಥವಾ ಮೋಟಾರು ವಾಹನದ ಮೂಲಕ ಸರಬರಾಜು ಮಾಡುವ ಸಂದರ್ಭದಲ್ಲಿ “ಪೂರೈಕೆ ಸ್ಥಳ” ಯಾವುದಾಗಿರುತ್ತದೆ?

ಉತ್ತರ: ಸರಕುಗಳ ಸಂಬಂಧದಲ್ಲಿ, ಸರಕುಗಳನ್ನು ವಾಹನಕ್ಕೆ ವರ್ಗಾಯಿಸಲಾಗುವ ಪ್ರದೇಶವನ್ನು “ಪೂರೈಕೆ ಸ್ಥಳ” ಎಂದು ಪರಿಗಣಿಸಲಾಗುತ್ತದೆ. (ಐಜಿಎಸ್‌ಟಿ ಅಧಿನಿಯಮದ ಭಾಗ 5(5)). ಆದಾಗ್ಯೂ, ಸೇವೆಗಳಿಗೆ ಅನುಗುಣವಾಗಿ, ಅಂತಹ ಸೇವೆಗಳನ್ನು ಹೊತ್ತವಾಹನವು ಎಲ್ಲಿಂದ ಮೊದಲ ಬಾರಿಗೆ ಹೊರಡುತ್ತದೆಯೋ ಆ ಸ್ಥಳವು “ಪೂರೈಕೆಸ್ಥಳ”ವಾಗಿರುತ್ತದೆ. (ಐಜಿಎಸ್‌ಟಿ ಅಧಿನಿಯಮದ ಭಾಗ 6(11)).

ಪ್ರಶ್ನೆ8. ಬಿ2ಬಿ ಸೇವಾ ಪೂರೈಕೆಗಳಿಗೆ ಸಂಬಂಧಿಸಿದಂತೆ ಯಾವುದನ್ನು “ಪೂರೈಕೆ ಸ್ಥಳ”ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ?

ಉತ್ತರ : ಐಜಿಎಸ್‌ಟಿಯಲ್ಲಿ “ನೋಂದಣೀಕೃತ ತೆರಿಗೆದಾರರು” ಮತ್ತು “ನೊಂದಣಿಯಾಗದ ತೆರಿಗೆದಾರರು” ಎಂಬ ಪರಿಭಾಷೆಯನ್ನು ಉಪಯೋಗಿಸಲಾಗಿದೆ. ನೋಂದಣೀಕೃತ ತೆರಿಗೆದಾರರು ಪಡೆಯುವ ಸರಬರಾಜಿಗೆ ಅನುಗುಣವಾಗಿ, ಅವರಿರುವ ಪ್ರದೇಶವನ್ನೇ “ಪೂರೈಕೆ ಸ್ಥಳ” ಎಂದು ಪರಿಗಣಿಸಲಾಗುತ್ತದೆ. ಸರಕು ಪಡೆಯುವವರು ನೋಂದಾಯಿಸಿಕೊಂಡಿರುವುದರಿಂದ ಅವರ ವಿಳಾಸವು ಯಾವಾಗಲೂ ಲಭ್ಯವಿರುವ ಕಾರಣ ಅದನ್ನೇ “ಪೂರೈಕೆ ಸ್ಥಳ” ಎಂದು ಪರಿಗಣಿಸಲಾಗುತ್ತದೆ.

ಪ್ರಶ್ನೆ9. ನೊಂದಣಿಯಾಗದ ತೆರಿಗೆದಾರರಿಗೆ ಸಂಬಂಧಿಸಿದಂತೆ, ಯಾವುದನ್ನು “ಪೂರೈಕೆ ಸ್ಥಳ ” ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ ?

ಉತ್ತರ: ನೊಂದಣಿಯಾಗದ ತೆರಿಗೆದಾರರಿಗೆ ಸಂಬಂಧಿಸಿದಂತೆ, ಅಂತಹ ಸೇವೆಯನ್ನು ಪಡೆಯುವವರ ಸ್ಥಳವು ” ಸರಬರಾಜು ಸ್ಥಳ” ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಆದಾಗ್ಯೂ ಬಹಳಷ್ಟು ಸಂದರ್ಭಗಳಲ್ಲಿ ಸರಕು/ ಸೇವೆಗಳನ್ನು ಪಡೆಯುವವರ ವಿಳಾಸವು ಪತ್ತೆಯಾಗದ ಕಾರಣ, ಸೇವೆಗಳನ್ನು ಪೂರೈಸುವವರ ಸ್ಥಳವನ್ನೇ “ಪೂರೈಕೆ ಸ್ಥಳಕ್ಕೆ” ಬದಲಿಯಾಗಿ ಪರಿಗಣಿಸಲಾಗುತ್ತದೆ.

ಪ್ರಶ್ನೆ 10. ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದಂತೆ ಅವುಗಳು ಇರುವ ಸ್ಥಳವೇ “ಸರಬರಾಜು ಸ್ಥಳ” ಆಗುತ್ತದೆ. ಉದಾಹರಣೆಗೆ ದೆಹಲಿಯಿಂದ ಮುಂಬೈಗೆ, ಹಲವು ರಾಜ್ಯಗಳ ಮೂಲಕ ಒಂದು ರಸ್ತೆಯನ್ನು ನಿರ್ಮಿಸಿದರೆ “ಪೂರೈಕೆಸ್ಥಳ” ಯಾವುದಾಗಿರುತ್ತದೆ?

ಉತ್ತರ: ಸ್ಥಿರ ಆಸ್ತಿಯು ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ವಿಸ್ತರಿಸಿದ್ದರೆ, ಪ್ರತಿಯೊಂದು ರಾಜ್ಯದಲ್ಲಿಯೂ ಪ್ರತ್ಯೇಕವಾಗಿ ಈ ಸಂಬಂಧ ಮಾಡಿಕೊಂಡಿರುವ ಕರಾರು ಅಥವಾ ಒಪ್ಪಂದಕ್ಕೆ ಅನುಗುಣವಾಗಿ, ವಸೂಲಾದ ಅಥವಾ ನಿಶ್ಚಿತವಾದ ಸರಕು/ಸೇವೆಯ ಮೊತ್ತದ ಅನುಪಾತ ಪ್ರಮಾಣವನ್ನು, ಅಥವಾ ಅಂತಹ ಯಾವುದೇ ಕರಾರು ಇಲ್ಲದಿದ್ದರೆ ,ನ್ಯಾಯ ಸಮ್ಮತವಾಗಿ, ಸೇವಾ ಪೂರೈಕೆಯನ್ನು ಪರಿಗಣಿಸಲಾಗುವುದು. (ಐಜಿದಎಸ್‌ಟಿ ಅಧಿನಿಯಮದ ಭಾಗ 6(5) ).

ಪ್ರಶ್ನೆ 11. ಹಲವು ರಾಜ್ಯಗಳಲ್ಲಿ ಸಂಯೋಜಿಸಲ್ಪಡುವ ಕಾರ್ಯಕ್ರಮಗಳ ಸಂದರ್ಭದಲ್ಲಿ, ಉದಾಹರಣೆಗೆ ಐ.ಪಿ.ಎಲ್ ಕ್ರಿಕೆಟ್ ಸರಣಿ, ಪೂರೈಕೆ ಸ್ಥಳ ಎಂದು ಯಾವುದನ್ನು ಪರಿಗಣಿಸಲಾಗುವುದು?

ಉತ್ತರ: ಕಾರ್ಯಕ್ರಮ ಸಂಯೋಜನೆ ಸಂದರ್ಭದಲ್ಲಿ, ಸೇವೆಯನ್ನು ಪಡೆಯುವ ವ್ಯಕ್ತಿಯು ನೋಂದಣಿಕೃತರಾದರೆ ಅಂತಹ ವ್ಯಕ್ತಿಯ ಸ್ಥಳವನ್ನು ಪೂರೈಕೆ ಸ್ಥಳ ಎಂದು ಪರಿಗಣಿಸಲಾಗುವುದು. ಆದಾಗ್ಯೂ, ಸೇವೆಯನ್ನು ಪಡೆಯುವವರು ನೋಂದಾಯಿಸಿ ಕೊಂಡಿಲ್ಲದಿದ್ದರೆ, ಕಾರ್ಯಕ್ರಮವು ಜರುಗುವ ಸ್ಥಳವನ್ನು “ಪೂರೈಕೆ ಸ್ಥಳ” ಎಂದು ಪರಿಗಣಿಸಲಾಗುವುದು. ಹಲವು ರಾಜ್ಯಗಳಲ್ಲಿ ಕಾರ್ಯಕ್ರಮಗಳು ಜರುಗುವ ಕಾರಣ, ಮತ್ತು ಅಂತಹ ಸೇವೆಗಳಿಗೆ ಸಮಗ್ರ ಮೊತ್ತವನ್ನು ಹೇರಲಾಗುವುದರಿಂದ ಪ್ರತಿ ರಾಜ್ಯದಲ್ಲೂ ಪೂರೈಕೆಯಾಗುವ ಸೇವೆಯ ಮೌಲ್ಯಕ್ಕೆ ಅನುಗುಣವಾಗಿಯೇ “ಪೂರೈಕೆಸ್ಥಳ”ವನ್ನು ಪರಿಗಣಿಸಲಾಗುವುದು. (ಐಜಿಎಸ್‌ಟಿ ಅಧಿನಿಯಮದ ಭಾಗ 6(8)).

ಪ್ರಶ್ನೆ12. ಕೊರಿಯರ್ ಮುಖಾಂತರ ಸಾಗಿಸುವ ಸರಕುಗಳಿಗೆ ಸಂಬಂಧಿಸಿದಂತೆ ಪೂರೈಕೆ ಸ್ಥಳ ಎಂದು ಯಾವುದನ್ನು ಪರಿಗಣಿಸಲಾಗುವುದು ?

ಉತ್ತರ : ಕೊರಿಯರ್ ಸೇವೆಯನ್ನು ಪಡೆಯುವ ವ್ಯಕ್ತಿಯು ನೋಂದಣಿಕೃತರಾದರೆ ಅಂತಹ ವ್ಯಕ್ತಿಯ ಸ್ಥಳವನ್ನು ಪೂರೈಕೆ ಸ್ಥಳ ಎಂದು ಪರಿಗಣಿಸಲಾಗುವುದು. ಆದಾಗ್ಯೂ, ಸೇವೆಯನ್ನು ಪಡೆಯುವವರು ನೋಂದಾಯಿಸಿಕೊಂಡಿಲ್ಲದಿದ್ದರೆ, ಸರಕನ್ನು ಸಾಗಣೆಗೆಂದು ಹಸ್ತಾಂತರಿಸುವ ಸ್ಥಳವನ್ನು ಪೂರೈಕೆ ಸ್ಥಳ ಎಂದು ಪರಿಗಣಿಸಲಾಗುವುದು.

ಪ್ರಶ್ನೆ13. ಒಬ್ಬ ವ್ಯಕ್ತಿಯು ಮುಂಬೈ ಇಂದ ದೆಹಲಿಗೆ ಪ್ರಯಾಣಿಸಿ ಪುನಃ ಮುಂಬೈಗೆ ಹಿಂದಿರುಗಿದರೆ, ಪೂರೈಕೆ ಸ್ಥಳ ಎಂದು ಯಾವುದನ್ನು ಪರಿಗಣಿಸಲಾಗುವುದು?

ಉತ್ತರ : ಆ ವ್ಯಕ್ತಿಯು ನೋಂದಣಿಕೃತರಾದರೆ ಅಂತಹ ವ್ಯಕ್ತಿಯ ಸ್ಥಳವನ್ನು ಪೂರೈಕೆಸ್ಥಳ ಎಂದು ಪರಿಗಣಿಸಲಾಗುವುದು. ಆ ವ್ಯಕ್ತಿಯು ನೋಂದಾಯಿಸಿಕೊಂಡಿಲ್ಲವಾದರೆ ಮುಂಬೈ ಇಂದ ದೆಹಲಿಗೆ ಪ್ರಯಾಣಿಸುವಾಗ ಮುಂಬೈ ಅಂದರೆ ಪ್ರಯಾಣ ಪ್ರಾರಂಭವಾಗುವ ಸ್ಥಳವು “ಪೂರೈಕೆಸ್ಥಳ”ವಾಗುತ್ತದೆ. ದೆಹಲಿಗೆ ಪುನಃ ಮುಂಬೈಗೆ ಹಿಂದಿರುಗಿದರೆ, ದೆಹಲಿ ಇಂದ ಮುಂಬೈಗೆ ತೆರಳುವುದನ್ನು ಬೇರೆ ಪ್ರಯಾಣ ಎಂದು ಪರಿಗಣಿಸಲಾಗುವುದರಿಂದ, ದೆಹಲಿಯು “ಪೂರೈಕೆ ಸ್ಥಳ” ವಾಗುತ್ತದೆ. (ಐಜಿಎಸ್‌ಟಿ ಅಧಿನಿಯಮದ ಭಾಗ 6(11) ರಲ್ಲಿರುವ ವಿವಾರಣಾ ಖಂಡ).

ಪ್ರಶ್ನೆ 14. ಮೇಸರ್ಸ್ ಏರ್ ಇಂಡಿಯ ವತಿಯಿಂದ ಯಾರಾದರೋ ವ್ಯಕ್ತಿಗೆ ಭಾರತದ ಯಾವುದೇ ಸ್ಥಳಕ್ಕೆ ಪ್ರಯಾಣ ಮಾಡುವ ಟಿಕೆಟ್ ಅಥವಾ ಪಾಸ್ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಪೂರೈಕೆ ಸ್ಥಳ ಯಾವುದು?

ಉತ್ತರ : ಮೇಲೆ ಹೇಳಿರುವ ಸಂದರ್ಭದಲ್ಲಿ, ಬೆಲೆಪಟ್ಟಿಯನ್ನು ಜಾರಿಗೊಳಿಸುವಾಗ ಪ್ರಯಾಣ ಪ್ರಾರಂಭವಾಗುವ ಸ್ಥಳವನ್ನು ಗುರುತು ಮಾಡಿರುವುದಿಲ್ಲ ಏಕೆಂದರೆ ಇದು ಭವಿಷ್ಯದಲ್ಲಿ ಉಪಯೋಗಿಸಬಹುದಾದ ಸೌಲಭ್ಯವು. ಆದ್ದರಿಂದ ಪೂರೈಕೆ ಸ್ಥಳವು ಪ್ರಯಾಣ ಪ್ರಾರಂಭವಾಗುವ ಸ್ಥಳ ಆಗಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಪೂರ್ವನಿಯೋಜಿತ ನಿಯಮವು ಅನ್ವಯವಾಗುತ್ತದೆ. (ಐಜಿ/ಎಸ್‌ಟಿ ಅಧಿನಿಯಮದ ಭಾಗ 6(10)(ಬಿ)ದ ಪರಂತುಕ ಖಂಡದಲ್ಲಿರುವಂತೆ).

ಪ್ರಶ್ನೆ 15. ಮೊಬೈಲ್ ಕನೆಕ್ಷನ್‌ಗಳಿಗೆ ಅನ್ವಯವಾಗುವಂತೆ ಸರಬರಾಜು ಸ್ಥಳ ಯಾವುದು ? ಸೇವಾ ಪೂರೈಕೆದಾರರ ಸ್ಥಳವೇ?

ಉತ್ತರ : ಮೊಬೈಲ್ ಸೇವೆಗಳಿಗೆ ಸಂಬಂಧಿಸಿದಂತೆ ಸೇವಾ ಪೂರೈಕೆದಾರರ ಸ್ಥಳವು ಪೂರೈಕೆ ಸ್ಥಳವಾಗಲು ಸಾಧ್ಯವಿಲ್ಲ, ಏಕೆಂದರೆ ಮೊಬೈಲ್ ಕಂಪನಿಗಳು ಬಹು ರಾಜ್ಯಗಳಲ್ಲಿ ಸೇವಾ ಪೂರೈಕೆ ಮಾಡುತ್ತಿವೆ ಮತ್ತು ಹಲವು ಸೇವೆಗಳೂ ಅಂತರ್ ರಾಜ್ಯದಲ್ಲಿ ಇವೆ. ಸೇವಾ ಪೂರೈಕೆದಾರರ ಸ್ಥಳವನ್ನು ಪೂರೈಕೆ ಸ್ಥಳವನ್ನಾಗಿ ಪರಿಗಣಿಸಿದರೆ, ಬಳಕೆ ತತ್ವವನ್ನು ಮುರಿದಂತಾಗುತ್ತದೆ ಮತ್ತು ಸೇವಾ ಪೂರೈಕೆದಾರರು ಇರುವ ಕೆಲವೇ ರಾಜ್ಯಗಳಿಗೆ ಎಲ್ಲಾ ರಾಜಸ್ವವು ಹರಿದಂತಾಗುತ್ತದೆ. ಮೊಬೈಲ್‌ ಕನೆಕ್ಷನ್‌ಗಳಿಗೆ ಅನ್ವಯವಾಗುವಂತೆ ಪೋಸ್ಟ್‌ಪೈಡ್ ಅಥವಾ ಪ್ರಿಪೈಡ್‌ ಕನೆಕ್ಷನನ್ನು ಆಧರಿಸಿ ಸರಬರಾಜು ಸ್ಥಳದ ನಿರ್ಧಾರ ಮಾಡಲಾಗುತ್ತದೆ. ಪೋಸ್ಟ್‌ ಪೈಡ್ ಕನೆಕ್ಷನ್‌ಗಳಿಗೆ ಸಂಬಂಧಿಸಿದಂತೆ, ಸೇವೆಯನ್ನು ಪಡೆಯುವವರ ಬಿಲ್ಲಿಂಗ್ ವಿಳಾಸವಿರುವ ಪ್ರದೇಶವು ಸರಬರಾಜು ಸ್ಥಳವಾಗುತ್ತದೆ. ಪ್ರಿಪೈಡ್‌ ಕನೆಕ್ಷನ್‌ಗಳಿಗೆ ಸಂಬಂಧಿಸಿದಂತೆ, ಅಂತಹ ಕನೆಕ್ಷನ್‌ಗಳಿಗೆ ಹಣ ಸಂದಾಯವಾಗುವ ಸ್ಥಳ ಅಥವಾ ಅಂತಹ ಪ್ರಿಪೈಡ್ ವೌಚರ್ ಮಾರುವ ಸ್ಥಳವು ಸರಬರಾಜು ಸ್ಥಳವಾಗುತ್ತದೆ. ಆದಾಗ್ಯೂ, ಇಂಟರ್ನೆಟ್/ ಈ-ಪಾವತಿ ಮುಖಾಂತರ ರೀಛಾರ್ಜ್‌ ಮಾಡಿದರೆ, ರೆಕಾರ್ಡ್‌ ಪ್ರಕಾರ, ಸೇವೆಯನ್ನು ಪಡೆಯುವ ವ್ಯಕ್ತಿಯು ಇರುವ ಸ್ಥಳವು ಸರಬರಾಜು ಸ್ಥಳವಾಗುತ್ತದೆ.

ಪ್ರಶ್ನೆ 16. ಗೋವದಲ್ಲಿ ಇರುವ ವ್ಯಕ್ತಿಯೊಬ್ಬರು ಎನ್ ಎಸ್ ಇ (ಮುಂಬೈ ಯಲ್ಲಿ) ಮೇರೆಗೆ ದೆಹಲಿಯಲ್ಲಿರುವ ದಲ್ಲಾಳಿ ಯಿಂದ ಷೇರ್‌ಗಳನ್ನು ಖರೀದಿಸುತ್ತಾರೆ. ಸರಬರಾಜು ಸ್ಥಳ ಯಾವುದು?

ಉತ್ತರ : ಸೇವಾ ಪೂರೈಕೆದಾರರ ರೆಕಾರ್ಡ್ ನಲ್ಲಿ ನಮೂದಿಸಿರುವಂತೆ, ಸೇವೆಯನ್ನು ಪಡೆಯುವ ವ್ಯಕ್ತಿಯು ಇರುವ ಸ್ಥಳವು ಸರಬರಾಜು ಸ್ಥಳವಾಗುತ್ತದೆ. ಹಾಗಾಗಿ ಗೋವ ಸರಬರಾಜು ಸ್ಥಳವಾಗುತ್ತದೆ.

ಪ್ರಶ್ನೆ17. ಮುಂಬೈನ ವ್ಯಕ್ತಿಯೊಬ್ಬರು ಕುಲ್ಲು-ಮನಾಲಿಗೆ ಹೋಗಿ ಮನಾಲಿಯಲ್ಲಿನ ಐಸಿಐಸಿಐ ಬ್ಯಾಂಕಿಂದ ಕೆಲವು ಸೇವೆಗಳನ್ನು ಪಡೆಯುತ್ತಾರೆ. ಸರಬರಾಜು ಸ್ಥಳ ಯಾವುದು ?

ಉತ್ತರ : ಆ ವ್ಯಕ್ತಿಯ ಖಾತೆಗೆ ಅವರಿಂದ ಪಡೆಯಲಾದ ಸೇವೆಗಳು ಸೇರಿಸಿಲ್ಲವಾದರೆ ಸೇವ ಪೂರೈಕೆ ಸ್ಥಳವು ಅಂದರೆ ಸೇವಾಪೂರೈದಾರರ ಸ್ಥಳವಾದ ಕುಲ್ಲು ಸರಬರಾಜು ಸ್ಥಳವಾಗುತ್ತದೆ. ಆದಾಗ್ಯೂ ವ್ಯಕ್ತಿಯ ಖಾತೆಗೆ ಅವರಿಂದ ಪಡೆಯಲಾದ ಸೇವೆಗಳು ಸೇರಿಸಲ್ಪಟ್ಟಿದ್ದರೆ ಮುಂಬೈ ಅಂದರೆ ಸೇವಾಪೂರೈಕೆದಾರರ ರೆಕಾರ್ಡ್‌ನಲ್ಲಿ ನಮೂದಿಸಿರುವಂತೆ ಸೇವೆಯನ್ನು ಪಡೆಯುವವರ ಸ್ಥಳ, ಸರಬರಾಜು ಸ್ಥಳವಾಗುವುದು.

ಪ್ರಶ್ನೆ18. ಗುರ್ಗಾಂವ್ವಿನ ವ್ಯಕ್ತಿಯೊಬ್ಬರು ಏರ್‌ ಇಂಡಿಯ ವಿಮಾನದಲ್ಲಿ ಮುಂಬೈ ಇಂದ ದೆಹಲಿಗೆ ಪ್ರಯಾಣಿಸಿ ತನ್ನ ಯಾತ್ರಾ ಬೀಮೆ ಯನ್ನು ಮುಂಬೈ ಯಲ್ಲಿ ಪಡೆಯುತ್ತಾರೆ. ಸರಬರಾಜು ಸ್ಥಳ ಯಾವುದು ?

ಉತ್ತರ : ಬೀಮಾ ಸೇವೆಗಳನ್ನು ಪೂರೈಸುವ ಸೇವಾ ಪೂರೈಕೆದಾರರ ರೆಕಾರ್ಡ್‌ನಲ್ಲಿ ನಮೂದಿಸಿರುವಂತೆ ಸೇವೆಯನ್ನು ಪಡೆಯುವವರ ಸ್ಥಳ ಅಂದರೆ ಗುರ್ಗಾಂವ್‌ ಸರಬರಾಜು ಸ್ಥಳವಾಗುವುದು. (ಐಜಿಎಸ್‌ಟಿ ಅಧಿನಿಯಮದ ಭಾಗ 6(14) ರಲ್ಲಿರುವ ಪರಂತುಕ ಖಂಡ).

*****

ಜಿಎಸ್‌ಟಿ ಪೋರ್ಟಲ್ ಮೂಲಕ ಫ್ರಂಟ್ ಎಂಡ್ ಬಿಸಿನೆಸ್ ಪ್ರಕ್ರಿಯೆ

23. ಜಿಎಸ್‌ಟಿ ಪೋರ್ಟಲ್ ಮೂಲಕ ಫ್ರಂಟ್ ಎಂಡ್ ಬಿಸಿನೆಸ್ ಪ್ರಕ್ರಿಯೆ

ಪ್ರಶ್ನೆ 1. ಜಿಎಸ್‌ಟಿ ಎನ್ ಎಂದರೇನು ?

ಉತ್ತರ : ಸರಕು ಮತ್ತು ಸೇವ ತೆರಿಗೆ ಜಾಲ (ಜಿಎಸ್‌ಟಿಎನ್) ಒಂದು ಲಾಭರಹಿತ ಸರ್ಕಾರೇತರ ಕಂಪನಿ. ಇದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳೂ, ತೆರಿಗೆದಾರರು ಹಾಗೂ ಅನ್ಯ ಭಾಗಿದಾರರಿಗೆ ತೆರಿಗೆಯ ಮೂಲಭೂತ ಸೌಲಭ್ಯವನ್ನು ಮಾಹಿತಿ ತಂತ್ರಜ್ಞಾನದ ಮೂಲಕ ಒದಗಿಸುತ್ತದೆ. ಮೇಲ್ಮುಖ ಸೇವೆಗಳಾದ ನೋಂದಣಿಕರಣ, ವಿವರಣೆಗಳು ಮತ್ತು ಪಾವತಿಗಳನ್ನು ಜಿಎಸ್‌ಟಿಎನ್ ಮೂಲಕ ತೆರಿಗೆದಾರರಿಗೆ ಒದಗಿಸಲಾಗುವುದು. ತೆರಿಗೆದಾರರು ಮತ್ತು ಸರ್ಕಾರದ ನಡುವೆ ಅಂತರ ಸಂಪರ್ಕಸಾಧನವಾಗಿರುತ್ತದೆ.

ಪ್ರಶ್ನೆ 2. ಜಿಎಸ್‌ಟಿಎನ್ ಹೇಗೆ ಉಗಮಗೊಂಡಿದೆ ?

ಉತ್ತರ: ಜಿಎಸ್‌ಟಿ ವ್ಯವಸ್ಥೆ ಪರಿಯೋಜನೆಯು ವಿಶಿಷ್ಠವಾದ ಮತ್ತು ಸಂಕೀರ್ಣವಾದ ಮಾಹಿತಿ ತಂತ್ರಜ್ಞಾನದ ಹೊಸಹೆಜ್ಜೆ. ಮೊದಲಬಾರಿಗೆ ತೆರಿಗೆದಾರರಿಗೆ ಸಮಾನ ಸಂಪರ್ಕ ಸಾಧನವಾಗಿಯೂ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಾಮಾನ್ಯ ಮತ್ತು ಕ್ರೋಡೀಕೃತ ಮಾಹಿತಿ ತಂತ್ರಜ್ಞಾನದ ಮೂಲಭೂತ ಸೌಲಭ್ಯವನ್ನು ಒದಗಿಸುವ ಸಾಧನವಾಗಿರುವುದರಿಂದ ಇದು ಒಂದು ವಿಶೇಷ ವ್ಯವಸ್ಥೆ. ಪ್ರಸ್ತುತ,ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪರೋಕ್ಷ ತೆರಿಗೆ ಆಡಳಿತ ವ್ಯವಸ್ಥೆಗಳು ವಿಭಿನ್ನ ಕಾನೂನು, ನಿಯಮಾವಳಿಗಳು,ಪ್ರ ಕ್ರಿಯೆಗಳು ಮತ್ತು ಶೈಲಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಅವು ಸ್ವತಂತ್ರ ಸಾಧನಗಳಾಗಿವೆ. ಜಿಎಸ್‌ಟಿಯನ್ನು ಕಾರ್ಯಗತ ಗೊಳಿಸಲು ಅವುಗಳನ್ನು ಒಟ್ಟುಗೂಡಿಸುವುದು ಕ್ಲಿಷ್ಟಕರ, ಏಕೆಂದರೆ ಇಡೀ ಪರೋಕ್ಷ ತೆರಿಗೆ ಆಡಳಿತವನ್ನು (ಕೇಂದ್ರ, ರಾಜ್ಯಸರ್ಕಾರಗಳು ಮತ್ತು ಸಂಘ ರಾಜ್ಯಕ್ಷೇತ್ರಗಳು) ಒಟ್ಟುಗೂಡಿಸಿ, ತೆರಿಗೆದಾರರು ಮತ್ತು ಹೊರಗಿನ ಭಾಗೀದಾರರ ನಡುವೆ ಸಮಾನ ಶೈಲಿಗಳೊಂದಿಗೆ ಪರೋಕ್ಷ ತೆರಿಗೆ ಪ್ರೌಡಿಮೆಯನ್ನು ಸ್ಥಾಪಿಸಬೇಕಾಗುತ್ತದೆ. ಅಲ್ಲದೆ, ಜಿಎಸ್‌ಟಿಯು ಗಮ್ಯಸ್ಥಾನವನ್ನು ಆಧರಿಸಿದ ತೆರಿಗೆ ಆದ್ದರಿಂದ ಸರಕು ಮತ್ತು ಸೇವೆಗಳ ಅಂತರ ರಾಜ್ಯ ವ್ಯಾಪಾರವು (ಐಜಿಎಸ್‌ಟಿ)ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಒಂದು ಆರೋಗ್ಯಕರ ಇತ್ಯರ್ಥ ವ್ಯವಸ್ಥೆಯನ್ನು ಆಶಿಸುತ್ತದೆ. ಎಲ್ಲಾ ಭಾಗಿದಾರರ (ತೆರಿಗೆದಾರರು, ಕೇಂದ್ರ ಹಾಗೂ ರಾಜ್ಯಸರ್ಕಾರಗಳು, ಆರ್‌ಬಿಐ ಮತ್ತು ಬ್ಯಾಂಕುಗಳು) ನಡುವೆ ಮಾಹಿತಿ ಸಂಗ್ರಹಣೆ, ಪ್ರಕ್ರಿಯೆ ಮತ್ತು ವಿನಿಮಯ ಕಾರ್ಯಗಳಿಗೆ, ಸಮರ್ಥ ಪರೋಕ್ಷ ತೆರಿಗೆ ಮೂಲಭೂತ ಸೌಕರ್ಯ ಮತ್ತು ಸೇವಾ ಬೆನ್ನೆಲುಬಿನ ಅವಶ್ಯಕತೆ ಇದೆ. ದಿನಾಂಕ 21/7/2010 ರಂದು ನೆಡೆದ ರಾಜ್ಯ ಆರ್ಥಿಕ ಮಂತ್ರಿಗಳ ಸಶಕ್ತ ಸಮಿತಿಯ 2010 ರ ಸಾಲಿನ ನಾಲ್ಕನೇ ಸಭೆಯಲ್ಲಿ ಈ ಅಂಶಗಳನ್ನು ಚರ್ಚಿಸಲಾಯಿತು. ಈ ಸಭೆಯಲ್ಲಿ, ಹೆಚ್ಚುವರಿ ಸಚಿವರು ( ರಾಜಸ್ವ), ಸದಸ್ಯರು (ಬಿ ಮತ್ತು ಸಿ), ಸಿಬಿಈಸಿ, ಮಹಾನಿರ್ದೇಶಕರು (ಸಿಸ್ಟೆಂಸ್), ಸಿಬಿಈಸಿ, ಆರ್ಥಿಕಸಲಹೆಗಾರರು, ಹಣಕಾಸುಖಾತೆ, ಸದಸ್ಯಸಚಿವರು, ಈಸಿ, ಮತ್ತು ಐದು ರಾಜ್ಯಗಳ ವ್ಯಾಪಾರತೆರಿಗೆ ಆಯುಕ್ತರುಗಳನ್ನು (ಮಹಾರಾಷ್ಟ್ರ, ಅಸ್ಸಾಮ್, ಕರ್ನಾಟಕ,ಪಶ್ಚಿಮ ಬಂಗಾಳ ಮತ್ತು ಗುಜರಾತ್) ಒಳಗೊಂಡು, ಡಾ.ನಂದನ್ ನೀಲೆಖೇಣಿಯವರ ಅಧ್ಯಕ್ಷತೆಯಲ್ಲಿ ಜಿಎಸ್‌ಟಿಗೆ ಅನ್ವಯವಾಗುವಂತೆ ಮಾಹಿತಿ ತಂತ್ರಜ್ಞಾನ ಸಂಬಂಧಿ ಮೂಲಭೂತ ಸೌಕರ್ಯದ ಸಶಕ್ತ ತಂಡವನ್ನು ರಚಿಸಲು ಅನುಮೋದನೆ ನೀಡಲಾಯಿತು. ಸಾಮಾನ್ಯ ಪೋರ್ಟಲ್ ಒಂದನ್ನು (ಪ್ರಸ್ತುತ ಜಿಎಸ್‌ಟಿ ಜಾಲತಾಣ (ಜಿಎಸ್‌ಟಿಎನ್) ಎಂದು ಹೆಸರಿಡಲಾಗಿದೆ) ಕಾರ್ಯಗತಗೊಳಿಸುವ ಸಲುವಾಗಿ, ಒಂದು ರಾಷ್ಟ್ರೀಯ ಮಾಹಿತಿ ಸೌಲಭ್ಯವನ್ನು ನಿರ್ಮಿಸಲು (ಎನ್ ಐ ಯು /ಎಸ್ ಪಿ ವಿ), ರೂಪರೇಷೆಗಳನ್ನು ಅನಿವಾರ್ಯವಾಗಿ ಸೂಚಿಸುವಂತೆ ಮತ್ತು ಎನ್ ಐ ಯು /ಎಸ್‌ ಪಿ ವಿ ನಿರ್ವಹಣೆಗೆ, ರಚನೆ ಮತ್ತು ಸಂದರ್ಭ ಕ್ರಮಗಳನ್ನು, ವಿಸ್ತೃತ ಕಾರ್ಯಾನ್ವಯನ ತಂತ್ರವನ್ನು, ಅದರ ನಿರ್ಮಾಣದ ಕ್ರಮವನ್ನು, ತರಬೇತಿ ಮತ್ತು ಸರ್ವರಿಗೂ ತಲುಪುವ ಕ್ರಮವನ್ನು ಶಿಫಾರಸು ಮಾಡುವಂತೆಯೂ, ಈ ತಂಡಕ್ಕೆ ನಿರ್ದೇಶನ ನೀಡಲಾಯಿತು. ಮಾರ್ಚ್, 2010ರಲ್ಲಿ ಹಣಕಾಸು ಮಂತ್ರಾಲಯದಿಂದ ಸಂಘಟಿತಗೊಂಡ “ಟಿಎಜಿಯುಪಿ”ಯು ರಾಷ್ಟ್ರೀಯ ಮಾಹಿತಿ ಸೌಲಭ್ಯವು, ಸರಕಾರದ ಬೃಹತ್ ಮತ್ತು ಸಂಕೀರ್ಣ ಮಾಹಿತಿ ತಂತ್ರಜ್ಞಾನ ಪರಿಯೋಜನೆಗಳನ್ನು ಕಾರ್ಯಗತಗೊಳಿಸಲು, ಸಾರ್ವಜನಿಕ ಉದ್ದೇಶ ನಿಹಿತ ಖಾಸಗಿ ಕಂಪನಿಯಾಗಿ ಸ್ಥಾಪಿತಗೊಳ್ಳಬೇಕು ಎಂದು ಶಿಫಾರಸು ಮಾಡಿದೆ. ವಿಭಿನ್ನ ಪರೋಕ್ಷ ತೆರಿಗೆ ಪರಿಯೋಜನೆಗಳಾದ ಜಿಎಸ್‌ಟಿ, ಟಿಐಎನ್,ಎನ್‌ಪಿಎಸ್, ಮುಂತಾದವುಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ಮತ್ತು ಸರ್ವಾಂಗೀಣ ಅಂಶಗಳನ್ನು ಪರಿಶೀಲಿಸುವುದೇ “ಟಿಎಜಿಯುಪಿ”(TAGUP)ಯ ಮುಖ್ಯ ಉದ್ದೇಶ.

ಸಶಕ್ತ ತಂಡವು ಆಗಸ್ಟ್‌ 2, 2010 ಮತ್ತು ಆಗಸ್ಟ್‌ 8, 2011 ರ ನಡುವೆ ರೂಪರೇಷೆಗಳನ್ನು ಚರ್ಚಿಸಲು ಏಳು(7) ಬಾರಿ ಸಭೆಸೇರಿತ್ತು. ಧೀರ್ಘಸಮಾಲೋಚನೆಯ ನಂತರ, ಜಿಎಸ್‌ಟಿ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ವಿಶೇಷ ಉದ್ದೇಶ್ಯ ಮಾಧ್ಯಮ ನಿರ್ಮಿಸಲು ಶಿಫಾರಸ್ಸು ಮಾಡಿತು. ಹೆಚ್ಚು ಅಪೇಕ್ಷೆಯುಳ್ಳ ಮಾರುಕಟ್ಟೆಗೆ ತಕ್ಕುದಾಗಿ ಸಕ್ಷಮ ಹಾಗೂ ವಿಶ್ವಾಸಾರ್ಹ ಸೇವೆಗಳ ಪೂರೈಕೆಯನ್ನು ಅನುವು ಮಾಡಿಕೊಡಲು, ಸಶಕ್ತ ತಂಡವು, ಜಿಎಸ್‌ಟಿಎನ್ ಎಸ್‌ಪಿವಿ ಸ್ಥಾಪನೆಯಲ್ಲಿ, ಬಹುಮುಖ್ಯ ಅಂಶಗಳಾದ ಸ್ವತಂತ್ರ ನಿರ್ವಹಣೆ, ಸರ್ಕಾರದಿಂದ ತಾಂತ್ರಿಕ ನಿಯಂತ್ರಣ, ಸಂಘಟನಾತ್ಮಕ ರಚನೆಯಲ್ಲಿ ಅಳವಡಿಕೆ, ಶೀಘ್ರನಿರ್ಣಯ, ಸಕ್ಷಮ ಮಾನವಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮತ್ತು ಉಳಿಸಿ ಕೊಳ್ಳುವ ಕ್ಷಮತೆ ಇತ್ಯಾದಿಗಳನ್ನು ಗಮನದಲ್ಲಿ ಇಟ್ಟುಕೊಂಡು, ಸರ್ಕಾರದ ಈಕ್ವಿಟೀ 49% (ಕೇಂದ್ರ-24.5% ಮತ್ತು ರಾಜ್ಯಗಳು,24.5%) ಸಹಿತ ಸರ್ಕಾರೇತರ ಸಂರಚನೆಯನ್ನು ಶಿಫಾರಸ್ಸುಮಾಡಿತು,

ಸಶಕ್ತದಳವು, ಜಿಎಸ್‌ಟಿಎನ್‌ನ ಕಾರ್ಯನಿರ್ವಹಣೆಯ ಸೂಕ್ಷ್ಮತೆಯನ್ನು ಮತ್ತು ಅದರಲ್ಲಿ ಲಭ್ಯವಾಗಬಲ್ಲ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಂಡು, ಜಿಎಸ್‌ಟಿಎನ್‌ನ್ನು ಸರ್ಕಾರದ ತಾಂತ್ರಿಕ ನಿಯಂತ್ರಣಕ್ಕೆ ಒಳಪಡಿಸಬೇಕೆಂಬ ವಿಚಾರವನ್ನು ಮಾಡಿತು; ಪರಿಷತ್‌ಯ ಸಂಘಟನೆ, ವಿಶೇಷ ಸಂಕಲ್ಪಗಳ ಸಂಯೋಜನೆ, ಭಾಗಿದಾರರ ಒಪ್ಪಿಗೆ, ಪ್ರತಿ ನಿಯೋಜನೆಯ ಮೇಲೆ ಸರ್ಕಾರಿ ಅಧಿಕಾರಿಗಳ ನೇಮಕಾತಿ, ಜಿಎಸ್‌ಟಿಎನ್, ಎಸ್‌ಪಿವಿ ಮತ್ತು ಸರ್ಕಾರಗಳ ನಡುವೆ ಒಪ್ಪಂದ, ಈ ಮುಂತಾದ ಕ್ರಮಗಳ ಮೂಲಕ ಎಸ್‌ಪಿವಿ ಮೇಲಿನ ಸರ್ಕಾರದ ತಾಂತ್ರಿಕ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಶಿಫಾರಸು ಮಾಡಿತು. ಹಾಗೂ, ಭಾಗೀದಾರೀ ವಿಧಾನದಲ್ಲಿ, ಕೇಂದ್ರವು ಪ್ರತ್ಯೇಕವಾಗಿ ಮತ್ತು ರಾಜ್ಯಗಳು ಸಮುದಾಯವಾಗಿ (ಪ್ರತಿಯೊಂದರ ಭಾಗ24.5%) ಬೃಹತ್‌ ಭಾಗೀದಾರರಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಒಕ್ಕೂಟದಲ್ಲಿ 49% ಸರ್ಕಾರದ ಭಾಗವು ಬೇರೆ ಯಾವುದೇ ಖಾಸಗಿ ಸಂಸ್ಥೆಯ ಭಾಗಕ್ಕಿಂತ ಅಧಿಕವಾಗಿರುತ್ತದೆ.

ಸಶಕ್ತ ದಳವು, ಈ ಕಂಪನಿಯನ್ನು ಮುಂದುವರಿಸಲು ತಾಂತ್ರಿಕ ಲಕ್ಷಣಗಳ ಅವಶ್ಯಕತೆಯನ್ನು ಎತ್ತಿಹಿಡಿದಿದೆ, ಏಕೆಂದರೆ ವಿವರಣೆಗಳ ಪೂರ್ಣ ಹೊಂದಾಣಿಕೆ ಇರಬೇಕು. ರಾಜ್ಯಗಳ ಹಾಗೂ ಭಾರತ ಸರ್ಕಾರದ ನೌಕರರಿಗೆ ಈ ಪದ್ದತಿಯ ಜ್ಞಾನ ಇರುತ್ತದೆ. ಆದಾಗ್ಯೂ, ದಕ್ಷತೆ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಎನ್ಎಸ್‌ಡಿಎಲ್‌ ಸಂಸ್ಥೆಯಂತೆಯೇ, ಕ್ಲಿಷ್ಟ ಕರ ತಾಂತ್ರಿಕ ಜ್ಞಾನಉಳ್ಳ ವೃತ್ತಿಪರರು, ಈ ಕಂಪನಿಯನ್ನು ಸ್ವತಂತ್ರವಾಗಿ ನಿರ್ವಹಿಸಬೇಕಾಗುತ್ತದೆ. ಸಶಕ್ತ ದಳವು, ಕಾರ್ಯಕಾರಿ ಸ್ವಾತಂತ್ರ್ಯವುಳ್ಳ ಸರ್ಕಾರೇತರ ಕಂಪನಿಯನ್ನು ಶಿಫಾರಸ್ಸು ಮಾಡಿತು.

ಈ ಶಿಫಾರಸ್ಸುಗಳನ್ನು, ಆಗಸ್ಟ್‌ 19, 2011 ಮತ್ತು ಅಕ್ಟೋಬರ್ 14, 2011 ರಂದು ನೆಡೆದ ರಾಜ್ಯ ಹಣಕಾಸು ಸಚಿವರ ಸಶಕ್ತ ಸಮಿತಿಯ 2011ನೇ ಸಾಲಿನ ಕ್ರಮವಾಗಿ 3ನೇ ಮತ್ತು 4ನೇ ಸಭೆಗಳಲ್ಲಿ ಇಡಲಾಯಿತು. ರಾಜ್ಯ ಹಣಕಾಸು ಸಚಿವರ ಸಶಕ್ತ ಸಮಿತಿಯು, ದಿನಾಂಕ 14.10.11 ರಂದು ನೆಡೆದ ಸಭೆಯಲ್ಲಿ, ಸಶಕ್ತ ದಳವು ಪ್ರಸ್ತುತಪಡಿಸಿದ್ದ ಜಿಎಸ್ ಟಿಎನ್ ಸಂಬಂಧವಾಗಿ ಜಿಎಸ್‌ಟಿಗೆ ಮಾಹಿತಿ ತಂತ್ರಜ್ಞಾನ ಸಂರಚನೆ ಮತ್ತು ಭಾಗ 25 ರಲ್ಲಿ ಹೇಳಿರುವಂತೆ, ಸರ್ಕಾರದ ತಾಂತ್ರಿಕ ನಿಯಂತ್ರಣಕ್ಕೆ ಒಳಪಟ್ಟ, ಲಾಭರಹಿತ ಖಾಸಗಿ ಕಂಪನಿಯೊಂದರ ಸಂಘಟನೆಯ ಪ್ರಸ್ತಾಪಗಳಿಗೆ ಅನುಮೋದನೆಯನ್ನು ನೀಡಿತು.

ಮೇಲೆ ಹೇಳಿರುವಂತೆ, ಜಿಎಸ್‌ಟಿ ಎಂದು ಕರೆಯಲ್ಪಡುವ, ವಿಶೇಷ ಉದ್ದೇಶಿತ ಮಾಧ್ಯಮದ ಸಂರಚನೆಗೆ, ರಾಜಸ್ವ ಇಲಾಖೆಯು ಪ್ರಸ್ತುತ ಪಡಿಸಿದ ಟಿಪ್ಪಣಿಯನ್ನು ಏಪ್ರಿಲ್ 12, 2012 ರಲ್ಲಿ ಸಂಘ ಮಂತ್ರಿ ಪರಿಷತ್ಯು ತನ್ನ ವಿಚಾರಕ್ಕೆ ತೆಗೆದುಕೊಂಡು, ಅನುಮೋದನೆ ನೀಡಿತು. ಸಂಘ ಮಂತ್ರಿ ಪರಿಷತ್‌ಯು ಕೆಳಕಂಡ ವಿಷಯಗಳಿಗೂ ಅನುಮೋದನೆ ನೀಡಿತು.

 1. ಹಣಕಾಸು ಸಚಿವಾಲಯದ ಮುಖಾಂತರ, ಸರಿ ಹೊಂದುವ ಮತ್ತು ಸಿದ್ದವಿರುವ ಸರ್ಕಾರೇತರ ಸಂಸ್ಥೆಗಳನ್ನು ಗುರುತು ಮಾಡಿ ಜಿಎಸ್‌ಟಿಎನ್-ಎಸ್‌ಪಿವಿ ಯನ್ನು ಸಂಘಟಿಸುವ ಮುನ್ನವೇ ಅದರಲ್ಲಿ ಬಂಡವಾಳ ಹೂಡುವಂತೆ ಒಪ್ಪಿಸುವುದು.
 2. ಪರಿಷತ್‌ನ ಸಂಘಟನೆ, ವಿಶೇಷ ಸಂಕಲ್ಪಗಳ ಸಂಯೋಜನೆ, ಭಾಗಿದಾರರ ಒಪ್ಪಿಗೆ, ಪ್ರತಿ ನಿಯೋಜನೆಯ ಮೇಲೆ ಸರ್ಕಾರಿ ಅಧಿಕಾರಿಗಳ ನೇಮಕಾತಿ, ಜಿಎಸ್‌ಟಿಎನ್, ಎಸ್ ಪಿ ವಿ ಮತ್ತು ಸರ್ಕಾರಗಳ ನಡುವೆ ಒಪ್ಪಂದ,ಈ ಮುಂತಾದ ಕ್ರಮಗಳ ಮೂಲಕ ಎಸ್ ಪಿ ವಿ ಮೇಲಿನ ಸರ್ಕಾರದ ತಾಂತ್ರಿಕ ನಿಯಂತ್ರಣ ಕಾರ್ಯ . ಜಿಎಸ್‌ಟಿಎನ್, ಎಸ್‌ಪಿವಿಯ ನಿರ್ದೇಶಕ ಪರಿಷತ್‌ನ 14 ನಿರ್ದೇಶಕರಿಂದ ಒಳಗೂಡಿರುತ್ತದೆ, ಕೇಂದ್ರದಿಂದ 3 ನಿರ್ದೇಶಕರೂ, ರಾಜ್ಯಗಳಿಂದ 3 ನಿರ್ದೇಶಕರೂ, ಕೇಂದ್ರ ಹಾಗೂ ರಾಜ್ಯಗಳ ಸಂಯುಕ್ತ ಅನುಮೋದನೆ ಸಂಘಟನೆಯ ಮೂಲಕ ನೇಮಕಾತಿಗೊಂಡ ಪರಿಷತ್ ಅಧ್ಯಕ್ಷರು, ಖಾಸಗಿ ಈಕ್ವಿಟೀ ಭಾಗಿದಾರರಿಂದ ಒಳಗೂಡಿದ 3 ನಿರ್ದೇಶಕರು, 3 ದಕ್ಷರಾದ ಸ್ವತಂತ್ರ ನಿರ್ದೇಶಕರೂ ಮತ್ತು ತೆರೆದ ಆಯ್ಕೆ ಪ್ರಕ್ರಿಯೆ ಮುಖಾಂತರ ಆಯ್ಕೆಯಾದ ಮುಖ್ಯ ಕಾರ್ಯಕಾರಿ ಅಧಿಕಾರಿಗಳು ಒಳಗೊಂಡಿರುತ್ತಾರೆ.
 3. ತಾಂತ್ರಿಕ ನಿಯಂತ್ರಣದ ಆಚರಣೆ ಮತ್ತು ಆ ಪರಿಸರದಲ್ಲಿ ಅವಶ್ಯಕ ನಿಪುಣತೆಯನ್ನು ಹೊಂದಲು ಜಿಎಸ್‌ಟಿಎನ್? ಎಸ್‌ಪಿವಿಯಲ್ಲಿ, ಸರ್ಕಾರಿ ಅಧಿಕಾರಿಗಳ ಪ್ರತಿನಿಯುಕ್ತಿಗಾಗಿ ಸಂದರ್ಭಿತ ನಿಯಮಗಳಲ್ಲಿ ಸಡಿಲಿಕೆ;
 4. ಜಿಎಸ್‌ಟಿಎನ್ ಎಸ್‌ಪಿವಿ ಯು ತನ್ನದೇ ಆದ ಸ್ವಯಂಪೂರಿತ ರಾಜಸ್ವ ಮಾದರಿಯನ್ನು ಹೊಂದಿರುತ್ತದೆ, ಅದರ ಮುಖೇನ ಉಪಯೋಗ ಪಡೆಯುವವರ ಮೇಲೂ ಮತ್ತು ಅದರ ಸೇವೆ ಪಡೆಯುವ ತೆರಿಗೆ ಪ್ರಾಧಿಕಾರಗಳ ಮೇಲೂ ಉಪಭೋಗ ಶುಲ್ಕ ವಸೂಲು ಮಾಡಿಕೊಳ್ಳಬಹುದು.
 5. ಜಿಎಸ್‌ಟಿಎನ್, ಎಸ್‌ಪಿವಿಯು ವಿಭಿನ್ನ ತೆರಿಗೆ ಪ್ರಾಧಿಕಾರಗಳನ್ನೊಳಗೊಂಡ, ಪರೋಕ್ಷ ತೆರಿಗೆ ಸಂಬಂಧಿತ ಸಮಗ್ರ ಸೇವೆಗಳನ್ನು ವಿತರಿಸುವ ಏಕೈಕ ರಾಷ್ಟ್ರೀಯ ಏಜೆನ್ಸೀ ರೂಪದಲ್ಲಿ ಜವಾಬ್ದಾರಿ ಹೊಂದಿರುತ್ತದೆ. ಹಾಗಾಗಿ ಇಂತಹ ಸಮಗ್ರ ಸೇವೆಗಳನ್ನು ವಿತರಿಸಲು ಮುಂದಾಗುವ ಬೇರೆ ಯಾವುದೇ ಸಂಸ್ಥೆಯು ಈ ಸೇವೆಗಳಿಗೆ ಸಂಬಂಧಿಸಿದಂತೆ ಜಿಎಸ್‌ಟಿಎನ್, ಎಸ್‌ಪಿವಿಯೊಂದಿಗೆ ಔಪಚಾರಿಕ ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ.
 6. ಎಸ್‌ಪಿವಿಯ ಸ್ಥಾಪನೆ ಮತ್ತು ಸ್ಥಾಪನೆಗೊಂಡ ಮೂರು ವರ್ಷಗಳ ಕಾಲ ಅದರ ನಿರ್ವಹಣೆಯ ಖರ್ಚು, ವೆಚ್ಚಕ್ಕಾಗಿ ಕೇಂದ್ರ ಸರ್ಕಾರದ ವತಿಯಿಂದಲೂ.315ಕೋಟಿ ಏಕಕಾಲಿಕ, ಅನಾವರ್ತನ ಅನುದಾನವನ್ನು ನೀಡುವ ನಿರ್ಣಯ. ಮಂತ್ರಿ ಮಂಡಲದ ನಿರ್ಣಯದ ಮೇರೆಗೆ, ಜಿಎಸ್‌ಟಿ ಜಾಲತಾಣವನ್ನು ಲಾಭರಹಿತ, ಖಾಸಗಿ ಲಿಮಿಟೆಡ್‌ ಕಂಪನಿಯಾಗಿ ಕಂಪನಿ ಅಧಿನಿಯಮ, 1956 ರ ಭಾಗ 25 ರ ಅಡಿ, ಈ ಕೆಳಕಂಡ ಈಕ್ವಿಟೀ ಸಂರಚನೆಯೊಂದಿಗೆ ನೋಂದಾಯಿಸಲಾಗಿದೆ.

 

ಕೇಂದ್ರ ಸರ್ಕಾರ 24.5 %
ರಾಜ್ಯ ಸರ್ಕಾರಗಳು 24.5 %
ಎಚ್ ಡಿ ಎಫ್ ಸಿ 10 %
ಎಚ್ ಡಿ ಎಫ್ ಸಿ ಬೈಂಕ್ 10 %
ಐ ಸಿ ಐ ಸಿ ಐ ಬೈಂಕ್ 10 %
ಎನ್ ಎಸ್ ಈ ಸ್ಟ್ರಾಟೆಜಿಕ್ ಕಂ. 10 %
ಎಲ್ಐಸಿ ಹೌಸಿಂಗ್‌ ಫೈಯಿನಾನ್ಸಿಂಗ್‌ ಲಿ. 11 %

 

ಸಂಘ ಸರ್ಕಾರದ ಮತ್ತು ರಾಜ್ಯ ಹಣಕಾಸು ಸಚಿವರ ಸಶಕ್ತ ಸಮಿತಿಯ ನಡುವಿನ ಧೀರ್ಘ ಕಾಲಿಕ ವಿಸ್ತೃತ ಚರ್ಚೆಯ ಬಳಿಕ, ಪ್ರಸ್ತುತ ರೂಪದಲ್ಲಿ ಜಿಎಸ್‌ಟಿಎನ್‌ ಸಂರಚಿತವಾಯಿತು.

ಪ್ರಶ್ನೆ3. ಜಿಎಸ್‌ಟಿಎನ್ ಮೂಲಕ ಪೂರೈಕೆಯಾಗುವ ಸೇವೆಗಳು ಯಾವುವು ?

ಉತ್ತರ : ಜಿಎಸ್‌ಟಿಎನ್ ಸಮಾನ ಜಿಎಸ್‌ಟಿ ಪೋರ್ಟಲ್ ಮೂಲಕ ಕೆಳಕಂಡ ಸೇವೆಗಳನ್ನು ಪೂರೈಸುತ್ತದೆ

 1. ನೊಂದಣೀಕರಣ(ಈಗಿರುವ ತೆರಿಗೆದಾರ ಮಾಸ್ಟರ್‌ ಮೈಗ್ರೇಷನ್‌ ಮತ್ತು ಪ್ಯಾನ್ ಆಧಾರಿತ ನೊಂದಣೀ ಸಂಖ್ಯೆಯ ಜಾರಿಯನ್ನು ಒಳಗೊಂಡಂತೆ)
 2. ಪಾವತಿ ಮಾರ್ಗಗಳನ್ನೊಳಗೊಂಡ ಪಾವತಿ ವ್ಯವಸ್ಥೆ ಮತ್ತು ಬ್ಯಾಂಕಿಂಗ್‌ ಪದ್ದತಿಯೊಂದಿಗೆ ಹೊಂದಾಣಿಕೆ;
 3. ವಿವರಣೆಗಳನ್ನು (ರಿಟರ್ನ್ಸ್‌) ದಾಖಲಿಸುವ ಮತ್ತು ಸಂಸ್ಕರಣೆ ಮಾಡುವ ವ್ಯವಸ್ಥೆ;
 4. ತೆರಿಗೆದಾರರಿಗೆ ಅನ್ವಯಿಸುವಂತೆ ಖಾತೆಗಳು, ಸೂಚನೆಗಳು, ಮಾಹಿತಿ ಮತ್ತು ಸ್ಥಿತಿಗತಿಗಳ ನಿರ್ವಹಣೆ;
 5. ತೆರಿಗೆ ಪ್ರಾಧಿಕಾರಣ ಲೆಕ್ಕಪತ್ರ ಮತ್ತು ಲೆಡ್ಜರ್‌ ನಿರ್ವಹಣೆ
 6. ಕೇಂದ್ರ ಮತ್ತು ರಾಜ್ಯಗಳ ನಡುವೆ ಇತ್ಯರ್ಥ ಲೆಕ್ಕಾಚಾರ (ಐಜಿಎಸ್‌ಟಿ ಇತ್ಯರ್ಥವನ್ನು ಒಳಗೊಂಡು),
 7. ಆಮದು ವಸ್ತುಗಳಿಗೆ ಅನ್ವಯಿಸುವಂತೆ ಸಂಸ್ಕರಣೆ ಮತ್ತು ಹೊಂದಾಣಿಕೆ ಹಾಗೂ ಸೀಮಾಸುಂಕ ಇಲಾಖೆಯ ಈ ಡಿ ಐ ವ್ಯವಸ್ಥೆಯೊಂದಿಗೆ ಸಮೀಕರಣ
 8. ಅಗತ್ಯಕ್ಕೆ ತಕ್ಕಂತೆ ಮಾಹಿತಿ ಮತ್ತು ವ್ಯಾಪಾರಿಕ ಬೇಹುಗಾರಿಕೆಯನ್ನು ಒಳಗೊಂಡ ಎಂಐಎಸ್
 9. ಸಾಮಾನ್ಯ ಜಿಎಸ್‌ಟಿ ಪೋರ್ಟಲ್‌ ಮತ್ತು ತೆರಿಗೆ ಆಡಳಿತ ವ್ಯವಸ್ಥೆಗಳ ನಡುವೆ ಅಂತರ ಸಂಪರ್ಕ ಸಾಧನ (ಅಂತರ ತಾಣ) ನಿರ್ವಹಣೆ;
 10. ಭಾಗೀದಾರರಿಗೆ ತರಬೇತಿ ಒದಗಿಸುವಿಕೆ
 11. ತೆರಿಗೆ ಪ್ರಾಧಿಕಾರಣಗಳಿಗೆ ವಿಶ್ಲೇಷಣೆ ಮತ್ತು ವ್ಯಾಪಾರಿಕ ಬೇಹುಗಾರಿಕೆಯನ್ನು ಒದಗಿಸುವಿಕೆ
 12. ಸಂಶೋಧನೆ ಮತ್ತು ಅತಿ ಸೂಕ್ತ ಪ್ರಕಾರದ ಅಧ್ಯಯನವನ್ನು ಕೈಗೊಳ್ಳುವುದು ಮತ್ತು ಭಾಗೀದಾರರಿಗೆ ತರಬೇತಿ ಒದಗಿಸುವಿಕೆ

ಪ್ರಶ್ನೆ4. ಜಿಎಸ್‌ಟಿಎನ್‌ ಮತ್ತು ರಾಜ್ಯಗಳು / ಸಿಬಿಈಸಿಸ್‌ ಮಧ್ಯೆ ಇರುವ ಅಂತರ ಸಂಪರ್ಕ ಸಾಧನ (ಅಂತರತಾಣ) ಯಾವುದು?

ಉತ್ತರ: ಜಿಎಸ್‌ಟಿ ಆಡಳಿತ ಕ್ರಮದಲ್ಲಿ, ತೆರಿಗೆದಾರರ ಪ್ರಮುಖ ಸೇವೆಗಳಾದ ನೊಂದಣೀಕರಣಕ್ಕೆ ಅರ್ಜಿ ಸಲ್ಲಿಸುವಿಕೆ, ಇನ್ವಾಯಿಸ್‌ಗಳನ್ನು ಅಳವಡಿಸುವುದು, ವಿವರಣೆಗಳನ್ನು ದಾಖಲಿಸುವುದು, ತೆರಿಗೆ ಪಾವತಿಸುವುದು ಇತ್ಯಾದಿ ಸೇವೆಗಳನ್ನು ಜಿಎಸ್‌ಟಿ ವ್ಯವಸ್ಥೆಯು ನಿರ್ವಹಿಸುತ್ತದೆ ಮತ್ತು ಕಾನೂನು ಕಾರ್ಯವಿಧಿಗಳಾದ ನೋಂದಣಿ ಅನುಮೋದನೆ, ವಿವರಣೆಗಳನ್ನು ಪರಿಶೀಲಿಸಿ ನಿಗದಿಪಡಿಸುವ ಕಾರ್ಯ, ತಪಾಸಣೆ ಮತ್ತು ಲೆಕ್ಕಪರಿಶೋಧನೆ ಮುಂತಾದ ಕಾರ್ಯಗಳನ್ನು ರಾಜ್ಯಗಳ ಮತ್ತು ಕೇಂದ್ರ ಸರ್ಕಾರದ ತೆರಿಗೆ ಪ್ರಾಧಿಕಾರಗಳು ನಿರ್ವಹಿಸುತ್ತವೆ.

ಹೀಗಾಗಿ, ಮೇಲ್ಮುಖ ಸೇವೆಗಳನ್ನು ಜಿಎಸ್‌ಟಿಎನ್ ಒದಗಿಸುತ್ತದೆ ಮತ್ತು ಇದಕ್ಕೆ ಬೇಕಾಗುವ ಎಲ್ಲ ಹಿನ್ನೆಲೆ ಘಟಕಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೇ ನಿರ್ಮಿಸುತ್ತವೆ. ಆದಾಗ್ಯೂ, 24 ರಾಜ್ಯಗಳು (ಮೋಡಲ್ 2ರಾಜ್ಯಗಳೆಂದು ಹೆಸರಿಸಿರುವ) ತಮ್ಮ ಹಿನ್ನೆಲೆ ಘಟಕಗಳನ್ನು ನಿರ್ಮಿಸುವಂತೆ ಜಿಎಸ್‌ಟಿಎನ್ನನ್ನೇ ಪ್ರಾಥಿಸಿವೆ. ಸಿಬಿಈಸಿ? ಮತ್ತು ಬಾಕಿ ರಾಜ್ಯಗಳು ತಮ್ಮದೇ ಹಿನ್ನೆಲೆ ಘಟಕಗಳನ್ನು ನಿರ್ಮಿಸಲು ನಿರ್ಧರಿಸಿವೆ.

ಪ್ರಶ್ನೆ 5. ನೋಂದಣಿಯಲ್ಲಿ ಜಿಎಸ್‌ಟಿಎನ್ ನ ಪಾತ್ರವೇನು ?

ಉತ್ತರ: ಜಿಎಸ್‌ಟಿ ಪೋರ್ಟಲ್ ನಲ್ಲಿ ನೋಂದಣಿ ಅರ್ಜಿಗಳು ಆನ್ ಲೈನ್ ಅಲ್ಲಿ ಲಭ್ಯವಿರುತ್ತವೆ. ಅತಿ ಮುಖ್ಯ ವಿವರಣೆಗಳಾದ ಪ್ಯಾನ್, ವ್ಯಾಪಾರ ಸಂಘಟನೆ, ಆಧಾರ್, ಸಿಐಎನ್/ ಡಿಐಎನ್ ಮುಂತಾದವುಗಳ ಮಾನ್ಯತೆ, ಸಿಬಿಡಿಟಿ, ಯೂಐಡಿ, ಎಂಸಿಎ ಮುಂತಾದ ಸಂಬಂಧಿತ ಏಜೆನ್ಸಿಗಳಿಗೆ ಅನ್ವಯಿಸುವಂತೆ ಆನ್ ಲೈನ್ ನಲ್ಲಿಯೇ ಖಚಿತ ಪಡಿಸಿಕೊಳ್ಳಲಾಗುವುದು, ಹೀಗಾಗಿ ಕಾಗದ ವ್ಯವಹಾರವನ್ನು ಸೀಮಿತಗೊಳಿಸಲಾಗಿದೆ. ಅರ್ಜಿ ವಿವರಣೆಗಳನ್ನು ಸಂಬಂಧಿತ ಸ್ಕ್ಯಾನ್ ಮಾಡಿದ ದಾಖಲೆಗಳೊಂದಿಗೆ ಜಿಎಸ್‌ಟಿಎನ್ ಮೂಲಕ ರಾಜ್ಯ ಹಾಗೂ ಕೇಂದ್ರಗಳಿಗೆ ಕಳಿಸಲಾಗುವುದು, ಏನಾದರೂ ಕುಂದು ಕೊರತೆಗಳಿದ್ದರೆ ಅವುಗಳನ್ನು ಸೂಚಿಸಲು ಹಿಂತಿರುಗಿಸಲು, ಇಲ್ಲವೇ ಸ್ವೀಕರಿಸಿ, ನೋಂದಣಿಕರಣವನ್ನು ಡಿಜಿಟಲ್‌ ರುಜುವಿನ ಮೂಲಕ ತಿಳಿಸಲಾಗುವುದು, ತೆರಿಗೆದಾರರು ತಮ್ಮ ನೋಂದಣಿಯನ್ನು ಜಿಎಸ್‌ಟಿಎನ್‌ ಮುಖಾಂತರ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಪ್ರಶ್ನೆ 6. ಜಿಎಸ್‌ಟಿಎನ್ ನಲ್ಲಿ ಇನ್ಫೋಸಿಸ್ ನ ಪಾತ್ರವೇನು ?

ಉತ್ತರ : ಜಿಎಸ್‌ಟಿಎನ್ ಸಂಬಂಧಿತ ಎಲ್ಲಾ ಅಪ್ಲಿಕೇಷನ್ ಸಾಫ್ಟ್‌ವೇರ್‌, ಟೂಲ್ಸ್‌, ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ, ಪ್ರಚಾಲನೆ ಮತ್ತು ಅವುಗಳ ನಿರ್ವಹಣೆ ಒಳಗೊಂಡಂತೆ, ಜಿಎಸ್‌ಟಿ ವ್ಯವಸ್ಥೆಯ (ಸಿಸ್ಟಮ್) ರಚನೆ ವಿಕಸನ, ನಿಯೋಜನೆ ಮತ್ತು ಈ ವ್ಯವಸ್ಥೆಯು ಪ್ರಾರಂಭವಾಗುವ ಸಮಯದಿಂದ ಹಿಡಿದು 5 ವರ್ಷಗಳ ಅವಧಿಯವರೆಗೂ ನಿರ್ವಹಿಸಲು ಏಕವ್ಯವಸ್ಥಾ ಸೇವಾ ಪೂರೈಕೆದಾರರಾಗಿ ಮೇಸರ್ಸ್ ಇನ್ಫೋಸಿಸ್ ಅನ್ನು ನಿಯೋಜಿಸಿದೆ.

ಪ್ರಶ್ನೆ7. ಜಿಎಸ್‌ಟಿ ಸಾಮಾನ್ಯ ಪೋರ್ಟಲ್ ನ ಮೂಲ ಲಕ್ಷಣಗಳೇನು ?

ಉತ್ತರ: ಜಿಎಸ್‌ಟಿ ಪೋರ್ಟಲ್‌ನ ಇಂಟರ್‌ನೆಟ್‌ ಮೂಲಕ (ತೆರಿಗೆದಾರರು, ಚಾರ್ಟೆಡ್ ಅಕೌಂಟೆಂಟ್/ತೆರಿಗೆ ವಕೀಲರು ಮುಂತಾದವರು) ಆಕೆಸ್ಸ್‌ ಪಡೆಯಬಹುದಾಗಿದೆ. ತೆರಿಗೆ ಅಧಿಕಾರಿಗಳು ಮುಂತಾದವರು ಇಂಟರ್ನೆಟ್ ಮೂಲಕ ಆಕೆಸ್ಸ್‌ ಪಡೆಯಬಹುದಾಗಿದೆ. ಜಿಎಸ್‌ಟಿಗೆ ಸಂಬಂಧಿಸಿದಂತೆ ಕೆಳಕಂಡ ಎಲ್ಲಾ ಸೇವೆಗಳಿಗೂ ಇದು ಏಕಗವಾಕ್ಷಿ ಪೋರ್ಟಲ್ ಆಗಿರುತ್ತದೆ.

 1. ತೆರಿಗೆದಾರರ ನೋಂದಣಿಕರಣ (ಹೊಸ, ವಾಪಸಾತಿ, ರದ್ದುಗೊಳಿಸುವಿಕೆ)
 2. ಸರಕು ಪಟ್ಟಿ ಅಪ್ಲೋಡ್, ಖರೀದಾರರ ಖರೀದಿ ರಿಜಿಸ್ಟರ್‌ಗೆ ಸ್ವ ಡ್ರಾಫ್ಟಿಂಗ್‌ ಸೌಲಭ್ಯ, ಆವಧಿಕ ಜಿಎಸ್‌ಟಿ ವಿವರಣೆ ಸಲ್ಲಿಸುವುದು
 3. ಏಜೆನ್ಸೀ ಬೈಂಕುಗಳ ಜೊತೆ ಜೋಡಣೆ ಮೂಲಕ ತೆರಿಗೆ ಪಾವತಿ
 1. ಐಟಿಸಿ, ನಗದು ಲೆಡ್ಜರ್‌ ಮತ್ತು ಬಾದ್ಯತೆ ರಿಜಿಸ್ಟರ್
 2. ತೆರಿಗೆದಾರರು, ತೆರಿಗೆ ಅಧಿಕಾರಿಗಳು ಮತ್ತು ಅನ್ಯಭಾಗಿದಾರರಿಗೆ ಎಂಐಎಸ್‌ ರಿಪೋರ್ಟಿಂಗ್
 3. ತೆರಿಗೆ ಅಧಿಕಾರಿಗಳಿಗೆ ವ್ಯವಹಾರ ಬೇಹುಗಾರಿಕೆ/ವಿಶ್ಲೇಷಣೆ

ಪ್ರಶ್ನೆ8. ಜಿಎಸ್‌ಟಿ ಪರಿಸರದ ಪರಿಕಲ್ಪನೆ ಏನು?

ಉತ್ತರ : ಸಮಾನ ಜಿಎಸ್‌ಟಿ ವ್ಯವಸ್ಥೆಯು ರಾಜ್ಯ/ಸಂಘ ಆಡಳಿತ ಕ್ಷೇತ್ರಗಳ ವಾಣಿಜ್ಯ ಇಲಾಖೆಗಳು, ಕೇಂದ್ರ ತೆರಿಗೆ ಪ್ರಾಧಿಕಾರಣಗಳು, ತೆರಿಗೆದಾರರು, ಬೈಂಕುಗಳು ಮತ್ತು ಅನ್ಯಭಾಗಿದಾರರ ನಡುವೆ ಜೋಡಣೆ ಸೌಲಭ್ಯವನ್ನು ಒದಗಿಸುತ್ತದೆ. ಈ ಪರಿಸರದಲ್ಲಿ ಎಲ್ಲ ಭಾಗಿದಾರರು, ತೆರಿಗೆದಾರರಿಂದ ಹಿಡಿದು ತೆರಿಗೆ ವೃತ್ತಿಪರರು, ತೆರಿಗೆ ಅಧಿಕಾರಿಗಳು, ಜಿಎಸ್‌ಟಿ ಪೋರ್ಟಲ್, ಬ್ಯಾಂಕುಗಳು, ಲೆಕ್ಕಾಧಿಕಾರಿ ಪ್ರಾಧಿಕಾರಣಗಳು ಎಲ್ಲರನ್ನು ಒಳಗೊಂಡಿರುತ್ತದೆ. ಕೆಳಕಂಡ ಚಿತ್ರವು ಜಿಎಸ್‌ಟಿ ಪರಿಸರದ ಪೂರ್ಣ ಪರಿಕಲ್ಪನೆಯನ್ನು ವಿವರಿಸುತ್ತದೆ.

ಪ್ರಶ್ನೆ9. ಜಿಎಸ್‌ಪಿ ಎಂದರೇನು?

ಉತ್ತರ: ಇನ್ ಫೋಸಿಸ್, ನಿರ್ವಹಣಾ ಸೇವಾ ಪೂರೈಕೆದಾರರು (ಎಂಎಸ್‌ಪಿ), ಇವರ ಮೂಲಕ ಜಿಎಸ್‌ಟಿ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಈ ಕಾರ್ಯದಲ್ಲಿ ಜಿಎಸ್‌ಟಿ ಮೂಲವ್ಯವಸ್ಥೆ, ಇದನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಬೇಕಾದ ಮಾಹಿತಿ ತಂತ್ರಜ್ಞಾನದ ಎಲ್ಲ ಮೂಲಭೂತ ಸೌಕರ್ಯಗಳು ಮತ್ತು 5 ವರ್ಷ ಅವಧಿಯವರೆಗೂ ಇದನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ನಿಹಿತವಾಗಿದೆ. ಪ್ರಸ್ತಾವಿತ ಜಿಎಸ್‌ಟಿ ವ್ಯವಸ್ಥೆಯಲ್ಲಿ, ತೆರಿಗೆದಾರ ಎಲ್ಲಾ ದಾಖಲಾತಿಗಳನ್ನು ಎಲೆಕ್ಟ್ರೋನಿಕ್ ಮಾಧ್ಯಮದ ಮುಖಾಂತರವೇ ನಿರ್ವಹಿಸಬೇಕಾಗುತ್ತದೆ. ಇದನ್ನು ಸಾಧಿಸಲು ಸರಕು ಪಟ್ಟಿ ಮಾಹಿತಿಯನ್ನು ತುಂಬುವ, ಇನ್ಫುಟ್‌ ತೆರಿಗೆ ಕ್ರೆಡಿಟ್ ದಾವೆಗಳನ್ನು ಹೊಂದಾಣಿಕೆಗೊಳಿಸುವ, ಪಾರ್ಟಿ (ಮಾರಾಟಗಾರರ)ಗಳ ಕ್ರಮಬದ್ಧ ಲೆಡ್ಜರ್ ನಿರ್ಮಾಣ, ವಿವರಣೆಗಳನ್ನು ಅಪ್ಲೋಡ್ ಮಾಡುವ, ಅಂತಹ ದಾಖಲೆಗಳಿಗೆ ಡಿಜಿಟಲ್ ರುಜುಗಳ ಸೌಲಭ್ಯ ಒದಗಿಸುವ ಸಾಧನಗಳು ಅವಶ್ಯಕ .

ಜಿಎಸ್‌ಟಿ ವ್ಯವಸ್ಥೆಯಲ್ಲಿ ಜಿಎಸ್‌ಟಿ ಆಕೆಸ್ಸ್‌ ಮಾಡಲು ತೆರಿಗೆದಾರರಿಗೆಂದು ಜಿ2ಬಿ ಪೋರ್ಟಲ್ ಲಭ್ಯವಿದೆ. ಆದರೆ ಜಿಎಸ್‌ಟಿ ವ್ಯವಸ್ಥೆಯೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಅದೊಂದೇ ವಿಕಲ್ಪವಲ್ಲ. ತೆರಿಗೆದಾರರು ತಮ್ಮ ಇಚ್ಚೆಯ ಅನ್ಯಪಾರ್ಟಿ ಅಪ್ಲಿಕೇಷನ್‌ ಮೂಲಕ, ಅಂದರೆ ಎಲ್ಲಾ ಪ್ರಕಾರದ ಅಂತರ ಸಂಪರ್ಕ ಸಾಧನಗಳು, ಅಂದರೆ, ಡೆಸ್ಕ್‌ ಟಾಪ್, ಮೊಬೈಲ್ ಮುಂತಾದವುಗಳ ಮೂಲಕವೂ ಜಿಎಸ್‌ಟಿ ವ್ಯವಸ್ಥೆಯೊಂದಿಗೆ ಸಂಪರ್ಕ ಇರಿಸಿಕೊಳ್ಳ ಬಹುದು. ಅನ್ಯ ಪಾರ್ಟಿ ಅಪ್ಲಿಕೇಷನ್‌ಗಳು ಸುರಕ್ಷಿತ ಜಿಎಸ್‌ಟಿ ವ್ಯವಸ್ಥೆಯ ಎ ಪಿ ಐ ಗಳ ಮೂಲಕ ಜಿಎಸ್‌ಟಿ ಸಿಸ್ಟಮ್ನ ಸಂಪರ್ಕ ಗಳಿಸುತ್ತವೆ. ಅಂತಹ ಎಲ್ಲಾ “ಅಪ್ಲಿಕೇಷನ್” ಗಳನ್ನು ಅನ್ಯ ಪಾರ್ಟಿ ಸೇವಾ ಪೂರೈಕೆದಾರರ ಮೂಲಕ ನಿರ್ಮಾಣ ಮಾಡಿಕೊಳ್ಳಬಹುದು. ಅಂತಹ ಅನ್ಯ ಪಾರ್ಟಿ ಸೇವಾ ಪೂರೈಕೆದಾರರಿಗೆ ವಿಶೇಷವಾಗಿ ಜಿಎಸ್‌ಟಿ ಸೌಲಭ್ಯ ಪೂರೈಕೆದಾರರು ಅಥವಾ ಜಿ ಎಸ್ ಪಿ ಎಂದು ನಾಮಾಂಕನ ಮಾಡಲಾಗಿದೆ.

ತೆರಿಗೆದಾರರು ಜಿಎಸ್‌ಟಿ ಸಿಸ್ಟಮ್‌ ಜೊತೆ ಜಿಎಸ್‌ಟಿ ವ್ಯವಸ್ಥೆಯ ಪೋರ್ಟಲ್ ಅಥವಾ ಜಿಎಸ್‌ಪಿಗಳ ತಂತ್ರಾಂಶದ (ಅಪ್ಲಿಕೇಷನ್) ಮೂಲಕ ಸಂಪರ್ಕ ಪಡೆಯುತ್ತಾರೆ, ನೋಂದಣಿ, ತೆರಿಗೆಪಾವತಿ, ವಿವರಣೆಗಳನ್ನು ದಾಖಲಿಸುವುದು ಮತ್ತು ಜಿಎಸ್‌ಟಿ ಕೋರ್‌ ಸಿಸ್ಟಂ ಜೊತೆಗಿನ ಮಾಹಿತಿ ವಿನಿಮಯ ಮುಂತಾದ ಸೌಲಭ್ಯಗಳನ್ನು ಪಡೆಯಬಹುದು. ಜಿಎಸ್‌ಪಿಗಳು ತೆರಿಗೆದಾರರಿಗೆ ಬದಲಿ ಸಂಪರ್ಕ ಕಲ್ಪಿಸಲು, ಅಪ್ಲಿಕೇಷನ್ ಗಳನ್ನು ಮತ್ತು ವೆಬ್ ಪೋರ್ಟಲ್ ಗಳನ್ನು ನಿರ್ಮಿಸುವ ಜಿಎಸ್‌ಟಿ ಸಿಸ್ಟಮ್ ಎಪಿಐಗಳ ಉಪಭೋಗ ಏಜೆಸ್ಸಿಗಳಾಗಿ ಕಾರ್ಯನಿರ್ವಹಿಸುತ್ತಾರೆ.

ಪ್ರಶ್ನೆ 10. ವಿಶೇಷವಾಗಿ ಜಿಎಸ್‌ಟಿ ಸೌಲಭ್ಯ ಪೂರೈಕೆದಾರರು ಅಥವಾ ಜಿಎಸ್‌ಪಿ ಗಳ ಪಾತ್ರವೆನು ?

ಉತ್ತರ: ಜಿಎಸ್‌ಪಿ ನಿರ್ಮಿತ ಅಪ್ಲಿಕೇಷನ್‌ಗಳು (ಆಪ್ಸ್‌) ಜಿಎಸ್‌ಟಿ ಸಿಸ್ಟಮ್‌ಗೆ ಸುರಕ್ಷಿತ ಜಿಎಸ್‌ಟಿ ವ್ಯವಸ್ಥೆಯ ಎಪಿಐ ಮೂಲಕ ಕನೆಕ್ಟ್‌ ಆಗುತ್ತವೆ. ಜಿಎಸ್‌ಪಿಗಳ ಕಾರ್ಯಗಳೆಂದರೆ,

 • ಜಿಎಸ್‌ಟಿ ಸಿಸ್ಟಂಗಳ ಟಿಆರ್‌ಪಿಗಳು, ತೆರಿಗೆದಾರರಿಗೆ ವಿಭಿನ್ನ ಆಪ್ಸ್‌ಗಳ/ಇಂಟರ್‌ ಫೇಸ್‌ಗಳ ನಿರ್ಮಾಣ
 • ತೆರಿಗೆದಾರರಿಗೆ ಅನ್ಯ ಮೂಲ್ಯವರ್ಧಿತ ಸೇವೆಗಳನ್ನು ಪೂರೈಸುವುದು.

ಜಿಎಸ್‌ಟಿ ಸೌಲಭ್ಯ ಪೂರೈಕೆದಾರರು ತೆರಿಗೆದಾರರಿಗೆ ಮತ್ತು ಅನ್ಯಭಾಗಿದಾರರಿಗೆ ಜಿಎಸ್‌ಟಿ ವ್ಯವಸ್ಥೆ (ಸಿಸ್ಟಮ್) ಜೊತೆ ಸಂಪರ್ಕ ಬೆಳೆಸಲು, ನೋಂದಣೀಕರಣ, ಇನ್ವಾಯಿಸ್ ವಿವರಣೆಗಳನ್ನು ಅಪ್ಲೋಡ್ ಮಾಡಲು ಮತ್ತು ವಿವರಣೆಗಳನ್ನು ದಾಖಲಿಸುವ ಕಾರ್ಯಗಳಿಗೆ, ಅನುಕೂಲಕರ ಮತ್ತು ನವೀನ ಬಗೆಗಳನ್ನು ಒದಗಿಸಿಕೊಡುವ ಜವಾಬ್ದಾರಿ ಹೊತ್ತಿರುತ್ತಾರೆ. ಹೀಗಾಗಿ ಎರಡು ಪ್ರಕಾರದ ಸಂಪರ್ಕಗಳು ಇರುತ್ತವೆ. ಒಂದು, ಅಪ್ಪ್‌ ಬಳಕೆದಾರರು ಹಾಗೂ ಜಿಎಸ್‌ಪಿ ನಡುವೆ ಮತ್ತು ಎರಡನೆಯದು ಜಿಎಸ್‌ಪಿ ಹಾಗೂ ಜಿಎಸ್‌ಟಿ ಸಿಸ್ಟಮ್ ನಡುವೆ.

ಪ್ರಶ್ನೆ 11. ತೆರಿಗೆದಾರರಿಗೆ ಜಿಎಸ್‌ಪಿ ಗಳನ್ನು ಉಪಯೋಗಿಸುವುದರಿಂದ ಉಂಟಾಗುವ ಲಾಭಗಳೇನು?

ಉತ್ತರ: ಲೆಕ್ಕ ಮಾಹಿತಿ ಸಾಫ್ಟ್‌ ವೇರ್ ಒದಗಿಸುವ ಜಿಎಸ್‌ಪಿಗಳು, ತೆರಿಗೆದಾರರಿಗೆ, ತೆರಿಗೆ ಪದ್ದತಿಯ ಕಾರ್ಯಾಚರಣೆಯ ಬಹಳಷ್ಟು ವಿಧಿಗಳನ್ನು ಮೊದಲೇ ಒದಗಿಸಿರುತ್ತಾರೆ. ಇನ್ವಾಯಿಸ್ / ವಿವರಣೆಗಳನ್ನು ಅಪ್ಲೋಡ್ ಮತ್ತು ಹೊಂದಾಣಿಕೆ ಮಾಡಲು ಡೆಲ್ಟಾ ಪ್ರಕ್ರಿಯೆಯನ್ನೂ ಜಿಎಸ್‌ಪಿಗಳು ಒದಗಿಸಿದರೆ ತೆರಿಗೆದಾರರಿಗೆ ಬಹಳ ಅನುಕೂಲವಾಗುತ್ತದೆ.ಆದರೆ ಜಿಎಸ್‌ಟಿ ಪೋರ್ಟಲ್ನಲ್ಲಿ ಇನ್ವಾಯಿಸ್/ವಿವರಣೆಗಳನ್ನು ಅಪ್ಲೋಡ್‌ ಮತ್ತು ಹೊಂದಾಣಿಕೆ ಮಾಡಲು ಪ್ರಯಾಸ ಮಾಡಬೇಕಾಗುತ್ತದೆ. ಜಿಎಸ್‌ಟಿ ಪೋರ್ಟಲ್‌ ಮುಖಾಂತರ ಒದಗಿಸಿರುವ ಅಂತರ ಸಂಪರ್ಕ ಸಾಧನವು ಎಲ್ಲಾ ತೆರಿಗೆದಾರರಿಗೂ ಅನ್ವಯಿಸುವಂತೆ ಮೂಲ ಪ್ರಕೃತಿಯಲ್ಲಿರುತ್ತದೆ. ಆದರೆ ಜಿ ಎಸ್ ಪಿ ಗಳು ನಿರ್ಧಿಷ್ಟ ಗುಂಪಿನ ತೆರಿಗೆದಾರರಿಗೆ (ಬೃಹತ್ ತೆರಿಗೆದಾರರಿಗೆ ಅನುಕೂಲವಾಗುವ ಸ್ವಚಾಲಿತ ಆರ್ಥಿಕಪದ್ದತಿ, ಅರ್ಧಸ್ವಚಾಲಿತ “ಎಸ್ಎಂಈ” ವ್ಯವಸ್ಥೆ ಮತ್ತು ಸಣ್ಣ ಪ್ರಮಾಣದ ವ್ಯವಸ್ಥೆ) ಬೇಕಾಗುವಂತಹ ಹೆಚ್ಚು ಅಂತರ ಸಂಪರ್ಕ ಸಾಧನವುಳ್ಳ ಸಾಫ್ಟ್‌ ವೇರ್ ಗಳನ್ನು ಒದಗಿಸಿರುತ್ತಾರೆ. ಆದಾಗ್ಯೂ ಜಿಎಸ್‌ಟಿ ಪೋರ್ಟಲ್‌ಗಿಂತಲೂ ಜಿಎಸ್‌ಪಿಗಳ ಮುಖಾಂತರ ಒದಗಿಸಲಾದ ಸಾಫ್ಟ್‌ವೇರ್ ಹೆಚ್ಚು ಸುಲಭದ್ದಾಗಿರುತ್ತದೆ. ಜಿಎಸ್‌ಪಿಗಳು ಈಗಿರುವ ಸಾಫ್ಟ್‌ವೇರ್‌ನಲ್ಲಿಯೇ ಜಿಎಸ್‌ಟಿ ದಾಖಲಾತಿ ಸೌಲಭ್ಯ ಕಲ್ಪಿಸುವ ಅಪ್ಲಿಕೇಷನ್ ಅಥವಾ “ಎಸ್ಎಂಈ”ಗೆ ಸಂಪೂರ್ಣ ಪೂರಕವಾಗಿರುವ ಸಾಫ್ಟ್‌ವೇರ್‌ ಅಥವಾ ಸಣ್ಣ ಮಾರಾಟ/ಖರೀದಿಗೆ ತಕ್ಕ ಆಪ್‌ಲೈನ್‌ ಸ್ಪ್ರೆಡ್‌ ಶೀಟ್‌ ತಯಾರಿಸಿ ಕೊಡಬಹುದು, ತೆರಿಗೆದಾರರು ತಮ್ಮ ತೆರಿಗೆ ಸಂಬಂಧಿತ ಇನ್ವಾಯಿಸ್‌ ವಿವರಣೆಗಳನ್ನು ತುಂಬಿ ಆನಂತರದಲ್ಲಿ ಮುಂದಿನ ಪ್ರಕ್ರಿಯೆಗೆ ಜಿಎಸ್‌ಟಿ ಪೋರ್ಟಲ್‌ಗೆ ಸಲ್ಲಿಸಬಹುದು.ಇದೇ ರೀತಿ, ತೆರಿಗೆ ಸಲಹೆಗಾರರಿಗೆ (ಟಾಕ್ಸ್‌ ಕನ್ಸಲ್ಟೆಂಟ್) ಜಿಎಸ್‌ಪಿಗಳು ತಮ್ಮ ಕಕ್ಷಿದಾರರ ಸೂಚಿಯನ್ನು ಪ್ರದರ್ಶಿಸುವ ಡ್ಯಾಷ್‌ ಬೋರ್ಡ್‌ ಸೌಲಭ್ಯಕಲ್ಪಿಸಿ ಯಾವುದೇ ನಿರ್ಧಿಷ್ಟ ಕಕ್ಷಿದಾರರ ಹೆಸರನ್ನು ಕ್ಲಿಕ್‌ ಮಾಡಿದ ಕೂಡಲೇ ಅವರಿಗೆ ಸಂಬಂಧಿಸಿದ ಬಾಕಿ/ಕಾರ್ಯ ವಿವರಣೆಗಳು ದೊರಕುವಂತೆ ಮಾಡಬಹುದು.

ಪ್ರಶ್ನೆ 12. ಜಿಎಸ್‌ಟಿಎನ್ ಮೂಲಕ ನಿರ್ಮಿತ ಗೊಂಡ ಜಿಎಸ್‌ಟಿ ಸಮಾನ ಪೋರ್ಟಲ್ ಗೆ ಸಂಬಂಧಿಸಿದಂತೆ ತೆರಿಗೆದಾರರ ಪಾತ್ರಗಳೇನು ?

ಉತ್ತರ : ಜಿಎಸ್‌ಟಿಎನ್ ಮೂಲಕ ತೆರಿಗೆದಾರರು ನಿರ್ವಹಿಸುವ ಮುಖ್ಯ ಕಾರ್ಯಗಳು :

 • ತೆರಿಗೆದಾರನಾಗಿ ನೋಂದಣಿಕರಣಕ್ಕೆ ಅರ್ಜಿ ಸಲ್ಲಿಸುವುದು,ತಮಗೆ ಸಂಬಂಧಿಸಿದಂತೆ ಮಾಹಿತಿ ನಿರ್ವಹಣೆ
 • ತೆರಿಗೆ,ಬಡ್ಡಿ ಮತ್ತು ದಂಡ ಇತ್ಯಾದಿ ಪಾವತಿಸುವುದು
 • ಇನ್ವಾಯಿಸ್‌ ವಿವರಣೆಗಳನ್ನು ತುಂಬುವುದು ಮತ್ತು ವಿವರಣೆಗಳನ್ನು /ವಾರ್ಷಿಕ ವಿವರಣೆಗಳನ್ನು ದಾಖಲಿಸುವುದು
 • ವಿವರಣೆಗಳ/ತೆರಿಗೆ ಲೆಡ್ಜರ್/ನಗದು ಲೆಡ್ಜರ್‌ಗಳ ಸ್ಥಿತಿಯ ಸಮೀಕ್ಷೆ.

ಪ್ರಶ್ನೆ13. ಜಿಎಸ್‌ಟಿಎನ್‌ ಮೂಲಕ ನಿರ್ಮಿತಗೊಂಡ ಜಿಎಸ್‌ಟಿ ಸಮಾನ ಪೋರ್ಟಲ್‌ಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ಪಾತ್ರಗಳೇನು ?

ಉತ್ತರ: ಅಧಿಕಾರಿಗಳು ಜಿಎಸ್‌ಟಿಎನ್‌ ಮಾಹಿತಿಯನ್ನು ಹಿನ್ನೆಲೆಯಲ್ಲಿ ಕೆಳಕಂಡ ಕಾರ್ಯವಿಧಿಗಳಿಗೆ ಉಪಯೋಗಿಸುತ್ತಾರೆ.

 • ತೆರಿಗೆದಾರರ ನೋಂದಣಿಯ ಸ್ವೀಕೃತಿ/ತಿರಸ್ಕಾರ
 • ರಾಜ್ಯ ತೆರಿಗೆಯ ಆಡಳಿತ (ತೆರಿಗೆ ನಿಗದಿ/ಲೆಕ್ಕ ಪರಿಶೋಧನೆ/ಹಣದ ವಾಪಸಾತಿ/ಅಪೀಲು/ತಪಾಸಣೆ)
 • ಎಂಐಎಸ್‌ ಮತ್ತುಅನ್ಯಕಾರ್ಯಗಳು.

ಪ್ರಶ್ನೆ 14. ಜಿಎಸ್‌ಟಿಎನ್‌ ಸಿಸ್ಟಮ್‌ನಲ್ಲಿ ಪ್ರತಿಯೊಂದು ಇನ್ವಾಯಿಸ್‌ ಸಾಲಿಗೂ ಪ್ರತ್ಯೇಕ ವಿಶಿಷ್ಟ ಗುರುತನ್ನು ಜಿಎಸ್‌ಟಿಎನ್ ನಿರ್ಮಿಸುವುದೇ ?

ಉತ್ತರ: ಇಲ್ಲ. ಜಿಎಸ್‌ಟಿಎನ್ ಯಾವುದೇ ಹೊಸ ಗುರುತುಗಳನ್ನು ನಿರ್ಮಿಸುವುದಿಲ್ಲ. ಸೇವಾ ಪೂರೈಕೆದಾರರ ಜಿಎಸ್‌ಟಿಐಎನ್, ಇನ್ವಾಯಿಸ್ ಸಂಖ್ಯೆ ಮತ್ತು ಎಚ್ ಎಸ್ ಎನ್ / ಎಸ್ ಎ ಸಿ ಕೋಡ್‌ಗಳ ಸಹಿತ ಆರ್ಥಿಕ ವರ್ಷ ಎಲ್ಲವನ್ನೂ ಒಟ್ಟುಗೂಡಿಸುವುದರಿಂದ ಪ್ರತಿ ಸಾಲೂ ವಿಶಿಷ್ಟವಾಗಿರುತ್ತದೆ.

ಪ್ರಶ್ನೆ 15. ಇನ್ವಾಯಿಸ್ ವಿವರಣೆಯನ್ನು ದೈನಂದಿಕ ಆಧಾರದ ಮೇಲೆ ಅಪ್ಲೋಡ್ ಮಾಡಬಹುದೇ ?

ಉತ್ತರ : ಹೌದು. ಜಿಎಸ್‌ಟಿ ಪೋರ್ಟಲ್‌ನಲ್ಲಿ ಯಾವುದೇ ಸಮಯದಲ್ಲೂ ವಿವರಣೆಗಳನ್ನು ಪಡೆಯುವ ಸೌಲಭ್ಯವಿರುತ್ತದೆ. ವಿವರಣೆಗಳನ್ನು ಬೇಗ ಅಪ್ಲೋಡ್ ಮಾಡಿದಷ್ಟೂ ಒಳ್ಳೆಯದು, ಏಕೆಂದರೆ ವಿವರಣೆಗಳನ್ನು ಪಡೆಯುವವರ ಖರೀದಿ ರಿಜಿಸ್ಟರ್‌ನಲ್ಲಿ ಅವುಗಳನ್ನು ಆಗಿಂದಾಗ್ಯೆ ನೋಡಬಹುದಾಗಿದೆ.

ಪ್ರಶ್ನೆ16. ಜಿಎಸ್‌ಟಿ ಪೋರ್ಟಲ್ ನಲ್ಲಿ ಇನ್ವಾಯಿಸ್ ವಿವರಣೆಗಳನ್ನು ಅಪ್ಲೋಡ್ ಮಾಡಲು ಟೂಲ್ಸ್‌/ ಸಲಕರಣೆಗಳನ್ನು ಜಿಎಸ್‌ಟಿಎನ್ ಒದಗಿಸುವುದೇ?

ಉತ್ತರ : ಹೌದು. ಜಿಎಸ್‌ಟಿಎನ್ ಮೈಕ್ರೋಸಾಫ್ಟ್‌ ಎಕ್ಸೆಲ್ ತರಹದ ಸ್ಪ್ರೆಡ್ ಶೀಟ್ ಒದಗಿಸಿರುತ್ತದೆ. ತೆರಿಗೆದಾರರು ತಮ್ಮ ಇನ್ವಾಯಿಸ್‌ ವಿವರಣೆಗಳನ್ನು ಒಂದೇ ಬಾರಿಗೆ ಈ ಮೂಲಕ ಉಚಿತವಾಗಿ ಅಪ್ಲೋಡ್‌ ಮಾಡಬಹುದು. ಇದು ಒಂದು ಆಫೀಸ್ ಟೂಲ್ ಆಗಿ ಕೆಲಸ ನಿರ್ವಹಿಸುತ್ತದೆ. ವಿವರಣೆಗಳನ್ನು ಆಫ್‌ ಲೈನ್‌ನಲ್ಲಿ ತುಂಬಿ ನಂತರ ಕೆಲವು ನೂರು ಇನ್ವಾಯಿಸ್ ವಿವರಣೆಗಳನ್ನು ಒಂದೇ ಬಾರಿಗೆ ಅಪ್ ಲೋಡ್ ಮಾಡಬಹುದು.

ಪ್ರಶ್ನೆ 17. ಲೆಡ್ಜರ್ ಖಾತೆಗಳನ್ನು ಮತ್ತು ಬೇರೆ ಖಾತೆಗಳನ್ನು ನೋಡಲು ಜಿಎಸ್‌ಟಿಎನ್ ಮೊಬೈಲ್ ಆಪ್ಸ್‌ ಒದಗಿಸುವುದೇ ?

ಉತ್ತರ : ಹೌದು. ಯಾವುದೇ ಸ್ಮಾರ್ಟ್ ಫೋನ್ ನಲ್ಲಿಯೂ ನೋಡಬಹುದಾದ ರೀತಿಯಲ್ಲಿ ಜಿಎಸ್‌ಟಿ ಪೋರ್ಟಲ್ ಅನ್ನು ರಚಿಸಲಾಗಿದೆ. ಹೀಗಾಗಿ ಮೊಬೈಲ್‌ ಫೋನ್‌ ಮುಖಾಂತರವೇ ನಗದು ಲೆಡ್ಜರ್, ಬಾದ್ಯತೆ ಲೆಡ್ಜರ್, ಐಟಿಸಿ ಲೆಡ್ಜರ್, ಮುಂತಾದವನ್ನು ನೋಡಬಹುದಾಗಿದೆ.

ಪ್ರಶ್ನೆ18. ಜಿಎಸ್‌ಟಿಎನ್, ತೆರಿಗೆದಾರರಯೂಸರ್‌ ಐಡಿ ಮತ್ತು ಪಾಸ್ವರ್ಡ್ ಅಗತ್ಯವಿಲ್ಲದೆಯೇ ಪ್ರಸ್ತುತ ನೆಡೆಯುತ್ತಿರುವಂತೆ ತೆರಿಗೆದಾರರ ಪರವಾಗಿ ಕೆಲಸ ನಿರ್ವಹಿಸಲು, ತೆರಿಗೆ ವೃತ್ತಿಗರಿಗೆ ಪ್ರತ್ಯೇಕ ಯೂಸರ್ ಐ ಡಿ ಮತ್ತು ಪಾಸ್ ವರ್ಡ್ ಸೌಲಭ್ಯ ಕಲ್ಪಿಸುವುದೇ?

ಉತ್ತರ: ಹೌದು. ತೆರಿಗೆದಾರರ ಯೂಸರ್ ಐ ಡಿ ಮತ್ತು ಪಾಸ್ ವರ್ಡ್ ಅಗತ್ಯವಿಲ್ಲದೆಯೇ ತೆರಿಗೆದಾರರ ಪರವಾಗಿ ಕೆಲಸ ನಿರ್ವಹಿಸಲು (ಪ್ರಸ್ತುತ ನೆಡೆಯುತ್ತಿರುವಂತೆ), ತೆರಿಗೆ ವೃತ್ತಿಗರಿಗೆ ಪ್ರತ್ಯೇಕ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಸೌಲಭ್ಯ ಕಲ್ಪಿಸಲಾಗುವುದು. ಅಂತಿಮ ಸಲ್ಲಿಕೆಯ ವಿನಹ, ಜಿಎಸ್‌ಟಿ ಕಾನೂನಿನ ಅಡಿ ಅನುಮತಿ ಇರುವ ಎಲ್ಲಾ ಕೆಲಸಗಳನ್ನು ತೆರಿಗೆದಾರರ ಪರವಾಗಿ ತೆರಿಗೆ ವೃತ್ತಿಗರು ನಿರ್ವಹಿಸಬಹುದು. ಅಂತಿಮ ಸಲ್ಲಿಕೆಯನ್ನು ತೆರಿಗೆದಾರರೇ ಈ-ರುಜು (ಒಟಿಪಿ) ಅಥವಾ ಡಿಜಿಟಲ್ ರುಜು ಪ್ರಮಾಣಪತ್ರ ಉಪಯೋಗಿಸಿ ಮಾಡಬೇಕು.

ಪ್ರಶ್ನೆ19. ಮೇಲೆ ಹೇಳಿರುವ ಸೌಲಭ್ಯದ ಪ್ರಕಾರ ತೆರಿಗೆದಾರರು, ಒಮ್ಮೆ ಆಯ್ದುಕೊಂಡ ತೆರಿಗೆ ವೃತ್ತಿಗರನ್ನು ಬದಲಾಯಿಸಬಹುದೇ?

ಉತ್ತರ : ಹೌದು. ಜಿಎಸ್‌ಟಿಎನ್ ಪೋರ್ಟಲ್ ನಲ್ಲಿ ಹಿಂದಿನ ತೆರಿಗೆ ವೃತ್ತಿಗರ ಹೆಸರನ್ನು ತೆಗೆದು ತಮ್ಮ ಇಚ್ಚೆಯಂತೆ ಹೊಸ ತೆರಿಗೆ ವೃತ್ತಿಗರನ್ನು ನಿಯೋಜಿಸಬಹುದು.

ಪ್ರಶ್ನೆ 20 ಕೇಂದ್ರ ಅಬಕಾರಿ ಅಥವಾ ಸೇವಾ ತೆರಿಗೆ ಅಥವಾ ರಾಜ್ಯ ವ್ಯಾಟ್ ಅಡಿ ಈಗಾಗಲೇ ನೋಂದಾಯಿಸಿರುವ ತೆರಿಗೆದಾರರು ಮತ್ತೆ ಹೊಸದಾಗಿ ಜಿಎಸ್‌ಟಿಅಡಿ ನೋಂದಾಯಿಸಿಕೊಳ್ಳಬೇಕೆ ?

ಉತ್ತರ : ಇಲ್ಲ. ಸಿಬಿಡಿಟಿ ಡಾಟಾಬೇಸ್ ಮೂಲಕ ಮಾನ್ಯವಾಗಿರುವ ಪ್ಯಾನ್ ಸಂಖ್ಯೆ ಹೊಂದಿರುವಂತಹ, ಈಗಾಗಲೇ ನೋಂದಾಯಿಸಿರುವ ತೆರಿಗೆದಾರರು ಮತ್ತೆ ಹೊಸದಾಗಿ ಜಿಎಸ್‌ಟಿಅಡಿ ನೋಂದಾಯಿಸಿಕೊಳ್ಳುವ ಅಗತ್ಯ ಇಲ್ಲ. ಅಂತಹವರಿಗೆ, ಜಿಎಸ್‌ಟಿ ಪೋರ್ಟಲ್‌ ಮೂಲಕ ತಾತ್ಕಾಲಿಕ ಜಿಎಸ್‌ಟಿಐಎನ್‌ಜಾರಿಗೊಳಿಸಲಾಗುವುದು, ಅದು ಆರು ತಿಂಗಳ ಕಾಲ ಮಾನ್ಯವಾಗಿರುವುದು, ಜಿಎಸ್‌ಟಿ ನೋಂದಣಿ ಅರ್ಜಿಯ ಪ್ರಕಾರ ಸಂಬಂಧಿಸಿದ ವಿವರಣೆಗಳನ್ನು ಸಲ್ಲಿಸಬಹುದು. ವಿವರಣೆಗಳ ದಾಖಲಾತಿ ಪೂರ್ಣಗೊಂಡ ನಂತರ ತಾತ್ಕಾಲಿಕ ನೋಂದಣಿ ನಿಯಮಿತ ನೋಂದಣಿಯಾಗಿ ಪರಿವರ್ತಿತಗೊಳ್ಳುತ್ತದೆ. ಮುಂದಿನ ಸೂಚನೆ ಸಲ್ಲಿಕೆಯ ಸಮಯಾವಧಿಯನ್ನು, ಸಂಬಂಧಿಸಿದ ತೆರಿಗೆ ಪ್ರಾಧಿಕಾರಣಗಳು ಜಾರಿಗೊಳಿಸುತ್ತವೆ.

ಪ್ರಶ್ನೆ21. ಜಿಎಸ್‌ಟಿಎನ್, ತೆರಿಗೆದಾರರ ಅನುಕೂಲಕ್ಕಾಗಿ, ಜಿಎಸ್‌ಟಿ ಪೋರ್ಟಲ್‌ನಲ್ಲಿ ವಿಭಿನ್ನ ಕಾರ್ಯನಿರ್ವಹಿಸುವುದರ ಕುರಿತು ತರಬೇತಿ ವೀಡಿಯೋಗಳನ್ನು ಅಳವಡಿಸಿರಿವುದೇ?

ಉತ್ತರ:ಹೌದು. ಜಿಎಸ್‌ಟಿಎನ್, ಜಿಎಸ್‌ಟಿ ಪೋರ್ಟಲ್‌ನಲ್ಲಿರುವ ಪ್ರತಿಯೊಂದು ಪ್ರಕ್ರಿಯೆಗೂ ಸಂಬಂಧಿಸಿದಂತೆ ಕಂಪ್ಯೂಟರ್ ಆಧಾರಿತ ತರಬೇತಿ ಪಠ್ಯಕ್ರಮಗಳನ್ನು ವೀಡಿಯೋ ಮೂಲಕ ಅಳವಡಿಸುವ ತಯಾರಿ ನೆಡೆಸಿದೆ. ಇವುಗಳನ್ನು ಜಿಎಸ್‌ಟಿ ಪೋರ್ಟಲ್ ಹಾಗೂ ಎಲ್ಲಾ ತೆರಿಗೆ ಪ್ರಾಧಿಕಾರಣಗಳ ವೆಬ್‌ಸೈಟ್‌ನಲ್ಲಿ ಒದಗಿಸಲಾಗುವುದು.

ಪ್ರಶ್ನೆ22. ಜಿಎಸ್‌ಟಿ ಸಮಾನ ಪೋರ್ಟಲ್‌ನಲ್ಲಿ ತೆರಿಗೆದಾರರು ಸಲ್ಲಿಸುವ ನೋಂದಣಿ ಮತ್ತು ವ್ಯಾಪಾರ ವಿವರಣೆಗಳು ಗುಪ್ತವಾಗಿ ಇಡಲಾಗುವುದೇ?

ಉತ್ತರ:ಹೌದು. ಜಿಎಸ್‌ಟಿ ಸಮಾನ ಪೋರ್ಟಲ್‌ನಲ್ಲಿ ತೆರಿಗೆದಾರರು ಸಲ್ಲಿಸುವ ವಯಕ್ತಿಕ ಮತ್ತು ವ್ಯಾಪಾರ ವಿವರಣೆಗಳನ್ನು ಗುಪ್ತವಾಗಿ ಇಡಲು ಜಿಎಸ್‌ಟಿಎನ್‌ ಮೂಲಕ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ರೋಲ್ ಆಧಾರಿತ ಆಕ್ಸೆಸ್‌ ನಿಯಂತ್ರಣ ವ್ಯವಸ್ಥೆಯಡಿ, ಗೂಢ ಲಿಪೀಕರಣದ ಮೂಲಕ ತೆರಿಗೆದಾರರ ಮಹತ್ವದ ಎಲ್ಲಾ ವಿವರಣೆಗಳನ್ನು, ಅವುಗಳ ರವಾನೆ ಮತ್ತು ಸಂಗ್ರಹಣೆಯಲ್ಲಿ ಗುಪ್ತವಾಗಿರುವಂತೆ ಖಚಿತ ಪಡಿಸಲಾಗುತ್ತದೆ. ಕೇವಲ ಪ್ರಾಧಿಕೃತ ತೆರಿಗೆ ಪ್ರಾಧಿಕಾರಿಗಳು ಮಾತ್ರವೇ ಈ ವಿವರಣೆಗಳನ್ನು ನೋಡಬಹುದು, ಓದಬಹುದು.

ಪ್ರಶ್ನೆ23. ಜಿಎಸ್‌ಟಿ ಸಿಸ್ಟಮ್‌ನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಿಎಸ್‌ಟಿಎನ್‌ ಮೂಲಕ ಯಾವ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿವೆ?

ಉತ್ತರ : ಜಿಎಸ್‌ಟಿ ಸಿಸ್ಟಮ್ ಯೋಜನೆಯಡಿ, ವಿವರಣೆ ಮತ್ತು ಸೇವಾ ಸುರಕ್ಷತೆಯನ್ನು ಕಾಪಾಡಲು ಅತ್ಯುತ್ಕೃಷ್ಠ ಸುರಕ್ಷಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅತಿಸುರಕ್ಷಿತ ಫೈರ್ ವಾಲ್ ಗಳು, ಅನಾಹೂತ (ಇಂಟ್ರೂಶನ್) ಪತ್ತೆಹಚ್ಚುವಿಕೆ, ಗೂಢ ಲಿಪೀಕರಣಗಳ ಮೂಲಕ ವಿವರಣೆಗಳು ರವಾನೆ ಮತ್ತು ಸಂಗ್ರಹಣೆಯಲ್ಲಿರುವ ಸ್ಥಿತಿಯಲ್ಲೂ ಸುರಕ್ಷಿತವಾಗಿ ಕಾಪಾಡಿಕೊಳ್ಳಲಾಗುತ್ತದೆ. ಸಂಪೂರ್ಣ ತಪಾಸಣಾ ಜಾಡನ್ನು ಕಲ್ಪಿಸುವಲ್ಲಿ, ಸಮಂಜಸ ಹಾಷಿಂಗ್ ಆಲ್ಗೊರಿಥಮ್ ಆಪರೇಟಿಂಗ್ ಸಿಸ್ಟಮ್ ಮತ್ತು ಹೊಸ್ಟ್‌ ಹರ್ಡೆನಿಂಗ್ ಆದಿ ವ್ಯವಸ್ಥೆಗಳನ್ನು ಉಪಯೋಗಿಸಲಾಗಿದೆ. ಜಿಎಸ್‌ಟಿಎನ್ ಯೋಜನೆಯಡಿ, ಪ್ರಾಸಂಗಿಕವಾಗಿಯೂ ಮಾರಕ ದಾಳಿಗಳನ್ನು ತಡೆಗಟ್ಟಲು ಮತ್ತು ಸಕ್ರಿಯವಾಗಿ ನಿಗ ಇಡಲು ಪ್ರಾಥಮಿಕ ಹಾಗೂ ಆನುಷಂಗಿಕ ಸುರಕ್ಷಾ ಪ್ರಚಾಲನಾ ನಿಯೋಗ ಮತ್ತು ನಿಯಂತ್ರಣ ಕೇಂದ್ರವನ್ನು ಸ್ಠಾಪಿಸಲಾಗುತ್ತಿದೆ. ಸಾಮಾನ್ಯವಾಗಿ ಅರಿವಿರುವ ಮತ್ತು ಅರಿವಿಲ್ಲದ ಭೀತಿಯಿಂದ ಪಾರಾಗಲು ಸತತವಾಗಿ ಮೂಲ ಕೋಡ್ ನ ಸ್ಕಾನ್ನಿಂಗ್ ಮೂಲಕ ಸುರಕ್ಷಿತ ಕೋಡಿಂಗ್ (ಗೋಪನ) ವ್ಯವಸ್ಥೆಯನ್ನು ಜಿಎಸ್‌ಟಿಎನ್ ಖಚಿತ ಪಡಿಸುವ ಕಾರ್ಯದಲ್ಲಿ ತೊಡಗಿದೆ.

 

****

ಬದಲಾವಣೆ ವ್ಯವಸ್ಥೆಗಳು

24. ಬದಲಾವಣೆ ವ್ಯವಸ್ಥೆಗಳು

ಪ್ರಶ್ನೆ1. ಜಿಎಸ್‌ಟಿ ಜಾರಿಗೊಳಿಸುವ ಮುನ್ನ, ಹಿಂದಿನ ಕಾನೂನಿನಡಿ ಸಲ್ಲಿಸಿರುವ ತೆರಿಗೆ ವಿವರಣೆಗಳಲ್ಲಿ ಸೆಂವಾಟ್/ಐಟಿಸಿ ರೂಪದಲ್ಲಿ ಪಡೆದಿರುವ ತೆರಿಗೆ ಉದ್ದರಿಯು, ಜಿಎಸ್‌ಟಿಗೂ ಅನ್ವಯವಾಗುವುದೇ?

ಉತ್ತರ: ಹೌದು. ನೋಂದಾಯಿತ ತೆರಿಗೆದಾರರು ಅಂತಹ ಉದ್ದರಿಗಳಿಗೆ ಅರ್ಹರಾಗಿರುತ್ತಾರೆ. ಅವರ ಎಲೆಕ್ರಾನಿಕ್‌ ಕ್ರಡಿಟ್‌ ಲೆಡ್ಜರ್‌ಗೆ ಅದು ಜಮೆಯಾಗುತ್ತದೆ. ಭಾಗ 143.

ಪ್ರಶ್ನೆ2. ನೋಂದಾಯಿತ ತೆರಿಗೆದಾರರೊಬ್ಬರು 2016-17ರ ಅಂತಿಮ ತ್ರಿಮಾಸದಲ್ಲಿ ಬಂಡವಾಳ ಸರಕನ್ನು ಖರೀದಿಸಿರುತ್ತಾರೆ. ಮಾರ್ಚ್ 31 ರೊಳಗೆ ಸರಕು ಪಟ್ಟಿಯು ತಲುಪಿದ್ದರೂ ಕೂಡ ಸರಕುಗಳು ಏಪ್ರಿಲ್ 5, 2017 ರಂದು ತಲುಪುತ್ತವೆ (ಜಿಎಸ್‌ಟಿ ಪದ್ಧತಿಯಡಿ). ಅಂತಹ ಸಂದರ್ಭದಲ್ಲಿ ಆ ವ್ಯಕ್ತಿಗೆ 2017-18 ರಲ್ಲಿ ಸೆಂವ್ಯಾಟ್ ಉದ್ದರಿಯು ಪೂರ್ಣವಾಗಿ ಲಭ್ಯವಾಗುವುದೇ ?

ಉತ್ತರ: ಹೌದು. ಆ ವ್ಯಕ್ತಿಗೆ 2017-18ರಲ್ಲಿ ಸೆಂವ್ಯಾಟ್ ಉದ್ದರಿಯು ಲಾಭವು ಪೂರ್ಣವಾಗಿ ದೊರಕುತ್ತದೆ. ಭಾಗ 144(1) ರಲ್ಲಿರುವ ವಿವರಣೆ.

ಪ್ರಶ್ನೆ3. ಹಿಂದಿನ ಕಾನೂನಿನಡಿ ‘ಘಿ’ ಹಾಗೂ ‘ಙ’ ವಸ್ತುಗಳ ಮೇಲೆ ಬಂಡವಾಳ ಸರಕುಗಳಿಗೆ ಅನ್ವಯಿಸುವ ಮೌಲ್ಯವರ್ಧಿತ ತೆರಿಗೆ ಉದ್ದರಿಯು ಲಭ್ಯವಾಗಿಲ್ಲ. ಜಿಎಸ್‌ಟಿಯಲ್ಲಿ ಅಂತಹ ವಸ್ತುಗಳು ಒಳಗೊಂಡಿರುವುದರಿಂದ ನೋಂದಾಯಿತ ತೆರಿಗೆದಾರರು ಈಗ ಅದರ ಲಾಭ ಪಡೆಯಬಹುದೇ?

ಉತ್ತರ: ತೆರಿಗೆದಾರರು, ಹಿಂದಿನ ಕಾನೂನಿನಡಿ ಅಂತಹ ವಸ್ತುಗಳ ಮೇಲೆ ಐಟಿಳಸಿ ಅನುಮತಿ ಇದ್ದಲ್ಲಿ, ಈಗಿನ ಜಿಎಸ್‌ಟಿ ಪದ್ಧತಿಯಡಿಯೂ ಆ ಸೌಕರ್ಯವನ್ನು ಪಡೆಯಬಹುದು. ಮೇಲೆ ಹೇಳಿರುವಂತೆ ಆ ಎರಡೂ ವಸ್ತುಗಳಿಗೆ ಸಂಬಂಧಿಸಿದಂತೆ ಹಿಂದಿನ ಕಾನೂನಿನಡಿ ಉದ್ದರಿಗೆ ಅವಕಾಶ ಇಲ್ಲದ ಕಾರಣ ಪ್ರಸ್ತುತ ಜಿಎಸ್‌ಟಿಯಲ್ಲಿಯೂ ಸೌಕರ್ಯವನ್ನು ಪಡೆಯಲಾಗುವುದಿಲ್ಲ. ಭಾಗ 144(1) ರ ಪರಂತುಕ.

ಪ್ರಶ್ನೆ 4. ತೆರಿಗೆದಾರರು ತಪ್ಪಾಗಿ ಐಟಿಸಿ ಯ ಪ್ರಯೋಜನವನ್ನು ಪಡೆದಿದ್ದಲ್ಲಿ ಜಿಎಸ್‌ಟಿ ಅಥವಾ ಹಿಂದಿನ ಕಾನೂನಿನಡಿ ಮರು ವಸೂಲಾತಿ ಮಾಡಲಾಗುವುದೇ?

ಉತ್ತರ: ಐಟಿಸಿ ಗೆ ಸಂಬಂಧಿಸಿದಂತೆ ತಪ್ಪಾಗಿ ಐಟಿಸಿ ಯ ಪ್ರಯೋಜನವನ್ನು ಪಡೆದಿದ್ದಲ್ಲಿ ಜಿಎಸ್‌ಟಿ ಕಾನೂನಿನಡಿ ಮರು ವಸೂಲಾತಿ ಮಾಡಲಾಗುವುದು. ಭಾಗ 143 ರಿಂದ 146.

ಪ್ರಶ್ನೆ5. ಹಿಂದಿನ ಕಾನೂನಿನಡಿಯಲ್ಲಿ ನೋಂದಣಿ ಅಗತ್ಯ ಇಲ್ಲದಂತಹ ಆದರೆ ಜಿಎಸ್‌ಟಿಯಲ್ಲಿ ನೋಂದಣಿ ಅಗತ್ಯ ಇರುವಂತಹ ನೋಂದಾಯಿತ ತೆರಿಗೆದಾರರ ಎರಡು ಉದಾಹರಣೆಗಳನ್ನು ಕೊಡಿ ?

ಉತ್ತರ: ಉದಾಹರಣೆಗೆ ರೂ.60 ಲಕ್ಷ ವಹಿವಾಟು ಇರುವ ಉತ್ಪಾದಕರೊಬ್ಬರು ಎಸ್ಎಸ್ಐ ರಿಯಾಯಿತಿಯ ಪ್ರಯೋಜನವನ್ನು ಪಡೆಯ ಬಹುದಾಗಿತ್ತು. ಆದರೆ ಪ್ರಸ್ತುತ ಜಿಎಸ್‌ಟಿ ಅಡಿಯಲ್ಲಿ ವಹಿವಾಟು, ಕನಿಷ್ಠ ಪರಿಮಿತಿ ರೂ 10 ಲಕ್ಷಕ್ಕಿಂತ ಹೆಚ್ಚಾಗಿರುವುದರಿಂದ ಈ ಉತ್ಪಾದಕರು ನೋಂದಾಯಿಸಿಕೊಳ್ಳಬೇಕು. ಭಾಗ 9. ಈ ವಾಣಿಜ್ಯ ಆಪರೇಟರ್‌ ಮೂಲಕ ವ್ಯಾಟ್‌ನ ಅಡಿಯಲ್ಲಿ ಕನಿಷ್ಠ ಪರಿಮಿತಿಗಿಂತ ಕಡಿಮೆ ವಹಿವಾಟುಳ್ಳ ವ್ಯಾಪಾರಿಗಳೂ ಸಹ ಜಿಎಸ್‌ಟಿಯಲ್ಲಿ ನೋಂದಾಯಿಸಿಕೊಳ್ಳುವ ಅಗತ್ಯ ಇದೆ ಏಕೆಂದರೆ ಅಂತಹ ವ್ಯಕ್ತಿಗಳಿಗೆ ಯಾವುದೇ ಕನಿಷ್ಠ ಪರಿಮಿತಿ ಇರುವುದಿಲ್ಲ. ಭಾಗ 9 ಮತ್ತು ಪರಿಶಿಷ್ಟIIIರ ಜೊತೆ ಪಠಿಸಲ್ಪಡುವ ಭಾಗ 145

ಪ್ರಶ್ನೆ 6. ನಿಗದಿತ ದಿನದಂದು ಸ್ಟಾಕ್ ರೂಪದಲ್ಲಿ ಇರುವ ವ್ಯಾಟ್ ಪಾವತಿಸಲಾದ ಸರಕುಗಳ ಮೇಲೆ ಸೇವಾ ಪೂರೈಕೆದಾರರಿಗೆ ಐಟಿರಸಿ ಅನುಮತಿ ನೀಡಲಾಗುವುದೇ?

ಉತ್ತರ : ಇಲ್ಲ. ಸೇವೆಗಳು ವ್ಯಾಟ್ ನ ಅಡಿ ಬರುವುದಿಲ್ಲ. ಸರಕುಗಳ ಮೇಲೆ ಮಾತ್ರ ಅನ್ವಯವಾಗುತ್ತದೆ.

ಪ್ರಶ್ನೆ7. ನೋಂದಾಯಿತ ತೆರಿಗೆದಾರರೊಬ್ಬರು ಹಿಂದಿನ ಕಾನೂನಿನಡಿ ಹಿಂದಿನ ವಿವರಣೆಯಲ್ಲಿ, ತಮ್ಮ ಎಲೆಕ್ಟ್ರೋನಿಕ್‌ ಲೆಡ್ಜರ್‌ಗೆ ರೂ.1000/- ಐಟಿಸಿ ಐಟಿಸಿ ಯನ್ನು ಪಡೆದಿರುತ್ತಾರೆ. ಈಗ ಜಿಎಸ್‌ಟಿಯ ನಿಬಂಧಿತ ಯೋಜನೆಯ ವಿಕಲ್ಪವನ್ನು ಆರಿಸಿಕೊಳ್ಳುತ್ತಾರೆ. ಅವರಿಗೆ ಐಟಿಸಿ ವಾಪಸಾತಿ ಆಗುವುದೇ?

ಉತ್ತರ: ಇಲ್ಲ. ಮೇಲೆ ಹೇಳಿರುವ ವ್ಯಾಪಾರಿಗಳು, ತಮ್ಮ ಸ್ಟಾಕ್‌ನಲ್ಲಿ ಇರಿಸಿಕೊಂಡಿರುವ ಸಾಮಗ್ರಿಗಳ ಮೇಲಿನ ತೆರಿಗೆ ಐಟಿಸಿ ಯ ಸಮಾನ ಮೊತ್ತವನ್ನು, ಜಿಎಸ್‌ಟಿಯ ನಿಬಂಧಿತ ಯೋಜನೆಗೆ ವರ್ಗಾವಣೆ ಮಾಡಿಕೊಳ್ಳುವ ಹಿಂದಿನ ದಿನವೇ ಪಾವತಿಸಬೇಕು. ತಮ್ಮ ಎಲೆಕ್ಟ್ರೋನಿಕ್ ನಗದು ಲೆಡ್ಜರ್ ಅಥವಾ ಎಲೆಕ್ಟ್ರೋನಿಕ್ ಕ್ರೆಡಿಟ್ ಲೆಡ್ಜರ್ ಮೂಲಕ ಈ ಮೊತ್ತವನ್ನು ಪಾವತಿಸಬಹುದು. ಎಲೆಕ್ಟ್ರೋನಿಕ್‌ ಕ್ರಡಿಟ್‌ ಲೆಡ್ಜರ್‌ ಮೂಲಕ ಪಾವತಿ ಸಲ್ಲಿಸಿದರೆ ಅಧಿಕ ಐಟಿಸಿ ಶೇಷದ ಲಾಭ ಪಡೆಯಲಾಗುವುದಿಲ್ಲ. ಭಾಗ 147 ರ ಸಂದರ್ಭ

ಪ್ರಶ್ನೆ 8. ಸಿಎಸ್‌ಟಿ (ಕೇಂದ್ರ ಮಾರಾಟ ತೆರಿಗೆ ಅಧಿನಿಯಮ) ಅಡಿ ಮಾರಾಟ ವಾಪಸಾತಿಯನ್ನು ಆರು ತಿಂಗಳ ವಹಿವಾಟಿನಲ್ಲಿ, ಕಡಿತದ ರೂಪದಲ್ಲಿ ಪಡೆಯಬಹುದು. ಜಿಎಸ್‌ಟಿಯಲ್ಲಿ ಮಾರಾಟವಾದ ಆರು ತಿಂಗಳಿನಲ್ಲಿ ಖರೀದಿದಾರರು ಸರಕುಗಳನ್ನು ಹಿಂದಿರುಗಿಸಿದರೆ, ಸಿಎಸ್‌ಟಿ ಅಥವಾ ಜಿಎಸ್‌ಟಿಯಲ್ಲಿ ಅವು ತೆರಿಗೆಗೆ ಅರ್ಹ ವಾಗುತ್ತವೆಯೇ?

ಉತ್ತರ: ಜಿಎಸ್‌ಟಿ ಅಡಿ ಮೇಲೆ ಹೇಳಿರುವ ಸರಕುಗಳು ತೆರಿಗೆಗೆ ಯೋಗ್ಯವೋ ಅಲ್ಲವೋ ಎಂದು ತಿಳಿಯಬೇಕು. ನಂತರ, ನಿಗದಿತ ದಿನದಿಂದ ಆರು ತಿಂಗಳ ಅವಧಿಯ ನಂತರ ಸರಕುಗಳನ್ನು ಹಿಂತಿರುಗಿಸಲಾಗಿದೆಯೇಯೆಂದು ತಿಳಿಯಬೇಕು. ಈ ಎರಡೂ ಶರತ್ತುಗಳೂ ಅನ್ವಯಿಸಿದರೆ ಆ ವ್ಯಕ್ತಿಯು ಹಿಂದಿರುಗಿಸುವ ಸರಕಿನ ಮೇಲೆ ಜಿಎಸ್‌ಟಿಯಡಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಆದಾಗ್ಯೂ, ಸರಕನ್ನು ಪತ್ತೆ ಮಾಡಬಹುದಾದರೆ ಮತ್ತು ಆ ಸರಕುಗಳ ಮಾರಾಟದ ಸಮಯದಲ್ಲಿ ಈಗಾಗಲೇ ಹಿಂದಿನ ಕಾನೂನಿನಡಿ ತೆರಿಗೆ ಪಾವತಿ ಮಾಡಿರುವ ಸಂದರ್ಭದಲ್ಲಿ, ಸರಕುಗಳನ್ನು ನಿಗದಿತ ದಿನದಿಂದ ಆರು ತಿಂಗಳ ಅವಧಿಯಲ್ಲಿ ಹಿಂತಿರುಗಿಸಿದರೆ, ಹಿಂದಿರುಗಿಸುವ ಸರಕಿನ ಮೇಲೆ, ಜಿಎಸ್‌ಟಿಯಡಿ ತೆರಿಗೆಯನ್ನು ಪಾವತಿಸಬೇಕಾದ ಅಗತ್ಯ ಇರುವುದಿಲ್ಲ. ಭಾಗ 149.

ಪ್ರಶ್ನೆ 9. ಹಿಂದಿನ ಕಾನೂನಿನಡಿಯಲ್ಲಿ ಯಾವುದಾದರೋ ಕೆಲಸಕ್ಕಾಗಿ ಕಳುಹಿಸಿರುವ ಸರಕುಗಳನ್ನು ಅಥವಾ ಅರ್ಧ ನಿರ್ಮಿತ ಸರಕುಗಳನ್ನು ಸಂಬಂಧಿಸಿದ ಕೆಲಸ ಮುಗಿದ ಮೇಲೆ ನಿಗದಿತ ದಿನದ ನಂತರ ವಾಪಸು ಮಾಡಿದರೆ ಆ ಉತ್ಪಾದಕರು ಅಥವಾ ಮಜೂರಿ ಕೆಲಸಗಾರರು (ಜಾಬ್ ವರ್ಕರ್) ತೆರಿಗೆ ಪಾವತಿಸಬೇಕಾಗುತ್ತದೆಯೇ ?

ಉತ್ತರ: ಇಲ್ಲ. ಈ ಕೆಳಕಂಡ ಸಂದರ್ಭಗಳಲ್ಲಿ ಉತ್ಪಾದಕರು ಅಥವಾ ಮಜೂರಿ ಕೆಲಸಗಾರರು (ಜಾಬ್ ವರ್ಕರ್) ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

 • ಹಿಂದಿನ ಕಾನೂನಿನ ಉಪ ಬಂಧಗಳಿಗೆ ಅನುಗುಣವಾಗಿ ನಿಗದಿತ ದಿನದ ಮುನ್ನ ಸರಕುಗಳು ಅಥವಾ ಅರ್ಧ ನಿರ್ಮಿತ ಸರಕುಗಳನ್ನು ಒಪ್ಪಂದದ ಕೆಲಸಕ್ಕೆ ಕಳುಹಿಸಿದ್ದರೆ ;
 • ನಿಗದಿತ ದಿನದಿಂದ ಹಿಡಿದು ಆರು ತಿಂಗಳೊಳಗೆ (ಅಥವಾ 2 ತಿಂಗಳ ವಿಸ್ತೃತ ಅವಧಿಯಲ್ಲಿ), ಆ ಸರಕುಗಳನ್ನು ಮಜೂರಿ ಕೆಲಸಗಾರರು ವಾಪಸು ಮಾಡಿದ್ದರೆ,
 • ಉತ್ಪಾದಕರು ಹಾಗೂ ಮಜೂರಿ ಕೆಲಸಗಾರರು ಇಬ್ಬರೂ, ಒಪ್ಪಂದ ಕೆಲಸಗಾರರ ಸ್ಟಾಕ್‌ನಲ್ಲಿ ನಿಗದಿತ ದಿನದಂದು ಇರುವ ಸರಕುಗಳ ವಿವರಣೆಗಳನ್ನು ನಿಗದಿತ ಪ್ರಪತ್ರದಲ್ಲಿ ಘೋಷಿಸಿದ್ದರೆ; ಭಾಗ 150 ಮತ್ತು ಭಾಗ 151

ಪ್ರಶ್ನೆ 10. ನಿರ್ದಿಷ್ಟ ಕಾಲಾವಧಿಯಲ್ಲಿ ಮಜೂರಿ ಕೆಲಸಗಾರರು ಸರಕುಗಳನ್ನು ವಾಸು ಮಾಡದಿದ್ದರೆ ಏನಾಗುತ್ತದೆ?

ಉತ್ತರ:ಒಪ್ಪಂದ ಕೆಲಸಗಾರರೇ ಸರಕುಗಳ ಮೇಲಿನ ತೆರಿಗೆ ಪಾವತಿಸಬೇಕಾಗುತ್ತದೆ. ಹಾಗೆಯೇ ನಿಗದಿತ ಕಾಲಾವಧಿ ಮುಗಿದ ಬಳಿಕ ಉತ್ಪಾದಕರು ಕೂಡ ತೆರಿಗೆ ಪಾವತಿಸಬೇಕಾಗುತ್ತದೆ. ಭಾಗ 150(1) ಮತ್ತು ಭಾಗ 151(1) .

ಪ್ರಶ್ನೆ 11. ಉತ್ಪಾದಕರೊಬ್ಬರು ಪರೀಕ್ಷಣೆಗೆಂದು ಕಳುಹಿಸಿರುವ ಪೂರ್ಣ ನಿರ್ಮಿತ ಸರಕುಗಳನ್ನು ಬೇರೆ ತೆರಿಗೆದಾರರಿಗೆ ವರ್ಗಾಯಿಸಬಹುದೇ?

ಉತ್ತರ: ಹೌದು. ಹಿಂದಿನ ಕಾನೂನಿನ ಉಪಬಂಧಗಳ ಪ್ರಕಾರ ಉತ್ಪಾದಕರೊಬ್ಬರು, ತೆರಿಗೆ ಪಾವತಿ ಮಾಡಿ ಅಥವಾ ಆರು ತಿಂಗಳಲ್ಲಿ/ನಿಗದಿತ ದಿನದಿಂದ ವಿಸ್ತೃತ ಅವಧಿಯೊಳಗೆ ರಫ್ತಾಗುವ ಸರಕುಗಳಿಗೆ ತೆರಿಗೆ ಪಾವತಿ ಮಾಡದೆಯೆ, ಯಾವುದೇ ನೋಂದಾಯಿತ ತೆರಿಗೆದಾರರ ಪ್ರಾಂಗಣಕ್ಕೆ ಮೇಲೆ ಹೇಳಿರುವಂತಹ ಸರಕುಗಳನ್ನು ವರ್ಗಾಯಿಸಬಹುದು . ಭಾಗ 152.

ಪ್ರಶ್ನೆ12. ಹಿಂದಿನ ಕಾನೂನಿನಡಿ, ಯಾವುದಾದರೂ ನಿರ್ಧಿಷ್ಟ ಪರಿಷ್ಕರಣೆಗಾಗಿ ಕಾರ್ಖಾನೆಯೊಂದರಿಂದ ತೆರವುಗೊಳಿಸಲಾದ ಸರಕುಗಳನ್ನು ನಿಗದಿತ ದಿನದೊಳಗೆ ಅಥವಾ ನಂತರದಲ್ಲಿ ಹಿಂತಿರುಗಿಸಿದರೆ ಅಂತಹವುದಕ್ಕೆ ಜಿಎಸ್‌ಟಿ ಪಾವತಿಸಬೇಕಾಗುವುದೇ?

ಉತ್ತರ: ಇಲ್ಲ. ಯಾವುದಾದರೂ ನಿರ್ಧಿಷ್ಟ ಪರಿಷ್ಕರಣೆಗಾಗಿ ನಿಗದಿತ ದಿನದೊಳಗೆ ಕಾರ್ಖಾನೆಯೊಂದರಿಂದ ತೆರವುಗೊಳಿಸಲಾದ ಸರಕುಗಳು, ಉತ್ಪಾದನೆಗೆ ಎಣೆ ಮಾಡಿಕೊಡದಿದ್ದರೆ, ಅಂತಹ ಸರಕುಗಳನ್ನು ನಿಗದಿತ ದಿನದಿಂದ ಆರು ತಿಂಗಳಿನ ಅವಧಿಯೊಳಗೆ ಹಿಂತಿರುಗಿಸಿದರೆ ಅವುಗಳ ಮೇಲೆ ಉತ್ಪಾದಕರಾಗಲಿ ಅಥವಾ ಒಪ್ಪಂದ ಕೆಲಸಗಾರರಾಗಲಿ ಜಿಎಸ್‌ಟಿಯಡಿ ತೆರಿಗೆ ಪಾವತಿಸಬೇಕಾಗಿಲ್ಲ. ಭಾಗ 152.

ಪ್ರಶ್ನೆ 13. ಹಿಂದಿನ ಕಾನೂನಿನಡಿ, ಮಜೂರಿ ಕೆಲಸಗಾರರಿಗೆ ಕಳುಹಿಸಿದ ಉತ್ಪಾದಿತ ಸರಕುಗಳ ಮೇಲೆ ಯಾವ ಸಂದರ್ಭಗಳಲ್ಲಿ ಜಿಎಸ್‌ಟಿ ಅನ್ವಯ ತೆರಿಗೆ ಪಾವತಿಸುವುದು ಅನಿವಾರ್ಯವಾಗುತ್ತದೆ?

ಉತ್ತರ: ಜಿಎಸ್‌ಟಿ ಅನ್ವಯ ಹೇಳಿರುವ ಸರಕುಗಳು ತೆರಿಗೆಗೆ ಯೋಗ್ಯವಾಗಿದ್ದರೆ ಮತ್ತು ನಿಗದಿತ ದಿನದಿಂದ 6 ತಿಂಗಳ ನಂತರ ಸರಕುಗಳನ್ನು ಹಿಂದಿರುಗಿಸಿದರೆ ಅಂತಹ ಸರಕುಗಳನ್ನು ಹಿಂದಿರುಗಿಸುವ ವ್ಯಕ್ತಿಯು ತೆರಿಗೆ ಪಾವತಿಸಬೇಕಾಗುತ್ತದೆ – ಭಾಗ 152 ರ ಪರಂತುಕ.

ಪ್ರಶ್ನೆ14. ಭಾಗ 150, ಭಾಗ 151, ಭಾಗ 152ರಲ್ಲಿ ವಿವರಿಸಿರುವಂತೆ ಎರಡು ತಿಂಗಳ ವಿಸ್ತರಣೆಯು ಸಹಜವಾಗಿ ಲಭಿಸುತ್ತದೆಯೇ?

ಉತ್ತರ: ಇಲ್ಲ. ಎರಡು ತಿಂಗಳ ವಿಸ್ತರಣೆಯು ಸಹಜವಾಗಿ ಲಭಿಸುವುದಿಲ್ಲ. ಸಾಕಷ್ಟು ಕಾರಣಗಳನ್ನು ನೀಡಿದ ಬಳಿಕ ಸಕ್ಷಮ ಅಧಿಕಾರಿಯು ಸಮಯ ವಿಸ್ತರಣೆಯನ್ನು ನೀಡುತ್ತಾರೆ.

ಪ್ರಶ್ನೆ 15. ಮೂಲ್ಯಗಳ ಪರಿಷ್ಕರಣೆಗೆ ಡೆಬಿಟ್ /ಕ್ರೆಡಿಟ್ ನೋಟ್ ಜಾರಿಗೊಳಿಸಲು ಸಮಯ ಪರಿಮಿತಿ ಏನು ?

ಉತ್ತರ: ತೆರಿಗೆದಾರರು ಮೂಲ್ಯಗಳ ಪರಿಷ್ಕರಣೆಯ 30 ದಿನಗಳ ಒಳಗೆ ಡೆಬಿಟ್/ಕ್ರೆಡಿಟ್‌ ನೋಟ್ಗಳನ್ನು ಅಥವಾ ಪೂರಕ ಇನ್ವಾಯಿಸ್ ಜಾರಿಗೊಳಿಸಬಹುದು. ಮೂಲ್ಯಗಳ ಕಡಿತವಾಗಿದ್ದರೆ, ಇನ್ವಾಯಿಸ್ ಅಥವಾ ಕ್ರೆಡಿಟ್ ನೋಟ್ಪಡೆದಿರುವವರು ಅಂತಹ ತೆರಿಗೆ ದಾಯಿತ್ವದ ಕಡಿತಕ್ಕೆ ಸರಿಸಮಾನವಾಗಿ ತಮ್ಮ ಐಟಿಸಿಯಲ್ಲಿ ಕಡಿಮೆ ಲಾಭ ಪಡೆದಿದ್ದರೆ ಮಾತ್ರವೇ ತೆರಿಗೆದಾರರಿಗೆ ತೆರಿಗೆದಾಯಿತ್ವವನ್ನು ಕಡಿಮೆಮಾಡಬಹುದು ಭಾಗ 153.

ಪ್ರಶ್ನೆ 16. ಹಿಂದಿನ ಕಾನೂನಿನಡಿ ಬಾಕಿ ಇರುವ ತೆರಿಗೆ/ಬಡ್ಡಿ ಮರುಪಾವತಿಯ ಸ್ಥಿತಿ ಏನಾಗುತ್ತದೆ?

ಉತ್ತರ: ಬಾಕಿ ಇರುವ ತೆರಿಗೆ/ಬಡ್ಡಿ ಮರುಪಾವತಿ ಕೋರಿಕೆಗಳನ್ನು ಹಿಂದಿನ ಕಾನೂನಿನ ಉಪಬಂಧಗಳ ಅನ್ವಯ ವಿಲೇವಾರಿ ಮಾಡತಕ್ಕದ್ದು . ಭಾಗ 154.

ಪ್ರಶ್ನೆ17. ಹಿಂದಿನ ಕಾನೂನಿನಡಿ ಬಾಕಿ ಇರುವ ಸೆಂವಾಟ್ /ಐಟಿಸಿ ಕೋರಿಕೆಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಪರಿಷ್ಕರಣ ಅಥವಾ ಅಪೀಲಿನ ಸ್ಥಿತಿ ಏನಾಗುತ್ತದೆ? ಅದೇನಾದರೂ ವಿಭಾಗದ ಬಾದ್ಯತೆ ಇರುವ ಸಂದರ್ಭದಲ್ಲಿ ಕ್ರಮವೇನು?

ಉತ್ತರ : ಎರಡೂ ಸಂದರ್ಭಗಳಲ್ಲಿಯೂ ಕೋರಿಕೆಗಳನ್ನು ಹಿಂದಿನ ಕಾನೂನಿನ ಉಪಬಂಧಗಳ ಅನ್ವಯ ವಿಲೇವಾರಿ ಮಾಡತಕ್ಕದ್ದು. ಭಾಗ 155 ಮತ್ತು 156

ಪ್ರಶ್ನೆ 18. ಅಪ್ಪೆಲೆಟ್ ಅಥವಾ ಪರಿಷ್ಕೃತ ಆದೇಶವು ತೆರಿಗೆದಾರರ ಪರವಾಗಿ ಜಾರಿಯಾದರೆ ಜಿಎಸ್‌ಟಿಯಲ್ಲಿ ಮರುಪಾವತಿ ಮಾಡಲಾಗುವುದೇ ? ತೆರಿಗೆದಾರರ ವಿರುದ್ಧ ನಿರ್ಣಯವು ಬಂದರೆ ಮಾಡಲಾಗುವುದು?

ಉತ್ತರ : ಮರುಪಾವತಿಯನ್ನು, ಹಿಂದಿನ ಕಾನೂನಿನ ಉಪಬಂಧಗಳ ಅನ್ವಯವೇ ಮಾಡತಕ್ಕದ್ದು. ಏನಾದರೂ ವಸೂಲಿ ಮಾಡಬೇಕಾದ ಸಂದರ್ಭದಲ್ಲಿ ಜಿಎಸ್‌ಟಿ ಅಡಿಯಲ್ಲಿ ತೆರಿಗೆ ಬಾಕಿಯ ರೂಪದಲ್ಲಿ ಮಾಡಲಾಗುವುದು.

ಪ್ರಶ್ನೆ19. ಹಿಂದಿನ ಕಾನೂನಿನಡಿ ಸಲ್ಲಿಸಲಾದ ವಿವರಣೆಗಳಲ್ಲಿ ಪರಿಷ್ಕರಣೆಯ ಕಾರಣ ಮಾಡಬೇಕಾಗಿ ಬರುವ ಮರುಪಾವತಿಯನ್ನು ಜಿಎಸ್‌ಟಿ ಅಡಿ ಹೇಗೆ ನಿಭಾಯಿಸಲಾಗುವುದು?

ಉತ್ತರ: ಅಂತಹುದನ್ನು ಹಿಂದಿನ ಕಾನೂನಿನ ಉಪಬಂಧಗಳ ಅನ್ವಯ ವಿಲೇವಾರಿ ಮಾಡತಕ್ಕದ್ದು. ಭಾಗ 158.

ಪ್ರಶ್ನೆ 20. ಹಿಂದಿನ ಕಾನೂನಿನಡಿಯಲ್ಲಿ ಮಾಡಿಕೊಂಡ ಒಪ್ಪಂದದ ಮೇಲೆ, ಜಿಎಸ್‌ಟಿ ಅಡಿಯಲ್ಲಿ ಯಾವುದೇ ಸರಕು ಅಥವಾ ಸೇವೆಗಳನ್ನು ಪೂರೈಕೆ ಮಾಡಿದ್ದರೆ ಯಾವ ತೆರಿಗೆಯನ್ನು ಪಾವತಿಸಬೇಕು?

ಉತ್ತರ : ಅಂತಹ ಪೂರೈಕೆಗಳ ಮೇಲೆ ಜಿಎಸ್‌ಟಿಯನ್ನು ಪಾವತಿಸಬೇಕು- ಭಾಗ 159.

ಪ್ರಶ್ನೆ 21. ಹಿಂದಿನ ಕಾನೂನಿನಡಿ ಯಾವುದಾದರೂ ನಿರ್ಧಿಷ್ಟ ಸೇವಾ ಪೂರೈಕೆಗಳ ಸಂದರ್ಭದಲ್ಲಿ ಪರಿಶೀಲನೆಗಾಗಿ ಕೋರಿಕೆಯು ದೊರಕ್ಕಿದ್ದರೆ ಮತ್ತು ಅದರ ಮೇಲಿನ ತೆರಿಗೆ ಆಗಲೇ ಸಂದಾಯವಾಗಿದ್ದರೆ, ಅಂತಹ ಪೂರೈಕೆಯನ್ನು ಜಿಎಸ್‌ಟಿ ಪದ್ದತಿಯಡಿ ಮಾಡಿದ್ದರೆ, ಜಿಎಸ್‌ಟಿಯನ್ನು ಕೂಡ ಪಾವತಿಸಬೇಕೆ?

ಉತ್ತರ: ಇಲ್ಲ. ನಿಗದಿತ ದಿನಕ್ಕಿಂತ ಮುಂದಾಗಿ ಕೋರಿಕೆಯು ದೊರಕ್ಕಿದ್ದರೆ ಮತ್ತು ಶುಲ್ಕ/ತೆರಿಗೆಯನ್ನು ಹಿಂದಿನ ಕಾನೂನಿನಡಿಯಲ್ಲಿ ಪಾವತಿಸಲಾಗಿದ್ದರೆ, ನಿಗದಿತ ದಿನದಂದು ಅಥವಾ ನಂತರದಲ್ಲಿ ಸರಕು/ಸೇವೆಗಳ ಪೂರೈಕೆಯಾಗಿದ್ದರೂ ಯಾವ ತೆರಿಗೆಯನ್ನೂ ಪಾವತಿಸಬೇಕಾದ ಅಗತ್ಯವಿಲ್ಲ. ಭಾಗ 160.

ಪ್ರಶ್ನೆ 22. ಹಿಂದಿನ ಕಾನೂನಿನಡಿಯಲ್ಲಿ ಸರಕು ಅಥವಾ ಸೇವೆಗಳನ್ನು ಪೂರೈಕೆ ಮಾಡಲಾಗಿದ್ದು, ಆಂಶಿಕ ಕೋರಿಕೆ ಮೊತ್ತವು (ಹಿಡಿದ ಹಣ) ಜಿಎಸ್‌ಟಿ ಅಡಿಯಲ್ಲಿ ಪಡೆಯಲಾಗಿದೆ. ಜಿಎಸ್‌ಟಿ ಅಡಿಯಲ್ಲಿ ತೆರಿಗೆಯನ್ನು ಪಾವತಿಸಬೇಕಾಗುವುದೇ?

ಉತ್ತರ: ಇಲ್ಲ. ಹಿಂದಿನ ಕಾನೂನಿನಡಿಯಲ್ಲಿ ಅಂತಹ ಪೂರೈಕೆಗಳ ಮೇಲೆ ಶುಲ್ಕ/ತೆರಿಗೆಯನ್ನು ಈಗಾಗಲೇ ಪಾವತಿಸಿದ್ದರೆ ಮತ್ತೆ ಜಿಎಸ್‌ಟಿ ಅಡಿಯಲ್ಲಿ ತೆರಿಗೆಯನ್ನು ಪಾವತಿಸಬೇಕಾಗುವುದಿಲ್ಲ. ಭಾಗ 161.

ಪ್ರಶ್ನೆ 23. ಹಿಂದಿನ ಕಾನೂನಿನಡಿಯಲ್ಲಿ ಐ ಎಸ್ ಡಿ ಮೂಲಕ ಸೇವೆಗಳನ್ನು ಪಡೆಯಲಾಗಿದ್ದರೆ, ಅದಕ್ಕೆ ಸಂಬಂಧಿಸಿದ ಐಟಿಜಸಿ ಯನ್ನು ಜಿಎಸ್‌ಟಿ ಪದ್ದತಿಯಡಿ ವಿತರಿಸಬಹುದೇ ?

ಉತ್ತರ : ಹೌದು. ಅಂತಹ ಸೇವೆಗಳಿಗೆ ಸಂಬಂಧಿಸಿದಂತೆ ಇನ್ವಾಯಿಸ್ ನಿಗದಿತ ದಿನದೊಳಗೆ ಅಥವಾ ನಂತರದಲ್ಲಿ ದೊರಕಿದರೂ ವಿತರಿಸಬಹುದು. ಭಾಗ 162.

ಪ್ರಶ್ನೆ24. ಮಾಲೀಕರಿಗೆ ಸೇರಬೇಕಾದ ಸರಕುಗಳು (ಬಂಡವಾಳ ಸರಕುಗಳನ್ನೂ ಒಳಗೊಂಡು) ನಿಗದಿತ ದಿನದಂದು ಏಜೆಂಟ್ರ ಬಳಿಯೇ ಇದ್ದರೆ ಏಜೆಂಟ್ ಐಟಿಸಿ ಯನ್ನು ಪಡೆಯಬಹುದೇ ?

ಉತ್ತರ : ಕೆಳಕಂಡ ಶರತ್ತುಗಳನ್ನು ಪೂರೈಸಿದಲ್ಲಿ ಏಜೆಂಟ್ ರು ಅಂತಹ ಐಟಿನಸಿಯನ್ನು ಪಡೆಯಬಹುದು.

 • ಏಜೆಂಟ್‌ ಜಿಎಸ್‌ಟಿ ಅಡಿಯಲ್ಲಿ ನೋಂದಾಯಿತ ತೆರಿಗೆದಾರರಾಗಿರಬೇಕು.
 • ಮಾಲೀಕರು ಮತ್ತು ಏಜೆಂಟ್ ಇಬ್ಬರೂ ಸಹ ನಿಗದಿತ ದಿನಕ್ಕೆ ಮುಂಚಿತವಾಗಿ ಏಜೆಂಟ್ ರ ಬಳಿ ಇರುವ ಸ್ಟಾಕ್ ವಿವರಣೆ ಘೋಷಿಸಬೇಕು.
 • ಅಂತಹ ಸರಕುಗಳಿಗೆ ಸಂಬಂಧಿಸಿದಂತೆ, ನಿಗದಿತ ದಿನಕ್ಕಿಂತ 12 ತಿಂಗಳು ಮುಂಚಿತವಾಗಿ ಇನ್ವಾಯಿಸ್ ಜಾರಿಯಾಗಿರಬಾರದು.
 • ಅಂತಹ ಸರಕುಗಳಿಗೆ ಅನ್ವಯಿಸುವಂತ ಐಟಿಸಿಯನ್ನು ಪಡೆದಿರಬಾರದು ಅಥವಾ ಅದನ್ನು ಹಿಂದಿರುಗಿಸಿರಬೇಕು. ಈ ಸೌಲಭ್ಯವು ಎಸ್‌ಜಿಎಸ್‌ಟಿ ಕಾನೂನಿಗೆ ಮಾತ್ರ ಲಭ್ಯವಾಗುವುದು. ಭಾಗ 162 ಎ ಮತ್ತು ಭಾಗ 162 ಬಿ.

ಪ್ರಶ್ನೆ25. ಅನುಮೋದನೆಯ ಮೇರೆಗೆ ನಿಗದಿತ ದಿನಕ್ಕಿಂತ ಮೊದಲೇ ಸರಕುಗಳನ್ನು ಕಳುಹಿಸಲಾಗಿದೆ ಆದರೆ ನಿಗದಿತ ದಿನದಿಂದ 6 ತಿಂಗಳ ನಂತರ ಅವುಗಳನ್ನು ಮಾರಾಟಗಾರರಿಗೆ ವಾಪಸು ಮಾಡಲಾಗಿದೆ, ಅಂತಹ ಸಂದರ್ಭದಲ್ಲಿ ಜಿಎಸ್‌ಟಿ ಅಡಿ ತೆರಿಗೆಯನ್ನು ಪಾವತಿಸಬೇಕೆ?

ಉತ್ತರ : ಹೌದು. ಜಿಎಸ್‌ಟಿ ಅಡಿಯಲ್ಲಿ ತೆರಿಗೆ ಪಾವತಿಸಬೇಕಾದ ಸರಕುಗಳಾದರೆ ಮತ್ತು ಸರಕುಗಳನ್ನು ಒಪ್ಪಂದ ಅಥವಾ ತಿರಸ್ಕರಿಸಿದ ವ್ಯಕ್ತಿಯು ನಿಗದಿತ ದಿನದಿಂದ 6 ತಿಂಗಳ (ಎರಡು ತಿಂಗಳವರೆಗೂ ಮುಂದೂಡಬಲ್ಲ) ನಂತರ ಅವುಗಳನ್ನು ಹಿಂತಿರುಗಿಸಿದರೆ ತೆರಿಗೆಯನ್ನು ಪಾವತಿಸಬೇಕು. ಈ ಸೌಲಭ್ಯವು ಎಸ್‌ಜಿಎಸ್‌ಟಿ ಕಾನೂನಿಗೆ ಮಾತ್ರ ಲಭ್ಯವಾಗುವುದು. ಭಾಗ 162ಡಿ.

****