Categories
e-ದಿನ

ಜುಲೈ-17

ಪ್ರಮುಖ ಘಟನಾವಳಿಗಳು:

1850: ಹಾರ್ವರ್ಡ್ ವೀಕ್ಷಣಾಲಯದಲ್ಲಿ ಮೊದಲ ನಕ್ಷತ್ರ ‘ವೆಗಾ’ದ ಛಾಯಾಚಿತ್ರ ತೆಗೆಯಲಾಯಿತು.

1861: ಅಮೇರಿಕಾದ ಕಾಂಗ್ರೆಸ್ ಕಾಗದದ ಹಣದ ಚಲಾವಣೆಯನ್ನು ಅನುಮೋದಿಸಿತು.

1862: ಕರಿಯರನ್ನು ಕಾರ್ಮಿಕರನ್ನಾಗಿ ಒಪ್ಪಿಕೊಳ್ಳಲು ಅಮೇರಿಕಾದ ಸೇನೆ ಅನುಮೋದಿಸಿತು.

1867: ಅಮೇರಿಕಾದ ಮೊದಲ ದಂತ ವೈದ್ಯ ಶಾಲೆಯಾದ ಹಾರ್ವರ್ಡ್ ಸ್ಕೂಲ್ ಆಫ್ ಡೆಂಟಲ್ ಮೆಡಿಸಿನ್ನು ಸ್ಥಾಪಿಸಲಾಯಿತು.

1897: ಯುಕಾನಿನಿಂದ ಚಿನ್ನವನ್ನು ಹೊತ್ತೊಯ್ದ ಮೊದಲ ಹಡಗು ಸಿಯಾಟೆಲನ್ನು ತಲುಪಿತು.

1954: ಡಿಸ್ನಿ ಲ್ಯಾಂಡಿನ ನಿರ್ಮಾಣ ಆರಂಭವಾಯಿತು.

1955: ಆರ್ಕೋ ಇಡಾಹೋ ಪರಮಾಣು ಶಕ್ತಿಯಿಂದ ವಿದ್ಯುತ್ ಪಡೆದ ಮೊದಲ ಅಮೇರಿಕಾದ ನಗರವಾಯಿತು.

1955: ಕ್ಯಾಲಿಫೋರ್ನಿಯಾದ ಡಿಸ್ನಿಲ್ಯಾಂಡ್ ತೆರೆಯಲಾಯಿತು.

1959: ಪಾಲೆಯೋ ಮಾನವ ಶಾಸ್ತ್ರಜ್ಞ ಮೇರಿ ಕೀಕೆ ಮಾನವರ ಪೂರ್ವಿಕರ ಹೊಸ ಜಾತಿಯ ಭಾಗಶಃ ತಲೆಬುರುಡೆ ಕಂಡುಹಿಡಿದರು. ಈ ಜಾತಿಯ ಮಾನವ ಸುಮಾರು 2 ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ನೆಲೆಸಿದ್ದರೆಂದು ಹೇಳಿದರು.

1964: ನೆಲ್ಸನ್ ಮಂಡೇಲಾ ಅವರಿಗೆ ಶಾಂತಿಗಾಗಿ ಅವರ ಪ್ರಯತ್ನವನ್ನು ಗುರುತಿಸಿ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು.

1972: ಕ್ವಾಂಟಿಕೋದಲ್ಲಿ ಎಫ್ ಬಿ ಐ ಪ್ರತಿನಿಧಿಗಳಾಗಿ ಮೊದಲ ಬಾರಿಗೆತಂಡದಲ್ಲಿ 2 ಮಹಿಳೆಯರಿಗೂ ತರಬೇತಿಯನ್ನು ಪ್ರಾರಂಭಿಸಲಾಯಿತು.

1992: ಸ್ಲೊವಾಕ್ ಸಂಸತ್ತು ಝೆಕೋಸ್ಲೋವಾಕಿಯಾದಿಂದ ಸ್ವಾತಂತ್ರ ಘೋಷಿಸಿತು.

1995: ಫೋರ್ಬ್ಸ್ಮ್ಯಾಗಜಿನ್ ಪ್ರಕಟಣೆಯಂತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಬಿಲ್ ಗೇಟ್ಸ್ ಅವರನ್ನು ಹೆಸರಿಸಲಾಯಿತು.

1996: ತಮಿಳುನಾಡಿನ ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಂ.ಕರುಣಾನಿಧಿ ರಾಜ್ಯ ವಿಧಾನಸಭೆಯಲ್ಲಿ ಮದ್ರಾಸಿನ ಹೆಸರನ್ನು ಅಧಿಕೃತವಾಗಿ ಚೆನ್ನೈ ಎಂದು ಬದಲಿಸಿ ಘೋಷಣೆ ಮಾಡಿದರು.

ಪ್ರಮುಖ ಜನನ/ಮರಣ:

1790: ಸ್ಕಾಟಿಶ್ ಅರ್ಥಶಾಸ್ತ್ರಜ್ಞ ಆಡಮ್ ಸ್ಮಿತ್ ನಿಧನರಾದರು.

1917: ಭಾರತೀಯ ನಟ, ಹಾಡುಗಾರ ಮತ್ತು ಚಿತ್ರಕತೆ ಬರಹಗಾರರಾದ ಬಿಜಾನ್ ಭಟ್ಟಾಚಾರ್ಯ ಜನಿಸಿದರು.

1921: ಪುರುಷರ ಬೇಸ್ಬಾಲ್ ಲೀಗಿನಲ್ಲಿ ಆಡಿದ ಮೊದಲ ಮಹಿಳೆ ಟೋನಿ ಸ್ಟೋನ್ ಜನಿಸಿದರು.

1935: 1986-9ರವರೆಗೆ ಕ್ರಿಕೆಟ್ ಟೆಸ್ಟ್ ಅಂಪೈರ್ ಆಗಿದ್ದ ಡಾ.ರಾಮ್ ಬಾಬು ಗುಪ್ತ ಅವರು ದೆಹಲಿಯಲ್ಲಿ ಜನಿಸಿದರು.