ಗದಗ ಜಿಲ್ಲೆಯಲ್ಲಿ ಕೃಷಿಯು ಜನರ ಪಧಾನ ಉದ್ಯೋಗವಾಗಿದೆ. ಜಿಲ್ಲೆಯ ಒಟ್ಟು ದುಡಿಮೆಗಾರ ವರ್ಗದಲ್ಲಿ ಶೇ.೭೨.೧೬ ರಷ್ಟು ಕೃಷಿಯನ್ನು ಅವಲಂಬಿಸಿದ್ದಾರೆ. ವೈವಿಧ್ಯಮಯವಾದ ಭೌಗೋಳಿಕ ಮತ್ತು ಹವಾಮಾನವನ್ನು ಹೊಂದಿರುವ ಗದಗ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಫಲವತ್ತಾದ ಎರೆಮಣ್ಣಿನಿಂದ ಕೂಡಿವೆ. ಈ ಜಿಲ್ಲೆಯು ಹಿಂಗಾರು ಬೆಳೆಯ ಒಣಬೇಸಾಯ ವಲಯಕ್ಕೆ ಸೇರಿದೆ. ಶಿರಹಟ್ಟಿ ತಾಲ್ಲೂಕು ಮಾತ್ರ ಅರೆಮಲೆನಾಡು ಪ್ರದೇಶವಾಗಿದ್ದು ಕೆಂಪು ಮಣ್ಣಿನಿಂದ ಕೂಡಿದೆ. ಇದು ನಿಶ್ಚಿತ ಮಳೆ ಬರುವ ಪ್ರದೇಶವಾಗಿರುವುದರಿಂದ ಇದು ಮುಂಗಾರು ಪ್ರಧಾನವಾದ ವಲಯವಾಗಿದೆ. ಈ ಜಿಲ್ಲೆಯಲ್ಲಿರುವ ನೀರಾವರಿ ಪ್ರದೇಶದ ವಿಸ್ತೀರ್ಣ ೫೬.೪೪೦ ಹೆಕ್ಟೇರುಗಳು (ಶೇ. ೧೯.೫೮). ೧೯೯೦ – ೯೧ರಲ್ಲಿ ಬಿತ್ತನೆಯಾದ ನಿವ್ವಳ ಪ್ರದೇಶ ೨,೮೮,೨೫೪ ಹೆಕ್ಟೇರುಗಳು, ಗೋಧಿ, ಜೋಳ, ಶೇಂಗ ಮತ್ತು ಹತ್ತಿ ಮುಖ್ಯ ಬೆಳೆಗಳಾಗಿವೆ. ಇವು ನಾಲ್ಕು ಬೆಳೆಗಳು ೧೯೯೨ – ೯೩ರಲ್ಲಿ ಒಟ್ಟು ಬಿತ್ತನೆ ಪ್ರದೇಶದ ಶೇ. ೯೩.೯೦ರಷ್ಟನ್ನು ಆಕ್ರಮಿಸಿಕೊಂಡಿದ್ದವು.

ಗದಗ ಜಿಲ್ಲೆಯು ಮೂಲತ: ಒಣಬೇಸಾಯವನ್ನು ಹೊಂದಿರುವ ಜಿಲ್ಲೆಯಾಗಿದೆ. ನರಗುಂದ ತಾಲ್ಲೂಕನ್ನು ಬಿಟ್ಟರೆ ಉಳಿದೆಲ್ಲಾ ತಾಲ್ಲೂಕುಗಳು ವ್ಯವಸಾಯಕ್ಕೆ ಮಳೆಯನ್ನು ಅವಲಂಬಿಸಿವೆ. ಜಿಲ್ಲೆಯ ಒಟ್ಟು ನೀರಾವರಿ ಪ್ರದೇಶದಲ್ಲಿ (೫೬೪೪೦ ಹೆಕ್ಟೇರುಗಳು) ನರಗುಂದದ ಪಾಲು ಶೇ. ೫೬.೦೮ ಮತ್ತು ಉಳಿದ ನಾಲ್ಕು ತಾಲ್ಲೂಕುಗಳ ಪಾಲು ಕೇವಲ ಶೇ.೪೩.೯೨. ನೀರಾವರಿ ಪ್ರದೇಶದಲ್ಲಿ ಶೇ.೬೦ರಷ್ಟು ಕಾಲುವೆಯಿಂದ ನೀರನ್ನು ಪಡೆಯುತ್ತಿದ್ದರೆ ಉಳಿದ ಶೇ ೪೦ರಷ್ಟು ನೀರಾವರಿ ಪ್ರದೇಶವು ಕೆರೆ, ಬಾವಿ, ಕೊಳೆವೆ ಬಾವಿ ಮುಂತಾದ ಮೂಲಗಳಿಂದ ಪಡೆಯುತ್ತಿದೆ.

ಗದಗ ಜಿಲ್ಲೆಯ ಒಟ್ಟು ಭೌಗೋಳಿಕ ವಿಸ್ತೀರ್ಣ ೪,೬೫,೭೧೫ ಹೆಕ್ಟೇರುಗಳು. ಇದರಲ್ಲಿ ಅರಣ್ಯ ಕ್ಷೇತ್ರದ ಪ್ರಮಾಣ ಶೇ.೭.೦೦. ಒಟ್ಟು ಬೀಳು ಭೂಮಿಯ ಪ್ರಮಾಣ ಶೇ. ೨೬.೧೫. ಇದರ ವಿಸ್ತೀರ್ಣ ೧,೨೧,೮೦೬. ಹೆಕ್ಟೇರುಗಳು. ಭೂಮಿಯ ಬಳಕೆಗೆ ಸಂಬಂಧಿಸಿದಂತೆ ಅತ್ಯಂತ ಆತಂಕಕಾರಿ ಸಂಗತಿಯೆಂದರೆ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶದ ಪ್ರಮಾಣ.

ಕೋಷ್ಟಕ .: ಕೃಷಿಭೂಮಿಯ ಬಳಕೆ

ವಿವರಗಳು

ಗದಗ

ಮುಂಡರಗಿ

ನರಗುಂದ
(ಹೆಕ್ಟೇರುಗಳಲ್ಲಿ)

ರೋಣ

ಶಿರಹಟ್ಟಿ

ಒಟ್ಟು ಜಿಲ್ಲೆ

ಭೌಗೋಳಿಕ ವಿಸ್ತೀರ್ಣ ,೧೯,೭೫೧ ೮೮೩೯೮ ೪೩೫೬೨ ,೨೯,೦೯೧ ೯೪೯೧೩ ,೬೫,೭೧೫
ಅರಣ್ಯಕ್ಷೇತ್ರ ೧೭೪೯ ೧೭೬೪೬ ೨೭೬ ೧೨,೯೪೩ ೩೨೬೧೪ (.೦೦)
ಸಾಗುವಳಿಗೆ ಲಭ್ಯವಿಲ್ಲದ ಭೂಮಿ ೧೮೯೫ ೪೪೧೧ ೨೧೧೭ ೭೪೨೧ ೫೯೯೭ ೨೧೮೪೧ (೪.೬೯)
ಸಾಗುವಳಿ ಮಾಡದಿರುವ ಇತರೆ ಬೀಳು ಭೂಮಿ ೧೫೧೩ ೪೪೫ ೫೮ ೮೦೬ ೧೦೧೫ ೩೮೩೭ (೦.೮೭)
ಬೀಳು ಭೂಮಿ ೪೧೭೭೧ ೨೭೬೮೫ ೬೨೧೦ ೩೯೯೯೪ ೨೩೦೫ ,೧೭.೯೬೯ (೨೫.೩೩)
ಬಿತ್ತನೆಯಾದ ನಿವ್ವಳ ಪ್ರದೇಶ ೬೧೬೧೯ ೩೮೨೧೧ ೩೫೧೭೭ ೮೦೫೯೪ ೭೨೬೫೩ ,೮೮,೨೫೪ (೬೧.೮೯)
ಹೆಚ್ಚುವರಿ ಬಿತ್ತನೆಯಾದ ಪ್ರದೇಶ ೪೩೪೬ ೧೯೯೨ ೧೨೩೦ ೧೮೬೯೨ ೧೦೮೫೪ ೩೭೧೧೪
ಬಿತ್ತನೆಯಾದ ಒಟ್ಟು ಪ್ರದೇಶ ೬೫೯೬೫ ೪೦೨೦೩ ೩೬೪೦೭ ೯೯೨೮೬ ೮೩೫೦೭ ೨೨೫೩೬೮
ಬೆಳೆ ಸಾಂದ್ರತೆ ೧೦೭.೦೫ ೧೦೫.೨೧ ೧೦೩.೫೦ ೧೨೩.೧೯ ೧೧೫.೯೪ ೧೧೨.೮೮

ಅರಣ್ಯ ಪ್ರದೇಶದ ಬೆಳವಣಿಗೆ

ರಾಜ್ಯದಲ್ಲಿ ಅರಣ್ಯ ಪ್ರದೇಶವನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಂದಿರುವ ಕೆಲವು ಜಿಲ್ಲೆಗಳ ಪೈಕಿ ಗದಗವೂ ಒಂದಾಗಿದೆ. ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶದ ಪ್ರಮಾಣ ಕೇವಲ ಶೇ. . ಉಷ್ಣವಲಯದ ಭೌಗೋಳಿಕ ಪ್ರದೇಶದಲ್ಲಿ ಕನಿಷ್ಠ ಪಕ್ಷ ಭೌಗೋಳಿಕ ವಿಸ್ತೀರ್ಣದ ಶೇ.೩೩ ರಷ್ಟಾದರೂ ಪ್ರದೇಶ ಅರಣ್ಯವನ್ನು ಹೊಂದಿರಬೇಕು ಎಂದು ಹೇಳಲಾಗಿದೆ. ರಾಜ್ಯ ಮಟ್ಟದಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಶೇ. ೧೬.೦೭. ರಾಜ್ಯ ಮಟ್ಟದಲ್ಲಿರುವ ಅರಣ್ಯ ಪ್ರಮಾ ಣದ ಅರ್ಧದಷ್ಟು ಪ್ರಮಾಣದಲ್ಲೂ ಗದಗ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಪ್ರಮಾಣವಿಲ್ಲ.

ಅರಣ್ಯ ಪ್ರದೇಶವು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಸಮಾನವಾಗಿ ವಿತರಣೆಯಾಗಿಲ್ಲ. ಕೋಷ್ಟಕ .೧ರಲ್ಲಿ ತೋರಿ ಸಿರುವಂತೆ ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಕೇವಲ ಶೇ. .೨೧. ಮುಂಡರಗಿ ಮತ್ತು ಶಿರಹಟ್ಟ ತಾಲ್ಲೂಕುಗಳಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಅರಣ್ಯಪ್ರದೇಶವಿದೆ. (ಕ್ರಮವಾಗಿ ಶೇ. ೧೯.೯೭ ಮತ್ತು ಶೇ.೧೩. ೬೪) ಗದಗ ಜಿಲ್ಲೆಯ ಅಭಿವೃದ್ಧಿಗೆ ಕಾಳಜಿ ಇರುವವರೆಲ್ಲ ಅರಣ್ಯ ಪ್ರಧೇಶವನ್ನು ಬೆಳಸುವ ಬಗ್ಗೆ ಜರೂರಾಗಿ ಯೋಚಿಸ ಬೇಕಾಗಿದೆ. ಜಿಲ್ಲಾ ಪಂಚಾಯತಿಯು ಮೊದಲು ಇತ್ತ ಕಡೆ ಗಮನ ನೀಡಬೇಕಾಗಿದೆ.

ಗದಗ ಜಿಲ್ಲೆಯಲ್ಲಿ ಅಭಿವೃದ್ಧಿಯನ್ನು ಬೃಹತ್ ಪ್ರಮಾಣದಲ್ಲಿ ಕೈಗೊಳ್ಳುವ ಅವಶ್ಯಕತೆ ಇದೆ. ಕಾರ್ಯಕ್ರಮವನ್ನು ಪ್ರತ್ಯೇಕವಾಗಿ ಸ್ವತಂತ್ರ್ಯವಾಗಿ ಕೈಗೊಳ್ಳುವ ಅವಶ್ಯಕತೆ ಇಲ್ಲ. ಇದಕ್ಕೆ ಪ್ರತಿಯಾಗಿ ಜಿಲ್ಲೆಯ ಉದ್ಯೋಗ ಧೃಡೀಕರಣ ಯೋಜನೆಯ ಅಂಗವಾಗಿಯೇ ಇದನ್ನು ಕೈಗೊಳ್ಳ ಬೇಕಾದ ಅವಶ್ಯಕತೆ ಇದೆ.

ಅರಣ್ಯ ಬೆಳಸುವ ಕಾರ್ಯಕ್ಕೆ ಜಿಲ್ಲೆಯಲ್ಲಿರುವ ಬೀಳುಭೂಮಿಯನ್ನು ಬಳಸಬಹುದಾಗಿದೆ. ಗದಗ ಜಿಲ್ಲೆಯಲ್ಲಿರುವ ಬೀಳು ಭೂಮಿಯ ಗಾತ್ರ ೧,೧೭,೯೬೯ ಹೆಕ್ಟೇರುಗಳಾಗುತ್ತವೆ. ಈಗಿರುವ ಅರಣ್ಯ ಪ್ರದೇಶಕ್ಕೆ ಬೀಳುಭೂಮಿಯನ್ನು ಸೇರಿಸಿದರೆ ಅರಣ್ಯ ಪ್ರದೇಶದ ವಿಸ್ತೀರ್ಣ ೧,೫೦,೫೮೩ ಹೆಕ್ಟೇರುಗಳು. ಇಷ್ಟು ಪ್ರದೇಶದಲ್ಲಿ ಅರಣ್ಯ ಬೆಳಸಿದರೆ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಶೇ. ೩೨.೩೩ ರಷ್ಟಾಗುತ್ತದೆ.

ಆರ್ಥಿಕ – ವಾಣಿಜ್ಯ ನಿಯಮಗಳ ಆಧಾರದ ಮೇಲೆ ಅರಣ್ಯ ಬೆಳಸುವ ಕಾರ್ಯಕ್ರಮವನ್ಜು ರೂಪಿಸುವ ಅವಶ್ಯಕತೆ ಇದೆ. ಕೃಷಿ ಅಭಿವೃದ್ಧಿಯ ದೃಷ್ಟಿಯಿಂದಲೂ ಸಹ ಅರಣ್ಯ ಪ್ರದೇಶದ ಅಭಿವೃದ್ಧಿಯು ಲಾಭದಾಯಕವಾದುದಾಗಿದೆ. ಈ ಕಾರ್ಯ ಕ್ರಮಕ್ಕೆ ಅಗತ್ಯವಾದ ಬಂಡವಾಳವನ್ನು ಖಾಸಗಿ ವಲಯದಿಂದ ರೂಢಿಸಿಕೊಳ್ಳಬಹುದು. ಈ ಬಗ್ಗೆ ಗದಗ ಜಿಲ್ಲಾ ಪಂಚಾ ಯತಿಯು ಇನ್ನೊವೇಟಿವ್ ಆಗಿ ಯೋಚಿಸಬೇಕಾಗಿದೆ. ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾದ ಡಾ. ಡಿ.ಎಂ. ನಂಜುಂಡಪ್ಪನವರು ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪಂಚಾಯತಿ ಸದಸ್ಯರನ್ನು ಉದ್ಧೇಶಿಸಿ ಮಾತನಾಡುತ್ತಾ ‘ಜಿಲ್ಲಾ ಪಂಚಾಯತಿಗಳು ಸ್ವಂತ ಬಂಡವಾಳ ಸಂಪನ್ಮೂಲಗಳನ್ನು ಸಂಗ್ರಹಿಸಿಕೊಳ್ಳಬೇಕು ಎಂದೂ, ಅದಕ್ಕಾಗಿ ಜಿಲ್ಲೆಯ ಶ್ರೀಮಂತ ವರ್ಗದ ರೈತರಿಂದ ಹಾಗೂ ಖಾಸಗಿ ವಲಯದಿಂದ ಬಂಡವಾಳ ಸಂಗ್ರಹಿಸಿಕೊಳ್ಳಬೇಕು’ ಎಂದು ಕರೆ ನೀಡಿದ್ದಾರೆ. (ಇಂಡಿಯನ್ ಎಕ್ಸಪ್ರೆಸ್, ೧೦.೦೨.೯೯, ಪುಟ: ೩).

ಅರಣ್ಯ ಬೆಳಸುವ ಕಾರ್ಯಕ್ರಮಕ್ಕೆ ಖಾಸಗಿ ವಲಯದಿಂದ ಹಾಗೂ ವಿದೇಶಿ ಕಂಪನಿಗಳಿಂದ ಬಂಡವಾಳವನ್ನು ಕೂಡಿಸ ಬಹುದು. ಈ ಕಾರ್ಯಕ್ರಮವನ್ನು ಕಡ್ಡಾಯವಾಗಿ ಜಿಲ್ಲೆಯ ಭೂರಹಿತ ಕೃಷಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದ ಕ್ಕಾಗಿಯೇ ರೂಪಿಸಬೇಕು. ಈ ಬಗ್ಗೆ ನಮ್ಮ ಜಿಲ್ಲಾ ಪಂಚಾಯತಿಯು ಇನ್ನೊವೇಟಿವ್ ಆಗಿ ಯೋಚಿಸಬೇಕಾಗಿದೆ. ಅರಣ್ಯ ಬೆಳಸುವ ಕಾರ್ಯಕ್ರಮವನ್ನು ವ್ಯಾಪಾರಿ ಸೂತ್ರದ ಆಧಾರದ ಮೇಲೆ ರೂಪಿಸಬೇಕಾಗಿದೆ. ಹೂಡಿದ ಬಂಡವಾಳ ಹಾಗೂ ಅದರಿಂದ ಬರುವ ಪ್ರತಿಫಲಗಳ ನಡುವಿನ ಪರಿಮಾಣವು ಒಂದಕ್ಕಿಂತ ಕಡಿಮೆ ಇರುವಂತೆ ನೋಡಿಕೊಂಡು ಪ್ರಸ್ತುತ ಕಾರ್ಯಕ್ರಮವನ್ನು ರೂಪಿಸಬೇಕಾಗಿದೆ. ಇದನ್ನು ಲಾಭದಾಯಕ ಉದ್ಯಮವನ್ನಾಗಿ ಬೆಳಸಬೇಕಾಗಿದೆ.

ಬೀಳುಭೂಮಿಯೆಂದರೆ ಅದೇನು ಗಿಡ – ಮರ – ಬಳ್ಳಿಗಳು ಬೆಳೆಯದಿರುವ ಭೂಮಿಯಲ್ಲ. ಮಣ್ಣಿನ ಮೂಲಗುಣವೇ ಪಾಲನೆ – ಪೋಷಣೆ. ಅರಣ್ಯ ಬೆಳಸುವ ಕಾರ್ಯಕ್ರಮಕ್ಕೆ ವಿಜ್ಞಾನ – ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದಾಗಿದೆ. ಆಧುನಿಕ ವಿಜ್ಞಾನ – ತಂತ್ರಜ್ಞಾನವನ್ನು ಬಳಸಿಕೊಂಡು ಮರುಭೂಮಿಯನ್ನು ನಂದನವನವನ್ನಾಗಿಸಿರುವ ಉದಾಹರಣೆಗಳು ಅಂತಾ ರಾಷ್ತ್ರೀಯ ಮಟ್ಟದಲ್ಲಿ ನಮಗೆ ದೊರಕುತ್ತವೆ. ಈ ಕಾರ್ಯಕ್ರಮದ ಸಮರ್ಥ ನಿರ್ವಹಣೆಗೆ ಕೃಷಿ ವಿಶ್ವವಿದ್ಯಾಲಯಗಳು, ಅರಣ್ಯ ವಿದ್ಯಾಲಯಗಳು, ವಿಜ್ಞಾನ – ತಂತ್ರಜ್ಞಾನ ಮಂಡಳಿಗಳನ್ನು ತೊಡಗಿಸಿಕೊಳ್ಳಬಹುದು.

ಪರಿಸರ ಚಳುವಳಿ

ಸದ್ಯ ನಮ್ಮಲ್ಲಿ ಪರಿಸಿರ – ಚಳುವಳಿ – ಪರಿಸರ ಪ್ರಜ್ಞೆ ಎನ್ನುವುದು ಉಳ್ಳವರ ತಿಂಡಿ – ತೀಟೆಯಂತಾಗಿಬಿಟ್ಟಿದೆ. ಅದನ್ನು ಕೇವಲ ಜಲಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಕಬ್ಬನ್‌ – ಪಾರ್ಕ್‌ಗಳಿಗೆ ಸೀಮಿತಗೊಳಿಸಿದಂತೆ ಕಾಣುತ್ತಿದೆ. ಈ ಬಗೆಯ ಸೋಗಲಾಡಿತನದ ಪರಿಸರ ಚಳುವಳಿಯು ಜನರನ್ನು ಒಳಗೊಳ್ಳುವುದು ಸಾಧ್ಯವಿಲ್ಲ. ಪರಿಸರ ಚಳುವ ಳಿಯು ಸಮಾಜದ ಕೆಳವರ್ಗದ ಜನರ ಬದುಕನ್ನು ಒಳಗೊಳ್ಳುವಂತಾಗಬೇಕು. ಪರಿಸರ ಚಳುವಳಿಯು ಅರಣ್ಯ ಬೆಳಸುವ ಕಾರ್ಯಕ್ರಮವನ್ನು ಅಂತರ್ಗತ ಮಾಡಿಕೊಳ್ಳಬೇಕು. ಈ ಕಾರ್ಯಕ್ರಮದ ಮೂಲಕ ಜಿಲ್ಲೆಯ ೧.೪೮ ಲಕ್ಷ ಕೃಷಿ ಕಾರ್ಮಿಕರಿಗೆ ಉದ್ಯೋಗ ದೊರೆಯುವಂತಾಗಬೇಕು.

ಕೃಷಿ ಅಭಿವೃದ್ಧಿ ಎನ್ನುವುದು ಕೇವಲ ಬೆಳೆಗಳ ನಿರ್ವಹಣೆ, ರಸಗೊಬ್ಬರ, ನೀರಾವರಿ, ರೋಗ – ಕೀಟ ನಾಶಗಳಿಗೆ ಮಾತ್ರ ಮೀಸಲಾಗಿರಬಾರದು. ಸಮಗ್ರ ಕೃಷಿ – ಸುಸ್ಥಿರಗತಿ (Sustainable) ಕೃಷಿ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಅದು ಅರಣ್ಯ ಪ್ರದೇಶವನ್ನು ಬೆಳಸುವ ಕಾರ್ಯಕ್ರಮವನ್ನು ಒಳಗೊಂಡಿರಬೇಕಾಗುತ್ತದೆ. ಅಂತರ್ಜಲ ರಕ್ಷಣೆ, ಅದರ ರೀಜನ ರೇಶನ್, ಭೂಸಾರ ಸಂರಕ್ಷಣೆ, ಉರುವಲು ಕಟ್ಟಿಗೆ ಮುಂತಾದವುಗಳಿಗೆ ಅರಣ್ಯ ಬೆಳಸುವ ಕಾರ್ಯಕ್ರಮವು ಸಹಾಯಕ ವಾಗಬಲ್ಲುದು. ಕೃಷಿಯೇತರ ಪ್ರದೇಶದ ಅಭಿವೃದ್ಧಿಯು ಕೃಷಿ ಪ್ರದೇಶದ ಅಭಿವೃದ್ಧಿಗೆ ಅಗತ್ಯವಾಗಿದೆ.

ಬೆಳೆ ಪದ್ದತಿ

೧೯೯೨ – ೯೩ರ ಸಾಲಿನಲ್ಲಿ ಗದಗ ಜಿಲ್ಲೆಯಲ್ಲಿನ ಬೆಳೆ ಪದ್ಧತಿ ಸ್ವರೂಪವನ್ನು ಕೋಷ್ಟಕ ೭.೨ರಲ್ಲಿ ತೋರಿಸಿದೆ.

ಕೋಷ್ಟಕ .: ಗದಗ ಜಿಲ್ಲೆಯಲ್ಲಿ ಬೆಳೆಪದ್ದತಿ : ೧೯೯೨೯೩

ಬೆಳೆಗಳು

ಬೆಳೆ ಪ್ರದೇಶ

(ಹೆಕ್ಟೇರುಗಳಲ್ಲಿ)

ಶೇಕಡ ಪ್ರಮಾಣ

ಭತ್ತರಾಗಿ

ಜೋಳ

ಗೋಧಿ

ಏಕದಳ ಧಾನ್ಯಗಳು

ಕಡಲೆ

ತೊಗರಿ

ದ್ವಿದಳ ಧಾನ್ಯಗಳು

ಶೇಂಗಾ

ಕಬ್ಬು

ಹತ್ತಿ

ವಾಣಿಜ್ಯ ಬೆಳೆಗಳು

ಒಟ್ಟು ಪ್ರದೇಶ

 ೮೦೧೧೧೫

೧೧೬೨೯೩

೩೩೪೩೧

೧೫೦೬೪೦

೧೩೦೮೨

೩೯೮೦

೧೭೦೬೨

೮೨೨೬೧

೭೪

೪೫೯೭೮

೧೨೮೩೧೩

೨೯೬೦೧೫

 ೦.೨೭೦.೦೪

೩೯.೨೯

೧೧.೨೯

೫೦.೮೯

೪.೪೨

೧.೩೪

೫.೭೬

೨೭.೭೯

೦.೦೨

೧೫.೫೩

೪೩.೩೪

೧೦೦.೦೦

ಗದಗ ಜಿಲ್ಲೆಯ ಪ್ರಧಾನ ಬೆಳೆ ಜೋಳ. ಒಟ್ಟು ಬಿತ್ತನೆ ಪ್ರದೇಶದಲ್ಲಿ ಶೇ. ೩೯.೨೯ರಷ್ಟು ಪ್ರದೇಶ ಜೋಳದ ಬೆಳೆಗೆ ಮೀಸಲಾಗಿದೆ. ಒಟ್ಟಾರೆ ಏಕದಳ ಧಾನ್ಯ ಬೆಳೆಯುವ ಪ್ರದೇಶದ ಪ್ರಮಾಣ ಶೇ. ೫೦.೮೯ರಷ್ಟಿದೆ. ವಾಣಿಜ್ಯ ಬೆಳೆ ಬೆಳೆಯುವ ಪ್ರದೇಶದ ಪ್ರಮಾಣ ಶೇ. ೪೩.೩೪. ದ್ವಿದಳ ಧಾನ್ಯ ಬೆಳೆಯುವ ಪ್ರದೇಶದ ಪ್ರಮಾಣ ಕೇವಲ ಶೇ ೫.೭೬ ರಷ್ಟಿದೆ. ಈ ಜಿಲ್ಲೆಯಲ್ಲಿ ಬೆಳೆಯುವ ಎರಡು ಪ್ರಮುಖ ವಾಣಿಜ್ಯ ಬೆಳೆಗಳೆಂದರೆ ಶೇಂಗಾ ಮತ್ತು ಹತ್ತಿ.

ಭೂ ಮಾಲಿಕತ್ವ ಮತ್ತು ಜಮೀನ್ದಾರಿಕೆ

ನಮ್ಮ ರಾಜ್ಯದಲ್ಲಿ ಜನಸಂಖ್ಯೆಯ ದೃಷ್ಟಿಯಿಂದ ದಕ್ಷಿಣ ಕರ್ನಾಟಕ ಪ್ರದೇಶವು ಉತ್ತರ ಕರ್ನಾಟಕ ಪ್ರದೇಶಕ್ಕಿಂತ ದೊಡ್ಡದಾಗಿದೆ. ಆದರೆ ವಿಸ್ತೀರ್ಣದ ದೃಷ್ಟಿಯಿಂದ ಉತ್ತರ ಕರ್ನಾಟಕ ಪ್ರದೇಶವು ದಕ್ಷಿಣ ಕರ್ನಾಟಕ ಪ್ರದೇಶಕ್ಕಿಂತ ದೊಡ್ಡದಾಗಿದೆ. ಕರ್ನಾಟಕದಲ್ಲಿ ಕೃಷಿ ಕಾರ್ಮಿಕರನ್ನು ಅತಿ ಹೆಚ್ಚಾಗಿ ಪಡೆದಿರುವ ಕೆಲವೇ ಜಿಲ್ಲೆಗಳಲ್ಲಿ ಗದಗವೂ ಒಂದು. ದುಡಿಮೆಗಾರ ವರ್ಗದಲ್ಲಿ ಶೇ. ೪೦ಕ್ಕಿಂತ ಅಧಿಕವಾಗಿ ಕೃಷಿ ಕಾರ್ಮಿಕರನ್ನು ಹೊಂದಿರುವ ಜಿಲ್ಲೆಗಳ ಸಂಖ್ಯೆ ಕೇವಲ ಒಂಬತ್ತು. ಇದರಲ್ಲಿ ಗದಗವೂ ಒಂದು ಮುಖ್ಯ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿನ ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಶೇ. ೪೨.೩೫. ಭೂಮಾಲೀಕತ್ವದಲ್ಲಿ ತೀವ್ರಸ್ವರೂಪದ ಅಸಮಾನತೆ ಇರುವುದು ಇದರಿಂದ ಸ್ಪಷ್ಟವಾಗುತ್ತದೆ. ಭೂಮಾಲೀಕತ್ವಕ್ಕೆ ಸಂಬಂಧಿಸಿದಂತೆ ಈ ಜಿಲ್ಲೆಯಲ್ಲಿ ಜಮೀನ್ದಾರಿ ವ್ಯವಸ್ಥೆ ಅಸ್ತಿತ್ವದಲ್ಲಿರುವುದು ಕಂಡು ಬರುತ್ತದೆ. ಇದಕ್ಕೆ ಅನೇಕ ಚಾರಿತ್ರಿಕ ಕಾರಣಗಳಿವೆ. ವಸಾಹತುಶಾಹಿ ಕಾಲದಲ್ಲಿ ಬ್ರಿಟಿಷರು ಜಮೀನ್ದಾರಿಕೆಯನ್ನು ಪ್ರೋತ್ಸಾಹಿಸಿದರು. ಏಕೆಂದರೆ ಲಕ್ಷಾಂತರ ರೈತರಿಂದ ಭೂಕಂದಾಯ ವಸೂಲು ಮಾಡುವುದಕ್ಕಿಂತ ಕೆಲವೇ ಕೆಲವು ಜಮೀನ್ದಾರರಿಂದ ಭೂಕಂದಾಯ ವಸೂಲು ಮಾಡುವುದು ಬ್ರಿಟಿಷರಿಗೆ ಅನುಕೂಲವಾಗಿ ಕಂಡುಬಂತು. ವಸಾಹತುಶಾಹಿ ಕಾಲದಲ್ಲಿ ಕರ್ನಾಟಕದ ಉತ್ತರ ಭಾಗದಲ್ಲಿ ಜಮೀನ್ದಾರಿ ವ್ಯವಸ್ಥೆ ಭದ್ರವಾಗಿ ನೆಲೆಯೂರಿತು. ಈ ಕಾರಣಕ್ಕೆ ಇಂದಿಗೂ ನಮಗೆ ‘ದೇಶಪಾಂಡೆ’, ‘ಇನಾಂದಾರ್. ‘ಜಹಗೀರ್‌ದಾರ್’ ಮುಂತಾದ ಜಮೀನ್ದಾರಿ ಪಾಳೆಗಾರಿಕೆಯ ಪಳೆಯುಳಿಕೆಗಳು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಂಡುಬರುತ್ತವೆ. ದಕ್ಷಿಣ ಕರ್ನಾಟಕದಲ್ಲಿ ಈ ಬಗೆಯ ಜಮೀನ್ದಾರಿ ಪಾಳೆಗಾರರು ಕಂಡುಬರುವುದಿಲ್ಲ

ಕೋಷ್ಟಕ ೭.೩ರಲ್ಲಿ ತೋರಿಸಿರುವಂತೆ ಗದಗ ಜಿಲ್ಲೆಯಲ್ಲಿರುವ ಒಟ್ಟು ಭೂ ಹಿಡುವಳಿಗಳ ಸಂಖ್ಯೆ ೧.೨೫ ಲಕ್ಷ. ಭೂಹಿಡುವಳಿಗಳ ವಿಸ್ತೀರ್ಣ೩.೯೫ ಲಕ್ಷ ಹೆಕ್ಟೇರುಗಳು. ಇದರ ಪ್ರಕಾರ ಜಿಲ್ಲೆಯಲ್ಲಿ ಭೂ ಹಿಡುವಳಿಗಳ ಸರಾಸರಿ ಗಾತ್ರ ೩.೧೪ ಹೆಕ್ಟೇರುಗಳು. ಅಧ್ಯಯನದ ಅನುಕೂಲಕ್ಕೆ ಭೂಹಿಡುವಳಿಗಳನ್ನು ಗಾತ್ರಕ್ಕೆ ಅನುಗುಣವಾಗಿ ೫ ವರ್ಗಗಳಾಗಿ ವರ್ಗಿಕರಿಸಿದೆ. ಮೊದಲ ಮೂರು ಭೂ ಹಿಡುವಳಿ ವರ್ಗಗಳನ್ನು ಒಂದು ಗುಂಪು ಮಾಡಿ ರೈತಾಪಿ ಭೂ ಹಿಡುವಳಿಗಳು ಎಂದು ಕರೆಯಬಹುದು. ಕೊನೆಯ ಎರಡು ಬಗೆಯ ಭೂ ಹಿಡುವಳಿ ವರ್ಗಗಳನ್ನು ಎರಡನೆಯ ಗುಂಪು ಮಾಡಿ ಜಮೀನ್ದಾರಿ ಭೂ ಹಿಡುವಳಿಗಳು ಎಂದು ಕರೆಯಬಹುದು. ಕೋಷ್ಟಕ ೭.೪ರಲ್ಲಿ ಇವೆರಡೂ ಬಗೆಯ ಗುಂಪುಗಳ ಸ್ಥಾನಮಾನವನ್ನು ತೋರಿಸಿದೆ. ಜಿಲ್ಲೆಯ ಒಟ್ಟು ಭೂ ಹಿಡುವಳಿಗಳಲ್ಲಿ ರೈತಾಪಿ ಭೂ ಹಿಡುವಳಿಗಳ ಪ್ರಮಾಣ ಶೇ.೬೭.೫೨ರಷ್ಟಿದೆ. ಆದರೆ ಶೇ.೬೭.೫೨ರಷ್ಟಿರುವ ರೈತಾಪಿ ಜನರು ಕೇವಲ ಶೇ. ೪೧.೭೦ರಷ್ಟು ಹಿಡುವಳಿ ವಿಸ್ತೀರ್ಣದ ಮೇಲೆ ಮಾಲೀಕತ್ವ ಪಡೆದಿದ್ದಾರೆ. ಶೇ. ೩೨.೪೮ರಷ್ಟು ಮಾತ್ರ ಇರುವ ಜಮೀನ್ದಾರಿ ಪಾಳೆಗಾರರು ಶೇ. ೫೮.೩೦ರಷ್ಟು ಹಿಡುವಳಿ ವಿಸ್ತೀರ್ಣದ ಮೇಲೆ ಮಾಲೀಕತ್ವ ಪಡೆದಿದ್ದಾರೆ. ರೈತಾಪಿ ಭೂ ಹಿಡುವಳಿ ವರ್ಗದಲ್ಲಿ ಸರಾಸರಿ ಭೂ ಹಿಡುವಳಿ ಗಾತ್ರ ೧.೯೩ ಹೆಕ್ಟೇರಾದರೆ ಜಮೀನ್ದಾರಿ ಭೂ ಹಿಡುವಳಿಗಳಲ್ಲಿ ಸರಾಸರಿ ಭೂ ಹಿಡುವಳಿಗಳ ಗಾತ್ರ ೫.೭ ಹೆಕ್ಟೇರುಗಳು.

ಕೋಷ್ಟಕ .: ೧೯೮೫೮೬ರ ಕೃಷಿ ಜನಗಣತಿಯಂತೆ ಗದಗ ಜಿಲ್ಲೆಯ ಭೂ ಹಿಡುವಳಿಗಳ ಸಂಖ್ಯೆ ಮತ್ತು ವಿಸ್ತೀರ್ಣ  

ಕ್ರ. ಸಂ.

ಭೂ ಹಿಡುವಳಿಗಳ ವರ್ಗೀಕರಣ

ಭೂ ಹಿಡುವಳಿಗಳ ಸಂಖ್ಯೆ

ಭೂ ಹಿಡುವಳಿಗಳ  ವಿಸ್ತೀರ್ಣ

ಭೂ ಹಿಡುವಳಿಗಳ  ಸರಾಸರಿ ಗಾತ್ರ

೧. ಅತಿ ಸಣ್ಣ ಭೂಹಿಡುವಳಿಗಳು(ಒಂದು ಹೆಕ್ಟೇರಿಗೂ ಕಡಿಮೆ) ೧೨೦೦೦
(೯.೫೬)
೭೨೦೦
(೧.೮೩)
೦.೬
೨. ಸಣ್ಣ ಭೂ ಹಿಡುವಳಿಗಳು(ಒಂದರಿಂದ ಎರಡು ಹೆಕ್ಟೆರುಗಳು) ೩೬೬೦೦
(೩೯.೧೬)
೫೪೮೦೦
(೧೩.೯೫)
೧.೫೨
೩. ಅರೆ ಮಧ್ಯಮ ಗಾತ್ರದ ಭೂ ಹಿಡುವಳಿಗಳು (ಎರಡರಿಂದ ನಾಲ್ಕು ಹೆಕ್ಟೇರುಗಳು) ೩೬೬೦೦
(೨೮.೯೩)
೧೦೧೮೦೦
(೨೫.೯೨)
೨.೮೦ 
೪. ಮಧ್ಯಮ ಗಾತ್ರದ ಭೂ ಹಿಡುವಳಿಗಳು (ನಾಲ್ಕರಿಂದ ಹತ್ತು ಹೆಕ್ಟೇರುಗಳು) ೨೫೩೦೦
(೨೦.೧೬)
೧೫೫೨೦೦
(೩೯.೫೧)
೬.೧೩
೫. ದೊಡ್ಡ ಗಾತ್ರದ ಭೂ ಹಿಡುವಳಿಗಳು (ಹತ್ತು ಮತ್ತು ಹತ್ತು ಹೆಕ್ಟೇರುಗಳಿಗೂ ಮಿಗಿಲಾಗಿ) ೧೫೩೦೦
(೧೨.೧೯)
೭೩೮೦೦
(೧೮.೭೯)
೪.೮೨
ಒಟ್ಟು ೧೨೫೫೦೦
(೧೦೦.೦೦)
೩೯೨೮೦೦
(೧೦೦.೦೦)
೩.೧೪


(
ಆವರಣದಲ್ಲಿ ಕೊಟ್ಟಿರುವ ಸಂಖ್ಯೆಗಳು ಒಟ್ಟು ಮೊತ್ತದ ಶೇಕಡ ಪ್ರಮಾಣವನ್ನು ತೋರಿಸುತ್ತವೆ)

ಈ ಬಗೆಯ ಅಸಮ ಭೂಮಾಲೀಕತ್ವ ವ್ಯವಸ್ಥೆಯು ಜಿಲ್ಲೆಯ ಅಭಿವೃದ್ಧಿ ಪ್ರಕ್ರಿಯೆಯ ಮೇಲೆ ಉಂಟು ಮಾಡುವ ಪರಿಣಾ – ಮಗಳೇನು? ಕೃಷಿ ನೀತಿ – ನಿರೂಪಣೆ ಮೇಲೆ ಇದರ ಇಂಪ್ಲಿಕೇಷನ್ ಏನು? ಭೂಮಾಲೀಕತ್ವದಲ್ಲಿರುವ ಅಸಮಾನತೆ ವಿಷಯವನ್ನು ಎತ್ತಿದಾಗೆಲ್ಲ ಉತ್ತರ ಕರ್ನಾಟಕದಲ್ಲಿ ಒಣ ಭೂಮಿ ಬೇಸಾಯ ಇರುವ ಸಂಗತಿಯನ್ನು ಮುಂದು ಮಾಡುವುದು ವಾಡಿಕೆ. ಒಣ ಬೇಸಾಯ ಪದ್ಧತಿ ಇದೆ ಎಂದ ಮಾತ್ರಕ್ಕೆ ಭೂಮಾಲೀಕತ್ವದಲ್ಲಿ ಅಸಮಾನತೆ ಇರಬೇಕು ಎಂದು ಅರ್ಥವಲ್ಲ. ಉತ್ತರ ಕರ್ನಾಟಕ ಪ್ರದೇಶದಲ್ಲಿ ಕೃಷಿ ಕಾರ್ಮಿಕರ ಪ್ರಮಾಣವು ದಕ್ಷಿಣ ಕರ್ನಾಟಕದಲ್ಲಿರುವ ಕೃಷಿ ಕಾರ್ಮಿಕರ ಪ್ರಮಾಣಕ್ಕಿಂತ ಅಧಿಕವಿರುವ ಸಂಗತಿಯನ್ನು ವಿವರಿಸುವುದು ಹೇಗೆ? ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ಪಾಲು ಕೇವಲ ಶೇ.೪೨.೩೩. ಆದರೆ ರಾಜ್ಯದ ಕೃಷಿ ಕಾರ್ಮಿಕರಲ್ಲಿ ಉತ್ತರ ಕರ್ನಾಟಕದ ಪಾಲು ಶೇ. ೫೮.೧೦. ಇದಕ್ಕಿಂತಲೂ ಮುಖ್ಯವಾಗಿ ರಾಜ್ಯದಲ್ಲಿರುವ ಒಟ್ಟು ಮಹಿಳಾ ಕೃಷಿ ಕಾರ್ಮಿಕರಲ್ಲಿ ಉತ್ತರ ಕರ್ನಾಟಕ ಪ್ರದೇಶದ ಪಾಲು ಶೇ.೬೧.೧೮. ಭೂಮಾಲೀಕತ್ವ ವ್ಯವಸ್ಥೆಯು ಉತ್ತರ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ತೀವ್ರ ಸ್ವರೂಪದ ಅಸಮಾನತೆಯಿಂದ ಕೂಡಿರುವುದನ್ನು ಮೇಲಿನ ಸಂಗತಿಗಳು ತಿಳಿಸುತ್ತವೆ. ಗದಗ ಜಿಲ್ಲೆಯನ್ನೇ ತೆಗೆದುಕೊಂಡರೆ ಜಿಲ್ಲೆಯಲ್ಲಿರುವ ಭೂರಹಿತ ಕೃಷಿ ಕಾರ್ಮಿಕರ ಸಂಖ್ಯೆ ೧.೪೮ ಲಕ್ಷ. ಒಟ್ಟು ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇ.೧೭.೨೩. ಆದರೆ ರಾಜ್ಯ ಮಟ್ಟದಲ್ಲಿ ಇದರ ಪ್ರಮಾಣ ಕೇವಲ ಶೇ.೧೧.೧೨.

ಭೂಮಾಲೀಕತ್ವ ವ್ಯವಸ್ಥೆಯಲ್ಲಿನ ವಿಕೃತಿಗಳನ್ನು ಸರಿಪಡಿಸದೆ ಕೇವಲ ಆಧುನೀಕರಣದಿಂದ, ಅದರ ಮೇಲೆ ಅಧಿಕ ಬಂಡವಾಳ ತೊಡಗುವುದರಿಂದ ಜಿಲ್ಲೆಯ ಬಡತನದ ನಿವಾರಣೆ ಸಾಧ್ಯವಿಲ್ಲ.

ಗದಗ ಜಿಲ್ಲೆಯಲ್ಲಿ ನೀರಾವರಿ

ಕೃಷಿ ಅಭಿವೃದ್ಧಿಯನ್ನು ನಿರ್ಧರಿಸುವ ಅನೇಕ ಸಂಗತಿಗಳಲ್ಲಿ ನಿರ್ಣಾಯಕವಾದ ಒಂದು ಸಂಗತಿಯೆಂದರೆ ನೀರಾವರಿ. ನೀರಾವರಿಯಿಂದ ಅನೇಕ ರೀತಿಯ ಲಾಭಗಳಿವೆ. ಅದು ಕೃಷಿ ಉತ್ಪನ್ನಕ್ಕೆ ಒಂದು ಬಗೆಯ ಧೃಢತೆಯನ್ನು ಹಾಗೂ ನಿಶ್ಚಿತತೆಯನ್ನು ಒದಗಿಸಬಲ್ಲುದು. ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ನೀರಾವರಿ ಅತ್ಯಂತ ಅಗತ್ಯ. ಇದು ಕೃಷಿಯ ಇಳುವರಿಯನ್ನು ಉತ್ತಮ ಪಡಿಸಬಲ್ಲುದು. ಕೃಷಿಕರ ವರಮಾನವನ್ನು ಇದು ಹೆಚ್ಚಿಸಬಲ್ಲುದು. ವಾಣಿಜ್ಯ ಬೆಳೆಗಳನ್ನು ಬೆಳೆಯುವುದು ಇದರಿಂದ ಸಾಧ್ಯ.

ಕೋಷ್ಟಕ .: ಭೂಮಾಲೀಕತ್ವದಲ್ಲಿರುವ ಅಸಮಾನತೆ

ಹಿಡುವಳಿಗಳ ವರ್ಗೀಕರಣ

ಭೂಹಿಡುವಳಿಗಳ ಸಂಖ್ಯೆ

ಭೂಹಿಡುವಳಿಗಳ ವಿಸ್ತೀರ್ಣ

ಭೂಹಿಡುವಳಿಗಳ ಸರಾಸರಿ ಗಾತ್ರ

ರೈತಾಪಿ ಭೂ ಹಿಡುವಳಿಗಳು (ಅತಿ ಸಣ್ಣ, ಸಣ್ಣ, ಮಧ್ಯಮ ಗಾತ್ರ) ೮೪,೪೦೦
(೬೭.೫೨)
೧,೬೬,೮೦೦
(೪೧.೭೦)
೧.೯೩
ಜಮೀನ್ದಾರಿ ಭೂ ಹಿಡುವಳಿಗಳು (ಮಧ್ಯಮ ಮತ್ತು ದೊಡ್ಡ ಗಾತ್ರದ ಹಿಡುವಳಿಗಳು) ೪೦,೬೦೦
(೩೨.೪೮)
೨,೨೯,೦೦೦
(೫೮.೩೦)
೫.೭
ಒಟ್ಟು ೧,೨೫,೦೦೦
(೧೦೦.೦೦)
೩,೯೨,೮೦೦
(೧೦೦.೦೦)
೩.೧೪

(ಆವರಣದಲ್ಲಿರುವ ಸಂಖ್ಯೆಗಳು ಒಟ್ಟು ಮೊತ್ತದ ಶೇಕಡ ಪ್ರಮಾಣವನ್ನು ತೋರಿಸುತ್ತದೆ)

ಕೋಷ್ಟಕ .: ಗದಗ ಜಿಲ್ಲೆಯಲ್ಲಿ ನೀರಾವರಿ ಪ್ರದೇಶ : ೧೯೯೦೯೧

ತಾಲ್ಲೂಕುಗಳು

ಒಟ್ಟು ಬಿತ್ತನೆಯಾದ ನಿವ್ವಳ ಪ್ರದೇಶ (ಹೆಕ್ಟೇರುಗಳಲ್ಲಿ)

ನೀರಾವರಿಯಾದ ನಿವ್ವಳ ಪ್ರದೇಶ

ನೀರಾವರಿಯಾದ ಪ್ರದೇಶದ ಪ್ರಮಾಣ ಶೇಕಡ

ಗದಗಮುಂಡರಗಿ

ನರಗುಂದ

ರೋಣ

ಶಿರಹಟ್ಟಿ

ಗದಗ ಜಿಲ್ಲೆ, : ಒಟ್ಟು

೬೧೬೧೯೩೮೨೧೧

೩೫೧೭೭

೮೦೫೯೪

೭೨೬೫೩

೨,೮೮,೨೫೪

೧೨೪೮೫೭೮೯

೩೧೬೫೩

೧೨೯೮೫

೪೭೬೫

೫೬,೪೪೦

೨.೦೩೧೫.೧೫

೮೯.೯೮

೧೬.೧೧

೬.೫೬

೧೯.೫೮

ಗದಗ ಜಿಲ್ಲೆಯಲ್ಲಿರುವ ಒಟ್ಟು ಬಿತ್ತನೆ ಪ್ರದೇಶ ೨,೮೮,೨೫೪ ಹೆಕ್ಟೇರುಗಳು. ಜಿಲ್ಲೆಯ ಭೌಗೋಳಿಕ ವಿಸ್ತೀರ್ಣದಲ್ಲಿ ಬಿತ್ತನೆ ಪ್ರದೇಶದ ಪ್ರಮಾಣ ಶೇ.೬೧.೮೯.

ಗದಗ ಜಿಲ್ಲೆಯಲ್ಲಿ ನೀರಾವರಿ ಪ್ರದೇಶವು ಎಲ್ಲ ತಾಲ್ಲೂಕುಗಳಲ್ಲೂ ಸಮವಾಗಿ ಬೆಳವಣಿಗೆಯಾಗಿಲ್ಲ. ಇಡೀ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ನೀರಾವರಿ ಪ್ರದೇಶವನ್ನು ಹೊಂದಿರುವ ತಾಲ್ಲೂಕು ನರಗುಂದವು ಗದಗ ಜಿಲ್ಲೆಯಲ್ಲಿದೆ. ಈ ತಾಲ್ಲೂಕಿನಲ್ಲಿ ನೀರಾವರಿ ಪ್ರದೇಶದ ಪ್ರಮಾಣ ಶೇ. ೮೯.೯೮. ಗದಗ ಜಿಲ್ಲಾ ಸರಾಸರಿ ನೀರಾವರಿ ಪ್ರದೇಶದ ಪ್ರಮಾಣ ಶೇ. ೧೯.೫೮. ಜಿಲ್ಲೆಯಲ್ಲಿ ನೀರಾವರಿ ಪ್ರದೇಶವನ್ನು ಅತಿಕಡಿಮೆ ಪ್ರಮಾಣದಲ್ಲಿ ಹೊಂದಿರುವ ತಾಲ್ಲೂಕು ಗದಗ. ಈ ತಾಲ್ಲೂಕಿನಲ್ಲಿ ನೀರಾವರಿ ಪ್ರದೇಶದ ಪ್ರಮಾಣ ಕೇವಲ ಶೇ.೨.೦೩. ಕೋಷ್ಟಕ ೭.೫ರಲ್ಲಿ ಜಿಲ್ಲೆಯ ನೀರಾವರಿಗೆ ಸಂಬಂಧಪಟ್ಟ ವಿವರಗಳನ್ನು ನೀಡಲಾಗಿದೆ.

ನೀರಾವರಿ ಮೂಲಗಳು

ಕೋಷ್ಟಕ ೭.೬ರಲ್ಲಿ ಯಾವ ಮೂಲೆಗಳಿಂದ ಜಿಲ್ಲೆ ನೀರಾವರಿ ಸೌಲಭ್ಯ ಪಡೆಯುತ್ತಿದೆ ಎಂಬುದನ್ನು ತೋರಿಸಿದೆ.

ಒಟ್ಟು ನೀರಾವರಿ ಸೌಲಭ್ಯದಲ್ಲಿ ಶೇ. ೬೦ರಷ್ಟು ನೀರು ಕಾಲುವೆಗಳಿಂದ ಬಂದರೆ, ಶೇ. ೩೨ರಷ್ಟು ಬಾವಿ ಮತ್ತು ಕೊಳವೆ ಬಾವಿಗಳಿಂದ ಪ್ರಾಪ್ತವಾಗುತ್ತದೆ.

ವಾಯುಗುಣ

ಗದಗ ಜಿಲ್ಲೆಯು ಸಮಭಾಜಕ ವೃತ್ತಕ್ಕೆ ಹತ್ತಿರದಲ್ಲಿರುವುದರಿಂದ ಅಧಿಕ ಉಷ್ಣತೆಯನ್ನು ಒಳಗೊಂಡ ವಾಯುಗುಣವನ್ನು ಹೊಂದಿದೆ. ಸಾಮಾನ್ಯವಾಗಿ ಶುಷ್ಕ ಹವೆಯಿರುತ್ತದೆ. ಬೇಸಿಗೆಯಲ್ಲಿ ಉಷ್ಣತೆಯಿಂದ ಕೂಡಿದ್ದು ಚಳಿಗಾಲದಲ್ಲಿ ತಂಪಾಗಿರುತ್ತದೆ. ಒಂದು ವರ್ಷವನ್ನು ಸಾಮಾನ್ಯವಾಗಿ ನಾಲ್ಕು ಋತುಗಳನ್ನಾಗಿ ವಿಭಾಗಿಸಲಾಗಿದೆ.

ಕೋಷ್ಟಕ .: ನೀರಾವರಿ ಮೂಲಗಳು                          

ನೀರಾವರಿ ಮೂಲಗಳು ನೀರಾವರಿ ಪ್ರದೇಶ ಶೇಕಡ ಪ್ರಮಾಣ
ಕಾಲುವೆಗಳು (ನದಿ)ಕೆರೆ

ಬಾವಿ

ಕೊಳವೆ ಬಾವಿ

ಇತರೆ

ಒಟ್ಟು

೩೩೮೯೭೪೮೩

೧೦೪೦೦

೭೩೮೬

೪೨೭೪

೫೬೪೪೦

೬೦.೦೬೦.೮೫

೧೮.೪೩

೧೩.೦೯

೭.೫೭

೧೦೦.೦೦

೧. ಚಳಿಗಾಲ, ೨. ಬೇಸಿಗೆ ಕಾಲ, ೩. ನೈಋತ್ಯ ಮಾನ್ಸೂನ್ ಕಾಲ, ೪. ಈಶಾನ್ಯ ಮಾನ್ಸೂನ್ ಕಾಲ

ಭಾರತದ ಪವನಶಾಸ್ತ್ರ ಇಲಾಖೆಯ ವರದಿಯಂತೆ ಜಿಲ್ಲೆಯಲ್ಲಿನ ಮುಂಡರಗಿಯಲ್ಲಿ ಮಳೆ ಮಾಪನ ಕೇಂದ್ರ ಸ್ಥಾಪಿಸ ಲಾಗಿದ್ದು ೫೦ ರಿಂದ ೮೦ ವರ್ಷಗಳ ಹಿಂದಿನ ವರ್ಷಗಳ ಮಳೆಯ ಅಂಕಿ ಅಂಶಗಳು ದೊರೆಯುತ್ತವೆ. ಮಳೆಯು ಜೂನ್ ಮತ್ತು ಸೆಪ್ಟಂಬರ್ ತಿಂಗಳಿನವರೆಗೆ ಬೀಳುತ್ತದೆ. ಜುಲೈ ತಿಂಗಳಲ್ಲಿ ಅಧಿಕ ಮಳೆ ಬೀಳುತ್ತದೆ.

ಉಷ್ಣತೆ

ಗದಗಿನಲ್ಲಿ ದಾಖಲಾಗಿರುವ ಉಷ್ಣತೆಯ ಅಂಕಿ ಅಂಶಗಳು ಸಾಮಾನ್ಯವಾಗಿ ಜಿಲ್ಲೆಯ ಎಲ್ಲಾ ಪ್ರದೇಶಗಳಿಗೂ ಅನ್ವಯಿ ಸುತ್ತವೆ. ಫೆಬ್ರವರಿ ನಂತರ ಉಷ್ಣತೆ ಅತಿ ಶೀಘ್ರವಾಗಿ ಏರುತ್ತದೆ. ಏಪ್ರಿಲ್ ತಿಂಗಳು ಅತಿ ಹೆಚ್ಚು ಉಷ್ಣತೆ ಇರುವ ತಿಂಗಳಾಗಿದೆ. ಡಿಸೆಂಬರ್ ತಿಂಗಳಲ್ಲಿ ಅತಿ ಕಡಿಮೆ ಉಷ್ಣಾಂಶವಿರುತ್ತದೆ.