Categories
e-ದಿನ

ಜುಲೈ-20

 

ಪ್ರಮುಖ ಘಟನಾವಳಿಗಳು:

1654: ಬ್ರಿಟೀಷರು ಪೋರ್ಚುಗಲ್ಲನ್ನು ಆಕ್ರಮಿಸಿದರು.

1837: ಲಂಡನ್ ನಗರದ ಮೊದಲ ಅಂತರ ನಗರ ರೈಲು ನಿಲ್ದಾಣವಾದ ಯುಸ್ಟನ್ ರೈಲು ನಿಲ್ದಾಣ ತೆರೆಯಲಾಯಿತು.

1847: ಜರ್ಮನ್ ಖಗೋಳಶಾಸ್ತ್ರಜ್ಞ ಥಯೋಡರ್ ಬ್ರಾರ್ಸೆನ್-ಮೆಟ್ಕಾಫ್ ಧೂಮಕೇತುವನ್ನು ಕಂಡುಹಿಡಿದರು.

1858: ಬೇಸ್ಬಾಲ್ ಆಟವನ್ನು ವೀಕ್ಷಿಸಲು ಮೊದಲ ಬಾರಿಗೆ ಶುಲ್ಕವನ್ನು ವಿಧಿಸಲಾಯಿತು.

1868: ಸಿಗರೇಟುಗಳ ಮೇಲಿನ ತೆರಿಗೆ ಅಂಚೆಚೀಟಿಗಳ ಮೊದಲ ಬಳಕೆ ಮಾಡಲಾಯಿತು.

1876: ಮೊದಲ ಅಮೇರಿಕಾದ ಅಂತರ ಕಾಲೇಜು ಟ್ರಾಕ್ ಮೀಟ್ ನ್ಯೂಯಾರ್ಕಿನಲ್ಲಿ ಆಯೋಜಿಸಲಾಯಿತು.

1878: ಹವಾಯಿಯಲ್ಲಿ ಮೊದಲ ಬಾರಿಗೆ ದೂರವಾಣಿಯನ್ನು ಪರಿಚಯಿಸಲಾಯಿತು.

1903: ಫೋರ್ಡ್ ಸಂಸ್ಥೆಯು ತನ್ನ ಮೊದಲ ಕಾರನ್ನು ಮಾರುಕಟ್ಟೆಗೆ ತಂದಿತು.

1905: ಧಾರ್ಮಿಕ ಮಾರ್ಗಗಳಲ್ಲಿ ಬಂಗಾಳದ ವಿಭಜನೆಯನ್ನು ಲಂಡನ್ನಿನಲ್ಲಿ ಭಾರತದ ರಾಜ್ಯ ಕಾರ್ಯದರ್ಶಿ ಅನುಮೋದಿಸಿದರು.

1926: ಮೆಥೋಡಿಸ್ಟ್ ಚರ್ಚ್ ಸಂಪ್ರದಾಯದಲ್ಲಿ ಮಹಿಳೆಯರು ಪುರೋಹಿತರಾಗಲು ಅವಕಾಶ ನೀಡಲಾರಂಭಿಸಿತು.

1944: ಅಡಾಲ್ಫ್ ಹಿಟ್ಲರ್ ಈಸ್ಟರ್ನ್ ಪ್ರಶಿಯಾದ ರೋಸ್ಟನ್ ಬರ್ಗಿನ ಪ್ರಧಾನ ಕಛೇರಿಯಲ್ಲಿ ಬಾಂಬಿನ ದಾಳಿಯಿಂದ ತಪ್ಪಿಸಿಕೊಂಡರು.

1949: ಇಸ್ರೇಲಿನ 19 ತಿಂಗಳುಗಳ ಸತತ ಸ್ವಾತಂತ್ರ ಹೋರಾಟ ಕೊನೆಗೊಂಡಿತು.

1954: ಭಾರತ ಮತ್ತು ಚೀನಾದ ನಡುವಿನ ಯುದ್ದಕ್ಕೆ ಕದನವಿರಾಮ ಘೋಷಿಸಿ ಸಹಿಮಾಡಲಾಯಿತು.

1955: ಸುಯೆಜ್ ಕಾಲುವೆಯನ್ನು ಗಮಲ್ ಅಬ್ಡೆಲ್ ನಸೀರ್ ರಾಷ್ಟ್ರೀಕೃತಗೊಳಿಸಿದರು.

1957: ಭಾರತದ ಅತಿ ದೊಡ್ಡ ಹಾಳೆ-ಗಾಜಿನ ತಯಾರಿಸುವ ಕಾರ್ಖಾನೆಯನ್ನು ಬಿಹಾರದಲ್ಲಿ ಪ್ರಾರಂಭಿಸಲಾಯಿತು.

1960: ಬಾಹ್ಯಾಕಾಶ ಯಾತ್ರೆಗೆ ಕಳುಹಿಸಿ ಎರಡು ಜೀವಂತ ನಾಯಿಗಳನ್ನು ರಷ್ಯಾ ಸುರಕ್ಷಿತವಾಗಿ ಮರಳಿ ಪಡೆದರು.

1969: ಗಗನ ಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲ್ಮೈ ಮೇಲೆ ಮೊದಲ ಹೆಜ್ಜೆ ಇಟ್ಟ ಮೊದಲ ಮಾನವ.

1990: ಭಾರತ ಸರ್ಕಾರವು ಹಿಂದೆ ಪ್ರಕಟಿಸಿದ ಉದಾರ ಅಮದು ನೀತಿಯ ಮೇಲಿನ ನಿರ್ಭಂದಗಳನ್ನು ಪ್ರಕಟಿಸಿತು. ಅಮದು ಬಿಲ್ಲುಗಳ ನಿರ್ಭಂದಗಳು ಸುಮಾರು 1000 ಕೋಟಿ ಎಂದು ಅಂದಾಜಿಸಲಾಯಿತು.

2005: ಸಲಿಂಗ ಮದುವೆಗೆ ಅನುಮತಿ ನೀಡಿದ ನಾಲ್ಕನೇ ದೇಶವಾಗಿ ಕೆನಡಾ ದಾಖಲಾಯಿತು.

2011: ಹೆಂಡ್ರಾ ವೈರಸ್ಸಿನ ಪರಿಣಾಮವಾಗಿ ಮಲೇಷಿಯಾ ಆಸ್ಟ್ರೇಲಿಯಾದಿಂದ ಕುದುರೆಗಳ ಆಮದನ್ನು ನಿಷೇಧಿಸಿತು.

ಪ್ರಮುಖ ಜನನ/ಮರಣ:

356: ಗ್ರೀಸ್ ದೊರೆ ಅಲೆಕ್ಸಾಂಡರ್ ದಿ ಗ್ರೇಟ್ ಜನಿಸಿದರು.

1531: ಸಂತ ಮಹಾಕವಿ ತುಳಸಿದಾಸ ಜನಿಸಿದರು.

1911: ಭಾರತ ಕ್ರಿಕೆಟ್ಟಿನ ವೇಗದ ಬೌಲರ್ ಮೊಹಮ್ಮದ್ ಬಕಾ ಜಿಲಾನಿ ಖಾನ್ ಜನಿಸಿದರು.

1919: ಮೌಂಟ್ ಎವೆರೆಸ್ಟ್ ಶಿಖರವನ್ನು ಏರಿದ ಸರ್ ಎಡ್ಮಂಡ್ ಹಿಲ್ಲರಿ ಜನಿಸಿದರು.

1950: ಬಾಲಿವುಡ್ ಚಿತ್ರ ನಟ ನಾಸಿರುದ್ದಿನ್ ಶಾಹ್ ಜನಿಸಿದರು.

1982: ಮಹಾತ್ಮ ಗಾಂಧಿಯ ಅನುಯಾಯಿಯಾಗಿದ್ದ ಮೀರಬೇನ್ ನಿಧನರಾದರು.