ಅಭಿವೃದ್ಧಿ ಪ್ರಕ್ರಿಯೆ ಮತ್ತು ಜನಸಂಖ್ಯೆಯ ಬೆಳವಣಿಗೆಗಳ ನಡುವೆ ಒಂದು ನಿರ್ದಿಷ್ಟ ಬಗೆಯ ಸಂಬಂಧವನ್ನು ಅನೇಕ ಸಿದ್ಧಾಂತಗಳು ಗುರುತಿಸಿವೆ. ಇವೆರಡರ ನಡುವೆ ಸಂಬಂಧ ಇರುವುದರ ಬಗ್ಗೆ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಈ ಸಂಬಂಧದ ಸ್ವರೂಪ, ಕಾರಣ – ಪರಿಣಾಮಗಳ ನಡುವಿನ ಆಶ್ಲೇಷ ಮುಂತಾದ ಸಂಕೀರ್ಣ ಸಂಗತಿಗಳ ಬಗ್ಗೆ ತೀವ್ರ ಭಿನ್ನಾಭಿಪ್ರಾಯಗಳಿವೆ. ಇವೆರಡರ ನಡುವಿನ ಸಂಬಂಧವು ದ್ವಿಮುಖವಾದುದಾಗಿದೆ. ಅಭಿವೃದ್ಧಿ ಪ್ರಕ್ರಿಯೆಯು ಜನ ಸಂಖ್ಯೆಯ ಬೆಳವಣಿಗೆ ಸ್ವರೂಪದ ಮೇಲೆ ಪ್ರಭಾವ ಬೀರಬಹುದು. ಅದೇ ರೀತಿ ಜನಸಂಖ್ಯೆಯ ಬೆಳವಣಿಗೆಯು ಅಭಿವೃದ್ಧಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಬಲ್ಲುದು. ಇವೆರಡರ ಮೇಲೆ ಪ್ರಭಾವ ಬೀರುವ ಮೂರನೆಯ ಮತ್ತಾವುದೊ ಸಂಗತಿ ಇರಬಹುದು. ಉದಾಹರಣೆಗೆ ಸಾಕ್ಷರತೆ ಅಂತಹ ಮೂರನೆಯ ಸಂಗತಿಯಾಗಬಹುದು.

ಜನಸಂಖ್ಯೆಯ ಬೆಳವಣಿಗೆ ಕುರಿತಂತೆ ಹಾಗೂ ಅದು ಅಭಿವೃದ್ಧಿಯೊಂದಿಗೆ ಪಡೆದಿರುವ ಸಂಬಂಧ ಕುರಿತಂತೆ ಸಿದ್ಧಾಂತ ವನ್ನು ರೂಪಿಸಿದ ಕೀರ್ತಿ ರಾಬರ್ಟ್ ಥಾಮಸ್ ಮಾಲ್ಥಸ್ ಅವರಿಗೆ ಸಲ್ಲಬೇಕು. ಇಂದಿಗೆ ಸರಿಯಾಗಿ ೨೦೦ ವರ್ಷಗಳ ಹಿಂದೆ, ಅಂದರೆ ಕ್ರಿ.ಶ.೧೭೯೮ರಲ್ಲಿ ಅವನು ರೂಪಿಸಿದ ಜನಸಂಖ್ಯಾ ಸಿದ್ಧಾಂತವು ಇಂದಿಗೂ ಚರ್ಚೆಯ ವಸ್ತುವಾಗಿದೆ ಹಾಗೂ ನೀತಿ – ನಿರೂಪಣೆ ಮೇಲೆ ಪ್ರಭಾವ ಬೀರುತ್ತಿದೆ. ಬಡದೇಶಗಳ ಜನಸಂಖ್ಯೆಯ ಬೆಳವಣಿಗೆಗೆ ಕಾರಣಗಳು, ಅದರ ಪರಿಣಾಮಗಳು ಹಾಗೂ ಅದರ ನಿಯಂತ್ರಣ ಮುಂತಾದ ಸಂಗತಿಗಳನ್ನು ಮಾಲ್ಥಸ್ ರೂಪಿಸಿದ ಪ್ರಮೇಯಗಳ ಚೌಕಟ್ಟಿ ನಲ್ಲೇ ವಾಖ್ಯಾನಿಸುವ ಪ್ರಯತ್ನಗಳು ಇಂದಿಗೂ ನಡೆಯುತ್ತಿವೆ.

ಮಾಲ್ಥಸ್ ಪ್ರಮೇಯವನ್ನು ಸರಳವಾಗಿ ಹೀಗೆ ಮಂಡಿಸಬಹುದು.

            ಜನಸಂಖ್ಯೆ ಹಾಗೂ ಆಹಾರೋತ್ಪನ್ನಇವೆರಡೂ ಬೆಳವಣಿಗೆ ಪ್ರವೃತ್ತಿ ಹೊಂದಿರುತ್ತವೆ.

            ಆದರೆ ಇವೆರಡರ ಬೆಳವಣಿಗೆ ಗತಿ ಸಮಾನವಾಗಿರುವುದಿಲ್ಲ. ಜನಸಂಖ್ಯೆಯ ಬೆಳವಣಿಗೆ ಗತಿ ತೀವ್ರವಾಗಿ ನಡೆದರೆ ಆಹಾರೋತ್ಪನ್ನಗಳ ಬೆಳವಣಿಗೆ ಗತಿ ಮಂದವಾಗಿರುತ್ತದೆ.

            ಇವೆರಡೂ ಬೆಳವಣಿಗೆ ಗತಿಗಳಲ್ಲಿನ ಭಿನ್ನತೆಯಿಂದಾಗಿ ಜನಸಂಖ್ಯೆಯ ಗಾತ್ರ ಮಿತಿ ಮೀರಿಬಿಡುತ್ತದೆ. ಆಹಾರೋತ್ಪನ್ನಗಳ ಕೊರತೆ ಉಂಟಾಗುತ್ತದೆ. ಈ ಬಗೆಯ ಸಮಸ್ಯೆಗಳನ್ನು ತಡೆಯಲು ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಬೇಕು ಎಂದು ಮಾಲ್ಥಸ್ ಸಲಹೆ ಮಾಡಿದ

ಆಹಾರೋತ್ಪನ್ನಗಳ ಬೆಳವಣಿಗೆ ಮಟ್ಟಕ್ಕೆ ಒಂದು ಮಿತಿ ಇರುತ್ತದೆ ಎನ್ನಲಾಗಿದೆ. ಇದು ಇಳಿಮುಖ ಸೀಮಾಂತ ಪ್ರತಿಫಲಕ್ಕೆ ಒಳಗಾಗಿದೆ. ಆದರೆ ಜನಸಂಖ್ಯೆಯ ಬೆಳವಣಿಗೆಯು ಇಂತಹ ನಿಯಮದಿಂದ ಮುಕ್ತವಾಗಿದೆ. ಆದ್ದರಿಂದ ಜನಸಂಖ್ಯೆಯ ಬೆಳವಣಿಗೆಯನ್ನು ತಗ್ಗಿಸಬೇಕು ಎಂಬುದು ಮಾಲ್ಥಸ್‌ನ ತರ್ಕ. ಜನಸಂಖ್ಯೆ ಬೆಳವಣಿಗೆಯನ್ನು ನಿಯಂತ್ರಿಸದಿದ್ದರೆ ಅದರ ಪ್ರಮಾಣ ಮತ್ತು ಆಹಾರೋತ್ಪನ್ನಗಳ ಪ್ರಮಾಣಗಳ ನಡುವೆ ಅಸಮತೋಲನ ಉಂಟಾಗಿಬಿಡುತ್ತದೆ. ಈ ಅಸಮತೋಲನವು ಆಹಾರದ ಕೊರತೆ, ಹಸಿವು, ಬರಗಾಲ, ಸಾವು, ರೋಗ – ರುಜಿನಗಳಿಗೆ ಕಾರಣವಾಗಿ ಬಿಡಬಹುದು. ಇದು ಮಾಲ್ಥಸ್‌ನ ಭವಿಷ್ಯವಾಣಿ. ಅವನ ಭವಿಷ್ಯವಾಣಿ ನಿಜವಾಗಲಿಲ್ಲ ಎಂಬುದು ಬೇರೆ ಮಾತು! ಆದರೆ ಅವನು ರೂಪಿಸಿದ್ದ ಪ್ರಮೇಯಗಳು, ನಿರ್ಣಯಗಳು ಇಂದಿಗೂ ಚಲಾವಣೆಯಲ್ಲಿವೆ. ಭಾರತದ ಜನಸಂಖ್ಯೆ ಬೆಳವಣಿಗೆ ಪರಿಯನ್ನು ‘ಮಾಲ್ಥಸ್‌ವಾದಿ’ ಎಂದು ವರ್ಣಿಸುವುದು ರೂಢಿಯಲ್ಲಿದೆ. ಜನಸಂಖ್ಯೆ ಬೆಳವಣಿಗೆ ಗತಿಶೀಲತೆ ಕುರಿತಂತೆ ಒಂದು ಪರಿಭಾಷೆಯನ್ನು ಮಾಲ್ಥಸ್ ರೂಪಿಸಿಬಿಟ್ಟ. ‘ಜನಸಂಖ್ಯೆ’ ಎಂಬುದರಲ್ಲಿ ‘ಸಂಖ್ಯೆ’ ಪ್ರಧಾನವಾಗಿ ‘ಜನ’ ಆನುಷಂಗಿ ಕವಾಗಿಬಿಟ್ಟಿತು. ಜನಸಂಖ್ಯೆ ಎಂಬುದು ಒಂದು ಸಂಖ್ಯಾವಾಚಿ ನುಡಿಯಾಗಿಬಿಟ್ಟಿತು. ವಾಸ್ತವಾಗಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬದುಕುತ್ತಿರುವ ಜನಗರಿಗೆ ‘ಜನಸಂಖ್ಯೆ’ ಎಂಬ ಮೂಲ ಅರ್ಥ ಇಂದು ವಿಕೃತಿಗೊಂಡಿದೆ. ಜನಸಂಖ್ಯೆಯನ್ನು ಒಂದು ಸಮಸ್ಯೆಯೆಂದು ಅದೊಂದು ಶಾಪವೆಂದು ಪರಿಗಣಿಸುವ ಪವೃತ್ತಿ ವ್ಯಾಪಕವಾಗಿದೆ.

ಜನರಲ್ಲಿನ ಅಜ್ಞಾನ – ಅವಿವೇಕ – ಮೌಢ್ಯವೇ ಜನಸಂಖ್ಯೆಯ ಮಿತಿಮೀರಿದ ಬೆಳವಣಿಗೆಗೆ, ಅದರ ಬೃಹತ್ ಗಾತ್ರಕ್ಕೆ, ದೊಡ್ಡ ಗಾತ್ರದ ಕುಟುಂಬಗಳಿಗೆ ಕಾರಣ ಎಂಬುದು ಮಾಲ್ಥಸ್‌ನ ಒಂದು ಪ್ರತಿಪಾದನೆಯಾಗಿದೆ. ಮಾಲ್ಥಸ್‌ವಾದಿ ಸಂಕಥನವು ಜನಸಂಖ್ಯೆಯನ್ನು ಒಂದು ಸವ್ರತಂತ್ರ – ಸ್ವತಂತ್ರ ಪ್ರಕ್ರಿಯೆಯನ್ನಾಗಿ, ಸಾಮಾಜಿಕ ಚೌಕಟ್ಟಿನಿಂದ ಅನ್ಯವಾದ ಒಂದು ಪ್ರಕ್ರಿಯೆಯನ್ನಾಗಿ ಪರಿಭಾವಿಸಿಕೊಂಡಿದೆ. ನೀತಿ – ನಿರೂಪಣೆ ಮೂಲಕ, ನಿರ್ದಿಷ್ಟ ಒತ್ತಡದ ಮೂಲಕ ಜನಸಂಖ್ಯೆಯ ಬೆಳವಣಿಗೆಗೆ ಪವೃತ್ತಿಯಲ್ಲಿ ಬದಲಾವಣೆ ತರಬಹುದು ಎಂಬುದು ಇಲ್ಲಿ ಗೃಹೀತ. ಅದೊಂದು ವಸ್ತುನಿಷ್ಠ – ಗಾತ್ರನಿಷ್ಠ ಸಂಗತಿಯನ್ನಾಗಿ ಮಾಲ್ಥಸ್‌ ಪರಿಭಾವಿಸಿಕೊಂಡ.

ಈ ಬಗೆಯ ಮೀಮಾಂಸೆಯನ್ನು ಒಪ್ಪಿಕೊಳ್ಳುವುದು ಕಷ್ಟ. ಏಕೆಂದರೆ ಜನಸಂಖ್ಯೆಯ ಬೆಳವಣಿಗೆಯ ‘ನಿರ್ವಾತ’ದಲ್ಲಿ ನಡೆಯುವ ಕ್ರಿಯೆಯಲ್ಲ. ಅದರ ಬೆಳವಣಿಗೆ ಮೂಲದಲ್ಲಿ ಸಾಮಾಜಿಕ, ರಾಜಕೀಯ, ಕೌಟುಂಬಿಕ, ಮಾನಸಿಕ ಸಂಗತಿಗಳು ಕ್ರಿಯಾಶೀಲವಾಗಿರುತ್ತವೆ. ಮಾಲ್ಥಸ್‌ಗೆ ಜನಸಂಖ್ಯೆಯ ಸಾಮಾಜಿಕ ನೆಲೆಗಳು – ಸ್ವರೂಪ ಮುಖ್ಯವಾಗಿರಲಿಲ್ಲ. ಅದರ ತೀವ್ರ ಗತಿ ಬೆಳವಣಿಗೆಯನ್ನು ಹೇಗೆ ನಿಯಂತ್ರಿಸುವುದು ಎಂಬುದೇ ಅವನ ಕಾಳಜಿಯ ಮುಖ್ಯ ನೆಲೆಯಾಗಿತ್ತು. ಈ ವಿಷಯದಲ್ಲಿ ಸರ್ಕಾರವು ಬಲವಂತದ ಕ್ರಮಗಳನ್ನು ತೆಗೆದು ಕೊಂಡರೂ ತಪ್ಪೇನಿಲ್ಲ ಎಂದು ಮಾಲ್ಥಸ್‌ವಾದಿಗಳು ವಾದಿಸುತ್ತಿದ್ದಾರೆ. ಸಮಾಜದ – ಸಮಷ್ಟಿಯ ಹಿತಕ್ಕಾಗಿ ವ್ಯಕ್ತಿಯ ಕುಟುಂಬದ ವ್ಯವಹಾರದಲ್ಲಿ ಸರ್ಕಾರವು ಮಧ್ಯಪ್ರವೇಶಿಸಿ ನಿರೀಕ್ಷಿತ ಬದಲಾವಣೆಗಳು ಉಂಟಾಗುವಂತೆ ಮಾಡಬೇಕು ಎಂಬ ತರ್ಕವನ್ನು ಕಟ್ಟಲಾಗಿದೆ.

ಜನಸಂಖ್ಯೆಯ ಬೆಳವಣಿಗೆ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳ ನಡುವಿನ ಸಂಬಂಧ ಕುರಿತಂತೆ ಅನೇಕ ತಪ್ಪು ಭಾವನೆಗಳು ಮೂಡಿಬಿಟ್ಟಿವೆ. ಈ ಬಗೆಯ ತಪ್ಪು ಭಾವನೆಗಳಿಗೆ ಮಾಲ್ಥಸ್‌ವಾದಿ ಸಂಕಥನದ ಕಾಣಿಕೆ ಕಡಿಮೆಯೇನಲ್ಲ.

ಮೊದಲನೆಯದಾಗಿ ಜನಸಂಖ್ಯೆಯ ಮಿತಿಮೀರಿದ ಬೆಳವಣಿಗೆ, ಅದರ ಬೃಹತ್ ಗಾತ್ರ – ಇವು ಭಾರತದ – ಕರ್ನಾಟಕದ – ಗದಗದ ಅಭಿವೃದ್ಧಿಗೆ ಇರುವ ಏಕೈಕ ಕಂಟಕ ಎಂಬುದು ಅಂತಹ ಒಂದು ತಪ್ಪು ಕಲ್ಪನೆ.

ಎರಡನೆಯದಾಗಿ ಪರಿಸರಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳಿಗೆಲ್ಲ ಜನಸಂಖ್ಯೆಯ ಮಿತಿ ಮೀರಿದ ಏರಿಕೆಯನ್ನು ಕಾರಣವನ್ನಾಗಿ ಮಾಡಿರುವುದು ಇನ್ನೊಂದು ತಪ್ಪು ಭಾವನೆ.

ಮೂರನೆಯದಾಗಿ ಜನರ ಅವಿವೇಕ – ಅಜ್ಞಾನ – ಮೌಢ್ಯಗಳೇ ಜನಸಂಖ್ಯೆಯ ಮಿತಿಮೀರಿದ ಬೆಳವಣಿಗೆ ಹಾಗೂ ದೊಡ್ಡ ಗಾತ್ರದ ಕುಟುಂಬಗಳಿಗೆ ಕಾರಣ ಎಂಬುದೂ ಸಹ ತಪ್ಪು ಕಲ್ಪನೆಯಾಗಿದೆ.

ನಾಲ್ಕನೆಯದಾಗಿ ಜನಸಂಖ್ಯೆಯ ಬೆಳವಣಿಗೆಯನ್ನು ಅತಿಯಾದ ಜನನ ಪ್ರಮಾಣವನ್ನು ತಗ್ಗಿಸಲು – ನಿಯಂತ್ರಿಸಲು ಇರುವ ಏಕೈಕ ಮಾರ್ಗ – ಕ್ರಮವೆಂದರೆ ಕುಟುಂಬಯೋಜನೆ ಎಂಬುದು ಇನ್ನೊಂದು ತಪ್ಪುಗ್ರಹಿಕೆ.

ಐದನೆಯದಾಗಿ ಕುಟುಂಬ ಯೋಜನೆಯೆಂಬುದು ಕೇವಲ ಮಹಿಳೆಯರಿಗೆ ಸಂಬಂಧಿಸಿದ ಸಂಗತಿ ಎಂದು ತಿಳಿಯುವುದು ಮಗದೊಂದು ತಪ್ಪು ಕಲ್ಪನೆ. ಇವೆಲ್ಲವು ತಪ್ಪು ಕಲ್ಪನೆಗಳಾಗಿವೆ, ಭ್ರಮೆಗಳಾಗಿವೆ. ಒಂದು ದೇಶ / ಪ್ರದೇಶದ ಪ್ರಗತಿ / ವಿಗತಿ ಜನಸಂಖ್ಯೆಯ ಜೊತೆಗೆ ಇನ್ನೂ ಅನೇಕ ಕಾರಣ ಸಾಧ್ಯ. ಅಭಿವೃದ್ಧಿಯ ವೈಫಲ್ಯವನ್ನು ಜನಸಂಖ್ಯೆಯ ತಲೆಗೆ ಕಟ್ಟುವುದು ಬೇಜವಾಬ್ದಾರಿ ವರ್ತನೆಯಾಗಿ ಕಾಣುತ್ತದೆ. ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ನಾವು ಮುಕ್ತ ಮನಸ್ಸಿನಿಂದ ಯೋಚಿಸಬೇಕಾಗಿದೆ. ಬಡದೇಶದ ಮಿತಿಮೀರಿದ ಜನಸಂಖ್ಯೆ ಬೆಳವಣಿಗೆಯು ಪರಿಸರ ನಾಶಕ್ಕೆ ಎಷ್ಟು ಕಾರಣವೋ ಅದರಷ್ಟೇ ಅಥವ ಅದಕ್ಕಿಂತ ಮಿಗಿಲಾಗಿ ಮುಂದುವರಿದ ಶ್ರೀಮಂತ ದೇಶಗಳ ರಾಕ್ಷಸ ಸ್ವರೂಪಿ – ವಿನಾಶಕಾರಿ ಅನುಭೋಗ ಪ್ರವೃತ್ತಿಯೂ ಕಾರಣವಾಗಿದೆ. ಬಡದೇಶಗಳಲ್ಲಿರುವ ಶ್ರೀಮಂತರೂ ಸಹ ಪರಿಸರನಾಶದ ಜವಾಬ್ದಾರಿಯಲ್ಲಿ ಮುಕ್ಕಾಲು ಪಾಲು ಭಾರ ಹೊರಬೇಕಾಗುತ್ತದೆ.

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವುದು ಜನರ ಅವಿವೇಕ ಎಂದು ಭಾವಿಸುವುದು ಸರಳ ತೀರ್ಮಾನದಂತೆ ಕಾಣುತ್ತದೆ. ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಲು ಕುಟುಂಬ ಯೋಜನೆಯೊಂದೆ ಏಕೈಕ ಮಾರ್ಗವಲ್ಲ. ಕೇರಳ ರಾಜ್ಯವು ಕುಟುಂಬ ಯೋಜನೆಗೆ ಪ್ರತಿಯಾಗಿ ಮಾನವಮುಖಿ ಅಭಿವೃದ್ಧಿ ಮೂಲಕ ಜನಸಂಖ್ಯೆಯ ಬೆಳವಣಿಗೆ ಗತಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಮಾನವಮುಖಿ ಅಭಿವೃದ್ಧಿಯ ಅಂಗಗಳಾದ ಸಾಕ್ಷರತೆ, ಆರೋಗ್ಯ, ಆಹಾರ, ಆಶ್ರಯ ಮುಂತಾದವು ಜನರು ಕುಟುಂಬಯೋಜನೆ ಅನುಸರಿಸುವಂತೆ ಪ್ರೇರಣೆ ನೀಡುತ್ತದೆ. ಕುಟುಂಬ ಯೋಜನೆಯು ಮಹಿಳೆಯರಿಗೆ ಎಷ್ಟರಮಟ್ಟಿಗೆ ಸಂಬಂಧಿಸಿದೆಯೋ ಅಷ್ಟರ ಮಟ್ಟಿಗೆ ಪುರುಷರಿಗೂ ಸಂಬಂಧಿಸಿದೆ.

ಒಟ್ಟಾರೆ ಜನಸಂಖ್ಯೆಯ ಬೆಳವಣಿಗೆ ಕುರಿತಂತೆ ನಾವು ಇಂದು ಮಾಲ್ಥಸ್‌ವಾದಿ ಭ್ರಮೆಗಳಿಂದ ಹೊರಬರಬೇಕಾಗಿದೆ. ಅಮರ್ತ್ಯಸೇನ್ ಅವರು ತಮ್ಮ ಅನೇಕ ಅಧ್ಯಯನಗಳಲ್ಲಿ ಮಾಲ್ಥಸ್‌ವಾದಿ ಸಂಕಥನ, ಜನಸಂಖ್ಯೆ ಬೆಳವಣಿಗೆಗೆ ಸಂಬಂಧಿಸಿದಂತೆ ಹುಟ್ಟು ಹಾಕಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದ್ದಾರೆ. (ಅಮರ್ತ್ಯಸೇನ್‌: ೧೯೯೫, ೧೯೯೫, ೧೯೯೬).

ಗದಗ ಜಿಲ್ಲೆಯ ಅಭಿವೃದ್ಧ ಅಧ್ಯಯನದ ಮೂರನೆಯ ಈ ಅಧ್ಯಾಯದಲ್ಲಿ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆ ಗತಿಯನ್ನು, ಅದರ ಸಾಮಾಜಿಕ ನೆಲೆಗಳನ್ನು, ಕುಟುಂಬಸಂಬಂಧಿ ಸಂಗತಿಗಳನ್ನು ಹಾಗೂ ಆರೋಗ್ಯದ ಸ್ಥಿತಿಗತಿಗಳನ್ನು ವಿಶ್ಲೇಷಿ ಸಲಾಗಿದೆ. ಜನಸಂಖ್ಯೆಯ ಬೆಳವಣಿಗೆಯ ಮೂಲದಲ್ಲಿರುವ ಸಮಾಜ – ಆರ್ಥಿಕ – ರಾಜಕೀಯ ಸಂಗತಿಗಳನ್ನು ಹಿಡಿದಿಡಲು ಇಲ್ಲಿ ಪ್ರಯತ್ನಿಸಲಾಗಿದೆ.

ಗದಗ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆ ಪರಿ

ಕೋಷ್ಟಕ ೩.೧ರಲ್ಲಿ ಗದಗ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆ ಪರಿಯನ್ನು ತಾಲ್ಲೂಕುವಾರು ಚಿತ್ರಿಸಿದೆ. ೧೯೬೧ರಿಂದ ಅದು ಬೆಳೆದು ಬಂದ ಬೆಳವಣಿಗೆಯನ್ನು ದಾಖಲಿಸಲಾಗಿದೆ.

೧೯೮೧ – ೯೧ರ ದಶಕದಲ್ಲಿ ರಾಜ್ಯಮಟ್ಟದಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಶೇ.೨೧.೧೨ ಇತ್ತು. ಇದು ಹಿಂದಿನ ದಶಕದಲ್ಲಿ ಇದ್ದ ಬೆಳವಣಿಗೆ (ಶೇ.೨೬.೭೫) ಪ್ರಮಾಣಕ್ಕಿಂತ ಶೇ.೫.೬೩ ಅಂಶಗಳಷ್ಟು ಕಡಿಮೆಯಾಗಿತ್ತು. ೧೯೮೧ – ೯೧ರ ದಶಕದಲ್ಲಿ ಗದಗ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ (ಶೇ.೧೫.೫೬)ವು ರಾಜ್ಯಮಟ್ಟದ ಜನಸಂಖ್ಯೆ ಯ ಬೆಳವಣಿಗೆ ಪ್ರಮಾಣಕ್ಕಿಂತ ತುಂಬಾ ಕಡಿಮೆ ಇರುವುದು ಸ್ವಾಗತಾರ್ಹ ಸಂಗತಿಯಾಗಿದೆ.

ಕೋಷ್ಟಕ .೧: ಗದಗ ಜಿಲ್ಲೆಯ ಜನಸಂಖ್ಯೆ : ೧೯೬೧ ರಿಂದ ೧೯೯೧

ತಾಲ್ಲೂಕುಗಳು

೧೯೬೧

೧೯೭೧

೧೯೮೧

೧೯೯೧

ಗದಗ ೧,೭೨,೮೪೯ ೨,೦೬,೯೦೮
(೧೯.೭೦)
೨,೫೪,೨೯೯
(೨೨.೯೦)
೨,೮೯,೯೦೪
(೧೪.೦೦)
ಮುಂಡರಗಿ ೬೦೦೫೦ ೭೬೨೦೭
(೨೧.೯೧)
೮೭೫೨೬
(೧೯.೫೬)
೧,೦೧,೭೯೪
(೧೬.೩೧)
ನರಗುಂದ ೪೧೯೪೫  ೫೩೪೩೪
(೨೭.೩೯)
೬೮೪೮೭
(೨೮.೧೭)
೮೬೬೯೧
(೨೬.೫೮)
ರೋಣ ೧,೫೦,೦೯೬ ೧,೭೧,೦೩೭
(೧೩.೯೫)
೧,೯೩,೭೮೭
(೧೩.೩೦)
೨,೨೦,೯೭೩
(೧೪.೦೨)
ಶಿರಹಟ್ಟಿ ೯೯೯೭೯ ೧,೧೭,೧೨೬
(೧೭.೧೫)
೧,೩೯,೨೪೬
(೧೮.೮೯)
೧,೫೯,೬೮೦ (೧೪.೬೭)
ಜಿಲ್ಲೆ ೫,೨೪,೯೧೯ ೬,೨೧,೭೧೨
(೧೮.೪೪)
೭,೪೩,೩೪೫
(೧೯.೫೬)
೮,೫೯,೦೪೨
(೧೫.೫೬)

ಟಿಪ್ಪಣಿ : ಆವರಣದಲ್ಲಿರುವ ಸಂಖ್ಯೆಗಳು ದಶಕವಾರು ಬೆಳವಣಿಗೆ ಪ್ರಮಾಣವನ್ನು ತೋರಿಸುತ್ತವೆ.

ಮೂಲ : ಧಾರವಾಡ ಜಿಲ್ಲಾ ಗ್ಯಾಸೆಟಿಯರ್ ೧೯೯೫ ಪು : ೧೬೭೧೬೯.

ಗದಗ ಜಿಲ್ಲೆಯ ಜನಸಂಖ್ಯೆ ೧೯೮೧ರಲ್ಲಿ ೭.೪೬ ಲಕ್ಷವಿತ್ತು. ೧೯೯೧ರಲ್ಲಿ ಅದು ೮.೫೯ ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ ದಶಕದಲ್ಲಿ ಉಂಟಾದ ಜನಸಂಖ್ಯೆಯ ನಿವ್ವಳಏರಿಕೆ ೧.೧೬ ಲಕ್ಷ. ೧೯೮೧ – ೯೧ರ ದಶಕದಲ್ಲಿ ಉಂಟಾದ ಜನಸಂಖ್ಯೆಯ ಏರಿಕೆ ಶೇ.೧೫.೫೬. ಅತ್ಯಂತ ಸ್ವಾಗತರ್ಹವಾದ ಸಂಗತಿಯೆಂದರೆ ೧೯೮೧ – ೯೧ ದಶಕದಲ್ಲಿನ ಗದಗ ಜಿಲ್ಲೆಯ ಜನ ಸಂಖ್ಯೆಯ ಬೆಳವಣಿಗೆ ಪ್ರಮಾಣ (ಶೇ.೧೫.೫೬)ವು ೧೯೭೧ – ೮೧ರ ದಶಕದಲ್ಲಿ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ (ಶೇ.೧೯.೫೬)ಕ್ಕಿಂತ ಕಡಿಮೆ ಇದೆ. ಈ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆ ಗತಿಯು ಇಳಿಮುಖವಾಗಿದೆ. ಗದಗ ಜಿಲ್ಲೆಯಲ್ಲಿ ಜನಸಂಖ್ಯೆಯ ಬೆಳವಣಿಗೆ ಗತಿ ಅಧಿಕವಾಗಿರುವ ತಾಲ್ಲೂಕ್ಕೆಂದರೆ ನರಗುಂದ. ೧೯೮೧ – ೯೧ರಲ್ಲಿ ಆ ತಾಲ್ಲೂಕಿನ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಶೇ.೨೬.೫೮. ನರಗುಂದ ತಾಲೂಕನ್ನು ಬಿಟ್ಟು ಉಳಿದ ನಾಲ್ಕು ತಾಲ್ಲೂಕಗಳಲ್ಲಿನ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಗದಗ ಜಿಲ್ಲಾ ಸರಾಸರಿ ಪ್ರಮಾಣಕ್ಕಿಂತ ಕಡಿಮೆ ಇದೆ. ಈ ಬಗೆಯ

ಕೋಷ್ಟಕ .೨: ರಾಜ್ಯದಲ್ಲಿ ಲಿಂಗ ಪರಿಮಾಣವು ೧೦೦೦ಕ್ಕಿಂತ ಅಧಿಕವಿರುವ ತಾಲ್ಲೂಕುಗಳು

ಜಿಲ್ಲೆ

ತಾಲೂಕುಗಳು

ಲಿಂಗ ಪರಿಮಾಣ

ಸ್ಥಾನ

೦೧.ತುಮಕೂರು ಕುಣಿಗಲ್  ೧೦೦೫  ೧೭
೦೨.ಶಿವಮೊಗ್ಗ ತೀರ್ಥಹಳ್ಳಿಹೊಸನಗರ  ೧೦೩೬೧೦೧೨  ೫೧೪
೦೩.ಚಿಕ್ಕಮಗಳೂರು ಶೃಂಗೇರಿಎನ್.ಆರ್.ಪುರ

ಕೊಪ್ಪ

 ೧೦೨೦೧೦೦೨

೧೦೧೨

 ೧೨೨೦

೧೩

೦೪.ಹಾಸನ ಹೊಳೆನರಸೀಪುರಚೆನ್ನರಾಯಪಟ್ಟಣ

ಅರಕಲಗೂಡು

ಆಲೂರು

 ೧೦೦೮೧೦೩೦

೧೦೦೦

೧೦೦೮

 ೧೫೮

೨೨

೧೬

೦೫.ಮಂಡ್ಯ ನಾಗಮಂಗಲಕೃಷ್ಣರಾಜಪೇಟೆ  ೧೦೨೭೧೦೦೫  ೯೧೮
೦೬.ಉಡುಪಿ ಉಡುಪಿಕುಂದಾಪುರ

ಕಾರ್ಕಳ

 ೧೧೧೩೧೧೫೩

೧೧೪೭

 ೪೨

೦೭.ದಕ್ಷಿಣ ಕನ್ನಡ ಮಂಗಳೂರುಬೆಳ್ತಂಗಡಿ

ಬಂಟ್ವಾಳ

 ೧೦೩೦೧೦೨೭

೧೦೩೩

 ೭೧೦

೦೮.ಗದಗ ರೋಣ  ೧೧೭೮  ೧
೦೯.ಬಾಗಲಕೋಟೆ ಬೀಳಗಿ  ೧೦೦೦  ೨೧
೧೦.ಉತ್ತರ ಕನ್ನಡ ಹೊನ್ನಾವರಭಟ್ಕಳ  ೧೦೦೪೧೦೨೧  ೧೯೧೧

ತಾಲೂಕುವಾರು ಜನಸಂಖ್ಯೆಯ ಬೆಳವಣಿಗೆ ಗತಿಯಲ್ಲಿನ ವ್ಯತ್ಯಾಸ ನಮಗೆ ಒಂದು ಸೂಚನೆಯಾಗಬೇಕು. ಅದೇ ನೆಂದರೆ ಈ ಜಿಲ್ಲೆಯಲ್ಲಿ ಜನಸಂಖ್ಯೆಯ ಬೆಳವಣಿಗೆ ನಿಯಂತ್ರಣ ಕಾರ್ಯಕ್ರಮ ಯಾವ ತಾಲ್ಲೂಕಿನಲ್ಲಿ ನೆಲೆಗೊಳ್ಳಬೇಕು ಎಂಬುದು ಸ್ಪಷ್ಟವಾಗುತ್ತದೆ.

ರೋಣ ತಾಲ್ಲೂಕಿನ ವಿಶಿಷ್ಟತೆ : ಲಿಂಗ ಪರಿಮಾಣ

ಕರ್ನಾಟಕದ ೧೦ ಜಿಲ್ಲೆಗಳಿಗೆ ಸೇರಿದ ೨೨ ತಾಲ್ಲೂಕುಗಳಲ್ಲಿ ಮಾತ್ರ ಲಿಂಗ ಪರಿಮಾಣವು ೧೦೦೦ಕ್ಕಿಂತ ಅಧಿಕವಾಗಿವಾಗಿದೆ. ಅದನ್ನು ಕೋಷ್ಟಕ ೩.೨ರಲ್ಲಿ ತೋರಿಸಲಾಗಿದೆ.

ಕರ್ನಾಟಕದಲ್ಲಿ ಲಿಂಗ ಪರಿಮಾಣವು ೧೦೦೦ಕ್ಕಿಂತ ಅಧಿಕವಾಗಿರುವ ೨೨ ತಾಲ್ಲೂಕುಗಳಲ್ಲಿ ಅತ್ಯಧಿಕ ೧೧೭೮ ಗದಗ ಜಿಲ್ಲೆಯಲ್ಲಿರುವ ರೋಣ ತಾಲ್ಲೂಕಿನಲ್ಲಿದೆ. ಲಿಂಗ ಪರಿಮಾಣವು ಅತ್ಯಧಿಕವಿರುವ ತಾಲೂಕು ಗದಗ ಜಿಲ್ಲೆಯಲ್ಲಿರುವುದು ಕುತೂಹಲಮಹುಟ್ಟಿಸುವ ಸಂಗತಿಯಾಗಿದೆ. ಏಕೆಂದರೆ ಗದಗ ಜಿಲ್ಲೆಯ ಉಳಿದ ನಾಲ್ಕು ತಾಲ್ಲೂಕುಗಳಲ್ಲಿ ಮತ್ತು ಗದಗದ ತಾಯಿ ಜಿಲ್ಲೆಯಾದ ಧಾರವಾಡ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಮತ್ತು ಹಾವೇರಿ ಜಿಲ್ಲೆಯ ಏಳು ತಾಲ್ಲೂಕು ಗಳಲ್ಲಿ ಲಿಂಗ ಪರಿಮಾಣವು ೧೦೦೦ಕ್ಕಿಂತ ಕಡಿಮೆ ಇದೆ.

ಲಿಂಗ ಪರಿಮಾಣವು ೧೦೦೦ಕ್ಕಿಂತ ಅಧಿಕವಿರುವ ೨೨ ತಾಲ್ಲೂಕುಗಳಲ್ಲಿ ೧೮ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿದ್ದರೆ ಕೇವಲ ನಾಲ್ಕು ತಾಲ್ಲುಕುಗಳು ಉತ್ತರ ಕರ್ನಾಟಕದಲ್ಲಿವೆ. ಭಾರತದ ಮತ್ತು ಕರ್ನಾಟಕ ಮಟ್ಟದಲ್ಲಿ ಲಿಂಗ ಪರಿಮಾಣವು ಕಡಿಮೆಯಾಗುತ್ತಿರುವುದು ಸಾರ್ವತ್ರಿಕ ಲಕ್ಷಣವಾಗಿರುವಾಗ ಕರ್ನಾಟಕದ ೨೨ ತಾಲ್ಲೂಕುಗಳಲ್ಲಿ ಮತ್ತು ಮುಖ್ಯವಾಗಿ ರೋಣ ತಾಲ್ಲೂಕಿನಲ್ಲಿ ಅದು ೧೦೦೦ಕ್ಕಿಂತ ಅಧಿಕವಾಗಿರುವುದು ಅಧ್ಯಯನಕ್ಕೆ ಯೋಗ್ಯವಾದ ಸಂಗತಿಯಾಗಿದೆ.

ಅಮರ್ತ್ಯಸೇನ್ ಮತ್ತು ಜೀನ್‌ಡ್ರಿಜ್ ಅವರುಗಳು ತಮ್ಮ ಅಧ್ಯಯನಗಳಲ್ಲಿ ಲಿಂಗ ಪರಿಮಾಣವು ೧೦೦೦ಕ್ಕಿಂತ ಕಡಿಮೆ ಇರುವ ಸಂಗತಿಯನ್ನು ಲಿಂಗ ತಾರತಮ್ಯದ ಸೂಚಿಯನ್ನಾಗಿ ಬಳಸಿದ್ದಾರೆ. ಮಹಿಳೆಯರ ಬಗ್ಗೆ ಸಮಾಜವು ತಳೆದಿರುವ ಪಕ್ಷಪಾತ ಧೋರಣೆಯ ಸಂಕೇತದಂತೆ ೧೦೦೦ಕ್ಕಿಂತ ಕಡಿಮೆ ಇರುವ ಲಿಂಗ ಪರಿಮಾಣವನ್ನು ಸೆನ್‌ – ಡ್ರೀಜ್‌ ಅವರು ತಮ್ಮ ಅಧ್ಯಯನಗಳಲ್ಲಿ ವಿಶ್ಲೇಷಣೆ ನಡೆಸಿದ್ದಾರೆ. ಲಿಂಗ ಪರಿಮಾಣವು ಉತ್ತಮವಾಗಿರುವ ೧೦೦೦ಕ್ಕಿಂತ ಅಧಿಕವಾಗಿ ರುವ ಕೇರಳವನ್ನು ಇದಕ್ಕೆ ಅವರು ಉದಾಹರಣೆಗೆ ಎತ್ತಿಕೊಳ್ಳುತ್ತಾರೆ.

ರೋಣ ತಾಲ್ಲೂಕಿನಲ್ಲಿ ಲಿಂಗ ಪರಿಮಾಣವು ರಾಜ್ಯದಲ್ಲೇ ಅತ್ಯಧಿಕವೆನ್ನಬಹುದಾದ ೧೧೭೮ ಇದೆ. ಲಿಂಗ ಪರಿಮಾಣವು ಉತ್ತಮವಾಗಿರುವ ರೋಣ ತಾಲ್ಲೂಕಿನಲ್ಲಿ ಮಹಿಳೆಯರ ಸ್ಥಿತಿ – ಗತಿ ಹಾಗೂ ಸ್ಥಾನಮಾನಗಳು ಉತ್ತಮವಾಗಿವೆ ಎಂದು ಭಾವಿಸಿದರೆ ತಪ್ಪಾದೀತು. ಕೋಷ್ಟಕ ೩.೩ರಲ್ಲಿ ಸಾಕ್ಷರತೆ ಹಾಗೂ ಜನಸಂಖ್ಯೆಯ ಬೆಳವಣಿಗೆ ಪ್ರಮಾಣವನ್ನು ತಾಲ್ಲೂಕುವಾರು ತೋರಿಸಿದೆ.

 ಕೋಷ್ಟಕ .:  ತಾಲ್ಲೂಕುಗಳ ಸಾಕ್ಷರತೆ (ಶೇಕಡ) ಮತ್ತು ಜನಸಂಖ್ಯೆಯ ಬೆಳವಣಿಗೆಯ ಪ್ರಮಾಣ

ತಾಲ್ಲೂಕುಗಳು

ಸಾಕ್ಷರತೆ ಶೇಕಡ

ಜನಸಂಖ್ಯೆಯ ಬೆಳವಣಿಗೆ ಪ್ರಮಾಣ (ಶೇಕಡ)

ಮಹಿಳೆಯರು ಪುರುಷರು
ಗದಗಮುಂಡರಗಿ

ನರಗುಂದ

ರೋಣ

ಶಿರಹಟ್ಟಿ

ಗದಗ ಜಿಲ್ಲೆ

೪೭.೫೯೩೧.೭೦

೩೫.೧೮

೩೫.೬೯

೨೮.೯೨

೩೭.೯೫

 ೭೫.೯೧೬೩.೬೭

೭೦.೧೧

೭೩.೯೫

೫೩.೭೨

೬೯.೨೫

 ೧೪.೦೦೧೬.೩೧

೨೬.೫೮

೧೪.೦೨

೧೪.೬೭

೧೫.೫೬

ಜನಸಂಖ್ಯೆಯ ಬೆಳವಣಿಗೆ ಪ್ರಮಾಣದಲ್ಲಿ ಮಾತ್ರ ಗದಗ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಇರುವುದು ರೋಣ ತಾಲ್ಲೂಕಿನಲ್ಲಿ ಎಂಬುದು ಕೋಷ್ಟಕದಿಂದ ಸ್ಪಷ್ಟವಾಗುತ್ತದೆ. ಆದರೆ ಮಹಿಳೆಯರ ಸಾಕ್ಷರತೆ ಸಂಬಂಧಿಸಿದಂತೆ ಈ ತಾಲ್ಲೂಕಿನ ಸ್ಥಾನ ಜಿಲ್ಲೆಯಲ್ಲಿ ಎರಡನೆಯ ಸ್ಥಾನವಿದೆ.

ವರ್ಷಗಳ ವಯೋಮಾನದ ಮಕ್ಕಳ ಪ್ರಮಾಣ

ಸಾಮಾನ್ಯವಾಗಿ ಒಂದು ಪ್ರದೇಶದ ಸಾಕ್ಷರತೆಯನ್ನು ಆ ಪ್ರದೇಶದ ೭ ವರ್ಷ ಮತ್ತು ೭ ವರ್ಷಕ್ಕೂ ಮೇಲ್ಪಟ್ಟ ವಯೋಮಾನದ ಜನಸಂಖ್ಯೆಯನ್ನು ಪರಿಗಣಿಸಿ ಮಾಪನ ಮಾಡಲಾಗುತ್ತದೆ. ಇದಕ್ಕೆ ಅನುಕೂಲವಾಗುವಂತೆ ಜನ ಸಂಖ್ಯೆಯ ೦ – ೬ ವರ್ಷಗಳ ವಯೋಮಾನದ ಮಕ್ಕಳ ಸಂಖ್ಯೆಯನ್ನು ಜನಗಣತಿ ವರದಿಗಳಲ್ಲಿ ನೀಡಲಾಗುತ್ತದೆ. ಈ ೦ – ೬ ವರ್ಷಗಳ ವಯೋಮಾನದ ಮಕ್ಕಳ ಸಂಖ್ಯೆಯನ್ನು ಒಂದು ಪ್ರದೇಶದ ಜನಸಂಖ್ಯೆಯ ಬೆಳವಣಿಗೆಯ ಒತ್ತಡದ ಮಾಪಕವಾಗಿ ಬಳಸಬಹುದಾಗಿದೆ. ಸಾಮಾನ್ಯವಾಗಿ ಜನನ ಪ್ರಮಾಣ, ಜನಸಾಂದ್ರತೆ, ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಮುಂತಾದವುಗಳನ್ನು ಜನಸಂಖ್ಯೆಯ ಬೆಳವಣಿಗೆಗೆ ಒತ್ತಡವನ್ನು ಅಳೆಯಲು ಬಳಸುವ ಮಾನದಂಡಗಳಾಗಿವೆ.

ಯಾವ ದೇಶ/ಪ್ರದೇಶ ತೀವ್ರಗತಿಯಲ್ಲಿ ಬೆಳೆಯುತ್ತಿರುತ್ತದೆಯೋ ಆ ದೇಶ/ಪ್ರದೇಶದ ಜನಸಂಖ್ಯೆಯನ್ನು ‘ಎಳೆತನ ದಿಂದ ಕೂಡಿರುವ ಜನಸಂಖ್ಯೆ’ ಎಂದು ಕರೆಯುವುದು ರೂಢಿಯಲ್ಲಿದೆ. ಜನನ ಪ್ರಮಾಣ ಮತ್ತು ಸಂತಾನೋತ್ಪತ್ತಿ ಪ್ರಮಾಣ ಅಧಿಕವಿರುವ ಸಂದರ್ಭದಲ್ಲಿ ಎಳೆವಯಸ್ಸಿನ ಮಕ್ಕಳ ಪ್ರಮಾಣ ಅಧಿಕವಾಗಿರುತ್ತದೆ.

ರಾಜ್ಯಮಟ್ಟದಲ್ಲಿ ೦ – ೬ ವಯೋಮಾನದ ಮಕ್ಕಳ ಪ್ರಮಾಣವು ಜನಸಂಖ್ಯೆಯಲ್ಲಿ ಶೇ.೧೬.೬೩ರಷ್ಟಿದೆ. ಆದರೆ ಇದರ ಪ್ರಮಾಣ ದಕ್ಷಿಣ ಕರ್ನಾಟಕದಲ್ಲಿ ಕೇವಲ ಶೇ.೧೫.೧೫ರಷ್ಟಾದರೆ ಉತ್ತರ ಕರ್ನಾಟಕದಲ್ಲಿ ಇದು ಶೇ.೧೮.೬ರಷ್ಟಿದೆ. ಹೈದರಾಬಾದ್ – ಕರ್ನಾಟಕ ಪ್ರದೇಶದಲ್ಲಿ ಇದು ಶೇ.೨೦.೨೨ರಷ್ಟಿದೆ. ಇದರಿಂದ ನಮಗೆ ಸ್ಪಷ್ಟವಾಗುವ ಸಂಗತಿಗಳು ಯಾವುವು? ಉತ್ತರ ಕರ್ನಾಟಕದಲ್ಲಿ ಜನಸಂಖ್ಯೆಯ ಒತ್ತಡವು ದಕ್ಷಿಣ ಕರ್ನಾಟಕದಲ್ಲಿರುವುದಕ್ಕಿಂತ ಅಧಿಕವಾಗಿದೆ. ಉತ್ತರ ಕರ್ನಾಟಕ ಪ್ರದೇಶದಲ್ಲಿ ಬೊಂಬಾಯಿ ಕರ್ನಾಟಕ ಭಾಗದಲ್ಲಿರುವುದಕ್ಕಿಂತ ಅಧಿಕವಾದ ಜನಸಂಖ್ಯೆ ಒತ್ತಡವು ಹೈದರಾಬಾದ್ – ಕರ್ನಾಟಕ ಭಾಗದಲ್ಲಿದೆ.

ಗದಗ ಜಿಲ್ಲೆಯಲ್ಲಿ ಎಷ್ಟು?

ಕರ್ನಾಟಕದ ೨೭ ಜಿಲ್ಲೆಗಳ ಪೈಕಿ ೦ – ೬ ವರ್ಷವಯೋಮಾನದ ಮಕ್ಕಳ ಪ್ರಮಾಣವು ಅತಿ ಕಡಿಮೆ ಉಡುಪಿ ಜಿಲ್ಲೆಯಲ್ಲಿದ್ದರೆ ಅತಿ ಹೆಚ್ಚು ಕೊಪ್ಪಳ ಜಿಲ್ಲೆಯಲ್ಲಿದೆ. ಉಳಿದಂತೆ ಇದರ ಪ್ರಮಾಣವು ಶೇ.೧೩ರಿಂದ ಶೇ.೨೦ರೊಳಗೆ ಹರಿದಾಡುತ್ತದೆ. ಗದಗ ಜಿಲ್ಲೆಯಲ್ಲಿ ೦ – ೬ ವರ್ಷ ವಯೋಮಾನದ ಮಕ್ಕಳ ಪ್ರಮಾಣ ಜನಸಂಖ್ಯೆಯಲ್ಲಿ ಶೇ.೧೮.೩೫ ರಷ್ಟಿದೆ. ರಾಜ್ಯ ಸರಾಸರಿಗಿಂತ ಇದು ಅಧಿಕವಾದುದಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಗದಗ ಜಿಲ್ಲೆಯ ಪಾಲು ಶೇ. ೧.೯೧. ಆದರೆ ರಾಜ್ಯದ ೦ – ೬ ವಯೋಮಾನದ ಮಕ್ಕಳ ಸಂಖ್ಯೆಯಲ್ಲಿ ಗದಗದ ಪಾಲು ಶೇ. ೨.೦೪ರಷ್ಟಿದೆ.

ಕರ್ನಾಟಕ ರಾಜ್ಯದಲ್ಲಿರುವ ೦ – ೬ ವಯೋಮಾನದ ಮಕ್ಕಳ ಸಂಖ್ಯೆ ೭೪.೭೭ ಲಕ್ಷ. ಇದರಲ್ಲಿ ದಕ್ಷಿಣ ಕರ್ನಾಟಕದ ಪಾಲು ಕೇವಲ ೫೨.೫೫. ಆದರೆ ಜನಸಂಖ್ಯೆಯಲ್ಲಿ ದಕ್ಷಿಣ ಕರ್ನಾಟಕದ ಪಾಲು ಶೇ.೬೭.ಉತ್ತರ ಕರ್ನಾಟಕವು ರಾಜ್ಯದ ಜನಸಂಖ್ಯೆಯಲ್ಲಿ ಶೇ.೪೨.೩೩ ಪಡೆದಿದ್ದು ೦ – ೬ ವಯೋಮಾನದ ಮಕ್ಕಳ ಸಂಖ್ಯೆಯಲ್ಲಿ ಮಾತ್ರ ಶೇ.೪೭.೪೫ ಪಾಲು ಪಡೆದಿದೆ. ಈ ಎಲ್ಲ ಸಂಗತಿಗಳ ಆಧಾರದ ಮೇಲೆ ಗದಗ ಜಿಲ್ಲೆಯು ತೀವ್ರಗತಿಯ ಜನಸಂಖ್ಯೆಯ ಬೆಳವಣಿಗೆಗೆ ಒತ್ತಡದಿಂದ ನರಳುತ್ತಿದೆ ಎಂದು ಹೇಳಬಹುದು.

ಜನಸಂಖ್ಯೆಯ ಬೆಳವಣಿಗೆ ಹಿಂದಿನ ಕಾರಣ ಮೀಮಾಂಸೆ

ಗದಗ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆ ಪ್ರಮಾಣವು ಅತ್ಯಂತ ಕೆಳಮಟ್ಟದಲ್ಲಿದೆ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಆದರೆ ಇದರಿಂದ ನಾವು ಸಮಸ್ಯೆಯ ಬಗ್ಗೆ ಉದಾಸೀನ ತಾಳಬಾರದು. ಏಕೆಂದರೆ ಜನಸಂಖ್ಯೆಯ ಬೆಳವಣಿಗೆಯ ಇತರ ಗತಿಶೀಲ ಸಂಗತಿಗಳು ಆಶಾದಾಯಕವಾಗಿಲ್ಲ. ಗದಗ ಜಿಲ್ಲೆಗೆ ಸಮಬಂಧಿಸಿದಂತೆ ಜನಸಂಖ್ಯೆ ಕುರಿತ ಕೆಲವು ಸೂಕ್ಷ್ಮ ಸೂಚಿಗಳು ಲಭ್ಯವಿಲ್ಲ. ಆದ್ದರಿಂದ ಧಾರವಾಡ ಜಿಲ್ಲೆಯ ಜನಸಂಖ್ಯಾ ಸೂಚಿಯನ್ನು ಗದಗ ಜಿಲ್ಲೆಗೂ ಅನ್ವಯಿಸಿ ಇಲ್ಲಿ ವಿಶ್ಲೇಷಣೆ ನಡೆಸಲಾಗಿದೆ. ಕೆಳಗೆ ಕೋಷ್ಟ ೩.೪ರಲ್ಲಿ ಜನಸಂಖ್ಯೆಗೆ ಸಂಬಂಧಿಸಿದ ಕೆಲವು ಸೂಕ್ಷ್ಮ ಸೂಚಿಗಳನ್ನು ನೀಡಲಾಗಿದೆ. ಆ ಸೂಚಿಗಳನ್ನು ರಾಜ್ಯಮಟ್ಟದ ಸೂಚಿಗಳ ಜೊತೆ ಹೋಲಿಸಲಾಗಿದೆ.

ಕೋಷ್ಟಕ .: ಜನಸಂಖ್ಯೆಯ ಬೆಳವಣಿಗೆಯ ಗತಿಶೀಲ ಸೂಚಿಗಳು

ಧಾರವಾಡ (ಗದಗ)

ಕರ್ನಾಟಕ

೧. ಒಟ್ಟು ಪ್ರಜನೋತ್ಪತ್ತಿ ಪ್ರಮಾಣ೨. ಒಟ್ಟು ಜನನ ಪ್ರಮಾಣ ೩.೯೪೩೦.೫೯ ೩.೮೭೩೦.೯೩

ಜನಸಂಖ್ಯೆಯ ಬೆಳವಣಿಗೆಗೆ ಸಂಬಂಧಿಸಿದಂತೆ ನಮಗೆ ಖಚಿತವಾದ ಮಾಹಿತಿ ನೀಡಬಲ್ಲ ಸೂಚನೆಗಳೆಂದರೆ ಪ್ರಜನೋತ್ಪತ್ತಿ ಪ್ರಮಾಣ ಮತ್ತು ಜನನ ಪ್ರಮಾಣ. ತನ್ನ ಸಂತಾನೋತ್ಪತ್ತಿ ಕಾಲಾವಧಿಯಲ್ಲಿ ಒಬ್ಬ ಹೆಣ್ಣುಮಗಳು ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತಾಳೆ.ಎಂಬುದೇ ಪ್ರಜನೋತ್ಪತ್ತಿ ಪ್ರಮಾಣ. ಇದರಲ್ಲಿ ರಾಜ್ಯದಲ್ಲಿ ಧಾರವಾಡ ಜಿಲ್ಲೆಯು ಐದನೆಯ ಸ್ಥಾನದಲ್ಲಿದೆ. ಇನ್ನೊಂದು ಸೂಚಿಯೆಂದರೆ ಜನನ ಪ್ರಮಾಣ. ಜನನ ಪ್ರಮಾಣವು ಗದಗ ಜಿಲ್ಲೆಯಲ್ಲಿ (ಧಾರವಾಡ) ರಾಜ್ಯಮಟ್ಟದ ಸೂಚಿಗಿಂತ ಸ್ವಲ್ಪ ಕಡಿಮೆ ಇದೆ. ಆದರೂ ಸಹ ಅದು ಅಧಿಕವೆಂದೇ ತಿಳಿಯಬೇಕು. ಈ ಕಾರಣಗಳಿಂದಾಗಿ ಗದಗ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆ ಪರಿಯನ್ನು ಕಡೆಗಣಿಸಲು ಸಾಧ್ಯವಿಲ್ಲ.

ಈ ಜಿಲ್ಲೆಯಲ್ಲಿ ಪ್ರಜನೋತ್ಪತ್ತಿ ಪ್ರಮಾಣ ಹಾಗೂ ಜನನ ಪ್ರಮಾಣಗಳು ಅಧಿಕವಿರಲು ಅನೇಕ ಕಾರಣಗಳು ಸಾಧ್ಯ. ಈ ಅಧ್ಯಯನದಲ್ಲಿ ಜನಸಂಖ್ಯೆಯ ಬೆಳವಣಿಗೆ ಮೂಲದಲ್ಲಿರುವ ಸಾಮಾಜಿಕ ಸಂಗತಿಗಳನ್ನು ಗುರುತಿಸಲು ಪ್ರಯತ್ನಿಸ ಲಾಗಿದೆ.

ಈ ಅಧ್ಯಯನದಲ್ಲಿ ಗದಗ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆ ಹಿಂದಿರುವ ಕಾರಣಗಳನ್ನು ಸಮಾಜೋ – ಆರ್ಥಿಕ ನೆಲೆಗಳಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ. ಜನಸಂಖ್ಯೆಯ ಬೆಳವಣಿಗೆಯ ಗತಿಶೀಲ ಪ್ರಕ್ರಿಯೆಯು ಬಹುರೂಪಿಯಾದ ಒಂದು ಸಂಗತಿಯಾಗಿದೆ. ಅದನ್ನು ಕೇವಲ ಗಾತ್ರನಿಷ್ಠ ಹಾಗೂ ವಸ್ತುನಿಷ್ಠ ನೆಲೆಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಜನರ ಅಜ್ಞಾನ – ಅವಿವೇಕವೇ ಜನಸಂಖ್ಯೆಯ ಮಿತಿಮೀರಿದ ಏರಿಕೆಗೆ ಕಾರಣವೆಂದು ಸರಳ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅಧಿಕ ಮಕ್ಕಳನ್ನು ಪಡೆಯುವ ದಂಪತಿಗಳ ತೀರ್ಮಾನದ ಹಿಂದೆ ಒಂದು ಉದ್ದೇಶವಿರುತ್ತದೆ. ಒಂದು ವಿವೇಚನೆ ಇರುತ್ತದೆ.

ಮೊದಲನೆಯದಾಗಿ ಜಿಲ್ಲೆಯು ಕೃಷಿಪ್ರಧಾನ ಆರ್ಥಿಕತೆಯನ್ನು ಹೊಂದಿದೆ. ನರಗುಂದ ತಾಲೂಕು ಬಿಟ್ಟರೆ ಜಿಲ್ಲೆಯಲ್ಲಿರುವುದು ಒಣ ಬೇಸಾಯ. ಈ ಬಗೆಯ ಕೃಷಿ ಚಟುವಟಿಕೆ ಕೈಗೊಳ್ಳಲು ಅಗತ್ಯವಾದ ಶ್ರಮಶಕ್ತಿ ಅಪಾರ. ಇದು ಶ್ರಮಸಾಂದ್ರವಾದ ಚಟುವಟಿಕೆಯಾಗಿದೆ. ಈ ಕಾರಣದಿಂದಾಗಿ ಜನರು ಹೆಚ್ಚು ಮಕ್ಕಳನ್ನು ಬಯಸುತ್ತಾರೆ.

ಎರಡನೆಯದಾಗಿ ಜಿಲ್ಲೆಯಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಅತ್ಯಂತ ಕಡಿಮೆ ಇದೆ. ಜನಸಂಖ್ಯೆಯ ಬೆಳವಣಿಗೆ ಗತಿಗೂ ಮತ್ತು ಮಹಿಳೆಯರ ಸಾಕ್ಷರತೆ ಪ್ರಮಾಣಕ್ಕೂ ನಡುವೆ ಅನ್ಯೋನ್ಯವಾದ ಸಂಬಂಧವಿದೆ. ಜನಸಂಖ್ಯೆಯ ಬೆಳವಣಿಗೆ ಮೇಲೆ ತೀವ್ರ ಪರಿಣಾಮ ಬೀರುವ ಅನೇಕ ಸಂಗತಿಗಳಲ್ಲಿ ಬಹಳ ಮುಖ್ಯವಾದುದು ಮಹಿಳೆಯರ ಸಾಕ್ಷರತೆ.

ಮೂರನೆಯದಾಗಿ, ನಮ್ಮ ಅಧ್ಯಯನದಿಂದ ಕಂಡುಕೊಂಡ ಒಂದು ಬಹುಮುಖ್ಯ ತಥ್ಯವೆಂದರೆ, ಯಾವ ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಅಧಿಕವಾಗಿದೆಯೊ ಆ ಜಿಲ್ಲೆಯಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣವು ಅಧಿಕವಾಗಿರುತ್ತದೆ ಎಂಬುದಾಗಿದೆ. ಗದಗ ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಅಗಾಧವಾಗಿದೆ. ಜಿಲ್ಲೆಯ ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣವು ಶೇ. ೫೩ ರಷ್ಟಿದೆ.

ನಾಲ್ಕನೆಯದಾಗಿ ಗದಗ ಜಿಲ್ಲೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳು ನಿಕೃಷ್ಟವಾಗಿದೆ. ಈ ಸೌಲಭ್ಯಗಳು ಗ್ರಾಮೀಣ ಪ್ರದೇಶದಲ್ಲಿ ಲಭ್ಯವಿಲ್ಲ. ಜಿಲ್ಲೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇವಲ ಕುಟುಂಬ ಯೋಜನೆ ಶಿಬಿರ ನಡೆಸುವ ಕೇಂದ್ರಗಳಾಗಿ ಬಿಟ್ಟಿವೆ. ಸಂತಾನೋತ್ಪತ್ತಿ ಆರೋಗ್ಯ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಗ್ರಾಮೀಣ ಪ್ರದೇಶದಲ್ಲಿ ವಿಸ್ತರಿಸುವ ಅಗತ್ಯವಿದೆ. ಕುಟುಂಬ ಯೋಜನೆಯನ್ನು ಅನುಸರಿಸಬೇಕೆಂದರೂ ಅವು ಲಭ್ಯವಿಲ್ಲದ ಸ್ಥಿತಿ ಇದೆ.

ಕೊನೆಯದಾಗಿ ಜನಸಂಖ್ಯೆಯ ಬೆಳವಣಿಗೆ ತಗ್ಗಿಸಲು ಕುಟುಂಬ ಯೋಜನೆಯೊಂದೆ ಪರಿಣಾಮಕಾರಿ ಮಾರ್ಗ ಎಂದು ಜನರು ನಂಬಿರುವಂತೆ ಕಾಣುತ್ತದೆ. ಇದು ಸರಿಯಲ್ಲ. ಕುಟುಂಬ ಯೋಜನೆಗಿಂತ ಅತ್ಯಂತ ಪರಿಣಾಮಕಾರಿಯಾದ ಮಾರ್ಗವೆಂದರೆ ಮಹಿಳೆಯರ ಸಾಕ್ಷರತೆ, ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಸುಧಾರಣೆ, ಮಹಿಳೆಯರ ಉದ್ಯೋಗದ ಅವಕಾಶಗಳ ವಿಸ್ತರಣೆ ಇತ್ಯಾದಿ.

ಗದಗ ಜಿಲ್ಲೆಯ ಆರೋಗ್ಯ ಸಂಪತ್ತು

ಆರೋಗ್ಯವನ್ನು ‘ಸಂಪತ್ತು’ ಎಂದು ನೋಡುವ ಪರಿಯೊಂದು ಪ್ರಚಲಿತದಲ್ಲಿದೆ. ‘ಆರೋಗ್ಯ ಸಂಪತ್ತು’ ಎಂಬ ನುಡಿಗಟ್ಟಿನಲ್ಲಿ ಇದನ್ನು ನೋಡಬಹುದು. ಆದರೆ ಸ್ವಾತಂತ್ರ್ಯಾನಂತರ ಭಾರತದಲ್ಲಿ – ಕರ್ನಾಟಕದಲ್ಲಿ ಜನರ ಆರೋಗ್ಯ ಭಾಗ್ಯದ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯಲಿಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಅದು ಅಷ್ಟು ಮಹತ್ವದ್ದೆಂದು ಪರಿಗಣಿತವಾಗಲಿಲ್ಲ. ಸಾಕ್ಷರತೆಯಿಂದ ಆರೋಗ್ಯವನ್ನು ಸಾಂಪ್ರದಾಯಿಕ ಅಭಿವೃದ್ಧಿ ವಿಚಾರ ಪ್ರಣಾಳಿಕೆಯ ಒಂದು ಸಾಧನವೆಂದು – ಸಂಪನ್ಮೂಲವೆಂದು ಮಾತ್ರ ಪರಿಗಣಿಸುತ್ತಾ ಬಂತು. ಆರೋಗ್ಯವಂತನಾದ ಕಾರ್ಮಿಕ ಹೆಚ್ಚು ಸಮರ್ಥವಾಗಿ ದುಡಿಯುತ್ತಾನೆ. ಆರೋಗ್ಯವಂತನಾದ ಕೆಲಸಗಾರ ನಿಯಮಿತವಾಗಿ ಕೆಲಸಕ್ಕೆ ಹಾಜರಾಗುತ್ತಾನೆ. ಆರೋಗ್ಯವಂತ ಶ್ರಮಶಕ್ತಿ ಅಭಿವೃದ್ಧಿಯ ಗತಿಯನ್ನು ಉತ್ತಮಪಡಿಸುತ್ತದೆ – ಈ ಕಾರಣಗಳಿಗಾಗಿ ಆರೋಗ್ಯವನ್ನು ಮಹತ್ವದ್ದೆಂದು ಸಾಂಪ್ರದಾಯಿಕ ಅಭಿವೃದ್ಧಿ ವಿಚಾರ ಪ್ರಣಾಳಿಕೆ ಪರಿಗಣಿಸಿತ್ತು. ಈ ಬಗೆಯ ಚಿಂತನೆಯಲ್ಲಿ ಆಕ್ಷೇಪಿಸ ಬಹುದಾದುದು ಏನೂ ಇಲ್ಲ. ಆರೋಗ್ಯವು ಅಭಿವೃದ್ಧಿಯ ಗತಿಯನ್ನು ಉತ್ತಮಪಡಿಸಬಲ್ಲುದು. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಆರೋಗ್ಯಕ್ಕೆ ಉಪಕರಣವಾದಿ ಪಾತ್ರವಿದೆ.

ಅಮರ್ತ್ಯಸೇನ್ ಅವರು ಈ ಬಗೆಯ ಚಿಂತನೆಯ ಮಿತಿಗಳನ್ನು ತೋರಿಸಿಕೊಟ್ಟಿದ್ದಾರೆ. ಅಭಿವೃದ್ಧಿಯ ಗತಿಯನ್ನು ಹೆಚ್ಚಿಸುವ ಸಾಧನವಾಗಿ ಆರೋಗ್ಯಭಾಗ್ಯ ಕೆಲಸಮಾಡಬಲ್ಲದು. ಇದನ್ನು ಅಮರ್ತ್ಯಸೇನ್ ಅಲ್ಲಗಳೆಯುವುದಿಲ್ಲ. ಆದರೆ ಅವರ ಪ್ರಕಾರ ಆರೋಗ್ಯ ಭಾಗ್ಯಕ್ಕೆ ತನ್ನದೇ ಆದ ಮಹತ್ವವಿದೆ. ಆರೋಗ್ಯವಂತ ಬದುಕೇ ಉತ್ತಮ ಬದುಕು. ಆರೋಗ್ಯವನ್ನು ಅಭಿವೃದ್ಧಿಯ ಅಂರ್ಗತ ಗುಣವಾಗಿ ಸೆನ್ ಪ್ರರಿಭಾವಿಸುತ್ತಾರೆ. ಆರೋಗ್ಯವು ಜನರ ಧಾರಣಶಕ್ತಿಯನ್ನು ಸಂವರ್ದಿಸುವ ಒಂದು ಗುಣವಾಗಿದೆ. ಸಮಾಜದಲ್ಲಿ ಹರಿದು ಬರುವ ಅವಕಾಶಗಳನ್ನು ತನ್ನದಾಗಿಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಅವು ಒದಗಿಸುತ್ತದೆ. ಅಮರ್ತ್ಯಸೇನ್ ಆರೋಗ್ಯಭಾಗ್ಯದ ಮಹತ್ವವನ್ನು ಹೀಗೆ ಗುರುತಿಸಿದ್ದಾರೆ.

೧. ಅಂತಸತ್ವವಾದಿ ಮಹತ್ವ: ಆರೋಗ್ಯವಂತರಾಗಿರುವದೇ ಅಭಿವೃದ್ಧಿ. ಆರೋಗ್ಯಭಾಗ್ಯವನ್ನು ವೃದ್ಧಿಸುವುದೇ ಅಭಿವೃದ್ಧಿ. ಆರೋಗ್ಯವೇ ಅಭಿವೃದ್ಧಿ.

೨. ಉಪದರಣವಾದಿ ಮಹತ್ವ: ಆರೋಗ್ಯ ಸೌಲಭ್ಯವು ವ್ಯಕ್ತಿಯ ಕತೃತ್ವಶಕ್ತಿಯನ್ನು ಉತ್ತಮಪಡಿಸಬಲ್ಲದು, ಅವಕಾಶಗಳನ್ನು ತನ್ನದಾಗಿಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಅದು ಜನರಿಗೆ ಒದಗಿಸುತ್ತದೆ. ಇದರಿಂದಾಗಿ ಉಂಟಾಗುವ ವರಮಾನ – ಉತ್ಪನ್ನಗಳಲ್ಲಿನ ಏರಿಕೆಯು ವ್ಯಕ್ತಿಯ ಸಾಮರ್ಥ್ಯವನ್ನು, ಸ್ವಾತಂತ್ರ್ಯವನ್ನು ಸಂವರ್ಧಿಸುತ್ತದೆ.

೩. ಸಾಮಾಜಿಕ ಮಹತ್ವ: ಆರೋಗ್ಯ ಭಾಗ್ಯವು ಸಾಮಾಜಿಕ ಸ್ಥಿತಿಯನ್ನು ಉತ್ತಮಮಾಡಬಲ್ಲುದು. ಸ್ವಸ್ಥನಾದ ಮನುಷ್ಯನ ಭೌದ್ಧಿಕ ಬೆಳವಣಿಗೆ ಉನ್ನತವಾಗಿರುತ್ತದೆ. ರೋಗ – ರುಜಿನಗಳಿಂದ ಉಂಟಾಗುವ ಸಾವು – ನೋವುಗಳು, ದುಡಿಮೆಗೆ ಗೈರು ಹಾಜರಿ ಮುಂತಾದವು ಸಮಾಜಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ಜನರು ಅಪ್ರಾಪ್ತ ವಯಸ್ಸಿನಲ್ಲಿ ತೀರಿಕೊಂಡರೆ ಅದು ಸಮಾಜಕ್ಕೆ ಆಗುವ ನಷ್ಟವಾಗಿದೆ. ಕುಟುಂಬದ ಸದಸ್ಯರೊಬ್ಬರು ಅಸ್ವಸ್ಥರಾದರೆ ಇಡೀ ಕುಟುಂಬದ ಎಲ್ಲ ಸದಸ್ಯರ ಮಾನಸಿಕ ಸ್ವಾಸ್ಥ್ಯ ಕೆಡುತ್ತದೆ. ಆದ್ದರಿಂದ ಆರೋಗ್ಯ ಭಾಗ್ಯಕ್ಕೆ ತೀವ್ರ ಸ್ವರೂಪದ ಸಾಮಾಜಿಕ ಮಹತ್ವ ಇದೆ. ಅದು ಅಭಿವೃದ್ಧಿಯ ಉಪಕರಣವೂ ಹೌದು ಹಾಗೂ ಅಭಿವೃದ್ಧಿಯನ್ನು ಪ್ರತಿಫಲಿಸುವ ಸಂಗತಿಯೂ ಹೌದು. ಒಂದು ದೃಷ್ಟಿಯಿಂದ ಹೇಳುವುದಾದರೆ ಆರೋಗ್ಯ ಭಾಗ್ಯವೇ ಅಭಿವೃದ್ಧಿ.

ಆರೋಗ್ಯ ಸೂಚಿಗಳು

ಗದಗ ಜಿಲ್ಲೆಗೆ ಸಂಬಂಧಿಸಿದಂತೆ ಆರೋಗ್ಯ ಸೂಚಿಗಳು ದೊರೆಯುವುದಿಲ್ಲ. ಇದರ ಮಾತೃಜಿಲ್ಲೆಯಾದ ಧಾರವಾಡಕ್ಕೆ ಸಂಬಂಧಿಸಿದಂತೆ ಆರೋಗ್ಯ ಸೂಚಿಗಳು ದೊರೆಯುತ್ತವೆ. ನಮ್ಮ ಅಧ್ಯಯನದಲ್ಲಿ ಧಾರವಾಡ ಜಿಲ್ಲೆಯ ಆರೋಗ್ಯ ಸೂಚಿಗಳನ್ನು ಗದಗ ಜಿಲ್ಲೆಗೆ ಅನ್ವಯಿಸಿ ವಿಶ್ಲೇಣೆ ನಡಿಸಿದ್ದೇವೆ. ಧಾರವಾಡ ಜಿಲ್ಲೆಯನ್ನು ವಿಭಜಿಸಿ ಗದಗ ಜಿಲ್ಲೆಯನ್ನು ರೂಪಿಸಲಾಗಿದೆ. ಆದ್ದರಿಂದ ಧಾರವಾಡ ಜಿಲ್ಲೆಗೆ ಸಂಬಂಧಿಸಿದ ಆರೋಗ್ಯ ಸೂಚಿಗಳು ಗದಗ ಜಿಲ್ಲೆಗೂ ಅನ್ವಯವಾಗುತ್ತದೆ. ಏಕೆಂದರೆ ಅವಿಭಜಿತ ಧಾರವಾಡ ಜಿಲ್ಲೆಯ ಭಾಗವಾಗಿ ಗದಗ ಜಿಲ್ಲೆ ಇತ್ತು.

ಸಾಮಾನ್ಯವಾಗಿ ಭಾವಿಸಿರುವಂತೆ ಯಾವ ದೇಶ/ಪ್ರದೇಶದಲ್ಲಿ ಜನಸಂಖ್ಯೆಯ ಬೆಳವಣಿಗೆ ತೀವ್ರವಾಗಿರುತ್ತದೊ ಅಲ್ಲಿ ಆರೋಗ್ಯ ಸೂಚಿಗಳು ಕೆಳಮಟ್ಟದಲ್ಲಿರುತ್ತವೆ ಎನ್ನಲಾಗಿದೆ. ಜನಸಂಖ್ಯೆಯ ಮಿತಿಮೀರಿದ ಬೆಳವಣಿಗೆ ಗತಿಯೇ ಆರೋಗ್ಯ ದುಸ್ಥಿತಿಯ ಸೂಚ್ಯಂಕವಾಗಿ ಬಿಡುತ್ತದೆ. ಗದಗ ಜಿಲ್ಲೆಗೆ ಸಂಬಂಧಿಸಿದಂತೆ ಜನಸಂಖ್ಯೆಯ ಬೆಳವಣಿಗೆ ಗತಿ ಮಂದವಾಗಿದೆ. ಇದರಿಂದಾಗಿ ಈ ಜಿಲ್ಲೆಯ ಆರೋಗ್ಯ ಸೂಚಿಗಳು ಉತ್ತಮವಾಗಿವೆಯೆಂದು ಹೇಳಬಹುದು.

ಕೋಷ್ಟಕ ೩.೭ ರಲ್ಲಿ ಧಾರವಾಡ ಜಿಲ್ಲೆ ಹಾಗೂ ರಾಜ್ಯಮಟ್ಟದ ಆರೋಗ್ಯ ಸಂಬಂಧ ಸೂಚಿಗಳನ್ನು ನೀಡಲಾಗಿದೆ. ಅನೇಕ ವಿಷಯಗಳಲ್ಲಿ ಗದಗ ಜಿಲ್ಲೆಯ ಅಂದರೆ ಧಾರವಾಡ ಜಿಲ್ಲೆಯ ಆರೋಗ್ಯ ಸೂಚಿಗಳು ರಾಜ್ಯಮಟ್ಟದ ಆರೋಗ್ಯ ಸೂಚಿಗಳಂತೆ ಉತ್ತಮವಾಗಿವೆ. ಜನಸಂಖ್ಯೆಯ ವಾರ್ಷಿಕ ಬೆಳವಣಿಗೆ ಪ್ರಮಾಣ ಹಾಗೂ ಜನನ ಪ್ರಮಾಣಗಳು ರಾಜ್ಯ ಮಟ್ಟದಲ್ಲಿರುವುದಕ್ಕಿಂತ ಗದಗ ಜಿಲ್ಲೆಯಲ್ಲಿ ಕಡಿಮೆ ಇವೆ. ಅದೇ ರೀತಿ ಶಿಶುಗಳ ಮರಣ ಪ್ರಮಾಣ ಹಾಗೂ ಆರ್ಯುಮಾನಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲೆಯ ಸ್ಥಿತಿಯು ರಾಜ್ಯಮಟ್ಟದ ಸ್ಥಿತಿಗಿಂತ ಉತ್ತಮವಾಗಿದೆ.

ಈಗಾಗಲೇ ತಿಳಿಸಿರುವಂತೆ ಧಾರವಾಡ ಜಿಲ್ಲೆಯ ಆರೋಗ್ಯ ಸೂಚಿಗಳು ರಾಜ್ಯಮಟ್ಟದ ಆರೋಗ್ಯ ಸೂಚಿಗಿಂತ ಉತ್ತಮವಾಗಿವೆ, ಆದರೆ ವೈದ್ಯಕೀಯ ಸೌಲಭ್ಯಕ್ಕೆ ಸಂಬಂಧಿಸಿದಂತೆ ಮಾತ್ರ ಜಿಲ್ಲೆಯ ಸ್ಥಿತಿಯು ರಾಜ್ಯಮಟ್ಟದ ಸ್ಥಿತಿಗಿಂತ ಹಿಂದುಳಿದಿದೆ. ಇದರ ಬಗ್ಗೆ ಮುಂದೆ ಚರ್ಚೆ ನಡೆಸಲಾಗಿದೆ. ಜನಸಂಖ್ಯೆಗೆ ಸಂಬಂಧಿಸಿದಂತೆ ಒಂದು ಆತಂಕಕಾರಿ ಸಂಗತಿಯೆಂದರೆ ಈ ಜಿಲ್ಲೆಯಲ್ಲಿ ಒಟ್ಟು ಪ್ರಜನೋತ್ಪತ್ತಿ ಪ್ರಮಾಣವು ರಾಜ್ಯಮಟ್ಟದ ಪ್ರಮಾಣಕ್ಕಿಂತ ಅಧಿಕವಾಗಿದೆ. ರಾಜ್ಯಮಟ್ಟದಲ್ಲಿ ಪ್ರಜನೋತ್ಪತ್ತಿ ಪ್ರಮಾಣ ೩.೮೭ ಇದ್ದರೆ ಧಾರವಾಡ ಜಿಲ್ಲೆಯಲ್ಲಿ ಅದು ೩.೪೯ ಇದೆ. (೧೯೯೧) ಪ್ರಜನೋತ್ಪತ್ತಿ ಪ್ರಮಾಣವೆಂದರೆ ಒಬ್ಬ ಮಹಿಳೆ ತನ್ನ ಸಂತಾನೋತ್ಪತ್ತಿ ಕಾಲಾವಧಿಯಲ್ಲಿ ಅಂದರೆ ೧೫ ರಿಂದ ೪೫ ವರ್ಷಗಳ ವಯೋಮಾನದಲ್ಲಿ ಹಡೆಯುವ ಮಕ್ಕಳ ಸರಾಸರಿ ಸಂಖ್ಯೆ. ಈ ಸೂಚಿಯು ಅಧಿಕವಾಗಿರುವುದು ಮಹಿಳೆಯರ ಆರೋಗ್ಯಕರ ದೃಷ್ಟಿಯಿಂದ ತುಂಬಾ ಆಘಾತಕಾರಿಯಾದುದಾಗಿದೆ.

ಕೋಷ್ಠ .: ಜನಸಂಖ್ಯಾ ಮತ್ತು ಆರೋಗ್ಯ ಸೂಚಿಗಳು

ಕ್ರ ಸಂ

ವಿವರಗಳು

ಧಾರವಾಡ

ಕರ್ನಾಟಕ

ಜನಸಂಖ್ಯೆಯ ವಾರ್ಷಿಕ ಬೆಳವಣಿಗೆ ಪ್ರಮಾಣ ೧೯೮೧ – ೯೧ ಶೇ. ೧.೫೬ ಶೇ. ೧.೯
ಜನನ ಪ್ರಮಾಣ (ಪ್ರತಿ ೧೦೦೦ ಜನರಿಗೆ ವಾರ್ಷಿಕ) ೧೯೯೧ ೩೦.೫೯ ೩೦.೯
ಮಹಿಳೆಯರ ವಿವಾಹದ ವಯಸ್ಸು ೧೯೯೧ (ವರ್ಷಗಳಲ್ಲಿ) ೧೮.೩ ೧೮.೦
ಒಟ್ಟು ಪ್ರಜನೋತ್ಪತ್ತಿ ಪ್ರಮಾಣ (TFR) ೩.೯೪ ೩.೮೭
ಶಿಶುಮರಣಪ್ರಮಾಣ : ೧೯೯೧
ಹೆಣ್ಣು :
ಗಂಡು :
ಒಟ್ಟು :
೭೭
೭೯
೭೮
೭೭
೭೬
೭೭
ಮಕ್ಕಳಮರಣಪ್ರಮಾಣ : ೧೯೯೧
ಹೆಣ್ಣು : (೫ ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳು)
ಗಂಡು :
ಒಟ್ಟು :
೯೭
೯೪
೯೫
೯೮
೯೧
೯೦
ಆರ್ಯುಮಾನ (ವರ್ಷಗಳಲ್ಲಿ) (೧೯೯೧)
ಮಹಿಳೆಯರು :
ಪುರುಷರು :
ಒಟ್ಟು :
೬೫.೫೬
೬೦.೧೩
೬೨.೭೮
೬೩.೬೧
೬೦.೬೦
೬೨.೦೭
ಆರೋಗ್ಯ ಸಂಬಂಧಿ ಸೂಚ್ಯಂಕ ೦.೬೩೦
ಪ್ರತಿ ಸರ್ಕಾರಿ ವೈದ್ಯಕೀಯ ಸಂಸ್ಥೆ ಸೇವೆ ಸಲ್ಲಿಸುತ್ತಿರುವ ಜನರ ಸರಾಸರಿ ಸಂಖ್ಯೆ ೨೨.೯೨೭ ೧೯.೦೭೮
೧೦ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇವೆ ಸಲ್ಲಿಸುತ್ತಿರುವ ಜನರ ಸರಾಸರಿ ಸಂಖ್ಯೆ ೨೪೮೨೪ ೨೧೫೪೮
೧೧ ಉಪಕೇಂದ್ರಗಳ ಸಂಖ್ಯೆ (೧೯೯೬ – ೯೭) ೫೯೬ ೮೧೪೩
೧೨ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಲಭ್ಯವಿರುವ ಆಸ್ಪತ್ರೆ ಹಾಸಿಗೆಗಳ ಸಂಖ್ಯೆ ೭೭ ೮೬
೧೩ ಸಂತಾನೋತ್ಪತ್ತಿ ವಯೋಮಾನದಲ್ಲಿರುವ ದಂಪತಿಗಳಲ್ಲಿ ಕುಟುಂಬದ ಯೋಜನೆಯಿಂದ ರಕ್ಷಿತರಾದ ದಂಪತಿಗಳ ಪ್ರಮಾಣ ಶೇ.೪೫ ಶೇ.೪೮