ಸುಮಾರು ೩೫ ವರ್ಷಗಳಿಂದ ತಮ್ಮ ನಟರಾಜ ನೃತ್ಯ ಶಾಲಾ ಮೂಲಕ ನೂರಾರು ಯುವ ನೃತ್ಯ ಪಟುಗಳನ್ನು ಕ್ಷೇತ್ರಕ್ಕೆ ಕೊಟ್ಟಿರುವ ಶ್ರೀಮತಿ ಜಿ.ಎಸ್. ರಾಜಲಕ್ಷ್ಮಿ ನಮ್ಮ ರಾಜ್ಯದ ಹಿರಿಯ ನೃತ್ಯ ಗುರುಗಳಲ್ಲಿ ಒಬ್ಬರು.

ಗುರು ನಟನಂ ಮಣಿ ಮತ್ತು ಗುರು ವಿ.ಸಿ. ಲೋಕಯ್ಯ ರಾಜಲಕ್ಷ್ಮಿ ಅವರ ವಿದ್ಯಾಗುರುಗಳು. ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಶ್ರೀಮತಿ ರಾಜಲಕ್ಷ್ಮಿ ಮತ್ತು ಅವರ ಹಿರಿಯ ಶಿಷ್ಯರು ನೃತ್ಯ ಶಾಲೆಗಳನ್ನು ನಡೆಸುತ್ತಿದ್ದಾರೆ. ಇವರಮಾರ್ಗದರ್ಶನದಲ್ಲಿ ಹಲವು ಯಶಸ್ವಿ ರಂಗಪ್ರವೇಶಗಳೂ ನಡೆದಿವೆ. ರಾಜಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ನುರಿತ ನೃತ್ಯ ಕಲಾವಿದರನೇಕರು ಕರ್ನಾಟಕದಲ್ಲಲ್ಲದೆ ಹೊರ ದೇಶಗಳಲ್ಲೂ ನೃತ್ಯ ಶಾಲೆಗಳನ್ನೂ ನಡೆಸುತ್ತಿದ್ದಾರೆ.

೧೯೮ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಂದ ಗೌರವಿಸಲ್ಪಟ್ಟ ರಾಜಲಕ್ಷ್ಮಿ ಅವರಿಗೆ ಕನ್ನಡ ಚಳುವಳಿ ಕೇಂದ್ರ ಈ ವರ್ಷ ರಾಜ್ಯೋತ್ಸವದಂದು ಸನ್ಮಾನಿಸಿದೆ. ಅಲ್ಲದೆ ನಾಟ್ಯ ವಿದುಷಿ, ನಾಟ್ಯಶ್ರೀ ಬಿರುದುಗಳೂ ಅಲ್ಲದೇ ೧೯೯೯-೨೦೦೦ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.