ಜಿರ್ರನೆಯ ಜೀರುಂಡೆ ಚೀರಿವೆ
ಕರಿಯ ಜಾಲಿಯ ಮರದಲಿ
ಇರುಳು ಇಳಿದಿದೆ ; ಗಾಳಿ ಬೆವರಿದೆ
ನೆಲವೆ ನಡುಗಿದೆ ಭಯದಲಿ.
ನಾಳೆ ಮುಂಜಾವಿನಲಿ ಕಡೆಯುತ
ಬೆಣ್ಣೆ ತೆಗೆಯಲು ಬೆಳಕನು.
ಇರುಳ ಕಪ್ಪಿಗೆ ಹೆಪ್ಪನೆರೆವರೊ
ಜಿರ್ರನೆಯ ಜೀರ್ ದನಿಯನು !
ಎನಲು ಸುಮ್ಮನೆ ಮೊರೆವುದಾಲಿಸು
ಕಿವಿಯ ಕೊರೆಯುವ ಈ ರವ !
ಚಿಕ್ಕೆ ಬೆಕ್ಕಸಗೊಂಡು ನೋಡುತ
ಮೂಗುವಟ್ಟಿವೆ, ಚೋದ್ಯವ !
Leave A Comment