ಕಾಳಿದಾಸನ ‘ಮೇಘದೂತ’ವನ್ನು ಸಮಸ್ಯಾಪೂರ್ತಿಯ ಅನುಕ್ರಮದಿಂದ ಪೂರ್ಣವಾಗಿ ಒಳಗೊಂಡೂ ಪಾರ್ಶ್ವನಾಥಚರಿತೆಯಾಗಿ ಪರಿಣಮಿಸಿರುವ ಒಂದು ಕುತೂಹಲಕಾರಿ ರಚನೆ ‘ಪಾರ್ಶ್ವಾಭ್ಯುದಯ’. ಇದರ ಸಮಾಪ್ತಿಪದ್ಯದಲ್ಲಿಯೂ ಸ್ಪಷ್ಟವಾಗಿ ಅಂದು ರಾಜ್ಯವಾಳುತ್ತಿದ್ದ ಅಮೋಘವರ್ಷನ ಉಲ್ಲೇಖವಿದೆ-

ಇತಿ ವಿರಚಿತಮೇತತ್ ಕಾವ್ಯಮಾವೇಷ್ಟ್ಯ ಮೇಘಂ

ಬಹುಗುಣಮಪದೋಷಂ ಕಾಲಿದಾಸಸ್ಯ ಕಾವ್ಯಂ |

ಮಲಿನಿತಪರಕಾವ್ಯಂ ತಿಷ್ಠತಾದಾಶಶಾಂಕಂ

ಭುವನಮವತು ದೇವಃ ಸರ್ವದಾಮೋಘರ್ಷಃ ||

ಅಲ್ಲದೆ ಗ್ರಂಥಾಂತ್ಯಗದ್ಯದಲ್ಲಿ “ಇತ್ಯಮೋಘವರ್ಷ ಪರಮೇಶ್ವರ ಪರಮಗುರು ಶ್ರೀಜಿನ ಸೇನಾಚಾರ್ಯವಿರಚಿತೇ” ಎಂದು ಸ್ಪಷ್ಟವಾಗಿ ಲಿಖಿತವಾಗಿದೆ.

 

ಪ್ರಶ್ನೋತ್ತರ ರತ್ನಮಾಲೆಯ ಸಾಕ್ಷ್ಯ

‘ಪ್ರಶ್ನೋತ್ತರ’ವೆಂಬ ಅಲಂಕಾರವನ್ನೊಳಗೊಂಡ ಸುಮಾರು ಮೂವತ್ತು ಸುಭಾಷಿತಗಳ ಚಿಕ್ಕಗ್ರಂಥವಿದು. ಅನೇಕ ಸಲ ಮುದ್ರಿತವಾಗಿದೆ-ಶ್ರೀಶಂಕರಾಚಾರ್ಯರ ಹೆಸರಿನಲ್ಲಿ ಇಲ್ಲವೆ ಶಂಕರಾನಂದರ ಹೆಸರಿನಲ್ಲಿ ವಿಮಲನೆಂಬಾತನ ಹೆಸರಿನಲ್ಲಿ ಇಲ್ಲವೆ ಅಮೋಘವರ್ಷನ ಹೆಸರಿನಲ್ಲಿ ಇದರ ಒಂದು ಪ್ರಾಚೀನ ಟಿಬೆಟನ್ ಭಾಷಾಂತರದಲ್ಲಿಯೂ ‘ಅಮೋಘೋದಯ’ ಎಂಬುದಾಗಿ ಗ್ರಂಥಕರ್ತನ ಉಲ್ಲೇಖವಿರುವುದರಿಂದ ಇದು ಅಮೋಘವರ್ಷನ ರಚನೆಯಾಗಿರುವ ಸಾಧ್ಯತೆಯೇ ಹೆಚ್ಚು. ಇದರ ಕಡೆಯ ಶ್ಲೋಕ-

ವಿವೇಕಾತ್ ತ್ಯಕ್ತರಾಜ್ಯೇನ ರಾಜ್ನೇಯಂ ಸದಲಂಕೃತಿಃ |

ರಚಿತಾಮೋಘವಷೇಣ ಸುಧಿಯಾ ಸದಲಂಕೃತಿಃ ||

ವಿವೇಕ ಎಂದರೆ ವೈರಾಗ್ಯದಿಂದ ರಾಜ್ಯವನ್ನೇ ಪರಿತ್ಯಾಗಮಾಡಿರುವ ಅಮೋಘವರ್ಷ ರಾಜನು ಈ ಅಲಂಕಾರಬಂಧುರವಾದ ಸತ್ಕಾವ್ಯವನ್ನು ರಚಿಸಿರುವನು, ಎಂಬ ಮಾತು ಸುಲಭವಾಗಿ ಕಡೆಗಣಿಸುವಂತಹುದಲ್ಲ. ಈಚೆಗೆ ಈ ಕೃತಿಯ ಜೈನಪರಂಪರೆಯಲ್ಲಿ ಇಂದಿಗೂ ಅನೇಕ ಪ್ರಾಚೀನ ಕನ್ನಡ ಟೀಕೆಗಳೊಂದಿಗೆ ಸನ್ಮಾನ್ಯವಾಗಿರುವ ಮಹತ್ವದ ಅಂಶವನ್ನು ಪ್ರೊ. ಬಿ.ಬಿ. ಮಹಿಷವಾಡಿ ಅವರು ಎತ್ತಿತೋರಿಸಿದ್ದಾರೆ. ಇದು ಅವರ ಬಳಿಯ ಓಲೆ ಹಸ್ತಪ್ರತಿಯಲ್ಲಿ ೨೮ನೆಯ ಪದ್ಯವಾಗಿದ್ದು ಅದರ ಪ್ರಾಚೀನ ಕನ್ನಡ ವ್ಯಾಖ್ಯೆ ಹೀಗಿದೆ-

“ವಿವೇಕಾತ್=ವಿವೇಕದತ್ತಣಿಂದ ತ್ಯಕ್ತರಾಜ್ಯೇನ=ತೊರೆಯಲ್ಪಟ್ಟ ರಾಜ್ಯವನ್ನುಳ್ಳಂಥ, ಅಮೋಘವರ್ಷೇಣ ರಾಜ್ಞಾ=ಅಮೋಘವರ್ಷನೆಂಬ ಅರಸನಿಂದ ಇಯಂ ರತ್ನ ಮಾಲಿಕಾ=ಈ ರತ್ನಮಾಲೆ ಸುಧಿಯಾಂ=ವಿದ್ವಜ್ಜನಂಗಳಿಗೆ ಸದಲಂ ಕೃತಿಃ ಭೂತ್ವಾ=ಒಳಿತ್ತಹ ಅಲಂಕಾರದೊಡನೆ ಕೊಡಲ್ಪಟ್ಟದಾಗಿ ರಚಿತಾ=ಮಾಡಲ್ಪಟ್ಟಿತು.”

ಈಗಿನ ಸಂಶೋಧಕರ ಸಂದೇಹ ಸಂದೋಹಗಳೊಂದೂ ಮೂಡದಿದ್ದಾಗ ಸ್ವರಸವಾಗಿ ನೂರಾರು ವರ್ಷಗಳ ಹಿಂದೆ ಟೀಕಾಕಾರನ ಪಾಠಶುದ್ಧಿ ಹಾಗು ಅಭಿಪ್ರಾಯ ಕಲ್ಪನೆ ನಿಷ್ಪಕ್ಷಪಾತಬುದ್ಧಿಯುಳ್ಳವರಿಗೆಲ್ಲ ಪ್ರಾಮಾಣೀಕವೆನಿಸಬೇಕು. ಅದನ್ನೂ ಪ್ರಶ್ನಿಸುವುದಾದರೆ ಅದಕ್ಕೆ ಕೊನೆಮೊದಲಿಲ್ಲವಾದೀತು !

ಇದೇ ಹಳೆಗನ್ನಡ ಟೀಕೆಯಲ್ಲಿ ಎರಡುಸಲ ಮೂಲದಲ್ಲಿ ಬಂದಿರುವ ‘ವಿಮಲ’ ಶಬ್ದಕ್ಕೂ ವ್ಯಕ್ತಿಪರವಾದ ಅರ್ಥಕಲ್ಪನೆಮಾಡದೆ ‘ನಿರ್ಮಲ’ ಎಂಬ ಸಾಮಾನ್ಯಾರ್ಥವನ್ನೇ ಮಾಡಲಾಗಿದೆ. ಅದೂ ಅಂಗೀಕಾರಾರ್ಹವೆನಿಸಬೇಕು.[34]

ಮೇಲಿನ ಎಲ್ಲ ಪ್ರಾಮಾಣಿಕ ವಚನಗಳನ್ನು ತೆರೆದ ಮನಸ್ಸಿನಿಂದ ಅನುಶೀಲಿಸುವವರಿಗೆ ನೃಪತುಂಗ ಚಕ್ರವರ್ತಿಯು ಜೈನಧರ್ಮದಲ್ಲಿ ವಿಶೇಷ ಶ್ರದ್ಧಾವಂತನಾಗಿದ್ದನೆಂಬ ವಿಷಯದಲ್ಲಿ ಸಂಶಯವೇನೂ ಉಳಿಯಲಾರದು.


[1] K.B. Pathak, Nrpatunga’s Kavirajamarga, Bangalore, ೧೮೯೮, pp. ೨೦೨೧.

[2] A Venkata Rao ಮತ್ತು H. Sesha Aiyangar, ಕವಿರಾಜಮಾರ್ಗಂ, Madras , ೧೯೩೦, ಅವತರಣಿಕೆ, ಪು. . Xxiv).

[3] ಎಂ. ವಿ. ಸೀತಾರಾಮಯ್ಯ, ಶ್ರೀವಿಜಯಕೃತ ಕವಿರಾಜಮಾರ್ಗಂ, ಕರ್ಣಾಟಕ ಸಂಘ, ಸರಕಾರದ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು, ಬೆಂಗಳೂರು, ೧೯೬೮, ಪೀಠಿಕೆ.

[4] ಪ್ರಕಾಶಕರು, ಡಿ. ವಿ. ಕೆ. ಮೂರ್ತಿ, ಕೃಷ್ಣಮೂರ್ತಿಪುರಂ, ಮೈಸೂರು.

[5] ಕನ್ನಡ ವಿಶ್ವಕೋಶ, ಸಂಪುಟ XI, ಲೇಖನ “ಗೀತಿಕೆ” ಪು. ೨೮೯-೨೯೦.

[6] “ಕವಿರಾಜಮಾರ್ಗ ಸಂಪಾದಕರು ಅದನ್ನು ಪರಿಷ್ಕರಿಸುವಲ್ಲಿ ಅಲ್ಲಿ ಬರುವ ಗೀತಿಕೆಗಳನ್ನು (ಲಕ್ಷಣಗೊತ್ತಿಲ್ಲದೆ) ಹಲವೆಡೆ ಸಮಪರ್ಕವಾಗಿ ಸಂಪಾದಿಸಿಲ್ಲ…” ಎಲ್. ಬಸವರಾಜು, ‘ಕನ್ನಡ ಛಂದಸ್ಸಂಪುಟ’ ಮೈಸೂರು, ೧೯೭೪, ಪು. ೧೩೨.

[7] ಆದಿಪುರಾಣ, I ೫೨

[8] ಪ್ರಾಚೀನ ಕನ್ನಡ ಸಾಹಿತ್ಯರೂಪಗಳು, ಮೈಸೂರು, ೧೯೭೩, ಪು. ೨೭೮.೨೭೯.

[9] ಡಿ. ಎಲ್. ನರಸಿಂಹಾಚಾರ್ ಆವೃತ್ತಿ, ಶಾರದಾಮಂದಿರ, ಮೈಸೂರು, ೧೯೭೩, ಪು. ೩೨೨.

[10] XI , ೨೦, ಕನ್ನಡ ಅಧ್ಯಯನ ಸಂಸ್ಥೆ ಆವೃತ್ತಿ, ಮೈಸೂರು, ೧೯೭೪, ಪು. ೧೯೦.

[11] ಹೇಮಚಂದ್ರನ ದೇಸೀನಾಮಮಾಲಾ, VII ೭೫ ರಲ್ಲಿ‘ವೇಲಂಬೋ’ ಎಂಬ ದೇಸೀ ಶಬ್ದಕ್ಕೆ ‘ವಿಡಂಬಕ’ ಎಂದೇ ಅರ್ಥ ಬರೆಯಲಾಗಿದೆ. ಪ್ರಾಕೃತದಲ್ಲಿ ಇದರ ಪರ‍್ಯಾಯ ‘ವೇಲಂಬಗ’ ಎಂಬುದನ್ನು H. C. Bhyani  ಅವರು ತಮ್ಮ Studies in Hemachandra’s Desinamamala ಗ್ರಂಥದಲ್ಲಿ (ಪುಟ ೩೯) ಸ್ಪಷ್ಟವಾಗಿ ಕಾಣಿಸಿದ್ದಾರೆ.

[12] ಇತ್ತೀಚಿನ ಇದರ ಸರಸ ವಿವೇಚನೆಗೆ ಓದಿರಿ. A. K. Warder, Indian Kavya Literature, Delhi, 1974, p. 182.

[13] ಸಂಗೀತಚೂಡಾಮಣಿ, ಗಾಯಕ್‌ವಾರ್ ಗ್ರಂಥಮಾಲೆ, ಬರೋಡಾ, ೧೯೫೬, ಐ-೩.

[14] ಅಲ್ಲಿಯೇ I -೨೨.

[15] ಇದೇ ಪದ್ಯ ‘ಶಬ್ದ ಮಣಿದರ್ಪಣ’ (ಸೂ. ೬೫)ದಲ್ಲೂ ಉದಾಹೃತವಾಗಿದೆ.

[16] ಇಲ್ಲಿ ‘ಶ್ರೀ’ ಎಂಬುದು ಗುಣವಾಚಕವೆಂದೂ ‘ವಿಜಯ’ ಅಷ್ಟೇ ವ್ಯಕ್ತಿನಾಮವೆಂದೂ ಒಂದು ಅಭಿಪ್ರಾಯ ವ್ಯಕ್ತಪಟ್ಟಿದೆ. ಕು. ವೆಂ. ರಾಜಗೋಪಾಲ್ ‘ಶ್ರೀಕಂಠತೀರ್ಥ,’ ಬೆಂಗಳೂರು, ೧೯೭೬, ಪು. ೩೧೪-೩೧೬, ಆದರೆ ಮೇಲಿಂದ ಮೇಲೆ ಶಾಸನಾದಿಗಳಲ್ಲಿ ಮತ್ತು ಕಾವ್ಯಗಳಲ್ಲಿ ಬರುವ ಶ್ರೀವಿಜಯ ಎಂಬ ‘ನಾಮೋಲ್ಲೇಖ’ದಿಂದ ಅದು ಸರಿಯಲ್ಲವೆನಿಸುತ್ತದೆ.

[17] ಇದರ ವಿವೇಚನೆಗೆ ನೋಡಿ-ಕವಿರಾಜಮಾರ್ಗ, ಮೈಸೂರು ಆವೃತ್ತಿ, ೧೯೭೫, ಪು. Xiii.ಟಿಪ್ಪಣಿ.

[18] ‘ಯೇನಾನುಚರಿತಂ ಬಾಲ್ಯಾದ್ ಬ್ರಹ್ಮವ್ರತಮಖಂಡಿತಂ | ಸ್ವಯಂವರವಿಧಾನೇನ ಚಿತ್ರಮೂಢಾ ಸರಸ್ವತೀ-ಜಯಧವಲಾಪ್ರಶಸ್ತಿ-ಮಹಾಪುರಾಣ, ಜ್ಞಾನಪೀಠ ಆವೃತ್ತಿ, ಪು. ೩೫, ಟಿಪ್ಪಣಿ.

[19] ವಿವರಗಳಿಗೆ ನೋಡಿ- K.Krishnamoorthy, Vadiraja’s Yasodharacarita, Karnataka University, Dharwar, 1962, Introduction.

[20] Nathuram Premi :  Jaina Shasana Sangraha, 1952, Vol. I. Introduction, p. 136137, p.107 etc . ಹೋಲಿಸಿ-ವಾದಿರಾಜನು ಶ್ರೀವಿಜಯದೇವನನ್ನು ಸ್ತುತಿಸಿರುವ ಪದ್ಮ-

[21] ಅದೇ ಗ್ರಂಥ, ಪು. ೭೯ ರಲ್ಲಿ ಈ ಎಲ್ಲ ವಿವರಗಳೂ ಬಂದಿವೆ.

[22] ಅದೇ ಗ್ರಂಥ, ಸಂಪುಟ, ಪುಐಐಐ. ೮೦(ಪೀಠಿಕೆ).

[23] ಇವನಿರಬಹುದೆಂಬ ಅಭಿಪ್ರಾಯವನ್ನು ಮೊದಲು ವ್ಯಕ್ತ ಮಾಡಿದವರು ಡಾ|| ಎಂ. ಎಂ. ಕಲಬುರ್ಗಿ, ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ,’ ಪು. ೩೧-೩೨.

[24] ನೋಡಿ, ಎಂ. ಎಂ. ಕಲಬುರ್ಗಿ, ಉಕ್ತಗ್ರಂಥ, ಪು. ೧೪೬-೭.

[25] ಇದನ್ನು ಮೊದಲು ಎತ್ತಿತೋರಿಸಿದವರು ಡಾ|| ಎಂ. ಎಂ. ಕಲಬುರ್ಗಿ, ಉಕ್ತಗ್ರಂಥ, ಪು.೩೯. ಈಚೆಗೆ ಪ್ರೊ. ಎಂ. ವಿ. ಸೀತಾರಾಮಯ್ಯನವರೂ ಇದನ್ನು ಪುರಸ್ಕರಿಸಿದ್ದಾರೆ-ನೋಡಿ, ‘ಸಭಾಮಧ್ಯ ಲಬ್ಧವರಂ ಶ್ರೀವಿಜಯಂ’ ಎಂಬ ಅವರ ಲೇಖನ, ಸಾಹಿತ್ಯಜೀವಿ, ಬೆಂಗಳೂರು, ೧೯೭೬, ಪು.೫೭-೭೯.

[26] ಇದರ ವಿಸ್ತ*ತ ವಿವೇಚನೆಗೆ ಓದಿರಿ-ಡಾ||ಕೆ. ಕೃಷ್ಣಮೂರ್ತಿ, “ಕಾವ್ಯದಲ್ಲಿ ಶಬ್ದ ಮತ್ತು ಅರ್ಥ”, ಶ್ರೀಕಂಠತೀರ್ಥ, ಪು. ೪೦೮-೪೨೪.

[27] ಇಲ್ಲಿ ಇನ್ನೊಂದು ಸೋಜಿಗವೆಂದರೆ ಇವರೇ ಕವಿರಾಜಮಾರ್ಗದ ಮೈಸೂರು ಆವೃತ್ತಿ, ಪು. xxxii ರಲ್ಲಿ M-೨೩ ರನ್ನು ಉದ್ಧರಿಸಿ ‘ಕಾವ್ಯಶರೀರ ಬೇರೆ ಕಾವ್ಯಾಲಂಕಾರ ಬೇರೆ’ ಎಂದೇ ಅರ್ಥಯಿಸಿಯೂ ಇದ್ದಾರೆ. ಆದರೆ ಅಲ್ಲಿಯೂ ಕಾವ್ಯವೇ ಅಲಂಕಾರವೆಂದು ಹಿಂದಿನ ಪಂಕ್ತಿಯಲ್ಲೇ ಹೇಳಲು ಮರೆತಿಲ್ಲ. ಇದು ವ್ಯಾಹತಿದೋಷವೆನಿಸುತ್ತದೆ.

[28] ವಿವರಗಳಿಗೆ ನೋಡಿ- (೧) ಡಾ|| ಕೆ. ಕೃಷ್ಣಮೂರ್ತಿ, ದಂಡಿ-ಭಾಮಹರ ಕೃತಿಗಳು- ತುಲನಾತ್ಮಕ ಅಧ್ಯಯನ, ಕವಿರಾಜಮಾರ್ಗ (ಐಬಿಎಚ್), ಬೆಂಗಳೂರು, ೧೯೭೩, ಪು. ೯೯-೧೪೨. (೨) ಕನ್ನಡ ಕಾವ್ಯಾಲಂಕಾರ ಮತ್ತು ಕನ್ನಡ ಕಾವ್ಯಾದರ್ಶ, ಟಿಪ್ಪಣಿಗಳೊಂದಿಗೆ-ಶಾರದಾಮಂದಿರ, ಮೈಸೂರು, ೧೯೭೫. (೩) ಕನ್ನಡದಲ್ಲಿ ಕಾವ್ಯ ತತ್ತ್ವ, ಶಾರದಾಮಂದಿರ, ಮೈಸೂರು, ೧೯೬೪.

[29] ಸರಸ್ವತಿಗೆ ‘ಪದಿನಾಱಲ್ಲವಲಂಕ್ರಿಯಾರಚನೆ ಮೂವತ್ತಾಱು ನೇರ್ಪಟ್ಟವು’ ಎಂದು ರನ್ನನು ಹೇಳುವಾಗ ‘ಕವಿರಾಜಮಾರ್ಗ’ದ ಅಲಂಕಾರ ಸಂಖ್ಯೆಯನ್ನೇ ಸೂಚಿಸುತ್ತಿರ ಬಹುದೆ? ಇದು ವಿಚಾರಾರ್ಹ.

[30] ಮಹಾವೀರಾಚಾರ್ಯ, ಗಣಿತಸಾರಸಂಗ್ರಹ, ಜೈನ ಸಂಸ್ಕೃತಿ ಸಂರಕ್ಷಕ ಸಂಘ, ಸೋಲಾಪುರ, ೧೯೬೩, ಪು. ೧-೨.

[31] ಜೈನ ವಾಙ್ಮಯ ಕ್ಷೇತ್ರದಲ್ಲಿ ವಿಖ್ಯಾತ ವಿದ್ವಾಂಸರೆನಿಸಿರುವ ಡಾ|| ಹೀರಾಲಾಲ ಜೈನ ಮತ್ತು ಡಾ|| ಆ. ನೇ. ಉಪಾಧ್ಯೆ ಇಬ್ಬರೂ ಈ ಸಾಕ್ಷ್ಯವನ್ನು ಗಟ್ಟಿಯಾದ ಪ್ರಮಾಣವೆಂದೇ ಸಿದ್ಧಾಂತಿಸಿದ್ದಾರೆ-ನೋಡಿ, ೧ ರಲ್ಲಿ ಉಕ್ತಗ್ರಂಥದ ‘ಗ್ರಂಥಮಾಲಾ ಸಂಪಾದಕೀಯ’, ಪುಟ x.

[32] ಭೀಮರಾವ ಚಿಟಗುಪ್ಪಿ, ಕವಿರಾಜಮಾರ್ಗಪ್ರಶಸ್ತಿ, ಧಾರವಾಡ, ೧೯೭೨, ಪು. ೧೫೭-೮.

[33] ಇದರ ವಿವರಣೆ ನೋಡಿ-ಟಿ.ವಿ. ವೆಂಕಾಚಲಶಾಸ್ತ್ರೀ, ಕನ್ನಡಛಂದಸ್ಸು, ಮೈಸೂರು, ೧೯೭೦, ಪು.೮೯-೯೦.

[34] ಬ ಬಿ.ಬಿ. ಮಹಿಷವಾಡಿ, ಜೈನ ವಾಙ್ಮಯ ಪರಿಶೋಧನೆ, ಜ್ಞಾನವಿಕಾಸ ಪ್ರಕಾಶನ, ಧಾರವಾಡ, ೧೯೭೭, ಪು. ೧೫೦-೧೫೪.