ಪ್ರಮುಖ ಘಟನಾವಳಿಗಳು:

 • 1743: ಮೊದಲ ಬಾರಿಗೆ ಅರ್ಧ ಪುಟದ ಜಾಹಿರಾತನ್ನು ನ್ಯೂಯಾರ್ಕ್ ವಾರಪತ್ರಿಕೆಯಲ್ಲಿ ಪ್ರಕಟಿಸಲಾಯಿತು.

 • 1768: ಬೋಸ್ಟನ್ ಗೆಜೆಟ್ ಅಮೇರಿಕಾದ ಮೊದಲ ದೇಶಭಕ್ತಿ ಗೀತೆಯಾದ ಲಿಬರ್ಟಿ ಸಾಂಗ್ ಅನ್ನು ಪ್ರಕಟಿಸಿತು.

 • 1864: ಅಧ್ಯಕ್ಷ ಲಿಂಕನ್ 5,00,000 ಸ್ವಯಂಸೇವಕರನ್ನು ಮಿಲಿಟರಿ ಸೇನೆಗೆ ಸೇರುವಂತೆ ಕೋರಿದರು.

 • 1872: ಬ್ರಿಟನ್ ಮತಪತ್ರ ಕಾಯಿದೆ ಅನುಸಾರ ಚುನಾವಣೆಯಲ್ಲಿ ತೆರೆದ ಮತಗಳ ಬದಲಾಗಿ ರಹಸ್ಯ ಮತಪತ್ರವನ್ನು ಪರಿಚಯಿಸಿತು.

 • 1923: ಬ್ರಿಟಿಶ್ ಹೌಸ್ ಆಫ್ ಲಾರ್ಡ್ಸ್ ಹೊಸ ವಿಚ್ಚೇದನ ಕಾನೂನನ್ನು ಸ್ವೀಕರಿಸಿತು.

 • 1931: ಮೊದಲ ವಾಯು ನಿಯಂತ್ರಿತ ಹಡಗನ್ನು ಪರಿಚಯಿಸಲಾಯಿತು.

 • 1947: ಭಾರತ ಸ್ವಾತಂತ್ರ ಕಾಯಿದೆಗೆ, ರಾಜ ಜಾರ್ಜ್-VI ಸಹಿ ಮಾಡಿದ್ದನ್ನು 1947ರಲ್ಲಿ ಇಂಡಿಯನ್ ಫ್ರೀಡಂ ಆಕ್ಟ್ ಎಂದು ಘೋಷಿಸಲಾಯಿತು.

 • 1953: ಸಾರ್ವಜನಿಕ ಸಾರಿಗೆಯ ಬೆಲೆ ಏರಿಕೆಯ ವಿರುದ್ದ ಗಲಭೆಗಳು ಉಂಟಾಗಿ ಹೋರಾಟಗಾರರು ಭಾಗಶಃ ಕಲ್ಕತ್ತಾವನ್ನು ಆಕ್ರಮಿಸಿದರು.

 • 1955: ಪರಮಾಣು ಶಕ್ತಿಯಿಂದ ಉತ್ಪಾದಿಸಲಾದ ವಿದ್ಯುತ್ ಶಕ್ತಿಯನ್ನು ವಾಣಿಜ್ಯವಾಗಿ ಮಾರಾಟ ಮಾಡಲಾಯಿತು.

 • 1968: ಇಂಟೆಲ್ ಕಾರ್ಪೊರೇಷನ್ ಕ್ಯಾಲಿಫೋರ್ನಿಯಾದಲ್ಲಿ ಸ್ಥಾಪಿಸಲಾಯಿತು.

 • 1974: ವಿಶ್ವದ ಅತ್ಯಂತ ಎತ್ತರದ ರಚನೆ 646 ಮೀಟರ್ ಪೋಲಿಷ್ ರೇಡಿಯೋ ಮಸ್ಟ್ ಪೂರ್ಣಗೊಂಡಿತು.

 • 1980: ಮದರಾಸು ದೂರದರ್ಶನ ಕೇಂದ್ರದಿಂದ ಒಂದು ಗಂಟೆಯವರೆಗೆ ತಮ್ಮ ಕಾರ್ಯಕ್ರಮವನ್ನು ಮೊದಲ ಬಣ್ಣದ ಪ್ರಸರಣ ಮಾಡಿದರು.

 • 1980: ಭಾರತದ ಮೊದಲ ಉಪಗ್ರಹ “ರೋಹಿಣಿ”ಯನ್ನು ಬಾಹ್ಯಾಕಾಶದ ಕಕ್ಷೆಗೆ ಹಾರಿಸಲಾಯಿತು.

 • 1986: ಟೈಟಾನಿಕ್ ಹಡಗಿನ ಗುಳಿಬಿದ್ದ ಅವಶೇಷಗಳನ್ನು ವೀಡಿಯೋ ಟೇಪಿನ ಮೂಲಕ ಬಿಡುಗಡೆ ಮಾಡಲಾಯಿತು.

 • 1994: ಕ್ರಯೋಲ ಸುವಾಸಿತ ಕ್ರೆಯಾನುಗಳನ್ನು ಪರಿಚಯಿಸಿತು.

 • 1996: ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯವು ಎನ್ರಾನ್ ವಿದ್ಯುತ್ ಯೋಜನೆಗೆ ಖಾತರಿಯನ್ನು ನೀಡಿತು.

 • 1997: ಭಾರತದ ಕೇಂದ್ರ ಸರ್ಕಾರವು 5ನೇ ವೇತನ ಆಯೋಗದ ವರದಿಯನ್ನು ಅನುಮೋದಿಸಿತು.

 • 1998: ಮಹಾರಾಷ್ಟ್ರ ಸರ್ಕಾರವು ವಿವಾದಾತ್ಮಕ ಮರಾಠಿ ನಾಟಕವಾದ “ನಾಥುರಾಂ ಗೋಡ್ಸೆ- ಗಾಂಧಿಯ ಕೊಲೆ ಪಾತಕ” ವನ್ನು ನಿಷೇಧಿಸಿತು.

ಪ್ರಮುಖ ಜನನ/ಮರಣ:

 • 1634: ಡಚ್-ಇಂಡೀಸಿನ ಗವರ್ನರ್ ಜೆನೆರಲ್ ಜೋಯಾನ್ಸ್ ಕ್ಯಾಂಫ್ಯುಸ್ ಜನಿಸಿದರು.

 • 1909: ಬಂಗಾಳಿ ಕವಿ ಜ್ಞಾನಪೀಠ ಪುರಸ್ಕೃತರಾದ ವಿಷ್ಣು ಡೇ ಜನಿಸಿದರು.

 • 1980: ಭಾರತದ ಕ್ರಿಕೆಟಿಗರಾದ ನವೋಮಲ್ ಜಿಯೋಮಲ್ ನಿಧನರಾದರು.

 • 1992: ಬಂಗಾಳಿ ನಟಿ ಕಣ್ಣನ್ ದೇವಿ ನಿಧನರಾದರು.

 • 1993: ಟೈಮ್ಸ್ ಆಫ್ ಇಂಡಿಯಾದ ಸಂಪಾದಕರಾಗಿದ್ದ ಗಿರಿಲಾಲ್ ಜೈನ್ ನಿಧನರಾದರು.

 • 1994: ದೆಹೆಲಿ ವಿಶ್ವವಿದ್ಯಾಲಯದ ಚ್ಯಾನ್ಸಲರ್ ಆಗಿದ್ದ ಮುನಿಸ್ ರಾಜ ನಿಧನರಾದರು.

 • 2012: ಖ್ಯಾತ ಚಲನಚಿತ್ರ ನಟ ರಾಜೇಶ್ ಖನ್ನಾ ನಿಧನರಾದರು.