Categories
e-ದಿನ

ಜುಲೈ-10

 

ಪ್ರಮುಖ ಘಟನಾವಳಿಗಳು:

1775: ಹೊರಾಟಿಯೋ ಗೇಟ್ಸ್ ಕಾಂಟಿನೆಂಟಲ್ನ ಸೈನ್ಯದಿಂದ ಕರಿಯರನ್ನು ಹೊರತುಪಡಿಸಲು ಆದೇಶ ನೀಡಿದರು.

1806: ದಕ್ಷಿಣ ಭಾರತದ ಸೈನಿಕರು, ವೆಲ್ಲೋರಿನಲ್ಲಿ (ಇಂದಿನ ತಮಿಳುನಾಡು) ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿ ವಿರುದ್ದ ದಂಗೆ ಎದ್ದರು.

1862: ಸೆಂಟರಲ್ ಪೆಸಿಫಿಕ್ ರೈಲು ರಸ್ತೆಯ ಕಾಮಗಾರಿ ಅಮೇರಿಕಾದಲ್ಲಿ ಆರಂಭವಾಯಿತು.

1866: ಎಡಿಸನ್ ಪಿ ಕ್ಲಾರ್ಕ್ ಇಂಡೆಲಿಬಲ್ ಪೆನ್ಸಿಲಿಗೆ ಪೇಟೆಂಟ್ ಪಡೆದರು.

1886: ರಾಯಲ್ ನೈಗರ್ ಸಂಸ್ಥೆಗೆ ಜಾರ್ಜ್ ಗೋಲ್ಡಿ ಅವರು ಸನ್ನದು ಪಡೆದರು.

1892: ಓಹಿಯೋದ ಬೆಲ್ಲಿಫೌಂಟೆನ್ನಿನಲ್ಲಿ ಕಾಂಕ್ರೀಟ್ ಇಂದ ನಿರ್ಮಿಸಿದ ರಸ್ತೆ ಕಟ್ಟಲಾಯಿತು.

1908: ಹೆಚ್.ಕಮರ್ಲಿಂಗ್ ಓನ್ಸ್ ಹೀಲಿಯಂ ದ್ರವವನ್ನು ತಯಾರಿಸಿದರು.

1925: ರಷ್ಯಾದ ಅಧಿಕೃತ ಸುದ್ದಿ ಸಂಸ್ಥೆ TASS ಸ್ಥಾಪನೆಯಾಯಿತು.

1929: ಅಮೇರಿಕಾ ಹಿಂದಿಗಿಂತ ಹೊಸದಾದ, ಗಾತ್ರದಲ್ಲಿ ಚಿಕ್ಕದಾದ ಪೇಪರ್ ಹಣವನ್ನು ವಿತರಿಸಿತು.

1933: ನ್ಯೂಯಾರ್ಕ್ ನಲ್ಲಿ ಮೊದಲ ಪೋಲೀಸ್ ರೇಡಿಯೋವನ್ನು ಕಾರ್ಯನಿರ್ವಹಿಸಲಾಯಿತು.

1938: ಹೋವಾರ್ಡ್ ಹ್ಯೂಸ್ 91 ಗಂಟೆಗಳಲ್ಲಿ ಪ್ರಪಂಚಾದ್ಯಂತ ಪ್ರಯಾಣ ಮಾಡಿದರು.

1949: ಮೊದಲನೇ ಪ್ರಾಯೋಗಿಕ ಆಯತಾಕಾರದ ಟಿವಿ ಟ್ಯೂಬನ್ನು ಘೋಷಿಸಲಾಯಿತು.

1958: ಮೊದಲ ಪಾರ್ಕಿಂಗ್ ಮೀಟರನ್ನು ಇಂಗ್ಲಾಂಡಿನಲ್ಲಿ ಸ್ಥಾಪಿಸಲಾಯಿತು.

1962: ಮೊದಲ ಜಿಯೋಸಿಂಕ್ರೋನಸ್ ಕಮ್ಯುನಿಕೇಷನ್ ಉಪಗ್ರಹವಾದ ಟೆಲ್ಸ್ಟಾರನ್ನು ಹಾರಿಸಲಾಯಿತು.

1972: ಭಾರತದ ಚಂಡಕಾ ಕಾಡಿನಲ್ಲಿ ಆನೆಗಳ ಹಿಂಡಿನ ಕಾಲ್ತುಳಿತಕ್ಕೆ ಸಿಲುಕಿ 24 ಜನ ಮೃತಪಟ್ಟರು.

1977: ರೋಲಿಂಗ್ ಯೋಜನೆಯ ಪರಿಕಲ್ಪನೆಯನ್ನು ಪರಿಚಯಿಸಲು ಯೋಜನಾ ಆಯೋಗ ನಿರ್ಧರಿಸಿತು

1978: ಮಹಾತ್ಮಾ ಫುಲೆ ಹಿಂದುಳಿದ ವರ್ಗ ಅಭಿವೃದ್ದಿ ನಿಗಮವನ್ನು ಸ್ಥಾಪಿಸಲಾಯಿತು.

1997: 1856 ರಲ್ಲಿ ಕಂಡುಬಂದ ನಿಯಾಂಡರ್ತಾಲ್ ಮನುಷ್ಯನ ಕೈ ಮೂಳೆಯಿಂದ ಡಿಎನ್ಎ ನೋಡಿದಾಗ ಪ್ರತ್ಯೇಕ ಮಾನವ ಜಾತಿಗಳನ್ನು ಪ್ರತಿನಿಧಿಸುತ್ತದೆ ಎಂದು ಕಂಡುಹಿಡಿಯಲಾಯಿತು.

2011: ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಜೂಲಿಯಾ ಗಿಲ್ಲಾರ್ಡ್ ಅವರು ಕಾರ್ಬನ್ ತೆರಿಗೆ ಜಾರಿಗೆ ತರಲು ಯೋಜನೆಯ ವಿವರಗಳನ್ನು ಪರಿಚಯಿಸಿದರು.

2015: ಅಮೇರಿಕಾದ ಸಿವಿಲ್ ವಾರಿನ ಇತಿಹಾಸದ ಒಂದು ಭಾಗವಾದ ಧ್ವಜವು ಜನಾಂಗೀಯತೆಯ ಸಂಕೇತವಾದರಿಂದ ರಾಜ್ಯ ಸರ್ಕಾರವು ಶಾಶ್ವತವಾಗಿ ಅದನ್ನು ತೆಗೆದುಹಾಕಲು ಕಾನೂನನ್ನು ಜಾರಿಗೆ ತಂದಿತು.

ಪ್ರಮುಖ ಜನನ/ಮರಣ:

1923: ಮರಾಠಿ ಬರಹಗಾರ ಮತ್ತು ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಜಿ.ಎ.ಕುಲ್ಕರಣಿ ಜನಿಸಿದರು.

1949: ಭಾರತೀಯ ಕ್ರಿಕೆಟ್ ಆಟಗಾರರಾದ ಸುನಿಲ್ ಗವಾಸ್ಕರ್ ಜನಿಸಿದರು.

2000: ಭಾರತೀಯ ಸ್ವಾತಂತ್ರ ಹೋರಾಟಗಾರರಾಗಿದ್ದ ವಕ್ಕೋಮ್ ಮಜೀದ್ ನಿಧನರಾದರು.

2013: ಒಡಿಯಾ ಭಾಷೆಯಲ್ಲಿ ವಿಜ್ಞಾನ ಲೇಖಕರಾಗಿದ್ದ ಭಾರತದ ವಿಜ್ಞಾನಿ ಗೋಕುಲನಂದ ಮಹಾಪಾತ್ರ ನಿಧನರಾದರು.

2014: ಭಾರತೀಯ ನಟಿ, ನರ್ತಕಿ, ಮತ್ತು ನೃತ್ಯ ನಿರ್ದೇಶಕಿಯಾಗಿದ್ದ ಜೊಹರಾ ಸೆಹ್ಗಾಲ್ ನಿಧನರಾದರು.