ಒಂದು ದೇಶ/ಪ್ರದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ‘ಮೂಲ ಸೌಲಭ್ಯ’ಗಳ ಪಾತ್ರ ತುಂಬಾ ಮಹತ್ವವಾದುದು. ಮೂಲ ಸೌಲಭ್ಯಗಳಲ್ಲಿ ಬ್ಯಾಂಕಿಂಗ್ ಸೇವೆಯ ಪಾತ್ರ ಮಹತ್ವವಾದುದು. ಮೂಲ ಸೌಲಭ್ಯಗಳಲ್ಲಿ ಬ್ಯಾಂಕಿಂಗ್ ಸೇವೆಯ ಪಾತ್ರ ತುಂಬಾ ಆಯಕಟ್ಟಿನದಾಗಿದೆ. ಉಳಿತಾಯದ ಸಂಚಯನ ಹಾಗೂ ಸಂಚಯಿಸಿದ ಉಳಿತಾಯದ ಸೂಕ್ತ ಉಪಯೋಗ ಗಳ ದೃಷ್ಟಿಯಿಂದ ಸುಸಂಘಟಿತವಾದ ಹಾಗೂ ಸಮರ್ಥವಾದ ಹಣಕಾಸು ವ್ಯವಸ್ಥೆ ಬೇಕಾಗುತ್ತದೆ. ಸುಸಂಘಟಿತವಾದ ಹಾಗೂ ಸಮರ್ಥವಾದ ಹಣಕಾಸು ವ್ಯವಸ್ಥೆಯು ಬಂಡವಾಳ ನಿರ್ಮಾಣ ಚಟುವಟಿಕೆಗಳು ತೀವ್ರ ಗತಿಯಲ್ಲಿ ಬೆಳೆಯಲು ಸಹಾಯಕವಾಗುತ್ತದೆ. ಹಣಕಾಸು ಸಂಸ್ಥೆಗಳ ಜಾಲದ ಒಂದು ಪ್ರಮುಖ ಅಂಗವೆಂದರೆ ಬ್ಯಾಂಕಿಂಗ್ ವ್ಯವಸ್ಥೆ. ಬ್ಯಾಂಕಿಂಗ್ ವ್ಯವಸ್ಥೆಯು ನಿವ್ವಳ ಉಳಿತಾಯ ಮಾಡುವ ವರ್ಗಗಳಿಂದ ನಿವ್ವಳ ಹೂಡಿಕೆಗಾರರ ವರ್ಗಕ್ಕೆ ಹಣಕಾಸು ಸಂಪನ್ಮೂಲವನ್ನು ವರ್ಗಾಯಿಸುವ ಕೆಲಸ ಮಾಡುತ್ತದೆ. ಬ್ಯಾಂಕಿಂಗ್ ವ್ಯವಸ್ಥೆಯು ತಮ್ಮ ಶಾಖೆಗಳ ಜಾಲದ ಮೂಲಕ ವ್ಯಾಪಾರ, ಉದ್ದಿಮೆ, ಸಾರಿಗೆ ಮುಂತಾದ ಚಟುವಟಿಕೆಗಳಿಗೆ ಅನೇಕ ಬಗೆಯ ಸೌಲಭ್ಯ ಒದಗಿಸುತ್ತದೆ. ಸಾರ್ವಜನಿಕರು ಬ್ಯಾಂಕುಗಳಲ್ಲಿ ಇಡುವ ಠೇವಣಿಗಳಿಗೆ ಬಡ್ಡಿ ಬರುತ್ತದೆ. ವಾಣಿಜ್ಯ ಬ್ಯಾಂಕುಗಳಲ್ಲಿನ ಠೇವಣಿಗಳಿಗೆ ವಿಮಾ ರಕ್ಷಣೆ ಇರುವುದರಿಂದ ಸಾರ್ವಜನಿಕರು ತಮ್ಮ ಉಳಿತಾಯದ ಭದ್ರತೆ ಬಗ್ಗೆ ಯಾವ ರೀತಿಯ ಅನುಮಾನ ಇಟ್ಟುಕೊಳ್ಳುವ ಅಗತ್ಯವಿಲ್ಲ.

ನಮ್ಮ ರಾಜ್ಯದ ಜಿಲ್ಲಾಮಟ್ಟದಲ್ಲಿ ಹಣಕಾಸು ವ್ಯವಸ್ಥೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿವೆ. ಲೇವಾದೇವಿಗಾರರು, ದಳ್ಳಾಳಿಗಳು, ಜಮೀನ್ದಾರರು ಮುಂತಾದವರು ಹಣಕಾಸು ವ್ಯವಸ್ಥೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಜಿಲ್ಲಾಮಟ್ಟದಲ್ಲಿನ ಹಣಕಾಸು ವ್ಯವಹಾರದಲ್ಲಿ ಇವರ ಪಾತ್ರ ಬಹಳ ಮಹತ್ವವಾದುದು. ಈ ವರ್ಗವು ಹಣಕಾಸು ಚಟುವಟಿಕೆಗಳ ಮೇಲೆ ತೀವ್ರ ನಿಯಂತ್ರಣ ಇಟ್ಟುಕೊಂಡಿರತ್ತದೆ. ಈ ಅಸಂಘಟಿತ, ಸಾಂಸ್ಥಿಕೇತರ ವಲಯದಲ್ಲಿ ‘ಉತ್ಪಾದನೆ – ಲೇವಾದೇವಿ – ವ್ಯಾಪಾರ’ಗಳು ಒಂದರೊಡನೊಂದು ಮಿಕ್ಸ್ ಆಗಿರುವುದರಿಂದ ರೈತಾಪಿ ವರ್ಗಕ್ಕೆ, ಸಣ್ಣ ಪುಟ್ಟ ಉತ್ಪಾದಕರಿಗೆ, ಸಣ್ಣ – ಪುಟ್ಟ ವ್ಯಾಪಾರಿಗಳಿಗೆ ಇದು ‘ಶೂಲ’ವಾಗಿ ಪರಿಣಮಿಸಿಬಿಟ್ಟಿದೆ. ಈ ಬಗೆಯ ವಿಷ ಜಾಲದಲ್ಲಿ ರೈತಾಪಿ ವರ್ಗ, ಕಾರ್ಮಿ ಕರು, ಮಹಿಳೆಯರು ಅನ್ಯಾಯಗಳಿಗೆ ಬಲಿಯಾಗಿ ಬಿಡುತ್ತಾರೆ.

ಸ್ವಾತಂತ್ರ್ಯಾನಂತರ ಅಸಂಘಟಿತ ವಲಯವೆಂಬ ವಿಷಜಾಲದಿಂದ ರೈತರನ್ನು, ಕಾರ್ಮಿಕರನ್ನು, ಮಹಿಳೆಯರನ್ನು ಬಿಡುಗಡೆಗೊಳಿಸುವ ಉದ್ದೇಶದಿಂದ ‘ಸಂಘಟಿತ ಬ್ಯಾಂಕಿಂಗ್’ ವ್ಯವಸ್ಥೆಯ ಬೆಳವಣಿಗೆಗೆ ಅನೇಕ ಬಗೆಯ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಬದಲಾಗುತ್ತಿರುವ ಆರ್ಥಿಕ, ಸಾಮಾಜಿಕ, ರಾಜಕೀಯ ಚಟುವಟಿಕೆಗಳಿಗೆ ಅನುಗುಣವಾಗಿ ಇತ್ತೀಚಿಗಿನ ದಶಕಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ತನ್ನದೇ ಆದ ರೀತಿಯಲ್ಲಿ ಗ್ರಾಮೀಣ ಮಟ್ಟದಲ್ಲಿ ಪರಿವರ್ತನೆ ರೂಪಿಸುವಲ್ಲಿ ಹೊಸ ಆಯಾಮಗಳನ್ನು ನೀಡುವಲ್ಲಿ ಸ್ಪಂಧಿಸುತ್ತಿರುವುದನ್ನು ರಾಜ್ಯದ ಇತರೆ ಭಾಗಗಳಲ್ಲಿರುವಂತೆ ಗದಗ ಜಿಲ್ಲೆಯಲ್ಲಿ ಕಾಣಬಹುದು.

ರಾಜ್ಯದ ಇತರೆ ಭಾಗಗಳಲ್ಲಿರುವಂತೆ ರಾಜ್ಯದ ಮಧ್ಯಭಾಗದಲ್ಲಿರುವ ಗದಗ ಜಿಲ್ಲೆಯಲ್ಲಿ ಸಾಹುಕಾರರು, ವರ್ತಕರು, ಶ್ರೀಮಂತರು, ಜಮೀನ್ದಾರರು, ದೇಶಪಾಂಡೆ, ಕುಲಕರ್ಣಿ, ಪಾಟೀಲರು – ಮುಂತಾದ ವತನದಾರರು, ಅಧಿಕಾರಿ ವರ್ಗದವರು ತಮ್ಮದೇ ಆದ ರೀತಿಯಲ್ಲಿ ಸ್ಥಾನಿಕವಾದ ಲೇವಾದೇವಿ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂಬುದು ಚರಿತ್ರೆಯಿಂದ ತಿಳಿದು ಬರುತ್ತದೆ. ಗದಗ ಜಿಲ್ಲೆಯಲ್ಲಿ ಪ್ರಮುಖವಾಗಿ ಲಿಂಗಾಯಿತರು, ಜೈನರು, ಬ್ರಾಹ್ಮಣರು ಮತ್ತು ಕೋಮಟಿಗರು ಸಾಂಪ್ರದಾಯಿಕ ಹುಂಡಿ ವ್ಯಾಪಾರ – ವ್ಯವಹಾರಗಳಲ್ಲಿ ಸಕ್ರಿಯರಾಗಿದ್ದರು.

೧೮೮೫ರ ಗ್ಯಾಸಟಿಯರ್‌ನಲ್ಲಿ ಈ ಜಿಲ್ಲೆಯ (ಧಾರವಾಡ) ರೈತಾಪಿ ವರ್ಗದ ಸ್ಥಿತಿಗತಿಗಳನ್ನು ಕುರಿತು ಈ ರೀತಿ ವಿವರಿಸ ಲಾಗಿದೆ. ‘ಭೂಮಿಯ ಹುಟ್ಟುವಳಿಯಲ್ಲಿ ಸುಮಾರು ಅರ್ಧಪಾಲು ಸಾಹುಕಾರನ ಬಡ್ಡಿಗೆ ಹೋಗುತ್ತದೆ. ಸಾಹುಕಾರನ ಹಳೆಯ ಸಾಲ ಮತ್ತು ಬಡ್ಡಿಯನ್ನು ತೀರಿಸಲು ಬಹುಪಾಲು ರೈತರು ಭೂಮಿಯನ್ನು ವಿಕ್ರಯ ಮಾಡುತ್ತಾರೆ. ತಾವೇ ತಮ್ಮ ಇಚ್ಛೆಯಿಂದ ಭೂಮಿಯನ್ನು ಮಾರುವುದು ಇಲ್ಲವೆ ಸರ್ಕಾರಿ ತೆರಿಗೆಗಾಗಿ ಭೂಮಿಯನ್ನು ಮಾರುವುದು ಬಹು ಕಡಿಮೆ” (ಭಾರತ ಗ್ಯಾಸಟಿಯರ್ ಧಾರವಾಡ ಜಿಲ್ಲೆ, ೧೯೯೫, ಪು.೩೭೩).

೧೯೨೯ – ೩೦ರಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ ಸಾಲದ ಉದ್ಧೇಶ, ಸಾಲದ ಮೊತ್ತ, ಸಾಲಕ್ಕೆ ನೀಡಿದ ಆಧಾರ ಮುಂತಾದವುಗಳನ್ನು ಕುರಿತಂತೆ ವಿವೇಚಿಸಲಾಯಿತು. ಈ ಸಮೀಕ್ಷೆ ತಿಳಿಸಿದ ಒಂದು ಬಹು ಮುಖ್ಯ ಸಂಗತಿಯೆಂದರೆ ಜನರು ಪಡೆದ ಸಾಲದ ಮೊತ್ತದಲ್ಲಿ ಬಹುಪಾಲು ಅನುತ್ಪಾದಕ ವೆಚ್ಚಗಳಿಗೆ ಸಂದಾಯವಾಗುತ್ತಿತ್ತು.

೧೯೬೧ರಲ್ಲಿ ಜನಗಣತಿ ಅಂಗವಾಗಿ ಗದಗ ತಾಲ್ಲೂಕಿನ ಹುಲಕೋಟಿ ಮತ್ತು ಶಿರಹಟ್ಟಿ ತಾಲ್ಲೂಕಿನ ಮಾಗಡಿ ಗ್ರಾಮಗಳ ಅಧ್ಯಯನ ನಡೆಸಲಾಯಿತು. ಈ ಸಮೀಕ್ಷೆಯಲ್ಲಿ ಕಂಡು ಬಂದ ಮುಖ್ಯ ಸಂಗತಿಯೆಂದರೆ “ಒಟ್ಟು ಸಾಲಗಾರರಲ್ಲಿ ಮತ್ತು ಸಾಲದ ಮೊತ್ತದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಗರಿಷ್ಠ ವರಮಾನದ ಗುಂಪಿಗೆ ಸೇರಿದವರಾಗಿದ್ದರು. ಕನಿಷ್ಠ ಮಾಸಿಕ ವರಮಾನದ ಕುಟುಂಬಗಳು ಪಡೆದ ಸಾಲದ ಪ್ರಮಾಣ ಅತ್ಯಲ್ಪ” ಎಂದು ಸಮೀಕ್ಷೆ ತಿಳಿಸಿದೆ. ಈ ಸಮೀಕ್ಷೆ ಯಿಂದ ಕಂಡು ಬಂದ ಇನ್ನೊಂದು ಸಂಗತಿಯೆಂದರೆ ಬಹುಪಾಲು ಸಾಲಗಾರರು ಸಾಲವನ್ನು ಸರ್ಕಾರೇತರ ಮತ್ತು ಸಹಕಾರೇತರ ಮೂಲಗಳಿಂದ ಪಡೆಯುತ್ತಿದ್ದರು” ಎಂಬುದಾಗಿದೆ. ಖಾಸಗಿ ಸಾಹುಕಾರರು ಶೇ.೧೨ರಿಂದ ಶೇ.೧೮ರ ವರೆಗೆ ಬಡ್ಡಿಯನ್ನು ವಿಧಿಸುತ್ತಿದ್ದುದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಕೋಷ್ಟಕ ೯.೧ರಲ್ಲಿ, ೧೯೯೬ – ೯೭ರಲ್ಲಿ ಗದಗ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ವಾಣಿಜ್ಯ ಬ್ಯಾಂಕ್‌ಗಳ ಮತ್ತು ಗ್ರಾಮೀಣ ಬ್ಯಾಂಕುಗಳ ಶಾಖೆಗಳ ಸಂಖ್ಯೆ ಹಾಗೂ ಸಹಕಾರಿ ಬ್ಯಾಂಕ್‌ಗಳ ಶಾಖೆಗಳ ವಿವರಗಳನ್ನು ನೀಡಲಾಗಿದೆ.

ಕೋಷ್ಟಕ .೧: ಗದಗ ಜಿಲ್ಲೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ೧೯೯೬೯೭

ಸಂಸ್ಥೆಗಳು ಗದಗ ಮುಂಡರಗಿ ನರಗುಂದ  ರೋಣ ಶಿರಹಟ್ಟಿ  ಜಿಲ್ಲೆ
ವಾಣಿಜ್ಯ ಬ್ಯಾಂಕುಗಳುಗ್ರಾಮೀಣ ಬ್ಯಾಂಕುಗಳು

ಸಹಕಾರಿ ಬ್ಯಾಂಕುಗಳು

ಕೆಎಸ್‌ಎಫ್‌ಸಿ

ಒಟ್ಟು

೧೬೯

೩೧

೩೭

೧೪

೭೪

೧೫

೯೧೦

೨೮

೯೬

೨೧

೪೪೩೬

೨೮

೧೦೯

ಮೂಲ: ಧಾರವಾಡ ಜಿಲ್ಲಾ ಸಾಲದ ಯೋಜನೆ: ೧೯೯೬೯೭. ಮೂರನೆಯ ಅಧ್ಯಾಯ, ವಿಜಯ ಬ್ಯಾಂಕ್, ಹುಬ್ಬಳ್ಳಿ

ಸದ್ಯ ಗದಗ ಜಿಲ್ಲೆಯಲ್ಲಿ ೪೪ ವಾಣಿಜ್ಯ ಬ್ಯಾಂಕ್‌ಗಳ ಶಾಖೆಗಳು ಮತ್ತು ೩೬ ಗ್ರಾಮೀಣ ಬ್ಯಾಂಕ್‌ನ ಶಾಖೆಗಳು ಕಾರ್ಯ ನಿರತವಾಗಿವೆ. ಜಿಲ್ಲೆಯಲ್ಲಿರುವ ಒಟ್ಟು ಬ್ಯಾಂಕ್‌ಗಳ ಶಾಖೆಗಳ ಸಂಖ್ಯೆ ೧೦೮. ಕೆ.ಎಸ್.ಎಫ್.ಸಿ. ಶಾಖೆಯು ಸೇರಿದರೆ ಒಟ್ಟು ಸಂಖ್ಯೆ ೧೦೯.

ಜಿಲ್ಲೆಯಲ್ಲಿರುವ ಬ್ಯಾಂಕಿಂಗ್ ಶಾಖೆಗಳ ಸಂಖ್ಯೆ ೧೦೮ರಲ್ಲಿ ಗ್ರಾಮೀಣ ಶಾಖೆಗಳ ಪ್ರಮಾಣ ಶೇ.೫೦.೯೩. ನಗರ ಮತ್ತು ಅರೆ ನಗರ ಪ್ರದೇಶದಲ್ಲಿರುವ ಶಾಖೆಗಳ ಪ್ರಮಾಣ ಶೇ.೪೯.೦೭.

ಕೋಷ್ಟಕ ೯.೨ರಲ್ಲಿ ಗದಗ ಜಿಲ್ಲಾ ಸಾಲ ಯೋಜನೆಯ (೧೯೯೭ – ೯೮) ವಿವರಗಳನ್ನು ನೀಡಲಾಗಿದೆ. ಅದರ ಪ್ರಕಾರ ೧೯೯೭ – ೯೮ನೆಯ ಸಾಲಿನಲ್ಲಿ ಗದಗ ಜಿಲ್ಲೆಯ ಬ್ಯಾಂಕಿಂಗ್ ‘ಸಂಸ್ಥೆಗಳು ನೀಡಿದ ಸಾಲದ ಪ್ರಮಾಣ ರೂ.೧೧೭.೬೬ ಕೋಟಿ. ಇದು ಸಣ್ಣ ಮೊತ್ತವೇನಲ್ಲ. ಬ್ಯಾಂಕಿಂಗ್‌ ನೀಡಿದ ಒಟ್ಟು ಸಾಲದ ಮೊತ್ತದಲ್ಲಿ ಆದ್ಯತಾ ವಲಯದ ಪ್ರಮಾಣ ಶೇ.೭೯.೧೯. ಆದ್ಯತಾ ವಲಯಕ್ಕೆ ಬ್ಯಾಂಕುಗಳು ನೀಡಿದ ಸಾಲದ ಮೊತ್ತ ರೂ.೯೩.೦೬ ಕೋಟಿ. ಇದರಲ್ಲಿ ಬೆಳೆ ಸಾಲದ ಪ್ರಮಾಣ ಶೇ.೫೦. ಕೃಷಿಯೇತರ ಚಟುವಟಿಕೆಗಳ ಪಾಲು ಶೇ.೨೩.೩೮.

೧೯೯೭ – ೯೮ನೆಯ ಸಾಲಿನಲ್ಲಿ ಬ್ಯಾಂಕುಗಳು ಗುರಿ ಮೀರಿ ಬೆಳೆ ಸಾಲ ನೀಡಿವೆ. ಆದರೆ ಕಾಲಾವಧಿ ಸಾಲದಲ್ಲಿ ಮಾತ್ರ ಬ್ಯಾಂಕುಗಳ ಸಾಧನೆಯು ಕಡಿಮೆಯಿದೆ. ಗುರಿಗಿಂತ ಶೇ.೫೧.೦೯. ವಾಣಿಜ್ಯ ಬ್ಯಾಂಕುಗಳು ಜಿಲ್ಲೆಯಲ್ಲಿ ಸುಮಾರು ರೂ.೧೦೦ ಕೋಟಿಗಳಷ್ಟು ಸಾಲ ವ್ಯವಹಾರ ಮಾಡುತ್ತಿವೆ ಎಂಬುದರಿಂದ ಅವುಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳ ಬಹುದು. ವಾಣಿಜ್ಯ ಬ್ಯಾಂಕಯಗಳ ಜೊತೆಗೆ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು ಕೂಡ ಜಿಲ್ಲೆಯಲ್ಲಿ ಗಣ ನೀಯ ಸೇವೆ ಸಲ್ಲಿಸುತ್ತಿವೆ.

ಗದಗ ಜಿಲ್ಲೆಯಲ್ಲಿ ರಸ್ತೆಗಳು

ಒಂದು ದೇಶ/ಪ್ರದೇಶದ ಅಭಿವೃದ್ಧಿಯಲ್ಲಿ ರಸ್ತೆಗಳ ಜಾಲದ ಪಾತ್ರವನ್ನು ಕಡೆಗಣಿಸಲು ಸಾಧವಯವಿಲ್ಲ. ಭೌತಿಕ ಮೂಲ ಸೌಲಭ್ಯಗಳಲ್ಲಿ ರಸ್ತೆ ಮಾರ್ಗಗಳ ಪಾತ್ರವು ಮಹತ್ವವಾದುದು. ರಸ್ತೆಗಳ ಜಾಲವನ್ನು ಮನುಷ್ಯನ ದೇಹದ ನರಮಂಡ ಲಕ್ಕೆ ಹೋಲಿಸುವುದು ವಾಡಿಕೆ. ಕಚ್ಛಾ ಸಾಮಗ್ರಿಗಳನ್ನು ಉತ್ಪಾದನೆ ನಡೆಯುವ ಸ್ಥಳಕ್ಕೆ ಹಾಗೂ ಪಕ್ಕಾ ಮಾಲನ್ನು ಮಾರುಕಟ್ಟೆಗೆ – ಗ್ರಾಹಕರ ಮನೆ ಬಾಗಿಲಿಗೆ ಸಾಗಿಸಲು ರಸ್ತೆ ಮಾರ್ಗಗಳು ಅಗತ್ಯವಾಗಿವೆ. ಒಂದು ದೇಶ/ಪ್ರದೇಶದ ಆಂತರಿಕ ಮಾರುಕಟ್ಟೆಯ ಬೆಳವಣಿಗೆ, ಮಾರಾಟವೆಚ್ಚದ ಪ್ರಮಾಣ, ಮಾರುಕಟ್ಟೆ ಕಾರ್ಯಕ್ಷಮತೆ ಮುಂತಾದವು ಸಾರಿಗೆ ಸೌಲಭ್ಯದ ಜಾಲವನ್ನು ಅವಲಂಬಿಸಿದೆ.

ಒಂದು ದೇಶ/ಪ್ರದೇಶದ ಆರ್ಥಿಕತೆ ಸರಕು – ಸೇವೆಗಳನ್ನು ಯಾವ ಪ್ರಮಾಣದಲ್ಲಿ ಉತ್ಪಾದಿಸುತ್ತದೆ ಎಂಬುದು ಆ ಆರ್ಥಿಕತೆಯ ಮಾರುಕಟ್ಟೆಯ ವ್ಯಾಪ್ತಿ, ಬೆಳವಣಿಗೆ, ಕ್ಷಮತೆಯನ್ನು ಅವಲಂಬಿಸಿರುತ್ತದೆ. ೧೯೯೦ ದಶಕದ ಆರಂಭದಲ್ಲಿ ಪ್ರಾರಂಭವಾದ ಉದಾರೀಕರಣ ಪ್ರಕ್ರಿಯೆಯಿಂದಾಗಿ ಸಾರಿಗೆ – ಸೌಲಭ್ಯಗಳ ಕೊರತೆ, ಅವುಗಳ ಹದಗೆಟ್ಟ ಪರಿಸ್ಥಿತಿ, ಬಂಡವಾಳದ ಕೊರತೆ, ಖಾಸಗಿ/ವಿದೇಶಿ ಬಂಡವಾಳದ ಹರಿವು ಮುಂತಾದ ಸಂಗತಿಗಳು ಚರ್ಚೆಯ ಮುಂಚೂಣಿಗೆ ಬಂದವು. ನಮ್ಮ ದೇಶದ. ರಾಜ್ಯದ, ಜಿಲ್ಲೆಗಳ ಅಭಿವೃದ್ಧಿಗೆ ಅಡ್ಡಿಯಾಗಿರುವ ಬಹುಮುಖ್ಯ ಸಂಗತಿಯೆಂದರೆ ಸಾರಿಗೆ ಸೌಲಭ್ಯಗಳ ಕೊರತೆ ಮತ್ತು ಅದರ ಹದಗೆಟ್ಟ ಪರಿಸ್ಥಿತಿ ಬಗ್ಗೆ ಅನೇಕ ತಜ್ಞರು ತಮ್ಮ ಟೀಕೆ – ಟಿಪ್ಪಣಿ ಮಂಡಿಸಿದ್ದಾರೆ.

ಕೋಷ್ಟಕ .: ೧೯೯೭೯೮ರ ಗದಗ ಜಿಲ್ಲಾ ಸಾಲ ಯೋಜನೆ : ಗುರಿಗಳು ಮತ್ತು ಸಾಧನೆಗಳು

ವಲಯ

ಗುರಿ
(ಕೋಟಿ ರೂಪಾಯಿಗಳಲ್ಲ)

ಸಾಧನೆ
(ಕೋಟಿ ರೂಪಾಯಿಗಳಲ್ಲಿ)

೧. ಬೆಳೆ ಸಾಲ ೩೭.೫೧ ೪೬.೫೪
(೫೦.೦೦)
೨. ಕಾಲಾವಧಿ ಸಾಲಅ. ಸಣ್ಣ ನೀರಾವರಿ
ಆ. ಕೃಷಿ ಉಪಕರಣ
ಇ. ತೋಟಗಾರಿಕೆ
ಈ. ಭೂ ಅಭಿವೃದ್ಧಿ
೮.೨೪೧.೮೫
೫.೮೮
೦.೩೨
೦.೧೯
೪.೨೧
(೪.೫೨)
೦.೭೪
೨.೯೩
೦.೩೮
೦.೧೬
೩. ಇತರೆ ಕೃಷಿ ಚಟುವಟಿಕೆಗಳು ೩.೦೧ ೧.೫೧
೪. ಕೃಷಿಯೇತರ ವಲಯ ೧೦.೩೭ ೨೧.೭೬
೫. ಇತರೆ ಆದ್ಯತಾ ವಲಯ ೧೨.೮೮ ೧೦.೦೪
೬. ಒಟ್ಟು ಆದ್ಯತಾ ವಲಯ ೭೨.೦೧ ೯೩.೦೬
(೧೦೦.೦೦)
೭. ಒಟ್ಟು ಆದ್ಯತೇತರ ವಲಯ ೧೦.೦೩ ೨೪.೦೦
೮. ಒಟ್ಟು ಬ್ಯಾಂಕ್ ಸಾಲ ೮೨.೦೪ ೧೧೭.೬೬

ಮೂಲ : ವಿಜಯ ಬ್ಯಾಂಕ್ : ಲೀಡ್ ಬ್ಯಾಂಕ್ ಕಚೇರಿ, ಹುಬ್ಬಳ್ಳಿ ೧೪..೯೮          

ರಾಜ್ಯಮಟ್ಟದಲ್ಲಿ ರಸ್ತೆಗಳು

ರಸ್ತೆ ಮಾರ್ಗದ ಬೆಳವಣಿಗೆಯನ್ನು ಅಳೆಯಲು ಬಳಕೆಯಾಗುತ್ತಿರುವ ಮೂರು ಮುಖ್ಯ ಅಳತೆಗೋಲುಗಳೆಂದರೆ ೧. ರಸ್ತೆಗಳ ಉದ್ದ, ೨. ಪ್ರತಿ ೧೦೦ ಚದರ ಕಿಲೋಮೀಟರ್‌ಗಳಿಗೆ ಇರುವ ಸರಾಸರಿ ರಸ್ತೆ ಉದ್ದ ಮತ್ತು ೩. ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಇರುವ ಸರಾಸರಿ ರಸ್ತೆಗಳ ಉದ್ದ.

೧೯೯೬ರಲ್ಲಿ ಕರ್ನಾಟಕ ರಾಜ್ಯದಲ್ಲಿದ್ದ ರಸ್ತೆಗಳ ಒಟ್ಟು ಉದ್ದ ೧,೨೪,೪೮೯ ಕಿ.ಮೀಗಳು. ರಾಜ್ಯಮಟ್ಟದಲ್ಲಿ ಪ್ರತಿ ೧೦೦ ಚ.ಕಿ.ಮೀ. ಪ್ರದೇಶದಲ್ಲಿದ್ದ ಸರಾಸರಿ ರಸ್ತೆಗಳ ಉದ್ದ ೬೫ ಕಿ.ಮೀ. ಮತ್ತು ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಇದ್ದ ರಸ್ತೆಗಳ ಸರಾಸರಿ ಉದ್ದ ೨೭೭ ಕಿ.ಮೀ..ರಸ್ತೆ ಮಾರ್ಗಗಳಿಗೆ ಸಂಬಂಧಿಸಿದಂತೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಆಂಧ್ರ ಮತ್ತು ತಮಿಳುನಾಡುಗಳಿಗಿಂತ ಕರ್ನಾಟಕದ ಸ್ಥಾನ ಉತ್ತಮವಾಗಿದೆ. ಕೇರಳವು ರಸ್ತೆ ವ್ಯವಸ್ಥೆಗೆ ಸಂಬಂಧಿಸಿದಂತೆ ಕರ್ನಾಟಕಕ್ಕಿಂತ ಉತ್ತಮ ಸಾಧನೆ ಮಾಡಿದೆ.

ಕರ್ನಾಟಕದಲ್ಲಿನ ೨೭ ಜಿಲ್ಲೆಗಳ ಪೈಕಿ ಜನಸಂಖ್ಯೆ ದೃಷ್ಟಿಯಿಂದ ರಸ್ತೆಗಳ ಉದ್ದವನ್ನು ಗಣನೆ ಮಾಡಿದಲ್ಲಿ ಮೊದಲ ಸ್ಥಾನವು ಕೊಡಗಿಗೆ ಪ್ರಾಪ್ತವಾದರೆ ವಿಸ್ತೀರ್ಣದ ದೃಷ್ಟಿಯಿಂದ ಮೊದಲ ಸ್ಥಾನವು ಮಂಡ್ಯಕ್ಕೆ ಸಲ್ಲುತ್ತದೆ. ಗದಗ ಜಿಲ್ಲೆಯು ರಾಜ್ಯದ ವಿಸ್ತೀರ್ಣದಲ್ಲಿ ಶೇ.೨.೪೨ರಷ್ಟು ಪಡೆದಿದ್ದರೆ ರಸ್ತೆಗಳಲ್ಲಿ ಶೇ.೨.೧೦ ಪಾಲು ಪಡೆದಿದೆ. ರಸ್ತೆಗಳ ಉದ್ದದ ದೃಷ್ಟಿಯಿಂದ ಗದಗ ಜಿಲ್ಲೆಯು ರಾಜ್ಯದಲ್ಲಿ ೨೨ನೆಯ ಸ್ಥಾನವನ್ನು ಪಡೆದಿದೆ. ಗದಗ ಜಿಲ್ಲೆಯ ವಿಶೇಷವೆಂದರೆ ಈ ಜಿಲ್ಲೆಯಲ್ಲಿ ಯಾವುದೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿಲ್ಲ. ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳೂ ಹಾದು ಹೋಗದ ಏಳು ಜಿಲ್ಲೆಗಳಿವೆ. ಅವುಗಳಲ್ಲಿ ಗದಗವೂ ಒಂದಾಗಿದೆ. ಕರ್ನಾಟಕ ರಾಜ್ಯದಲ್ಲಿರುವ ರಾಜ್ಯ ಹೆದ್ದಾರಿಗಳ ಉದ್ದ ೧೧,೩೫೯ ಕಿ.ಮೀ. ಇದರಲ್ಲಿ ಗದಗ ಜಿಲ್ಲೆಯ ಪಾಲು ೨೪೯ ಕಿ.ಮೀ. (ಶೇ.೨.೧೯).

ರಾಜ್ಯಮಟ್ಟದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ೨೭೭ ಕಿ.ಮೀ. ರಸ್ತೆಗಳ ಸರಾಸರಿ ಉದ್ದವಿದ್ದರೆ ಗದಗ ಜಿಲ್ಲೆಯಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಇರುವ ರಸ್ತೆಗಳ ಉದ್ದ ೩೦೪. ಅಂದ ಮೇಲೆ ಗದಗ ಜಿಲ್ಲೆಯ ಸ್ಥಾನ ಉತ್ತಮವಿದೆಯೆಂದಾಯಿತು. ವಿಸ್ತೀರ್ಣದ ದೃಷ್ಟಿಯಿಂದ ರಾಜ್ಯದಲ್ಲಿ ಪ್ರತಿ ೧೦೦ ಚ.ಕಿ.ಮೀ.ಗೆ ೬೫ ಕಿ.ಮೀ. ರಸ್ತೆಗಳ ಉದ್ದವಿದ್ದರೆ ಗದಗ ಜಿಲ್ಲೆಯಲ್ಲಿ ಇದರ ಪ್ರಮಾಣ ೫೬ ಕಿ.ಮೀ. ಇಲ್ಲಿ ಮಾತ್ರ ಜಿಲ್ಲೆಯ ಪ್ರಮಾಣವು ಈ ಸಾಪೇಕ್ಷವಾಗಿ ಕಡಿಮೆ ಇದೆ ಎಂದಾಯಿತು.

ಕೋಷ್ಟಕ ೯.೩ರಲ್ಲಿ ಗದಗ ಜಿಲ್ಲೆಯಲ್ಲಿರುವ ವಿವಿಧ ಬಗೆಯ ರಸ್ತೆಗಳ ಉದ್ದದ ವಿವರವನ್ನು ನೀಡಿದೆ.

ಕೋಷ್ಟಕ .೩: ವಿವಿಧ ಬಗೆಯ ರಸ್ತೆಗಳು

೧. ರಾಷ್ಟ್ರೀಯ ಹೆದ್ದಾರಿಗಳು೨. ರಾಜ್ಯ ಹೆದ್ದಾರಿಗಳು

೩. ಜಿಲ್ಲಾ ಮುಖ್ಯ ರಸ್ತೆಗಳು

೪. ಇತರೆ ಜಿಲ್ಲಾ ರಸ್ತೆಗಳು

೫. ಹಳ್ಳಿ ರಸ್ತೆಗಳು

೬. ಒಟ್ಟು ರಸ್ತೆಗಳ ಉದ್ದ

 ನಿರ್ಮಾಣದಲ್ಲಿದೆ೨೪೯ ಕಿ.ಮೀ.

೬೫೨ ಕಿ.ಮೀ.

೧೩ ಕಿ.ಮೀ.

೧೬೯೫ ಕಿ.ಮೀ.

೨೬೧೪ ಕಿ.ಮೀ.