Categories
e-ದಿನ

ಜುಲೈ-13

 

ಪ್ರಮುಖ ಘಟನಾವಳಿಗಳು:

1830: ರಾಜಾರಾಂ ಮೋಹನ್ ರಾಯ್ ಮತ್ತು ಅಲೆಕ್ಸಾಂಡರ್ ಡಫ್ ಸೇರಿ “ದಿ ಸ್ಕಾಟಿಶ್ ಚರ್ಚ್ ಕಾಲೇಜ್” ಅನ್ನು ಸ್ಥಾಪಿಸಿದರು.

1832: ಹೆನ್ರಿ ಆರ್ ಸ್ಕೂಲ್ ಕ್ರಾಫ್ಟ್ ಮಿಸ್ಸಿಸಿಪಿ ನದಿಯ ಮೂಲವನ್ನು ಕಂಡುಹಿಡಿದರು.

1898: ಗುಲಿಎಲ್ಮೋ ಮಾರ್ಕೋನಿ ರೇಡಿಯೋಗೆ ಪೇಟೆಂಟ್ ಪಡೆದರು.

1923: ಹಾಲಿವುಡ್ ಚಿನ್ಹೆ ಅಧಿಕೃತವಾಗಿ ಹಾಲಿವುಡ್, ಲಾಸ್ ಏಂಜೆಲಿಸಿನ ಬೆಟ್ಟದ ಮೇಲೆ ಸಮರ್ಪಿಸಲಾಯಿತು.

1923: ಅಮೇರಿಕಾದ ಪರಿಶೋಧಕ ರಾಯ್ ಚಾಪ್ಮಾನ್ ಆಂಡ್ರೂಸ್ ಮಂಗೋಲಿಯಾದ ಗೋಭಿ ಮರುಭೂಮಿಯಲ್ಲಿ ಮೊದಲ ಗುರುತಿಸಲ್ಪಟ್ಟ ಡೈನೋಸರ್ ಮೊಟ್ಟೆಗಳನ್ನು ಕಂಡುಹಿಡಿದರು.

1938: ಕ್ರೊಲ್ಲರ್-ಮುಲ್ಲರ್ ವಸ್ತುಸಂಗ್ರಹಾಲಯ ಹಾಲಾಂಡಿನಲ್ಲಿ ತೆರೆಯಲಾಯಿತು.

1945: ಮೊದಲ ಆಟಂಬಾಂಬ್ ನ್ಯೂ ಮೆಕ್ಸಿಕೋದಲ್ಲಿ ಸ್ಫೋಟಗೊಂಡಿತು.

1947: ಭಾರತ ಸ್ವಾತಂತ್ರ ಮಸೂದೆಯನ್ನು ಜುಲೈ 4, 1947 ರಂದು ಬ್ರಿಟಿಶ್ ಸಂಸತ್ತಿನಲ್ಲಿ ಜಾರಿಗೊಳಿಸಲಾಯಿತು ಅದು 1947 ರ ಜುಲೈ 13 ರಂದು “ಕಾನೂನಾಗಿ” ಮಾರ್ಪಟ್ಟಿತು.

1950: ಕೊರಿಯಾದಲ್ಲಿ ಶಾಂತಿಯನ್ನು ಪುನಃ ಸ್ಥಾಪಿಸಲು ನೆಹೆರು ಸ್ಟಾಲಿನ್ ಮತ್ತು ಆರ್ಚೆಸನನ್ನು ಕೇಳಿದರು.

1970: ಆಮ್ಸ್ಟರ್ ಡ್ಯಾಮ್ ಮೆಟ್ರೋ ಕಟ್ಟಡದ ಕಾಮಗಾರಿ ಆರಂಭವಾಯಿತು.

1977: ನ್ಯೂಯಾರ್ಕ್ ನಗರದಲ್ಲಿ ಸತತ 25 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿ ಇಡೀ ನಗರವೇ ಕತ್ತಲಾಗಿತ್ತು.

1998: ಭಾರತ ಮತ್ತು ಜರ್ಮನಿ ಬಾನಿನಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸುವ ಮತ್ತು ರಕ್ಷಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.

2005: ಒಂದು ಇಸ್ಲಾಮಿಕ್ ಟ್ರಸ್ಟ್ ತಾಜ್ ಮಹಲ್ಲಿನ ಮಾಲೀಕತ್ವವನ್ನು ಕೇಳಿದರು. ಆದರೆ ಸರ್ಕಾರವು ಅದರ ಪರಿಪಾಠದ ಆರೋಪವನ್ನು ನ್ಯಾಯಾಲಯದಲ್ಲಿ ಸವಾಲು ಹಾಕಲು ಪ್ರತಿಜ್ಞೆ ಮಾಡಿತು.

2006: ಅಮೇರಿಕಾದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಅಟ್ರಿಪ್ಲಾ HIV ಚಿಕಿತ್ಸೆಗೆಂದು ಔಷಧ ಕಂಡುಹಿಡಿಯಲಾಯಿತು.

2011: ಭಾನುವಾದ ಸಂಜೆ ಸಮಯದಲ್ಲಿ ಮುಂಬೈಯಲ್ಲಿ 3 ಬಾಂಬ್ ಸ್ಪೋಟದಿಂದಾಗಿ 26 ಮಂದಿ ಸಾವನ್ನಪ್ಪಿ 130 ಮಂದಿ ಗಾಯಗೊಂಡಿದ್ದರು.

ಪ್ರಮುಖ ಜನನ/ಮರಣ:

1905: ಕಾಶ್ಮೀರದ ಸ್ವಾತಂತ್ರ ಹೋರಾಟಗಾರ ಪ್ರೇಮನಾಥ್ ಬಜಾಜ್ ಜನಿಸಿದರು.

1907: ಖ್ಯಾತ ರಾಜಕಾರಣಿ ಹರಿ ವಿಷ್ಣು ಕಾಮತ್ ಜನಿಸಿದರು.

1924: ಆಧುನಿಕ ಅರ್ಥಶಾಸ್ತ್ರದ ಪಿತಾಮಹ ಆಲ್ಫ್ರೆಡ್ ಮಾರ್ಶಲ್ ನಿಧನರಾದರು.

1939: ಭಾರತೀಯ ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರಾಗಿದ್ದ ಪ್ರಕಾಶ್ ಮೆಹೆರಾ ಜನಿಸಿದರು.

1964: ಕ್ರಿಕೆಟಿಗ ಉತ್ಪಾಲ್ ಚಟರ್ಜಿ ಕಲ್ಕತ್ತಾದಲ್ಲಿ ಜನಿಸಿದರು.

1993: ಭಾರತೀಯ ಕವಿ ಮತ್ತು ವಿದ್ವಾಂಸರಾಗಿದ್ದ ಎ.ಕೆ.ರಾಮಾನುಜನ್ ಚಿಕಾಗೋದಲ್ಲಿ ನಿಧನರಾದರು.

2010: ಭಾರತದ ಸಾಕ್ಸೋಫೋನ್ ವಾದಕರಾಗಿದ್ದ ಮನೋಹರಿ ಸಿಂಗ್ ನಿಧನರಾದರು.