Categories
e-ದಿನ

ಜುಲೈ-11

 

ಪ್ರಮುಖ ಘಟನಾವಳಿಗಳು:

1576: ಮಾರ್ಟಿನ್ ಫ್ರೋಬಿಶರ್ ಮೊದಲ ಬಾರಿಗೆ “ಗ್ರೀನ್ ಲ್ಯಾಂಡ”ನ್ನು ನೋಡುತ್

1735: ಗಣಿತದ ಲೆಕ್ಕಗಳ ಪ್ರಕಾರ ಪ್ಲೂಟೋ 1979 ಕ್ಕಿಂತ ಮೊದಲು ಕೊನೆಯ ಬಾರಿಗೆ ಸೂರ್ಯನಿಂದ 8ನೇ ಅತ್ಯಂತ ದೂರದ ಗ್ರಹಕ್ಕೆ ಸ್ಥಳಾಂತರವಾಯಿತು ಎಂದು ಸೂಚಿಸಲಾಯಿತು.

1798: ಯು.ಎಸ್. ಮರೀನ್ ಕಾರ್ಪಸ್ ಕಾಂಗ್ರೆಸ್ಸಿನ ಒಂದು ಕಾನೂನಿನ ಮೂಲಕ ಸ್ಥಾಪಿಸಲಾಯಿತು.

1801: ಫ್ರೆಂಚ್ ಖಗೋಳಶಾಸ್ತ್ರಜ್ಞ ಜೀನ್ ಲೂಇಸ್ ಪಾನ್ಸ್ ಮೊದಲ ಧೂಮಕೇತುವನ್ನು ಕಂಡುಹಿಡಿದರು.

1811: ಇಟಾಲಿಯನ್ ವಿಜ್ಞಾನಿ ಅಮೀಡಿಯೋ ಅವೋಗಾಡ್ರೋ ಅನಿಲಗಳ ಅಣ್ವಿಕ ವಿಷಯದ ಬಗ್ಗೆ ತಮ್ಮ ಆತ್ಮ ಚರಿತ್ರೆಯಲ್ಲಿ ಪ್ರಕಟಿಸಿದರು.

1848: ಲಂಡನ್ನಿನ ವಾಟರ್ ಲೂ ಸ್ಟೇಷನ್ ತೆರೆಯಲಾಯಿತು.

1877: ಕೇಟ್ ಎಡ್ಜರ್ ಅವರು ನ್ಯೂಜಿಲ್ಯಾಂಡಿನ ಮೊದಲ ಮಹಿಳಾ ಪದವೀಧರರೆಂದು ಮತ್ತು ಬ್ರಿಟೀಷ್ ಸಾಮ್ರಾಜ್ಯದಲ್ಲಿ ಕಲೆಯಲ್ಲಿ ಪದವಿ ಪಡೆದ ಮೊದಲ ಮಹಿಳೆ ಎಂದುಖ್ಯಾತರಾದರು.

1892: ಅಮೇರಿಕಾದ ಪೇಟೆಂಟ್ ಕಛೇರಿಯು ಜೆ,ಡಬ್ಲ್ಯೂ.ಸ್ವಾನ್ ಅವರು ಇನ್ಕಾಡೀಸೆಂಟ್ ಲ್ಯಾಂಪಿಗೆ ಎಲೆಕ್ಟ್ರಿಕ್ ಲೈಟ್ ಕಾರ್ಬನ್ ಅನ್ನು ಕಂಡುಹಿಡಿದರು ಥಾಮಸ್ ಎಡಿಸನ್ ಅಲ್ಲ ಎಂದು ಹೇಳಿತು.

1893: ಮೊಟ್ಟ ಮೊದಲ ಸಂಸ್ಕರಿತ ಮುತ್ತನ್ನು ಕೊಕಿಚಿ ಮಿಕಿಮೋಟೋ ಅವರು ಪಡೆದರು.

1895: ಮೊಟ್ಟಮೊದಲ ವಾಹನದ ಓಟ 48ಗಂಟೆ 48 ನಿಮಿಷಗಳಲ್ಲಿ 1178 ಕಿ.ಮೀ ಮುಕ್ತಾಯಗೊಂಡಿತು.

1896: ಕೆನೆಡಾದ 7ನೇ ಪ್ರಧಾನಿಯಾಗಿ ವಿಲ್ಫ್ರಿಡ್ ಲಾರಿಯರ್ ಅವರು ಪ್ರಮಾಣ ಸ್ವೀಕರಿಸಿದರು.

1897: ಸ್ಪಿಟ್ಸ್ ಬರ್ಜೆನ್ನಿನಿಂದ ಉತ್ತರ ಧ್ರುವಕ್ಕೆ ಸಲೋಮನ್ ಆಗಸ್ಟ್ ಬಲೂನಿನ ಮೂಲಕ ಪ್ರಯಾಣ ಮಾಡಿದರು.

1924: ಭಾರತದ ದೆಹೆಲಿಯಲ್ಲಿ ಹಿಂದು-ಮುಸ್ಲಿಮರ ನಡುವೆ ಗಲಭೆಯುಂಟಾಯಿತು.

1934: ಪನಾಮಾ ಕಾಲುವೆಯ ಮೂಲಕ ಪ್ರಯಾಣ ಮಾಡಿದ ಮೊದಲ ಅಮೇರಿಕಾ ಅಧ್ಯಕ್ಷರು ಫ್ರಾಂಕ್ಲಿನ್ ಡಿ ರೂಸ್ವೆಲ್ಟ್.

1948: ಮೊದಲ ಬಾರಿಗೆ ಜೆರೂಸೆಲೆಂನಲ್ಲಿ ವಾಯು ಬಾಂಬ್ ದಾಳಿ ನಡೆಯಿತು.

1955: ಎಲ್ಲಾ ಅಮೇರಿಕಾ ಕರೆನ್ಸಿಯ ಮೇಲೆ “ದೇವರಲ್ಲಿ ನಮ್ಮ ನಂಬಿಕೆ” ಎಂದು ಮುದ್ರಿಸಲು ಕಾಂಗ್ರೆಸ್ ಸರ್ಕಾರ ಅಧಿಕಾರ ನೀಡಿತು.

1953: ಪೋಲಿಯೋ ಕಾಯಿಲೆಯನ್ನು ತಡೆಗಟ್ಟಲು ಪೋಲಿಯೋ ಲಸಿಕೆಯನ್ನು ಹಾಕಲು ಆರಂಭಿಸಲಾಯಿತು.

1977: ಪೋಲಿಯೋ ಲಸಿಕೆ ಕಂಡು ಹಿಡಿದ ವೈದ್ಯರಾದ ಜೊನಾಸ್ ಇ ಸಾಲ್ಕ್ ಅವರಿಗೆ “ಮೆಡಲ್ ಆಫ್ ಫ್ರೀಡಂ” ನೀಡಿ ಗೌರವಿಸಲಾಯಿತು.

1979: ಅಮೇರಿಕಾದ ಮೊದಲ ಬಾಹ್ಯಾಕಾಶ ನಿಲ್ದಾಣವಾದ ಸ್ಕೈಲ್ಯಾಬ್, ಹಿಂದು ಮಹಾಸಾಗರದ ಮೇಲೆ ಭೂಮಿಯ ವಾತಾವರಣವನ್ನು ಪುನಃ ಪ್ರವೇಶಿಸಿದ ಕಾರಣದಿಂದಾಗಿ ನಾಶವಾಯಿತು.

1985: ಕೊಕಾಕೊಲಾ ಸಂಸ್ಥಯ ನೂತನ ರುಚಿಯ ಕೋಲಾವು ಜನರಿಗೆ ಇಷ್ಟವಾಗದ ಕಾರಣ ಸಂಸ್ಥೆಯು ಹಳೆಯ ರೀತಿಯನ್ನೇ ಮತ್ತೆ ಮಾರುಕಟ್ಟೆಗೆ ತಂದು ಅದನ್ನು “ಕ್ಲಾಸಿಕ್ ಕೋಕ್” ಎಂದು ನಾಮಕರಣ ಮಾಡಿದರು.

1998: ಸರ್ಕಾರವು ಓಪನ್ ಜನರಲ್ ಲೈಸೆನ್ಸ್ ಅಡಿಯಲ್ಲಿ ಖಾದ್ಯ ತೈಲಗಳ ಮೇಲೆ ಕಸ್ಟಮ್ ತೆರಿಗೆಯನ್ನು 20ರಿಂದ 10 ಪ್ರತಿಶಕದಷ್ಟು ಕಡಿಮೆಗೊಳಿಸಿತು.

2000: ಪಂಜಾಬಿ ಬರಹಗಾರರಾದ ಅಮೃತಾ ಪ್ರೀತಮ್ ಅವರಿಗೆ ಪಂಜಾಬಿ ಸಾಹಿತ್ಯದ ಅತ್ಯುತ್ತಮ ಪ್ರಶಸ್ತಿಯಾದ ಶತಾಬ್ದಿ ಸನ್ಮಾನ್ ನೀಡಿ ಗೌರವಿಸಲಾಯಿತು.

2006: ಭಾರತದ ಮುಂಬೈಯಲ್ಲಿ ಸರಣಿ ಬಾಂಬ್ ದಾಳಿಯಿಂದ 209 ಮಂದಿ ಸಾವನ್ನಪ್ಪಿದರು.

ಪ್ರಮುಖ ಜನನ/ಮರಣ:

1882: ಸ್ವಾತಂತ್ರ ಹೋರಾಟಗಾರರು ಮತ್ತು ಸಮಾಜ ಸುಧಾರಕರಾದ ಬಾಬ ಕಾನ್ಶಿ ರಾಮ್ ಜನಿಸಿದರು.

1953: ಭಾರತೀಯ ರೈಲ್ವೆ ಮಂತ್ರಿಗಳಾದ ಸುರೇಶ್ ಪ್ರಭು ಅವರು ಜನಿಸಿದರು.

1956: ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಅಮಿತಾವ್ ಘೋಷ್ ಕಲ್ಕತ್ತಾದಲ್ಲಿ ಜನಿಸಿದರು.

1957: ಮುಸ್ಲಿಂ ಲೀಗ್ ಸ್ಥಾಪಕರಲ್ಲೊಬ್ಬರಾದ ಆಗಾ ಸುಲ್ತಾನ್ ಸರ್ ಮುಹಮ್ಮದ್ ಅವರು ನಿಧನರಾದರು.