Categories
e-ದಿನ

ಜುಲೈ-15

 

ಪ್ರಮುಖ ಘಟನಾವಳಿಗಳು:

1795: “ಮಾರ್ಸೆಯಿಲ್ಲಾಯಿಸ್” ಫ್ರಾನ್ಸ್ ರಾಷ್ಟ್ರದ ರಾಷ್ಟ್ರಗೀತೆಯಾಯಿತು.

1869: “ಮಾರ್ಗರೀನ್” (ಅಡಿಗೆಗೆ ಬಳಸುವ ಜಿಡ್ಡು ಪದಾರ್ಥ)ಕ್ಕೆ ಹಿಪ್ಪೋಯ್ಲ್ ಮೇಘ ಮೋರಿಸ್ ಪೇಟೆಂಟ್ ಪಡೆದರು.

1885: ನ್ಯೂಯಾರ್ಕಿನಲ್ಲಿ ನಯಾಗಾರ ಪರಿಮಿತಿ ರಾಜ್ಯ ಉದ್ಯಾನವನ ತೆರೆಯಲಾಯಿತು.

1888: ಪ್ರಿಂಟರ್ಗಳಿಗೆ “ಇಂಕ್” ಅನ್ನು ಮೊದಲ ಬಾರಿಗೆ ಮಾರಾಟ ಮಾಡಲಾಯಿತು.

1888: ಜಪಾನಿನ ಬಂದೈ ಜ್ವಾಲಾಮುಖಿ 1000 ವರ್ಷಗಳಲ್ಲಿ ಮೊದಲ ಬಾರಿಗೆ ಹೊರಹೊಮ್ಮಿತು.

1898: ಕ್ಯಾಮಿಲ್ಲೋ ಗಾಲ್ಗಿ “ಗೂಗ್ಲಿ ಅಪಾರೇಟಸ್” (ಕೋಶಗಳ ನಡುವಿನ ಮಾಹಿತಿಯ ಪ್ರಸರಣ ಮತ್ತು ಸ್ವೀಕರಿಸುವುದಕ್ಕಾಗಿ ಕೋಶಗಳೊಳಗೆ ಒಂದು ಸೂಕ್ಷ್ಮ ಜಾಲಬಂಧ)ವನ್ನು ಕಂಡುಹಿಡಿದರು.

1904: ಮೊದಲ ಬುದ್ದನ ದೇಗುಲವನ್ನು ಅಮೇರಿಕಾದ ಲಾಸ್ ಏಂಜೆಲಿಸ್ ನಲ್ಲಿ ತೆರೆಯಲಾಯಿತು.

1906: ರಿಪಬ್ಲಿಕ್ ವಸ್ತುಸಂಗ್ರಹಾಲಯ ಆಮ್ಸ್ಟರ್ ಡ್ಯಾಮಿನಲ್ಲಿ ತೆರೆಯಲಾಯಿತು.

1912: ಬ್ರಿಟಿಷ್ ರಾಷ್ಟ್ರೀಯ ಆರೋಗ್ಯ ವಿಮೆ ಕಾಯ್ದೆ ಜಾತಿಗೆ ಬಂದಿತು.

1916: ಸಿಯೆಟೆಲ್ಲಿನಲ್ಲಿ ಪೆಸಿಫಿಕ್ ಏರೋ ಪ್ರಾಡಕ್ಟ್ಸ್ ಗಳನ್ನು ವಿಲಿಯಂ ಬೋಯಿಂಗ್ ಸಂಯೋಜಿಸಿದರು. ಈ ಸಂಸ್ಥೆಯು ನಂತರ ಬೋಯಿಂಗ್ ಕಂಪನಿ ಎಂದು ಮರುನಾಮಕರಣವಾಯಿತು.

1922: ಮೊದಲ ಬಾತುಕೋಳಿಯ ಕೊಕ್ಕಿನ ಪ್ಲಾಟಿಪಸ್ ಪಕ್ಷಿಯನ್ನು ಸಾರ್ವಜನಿಕರಿಗೆ ನೋಡಲು ನ್ಯೂಯಾರ್ಕ್ ಮೃಗಾಲಯದಲ್ಲಿ ಪ್ರದರ್ಶನ ಮಾಡಲಾಯಿತು.

1929: ಮೊದಲ ಏರ್ಪೋರ್ಟ್ ಹೋಟೆಲ್ ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡಿನಲ್ಲಿ ತೆರೆಯಲಾಯಿತು.

1954: ಅಮೇರಿಕಾದಲ್ಲಿ ಮೊದಲು ಪರೀಕ್ಷಿಸಲ್ಪಟ್ಟ ಮೊದಲ ವಾಣಿಜ್ಯ ಜೆಟ್ ಟ್ರಾನ್ಸ್ಪೋರ್ಟ್ ವಿಮಾನ (ಬೋಯಿಂಗ್ 707)

1955: ಪಂಡಿತ್ ಜವಹರ್ಲಾಲ್ ನೆಹರು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

1961: ಸ್ಪೇನ್ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಸ್ವೀಕರಿಸಿತು.

1979: ಭಾರತದ 4ನೇ ಪ್ರಧಾನ ಮಂತ್ರಿಯಾಗಿದ್ದ ಮೊರಾಜಿ ದೇಸಾಯಿ ಅವರು ತಮ್ಮ ಪದವಿಗೆ ರಾಜಿನಾಮೆ ನೀಡಿದರು.

1986: ಭಾರತದ ಅರುಣಾಚಲ ಪ್ರದೇಶದ 6 ರಿಂದ 7 ಕಿ.ಮೀ. ಅಷ್ಟು ಒಳಹರಿವು ಮಾಡಿದ ಚೀನಾ ವಿರುದ್ದ ಪ್ರತಿಭಟಿಸಿತು.

1995: ಉತ್ತರ ವರ್ಜೀನಿಯಾ ನೂತನ ಪಿನ್ ಕೋಡ್ ಆದ 540 ಅನ್ನು ಬಳಸಲು ಆರಂಭಿಸಿತು.

2006: ಸಾಮಾಜಿಕ ನೆಟ್ವರ್ಕಿಂಗ್ ಸೇವೆಯಾದ “ಟ್ವಿಟರ್” ಅನ್ನು ಪ್ರಾರಂಭಿಸಲಾಯಿತು.

2013: ಯು.ಕೆ ಮೇಲ್ಮನೆ ಸಲಿಂಗಿಗಳ ಮದುವೆಯ ಬಿಲ್ಲನ್ನು ಅನುಮೋದಿಸಿತು. 2014ರಿಂದ ಇಂಗ್ಲೆಂಡಿನಲ್ಲಿ ಮತ್ತು ವೇಲ್ಸ್ ನಲ್ಲಿ ಅನುಮತಿಸಲಾಯಿತು.

ಪ್ರಮುಖ ಜನನ/ಮರಣ:

1902: ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಕೆ.ಸುಬ್ಬಾರಾವ್ ಜನಿಸಿದರು.

1903: ಭಾರತೀಯ ಪತ್ರಕರ್ತ ಮತ್ತು ರಾಜಕಾರಣಿ ಕೆ.ಕಾಮರಾಜ್ ಜನಿಸಿದರು,

1904: “ಜೈಪುರ ಘರಾನಾ” ನ ಹಿರಿಯ ಗಾಯಕ ಮೊಗುಬಾಯಿ ಕುರ್ದೀಕರ್ ಜನಿಸಿದರು.

1906: ಭಾರತೀಯ ಕವಿ ಮತ್ತು ಶಿಕ್ಷಣ ತಜ್ಞ ಆರ್.ಎಸ್.ಮುಗಲಿ ಜನಿಸಿದರು.

1933: ಭಾರತೀಯ ಲೇಖಕ ಮತ್ತು ಚಿತ್ರಕಥೆಗಾರರಾದ ಎಂ.ಟಿ.ವಾಸುದೇವನ್ ನಾಯರ್ ಜನಿಸಿದರು.

1937: ಭಾರತೀಯ ಪತ್ರಕರ್ತ ಪ್ರಭಾಶ್ ಜೋಷಿ ಜನಿಸಿದರು.

1980: “ಕೇಸರಿ” ಮತ್ತು “ಮರಾಠ” ಪತ್ರಿಗಳ ಸಂಪಾದಕರಾಗಿದ್ದ ಜಗನ್ನಾಥರಾವ್ ಜೋಶಿ ನಿಧನರಾದರು.