Categories
e-ದಿನ

ಜುಲೈ-12

 

ಪ್ರಮುಖ ಘಟನಾವಳಿಗಳು:

1580: “ಒಸ್ಟ್ರಾಗ್ ಬೈಬಲ್” ಸ್ಲವಾಕ್ ಭಾಷೆಯಲ್ಲಿ ಪ್ರಕಟಿಸಿದ ಮೊದಲ ಬೈಬಲ್ ಪ್ರಕಟವಾಯಿತು.

1674: ಚತ್ರಪತಿ ಶಿವಾಜಿಯವರು ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಸ್ನೇಹದ ಒಪ್ಪಂದಕ್ಕೆ ಸಹಿ ಹಾಕಿದರು.

1785; ಮೊದಲ ಮಾನವ ಚಾಲಿತ ಅನಿಲ ಬಲೂನನ್ನು ನೆದರ್ಲ್ಯಾಂಡಿನಲ್ಲಿ ಹಾರಿಸಲಾಯಿತು.

1817: ಮೊದಲ ಹೂವಿನ ಪ್ರದರ್ಶನ ಐರ್ಲ್ಯಾಂಡಿನಲ್ಲಿ ಏರ್ಪಡಿಸಲಾಯಿತು.

1823: ಕೈಡ್ & ಕೋ ನಿರ್ಮಿಸಿದ ಭಾರತದ ಮೊದಲ ಉಗಿ ಹಡಗಾದ “ಡಯಾನಾ-ಎ-ಗನ್ಬೋಟ್” ಕಲ್ಕತ್ತಾ ಬಳಿ ತೇಲಿತ್ತು.

1859: “ಪೇಪರ್ ಬ್ಯಾಗ್” ಉತ್ಪಾಧಿಸುವ ಯಂತ್ರವನ್ನು ವಿಲಿಯಂ ಗುಡೇಲ್ ಪೇಟೆಂಟ್ ಪಡೆದರು.

1874: ಒಂಟಾರಿಯೋದಲ್ಲಿ ಕೃಷಿ ಕಾಲೇಜು ಸ್ಥಾಪಿಸಲಾಯಿತು.

1878: ನ್ಯೂ ಓರಿಯಾನ್ಸ್ ನಲ್ಲಿ ಜ್ಚರ ಸಾಂಕ್ರಾಮಿಕ ಆರಂಭವಾಗಿ 4500 ಜನರನ್ನು ಬಲಿ ತೆಗೆದುಕೊಂಡಿತು.

1882: ಅಮೇರಿಕಾದ ಮೊದಲ ಸಮುದ್ರದ ಹಡಗುಕಟ್ಟೆ (ಪಿಯರ್) ನಿರ್ಮಾಣ ವಾಷಿಂಗ್ಟನ್ ಡಿಸಿಯಲ್ಲಿ ಪೂರ್ಣಗೊಂಡಿತು.

1912: ಅಮೇರಿಕಾದಲ್ಲಿ ಮೊದಲ ವಿದೇಶಿ ಚಲನಚಿತ್ರದ “ಕ್ವೀನ್ ಎಲಿಜಿಬತ್” ಪ್ರದರ್ಶನ ಮಾಡಲಾಯಿತು.

1928: ಮೊದಲ ಬಾರಿಗೆ ದೂರದರ್ಶನದಲ್ಲಿ ಟೆನ್ನಿಸ್ ಆಟವನ್ನು ಪ್ರಸಾರ ಮಾಡಲಾಯಿತು.

1949: ಬಾಂಬೆಯ ಬಳಿ ಡಚ್ KLM ಕಾನ್ಸ್ಟಲೇಷನ್ ಕುಸಿದು 45 ಜನ ಮೃತಪಟ್ಟರು.

1957: ಹೆಲಿಕಾಪ್ಟರಿನಲ್ಲಿ ಪ್ರಯಾಣಿಸಿದ ಮೊದಲ ಅಧ್ಯಕ್ಷ ಡ್ವೈಟ್ ಐಸೆನ್ಹೋವರ್.

1957: ಧೂಮಪಾನದಿಂದ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆಯೆಂದು ಅಮೇರಿಕಾದ ಶಸ್ತ್ರ ವೈದ್ಯ ಜೆನೆರೆಲ್ ಲಿರಾಯ್ ಬರ್ನಿ ಪತ್ತೆ ಹಚ್ಚಿದರು.

1970: ಅಲ್ಕಾನಂದ ನದಿಯಿಂದ ಪ್ರವಾಹ ಉಂಟಾಗಿ ಬಸ್ಸು ಕೊಚ್ಚಿಕೊಂಡು ಹೋದ ಕಾರಣ 600 ಜನ ಮೃತ ಪಟ್ಟರು.

2000: ಮುಂಬೈಯ ಬಳಿ ಘಾಟ್ಕೋಪರ್ ನಲ್ಲಿ ಭೂಕುಸಿತದಿಂದ 67 ಮಂದಿ ನಿಧನರಾದರು.

2013: ಮಲಾಲಾ ಯುಸಾಫ್ಜಾಯಿ ವಿಶ್ವಾದ್ಯಂತ ಶಿಕ್ಷಣ ಪ್ರವೇಶ ಕುರಿತು ಯುನೈಟೆಡ್ ನೇಷನ್ಸ್ ನಲ್ಲಿ ಮಾತನಾಡಿದರು.

ಪ್ರಮುಖ ಜನನ/ಮರಣ:

1489: ಲೋದಿ ಸಾಮ್ರಾಜ್ಯದ ಸಂಸ್ಥಾಪಕರಾಗಿದ್ದ ಬಹಲೊಲ್ ಖಾನ್ ಲೋದಿ ಭಾರತದ ದೆಹೆಲಿಯಲ್ಲಿ ನಿಧನರಾದರು.

1864: ದೊಡ್ಡ ಇತಿಹಾಸಕಾರರಾದ ವಿಶ್ವನಾಥ್ ಕಾಶೀನಾಥ್ ರಾಜ್ವಾಡೆ ಜನಿಸಿದರು.

1896: ರಾಜಕಾರಣಿ ಮತ್ತು ಹೈದರಾಬಾದ್ ಲಿಬರೇಷನ್ ಪಾರ್ಟಿ ಸ್ಥಾಪಕರಾಗಿದ್ದ ದಂಗಂಬರಾವ್ ಜಿ, ಬಿಂದು ಜನಿಸಿದರು.

1961: ಕನ್ನಡ ಚಲನಚಿತ್ರ ಖ್ಯಾತ ನಟ, ಶಿವರಾಜಕುಮಾರ್ ಜನಿಸಿದರು.

1965: ಭಾರತೀಯ ಕ್ರಿಕೆಟಿಗರಾದ ಸಂಜಯ್ ಮಂಜೇಕರ್ ಜನಿಸಿದರು.

1993: ಪಶ್ವಿಮ ಬಂಗಾಳದ ಗವರ್ನರ್ ಆಗಿದ್ದ ಡಾ.ನುರುಲ್ ಹಾಸನ್ ನಿಧನರಾದರು.