Categories
e-ದಿನ

ಜುಲೈ-22

 

ಪ್ರಮುಖ ಘಟನಾವಳಿಗಳು:

1376: ಪೈಡ್ ಪೈಪರ್ ಆಫ್ ಹ್ಯಾಮೆಲಿನ್ ದಂತ ಕಥೆ ಇಂದು ಸಂಭವಿಸಿದೆ ಎಂದು ಹೇಳಲಾಗಿದೆ.

1632: ರಾಜ ಫಿಲಿಪ್-IV ಗಾಗಿ ಬ್ಯುಎನ್ ರಿಟೈರೋ ಪ್ಯಾಲೇಸಿಗಾಗಿ ಮ್ಯಾಡಿಡ್ ನಲ್ಲಿ ಸ್ಥಾಪಿಸಲಾಯಿತು.

1678: ಛತ್ರಪತಿ ಶಿವಾಜಿ ಮಹಾರಾಜ್ ಯುದ್ದದಲ್ಲಿ ವೆಲ್ಲೋರ್ ಕೋಟೆಯನ್ನು ಗೆದ್ದರು.

1702: “ಇಂಗ್ಲಿಷ್ ಕಂಪನಿ ಆಫ್ ಮರ್ಚಂಟ್ಸ್” ಮತ್ತು ಹಳೆಯ ಈಸ್ಟ್ ಇಂಡಿಯಾ ಕಂಪೆನಿಗಳನ್ನು “ಯುನೈಟೆಡ್ ಕಂಪನಿ ಆಫ್ ಮರ್ಚಂಟ್ಸ್ ಆಫ್ ಇಂಗ್ಲೆಂಡ್ ಟ್ರೇಡಿಂಗ್ ಟು ದಿ ಈಸ್ಟ್ ಇಂಡೀಸ್” ಎಂದು ಹೆಸರಿಸಲಾಯಿತು. 1833 ರಲ್ಲಿ “ಈಸ್ಟ್ ಇಂಡಿಯಾ ಕಂಪನಿ” ಎಂದು ಮರುನಾಮಕರಣ ಮಾಡಲಾಯಿತು.

1796: ಓಹಿಯೋದಲ್ಲಿ ಕ್ಲೀವ್ ಲ್ಯಾಂಡನ್ನು ಜೆನ್ ಮೊಸೆಸ್ ಕ್ಲೀವ್ಲಾಂಡ್ ಕಂಡು ಹಿಡಿದರು.

1939: ಜೇನ್ ಬೋಲಿನ್ ಅವರು ಮೊದಲ ಮಹಿಳಾ ನ್ಯಾಯಾಧೀಶರಾದ ಆಫ್ರಿಕನ್ ಅಮೇರಿಕನ್.

1952: ಪೋಲೆಂಡ್ ಕಮ್ಯುನಿಸ್ಟ್ ಹೇರಿದ ಸಂವಿಧಾನವನ್ನು ಅಳವಡಿಸಿಕೊಂಡಿತು.

1955: ಮೊತ್ತ ಮೊದಲ ಬಾರಿಗೆ ಅಧ್ಯಕ್ಷರ ಬದಲಾಗಿ ಅಮೇರಿಕಾ ಉಪಾಧ್ಯಕ್ಷ ರಿಚರ್ಡ್ ನಿಕ್ಸನ್ ಸಂಸತ್ತು ಸಭೆಯ ಅಧ್ಯಕ್ಷತೆ ವಹಿಸಿದರು.

1956: ಅಂಜರ್ ನಗರದಲ್ಲಿ ಭೂಕಂಪದಿಂದ 117 ಜನ ಮೃತ ಪಟ್ಟು 800 ಜನ ಕಾಣೆಯಾದರು.

1959: ನೆದರ್ಲ್ಯಾಂಡ್ಸಿನಲ್ಲಿ ನೈಸರ್ಗಿಕ ಅನಿಲ ಕಂಡುಬರುತ್ತದೆ.

1981: ಜೂನ್ 19, 1981ರಲ್ಲಿ ಬಾಹ್ಯಾಕಾಶಕ್ಕೆ ಹಾರಿಸಿದ್ದ ಭಾರತದ ಮೊದಲ ಪ್ರಾಯೋಗಿಕ ಜಿಯೋ-ಸ್ಟೇಷನರಿ ಸಂವಹನ ಉಪಗ್ರಹ “ಆಪಲ್” ಕಾರ್ಯಾರಂಭ ಮಾಡಿತು.

1991: ಆರ್ಥಿಕತೆಯ ಉದಾರಿಕರಣಕ್ಕಾಗಿ ನೂತನ ಕೈಗಾರಿಕ ನೀತಿ ಸಂಸತ್ತಿನಲ್ಲಿ ಘೋಷಿಸಲಾಯಿತು.

1997: ಸರ್ಕಾರದ ಪ್ರಸಾರ ಭಾರತಿ ಕಾಯಿದೆ 1990ರ ಸೆಪ್ಟೆಂಬರ್ 15 ರಿಂದ ಜಾರಿಗೆ ಬರಲಿದೆ ಎಂದು ಘೋಷಿಸಲಾಯಿತು.

2000: ಅರಿಜೋನ ವಿಶ್ವವಿದ್ಯಾನಿಲಯದಲ್ಲಿ ಖಗೋಳಶಾಸ್ತ್ರಜ್ಞರು ಗುರುಗ್ರಹದ ಸುತ್ತುತ್ತಿರುವ 17ನೇ ಚಂದ್ರನನ್ನು ಕಂಡು ಹಿಡಿದಿದ್ದಾರೆಂದು ಘೋಷಿಸಿದರು.

2009: 21ನೇ ಶತಮಾನದ ಅತ್ಯಂತ ವಿಳಂಬವಾದ ಸೂರ್ಯಗ್ರಹಣವು 6 ನಿಮಿಷ 38.8 ಸೆಕೆಂಡುಗಳ ವರೆಗೆ ನಡೆಯಿತು.

2012: ಪ್ರಣಬ್ ಮುಖರ್ಜಿಯವರು ಭಾರತದ ರಾಷ್ಟ್ರಪತಿಯಾಗಿ ಚುನಾಯಿತರಾದರು.

ಪ್ರಮುಖ ಜನನ/ಮರಣ:

1875: ಒರಿಯಾ ಕವಿ, ಕಾದಂಬರಿಕಾರಾಗಿದ್ದ ನಂದಕಿಶೋರ್ ಬಾಲ್ ಜನಿಸಿದರು.

1918: ಭಾರತದ ಮೊದಲ ಫೈಟರ್ ಪೈಲೆಟ್ ಇಂದ್ರ ಲಾಲ್ ರೈ ಯುದ್ದದಲ್ಲಿ ನಿಧನರಾದರು.

1925: ಪ್ರಸಿದ್ಧ ಪತ್ರಕರ್ತ ಗೋವಿಂದ ತಲವಾಲ್ಕರ್ ಜನಿಸಿದರು.

1944: ಖ್ಯಾತ ಕೈಗಾರಿಕೋದ್ಯಮಿ ಮನಮೋಹನ್ ಮೋದಿ ಸೇತ್ ಉತ್ತರ ಪ್ರದೇಶದ ಮೋದಿನಗರದಲ್ಲಿ ಜನಿಸಿದರು.

1959: ಭಾರತ ಸರ್ಕಾರದ ಮಂತ್ರಿ, ರಾಜಕಾರಣಿ ಅನಂತಕುಮಾರ್ ಬೆಂಗಳೂರಿನಲ್ಲಿ ಜನಿಸಿದರು.

1970: ಮಹಾರಾಷ್ಟ್ರದ 18ನೇ ಮುಖ್ಯಮಂತ್ರಿಯಾ ದೇವೇಂದ್ರ ಫಡ್ನಾವಿಸ್ ಜನಿಸಿದರು.

1987: ಭಾರತ ಕ್ರಿಕೆಟ್ ಟೆಸ್ಟ್ ಸರಣಿ ಆಡಿದ ಎ.ಜಿ.ಕೃಪಾಲ್ ಸಿಂಗ್ ನಿಧನರಾದರು.

1991: ಖ್ಯಾತ ಗಾಯಕರಾಗಿದ್ದ ಪಂಡಿತ್ ಬಸವರಾಜರಾಜಗುರು ನಿಧನರಾದರು.