ಹುಬ್ಬಳ್ಳಿ ತಲುಪಿದಾಗ ಹನ್ನೊಂದು ಗಂಟೆಯಾಗಿತ್ತು. ಸೀದಾ ಅಶೋಕ ಹೋಟೆಲ್‌ಗೆ ಹೋದರು. ರೋಜಾ ಬಂದಿರಲಿಲ್ಲ. ತಾವೇ ಒಂದು ರೂಮು ಬಾಡಿಗೆ ಹಿಡಿದು ವಿಶ್ರಾಂತಿ ತಕ್ಕೊಂಡರು. ಅರ್ಧ ತಾಸಿಗೊಮ್ಮೆ ರಿಸೆಪ್ಷನ್ನಿಗೆ ಹೋಗಿ ರೋಜಾ ಬಂದದ್ದರ ಬಗ್ಗೆ ವಿಚಾರಿಸಿದರು. ಪ್ರತಿಸಲವೂ ಆ ಹೆಸರಿನವರು ಯಾರೂ ಬಂದಲಿಲ್ಲವೆಂದು ಉತ್ತರವೇ ಬಂತು. ಆಕೆ ಸುಳ್ಳು ಹೇಳಿರಬಹುದೆ? ಆದರೆ ಆ ದಿನ ಹೇಳಿಕೊಳ್ಳುವಂಥ ಕಟವೇನೂ ಆವಳ ಕಣ್ಣಿನಲ್ಲಿರಲಿಲ್ಲ. ಅಥವಾ ಇವತ್ತು ರಿಸಲ್ಟ್ ಇದೆಯಲ್ಲ, ಯೂನಿವರ್ಸಿಟಿಗೆ ಹೋಗಿರಬೇಕು. ತಾವೂ ಅಲ್ಲಿಗೇ ಹೋದರಾಯಿತೆಂದು ಎದ್ದರು. ತನ್ನನ್ನು ಕೇಳಿಕೊಂಡು ರೋಜಾ ಎಂಬ ಹೆಸರಿನ ಹುಡುಗಿ ಎಂದರೆ ಕೊಡಿರೆಂದು ಹೇಳಿ ರಿಸೆಪ್ಷನ್ನಿನಲ್ಲಿ ಕೀ ಇಟ್ಟರು. ಧಾರವಾಡ ಬಸ್ಸು ಹಿಡಿದು ಯೂನಿವರ್ಸಿಟಿ ಕ್ಯಾಂಪಸ್ಸಿಗೆ ಹೋದರು. ರಿಸಲ್ಟಿನ ಬೋರ್ಡಿನ ಮುಂದೆ ಹುಡುಗರ ಗುಂಪಿತ್ತು. ಆದರೆ ಅಲ್ಲಿ ಅವಳಿರಲಿಲ್ಲ. ಹೋಗಲೆಂದು ತಮ್ಮ ಕಾಲೇಜಿನ ರಿಸಲ್ಟು ನೋಡಿದರು. ಈ ಸಲ ಆರು ಫಸ್ಟ್‌ಕ್ಲಾಸ್ ಸಿಕ್ಕಿತ್ತು. ಸಮಾಧಾನಪಟ್ಟುಕೊಂಡು ತಿರುಗಿದರು.

ಕ್ಯಾಂಪಸ್ಸಿನ ತುಂಬಾ ಅಡ್ಡಾಡಿದರು. ಕಂಡ ಪರಿಚಿತರನ್ನು ಸಂಕ್ಷಿಪ್ತವಾಗಿ ಭೇಟಿಮಾಡಿ ನಿವಾರಿಸಿದರು. ಹುಡುಗಿಯರಿದ್ದ ಕಡೆಗೆಲ್ಲ ಸಂಚರಿಸಿದರು. ಯಾವೊಬ್ಬ ಹುಡುಗಿ ದೂರದಲ್ಲಿ ಕಂಡರೂ ಅಕಾ ಅವಳಿರಬಹುದೆಂದು ಧಾವಿಸುತ್ತಿದ್ದರು. ಹೀಗೆ ಅಲೆದಾಡಿ ಸುಸ್ತಾಗಿ ಕೊನೆಗೆ ಆ ಫಸ್ಟ್‌ಕ್ಲಾಸ್ ಬಂದವರು ಯಾರ್ಯಾರಿರಬಹುದೆಂದು ತಿಳಿಯಲು ಪರೀಕ್ಷಾ ವಿಭಾಗಕ್ಕೆ ಹೋದರು. ಅಲ್ಲಿದ್ದ ಕ್ಲರ್ಕು ಇವರ ಪರಿಚಿತನೇ. ಕೇಳಿದೊಡನೆ ರಿಸಲ್ಟಿನ ಶೀಟು ಮತ್ತು ತ್ಸಂಬಂಧಿಯಾದ ಮೂಲಗಳನ್ನು ತಂದುಕೊಟ್ಟ. ನೋಡಿದರೆ ರೋಜಾ ಮತ್ತು ಗಿರೆಪ್ಪ ಇಬ್ಬರೂ ಫಸ್ಟ್‌ಕ್ಲಾಸ್‌ನಲ್ಲಿ ಪಾಸಾಗಿದ್ದರು!

ಮೋಸವಾಗಿದೆ ಎಂದುಕೊಂಡರು. ಅವರಿಬ್ಬರೂ ಖಂಡಿತ ಫಸ್ಟ್‌ಕ್ಲಾಸ್ ಬರುವ ಪೈಕಿ ಅಲ್ಲ. ರೋಜಾ ಬಂದಿರಬಹುದು ಎನೊಣ. ಯಾಕೆಂದರೆ ಉತ್ತರಪತ್ರಿಕೆಯನ್ನು ಅವಳ ಕೈಗೇ ಕೊಟ್ಟಿದರಲ್ಲ. ಅವಳು ಅದರ ಸದುಪಯೋಗ ಪಡೆದಿರಬಹುದು. ಬಹುದೇನು ಸಾಗೆ ಪಡೆದೇ ಫಸ್ಟ್‌ಕ್ಲಾಸ್ ದೊರಕಿಸಿದ್ದು. ಆದರೆ ಗಿರೆಪ್ಪ ಖಂಡಿತ ಮೂರನೇ ಕ್ಲಾಸಿನ ಹುಡುಗ. ಅವನು ಫೇಲಾಗಬಹುದೆಂದು ಇವರ ಅಂದಾಜಿತ್ತು. ಇವ ಹ್ಯಾಗೆ ಈ ಪರಿ ಪಾಸಾದ? ಅಥವಾ ತನ್ನ ಗೆಳತಿಯ ಉತ್ತರ ಪತ್ರಿಕೆಗೂ ಇವಳೆ ಮಾರ್ಕ್ಸ ಹಾಕಿದಳಲ್ಲ ಅದು ಇವನದೇ ಇದ್ದಿರಬಹುದೇ? ಹೌದೆಂದುಕೊಂಡರು. ಮೋಸವಾದದ್ದು ಸ್ಪಷ್ಟವಾದೊಡನೆ ತೊಡೆ ಕುಸಿದಂತಾಗಿ ನಿಶ್ಶಕ್ತರಾದರು. ‘ನಿಮ್ಮ ಕಾಲೇಜಿನಿಂದ ಆರು ಫಸ್ಟ್‌ಕ್ಲಾಸ್ ಬಂದಾವ, ಪೇಡೆ ಕೊಡಸರಿ ಸರ’ ಎಂದು ಕ್ಲರ್ಕು. ‘ಕೊಡಿಸೋಣ ಕೊಡಿಸೋಣ’ ಎಂದು ಮೆಲ್ಲಗೆ ಎದ್ದು ಯಾತ್ರಿಕವಾಗಿ ಸಿಟಿಯ ಕಡೆ ಹೊರಟರು.

ಹುಬ್ಬಳ್ಳಿ ಬಸ್ಸಿನಲ್ಲಿ ಕುಳಿತಾಗಲೂ ಚಿತ್ರ ಸ್ವಸ್ಥವಾಗಲಿಲ್ಲ. ಆಕೆ ಗಿರೆಪ್ಪನಿಗೆ ಅಂಕಗಳನ್ನು ಹಾಕಿದ್ದೇ ನಿಜವಾದರೆ ತನ್ನನ್ನು ಮೋಸ ಮಾಡಿದ್ದೂ ನಿಜವೆಂದಾಯಿತು. ಇದು ನಿಜವಾದರೆ ತನಗೆ ಗೊತ್ತಿಲ್ಲದೆ ಗಿರೆಪ್ಪನ್ನು ಪ್ರೀತಿಸುತ್ತಿದ್ದಾಲೆಂಬುದೂ ನಿಜವಾಯಿತು. ಅಂದರೆ ಇಡೀ ವರ್ಷ ತಾನು ಮೂರ್ಖತನದ ಉತ್ಕಟಾವಸ್ಥೆಯಲ್ಲಿದ್ದಂತೆ ಆಯಿತು. ಅಥವಾ ಹೀಗೂ ಇದಿತು. ಪರೀಕ್ಷೆಗಳಲ್ಲಿ ಏನೇನೋ ಹೆಚ್ಚುಕಮ್ಮಿಯಾಗುತ್ತದೆ. ತಾನೇ ಕಂಡಂತೆ ಎಷ್ಟೊಂದು ಏರುಪೇರುಗಳಾಗಿಲ್ಲ? ಹೀಗೆ ಯಾವುದೋ ಒಂದು ಆಕಸ್ಮಿಕ ತಾಗಿ ಗಿರೆಪ್ಪನಿಗೆ ಕ್ಲಾಸ್ ಬಂದಿದಿತು. ಉಳಿದ ನಾಲ್ವರು ಯಾರೆಂದು ತಿಳಿದಿದ್ದರೆ ಅಂದಾಜು ಸಾಕಲು ಅನುಕೂಲವಾಗುತ್ತಿತ್ತು. ಛೇ ತಾನು ಉಳಿದವರ ಹೆಸರನ್ನು ತಿಲಿಯಲಿಲ್ಲ ಎಂದು ಪಶ್ಚಾತ್ತಾಪಪಟ್ಟರು. ಈಗಲೂ ಏನು ಆಗಿಲ್ಲವೆಂದೇ ನಂಬಲು ಪ್ರಯತ್ನಪಟ್ಟರು. ಗಿರೆಪ್ಪ ರೀಒಜಾಳ ಮಧ್ಯೆ ಏನಾದರೂ ಇದ್ದಿದ್ದರೆ ಎಂಟಿಗೆ ಗೊತ್ತಾಗದಿರಲು ಸಾಧ್ಯವೇ?

ಈ ಅರೆಬರೆ ಆಶಾಭಾವನೆಯಲ್ಲೇ ಹುಬ್ಬಳ್ಳಿಗೆ ಬಂದರು. ಹೋಟಲು ತಲುಪಿದಾಗ ಹತ್ತುಗಂಟೆಯಾಗಿತ್ತು. ರಿಸೆಪ್ಷನ್‌ನಲ್ಲಿ ಕೀ ಕೇಳಲು ಹೋದಾಗ ‘ನಿಮ್ಮ ಪೈಕಿ ಯಾರೋ ಬಂದಾರ’ ಎಂದು ಹೇಳಿದ. ‘ಅರೆ ಬಂದಾಳಲ್ಲ!’ ಎಂದು ಮನಸ್ಸಿಗೆ ಹೌಸಿಯಾಯಿತು. ಲವಲವಿಕೆಯಿಂದ ಮೆಟ್ಟಲೇರಿ ರೂಮಿಗೆ ಹೋದರು. ಬಾಗಿಲಿಕ್ಕಿತ್ತು. ಮಡಿದರು. ಮತ್ತೆ ಬಡಿದು ಕಾಯುತ್ತ ನಿಂತರು. ತಡವಾಗಿ ಬಾಗಿಲು ತೆರೆಯಿತು. ಬಾಗಿಲು ತೆಗೆದು ಎದುರಿಗೆ ನಿಂತಿದ್ದವನು ಗಿರೆಪ್ಪ!

ಇವರನ್ನು ನೋಡಿದವನೆ ಕೈಯಲ್ಲಿಯ ಸಿಗರೇಟೆಸೆದು ಹೆದರಿ ‘ಬರ್ರಿ ಸರ’ ಎಂದ. ‘ಯಾರೋ ಗಿರಿ’ ಎಂದು ಒಳಗಿನಿಂದ ರೋಜಾ ಕೇಳಿದಳು. ಕೇಳಿದ್ದೇ ಆಯಿತು. ಎದೆಯ ನೆತ್ತರು ನೆತ್ತಿಗಡಿರಿದಂತಾಗಿ ಕೈಕಾಲು ನಡುಗಿ ಜೀಕೆ ಬೀಳಲಿದ್ದರು. ಗಿರೆಪ್ಪ ತಕ್ಷಣ ಬಂದವನೆ ಅವರನ್ನು ಹಿಡಿದುಕೊಂಡು ಮೆಲ್ಲಗೆ ಒಳಗೆ ನಡೆಸಿಕೊಂಡುಹೋದ. ಗಾಬರಿಯಾಗಿ ರೋಜಾ ಎದ್ದುನಿಂತಳು. ಗಿರೆಪ್ಪ ಮೆಲ್ಲಗೆ ಅವರನ್ನು ಕುರ್ಚಿಯಲ್ಲಿ ಕೂರಿಸಿದ. ಅಷ್ಟರಲ್ಲಿ ಜೀಕೆ ಮೂರ್ಛೆ ಹೋಗಿದ್ದರು, ಮುದುಕ ಆ ದಿನ ಬಹಳ ಘಾಸಿಯಾಗಿದ್ದರು. ಪ್ರವಾಸ ಮಾಡಿ, ನಡೆದಾಡಿ, ರಿಸಲ್ಟ್ ನೋಡಿ ನಿರಾಶೆ ಹೊಂದಿದ್ದರು. ದ್ರೋಹದ ಅನುಮಾನಕ್ಕೆ ನೊಂದಿದ್ದರು. ಸಾಲದ್ದಕ್ಕೆ ಉಪವಾಸವಿದ್ದರು. ಗಿರೆಪ್ಪ ಹಾಗೇ ಹಿಡಿದುಕೊಂಡಿದ್ದ. ರೋಜಾ ಗಡಿಬಿಡಿ ಮಾಡಿ ನೀರು ತಂದು ಚಿಮುಕಿಸಿದಳು. ತುಸು ಹೊತ್ತಾಗ ಮೇಲೆ ಜೀಕೆ ಕಣ್ಣು ತೆರೆದರು. ಮುಖ ಹೀರಿ ಹೆಣದ ಹಾಗೆ ಕಾಣುತ್ತಿದ್ದರು. ಗಿರೆಪ್ಪ ‘ಚಾ ತರಸೋಣೇನ್ರಿ ಸರ’ ಎಂದ. ಬೇಡವೆಂದ ಕೈಸನ್ನೆ ಮಾಡಿ ಹಾಗೇ ಕಣ್ಣು ಬಾಯಿ ತಕ್ಕೊಂಡು ಹಿಂದಕ್ಕೆ ಒರಗಿದರು. ರೋಜಾ ಸರ್ರನೆ ದಿಂಬು ತಂದು ತಲೆ ಆಧಾರ ಕೊಟ್ಟಳು. ‘ಸರ, ಡಾಕ್ಟರನ್ನ ಕರೆಸೋಣೇನ್ರೀ’ ಎಂದಳು ರೋಜಾ. ಅದಕ್ಕೂ ಬೇಡವೆಂದು ಸನ್ನೆ ಮಾಡಿದರು. ಹುಡುಗರಿಬ್ಬರಿಗೂ ಏನು ಮಾಡಬೇಕೆಂದು ತೋಚದಾಯಿತು. ರೋಜಾ ಪತ್ರಿಕೆ ತಗೊಂಡು ಗಾಳಿ ಬೀಸತೊಡಗಿದಳು. ಅದನ್ನು ನೋಡಿ ಗಿರೆಪ್ಪ ಫ್ಯಾನು ಹಾಕಿದ. ಗಾಳಿ ಹಾಕುವುದನ್ನು ನಿಲ್ಲಿಸಿ ಆಕೆ ಮೆಲ್ಲಗೆ ಆರಾಮಾಗಲೆಂದು ಅವರ ಪಾದ ತಿಕ್ಕತೊಡಗಿದಳು. ಬೇಡವೆಂದು ಜೀಕೆ ಸನ್ನೆ ಮಾಡಿದರೂ ಕೇಳಲಿಲ್ಲ.

ಜೀಕೆಗೆ ಬಹಳ ಆಯಾಸವಾಗಿತ್ತು. ಇನ್ನು ವಿವರಿಸಬೇಕಾದ್ದೇನೂ ಉಲಿದಿರಲಿಲ್ಲ. ಮೋಸ ಹೋಗಿದ್ದರು, ಹಾಸ್ಯಾಸ್ಪದರಾಗಿದ್ದರು. ಇವಳ ಕೈಯಿಂದ ಮಾರ್ಕ್ ಹಾಕಿಸಿ ಭ್ರಷ್ಟಾಚಾರ ಮಾಡಿದ್ದರು. ಇವಳಿಗಾಗಿ ಹೆಂಡತಿಯನ್ನು ಕಳೆದುಕೊಂಡಿದ್ದರು ಮತ್ತು ಜೀವ ತೆರುವವರಿದ್ದರು. ಇದನ್ನೆಲ್ಲ ನೆನೆದಂತೆ ನಾಚಿಕೆಯಾಗಿ ಮನಸ್ಸಿನಲ್ಲೇ ತಮ್ಮ ಮುಖದ ಮೇಲೆ ಥೂ ಎಂದು ಉಗುಳಿಕೊಂಡರು. ಏನಾದರೇನು ಕಳೆದುಕೊಂಡದ್ದು ಬರುತ್ತದೆಯೇ? ಶಿವನಿಂಗಾ ನನ್ನನ್ನು ಯಾಕೆ ಒಯ್ಯುತ್ತಿಲ್ಲ ಎಂದರು. ಅಂದು ಅಂದು ಪಶ್ಚಾತ್ತಾಪದಿಂದ ಕಣಿರು ಸುರಿಸುತ್ತ, ರೋಜಾಳನ್ನೇ ತದೇಕ ದೃಷ್ಟಿಯಿಂದ ಶಾಪ ಹಾಕುವಂತೆ ನೋಡಿದರು. ಒಂದೇ ಸಮ ಕಣಿರು ಸುರಿಯುತ್ತಿತ್ತಲ್ಲ. ಅದನ್ನು ಕಂಡು ರೋಜಾಳ ಕರುಳು ಬಾಯಿಗೆ ಬಂತು. ತಿಕ್ಕುತ್ತಿದ್ದ ಜೀಕೆ ಕಾಲನ್ನು ಗಟ್ಟಿಯಾಗಿ ಹಿಡಿದು,

‘ಸಾರಿ ಸರ, ನಾವೇನೋ ನಿಮ್ಮ ಜೋಡಿ ಆಟ ಆಡಬೇಕೆಂದಿವಿ. ನೋಡೋಣ ಅವರ‍್ನ ಬುಟ್ಟಿಗೆ ಹಾಕಿಕೋ ನೂರ ರೂಪಾಯಿ ಕೊಡತೇನಂತ ಗಿರೆಪ್ಪ ಬೆಟ್ ಕಟ್ಟಿದ. ಆದರೆ ನೀವು ಇಷ್ಟು ಸೀರಿಯಸ್ಸಾಗಿ ನಮಗೆ ಮೋಸ ಹೋಗತೀರಂತ ಇಬ್ಬರಿಗೂ ಕಲ್ಪಾನಾ ಇರಾಕಿಲ್ಲರಿ ಸರ. ನಾ ಕೊಟ್ಟ ಪ್ರೇಮಪತ್ರ ಗಿರೆಪ್ಪನs ಬರೀತಿದ್ದ. ನೀವು ಮೋಸ ಹೋದ ಹೋದಾಂಗ ನಾವೂ ಆಟಕ್ಕ ಬದ್ದಿವಿ. ಇದನ್ನೆಲ್ಲಾ ಇಂದ ಹೇಳಿ ನಿಮ್ಮ ಕೈಕಾಲ ಕಟ್ಟಿಕೋಬೇಕಂತ ನಿಮಗೆ ಹುಬ್ಬಳ್ಳಿಗೆ ಬರಾಕ ಹೇಳಿದೆ. ತಪ್ಪಾತು, ನಮ್ಮ ತಪ್ಪ ಮಾಫಿ ಮಾಡರಿ ಸರ….’ ಎಂದಳು.

ಗಿರೆಪ್ಪ ತಾನೂ ಅವರ ಪಾದದ ಬಳಿ ಕುಳಿತು,

‘ಹೌದರಿ ಸರ, ನೀವು ನನ್ನ ಕಂಡಾಗೆಲ್ಲ ಯಾಕೋ ಒಂದ ನಮೂನಿ ಉರೀತಿದ್ದಿರಿ. ನಿಮ್ಮನ್ನಷ್ಟು ಆಟ ಆಡಿಸಿದರ ಹೆಗಿದ್ದೀತಂತ ನಾನs ಬೆಟ್ ಕಟ್ಟಿದೆ. ನೀವು ದೊಡ್ಡವರು ನಮ್ಮ ಬಲೀಗಿ ಬೀಳಾಕಿಲ್ಲಂತ ತಿಳಿದಿದ್ದೀವಿ. ಆದರ ನೀವು ನಮ್ಮನ್ನು ನಂಬಿಬಿಟ್ಟರಿ, ತಪ್ಪಾತ್ರಿ ಸರ. ನಾ ನಿಮ್ಮ ಮಗ ಅಂತ ತಿಳಕೊಂಡು ನಮ್ಮ ತಪ್ಪ ಹೊಟ್ಟಾಗ ಹಾಕ್ಕೊಳ್ರಿ.’

– ಎಂದು ಹೇಳಿ ಅವನೂ ಕಣಿರು ಸುರಿಸುತ್ತ ಕಾಲು ಹಿಡಿದ. ಜೀಕೆ ಬರೀ ಕಣಿರು ಸುರಿಸಿದರು. ಬಹಳ ಹೊತ್ತು ಯಾರೂ ಮಾತಾಡಲಿಲ್ಲ. ಜೀಕೆ ಮಾತಾಡದೆ ಏಳಬಲ್ಲೆ ಎಂದು ವಿಶ್ವಾಸ ಮೂಡಿದ ಮೇಲೆ ಮೆಲ್ಲಗೆ ಎದ್ದರು. ರೋಜಾ, ಗಿರೆಪ್ಪ ಇಬ್ಬರೂ ‘ಸರ’ ಎಂದು ಕೈಹಿಡಿಯ ಹೋದರು. ತನ್ನನ್ನು ತಡೆಯಬೇಡಿರೆಂದು ಇಬ್ಬರಿಗೂ ಕೈಸನ್ನೆ ಮಾಡಿ ಬಾಗಿಲ ಕಡೆ ನಡೆದರು. ಆದರೂ ಇವರು ಬೆನ್ನು ಹತ್ತಿದರು. ಮುಖ ತಿರುಗಿಸಿ ಕಣ್ಣು ಕಿಸಿದು ಶಾಪ ಹಾಕುವರಂತೆ ಇಬ್ಬರನ್ನೂ ನೋಡಿ ತನ್ನನ್ನು ತಡೆಯಬೇಡಿರೆಂದು ಇಬ್ಬರಿಗೂ ಕೈಸನ್ನೆ ಮಾಡಿ ನಡೆದರು. ಹುಡುಗರಿಬ್ಬರೂ ಹೆದರಿ ಅಲ್ಲಿಯೇ ನಿಂತರು. ಸ್ವಯಂ ಹೆಣವೇ ಎದ್ದು ಸ್ಮಶಾನಕ್ಕೆ ನಡೆದಂತೆ ಜೀಕೆ ಅಸ್ಥಿರವಾದ ಕಾಲುಗಳನ್ನು ಮೆಲ್ಲಗೆ ಇಡುತ್ತ ಇಳಿದು ಹೋದರು.

ಹೋಟಲ ಬಿಟ್ಟು ಹೊರಗೆ ಬಂದಾಗ ಮಧ್ಯರಾತ್ರಿ ಮೀರಿದ್ದಿತು ಚಳಿ ಇತ್ತು. ಮುಂದೆ ಹೆಜ್ಜೆ ಇಡಲಾಗಲಿಲ್ಲ. ಗೇಟಿನ ಬಳಿ ಕುಸಿದರು. ಈ ಸಲ ಮೂರ್ಛೆ ಹೋಗಲಿಲ್ಲ. ಮೈ ಅರಿವಿಲ್ಲದೆ ಬಹಳ ಹೊತ್ತಿನ ತನಕ ಕೂತಿದ್ದರಲ್ಲ, ಚಳಿಗಾಳಿಯನ್ನುಂಡ ಮೈಗೆ ತುಸು ಚೇತರಿಕೆ ಬಂತು. ಮಲ್ಲಗೆ ಎದ್ದು ಸ್ಟೇಷನ್ನಿಗೆ ಹೋದರು. ರಾತ್ರಿ ಎಷ್ಟಾಗಿತ್ತೋ, ಅಂಗಡಿ ಬೆಳಕುಗಳಿರುವ ಭಾಗ ಬಿಟ್ಟು ಸಂಚಾರವಿಲ್ಲದಲ್ಲಿಗೆ ಹೋಗಿ ಕಲ್ಲುಬೆಂಚಿನ ಮೇಲೆ ಕೂತರು. ದೂರದಲ್ಲಿ ಕೂತವನೊಬ್ಬ ಮೈಮೇಲೆ ಗಟ್ಟಿ ಬಟ್ಟೆಯಿಲ್ಲದೆ ಚಳಿಯಿಂದ ಗಡಗಡ ನಡುಗುತ್ತಿದ್ದ. ಸಾಧ್ಯವಾದಷ್ಟೂ ಮೈಯನ್ನು ಮುದುಡಿಯಾಗಿಸಿದ್ದ ಅವನನ್ನೇ ನೋಡುತ್ತ ಜೀಕೆ ಕುಳಿತರು. ಅಷ್ಟರಲ್ಲಿ ಯಾವುದೋ ಗಾಡಿ ಬಂತು. ಸರ್ರನೆ ತಮ್ಮ ಕೋಟು ಕಳಚಿ, ಅಕಾ, ಆ ನಡುಗುತ್ತಿದ್ದವನಿಗೆ ಕೊಟ್ಟು ಗಾಡಿ ಹತ್ತಿದರು.